Tag: chase

  • ನಾಳೆಗೆ ಎಂಟು ಸಿನಿಮಾ ರಿಲೀಸ್ : ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿದ ಸಂಭ್ರಮ

    ನಾಳೆಗೆ ಎಂಟು ಸಿನಿಮಾ ರಿಲೀಸ್ : ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿದ ಸಂಭ್ರಮ

    ಕೊರೋನಾ ಹಾವಳಿ ಕಡಿಮೆ ಆಗುತ್ತಿರುವ ಮತ್ತು ದೊಡ್ಡ ದೊಡ್ಡ ಸಿನಿಮಾಗಳು ಈಗಾಗಲೇ ರಿಲೀಸ್ ಆಗಿರುವುದರಿಂದ ತಮ್ಮ ಸಿನಿಮಾಗಳನ್ನು ತೆರೆಗೆ ತರಲು ಸಾಲುಗಟ್ಟಿ ನಿಂತಿದ್ದಾರೆ ನಿರ್ಮಾಪಕರು. ಪರಿಣಾಮ ವಾರಕ್ಕೆ ಕನಿಷ್ಟ ಐದಾರು ಚಿತ್ರಗಳು ರಿಲೀಸ್ ಆಗುತ್ತಿವೆ. ಈ ವಾರ ಆರು ಕನ್ನಡ ಸಿನಿಮಾಗಳು ಮತ್ತು ಎರಡು ಕನ್ನಡಕ್ಕೆ ಡಬ್ ಆದ ಚಿತ್ರಗಳು ತೆರೆಗೆ ಬರುತ್ತಿವೆ. ಈ ಸಿನಿಮಾಗಳಲ್ಲಿ ಕೆಲವು ಭರವಸೆ ಮೂಡಿಸಿದ ಚಿತ್ರಗಳು ಇವೆ ಎನ್ನುವುದು ವಿಶೇಷ.

    ನೀನಾಸಂ ಸತೀಶ್ ನಟನೆಯ ಪೆಟ್ರೋಮ್ಯಾಕ್ಸ್, ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದ ‘ಓ ಮೈ ಲವ್’, ವಿಕ್ರಮ್ ಆರ್ಯ ನಟನೆಯ ಪದ್ಮಾವತಿ, ಅನೀಶ್ ಮುಖ್ಯಭೂಮಿಯ ಬೆಂಕಿ, ಹೊಸಬರ ಚೇಸ್, ಕರ್ಮಣ್ಯೆವಾಧಿಕಾರಸ್ತೆ ಹಾಗೂ ತೆಲುಗು ಮತ್ತು ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿರುವ ಗಾರ್ಗಿ ಹಾಗೂ ಹುಡುಗಿ ಸಿನಿಮಾಗಳು ಕೂಡ ಶುಕ್ರವಾರ ಬಿಡುಗಡೆ ಆಗುತ್ತಿದೆ. ತಮ್ಮದೇ ಆದ ಕಾರಣಗಳಿಂದಾಗಿ ಇವುಗಳಲ್ಲಿ ಕೆಲವು ಚಿತ್ರಗಳು ನಿರೀಕ್ಷೆ ಮೂಡಿಸಿವೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದಿರುವ ಓ ಮೈ ಲವ್  ಸಿನಿಮಾದ ಮೂಲಕ ಹಿರಿಯ ನಟ ಶಶಿಕುಮಾರ್ ಪುತ್ರ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಈಗಾಗಲೇ ಸ್ಮೈಲ್ ಶ್ರೀನು ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿದ್ದಾರೆ. ಮಿಥುನ್ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿ ಬಂದ ಪದ್ಮಾವತಿ ಸಿನಿಮಾ ಕೂಡ ತನ್ನದೇ ಆದ ಕಾರಣಗಳಿಂದಾಗಿ ಈಗಾಗಲೇ ನಿರೀಕ್ಷೆ ಮೂಡಿಸಿದೆ. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕ ಪ್ರತಿಭೆ ವಿಕ್ರಮ್ ಆರ್ಯ ನಟಿಸಿದ್ದು, ಇವರ ಚೊಚ್ಚಲು ಸಿನಿಮಾದ ಮೂಲಕ ಈ ಹಿಂದೆ ಭರವಸೆ ಮೂಡಿಸಿದ್ದರು.

    ಪೆಟ್ರೊಮ್ಯಾಕ್ಸ್ ಸಿನಿಮಾದಲ್ಲಿ ಸತೀಶ್ ಜೊತೆ ಹರಿಪ್ರಿಯಾ, ಕಾರುಣ್ಯ ರಾಮ್ ಸೇರಿದಂತೆ ಹಲವು ಅನುಭವಿ ಕಲಾವಿದರೆ ಇದ್ದಾರೆ. ಅಲ್ಲದೇ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಲಡಕಿ ಸಿನಿಮಾ ಕನ್ನಡದಲ್ಲಿ ಹುಡುಗಿಯಾಗಿದೆ. ಸಾಯಿ ಪಲ್ಲವಿ ಅವರ ನಿರೀಕ್ಷೆ ಸಿನಿಮಾ ಗಾರ್ಗಿ ಕೂಡ ರಿಲೀಸ್ ಆಗುತ್ತಿದೆ. ಎಂಟು ಸಿನಿಮಾಗಳು ಈ ವಾರ ರಿಲೀಸ್ ಆಗುತ್ತಿರುವುದರಿಂದ ಒಂದು ರೀತಿಯಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸಂಭ್ರಮ ಮನೆ ಮಾಡಿದೆ. ಪ್ರೇಕ್ಷಕ ಯಾವ ಸಿನಿಮಾ ನೋಡುತ್ತಾನೆ ಎನ್ನುವುದೇ ಕುತೂಹಲಕ್ಕೆ ಕಾರಣವೂ ಆಗಿದೆ.

    Live Tv
    [brid partner=56869869 player=32851 video=960834 autoplay=true]

  • ಚೇಸ್ ವಿತರಣಾ ಹಕ್ಕು ಖರೀದಿಸಿದ ಯುಎಫ್‍ಒ!

    ಚೇಸ್ ವಿತರಣಾ ಹಕ್ಕು ಖರೀದಿಸಿದ ಯುಎಫ್‍ಒ!

    ಚೇಸ್… ಸದ್ಯ ಸಿನಿಪ್ರಿಯರು ಥಿಯೇಟರ್‌ನಲ್ಲಿ ಚೇಸ್ ಮಾಡಲೇಬೇಕೆಂದು ನಿರ್ಧರಿಸುವಂತೆ ಮಾಡಿರೋ ಸಿನೆಮಾ. ಟೈಟಲ್, ಟೀಸರ್, ಹಾಡುಗಳನ್ನು ಒಂದೊಂದೇ ಪ್ರೇಕ್ಷಕರಿಗೆ ಗಿಫ್ಟ್ ಆಗಿ ಕೊಟ್ಟು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಾಟ್ಟಾಗಿಸಿಕೊಂಡ ಈ ಚೇಸ್ ಇದೇ ತಿಂಗಳ 15 ರಂದು ತೆರೆಗೆ ಬರಲು ಸಜ್ಜಾಗಿದೆ.

     

    ವಿಲೋಕ್ ಶೆಟ್ಟಿ ಕಥೆ ಬರೆದು ನಿರ್ದೇಶಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಚೇಸ್ ಚಿತ್ರದಿಂದ ಈ ಮೊದಲು ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಆಗಿ ಸೌಂಡ್ ಕ್ರಿಯೇಟ್ ಮಾಡಿತ್ತು. ಇದೀಗ ಬಿಡುಗಡೆಯ ಅಂಚಿನಲ್ಲಿರುವ ಈ ಹೊತ್ತಿನಲ್ಲಿ ಚಿತ್ರತಂಡದ ಕಡೆಯಿಂದ ಮತ್ತೊಂದು ಥ್ರಿಲ್ಲಿಂಗ್ ಸುದ್ದಿ ಹೊರಬಿದ್ದಿದೆ. ಇದು ಅಂತಿಂತ ಥ್ರಿಲ್ಲಿಂಗ್ ಅಲ್ಲ, ಯಾಕೆಂದರೆ ಈ ಸುದ್ದಿಯಿಂದ ಚೇಸ್ ರಿಲೀಸ್‍ಗೂ ಮೊದಲೇ ಹೊಸ ದಾಖಲೆ ಬರೆದು ರಾಷ್ಟ್ರವ್ಯಾಪಿ ಸುದ್ದಿಯಾಗಿದೆ.

    ಮೂವಿ ಸ್ಟ್ರೀಮಿಂಗ್‍ನಲ್ಲಿ ಭಾರತದಾದ್ಯಂತ ಪ್ರಸಿದ್ಧಿ ಪಡೆದುಕೊಂಡಿದ್ದ ಯುಎಫ್‍ಒ ಇತ್ತೀಚಿನ ದಿನಗಳಲ್ಲಿ ಸಿನಿಮಾ ವಿತರಣಾ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡಿರುವುದು ಗೊತ್ತಿರುವ ವಿಚಾರ. ಆ ಸಂಸ್ಥೆ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೂ ಪಾದಾರ್ಪಣೆ ಮಾಡಿದ್ದು, ಚೇಸ್ ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದೆ. ಇದನ್ನೂ ಓದಿ: ಚೆಲುವ ಚಾಮರಾಜನಗರದ ರಾಯಭಾರಿಯಾಗಲು ರೆಡಿ ಎಂದ `ಗಾಜನೂರು ಗಂಡು’ ಶಿವರಾಜ್‌ಕುಮಾರ್

    ಇದು ಚೇಸ್ ತಂಡಕ್ಕೆ ಮಾತ್ರವಲ್ಲ, ಇಡೀ ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಖುಷಿಯ ಸಂಗತಿ. ಕೆಜಿಎಫ್ ಮತ್ತು ಚಾರ್ಲಿ ಸಿನಿಮಾ ಬಿಟ್ಟರೆ ಹೀಗೆ ಪ್ಯಾನ್ ಇಂಡಿಯಾ ಲೆವೆಲ್‍ನಲ್ಲಿ ದಾಖಲೆ ಸೃಷ್ಟಿಸಿರುವ ಚೇಸ್ ಸಿನಿಮಾ ತಂದ ಸಿಹಿ ಸುದ್ದಿಗೆ ಚಿತ್ರತಂಡ ಫುಲ್ ಥ್ರಿಲ್ ಆಗಿದೆ.

    ಈ ಹೊಸ ದಾಖಲೆಗೆ ಕಾರಣ ಚಿತ್ರದ ಮೇಕಿಂಗ್, ಸ್ಟ್ರಾಂಗ್ ಕಂಟೆಂಟ್, ಪಾತ್ರದ ಸುತ್ತ ಸುತ್ತುವ ಥ್ರಿಲ್ಲಿಂಗ್ ವಿಚಾರಗಳೇ ಅಂದರೆ ತಪ್ಪಲ್ಲ. ಯಾಕಂದರೆ, ಯುಎಫ್‍ಒ ಅಧಿಕಾರಿಗಳು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದ ಚೇಸ್ ಅನ್ನು ನೋಡಿ ಮೆಚ್ಚಿ, ಬಹುನಿರೀಕ್ಷಿತ ಚೇಸ್ ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸುವ ಮೂಲಕ ಚೇಸ್ ದಾಖಲೆ ಸೃಷ್ಟಿಸುವಂತೆ ಮಾಡಿದ್ದಾರೆ. ಈ ಮೂಲಕ ಯುಎಫ್‍ಒ ಚೇಸ್ ಚಿತ್ರವನ್ನು ಕನ್ನಡದಲ್ಲಿ ಭಾರತದಾದ್ಯಂತ ವಿತರಿಸುವ ಹಕ್ಕುಗಳನ್ನು ಪಡೆದುಕೊಂಡಿದ್ದು, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. ಇದನ್ನೂ ಓದಿ: ಕೊನೆಗೂ ರಾಜಕೀಯ ಬರುವ ಕುರಿತು ಮೌನ ಮುರಿದ ಅಕ್ಷಯ್ ಕುಮಾರ್

    ಸಿಂಪ್ಲಿಫನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಬ್ಯಾನರ್‍ನಲ್ಲಿ ತಯಾರಾದ ಚೇಸ್‍ಗೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಕಾರ್ತಿಕ್ ಆಚಾರ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು, ತಾರಾಬಳಗದಲ್ಲಿ ರಾಧಿಕಾ ಚೇತನ್, ಅವಿನಾಶ್, ಶೀತಲ್ ಶೆಟ್ಟಿ, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಅರವಿಂದ್ ಬೋಲಾರ್, ರೆಹಮಾನ್ ಹಾಸನ್, ಸುಧಾ ಬೆಳವಾಡಿ, ವೀಣಾ ಸುಂದರ್, ಅರ್ಜುನ್ ಯೋಗಿ, ಶ್ವೇತಾ ಸಂಜೀವುಲು, ಅರವಿಂದ್ ರಾವ್, ವೀಣಾ ಸುಂದರ್, ಉಷಾ ಭಂಡಾರಿ ಸೇರಿದಂತೆ ಹಲವರು ನಟಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮನಸ್ಸಿಗೆ ಮುದನೀಡುವ ‘ಚೇಸ್’ ಗಾನಲಹರಿ ಹೊತ್ತ ಜುಕ್ ಬಾಕ್ಸ್ ರಿಲೀಸ್

    ಮನಸ್ಸಿಗೆ ಮುದನೀಡುವ ‘ಚೇಸ್’ ಗಾನಲಹರಿ ಹೊತ್ತ ಜುಕ್ ಬಾಕ್ಸ್ ರಿಲೀಸ್

    ಸಿನಿಮಾ ಮಾಡುವುದು ಒಂದು ಸವಾಲು. ಅದರಲ್ಲಿಯೂ ಮಾಡಿದ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವುದು ದೊಡ್ಡ ಸವಾಲು. ಅದೇ ರೀತಿ ಸಿನಿಮಾ ರಿಲೀಸ್ ಆದ್ಮೇಲೆ ಸೌಂಡ್ ಮಾಡೋದು ಕಾಮನ್. ಆದರೆ ‘ಈಟ್ಸ್ ನಾಟ್ ಎ ಈಸಿ ಜಾಬ್’ ಹಾಡು ರಿಲೀಸ್‍ಗೂ ಮುನ್ನ ಸ್ಯಾಂಪಲ್‌ನಿಂದಲೇ ಕಿಚ್ಚು ಹಚ್ಚಿದೆ. ಆದರೆ ಹಾಡುಗಳು, ಟೀಸರ್ ಮೂಲಕವೇ ಕ್ರೇಜ್ ಕ್ರಿಯೇಟ್ ಮಾಡಿರುವ ಸಿನಿಮಾ ‘ಚೇಸ್’.

    ಬೆಳ್ಳಿತೆರೆ ಬಾನಂಗಳದಲ್ಲಿ ಮಿಂಚಲು ಸನ್ನದ್ಧವಾಗಿರುವ ‘ಚೇಸ್’ ಸಿನಿಮಾದ ಆರು ಹಾಡುಗಳು ವೈರೆಟಿ ಫ್ಲೇವರ್‌ಗಳು. ಮೆಲೋಡಿ, ಎನರ್ಜಿಟಿಕ್ ನಂಬರ್ ಎಲ್ಲವೂ ಕೇಳುಗರಿಗೆ ಮುದ ನೀಡುತ್ತಿವೆ. ನಿಂತಲ್ಲೇ ಗುನುಗುವಂತೆ ಮಾಡಿವೆ. ಈಗ ಚಿತ್ರತಂಡ ಇಡೀ ಆಲ್ಬಂ ಗಾನಲಹರಿ ಬಿಡುಗಡೆ ಮಾಡಿ ಗಮನಸೆಳೆಯುತ್ತಿದೆ. ಇದನ್ನೂ ಓದಿ:  90 ಕಿ.ಮೀವರೆಗೂ ಬೈಕ್‍ನಲ್ಲಿ ಮೃತಮಗನ ಸಾಗಿಸಿದ ತಂದೆ

    ವಿಜಯ್ ಪ್ರಕಾಶ್ ಮತ್ತು ಕೇರಳದ ಪ್ರಖ್ಯಾತ ಗಾಯಕ ಮನ್ಸೂರ್ ಮೊಹಮದ್ ಕಂಠಸಿರಿಯಲ್ಲಿ ಮೂಡಿಬಂದಿರುವ ‘ಮನದ ಹೊಸಿಲಾ ಡ್ಯುಯೇಟ್ ಸಿಂಗಿಂಗು’, ಬಾಲಿವುಡ್ ಗಾಯಕ ಬೆನ್ನಿ ದಯಾಳ್ ಕಂಠಕುಣಿಸಿರುವ ‘ಶಾ ಲಾಲಾ ಗಾನಬಜಾನ’, ಸಂಚಿತ್ ಹೆಗ್ಡೆ ಧ್ವನಿಯಾಗಿರುವ ಹಾಡು, ಟೈಟಲ್ ಟ್ರ್ಯಾಕ್ ಸೇರಿದಂತೆ ಚೇಸ್ ಸಿನಿಮಾದ ಎಲ್ಲ ಹಾಡುಗಳು ಸಂಗೀತ ಪ್ರಿಯರ ಮನಸ್ಸಿನಲ್ಲಿ ನೆಲೆಸಿವೆ.

    ಇಷ್ಟು ಹಾಡುಗಳನ್ನು ನಿರ್ದೇಶಕ ಅಲೋಕ್ ಶೆಟ್ಟಿ ಚೆಂದವಾಗಿ ರೂಪಿಸುವುದರ ಜೊತೆಗೆ ಹಾಡೊಂದಕ್ಕೆ ತಾವೇ ಪದಗಳನ್ನು ಪೊಣಿಸಿ ಸಾಹಿತ್ಯ ಬರೆದಿದ್ದಾರೆ. ಉಳಿದಂತೆ ಎಲ್ಲ ಗಾನಲಹರಿಗೂ ಉಮೇಶ್ ಪಿಲಿಕುಡೇಲು ಸಾಹಿತ್ಯದ ತಂಪು, ಕಾರ್ತಿಕ್ ಆಚಾರ್ಯ ಸಂಗೀತದ ಇಂಪು ಹಾಡುಗಳಿಗಿದೆ.

    ಮನೋಹರ್ ಸುವರ್ಣ ನಿರ್ಮಾಣದ ಚೇಸ್ ಸಿನಿಮಾಗೆ ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಅನಂತ್ ರಾಜ್ ಅರಸ್ ಕ್ಯಾಮೆರಾ ಕೈಚಳಕ, ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಸಿನಿಮಾಕ್ಕಿದೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಮಿ, ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ:  ವಾಲ್ಮೀಕಿ, ವೀರಮದಕರಿ ನಾಯಕ ಮೂರ್ತಿ ಅನಾವರಣಗೊಳಿಸಿದ ಕಿಚ್ಚ ಸುದೀಪ್ 

    ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ ಸೇರಿದಂತೆ ದೊಡ್ಡ ತಾರಾಬಳಗ ಸಿನಿಮಾದಲ್ಲಿದೆ.

  • ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ‘ಚೇಸ್’ ಚಿತ್ರದಿಂದ ಸಿಕ್ತು ಭರ್ಜರಿ ಗಿಫ್ಟ್

    ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ‘ಚೇಸ್’ ಚಿತ್ರದಿಂದ ಸಿಕ್ತು ಭರ್ಜರಿ ಗಿಫ್ಟ್

    ಪೋಸ್ಟರ್ ಹಾಗೂ ಟೀಸರ್ ಮೂಲಕ ಸದ್ದು ಮಾಡ್ತಿರುವ ರಾಧಿಕಾ ನಾರಾಯಣ್ ಅಭಿನಯದ ಚೇಸ್ ಸಿನೆಮಾದಿಂದ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದ್ದು, ಬಿಡುಗಡೆಗೆ ಸಜ್ಜಾಗಿರೋ ಚೇಸ್ ಮೇಲೆ ಅಭಿಮಾನಿಗಳು ಕಣ್ಣಿಡುವಂತಾಗಿದೆ. ಹೌದು, ಟೈಟಲ್‌ನಲ್ಲೇ ಕುತೂಹಲ ಹುಟ್ಟಿಸೋ ಈ ಚೇಸ್, ವಿಲೋಕ್ ಶೆಟ್ಟಿ ನಿರ್ದೇಶಿಸಿರೋ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರದ ಸಿನೆಮಾ.

    ‘ಹುಡುಗಿ ಇವಳು ತರಲೆ,ಆದರೆ ಇಷ್ಟ ಆಗ್ತಾಳೆ’ ಅಂತ ಶುರುವಾಗೋ ಕ್ಯೂಟ್ ಕ್ಯೂಟ್ ಸಾಲುಗಳ ಈ ಹಾಡಿಗೆ ಉಮೇಶ್ ಪಿಲಿಕುಡೆಲು ಸಾಹಿತ್ಯ, ಬೆನ್ನಿ ದಯಾಳ್ ಧ್ವನಿ, ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜನೆ ಇದೆ. ಬಹಳ ಸುಂದರವಾಗಿ ಮೂಡಿಬಂದಿರೋ ಈ ಸಾಂಗ್ ಪ್ರೇಮಿಗಳ ದಿನದಂದು ಚೇಸ್ ಚಿತ್ರದಿಂದ ಸಿಕ್ಕ ಒಂದೊಳ್ಳೆ ಟ್ರೀಟ್ ಆಗಿದೆ.

    ಸಿಂಪ್ಲಿಫನ್ ಮೀಡಿಯಾ ಫ್ರೈವೇಟ್ ಲಿಮಿಟೆಡ್ ಬ್ಯಾನರ್‌ನಲ್ಲಿ ತಯಾರಾದ ಚೇಸ್‌ಗೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ ಮತ್ತು ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಕಾರ್ತಿಕ್ ಆಚಾರ್ಯ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

    ತಾರಾಬಳಗದಲ್ಲಿ ರಾಧಿಕಾ ಚೇತನ್, ಅವಿನಾಶ್, ಸುಶಾಂತ್ ಪೂಜಾರಿ, ಶೀತಲ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಅರವಿಂದ್ ಬೋಲಾರ್, ರೆಹಮಾನ್ ಹಾಸನ್, ಸುಧಾ ಬೆಳವಾಡಿ,ವೀಣಾ ಸುಂದರ್, ಸುಂದರ್, ಉಷಾ ಭಂಡಾರಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

  • ಬಹು ನಿರೀಕ್ಷಿತ ಹಾಡಿನ ಬಿಡುಗಡೆ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದ ‘ಚೇಸ್’ ಚಿತ್ರತಂಡ

    ಬಹು ನಿರೀಕ್ಷಿತ ಹಾಡಿನ ಬಿಡುಗಡೆ ಮೂಲಕ ಸಿನಿಮಾ ಪ್ರಚಾರ ಆರಂಭಿಸಿದ ‘ಚೇಸ್’ ಚಿತ್ರತಂಡ

    ನಸೂರೆಗೊಳ್ಳುವ ಹಾಡು ಬಿಡುಗಡೆ ಮಾಡುವ ಮೂಲಕ ‘ಚೇಸ್’ ಸಿನಿಮಾ ಪ್ರಚಾರ ಕಾರ್ಯ ಆರಂಭಿಸಿದೆ. ‘ಚೇಸ್’ ಚಿತ್ರದ ಮನದ ಹೊಸಿಲ ಎಂಬ ಮೆಲೋಡಿ ಹಾಡು ಬಿಡುಗಡೆಯಾಗಿದೆ. ಕಳೆದ ವರ್ಷ ಪ್ರಾಮಿಸಿಂಗ್ ಟೀಸರ್ ಮೂಲಕ ‘ಚೇಸ್’ ಸಿನಿಮಾ ಸೌಂಡ್ ಮಾಡಿತ್ತು. ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದ ಚಿತ್ರತಂಡ ಇಂದು ಚಿತ್ರದ ಬಹು ನಿರೀಕ್ಷಿತ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದೆ.

    ಕೇಳಲು ಇಂಪಾಗಿರುವ ಈ ಹಾಡಿಗೆ ವಿಜಯ್ ಪ್ರಕಾಶ್ ಹಾಗೂ ಮೊಹಮ್ಮದ್ ಮಕ್ಬುಲ್ ಮನ್ಸೂರ್ ದನಿಯಾಗಿದ್ದಾರೆ. ಕಾರ್ತಿಕ್ ಆಚಾರ್ಯ ಸಂಗೀತ ಸಂಯೋಜನೆ ಉಮೇಶ್ ಪಿಲಿಕುಡೆಲು ಸಾಹಿತ್ಯದಲ್ಲಿ ಮೂಡಿ ಬಂದಿರುವ ‘ಚೇಸ್’ ಸಿನಿಮಾದ ಮನದ ಹೊಸಿಲು ಹಾಡು ಎಲ್ಲರ ಗಮನ ಸೆಳೆಯುತ್ತಿದೆ.

    ವಿಲೋಕ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಚೇಸ್ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಶ್ವೇತಾ ಸಂಜೀವುಲು, ಸುಶಾಂತ್ ಪೂಜಾರಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇಂದೊಂದು ಕ್ರೈಂ, ಥ್ರಿಲ್ಲರ್ ಸಬ್ಜೆಕ್ಟ್ ಚಿತ್ರವಾಗಿದ್ದು ಹೊಸ ಬಗೆಯ ನಿರೂಪಣೆ ಹಾಗೂ ತಾಂತ್ರಿಕತೆಗೆ ಹೆಚ್ಚು ಒತ್ತನ್ನು ಸಿನಿಮಾದಲ್ಲಿ ನೀಡಲಾಗಿದೆ.

    ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಸುಧಾ ಬೆಳವಾಡಿ, ರಾಜೇಶ್ ನಟರಂಗ, ಅರವಿಂದ್ ಬೋಳಾರ್, ರೆಹಮಾನ್ ಹಾಸನ್, ವೀಣಾ ಸುಂದರ್, ಸುಂದರ್, ಪ್ರಿಯಾ ಷಟಮರ್ಷನ್, ನಾಗಾರ್ಜುನ ಬಿ ರಾಜಶೇಖರ್, ಉಷಾ ಭಂಡಾರಿ, ಡಾ.ಕಿಂಗ್ ಮೋಹನ್ ಹೀಗೆ ಕಲಾವಿದರ ದೊಡ್ಡ ದಂಡೇ ‘ಚೇಸ್’ ತಾರಾಬಳಗದಲ್ಲಿದ್ದಾರೆ. ಮ್ಕಾಕ್ಸ್ ಎನ್ನುವ ನಾಯಿ ಕೂಡ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದೆ.

    ಸಿಂಪ್ಲಿ ಫನ್ ಮೀಡಿಯಾ ನೆಟ್ ವರ್ಕ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ನಿರ್ಮಾಪಕರು. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರು. ಮಂಗಳೂರು, ಬೆಂಗಳೂರು, ಕೊಚ್ಚಿ, ಹಿಮಾಚಲ ಪ್ರದೇಶದ ಕಲರ್ ಫುಲ್ ಲೋಕೇಷನ್ ಗಳಲ್ಲಿ ಚೇಸ್ ಸಿನಿಮಾ ಚಿತ್ರೀಕರಣಗೊಂಡಿದ್ದು, ಅನಂತ್ ರಾಜ್ ಅರಸ್ ಕ್ಯಾಮೆರಾ ನಿರ್ದೇಶಕರಾಗಿ ದುಡಿದ್ದಾರೆ. ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಚೇಸ್ ಚಿತ್ರಕ್ಕಿದೆ.

  • ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿ ‘ಚೇಸ್’!

    ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದಲ್ಲಿ ‘ಚೇಸ್’!

    ಪ್ರಾಮಿಸಿಂಗ್ ಟೀಸರ್ ಮೂಲಕ ಸೌಂಡ್ ಮಾಡಿದ್ದ ‘ಚೇಸ್’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರಕ್ಕೆ ವಿಲೋಕ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ತಾಂತ್ರಿಕವಾಗಿ ರಿಚ್ ಆಗಿ ಚೇಸ್ ಸಿನಿಮಾ ತೆರೆ ಮೇಲೆ ತರಲು ನಿರ್ದೇಶಕರು ಪ್ಲ್ಯಾನ್ ಮಾಡಿಕೊಂಡಿದ್ದು, ಇದಕ್ಕಾಗಿ ನುರಿತ ಹಾಗೂ ಪ್ರತಿಭಾವಂತ ಟೆಕ್ನಿಷಿಯನ್ ಗಳನ್ನು ಬಳಸಿಕೊಂಡಿದ್ದಾರೆ.

    ಎಂ. ಗೀತಾ ಗುರಪ್ಪ ಸಿನಿಮಾದ ಡಾಲ್ಬಿ ಅಟ್ಮೋಸ್ ಹಾಗೂ ಸೌಂಡ್ ಮಿಕ್ಸಿಂಗ್ ಕೆಲಸದಲ್ಲಿ ನಿರತರಾಗಿದ್ದು, ಡಿಐ ಕೆಲಸವನ್ನು ಕೇರಳ ರಾಜ್ಯ ಪ್ರಶಸ್ತಿ ವಿಜೇತ ಲಿಜು ಪ್ರಭಾಕರ್ ನಿರ್ವಹಿಸಿದರೆ, ಶ್ರೀ ಕ್ರೇಜಿ ಮೈಂಡ್ಸ್ ಚೇಸ್ ಚಿತ್ರದ ಸಂಕಲನಕಾರರಾಗಿದ್ದಾರೆ. ಮಂಗಳೂರು, ಬೆಂಗಳೂರು, ಕೊಚ್ಚಿ, ಹಿಮಾಚಲ ಪ್ರದೇಶದ ಕಲರ್ ಫುಲ್ ಲೋಕೇಷನ್ ಗಳಲ್ಲಿ ಚಿತ್ರೀಕರಣ ನಡೆದಿದ್ದು, ಅನಂತ್ ರಾಜ್ ಅರಸ್ ಕ್ಯಾಮೆರಾ ನಿರ್ದೇಶನದಲ್ಲಿ ‘ಚೇಸ್’ ಸಿನಿಮಾ ಸೆರೆಯಾಗಿದೆ. ಕಾರ್ತಿಕ್ ಆಚಾರ್ಯ ಸಂಗೀತ ಹಾಗೂ ಹಿನ್ನೆಲೆ ಸಂಗೀತ, ಡಾ.ಉಮೇಶ್ ಪಿಲಿಕುಡೇಲು ಅವರ ಸಾಹಿತ್ಯ ಈ ಚಿತ್ರಕ್ಕಿದೆ.

    ಸಸ್ಪೆನ್ಸ್, ಥ್ರಿಲ್ಲರ್, ಕ್ರೈಂ ಜೊತೆಗೆ ಕಮರ್ಶಿಯಲ್ ಎಲಿಮೆಂಟ್ ಗಳಾದ ಆಕ್ಷನ್, ರೋಮ್ಯಾನ್ಸ್, ಕಾಮಿಡಿ ಎಲ್ಲವನ್ನೂ ಚೇಸ್ ಸಿನಿಮಾ ಒಳಗೊಂಡಿದ್ದು, ಎಲ್ಲಾ ವರ್ಗದ ಪ್ರೇಕ್ಷಕರಿಗೂ ಮನರಂಜನೆ ನೀಡಲಿದೆ ಅನ್ನೋದು ನಿರ್ದೇಶಕ ವಿಲೋಕ್ ಶೆಟ್ಟಿ ಅವರ ಮಾತು. ಸೆನ್ಸಾರ್ ಅಂಗಳಕ್ಕೆ ಹೊರಡಲಿರೋ ‘ಚೇಸ್’ ಸಿನಿಮಾ ಸದ್ಯದಲ್ಲೇ ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾ ಪ್ಲ್ಯಾಟ್ ಫಾರ್ಮ್ ಗೆ ಎಂಟ್ರಿ ಕೊಡಲಿದೆ.

    ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ‘ಚೇಸ್’ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿರುವ ಚೇಸ್ ಸಿನಿಮಾದಲ್ಲಿ ‘ರಂಗಿತರಂಗ’ ಖ್ಯಾತಿಯ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಸುಶಾಂತ್ ಪೂಜಾರಿ, ಶೀತಲ್ ಶೆಟ್ಟಿ, ರೆಹಮಾನ್ ಹಾಸನ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ಅರವಿಂದ್ ರಾವ್, ಶ್ವೇತಾ ಸಂಜೀವುಲು, ವೀಣಾ ಸುಂದರ್, ಉಷಾ ಭಂಡಾರಿ, ಅರವಿಂದ್ ಬೋಳಾರ್ ತಾರಾಬಳಗದಲ್ಲಿದ್ದಾರೆ. ಮ್ಯಾಕ್ಸ್ ಎನ್ನುವ ನಾಯಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಭಾರತದ ಏಕೈಕ ಶ್ವಾನ ಮನಶಾಸ್ತ್ರಜ್ಞ ಅಮೃತ್ ಶ್ರೀಧರ್ ಹಿರಣ್ಯ ತರಬೇತು ನೀಡಿರುವುದು ಚಿತ್ರದ ಇನ್ನೊಂದು ವಿಶೇಷ.

  • ಪಕ್ಷಿರಾಜನಾಗಿ ಚೇಸ್‍ಗೆ ಸಾಥ್ ಕೊಟ್ಟರೇ ಅರವಿಂದ್ ಬೋಳಾರ್?

    ಪಕ್ಷಿರಾಜನಾಗಿ ಚೇಸ್‍ಗೆ ಸಾಥ್ ಕೊಟ್ಟರೇ ಅರವಿಂದ್ ಬೋಳಾರ್?

    ತುಳು ಚಿತ್ರರಂಗದಲ್ಲಿ ತಮ್ಮ ಹಾಸ್ಯ ನಟನೆಯಿಂದ ಸ್ಟಾರ್ ನಟನಾಗಿ ಹೊರ ಹೊಮ್ಮಿರುವವರು ಅರವಿಂದ ಬೋಳಾರ್. ಅವರ ಖ್ಯಾತಿಯೀಗ ತುಳು ಚಿತ್ರರಂಗದ ಗಡಿ ದಾಟಿಕೊಂಡು ಎಲ್ಲೆಡೆ ಪಸರಿಸಿಕೊಂಡಿದೆ. ಬಾಡಿ ಲ್ವಾಗ್ವೇಜ್ ಮೂಲವೇ ನಗೆಯುಕ್ಕಿಸಬಲ್ಲ ಈ ಹಾಸ್ಯ ಕಲಾವಿದ ಇದೀಗ ಬಿಡುಗಡೆಯ ಹಂತದಲ್ಲಿರುವ ಚೇಸ್‍ ಚಿತ್ರದಲ್ಲಿಯೂ ಪ್ರಧಾನ ಪಾತ್ರವೊಂದರಲ್ಲಿ ನಟಿಸಿದ್ದಾರೆಂದು ಹೇಳಲಾಗುತ್ತಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಬೋಳಾರ್ ಗಾಗಿಯೇ ಒಂದು ವಿಭಿನ್ನವಾದ ಪಾತ್ರವನ್ನು ಸೃಷ್ಟಿಸಿದ್ದಾರಂತೆ. ಅದು ಕನ್ನಡ ಚಿತ್ರರಂಗದಲ್ಲಿಯೇ ಒಂದು ವಿಭಿನ್ನ ಪ್ರಯತ್ನವಾಗಿ ನೆಲೆ ನಿಲ್ಲುವಂಥಾ ಪಾತ್ರವೆಂಬ ಸಣ್ಣ ಮಾಹಿತಿಯೊಂದಷ್ಟೇ ಚಿತ್ರತಂಡದ ಕಡೆಯಿಂದ ಹೊರಬೀಳುತ್ತದೆ.

    ಇದು ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಚಿತ್ರ. ಹಾಗಂತ ಈ ಜಾನರಿನ ಸಿದ್ಧ ಸೂತ್ರಗಳಿಗೆ ಬದ್ಧವಾಗಿ ಚೇಸ್‍ ಸೃಷ್ಟಿಯಾಗಿಲ್ಲ ಅನ್ನೋದಕ್ಕೆ ಇತ್ತೀಚೆಗಷ್ಟೇ ಲಾಂಚ್ ಆಗಿರೋ ಟೀಸರ್ ಸಾಕ್ಷಿಯಂತಿದೆ. ನಿರ್ದೇಶಕ ವಿಲೋಕ್ ಶೆಟ್ಟಿ ಎರಡು ವರ್ಷಗಳ ಕಾಲ ಧ್ಯಾನದಂತೆಯೇ ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಸುದೀರ್ಘಾವಧಿಯ ಶ್ರಮವೆಲ್ಲವೂ ಟೀಸರ್ ಗೆ ಸಿಕ್ಕಿರುವ ಅಗಾಧ ಮೆಚ್ಚುಗೆ, ಸದಭಿಪ್ರಾಯಗಳಿಂದಲೇ ಸಾರ್ಥಕ್ಯ ಕಂಡಿವೆ. ಈ ಸಿನಿಮಾದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ಮತ್ತು ಅವಿನಾಶ್ ನರಸಿಂಹರಾಜು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಅರವಿಂದ್ ರಾವ್, ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ, ವೀಣಾ ಸುಂದರ್, ಉಷಾ ಭಂಡಾರಿ, ಸುಂದರ್ ಮುಂತಾದವರ ತಾರಗಣವಿದೆ. ರೆಹಮಾನ್ ಹಾಸನ್ ಇನ್ನೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

    ಸಿಂಪ್ಲಿ ಫನ್ ಮೀಡಿಯಾ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರೋ ಚೇಸ್‍ ಚಿತ್ರದ ಪ್ರತೀ ಪಾತ್ರಗಳನ್ನೂ ಸಹ ನಿರ್ದೇಶಕ ವಿಲೋಕ್ ಶೆಟ್ಟಿ ಒಂದಕ್ಕಿಂತ ಒಂದು ಭಿನ್ನವಾಗಿರುವಂತೆಯೇ ನಟಿಸಿದ್ದಾರಂತೆ. ಅದೇ ರೀತಿಯಲ್ಲಿ ಅರವಿಂದ್ ಬೋಳಾರ್ ಅವರ ಪಾತ್ರವೂ ಸೃಷ್ಟಿಯಾಗಿದೆ. ರೋಬೋ 2.0 ಚಿತ್ರದಲ್ಲಿ ಅಕ್ಷಯ್ ಕುಮಾರ್ ಪಕ್ಷಿರಾಜನ ಪಾತ್ರದಲ್ಲಿ ನಟಿಸಿದ್ದರಲ್ಲಾ? ಅರವಿಂದ್ ಬೋಳಾರ್ ಪಾತ್ರವೂ ಅದೇ ಚಹರೆಯೊಂದಿಗೆ ಮೂಡಿ ಬಂದಿದೆಯಂತೆ. ಬೋಳಾರ್ ಒಂದು ಪಾತ್ರವನ್ನು ನಿರ್ವಹಿಸುತ್ತಿದ್ದಾರೆಂದರೆ ಅದರಲ್ಲಿ ಭರಪೂರ ನಗುವಿನ ಅಂಶಗಳು ಇದ್ದೇ ಇರುತ್ತವೆ. ಈ ಪಾತ್ರ ಅದೆಷ್ಟು ನಗೆಯುಕ್ಕಿಸುತ್ತದೆಯೆಂದರೆ, ಚಿತ್ರೀಕರಣದ ಸಂದರ್ಭದಲ್ಲಿ ನಗುವನ್ನು ಕಂಟ್ರೋಲು ಮಾಡಿಕೊಂಡು ನಟಿಸೋದೇ ಇತರೇ ಕಲಾವಿದರಿಗೊಂದು ದೊಡ್ಡ ಸವಾಲಿನಂತಾಗಿತ್ತಂತೆ. ಇನ್ನೇನು ಈ ಸಿನಿಮಾ ಬಿಡುಗಡೆಗೆ ತಯಾರಾಗಿರೋದರಿಂದ ಸದ್ಯದಲ್ಲಿಯೇ ಅರವಿಂದ್ ಬೋಳಾರ್ ಅವರ ನಗವಿನ ಕಚಗುಳಿಗೆ ಪ್ರೇಕ್ಷಕರೆಲ್ಲ ಒಡ್ಡಿಕೊಳ್ಳುವ ದಿನ ಹತ್ತಿರದಲ್ಲಿದೆ.

  • ಟ್ರಕ್ ಚೇಸ್ ಮಾಡಿ ಸಿನಿಮೀಯ ರೀತಿಯಲ್ಲಿ ಅತ್ಯಾಚಾರಿಯಿಂದ ಮಹಿಳೆಯನ್ನು ರಕ್ಷಿಸಿದ ಪೊಲೀಸರು

    ಟ್ರಕ್ ಚೇಸ್ ಮಾಡಿ ಸಿನಿಮೀಯ ರೀತಿಯಲ್ಲಿ ಅತ್ಯಾಚಾರಿಯಿಂದ ಮಹಿಳೆಯನ್ನು ರಕ್ಷಿಸಿದ ಪೊಲೀಸರು

    – 15 ಕಿ.ಮೀ ಚೇಸ್ ಮಾಡಿ ಲಾರಿ ಚಾಲಕನ ಬಂಧನ

    ಕೋಲ್ಕತ್ತಾ: ಅತ್ಯಾಚಾರಿಗಳಿಂದ ಮಹಿಳೆಯನ್ನು ರಕ್ಷಿಸಲು ಪೊಲೀಸರು ಸಿನಿಮೀಯ ರೀತಿಯಲ್ಲಿ ಲಾರಿ ಚೇಸ್ ಮಾಡಿದ್ದು, ಸುಮಾರು 15 ಕಿ.ಮೀ. ದೂರ ಹಿಂಬಾಲಿಸಿ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಶ್ಚಿಮ ಬಂಗಾಳದ ಪೂರ್ವ ಬುದ್ರ್ವಾನ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಪ್ರಾಥಮಿಕ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿದ್ದು, 30 ವರ್ಷದ ಕಿವುಡ ಹಾಗೂ ಮೂಗ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಕಿಡ್ನ್ಯಾಪ್ ಮಾಡಿದ್ದೆವು ಎಂದು ಲಾರಿ ಚಾಲಕ ಅಬ್ದುಲ್ ಶೇಖ್ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಪೂರ್ವ ಬುದ್ರ್ವಾನ್‍ನ ಗುಸ್ಕರಾದಲ್ಲಿ ಸ್ವಯಂ ಸೇವಕ ಬಿಕಾಶ್ ಗೊರಾಯಿ ದ್ವಿಚಕ್ರ ವಾಹನದ ಮೂಲಕ ಗಸ್ತು ತಿರುಗುತ್ತಿದ್ದರು. ಈ ವೇಳೆ ಲಾರಿಯ ಕ್ಯಾಬೀನ್‍ನಿಂದ ಮಹಿಳೆ ಕಿರುಚುತ್ತಿದ್ದ ಧ್ವನಿ ಕೇಳಿಸಿದೆ. ಆಗ ಚಾಲಕನನ್ನು ಹೊರಗೆ ಬರುವಂತೆ ತಿಳಿಸಿದ್ದಾರೆ. ಚಾಲಕ ಇದ್ದಕ್ಕಿದ್ದಂತೆ ವಾಹನವನ್ನು ಚಲಾಯಿಸಿದ್ದಾನೆ. ಬಿಕಾಶ್ ಲಾರಿಯನ್ನು ಬಿಡದೆ ಹಿಂಬಾಲಿಸಿದ್ದಾರೆ. ಆದರೆ ದ್ವಿಚಕ್ರ ವಾಹನದಿಂದ ಇವರನ್ನು ಹಿಂಬಾಲಿಸಲು ಆಗುವುದಿಲ್ಲ ಎಂದು ಅರಿತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ, ಘಟನೆ ಕುರಿತು ವಿವರಿಸಿ, ವಾಹನದ ನೋಂದಣಿ ಸಂಖ್ಯೆಯನ್ನು ನೀಡಿದ್ದಾರೆ.

    ಎಸ್‍ಯುವಿ(ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಕಾರಿನಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಲಾರಿಯನ್ನು ಹಿಂಬಾಲಿಸಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಲಾರಿ ಸಾಗುತ್ತಿದ್ದು, ಚಾಲಕ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದರಿಂದ ವಾಹನವನ್ನು ಓವರ್‍ಟೇಕ್ ಮಾಡಲು ಕಷ್ಟವಾಯಿತು. ಅಲ್ಲದೆ ಚಾಲಕ ರಸ್ತೆ ತುಂಬೆಲ್ಲ ಲಾರಿಯನ್ನು ತಿರುಗಿಸುತ್ತಿದ್ದ, ನಾವು ಓವರ್‍ಟೇಕ್ ಮಾಡಲು ಪ್ರಯತ್ನಿಸಿದಾಗಲೆಲ್ಲ ನಮ್ಮ ವಾಹನದ ಮೇಲೆ ಲಾರಿ ಹರಿಸಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಅಗಲವಾದ ರಸ್ತೆ ಬರುವವರೆಗೆ ಲಾರಿಯನ್ನು ಓವರ್‍ಟೇಕ್ ಮಾಡಲು ಸಾಧ್ಯವಾಗಲಿಲ್ಲ. ನಂತರ ಲಾರಿಯನ್ನು ಓವರ್‍ಟೇಕ್ ಮಾಡಿ, ನಿಲ್ಲಿಸಿದೆವು. ಚಾಲಕನ ಕ್ಯಾಬಿನನ್ನು ಪರಿಶೀಲಿಸಿದ್ದು, ಈ ವೇಳೆ ಮಹಿಳೆಯನ್ನು ಡ್ರೈವರ್ ಸೀಟ್ ಹಿಂದೆ ಕೂರಿಸಲಾಗಿತ್ತು. ಮಹಿಳೆಯ ಕೈಕಾಲುಗಳನ್ನು ಕಟ್ಟಲಾಗಿತ್ತು ಎಂದು ಪೂರ್ವ ಬುದ್ರ್ವಾನ್‍ನ ಎಸ್‍ಪಿ ಭಾಸ್ಕರ್ ಮುಖರ್ಜಿ ವಿವರಿಸಿದ್ದಾರೆ.

    ಲಾರಿ ಚಾಲಕ ಅಬ್ದುಲ್ ಶೇಖ್‍ನನ್ನು ಪೊಲೀಸರು ಬಂಧಿಸಿದ್ದು, ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸುಮೊಟೋ ಪ್ರಕರಣವನ್ನು ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಊರಿನವಳಲ್ಲ ಎಂಬುದನ್ನು ಅರಿತ ಲಾರಿ ಚಾಲಕ ಆಕೆಯನ್ನು ಹಿಂಬಾಲಿಸಿ, ನಂತರ ಲಾರಿಯೊಳಗೆ ಹತ್ತುವಂತೆ ಬಲವಂತ ಮಾಡಿದ್ದಾನೆ. ನಂತರ ಕೈ ಕಾಲುಗಳನ್ನು ಕಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಚೇಸ್ ಟೀಸರ್ ರಿಲೀಸ್ ಮಾಡಿದ ದಿಗ್ಗಜರು

    ಬೆಂಗಳೂರು: ಮಹಿಳೆಯರು ರಾತ್ರಿ ಹೊತ್ತು ಕ್ಯಾಬ್‍ಗಳಲ್ಲಿ ಪ್ರಯಾಣಿಸುವುದು ಅದೆಷ್ಟು ಸೂಕ್ತ ಎಂಬ ವಿಷಯವನ್ನಿಟ್ಟುಕೊಂಡು ಒಂದು ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೆಣೆದಿರುವ ಚಿತ್ರ ಚೇಸ್. ವಿಲೋಕ್ ಶೆಟ್ಟಿ ಅವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರಾದ ಎಸ್.ಕೆ. ಭಗವಾನ್, ಓಂ ಸಾಯಿಪ್ರಕಾಶ್ ಹಾಗೂ ಬರಗೂರು ರಾಮಚಂದ್ರಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಯುವ ಪ್ರತಿಭೆಗಳ ಹೊಸ ಪ್ರಯತ್ನಕ್ಕೆ ಶುಭ ಹಾರೈಸಿದ್ದು ವಿಶೇಷವಾಗಿತ್ತು. ಚೇಸ್ ಚಿತ್ರತಂಡ ಈ ಮೂವರು ದಿಗ್ಗಜರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿತು. ಈಗಿನ ಕಾಲದ ಜನರಿಗೆ ಹಿಡಿಸುವಂಥ ಹೊಸ ಶೈಲಿಯಲ್ಲಿ ಚಿತ್ರವನ್ನು ನಿರ್ಮಿಸಿರುವ ಈ ಯುವ ತಂಡಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರಲಿ ಎಂಬ ಶುಭ ಹಾರೈಕೆಯ ಮಾತುಗಳು ದಿಗ್ಗಜರಿಂದ ಕಾಣಿಕೆಯಾಗಿ ಸಿಕ್ಕಿತು.

    ಕ್ರೈಂ, ಥ್ರಿಲ್ಲರ್, ಮಿಸ್ಟ್ರಿ ಕಥಾನಕ ಒಳಗೊಂಡ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಧಿಕಾ ನಾರಾಯಣ್, ಅವಿನಾಶ್ ನರಸಿಂಹರಾಜು, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಅರವಿಂದರಾವ್, ಪ್ರಮೋದ್ ಶೆಟ್ಟಿ, ರಾಜೇಶ್ ನಟರಂಗ, ರೆಹಮಾನ್ ಹಾಗೂ ಬಾಲಿವುಡ್‍ನ ಎಬಿಸಿಡಿ ಚಿತ್ರದಲ್ಲಿ ನಟಿಸಿದ ಸುಶಾಂತ್ ಪೂಜಾರಿ ಸಹ ನಟಿಸಿದ್ದಾರೆ.

    ನಿರ್ದೇಶಕ ವಿಲೋಕ್ ಶೆಟ್ಟಿ ಮಾತನಾಡಿ, ಈ ಚಿತ್ರ ನಮ್ಮ ತಂಡದ 2 ವರ್ಷಗಳ ಪ್ರಯತ್ನದ ಫಲ. ನಮ್ಮ ಚಿತ್ರದ ಟೀಸರನ್ನು ಹಿರಿಯ ನಿರ್ದೇಶಕರಿಂದಲೇ ಬಿಡುಗಡೆ ಮಾಡಿಸಿದರೆ ಅರ್ಥಪೂರ್ಣವಾಗಿರುತ್ತೆ ಎಂದು ಆಹ್ವಾನಿಸಿದಾಗ ಅವರೆಲ್ಲ ಪ್ರೀತಿಯಿಂದ ಬಂದು ಹರಸಿದ್ದಾರೆ. ಬಹಳಷ್ಟು ಕಲಾವಿರು ಈ ಚಿತ್ರದಲ್ಲಿ ಅಭಿನಯಿಸಿರುವುದರಿಂದ ಅವರೆಲ್ಲರ ಡೇಟ್ಸ್ ಹೊಂದಿಸಿಕೊಂಡು ಶೂಟ್ ಮಾಡುವುದು ಸ್ವಲ್ಪ ತಡವಾಯಿತು ಎಂದು ಹೇಳಿದರು.

    ನಾಯಕಿ ರಾಧಿಕಾ ನಾರಾಯಣ್ ಮಾತನಾಡಿ, ನನ್ನ ಕೆರಿಯರ್‍ನಲ್ಲೇ ಇಂಥ ಪಾತ್ರ ಮಾಡಿಲ್ಲ, ಇದು ನನಗೆ ತುಂಬಾ ವಿಶೇಷ ಪಾತ್ರ. ಪೊಲೀಸ್ ಇನ್‍ಸ್ಪೆಕ್ಟರ್ ಟ್ರೈನಿಂಗ್ ಪಡೆಯುತ್ತಿರುವ ಯುವತಿಯಾಗಿ ನಾನು ಅಭಿನಯಿಸಿದ್ದೇನೆ ಎಂದು ಹೇಳಿದರು. ನಂತರ ನಟ ಸುಶಾಂತ್ ಪೂಜಾರಿ ಮಾತನಾಡಿ ನನ್ನ ತಾಯಿ ಉಡುಪಿಯವರು, ನಾನು ಇಲ್ಲೇ ಹುಟ್ಟಿದ್ದರೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನನಗೆ ತುಂಬಾ ಸ್ಪೆಷಲ್ ರೋಲ್ ಈ ಚಿತ್ರದಲ್ಲಿದೆ ಎಂದು ಹೇಳಿದರು.

    ನಟ ಅರವಿಂದರಾವ್ ಮಾತನಾಡಿ ಬರೀ ಇನ್‍ಸ್ಪೆಕ್ಟರ್ ಪಾತ್ರಗಳನ್ನೇ ಮಾಡಿ ಬೇಸತ್ತಿದ್ದ ನನಗೆ ಈ ಚಿತ್ರದಲ್ಲಿ ಒಬ್ಬ ಡಾಕ್ಟರ್ ಪಾತ್ರ ಕೊಟ್ಟಿದ್ದರು. ಕನ್ನಡದಲ್ಲಿ ಈ ಥರದ ಸಿನಿಮಾ ಬಂದಿಲ್ಲ ಎಂದು ಹೇಳಿದರು. ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಅವರ ಸಂಗೀತವಿದ್ದು, ಅನಂತರಾಜ ಅರಸ್ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಿಂಪ್ಲಿ ಫನ್ ಮೀಡಿಯಾ ನೆಟ್‍ವರ್ಕ್ ಮೂಲಕ ಮನೋಹರ್ ಸುವರ್ಣ, ಪ್ರದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಅವರ ನಿರ್ಮಾಣದ ಚೇಸ್ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

  • ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ, ಗುಂಡು ಹಾರಿಸಿ ದರೋಡೆಕೋರರ ಬಂಧನ

    ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ, ಗುಂಡು ಹಾರಿಸಿ ದರೋಡೆಕೋರರ ಬಂಧನ

    ಬೆಂಗಳೂರು: ನಗರದ ಹೊರವಲಯದ ದೇವನಹಳ್ಳಿಯ ಬಳಿ ಪೊಲೀಸರು ಸಿನಿಮೀಯ ಶೈಲಿಯಲ್ಲಿ ದರೋಡೆಕೋರರನ್ನು ಚೇಸ್ ಮಾಡಿ, ಗುಂಡು ಹಾರಿಸುವ ಮೂಲಕ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಉದಯ ಹಾಗೂ ಪವನ್ ಬಂಧಿತ ಆರೋಪಿಗಳಾಗಿದ್ದಾರೆ. ಬುಧವಾರ ಸಂಜೆ ಇಬ್ಬರು ದರೋಡೆಕೋರರ ಖಚಿತ ಮಾಹಿತಿ ಮೇರೆಗೆ ಯಲಹಂಕ ಇನ್ಸ್ ಪೆಕ್ಟರ್ ಮಂಜೇಗೌಡ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಇಬ್ಬರು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಕೂಡಲೇ ಅವರನ್ನು ಚೇಸ್ ಮಾಡಿದ ಪೊಲೀಸರು, ದೇವನಹಳ್ಳಿ ಸಮೀಪದ ಅಕ್ಕುಪೇಟೆ ಬೊಮ್ಮವಾರ ಮೀಸಲು ಅರಣ್ಯ ಪ್ರದೇಶದಲ್ಲಿ ಹಿಡಿದಿದ್ದಾರೆ.

    ತಪ್ಪಿಸಿಕೊಳ್ಳಲು ದರೋಡೆಕೋರರು ಪೊಲೀಸರು ಹಾಗೂ ಅವರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೂಡಲೇ ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ತಗುಲಿದ್ದು, ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಸದ್ಯ ಇಬ್ಬರಿಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಬಂಧಿತ ಆರೋಪಿಗಳು ಕಳೆದ ಎರಡು ದಿನಗಳ ಹಿಂದೆ ಗಣೇಶ ಹಬ್ಬದ ಚಂದಾ ವಸೂಲಿಮಾಡುತ್ತಿದ್ದ ವೃದ್ಧರೊಬ್ಬರನ್ನು ಸುಲಿಗೆ ಮಾಡಿದ್ದರು. ಈ ಸಂಬಂಧ ಯಲಹಂಕ ಠಾಣೆಯಲ್ಲಿ ದೂರು ದಾಖಲಾಗಿತ್ತು, ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv