Tag: ChatGPT

  • ಭಾರತದಲ್ಲಿ 5 ಲಕ್ಷ ಉಚಿತ ChatGPT ಖಾತೆ – OpenAI ಘೋಷಣೆ

    ಭಾರತದಲ್ಲಿ 5 ಲಕ್ಷ ಉಚಿತ ChatGPT ಖಾತೆ – OpenAI ಘೋಷಣೆ

    ನವದೆಹಲಿ: ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಕಂಪನಿ ಓಪನ್‌ಎಐ OpenAI ಭಾರತದಲ್ಲಿ (India) ಐದು ಲಕ್ಷ ಉಚಿತ ಚಾಟ್‌ಜಿಪಿಟಿ (ChatGPT) ಪ್ಲಸ್ ಖಾತೆಗಳನ್ನು ವಿತರಿಸುವುದಾಗಿ ಘೋಷಿಸಿದೆ.

    ಓಪನ್‌ಎಐ ಇದುವರೆಗಿನ ತನ್ನ ಅತಿದೊಡ್ಡ ಶಿಕ್ಷಣ-ಕೇಂದ್ರಿತ ಉಪಕ್ರಮಗಳಲ್ಲಿ ಒಂದಾಗಿದ್ದು, ಮುಂದಿನ ಆರು ತಿಂಗಳಲ್ಲಿ ದೇಶಾದ್ಯಂತ ಆರು ತಿಂಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಐದು ಲಕ್ಷ ಉಚಿತ ಚಾಟ್‌ಜಿಪಿಟಿ ಖಾತೆ ಸಿಗಲಿದೆ.

    ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಚಾಟ್‌ಜಿಪಿಟಿಯ ಪಾತ್ರವನ್ನು ವಿಸ್ತರಿಸಲು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ತಾಂತ್ರಿಕ ಸಂಸ್ಥೆಗಳ ಸಹಕಾರಿಂದ ಈ ಉಪಕ್ರಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಓಪನ್‌ಎಐ ಉಪಾಧ್ಯಕ್ಷೆ ಲಿಯಾ ಬೆಲ್ಸ್ಕಿ ಹೇಳಿದ್ದಾರೆ.  ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ಆ್ಯಪಲ್ ಕಚೇರಿ ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ

    ಚಾಟ್‌ಜಿಪಿಟಿ ವಿಶ್ವಾದ್ಯಂತ 70 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು ಅತಿ ಹೆಚ್ಚು ಬಳಕೆ ಮಾಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದಿದೆ. ಚಾಟ್‌ಜಿಪಿಟಿ ಒಟ್ಟು ಬಳಕೆದಾರರ ಪೈಕಿ 13.5% ಭಾರತದವರಾಗಿದ್ದರೆ 8.9% ಮಂದಿ ಅಮೆರಿಕದವರಿದ್ದಾರೆ. ಮೂರನೇ ಸ್ಥಾನದಲ್ಲಿ ಇಂಡೋನೇಷ್ಯಾ (5.7%) ಇದೆ.

    ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಓಪನ್‌ಎಐ ಈ ವರ್ಷವೇ ಭಾರತದಲ್ಲಿ ಕಚೇರಿ ತೆರೆಯುವುದಾಗಿ ಮುಖ್ಯಸ್ಥ ಸ್ಯಾಮ್‌ ಅಲ್ಟ್‌ಮನ್‌ ಹೇಳಿದ್ದಾರೆ.

  • ಸಕ್ಕತ್ ಟ್ರೆಂಡ್‌ ಸೃಷ್ಟಿಸುತ್ತಿರುವ ಘಿಬ್ಲಿಯಲ್ಲಿ ಫೋಟೋ ಅಪ್ಲೋಡ್‌ ಮಾಡೋದು ಎಷ್ಟು ಸೇಫ್?

    ಸಕ್ಕತ್ ಟ್ರೆಂಡ್‌ ಸೃಷ್ಟಿಸುತ್ತಿರುವ ಘಿಬ್ಲಿಯಲ್ಲಿ ಫೋಟೋ ಅಪ್ಲೋಡ್‌ ಮಾಡೋದು ಎಷ್ಟು ಸೇಫ್?

    ಚಾಟ್‌ ಜಿಪಿಟಿಯಿಂದ ರಚಿಸಲಾದ ಘಿಬ್ಲಿ ಶೈಲಿಯ ಎಐ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯ ಹವಾ ಸೃಷ್ಟಿಸಿದೆ. ಸಿನಿಮಾ ತಾರೆಯರಿಂದು ಹಿಡಿದು ಪ್ರತಿಯೊಬ್ಬರೂ ತಮ್ಮ ಫೋಟೋಗಳನ್ನು ಘಿಬ್ಲಿ ಸ್ಟುಡಿಯೋದಲ್ಲಿ ಅಪ್ಲೋಡ್ ಮಾಡಿ ಎಐ ಚಿತ್ರಗಳನ್ನಾಗಿ ಪರಿವರ್ತಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿ ಸಂಭ್ರಮಿಸುತ್ತಿದ್ದಾರೆ.

    ಆದರೆ ಘಿಬ್ಲಿಯಲ್ಲಿ ಫೋಟೋ ಅಪ್ಲೋಡ್‌ ಮಾಡುವುದರಿಂದ ನಮ್ಮ ವೈಯಕ್ತಿಕ ಡೇಟಾವನ್ನು ಮತ್ತೊಬ್ಬರ ಕೈಗೆ ನೀಡಿ ನಮಗೆ ನಾವೇ ಅಪಾಯ ತಂದುಕೊಳ್ಳುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ವಿಮರ್ಶಕರು ನೀಡಿದ್ದಾರೆ. ಹಾಗಿದ್ರೆ ಘಿಬ್ಲಿಯಲ್ಲಿ ಎಐ ಫೋಟೋ ರಚಿಸುವುದು ಎಷ್ಟು ಸೇಫ್‌? ಇದರಿಂದ ಬಳಕೆದಾರರಿಗೆ ಎದುರಾಗಬಹುದಾದ ಅಪಾಯಗಳೇನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಏನಿದು ಸ್ಟುಡಿಯೋ ಘಿಬ್ಲಿ ?
    ಸ್ಟುಡಿಯೋ ಘಿಬ್ಲಿ ಎಂಬುದು ಜಪಾನೀಸ್ ಅನಿಮೇ‍ಷನ್ ಸ್ಟುಡಿಯೋ ಆಗಿದ್ದು, ಮೈ ನೇಬರ್‌ ಟೊಟೊರೊ, ಪ್ರಿನ್ಸೆಸ್‌ ಮೊನೊನೊಕೆ ಮುಂತಾದ ಕಾರ್ಟೂನ್ ಚಿತ್ರಗಳನ್ನು ನಿರ್ಮಿಸಿ ಮಕ್ಕಳ ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಘಿಬ್ಲಿ ಶೈಲಿಯ ಚಿತ್ರಗಳು ಹೊಳೆಯಂತೆ ಹರಿದುಬರುತ್ತಿವೆ. ಎಲ್ಲರೂ ತಮ್ಮ ಹಾಗೂ ಕುಟುಂಬ ಸದಸ್ಯರು, ಸ್ನೇಹಿತರ ಜತೆಗಿನ ಫೋಟೋಗಳನ್ನು ಕೊಟ್ಟು ಎಐ ರಚಿತ ಘಿಬ್ಲಿ ಸ್ಟೈಲ್ ಇಮೇಜ್‌ಗಳನ್ನು ಪರಿಶೀಲಿಸುತ್ತಿರುವುದು ಇದಕ್ಕೆ ಕಾರಣ. ದೊಡ್ಡ ದೊಡ್ಡ ಬ್ರಾಂಡ್‌ಗಳು ಕೂಡ ಈ ಟ್ರೆಂಡ್ ಅನ್ನು ಅನುಸರಿಸುತ್ತಿದ್ದು, ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಮಾರ್ಚ್ 26ರಂದು ಈ ಫೀಚರ್ ಅನ್ನು ಚಾಟ್‌ಜಿಪಿಟಿ ಪರಿಚಯಿಸಿದೆ.

    ಘಿಬ್ಲಿ ಆರ್ಟ್‌ ಟ್ರೆಂಡ್ ಶುರುವಾಗಿದ್ದು ಹೇಗೆ?
    ಓಪನ್‌ ಎಐ ಸಿಇಒ ಸ್ಯಾಮ್ ಆಲ್ಟ್‌ಮನ್‌ ಅವರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ತಮ್ಮ ಪ್ರೊಫೈಲ್ ಪಿಕ್ಚರ್‌ಗೆ ಘಿಬ್ಲಿ ಸ್ಟೈಲ್‌ನ ತನ್ನ ಚಿತ್ರವನ್ನು ಅಪ್ಲೋಡ್ ಮಾಡಿದ್ದು, ಅದರ ಬಗ್ಗೆ ಬರೆದಾಗ ಸಾಮಾಜಿಕ ಜಾಲತಾಣದಲ್ಲಿ ಇದು ಹಲ್‌ಚಲ್‌ ಎಬ್ಬಿಸಿತು.

    ಏನಿದು ಘಿಬ್ಲಿ ಆರ್ಟ್‌?
    ಸ್ಟುಡಿಯೋ ಘಿಬ್ಲಿಯನ್ನು ಹಯಾವೋ ಮಿಯಾಝಕಿ, ಇಸಾವೋ ಟಕಹಟ ಮತ್ತು ತೋಷಿಯೋ ಸುಜುಕಿ ಅವರು 1985ರಲ್ಲಿ ಹುಟ್ಟುಹಾಕಿದರು. ಜಪಾನ್‌ ದೇಶದ ಅತ್ಯಂತ ಜನಪ್ರಿಯ ಅನಿಮೇಷನ್ ಸ್ಟುಡಿಯೋ ಇದು. ಕೈಯಲ್ಲೇ ಬರೆದ ಅನಿಮೇಷನ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದ ಈ ಸ್ಟುಡಿಯೋ, ಅದರಲ್ಲಿ ಸೂಕ್ತ ಹಿನ್ನೆಲೆ ಹಾಗೂ ಭಾವನೆಗಳನ್ನು ತುಂಬಿ ಕಥೆಗಳ ನಿರೂಪಣೆಗೆ ಜೀವ ತುಂಬಿಕೊಡುವ ಕೆಲಸ ಮಾಡುತ್ತಿದೆ. ಘಿಬ್ಲಿ ಎಂಬ ಹೆಸರು ಲಿಬಿಯನ್‌ ಅರೇಬಿಕ್ ಶಬ್ದದಿಂದ ಬಂದಿದ್ದು, ಮರುಭೂಮಿಯ ಬಿಸಿಗಾಳಿ ಎಂಬ ಅರ್ಥ ಕೊಡುತ್ತದೆ.

    ಓಪನ್ ಎಐ ಸಿಇಒ ಸ್ಯಾಮ್‌ ಆಲ್ಟ್‌ಮನ್‌ ಈ ಹೊಸ ಇಮೇಜ್‌ ಜನರೇಟರ್‌ ಫೀಚರ್ ಅನ್ನು ಉಚಿತವಾಗಿ ನೀಡಲು ಯೋಜಿಸಿದ್ದರು. ಇದಕ್ಕೆ ಸಿಕ್ಕ ಅನಿರೀಕ್ಷಿತ ಯಶಸ್ಸಿನ ಕಾರಣ ಬಳಿಕ ಚಂದಾದಾರಿಗೆ ಮಾತ್ರ ನೀಡಲು ತೀರ್ಮಾನಿಸಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗಾಗಿ ಇದು ಸದ್ಯ ಜಿಪಿಟಿ ಪೇಯ್ಡ್ ವರ್ಷನ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ವರದಿ ಹೇಳಿದೆ.

    ಚಾಟ್‌ ಜಿಪಿಟಿ ಹೊರತುಪಡಿಸಿ, ನೀವು ಇದನ್ನು ಉಚಿತವಾಗಿ ಮಾಡಲು ಕೆಲ ಆ್ಯಪ್​ಗಳಿವೆ. ಫ್ರೀ ಆಗಿ ಘಿಬ್ಲಿ ಚಿತ್ರಗಳನ್ನು ರಚಿಸಲು ಮೊದಲ ಸಾಧನವೆಂದರೆ ಮಿಡ್‌ಜರ್ನಿ, ಇಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸ್ಟುಡಿಯೋ ಘಿಬ್ಲಿ-ಪ್ರೇರಿತ, ಹಯಾವೊ ಮಿಯಾಜಾಕ್ ಮತ್ತು ಇತರ ಕೀವರ್ಡ್‌ಗಳನ್ನು ಬಳಸಬಹುದು. ಇದರೊಂದಿಗೆ ನಿಮ್ಮ ಚಿತ್ರವು ಘಿಬ್ಲಿ ಶೈಲಿಯಾಗುತ್ತದೆ.

    ನೀವು ಘಿಬ್ಲಿ ಶೈಲಿಯ ಚಿತ್ರಗಳನ್ನು ಉಚಿತವಾಗಿ ರಚಿಸಲು ಬಯಸಿದರೆ ಎಲೋನ್ ಮಸ್ಕ್ ಅವರ ಗ್ರೋಕ್ ಎಐ ಅನ್ನು ಕೂಡ ಬಳಸಬಹುದು. ಗ್ರೋಕೆ ಎಐ ಚಾಟ್‌ ಜಿಪಿಟಿಯಷ್ಟು ನಿಖರವಾದ ಚಿತ್ರಗಳನ್ನು ರಚಿಸಲು ಸಾಧ್ಯವಾಗದಿದ್ದರೂ, ನೀವು ಅದನ್ನು ಉಚಿತವಾಗಿ ರಚಿಸಬಹುದು. ಗೂಗಲ್ ಎಐ ಸ್ಟುಡಿಯೋದ ಇತ್ತೀಚಿನ ಜೆಮಿನಿಯಲ್ಲಿಯೂ ಘಿಬ್ಲಿ ಶೈಲಿಯ ಚಿತ್ರಗಳನ್ನು ರಚಿಸಬಹುದು.

    ಕಾರ್ಟೂನ್​ ರೀತಿಯಲ್ಲಿ ನಮ್ಮನ್ನು ನಾವು ನೋಡಿಕೊಳ್ಳಲು ಖುಷಿಯಾಗುತ್ತದೆ ಎನ್ನುವ ಕಾರಣಕ್ಕೆ ಘಿಬ್ಲಿ ಟ್ರೆಂಡ್​ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ಇತರೇ ಕೆಲವು ಆ್ಯಪ್​ಗಳು, ತಂತ್ರಜ್ಞಾನಗಳಂತೆಯೇ ಘಿಬ್ಲಿ ಕೂಡ ಮಾರಕವಾಗಿರುವುದಾಗಿ ಸೈಬರ್​ ಕ್ರೈಂ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಸೈಬರ್‌ ಪೊಲೀಸರ ಪ್ರಕಾರ, ನಾವು ತೆಗೆದ ಪ್ರತಿಯೊಂದು ಫೋಟೊದಲ್ಲಿಯೂ ಮೆಟಾಡೇಟಾ ಎಂಬ ಮಾಹಿತಿ ಇರುತ್ತದೆ. ಈ ಮೆಟಾಡೇಟಾ ಅಥವಾ EXIF ಮಾಹಿತಿಗಳು ನಮ್ಮ ಹಲವಾರು ವೈಯಕ್ತಿಯ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ನಾವು ಯಾವ ಮೊಬೈಲ್​ನಲ್ಲಿ ಫೋಟೋ ತೆಗೆದಿರುವುದು, ಅದರ ಸ್ಥಳ, ಸಮಯ ಸೇರಿದಮತೆ ಸಂಪೂರ್ಣ ದತ್ತಾಂಶ ಸಂಗ್ರಹವಾಗಿರುತ್ತದೆ. ಈ ಎಲ್ಲಾ ಮಾಹಿತಿಗಳೇ ಸೈಬರ್​ ಕ್ರಿಮಿನಲ್ಸ್​ಗೆ ಅಸ್ತ್ರ. ನೀವು ಅಪ್ಲೋಡ್ ಮಾಡುವ ಫೋಟೋಗಳು ಅಥವಾ ವಿಡಿಯೋಗಳು, ನಿಮ್ಮ ಮುಖದ ವೈಶಿಷ್ಟ್ಯಗಳು, ಸಿಸಿಟಿವಿ ಕ್ಯಾಮೆರಾಗಳ ಮುಖಾಂತರ ನಿಮ್ಮ ಓಡಾಟದ ಮಾಹಿತಿ ಸಂಗ್ರಹವಾಗಿ, ಟ್ರ್ಯಾಕಿಂಗ್​ಗೆ ಅವಕಾಶಗಳನ್ನೂ ಮಾಡಿಕೊಡುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಇಷ್ಟು ಮಾತ್ರವಲ್ಲದೇ ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಸೃಷ್ಟಿಸಿದ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗುತ್ತಿದೆ. ಎಲಾನ್ ಮಸ್ಕ್, ಆರ್ಯಭಟ, ಮೊಗ್ಯಾಂಬೋ, ಸ್ಯಾಮ್ ಆಲ್ಟ್‌ಮನ್ ಸೇರಿದಂತೆ ಹಲರ ನಕಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಇದೀಗ ವೈರಲ್ ಆಗಿದೆ. ವಿಶ್ವದ ದಿಗ್ಗಜರು, ಉದ್ಯಮಿಗಳು, ಕ್ರೀಡಾಪಟುಗಳ ನಕಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಸೃಷ್ಟಿಸಿ ಪೋಸ್ಟ್ ಮಾಡಲಾಗುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತಮಾಷೆಗಾಗಿ ನಕಲಿ ಕಾರ್ಡ್ ಪೋಸ್ಟ್ ಮಾಡಲಾಗುತ್ತಿದೆ. ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ಸೇರಿದಂತೆ ಹಲವರನ ನಕಲಿ ಆಧಾರ್ ಕಾರ್ಡ್ ಪೋಸ್ಟ್ ಆಗಿರುವುದು ಕಂಡುಬಂದಿದೆ.

    ಬಳಕೆದಾರರಿಗೆ ಅಪಾಯಗಳೇನು?
    Lusiza Jarovsky ಹೆಸರಿನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು ಇದರಲ್ಲಿ, ‘ಬಳಕೆದಾರರು ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡಿದ ಬಳಿಕ ಆ ಫೋಟೋಗಳ ಬಳಕೆಯ ಮೇಲಿನ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಈ ಓಪನ್ ಎಐನ ಗೌಪ್ಯತಾ ನೀತಿಯು ಬಳಕೆದಾರರ ಇನ್‌ಪುಟ್ ಅನ್ನು ಮಾದರಿ ತರಬೇತಿಗಾಗಿ ಬಳಸಬಹುದು, ಇದರಿಂದ ಬಳಕೆದಾರರಿಗೆ ಎದುರಾಗುವ ಅಪಾಯವೇ ಹೆಚ್ಚು ಎಂದು ತಿಳಿಸಿದ್ದಾರೆ.

    *ಗೌಪ್ಯತೆಯ ಉಲ್ಲಂಘನೆ: ನೀವು ಒಮ್ಮೆ ಫೋಟೋ ಅಪ್‌ಲೋಡ್ ಮಾಡಿದ ನಂತರ, ನಿಮಗೆ ಅದರ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಆದ್ದರಿಂದ ನಿಮ್ಮ ಫೋಟೋವನ್ನು ಇತರ ಉದ್ದೇಶಗಳಿಗೂ ಬಳಸಬಹುದು.

    *ಗುರುತಿನ ಕಳ್ಳತನ: ನೀವು ಅಪ್‌ಲೋಡ್ ಮಾಡುವ ಫೋಟೋಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬೇರೋಬ್ಬರ ಗುರುತನ್ನು ಕದಿಯಬಹುದು.

    *ಸುರಕ್ಷಿತ ಡೇಟಾ: ಇದು ನಿಮ್ಮ ಖಾಸಗಿ ಮಾಹಿತಿಯನ್ನು ಸುರಕ್ಷಿತವಾಗಿರಿಸದೇ ಇರಬಹುದು ಮತ್ತು ನೀವು ಹ್ಯಾಕಿಂಗ್‌ಗೆ ಬಲಿಯಾಗಬಹುದು.

    *ದುರುಪಯೋಗ: ನಿಮ್ಮ ಫೋಟೋಗಳನ್ನು ತಪ್ಪು ಉದ್ದೇಶಕ್ಕಾಗಿ ಬಳಸಬಹುದು. ನಕಲಿ ಪ್ರೊಫೈಲ್‌ಗಳನ್ನು ರಚಿಸುವುದು ಇತ್ಯಾದಿ.

    *ಕಾನೂನು ಸಮಸ್ಯೆಗಳು: ಬಳಕೆದಾರರ ಫೋಟೋಗಳ ಅನಧಿಕೃತ ಬಳಕೆಯು ಕಾನೂನು ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಬಳಕೆದಾರರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೊದಲು ಎಚ್ಚರಿಕೆ ವಹಿಸಬೇಕು.

  • ChatGPTಗೆ ಸೆಡ್ಡು ಹೊಡೆಯಲು ತನ್ನದೇ ಹೊಸ ಕಂಪನಿ ತೆರೆದ ಮಸ್ಕ್

    ChatGPTಗೆ ಸೆಡ್ಡು ಹೊಡೆಯಲು ತನ್ನದೇ ಹೊಸ ಕಂಪನಿ ತೆರೆದ ಮಸ್ಕ್

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಬುಧವಾರ ಹೊಸ ಕೃತಕ ಬುದ್ಧಿಮತ್ತೆಯ (Artificial Intelligence) ಸ್ಟಾರ್ಟ್ ಅಪ್ ‘ಎಕ್ಸ್ಎಐ’ (xAI) ಅನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಎಐ (AI) ಲೋಕದಲ್ಲಿ ಭಾರೀ ಸದ್ದು ಮಾಡಿದ್ದ ಓಪನ್ ಎಐನ (OpenAI) ಚಾಟ್ ಜಿಪಿಟಿಗೆ (ChatGPT) ಸೆಡ್ಡು ಹೊಡೆಯಲು ಇದೀಗ ಮಸ್ಕ್ ಮುಂದಾಗಿದ್ದಾರೆ.

    ಈಗಾಗಲೇ ಎಲೆಕ್ಟ್ರಿಕ್ ಕಾರು ತರಾರಿಕಾ ಕಂಪನಿ ಟೆಸ್ಲಾ, ರಾಕೆಟ್ ಉಡಾವಣಾ ಕಂಪನಿ ಸ್ಪೇಸ್‌ಎಕ್ಸ್‌ನ ಸಿಇಒ ಮಾತ್ರವಲ್ಲದೇ ಟ್ವಿಟ್ಟರ್‌ನ ಮಾಲೀಕನಾಗಿರುವ ಮಸ್ಕ್ ಈಗ ಎಐ ಲೋಕದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ.

    ಈ ಹಿಂದೆ ಮಸ್ಕ್ ಎಐ ಅಭಿವೃದ್ಧಿಯನ್ನು ನಿಲ್ಲಿಸಬೇಕು. ಇದರಿಂದ ದೊಡ್ಡ ಅಪಾಯದ ಸಾಧ್ಯತೆಯಿದೆ. ಈ ವಲಯದಲ್ಲಿ ನಿಯಂತ್ರಣದ ಅಗತ್ಯವಿದೆ. ಇದು ನಾಗರಿಕತೆಯ ವಿನಾಶಕ್ಕೆ ಕಾರಣವಾಗಬಹುದು ಎಂದು ಪದೇ ಪದೇ ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಭಾರತದಲ್ಲಿ 20 ಲಕ್ಷಕ್ಕೆ ಕಾರು – ಕೇಂದ್ರದ ಜೊತೆ ಟೆಸ್ಲಾ ಮಾತುಕತೆ

    ಇದೀಗ ತನ್ನದೇ ಎಐ ಕಂಪನಿಯನ್ನು ಪ್ರಾರಂಭ ಮಾಡಿ ಮಾಹಿತಿಯನ್ನು ಹಂಚಿಕೊಂಡಿರುವ ಮಸ್ಕ್, ಸುರಕ್ಷಿತ ಎಐ ಅನ್ನು ನಿರ್ಮಿಸುವ ತನ್ನ ಯೋಜನೆಯನ್ನು ವಿವರಿಸಿದ್ದಾರೆ. ಎಐಗೆ ನೈತಿಕತೆಯನ್ನು ಸ್ಪಷ್ಟವಾಗಿ ಪ್ರೋಗ್ರಾಮಿಂಗ್ ಮಡುವ ಬದಲು ಅವರು ಎಕ್ಸ್ಎಐಯಲ್ಲಿ ಹೆಚ್ಚಿನ ಕುತೂಹಲಕಾರಿ ಅಂಶವನ್ನು ರಚಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ.

    ಮನುಷ್ಯರಿಗಿಂತಲೂ ಚುರುಕಾದ ಸೂಪರ್ ಇಂಟೆಲಿಜೆನ್ಸ್ ಅಥವಾ ಕೃತಕ ಬುದ್ಧಿಮತ್ತೆ ಇನ್ನು ಕೇವಲ 5-6 ವರ್ಷಗಳಲ್ಲಿ ಬರಲಿದೆ ಎಂದು ಮಸ್ಕ್ ಭವಿಷ್ಯ ನುಡಿದಿದ್ದಾರೆ.

    ಮಸ್ಕ್ ಈ ಹಿಂದೆ 2015ರಲ್ಲಿ ಓಪನ್ ಎಐನ ಸಹ ಸಂಸ್ಥಾಪಕರಾಗಿದ್ದರು. ಆದರೆ 2018ರಲ್ಲಿ ಅವರು ಕಂಪನಿಯ ಮಂಡಳಿಯಿಂದ ಕೆಳಗಿಳಿದರು. ಓಪನ್ ಎಐನಲ್ಲಿ ಮೈಕ್ರೊಸಾಫ್ಟ್ ಹೂಡಿಕೆ ಮಾಡುತ್ತಿದೆ. ಇದನ್ನೂ ಓದಿ: ಟ್ವಿಟ್ಟರ್‌ಗಿಂತ ಥ್ರೆಡ್ಸ್‌ ಭಿನ್ನ ಹೇಗೆ? ವಿಶೇಷತೆ ಏನು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೇಲ್ ಆಗ್ತಿರೋದೇಕೆ? – ಕಾರಣ ತಿಳಿಸಿದ ChatGPT

    ICC ಟೂರ್ನಿಗಳಲ್ಲಿ ಟೀಂ ಇಂಡಿಯಾ ಫೇಲ್ ಆಗ್ತಿರೋದೇಕೆ? – ಕಾರಣ ತಿಳಿಸಿದ ChatGPT

    ಮುಂಬೈ: 2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ (WTC) ಭಾರತದ ಸೋಲು ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಈ ನಡುವೆ ಕೃತಕ ಬುದ್ಧಿಮತ್ತೆ ಚಾಚ್‌ಜಿಪಿಟಿ (ChatGPT) ಐಸಿಸಿ ಟೂರ್ನಿಗಳಲ್ಲಿ (ICC Tournament) ಟೀಂ ಇಂಡಿಯಾ ಏಕೆ ವಿಫಲವಾಗುತ್ತಿದೆ ಎಂಬ ಅಂಶಗಳನ್ನ ಪಟ್ಟಿಮಾಡಿದೆ.

    ಹೌದು. 2023ರ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ 2ನೇ ಆವೃತ್ತಿಯಲ್ಲಿ ಆಸ್ಟ್ರೇಲಿಯಾ (Australia) ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದೆ. ಭಾರತದ ವಿರುದ್ಧ 209 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ, T20 ವಿಶ್ವಕಪ್, ಚಾಂಪಿಯನ್ ಟ್ರೋಫಿ ಹಾಗೂ ಟೆಸ್ಟ್ ಚಾಂಪಿಯನ್ ಶಿಪ್ ಮೂರು ಫಾರ್ಮ್ಯಾಟ್‌ನಲ್ಲೂ ಚಾಂಪಿಯನ್ ಪಟ್ಟ ಗೆದ್ದ ಏಕೈಕ ತಂಡವಾಗಿ ಹೊರಹೊಮ್ಮಿದೆ. ಭಾರತ ಸತತ 2ನೇ ಬಾರಿಯೂ ಸೋಲನುಭವಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ. ಆದ್ರೆ ಭಾರತ ಐಸಿಸಿ ಟೂರ್ನಿಗಳಲ್ಲಿ ಏಕೆ ವಿಫಲವಾಗುತ್ತಿದೆ? ಹೋರಾಟದ ಹೊರತಾಗಿಯೂ ಏಕೆ ಇಷ್ಟೊಂದು ಸಮಸ್ಯೆ ಅನುಭವಿಸುತ್ತಿದೆ? ಎಂಬುದಕ್ಕೆ ಕೆಲವು ಅಂಶಗಳನ್ನ ಕೃತಕ ಬುದ್ಧಿಮತ್ತೆ ಚಾಚ್‌ಜಿಪಿಟಿ ಗುರುತಿಸಿದೆ.

    ಹೆಚ್ಚಿನ ನಿರೀಕ್ಷೆ ಮತ್ತು ಒತ್ತಡ:

    ದೇಶದಲ್ಲಿ ಕ್ರಿಕೆಟ್ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವುದರಿಂದ ತಂಡವು ಹೆಚ್ಚಿನ ನಿರೀಕ್ಷೆಯೊಂದಿಗೆ ಆಟವಾಡಲು ಕಣಕ್ಕಿಳಿಯುತ್ತದೆ. ಐಸಿಸಿ ಈವೆಂಟ್‌ಗಳಲ್ಲಿ ಉನ್ನತಮಟ್ಟದಲ್ಲಿ ಪ್ರದರ್ಶನ ನೀಡಬೇಕೆಂಬ ನಿರೀಕ್ಷೆಯೂ ಆಟಗಾರರ ಮನಸ್ಥಿತಿ ಮತ್ತು ಪ್ರರ್ದಶನದ ಮೇಲೆ ಪರಿಣಾಮ ಬೀರಬಹುದು. ಇದನ್ನೂ ಓದಿ: ಇಷ್ಟಕ್ಕೆ ಮುಗಿದಿಲ್ಲ – ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಸೋಲಿನ ಬಳಿಕ ಗಿಲ್ ಖಡಕ್ ರಿಯಾಕ್ಷನ್

    ಸವಾಲಿನ ಪರಿಸ್ಥಿತಿಗಳು:

    ಐಸಿಸಿ ಈವೆಂಟ್‌ಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆಯುತ್ತದೆ. ಆದ್ದರಿಂದ ಪರಿಚಯವಿಲ್ಲದ ಪಿಚ್‌ಗಳು, ಬದಲಾದ ಹವಾಮಾನ ಪರಿಸ್ಥಿತಿಗೆ ಹೊಂದಿಕೊಂಡು ಆಡವಾಡುವುದು ಭಾರತ ತಂಡಕ್ಕೆ ಸವಾಲನ್ನು ಉಂಟುಮಾಡುತ್ತದೆ. ಇದನ್ನೂ ಓದಿ: WTC Final: 3ನೇ ದಿನದಲ್ಲಿ ಜಡೇಜಾ ಜಾದು – ಆಸ್ಟ್ರೇಲಿಯಾಕ್ಕೆ 296 ರನ್‌ಗಳ ಮುನ್ನಡೆ

    ಅನುಭವದ ಕೊರತೆ:

    ಐಸಿಸಿ ಟೂರ್ನಿಗಳಲ್ಲಿ ಭಾಗವಹಿಸುವ ಇತರ ತಂಡಗಳಿಗೆ ಹೋಲಿಸಿದರೆ ಯುವ ಅಥವಾ ಅನುಭವಿ ತಂಡವನ್ನು ಭಾರತ ಹೊಂದಿರುತ್ತದೆ. ಹೆಚ್ಚಿನ ಒತ್ತಡಗಳು ಇದ್ದಂತಹ ಸಂದರ್ಭದಲ್ಲಿ ಅನುಭವದ ಕೊರತೆಯೂ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.

    ನಿರ್ಧಾರ ತಂತ್ರಗಾರಿಕೆ:

    ಭಾರತ ತಂಡದ ಕಾರ್ಯತಂತ್ರಗಳು, ತಂಡದ ಆಯ್ಕೆ, ಕೋಚಿಂಗ್ ಸಿಬ್ಬಂದಿ ಹಾಗೂ ತಂಡದ ನಿರ್ವಹಣೆಯಿಂದ ರೂಪಿಸಲಾದ ನಿರ್ಧಾರಗಳೂ ಸಹ ಐಸಿಸಿ ಪ್ರಾಯೋಜಿತ ಟೂರ್ನಿ ಮೇಲೆ ಪರಿಣಾಮ ಉಂಟಾಗುತ್ತದೆ. ಇದನ್ನೂ ಓದಿ: ಮೋದಿ ಕ್ರೀಡಾಂಗಣದಲ್ಲಿ ಇಂಡೋ ಪಾಕ್ ಕದನ – ರಣರೋಚಕ ಪಂದ್ಯಕ್ಕಾಗಿ ಕಾಯ್ತಿದ್ದಾರೆ ಫ್ಯಾನ್ಸ್

    ಫಾರ್ಮ್ ಹಾಗೂ ಗಾಯದ ಸಮಸ್ಯೆ:

    ಇತರ ತಂಡಗಳಂತೆ ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನವು ಆಟಗಾರರ ಫಾರ್ಮ್ ಹಾಗೂ ಗಾಯದ ಸಮಸ್ಯೆಗಳ ಆಧಾರದ ಮೇಲೆ ಪ್ರಭಾವಿತವಾಗಿರುತ್ತೆ. ಪ್ರಮುಖ ಆಟಗಾರರು ಗಾಯದ ಸಮಸ್ಯೆಗಳಿಗೆ ತುತ್ತಾಗಿ ಹೊರಗುಳಿಯುವುದು ಹಾಗೂ ಫಾರ್ಮ್ ಕಳೆದುಕೊಳ್ಳುವುದು ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ.

    ಪ್ರಬಲ ಪೈಪೋಟಿ:

    ಐಸಿಸಿ ಈವೆಂಟ್‌ಗಳಲ್ಲಿ ತಂಡಗಳು ಉತ್ತಮವಾಗಿರುವುದರಿಂದ ಪೈಪೋಟಿ ಸಹ ಪ್ರಬಲವಾಗಿಯೇ ಇರುತ್ತದೆ. ಭಾರತ ಸಹ ಕಠಿಣ ಸವಾಲುಗಳನ್ನು ಎದುರಿಸುತ್ತದೆ. ಉನ್ನತ ಮಟ್ಟದ ಸ್ಪರ್ಧೆಯು ಭಾರತ ಸೇರಿದಂತೆ ಯಾವುದೇ ತಂಡಕ್ಕೆ ಈ ಟೂರ್ನಿಗಲ್ಲಿ ಸತತವಾಗಿ ಮಿಂಚುವುದು (ಗೆಲುವು ಸಾಧಿಸುವುದು) ಸವಾಲಾಗಬಹುದು.

  • ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್

    ಹೊಸ ಕೃತಕ ಬುದ್ಧಿಮತ್ತೆ ಕಂಪನಿ X.AI ಪ್ರಾರಂಭಿಸಲಿದ್ದಾರೆ ಮಸ್ಕ್

    ವಾಷಿಂಗ್ಟನ್: ಟೆಸ್ಲಾ ಸಿಇಒ ಎಲೋನ್ ಮಸ್ಕ್ (Elon Musk) ಚಾಟ್‌ಜಿಪಿಟಿ (ChatGPT) ತಯಾರಕ ಓಪನ್‌ಎಐಗೆ (OpenAI) ಟಕ್ಕರ್ ನೀಡಲು ಕೃತಕ ಬುದ್ಧಿಮತ್ತೆಯ (Artificial Intelligence) ಹೊಸ ಸ್ವಂತ ಕಂಪನಿಯನ್ನು (Company)  ಪ್ರಾರಂಭಿಸಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಮೂಲಗಳ ಪ್ರಕಾರ ಮಸ್ಕ್ ತನ್ನ ಹೊಸ ಎಐ (AI) ಕಂಪನಿಗಾಗಿ ಸಂಶೋಧಕರು ಹಾಗೂ ಎಂಜಿನಿಯರುಗಳ ತಂಡವನ್ನು ಒಟ್ಟುಗೂಡಿಸುತ್ತಿದ್ದಾರೆ. ಈ ಕಂಪನಿಗಾಗಿ ಅವರು ತಮ್ಮ ಸ್ಪೇಸ್‌ಎಕ್ಸ್ ಹಾಗೂ ಟೆಸ್ಲಾ ಕಂಪನಿಯಲ್ಲಿನ ಕೆಲ ಹೂಡಿಕೆದಾರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

    ವರದಿಗಳ ಪ್ರಕಾರ ಮಸ್ಕ್‌ನ ಹೊಸ ಕೃತಕ ಬುದ್ಧಿಮತ್ತೆ ಕಂಪನಿಯ ಹೆಸರು ಎಕ್ಸ್.ಎಐ (X.AI) ಆಗಿದೆ. ಕಳೆದ ತಿಂಗಳು ಮಸ್ಕ್ ಎಕ್ಸ್.ಎಐ ಕಾರ್ಪ್ ಹೆಸರಿನಲ್ಲಿ ಸಂಸ್ಥೆಯನ್ನು ನೋಂದಾಯಿಸಿಕೊಂಡಿದ್ದಾರೆ. ನೆವಾಡಾದಲ್ಲಿ ಈ ಕಂಪನಿ ಓಪನ್ ಆಗುವ ಸಾಧ್ಯತೆಯಿದೆ. ಮಸ್ಕ್ ತಮ್ಮ ಕುಟುಂಬದ ಕಚೇರಿಯ ವ್ಯವಸ್ಥಾಪಕ ನಿರ್ದೇಶಕ ಜೇರೆಡ್ ಬಿರ್ಚಾಲಾ ಅವರನ್ನು ಕಂಪನಿಗೆ ಕಾರ್ಯದರ್ಶಿಯಾಗಿ ಪಟ್ಟಿ ಮಾಡಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    2015ರಲ್ಲಿ ಪ್ರಾರಂಭವಾದ ಲಾಭರಹಿತ ಓಪನ್‌ಎಐ ಸಂಸ್ಥೆಗೆ ಮಸ್ಕ್ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಅವರು 2018ರಲ್ಲಿ ಕಂಪನಿಯ ಮಂಡಳಿಯಿಂದ ಕೆಳಗಿಳಿದರು. ಇದೀಗ ಓಪನ್‌ಎಐಗೆ ಪ್ರತಿಸ್ಪರ್ಧಿಯಾಗಿ ಮಸ್ಕ್ ತಮ್ಮದೇ ಹೊಸ ಕಂಪನಿಯನ್ನು ತೆರೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: Twitter logo – ನಾಯಿ ಹೋಯ್ತು, ಮತ್ತೆ ನೀಲಿ ಹಕ್ಕಿ ಬಂತು

  • ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

    ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

    ವಾಷಿಂಗ್ಟನ್: ಅಮೆರಿಕದ (USA) ಪ್ರಖ್ಯಾತ ವಾಹನ ಸಂಸ್ಥೆ ಹಾಗೂ ಷೆವರ್ಲೆ, ಬ್ಯೂಕ್, ಜಿಎಂಸಿ ಮತ್ತು ಕ್ಯಾಡಿಲಾಕ್ ಕಾರುಗಳನ್ನು ಉತ್ಪಾದಿಸುವ ಜನರಲ್ ಮೋಟರ್ಸ್ (General Motors) ತನ್ನ ವಾಹನಗಳಲ್ಲಿ ಚಾಟ್‌ಜಿಪಿಟಿ (ChatGPT) ತಂತ್ರಜ್ಞಾನ ಬಳಸಲು ನಿರ್ಧರಿಸಿದೆ.

    ಮೈಕ್ರೋಸಾಫ್ಟ್ ಕಾರ್ಪ್ (Microsoft Corp) ಸಹಯೋಗದ ಭಾಗವಾಗಿ ಚಾಟ್‌ಜಿಪಿಟಿ ಅಳವಡಿಸಲು ನಿರ್ಧರಿಸಿರುವುದಾಗಿ ಜನರಲ್ ಮೋಟರ್ಸ್ ಉಪಾಧ್ಯಕ್ಷ ಸ್ಕಾಟ್ ಮಿಲ್ಲರ್ (Scott Miller) ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಅತಿದೊಡ್ಡ ಬ್ಯಾಂಕ್ ದಿವಾಳಿ – Silicon Valley Bank ಬಂದ್

    ಸಾಮಾನ್ಯವಾಗಿ ಚಾಟ್‌ಜಿಪಿಟಿ ಎಲ್ಲದರಲ್ಲೂ ಬಳಕೆಯಲ್ಲಿದೆ. ಹಾಗಾಗಿ ವಾಹನಗಳ ವೈಶಿಷ್ಟ್ಯಗಳು, ಗ್ಯಾರೇಜ್ ಡೋರ್ ಕೋಡ್‌ನಂತಹ ಪ್ರೋಗ್ರಾಮ್‌ಗಳು ಅಥವಾ ಕ್ಯಾಲೆಂಡರ್ ವೇಳಾಪಟ್ಟಿ ಸಂಯೋಜನೆ ಮಾಡುವುದು ಹೇಗೆ? ಎಂಬೆಲ್ಲಾ ಮಾಹಿತಿ ತಿಳಿಯಲು ಚಾಟ್‌ಜಿಪಿಟಿ ಬಳಸಬಹುದು. ಈ ಹಿಂದೆ ಅಮೆರಿಕದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳನ್ನ ವರ್ಚುವಲ್ ಪರ್ಸನಲ್ ಅಸಿಸ್ಟೆಂಟ್ ಕೆಲಸಕ್ಕಾಗಿ ಬಳಸಲಾಗುತ್ತಿತ್ತು ಎಂದು ಮಿಲ್ಲರ್ ಹೇಳಿದ್ದಾರೆ. ಇದನ್ನೂ ಓದಿ: ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

    ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಚಾಟ್‌ಜಿಪಿಟಿ ಮಾಲೀಕ ಓಪನ್‌ಎಐ ನಲ್ಲಿ (ಕೃತಕ ಬುದ್ದಿಮತ್ತೆ) ಬಹು-ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜೊತೆಗೆ ತನ್ನ ಎಲ್ಲಾ ಉತ್ಪನ್ನಗಳಿಗೆ ಚಾಟ್‌ಬಾಟ್‌ನ ತಂತ್ರಜ್ಞಾನ ಅಳವಡಿಸುವ ಗುರಿ ಹೊಂದಿದೆ. ಹಾಗಾಗಿ ದೈತ್ಯ ಟೆಕ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ ವಾಹನಗಳಲ್ಲಿ ಹೆಚ್ಚಿನ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಮುಂದುವರಿಸಿದೆ.