Tag: Charge

  • ಬೆಂಕಿಯಿಂದ ಹೊತ್ತಿ ಉರಿದ ಚಾರ್ಜಿಂಗ್‌ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್

    ಬೆಂಕಿಯಿಂದ ಹೊತ್ತಿ ಉರಿದ ಚಾರ್ಜಿಂಗ್‌ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್

    ಚೆನ್ನೈ: ಚಾರ್ಜ್‍ಗೆ ಹಾಕಲಾಗಿದ್ದ ಎಲೆಕ್ಟ್ರಿಕ್ ಬೈಕ್‍ಗೆ (Electric bike) ಬೆಂಕಿ ಹೊತ್ತಿಕೊಂಡಿರುವ ಘಟನೆ ಸೋಮವಾರ ರಾತ್ರಿ ತಮಿಳುನಾಡಿನ (Tamil Nadu) ತಿರುನಲ್ವೇಲಿಯಲ್ಲಿ (Tirunelveli ) ನಡೆದಿದೆ.

    ಸೆಲ್‍ಫೋನ್ ಅಂಗಡಿ ಹೊಂದಿರುವ ಅಂಬಾಸಮುದ್ರಂ ನಿವಾಸಿ ರಾಮರಾಜನ್ ಎಂಟು ತಿಂಗಳ ಹಿಂದೆ ಇ-ಬೈಕ್ ಖರೀದಿಸಿದ್ದರು. ಸೆಪ್ಟೆಂಬರ್ 27ರಂದು ಸೋಮವಾರ ತಮ್ಮ ಎಲೆಕ್ಟ್ರಿಕಲ್ ಬೈಕ್ ಅನ್ನು ಚಾರ್ಜ್‍ಗೆ ಹಾಕಿ ಸ್ನೇಹಿತರೊಂದಿಗೆ ರಾಮರಾಜನ್ ಅವರು ಮಾತನಾಡುತ್ತಿದ್ದರು. ಈ ವೇಳೆ ಬೈಕ್‍ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ಇದರಿಂದ ಗಾಬರಿಯಾಗಿ ತಕ್ಷಣ ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಬೈಕ್‍ಗೆ ಜನರು ನೀರು ಸುರಿದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಬೈಕ್‍ನಿಂದ ಹೊರಹೋಗುವ ಶಾಖ ಹೆಚ್ಚಾಗಿತ್ತು ಮತ್ತು ಚಾರ್ಜ್‍ಗೆ ಹಾಕಲಾಹಿದ್ದ ಗೋಡೆಯ ಒಂದು ಭಾಗ ಹೊಗೆಯಿಂದ ಸಂಪೂರ್ಣ ಕಪ್ಪಾಗಿದೆ. ಇದನ್ನೂ ಓದಿ: ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಅನ್ನೋ ನೋವಿದೆ, ಆದ್ರೆ ನಾನು ಹಿಂದೆ ಸರಿಯಲ್ಲ: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]

  • ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

    ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟ – ವೃದ್ಧ ಸಾವು, ನಾಲ್ವರಿಗೆ ಗಾಯ

    ಹೈದರಾಬಾದ್: ಮನೆಯಲ್ಲಿ ಚಾರ್ಜ್‍ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡು 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿ, ನಾಲ್ವರು ಗಾಯಗೊಂಡ ಘಟನೆ ತೆಲಂಗಾಣದ ನಿಜಾಮಾಬಾದ್‍ನಲ್ಲಿ ಬುಧವಾರ ನಡೆದಿದೆ.

    ಬಿ ರಾಮಸ್ವಾಮಿ (80) ಮೃತ ವ್ಯಕ್ತಿ. ಟೈಲರ್ ಆಗಿರುವ ಅವರ ಮಗ ಬಿ ಪ್ರಕಾಶ್ ಒಂದು ವರ್ಷದಿಂದ ಇವಿ ಸ್ಕೂಟರ್ ಬಳಸುತ್ತಿದ್ದರು. ಘಟನೆ ಕುರಿತು ಮಾತನಾಡಿದ ನಿಜಾಮಾಬಾದ್‍ನ ಸಹಾಯಕ ಪೊಲೀಸ್ ಕಮಿಷನರ್ ಎ ವೆಂಕಟೇಶ್ವರಲು, ಸ್ಕೂಟರ್ ತಯಾರಕ ಮತ್ತು ಕಂಪನಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: PSI ಅಕ್ರಮ ನೇಮಕಾತಿ: ಎಂಎಲ್‌ಎ ಮುಂದೆಯೇ ಗನ್‌ಮ್ಯಾನ್ ಅರೆಸ್ಟ್

    ತ್ರೀ ಟೌನ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಾಯಿನಾಥ್ ಹೇಳಿಕೆ ಪ್ರಕಾರ, ಪ್ರಕಾಶ್ ಅವರು 12:30 ರ ಸುಮಾರಿಗೆ ಸ್ಕೂಟರ್‌ನಿಂದ ಬ್ಯಾಟರಿಯನ್ನು ತೆಗೆದು ಚಾರ್ಜ್ ಮಾಡಲು ಇಟ್ಟುಕೊಂಡಿದ್ದರು. ಅವರ ತಂದೆ ರಾಮಸ್ವಾಮಿ, ತಾಯಿ ಕಮಲಮ್ಮ ಮತ್ತು ಮಗ ಕಲ್ಯಾಣ್ ಲಿವಿಂಗ್ ರೂಮಿನಲ್ಲಿ ಮಲಗಿದ್ದಾಗ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಕಾಶ್ ಮತ್ತು ಅವರ ಪತ್ನಿ ಕೃಷ್ಣವೇಣಿ ಕೂಡ ಬೆಂಕಿಯನ್ನು ನಂದಿಸುವಾಗ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಾಂಧೀಜಿ ಆಶ್ರಮದಲ್ಲಿ ಚರಕ ಹಿಡಿದು ನೂಲು ತೆಗೆದ ಬ್ರಿಟನ್ ಪ್ರಧಾನಿ

    ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ರಾಮಸ್ವಾಮಿ ಅವರ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‍ಗೆ ಸಾಗಿಸುವಾಗ ಅವರು ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮೊಬೈಲ್ ಸ್ಫೋಟದಿಂದ ಮಲಗಿದ್ದ ತಾಯಿ, ಅವಳಿ ಮಕ್ಕಳು ಸಜೀವ ದಹನ

    ಮೊಬೈಲ್ ಸ್ಫೋಟದಿಂದ ಮಲಗಿದ್ದ ತಾಯಿ, ಅವಳಿ ಮಕ್ಕಳು ಸಜೀವ ದಹನ

    ಚೆನ್ನೈ: ಮೊಬೈಲ್ ಫೋನ್ ಸ್ಫೋಟದಿಂದ ಸಂಭವಿಸಿದ ಬೆಂಕಿ ಅವಘಡದಿಂದ ತಾಯಿ ಮತ್ತು ಆಕೆಯ ಇಬ್ಬರು ಗಂಡು ಮಕ್ಕಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕರೂರಿನಲ್ಲಿ ನಡೆದಿದೆ.

    ಮುತ್ತುಲಕ್ಷ್ಮಿ (29) ಮತ್ತು ಆಕೆಯ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ. ಮುತ್ತುಲಕ್ಷ್ಮಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಮಕ್ಕಳು ಮೃತಪಟ್ಟಿದ್ದಾರೆ.

    ಏನಿದು ಪ್ರಕರಣ?
    ಮುತ್ತುಲಕ್ಷ್ಮಿ ಆರು ವರ್ಷಗಳ ಹಿಂದೆ ಬಾಲಕೃಷ್ಣನ್ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಇಬ್ಬರು ಅವಳಿ ಗಂಡು ಮಕ್ಕಳಿದ್ದರು. ದಂಪತಿ ಕರೂರ್ ಪಟ್ಟಣದ ಬಳಿಯ ರಾಯನೂರಿನಲ್ಲಿರುವ ವಾಸಿಸುತ್ತಿದ್ದು, ರಾಯನೂರು ಬಳಿ ಸಣ್ಣ ಹೋಟೆಲ್ ನಡೆಸುತ್ತಿದ್ದರು. ಆದರೆ ಎರಡುವರೆ ವರ್ಷಗಳ ಹಿಂದೆ ಮುತ್ತುಲಕ್ಷ್ಮಿ ಪತಿಯ ಜೊತೆ ಜಗಳ ಮಾಡಿಕೊಂಡು ಆತನಿಂದ ದೂರವಾಗಿದ್ದಳು.

    ಇಬ್ಬರು ಮಕ್ಕಳ ಜೊತೆ ತನ್ನ ಪೋಷಕರೊಂದಿಗೆ ರಾಯನೂರಿನಲ್ಲಿ ವಾಸಿಸುತ್ತಿದ್ದಳು. ಭಾನುವಾರ ರಾತ್ರಿ ಮುತ್ತುಲಕ್ಷ್ಮಿ ತನ್ನ ಮನೆಯ ಸೋಫಾದ ಮೇಲೆ ಮಲಗಿದ್ದು, ತನ್ನ ಫೋನ್ ಚಾರ್ಜ್ ಹಾಕಿದ್ದಳು. ಸೋಮವಾರ ಬೆಳಗ್ಗೆ ಆಕೆಯ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದು ಅಗ್ನಿಶಾಮಕ ಸಿಬ್ಬಂದಿ ಬಾಗಿಲು ತೆಗೆದು ನೋಡಿದ್ದಾರೆ. ಆಗ ಮುತ್ತುಲಕ್ಷ್ಮಿ ಮತ್ತು ಇಬ್ಬರು ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಆದರೆ ಮುತ್ತುಲಕ್ಷ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ನಂತರ ಸಿಬ್ಬಂದಿ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗಮಧ್ಯೆಯೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ಅವರ ಮೃತದೇಹಗಳನ್ನು ಕರೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ರಾತ್ರಿ ವೇಳೆ ಫೋನ್ ಚಾರ್ಜ್ ಹಾಕಿದ್ದಾಗ ಮೊಬೈಲ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.

    ಲಾಕ್‍ಡೌನ್ ಸಮಯದಲ್ಲಿ ಮುತ್ತುಲಕ್ಷ್ಮಿಗೆ ಯಾವುದೇ ಆದಾಯ ಬರುತ್ತಿರಲಿಲ್ಲ. ಇದರಿಂದ ಮುತ್ತುಲಕ್ಷ್ಮಿ ತಮ್ಮ ಸಂಬಂಧಿಕರ ಮನೆಗೆ ಹೋಗಿ ಹಣವನ್ನು ತೆಗೆದುಕೊಂಡು ಬರುವಂತೆ ಪೋಷಕರನ್ನು ಕಳುಹಿಸಿದ್ದಳು ಎಂದು ವರದಿಯಾಗಿದೆ.

  • ರಸ್ತೆಯ ಬದಿಯಲ್ಲಿರೋ ತೆಂಗಿನ ಮರಗಳ ಜೊತೆ ಸೆಲ್ಫಿ ತೆಗೆದ್ರೆ 500 ರೂ. ಚಾರ್ಜ್

    ರಸ್ತೆಯ ಬದಿಯಲ್ಲಿರೋ ತೆಂಗಿನ ಮರಗಳ ಜೊತೆ ಸೆಲ್ಫಿ ತೆಗೆದ್ರೆ 500 ರೂ. ಚಾರ್ಜ್

    ಪಣಜಿ: ರಸ್ತೆಯ ಬದಿಯಲ್ಲಿರುವ ಮರಗಳ ಫೋಟೋವನ್ನು ನೀವು ತೆಗೆದಿರಬಹುದು. ಆದರೆ ಗೋವಾದ ಗ್ರಾಮವೊಂದರಲ್ಲಿ ರಸ್ತೆ ಬದಿಯಲ್ಲಿರುವ ತೆಂಗಿನ ಮರಗಳ ಫೋಟೋ ಕ್ಲಿಕ್ಕಿಸಬೇಕಾದರೆ 500 ರೂ. ಶುಲ್ಕ ನೀಡಬೇಕು.

    ಪ್ರವಾಸಕ್ಕೆ ಹೆಸರುವಾಸಿಯಾಗಿರುವ ಗೋವಾದಲ್ಲಿ ಇದು ಏನು ಎಂದು ಕೇಳಬಹುದು. ಆದರೆ ಇದು ನಿಜ. ಉತ್ತರ ಗೋವಾದಲ್ಲಿ ಒಂದು ಗ್ರಾಮವಿದೆ. ಇದು ಸ್ವಚ್ಛತೆ ಹಾಗೂ ರಸ್ತೆ ಬದಿಯಲ್ಲಿ ಸಾಲಗಿ ನೆಟ್ಟಿರುವ ತೆಂಗಿನ ಮರಗಳ ಸೌಂದರ್ಯಕ್ಕೆ ಭಾರತದಲ್ಲೇ ಹೆಸರುವಾಸಿಯಾಗಿದೆ. ಇಲ್ಲಿ ಬರುವ ಪ್ರವಾಸಿಗರು ಈ ತೆಂಗಿನ ಮರಗಳ 1 ಫೋಟೋ ತೆಗೆದುಕೊಂಡರೆ 100 ರಿಂದ 500 ರೂ.ವರೆಗೆ ಶುಲ್ಕ ಕಟ್ಟಬೇಕು.

    ಹೌದು. ಮಾಜಿ ರಕ್ಷಣಾ ಮಂತ್ರಿ, ದಿವಂಗತ ಮನೋಹರ್ ಪರಿಕ್ಕರ್ ಅವರ ಪೂರ್ವಜರ ಹಳ್ಳಿಯಾದ ಪರ್ರಾ ಗ್ರಾಮದಲ್ಲಿ ಫೋಟೋ ತೆಗೆದರೂ ಶುಲ್ಕ ಕಟ್ಟಬೇಕು. ಪರ್ರಾ ಗ್ರಾಮದ ರಸ್ತೆ ಅಕ್ಕಪಕ್ಕದಲ್ಲಿ ಸಾಲಾಗಿ ತೆಂಗಿನ ಮರಗಳು ಇವೆ. ಜೊತೆಗೆ ಈ ಗ್ರಾಮ ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಗೋವಾದ ಪ್ರಮುಖ ಪ್ರವಾಸಿತಾಣಗಳಲ್ಲಿ ಈ ಗ್ರಾಮವು ಒಂದಾಗಿದೆ.

    ಪರ್ರಾ ಗ್ರಾಮದ ಸುಂದರ ನೋಟಕ್ಕೆ ಮನಸೋಲದವರೇ ಇಲ್ಲ. ಹಲವು ಬಾಲಿವುಡ್, ಹಾಲಿವುಡ್ ಚಿತ್ರಗಳು ಕೂಡ ಪರ್ರಾ ಗ್ರಾಮದಲ್ಲಿ ಚಿತ್ರೀಕರಣಗೊಂಡಿದೆ. ಹೀಗಾಗಿ ಪರ್ರಾ ಗ್ರಾಮ ಪಂಚಾಯ್ತಿ ಇಲ್ಲಿಗೆ ಬರುವ ಪ್ರವಾಸಿಗರಿಂದ ಸ್ವಚ್ಛತಾ ತೆರಿಗೆಯನ್ನು ಸಂಗ್ರಹಿಸುತ್ತದೆ. ಈ ಗ್ರಾಮದಲ್ಲಿ ಪ್ರವಾಸಿಗರು 1 ಫೋಟೋ ತೆಗೆದುಕೊಂಡರೆ 500 ರೂ.ವರೆಗೂ ಗ್ರಾಮ ಪಂಚಾಯ್ತಿ ಶುಲ್ಕ ನಿಗದಿಗೊಳಿಸಿದೆ.

    ಜೊತೆಗೆ ಶುಲ್ಕ ಕಟ್ಟಿದ ಪ್ರವಾಸಿಗರಿಗೆ ರಶೀದಿಯನ್ನು ಕೊಡಲಾಗುತ್ತದೆ. ಅಲ್ಲದೆ ಪ್ರವಾಸಿಗರಿಗೆ ಬೇರೆ ಶುಲ್ಕ, ವಾಣಿಜ್ಯ ಚಿತ್ರೀಕರಣಕ್ಕೆ ಬೇರೆ ಶುಲ್ಕವನ್ನು ಪಂಚಾಯ್ತಿ ನಿಗದಿಗೊಳಿಸಿದೆ. ಆದರೆ ಪರ್ರಾದ ಗ್ರಾಮ ಪಂಚಾಯ್ತಿಯ ಈ ಕ್ರಮಕ್ಕೆ ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸೌಂದರ್ಯ ಕಣ್ತುಂಬಿಕೊಂಡು, ಆ ಕ್ಷಣವನ್ನು ಸೆರೆಹಿಡಿದುಕೊಳ್ಳಲು ಪ್ರವಾಸಿಗರು ಬಯಸುತ್ತಾರೆ. ಆದರೆ 1 ಫೋಟೋ ತೆಗೆದುಕೊಳ್ಳಲು ಇಷ್ಟೆಲ್ಲಾ ಶುಲ್ಕ ನಿಗದಿಗೊಳಿಸಿರುವುದು ಸರಿಯಲ್ಲ. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ ಎಂದು ವಿರೋಧಿಸಿದ್ದಾರೆ.

    ಹಾಗೆಯೇ ಈ ಬಗ್ಗೆ ಪ್ರವಾಸಿಗರೊಬ್ಬರು ತಮ್ಮ ಸ್ನೇಹಿರೊಬ್ಬರಿಗೆ ಪರ್ರಾದಲ್ಲಿ ಫೋಟೋ ತೆಗೆದುಕೊಂಡಿದ್ದಕ್ಕೆ ಶುಲ್ಕ ವಿಧಿಸಿ, ರಶೀದಿ ಕೊಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸ್ನೇಹಿತರು ಪರ್ರಾದ ಸುಂದರ ರಸ್ತೆಯಲ್ಲಿ ಒಂದೇ ಒಂದು ಫೋಟೋ ತೆಗೆದುಕೊಂಡಿದಕ್ಕೆ ಅವರಿಂದ ಅಲ್ಲಿನ ಪಂಚಾಯ್ತಿ 500 ರೂ. ಶುಲ್ಕ ಪಡೆದಿದೆ. ಇದು ನಿಜಕ್ಕೂ ಗಂಭೀರವಾದ ವಿಚಾರ. ಈ ಕ್ರಮದಿಂದ ಪ್ರವಾಸಿಗರು ಗೋವಾಕ್ಕೆ ಬರಲು ಹಿಂದೇಟು ಹಾಕುವಂತ ಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದಾರೆ.

    ಈ ಬಗ್ಗೆ ಗೋವಾದ ಪ್ರವಾಸ ಮತ್ತು ಪ್ರವಾಸೋದ್ಯಮ ಸಂಘದ ಅಧ್ಯಕ್ಷ ಸ್ಯಾವಿಯೋ ಅವರು ಪ್ರತಿಕ್ರಿಯಿಸಿ, ಇದು ಪರ್ರಾ ಪಂಚಾಯ್ತಿ ಪ್ರವಾಸಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯ. ಹೀಗೆ 1 ಫೋಟೋಗೆ 500 ರೂ. ಶುಲ್ಕ ನಿಗಧಿಗೊಳಿಸಿರುವುದು ತಪ್ಪು. ಇದು ಪ್ರವಾಸಿಗರಿಗೆ ದುಬಾರಿಯಾಗಿದೆ. ಈ ರೀತಿ ಶುಲ್ಕವನ್ನು ಪರ್ರಾದಲ್ಲಿ ಚಿತ್ರೀಕರಣ ಅಥವಾ ಖಾಸಗಿ ಫೋಟೋಶೂಟ್ ಮಾಡಿಸುವವರ ಬಳಿ ಪಡೆಯಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಪ್ರವಾಸಿಗರ ಬಳಿ ಈ ರೀತಿ ಹಣ ಪಡೆಯುವುದು ಸುಲಿಗೆ ಮಾಡಿದ ಸಮಾನವಾಗುತ್ತೆ ಎಂದು ಕಿಡಿಕಾರಿದ್ದಾರೆ.

    ಪ್ರವಾಸಿಗರ ವಿರೋಧಗಳಿಗೆ ಪರ್ರಾ ಸರ್ಪಂಚ್ ಲೋಬೋ ಅವರು ಪ್ರತಿಕ್ರಿಯಿಸಿ, ನಾವು ಗ್ರಾಮವನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದೇವೆ. ಆದರೆ ಇಲ್ಲಿಗೆ ಬರುವ ಪ್ರವಾಸಿಗರು ರಸ್ತೆಗಳಲ್ಲಿ ಕಸಗಳನ್ನು ಎಸೆಯುತ್ತಾರೆ. ಸೀನರಿ ಸುಂದರವಾಗಿದೆ ಎಂದು ರಸ್ತೆ ಮಧ್ಯೆ ವಾಹನ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಳ್ಳುತ್ತಾರೆ. ಇದರಿಂದ ಟ್ರಾಫಿಕ್ ಜ್ಯಾಮ್ ಆಗುತ್ತದೆ. ಈ ಬಗ್ಗೆ ಯಾರೂ ಯೋಚನೆ ಮಾಡಲ್ಲ. ನಾವು ಶುಲ್ಕ ನಿಗಧಿಗೊಳಿಸಿರುವುದನ್ನ ವಿರೋಧಿಸುತ್ತಾರೆ. ಆದರೆ ಪ್ರವಾಸಿಗರು ಗ್ರಾಮಕ್ಕೆ ಭೇಟಿನೀಡಿ ಮಾಡುವ ತೊಂದರೆ ಬಗ್ಗೆ ಯಾರು ಮಾತನಾಡಲ್ಲ. ಅವರ ಹಾವಳಿ ನಿಯಂತ್ರಿಸಲು ನಾವು ಶುಲ್ಕ ನಿಗದಿಗೊಳಿಸಿದ್ದೇವೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

  • ಬೆಂಗ್ಳೂರು ಟೆಕ್ಕಿಗೆ ಸುಲಿಗೆ- 18 ಕಿ.ಮೀ ರಿಕ್ಷಾ ಪ್ರಯಾಣಕ್ಕೆ 4,300 ರೂ.ಚಾರ್ಜ್

    ಬೆಂಗ್ಳೂರು ಟೆಕ್ಕಿಗೆ ಸುಲಿಗೆ- 18 ಕಿ.ಮೀ ರಿಕ್ಷಾ ಪ್ರಯಾಣಕ್ಕೆ 4,300 ರೂ.ಚಾರ್ಜ್

    ಮುಂಬೈ: ಆಟೋ ಚಾಲಕನೊಬ್ಬ ಕೇವಲ 18 ಕಿಲೋಮೀಟರ್ ಪ್ರಯಾಣಿಸಿದ್ದಕ್ಕೆ ಬೆಂಗಳೂರು ಮೂಲದ ಟೆಕ್ಕಿಗೆ 4,300 ರೂ. ಚಾರ್ಜ್ ಮಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ.

    ಬೆಳಗ್ಗೆ 5 ರಿಂದ ಪ್ರಯಾಣ ಆರಂಭಿಸಿದ್ದು, ಪುಣೆಯ ಕತ್ರಜ್‍ನಿಂದ ಯೆರವಾಡಾಕ್ಕೆ ಟೆಕ್ಕಿಗೆ ಆಟೋ ಚಾಲಕ 4,300 ರೂ. ಚಾರ್ಜ್ ಮಾಡಿದ್ದಾನೆ.  ಅಲ್ಲದೆ, ಮೀಟರ್ ಪ್ರಕಾರ ಹಣ ಪಾವತಿಸವುದಾಗಿ ಎಂಜಿನಿಯರ್ ಹೇಳಿದ್ದಾರೆ.

    ಕೆಲಸಕ್ಕಾಗಿ ಟೆಕ್ಕಿ ಬೆಂಗಳೂರಿನಿಂದ ಪುಣೆಗೆ ಬಂದಿದ್ದರು. ಯೆರವಾಡಾ ಪೊಲೀಸ್ ಠಾಣೆ ಬಳಿ ಅವರಿಗೆ ಕಂಪನಿಯಿಂದ ವಸತಿ ಸೌಕರ್ಯವನ್ನು ಕಲ್ಪಿಸಲಾಗಿತ್ತು. ಹೀಗಾಗಿ ಯೆರವಾಡಾಕ್ಕೆ ಆಟೋ ಮಾಡಿಕೊಂಡು ಬಂದಿದ್ದರು.

    ಎಂಜಿನಿಯರ್ ಈ ಕುರಿತು ಪ್ರತಿಕ್ರಿಯೆ ನೀಡಿ, ಬುಧವಾರ ಬೆಳಗ್ಗೆ 5 ಗಂಟೆಗೆ ಕತ್ರಜ್-ದೇಹು ರಸ್ತೆಯ ಬೈಪಾಸ್ ಬಳಿ ಬಸ್ಸಿನಲ್ಲಿ ಇಳಿದೆ. ನಂತರ ಕ್ಯಾಬ್ ಬುಕ್ ಮಾಡಲು ಪ್ರಯತ್ನಿಸಿದೆ. ಆದರೆ ಯಾವುದೇ ವಾಹನಗಳು ಲಭ್ಯವಿರಲಿಲ್ಲ. ಅಷ್ಟರಲ್ಲಿ, ಆಟೋ ಸಮೀಪಿಸುತ್ತಿರುವುದನ್ನು ಗಮನಿಸಿದೆ. ಒಬ್ಬ ವ್ಯಕ್ತಿ ಆಟೋ ಓಡಿಸುತ್ತಿದ್ದನು. ಆದರೆ ಪ್ರಯಾಣಿಕರ ಸೀಟ್‍ನಲ್ಲಿ ಆಟೋ ಚಾಲಕ ಕುಡಿದು ಕುಳಿತಿದ್ದನು. ಕೇಳಿದ್ದಕ್ಕೆ ಪೊಲೀಸ್ ಠಾಣೆಯನ್ನು ತಪ್ಪಿಸಲು ನನ್ನ ಸ್ನೇಹಿತನಿಗೆ ಆಟೋ ಓಡಿಸಲು ಕೇಳಿಕೊಂಡೆ ಎಂದು ಹೇಳಿದ ಎಂದು ಎಂಜಿನಿಯರ್ ವಿವರಿಸಿದ್ದಾರೆ.

    ಪ್ರಯಾಣ ಪ್ರಾರಂಭಿಸುವುದಕ್ಕೂ ಮೊದಲು ಮೀಟರ್ ಜೀರೋದಲ್ಲಿತ್ತೇ ಎಂಬುದನ್ನು ನಾನು ನೋಡಿರಲಿಲ್ಲ. ಪ್ರಯಾಣ ಮುಗಿದ ನಂತರ ಒಟ್ಟು 4,300 ರೂ. ಚಾರ್ಜ್ ಆಗಿದೆ ಎಂದು ಚಾಲಕ ತಿಳಿಸಿದ. ಅಷ್ಟು ಏಕೆ ಎಂದು ಕೇಳಿದ್ದಕ್ಕೆ ನಗರ ಪ್ರವೇಶಿಸಲು 600 ರೂ. ಪಾವತಿಸಿದ್ದೇವೆ. ನಗರವನ್ನು ತೊರೆಯಲು 600 ರೂ. ಪಾವತಿಸಿದ್ದೇವೆ. ಉಳಿದ 3,100 ರೂ. ಕಿಲೋಮೀಟರ್ ಶುಲ್ಕವಾಗಿದೆ ಒಟ್ಟು 4,300 ರೂ. ಪಾವತಿಸಬೇಕು ಎಂದು ತಿಳಿಸಿದ. ಆದರೆ ಕತ್ರಜ್‍ನಿಂದ ಯೆರವಾಡಾಕ್ಕೆ ಕೇವಲ 18 ಕಿ.ಮೀ.ಮಾತ್ರ ದೂರವಿದೆ ಎಂದು ತಿಳಿಸಿದ್ದಾರೆ.

    ಅಪರಿಚಿತ ಊರು, ರಸ್ತೆಯಲ್ಲಿ ಜನ ಯಾರೂ ಇಲ್ಲದ್ದನ್ನು ಕಂಡು ಎಂಜಿನಿಯರ್ ಭಯಭೀತನಾಗಿ ಆಟೋ ಶುಲ್ಕ ಪಾವತಿಸಿದ್ದಾರೆ. ಅಲ್ಲದೆ ಕುಡಿದಿದ್ದರಿಂದ ಇಬ್ಬರನ್ನೂ ಕಂಡು ಹೆದರಿದ್ದಾರೆ. ನಂತರ ಪೊಲೀಸ್ ಠಾಣೆಗೆ ತೆರಳಿ ಆಟೋರಿಕ್ಷಾ ನಂಬರ್ ನೀಡಿ ಎಂಜಿನಿಯರ್ ದೂರು ನೀಡಿದ್ದಾರೆ.

    ಈ ಕುರಿತು ಯರವಾಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ದೂರನ್ನು ಸ್ವೀಕರಿಸಿದ್ದೇವೆ. ಸಂಬಂಧಪಟ್ಟ ಪೊಲೀಸ್ ಠಾಣೆಗೆ ಕಳುಹಿಸಿದ್ದೇವೆ. ಶಂಕಿತರನ್ನು ಹುಡುಕಿ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

  • ಚಾರ್ಜ್ ಹಾಕಿ ಮಾತನಾಡುವಾಗ ಮೊಬೈಲ್ ಸ್ಫೋಟ – ಯುವತಿ ಗಂಭೀರ

    ಚಾರ್ಜ್ ಹಾಕಿ ಮಾತನಾಡುವಾಗ ಮೊಬೈಲ್ ಸ್ಫೋಟ – ಯುವತಿ ಗಂಭೀರ

                                                                     ಸಾಂದರ್ಭಿಕ ಚಿತ್ರ

    ಕೋಲಾರ: ಬಹುರಾಷ್ಟ್ರೀಯ ಕಂಪನಿಯ ಆಂಡ್ರಾಯ್ಡ್ ಮೊಬೈಲ್ ಫೋನ್ ಸಿಡಿದು ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಕೋಲಾರ ಜಿಲ್ಲೆಯ ಗಡಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದಿದೆ.

    ಶ್ರೀದೇವಿ(19) ಮೊಬೈಲ್ ಬ್ಲಾಸ್ಟ್ ಆಗಿ ಆಸ್ಪತ್ರೆ ಪಾಲಾಗಿರುವ ಯುವತಿ. ಶ್ರೀದೇವಿ ಶನಿವಾರ ರಾತ್ರಿ ತನ್ನ ಮೊಬೈಲ್‍ಗೆ ಚಾರ್ಚ್ ಹಾಕಿಕೊಂಡು ಫೋನಿನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ಮೊಬೈಲ್ ಬ್ಲಾಸ್ಟ್ ಆಗಿದೆ.

    ಮೊಬೈಲ್ ಸಿಡಿತದ ರಭಸಕ್ಕೆ ಮುಖ ಹಾಗೂ ಕೈಗಳಿಗೆ ಗಂಭೀರ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡ ಶ್ರೀದೇವಿ ಕುಪ್ಪಂ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾಳೆ. ಮುಖಕ್ಕೆ ಸರ್ಜರಿ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟೇಬಲ್ ಮೇಲೆ ಚಾರ್ಜ್ ಗೆ ಇಟ್ಟಾಗ ರೆಡ್ಮಿ-4a ಮೊಬೈಲ್ ಬ್ಲಾಸ್ಟ್!

    ಟೇಬಲ್ ಮೇಲೆ ಚಾರ್ಜ್ ಗೆ ಇಟ್ಟಾಗ ರೆಡ್ಮಿ-4a ಮೊಬೈಲ್ ಬ್ಲಾಸ್ಟ್!

    ಗದಗ: ಮನೆಯಲ್ಲಿ ಇಟ್ಟಿದ್ದ ಮೊಬೈಲ್ ಬ್ಲಾಸ್ಟ್ ಆದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಯೆರೆಬೇಲೇರಿ ಗ್ರಾಮದಲ್ಲಿ ನಡೆದಿದೆ.

    ವೀರೇಶ್ ಹಿರೇಮಠ ಎಂಬವರಿಗೆ ಈ ಮೊಬೈಲ್ ಸೇರಿದ್ದು, ರೆಡ್ಮಿ-4a ವರ್ಷನ್ ಮೊಬೈಲ್ ಬ್ಲಾಸ್ಟ್ ಆಗಿದೆ. ಮೊಬೈಲ್ ಸ್ಫೋಟಕ್ಕೆ ಮನೆಯಲ್ಲಿದ ಎಲ್ಲರೂ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ.

    ಟೇಬಲ್ ಮೇಲೆ ಚಾರ್ಜ್ ಇಟ್ಟಾಗ ಮೊಬೈಲ್ ಬ್ಲಾಸ್ಟ್ ಆಗಿದೆ ಅಂತ ವಿರೇಶ್ ಹೇಳಿದ್ದಾರೆ. ಸದ್ಯ ಯಾವುದೇ ಅಪಾಯ ಸಂಭವಿಸಿಲ್ಲ ಎಂಬುದು ತಿಳಿದು ಬಂದಿದೆ.

  • ಮೊಬೈಲ್ ಚಾರ್ಜ್ ಹಾಕಿದ್ದಾಗ ಶಾರ್ಟ್ ಸರ್ಕ್ಯೂಟ್ – ಮನೆಗೆ ಬಂತು ಅಗ್ನಿಶಾಮಕ ವಾಹನ

    ಮೊಬೈಲ್ ಚಾರ್ಜ್ ಹಾಕಿದ್ದಾಗ ಶಾರ್ಟ್ ಸರ್ಕ್ಯೂಟ್ – ಮನೆಗೆ ಬಂತು ಅಗ್ನಿಶಾಮಕ ವಾಹನ

    ಹಾವೇರಿ: ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಮನೆಯಲ್ಲಿದ್ದ ಟಿವಿ, ಬಟ್ಟೆ ಹಾಗೂ 25 ಸಾವಿರ ರೂ. ನಗದು ಹಣ ಸುಟ್ಟು ಕರಕಲಾದ ಘಟನೆ ಹಾವೇರಿ ನಗರದ ಸುಭಾಶ್ ವೃತ್ತದಲ್ಲಿ ಬಳಿ ನಡೆದಿದೆ.

    ನಗರದ ಪ್ರಕಾಶ್ ಹುಲಕೋಟಿ ಎಂಬುವರ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

    ಪ್ರಕಾಶ್ ಅವರ ಮಗಳು ಹಳೆಯ ನೋಕಿಯಾ ಮೊಬೈಲ್ ಚಾರ್ಜ್ ಹಾಕಿದ್ದ ವೇಳೆ ಈ ಅವಘಡ ಸಂಭವಿಸಿದೆ. ಮೊಬೈಲ್ ನಿಂದಾಗಿ ಶಾರ್ಟ್ ಸರ್ಕ್ಯೂಟ್ ಆಗಿದ್ಯಾ ಅಥವಾ ಚಾರ್ಜರ್ ಸಮಸ್ಯೆಯಿಂದ ಆಗಿದ್ಯಾ ಎನ್ನುವುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

    ಈ ಹಿಂದೆ ಮೊಬೈಲ್ ಫೋನ್ ಸ್ಟೋಟ ಪ್ರಕರಣಗಳು ಬೆಳಕಿಗೆ ಬಂದಾಗ ಕಂಪೆನಿಗಳು, ಫೋನ್ ಸ್ಫೋಟಗಳ್ಳಲು ಮೊಬೈಲ್ ಕಾರಣವಲ್ಲ, ಕಳಪೆ ಗುಣಮಟ್ಟದ ಚಾರ್ಜರ್ ಬಳಸಿದ ಕಾರಣ ಸ್ಫೋಟಗೊಂಡಿದೆ ಎಂದು ಹೇಳಿಕೆ ನೀಡಿತ್ತು.