Tag: Channapatna

  • ಕೇಂದ್ರದಿಂದ ಬೋಗಸ್ ಬಜೆಟ್, ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ: ಡಿಕೆ ಸುರೇಶ್

    ಕೇಂದ್ರದಿಂದ ಬೋಗಸ್ ಬಜೆಟ್, ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ: ಡಿಕೆ ಸುರೇಶ್

    ರಾಮನಗರ: ಇದು ಬೋಗಸ್ ಬಂಡಲ್ ಬಜೆಟ್. ಬಿಹಾರಕ್ಕೆ (Bihar) ಬಂಪರ್ ಕೊಟ್ಟು ಕರ್ನಾಟಕಕ್ಕೆ (Karnataka) ಬಂಡಲ್ ಕೊಟ್ಟಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಕಿಡಿಕಾರಿದ್ದಾರೆ.

    ಚನ್ನಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿದ್ದಾರೆ. ಇದನ್ನು ಸರಿಪಡಿಸದಿದ್ದರೆ ಬಹುಶಃ ಬೇರೆಬೇರೆ ರೀತಿ ಕೂಗೂ ಏಳುತ್ತಾ ಇರುತ್ತದೆ. ಆಮೇಲೆ ತಡೆಯೋದಕ್ಕೆ ನಿಮಗೆ ಕಷ್ಟ ಆಗುತ್ತದೆ. ಬಿಜೆಪಿಯವರಿಗೆ (BJP) ಚುನಾವಣಾ ದೃಷ್ಟಿ ಅಷ್ಟೇ. ಅವರಿಗೆ ಅಭಿವೃದ್ಧಿ ಮುಖ್ಯ ವಿಚಾರ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನವೆಂಬರ್ ಗೂಗ್ಲಿ ಹಾಕಿದ ಆರ್.ಅಶೋಕ್; ಕಾಂಗ್ರೆಸ್ ಸಚಿವರು ಕೆಂಡ, ಇತ್ತ ದೆಹಲಿಗೆ ಹೋಗ್ತಾರಾ ಪರಂ ಟೀಂ?

    ಮಧ್ಯಮ ವರ್ಗಕ್ಕೆ ಒಂದಿಷ್ಟು ತೆರಿಗೆ ವಿನಾಯಿತಿ ನೀಡಿ ಉಳಿದಂತವರಿಗೆ ರೈತರು, ಮಹಿಳೆಯರು ಯುವಕರಿಗೆ, ದಲಿತರ ಹೆಸರು ಹೇಳಿದ್ದಾರೆ. ನೊಂದ ಜನರಿಗೆ ಯಾವ ರೀತಿ ಯೋಜನೆ ಮಾಡುತ್ತೇವೆ ಎಂದು ಹೇಳಿಲ್ಲ. ಜೊತೆಗೆ ಕರ್ನಾಟಕದ 5 ಲಕ್ಷ ಕೋಟಿ ತೆರಿಗೆ ಹಣ ಕೆಂದ್ರದ ಖಾತೆಗೆ ಹೋಗುತ್ತಿದೆ. ಇಷ್ಟು ಹಣ ಕೊಟ್ಟರೂ ರಾಜ್ಯದ ಯಾವುದೇ ಯೋಜನೆಗೆ ಅನುಮೋದನೆ ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸ್ನೇಹಿತನಿಗೆ ಸಾಲ ಕೊಡಿಸಿದ್ದ ತಪ್ಪಿಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

    ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ. ಇದು ರಾಜಕೀಯ ಹೇಳಿಕೆ ಅಲ್ಲ. ಕನ್ನಡಿಗರು ಮಲಗಿದರೆ ನಮ್ಮನ್ನು ಮುಗಿಸುತ್ತಾರೆ. ಕನ್ನಡಿಗರೇ ದಯವಿಟ್ಟು ಎದ್ದೇಳಿ. ಕರ್ನಾಟಕದ ನಿಮ್ಮ ಮಕ್ಕಳನ್ನು ಬೇರೆಯವರು ಆಳುವ ಸ್ಥಿತಿ, ಬೇರೆಯವರ ಹತ್ರ ಕೂಲಿ ಮಾಡುವ ಪರಿಸ್ಥಿತಿ ಬರುತ್ತದೆ. ತಕ್ಷಣ ಎದ್ದು ಹೋರಾಟ ಮಾಡಿ. ರಾಜ್ಯದ ಏಳೂವರೆ ಕೋಟಿ ಕನ್ನಡಿಗರಿಗೆ ನಾನು ಕರೆ ಕೊಡುತ್ತಿದ್ದೇನೆ ಎಂದು ಹರಿಹಾಯ್ದರು. ಇದನ್ನೂ ಓದಿ: ಪತ್ನಿಯ ಖಾಸಗಿ ಫೋಟೋ, ವಿಡಿಯೋ ವೈರಲ್‌ – ಪತಿ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪತ್ನಿ

    ರಾಜ್ಯ ಯಾವ ಮಂತ್ರಿಗಳು ನನ್ನನ್ನು ಸಂಪರ್ಕ ಮಾಡಿಲ್ಲ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮಾಜಿ ಸಿಎಂ. ಯಾರು ಹೇಳಲಿ, ಬಿಡಲಿ ಅವರ ಮೇಲೆ ಜವಾಬ್ದಾರಿ ಇದೆ. ಅದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಪ್ರತಿ ವಿಚಾರ ಅವರಿಗೆ ಗೊತ್ತಿದೆ. ಕರ್ನಾಟಕದ ಗೌರವ, ಜನರ ರಕ್ಷಣೆ, ಯೋಜನೆ ಬಗ್ಗೆ ಒತ್ತಾಯ ಮಾಡೋದು ಅವರ ಜವಾಬ್ದಾರಿ. ಅವರನ್ನು ಕೇಳಬೇಕು, ಅರ್ಜಿ ಕೊಡಬೇಕು ಎಂದೇನಿಲ್ಲ. ಅದು ನಿಮ್ಮ ಜವಾಬ್ದಾರಿ. ದಯವಿಟ್ಟು ಕನ್ನಡಿಗರಿಗೆ ಅನ್ಯಾಯ ಮಾಡಬೇಡಿ. ಕರ್ನಾಟಕಕ್ಕೆ ಅನ್ಯಾಯ ಮಾಡಬೇಡಿ. ರಾಜಕೀಯವನ್ನು ಚುನಾವಣೆಯಲ್ಲಿ ಮಾಡೋಣ. ಆದರೆ ಕರ್ನಾಟಕ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸಹಕಾರ ನೀಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾತೃವಿಯೋಗ

  • ಚನ್ನಪಟ್ಟಣದ ಚಾಮುಂಡೇಶ್ವರಿ ವಿಗ್ರಹಕ್ಕೆ ಏಷ್ಯಾ & ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

    ಚನ್ನಪಟ್ಟಣದ ಚಾಮುಂಡೇಶ್ವರಿ ವಿಗ್ರಹಕ್ಕೆ ಏಷ್ಯಾ & ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ

    ರಾಮನಗರ: ಚನ್ನಪಟ್ಟಣದ ಪ್ರಸಿದ್ಧ ಚಾಮುಂಡೇಶ್ವರಿ ವಿಗ್ರಹಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ (India Book Of Records) ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ (Asia Book of Records) ರಾಷ್ಟ್ರೀಯ ಮಾನ್ಯತೆ ದೊರೆತಿದೆ.

    ಚನ್ನಪಟ್ಟಣ ತಾಲೂಕಿನ ಪ್ರಸಿದ್ಧ ಗೌಡಗೆರೆಯ 60 ಅಡಿ ಎತ್ತರದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಲಭಿಸಿದೆ.ಇದನ್ನೂ ಓದಿ: ಬಿಜೆಪಿಯಲ್ಲಿನ ಭಿನ್ನಮತಗಳು 10-15 ದಿನಗಳಲ್ಲಿ ಪರಿಹಾರ: ಅಶೋಕ್

    ದೇವಾಲಯದ ಆವರಣದಲ್ಲಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ ಅವರಿಗೆ ಸಂಸ್ಥೆಯ ಅಧಿಕಾರಿಗಳು ಎರಡೂ ಪ್ರಶಸ್ತಿಗಳನ್ನ ಪ್ರದಾನ ಮಾಡಿದ್ದಾರೆ. ಕ್ಷೇತ್ರದಲ್ಲಿರುವ ತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ಬೇರೆಲ್ಲೂ ಇಲ್ಲ ಎಂಬ ಮಾತುಗಳಿದ್ದವು. ಈಗ ಅಧಿಕೃತವಾಗಿ ದಾಖಲಾಗಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.

    ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಶ್ರೀ ಚಾಮುಂಡೇಶ್ವರಿ ಬಸವಪ್ಪನ ಪುಣ್ಯಕ್ಷೇತ್ರ ಈಗಾಗಲೇ ಸಾಕಷ್ಟು ಪ್ರಸಿದ್ಧಿ ಪಡೆದುಕೊಂಡಿದೆ. ತಾಯಿ ಚಾಮುಂಡೇಶ್ವರಿಯ ಪಂಚಲೋಹ ವಿಗ್ರಹ ನಾಡಿನ ಗಡಿ ದಾಟಿ ಹೊರರಾಜ್ಯ ಹಾಗೂ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ನೆಲಮಟ್ಟದಿಂದ 60 ಅಡಿ ಎತ್ತರವಿರುವ ತಾಯಿ ವಿಗ್ರಹ ಭಕ್ತರಿಂದ ಸಂಗ್ರಹಿಸಿದ ಪಂಚಲೋಹಗಳಿಂದ ನಿರ್ಮಿಸಿರುವುದು ವಿಶೇಷ. 35 ಸಾವಿರ ಕೆ.ಜಿ ತೂಕದ ಈ ಪಂಚಲೋಹ ವಿಗ್ರಹ 2021ರ ಆಗಸ್ಟ್ 8ರಂದು ಲೋಕಾರ್ಪಣೆಗೊಂಡಿತ್ತು. ಅಂದಿನಿಂದ ಇಂದಿನವರೆಗೂ ಈ ಕ್ಷೇತ್ರ ಭಕ್ತರ ನೆಚ್ಚಿನ ತಾಣವಾಗಿ ರೂಪುಗೊಂಡಿದೆ.ಇದನ್ನೂ ಓದಿ: Union Budget 2025| ಯಾವಾಗ ನಿರ್ಮಲಾ ಸೀತಾರಾಮನ್‌ ಬಜೆಟ್‌ ಮಂಡನೆ ಮಾಡುತ್ತಾರೆ?

  • ಕಣ್ವ ಜಲಾಶಯದಲ್ಲಿ ಪತ್ನಿಯೊಂದಿಗೆ ಸಿಪಿವೈ ವಾಟರ್ ಬೈಕ್ ರೈಡ್

    ಕಣ್ವ ಜಲಾಶಯದಲ್ಲಿ ಪತ್ನಿಯೊಂದಿಗೆ ಸಿಪಿವೈ ವಾಟರ್ ಬೈಕ್ ರೈಡ್

    ರಾಮನಗರ: ಕಣ್ವ ಜಲಾಶಯದಲ್ಲಿ (Kanwa Reservoir) ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಿರುವ ಹಿನ್ನೆಲೆ ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ (CP Yogeshwar) ಪತ್ನಿಯೊಂದಿಗೆ ವಾಟರ್ ಬೈಕ್ ನಡೆಸುವ ಮೂಲಕ ಕಾಲಕಳೆದಿದ್ದಾರೆ.ಇದನ್ನೂ ಓದಿ: BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    ಕಣ್ವ ಜಲಾಶಯದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಜಲಸಾಹಸ ಕ್ರೀಡೆ ಆರಂಭಕ್ಕೆ ಸಿದ್ಧತೆ ನಡೆಸಲಾಗಿದ್ದು, ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ.

    ಭಾನುವಾರ (ಜ.12) ಸಂಜೆ ಸಿ.ಪಿ.ಯೋಗೇಶ್ವರ್ ಪತ್ನಿಯೊಂದಿಗೆ ಆಗಮಿಸಿ ವಾಟರ್ ಬೈಕ್ ರೈಡ್ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಸ್ವತಃ ಪತ್ನಿಯೊಂದಿಗೆ ಬೈಕ್ ರೈಡ್ ಮಾಡಿದ ಎಂಜಾಯ್ ಮಾಡಿದ್ದಾರೆ.ಇದನ್ನೂ ಓದಿ: ಆ್ಯಪಲ್ ಸಹ ಸಂಸ್ಥಾಪಕ ಸ್ವೀವ್‌ ಜಾಬ್ಸ್‌ ಪತ್ನಿ ಲಾರೆನ್ ಇನ್ಮುಂದೆ ʻಕಮಲಾʼ – ಹಿಂದೂ ಹೆಸರು ನಾಮಕರಣ

  • ಎಸ್‌ಎಂ ಕೃಷ್ಣ ವಿಧಿವಶ – ಬುಧವಾರ ರಾಮನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

    ಎಸ್‌ಎಂ ಕೃಷ್ಣ ವಿಧಿವಶ – ಬುಧವಾರ ರಾಮನಗರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

    ರಾಮನಗರ: ಮಾಜಿ ಸಿಎಂ ಎಸ್‌ಎಂ ಕೃಷ್ಣ (SM Krishna) ವಿಧಿವಶರಾದ ಹಿನ್ನೆಲೆ ಬುಧವಾರ ರಾಮನಗರದಲ್ಲಿ (Ramanagara) ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರಾಮನಗರ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಮಾಹಿತಿ ನೀಡಿದ್ದಾರೆ.

    ಬುಧವಾರ ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಿದ್ದು, ಜಿಲ್ಲಾಡಳಿತ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಬಿಡದಿಯ ಬಿಜೆಎಸ್ ಸರ್ಕಲ್, ರಾಮನಗರ ಐಜೂರು ವೃತ್ತ ಹಾಗೂ ಚನ್ನಪಟ್ಟಣದ ಗಾಂಧಿ ಭವನದ ಬಳಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನೂ ಓದಿ: ಭಾಗ-1 | ಶಾಸಕನಿಂದ ಮುಖ್ಯಮಂತ್ರಿವರೆಗೆ…. ಎಸ್‌ಎಂಕೆ ರಾಜಕೀಯ ಜೀವನದ ಏಳುಬೀಳು!

    ಬೆಳಗ್ಗೆ 9:30ಕ್ಕೆ ಬಿಡದಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ರಾಮನಗರದ ಐಜೂರು ವೃತ್ತ ಹಾಗೂ ಚನ್ನಪಟ್ಟಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಾಯಿಂಟ್‌ನಲ್ಲೂ 15ರಿಂದ 20 ನಿಮಿಷಗಳು ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಮೈಸೂರು-ಬೆಂಗಳೂರು ಹಳೆ ಹೆದ್ದಾರಿಯಲ್ಲಿ ಎಸ್.ಎಂ.ಕೃಷ್ಣ ಪಾರ್ಥೀವ ಶರೀರ ಸೋಮನಹಳ್ಳಿ ತಲುಪಲಿದೆ. ಇದನ್ನೂ ಓದಿ: ಎಸ್‌ಎಂಕೆ ಅಂತಿಮ ದರ್ಶನ ಪಡೆದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ

  • ನ.30ರಂದು ನಿಖಿಲ್ ಕುಮಾರಸ್ವಾಮಿ ಕೃತಜ್ಞತಾ ಸಭೆ

    ನ.30ರಂದು ನಿಖಿಲ್ ಕುಮಾರಸ್ವಾಮಿ ಕೃತಜ್ಞತಾ ಸಭೆ

    ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna By Election) ಬಳಿಕ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಮತದಾರರಿಗೆ ಕೃತಜ್ಞತೆ ತಿಳಿಸಲು ಇದೇ ನ.30ರಂದು ಕೃತಜ್ಞತಾ ಸಭೆ ಹಮ್ಮಿಕೊಂಡಿದ್ದಾರೆ.

    ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ನಿಖಿಲ್ ಕುಮಾರಸ್ವಾವಿ ಪರಾಭವಗೊಂಡಿದ್ದರು. 87 ಸಾವಿರಕ್ಕೂ ಅಧಿಕ ಮತಗಳನ್ನ ಪಡೆದಿದ್ದ ನಿಖಿಲ್ ಕುಮಾರಸ್ವಾಮಿ ಮತದಾರರಿಗೆ ಧನ್ಯವಾದ ತಿಳಿಸಲು ಚನ್ನಪಟ್ಟಣದ ಖಾಸಗಿ ರೆಸಾರ್ಟ್‌ನಲ್ಲಿ ಕೃತಜ್ಞತಾ ಸಮಾರಂಭ ನಡೆಸಲಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಆರ್‌.ಅಶೋಕ್‌

    ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸಿ ಚುನಾವಣೆ ಸೋಲಿನ ಬಗ್ಗೆ ಪರಾಮರ್ಶೆ ಮಾಡಲಿದ್ದಾರೆ. ಜೊತೆಗೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಧೈರ್ಯ ತುಂಬಲು ದಳಪತಿಗಳು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯಾಧ್ಯಕ್ಷ ಹೋಗಿ ಡಿಕೆಶಿ ಬಳಿ 20 ಪತ್ರಕ್ಕೆ ಸಹಿ ಹಾಕಿಸಿಕೊಂಡ ವಿಡಿಯೋ ನನ್ನ ಬಳಿ ಇದೆ: ಯತ್ನಾಳ್ ವಾಗ್ದಾಳಿ

  • ನಿಖಿಲ್ ಚುನಾವಣೆಯಲ್ಲಿ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ: ಅನಿತಾ ಕುಮಾರಸ್ವಾಮಿ

    ನಿಖಿಲ್ ಚುನಾವಣೆಯಲ್ಲಿ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ: ಅನಿತಾ ಕುಮಾರಸ್ವಾಮಿ

    ಬೆಂಗಳೂರು: ನನ್ನ ಮಗ ಮೂರನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ. ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ ಎಂದು ಅನಿತಾ ಕುಮಾರಸ್ವಾಮಿ (Anitha Kumaraswamy) ಪುತ್ರ ನಿಖಿಲ್‌ ಕುಮಾರಸ್ವಾಮಿಗೆ ಧೈರ್ಯ ತುಂಬಿದ್ದಾರೆ.

    ಚನ್ನಪಟ್ಟಣ ಕ್ಷೇತ್ರದ ಫಲಿತಾಂಶದ ನಂತರ ಇದೇ ಮೊದಲ ಬಾರಿಗೆ ಎಕ್ಸ್ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿರುವ ಅವರು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

    ಟ್ವೀಟ್ ಏನು?
    ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪರಾಜಯ ಹೊಂದಿದ್ದಾನೆ, ಒಪ್ಪುತ್ತೇನೆ. ಚುನಾವಣೆ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಹಾಗೂ ಒಬ್ಬರು ಗೆಲ್ಲಬೇಕಾದರೆ ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ಆದರೆ ಸೋಲಿಗೆ ಅನೇಕ ಕಾರಣಗಳಿರುತ್ತವೆ. ಹಾಗೆಂದು ನಿಖಿಲ್ ಸೋಲಿನ ಕಾರಣಗಳ ಬಗ್ಗೆ ಚರ್ಚಿಸುವುದು ನನ್ನ ಉದ್ದೇಶವಲ್ಲ.

    ರಾಜಕಾರಣದಲ್ಲಿ ನನಗಾಗಲಿ, ನನ್ನ ಪತಿಗಾಗಲಿ ಅಥವಾ ನನ್ನ ಪೂಜ್ಯ ಮಾವನವರಿಗೇ ಆಗಲಿ ಗೆಲುವು, ಸೋಲು ಹೊಸದೇನಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ. ನನ್ನ ಮಗನಿಗೂ ಇದೇ ಅನ್ವಯ ಆಗುತ್ತದೆ.

    ನನ್ನ ಮಗನ ಬಗ್ಗೆ ರಾಜ್ಯದ ಜನತೆಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅವನು ಒಳ್ಳೆಯ ಮಗ, ಒಳ್ಳೆಯ ಪತಿ, ಒಳ್ಳೆಯ ತಂದೆ. ರಾಜಕಾರಣಕ್ಕೆ ಬರುವ ಮುನ್ನ ಒಳ್ಳೆಯ ನಾಯಕ ನಟ. ಅವನಂಥ ಒಳ್ಳೆಯ ಮಗನನ್ನು ಪಡೆದಿದ್ದಕ್ಕಾಗಿ ನಾನೂ ನನ್ನ ಪತಿ ಹೆಮ್ಮೆಪಡುತ್ತೇವೆ.

    ತಾಯಿಯಾಗಿ ಅವನ ಯಶಸ್ಸನ್ನು ಸಂಭ್ರಮಿಸುತ್ತೇನೆ. ಅವನಿಗೆ ಕಷ್ಟ ಎದುರಾದಾಗ ಕಣ್ಣೀರಿಟ್ಟಿದ್ದೇನೆ. ನನ್ನ ಕರುಳಬಳ್ಳಿಯ ಮೇಲೆ ನನಗಷ್ಟು ಮಮಕಾರ ಇರುತ್ತದಲ್ಲವೇ? ನನ್ನಂತಹ ಎಲ್ಲಾ ತಾಯಂದಿರಿಗೂ ನನ್ನ ಭಾವನೆಗಳು ಅರ್ಥವಾಗುತ್ತವೆ ಎನ್ನುವ ವಿಶ್ವಾಸ ನನ್ನದು.

    ನನ್ನ ಮಗ 3ನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ, ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ. ಅವನ ಮನಸ್ಸು, ಹೃದಯ ವೈಶಾಲ್ಯತೆ ಏನೆಂದು ತಾಯಿಯಾಗಿ ನನಗೆ ಚನ್ನಾಗಿ ಗೊತ್ತು.

    ನಾನು ಸದಾ ಆ ಭಗವಂತನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಮಗನ ಮೇಲೆ ಆ ದೈವದ ಕರುಣೆ, ಅನುಗ್ರಹವಿದೆ ಹಾಗೂ ಚನ್ನಪಟ್ಟಣ ಜನತೆಯ ಪ್ರೀತಿ ವಿಶ್ವಾಸವೂ ಸದಾ ಅವನ ಮೇಲಿರುತ್ತದೆ. ಇಂದಲ್ಲ ನಾಳೆ ಜನಸೇವೆ ಮಾಡುವ ಅವಕಾಶ ಅವನಿಗೆ ಸಿಕ್ಕೇ ಸಿಗುತ್ತದೆ ಎನ್ನುವ ಅಚಲ ನಂಬಿಕೆ ನನ್ನದು ಎಂದು ಅನಿತಾ ಕುಮಾರಸ್ವಾಮಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

  • ತೆನೆ ಮನೆಯಲ್ಲಿ ಮತ್ತೆ ಮುಸುಕಿನ ಗುದ್ದಾಟ – ಮದ್ದರೆಯಲು ಅಖಾಡಕ್ಕಿಳೀತಾರಾ ದೊಡ್ಡಗೌಡರು..?

    ತೆನೆ ಮನೆಯಲ್ಲಿ ಮತ್ತೆ ಮುಸುಕಿನ ಗುದ್ದಾಟ – ಮದ್ದರೆಯಲು ಅಖಾಡಕ್ಕಿಳೀತಾರಾ ದೊಡ್ಡಗೌಡರು..?

    ಮೈಸೂರು: ಚನ್ನಪಟ್ಟಣ ಚುನಾವಣೆ ಬಳಿಕ ಜೆಡಿಎಸ್ (JDS) ಪಾಳಯದಲ್ಲಿ ಮತ್ತೆ ಮುಸುಕಿನ ಗುದ್ದಾಟ ಆರಂಭವಾಗಿದೆ. ಪಕ್ಷದ ಹಿರಿಯ ನಾಯಕರ ಆರೋಪ-ಪತ್ಯಾರೋಪ ತಾರಕಕ್ಕೇರಿದೆ. ಜಿಟಿಡಿ ಮುನಿಸಿಗೆ ಮುಲಾಮು ಹಚ್ಚದಿದ್ದರೆ, ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ಸಂಘಟನೆ ವಿಚಾರದಲ್ಲಿ ದೊಡ್ಡ ನಷ್ಟ ಗ್ಯಾರಂಟಿ. ಹೀಗಾಗಿ ಮತ್ತೆ ಪಿಚ್‌ಗೆ ಇಳಿಯುತ್ತಾರಾ ಹೆಚ್‌ಡಿ ದೇವೇಗೌಡರು (HD Devegowda) ಎಂಬ ಪ್ರಶ್ನೆ ಮೂಡಿದೆ.

    ಹೌದು, ಒಂದು ಕಾಲದ ದಳಪತಿಗಳ ಭದ್ರಕೋಟೆಯಾಗಿದ್ದ ಚನ್ನಪಟ್ಟಣ ಉಪಚುನಾವಣೆ (Channapatna By Poll) ಬಳಿಕ ಮತ್ತೆ ಜೆಡಿಎಸ್ ಹಿರಿಯ ನಾಯಕರಲ್ಲಿ ಅಸಮಧಾನ ಭುಗಿಲೆದ್ದಿದೆ. ಚನ್ನಪಟ್ಟಣ ಉಪಚುನಾವಣೆ ಸೋಲಿಗೆ ಹೆಚ್‌ಡಿಕೆ ಕಾರಣ, ನಿಖಿಲ್‌ರನ್ನು ನಿಲ್ಲಿಸಲು ಹೇಳಿದ್ದು ಯಾರು? ದೇವೇಗೌಡರಾಗಲಿ ಅಥವಾ ಅವರ ಕುಟುಂಬದವರಾಗಲಿ ನನಗೆ ಚನ್ನಪಟ್ಟಣ ಚುನಾವಣಾ ಪ್ರಚಾರಕ್ಕೆ ಕರೆದೇ ಇಲ್ಲ ಎಂದು ಜಿಟಿಡಿ ಬೇಸರ ವ್ಯಕ್ತಪಡಿಸಿದ್ದು, ಹೆಚ್‌.ಡಿ ಕುಮಾರಸ್ವಾಮಿಗೆ ನನ್ನ ಮಗ ಬೇಕು… ನಾನು ಬೇಡದವನಾಗಿದ್ದೇನೆ. ನೋವುಂಡು ಜೆಡಿಎಸ್‌ನಲ್ಲಿ ಇದ್ದೇನೆ ಎಂದು ಜಿಟಿಡಿ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಲಿವ್‌-ಇನ್‌ ಗೆಳತಿಯನ್ನ ಸುಟ್ಟು ಕೊಂದು ಬೆಂಕಿ ಅವಘಡ ಅಂತ ನಾಟಕವಾಡಿದ್ದ ಉದ್ಯಮಿ ಅಂದರ್‌

    ಇನ್ನು, ಅನಿವಾರ್ಯ ಸ್ಥಿತಿಯಲ್ಲಿ ನಿಖಿಲ್‌ರನ್ನು ಕಣಕ್ಕೆ ಇಳಿಸಬೇಕಾಯಿತು. ಜಿ.ಟಿ ದೇವೇಗೌಡರನ್ನು ಖುದ್ದು ಹೆಚ್.ಡಿ ದೇವೇಗೌಡರೆ ಫೋನ್ ಮಾಡಿ ಪ್ರಚಾರಕ್ಕೆ ಬರುವಂತೆ ಕರೆದಿದ್ದರು ಅವರು ಬರಲಿಲ್ಲ. ನಾವು ಯಾರು ಜಿ.ಟಿ. ದೇವೇಗೌಡರ ರಾಜಕೀಯ ನಿವೃತ್ತಿ ಬಯಸಿಲ್ಲ. ಅವರು ಇನ್ನೂ ಬಹಳ ವರ್ಷ ರಾಜಕಾರಣ ಮಾಡಬೇಕು. ನನ್ನಿಂದ ತೊಡಕಾಗುವುದಾದ್ರೆ ಚಾಮುಂಡಿಬೆಟ್ಟಕ್ಕೆ ಬರಲಿ ಎಂದು ಸಾರಾ ಮಹೇಶ್ ಹೇಳಿದ್ದಾರೆ.

    ಇತ್ತ, ಮಗ ಸೋತ ನೋವಿನಲ್ಲಿದ್ದ ಹೆಚ್‌ಡಿಕೆಗೆ ಗಾಯದ ಮೇಲೆ ಬರೆ ಎಂಬಂತೆ ಜಿಟಿಡಿ ಮಾತು ಘಾಸಿ ಮಾಡಿದ್ರೆ, ನಿಖಿಲ್ ಮಾತ್ರ ನಾನು ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಹುಡುಕುತ್ತೇನೆ. ಇಲ್ಲಿಯೇ ಮುಂದಿನ ರಾಜಕೀಯ ಮುಂದುವರಿಸುತ್ತೇನೆ. ನಾನು ಕಾರ್ಯಕರ್ತರ ಜೊತೆಗಿರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ | ಗೆಳೆಯನಿಗೆ ಥಳಿಸಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಟ್ರಕ್ ಚಾಲಕ

    ಒಟ್ಟಿನಲ್ಲಿ ಜಿಟಿಡಿ ಮುನಿಸಿಗೆ ಮುಲಾಮು ಹಚ್ಚದಿದ್ದರೆ ಮೈಸೂರು ಭಾಗದಲ್ಲಿ ಜೆಡಿಎಸ್‌ಗೆ ದೊಡ್ಡ ನಷ್ಟ ಅಗುವುದು ಗ್ಯಾರಂಟಿ. ಮಗನ ಜೊತೆ ಪ್ರೀತಿ ಅಪ್ಪನ ಜೊತೆ ಮುನಿಸು, ಹೆಚ್‌ಡಿಕೆಯ ಈ ನಡೆಯಿಂದ ಜಿಟಿಡಿ ಹಾಗೂ ಸಿಎಂ ಸಿದ್ದರಾಮಯ್ಯ ಹತ್ತಿರವಾಗಲು ಅವಕಾಶ ಮಾಡಿಕೊಟ್ಟರಾ..? ಜಿಟಿಡಿ ಮುನಿಸಿಗೆ ಮತ್ತೆ ಮುಲಾಮು ಹಚ್ಚಲು ದೊಡ್ಡಗೌಡರೇ ಪಿಚ್‌ಗೆ ಇಳಿಯುತ್ತಾರಾ ಕಾದು ನೋಡಬೇಕು.

  • ಚನ್ನಪಟ್ಟಣ ಗೆಲುವಿಗೆ ಬಿಜೆಪಿಯವರೂ ಸಪೋರ್ಟ್ ಮಾಡಿದ್ದಾರೆ – ಡಿಕೆಶಿ ಅಚ್ಚರಿ ಹೇಳಿಕೆ

    ಚನ್ನಪಟ್ಟಣ ಗೆಲುವಿಗೆ ಬಿಜೆಪಿಯವರೂ ಸಪೋರ್ಟ್ ಮಾಡಿದ್ದಾರೆ – ಡಿಕೆಶಿ ಅಚ್ಚರಿ ಹೇಳಿಕೆ

    ರಾಮನಗರ: ಚನ್ನಪಟ್ಟಣದಲ್ಲಿ  (Channapatna) ಕಾಂಗ್ರೆಸ್‌ ಗೆಲುವಿಗೆ ಎಲ್ಲಾ ಪಾರ್ಟಿಯವರೂ ಸಹಾಯ ಮಾಡಿದ್ದಾರೆ. ಬಿಜೆಪಿ ಅವರೂ ಸಪೋರ್ಟ್ ಮಾಡಿದ್ದಾರೆ. ಪತ್ಯಕ್ಷ, ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ರೆ ಇಷ್ಟು ಮತ ನಮಗೆ ಬರುತ್ತಾ ಇರಲಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅಚ್ಚರಿ ಹೇಳಿಕೆ ನೀಡಿದ್ದಾರೆ.

    ಕನಕಪುರದಲ್ಲಿಂದು (Kanakapura) ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ಚನ್ನಪಟ್ಟಣದಲ್ಲಿ ಯೋಗೇಶ್ವರ್‌ (CP Yogeshwar) ಗೆಲುವಿನ ಬಗ್ಗೆ ಪ್ರತಿಕ್ರಿಯೆ ನೀಡಿದರು. ಪರೋಕ್ಷವಾಗಿ ಕಾಂಗ್ರೆಸ್ ಗೆಲುವಿಗೆ ಜೆಡಿಎಸ್, ಬಿಜೆಪಿನವರೂ ಸಪೋರ್ಟ್ ಮಾಡಿದ್ದಾರೆ. ಅಶ್ವಥ್ ನಾರಾಯಣ್ ಯೋಗೇಶ್ವರ್ ಗೆಲ್ತಾರೆ ಅಂತ ಗೊತ್ತಿತ್ತು ಅಂದ್ರು, ಇದರ ಅರ್ಥ ಏನು? ಎಂದು ಪ್ರಶ್ನೆ ಮಾಡಿದರು.

    ನಮ್ಮ ಮೇಲೆ ಈಗ ಕ್ಷೇತ್ರದ ಜನರ ಸಾಲ ಇದೆ, ಕ್ಷೇತ್ರದ ಜನ ನಮ್ಮ ಪರವಾಗಿ ಇದ್ದಾರೆ. ಈ ಗೆಲುವಿನ ಕ್ರೆಡಿಟ್ ಅಪೂರ್ವ ಸಹೋದರಿಗೆ ಸಲ್ಲಬೇಕಾಗಿಲ್ಲ, ನಮ್ಮೆಲ್ಲ ನಾಯಕರು, ಮತದಾರಿಗೆ ಸಲ್ಲಬೇಕು. ಕ್ಷೇತ್ರ ಖಾಲಿ ಆದಾಗಿನಿಂದ ಸಾಕಷ್ಟು ಪ್ರವಾಸ ಮಾಡಿದ್ವಿ. ಕ್ಷೇತ್ರದ ಜನರಿಗೆ ಏನು ಮಾತು ಕೊಟ್ಟಿದ್ವೊ ಅದನ್ನ ಮೊದಲು ಅನುಷ್ಠಾನ ಮಾಡಬೇಕು. ನಾನು ಯೋಗೇಶ್ವರ್, ಇಬ್ಬರೂ ಕೂತು ಚರ್ಚೆ ಮಾಡಿ ಇದಕ್ಕೆಲ್ಲ ಚಾಲನೆ ಕೊಡ್ತೇವೆ ಎಂದು ಆಶ್ವಾಸನೆ ನೀಡಿದರು.

    ನಮಗೆ ಎಲ್ಲಾ ಪಾರ್ಟಿಯವರೂ ಸಹಾಯ ಮಾಡಿದ್ದಾರೆ. ಕಾಂಗ್ರೆಸ್‌ಗೆ ಇದ್ದಿದ್ದು ಕೇವಲ 16,000 ಮತಗಳು ಈಗ ಜಾಸ್ತಿ ಆಗಿದೆ. ಬಿಜೆಪಿ ಅವರೂ ಸಪೋರ್ಟ್ ಮಾಡಿದ್ದಾರೆ. ಬಿಜೆಪಿಯವ್ರು ನಮ್ಮ ಜೊತೆ ಬಂದು ನಿಂತುಕೊಳ್ಳದೇ ಹೋಗಿದ್ರೆ, ಪತ್ಯಕ್ಷವಾಗಿ ಪರೋಕ್ಷವಾಗಿ ಕೆಲಸ ಮಾಡದೇ ಹೋಗಿದ್ರೆ ಇಷ್ಟು ಮತ ನಮಗೆ ಬರುತ್ತಾ ಇರಲಿಲ್ಲ. ನಾನು ಅವರೆಲ್ಲರನ್ನೂ ಅಭಿನಂದಿಸುತ್ತೇನೆ ಎಂದು ನುಡಿದರು.

  • ಆ ಸಮುದಾಯಕ್ಕೆ ನಮ್ಮ ಅವಶ್ಯಕತೆ ಇಲ್ಲ: ಮತ್ತೆ ಅಲ್ಪಸಂಖ್ಯಾತರತ್ತ ಬೊಟ್ಟು ಮಾಡಿದ ನಿಖಿಲ್

    ಆ ಸಮುದಾಯಕ್ಕೆ ನಮ್ಮ ಅವಶ್ಯಕತೆ ಇಲ್ಲ: ಮತ್ತೆ ಅಲ್ಪಸಂಖ್ಯಾತರತ್ತ ಬೊಟ್ಟು ಮಾಡಿದ ನಿಖಿಲ್

    – ಅಧಿಕಾರ ದಾಹಕ್ಕೆ ಗೌಡರು ರಾಜಕಾರಣ ಮಾಡ್ತಿಲ್ಲ; ಸಿಪಿವೈಗೆ ತಿರುಗೇಟು

    ಬೆಂಗಳೂರು/ಮಂಡ್ಯ: ಈ ಚುನಾವಣೆಯಲ್ಲಿ (Election) ಆ ಒಂದು ಸಮುದಾಯವನ್ನ ಕಡೆಗಣಿಸಬಾರದು, ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಅಂತ ಪ್ರಯತ್ನ ಮಾಡಿದ್ವಿ, ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ, ಅಂತ ಆ ಸಮುದಾಯ ನಿನ್ನೆ ಸ್ಪಷ್ಟ ಸಂದೇಶ ಕೊಟ್ಟಿದೆ ಎಂದು ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಬೇಸರ ಹೊರಹಾಕಿದರು.

    ಮಾಧ್ಯಮಗಳೊಂದಿಗೆ ಮಾನನಾಡಿದ ಅವರು, ಯಾವುದೇ ಕಾರ್ಯಕರ್ತ ನಿಂತರೂ ಬರುತ್ತಿದ್ದ ನಮ್ಮ ಸಾಂಪ್ರದಾಯಿಕ ಕನಿಷ್ಠ 60 ಸಾವಿರ ಮತಗಳು ಈಗ 87 ಸಾವಿರಕ್ಕೆ ಹೋಗಿ ಮುಟ್ಟಿದೆ. ಪಕ್ಷದ ಅಭಿಮಾನಿಗಳಾಗಿರುವ ಜನ ಯಾರೂ ನಮ್ಮ ಕೈಬಿಟ್ಟಿಲ್ಲ. ಆದ್ರೆ 1 ಸಮುದಾಯದ ಪರವಾಗಿ ದೇವೇಗೌಡರು ಹಿಂದೆ ನಿರ್ಣಯ ಕೈಗೊಂಡಿದ್ದರು, ಮೀಸಲಾತಿ ವಿಚಾರದ ಬಗ್ಗೆಯೂ ತೀರ್ಮಾನ ಮಾಡಿದ್ರು. ಈ ಚುನಾವಣೆಯಲ್ಲೂ ಆ ಸಮುದಾಯವನ್ನ ಕಡೆಗಣಿಸಬಾರದು, ಅವರನ್ನೂ ವಿಶ್ವಾಸಕ್ಕೆ ತಗೊಂಡು ಹೋಗಬೇಕು ಅಂತ ಪ್ರಯತ್ನ ಮಾಡಿದ್ವಿ. ಆದರೆ ನಮ್ಮ ಅವಶ್ಯಕತೆ ಅವರಿಗೆ ಇಲ್ಲ ಅಂತ ಆ ಸಮುದಾಯ (Muslim community) ನಿನ್ನೆ ಸ್ಪಷ್ಟ ಸಂದೇಶ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಬೇರೆ ಸಮುದಾಯಗಳನ್ನು ಯಾವ ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕೋ ಅದನ್ನು ಮಾಡ್ತೇವೆ ಎಂದು ನುಡಿದರು. ಇದನ್ನೂ ಓದಿ: ನಿಖಿಲ್‌ ಸೋಲಿನಿಂದ ಬೇಸರ – ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ!

    ಅಧಿಕಾರದ ದಾಹಕ್ಕೆ ಗೌಡರು ರಾಜಕಾರಣ ಮಾಡ್ತಿಲ್ಲ:
    ಇನ್ನೂ ದೇವೇಗೌಡ್ರು ರಾಜಕೀಯ ನಿವೃತ್ತಿ ಘೋಷಿಸಲಿ ಎಂಬ ಸಿಪಿವೈ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್‌, ದೇವೇಗೌಡರು ಅಧಿಕಾರಕ್ಕಾಗಿ ರಾಜಕಾರಣ ಮಾಡ್ತಿಲ್ಲ. ಅವರ ವಯಸ್ಸು 92, ದೇಶ, ರಾಜ್ಯ ಕಟ್ಟಲು ಅವರ ಮಾರ್ಗದರ್ಶನ ಬೇಕು ಅಂತ ಅನೇಕ ವೇಳೆ ಪ್ರಧಾನಿಯವರೇ ಹೇಳಿದ್ದಾರೆ. ಇಲ್ಲಿ ಅಧಿಕಾರದ ದಾಹಕ್ಕೆ, ಅಧಿಕಾರಕ್ಕೆ ಅಂಟಿಕೊಂಡು ದೇವೇಗೌಡರು ರಾಜಕಾರಣ ಮಾಡ್ತಿಲ್ಲ. ಕಳೆದ 62 ವರ್ಷಗಳ ಅವರ ಪ್ರಾಮಾಣಿಕ ರಾಜಕೀಯ ಬದುಕಿನಲ್ಲಿ ಏನನ್ನೂ ಅಪೇಕ್ಷೆ ಇಟ್ಟುಕೊಂಡವರಲ್ಲ. ಅವರು ನಿವೃತ್ತಿ ಹೊಂದಬೇಕಾ? ಮುಂದುವರಿಬೇಕಾ ಅಂತ ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

    ಇನ್ನೂ ನನ್ನನ್ನ ಪ್ರಚಾರಕ್ಕೇ ಕರೆದಿಲ್ಲ ಎಂಬ ಜಿ.ಟಿ ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿ, ಜಿಟಿಡಿ ಅವರು ಹಿರಿಯರು, ರಾಜಕೀಯದಲ್ಲಿ ಅವರಿಗೆ ಬಹಳ ಅನುಭವ ಇದೆ. ಅವರು ಯಾವ ಅರ್ಥದಲ್ಲಿ ಮಾತಾಡಿದ್ದಾರೋ ಗೊತ್ತಿಲ್ಲ. ನಮ್ಮ ಪಕ್ಷದ ಕೋರ್ ಕಮಿಟಿ ನಾಯಕರು, ಅವರಿಗೆ ಯಾವ ಗೌರವ ಕೊಡಬೇಕೋ ಅದನ್ನು ನಾವು ಕೊಡ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ | ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ

  • ಈಗ ಚರ್ಚಿಸಿದ್ರೆ ಪ್ರಯೋಜನ ಇಲ್ಲ – ನಿಖಿಲ್‌ ಸೋಲಿನ ಬಳಿಕ ಹೆಚ್‌ಡಿಕೆ ಫಸ್ಟ್‌ ರಿಯಾಕ್ಷನ್‌

    ಈಗ ಚರ್ಚಿಸಿದ್ರೆ ಪ್ರಯೋಜನ ಇಲ್ಲ – ನಿಖಿಲ್‌ ಸೋಲಿನ ಬಳಿಕ ಹೆಚ್‌ಡಿಕೆ ಫಸ್ಟ್‌ ರಿಯಾಕ್ಷನ್‌

    – ದೆಹಲಿಗೆ ಹೊರಟ ಕುಮಾರಸ್ವಾಮಿ

    ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಮಗನ ಸೋಲಿನ ಬಳಿಕ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಮೊದಲ ಪ್ರತಿಕ್ರಿಯೆ ನೀಡಿದರು.

    ಬೆಂಗಳೂರಿನಲ್ಲಿಂದು (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫಲಿತಾಂಶ ಬಂದಾಗಿದೆ, ಈಗ ಏನು ಚರ್ಚೆ ಮಾಡಿದರೂ ಪ್ರಯೋಜನ ಇಲ್ಲ. ಫಲಿತಾಂಶ ಒಪ್ಪಿಕೊಳ್ಳಲೇಬೇಕು. ಏನೇ ಇದ್ರೂ ಆಮೇಲೇ ಮಾತಾಡ್ತೇನೆ ಎಂದು ಬೇಸರದಿಂದಲೇ ಹೊರಟರು. ಇದನ್ನೂ ಓದಿ: ಇವಿಎಂ ಹ್ಯಾಕ್‌ನಿಂದಲೇ ಮಹಾರಾಷ್ಟ್ರ ಕಳೆದುಕೊಂಡಿದ್ದೇವೆ – ಪರಮೇಶ್ವರ್‌

    ಚನ್ನಪಟ್ಟಣ ಉಪಚುನಾವಣೆ ಫಲಿತಾಂಶದ ಬಳಿಕ ಯಾವುದೇ ಕಾರ್ಯಕ್ರಮ ಹಾಕಿಕೊಳ್ಳದ ಹೆಚ್‌ಡಿಕೆ, ಜೆ.ಪಿ ನಗರದ ನಿವಾಸದಲ್ಲಿಯೇ ಇದ್ದರು, ಪುತ್ರ ನಿಖಿಲ್ ಸಹ ಜೊತೆಗಿದ್ದರು. ಇದನ್ನೂ ಓದಿ: ಉತ್ತರ ಪ್ರದೇಶ | ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ

    ಇಂದು ದೆಹಲಿಗೆ ಹೆಚ್‌ಡಿಕೆ:
    ನವೆಂಬರ್‌ 25ರಂದು (ನಾಳೆ) ಸಂಸತ್‌ ಚಳಿಗಾಲದ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆ ಸಚಿವ ಕುಮಾರಸ್ವಾಮಿ ಇಂದೇ ದೆಹಲಿಗೆ ತೆರಳುತ್ತಿದ್ದಾರೆ. ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ಇಂದು ಮಧ್ಯಾಹ್ನ 12.30ರ ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಲಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ಖಾತೆ ತೆರೆಯದ ʻಜನ್‌ ಸೂರಜ್‌ʼ – ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್‌ಗೆ ಮುಖಭಂಗ

    ಚನ್ನಪಟ್ಟಣ ಫಲಿತಾಂಶ – ಯಾರಿಗೆ ಎಷ್ಟು ಮತ?
    * ಯೋಗೇಶ್ವರ್ – ಕಾಂಗ್ರೆಸ್ – ಗೆಲುವು – 1,12,642 ಮತ
    * ನಿಖಿಲ್ – ಎನ್‌ಡಿಎ – ಸೋಲು – 87,229 ಮತ
    * ಕಾಂಗ್ರೆಸ್ ಗೆಲುವಿನ ಅಂತರ – 25,413 ಮತ