Tag: Channaptna By Election

  • ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಯೋಗೇಶ್ವರ್ ಗೆಲುವಿಗೆ ಪತ್ನಿಯಿಂದ ಹೋಮ

    ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಯೋಗೇಶ್ವರ್ ಗೆಲುವಿಗೆ ಪತ್ನಿಯಿಂದ ಹೋಮ

    ಮಂಡ್ಯ: ಚನ್ನಪಟ್ಟಣ ಉಪಚುನಾವಣೆಯಲ್ಲಿ (Channapatna By Election) ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ (CP Yogeshwar) ಗೆಲವು ಸಾಧಿಸಬೇಕೆಂದು ಯೋಗೇಶ್ವರ್ ಪತ್ನಿ ಶೀಲಾ ಮಂಡ್ಯ (Mandya) ಜಿಲ್ಲೆಯ ಮದ್ದೂರಿನ (Maddur) ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ದಾರೆ.

    ಶ್ರೀಪಾದ್ ಆಚಾರ್ಯ ಎಂಬವರ ನೇತೃತ್ವದಲ್ಲಿ ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ (Hole Anjaneya Swamy Temple) ವಾಯುಸ್ಥಿತಿ ಪುನಃ ಚರಣ ವಿಶೇಷ ಹೋಮವನ್ನು ಶೀಲಾ ಯೋಗೇಶ್ವರ್ ನಡೆಸಿದ್ದಾರೆ. ಇತ್ತಿಚಿಗಷ್ಟೇ ಯೋಗೇಶ್ವರ್ ಸಹ ಹೊಳೆ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ಹೊಳೆ ಆಂಜನೇಯಸ್ವಾಮಿಗೆ ಒಂದುಕಾಲು ರೂ. ಹರಕೆ ಕಟ್ಟಿದ್ದರು. ಇದನ್ನೂ ಓದಿ: ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ

    ಇದೀಗ ಯೋಗೇಶ್ವರ್ ಪತ್ನಿ ಶೀಲಾ ಸಹ ಬೆಳಗ್ಗೆಯೇ ದೇವಸ್ಥಾನಕ್ಕೆ ಬಂದು ಆರಂಭದಲ್ಲಿ ಹೊಳೆ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಹೋಮದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ಉಪಚುನಾವಣೆಯಲ್ಲಿ ಪತಿ ಯೋಗೇಶ್ವರ್ ಗೆಲವು ಸಾಧಿಸಲಿ ಎಂದು ಎಂದು ಶೀಲಾ ಯೋಗೇಶ್ವರ್ ಪ್ರಾರ್ಥನೆ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಎನ್‌ಕೌಂಟರ್: ಇಬ್ಬರು ಯೋಧರಿಗೆ ಗಾಯ

  • ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ: ಡಿಕೆಶಿ

    ಚನ್ನಪಟ್ಟಣದಲ್ಲಿ ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ: ಡಿಕೆಶಿ

    ಬೆಂಗಳೂರು: ಚನ್ನಪಟ್ಟಣದಲ್ಲಿ (Channapatna) ರಣರಂಗ ಆಡಿದವರೆಲ್ಲಾ ಮುಗಿದು ಹೋಗಿದ್ದಾರೆ. ನಾವು ಮಾಡಿದ ಕೆಲಸಕ್ಕೆ ಪಟ್ಟಿ ಹಾಕಿ ಚನ್ನಪಟ್ಟಣದ ಜನ ಮಾರ್ಕ್ಸ್ ಕೊಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಚನ್ನಪಟ್ಟಣ ಪ್ರಚಾರದ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಚನ್ನಪಟ್ಟಣದಲ್ಲಿ ಯಾವ ರಣನೂ ಇಲ್ಲ, ರಂಗವೂ ಇಲ್ಲ. ಮತದಾರನ ಹೃದಯ ಗೆಲ್ಲಬೇಕು. ನಾವು ಮಾಡಿರುವ ಕೆಲಸಕ್ಕೆ, ಮಾಡುತ್ತಿರುವ ಕೆಲಸಕ್ಕೆ ಜನ ಗುರುತಿಸಿ ಎಂದು ಕೇಳಲು ಹೋಗುತ್ತಿದ್ದೇವೆ. ರಣರಂಗ ಆಡಿದವರೆಲ್ಲ ಮುಗಿದು ಹೋಗಿದ್ದಾರೆ. ಈಗ ಏನಿದ್ದರೂ ಜನರ ಲಾಭ ಮಾತ್ರ ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ರು. ಇದನ್ನೂ ಓದಿ: ವಿಶ್ವಗುರು ಬಸವಣ್ಣರನ್ನೇ ಕತ್ತಲೆಗೆ ದೂಡಿದ ಬಿಬಿಎಂಪಿ – ನಿರ್ವಹಣೆ ಇಲ್ಲದೇ ಉದುರುತ್ತಿದೆ ಪುತ್ಥಳಿ ಬಣ್ಣ!

    ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಯಕ ಆದವನು ಮತದಾರರಿಗೆ ಏನು ಕೊಡುತ್ತಾನೆ, ಯಾವ ರೀತಿ ಸಹಾಯ ಮಾಡುತ್ತಾನೆ ಅವರ ಬದುಕನ್ನು ಯಾವ ರೀತಿ ಬದಲಾವಣೆ ಮಾಡುತ್ತಾನೆ ಅದು ಬಹಳ ಮುಖ್ಯ. ಯಾರು ಏನೇನು ಮಾಡಿದ್ದಾರೆ ಅನ್ನೋ ಪಟ್ಟಿ ಈ ಚುನಾವಣೆಯಲ್ಲಿ ಲೆಕ್ಕಕ್ಕೆ ಬರುತ್ತದೆ. ಜನ ತೀರ್ಮಾನ ಮಾಡುತ್ತಾರೆ. ಡಿಕೆ ಸುರೇಶ್, ಡಿಕೆ ಶಿವಕುಮಾರ್, ಕುಮಾರಸ್ವಾಮಿ, ಯೋಗೇಶ್ವರ್ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಜನರು ಪಟ್ಟಿ ಹಾಕುತ್ತಾರೆ. ಅದು ಬಿಟ್ಟರೆ ಯಾವ ರಣನೂ ಇಲ್ಲ, ರಂಗನೂ ಇಲ್ಲ ಏನು ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: Bengaluru Traffic Jam: ರಜೆ ಮುಗಿಸಿ ಬೆಂಗಳೂರಿನತ್ತ ಜನ, ಎಲ್ಲೆಲ್ಲೂ ಜಾಮ್‌ ಜಾಮ್!

    ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿ ನಾಯಕರಿಂದ ಪ್ರಚಾರ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ನಾಯಕರು ಸಾಥ್ ಕೊಟ್ಟಿರೋದು ಒಳ್ಳೆಯದು ಅಲ್ಲವಾ. ಬಿಜೆಪಿ ಪಾದಯಾತ್ರೆಗಂತೂ ಜೆಡಿಎಸ್ ಅವರು ಸಾಥ್ ಕೊಟ್ಟಿರಲಿಲ್ಲ. ಆದರೂ ಜೆಡಿಎಸ್‌ಗೆ ಬಿಜೆಪಿ ಅವರು ಸಾಥ್ ಕೊಡುತ್ತಿದ್ದಾರೆ, ಕೊಡಲಿ ಎಂದು ಬಿಜೆಪಿ ನಾಯಕರಿಗೆ ತಿವಿದರು. ಇದನ್ನೂ ಓದಿ: ರಾಜಕೀಯ ಏನಾದ್ರೂ ಇರಲಿ, ಜಯನಗರಕ್ಕೆ ಅನುದಾನ ಕೊಡಿ – ಡಿಕೆಶಿಗೆ ಸೆಲೆಬ್ರಿಟಿಗಳ ಮನವಿ