Tag: channaraj hattiholi

  • ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ – `ವಿಷಕನ್ಯೆ’ ಪದ ಬಳಕೆಗೆ ಹೆಬ್ಬಾಳ್ಕರ್ ಸಹೋದರ ಖಂಡನೆ

    ರಮೇಶ್ ಜಾರಕಿಹೊಳಿಗೆ ಕಾಮನ್ ಸೆನ್ಸ್ ಇಲ್ಲ – `ವಿಷಕನ್ಯೆ’ ಪದ ಬಳಕೆಗೆ ಹೆಬ್ಬಾಳ್ಕರ್ ಸಹೋದರ ಖಂಡನೆ

    ಬೆಳಗಾವಿ: ರಮೇಶ್ ಜಾರಕಿಹೊಳಿಗೆ (Ramesh Jarkiholi) ಕಾಮನ್‌ಸೆನ್ಸ್ ಇಲ್ಲ, ಅವರಂತಹ ನೀಚ ಮನಸ್ಥಿತಿಯೂ ನಮ್ಮದಲ್ಲ. ಈಗ ಅವರ ಪರಿಸ್ಥಿತಿ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡಂತೆ ಆಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಸಹೋದರ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ (Channaraj Hattiholi) ತಿರುಗೇಟು ನೀಡಿದ್ದಾರೆ.

    `ವಿಷಕನ್ಯೆ'ಯಿಂದ ಕಾಂಗ್ರೆಸ್ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಿದ ಆಡಿಯೋ ಇದೆ: ಜಾರಕಿಹೊಳಿ

    ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ `ವಿಷಕನ್ಯೆ’ ಪದ ಬಳಸಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಚನ್ನರಾಜ್ ಹಟ್ಟಿಹೊಳಿ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಇದನ್ನೂ ಓದಿ:`ವಿಷಕನ್ಯೆ’ಯಿಂದ ಕಾಂಗ್ರೆಸ್ ಹಾಳಾಗ್ತಿದೆ, ಡಿಕೆಶಿ ಗರ್ಲ್‌ಫ್ರೆಂಡ್‌ ಜೊತೆ ಮಾತನಾಡಿದ ಆಡಿಯೋ ಇದೆ: ಜಾರಕಿಹೊಳಿ

    ನನ್ನ ಮೇಲೆ ಷಡ್ಯಂತ್ರ, ಷಂಡರಂತೆ ರಾಜಕೀಯ ಮಾಡಿದ್ದಾನೆ - ಮಹಾನಾಯಕನ ವಿರುದ್ಧ ಜಾರಕಿಹೊಳಿ ಕಿಡಿ

    ಹೆಬ್ಬಾಳ್ಕರ್ (Lakshmi Hebbalkar) ಅವರ ವಿರುದ್ಧ `ವಿಷ ಕನ್ಯೆ’ ಪದ ಬಳಕೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ನಾವು ಅವರ ರೀತಿ ಹೇಳಿಕೆ ಕೊಟ್ಟರೆ ಜನ ನೋಡುತ್ತಾರೆ. ಇಂಥ ಪದ ಬಳಸಲು ಅವರಿಗೆ ಕಾಮನ್ ಸೆನ್ಸ್ ಇಲ್ಲ. ಗೋಕಾಕ್‌ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅಭಿಮಾನಿಗಳಿದ್ದಾರೆ. ಅಲ್ಲಿನ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನಟ ನಂದಮೂರಿ ತಾರಕರತ್ನ ಆರೋಗ್ಯ ಹೇಗಿದೆ?: ಹೆಲ್ತ್ ಬುಲೆಟಿನ್ ಗಾಗಿ ಕಾದ ಅಭಿಮಾನಿಗಳು

    ಬೆಳಗಾವಿ (Belagavi) ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಹೆಬ್ಬಾಳ್ಕರ್ ಅವರು ಟಿಕೆಟ್ ಪಡೆಯುವಾಗ ಜಿ. ಪರಮೇಶ್ವರ ಅವರು ಅಧ್ಯಕ್ಷರಾಗಿದ್ದರು. ಆದರೆ ಡಿಕೆಶಿ (DK Shivakumar) ಅವರು ಅಧ್ಯಕ್ಷರಾಗಿದ್ದು ಈಗ. ಇದರಿಂದ ಅವರು ಹೇಳೋದೆಲ್ಲಾ ಶುದ್ಧ ಸುಳ್ಳು ಅನ್ನೋದು ಗೊತ್ತಾಗುತ್ತೆ. ರಮೇಶ್ ಜಾರಕಿಹೊಳಿ ರೀತಿ ಅನ್ ಅಕೌಂಟೆಡ್ ದುಡ್ಡು ನಮ್ಮ ಬಳಿ ಇಲ್ಲ. ಅವರಂತಹ ನೀಚ ಮನಸ್ಥಿತಿಯೂ ನಮ್ಮದಲ್ಲ. ಇಂತಹ ಬೇಜವಾಬ್ದಾರಿ ಹೇಳಿಕೆಗಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟೀಕರಣ ನೀಡುವುದೂ ಇಲ್ಲ ಎಂದು ಹೇಳಿದ್ದಾರೆ.

    ಈಗ ಯಾಕೆ ಸಿಡಿ ಕೇಸ್?
    ನಿಮಗೆ ಅನ್ಯಾಯ ಆಗಿದ್ದರೆ, ಒಂದೂವರೆ ವರ್ಷದಿಂದ ಯಾಕೆ ಸಿಬಿಐಗೆ ಸಿಡಿ ಪ್ರಕರಣ ದಾಖಲಿಸಿಲ್ಲ? ತಮ್ಮ ಮೇಲೆ ಆರೋಪ ಮಾಡಿದಾಗ ಕಟ್ ಪೇಸ್ಟ್ ಆಡಿಯೋ ಕ್ಲಿಪ್ ಅಂತಾರೆ. ಅವರ ಬಳಿ ಇರುವುದೆಲ್ಲವೂ ಸತ್ಯವಾ? ಚುನಾವಣೆ ಸಮಯದಲ್ಲಿ ಇಡಿ, ಸಿಬಿಐ, ಐಟಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಿಬಿಐನಿಂದ ಅರೆಸ್ಟ್ ಮಾಡಿಸುತ್ತೇವೆ ಎಂದರೆ ಅವರ ಮಾತನ್ನ ಸಿಬಿಐ ಕೇಳುತ್ತದೆ ಎಂದರ್ಥ. ಅವರ ಹೇಳಿಕೆಯಿಂದ ಸಿಬಿಐ ಅವರ ಕಪಿಮುಷ್ಟಿಯಲ್ಲಿ ಇರುವುದು ಸ್ಪಷ್ಟವಾಗುತ್ತದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಮ್ಮ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಫುಲ್ ಟೈಮ್ ಪ್ಲೇಯರ್: MLC ಚನ್ನರಾಜ ಹಟ್ಟಿಹೊಳಿ

    ನಮ್ಮ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ ಫುಲ್ ಟೈಮ್ ಪ್ಲೇಯರ್: MLC ಚನ್ನರಾಜ ಹಟ್ಟಿಹೊಳಿ

    ಬೆಳಗಾವಿ: ನಮ್ಮ ಅಕ್ಕ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಪಾರ್ಟ್ ಟೈಮ್ ಪ್ಲೇಯರ್ ಅಲ್ಲ, ಫುಲ್ ಟೈಮ್ ಪ್ಲೇಯರ್ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ (Ramesh Jarkiholi) ಎಂಎಲ್‍ಸಿ ಚನ್ನರಾಜ ಹಟ್ಟಿಹೊಳಿ (Channaraj Hattiholi) ಟಾಂಗ್ ನೀಡಿದ್ದಾರೆ.

    ಬೆಳಗಾವಿ (Belagavi) ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಚುನಾವಣೆ ತಯಾರಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಅಕ್ಕ ಹೋರಾಟದಿಂದ ರಾಜಕೀಯಕ್ಕೆ ಬಂದವರು. ನಿತ್ಯ ಜನರ ಕಷ್ಟಗಳಿಗೆ ಸ್ಪಂದನೆ ಮಾಡುವ ಕೆಲಸಗಾರರು. ರಾಜಕೀಯದಲ್ಲಿ ಪಾರ್ಟ್ ಟೈಮ್ ಪ್ಲೇಯರ್ಸ್ ಇರುತ್ತಾರೆ. ಫುಲ್ ಟೈಮ್ ಪ್ಲೇಯರ್ಸ್ ಸಹ ಇರುತ್ತಾರೆ. ಇವರು ಫುಲ್ ಟೈಮ್ ಪ್ಲೇಯರ್, ದಿನವೂ ಜನರಿಗೆ ಸಿಗ್ತಾರೆ, ಭೇಟಿಯಾಗ್ತಾರೆ, ಕೆಲಸ ಮಾಡ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅಂತಾ ಅಷ್ಟೇ ಅಲ್ಲ ರಾಜ್ಯದಲ್ಲಿ ಕೆಲಸಗಾರರಿಗೆ ಯಾವತ್ತೂ ಸೋಲಿಲ್ಲ. ಅವರ ಜೊತೆ ಜನ ಯಾವತ್ತೂ ಇರುತ್ತಾರೆ. ಈಗ ಪಾರ್ಟ್ ಟೈಮ್ ಪ್ಲೇಯರ್ಸ್‍ದ್ದೆ ಪ್ರಾಬ್ಲಮ್ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೈದಾನ ಖಾಲಿ ಇದೆ, ನಾವೂ ತಯಾರಿದ್ದೇವೆ ನೀವು ಅಖಾಡಕ್ಕೆ ಧುಮುಕಿ – ಪರೋಕ್ಷವಾಗಿ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನ

    ಗ್ರಾಮೀಣ ಕ್ಷೇತ್ರಕ್ಕೆ ಪಾರ್ಟ್ ಟೈಮ್ ಪ್ಲೇಯರ್ಸ್ ಬಂದು ಹೋಗೋದು ಎಫೆಕ್ಟ್ ಆಗುತ್ತಾ ಎಂದು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದರ ಬಗ್ಗೆ ನಾವು ಈ ಸಂದರ್ಭದಲ್ಲಿ ಏನೂ ಹೇಳಲ್ಲ. ಒಂದು ಪಕ್ಷದ ಕೆಲಸ ಮಾಡೋದು ಬೇರೆ. ನಮ್ಮ ಪಕ್ಷದ ಕೆಲಸ ನಾವು ಮಾಡ್ತಿದ್ದೇವೆ. ಅವರು ಅವರ ಪಕ್ಷದ ಕೆಲಸ ಮಾಡ್ತಿದ್ದಾರೆ. ಅದಕ್ಕೆ ಅವರ ಪಕ್ಷದ ನಾಯಕರು ಚಿಂತನೆ ಮಾಡಬೇಕು. ನಾವು ನಮ್ಮ ಪಕ್ಷದ ಕೆಲಸ ಮಾಡ್ತಿದ್ದೇವೆ. ರಾಜಕೀಯದಲ್ಲಿ ಯಾವತ್ತೂ ಶಿಸ್ತಿನಿಂದ ರಾಜಕೀಯ ಮಾಡಬೇಕು. ಅವರ ಶಿಸ್ತಿನಿಂದ ಅವರು ರಾಜಕೀಯ ಮಾಡಲಿ, ನಮ್ಮ ಶಿಸ್ತಿನಿಂದ ನಾವು ರಾಜಕೀಯ ಮಾಡುತ್ತೇವೆ. ಆ ಶಿಸ್ತು ಏಲ್ಲಾದರೂ ಏನಾದರೂ ಆದಾಗ ನಾವು ಉತ್ತರ ಕೊಡುತ್ತೇವೆ. ಇವತ್ತಿನವರೆಗೂ ಆ ಸಂದರ್ಭ ಏನೂ ಇಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಚನ್ನರಾಜ ಹಟ್ಟಿಹೊಳಿ ಠಕ್ಕರ್ ನೀಡಿದ್ದಾರೆ. ಇದನ್ನೂ ಓದಿ: ಚಪ್ಪಲಿ ಹಾಕಿಕೊಂಡು ದೈವದ ದೀವಟಿಗೆ ನಿಂತ ತೇಜಸ್ವಿ ಸೂರ್ಯ- ಜನ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ: ಚನ್ನರಾಜ್ ಹಟ್ಟಿಹೊಳಿ

    ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ: ಚನ್ನರಾಜ್ ಹಟ್ಟಿಹೊಳಿ

    ಬೆಳಗಾವಿ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ ಎಂದು ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಆರೋಪಿಸಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಿಟ್ಲರ್ ಆಡಳಿತ ನಡೆಸುತ್ತಿದೆ. ಎಲ್ಲ ವಿಚಾರಗಳಲ್ಲೂ ಬಿಜೆಪಿ ಸರ್ಕಾರ ವಿಫಲವಾಗಿದೆ. ಬಿಜೆಪಿ ಸರ್ಕಾರದ ವಿರುದ್ಧ ಜನರು ರೋಸಿ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಲಿದೆ. ಜನರಿಗಾಗಿ ಮೇಕೆದಾಟು ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿ ಪಾದಯಾತ್ರೆ ಮಾಡಲಾಗುತ್ತಿದೆ. ಬಿಜೆಪಿಯವರ ಅಸಹಾಯಕ ಧೋರಣೆಯೇ ಯೋಜನೆಯ ಹಿನ್ನೆಡೆಗೆ ಕಾರಣವಾಗಿದೆ. ಮೇಕೆದಾಟು ಯೋಜನೆ ಜಾರಿಗೆ ತರಲು ಬಿಜೆಪಿ ಸಂಸದರು ಶ್ರಮಿಸುತ್ತಿಲ್ಲ. ಕಾಂಗ್ರೆಸ್ ಪಾದಯಾತ್ರೆಯಿಂದ ಬಿಜೆಪಿ ನಾಯಕರು ಹೆದರಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ್‌ ನಿಧನ

    ಪಂಚಾಯತ್ ಸದಸ್ಯರ ಗೌರವಧನದ ಹೆಚ್ಚಳಕ್ಕೆ ಆದ್ಯತೆ ಮೇರೆಗೆ ಹೋರಾಟ ಮಾಡುತ್ತೇವೆ. ನೆರೆಯ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಗೌರವ ಧನ ಹೆಚ್ಚಿದೆ. ನಮ್ಮ ರಾಜ್ಯದ ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಕ್ರಮ ವಹಿಸುತ್ತೇನೆ. ಪ್ರವಾಹದ ಸಮಯದಲ್ಲಿ ಸಾಕಷ್ಟು ಮನೆಗಳು ಹಾಳಾಗಿವೆ. ಮನೆಗಳ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಗಮನ ಹರಿಸುತ್ತಿಲ್ಲ. ಸರ್ಕಾರದ ಗಮನ ಸೆಳೆಯಲು ಪ್ರಯತ್ನ ಮಾಡುತ್ತೇನೆ. ಬೆಳಗಾವಿ ಜಿಲ್ಲೆ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಗ್ರಾಪಂ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡುವ ಕೆಲಸ ಮಾಡಬೇಕಿದೆ. ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ ತರಲು ಪ್ರಯತ್ನ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು. ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ ಭಾರತದ ನೆರವು – ಇರಾನ್ ಸಹಾಯ

    ಪ್ರಸ್ತುತ ಪರಿಷತ್ ಸದಸ್ಯರ ಅನುದಾನ ಕೇವಲ 2 ಕೋಟಿ ಇದೆ. 4 ಕೋಟಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ನಾಳೆಯಿಂದಲೇ ನಾನು ನನ್ನ ಕೆಲಸ ಆರಂಭಿಸುತ್ತೇನೆ. ಬೆಳಗಾವಿ ತಾಲೂಕಿನ ಪಿಡಿಓಗಳ ಸಭೆ ಮಾಡುತ್ತೇನೆ. ಪಿಡಿಓಗಳು ಕಮರ್ಷಿಯಲ್ ಆಗಿದ್ದಾರೆ ಅವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇನೆ. ಎಲ್ಲ ಪಂಚಾಯ್ತಿಗೂ ಭೇಟಿ ನೀಡಿ, ಸದಸ್ಯರ ಸಮಸ್ಯೆ ಆಲಿಸುತ್ತೇನೆ. ಭೇಟಿ ನೀಡಲ್ಲ ಎಂಬ ಕಳಂಕ ನಿವಾರಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದರು.

    ಕಾಂಗ್ರೆಸ್‍ನಿಂದ ಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದು ಹೆಮ್ಮೆಯ ವಿಷಯವಾಗಿದೆ. ನನ್ನ ಮೇಲೆ ವಿಶ್ವಾಸ ಇಟ್ಟು ಗೆಲ್ಲಿಸಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. 13 ಶಾಸಕರು, 2 ಸಂಸದರು, ಓರ್ವ ರಾಜ್ಯಸಭೆ ಸದಸ್ಯರು ಬಿಜೆಪಿಯವರಿದ್ದಾರೆ. ಈ ಚುನಾವಣೆಯನ್ನು ನಮ್ಮ ನಾಯಕರು ಸವಾಲಾಗಿ ಸ್ವೀಕರಿಸಿದ್ದರು. ಸಂಘಟನಾತ್ಮಕ ಪ್ರಯತ್ನ ಮಾಡಿ ಕೈ ಮುಖಂಡರು ನನ್ನನ್ನು ಗೆಲ್ಲಿಸಿದ್ದಾರೆ. ಪಂಚಾಯತ್ ರಾಜ್ಯ ಇಲಾಖೆಯಲ್ಲಿ ಹಲವು ಕೆಲಸ ಮಾಡಬೇಕಿದೆ. ಸತೀಶ್ ಜಾರಕಿಹೊಳಿ ಕೂಡ 2 ಸಲ ಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಸತೀಶ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾಂಬಿನೇಶನ್‍ನಲ್ಲಿ ದೊಡ್ಡ ಪ್ರಮಾಣದ ಗೆಲುವು ನನ್ನದಾಗಿದೆ. ಸತೀಶ್ ಅವರ ಅನುಭವ ನನಗೆ ಕೆಲಸ ಮಾಡಲು ಅನುಕೂಲ ಆಗಲಿದೆ ಎಂದು ನುಡಿದರು.

  • ಕೈ ನಾಯಕರು, ಕಾರ್ಯಕರ್ತರ ಪಾದವನ್ನು ಮುಟ್ಟಿ ಧನ್ಯವಾದ ತಿಳಿಸುತ್ತೇನೆ: ಹೆಬ್ಬಾಳ್ಕರ್

    ಕೈ ನಾಯಕರು, ಕಾರ್ಯಕರ್ತರ ಪಾದವನ್ನು ಮುಟ್ಟಿ ಧನ್ಯವಾದ ತಿಳಿಸುತ್ತೇನೆ: ಹೆಬ್ಬಾಳ್ಕರ್

    ಬೆಳಗಾವಿ: ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಾವು ಈ ವಿಜಯವನ್ನು ಸಾಧಿಸಿದ್ದೇವೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ.

    ವಿಧಾನ ಪರಿಷತ್ ಚುನಾವಣೆಯಲ್ಲಿ ಸಹೋದರ ಚನ್ನರಾಜ ಹಟ್ಟಿಹೋಳಿ ಗೆಲುವಿನ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ ಅವರು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಾವು ಈ ವಿಜಯವನ್ನು ಸಾಧಿಸಿದ್ದೇವೆ. ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ನಾವೂ ಇವತ್ತು ಚುನಾವಣೆಯಲ್ಲಿ ಗೆದಿದ್ದೇವೆ. ನಮ್ಮ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಪಾದವನ್ನು ಮುಟ್ಟಿ ಧನ್ಯವಾದ ತಿಳಿಸುತ್ತೇನೆ. ಈ ಚುನಾವಣೆ ನನಗೆ ಪ್ರತಿಷ್ಠೆಯಾಗಿತ್ತು. ನನಗೆ ಮೊದಲಿನಿಂದಲೂ ಗೆಲ್ಲುವ ನಿರೀಕ್ಷೆ ಇತ್ತು. ಪ್ರಕಾಶ್ ಹುಕ್ಕೇರಿ, ಗಣೇಶ್ ಹುಕ್ಕೇರಿ, ಅಂಜಲಿ ನಿಂಬಾಳ್ಕರ್, ಎ.ಬಿ ಪಾಟೀಲ್, ಕಾಕಾ ಸಾಹೇಬ್ ಪಾಟೀಲ್, ವೀರ್ ಕುಮಾರ್ ಪಾಟೀಲರು, ಮಹೇಶ್ ತಮ್ಮಣ್ಣ, ಮೋಹಿತೆ, ವಿಶ್ವಾಸ್ ವೈದ್ಯ ಹೀಗೆ ಪ್ರತಿಯೊಬ್ಬರು ಸಹ ಕೆಲಸ ಮಾಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್‌ಡಿಕೆ

    ಇದೇ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸೋಲಿಸಬೇಕೆಂದು ಲಖನ್ ಜಾರಕಿ ಹೊಳಿ ಅವರು ಸ್ಪರ್ಧಿಸಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು ನಾವು ಕಣದಲ್ಲಿ ಇದ್ದ 6 ಮಂದಿಯನ್ನು ಒಂದೇ ದೃಷ್ಟಿಯಿಂದ ನೋಡಿದ್ದೇವೆ. ಮೊದಲ ದಿನದಿಂದ ಇಲ್ಲಿಯವರೆಗೂ ಅವರು ಏನೇ ಮಾತನಾಡಿದ್ದರು ಅದ್ಯಾವುದಕ್ಕೂ ನಾವು ತಲೆ ಕೆಡಿಸಿಕೊಂಡಿಲ್ಲ. ಸಂಘಟಿತವಾಗಿ ಚುನಾವಣೆ ಪ್ರಚಾರ ಮಾಡಿದ್ದೇವು. ಅದರ ಫಲವೇ ಇಂದು ನಮ್ಮ ಗೆಲುವು. ಸಮಾಜ ನನ್ನ ಕೈ ಹಿಡಿದಿದೆ. ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಪಕ್ಷದ ನೇತೃತ್ವ ಇಂದು ವಿಜಯ ಶಾಲಿಯಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸಾಹುಕಾರನಿಗೆ ಸವಾಲು ಹಾಕಿ ಎರಡನೇ ಬಾರಿ ಗೆದ್ದ ಹೆಬ್ಬಾಳ್ಕರ್‌