Tag: Charanjit Singh Channi

  • 2019ರ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರೂಫ್ ಸಿಕ್ಕಿಲ್ಲ – ʻಕೈʼ ಸಂಸದನ ಹೇಳಿಕೆಗೆ ಬಿಜೆಪಿ ತಿರುಗೇಟು

    2019ರ ಸರ್ಜಿಕಲ್ ಸ್ಟ್ರೈಕ್‌ಗೆ ಪ್ರೂಫ್ ಸಿಕ್ಕಿಲ್ಲ – ʻಕೈʼ ಸಂಸದನ ಹೇಳಿಕೆಗೆ ಬಿಜೆಪಿ ತಿರುಗೇಟು

    – 56 ಇಂಚಿನ ಎದೆಗಾರಿಕೆ ಅದೇನ್ ಕ್ರಮ ತೆಗೆದುಕೊಳ್ಳುತ್ತದೆ? ಅಂತ ಲೇವಡಿ

    ನವದೆಹಲಿ: ಪಹಲ್ಗಾಮ್‌ನಲ್ಲಿ (Pahalgam) ಉಗ್ರರು 26 ಜನರ ಕೊಂದು ಹಾಕಿದ್ದಾರೆ. ಆದರೆ, ಕಾಂಗ್ರೆಸ್ ಸಂಸದ, ಪಂಜಾಬ್ ಮಾಜಿ ಸಿಎಂ ಚರಣ್‌ಜಿತ್ ಚನ್ನಿ (Charanjit Singh Channi) 2019ರ ಬಾಲಾಕೋರ್ಟ್ ಸರ್ಜಿಕಲ್ ಸ್ಟ್ರೈಕ್‌ (Surgical Strikes) ಬಗ್ಗೆ ಸಾಕ್ಷ್ಯ ಕೇಳಿದ್ದಾರೆ.

    56 ಇಂಚಿನ ಎದೆಗಾರಿಕೆ (56-inch chest) ಅದೇನ್ ಕ್ರಮ ತೆಗೆದುಕೊಳ್ಳುತ್ತದೆ ಅಂತ ಇಡೀ ದೇಶವೇ ಎದುರು ನೋಡ್ತಿದೆ. ಪಾಕಿಸ್ತಾನದ ವಿರುದ್ಧ ನಾವು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲೇಬೇಕು. ಒಂದು ದೇಶದಲ್ಲಿ ಬಾಂಬ್ ಹಾಕಿದರೆ ಅದು ಅಲ್ಲಿನ ಜನರಿಗೆ ಗೊತ್ತಾಗೋದಿಲ್ವೇ…? ಸರ್ಜಿಕಲ್ ಸ್ಟ್ರೈಕ್‌ಗೆ ಯಾವುದೇ ದಾಖಲೆ ಇಲ್ಲದಂತಾಗಿದೆ. ನಾನು ನನ್ನ ದೇಶವನ್ನು ನಂಬುತ್ತೇನೆ ಅಂದರೆ ಸುಮ್ಮನೆ ಕುರುಡನಂತೆ ನಂಬಬಾರದು ಅಲ್ವಾ..? ಬಾಲಾಕೋಟ್ ದಾಳಿ ಬಗ್ಗೆ ಅಂತಾರಾಷ್ಟ್ರೀಯವಾಗಿಯೂ ಏರ್‌ಸ್ಟ್ರೈಕ್‌ನಿಂದ ಸಾಧಿಸಿದ್ದೇನು ಅಂತ ಯಾರಿಗೂ ಏನೂ ಗೊತ್ತಾಗಿಲ್ಲ ಅಂತ ಹೇಳಿದ್ದಾರೆ.

    ಇದಕ್ಕೆ ಬಿಜೆಪಿ ತೀಕ್ಷ್ಣವಾಗಿ ಟಕ್ಕರ್ ಕೊಟ್ಟಿದೆ. ಚನ್ನಿ ಆರೋಪಕ್ಕೆ ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಪ್ರತಿಕ್ರಿಯಿಸಿದ್ದು, ನೀವು ರಾಹುಲ್ ಗಾಂಧಿ ಜೊತೆಗೆ ಪಾಕಿಸ್ತಾನಕ್ಕೆ ಹೋಗಿ ಪ್ರೂಫ್ ನೋಡ್ಕೊಂಡು ಬನ್ನಿ ಅಂತ ಕುಟುಕಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯ ಬಳಿಕ ಫಸ್ಟ್‌ ಟೈಂ ಮೋದಿ ಭೇಟಿಯಾದ ಜಮ್ಮು-ಕಾಶ್ಮೀರ ಸಿಎಂ

    ನೀವು ಸೈನಿಕರ ನೈತಿಕತೆಗೆ ಆಘಾತ ತರುತ್ತಿದ್ದೀರಿ. ಕಾಂಗ್ರೆಸ್‌ನದ್ದು ಪಾಕಿಸ್ತಾನ ವರ್ಕಿಂಗ್ ಕಮಿಟಿ ಆಗಿದ್ದು, ಪಾಕಿಸ್ಥಾನಕ್ಕೆ ಆಕ್ಸಿಜನ್ ಸರಬರಾಜು ಮಾಡ್ತಿದ್ದೀರಾ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕೃಷ್ಣಾ ನದಿ ನೀರು ಹಂಚಿಕೆ ವಿವಾದ – ಮೇ 7ರಂದು ಕೇಂದ್ರ ಜಲಶಕ್ತಿ ಸಚಿವಾಲಯದಿಂದ ಸಭೆ

  • ಪಂಜಾಬ್‍ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಇಡಿ ಸಂಕಷ್ಟ

    ಪಂಜಾಬ್‍ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಇಡಿ ಸಂಕಷ್ಟ

    ನವದೆಹಲಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಎರಡು ಕ್ಷೇತ್ರಗಳಿಂದ ಸೋಲು ಕಂಡಿದ್ದ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಈಗ ಇಡಿ ಸಂಕಷ್ಟ ಶುರುವಾಗಿದೆ. ಅಕ್ರಮ ಮರುಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ವಿಚಾರಣೆ ನಡೆಸಲಾಗಿದೆ.

    2018ರಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದರು. ವಿಚಾರಣೆಗೆ ಬುಲಾವ್ ನೀಡಿದ ಹಿನ್ನೆಲೆ ಇಂದು ಚನ್ನಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ: ಶಂಕರ್ ಪಾಟೀಲ್ 

    ಚನ್ನಿ ವಿಚಾರಣೆಗೆ ಹಾಜರಾಗುತ್ತಿದ್ದಂತೆ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೀತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದು, ನನ್ನ ಹೋರಾಟ ಪಂಜಾಬ್‍ಗಾಗಿಯೇ ಹೊರತು ಮರಳಿಗಾಗಿ ಅಲ್ಲ. ಭೂ, ಮರಳು ಮತ್ತು ಮದ್ಯದ ಮಾಫಿಯಾವನ್ನು ನಡೆಸುತ್ತಿದ್ದವರು ಖಜಾನೆಯನ್ನು ಲೂಟಿ ಮಾಡುವ ಮೂಲಕ ಸ್ವಾರ್ಥ ಹಿತಾಸಕ್ತಿಗಳನ್ನು ಹಿಡೆರಿಸಿಕೊಂಡರು. ಅದಕ್ಕೆ ಪಂಜಾಬ್‍ನಲ್ಲಿ ಅವಕಾಶ ನೀಡಿದರು. ಈಗಿನ ಆರ್ಥಿಕ ಸನ್ನಿವೇಶದಲ್ಲಿ ಅದು ಪಂಜಾಬ್ ಅಥವಾ ಮಾಫಿಯಾ ಹೋರಾಟ ಮುಂದುವರಿಯುತ್ತದೆ ಎಂದು ಕುಟುಕಿದರು.

    ED grills Shiv Sena MLA Pratap Sarnaik's son Vihang for five hours in Tops Group case - Cities News

    ವಿಧಾನಸಭೆ ಚುನಾವಣೆಗೂ ಮುನ್ನ ಚನ್ನಿ ಸಹೋದರಳಿಯ ಭೂಪಿಂದರ್ ಸಿಂಗ್ ಹನಿ ಅವರನ್ನು ವಿಚಾರಣೆ ನಡೆಸಿ ಬಂಧಿಸಲಾಗಿತ್ತು. ಹನಿಯಿಂದ ಹತ್ತು ಕೋಟಿ ರೂ. ವಶಪಡಿಸಿಕೊಳ್ಳಲಾಗಿತ್ತು. ಚರಂಜಿತ್ ಸಿಂಗ್ ಚನ್ನಿ ಅವರಿಗೆ ಸಂಬಂಧಿಸಿದ್ದು ಎನ್ನಲಾಗುತ್ತಿದೆ. ಈ ಹಿನ್ನೆಲೆ ಈಗ ಚನ್ನಿ ವಿಚಾರಣೆ ಆರಂಭಗೊಂಡಿದ್ದು, ಇಂದು ಹಲವು ಗಂಟೆಗಳ ವಿಚಾರಣೆ ನಡೆದಿದೆ. ಮತ್ತೊಮ್ಮೆ ಸಮನ್ಸ್ ನೀಡುವ ಸಾಧ್ಯತೆಗಳಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 2 ವರ್ಷಗಳ ನಂತರ ಕೋವಿಡ್ ಮುಕ್ತ ‘ಬಿಹು’ ನಡೆಸಲು ಸಜ್ಜಾದ ಅಸ್ಸಾಂ

  • ಚನ್ನಿ ಪ್ರಮಾಣ ವಚನ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಎಎಪಿಗೆ ಧನ್ಯವಾದ ತಿಳಿಸಿದ ಮನಿಶ್‌ ತಿವಾರಿ

    ಚನ್ನಿ ಪ್ರಮಾಣ ವಚನ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ: ಎಎಪಿಗೆ ಧನ್ಯವಾದ ತಿಳಿಸಿದ ಮನಿಶ್‌ ತಿವಾರಿ

    ಚಂಡೀಗಢ: ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಕ್ಕೆ ಪಂಜಾಬ್‌ ನೂತನ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರಿಗೆ ಕಾಂಗ್ರೆಸ್‌ ಸಂಸದ ಮನಿಶ್‌ ತಿವಾರಿ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಅಚ್ಚರಿದಾಯಕ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ತಮ್ಮ ಪಕ್ಷದವರೇ ಆದ ಚರಣ್‌ಜಿತ್‌ ಸಿಂಗ್‌ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿರಲಿಲ್ಲ ಎಂದು ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಈ ಕುರಿತು ಟ್ವೀಟ್‌ ಮಾಡಿರುವ ತಿವಾರಿ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಭಗವಂತ್ ಮಾನ್ ಅವರನ್ನು ನಾನು ಅಭಿನಂದಿಸುತ್ತೇನೆ. ಅವರ ಪ್ರಮಾಣ ವಚನಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನನ್ನನ್ನು ಆಹ್ವಾನಿಸದಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ. ಇದೇ ವೇಳೆ ಸಮಾರಂಭದ ಆಮಂತ್ರಣ ಪತ್ರವನ್ನೂ ಟ್ಟಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಈಚೆಗೆ ನಡೆದ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿತು. ಆದರೆ ಕಾಂಗ್ರೆಸ್‌ ಪಕ್ಷ ಕೇವಲ 18 ಸ್ಥಾನಗಳನ್ನು ಮಾತ್ರ ಜಯಿಸಲು ಶಕ್ತವಾಯಿತು. ಇದನ್ನೂ ಓದಿ: ಪಂಜಾಬ್‍ನಲ್ಲಿ ಇಂದು ಭಗವಂತ್ ಮಾನ್‍ಗೆ ಪಟ್ಟಾಭಿಷೇಕ

    ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಭಗತ್ ಸಿಂಗ್ ಅವರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಭಗವಂತ್ ಮಾನ್ ಅವರು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ನಿರ್ಗಮಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಆಹ್ವಾನಿಸಿರಲಿಲ್ಲ.

  • ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಗಾಂಧಿ ಕುಟುಂಬವೇ ಹೊಣೆ: ಅಮರೀಂದರ್ ಸಿಂಗ್

    ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಗಾಂಧಿ ಕುಟುಂಬವೇ ಹೊಣೆ: ಅಮರೀಂದರ್ ಸಿಂಗ್

    ಚಂಡೀಗಢ: ದೇಶಾದ್ಯಂತ ಜನರು ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ. ಇದರಿಂದಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಗಾಂಧಿ ಕುಟುಂಬವೇ ಸಂಪೂರ್ಣ ಹೊಣೆಗಾರರು ಎಂದು ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮೊದಲು ಅಸಮರ್ಥ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ರಾಜ್ಯ ಮುಖ್ಯಸ್ಥರನ್ನಾಗಿ ಹಾಗೂ ಭ್ರಷ್ಟ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿತ್ತು. ಆ ದಿನವೇ ಕಾಂಗ್ರೆಸ್ ತನ್ನ ಸಮಾಧಿಯನ್ನು ತಾನೇ ತೋಡಿಕೊಂಡಿತು ಎಂದು ಟೀಕಿಸಿದರು.

    ಕಾಂಗ್ರೆಸ್ ಪಂಜಾಬ್ ಮಾತ್ರವಲ್ಲದೆ ಉತ್ತರಪ್ರದೇಶ, ಉತ್ತರಖಂಡ, ಗೋವಾ ಮತ್ತು ಮಣಿಪುರದಲ್ಲಿಯೂ ಹೀನಾಯ ಸೋಲನುಭವಿಸಿದೆ. ಅವರು ತಮ್ಮ ಸ್ವಂತ ಪ್ರಮಾದಗಳನ್ನು ಒಪ್ಪಿಕೊಳ್ಳುವ ಬದಲು ಪಂಜಾಬ್‍ನ ಸೋಲಿನ ಹೊಣೆಯನ್ನು ನನ್ನ ಮೇಲೆ ಹಾಕಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.

    ಹಿರಿಯ ಕಾಂಗ್ರೆಸ್ಸಿಗರು ಆಂತರಿಕ ಕಲಹ ಮತ್ತು ಸಿಧು ಅವರ ಪಕ್ಷ ವಿರೋಧಿ ಹೇಳಿಕೆಗಳನ್ನು ದೂಷಿಸಿದ್ದಾರೆ. ಪ್ರಸ್ತುತ ವ್ಯವಸ್ಥೆಯಲ್ಲಿ ಕಾಂಗ್ರೆಸ್‍ಗೆ ಭವಿಷ್ಯವಿಲ್ಲ ಎಂದರು. ಇದನ್ನೂ ಓದಿ: ‘ಕಾಪಾಡಿ ಕಾಪಾಡಿ’ ಎನ್ನುತ್ತ ಜನರ ಕಣ್ಣೆದುರೇ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟ ಯುವಕರು

    ಕಳೆದ ವರ್ಷ ಮುಖ್ಯಮಂತ್ರಿಯಾಗಿ ಪದಚ್ಯುತಗೊಂಡ ನಂತರ, ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆದು ತಮ್ಮದೇ ಆದ ಪಂಜಾಬ್ ಲೋಕ ಕಾಂಗ್ರೆಸ್ ಅನ್ನು ಪ್ರಾರಂಭಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ನಡೆಸಿದ ಪಂಚ ರಾಜ್ಯಗಳಲ್ಲಿ ಪಕ್ಷದ ಸೋಲಿನ ಅವಲೋಕನ ಸಭೆಯಲ್ಲಿ ಪಂಜಾಬ್ ಸೋಲಿಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಕಾರಣ ಎಂದು ದೂಷಿಸಿತ್ತು. ಇದನ್ನೂ ಓದಿ: ಕಬಡ್ಡಿ ಪಂದ್ಯದ ವೇಳೆಯೇ ಅಂತರರಾಷ್ಟ್ರೀಯ ಆಟಗಾರನನ್ನು ಗುಂಡಿಕ್ಕಿ ಹತ್ಯೆ

    ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ 117 ಕ್ಷೇತ್ರದಲ್ಲಿ ಕಾಂಗ್ರೆಸ್ ಕೇವಲ 18 ಸ್ಥಾನಗಳನ್ನು ಪಡೆದಿದ್ದು, ಆಮ್ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ,

  • ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಚುನಾವಣೆಯಲ್ಲಿ ಸೋಲು- ಪಂಜಾಬ್, ಮಣಿಪುರ ಸಿಎಂ ರಾಜೀನಾಮೆ

    ಚಂಡೀಗಢ: ಪಂಜಾಬ್‍ನಲ್ಲಿ ಹೀನಾಯ ಸೋಲನುಭವಿಸಿದ ಕಾರಣ ಚರಣ್‍ಜಿತ್ ಸಿಂಗ್ ಚನ್ನಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.

    ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲನ್ನು ಅನುಭವಿಸಿದೆ. ಅಲ್ಲದೇ ತಾವೂ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಚರಣ್‍ಜಿತ್ ಸಿಂಗ್ ಚನ್ನಿ ರಾಜೀನಾಮೆ ನೀಡಿದ್ದಾರೆ. ಇಂದು ಚನ್ನಿ ಅವರು ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ರಾಜೀನಾಮೆ ಸಲ್ಲಿಸಿದ್ದಾರೆ.

    ಪಂಜಾಬ್ ಚುನಾವಣೆ: ಸಿಎಂ ಚನ್ನಿ ಎರಡು ಕ್ಷೇತ್ರಗಳಿಂದ ಕಣಕ್ಕೆ | Punjab Poll: Chief Minister Channi To Contest From 2 Seats - Kannada Oneindia

    ರಾಜೀನಾಮೆ ನೀಡಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಜನರ ನಡುವೆಯೇ ಇದ್ದು, ದುಡಿಯುತ್ತಲೇ ಇರುತ್ತೇನೆ. ಈ ವೇಳೆ ತಮ್ಮ ಸರ್ಕಾರ ಕೈಗೊಂಡಿರುವ ನಿರ್ಧಾರಗಳನ್ನು ಮುಂದೆ ಬರುವ ಸರ್ಕಾರ ನಡೆಸಿಕೊಂಡು ಹೋಗಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸೋಲಿನ ನಂತರ, ಪಂಜಾಬ್‍ನ ಉನ್ನತ ಸರ್ಕಾರಿ ವಕೀಲರು ರಾಜೀನಾಮೆ! 

    ಪಂಜಾಬ್‍ನ ಜನರು ಬದಲಾವಣೆಯನ್ನು ಬಯಸಿದ್ದು, ಬೇರೆ ಪಕ್ಷಕ್ಕೆ ಮತ ಹಾಕಿದ್ದಾರೆ. ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಯಾಗಲಿದೆ. ಅವರ ಸರ್ಕಾರವನ್ನು ನಾವು ಬೆಂಬಲಿಸುತ್ತೇವೆ. 111 ದಿನಗಳ ನಮ್ಮ ಕೆಲಸ, ನಿರ್ಧಾರಗಳನ್ನು ಹೊಸ ಸರ್ಕಾರ ಮುಂದುವರಿಸಲಿ ಎಂದಿದ್ದಾರೆ.

    N. Biren Singh

    ಮಣಿಪುರ ಸಿಎಂ ರಾಜೀನಾಮೆ
    ಮಣಿಪುರದಲ್ಲಿ ಬಿಜೆಪಿ ಸತತವಾಗಿ ಎರಡನೇ ಬಾರಿಗೆ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೆ ಸೋಲನುಭವಿಸಿದ ಎನ್.ಬಿರೇನ್ ಸಿಂಗ್ ಅವರು ಸಿಎಂ ಸ್ಥಾನಕ್ಕೆ ಶುಕ್ರವಾರ ರಾಜ್ಯಪಾಲ ಲಾ ಗಣೇಶನ್ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡಿದರು. ಆದರೆ ರಾಜ್ಯಪಾಲರು, ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕು ಎಂದು ಕೇಳಿಕೊಂಡಿದ್ದು, ಅದಕ್ಕೆ ಬಿರೇನ್ ಸಿಂಗ್ ಅವರು ಒಪ್ಪಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಕೆಲಸ ಬಿಟ್ಟು ಬಿರಿಯಾನಿ ಸ್ಟಾಲ್ ತೆರೆದ ಇಂಜಿನಿಯರಿಂಗ್ ಯುವಕರು

  • ಮೊಬೈಲ್ ರಿಪೇರಿ ಮಾಡುವ ವ್ಯಕ್ತಿ, ಸಮಾಜ ಸೇವಕಿ ಎದುರು ಸೋಲನುಭವಿಸಿದ ಘಟಾನುಘಟಿಗಳು

    ಮೊಬೈಲ್ ರಿಪೇರಿ ಮಾಡುವ ವ್ಯಕ್ತಿ, ಸಮಾಜ ಸೇವಕಿ ಎದುರು ಸೋಲನುಭವಿಸಿದ ಘಟಾನುಘಟಿಗಳು

    ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷ ಜಯಬೇರಿ ಬಾರಿಸಿದೆ. ಪಂಜಾಬ್ ಹಾಲಿ ಮುಖ್ಯಮಂತ್ರಿ ಕಾಂಗ್ರೆಸ್ ಮುಖಂಡ ಚರಣ್ ಜಿತ್ ಸಿಂಗ್ ಚೆನ್ನಿ (Charanjit Singh Channi), ಮೊಬೈಲ್ ರಿಪೇರಿ ಮಾಡುವ ಅಂಗಡಿಯ ವ್ಯಕ್ತಿಯ ವಿರುದ್ಧವಾಗಿ ಹೀನಾಯವಾಗಿ ಸೋತಿದ್ದಾರೆ.

    ಮೊಬೈಲ್ ರಿಪೇರಿ ಮಾಡುವ ಲಾಭ್ ಸಿಂಗ್ ಉಗೋಕೆ ಅವರು ಚನ್ನಿಯನ್ನು 40,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಲಾಭ್ ಸಿಂಗ್ ತಾಯಿ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ಈತನ ತಂದೆ ಕೂಲಿ ಕಾರ್ಮಿಕರಾಗಿದ್ದಾರೆ.  ಇದನ್ನೂ ಓದಿ:  ಬುಲ್ಡೋಜರ್ ಮುಂದೆ ಯಾರು ಬರಲು ಸಾಧ್ಯವಿಲ್ಲ: ಹೇಮಾ ಮಾಲಿನಿ

    ಪಂಜಾಬ್‍ನಲ್ಲಿ ಅದ್ಭುತ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿವೆ. ಪೊರಕೆ ಗುರುತಿನ ಪಕ್ಷ ಆಮ್ ಆದ್ಮಿಗಳ ಅಖಂಡ ಆಪ್ ಕಿ ಸರ್ಕಾರ್ ಬಂದಿದೆ. ಕೇಜ್ರಿವಾಲ್ ಅವರ ಏಕ್ ಮೌಕಾ ನಿನಾದ ಫಲಿಸಿದೆ. ಆಮ್ ಆದ್ಮಿ ಕನ್ವಿನರ್ ಕೇಜ್ರಿವಾಲ್ ಪ್ರಕಟಿಸಿದ ಮ್ಯಾನಿಫೆಸ್ಟೋ ಮತ್ತು ಭರವಸೆಗಳಿಗೆ ಪಂಜಾಬಿಗಳು ಫಿದಾ ಆಗಿದ್ದಾರೆ. ಮುಖ್ಯವಾಗಿ ಏಕ್ ಮೌಕಾ ಕೇಜ್ರಿವಾಲ್, ಏಕ್ ಮೌಕಾ ಭಗವಂತ್ ಮನ್ ಘೋಷಣೆಗಳು ಜನ ಮನಗೆದ್ದಿದೆ. ಇದನ್ನೂ ಓದಿ: ಯುಪಿಯಲ್ಲಿ ‘ಬುಲ್ಡೋಜರ್ ಬಾಬಾ’ ಅಬ್ಬರ – ಮೋದಿ, ಯೋಗಿ ಆರ್ಭಟಕ್ಕೆ ಧೂಳೀಪಟ

    ಆಮ್ ಆದ್ಮಿ ಪಂಜಾಬ್‍ನಲ್ಲಿ ಲ್ಯಾಂಡ್‍ಸ್ಲೈಡ್ ವಿಕ್ಟರಿ ಸಾಧಿಸಿದ್ದಾರೆ. ಮೊದಲೇ ನಾಯಕತ್ವ ಕಚ್ಚಾಟದಲ್ಲಿ ಮುಳುಗಿದ್ದ ಕಾಂಗ್ರೆಸ್ ಪಕ್ಷವನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಶತಮಾನದ ಪಕ್ಷ ಧೂಳೀಪಟವಾಗಿದೆ. ಪಂಜಾಬ್‍ನಲ್ಲಿನ ಎಎಪಿ ವೇವ್ 2015ರ ದೆಹಲಿ ಫಲಿತಾಂಶವನ್ನು ನೆನಪಿಸಿದೆ. ಸಿಎಂ ಚನ್ನಿ, ಸಿಧು, ಅಮರಿಂದರ್ ಸಿಂಗ್, ಪ್ರಕಾಶ್ ಸಿಂಗ್ ಬಾದಲ್ ಸೇರಿ ಘಟಾನುಘಟಿಗಳೆಲ್ಲಾ ಮನೆ ಸೇರಿದ್ದಾರೆ. ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ, ಸಿಎಂ ಚನ್ನಿಯನ್ನು ಸೋಲಿಸಿದ್ದು ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ಓರ್ವ ಕಾಮನ್ ಮ್ಯಾನ್. ಇದನ್ನೂ ಓದಿ: ಬಿಜೆಪಿಗೆ ಗೆಲುವು – 4 ದಾಖಲೆ ಬರೆದ ಸಿಎಂ ಯೋಗಿ

    ಸಿಧುರನ್ನು (Navjot Singh Sidhu) ಸೋಲಿಸಿದ್ದು ಸಮಾಜ ಸೇವಕಿ ಜೀವನ್‍ ಜ್ಯೋತ್ ಕೌರ್. ಫೋನ್ ಕಾಲ್ ಸ್ಪಂದನೆ ಮೂಲಕ ಸಿಎಂ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಭಗವಂತ್ ಮನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ ರಾಜಭವನದಲ್ಲಿ ಅಲ್ಲ. ತಮ್ಮ ಪೂರ್ವಿಕರ ಗ್ರಾಮ ಕಟ್ಕರ್ ಕಲನ್‍ನಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು ಭಗತ್ ಸಿಂಗ್ ಹುಟ್ಟೂರು ಕೂಡ ಹೌದು. ಅಂದ ಹಾಗೇ, ಭಗವಂತ್ ಮನ್ ಒಂದು ಕಾಲದಲ್ಲಿ ಹಾಸ್ಯ ನಟ. ಇನ್ನು ಸಿಎಂ ಚನ್ನಿ ನಾಳೆ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದಾರೆ.

  • ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು

    ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು

    ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸೋಲುವುದು ಬಹುತೇಕ ಖಚಿತವಾಗಿದ್ದು ಈ ಮಧ್ಯೆ ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಆಪ್‍ನಿಂದ ಸರ್ಧಿಸಿದ್ದ ಜೀವನ್ ಜ್ಯೋತ್ ಕೌರ್ ಮುನ್ನಡೆಯಲ್ಲಿದ್ದರೆ, ಶಿರೋಮಣಿ ಅಕಾಲಿ ದಳದ ಬಿಕ್ರಾಂ ಸಿಂಗ್ ಎರಡನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

    ಫೆಬ್ರವರಿ 20 ರಂದು ಮತದಾನಕ್ಕೆ ಕೆಲವು ದಿನಗಳ ಮೊದಲು ಪಂಜಾಬ್‍ನ ಮೊದಲ ದಲಿತ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿತ್ತು. ಚನ್ನಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಕ್ಕೆ ಸಿಧು ಅಸಮಾಧಾನಗೊಂಡಿದ್ದರು.

    ಬೆಳಗ್ಗೆ 11 ಗಂಟೆಯ ಟ್ರೆಂಡ್ ಪ್ರಕಾರ ಆಪ್ 89, ಕಾಂಗ್ರೆಸ್ 13, ಶಿರೋಮಣಿ ಅಖಾಲಿ ದಳ 13, ಬಿಜೆಪಿ 5, ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ಒಟ್ಟು 117 ಸ್ಥಾನಗಳ ಪೈಕಿ ಬಹುಮತಕ್ಕೆ 59 ಅಗತ್ಯವಿದೆ. 2017ರ ಫಲಿತಾಂಶದಲ್ಲಿ ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ 18, ಇತರರು 02 ಸ್ಥಾನವನ್ನು ಗೆದ್ದಿದ್ದರು.

  • ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ: ಚರಣ್‍ಜಿತ್ ಸಿಂಗ್ ಚನ್ನಿ

    ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ: ಚರಣ್‍ಜಿತ್ ಸಿಂಗ್ ಚನ್ನಿ

    ಚಂಡೀಗಢ: ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ ಮತ್ತು ಅವರು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಯಾವುದೇ ಬದಲಾವಣೆಯನ್ನು ತರುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಬದಲಿಗೆ ಪಂಜಾಬ್‍ನಲ್ಲಿ ಎಎಪಿ ಅಧಿಕಾರಕ್ಕೆ ಬಂದರೆ ಯಾವುದೇ ಬದಲಾವಣೆಯಾಗುವುದಿಲ್ಲ, ಏಕೆಂದರೆ ಅವರು ಎಲ್ಲಾ ಕಡೆಯಿಂದ ತಿರಸ್ಕರಿಸಲ್ಪಟ್ಟ ರಾಜಕೀಯ ನಾಯಕರನ್ನು ಹೊಂದಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಕ್ರಾಂತಿಕಾರಿಯೂ ಅಲ್ಲ ಅಥವಾ ಭಗತ್ ಸಿಂಗ್ ಶಿಷ್ಯರೂ ಅಲ್ಲ ಎಂದು ಕಿಡಿಕಾರಿದ್ದಾರೆ.

    ಅರವಿಂದ್ ಕೇಜ್ರಿವಾಲ್ ದೊಡ್ಡ ಸುಳ್ಳುಗಾರ, ದೊಡ್ಡ ದೊಡ್ಡ ಸುಳ್ಳುಗಳನ್ನೇ ಹೇಳುತ್ತಾರೆ. ಕೆಲವೊಮ್ಮೆ ಅವರು ನೀಡಿದ ಹೇಳಿಕೆಗಳನ್ನೇ ತಿರುಗಿಸುತ್ತಾರೆ. ಮತ್ತೆ ಕೆಲವೊಮ್ಮೆ ಕ್ಷಮೆಯಾಚಿಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಮೆಟ್ರೋವನ್ನು ತಂದಿದ್ದು ಎಸ್‍ಪಿ ಸರ್ಕಾರ, ಉದ್ಘಾಟಿಸಿದ್ದು ಯೋಗಿ ಆದಿತ್ಯನಾಥ್: ಅಖಿಲೇಶ್ ಯಾದವ್

    ಇದೇ ವೇಳೆ ಚಮ್ಕೌರ್ ಸಾಹಿಬ್ ಮತ್ತು ಭದೌರ್ ಅವರು ಸ್ಪರ್ಧಿಸುತ್ತಿರುವ ಎರಡೂ ಸ್ಥಾನಗಳಲ್ಲಿ ಉತ್ತಮ ಅಂತರದಿಂದ ಗೆಲ್ಲಲಿದ್ದಾರೆ ಎಂದು ಹೇಳಿದ್ದಾರೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಎರಡು ವರ್ಷಗಳ ಬಳಿಕ ಮಗನನ್ನು ಭೇಟಿಯಾದ ಶಿಖರ್ ಧವನ್

  • ಖಲಿಸ್ತಾನ್ ಜೊತೆಗೆ ಕೇಜ್ರಿವಾಲ್ ಲಿಂಕ್ ಪಂಜಾಬ್‍ಗೆ ಮಾರಕ: ಚರಣ್‍ಜಿತ್ ಸಿಂಗ್ ಚನ್ನಿ

    ಖಲಿಸ್ತಾನ್ ಜೊತೆಗೆ ಕೇಜ್ರಿವಾಲ್ ಲಿಂಕ್ ಪಂಜಾಬ್‍ಗೆ ಮಾರಕ: ಚರಣ್‍ಜಿತ್ ಸಿಂಗ್ ಚನ್ನಿ

    ಚಂಡೀಗಢ: ಖಲಿಸ್ತಾನ್ ಮತ್ತು ಖಲಿಸ್ತಾನಿಗಳೊಂದಿಗಿನ ಅರವಿಂದ್ ಕೇಜ್ರಿವಾಲ್ ಸಂಪರ್ಕ ಹೊಂದಿರುವುದರಿಂದ ಪಂಜಾಬ್‍ಗೆ ಮಾರಕವಾಗಿದೆ ಎಂದು ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಟಾಂಗ್ ನೀಡಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಅವರು, ಕೇಜ್ರಿವಾಲ್ ತಮ್ಮ ಮೇಲಿನ ಆರೋಪಗಳನ್ನು ಸಹ ನಿರಾಕರಿಸಿಲ್ಲ. ಅವರೇ ‘ನಾನು ಭಯೋತ್ಪಾದಕ’ ಎಂದು ಹೇಳಿಕೊಳ್ಳುತ್ತಿದ್ದಾರೆ ಮತ್ತು ಖಲಿಸ್ತಾನ್ ಬಗ್ಗೆ ಮಾತನಾಡುತ್ತಾರೆ, ಖಲಿಸ್ತಾನಿಗಳನ್ನು ಬೆಂಬಲಿಸುತ್ತಾರೆ. ಎಲ್ಲೋ ಕೇಜ್ರಿವಾಲ್ ಅವರು ಹೊಂದಿರುವ ಈ ಲಿಂಕ್ ಪಂಜಾಬ್‍ಗೆ ಮಾರಕವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಪಂಜಾಬ್ ಸಿಎಂ ಅಥವಾ ಖಲಿಸ್ತಾನ್ ಪಿಎಂ – ಕುಮಾರ್ ವಿಶ್ವಾಸ್ ವೀಡಿಯೋ ವೈರಲ್

    ಅರವಿಂದ್ ಕೇಜ್ರಿವಾಲ್ ಅವರು ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಸಿಎಂ ಅಥವಾ ಖಲಿಸ್ತಾನ್ ಪ್ರಧಾನಿಯಾಗಲು ಬಯಸಿದ್ದಾರೆ ಎಂಬ ಎಎಪಿ ಮಾಜಿ ನಾಯಕ ಕುಮಾರ್ ವಿಶ್ವಾಸ್ ಆರೋಪದ ಬಳಿಕ ಈ ವಿಚಾರದ ಬಗ್ಗೆ ಭಾರೀ ಚರ್ಚೆ ಆರಂಭವಾಯಿತು. ಇದನ್ನೂ ಓದಿ: ಕುಮಾರ್ ವಿಶ್ವಾಸ್ ಆರೋಪದ ಬಗ್ಗೆ ಸ್ಪಷ್ಟನೆ ನೀಡಿ: ಕೇಜ್ರಿವಾಲ್‍ಗೆ ರಾಹುಲ್ ಪ್ರಶ್ನೆ

    ಅರವಿಂದ್ ಕೇಜ್ರಿವಾಲ್ ಒಬ್ಬ ಭಯೋತ್ಪಾದಕ ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಟೀಕಿಸಿದ್ದರು. ಅದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳ ನಾಯಕರಿಗೆ ಈ ಭ್ರಷ್ಟರೆಲ್ಲ ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಿದ್ದಾರೆ. ಶಾಲೆಗಳು, ಆಸ್ಪತ್ರೆಗಳನ್ನು ನಿರ್ಮಿಸುವ, ವಿದ್ಯುತ್ ಸಮಸ್ಯೆಗಳನ್ನು ಸರಿಪಡಿಸುವ ವಿಶ್ವದ ಮೊದಲ ಭಯೋತ್ಪಾದಕ ನಾನು. ನಾನು ವಿಶ್ವದ ಮೊದಲ ಸಿಹಿಯಾದ ಭಯೋತ್ಪಾದಕ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‌ ವಿರುದ್ಧ ಹೇಳಿಕೆ – ಎಎಪಿ ಮಾಜಿ ನಾಯಕನಿಗೆ ʼವೈʼ ಶ್ರೇಣಿ ಭದ್ರತೆ

    ಒಂದು ವೇಳೆ ನಾನು ಪ್ರತ್ಯೇಕತಾವಾದಿಗಳ ಪರ ಎಂದಿದ್ದರೆ ಪ್ರಧಾನಿ ಮೋದಿ ಅವರು ಈ ಆರೋಪಗಳನ್ನು ಏಕೆ ಸಾಬೀತುಪಡಿಸಲಿಲ್ಲ ಅಥವಾ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್‍ಗೆ ಖಾಲಿಸ್ತಾನ್ ಉಗ್ರರ ನಂಟು – ತನಿಖೆ ನಡೆಸುತ್ತೇವೆ ಎಂದ ಅಮಿತ್ ಶಾ

  • ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ: ಚರಣ್‍ಜಿತ್ ಸಿಂಗ್ ಚನ್ನಿ

    ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯ: ಚರಣ್‍ಜಿತ್ ಸಿಂಗ್ ಚನ್ನಿ

    ಚಂಡೀಗಢ: ರಾಜ್ಯದಲ್ಲಿ ಚುನಾವಣೆಗೆ ಇನ್ನೇನು ಎರಡು ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಪಂಜಾಬ್‍ನಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಎಲ್ಲರಿಗೂ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದಾಗಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಭರವಸೆ ನೀಡಿದ್ದಾರೆ.

    ಇದೇ ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭೆ ಚುನಾವಣೆಗೆ ಇದ್ದು, ರೂಪನಗರದಲ್ಲಿ ರ್‍ಯಾಲಿ ನಡೆಸಿ ಇಂದು ಮಾತನಾಡಿದ ಅವರು, ನಾವು ರಾಜ್ಯದಲ್ಲಿ ಉಚಿತ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಕಿರುಕುಳ ಎದುರಿಸುತ್ತಿದ್ದಾರೆ: ಬಿಜೆಪಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

    ಈ ವಾರದ ಆರಂಭದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಚಿತವಾಗಿ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಂಜಾಬ್ ಜನತೆಗೆ 1 ಲಕ್ಷ ಉದ್ಯೋಗ, ಆರು ತಿಂಗಳಲ್ಲಿ ಬಡವರಿಗೆ ವಸತಿ ಕಲ್ಪಿಸುವ ಮತ್ತು ಸಣ್ಣ ಉದ್ಯಮಿಗಳಿಗೂ ತೆರಿಗೆ ರಿಯಾಯಿತಿ ನೀಡುತ್ತೇವೆ ಎಂದು ಭರವಸೆ ನೀಡಿದ್ದರು.

    ಅಟ್ಟ-ದಾಲ್ (ಹಿಟ್ಟು-ಮಸೂರ) ಹೊಟ್ಟೆಯನ್ನು ಮಾತ್ರ ತುಂಬುತ್ತದೆ. ಆದರೆ ಪಂಜಾಬಿನ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಖಾಸಗಿ ಸಂಸ್ಥೆಗಳಲ್ಲಿ ಓದುವುದು ತುಂಬಾ ದುಬಾರಿಯಾಗಿದೆ. ನಮ್ಮ ಪೋಷಕರು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದರಿಂದ ನಾವು ವಿದ್ಯಾವಂತರಾಗಿದ್ದೇವೆ. ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣವನ್ನು ಒದಗಿಸಲು ನಾವು ನಿರ್ಧರಿಸಿದ್ದೇವೆ. ಚಮಕೌರ್ ಸಾಹಿಬ್‍ನಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

    ಚುನಾವಣಾ ಆಯೋಗದ ಹಿಂದಿನ ಘೋಷಣೆಯಂತೆ ಫೆಬ್ರವರಿ 20 ರಂದು ಪಂಜಾಬ್‍ನಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ ಮತ್ತು ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಬಹುಕೋಟಿ ಮೇವು ಹಗರಣ, ಲಾಲೂ ಪ್ರಸಾದ್ ಯಾದವ್‌ ದೋಷಿ – CBI ಕೋರ್ಟ್‌