Tag: charmadi

  • ಟ್ಯಾಕರ್ ನಿಂದ ಅನಿಲ ಸೋರಿಕೆ: ಮಂಗಳೂರು- ಚಾರ್ಮಾಡಿ ಸಂಚಾರ ಸ್ಥಗಿತ

    ಟ್ಯಾಕರ್ ನಿಂದ ಅನಿಲ ಸೋರಿಕೆ: ಮಂಗಳೂರು- ಚಾರ್ಮಾಡಿ ಸಂಚಾರ ಸ್ಥಗಿತ

    ಮಂಗಳೂರು: ಗ್ಯಾಸ್ ಟ್ಯಾಂಕರ್  ನಿಂದ ಇದ್ದಕ್ಕಿದ್ದಂತೆ ಗ್ಯಾಸ್ ಲೀಕ್ ಆದ ಘಟನೆ ಶುಕ್ರವಾರ ಮಧ್ಯಾಹ್ನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಡಂತ್ಯಾರು ಬಳಿ ನಡೆದಿದೆ.

    ಟ್ಯಾಂಕರ್ ನ ಮೇಲ್ಭಾಗದಿಂದ ಗ್ಯಾಸ್ ಸೋರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಅಗ್ನಿ ಶಾಮಕದಳದ ಅಧಿಕಾರಿಗಳು ದೌಡಾಯಿಸಿದ್ದು ನೀರು ಹಾರಿಸಿ ಅಗ್ನಿ ಅವಘಡವಾಗದಂತೆ ತಡೆದಿದ್ದಾರೆ. ಮುಂಜಾಗೃತಾ ಕ್ರಮವಾಗಿ ಮಂಗಳೂರು ಚಾರ್ಮಾಡಿ ನಡುವಿನ ಸಂಚಾರ ಸ್ಥಗಿತಗೊಳಿಸಲಾಗಿದೆ.

    ಒಂದು ಕಿಲೋ ಮೀಟರ್ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸ್ಥಳೀಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಶಿರಾಡಿ ಘಾಟ್ ದುರಸ್ತಿಯ ಹಿನ್ನಲೆಯಲ್ಲಿ ಹೆಚ್ಚಿನ ವಾಹನಗಳು ಚಾರ್ಮಾಡಿ ಮೂಲಕವೇ ಮಂಗಳೂರು ಬೆಂಗಳೂರಿಗೆ ಸಂಚರಿಸುತ್ತಿವೆ.

     

  • ಚಾರ್ಮಾಡಿಯಲ್ಲಿ ಗುಡ್ಡ ಕುಸಿತ- ಪ್ರವಾಸಿಗರಿಗೆ ಆತಂಕ

    ಚಾರ್ಮಾಡಿಯಲ್ಲಿ ಗುಡ್ಡ ಕುಸಿತ- ಪ್ರವಾಸಿಗರಿಗೆ ಆತಂಕ

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿಯಲ್ಲಿ ಸುರಿಯುತ್ತಿರೋ ಭಾರೀ ಮಳೆಯಿಂದಾಗಿ ಮೂಡಿಗೆರೆಯಿಂದ ಧರ್ಮಸ್ಥಳ, ಮಂಗಳೂರು, ಮಣಿಪಾಲ್‍ಗೆ ಸಂಪರ್ಕ ಕಲ್ಪಿಸೋ ಚಾರ್ಮಾಡಿಯಲ್ಲಿ ಗುಡ್ಡ ಕುಸಿದಿದೆ.

    ಅದೃಷ್ಟವತಾಶ್ ಘಟನೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಭಾನುವಾರ ಸಂಜೆ ಸುಮಾರು 5.30 ರಿಂದ 6 ಗಂಟೆಗೆ ಗುಡ್ಡ ಕುಸಿದಿದ್ದು ಪ್ರವಾಸಿಗರು ಆತಂಕಕ್ಕೀಡಾಗಿದ್ದಾರೆ. ಗುಡ್ಡ ಕುಸಿತದಿಂದಾಗಿ ಒಂದು ಗಂಟೆಗೂ ಅಧಿಕ ಕಾಲ ಸುಮಾರು ಎರಡು ಕಿ.ಮೀ.ನಷ್ಟು ದೂರ ಟ್ರಾಫಿಕ್ ಜಾಮ್ ಆಗಿತ್ತು. ಈ ಮಾರ್ಗ ಕಿರಿದಾದ ರಸ್ತೆಯಾಗಿರೋದ್ರಿಂದ ವಾಹನಗಳು ನಿಂತಲ್ಲೇ ನಿಂತಿದ್ವು. ಕೂಡಲೇ ಸ್ಥಳಕ್ಕಾಗಮಿಸಿದ ಬಣಕಲ್ ಪೊಲೀಸರು ಸಂಚಾರ ಸುಗಮಗೊಳಿಸಿದ್ದಾರೆ.

    ಇಲ್ಲಿ ವರ್ಷಪೂರ್ತಿ ಮಳೆ ಸುರಿಯುತ್ತಿದ್ದು, ಸದಾ ನೀರು ಹರಿಯೋದರಿಂದ ವಾಹನಸವಾರರು ಯಾವಾಗ, ಏನಾಗುತ್ತೆ ಎಂದು ಆತಂಕದಲ್ಲಿ ಸಂಚರಿಸುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಮಂಗಳೂರಿನಿಂದ ಮರಳಿನ ಲಾರಿಗಳು ಎಗ್ಗಿಲ್ಲದೇ ಸಂಚರಿಸೋದರಿಂದ ಹೀಗೆ ಆಗ್ತಿದೆ. ಮೊನ್ನೆ ಸಂಜೆಯೂ ಬೆಟ್ಟ ಕುಸಿದಿದ್ದು, ನಿನ್ನೆ ಸಂಜೆಯೂ ಕುಸಿದಿದೆ. ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.