Tag: chatbot

  • ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

    ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ

    ವಾಷಿಂಗ್ಟನ್: ಅಮೆರಿಕದ (USA) ಪ್ರಖ್ಯಾತ ವಾಹನ ಸಂಸ್ಥೆ ಹಾಗೂ ಷೆವರ್ಲೆ, ಬ್ಯೂಕ್, ಜಿಎಂಸಿ ಮತ್ತು ಕ್ಯಾಡಿಲಾಕ್ ಕಾರುಗಳನ್ನು ಉತ್ಪಾದಿಸುವ ಜನರಲ್ ಮೋಟರ್ಸ್ (General Motors) ತನ್ನ ವಾಹನಗಳಲ್ಲಿ ಚಾಟ್‌ಜಿಪಿಟಿ (ChatGPT) ತಂತ್ರಜ್ಞಾನ ಬಳಸಲು ನಿರ್ಧರಿಸಿದೆ.

    ಮೈಕ್ರೋಸಾಫ್ಟ್ ಕಾರ್ಪ್ (Microsoft Corp) ಸಹಯೋಗದ ಭಾಗವಾಗಿ ಚಾಟ್‌ಜಿಪಿಟಿ ಅಳವಡಿಸಲು ನಿರ್ಧರಿಸಿರುವುದಾಗಿ ಜನರಲ್ ಮೋಟರ್ಸ್ ಉಪಾಧ್ಯಕ್ಷ ಸ್ಕಾಟ್ ಮಿಲ್ಲರ್ (Scott Miller) ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದ ಅತಿದೊಡ್ಡ ಬ್ಯಾಂಕ್ ದಿವಾಳಿ – Silicon Valley Bank ಬಂದ್

    ಸಾಮಾನ್ಯವಾಗಿ ಚಾಟ್‌ಜಿಪಿಟಿ ಎಲ್ಲದರಲ್ಲೂ ಬಳಕೆಯಲ್ಲಿದೆ. ಹಾಗಾಗಿ ವಾಹನಗಳ ವೈಶಿಷ್ಟ್ಯಗಳು, ಗ್ಯಾರೇಜ್ ಡೋರ್ ಕೋಡ್‌ನಂತಹ ಪ್ರೋಗ್ರಾಮ್‌ಗಳು ಅಥವಾ ಕ್ಯಾಲೆಂಡರ್ ವೇಳಾಪಟ್ಟಿ ಸಂಯೋಜನೆ ಮಾಡುವುದು ಹೇಗೆ? ಎಂಬೆಲ್ಲಾ ಮಾಹಿತಿ ತಿಳಿಯಲು ಚಾಟ್‌ಜಿಪಿಟಿ ಬಳಸಬಹುದು. ಈ ಹಿಂದೆ ಅಮೆರಿಕದಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳನ್ನ ವರ್ಚುವಲ್ ಪರ್ಸನಲ್ ಅಸಿಸ್ಟೆಂಟ್ ಕೆಲಸಕ್ಕಾಗಿ ಬಳಸಲಾಗುತ್ತಿತ್ತು ಎಂದು ಮಿಲ್ಲರ್ ಹೇಳಿದ್ದಾರೆ. ಇದನ್ನೂ ಓದಿ: ಈ ಇಲಿಗೆ ತಾಯಿ ಇಲ್ಲ.. ಇಬ್ಬರು ತಂದೆಯಂದಿರಂತೆ – ಸಲಿಂಗಿಗಳಿಂದ ಜನಿಸುತ್ತವೆ ಜೈವಿಕ ಮಕ್ಕಳು!

    ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಚಾಟ್‌ಜಿಪಿಟಿ ಮಾಲೀಕ ಓಪನ್‌ಎಐ ನಲ್ಲಿ (ಕೃತಕ ಬುದ್ದಿಮತ್ತೆ) ಬಹು-ಬಿಲಿಯನ್ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜೊತೆಗೆ ತನ್ನ ಎಲ್ಲಾ ಉತ್ಪನ್ನಗಳಿಗೆ ಚಾಟ್‌ಬಾಟ್‌ನ ತಂತ್ರಜ್ಞಾನ ಅಳವಡಿಸುವ ಗುರಿ ಹೊಂದಿದೆ. ಹಾಗಾಗಿ ದೈತ್ಯ ಟೆಕ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ ವಾಹನಗಳಲ್ಲಿ ಹೆಚ್ಚಿನ ತಂತ್ರಜ್ಞಾನ ಅಳವಡಿಸುವ ಪ್ರಯತ್ನ ಮುಂದುವರಿಸಿದೆ.

  • ಪ್ರೇಯಸಿಯ ಖುಷಿಗಾಗಿ ಚಾಟ್‍ಬಾಟ್ ಸೃಷ್ಟಿಸಿದ ಟೆಕ್ಕಿ

    ಪ್ರೇಯಸಿಯ ಖುಷಿಗಾಗಿ ಚಾಟ್‍ಬಾಟ್ ಸೃಷ್ಟಿಸಿದ ಟೆಕ್ಕಿ

    ಬೀಜಿಂಗ್: ಪ್ರಿಯಕರ ತನ್ನ ಮೆಸೇಜ್‍ಗೆ ರಿಪ್ಲೈ ಮಾಡುತ್ತಿಲ್ಲ, ತನಗೆ ಸಮಯ ಕೊಡುತ್ತಿಲ್ಲ ಎಂದು ಅನೇಕ ಹುಡುಗಿಯರು ಬೇಸರ ಮಾಡಿಕೊಳ್ಳುತ್ತಾರೆ. ಇದಕ್ಕೆ ಪರಿಹಾರ ಎಂಬಂತೆ ಸದಾ ಪ್ರೇಯಸಿಯನ್ನು ಸಂತೋಷದಿಂದ ಇಟ್ಟುಕೊಳ್ಳಲು ಚೈನೀಸ್ ಸಾಫ್ಟ್ ವೇರ್ ಎಂಜಿನಿಯರ್ ಬ್ರಿಲಿಯಂಟ್ ಉಪಾಯ ಕಂಡು ಹಿಡಿದಿದ್ದಾರೆ.

    ಲಿ ಕೈಕ್ಸಿಯಾಂಗ್ ಕೆಲಸದ ಬ್ಯುಸಿ ಇರುವ ವೇಳೆ ಗೆಳೆತಿಯ ಜೊತೆ ಚಾಟ್ ಮಾಡಲು ಚಾಟ್‍ಬಾಟ್ ಅನ್ನು ಸಾಫ್ಟ್ ವೇರ್ ಎಂಜಿನಿಯರ್ ಕಂಡು ಹಿಡಿದಿದ್ದಾನೆ. ಈ ರೋಬೋಟ್ “ಬೇಬಿ ಇದು ನಮ್ಮ 618ನೇ ಭೇಟಿಯಾಗಿದ್ದು, ನೀನು ಸುಂದರ ಬಿಸಿಲನ್ನು ಎಂಜಾಯ್ ಮಾಡುತ್ತಿದ್ದೀಯಾ ಎಂದು ಭಾವಿಸಿದ್ದೇನೆ” ಎಂದು ಇದೇ ರೀತಿ ಅನೇಕ ರೀತಿಯ ರೊಮ್ಯಾಂಟಿಕ್ ಆಗಿ ಸಂದೇಶ ಕಳುಹಿಸುತ್ತದೆ.

    ಲಿ ಕೈಕ್ಸಿಯಾಂಗ್ ತನ್ನ ಕೆಲಸದ ಒತ್ತಡದಿಂದ ಪ್ರೇಯಸಿಯ ಮೆಸೇಜ್‍ಗಳನ್ನು ಕಡೆಗಣಿಸುತ್ತಿದ್ದೇನೆ, ಜೊತೆಗೆ ಆಕೆಗೆ ಸಮಯವನ್ನು ಕೊಡಲು ಸಾಧ್ಯವಾಗುತಿಲ್ಲ ಎಂಬುದು ಅರ್ಥ ಆಗಿದೆ. ಇದರಿಂದ ಪ್ರಿಯಕರ ತನ್ನ ಪ್ರೇಯಿಸಿಗೆ ಪ್ರತಿಕ್ರಿಯಿಸಲು ಚಾಟ್‍ಬಾಟ್ ಡಿಸೈನ್ ಮಾಡಲು ನಿರ್ಧರಿಸಿದ್ದನು.

    ಅದರಂತೆಯೇ ಪ್ರಿಯಕರ ಚೀನಾದ ಮೈಕ್ರೋಬ್ಲಾಗಿಂಗ್ ಸೈಟ್ ವೀಬೊ ಮೂಲಕ ಚಾಟ್‍ಬಾಟ್ ಸೃಷ್ಟಿಸಿದ್ದನು. ಈ ಚಾಟ್‍ಬಾಟ್ ಲಿ ಕೈಕ್ಸಿಯಾಂಗ್ ಕೆಲಸದ ವೇಳೆ ಬ್ಯುಸಿ ಇದ್ದಾಗ ಪ್ರೇಯಸಿಯ ಜೊತೆ 300ಕ್ಕೂ ಹೆಚ್ಚು ಬಾರಿ ಚಾಟ್ ಮಾಡಿದೆ ಎಂದು ವರದಿ ಮಾಡಿದೆ.

    ಹೀಗೆ ಮೆಸೇಜ್ ಮಾಡುತ್ತಿದ್ದಂತೆ ಆ ಮೆಸೇಜ್‍ಗಳಲ್ಲಿ ಏನೋ ದೋಷವಿದೆ ಎಂಬ ಅನುಮಾನ ಪ್ರೇಯಸಿಗೆ ಬಂದಿದೆ. ಪ್ರಿಯಕರ ಸಹಜವಾಗಿ ತಡವಾಗಿ ರಿಪ್ಲೈ ಮಾಡುತ್ತಿದ್ದನು. ಆದರೆ ಇತ್ತೀಚೆಗೆ ಬಹು ಬೇಗ ಉತ್ತರಿಸುತ್ತಿದ್ದಾನೆ. (How can I respond when there’s no problem?) ಸಮಸ್ಯೆಯೇ ಇಲ್ಲದಿದ್ದಾಗ ನಾನು ಹೇಗೆ ಸ್ಪಂದಿಸಲಿ ಎಂದು ಒಂದು ಮೆಸೇಜ್ ಹೋಗಿದೆ.

    ಇದೀಗ ಲಿ ಕೈಕ್ಸಿಯಾಂಗ್ ವೀಬೋ ಖಾತೆ ಡಿಲೀಟ್ ಆಗಿದೆ. ಆದರೆ ಆತ ಪ್ರೇಯಸಿ ಮಾಡಿದ ಚಾಟ್‍ನ ಸ್ಕ್ರೀನ್‍ಶಾಟ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.