Tag: charge sheet

  • ರಾ..ರಾ. ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಆರೋಪಿ

    ರಾ..ರಾ. ರಕ್ಕಮ್ಮ ಬೆಡಗಿ ಜಾಕ್ವೆಲಿನ್ ಇದೀಗ 215 ಕೋಟಿ ಹಣದ ಪ್ರಕರಣದಲ್ಲಿ ಆರೋಪಿ

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ‘ರಾ ರಾ ರಕಮ್ಮ’ ಹಾಡಿಗೆ ಸಖತ್ ಆಗಿ ಸ್ಟೆಪ್ ಹಾಕಿ ಕೋಟಿ ಹೃದಯ ಕದ್ದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೀಗ ಕೋರ್ಟ್ ಮೆಟ್ಟಿಲು ಹತ್ತುವಂತಾಗಿದೆ. ಬರೋಬ್ಬರಿ 215 ಕೋಟಿ ರೂಪಾಯಿ ಹಣ ವಸೂಲಿ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇವರನ್ನು ಆರೋಪಿಯನ್ನಾಗಿ ಇಡಿ ಅಧಿಕಾರಿಗಳು ಇಂದು ದೆಹಲಿ ಇಡಿ ವಿಶೇಷ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸುತ್ತಿದ್ದಾರೆ.

    ಬೆಂಗಳೂರು ಮೂಲದ ಸುಖೇಶ್ ಚಂದ್ರಶೇಖರ್ ಗೂ ಮತ್ತು ಜಾಕ್ವೆಲಿನ್ ಇಬ್ಬರೂ ಸ್ನೇಹಿತರು ಎಂದು ಹೇಳಲಾಗುತ್ತಿದ್ದು, ಈ ಸುಖೇಶ್ ಬರೋಬ್ಬರಿ 215 ಕೋಟಿ ರೂಪಾಯಿಯನ್ನು ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಜೈಲಿನಲ್ಲಿರುವ ಖೈದಿಯೊಬ್ಬರನ್ನು ಬಿಡುಗಡೆ ಮಾಡಿಸಲು ಈ ಪ್ರಮಾಣದ ಹಣವನ್ನು ಉದ್ಯಮಿಯ ಪತ್ನಿಗೆ ಕೇಳಿದ್ದರು. ನಂಬಿಸಿ ವಸೂಲಿ ಕೂಡ ಮಾಡಿದ್ದರು. ಆನಂತರ ಉದ್ಯಮಿ ಪತ್ನಿಗೆ ಇದು ಮೋಸ ಎಂದು ಗೊತ್ತಾಗಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ:ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    215 ಕೋಟಿ ಹಣದಲ್ಲಿ ಸುಖೇಶ್, ಬಾಲಿವುಡ್ ನಟಿ ಜಾಕ್ವೆಲಿನ್ ಗೆ ದುಬಾರಿ ಕಾರು, ಡೈಮೆಂಡ್, ವಾಚ್, ಬ್ಯಾಗ್ ಗಳು ಮತ್ತು ದುಬಾರಿ ಕುದುರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು ಎನ್ನುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಇಡಿ ತನಿಖೆ ಆರಂಭಿಸಿತ್ತು. ಇದೀಗ ಅದು ನಿಜವಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಾಗುತ್ತಿದೆ. ಹಾಗಾಗಿ ಜಾರಿ ನಿರ್ದೇಶನಾಲಯವು ಕೋರ್ಟ್ ಗೆ ಜಾಕ್ವೆಲಿನ್ ಹೆಸರೂ ಸೇರಿಸಿದ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸುಖೇಶ್ ಮಾಡಿದ ತಪ್ಪಿಗೆ ಇದೀಗ ಈ ನಟಿ ಕೋರ್ಟ್ ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಎಲ್ಲೇ ಹೋದರೂ ಎಲ್ಲರ ಗಮನ ನಮ್ಮ ಮೇಲಿರಬೇಕು – ಫೇಮಸ್‌ ಆಗಲು ಟಿಕಾಯತ್‌ಗೆ ಮಸಿ

    ಎಲ್ಲೇ ಹೋದರೂ ಎಲ್ಲರ ಗಮನ ನಮ್ಮ ಮೇಲಿರಬೇಕು – ಫೇಮಸ್‌ ಆಗಲು ಟಿಕಾಯತ್‌ಗೆ ಮಸಿ

    – ಟಿಕಾಯತ್‌ ಮೇಲೆ ಮಸಿ ಬಳಿದ ಪ್ರಕರಣ
    – ಪೊಲೀಸರಿಂದ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಮಾಡಿ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೈಗ್ರೌಂಡ್ಸ್‌ ಠಾಣೆಯ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

    60 ದಿನದಲ್ಲೇ ಪ್ರಕರಣ ಸಂಬಂಧ 450 ಪುಟಗಳ ಪ್ರಾಥಮಿಕ ಚಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ. ಘಟನೆ ಸಂಬಂಧ 20 ಮಂದಿ ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಚಾರ್ಜ್‌ಶೀಟ್‌ ಸಲ್ಲಿಕೆ ಬೆನ್ನಲ್ಲೇ ಇಬ್ಬರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.

    ಮಸಿ ಬಳಿಯಲು ವಾರದಿಂದ ಪೋನಿನಲ್ಲಿ ನಡೆಸಿದ ಸಂಭಾಷಣೆ, ಟೆಕ್ನಿಕಲ್ ದಾಖಲೆ, ಸಿಸಿಟಿವಿ ವಿಡಿಯೋ ವಿವರಗಳನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

    ಚಾರ್ಜ್‌ಶೀಟ್‌ನಲ್ಲಿ ಏನಿದೆ?
    ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಫೇಮಸ್‌ ಆಗಬೇಕು, ಕೇಂದ್ರದ ಪ್ರಮುಖ ನಾಯಕರು ಗುರುತಿಸಬೇಕೆಂದು ಆರೋಪಿಗಳು ಮಸಿ ಬಳಿದಿದ್ದಾರೆ. ಕರ್ನಾಟಕದಲ್ಲಿ ಜನಪ್ರಿಯರಾಗಬೇಕು, ಎಲ್ಲೇ ಹೋದರೂ ನಮ್ಮ ಕಡೆಯೇ ಎಲ್ಲರ ಗಮನ ಇರಬೇಕು ಎಂಬ ಆಶಯವನ್ನು ಹೊಂದಿದ್ದರು. ಇದನ್ನೂ ಓದಿ: ಟಿಕಾಯತ್‌ಗೆ ಮಸಿː ಒಳಗಡೆ ಮೋದಿಗೆ ಜೈ ಜೈ, ಹೊರಗಡೆ ಡೌನ್‌ ಡೌನ್‌ ಅಂದ್ರು

    ರಾಕೇಶ್ ಟಿಕಾಯತ್ ಅವರು ಮೇ 29 ರಂದು ಬೆಂಗಳೂರಿಗೆ ಬಂದ ದಿನವೇ ಮೊಟ್ಟೆ, ಕೊಳೆತ ಟೊಮೆಟೊ ಎಸೆಯಲು ಪ್ಲಾನ್‌ ಮಾಡಿದ್ದರು. ಆದರೆ ಈ ಪ್ಲ್ಯಾನ್‌ ಸಾಧ್ಯವಾಗದ ಹಿನ್ನೆಲೆಯಲ್ಲಿ ಗಾಂಧಿಭವನ ಬಳಿಯೂ ಮೊಟ್ಟೆಯನ್ನು ತೆಗೆದುಕೊಂಡು ಹೋಗಿದ್ದರು. ಆದರೆ ಪೊಲೀಸ್‌ ಭದ್ರತೆ ಹಿನ್ನೆಲೆಯಲ್ಲಿ ಸ್ಟೇಜ್‌ಗೆ ಬಾಟಲಿಯಲ್ಲಿ ಮಸಿ ತೆಗೆದುಕೊಂಡು ಹೋಗಿದ್ದರು.

    ಆರೋಪಿಗಳು ಟಿಕಾಯತ್ ಮೇಲೆ ಹಲ್ಲೆ ಮಾಡುವ ಯೋಚನೆ ಇರಲಿಲ್ಲ. ಆದರೆ ಶಿವಕುಮಾರ್ ಉದ್ರೇಕಗೊಳಗಾಗಿ ಲೋಗೊದಿಂದಲೇ ಹಲ್ಲೆ ಮಾಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ.


    ಏನಿದು ಪ್ರಕರಣ?
    ಕೋಡಿಹಳ್ಳಿ‌ ಚಂದ್ರಶೇಖರ್‌ ಅವರ ಮೇಲಿನ ಭ್ರಷ್ಟಾಚಾರ ಆರೋಪದ ಬಗ್ಗೆ ಗಾಂಧಿ ಭವನದಲ್ಲಿ ಮೇ 30 ರಂದು ಸಭೆ ಕರೆಯಲಾಗಿತ್ತು. ರಾಕೇಶ್ ಸಿಂಗ್ ಟಿಕಾಯತ್, ಯುದ್ದವೀರ ಸಿಂಗ್ , ಪ್ರೊಫೆಸರ್ ರವಿ ವರ್ಮಕುಮಾರ್, ಚುಕ್ಕಿ ನಂಜುಂಡಸ್ವಾಮಿ ಅವರು ವೇದಿಕೆಯಲ್ಲಿದ್ದರು.

    ಈ ವೇಳೆ ಏಕಾಏಕಿ ನುಗ್ಗಿದ ಗ್ಯಾಂಗ್‌ ಟಿಕಾಯತ್ ಮುಖಕ್ಕೆ ಮಸಿ ಬಳಿದು ಮೋದಿ ಮೋದಿ, ನಕಲಿ ಹೋರಾಟಗಾರರಿಗೆ ಧಿಕ್ಕಾರ ಎಂದು‌ ಘೋಷಣೆ ಕೂಗಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಮಾರಾಮಾರಿ ನಡೆದಿದ್ದು ಅಲ್ಲಿದ್ದ ವ್ಯಕ್ತಿಗಳು ಇವರನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಶೆಟ್ಟಿ, ದಿಲೀಪ್ ಹಾಗೂ ಶಿವಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿಗೆ ಯಾರಿಂದ ತೊಂದರೆ ಇದ್ಯೋ ಅವರ ನಿರ್ನಾಮಕ್ಕೆ ಯತ್ನ: ಡಿಕೆಶಿ

    ಬಿಜೆಪಿಗೆ ಯಾರಿಂದ ತೊಂದರೆ ಇದ್ಯೋ ಅವರ ನಿರ್ನಾಮಕ್ಕೆ ಯತ್ನ: ಡಿಕೆಶಿ

    ಬೆಂಗಳೂರು: ಬಿಜೆಪಿಗೆ ಯಾರಿಂದ ತೊಂದರೆಯಾಗುತ್ತಿದೆ, ಅಂತಹವರನ್ನು ನಿರ್ನಾಮ ಮಾಡುವ ಕೆಲಸ ನಡೆಯುತ್ತಿದೆ. ಒಂದೋ ಅವರೊಂದಿಗೆ ಹೋಗಬೇಕು ಇಲ್ಲವೇ ಅವರಿಗೆ ಶರಣಾಗಬೇಕು. ಚಾರ್ಜ್ ಶೀಟ್‌ನಿಂದ ಹೊಸದಾಗಿ ಏನೂ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.

    ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಅವರು ನ್ಯಾಯ, ನೀತಿ, ಸತ್ಯ, ಧರ್ಮ, ಕಾನೂನು ಎಲ್ಲದರಲ್ಲೂ ನನಗೆ ನಂಬಿಕೆ ಇದೆ. ನಾನು ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ. ನಾನು ಇದನ್ನು ಎದುರಿಸುತ್ತೇನೆ ಎಂದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ಚಾರ್ಜ್ ಶೀಟ್ ಫೈಲ್ ಮಾಡಿರುವ ಬಗ್ಗೆ ನನಗೆ ಮಾಧ್ಯಮದಿಂದ ತಿಳಿಯಿತು. ನನಗೆ ಅದರ ಕಾಪಿ ಇನ್ನೂ ಸಿಕ್ಕಿಲ್ಲ. ಸಾಮಾನ್ಯವಾಗಿ 6 ತಿಂಗಳಲ್ಲಿ ಚಾರ್ಜ್ ಶೀಟ್ ಫೈಲ್ ಮಾಡುತ್ತಾರೆ. ನನ್ನ ಮೇಲೆ ಬಹಳ ದೊಡ್ಡ ತನಿಖೆ ನಡೆದಿದೆ. ಆದರೆ ಅವರು ಹೊಸದಾಗಿ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ. ನನಗೆ ಅದರ ಕಾಪಿ ಬರಲಿ. ಸತ್ಯ, ಧರ್ಮ, ಕಾನೂನು ಇರುವ ದೇಶದಲ್ಲಿ ಇದನ್ನೆಲ್ಲಾ ಎದುರಿಸುತ್ತೇನೆ ಎಂದರು. ಇದನ್ನೂ ಓದಿ: ಬಿಜೆಪಿ ಸರ್ಕಾರಕ್ಕೆ 9 ತಿಂಗಳಷ್ಟೇ ಆಯಸ್ಸು: ಸಿಎಂ ಇಬ್ರಾಹಿಂ

    ನಾನೇನೂ ತಪ್ಪು ಮಾಡಿಲ್ಲ ಎನ್ನುವುದು ರಾಜ್ಯಕ್ಕೆ, ದೇಶಕ್ಕೆ ಗೊತ್ತಿದೆ. ಆದರೆ ಬಿಜೆಪಿಯವರು ನನ್ನ ಮೇಲೆ ರಾಜಕೀಯದ ಎಲ್ಲಾ ಅಸ್ತ್ರಗಳನ್ನೂ ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದರು.

  • ಇಡಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ನಾವು ಹೆದರುವುದಿಲ್ಲ: ಡಿ.ಕೆ.ಸುರೇಶ್

    ಇಡಿ ಚಾರ್ಜ್‌ಶೀಟ್‌ ಸಲ್ಲಿಕೆಗೆ ನಾವು ಹೆದರುವುದಿಲ್ಲ: ಡಿ.ಕೆ.ಸುರೇಶ್

    ಬೆಂಗಳೂರು: ಚಾರ್ಜ್‌ಶೀಟ್‌ ಸಲ್ಲಿಕೆಗೆ ನಾವು ಹೆದರುವ ಅಗತ್ಯವಿಲ್ಲ. ಚಾರ್ಜ್ ಶೀಟ್ ಸಲ್ಲಿಕೆ ಒಂದು ಕಾನೂನು ಪ್ರಕ್ರಿಯೆಯಷ್ಟೇ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

    ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಇಡಿ ಚಾರ್ಜ್‌ಶೀಟ್‌ ಸಲ್ಲಿಸಿದೆ. ಈ ಕುರಿತಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್ ಅವರು, ಚಾರ್ಜ್‌ಶೀಟ್‌ ಸಲ್ಲಿಕೆಗೆ ನಾವು ಹೆದರುವ ಅಗತ್ಯವಿಲ್ಲ. ಚಾರ್ಜ್‌ಶೀಟ್‌ ಸಲ್ಲಿಕೆ ಒಂದು ಕಾನೂನು ಪ್ರಕ್ರಿಯೆ. ಚಾರ್ಜ್‌ಶೀಟ್‌ನಲ್ಲಿ ಏನಿದೆ ಅಂತಾ ನಮಗೂ ಗೊತ್ತಿಲ್ಲ. ನಿಮಗೂ ಗೊತ್ತಿಲ್ಲ. ನಮ್ಮ ವಕೀಲರ ಜೊತೆ ಚರ್ಚಿಸುತ್ತೇವೆ. ಚಾರ್ಜ್‌ಶೀಟ್‌ ಕಾಪಿ ನಾಳೆ ಅಥವಾ ಸೋಮವಾರ ಸಿಗಬಹುದು. ಸಿಕ್ಕ ನಂತರ ನಮ್ಮ ಕಾನೂನು ಹೋರಾಟ ಏನು ಎನ್ನುವುದನ್ನು ನಿರ್ಧರಿಸುತ್ತೇವೆ ಎಂದರು.

    ರಾಜಕೀಯ ಪ್ರೇರಿತವಾಗಿ ನಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ನಡೆಯುತ್ತಿರುತ್ತದೆ. ನಾವು ಹೆದರುವ ಪ್ರಶ್ನೆಯೇ ಇಲ್ಲ. ಏನೇ ಷಡ್ಯಂತ್ರ ಮಾಡಿದರೂ ನಾವು ಹೆದರಲ್ಲ. ನಾವು ಮಾನಸಿಕವಾಗಿ, ದೈಹಿಕವಾಗಿ ಎಲ್ಲ ರೀತಿಯಲ್ಲಿ ಪ್ರಕರಣ ಎದುರಿಸಲು ಸಿದ್ಧರಾಗಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಸ್ವಾಯತ್ತ ಸಂಸ್ಥೆಗಳು ಕೈಕಟ್ಟಿ ಕುಳಿತಿವೆ. ಐಟಿ, ಸಿಬಿಐ, ಇಡಿ ಮಾಧ್ಯಮಗಳು ತಮ್ಮ ಸ್ವಂತ ಇಚ್ಛಾಶಕ್ತಿಯಿಂದ ಕೆಲಸ ಮಾಡುತ್ತಿಲ್ಲ. ನ್ಯಾಯಾಲಗಳ ಮೇಲೂ ಒತ್ತಡವಿದೆ. ವಿರೋಧ ಪಕ್ಷವಾಗಿ ನಾವು ಇವರಿಂದ ನ್ಯಾಯ ನಿರೀಕ್ಷೆ ಮಾಡಲು ಸಾಧ್ಯವಾಗುತ್ತಾ? ಏನು ಚಾರ್ಜ್‌ಶೀಟ್‌ ಹಾಕಿದ್ದಾರೆ, ಅದರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಬಿಜೆಪಿಯ ಏನೇ ತಂತ್ರ, ಒಳಸಂಚು ಮಾಡಿದರೂ ನಾವು ಅದರ ವಿರುದ್ಧ ಸಂಪೂರ್ಣ ಹೋರಾಟ ಮಾಡುತ್ತೇವೆ. ಏನೋ ಆಗಿಬಿಡುತ್ತದೆ ಅಂತಾ ನಾವು ಹೆದರಿಕೊಂಡಿಲ್ಲ. ವಿಚಾರಣೆ 4 ವರ್ಷದಿಂದ ನಡೆಯುತ್ತಿದೆ ಇನ್ನು ನಡೆಯಲಿ ಎಂದು ಹೇಳಿದರು.

    ಬಂಧನವಾದ 180 ದಿನದಲ್ಲಿ ಅಂದರೆ 6 ತಿಂಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಆಗಬೇಕಿತ್ತು. ಆದರೆ 2-3 ವರ್ಷದ ನಂತರ ಸಲ್ಲಿಕೆ ಮಾಡಿದ್ದಾರೆ. ಶರ್ಮಾ, ಸಚಿನ್ ನಾರಾಯಣ್, ಡಿಕೆಶಿ ನಿವಾಸದಲ್ಲಿ ಸಿಕ್ಕ ಹಣದ ಮೇಲೆ ಕೇಸು ನಡೆಯುತ್ತಿತ್ತು. ಚಾರ್ಜ್ ಶೀಟ್ ನಲ್ಲಿ ಏನಿದೆ ನೋಡಿ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಶಾಲಾ ಬಸ್ ಹರಿದು ಬಾಲಕಿ ಸಾವು

  • ಐಸಿಸ್‌ಗೆ ಉಗ್ರರ ಸೇರ್ಪಡೆ – ರಾಜ್ಯದ ಮೂವರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ

    ಐಸಿಸ್‌ಗೆ ಉಗ್ರರ ಸೇರ್ಪಡೆ – ರಾಜ್ಯದ ಮೂವರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ಐಸಿಸ್ ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ರಾಜ್ಯದ ಮೂವರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ.

    ವಿಶೇಷ ಕೋರ್ಟ್‌ಗೆ ಬೆಂಗಳೂರಿನ ಮೊಹಮ್ಮದ್ ತೌಕಿರ್, ಜೊಹೈಬ್ ಮನ್ನಾ ಮತ್ತು ಭಟ್ಕಳದ ಮೊಹಮ್ಮದ್ ಶಿಹಾಬ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ: ಜಾನುವಾರು ರಕ್ಷಣೆ ವೇಳೆ ಪೊಲೀಸರಿಗೆ ಬುರ್ಕಾಧಾರಿ ಮಹಿಳೆಯರಿಂದ ಅಡ್ಡಿ

    BRIBE

    ಆರೋಪ ಏನು?
    ತೌಕಿರ್‌ ಮತ್ತು ಮನ್ನಾ ಕುರಾನ್ ಸರ್ಕಲ್ ಗುಂಪಿನ ಮೂಲಕ ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರಿಸುತ್ತಿದ್ದರು. ಸಿರಿಯಾದಂತಹ ಐಸಿಸ್ ಪ್ರದೇಶಗಳಿಗೆ ಬೆಂಗಳೂರು ಮತ್ತು ಕರ್ನಾಟಕದಿಂದ ಮುಸ್ಲಿಂ ಯುವಕರನ್ನು ಕಳುಹಿಸುತ್ತಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಹನುಮಜಯಂತಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರ

    ಈ ಮೂವರು ಉಗ್ರರಿಗಾಗಿ ಹಣವನ್ನು ಸಂಗ್ರಹಿಸುತ್ತಿದ್ದರು. ಮಹಮ್ಮದ್‌ ತೌಕಿರ್‌ ಮತ್ತು ಶಿಹಾಬ್ ಈ ಹಿಂದೆ ಐಸಿಸ್ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲು ಅಕ್ರಮವಾಗಿ ಸಿರಿಯಾಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪ ಇದೆ.

  • ನಟಿಯರಿಗೆ ಸಂಕಷ್ಟ: ಎಫ್‌ಎಸ್‌ಎಲ್‌ ವರದಿಯಲ್ಲಿ ಡ್ರಗ್ಸ್‌ ಸೇವನೆ ಸಾಬೀತು

    ನಟಿಯರಿಗೆ ಸಂಕಷ್ಟ: ಎಫ್‌ಎಸ್‌ಎಲ್‌ ವರದಿಯಲ್ಲಿ ಡ್ರಗ್ಸ್‌ ಸೇವನೆ ಸಾಬೀತು

    ಬೆಂಗಳೂರು: ಡ್ರಗ್ಸ್‌ ಸೇವನೆ ಪ್ರಕರಣದಲ್ಲಿ ಸ್ಯಾಂಡಲ್‍ವುಡ್ ನಟಿಯರಾದ ರಾಗಿಣಿ, ಸಂಜನಾ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ಆರೋಪಿಗಳು ಡ್ರಗ್ಸ್‌ ಸೇವಿಸಿರುವುದು ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿಯಲ್ಲಿ ಸಾಬೀತಾಗಿದೆ.

    ಎಫ್‌ಎಸ್‌ಎಲ್‌ ವರದಿ ಆಧಾರಿಸಿ ಆರೋಪಿಗಳ ವಿರುದ್ಧ ಸಿಸಿಬಿ ಅಧಿಕಾರಿಗಳು 2,500 ಪುಟಗಳ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಹೈಕೋರ್ಟ್‍ಗೆ ಸಲ್ಲಿಸಿರುವ ಹೆಚ್ಚುವರಿ ಚಾರ್ಜ್‍ಶೀಟ್‍ನಲ್ಲಿ ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ಜೊತೆ ನಟಿಯರು ನೇರ ಸಂಪರ್ಕ ಹೊಂದಿರುವ ಬಗ್ಗೆಯೂ ಉಲ್ಲೇಖವಾಗಿದೆ.

    ಮನೆಯಲ್ಲಿ ಸಿಕ್ಕ ವಸ್ತುಗಳಲ್ಲಿ, ಹೇರ್‌ ಫೋಲಿಕಲ್‌ ಟೆಸ್ಟ್‌ನಲ್ಲಿ ಡ್ರಗ್ಸ್ ಅಂಶ ಸಾಬೀತಾಗಿದೆ. ಇದರ ಆರೋಪಿಗಳ ಮಧ್ಯೆ ಹಣ ವರ್ಗಾವಣೆಯಾಗಿದ್ದಕ್ಕೆ ಬ್ಯಾಂಕ್‌ ಸ್ಟೇಟ್‌ಮೆಂಟ್‌ ದಾಖಲೆಗಳನ್ನು ಸಲ್ಲಿಸಲಾಗಿದೆ. ಇದನ್ನೂ ಓದಿ: ರಾಗಿಣಿ ಕೇಸ್ ಉಲ್ಲೇಖ, ಆರ್ಯನ್‍ಗೆ ಜಾಮೀನು ನೀಡಿ – ಮುಕುಲ್ ರೊಹ್ಟಗಿ ವಾದ

    ಇದುವರೆಗೂ 4,000 ಪುಟಗಳ ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಇನ್ನೂ 1,500 ಪುಟಗಳ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಸಲು ಸಿಸಿಬಿ ತಯಾರಿ ನಡೆಸಿದೆ. ಇದನ್ನೂ ಓದಿ: ಡ್ರಗ್ಸ್‌ ನಟಿಯರಿಗೆ ಹೇರ್ ಫೋಲಿಕಲ್ ಟೆಸ್ಟ್‌ – ಏನಿದು ಟೆಸ್ಟ್‌? ನಿಖರ ಹೇಗೆ?

  • ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಬೆಳಗಾವಿ: ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್‍ನಲ್ಲಿ ಯಾವುದೇ ರೀತಿಯ ಒತ್ತಡಗಳು ಕೇವಲ ಊಹಾಪೋಹ. ಯಾರ ಒತ್ತಡಕ್ಕೂ ನಮ್ಮ ಪೊಲೀಸರು ಹಿಂಜರಿಯುವುದಿಲ್ಲ. ಯಾರು ಡ್ರಗ್ಸ್ ಕೇಸ್‍ನಲ್ಲಿ ಭಾಗವಹಿಸಿದ್ದರೋ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.

    ನಟಿ, ನಿರೂಪಕಿ ಅನುಶ್ರೀ ಅವರ ಮೇಲೆ ರಾಜಕೀಯ ಬೆಂಬಲ ಇರುವ ಹಿನ್ನೆಲೆ ಡ್ರಗ್ಸ್ ಕೇಸ್‍ನಲ್ಲಿ ಸಾಫ್ಟ್ ಕಾರ್ನರ್ ತೋರಲಾಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂತಹದರಲ್ಲಿ ಯಾರು ಕೂಡ ಒತ್ತಡ ಮಾಡುವುದಿಲ್ಲ. ಡ್ರಗ್ಸ್ ಕೇಸ್‍ನಲ್ಲಿ ಬಹಳ ಕಠಿಣವಾದ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿದೆ. ಮುಂದೆಯು ತೆಗೆದುಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

    ಯಾವುದೇ ಕಾರಣಕ್ಕೂ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ. ನಿಜವಾದ ಅಪರಾಧಿಗಳಾದರೆ ಅವರು ಶಿಕ್ಷೆಗೆ ಒಳಗಾಗುತ್ತಾರೆ. ಎಷ್ಟೇ ಪ್ರಭಾವಿಗಳಾದರೂ ಖಂಡಿತವಾಗಲೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನು ಚಾರ್ಜ್ ಶೀಟ್‍ನಲ್ಲಿ ಅನುಶ್ರೀ ಹೆಸರು ಕೇಳಿಬಂದಿರುವ ವಿಚಾರಕ್ಕೆ ಬಿಡುವ ಪ್ರಶ್ನೆಯೇ ಇಲ್ಲ, ಮಾಹಿತಿ ತೆಗೆದುಕೊಂಡು ಮುಂದಿನ ಕ್ರಮದ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

  • ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

    ಡ್ರಗ್ಸ್ ಪ್ರಕರಣದ ಬಗ್ಗೆ ಅಂದು ಕಣ್ಣೀರಿಟ್ಟು ಅನುಶ್ರೀ ಹೇಳಿದ್ದೇನು?

    ಬೆಂಗಳೂರು: ಸ್ಯಾಂಡಲ್‍ವುಡ್ ಆ್ಯಂಕರ್ ಕಮ್ ನಟಿ ಅನುಶ್ರೀ ಹೆಸರು ಇದೀಗ ಮತ್ತೆ ಡ್ರಗ್ಸ್ ಕೇಸ್‍ನಲ್ಲಿ ಕೇಳಿ ಬರುತ್ತಿದ್ದಂತೆ ಅವರು ಹಿಂದೆ ಹೇಳಿದ ಮಾತುಗಳು ಕೂಡ ವೈರಲ್ ಆಗುತ್ತಿದೆ. ಎಲ್ಲವನ್ನು ಬಿಟ್ಟು ಒಬ್ಬಳೇ 14 ವರ್ಷದ ಹಿಂದೆ ಬೆಂಗಳೂರಿಗೆ ಬಸ್ ಹತ್ತಿಕೊಂಡು ಬಂದು ನನ್ನ ನೆಲೆ ಕಂಡುಕೊಂಡೆ. 12 ವರ್ಷ ನಾನು ಹಾಸ್ಟೆಲ್‍ನಲ್ಲೇ ಇದ್ದೆ. ತುಂಬಾ ಕಷ್ಟಪಟ್ಟು ಇಲ್ಲಿವರೆಗೂ ಬಂದಿದ್ದೇನೆ ಎಂದು ಸಿಸಿಬಿ ವಿಚಾರಣೆಗೆ ನೋಟಿಸ್ ನೀಡಿದ ಬಳಿಕ ವೀಡಿಯೋ ಮೂಲಕ ಅನುಶ್ರೀ ಗಳಗಳನೇ ಅತ್ತಿದ್ದರು.

    ಈ ಸಂಬಂಧ ವೀಡಿಯೋ ಮಾಡಿರುವ ಅವರು, ಈ ವೀಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ ಎಂದು ಹೇಳಿ ಗಳಗಳನೇ ಕಣ್ಣೀರಿಟ್ಟಿದ್ದರು. ಇದನ್ನೂ ಓದಿ: 14 ವರ್ಷದ ಹಿಂದೆ ಬಸ್ ಹತ್ಕೊಂಡು ಬಂದು ಬೆಂಗ್ಳೂರಲ್ಲಿ ನೆಲೆ ಕಂಡಿದ್ದೇನೆ: ಗಳಗಳನೇ ಅತ್ತ ಅನುಶ್ರೀ

    ವೀಡಿಯೋದಲ್ಲಿ ಹೇಳಿದ್ದೇನು?
    20020ರ ಸೆಪ್ಟೆಂಬರ್ 24 ನನ್ನ ಜೀವನದ ಯಾವ ಘಟ್ಟದಲ್ಲೂ ನಾನು ಮತ್ತೆ ನೆನಪಿಸಿಕೊಳ್ಳೋದಕ್ಕೆ ಇಷ್ಟಪಡದಿರುವಂತಹ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಗೆದ್ದಾಗ, ಆ ದಿನ ಭವಿಷ್ಯದಲ್ಲಿ ಮುಳ್ಳಾಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕಣ್ಣೀರಿಟ್ಟ ಅನುಶ್ರೀಗೆ ಧೈರ್ಯ ತುಂಬಿದ ಗೀತಾಭಾರತಿ ಭಟ್

    ನೋಟಿಸ್ ಬಂದಿರುವುದು ನನಗೆ ಬೇಜಾರಾಗಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಅಂತ ಆಗುವುದಿಲ್ಲ. ಆ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾನೇ ನೋವು ಮಾಡಿತ್ತು. ನೋವು ತುಂಬಾ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿಯನ್ನು ಹಾಳು ಮಾಡಿತ್ತು. ಆದರು ಕೂಡ ಈ ಕಷ್ಟಕಾಲದಲ್ಲಿ ಏನೂ ಹೆಳದೆ, ಏನೂ ಕೇಳದೆ ಅನುಶ್ರೀ ನೀವೇನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಅಂತ ನನ್ನ ಜೊತೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಇದನ್ನು ನಾನು ಯಾವತ್ತೂ ಮರೆಯಲ್ಲ ಎಂದು ಹೇಳಿದ್ದರು.

    ಇದನ್ನು ಮೀರಿ ಕೂಡ ಸುತ್ತಮುತ್ತ ಕೆಲವೊಂದಷ್ಟು ಅಭಿಪ್ರಾಯಗಳು, ವಿಚಾರಗಳು, ಅಂತೆಕಂತೆಗಳು ಇದು ನಮ್ಮ ನೆಮ್ಮದಿನ ತುಂಬಾನೇ ಹಾಳು ಮಾಡುತ್ತಿದೆ. ದಯಮಾಡಿ ಇಂತಹ ವಿಚಾರಗಳನ್ನು ಹರಿದಾಡಿಸುವ ಮುನ್ನ ಒಂದು ಬಾರಿ ನಮ್ಮ ಮನಸ್ಥಿತಿ ಬಗ್ಗೆ ಯೋಚನೆ ಮಾಡಿ. ನಾನಿಷ್ಟೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

    ಇಷ್ಟೊಂದು ಕಷ್ಟದ ದಿನಗಳಲ್ಲಿ ನನಗೆ ನೆರಳಾಗಿ ನಿಂತಿರುವ ನನ್ನ ಕುಟುಂಬ, ನನ್ನ ತಂಡ, ಸ್ನೇಹಿತರು ಎಲ್ಲರಿಗೂ ಧನ್ಯವಾದಗಳು. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನ್ನನ್ನು ಬೆಂಬಲಿಸುತ್ತಿರೋ ಮಾಧ್ಯಮಮಿತ್ರರಿಗೂ ಧನ್ಯವಾದ. ಕನ್ನಡಿಗರು ಕೊಟ್ಟ ಈ ಹೆಸರಿಗೆ ಯಾವುದೇ ಧಕ್ಕೆ ಬರುವಂತಹ ಯಾವುದೇ ಕೆಲಸವನ್ನು ನಾನು ಮಾಡಿಲ್ಲ. ಮುಂದೆಯೂ ಮಾಡಲ್ಲ ಎಂದು ಹೇಳುತ್ತಾ ಅನುಶ್ರೀ ಗದ್ಗದಿತರಾಗಿದ್ದರು.

    ಸದ್ಯ ಡ್ರಗ್ಸ್ ಪ್ರಕರಣದ ಆರೋಪ ಎದುರಿಸುತ್ತಿರುವ ಕಿಶೋರ್ ಅಮನ್ ಶೆಟ್ಟಿ ಅವರು ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಉಲ್ಲೇಖ ಮಾಡಿದ್ದಾರೆ ಎಂದು ಇಂದು ಸುದ್ದಿಯಾಗಿದೆ. ಈ ಬೆನ್ನಲ್ಲೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿಶೋರ್, ಅನುಶ್ರೀ ವಿರುದ್ಧ ನಾನು ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಇದೆಲ್ಲವೂ ಸುಳ್ಳು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ

  • Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

    Exclusive: ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು: ಕಿಶೋರ್ ಅಮನ್ ಶೆಟ್ಟಿ

    – ನಾನು ಎರಡು ಬಾರಿ ಡ್ರಗ್ಸ್ ಸೇವಿಸಿದ್ದೇನೆ
    – ಅನುಶ್ರೀ ಕಷ್ಟಪಟ್ಟು ಬಂದಿದ್ದು, ಗೌರವಿಸುತ್ತೇನೆ

    ಮಂಗಳೂರು: ನಿರೂಪಕಿ ಅನುಶ್ರೀ ವಿರುದ್ಧ ನಾನು ಹೇಳಿಕೆ ಕೊಟ್ಟಿದ್ದೇನೆ ಎಂಬುದು ಸುಳ್ಳು. ಅವರ ವಿರುದ್ಧ ನಾನು ಈ ರೀತಿಯ ಹೇಳಿಕೆ ನೀಡಿಲ್ಲ. ಇದು ಸುಳ್ಳು ಆರೋಪ ಎಂದು ಡ್ರಗ್ಸ್ ಆರೋಪ ಎದುರಿಸುತ್ತಿರುವ ಕಿಶೋರ್ ಅಮನ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕಿಶೋರ್ ಅಮನ್ ಶೆಟ್ಟಿ, ನನಗೂ ಅನುಶ್ರೀಗೂ ಯಾವುದೇ ರೀತಿಯ ಸಂಪರ್ಕ ಇಲ್ಲ. ಕುಣಿಯೋಣ ಬಾರಾ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪರಿಚಯ ಆಗಿದೆ. 2009ರಲ್ಲಿ ಡ್ಯಾನ್ಸ್ ಗೆ ಕೊರಿಯೋಗ್ರಾಫ್ ಮಾಡಿದ್ದೇ ಅದೇ ಮೊದಲು ಮತ್ತು ಕೊನೆ. ಬಳಿಕ 4-5 ವರ್ಷಗಳ ಹಿಂದೆ ಮಂಗಳೂರಲ್ಲಿ ನಡೆದ ಡ್ಯಾನ್ಸ್ ಕ್ಲಾಸ್ ಕಾರ್ಯಕ್ರಮದಲ್ಲಿ ನಾವು ಭೇಟಿಯಾಗಿದ್ದೆವು. ಬಳಿಕ ನಾವಿಬ್ಬರು ಎಲ್ಲೂ ಭೇಟಿಯಾಗಿಲ್ಲ, ಫೋನ್ ಸಂಪರ್ಕವೂ ಇಲ್ಲ. ಅವರ ಫೋನ್ ನಂಬರ್ ಕೂಡ ನನ್ನ ಬಳಿ ಇಲ್ಲ. ಇದೆಲ್ಲವೂ ಸುಳ್ಳು ಆರೋಪ ಎಂದರು. ಇದನ್ನೂ ಓದಿ: ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ

    ಖಾಸಗಿ ವಾಹಿನಿಯ ಶೋ ಒಂದರ ಫೈನಲ್‍ನಲ್ಲಿ ಕೊರಿಯೋಗ್ರಾಫ್ ಮಾಡಿದ್ದೆ ನಾನು. ಆ ಬಳಿಕ ಯಾವುದೇ ಸಂಪರ್ಕವಿಲ್ಲ. ಎಲ್ಲವೂ ಸುಳ್ಳು ಸುದ್ದಿಗಳು, ಅನುಶ್ರೀ ವಿರುದ್ಧ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸುಳ್ಳು. ಪೆಡ್ಲಿಂಗ್ ಮಾಡಲು ಹೋಗಿಲ್ಲ. ಯಾಕಂದ್ರೆ ನಮ್ಮ ವೃತ್ತಿಯೇ ಬೇರೆ. ಜಾರ್ಜ್ ಶೀಟ್‍ನಲ್ಲಿ ಸುಳ್ಳು ಹೇಳಿಕೆ ಹಾಕಲಾಗಿದೆ. ಪಾರ್ಟಿ ಬಿಡಿ ನಾವು ರಿಹರ್ಸಲ್ ಮಾಡಿ ಬರೋದೇ ಲೇಟ್ ನೈಟ್ ಅಂತ್ರದಲ್ಲಿ ಇದೆಲ್ಲ ಮಾಡಲು ಸಾಧ್ಯವೇ ಎಂದು ಕಿಶೋರ್ ಹೇಳಿದರು. ಇದನ್ನೂ ಓದಿ: ಬರೀ ಯೂರಿನ್, ರಕ್ತ ಪರೀಕ್ಷೆ ಮಾಡಿದ್ರೆ ಸಾಲದು -ಹೇರ್ ಫೋಲಿಕಲ್ ಟೆಸ್ಟ್‌ಗೆ ಇಂದ್ರಜಿತ್ ಆಗ್ರಹ

    ಅನುಶ್ರೀ ಬಗ್ಗೆ ಇಂತಹ ಹೇಳಿಕೆಗಳನ್ನು ನಾನು ಕೊಡಲೇ ಇಲ್ಲ. ಅನುಶ್ರೀ ತುಂಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ. ಅವರಿಗೆ ತುಂಬಾ ಗೌರವ ಕೊಡುತ್ತೇವೆ. ನಾನು ಅವರಿಗೆ ಬರೀ ಕೊರಿಯೋಗ್ರಾಫ್ ಮಾತ್ರ ಮಾಡಿದ್ದೇನೆ ಇದು ಕಿಶೋರ್ ಹೇಳುತ್ತಿರುವ ಪಕ್ಕಾ ಮಾಹಿತಿ ಎಂದರು. ಇದನ್ನೂ ಓದಿ: ಡ್ರಗ್ಸ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

    ನನ್ನ ಲೈಫ್ ಹಾಳು ಮಾಡುತ್ತಿದ್ದಾರೆ. ಯಾರು ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ. ಒಳ್ಳೆಯ ಕೊರಿಯೋಗ್ರಾಫರ್ ಆಗಬೇಕೆಂಬ ಕನಸು ನನಗಿದೆ ಅದನ್ನು ಈಡೇರಿಸವಲ್ಲಿ ನಿರತನಾಗಿದ್ದೇನೆ. ನಾನು ಯಾರಿಗೂ ತೊಂದರೆ ಕೊಟ್ಟಿಲ್ಲ. ಹುಟ್ಟಿದಾಗಿನಿಂದ ತಪ್ಪು ಮಾಡಿಲ್ಲ. ಯಾರು ಈ ರೀತಿ ಮಾಡುತ್ತಾರೋ ಅವೆರಿಗೆ ಒಳ್ಳೆಯದಾಗಲಿ ಎಂದು ಬೆಸರ ವ್ಯಕ್ತಪಡಿಸಿದ ಅವರು, ಪಾರ್ಟಿಗೆ ಹೋಗುತ್ತಿದ್ದೇನೆ, ಆದರೆ ಡ್ರಗ್ಸ್ ಪಾರ್ಟಿಗಳಿಗೆಲ್ಲ ಹೋಗಿಲ್ಲ. ಡ್ರಗ್ಸ್ ಸೇವನೆ ಎರಡು ಬಾರಿ ಮಾಡಿದ್ದೇನೆ. ಆದರೆ ಪೆಡ್ಲಿಂಗ್- ಗಿಡ್ಲಿಂಗ್ ಎಲ್ಲ ಮಾಡಿಲ್ಲ ಎಂದರು. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ 

  • ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ

    ಡ್ರಗ್ಸ್ ಸೇವಿಸಿ ಡ್ಯಾನ್ಸ್ ಮಾಡಿದ್ರೆ ಖುಷಿ ಆಗುತ್ತೆ ಅಂತಿದ್ರು ಅನುಶ್ರೀ: ಕಿಶೋರ್ ಅಮನ್ ಶೆಟ್ಟಿ

    ಮಂಗಳೂರು: ಡ್ರಗ್ಸ್ ಸೇವನೆಯಿಂದ ಡ್ಯಾನ್ಸ್ ಪ್ರಾಕ್ಟೀಸ್ ಸುಲಭ. ಡ್ರಗ್ಸ್ ಸೇವಿಸಿ ಡ್ಯಾನ್ ಮಾಡಿದ್ರೆ ಖುಷಿ ಆಗುತ್ತೆ. ಡ್ರಗ್ಸ್ ಸೇವಿಸಿದ್ರೆ ಡ್ಯಾನ್ಸ್ ಗೆ ತಾಕತ್ತು ಅನುಶ್ರೀ ಹೀಗೆ ನಮಗೆ ಹೇಳುತ್ತಿದ್ದರು ಎಂದು ಸ್ಫೋಟಕ ಹೇಳಿಕೆಯನ್ನು ಕಿಶೋರ್ ಅಮನ್ ಶೆಟ್ಟಿ ಮಂಗಳೂರು ಪೊಲೀಸರ ತನಿಖೆ ವೇಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಕಿಶೋರ್ ಅಮನ್ ಶೆಟ್ಟಿ ಆರೋಪ:
    ಬೆಂಗಳೂರಿನಲ್ಲಿ ಡ್ಯಾನ್ಸ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ನಾವು ಡ್ರಗ್ಸ್ ಸೇವನೆ ಮಾಡುತ್ತಿದ್ದೆವು. ಅನುಶ್ರೀಗೆ ದಂಧೆಕೋರರ ಪರಿಚಯವಿದೆ. ಅವರು ನಮಗೆ ಡ್ರಗ್ಸ್ ತಂದು ಕೊಡುತ್ತಿದ್ದರು ಕಿಶೋರ್ ಅಮನ್ ಶೆಟ್ಟಿ ಅನುಶ್ರೀ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಡ್ರಗ್ ಲಿಂಕ್ ಪ್ರಕರಣ – ಚಾರ್ಜ್‍ಶೀಟ್‍ನಲ್ಲಿ ಆ್ಯಂಕರ್ ಅನುಶ್ರೀ ಹೆಸರು

    ಪೊಲೀಸರ ತನಿಖೆ ವೇಳೆ ತರುಣ್ ಅನುಶ್ರೀ ರಿಯಾಲಿಟಿ ಶೋ ಅಲ್ಲಿ ಗೆದ್ದಿದ್ದಕ್ಕೆ ಡ್ರಗ್ಸ್ ಪಾರ್ಟಿ ಮಾಡಿದ್ರು. ಖಾಸಗಿ ವಾಹಿನಿ ರಿಯಾಲಿಟಿ ಶೋವನ್ನು ಅನುಶ್ರೀ ಗೆದ್ದಿದ್ದರು. ಇದಕ್ಕಾಗಿ ಡ್ರಗ್ಸ್ ಪಾರ್ಟಿ ಮಾಡಿದ್ವಿ. ಡ್ರಗ್ಸ್ ಪಾರ್ಟಿ ಮಾಡೋದು ಅವರಿಗೂ ಕೂಡ ಗೊತ್ತಿತ್ತು. ಡ್ರಗ್ಸ್ ಪಾರ್ಟಿಯಲ್ಲಿ ನಾನು ನಮ್ಮ ಕೋರಿಯೋಗ್ರಾಫರ್ ಅನುಶ್ರೀ ಜೊತೆ ಸೇರಿ ಪಾರ್ಟಿಯನ್ನು ಮಾಡಿದ್ವಿ ಎಂದಿದ್ದರು.

    ಅನುಶ್ರೀ ಮಾದಕದ್ರವ್ಯ ಸೇವಿಸುತ್ತಿದ್ದರು, ಸಾಗಿಸುತ್ತಿದ್ದರು. ಸ್ನೇಹಿತರ ಜೊತೆಗೆ ಅನುಶ್ರೀ ಡ್ರಗ್ ಪಾರ್ಟಿ ಮಾಡುತ್ತಿದ್ದರು. ರೂಂನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಡ್ರಗ್ಸ್ ತರುತ್ತಿದ್ದರು. ಡ್ಯಾನ್ಸ್ ಪ್ರಾಕ್ಟೀಸ್‍ಗೆ ಬರುವಾಗ ಡ್ರಗ್ಸ್ ತರುತ್ತಿದ್ದರು. ಅವರೇ ಹೆಚ್ಚು ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಅವರೇ ಡ್ರಗ್ಸ್ ತಂದು ನಮಗೂ ಕೊಡುತ್ತಿದ್ದರು ಎಂದು ಕಿಶೋರ್ ಹೇಳಿದ್ದು, ಇದರಿಂದ ಅನುಶ್ರೀಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಇದನ್ನೂ ಓದಿ: ಡ್ರಗ್ಸ್ ಕೇಸ್- ಅನುಶ್ರೀ ಮೊಬೈಲ್‍ನಿಂದ ಮೂವರು ಪ್ರಭಾವಿ ವ್ಯಕ್ತಿಗಳಿಗೆ ಕರೆ 

    ಡ್ರಗ್ಸ್ ಜಾಲ ಬೆಳಕಿಗೆ ಬಂದಿದ್ದು ಹೇಗೆ?
    ಬೆಂಗಳೂರು ಸಿಸಿಬಿ ಪೊಲೀಸರು ದಾಖಲಿಸಿದ್ದ ಡ್ರಗ್ಸ್ ಕೇಸ್ ನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ಯಾಂಡಲ್‍ವುಡ್ ಡ್ರಗ್ ಕೇಸ್ ಈ ಪ್ರಕರಣದಲ್ಲಿ ಸುಮಾರು 20ಕ್ಕೂ ಹೆಚ್ಚು ಜನರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಓರ್ವ ಆರೋಪಿ ಕೊಟ್ಟ ಸುಳಿವಿನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಎ.15 ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ ಸಿಕ್ಕಿದ್ದ ಮಹತ್ವದ ಸುಳಿವಿನಿಂದಾಗಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಬೆಂಗಳೂರು ಸಿಸಿಬಿ ಇನ್ಸ್‍ಪೆಕ್ಟರ್ ರಿಂದ ಮಂಗಳೂರು ಸಿಸಿಬಿಗೆ ಮಾಹಿತಿ ರವಾನೆ ಮಾಡಿತ್ತು. ಜೊತೆಗೆ ಡ್ರಗ್ಸ್ ಜಾಲದ ಬಗ್ಗೆ ಕಣ್ಣಿಡುವಂತೆ ಮಂಗಳೂರಿನ ಪೊಲೀಸರಿಗೆ ತಿಳಿಸಿದ್ದರು.

    ಬೆಂಗಳೂರು ಸಿಸಿಬಿ ಪೊಲೀಸರ ಮಾಹಿತಿ ಮೇರೆಗೆ ಅಲರ್ಟ್ ಆದ ಮಂಗಳೂರು ಸಿಸಿಬಿ ತನಿಖೆ ನಡೆಸಿ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಬಂಧಿಸಿದ್ದರು. ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗಿನ ಸಂಪರ್ಕದಿಂದ ಆನುಶ್ರೀಗೆ ನೋಟಿಸ್ ನೀಡಿದ್ದ ಮಂಗಳೂರು ಸಿಸಿಬಿ ಪೊಲೀಸರು, ಕಿಶೋರ್ ಶೆಟ್ಟಿ ಹೇಳಿಕೆ ಮತ್ತು ಸಿಡಿಆರ್ ಆಧರಿಸಿ ಸಿಸಿಬಿ ಅನುಶ್ರೀ ವಿಚಾರಣೆ ನಡೆಸಿತ್ತು. ಅಲ್ಲದೇ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದ ಪ್ರತೀಕ್ ಶೆಟ್ಟಿ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಮೂವರು ಗೆಳೆಯರಾಗಿದ್ದರು ಎಂಬ ಅಂಶ ಆಗ ಬಯಲಾಗಿತ್ತು. ಇದನ್ನೂ ಓದಿ: ಕನ್ನಡಿಗರು ಕೊಟ್ಟ ಹೆಸರಿಗೆ ಧಕ್ಕೆ ಮಾಡಿಲ್ಲ, ಯಾವತ್ತೂ ಮಾಡಲ್ಲ: ಕಣ್ಣೀರಿಟ್ಟ ಅನುಶ್ರೀ

    ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು..?
    ತರುಣ್ ಮತ್ತು ಕಿಶೋರ್ ಶೆಟ್ಟಿ ಪರಿಚಯ ಇದ್ದರೂ ಅದಕ್ಕಾಗಿ ಮಂಗಳೂರಿಗೆ ಬಂದಿದ್ದೇ. ಅವರಿಬ್ಬರೂ ನನಗೆ ಕೋರಿಯಾಗ್ರಾಫರ್ ಆಗಿದ್ರು. ನನಗೆ 12 ವರ್ಷಗಳ ಮುಂಚೆ ಸಂಪರ್ಕವಿತ್ತು, ಈಗ ಇಲ್ಲ. ನನ್ನ ಜೊತೆ ಡ್ಯಾನ್ಸ್ ಪಾಟ್ರ್ನರ್ ಮಾಡಿದ್ದಕ್ಕಾಗಿ ನಾನು ಬಂದಿದ್ದೇನೆ ಅಷ್ಟೇ ನಾನು ಯಾವುದೇ ಪಾರ್ಟಿಗಳನ್ನು ಕೂಡ ಮಾಡಿಲ್ಲ. ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

    ಒಟ್ಟಿನಲ್ಲಿ ಸದ್ಯ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯಿಂದ ಇದೀಗ ಅನುಶ್ರೀಗೆ ಕಂಟಕ ಶುರುವಾಗಿದ್ದು, ಸಾಕ್ಷ್ಯಧಾರ ಕೊರತೆ ಇದ್ದರೆ ಚಾರ್ಜ್ ಶೀಟ್ ಅಲ್ಲಿ ಅನುಶ್ರೀ ಹೆಸರು ಉಲ್ಲೇಖ ಆಗುತ್ತಿರಲಿಲ್ಲ. ಇದೀಗ ಪೊಲೀಸರ ತನಿಖೆ ದಾಖಲೆಗಳು ಮತ್ತು ಕಿಶೋರ್ ಶೆಟ್ಟಿ ಅಮನ್ ಶೆಟ್ಟಿ ಹೇಳಿಕೆ ಮೇಲೆ ಮಂಗಳೂರು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.