Tag: Chartered Accountant

  • ಬಟ್ಟೆ ಅಂಗಡಿಗಳಿಗೆ ಹಣ ನೀಡದೇ ವಂಚನೆ – ಚಾರ್ಟೆರ್ಡ್ ಅಕೌಂಟೆಂಟ್ ಆಗಿದ್ದ ಯುವತಿ ಅರೆಸ್ಟ್

    ಬಟ್ಟೆ ಅಂಗಡಿಗಳಿಗೆ ಹಣ ನೀಡದೇ ವಂಚನೆ – ಚಾರ್ಟೆರ್ಡ್ ಅಕೌಂಟೆಂಟ್ ಆಗಿದ್ದ ಯುವತಿ ಅರೆಸ್ಟ್

    ಬೆಂಗಳೂರು: ಐಷಾರಾಮಿ ಬಟ್ಟೆ ಶೋರೂಂಗಳಿಗೆ ಹೋಗಿ ದುಬಾರಿ ಬೆಲೆಯ ಬಟ್ಟೆಗಳನ್ನ ಖರೀದಿಸಿ ಆನ್‌ಲೈನ್ ಪೇಮೆಂಟ್ ಮಾಡುವಂತೆ ನಟಿಸಿ ವಂಚಿಸುತ್ತಿದ್ದ ಐನಾತಿ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ.

    ಕೋಲಾರ ಮೂಲದ ರಶ್ಮಿ ಬಂಧಿತ ಆರೋಪಿಯಾಗಿದ್ದಾರೆ. ಆರೋಪಿ ವೃತ್ತಿಯಲ್ಲಿ ಚಾರ್ಟೆರ್ಡ್ ಅಕೌಂಟೆAಟ್ ಆಗಿ ಕೆಲಸ ಮಾಡಿಕೊಂಡಿದ್ದರು. 30, 40 ಸಾವಿರದ ದುಬಾರಿ ಬೆಲೆಯ ಬಟ್ಟೆಗಳನ್ನ ಖರೀದಿ ಮಾಡಿ ಬಳಿಕ ಪೋನ್ ಪೇ, ಗೂಗಲ್ ಪೇ ಮುಖಾಂತರ ಹಣ ಕಳಿಸಿದ್ದೀನಿ ಎಂದು ಹೇಳಿ ಹೆಸರು, ನಂಬರ್ ಅಂಗಡಿ ಮಾಲೀಕರಿಗೆ ಕೊಟ್ಟು ಅಲ್ಲಿಂದ ತೆರಳ್ತಾ ಇದ್ದರು.

    ಆನ್‌ಲೈನ್ ಮುಖಾಂತರ ಬಟ್ಟೆ ಶೋರೂಂಗಳ ಮಾಲೀಕರಿಗೆ ಹಣ ಬರದೆ ಇದ್ದಾಗ ಆರೋಪಿ ಕಾಲ್ ಮಾಡಿದರೆ, ಕರೆ ಸ್ವೀಕರಿಸುತ್ತಿರಲಿಲ್ಲ. ಅಂಗಡಿ ಮಾಲೀಕರಿಗೆ ನಂಬರ್ ಕೂಡುವಾಗ ಆರೋಪಿ ಯುವತಿ ಬೇರೊಬ್ಬರ ಪೋನ್ ನಂಬರ್ ಕೊಟ್ಟು ಹೋಗಿದ್ದ ಪ್ರಸಂಗಗಳೂ ನಡೆದಿವೆ. ಶೋರೂಂ ಮಾಲೀಕರು ಕಾಲ್ ಮಾಡಿ ವಿಚಾರಿಸಿದಾಗ ರಾಂಗ್ ನಂಬರ್ ಅನ್ನೋದು ಖಾತರಿ ಆಗುತ್ತಿತ್ತು.

    ಇತ್ತೀಚಿಗೆ ಆರೋಪಿತ ಯುವತಿ ಸದಾಶಿವ ನಗರದ ಪ್ರತಿಷ್ಠಿತ ಬಟ್ಟೆ ಶೋರೂಂಗೆ ಹೋಗಿ ಬಟ್ಟೆ ಖರೀದಿ ಮಾಡಿ ಹಣಕ್ಕೆ ಆನ್‌ಲೈನ್ ಮೂಲಕ ಕಳಿಸಿರೋದಾಗಿ ಹೇಳಿ ವಂಚನೆ ಮಾಡಿ ಹೋಗಿರುತ್ತಾಳೆ. ಶೋರೂಂನವರು ಯುವತಿ ಮೇಲೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಯುವತಿ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

  • ತಂತ್ರಜ್ಞಾನದ ಜೊತೆ ಕೌಶಲ್ಯಗಳನ್ನು ಬಳಸಿಕೊಳ್ಳಿ – ಸಿಎ ವಿದ್ಯಾರ್ಥಿಗಳಿಗೆ ಐಐಎಂ ಮುಖ್ಯಸ್ಥ  ಪ್ರೊ. ಕೆ. ಕುಮಾರ್ ಸಲಹೆ

    ತಂತ್ರಜ್ಞಾನದ ಜೊತೆ ಕೌಶಲ್ಯಗಳನ್ನು ಬಳಸಿಕೊಳ್ಳಿ – ಸಿಎ ವಿದ್ಯಾರ್ಥಿಗಳಿಗೆ ಐಐಎಂ ಮುಖ್ಯಸ್ಥ  ಪ್ರೊ. ಕೆ. ಕುಮಾರ್ ಸಲಹೆ

    – ಚಾರ್ಟೆಡ್ ಆಕೌಂಟೆಂಟ್ ವಿದ್ಯಾರ್ಥಿ ಸಮ್ಮೇಳನ ಅಭ್ಯುದಯ 2019

    ಬೆಂಗಳೂರು: ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ತಂತ್ರಜ್ಞಾನ ಬದಲಾಗುತ್ತಿದ್ದಂತೆ ಲೆಕ್ಕಪರಿಶೋಧಕರು ಕೂಡ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಆಗ ಉದ್ಯಮ ಮತ್ತು ವ್ಯವಹಾರಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಐಐಎಂನ ಮುಖ್ಯಸ್ಥ ಪ್ರೊ.ಕೆ. ಕುಮಾರ್ ಅಭಿಪ್ರಾಯಪಟ್ಟರು.

    ಬೆಂಗಳೂರಿನ ವಸಂತನಗರದ ಅಂಬೇಡ್ಕರ್ ಭವನದಲ್ಲಿ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮತ್ತು ದಕ್ಷಿಣ ಭಾರತ ಲೆಕ್ಕಪರಿಶೋಧಕರ ವಿದ್ಯಾರ್ಥಿ ಸಂಘ ಬೆಂಗಳೂರು (ಎಸ್‍ಐಸಿಎಎಸ್‍ಎ) ವತಿಯಿಂದ ನಡೆಯುತ್ತಿರುವ ಎರಡು ದಿನಗಳ ಚಾರ್ಟೆಡ್ ಆಕೌಂಟೆಂಟ್ ವಿದ್ಯಾರ್ಥಿ ಸಮ್ಮೇಳನ ಅಭ್ಯುದಯ 2019 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೆಕ್ಕ ಪರಿಶೋಧಕರು ಆರ್ಧಿಕ ಚಟುವಟಿಕೆಗಳನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಉದ್ಯಮಗಳಲ್ಲಿ ಉಂಟಾಗುವಂತಹ ಸವಾಲುಗಳನ್ನು ಬಗೆಹರಿಸುವಂತಹ ಜವಾಬ್ದಾರಿ ಕೂಡ ಲೆಕ್ಕ ಪರಿಶೋಧಕರ ಮೇಲಿದೆ ಎಂದು ಅವರು ಹೇಳಿದ್ರು.

    ವಿದ್ಯಾರ್ಥಿಗಳು ಕೇವಲ ಅಂಕಗಳಿಸಿ ಉತ್ತೀರ್ಣರಾಗುವುದಲ್ಲ. ಉತ್ತಮ ಕೌಶಲ್ಯ ಮತ್ತು ವೃತ್ತಿಪರತೆಯನ್ನು ಕೂಡ ಮೈಗೂಡಿಸಿಕೊಳ್ಳಬೇಕು. ಇಂತಹ ಶಿಕ್ಷಣವನ್ನು ಪಾಧ್ಯಾಪಕರು ತಮ್ಮ ವೃತ್ತಿ ಬದುಕಿನ ಸವಾಲು ಮತ್ತು ಅನುಭವಗಳನ್ನು ವಿದ್ಯಾರ್ಥಿಗಳಿಗೆ ಭೋಧನೆ ಮಾಡಿ ವೃತ್ತಿಪರರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದರು. ಲೆಕ್ಕ ಪರಿಶೋಧಕರು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನಗಳನ್ನು ಹೊಂದಿದ್ದಾರೆ. ಬ್ಯಾಂಕಿಂಗ್, ಕಾರ್ಪೊರೇಟ್ ಸೆಕ್ಟರ್, ಎಂಎನ್‍ಸಿ ಕಂಪನಿ ಸೇರಿದಂತೆ ವಿವಿಧ ಉದ್ಯಮ, ವ್ಯವಹಾರಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹೀಗಾಗಿ ಪ್ರತಿ ದಿನವೂ ಇಲ್ಲಿ ಹೊಸತನವನ್ನು ಕಲಿಯಬೇಕಾಗುತ್ತದೆ. ಹೊಸ ಹೊಸ ಯೋಜನೆಗಳತ್ತ ಗಮನ ಕೂಡ ಹರಿಸಬೇಕಾಗುತ್ತದೆ ಎಂದರು.

    ಚಾರ್ಟೆಡ್ ಆಕೌಂಟೆಂಟ್ ಕೋರ್ಸ್ ಗೆ ಸೇರುವುದೇ ದೊಡ್ಡ ಕೆಲಸ. ಇಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವ ಛಲ ಮತ್ತು ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಬೇಕು. ಅಲ್ಲದೆ ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು, ವೃತ್ತಿಪರತೆಯನ್ನು ಕಾಯ್ದುಕೊಂಡು ಸುಂದರ ಜೀವನವನ್ನು ರೂಪಿಸಿಕೊಳ್ಳಿ ಎಂದು ಚಾರ್ಟೆಡ್ ಆಕೌಂಟೆಂಟ್ ಕೋರ್ಸ್ ಗೆ ಸೇರಿರುವ ವಿದ್ಯಾರ್ಥಿಗಳಿಗೆ ಪ್ರೊ. ಕೆ. ಕುಮಾರ್ ಸಲಹೆ ನೀಡಿದರು.

    ಸಮ್ಮೇಳನದ ಮುಖ್ಯ ಅತಿಥಿಯಾಗಿದ್ದ ಗೋಲ್ಡ್ಮ್ಯಾನ್ ಸಾಚ್ಸ್ನ ಎಂ.ಡಿ. ಸಾತಿಯಾ ಪದ್ಮನಾಭನ್ ಅವರು ಸಿಎ ವಿದ್ಯಾರ್ಥಿಗಳೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಕಠಿಣ ಶ್ರಮ, ಏಕಾಗ್ರತೆ ಮತ್ತು ಬದ್ಧತೆಯಿಂದ ಓದಿದ್ರೆ ಮಾತ್ರ ಲೆಕ್ಕ ಪರಿಶೋಧಕನಾಗಬಹುದು. ನಾನು 14ನೇ ಪ್ರಯತ್ನದಲ್ಲಿ ಚಾರ್ಟೆಡ್ ಆಕೌಂಟೆಂಟ್ ಪರೀಕ್ಷೆಯನ್ನು ಪಾಸ್ ಮಾಡಿದ್ದೇನೆ ಎಂದರು.

    ಇನ್ನೊಬ್ಬ ಮುಖ್ಯ ಅತಿಥಿಯಾಗಿದ್ದ ಐಸಿಎಐನ ಮಾಜಿ ಅಧ್ಯಕ್ಷ ಕೆ. ರಘು ಮಾತನಾಡಿ, ಲೆಕ್ಕ ಪರಿಶೋಧಕರಿಗೆ ಸಮಾಜದಲ್ಲಿ ಅತ್ಯುನ್ನತ ಗೌರವ ಇದೆ. ಹಾಗೇ ಬೇರೆ ಬೇರೆ ದೇಶಗಳಲ್ಲಿ ಲೆಕ್ಕಪರಿಶೋಧಕರಿಗೆ ಹೆಚ್ಚಿನ ಬೇಡಿಕೆಯೂ ಇದೆ. ಹೀಗಾಗಿ ಸಿಎ ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಸಿಎ ಪರೀಕ್ಷೆ ತುಂಬಾ ಕಠಿಣವಾಗಿರುತ್ತದೆ. ಆದರೆ ಬದ್ಧತೆ ಮತ್ತು ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಸಿಎ ಪರೀಕ್ಷೆಯನ್ನು ಪಾಸ್ ಮಾಡಬಹುದು ಎಂದು ಹೇಳಿದ್ರು.

    ಅಭ್ಯುದಯ ಸಿಎ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಲೆಕ್ಕಪರಿಶೋಧಕರ ಪಾತ್ರ, ಸಿಎ ವೃತ್ತಿ ಭವಿಷ್ಯ ಮತ್ತು ತಂತ್ರಜ್ಞಾನ, ಭಾರತದ ಅರ್ಥಿಕತೆಗೆ ಜಿಎಸ್‍ಟಿಯ ಪರಿಣಾಮಗಳು, ಲೆಕ್ಕಪರಿಶೋಧಕ ವೃತ್ತಿಯ ಮೌಲ್ಯಗಳು, ಕಂಪೆನಿ ಕಾನೂನು ಮತ್ತು ಇತ್ತೀಚಿನ ಕಾಯ್ದೆಗಳ ಬಗ್ಗೆ ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ.

    ಕಾರ್ಯಕ್ರಮದಲ್ಲಿ ಎಸ್.ಐ.ಆರ್.ಸಿನ ಮುಖ್ಯಸ್ಥ ಜೋಮನ್ ಕೆ. ಜಾರ್ಜ್, ಎಸ್.ಐ.ಆರ್.ಸಿ ಪದಾಧಿಕಾರಿಗಳಾದ ಎಸ್. ಪನ್ನಾ ರಾಜ್, ಎ.ಬಿ. ಗೀತಾ, ಎಸ್.ಐ.ಆರ್.ಸಿ ಬೆಂಗಳೂರು ವಿಭಾಗದ ಚೇರ್ಮೆನ್ ಶಿವರಾಮ್ ಶಂಕರ್ ಭಟ್, ಎಸ್‍ಐಸಿಎಎಸ್‍ಎನ ಅಧ್ಯಕ್ಷೆ ಎಸ್.ದಿವ್ಯಾ ಮೊದಲಾದವರು ಉಪಸ್ಥಿತರಿದ್ದರು. ಸಿಎ ವಿದ್ಯಾರ್ಥಿ ಸಮ್ಮೇಳನದಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • 4ನೇ ಮಹಡಿಯಿಂದ ಅನುಮಾನಾಸ್ಪದವಾಗಿ ಬಿದ್ದ ಸಿಎ: ವಿಡಿಯೋ ನೋಡಿ

    4ನೇ ಮಹಡಿಯಿಂದ ಅನುಮಾನಾಸ್ಪದವಾಗಿ ಬಿದ್ದ ಸಿಎ: ವಿಡಿಯೋ ನೋಡಿ

    ಗಾಂಧಿನಗರ: ಚಾರ್ಟೆಡ್ ಅಕೌಂಟೆಂಟ್ ಒಬ್ಬರು ತಮ್ಮ ಕಚೇರಿಯ ಕಟ್ಟಡದ ನಾಲ್ಕನೇ ಮಹಿಡಿಯಿಂದ ಅನುಮಾನಾಸ್ಪದವಾಗಿ ಬಿದ್ದು ಸಾವನ್ನಪ್ಪಿದ್ದ ಘಟನೆ ಮಂಗಳವಾರ ಗುಜರಾತ್‍ನ ಬಾವ್‍ನಗರದಲ್ಲಿ ನಡೆದಿದೆ.

    ಪ್ರಮೋದ್ ಹೇಮಾನಿ(78) 4ನೇ ಮಹಡಿಯಿಂದ ಅನುಮಾನಸ್ಪದವಾಗಿ ಬಿದ್ದ ಚಾರ್ಟೆಡ್ ಅಕೌಟೆಂಟ್. ಪ್ರಮೋದ್ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ತನ್ನ ಕಚೇರಿಯ ನಾಲ್ಕನೇ ಮಹಡಿಯಿಂದ ಬಿದ್ದ ದೃಶ್ಯ ಕಾಂಪ್ಲೆಕ್ಸ್ ನಲ್ಲಿ ಅಳವಡಿಸಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಪ್ರಮೋದ್ ಅಲ್ಲಿಂದ ಬಿದಿದ್ದು ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಅಷ್ಟರಲ್ಲೇ ಪ್ರಮೋದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಮೋದ್ ಅವರ ಮಗ ಪ್ರಶಾಂತ್ ಹೇಮಾನಿ ಅಹಮದಾಬಾದ್‍ನಲ್ಲಿ ಸೇಲ್ಸ್ ಟ್ಯಾಕ್ಸ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಾವನಗರ ಪೊಲೀಸರು ಪ್ರಶಾಂತ್‍ಗೆ ತನ್ನ ತಂದೆಯ ಸಾವಿನ ವಿಷಯವನ್ನು ತಿಳಿಸಿದ್ದಾರೆ.

    ಈಗ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದ ಅಧಿಕಾರಿಗಳು ಪ್ರಮೋದ್ ಆತ್ಮಹತ್ಯೆ ಮಾಡಿಕೊಂಡಿದ್ದಾರಾ, ಆಕಸ್ಮಿಕ ಸಾವೇ ಅಥವಾ ಯಾರಾದರೂ ತಳ್ಳಿ ಕೊಲೆ ಮಾಡಿದ್ದಾರಾ ಎನ್ನುವ ವಿಚಾರವನ್ನು ಮುಂದಿಟ್ಟುಕೊಂಡು ಪೊಲೀಸ್ ತನಿಖೆಗೆ ಸಹಕಾರ ನೀಡುತ್ತಿದ್ದಾರೆ.

    https://www.youtube.com/watch?time_continue=17&v=H5QwK_Fsl1o

  • ಜಿಎಸ್‍ಟಿ ಕುರಿತು ಪ್ರಧಾನಿ ಮೋದಿ ಮಾಡಿದ್ದ ಭಾಷಣದಲ್ಲಿ ಸಿಡಿದ ಎರಡು ಹೊಸ ಬಾಂಬ್‍ಗಳು

    ಜಿಎಸ್‍ಟಿ ಕುರಿತು ಪ್ರಧಾನಿ ಮೋದಿ ಮಾಡಿದ್ದ ಭಾಷಣದಲ್ಲಿ ಸಿಡಿದ ಎರಡು ಹೊಸ ಬಾಂಬ್‍ಗಳು

    ನವದೆಹಲಿ: ಜೂನ್ 30ರಂದು ದೇಶದ ಆರ್ಥಿಕ ಕ್ರಾಂತಿ ಎಂದೇ ಹೇಳಲಾಗುತ್ತಿರುವ ಜಿಎಸ್‍ಟಿ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯ ಇಂದಿರಾಗಾಂದಿ ಕ್ರೀಡಾಂಗಣದಲ್ಲಿ ದೇಶದ ಜನರು ಹಾಗು ಲೆಕ್ಕ ಪರಿಶೋಧಕರು (ಚಾರ್ಟೆಡ್ ಅಕೌಂಟೆಂಟ್)ಗಳನ್ನು ಉದ್ದೇಶಿಸಿ ಮಾತನಾಡಿದ್ರು.

    ಇಂದು ನವದೆಹಲಿಯ ಐಸಿಎಐ ಸಂಸ್ಥೆಯ ಸಂಸ್ಥಾಪನಾ ದಿನದಲ್ಲಿ ಮೋದಿ ಭಾಗಿಯಾಗಿದ್ದರು. ಈ ಸಭೆಯಲ್ಲಿ ನಿನ್ನೆ ಜಾರಿಯಾದ ಜಿಎಸ್‍ಟಿ ಕುರಿತು ಸುರ್ದೀರ್ಘವಾಗಿ ಹಲವಾರು ವಿಷಯಗಳನ್ನು ಕುರಿತು ವಿಶ್ಲೇಷಿಸಿದ್ದಾರೆ. ತಮ್ಮ ಭಾಷಣದ ವೇಳೆ ಜಿಎಸ್‍ಟಿ ಅಂದರೆ ಎನು? ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಿಎಗಳು ಪಾತ್ರವೇನು? ಎಂಬುವುದಾಗಿ ವಿಶ್ಲೇಷಿಸಿದರು.

    ಮೊದಲ ಬಾಂಬ್: 2014ರಿಂದ ಸ್ವಿಸ್ ಬ್ಯಾಂಕ್‍ಗಳಲ್ಲಿ ಹಣ ಜಮೆ ಮಾಡುವ ಭಾರತೀಯರ ಸಂಖ್ಯೆ ಮತ್ತು ಹಣ ಕಡಿಮೆಯಾಗಿದೆ. 2016 ನವೆಂಬರ್ 8ರ ನಂತರ ದೀಪಾವಳಿ ರಜೆಗೆಂದು ವಿದೇಶಗಳಿಗೆ ತೆರಳಿದ್ದ ಜನರು ಮರಳಿ ದೇಶಕ್ಕೆ ಬಂದಿದ್ದಾರೆ. ಇನ್ನು 2 ವರ್ಷಗಳಲ್ಲಿ ಕಾಳಧನಿಕರ ಮಾಹಿತಿ ಸಿಗಲಿದೆ. ಈಗಾಗಲೇ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದೇವೆ. ಕಾಳಧನಿಕರಿಗೆ ಮುಂದಿನ ದಿನಗಳಲ್ಲಿ ಆಘಾತ ಕಾದಿದೆ ಎಂದು ಸೂಚನೆಯನ್ನು ನೀಡಿದ್ದಾರೆ.

    ಸಿಎಗಳು ದೇಶದ ಆರ್ಥವ್ಯವಸ್ಥೆಯ ಆಧಾರ ಸ್ಥಂಭಗಳು. ನಿಮ್ಮ ಮೇಲೆ ಅರ್ಥ ವ್ಯವಸ್ಥೆ ನಂಬಿಕೆಯನ್ನು ಇಟ್ಟಿದೆ. ದೇಶದ ಅರ್ಥವ್ಯವಸ್ಥೆಯನ್ನು ಕಾಪಾಡುವ ಜವಬ್ದಾರಿಗಳು ಸಿಎಗಳ ಮೇಲಿದೆ. ನಮ್ಮ ಶಾಸ್ತ್ರಗಳಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರಾಷರ್ಥಗಳಿವೆ. ಹೀಗಾಗಿ ಅರ್ಥವ್ಯವಸ್ಥೆ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದೆ. ಈ ವೇಳೆ ನಿಮ್ಮಲ್ಲಿರುವ ದೇಶ ಭಕ್ತಿ ಹಾಗು ನನ್ನಲ್ಲಿರುವ ದೇಶ¨ಭಕ್ತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಮನೆಗೆ ಬೆಂಕಿ ಬಿದ್ರೆ ಬೇರೆ ಕಟ್ಟುಬಹುದು, ಮನೆಯಲ್ಲಿಯೇ ಕಳ್ಳಯಿದ್ದೆರೆ ಏನು ಮಾಡಕಾಗಲ್ಲ. ದೇಶದಲ್ಲಿ ಕೆಲವರಿಗೆ ಕಳ್ಳತನ ಮಾಡುವ ಅಭ್ಯಾಸವಾಗಿದೆ. ಇದ್ರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಸಿಎಗಳ ಪಾತ್ರವಿದೆ.

    ಎರಡನೇ ಬಾಂಬ್: ಮೋದಿ ಅವರು ತಮ್ಮ ಭಾಷಣದಲ್ಲಿ ಡೈರಿ ಬಗ್ಗೆ ಉಲ್ಲೇಖಿಸಿದರು. ದೇಶದಲ್ಲಿ ಡೈರಿಯ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಈಗಾಗಲೇ ಸುಮಾರು 40 ಸಾವಿರ ಕಂಪನಿಗಳನ್ನು ಪತ್ತೆ ಮಾಡಲಾಗಿದೆ. ಅವುಗಳ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 11 ವರ್ಷಗಳಲ್ಲಿ ಕೇವಲ 25 ಚಾರ್ಟೆಡ್ ಅಕೌಂಟ್‍ಗಳ ವಿಚಾರಣೆ ನೆಡೆದಿದ್ದೇವೆ. ಇದು ಅನುಮಾನ ಮೂಡಿಸುತ್ತದೆ ಎಂದು ಅಪ್ರಾಮಣಿಕ ಸಿಎಗಳ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

    ಸಿಎಗಳಿಗೆ ಕಿವಿಮಾತು: ನೀವುಗಳು ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ತೀರಾ ಎಂದು ತಿಳಿಯುತ್ತೇನೆ. ದೇಶದ ಅಭಿವೃದ್ದಿ ನಿಮ್ಮ ಕೈಯಲ್ಲಿದೆ, ಇದು ನಿಮ್ಮ ದೇಶವಾಗಿದೆ. ಅಂದು ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹಿನೀಯರು ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಇಂದು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಸಿಎಗಳು ಜವಬ್ದಾರಿಯುತವಾಗಿ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಸಹಿ ದೇಶದ ಒಬ್ಬ ಪಿಎಂ ಸಹಿಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ. ನಿಮ್ಮ ಸಹಿ ನಂಬಿಕೆಗೆ ಸೂಚಕವಾಗಿರುತ್ತದೆ. ನಿಮ್ಮ ಒಂದು ಸಹಿಯನ್ನು ಸಹ ಸರ್ಕಾರ ನಂಬುತ್ತದೆ.

    ಕಂಪನಿಯ ಬ್ಯಾಲೆನ್ಸ್ ಶೀಟ್ ನಲ್ಲಿ ನಿಮ್ಮ ಸಹಿ ನೋಡಿ ಬಡ ವಿಧವೆ, ಅಂಗವಿಕಲರು, ವೃದ್ಧರು ಸೇರಿದಂತೆ ತಮ್ಮ ಹಣವನ್ನು ಮಾರ್ಕೆಟ್‍ನಲ್ಲಿ ಹೂಡಿಕೆ ಮಾಡಿರ್ತಾರೆ. ಒಂದು ವೇಳೆ ಕಂಪನಿ ದಿವಾಳಿಯಾದ್ರೆ ಅದರ ನೈತಿಕ ಹೊಣೆ ನಿಮ್ಮ ಮೇಲಿರುತ್ತದೆ. ಹಾಗಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದರ ಜೊತೆಗೆ ನಿಮ್ಮ ಬಳಿ ಬರುವ ಜನರಿಗೆ ನ್ಯಾಯಯುತವಾಗಿ ಟ್ಯಾಕ್ಸ್ ತುಂಬುವಂತೆ ತಿಳಿಸುವ ಪ್ರಯತ್ನ ಮಾಡಿ. ಈ ಟ್ಯಾಕ್ಸ್ ಹಣದಿಂದ ಕೆಲವರು ಒಂದು ಹೊತ್ತಿನ ಊಟ, ಔಷಧಿ, ವೃದ್ಯಾಪ ವೇತನ, ಮನೆ ಸಿಗುತ್ತದೆ ಎಂದು ಹೇಳಿದರು.

    ಇಂದು ನಾನು ನಿಮ್ಮ ಸಂಸ್ಥೆಯ ಸಂಸ್ಥಾಪನಾ ದಿನಕ್ಕೆ ಆಗಮಿಸಿದ್ದೇನೆ. 2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಆಗುತ್ತದೆ. ನಾವು ಈಗಾಗಲೇ ಅಂದು ನಾವು ಏನು ಮಾಡಬೇಕು ಎಂದು ನೀಲಿ ನಕ್ಷೆಯನ್ನು ಸಿದ್ಧಪಡಿಸಿ ಅದೇ ಮಾರ್ಗದಲ್ಲಿ ಕೆಲಸ ಮಾಡುತ್ತಿದ್ದೆ. 2024ಕ್ಕೆ ನಿಮ್ಮ ಐಸಿಎಐ ಸಂಸ್ಥೆಯ ಸ್ಥಾಪನೆಗೊಂಡು 75 ವರ್ಷವಾಗುತ್ತದೆ. ಈ ಸುದೀರ್ಘ ಕಾಲದಲ್ಲಿ ನಾವು ದೇಶಕ್ಕೆ ಏನ್ನನ್ನು ನೀಡಿದ್ದೇವೆ? ಮುಂದೆ ಎನ್ಮಾಡಬೇಕು ಎಂಬುದರ ಬಗ್ಗೆ ಯೋಚಿಸಿ ಎಂದು ಮೋದಿ ತಿಳಿಸಿದರು.