Tag: Charanjit Singh Channi

  • ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡರೆ 25,000 ಬಹುಮಾನ: ಎಎಪಿ

    ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಂಡರೆ 25,000 ಬಹುಮಾನ: ಎಎಪಿ

    ಚಂಢೀಗಢ: ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಕ್ರಮ ಕೈಗೊಂಡರೆ, ಪ್ರತಿಯೊಂದು ಪ್ರಕರಣಕ್ಕೆ ಅವರಿಗೆ 25,000 ಬಹುಮಾನ ನೀಡುವುದಾಗಿ ಆಮ್ ಆದ್ಮಿ ಹೇಳಿದೆ.

    ಮರಳು ಅಕ್ರಮ ಗಣಿಗಾರಿಕೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪುರಾವೆ ಕೊಟ್ಟವರಿಗೆ 25,000 ಬಹುಮಾನ ನೀಡಲಾಗುವುದು ಎಂದು ಚನ್ನಿ ಗುರುವಾರವಷ್ಟೇ ಹೇಳಿದ್ದರು. ಅವರು ಈ ಘೋಷಣೆ ಮಾಡಿದ ಮರುದಿನ ಸುದ್ದಿಗೋಷ್ಠಿ ನಡೆಸಿದ ಎಎಪಿ ವಕ್ತಾರ ರಾಘವ್ ಛಡ್ಡಾ, ಪಂಜಾಬ್ ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಚನ್ನಿ ಕ್ರಮ ಕೈಗೊಂಡರೆ, ಪ್ರತಿಯೊಂದು ಪ್ರಕರಣಕ್ಕೆ ಅವರಿಗೆ 25,000 ಬಹುಮಾನ ನೀಡುವುದಾಗಿ ಸವಾಲು ಎಸೆದಿದ್ದಾರೆ. ಮರಳು ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ನಿಜವಾದ ಉದ್ದೇಶವಾಗಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಇದನ್ನೂ ಓದಿ:  ಮತಾಂತರ ನಿಷೇಧ ಕಾಯ್ದೆ ಜಾರಿ ಸರಿಯಿದೆ: ಬಿವೈ ರಾಘವೇಂದ್ರ

    ಚನ್ನಿ ಅವರ ವಿಧಾನಸಭೆ ಕ್ಷೇತ್ರವಾದ ರಾಮ್‍ಪಂತ್‍ನಲ್ಲಿಯೇ ಮರಳು ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಯಾವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಕೇವಲ ಐದು ನಿಮಿಷಗಳಲ್ಲಿ ಮುಖ್ಯಮಂತ್ರಿ  ಅವರು ಪಡೆಯಬಹುದು. ನೀವು ನನ್ನ ಜೊತೆ ಬನ್ನಿ. ಯಾವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ನಾನು ನಿಮಗೆ ತೋರಿಸುತ್ತೇನೆ ಎಂದು ಅವರು ಸವಾಲು ಹಾಕಿದ್ದಾರೆ.  ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸುದೀಪ್ ಕುಟುಂಬ ಸಮೇತರಾಗಿ ಭೇಟಿ

    ನಿಮ್ಮ ಕ್ಷೇತ್ರದ ಜಿಂದಾಪುರ್ ಪಿಂಡ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದಕ್ಕೆ ನಾನು ನಿಮಗೆ ಪುರಾವೆಗಳನ್ನು, ನಿಮ್ಮ ವಿರುದ್ಧವೇ ಮೊದಲು ಎಫ್‍ಐಆರ್ ದಾಖಲಿಸಿಕೊಳ್ಳಿ. ಮುಖ್ಯಮಂತ್ರಿಯೇ ಅಕ್ರಮ ಗಣಿಗಾರಿಕೆಯ ಅತಿದೊಡ್ಡ ಮಾಫಿಯಾ ಆದಂತಿದೆ. ಚನ್ನಿ ಅವರ ವಿಧಾನಸಭೆ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದನ್ನು ಬಹಿರಂಗಪಡಿಸಿದ್ದೇವೆ ಎಂದು  ಛಡ್ಡಾ ಹೇಳಿದ್ದರು.

  • ಅತಿ ಹೆಚ್ಚು ಬೆಲೆ ಕಡಿತ – ಪಂಜಾಬ್‍ನಲ್ಲಿ ಪೆಟ್ರೋಲ್ 16 ರೂ. ಇಳಿಕೆ

    ಅತಿ ಹೆಚ್ಚು ಬೆಲೆ ಕಡಿತ – ಪಂಜಾಬ್‍ನಲ್ಲಿ ಪೆಟ್ರೋಲ್ 16 ರೂ. ಇಳಿಕೆ

    ಚಂಡೀಗಢ: ಕಾಂಗ್ರೆಸ್ ಸರ್ಕಾರವಿರುವ ಪಂಜಾಬ್‍ನಲ್ಲಿ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಲೀಟರ್‌ಗೆ 11.27 ರೂ. ಕಡಿತಗೊಳಿಸಿದ ನಂತರ ಪೆಟ್ರೋಲ್ ಬೆಲೆ ದೇಶದಲ್ಲೇ ಅತಿ ಹೆಚ್ಚು ಇಳಿಕೆ ಕಂಡ ರಾಜ್ಯವಾಗಿದೆ.

    ಕೇಂದ್ರ ಸರ್ಕಾರ ಅಬಕಾರಿ ತೆರಿಗೆಯನ್ನು ಲೀಟರ್‌ಗೆ 5 ರೂಪಾಯಿ ಮತ್ತು ಡೀಸೆಲ್ ಮೇಲೆ 10 ರೂಪಾಯಿ ಕಡಿಮೆ ಮಾಡಿದ ನಂತರ, ಕೆಲವು ರಾಜ್ಯಗಳು ಸಹ ತೆರಿಗೆ ಕಡಿಮೆ ಮಾಡಿದೆ. ಇದೀಗ ಚರಣ್‍ಜಿತ್ ಸಿಂಗ್ ಛನ್ನಿ ನೇತೃತ್ವದ ಪಂಜಾಬ್ ಸರ್ಕಾರ  ವ್ಯಾಟ್‍ನ್ನು ಕಡಿತಗೊಳಿಸಿದ ಪರಿಣಾಮವಾಗಿ ಪೆಟ್ರೋಲ್ ಬೆಲೆ ಲೀಟರ್‌ಗೆ 16.02 ರೂಪಾಯಿ ಮತ್ತು ಡೀಸೆಲ್ ಬೆಲೆ 19.61 ರೂಪಾಯಿ ಕಡಿಮೆಯಾಗಿದೆ. ಈ ಮೂಲಕ ಸರ್ಕಾರ ಜನರ ಸಹಾಯಕ್ಕೆ ಮುಂದಾಗಿದೆ. ಇದನ್ನೂ ಓದಿ: ಇಂಧನ ಮಾರಾಟ ತೆರಿಗೆ ಇಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ

    ಕೇಂದ್ರ ಸರ್ಕಾರ ತೈಲ ದರ ಇಳಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ 7 ರೂ ತೆರಿಗೆ ಇಳಿಸಿತ್ತು. ಬಳಿಕ ಇದೀಗ ಇತರ ರಾಜ್ಯಗಳು ಕೂಡ ತೈಲ ದರ ಇಳಿಕೆ ಮಾಡುತ್ತಿವೆ. ಪಂಜಾಬ್, ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಾಗಲಿದೆ. ಈ ನಿಟ್ಟಿನಲ್ಲಿ ಪಂಜಾಬ್ ಸರ್ಕಾರ ಪ್ಲಾನ್ ಮಾಡಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 16.02 ರೂಪಾಯಿ ಕಡಿತ ಮಾಡಿ ಜನರಿಗೆ ಹೊರೆ ಕಡಿಮೆ ಮಾಡಿದೆ. ಇದನ್ನೂ ಓದಿ: ಅಡಿಕೆ ನಿಷೇಧ ಕುರಿತು ಬಿಜೆಪಿ ಸಂಸದರ ಹೇಳಿಕೆಗೆ ಖಂಡನೆ

  • ಪಂಜಾಬ್ ಕಾಂಗ್ರೆಸ್‍ನಲ್ಲಿ ಮತ್ತೆ ಬಿರುಕು – ಚರಣ್‍ಜಿತ್ ಸಿಂಗ್ ಛನ್ನಿ Vs ಸಿಧು

    ಪಂಜಾಬ್ ಕಾಂಗ್ರೆಸ್‍ನಲ್ಲಿ ಮತ್ತೆ ಬಿರುಕು – ಚರಣ್‍ಜಿತ್ ಸಿಂಗ್ ಛನ್ನಿ Vs ಸಿಧು

    ಚಂಡೀಗಢ: ಪಂಜಾಬ್ ಕಾಂಗ್ರೆಸ್‍ನಲ್ಲಿ ಬಿಕ್ಕಟ್ಟು ತಾರಕಕ್ಕೆ ಏರಿದೆ. ಮೊದಲು ಅಮರಿಂದರ್ Vs ನವಜೋತ್ ಸಿಂಗ್ ಸಿಧು ಇದ್ದ ಸಮರ, ಈಗ ಸಿಧು Vs ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಛನ್ನಿ ಎಂಬಂತಾಗಿದೆ.

    ಇವರಿಬ್ಬರ ನಡುವಿನ ಪ್ರತಿಷ್ಠೆಯ ಸಮರದಲ್ಲಿ ಕಾಂಗ್ರೆಸ್ ಬಡವಾಗುತ್ತಿದ್ದು, ಚರಣ್‍ಜಿತ್ ಸಿಂಗ್ ಛನ್ನಿ ನೇತೃತ್ವದ ಸರ್ಕಾರಕ್ಕೆ ನವಜೋತ್ ಸಿಂಗ್ ಸಿಧು ಕೆಲಸ ಮಾಡಲು ಬಿಡುತ್ತಿಲ್ಲ ಪದೇ ಪದೇ ಅಡ್ಡಿಯುಂಟು ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಎಪಿಎಸ್ ಡಿಯೋಲ್ ಆರೋಪಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ತೆಗೆದು ಸಿಎಂ ಆಗಲು ಸಿಧು ಪ್ರಯತ್ನ: ಅಮರೀಂದರ್ ಸಿಂಗ್

    ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಸಿಧು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಕಿಡಿಕಾರಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷವನ್ನು ಚುನಾವಣೆ ಹೊತ್ತಿಗೆ ಬಲಹೀನ ಮಾಡಲು ಕೆಲ ರಾಜಕೀಯ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಡಿಯೋಲ್ ಆರೋಪ ಮಾಡಿದ್ದಾರೆ. ಈ ನಡುವೆ ನಾನು ಬಡವ ಆಗಿರಬಹುದು. ಬಡ ಕುಟುಂಬದಲ್ಲಿ ಜನಿಸಿದವನು ಆಗಿರಬಹುದು. ಆದರೆ ಬಲಹೀನನಲ್ಲ. ಆದಷ್ಟು ಬೇಗನೇ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಛನ್ನಿ ಹೇಳಿಕೆ ನೀಡುವ ಮೂಲಕ ಸಿಧುಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾನು ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ: ಅರವಿಂದ್ ಕೇಜ್ರಿವಾಲ್

  • ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!

    ಚರಣ್‍ಜಿತ್ ಸಿಂಗ್ ಛನ್ನಿ ಮೇಲೆ 2018ರಲ್ಲಿ ಬಂದಿತ್ತು #MeToo ಆರೋಪ!

    ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾದ ದಿಢೀರ್ ನಾಯಕತ್ವ ಬದಲಾವಣೆ ಬಳಿಕ ಇದೀಗ ನೂತನ ಸಿಎಂ ಆಗಿ ಚರಣ್‍ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ. ಇದರ ಬೆನ್ನಲೇ ಅವರ ಮೇಲೆ 2018ರಲ್ಲಿ ದಾಖಲಾಗಿದ್ದ ಮೀಟೂ ಆರೋಪ ಮುನ್ನೆಲೆಗೆ ಬಂದಿದೆ.

    ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ಚರಣ್‍ಜಿತ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅದಲ್ಲದೆ ಅಂದಿನ ಸಿಎಂ ಅಮರೀಂದರ್ ಸಿಂಗ್ ಅವರಲ್ಲಿ ದೂರು ಕೂಡ ನೀಡಿದ್ದರು. ಇದೀಗ ಚರಣ್‍ಜಿತ್ ಸಿಂಗ್ ಸಿಎಂ ಎಂದು ಕಾಂಗ್ರೆಸ್ ಹೈಕಮಾಂಡ್ ಘೋಷಿಸುತ್ತಿದ್ದಂತೆ ಅವರ ಮೇಲಿದ್ದ ಮೀಟೂ ಆರೋಪವನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಹರಿಬಿಡಲಾಗುತ್ತಿದೆ. ಇದನ್ನೂ ಓದಿ: ಹೆತ್ತವರ ವಿರುದ್ಧ ದೂರು ದಾಖಲಿಸಿದ ನಟ

    ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ‘ವೆಲ್ ಡನ್ ರಾಹುಲ್’ ಎಂದು ಚರಣ್‍ಜಿತ್ ಛನ್ನಿ ಆಯ್ಕೆಗೆ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

    ಚರಣ್‍ಜಿತ್ ಸಿಂಗ್ ಹಿನ್ನೆಲೆ:
    48 ವರ್ಷದ ಚರಣ್‍ಜಿತ್ ಸಿಂಗ್ ದಲಿತಸಮುದಾಯದವರು. ಸಿಖ್ಖರಲ್ಲಿ ಅತ್ಯಂತ ಕೆಳ ವರ್ಗ ಚಮ್ಮಾರ ಸಮುದಾಯಕ್ಕೆ ಸೇರಿದವರು. 2007ರಿಂದ ಸತತವಾಗಿ ಚಾಮ್‍ಕೌರ್ ಸಾಹೀಬ್ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಹೋಗಿದ್ದಾರೆ. 2015ರಲ್ಲಿ ವಿಪಕ್ಷ ನಾಯಕರಾಗಿ ಕೆಲಸ ಮಾಡಿದ್ದರು. ಅಮರೀಂದರ್ ಸಿಂಗ್ ಸರ್ಕಾರದಲ್ಲಿ ತಾಂತ್ರಿಕಶಿಕ್ಷಣ ಸಚಿವರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಅಳೆದುತೂಗಿ ಯುವ ನಾಯಕ ಚರಣ್‍ಜಿತ್ ಸಿಂಗ್ ಛನ್ನಿಗೆ ಮಣೆ ಹಾಕಿದೆ. ಎಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದ ಹೈಕಮಾಂಡ್ ಚರಣ್ ಜಿತ್ ಹೆಸರನ್ನು ಘೋಷಿಸಿತು. ಈ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿದ ಚರಣ್‍ಜಿತ್ ಸಿಂಗ್, ಸರ್ಕಾರ ರಚನೆಗೆ ಅವಕಾಶ ಕೋರಿದ್ದಾರೆ. ನಾಳೆ 11 ಗಂಟೆಗೆ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಸುಖ್‍ಜಿಂದರ್ ಸಿಂಗ್ ರಾಂಧವಾ ನವಜೋತ್ ಸಿಂಗ್ ಸಿಧು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದ ಕಾರಣ ಕೊನೇ ಕ್ಷಣದವರೆಗೂ ಅವರೇ ಸಿಎಂ ಎಂದು ಸುದ್ದಿ ಹರಿದಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ರಾಂಧಾವಾಗೆ ಶಾಕ್ ನೀಡಿ ಚರಣ್‍ಜಿತ್ ಸಿಂಗ್ ಸಿಎಂ ಎಂದು ಹೈಕಮಾಂಡ್ ಘೋಷಿಸಿದೆ. ಇದನ್ನೂ ಓದಿ:  ಬಾಲಕಿ ಕೆನ್ನೆ ಕಚ್ಚಿದ್ದ ಶಿಕ್ಷಕನಿಗೆ ಪೊಲೀಸರ ಮುಂದೆಯೇ ಥಳಿಸಿದ ಸ್ಥಳೀಯರು

  • ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

    ಚರಣ್‍ಜಿತ್ ಸಿಂಗ್ ಛನ್ನಿ ಪಂಜಾಬ್‍ನ ನೂತನ ಸಿಎಂ

    ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಉಂಟಾದ ದಿಢೀರ್ ನಾಯಕತ್ವ ಬದಲಾವಣೆ ಬಳಿಕ ಇದೀಗ ನೂತನ ಸಿಎಂ ಆಗಿ ಚರಣ್‍ಜಿತ್ ಸಿಂಗ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಘೋಷಿಸಿದೆ.

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮೂರು ಬಾರಿ ಶಾಸಕರಾಗಿದ್ದ ಸುಖ್‍ಜಿಂದರ್ ಸಿಂಗ್ ರಾಂಧವಾ ನವಜೋತ್ ಸಿಂಗ್ ಸಿಧು ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ನಾಯಕರಾಗಿದ್ದ ಕಾರಣ ಕೊನೇ ಕ್ಷಣದ ವರೆಗೂ ಅವರೆ ಸಿಎಂ ಎಂದು ಸುದ್ದಿ ಹರಿದಾಡಿತ್ತು. ಆದರೆ ಅಂತಿಮ ಕ್ಷಣದಲ್ಲಿ ರಾಂಧಾವಾಗೆ ಶಾಕ್ ನೀಡಿ ಚರಣ್‍ಜಿತ್ ಸಿಂಗ್ ಸಿಎಂ ಎಂದು ಹೈಕಮಾಂಡ್ ತಿಳಿಸಿದೆ. ಇದನ್ನೂ ಓದಿ: ಆಗಾಗ ‘ಸಿಕ್ಸರ್’ ಹೇಳಿಕೆ ನೀಡಿ ಕೊನೆಗೂ ಕ್ಯಾಪ್ಟನನ್ನು ಕೆಳಗೆ ಇಳಿಸಿದ ಸಿಧು

    ಪಂಜಾಬ್ ಕಾಂಗ್ರೆಸ್‍ನಲ್ಲಿ ಆಂತರಿಕ ಸಂಘರ್ಷ ಮುಗಿಲುಮುಟ್ಟಿತ್ತು. ನಿನ್ನೆ ಕಡೆಗೂ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಬಳಿಕ ಸಿಎಂ ರೇಸ್‍ನಲ್ಲಿ ಪ್ರಬಲ ಅಭ್ಯರ್ಥಿಯಾಗಿ ನವಜೋತ್ ಸಿಂಗ್ ಸಿಧು ಹೆಸರು ಕೇಳಿಬಂದಿದೆ. ಈ ನಡುವೆ ಅಚ್ಚರಿಯ ಹೆಸರೆಂಬಂತೆ ಸುನಿಲ್ ಜಾಖರ್ ಅವರ ಹೆಸರು ಹರಿದಾಡುತ್ತಿತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ಸುಖ್‍ಜಿಂದರ್ ಸಿಂಗ್ ಕಡೆಗೆ ಒಲವು ವ್ಯಕ್ತಪಡಿಸಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅಮರೀಂದರ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ದಲಿತ ನಾಯಕ ಚರಣ್‍ಜಿತ್ ಸಿಂಗ್ ಛನ್ನಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ