Tag: Charger

  • ಮೊಬೈಲ್ ಚಾರ್ಜರ್ ಕೊಡ್ಲಿಲ್ಲ ಎಂದು ನೇಣಿಗೆ ಶರಣಾದ ಯುವಕ

    ಮೊಬೈಲ್ ಚಾರ್ಜರ್ ಕೊಡ್ಲಿಲ್ಲ ಎಂದು ನೇಣಿಗೆ ಶರಣಾದ ಯುವಕ

    ತುಮಕೂರು: ಮೊಬೈಲ್ ಚಾರ್ಜರ್ (Mobile Charger) ಕೊಡಲಿಲ್ಲ ಎಂದು ಯುವಕ ನೇಣಿಗೆ ಶರಣಾದ ಘಟನೆ ತುಮಕೂರು (Tumakuru) ಜಿಲ್ಲೆಯ ಪಾವಗಡ (Pavagada) ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿ ಹಳ್ಳಿಯಲ್ಲಿ ನಡೆದಿದೆ.

    ನಿಖಿಲ್ (18) ನೇಣಿಗೆ ಶರಣಾದ ಯುವಕ. ಮೃತ ನಿಖಿಲ್ ಆಶಾ ಕಾರ್ಯಾಕರ್ತೆಯಾಗಿರುವ ವರಲಕ್ಷ್ಮಮ್ಮ ಎಂಬವರ ಪುತ್ರನಾಗಿದ್ದು, ಪಾವಗಡ ಪಟ್ಟಣದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ. ಇದನ್ನೂ ಓದಿ: ಬೀದರ್‌ನಲ್ಲಿ ಸ್ವಂತ ತಂದೆಯಿಂದಲೇ 12 ವಯಸ್ಸಿನ ಮಗಳ ಮೇಲೆ ನಿರಂತರ ಅತ್ಯಾಚಾರ

    ಘಟನೆಯ ಮೊದಲು ಯುವಕ ತಾಯಿಯ ಬಳಿ ನನಗೆ ಚಾರ್ಜರ್ ಕೊಡು ಎಂದಿದ್ದಾನೆ. ಈ ವೇಳೆ ತಾಯಿ ನನ್ನ ಹತ್ತಿರ ಮೊಬೈಲ್ ಚಾರ್ಜರ್ ಇಲ್ಲವೆಂದು ಹೇಳಿ ಅಲ್ಲೇ ಹತ್ತಿರದ ಮನೆಯೊಂದರಲ್ಲಿ ಹೂ ಕಟ್ಟಲು ಹೋಗಿದ್ದಾರೆ. ಇದನ್ನೂ ಓದಿ: ಉಡುಪಿ ಕೇಸಲ್ಲಿ ಸಂತ್ರಸ್ತೆ, ಆರೋಪಿಗಳ ವಿಚಾರಣೆ- ಪ್ರಕರಣಕ್ಕೆ ಕೇರಳ ಲಿಂಕ್ ಕೊಟ್ಟು ಬಿಜೆಪಿ ಪ್ರತಿಭಟನೆ

    ವಾಪಸ್ ಮನೆಗೆ ಬಂದು ಬಾಗಿಲು ಬಡಿದಾಗ ನಿಖಿಲ್ ಬಾಗಿಲು ತೆಗೆಯಲಿಲ್ಲ. ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವೈ.ಎನ್.ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗುಪ್ತಾಂಗಕ್ಕೆ ವಿಕೆಟ್‍ನಿಂದ ಚುಚ್ಚಿದ ಪತಿ- ಪತ್ನಿ ಸ್ಥಿತಿ ಗಂಭೀರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶೀಘ್ರವೇ ಭಾರತದ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಏಕರೂಪದ ಚಾರ್ಜರ್

    ಶೀಘ್ರವೇ ಭಾರತದ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಏಕರೂಪದ ಚಾರ್ಜರ್

    ನವದೆಹಲಿ: ದೇಶದಲ್ಲಿ ಇ-ತ್ಯಾಜ್ಯದ (E-Waste) ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸ್ಮಾರ್ಟ್ಫೋನ್‌ಗಳಿಗೂ (Smartphones) ಏಕರೂಪದ ಚಾರ್ಜರ್ (Charger) ಅನ್ನು ಕಡ್ಡಾಯಗೊಳಿಸಲು ಕೇಂದ್ರ ತೀರ್ಮಾನಿಸಿದೆ. ಶೀಘ್ರವೇ ಈ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸುವ ಸಾಧ್ಯತೆಯಿದೆ.

    ಕಳೆದ ಕೆಲವು ವಾರಗಳಲ್ಲಿ ಭಾರತ ಸರ್ಕಾರ ವ್ಯಾಪಕ ಸಮಾಲೋಚನೆಯನ್ನು ನಡೆಸಿ, ಎಲ್ಲಾ ಸ್ಮಾರ್ಟ್ಫೋನ್‌ಗಳಿಗೂ ಒಂದೇ ರೀತಿಯ ಚಾರ್ಜರ್ ಅನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ. ಈ ನೀತಿ ಜಾರಿಗೆ ಬಂದಲ್ಲಿ ಆಪಲ್ ಸೇರಿದಂತೆ ಎಲ್ಲಾ ಸ್ಮಾರ್ಟ್ಫೋನ್ ಕಂಪನಿಗಳು ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್‌ಗಳನ್ನೊಳಗೊಂಡ ಫೋನ್‌ಗಳನ್ನೇ ಉತ್ಪಾದಿಸಬೇಕಾಗುತ್ತದೆ.

    ಈ ನಿಯಮ ಕೇವಲ ಸ್ಮಾರ್ಟ್ಫೋನ್‌ಗಳಿಗೆ ಮಾತ್ರವಲ್ಲದೇ ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ. ಇದರಿಂದ ಗ್ರಾಹಕರು ಪ್ರತಿ ಬಾರಿ ಹೊಸ ಸಾಧನವನ್ನು ಖರೀದಿಸಿದಾಗ ಪ್ರತ್ಯೇಕ ಚಾರ್ಜರ್ ಅನ್ನು ಖರೀದಿಸುವ ಅವಶ್ಯಕತೆಯಿರುವುದಿಲ್ಲ. ಒಂದೇ ರೀತಿಯ ಚಾರ್ಜರ್ ಅನ್ನು ಯಾವುದೇ ಸಾಧನಗಳಿಗೂ ಬಳಸಬಹುದಾಗುತ್ತದೆ. ಇದನ್ನೂ ಓದಿ: ಮೆಟಾ ಇಂಡಿಯಾದ ಮುಖ್ಯಸ್ಥೆಯಾಗಿ ಸಂಧ್ಯಾ ದೇವನಾಥನ್ ನೇಮಕ

    ಈಗಾಗಲೇ ಯುರೋಪಿಯನ್ ಒಕ್ಕೂಟ ಎಲ್ಲಾ ಸ್ಮಾರ್ಟ್ಫೋನ್‌ಗಳಿಗೆ ಯುಎಸ್‌ಬಿ-ಸಿ (USB-C) ಚಾರ್ಜರ್ ಅನ್ನು ಕಡ್ಡಾಯಗೊಳಿಸಿದೆ. ಭಾರತದಲ್ಲೂ ಬಹುತೇಕ ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಗಳು ಯುಎಸ್‌ಬಿ-ಸಿ ಚಾರ್ಜರ್‌ನ ಫೋನ್‌ಗಳನ್ನೇ ತಯಾರಿಸುತ್ತಿವೆ. ಆದರೆ ಆಪಲ್ ಕಂಪನಿಯ ಐಫೋನ್‌ಗಳಲ್ಲಿ ಮಾತ್ರ ಲೈಟನಿಂಗ್ ಕೇಬಲ್ ಅನ್ನು ಬಳಸಲಾಗುತ್ತಿದೆ.

     

    ಭಾರತ ವಿಶ್ವದ 2ನೇ ಅತಿ ದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವ ಕಾರಣ ದೇಶದಲ್ಲಿ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಇ-ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನು ಇರಿಸಲು ಸಜ್ಜಾಗುತ್ತಿದೆ. ಈಗಾಗಲೇ ಯುರೋಪಿಯನ್ ಯೂನಿಯನ್ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್‌ಬಿ-ಸಿ ಪೋರ್ಟ್ ಕಡ್ಡಾಯ ಮಾಡಿದ್ದು, 2024ರಲ್ಲಿ ಜಾರಿಗೆ ಬರಲಿದೆ. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗೆ ಇನ್ಮುಂದೆ ಒಂದೇ ಚಾರ್ಜರ್‌?

    ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗೆ ಇನ್ಮುಂದೆ ಒಂದೇ ಚಾರ್ಜರ್‌?

    ನವದೆಹಲಿ: ಸರ್ಕಾರದ ನಿರ್ಧಾರಕ್ಕೆ ಕಂಪನಿಗಳು ಒಪ್ಪಿಗೆ ನೀಡಿದರೆ ಭಾರತದಲ್ಲೂ ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳಲ್ಲಿ ಇನ್ನು ಮುಂದೆ ಒಂದೇ ರೀತಿಯ ಚಾರ್ಜರ್‌ ಅನ್ನು ಬಳಕೆ ಮಾಡಬಹುದು.

    ಹೌದು. ಲ್ಯಾಪ್‌ಟ್ಯಾಪ್‌, ಮೊಬೈಲ್‌, ಟ್ಯಾಬ್ಲೆಟ್‌ಗಳಿಗೆ ಒಂದೇ ರೀತಿಯ ಚಾರ್ಜರ್‌ ಪೋರ್ಟ್‌ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ  ಚಿಂತನೆ ನಡೆಸಿದೆ. ಈ ಸಂಬಂಧ ಆ.17 ರಂದು ಗ್ರಾಹಕ ಸಚಿವಾಲಯ ಮೊಬೈಲ್‌ ತಯಾರಕಾ ಕಂಪನಿಗಳ ಜೊತೆ ಸಭೆ ನಡೆಸಲು ಮುಂದಾಗಿದೆ.

    ಫೀಚರ್‌ ಫೋನ್‌ಗಳಿಗೆ ಮಾತ್ರ ಪ್ರತ್ಯೇಕ ಚಾರ್ಜಿಂಗ್‌ ಹೊರತುಪಡಿಸಿ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌, ಲ್ಯಾಪ್‌ಟಾಪ್‌, ಇಯರ್‌ ಬಡ್‌ ನಂತಹ ಸಾಧನಗಳಿಗೆ ಒಂದೇ ರೀತಿಯ ಚಾರ್ಜಿಂಗ್‌ ಪೋರ್ಟ್‌ ನೀಡುವುದು ಸರ್ಕಾರ ಉದ್ದೇಶ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್‌ ಬ್ಯಾನ್‌? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?

    ಭಾರತ ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್‌ ಮಾರುಕಟ್ಟೆಯಾಗಿರುವ ಕಾರಣ ದೇಶದಲ್ಲಿ ಇ-ತ್ಯಾಜ್ಯಗಳ ಪ್ರಮಾಣ ಹೆಚ್ಚಾಗುತ್ತಿದೆ. ಇ -ತ್ಯಾಜ್ಯಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ಹೆಜ್ಜೆಯನ್ನು ಇರಿಸಿದೆ.

    ಈಗಾಗಲೇ ಯುರೋಪಿಯನ್‌ ಯೂನಿಯನ್‌ ಸಣ್ಣ ಎಲೆಕ್ಟ್ರಾನಿಕ್‌ ಸಾಧನಗಳಿಗೆ ಯುಎಸ್‌ಬಿ-ಸಿ ಪೋರ್ಟ್‌ ಕಡ್ಡಾಯ ಮಾಡಿದ್ದು 2024ರಲ್ಲಿ ಜಾರಿಗೆ ಬರಲಿದೆ. ಅದೇ ರೀತಿಯ ಬೇಡಿಕೆ ಈಗ ಅಮೆರಿಕದಲ್ಲೂ ವ್ಯಕ್ತವಾಗುತ್ತಿದೆ.

     

    ಅಮೆರಿಕ ಮತ್ತು ಯುರೋಪ್‌ನಲ್ಲಿ ಕಂಪನಿಗಳು ಒಂದೇ ರೀತಿಯ ಚಾರ್ಜಿಂಂಗ್‌ ಪೋರ್ಟ್‌ ನೀಡಲು ಸಾಧ್ಯವಾದರೆ ಭಾರತದಲ್ಲಿ ಯಾಕೆ ಸಾಧ್ಯವಿಲ್ಲ?. ಭಾರತ ಈಗಲೇ ಈ ಬದಲಾವಣೆ ಮಾಡದೇ ಇದ್ದಲ್ಲಿ ಆ ಉತ್ಪನ್ನಗಳು ನಮ್ಮ ದೇಶಕ್ಕೆ ಬರುವ ಸಾಧ್ಯತೆಯಿದೆ ಎಂದು ಗ್ರಾಹಕ ಸಚಿವಾಲಯದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    2009ರಲ್ಲಿ 30ಕ್ಕೂ ಹೆಚ್ಚು ಮಾದರಿಯ ಚಾರ್ಜರ್‌ಗಳು ಬಳಕೆಯಲ್ಲಿದ್ದವು. ಆದರೆ ಈಗ ಕಂಪನಿಗಳು ಯುಎಸ್‍ಬಿ ಸಿ, ಲೈಟ್ನಿಂಗ್ ಮತ್ತು ಯುಎಸ್‍ಬಿ ಮೈಕ್ರೋ-ಬಿ ಚಾರ್ಜರ್ ಗಳನ್ನು ನೀಡುತ್ತಿವೆ. ವೈರ್‌ಲೆಸ್‌ ಚಾರ್ಜರ್‌ಗಳಿಗೆ ಯಾವುದೇ ಸಮಸ್ಯೆ ಇಲ್ಲ.



    ಆಂಡ್ರಾಯ್ಡ್ ಫೋನುಗಳ ಪೈಕಿ ಕೆಲವು ಈಗ ಯುಎಸ್‍ಬಿ ಮೈಕ್ರೋ ಬಿ ಪೋರ್ಟ್ ನಲ್ಲಿ ಬಿಡುಗಡೆಯಾಗಿದ್ದರೆ, ಕೆಲವು ಕಂಪನಿಗಳು ಯುಎಸ್‍ಬಿ ಟೈಪ್ ಸಿ ಪೋರ್ಟ್‌ನಲ್ಲಿ ಫೋನುಗಳನ್ನು ಬಿಡುಗಡೆ ಮಾಡುತ್ತಿವೆ. ಯುರೋಪಿಯನ್‌ ಒಕ್ಕೂಟದ ತೀರ್ಮಾನಕ್ಕೆ ಆಪಲ್‌ ಕಂಪನಿ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಇದು ಆವಿಷ್ಕಾರಕ್ಕೆ ಹಿನ್ನಡೆಯಾಗುತ್ತದೆ ಎಂದು ಹೇಳಿತ್ತು.

    ಯುಎಸ್‍ಬಿ-ಸಿ ಮಾದರಿಯ ಚಾರ್ಜಿಂಗ್ ಪೋರ್ಟ್ ಹೊರತು ಪಡಿಸಿ ಬೇರೆ ಯಾವುದೇ ಪೋರ್ಟ್ ಇರುವ ಫೋನುಗಳನ್ನು 2024ರ ನಂತರ ಯುರೋಪಿಯನ್‌ ಒಕ್ಕೂಟ ದೇಶಗಳಲ್ಲಿ ಮಾರಾಟ ಮಾಡಿದರೆ ಅದನ್ನು ಅಕ್ರಮ ಮಾರಾಟ ಎಂದು ಪರಿಗಣಿಸಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

    ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಎಲ್ಲದಕ್ಕೂ ಇನ್ಮುಂದೆ ಒಂದೇ ಚಾರ್ಜರ್!

    ಲಂಡನ್: ಇಲ್ಲಿಯವರೆಗೆ ಹೆಚ್ಚಾಗಿ ಬಳಸುವ ಗ್ಯಾಜೆಟ್‌ಗಳಲ್ಲಿ ಬೇರೆ ಬೇರೆ ರೀತಿಯ ಚಾರ್ಜಿಂಗ್ ಪೋರ್ಟ್‌ಗಳು ಕಾಣಸಿಗುತ್ತಿದ್ದವು. ಅದಕ್ಕೆ ಸರಿ ಹೊಂದುವಂತಹ ಬೇರೆ ಬೇರೆ ಚಾರ್ಜಿಂಗ್ ಕೇಬಲ್‌ಗಳನ್ನು ಯಾವಾಗಲೂ ಇಟ್ಟುಕೊಳ್ಳುವ ಅಗತ್ಯವೂ ಇತ್ತು. ಆದರೆ ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಹೀಗೆ ಮೊದಲಾದ ಗ್ಯಾಜೆಟ್‌ಗಳಲ್ಲೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಇರಲಿದೆ. ಬೇರೆ ಬೇರೆ ರೀತಿಯ ಚಾರ್ಜಿಂಗ್ ಕೇಬಲ್‌ಗಳ ರಾಶಿ ಇಟ್ಟುಕೊಳ್ಳುವ ಅಗತ್ಯ ಬೀಳುವುದಿಲ್ಲ.

    ಹೌದು, ಎಲ್ಲಾ ರೀತಿಯ ಗ್ಯಾಜೆಟ್‌ಗಳಿಗೂ ಒಂದೇ ರೀತಿಯ ಚಾರ್ಜಿಂಗ್ ಪೋರ್ಟ್ ಅನ್ನು ಕಡ್ಡಾಯಗೊಳಿಸಲು ಯುರೋಪಿಯನ್ ಯೂನಿಯನ್(ಇಯು) ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡಿವೆ. ಇದರ ಪರಿಣಾಮವಾಗಿ ಇನ್ನು ಮುಂದೆ ತಯಾರಾಗಲಿರುವ ಎಲ್ಲಾ ರೀತಿಯ ಗ್ಯಾಜೆಟ್‌ಗಳಲ್ಲೂ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಇರಲಿದೆ. ಇದನ್ನೂ ಓದಿ: ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ಇಲ್ಲಿಯವರೆಗೆ ಬಿಡುಗಡೆಯಾಗಿರುವ ಗ್ಯಾಜೆಟ್‌ಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಆದರೆ 2024ರ ಒಳಗಾಗಿ ಬಹುತೇಕ ಎಲ್ಲಾ ರೀತಿಯ ಸಾಧನಗಳಲ್ಲೂ ಟೈಪ್ ಸಿ ಪೋರ್ಟ್ ನೋಡಲು ಸಿಗಲಿದೆ. ಮುಖ್ಯವಾಗಿ ತನ್ನದೇ ಪ್ರತ್ಯೇಕ ಚಾರ್ಜಿಂಗ್ ಪೋರ್ಟ್ ರಚಿಸುವ ಆಪಲ್‌ಗೂ ಈ ನೀತಿ ಅನ್ವಯಿಸುವುದು ವಿಶೇಷ.

    ನಿಯಮ ಯಾಕೆ?
    ಒಂದೊಂದು ಸಾಧನಗಳಿಗೆ ಒಂದೊಂದು ಚಾರ್ಜಿಂಗ್ ಕೇಬಲ್‌ಗಳು ಇರುವುದರಿಂದ ಹಾಳಾದ ಬಳಿಕ ಹೆಚ್ಚು ಹೆಚ್ಚು ಎಲೆಕ್ಟ್ರಾನಿಕ್ ತ್ಯಾಜವಾಗಿ(ಇ-ತ್ಯಾಜ್ಯ) ಪರಿಸರಕ್ಕೆ ಭಾರೀ ಹಾನಿ ಉಂಟುಮಾಡುತ್ತದೆ. ಎಲ್ಲಾ ಸಾಧನಗಳಿಗೂ ಒಂದೇ ರೀತಿಯ ಕೇಬಲ್ ಅನ್ನು ಬಳಕೆ ಮಾಡಲು ಪ್ರಾರಂಭಿಸಿದ್ದಲ್ಲಿ, ಇ-ತ್ಯಾಜ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ಸಾಧ್ಯವಿದೆ. ಹೀಗಾಗಿ ಇಯು ಇದೀಗ ಪರಿಸರ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಿದೆ. ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿದವರು ಷಂಡರು: ಯಶ್‌ಪಾಲ್ ಸುವರ್ಣ

    ಈ ಹೊಸ ನಿಯಮ ಜಾಗತಿಕ ಸ್ಮಾರ್ಟ್ ಫೋನ್ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸದ್ಯ ಐಫೋನ್ ಹೊರತುಪಡಿಸಿ ಬಹುತೇಕ ದೈತ್ಯ ಸ್ಮಾರ್ಟ್ ಫೋನ್ ಕಂಪನಿಗಳು ಟೈಪ್ ಸಿ ಪೋರ್ಟ್ ಹೊಂದಿರುವ ಮೊಬೈಲ್‌ಗಳನ್ನೇ ತಯಾರಿಕೆ ಮಾಡುತ್ತವೆ. ಆದರೂ ಆಪಲ್ ಕಂಪನಿ ಈಗಾಗಲೇ ತನ್ನ ಕೆಲವು ಐಪ್ಯಾಡ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಟೈಪ್ ಸಿ ಪೋರ್ಟ್‌ಗಳನ್ನೇ ತಯಾರಿಸುತ್ತಿವೆ.

  • ಒಂದೇ ಚಾರ್ಜರ್ ಎರಡು ಮೊಬೈಲ್- ಚಾರ್ಜ್‍ಗಾಗಿ ಬಡಿದಾಟ, ಕೊಲೆ

    ಒಂದೇ ಚಾರ್ಜರ್ ಎರಡು ಮೊಬೈಲ್- ಚಾರ್ಜ್‍ಗಾಗಿ ಬಡಿದಾಟ, ಕೊಲೆ

    ಬೆಂಗಳೂರು: ಮೊಬೈಲ್ ಚಾರ್ಜ್ ಹಾಕುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದ್ದು, ಯುವಕನ ಕೊಲೆ ಮಾಡಿರುವ ಘಟನೆ ರಾಜಾಜಿನಗರದಲ್ಲಿ ನಡೆದಿದೆ.

    ಕೂಲಿ ಕೆಲಸ ಮಾಡುತ್ತಿದ್ದ ಅನಿಲ್ ನನ್ನು ಆಕಾಶ್ ಕೊಲೆ ಮಾಡಿದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ ಯುವಕರ ಮಧ್ಯೆ ಈ ಗಲಾಟೆ ನಡೆದಿದೆ. ಮೃತ ಅನಿಲ್ ಹಾಗೂ ಅರೋಪಿ ಆಕಾಶ್ ಇಬ್ಬರೂ ಮಧ್ಯಪ್ರದೇಶದವರಾಗಿದ್ದು, ಇಬ್ಬರೂ ಮೊಬೈಲ್ ಚಾರ್ಜ್ ಹಾಕೋಕೆ ಒಂದೇ ಸ್ವಿಚ್ ಬಳಕೆ ಮಾಡುತ್ತಿದ್ದರು. ಈ ವೇಳೆ ಚಾರ್ಜ್ ಹಾಕುವ ಸಂಬಂಧ ಜಗಳ ಮಾಡಿಕೊಂಡಿದ್ದಾರೆ.

    ಜಗಳ ವಿಕೋಪಕ್ಕೆ ತಿರುಗಿದ್ದು, ಆಕಾಶ್, ಅನಿಲ್ ನನ್ನು ಕೋಲಿನಿಂದ ಹೊಡೆದಿದ್ದಾನೆ. ಇಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ಬಳಿಕ ಅನಿಲ್‍ಗೆ ಗಂಭೀರಗಾಯಗಳಾಗಿವೆ. ಆಸ್ಪತ್ರೆಗೆ ಕರೆದೊಯ್ಯುವಾಗ ಯುವಕ ಸಾವನಪ್ಪಿದ್ದಾನೆ. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.