ಹಾಸನ: ಹಾಸನಾಂಬ ದೇವಿಯ (Hasanamba Temple) ದರ್ಶನ ಪಡೆದು ತೆರಳುತ್ತಿದ್ದ ವೇಳೆ ಎರಡು ಬೈಕ್‌ಗಳಿಗೆ (Bike) ಇನ್ನೋವಾ ಕಾರು (Innova Car0 ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆ, ಚನ್ನರಾಯಪಟ್ಟಣ (Channarayapatna) ತಾಲೂಕಿನ ಕಗ್ಗಲಿಕಾವಲು ಫಾರೆಸ್ಟ್ ಬಳಿ ನಡೆದಿದೆ.
ಭಾನುವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ನೇಹಿತ ಬಸವರಾಜು ಜೊತೆಯಲ್ಲಿ ಬೆಂಗಳೂರಿನಿಂದ ಯಮಹಾ ಬೈಕ್‌ನಲ್ಲಿ ಅನು (19) ಹಾಗೂ ಛಾಯಾ (20) ಬಂದಿದ್ದರು. ಹಾಸನಾಂಬ ದೇವಿ ದರ್ಶನ ಮುಗಿಸಿ ಒಂದೇ ಬೈಕ್‌ನಲ್ಲಿ ಮೂವರು ತೆರಳುತ್ತಿದ್ದರು. ಈ ವೇಳೆ ಚನ್ನರಾಯಪಟ್ಟಣ ಕಡೆಯಿಂದ ಬರುತ್ತಿದ್ದ ಇನ್ನೋವಾ ಕಾರು ಹೌಸಿಂಗ್ ಬೋರ್ಡ್ ಬಳಿ ವೇಗವಾಗಿ ಬಂದು ಮೊದಲು ಆಕ್ಟಿವಾಗೆ ಡಿಕ್ಕಿ ಹೊಡೆದು ಬಳಿಕ ಬೈಕ್‌ಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಅರಣ್ಯಕ್ಕೆ ನುಗ್ಗಿದೆ. ಇದನ್ನೂ ಓದಿ: ನಾಡಿನಾದ್ಯಂತ ದೀಪಾವಳಿ ಸಂಭ್ರಮ – ಕೆಆರ್ ಮಾರ್ಕೆಟ್‌ನಲ್ಲಿ ಹೂ, ಹಣ್ಣು ಖರೀದಿಗೆ ಮುಗಿಬಿದ್ದ ಜನ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್‌ನಲ್ಲಿದ್ದ ಬಸವರಾಜು ಹಾಗೂ ಅನುಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೋರ್ವ ಯುವತಿ ಛಾಯಾ ಸ್ಥಿತಿ ಚಿಂತಾಜನಕವಾಗಿದ್ದು, ಚನ್ನರಾಯಪಟ್ಟಣ ತಾಲೂಕು ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಅಪಘಾತದಲ್ಲಿ ಆಕ್ಟಿವಾ ಸವಾರ ಮೊಹಮ್ಮದ್ ಶಾಹಿದ್‌ಗೂ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಊರಿಗೆ ತೆರಳಿದ ಜನ – ಮೆಜೆಸ್ಟಿಕ್ ಬಸ್‌ನಿಲ್ದಾಣ ಖಾಲಿ ಖಾಲಿ
ಹಾಸನ: ವ್ಯಕಿಯೊಬ್ಬ ವಿಪರೀತ ಮದ್ಯ ಸೇವಿಸಿ ಪತ್ನಿಗೆ ಚಾಕು ಇರಿದು ಹತ್ಯೆಗೈದ ಘಟನೆ ಚನ್ನರಾಯಪಟ್ಟಣದ (Channarayapatna) ಹಿರಿಸಾವೆ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ರೇಖಾ (38) ಎಂದು ಗುರುತಿಸಲಾಗಿದೆ. ಹತ್ಯೆಗೈದ ಆರೋಪಿಯನ್ನು ರಘು (40) ಎಂದು ಗುರುತಿಸಲಾಗಿದೆ. 18 ವರ್ಷಗಳ ಹಿಂದೆ ಇಬ್ಬರು ಮದುವೆಯಾಗಿದ್ದರು. ಮೊದಲಿನಿಂದಲೂ ಆರೋಪಿ ಪ್ರತಿನಿತ್ಯ ಕಂಠಪೂರ್ತಿ ಕುಡಿದು ಬಂದು ಜಗಳವಾಡುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ: ಕಲಬುರಗಿ | ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಕೊಂದ ಪತಿ
ಬುಧವಾರ (ಸೆ.10) ರಾತ್ರಿ ಇಬ್ಬರು ಗಂಡು ಮಕ್ಕಳು ಟ್ಯೂಷನ್‍ಗೆ ತೆರಳಿದ್ದಾಗ ಪತ್ನಿಯೊಂದಿಗೆ ಆರೋಪಿ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ರೇಖಾಳನ್ನು ಮನೆಯಿಂದ ಹೊರಗೆ ಎಳೆದು ಚಾಕುವಿನಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಹಾಸನ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲೂಕಿನ ಶೆಟ್ಟಿಹಳ್ಳಿ ಮೇಲ್ಸೇತುವೆ ಬಳಿ ನಡೆದಿದೆ.
ಬೆಂಗಳೂರು: 3 ವರ್ಷಗಳಿಂದ ನಡೆಯುತ್ತಿದ್ದ ದೇವನಹಳ್ಳಿಯ ಚನ್ನರಾಯಪಟ್ಟಣ ಜಮೀನು ಭೂಸ್ವಾಧೀನ ವಿವಾದ ಕೊನೆಗೂ ಅಂತ್ಯವಾಗಿದೆ. 1,777 ಎಕರೆ ಭೂಸ್ವಾಧೀನಕ್ಕೆ ಸರ್ಕಾರ ಹೊರಡಿಸಿದ್ದ ಫೈನಲ್ ನೋಟಿಫಿಕೇಶನ್‌ಅನ್ನು ರಾಜ್ಯ ಸರ್ಕಾರ ರದ್ದು ಮಾಡೋದಾಗಿ ಘೋಷಣೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರು, ಹೋರಾಟಗಾರರು, ಸಂಘಟನೆಗಳ ಸಭೆಯಲ್ಲಿ ನೋಟಿಫಿಕೇಶನ್ ರದ್ದು ಮಾಡುವ ಬಗ್ಗೆ ಘೋಷಣೆ ಮಾಡಿದರು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 1,777 ಎಕರೆ ಜಮೀನು ಭೂಸ್ವಾಧೀನಕ್ಕೆ ಸರ್ಕಾರ ನೋಟಿಫಿಕೇಶನ್ ಹೊರಡಿಸಿತ್ತು. ಕೃಷಿ ಭೂಮಿ ಭೂಸ್ವಾಧೀನ ಮಾಡದಂತೆ ರೈತರು ಹೋರಾಟ ಮಾಡುತ್ತಿದ್ದರು. ಕೃಷಿ ಚಟುವಟಿಕೆಗಳು ಮುಂದುವರೆಸುವ ದೃಷ್ಟಿಯಿಂದ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನ ರದ್ದು ಮಾಡುತ್ತಿರೋದಾಗಿ ತಿಳಿಸಿದರು.ಇದನ್ನೂ ಓದಿ: ಇದೇ ರೀತಿ 20 ದೇಶದ ಕಾಡಿನಲ್ಲಿ ವಾಸವಿದ್ದೆವು – ಗೋಕರ್ಣ ಗುಹೆಯಲ್ಲಿ ವಾಸವಿದ್ದ ರಷ್ಯಾ ಮಹಿಳೆ ಮಾತು
ಒಂದು ವೇಳೆ ರೈತರು ಸ್ವಯಂ ಪ್ರೇರಿತರಾಗಿ ಜಮೀನು ಕೊಟ್ಟರೆ ಆ ಭೂಮಿ ಸರ್ಕಾರ ಪಡೆಯಲಿದೆ. ಜೊತೆಗೆ ಸೂಕ್ತ ಪರಿಹಾರ ಕೊಡುವ ಜೊತೆಗೆ ಅಭಿವೃದ್ಧಿಪಡಿಸಿದ 50% ಭೂಮಿಯನ್ನು ಜಮೀನು ಕೊಡುವ ರೈತರಿಗೆ ಕೊಡಲಾಗುತ್ತದೆ. ಸರ್ಕಾರದ ಈ ನಿರ್ಧಾರ ದೇವನಹಳ್ಳಿ ಜಮೀನಿಗೆ ಮಾತ್ರ ಅನ್ವಯ ಆಗಲಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡಿದ ನಟ ಪ್ರಕಾಶ್ ರಾಜ್, ಇದು 3 ವರ್ಷಗಳ ಪ್ರತಿಭಟನೆಗೆ ಸಿಕ್ಕ ಜಯ. ಇದು ರೈತರ ಜಯ ಇದು. ಸಂಘಟನೆಗಳ ಜಯ. ಐತಿಹಾಸಿಕ ಚಳುವಳಿಯ ಜಯ ಇದು. ಸರ್ಕಾರಕ್ಕೆ, ಸಿಎಂಗೆ ಧನ್ಯವಾದಗಳನ್ನು ಹೇಳ್ತೀನಿ. ದೇವನಹಳ್ಳಿ ಹೋರಾಟಕ್ಕೆ ಜಯವಾಗಿದೆ. ಮುಂದಿನ ಹೋರಾಟದ ಬಗ್ಗೆ ಮುಂದೆ ನೋಡೋಣ ಎಂದರು.
ರೈತ ನಾಯಕ ಬಡಗಲಪುರ ನಾಗೇಂದ್ರ ಮಾತಾಡಿ, ಇದೊಂದು ಸಂಘಟಿತ ಹೋರಾಟ. ಎಲ್ಲರು ಒಟ್ಟಾಗಿ ಹೋರಾಟ ಮಾಡಿದ್ವಿ. ಇದೊಂದು ಐತಿಹಾಸಿಕ ಜಯ. ಯಾವುದೇ ಕೃಷಿ ಭೂಮಿಗೆ ಸಮಸ್ಯೆ ಮಾಡಿದ್ರೆ ಹೋರಾಟ ಮಾಡ್ತೀವಿ. ಫಲವತ್ತಾದ ಭೂಮಿ ಸ್ವಾಧೀನ ಮಾಡಿಕೊಳ್ಳಬಾರದು. ಭೂಮಿ ಬಲಾತ್ಕಾರವಾಗಿ ವಶ ಮಾಡಿಕೊಂಡರೇ ಹೋರಾಟ ಮಾಡ್ತೀವಿ. ಇದು ರೈತರ ಹೋರಾಟಕ್ಕೆ ಸಿಕ್ಕ ಜಯ ಇದು. ಇಲ್ಲಿ ಯಾವುದೇ ಮಾಫಿಯಾದ ಕೈಗಳು ಇಲ್ಲ. ಇದು ರೈತರು, ಮಹಿಳೆಯರ ಹೋರಾಟಕ್ಕೆ ಸಿಕ್ಕ ಜಯ ಎಂದರು. ಇದನ್ನೂ ಓದಿ: ಭಾರತಕ್ಕೆ ಟೆಸ್ಲಾ ಎಂಟ್ರಿ | ಮೈಲೇಜ್ ಎಷ್ಟು? ಬೇರೆ ದೇಶದಲ್ಲಿ ದರ ಎಷ್ಟಿದೆ? ಭಾರತದಲ್ಲಿ ದುಬಾರಿ ಯಾಕೆ?
ಹಾಸನ: ಚನ್ನರಾಯಪಟ್ಟಣದ (Channarayapatna) ಕತ್ತರಿಘಟ್ಟ ಬಳಿಯ ರೈಲ್ವೆ ಹಳಿ ಸಮೀಪ ಎರಡು ಚಿರತೆಗಳ (Leopard) ಮೃತದೇಹ ಪತ್ತೆಯಾಗಿವೆ.
ರೈಲು ಡಿಕ್ಕಿಯಾಗಿ ಚಿರತೆಗಳು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಂದಾಜು ಒಂದುವರೆ ವರ್ಷದ ಗಂಡು, ಮೂರರಿಂದ ನಾಲ್ಕು ವರ್ಷದ ಹೆಣ್ಣು ಚಿರತೆ ಶವ ರೈಲ್ವೆ ಹಳಿಗಳ ಪಕ್ಕದಲ್ಲೇ ಪತ್ತೆಯಾಗಿವೆ. ವನ್ಯಜೀವಿ ವೈದ್ಯರು, ಮರಣೋತ್ತರ ಪರೀಕ್ಷೆ ನಡೆಸಿ, ನಂತರ ಅರಣ್ಯಾಧಿಕಾರಿಗಳು ಅಂತಿಮ ಸಂಸ್ಕಾರ ನಡೆಸಿದ್ದಾರೆ.
ಸ್ಥಳಕ್ಕೆ ಡಿಸಿಎಫ್ ಸೌರಭ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹಾಸನ: ಕ್ಷುಲ್ಲಕ ಕಾರಣಕ್ಕಾಗಿ ಪುಡಿರೌಡಿಯೊಬ್ಬ ಮತ್ತೋರ್ವ ರೌಡಿಗೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ (Channarayapatna) ನಡೆದಿದೆ.
ಕುಖ್ಯಾತ ರೌಡಿಶೀಟರ್ ಚೇತು ಅಲಿಯಾಸ್ ಮತ್ತು ಬರಗೂರು ವಿಜಿ ಸಹಚರರರಾದ ಯತೀಶ್ ಹಾಗೂ ಅಡಗೂರು ಗ್ರಾಮದ ದಿಲೀಪ್ ನಡುವೆ ಗಲಾಟೆಯಾಗಿದೆ. ಬಳಿಕ ಅಲ್ಲಿಂದ ಇಬ್ಬರೂ ಬೈಕ್‍ನಲ್ಲಿ ತೆರಳಿದ್ದರು. ಶಿವನ ಪಾರ್ಕ್ ಹತ್ತಿರ ಮೂತ್ರ ವಿಸರ್ಜನೆಗೆ ಯತೀಶ್ ಬೈಕ್ ನಿಲ್ಲಿಸಿದ್ದ. ಈ ವೇಳೆ ದಿಲೀಪ್ ಡ್ರ್ಯಾಗರ್‌ನಿಂದ ಯತೀಶ್‍ಗೆ ಇರಿದಿದ್ದಾನೆ. ಇದನ್ನೂ ಓದಿ: ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ – ಕಾಲೇಜು ವಿದ್ಯಾರ್ಥಿ ದುರ್ಮರಣ
ದಾಳಿಯಿಂದ ಯತೀಶ್‍ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಯತೀಶ್‍ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೂ ಮುನ್ನ ಯತೀಶ್, ದಿಲೀಪ್ ಮತ್ತು ಕಾರ್ತಿಕ್ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿದೆ.
ಹಾಸನ: ಕೌಟುಂಬಿಕ ಕಲಹ (Family Feud) ಹಿನ್ನೆಲೆ ಹಾಸನ (Hassan) ಜಿಲ್ಲೆಯ ಚನ್ನರಾಯಪಟ್ಟಣ (Channarayapatna) ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇವರಿಬ್ಬರ ಸಾವಿಗೆ ಅತ್ತೆ-ಸೊಸೆ ನಡುವಿನ ಹೊಂದಾಣಿಕೆ ಕಾರಣ ಅಲ್ಲ ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ.
ಮೃತ ಭರತ್ ಹೆಚ್‌ಐವಿ ಸೋಂಕಿತನಾಗಿದ್ದ ಎಂಬ ಸತ್ಯವನ್ನು ಆತನ ಪತ್ನಿ ಕುಟುಂಬದವರು ಇದೀಗ ಬಹಿರಂಗಪಡಿಸಿದ್ದಾರೆ. ಪತ್ನಿ ಕುಟುಂಬಸ್ಥರು ಭರತ್‌ಗೆ 8 ತಿಂಗಳ ಹಿಂದೆ ನಾಲ್ಕು ಲಕ್ಷ ಹಣ, 100 ಗ್ರಾಂ ಚಿನ್ನ ನೀಡಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು. ಆದರೆ ಭರತ್ ಮೂರು ವರ್ಷಗಳ ಹಿಂದಿನಿಂದಲೇ ಹೆಚ್‌ಐವಿ ಸೋಂಕಿತನಾಗಿದ್ದ. ಮಾರಣಾಂತಿಕ ಕಾಯಿಲೆ ಸೋಂಕು ತಗುಲಿರುವುದನ್ನು ಮುಚ್ಚಿಟ್ಟು ಮದುವೆಯಾಗಿದ್ದ ಭರತ್, ಮದುವೆಯಾದ ಹದಿನೈದು ದಿನ ಮಾತ್ರ ಪತ್ನಿ ಜೊತೆ ಸಂಸಾರ ಮಾಡಿದ್ದ. ಬಳಿಕ ಪತ್ನಿಯಿಂದ ಅಂತರ ಕಾಯ್ದುಕೊಂಡಿದ್ದ. ಅಲ್ಲದೇ ಈ ವಿಚಾರವನ್ನು ಪತ್ನಿಯಿಂದ ಮುಚ್ಚಿಟ್ಟು ಕಾಯಿಲೆಗೆ ಮಾತ್ರೆ ತೆಗೆದುಕೊಳ್ಳುತ್ತಿದ್ದ. ಇದನ್ನೂ ಓದಿ: ಬೆಸ್ಟ್ ಆಕ್ಟಿಂಗ್ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದ್ರೆ.. – ದರ್ಶನ್ ಅನ್‌ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್
ತನ್ನ ಹುಳುಕು ಮುಚ್ಚಿಕೊಳ್ಳಲು ಪಂಚಾಯ್ತಿ ಸೇರಿಸಿ ನನ್ನ ಪತ್ನಿ ಹೆಣ್ಣೇ ಅಲ್ಲ, ಮದ್ಯಪಾನ ಮಾಡುತ್ತಾಳೆ, ಮಾದಕ ವಸ್ತು ತೆಗೆದುಕೊಳ್ಳುತ್ತಾಳೆ ಎಂದು ಭರತ್ ಸುಳ್ಳು ಆರೋಪ ಮಾಡಿದ್ದ. ಕೆಲವು ದಿನಗಳ ಕಾಲ ಸಂಬಂಧಿಕರ ಮನೆಯಲ್ಲಿ ಕೂಡ ಪತ್ನಿಯನ್ನು ಉಳಿಸಿದ್ದ. ಭರತ್ ವಂಚನೆ ತಿಳಿಯದೇ ಮತ್ತೊಂದು ಪಂಚಾಯ್ತಿ ನಡೆಸಿ ಪತ್ನಿ ಕುಟುಂಬಸ್ಥರು ಆಕೆಗೆ ಬುದ್ಧಿವಾದ ಹೇಳಿ ಗಂಡನ ಮನೆಗೆ ಕಳುಹಿಸಿದ್ದರು. ಆದರೆ ಭರತ್ ತನ್ನ ಪತ್ನಿ ತಪ್ಪು ಮಾಡದೇ ಇದ್ದರೂ ಮತ್ತೆ ತವರು ಮನೆಗೆ ಕಳುಹಿಸಿದ್ದ. ಇದನ್ನೂ ಓದಿ: ಪ್ರಧಾನಿ ಮೋದಿ ನನ್ನ ನೆಚ್ಚಿನ ನಟ: ಹೇಳಿಕೆ ನೀಡಿ ಪೇಚಿಗೆ ಸಿಲುಕಿದ ರಾಜಸ್ಥಾನ ಸಿಎಂ
ಭರತ್ ಹೆಚ್‌ಐವಿ ರೋಗಕ್ಕೆ ತೆಗೆದುಕೊಳ್ಳುವ ಮಾತ್ರೆ ಡಬ್ಬಿಯನ್ನು ಸದಾ ಕೊರಳಿಗೆ ಕಟ್ಟಿಕೊಂಡು ತಿರುಗುತ್ತಿದ್ದ. ತನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದು ಹಾಗೂ ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಅನುಮಾನ ಪಟ್ಟ ಪತ್ನಿ, ಭರತ್ ಸ್ನಾನಕ್ಕೆ ಹೋಗಿದ್ದಾಗ ಮಾತ್ರೆಯ ಫೋಟೋ ತೆಗೆದು ತನ್ನ ಅಕ್ಕನಿಗೆ ಕಳುಹಿಸಿದ್ದಳು. ಆಕೆಯ ಸಹೋದರಿ ಮಾತ್ರೆಯ ಫೋಟೋಗಳನ್ನು ತನಗೆ ಪರಿಚಯ ಇರುವ ನರ್ಸ್‌ಗೆ ಕಳುಹಿಸಿದ್ದರು. ಇದನ್ನು ಪರಿಶೀಲಿಸಿದ ನರ್ಸ್ ಇದು ಹೆಚ್‌ಐವಿ ಸೋಂಕಿತರು ತೆಗೆದುಕೊಳ್ಳುವ ಮಾತ್ರೆ ಎಂದು ತಿಳಿಸಿದ್ದಾರೆ. ಇದರಿಂದ ಭರತ್ ಹೆಚ್‌ಐವಿ ಸೋಂಕಿತ ಎಂದು ಪತ್ನಿ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ. ಇದನ್ನೂ ಓದಿ: ಬಸ್, ಮೆಟ್ರೋ ಬಳಿಕ ಪ್ರಯಾಣಿಕರಿಗೆ ಮತ್ತೊಂದು ಶಾಕ್ – ಇಂದೇ ಫೈನಲ್ ಆಗುತ್ತಾ ಆಟೋ ದರ ಏರಿಕೆ?
ಬಳಿಕ ಎರಡೂ ಕಡೆಯ ಕುಟುಂಬಸ್ಥರಿಂದ ಮತ್ತೊಂದು ರಾಜಿ ಪಂಚಾಯ್ತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಭರತ್ ಆಧಾರ್ ಕಾರ್ಡ್ ತರಬೇಕು. ಇಬ್ಬರೂ ಮೆಡಿಕಲ್ ಟೆಸ್ಟ್‌ಗೆ ಒಳಪಡಬೇಕು ಎಂದು ನಿರ್ಧಾರ ಮಾಡಿ ಸೋಮವಾರ ಮೆಡಿಕಲ್ ಟೆಸ್ಟ್‌ಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ಭರತ್ ಆಧಾರ್ ಕಾರ್ಡ್ ಕೊಡದೇ ಸತಾಯಿಸಿದ್ದ. ಪಂಚಾಯ್ತಿ ನಡೆದರೆ ತಾನು ಮುಚಿಟ್ಟಿದ್ದ ಎಲ್ಲಾ ಸತ್ಯ ಬಯಲಾಗಲಿದೆ ಎಂಭ ಭಯದಿಂದ ಭರತ್ ಮಾ.9 ರಂದು ರಾತ್ರಿ ಬೆಂಗಳೂರಿನಿಂದ ತಾಯಿ ಜೊತೆ ದಿಡಿಗದ ಸಂಬಂಧಿಕರ ಮನೆಗೆ ಬಂದಿದ್ದ. ಬಳಿಕ ಸಂಬಂಧಿಕರಿಂದ ಬೈಕ್ ಪಡೆದು ಕಬ್ಬಳಿ ಮನೆಗೆ ಬಂದು ಅಲ್ಲಿಂದ ನೆರಲೆಕೆರೆ ಗ್ರಾಮದಲ್ಲಿರುವ ಅಜ್ಜಿ ಮನೆಗೆ ತಾಯಿ ಮಗ ತೆರಳಿದ್ದರು. 100 ಗ್ರಾಂ ಒಡವೆ, 30 ಗ್ರಾಂ ಚೈನು ಎಲ್ಲವನ್ನೂ ಅಜ್ಜಿಗೆ ಕೊಟ್ಟು ಅವರ ಆಶೀರ್ವಾದ ಪಡೆದು ಭರತ್ ಹಾಗೂ ತಾಯಿ ಮರಳಿ ಗ್ರಾಮಕ್ಕೆ ಬಂದಿದ್ದರು. ಮಾ.10ರ ಮುಂಜಾನೆ 3:15 ರಿಂದ 4 ಗಂಟೆ ನಡುವೆ ಗ್ರಾಮದ ನೀರಿನ ಕಟ್ಟೆಗೆ ಬಿದ್ದು ತಾಯಿ-ಮಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಭರತ್ ತಾಯಿ ಜಯಂತಿ ಗ್ರಾಮದ ದೇವರಿಗೆ ಕೈಮುಗಿದು ಹೋಗಿದ್ದರು. ಇದನ್ನೂ ಓದಿ: ಕೆಂಪು ಮೆಣಸಿನಕಾಯಿಗೆ ಬೆಂಬಲ ಬೆಲೆ – ಕರ್ನಾಟಕಕ್ಕೂ ವಿಸ್ತರಿಸಲು ಸಚಿವ ಪ್ರಹ್ಲಾದ್ ಜೋಶಿ ಒತ್ತಾಯ
ಭರತ್ ತಾಯಿ ಜಯಂತಿ ಅವರಿಗೆ ಸೇರಿದ್ದ 150 ತೆಂಗಿನ ಮರ, 2 ಎಕರೆ ಹೊಲ ಮತ್ತು 1 ಮನೆ ಮತ್ತು ಆಸ್ತಿ ಲಪಟಾಯಿಸಲು ಜಯಂತಿ ಸಂಬಂಧಿಕರಿಂದ ಭರತ್ ಪತ್ನಿ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಪತ್ನಿ ಕುಟುಂಬಸ್ಥರು ತಿಳಿಸಿದ್ದು, ಭರತ್‌ನಿಂದ ಮಗಳ ಬಾಳು ಹಾಳಾಗಿದೆ ಎಂದು ಕಣ್ಣೀರಿಡುತ್ತಿದ್ದಾರೆ. ಸದ್ಯ ಭರತ್ ಪತ್ನಿಯನ್ನು ಆಕೆಯ ಕುಟುಂಬಸ್ಥರು ಹೆಚ್‌ಐವಿ ಪರೀಕ್ಷೆಗೆ ಒಳಪಡಿಸಿದ್ದು, ನೆಗೆಟಿವ್ ರಿಪೋರ್ಟ್ ಬಂದಿದೆ. ಆದರೆ ಭರತ್ ಪತ್ನಿಯ ಮಾನಸಿಕ ಕಿರುಕುಳ, ಹಠಮಾರಿತನದಿಂದ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಾಯಿ ಜಯಂತಿ ಸಂಬಂಧಿಕರು ಬಿಂಬಿಸಿದ್ದಾರೆ. ತಾಯಿ-ಮಗನ ಸಾವಿಗೆ ನಮ್ಮ ಮಗಳು ಕಾರಣಳಲ್ಲ ಎಂದು ಕುಟುಂಬಸ್ಥರು ಸ್ಪಷ್ಟನೆ ನೀಡಿದ್ದಾರೆ. ಸದ್ಯ ತಾಯಿ-ಮಗನ ಮೃತದೇಹ ನೋಡಲು ಭರತ್ ಸಂಬಂಧಿಕರು ಆತನ ಪತ್ನಿ ಹಾಗೂ ಕುಟುಂಬಸ್ಥರಿಗೆ ಅವಕಾಶ ನೀಡಿಲ್ಲ. ಇದನ್ನೂ ಓದಿ: EXCLUSIVE |ರನ್ಯಾ ಬಳಿ ಇದೆ ದುಬೈ ರೆಸಿಡೆಂಟ್ ವೀಸಾ – ಜಾಮೀನು ಸಿಕ್ರೆ ದೇಶ ಬಿಟ್ಟು ಹೋಗ್ತಾರಾ?
ಹಾಸನ: ಕೌಟುಂಬಿಕ ಕಲಹ (Family Feud) ಹಿನ್ನೆಲೆ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ.
ಜಯಂತಿ (60), ಭರತ್ (35) ಆತ್ಮಹತ್ಯೆಗೆ ಶರಣಾದ ತಾಯಿ-ಮಗ. ಭರತ್ ಕಳೆದ ಎಂಟು ತಿಂಗಳ ಹಿಂದಷ್ಟೇ ಅರಸೀಕೆರೆ (Arasikere) ತಾಲೂಕು ಬಾಗೂರನಹಳ್ಳಿ ಗ್ರಾಮದ ಯುವತಿಯೊಂದಿಗೆ ವಿವಾಹವಾಗಿದ್ದರು. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇಲ್ಲದೆ ಪದೇಪದೇ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಭರತ್ ಪತ್ನಿ ಮನೆಬಿಟ್ಟು ತವರು ಮನೆಗೆ ಹೋಗಿದ್ದರು. ಇದನ್ನೂ ಓದಿ: ನಲ್ಲೂರು ಮಠ ವರ್ಸಸ್ ಬಡಾಮಕಾನ್ ತೆರವು ವಿವಾದ – ಜಿಲ್ಲಾ ವಕ್ಫ್ ಅಧಿಕಾರಿ ಅಮಾನತು
ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎರಡು ಬಾರಿ ರಾಜಿ ಪಂಚಾಯ್ತಿ ಮಾಡಿದ್ದರು. ಆದರೂ ಭರತ್ ಪತ್ನಿ ಗಂಡನ ಜೊತೆ ಇರದೇ ತವರು ಮನೆಗೆ ಹೋಗಿದ್ದರು. ಇದರಿಂದ ಮನನೊಂದಿದ್ದ ಭರತ್ ಹಾಗೂ ತಾಯಿ ಜಯಂತಿ ಕೆರೆಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ನಾವ್ ಹೇಳಿದಂಗೆ ಕೆಲ್ಸ ಮಾಡೋ ಹಾಗಿದ್ರೆ ಇಲ್ಲಿರಿ, ಇಲ್ಲ ನಡೀರಿ: ಮಹಿಳಾ ಅಧಿಕಾರಿ ಮೇಲೆ ಸಚಿವ ವೆಂಕಟೇಶ್ ದರ್ಪ
ಹಾಸನ: ಕೆರೆಯಲ್ಲಿ ಈಜಲು (Swiming) ತೆರಳಿದ್ದ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ಚನ್ನರಾಯಪಟ್ಟಣ (Channarayapatna) ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ನಡೆದಿದೆ.
ಯಶ್ವಂತ್ ಸಿಂಗ್ ಅಲಿಯಾಸ್ ಗಣೇಶ್ (29), ರೋಹಿತ್ (28) ಮೃತ ಯುವಕರು. ಮೃತ ಗಣೇಶ್ ಮತ್ತು ರೋಹಿತ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಭಾನುವಾರ ಕೆಲಸ ಮುಗಿಸಿ ಇಬ್ಬರು ಸಂಜೆ ಕೆರೆಗೆ ಈಜಲು ತೆರಳಿದ್ದರು. ಇಬ್ಬರಿಗೂ ಈಜು ಗೊತ್ತಿದ್ದರಿಂದ ಮೊದಲು ರೋಹಿತ್ ಕೆರೆಗೆ ಧುಮುಕಿದ್ದಾನೆ. ಈ ವೇಳೆ ಕೆರೆಯಲ್ಲಿ ಬೆಳೆದಿದ್ದ ಬಳ್ಳಿಗಳು ರೋಹಿತ್ ಕಾಲಿಗೆ ಸುತ್ತಿಕೊಂಡಿದೆ.
ಹಾಸನ: ಚನ್ನರಾಯಪಟ್ಟಣದ (Channarayapatna) ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಡೆದಿದ್ದ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತ್ನಿಯೇ (Wife) ತನ್ನ ಪ್ರಿಯಕರನೊಂದಿಗೆ ಸೇರಿ ಸುಪಾರಿ ಕೊಟ್ಟು ಹತ್ಯೆ ನಡೆಸಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ಶುಕ್ರವಾರ ಮುಂಜಾನೆ ಮರುವನಹಳ್ಳಿ-ಮಡಬ ರಸ್ತೆಯಲ್ಲಿ ನಂಜುಂಡೇಗೌಡ ಎಂಬವರ ಹತ್ಯೆಯಾಗಿತ್ತು. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದಾಗ, ಗ್ರಾಮಸ್ಥರು ನಂಜುಂಡೇಗೌಡರ ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಮೃತನ ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆಯ ಕಾರಣ ಬಯಲಾಗಿದೆ.
14 ವರ್ಷಗಳ ಹಿಂದೆ ನಂಜುಂಡೇಗೌಡರ ಮದುವೆಯಾಗಿತ್ತು. ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಜೊತೆ ಕುಂಬಾರಹಳ್ಳಿಯಲ್ಲಿ ಅವರು ವಾಸವಿದ್ದರು. ಮದುವೆಯಾಗಿ ಮೂರು ವರ್ಷದವರೆಗೂ ಪತಿ ಜೊತೆ ಚೆನ್ನಾಗಿದ್ದ ಮಹಿಳೆ, ನಂತರ ಎದುರು ಮನೆಯ ಅರುಣ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು.
ಅರುಣ್‌ಗೆ ಇಬ್ಬರು ಮಕ್ಕಳಿದ್ದು, ಪತ್ನಿಯಿಂದ ದೂರವಿದ್ದ. ಈ ಹಿಂದೆ ಮಹಿಳೆ ಹಾಗೂ ಅರುಣ್ ಅಕ್ರಮ ಸಂಬಧದ ವಿಚಾರವಾಗಿ ನಂಜುಂಡೇಗೌಡ ಪೊಲೀಸ್ ಠಾಣೆಗೆ ದೂರು ನಿಡಿದ್ದರು. ಬಳಿಕ ರಾಜಿ – ಪಂಚಾಯ್ತಿ ನಡೆಸಿ ಹೊಂದಿಕೊಂಡು ಹೋಗುವಂತೆ ಕುಟುಂಬಸ್ಥರು ತಿಳುವಳಿಕೆ ಹೇಳಿದ್ದರು. ಅಲ್ಲದೇ ಅಕ್ರಮ ಸಂಬಂಧಕ್ಕೆ ಯಾರೂ ಅಡ್ಡಿ ಬರಬಾರದೆಂದು ಪತಿಯನ್ನು ಅವರ ಸಂಬಂಧಿಕರಿಂದ ಮಹಿಳೆ ದೂರ ಮಾಡಿದ್ದಳು. ಆದರೆ ಎರಡು ಹೆಣ್ಣುಮಕ್ಕಳಿಗಾಗಿ ನಂಜುಂಡೇಗೌಡ ಎಲ್ಲವನ್ನು ಸಹಿಸಿಕೊಂಡಿದ್ದರು.
ಕೆಲ ದಿನಗಳ ಹಿಂದೆ ಎರಡು ಬಾರಿ ನಂಜುಂಡೇಗೌಡರ ಮೇಲೆ ಅರುಣ್ ಮತ್ತು ಆತನ ಗ್ಯಾಂಗ್ ದಾಳಿ ಮಾಡಿತ್ತು. ಈ ವೇಳೆ ಅದೃಷ್ಟವಶಾತ್ ಬಚಾವಾಗಿದ್ದರು. ಮೂರನೇ ಬಾರಿ ಮಿಸ್ ಆಗಬಾರದು ಎಂದು ಮೂರು ಕಡೆ ಕೊಲೆ ಮಾಡಲು ಹಂತಕರು ಸ್ಕೆಚ್ ಹಾಕಿದ್ದರು. ಅದರಂತೆ ಬ್ಯಾಡರಹಳ್ಳಿಗೆ ಹೋಗುವ ರಸ್ತೆ ಮಧ್ಯೆಯಿರುವ ಬಾರೆಯ ಬಳಿ ಮರದಪಟ್ಟಿಗೆ ಉದ್ದವಾದ 50ಕ್ಕೂ ಹೆಚ್ಚು ಮೊಳೆ ಹೊಡೆದು, ಹುಲ್ಲಿನಿಂದ ಮುಚ್ಚಿ ವಾಹನ ಪಂಚರ್ ಮಾಡಿದ್ದರು. ಪಂಚರ್ ಆದ ವಾಹನದಿಂದ ಇಳಿಯುತ್ತಿದ್ದಂತೆ ಕಣ್ಣಿಗೆ ಖಾರದ ಪುಡಿ ಎರಚಿ ಲಾಂಗ್‌ನಿಂದ ದಾಳಿ ನಡೆಸಿ ಹತ್ಯೆಗೈದಿದ್ದರು. ಹತ್ಯೆಯ ವಿಚಾರ ಮಹಿಳೆಗೆ ತಿಳಿಯುತ್ತಿದ್ದಂತೆ ಅರ್ಧ ಗಂಟೆ ಮೂರ್ಛೆ ಹೋದಂತೆ ನಟಿಸಿದ್ದಳು.
ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.