Tag: Chayan Shetty

  • ‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಶೆಟ್ಟಿಯ ಖಾಕಿ ಖದರ್

    ‘ಅಧಿಪತ್ರ’ ಚಿತ್ರದಲ್ಲಿ ರೂಪೇಶ್ ಶೆಟ್ಟಿಯ ಖಾಕಿ ಖದರ್

    ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ (Rupesh Shetty) ನಟನೆಯ ಅಧಿಪತ್ರ (Adhipatra) ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಧುಮುಕಿದ್ದ ಚಿತ್ರತಂಡ ಕುಂದಾಪುರದ ಕೆರಾಡಿ ಭಾಗದಲ್ಲಿ ಚಿತ್ರೀಕರಣ ನಡೆಸ್ತಿದೆ. ಈಗಾಗಲೇ 10 ದಿನ ಶೂಟಿಂಗ್ ಕಂಪ್ಲೀಟ್ ಮಾಡಿದ್ದು, ನಾಯಕ ರೂಪೇಶ್ ಖಾಕಿ ಖದರ್ ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ.

    ತುಳು ಸಿನಿಮಾರಂಗದಲ್ಲಿ ರೂಪೇಶ್ ಶೆಟ್ಟಿಗೆ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್ ಬಾಸ್ ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಬಿಗ್ ಬಾಸ್ ವಿನ್ ಆದ ಬಳಿಕ ಅವರು ತುಳು ಭಾಷೆಯ ‘ಸರ್ಕಸ್’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದು ಒಳ್ಳೆಯ ಕಥೆಯ ಮೂಲಕ, ಡಿಫರೆಂಟ್ ಆದಂತಹ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಬೇಕು ಎಂಬುದು ರೂಪೇಶ್ ಶೆಟ್ಟಿ ಅವರ ಉದ್ದೇಶ ಆಗಿತ್ತು. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅವರು ‘ಅಧಿಪತ್ರ’ ಸಿನಿಮಾ ಒಪ್ಪಿಕೊಂಡಿದ್ದಾರೆ.

    ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ (Jahnavi), ಅಲ್ಲಿಂದ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಣಕ್ಕಿಳಿದು ಇದೀಗ ನೇರವಾಗಿ ಸಿನಿಮಾ ನಾಯಕಿಯಾಗಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ರೂಪೇಶ್‌ ಶೆಟ್ಟಿ ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

    ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಚಯನ್ ಶೆಟ್ಟಿ (Chayan Shetty), ಅಧಿಪತ್ರ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.

  • ರೂಪೇಶ್ ಶೆಟ್ಟಿ-ಜಾಹ್ನವಿ ‘ಅಧಿಪತ್ರ’ ಸಿನಿಮಾಗೆ ಮುಹೂರ್ತ

    ರೂಪೇಶ್ ಶೆಟ್ಟಿ-ಜಾಹ್ನವಿ ‘ಅಧಿಪತ್ರ’ ಸಿನಿಮಾಗೆ ಮುಹೂರ್ತ

    ಬಿಗ್ ಬಾಸ್ ಖ್ಯಾತಿಯ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ (Rupesh Shetty) ನಟನೆಯ ‘ಅಧಿಪತ್ರ’ (Adhipatra) ಸಿನಿಮಾ ಇಂದು ಸೆಟ್ಟೇರಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ಮುಹೂರ್ತ (Muhurta) ನೆರವೇರಿದೆ. ಈಗಾಗಲೇ ತುಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರೂಪೇಶ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

    ನಟ ರೂಪೇಶ್ ಶೆಟ್ಟಿ ಮಾತನಾಡಿ, ಬಿಗ್ ಬಾಸ್ ಆದ್ಮೇಲೆ ಕನ್ನಡ ಸಿನಿಮಾ ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದರು. ಬಿಗ್ ಬಾಸ್ ಗೂ ಮುಂಚೆ ‘ಸರ್ಕಸ್’ ಎಂಬ ತುಳು ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದೆ. ಆ ಚಿತ್ರದ ಕೆಲಸ ತುಂಬಾ ಇತ್ತು. ಈ ಚಿತ್ರದ ಕೆಲಸ ಮುಗಿಸಿ ಬೇರೆ ಸಿನಿಮಾ ಒಪ್ಪಿಕೊಳ್ಳುವುದು ಎಂದು ತೀರ್ಮಾನ ಮಾಡಿದ್ದೆ. ದೇವರ ದಯೆಯಿಂದ ಆ ಚಿತ್ರ ಹಿಟ್ ಆಗಿದೆ. 150 ಥಿಯೇಟರ್ ಗಳಲ್ಲಿ ಓಡಿದೆ. ಅಧಿಪತ್ರ ಸಿನಿಮಾ ನಿರ್ದೇಶಕರು ಕಥೆ ಹೇಳಿದಾಗ ಇಂಟ್ರೆಸ್ಟ್ ಎನಿಸಿತು. ಅವರ ಮೊದಲ ಸಿನಿಮಾವಾದರೂ ಸ್ಕ್ರೀನ್ ಪ್ಲೇ ವಿವರಿಸಿದಾಗ ಎಷ್ಟು ತಯಾರಾಗಿದ್ದರೂ ಎಂದರೆ ಪ್ರತಿ ಸೀನ್ ಡ್ರಾಯಿಂಗ್ ಮಾಡಿಕೊಂಡಿದ್ದರು. ನನಗೆ ಅದನ್ನು ನೋಡಿ ತುಂಬಾ ಧೈರ್ಯ ಬಂತು. ಅವರಿಗೆ ಒಂದು ವಿಷನ್ ಇದೆ. ಈ ಕಾರಣದಿಂದ ಅಧಿಪತ್ರ ಸಿನಿಮಾ ಒಪ್ಪಿಕೊಂಡಿದ್ದೇನೆ. ಸದ್ಯದಲ್ಲಿ ಈ ಚಿತ್ರಕ್ಕಾಗಿ ನನ್ನ ಗೆಟಪ್ ಬದಲಾಗಲಿದೆ ಎಂದರು.

    ನಟಿ ಜಾಹ್ನವಿ ಮಾತನಾಡಿ, ಅಧಿಪತ್ರ ಸಿನಿಮಾ ಈಗ ಶುರುವಾಗಿದೆ. ಇವತ್ತು ಮುಹೂರ್ತ ಆಗಿದೆ. ಈ ರೀತಿ ಒಂದು ಸಿನಿಮಾ ಬರ್ತಿದೆ ಅಂದಾಗಲೇ ತುಂಬಾ ಚೆನ್ನಾಗಿ ಪ್ರಮೋಷನ್ ಸಿಕ್ತಿದೆ. ಟೈಟಲ್ ತುಂಬಾ ಕ್ಯಾಚಿಯಾಗಿದೆ. ನನ್ನ ಪಾತ್ರದ ಹೆಸರು ಬೃಹತಿ. ನನ್ನ ಪಾತ್ರದ ಹೆಸರು ಕೂಡ ವಿಭಿನ್ನವಾಗಿದೆ. ಈ ಸಿನಿಮಾ ತುಂಬಾ ಪಾಸಿಟಿವ್ ಆಗಿದೆ ಎಂದರು. ನಿರ್ದೇಶಕ ಚಯನ್ ಶೆಟ್ಟಿ (Chayan Shetty) ಮಾತನಾಡಿ, ರೂಪೇಶ್ ಶೆಟ್ಟಿ ಹುಟ್ಟಹಬ್ಬಕ್ಕೆ ಟೈಟಲ್ ಅನೌನ್ಸ್ ಮಾಡಿದ್ದೆವು. ಆ ದಿನವೇ ನಮಗೆ ಒಳ್ಳೆ ಪ್ರೋತ್ಸಾಹ ಸಿಕ್ಕಿದೆ. ರೂಪೇಶ್ ಶೆಟ್ಟಿ ಅವರ ಹಿಂದಿನ ಸಿನಿಮಾಗಳಿಗಿಂತ ಈ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಲಿದ್ದಾರೆ. ಗಣೇಶ್ ಹಬ್ಬದ ಬಳಿಕ ಶೂಟಿಂಗ್ ಶುರುವಾಗಲಿದೆ. ಚಿತ್ರದಲ್ಲಿ ಎರಡು ಹಾಡುಗಳಿವೆ.

    ತುಳು ಸಿನಿಮಾರಂಗದಲ್ಲಿ ರೂಪೇಶ್ ಶೆಟ್ಟಿಗೆ ಸಾಕಷ್ಟು ಅನುಭವ ಇದೆ. ಸಿನಿಮಾದ ನಾನಾ ವಿಭಾಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಬಿಗ್ ಬಾಸ್ ಗೆ ಕಾಲಿಟ್ಟ ಬಳಿಕ ಅವರಿಗೆ ಜನಪ್ರಿಯತೆ ಹೆಚ್ಚಾಯಿತು. ಬಿಗ್ ಬಾಸ್ ವಿನ್ ಆದ ಬಳಿಕ ಅವರು ತುಳು ಭಾಷೆಯ ‘ಸರ್ಕಸ್’ ಸಿನಿಮಾವನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದರು. ಆ ಸಿನಿಮಾದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ಕನ್ನಡದಲ್ಲಿ ಸ್ವಲ್ಪ ತಡವಾಗಿ ಆದರೂ ಪರವಾಗಿಲ್ಲ, ಒಂದು ಒಳ್ಳೆಯ ಕಥೆಯ ಮೂಲಕ, ಡಿಫರೆಂಟ್ ಆದಂತಹ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಬೇಕು ಎಂಬುದು ರೂಪೇಶ್ ಶೆಟ್ಟಿ ಅವರ ಉದ್ದೇಶ ಆಗಿತ್ತು. ಅದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅವರು ‘ಅಧಿಪತ್ರ’ ಸಿನಿಮಾ ಒಪ್ಪಿಕೊಂಡಿದ್ದಾರೆ.

    ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಜಾಹ್ನವಿ, ಅಲ್ಲಿಂದ ಕಿರುತೆರೆ ರಿಯಾಲಿಟಿ ಶೋಗಳಲ್ಲಿಯೂ ಕಣಕ್ಕಿಳಿದು ಇದೀಗ ನೇರವಾಗಿ ಸಿನಿಮಾ ನಾಯಕಿಯಾಗಿ ಹೊಸ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ರೂಪೇಶ್‌ ಶೆಟ್ಟಿ ಅಧಿಪತ್ರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಹಾಗೂ ಇವರು ನಿರ್ದೇಶನ ಮಾಡಿದ ಶಾರ್ಟ್ ಫಿಲಂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರಶಂಸೆ ಪಡೆದಿತ್ತು ಹಾಗೂ ಕೆಲವು ಜಾಹಿರಾತುಗಳಿಗೆ ನಿರ್ದೇಶನ ಮಾಡಿರುವ ಅನುಭವ ಹೊಂದಿರುವ ಚಯನ್ ಶೆಟ್ಟಿ, ಅಧಿಪತ್ರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.  ಈ ಸಿನಿಮಾಕ್ಕೆ ಕೆ ಆರ್ ಸಿನಿಕಂಬೈನ್ಸ್ ಬ್ಯಾನರ್  ಬಂಡವಾಳ ಹೂಡುತ್ತಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಸಿನಿಮಾ ಮೂಡಿಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹುಟ್ಟುಹಬ್ಬಕ್ಕೆ ‘ಅಧಿಪತ್ರ’ ಹೊರಡಿಸಿದ ರೂಪೇಶ್ ಶೆಟ್ಟಿ : ಸರ್ಕಸ್ ನಂತರ ಇನ್ನೇನಿದ್ರೂ ಸುನಾಮಿನೇ ಎಂದ ಫ್ಯಾನ್ಸ್

    ಹುಟ್ಟುಹಬ್ಬಕ್ಕೆ ‘ಅಧಿಪತ್ರ’ ಹೊರಡಿಸಿದ ರೂಪೇಶ್ ಶೆಟ್ಟಿ : ಸರ್ಕಸ್ ನಂತರ ಇನ್ನೇನಿದ್ರೂ ಸುನಾಮಿನೇ ಎಂದ ಫ್ಯಾನ್ಸ್

    ರ್ಕಸ್ ಎಲ್ಲಾ ಮುಗೀತು ಇನ್ನೇನಿದ್ರೂ ಸುನಾಮಿನೇ ಹೀಗಂತ ರೂಪೇಶ್ ಶೆಟ್ಟಿ (Rupesh Shetty) ಹೇಳುವ ಮೊದಲೇ ಅವರ ಅಭಿಮಾನಿ ಬಳಗ ಸಾರಿ ಸಾರಿ ಹೇಳ್ತಿದೆ. ‘ಶೆಟ್ರೆ ಅಖಾಡನೂ ನಿಮ್ದೆ, ಆಟನೂ ನಿಮ್ದೆ ನುಗ್ತಾಯಿರಿ’ ಅಂತ ಧೈರ್ಯ ತುಂಬುತ್ತಿದೆ. ಭಕ್ತಬಳಗ ಇಷ್ಟೊಂದು  ಸ್ಫೂರ್ತಿ ತುಂಬುವಾಗ, ಅಭಿಮಾನಿ ದೇವರುಗಳು ಇಷ್ಟೊಂದು ಸ್ಥೈರ್ಯ ಹೇಳುವಾಗ ಶೆಟ್ರು ಸುಮ್ನಿರೋದಕ್ಕೆ ಸಾಧ್ಯಾವಾ? ಯಾವುದೇ ಕಾರಣಕ್ಕೂ ಇಲ್ಲ. ಹೀಗಾಗಿಯೇ ರಾಕ್‍ಸ್ಟಾರ್ ರೂಪೇಶ್ ಶೆಟ್ರು ಮೈ ಕೊಡವಿಕೊಂಡು ಅಖಾಡಕ್ಕೆ ಇಳಿದಿದ್ದಾರೆ. ಹೊಸ ಹುರುಪಿನಿಂದ, ಹೊಸ ಹುಮ್ಮಸ್ಸಿನಿಂದ ಹುಟ್ಟುಹಬ್ಬದಂದೇ (Birthday) ಕಣಕ್ಕಿಳಿದಿದ್ದಾರೆ. ಅದು `ಅಧಿಪತ್ರ’ ಹೆಸರಿನ ಹೊಸ ಚಿತ್ರದ ಮೂಲಕ ಎನ್ನುವುದು ವಿಶೇಷ

    ಅಂದ್ಹಾಗೇ, ಇವತ್ತು ರಾಕ್‍ಸ್ಟಾರ್ ರೂಪೇಶ್ ಶೆಟ್ಟಿಯವರ ಹುಟ್ಟುಹಬ್ಬ. ಬರ್ತ್‍ಡೇ ಸಂಭ್ರಮದಲ್ಲಿರೋ ಶೆಟ್ರಿಗೆ `ಅಧಿಪತ್ರ’ (Adhipatra) ಉಡುಗೊರೆಯಾಗಿ ಸಿಕ್ಕಿದೆ. ಹುಟ್ಟುಹಬ್ಬದಂದು ಅಧಿಕೃತವಾಗಿ ಚಿತ್ರ ಘೋಷಣೆಯಾಗಿದೆ. ಚಯನ್ ಶೆಟ್ಟಿ (Chayan Shetty) ಅನ್ನೋರು ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಕೆ.ಆರ್ ಸಿನಿಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಕನ್ನಡದಲ್ಲಿ ಈ ಚಿತ್ರ ಮೂಡಿಬರಲಿದೆ. ಸದ್ಯಕ್ಕೆ ಇಷ್ಟು ಮಾಹಿತಿಯನ್ನ ಪೋಸ್ಟರ್ ಮೂಲಕ ಹಂಚಿಕೊಂಡಿರುವ ಚಿತ್ರತಂಡ, ಶೀರ್ಷಿಕೆಯಿಂದಲೇ ಚಿತ್ರಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಮಗೆಲ್ಲ ಅಧಿಪತಿ ಬಗ್ಗೆ ಗೊತ್ತಿದೆ, ಇದೇನಿದು `ಅಧಿಪತ್ರ’ ಅಂತ ಕಲಾಭಿಮಾನಿಗಳು ಕುತೂಹಲದ ಹುಳಬಿಟ್ಕೊಂಡು ತಲೆಕೆಡಿಸಿಕೊಳ್ಳುವಂತಾಗಿದೆ.

    ಟೈಟಲ್ ಮೂಲಕವೇ ಇಷ್ಟೊಂದು ಕುತೂಹಲ ಮೂಡಿಸಿರೋ ರೂಪೇಶ್ ಶೆಟ್ರು `ಅಧಿಪತ್ರ’ನಾಗಿ ಯಾವ ಅವತಾರ ತಾಳುತ್ತಾರೋ? `ಅಧಿಪತ್ರ’ನ ಪಕ್ಕದಲ್ಲಿ ಅದ್ಯಾವ ಮುದ್ದುಬೊಂಬೆ ನಾಯಕಿಯಾಗಿ ನಿಂತು ಸೌಂಡ್ ಮಾಡುತ್ತಾಳೋ ಗೊತ್ತಿಲ್ಲ. ಆದರೆ, ಸರ್ಕಸ್ ಮೂಲಕ ರೂಪೇಶ್ ಶೆಟ್ರು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಬಿಗ್‍ಬಾಸ್ ಮನೆಯಿಂದ ಹೊರಬಂದು `ಸರ್ಕಸ್’ ಹೆಸರಿನ ಸಿನಿಮಾಗೆ ಬಣ್ಣ ಹಚ್ಚಿದ ರೂಪೇಶ್, ನಿರ್ದೇಶನ, ನಿರ್ಮಾಣದ ಜವಬ್ದಾರಿ ಹೊತ್ತುಕೊಂಡರು. ತಾನೇನು, ತನ್ನ ತಾಕತ್ತೇನು ಎಂಬುದನ್ನ ಪ್ರೂ ಮಾಡಲು ಪಣತೊಟ್ಟರು. ಅದರಂತೇ ತುಳು ಭಾಷೆಯಲ್ಲಿ `ಸರ್ಕಸ್’ ಮಾಡಿ ಸಪ್ತಸಾಗರ ದಾಟಿದ್ದಾರೆ. ಕರ್ನಾಟಕ ಮಾತ್ರವಲ್ಲ ದುಬೈ, ಅಬುದಾಬಿ, ಪುಣೆ, ಕತಾರ್ ಸೇರಿದಂತೆ ಹತ್ತಾರು ಕಂಟ್ರಿಗಳಲ್ಲಿ `ಸರ್ಕಸ್’ ರಿಲೀಸ್ ಮಾಡಿ ಸಕ್ಸಸ್ ಕಂಡಿದ್ದಾರೆ. ಇದನ್ನೂ ಓದಿ:D51: ಧನುಷ್ ಹೊಸ ಸಿನಿಮಾಗೆ ರಶ್ಮಿಕಾ ಮಂದಣ್ಣ ಹೀರೋಯಿನ್

    ಅಚ್ಚರಿ ಅಂದರೆ `ಸರ್ಕಸ್’ ಬಿಡುಗಡೆಗೊಂಡು 50 ದಿನ ಕಳೆದಿದೆ, ಆದರೆ, ಥಿಯೇಟರ್ ನಲ್ಲಿ ಸಿನಿಮಾ ಈಗಲೂ ಹೌಸ್‍ಫುಲ್ ಪ್ರದರ್ಶನ ಕಾಣ್ತಿದೆ. ರೂಪೇಶ್ ಶೆಟ್ರ ಶ್ರಮಕ್ಕೆ ಯಶಸ್ಸಿನ ಜೊತೆಗೆ ಝಣಝಣ ಕಾಂಚಾಣವೂ ಹರಿದುಬರುತ್ತಿದೆ. ಇದರ ಬೆನ್ನಲ್ಲೇ ರಾಕ್‍ಸ್ಟಾರ್ ರೂಪೇಶ್ `ಅಧಿಪತ್ರ’ನಾಗಿ ಗಂಧದಗುಡಿಗೆ ಅಡಿಯಿಡಲು ರೆಡಿಯಾಗಿದ್ದಾರೆ. ತುಳು ಮಾತ್ರವಲ್ಲ ಕನ್ನಡದಲ್ಲೂ ಒಳ್ಳೊಳ್ಳೆ ಸಿನಿಮಾ ಮಾಡಬೇಕು ಅದನ್ನು ಕರ್ನಾಟಕದ ಮೂಲೆಮೂಲೆಗೆ ತಲುಪಿಸಬೇಕು. ಹೊರರಾಜ್ಯ, ಹೊರದೇಶದಲ್ಲೂ ನನ್ನ ಸಿನಿಮಾಗಳು ಸದ್ದು ಮಾಡಬೇಕು ಎನ್ನುವ ಕನಸು ಕಂಡಿದ್ದಾರೆ. ಈಗಾಗಲೇ ಸರ್ಕಸ್ ಮೂಲಕ ಗಡಿದಾಟಿ ಗಹಗಹಿಸಿರೋ ರೂಪೇಶ್, ಕನ್ನಡ ಸಿನಿಮಾದ ಮೂಲಕ ಸಪ್ತಸಾಗರ ದಾಟುವ ಹಂಬಲದಲ್ಲಿದ್ದಾರೆ. ಅದನ್ನು `ಅಧಿಪತ್ರ’ದ ಮೂಲಕ ಈಡೇರಿಸಿಕೊಳ್ತಾರಾ ಕಾದುನೋಡಬೇಕಿದೆ.

    ಅಧಿಪತ್ರ ಸಿನಿಮಾದ ಶೂಟಿಂಗ್ ಸೆಪ್ಟೆಂಬರ್‍ನಿಂದ ಆರಂಭಗೊಳ್ಳಲಿದೆ. ಡೇಂಜರ್ ಝೋನ್, ಸ್ಮೈಲ್ ಪ್ಲೀಸ್, ನಿಶ್ಯಬ್ದ-2, ಅನುಷ್ಕಾ ಸೇರಿದಂತೆ ಕನ್ನಡದಲ್ಲಿ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಆದರೆ, ತುಳು ಸಿನಿಮಾಗಳಿಂದ ಸಿಕ್ಕಂತಹ ಯಶಸ್ಸು ರೂಪೇಶ್‍ಗೆ ಕನ್ನಡ ಚಿತ್ರಗಳಿಂದ ಸಿಕ್ಕಿಲ್ಲ. ಹೀಗಾಗಿ, ಕನ್ನಡ ಭಾಷೆಯ ಸಿನಿಮಾದ ಮೂಲಕ ದೊಡ್ಡ ಮಟ್ಟದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ಬಿಗ್‍ಬಾಸ್ ಸೀಸನ್ 9 ವಿನ್ನರ್ ಆದ್ಮೇಲೆ ರೂಪೇಶ್ ಶೆಟ್ಟಿ ಕರ್ನಾಟಕದ ಮೂಲೆ ಮೂಲೆ ತಲುಪಿದ್ದಾರೆ. ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಹೀಗಾಗಿ, ಮುಂದಿನ ಕನ್ನಡ ಸಿನಿಮಾಗಳ ಮೂಲಕ ರೂಪೇಶ್ ಶೆಟ್ಟಿ ಗೆದ್ದು ಬೀಗೋದು ಗ್ಯಾರಂಟಿ ಎನ್ನುವ ಭರವಸೆಯಿದೆ. ಹತ್ತು ವರ್ಷದ ಸರ್ಕಸ್‍ಗೆ ಸಕ್ಸಸ್ ಸಿಕ್ಕಿದೆ. ಇನ್ನೇನಿದ್ರು ಸುನಾಮಿ ಎಬ್ಬಿಸಿ ಸಾಮ್ರಾಜ್ಯ ಕಟ್ಟೋದಷ್ಟೇ ಬಾಕಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]