Tag: Channapatna

  • ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ಭೂತಾನ್ ಪುಟ್ಟ ಯುವರಾಜನಿಗೆ ಚನ್ನಪಟ್ಟಣ ಗೊಂಬೆ ಗಿಫ್ಟ್ ಕೊಟ್ಟ ರಕ್ಷಣಾ ಸಚಿವೆ

    ನವದೆಹಲಿ: ಮೊದಲ ಬಾರಿಗೆ ಭಾರತ ಪ್ರವಾಸಕ್ಕೆ ಆಗಮಿಸಿದ್ದ ಭೂತಾನ್ ದೊರೆ ಜಿಗ್ಮೆ ನಾಮ್‍ಗೆಲ್ ವಾಗ್ಚುಕ್ ಅವರ ಒಂದೂವರೆ ವರ್ಷದ ಪುತ್ರನಿಗೆ ರಕ್ಷಣಾ ಸಚಿವೆ ನಿರ್ಮಲಾ ಸಿತಾರಾಮನ್ ಕರ್ನಾಟಕದ ವಿಶ್ವಪ್ರಸಿದ್ಧ ಚನ್ನಪಟ್ಟಣ ಗೊಂಬೆಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಚನ್ನಪಟ್ಟಣದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಜ್ಯದ ಕೀರ್ತಿಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದ್ದಾರೆ.

    ಮಹಾರಾಜ, ರಾಣಿ ಮತ್ತು ಯುವ ರಾಜಕುಮಾರನ ಬಳಿ ಇದ್ದ ಚನ್ನಪಟ್ಟಣದ ಗೊಂಬೆಯನ್ನು ನೋಡಿದ್ದಾರೆ. ಚನ್ನಪಟ್ಟಣದ ಗೊಂಬೆಯಂತೆಯೇ ಇರುವ ಯುವರಾಜನನ್ನು ನೋಡಲು ಸಂತೋಷವಾಗುತ್ತದೆಂದು ಹರ್ಷ ವ್ಯಕ್ತಪಡಿಸಿ ನಿರ್ಮಾಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ.

    ಬುಧವಾರ ರಾಜ ಪರಿವಾರದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಏರ್ಪಡಿಸಿದ್ದ ಓತಣಕೂಟದಲ್ಲಿ ಇತ್ತೀಚೆಗಷ್ಟೆ ಮುಕ್ತಾಯವಾದ 17 ವರ್ಷದೊಳಗಿನವರ ಫುಟ್ಬಾಲ್ ಪಂದ್ಯಾವಳಿಯ ಚೆಂಡೊಂದನ್ನು ಉಡುಗೊರೆಯನ್ನು ನೀಡಿದ್ದರು. ಈ ಓತಣ ಕೂಟದಲ್ಲೇ ಸಚಿವೆ ನಿರ್ಮಲಾ ಚನ್ನಪಟ್ಟಣದ ಗೊಂಬೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಮೊದಲ ಬಾರಿಗೆ ಭಾರತಕ್ಕೆ ಬಂದ ಪುಟ್ಟ ಯುವರಾಜಕುಮಾರ ಎಲ್ಲರ ಗಮನ ಕೇಂದ್ರಿಕರಿಸಿದ್ದರು. ವಿಶೇಷವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಭೂತಾನ್ ರಾಜನ ಪರಿವಾರವನ್ನು ಬರಮಾಡಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಹೋಗಿ ಯುವರಾಜನ ಕೈಹಿಡಿದು ನಿಂತಿದ್ದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

     

  • ಬೇನಾಮಿ ಗಿಫ್ಟ್ ಪಡೆಯೋದ್ರಲ್ಲಿ ಡಿಕೆಶಿ ನಿಸ್ಸೀಮರು, ಮುಂದೆ ದಾಖಲೆ ಬಿಡುಗಡೆ: ಯೋಗೇಶ್ವರ್

    ಬೇನಾಮಿ ಗಿಫ್ಟ್ ಪಡೆಯೋದ್ರಲ್ಲಿ ಡಿಕೆಶಿ ನಿಸ್ಸೀಮರು, ಮುಂದೆ ದಾಖಲೆ ಬಿಡುಗಡೆ: ಯೋಗೇಶ್ವರ್

    ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿ ಮಾಡಿದ್ದಾರೆ. ಬೇನಾಮಿ ಗಿಫ್ಟ್ ಪಡೆಯೋದರಲ್ಲಿ ಅವರು ನಿಸ್ಸೀಮರು. ಅದರ ದಾಖಲೆಗಳಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಜನರ ಮುಂದಿಡ್ತೇನೆಂದು ಶಾಸಕ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಹಾಗೂ ಪಾವಗಡದಲ್ಲಿ ಸಚಿವ ಡಿಕೆಶಿ ಬೇನಾಮಿ ಆಸ್ತಿ ಮಾಡಿದ್ದಾರೆ. ನನಗೆ ಬೇನಾಮಿ ಆಸ್ತಿಯ ಗಿಫ್ಟ್ ಕೊಡುವ ಆಗತ್ಯವಿಲ್ಲ. ತಾಲೂಕಿನ ಜನ ಎಲ್ಲ ಗಿಫ್ಟ್ ಕೊಟ್ಟಿದ್ದು ಅವರ ಗಿಫ್ಟ್ ಬೇಕಾಗಿಲ್ಲ. ಡಿಕೆಶಿ ರಾಜಕೀಯ ಜೀವನ ಬಹುಶಃ ಇಲ್ಲಿಗೆ ಮುಗಿಯುತ್ತಿದ್ದು, ಸ್ವಾರ್ಥಕ್ಕಾಗಿ ಸಾರ್ವಜನಿಕ ಜೀವನ ಬಳಸಿಕೊಂಡಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

    ಪರಿವರ್ತನ ಯಾತ್ರೆಯ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಇಂದು ಪರಿವರ್ತನೆಯ ವಾತಾವರಣ ಸೃಷ್ಟಿಯಾಗ್ತಿದೆ. ಮುಂದಿನ ದಿನದಲ್ಲಿ ಬಿಜೆಪಿ ರಾಜ್ಯಕ್ಕೆ ಬೇಕೆಂದು ಜನರು ಕೈ ಜೋಡಿಸ್ತಿದ್ದಾರೆ. ತಾಲೂಕು ಮುಖಂಡರೆಲ್ಲಾ ಬಿಜೆಪಿಗೆ ಸೇರ್ಪಡೆಯಾಗ್ತಿದ್ದೇವೆ. ಕನಕಪುರದ ನಂದಿನಿಗೌಡರವರು ಕೂಡಾ ಬಿಜೆಪಿ ಸೇರುತ್ತಿದ್ದಾರೆ. ನಾನು ಯಾವುದೇ ನಿಬಂಧನೆಗಳನ್ನ ಒಡ್ಡಿ ಪಕ್ಷ ಸೇರುತ್ತಿಲ್ಲ. ಯೋಗ್ಯತೆಗೆ ತಕ್ಕಂತೆ ದುಡಿಸಿಕೊಳ್ಳುತ್ತೆ ಎನ್ನುವ ಭರವಸೆಯಿದೆ ಎಂದರು.

    ಡಿಕೆಶಿಗೆ ನಾವು ಬೆಂಬಲ ಕೊಟ್ಟಾಗ ರಾಜಕೀಯವಾಗಿ ಬಹಳ ಶಕ್ತಿವಂತರಾಗಿದ್ದರು. ಇವತ್ತು ಯಾರಿಗೆ ಶಕ್ತಿ ಕೊಟ್ಟಿದ್ದೇವೆ ಅಂತಾ ಅರ್ಥವಾಗಿದೆ. ಅವರಿಂದ ತಾಲೂಕಿಗೆ ಕೊಡುಗೆ ಶೂನ್ಯ, ಅವರು ಕೆಲಸಗಳೇನು ಮಾಡಿಲ್ಲ. ಮತ ಹಾಕಿಸಿಕೊಂಡು ಮುಖಂಡರ ಮನೆಗೆ ಹೋಗಿ ಅವರ ಸಂತೃಪ್ತಿಗೊಳಿಸುತ್ತಿದ್ದಾರೆ. ಅವರ ಅನುಕೂಲಕ್ಕಾಗಿ ಬಂದು ಸಹಾಯ ಬೇಡಿದ್ರು, ಸಹಾಯ ಮಾಡಿದ್ವಿ. ಆದರೆ ಸರ್ಕಾರ ಮುಗಿಯುತ್ತಾ ಬಂದ್ರೂ ಅನುಕೂಲವಾಗದಿದ್ದಾಗ ಮಾತನಾಡಲೇಬೇಕಾಗಿದೆ. ನಾನು ಬಿಜೆಪಿಗೆ ಹೋಗ್ತಿರುವ ಸಂಕಟ ಅವರನ್ನ ಕಾಡ್ತಿದೆ ಎಂದು ಹೇಳಿದ್ದಾರೆ.

    ಬುಧವಾರ ಆಪ್ತರ ಮನೆಗೆ ಸಚಿವ ಡಿಕೆಶಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಡಿಕೆಶಿ ಅವರು ಭೇಟಿ ಮಾಡಿದ್ದ ಮುಖಂಡರೆಲ್ಲಾ ಈಗ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರು ಬರ್ತಾರೆ, ಬಲವಂತಕ್ಕೆ ಬಂದು ಡ್ರಾಮಾ ಮಾಡಿ ಹೋಗ್ತಾರೆ. ಅವರನ್ನ ತಾಲ್ಲೂಕಿನ ಜನ ನಂಬುವ ಸ್ಥಿತಿಯಲ್ಲಿಲ್ಲ. ಅದಕ್ಕೆ ಅಂತಹ ಮಹತ್ವ ಕೊಡುವ ಅಗತ್ಯ ಸಹ ಇಲ್ಲ. ಜನಗಳ ಕೆಲಸ ಮಾಡಬೇಕಾದ್ದು ಅವರ ಕರ್ತವ್ಯ. ಅವರು 30 ವರ್ಷಗಳಿಂದ ಈ ಕೆಲಸ ಮಾಡಬೇಕಿತ್ತು. ಇಂದು ಕಾಂಗ್ರೆಸ್ ಅಧಿಕಾರ ಮುಗಿಸುವಂತಹ ಸಮಯ. ಕೊನೆಯಗಳಿಗೆಯಲ್ಲಿ ವಾರಕ್ಕೊಮ್ಮೆ ಬರ್ತೀನಿ ಅಂತಿದ್ದಾರೆ. ಅವರಿಗೆ ನಾನು ಬಿಜೆಪಿಗೆ ಸೇರುತ್ತಿರುವುದು ನೋವಿದೆ. ಅವರ ರಾಜಕೀಯ ಉನ್ನತಿಗೆ ತಾಲೂಕು ಮುಖ್ಯವಾಗಿತ್ತು. ತಾಲೂಕಿನ ಜನ ಪರಿವರ್ತನೆ ಆಗ್ತಿರೋದು ಅವರ ಹತಾಶೆಗೆ ಕಾರಣವಾಗಿದೆ. ಇವತ್ತು ನಮಗೆ ಶುಭದಿನ, ಮುಂದಿನ ದಿನಗಳಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆಂದು ಹೇಳಿದರು.

  • ಪ್ರಾಣ ಬಲಿಗಾಗಿ ಕಾದುಕುಳಿತಿವೆ ಚನ್ನಪಟ್ಟಣದ ತುಂಬಿದ ಕೆರೆಗಳು!

    ಪ್ರಾಣ ಬಲಿಗಾಗಿ ಕಾದುಕುಳಿತಿವೆ ಚನ್ನಪಟ್ಟಣದ ತುಂಬಿದ ಕೆರೆಗಳು!

    ರಾಮನಗರ: ಬೊಂಬೆನಗರಿ ಅಂತಲೇ ಖ್ಯಾತಿ ಗಳಿಸಿರೋ ಚನ್ನಪಟ್ಟಣದ ಕೆರೆಗಳೆಲ್ಲಾ ತುಂಬಿ ಥಳಥಳಿಸ್ತಾ ಇವೆ. ಒಂದೆಡೆ ಕೆರೆಗಳೆಲ್ಲಾ ತುಂಬಿ ಅಂತರ್ಜಲ ಮತ್ತೆ ಮೇಲಕ್ಕೇರಿದ ಸಂತಸ ಜನರಲ್ಲಿದೆ. ಆದ್ರೆ ಇನ್ನೊಂದೆಡೆ ಅದೇ ಕೆರೆಗಳ ಬಳಿ ಜೀವವನ್ನ ಅಂಗೈಲಿಡಿದುಕೊಂಡು ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.

    ಕಳೆದ ಒಂದು ತಿಂಗಳ ಕಾಲ ಸುರಿದ ಮಳೆಯಿಂದಾಗಿ ಚನ್ನಪಟ್ಟಣ ತಾಲೂಕಿನ ಕೆರೆಗಳೆಲ್ಲಾ ತುಂಬಿ ತುಳುಕುತ್ತಿದ್ದು, ಎಲ್ಲಿ ಕೆರೆಗೆ ಬೀಳ್ತಿವೋ ಅಂತ ಆತಂಕದಲ್ಲೇ ವಾಹನ ಸವಾರರು ಸಂಚರಿಸುತ್ತಿದ್ದಾರೆ. ಬಹುತೇಕ ಕೆರೆಗಳು ಪ್ರಾಣಬಲಿಗಾಗಿ ಕಾದು ಕುಳಿತಿದ್ದು, ಅತೀ ದೊಡ್ಡ ಕೆರೆ ತಿಟ್ಟಮಾರನಹಳ್ಳಿಯಲ್ಲಿನ ರಸ್ತೆ ಕೂಡ ಹದಗೆಟ್ಟಿದೆ. ಕೆರೆಯ ಬಳಿ ತಿರುವುಗಳಿದ್ರೂ ಎಚ್ಚರಿಕೆ ನಾಮಫಲಕಗಳಿಲ್ಲ, ತಡೆಗೋಡೆಗಳಿಲ್ಲ. ಇಲ್ಲಿ ಸಂಚರಿಸುವಾಗ ಸ್ವಲ್ಪ ಯಾಮಾರಿದ್ರೂ ಯಮಲೋಕ ಸೇರೋದು ಗ್ಯಾರಂಟಿ.

    ಇದ್ರಿಂದ ರೊಚ್ಚಿಗೆದ್ದಿರೋ ಗ್ರಾಮಸ್ಥರು ರಸ್ತೆ ದುರಸ್ಥಿಗೊಳಿಸುವಂತೆ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ಇಲ್ಲಿ ಅಪಘಾತಗಳು ಸಂಭವಿಸದಂತೆ ಕುರಿ ಬಲಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಆದ್ರೂ ಕೂಡಾ ಯಾವೊಬ್ಬ ಅಧಿಕಾರಿಗಳೂ ಇತ್ತ ಸುಳಿದಿಲ್ಲ ಅಂತ ಸ್ಥಳೀಯರು ಆರೋಪಿಸಿದ್ದಾರೆ.

    ಒಟ್ಟಿನಲ್ಲಿ ರಾಮನಗರ ಜನರಿಗೆ ಕೆರೆಗಳು ತುಂಬಿತಲ್ಲಾ ಅನ್ನೋ ಖುಷಿ ನಡುವೆ ಹೊಸ ಸಂಕಟ ಬೇರೆ ಶುರುವಾಗಿದೆ. ಹೀಗಾಗಿ ಜೀವಬಲಿಗೂ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡ್ರೆ ಒಳ್ಳೆಯದು ಅಂತ ಸ್ಥಳೀಯರು ಹೇಳುತ್ತಿದ್ದಾರೆ.

  • ಚನ್ನಪಟ್ಟಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಡಿಕೆಶಿ, ಯೋಗೇಶ್ವರ್

    ಚನ್ನಪಟ್ಟಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಡಿಕೆಶಿ, ಯೋಗೇಶ್ವರ್

    ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗೇಶ್ವರ್ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಚನ್ನಪಟ್ಟಣ ಹೊರವಲಯದ ಖಾಸಗಿ ಹೋಟೆಲ್‍ನಲ್ಲಿ ಯೋಗೇಶ್ವರ್ ಮಾತನಾಡಿ ಡಿಕೆ ಸಹೋದರರ ವಿರುದ್ಧ  ಏಕವಚನದಲ್ಲಿ ಹರಿಹಾಯ್ದಿದ್ದಾರೆ.

    ಸಚಿವ ಡಿ.ಕೆ ಶಿವಕುಮಾರ್‍ರವರದ್ದು ಇದು ರಾಜಕೀಯದ ಅಂತಿಮಘಟ್ಟ. ಆತನ ಇತಿಹಾಸ ಇಡೀ ರಾಜ್ಯಕ್ಕೆ ಗೊತ್ತಿದ್ದು ಡಿಕೆಶಿ ಒಂದು ನೆಗೆಟಿವ್ ಫೋರ್ಸ್. ಅವನಿಂದಲೇ ಕಾಂಗ್ರೆಸ್ ಗೆ ಮುಂದಿನ ದಿನಗಳಲ್ಲಿ ಹಿನ್ನಡೆಯಾಗಲಿದೆ ಎಂದು ವಾಗ್ದಾಳಿ ನಡೆಸಿದರು.

    ಕೆಪಿಸಿಸಿ ಅಧ್ಯಕ್ಷರಾದರೆ, ಸಿಎಂ ಆದರೆ ಶಿವಕುಮಾರ್ ನನ್ನನ್ನು ಮಂತ್ರಿ ಮಾಡುತ್ತೇನೆ ಎಂದಿದ್ದರು. ಆದರೆ ಅದು ಅವರ ಕನಸು, ಆ ಕನಸು ನನಸಾಗುವುದಿಲ್ಲ. ಈ ಹಿಂದೆ ಲೋಕಸಭಾ ಚುನಾವಣೆಯ ವೇಳೆ ನನ್ನ ಬಳಿ ಕೈ ಕಾಲು ಹಿಡಿದುಕೊಂಡು ಭಿಕ್ಷೆ ಬೇಡಲು ಬಂದಿದ್ದರು ಎಂದು ತಿಳಿಸಿದರು.

    ಅಣ್ಣ-ತಮ್ಮಂದಿರಿಗೆ 25 ವರ್ಷಗಳಿಂದ ತೊಡೆತಟ್ಟಿಕೊಂಡೇ ರಾಜಕಾರಣ ಮಾಡುತ್ತಾ ಬಂದಿದ್ದೇನೆ. ಈಗಲೂ ಸಹ ತೊಡೆ ತಟ್ಟಿ ಚಾಲೆಂಜ್ ಮಾಡ್ತೇನೆ ಮುಂದಿನ ಎಂಪಿ, ಎಂಎಲ್‍ಸಿ ಚುನಾವಣೆಯನ್ನ ಗೆದ್ದು ತೋರಿಸಲಿ ಎಂದು ಹೇಳಿದರು.

    ಮೋಸ ಹೋದ್ವಿ: ಶಾಸಕ ಸಿ.ಪಿ ಯೋಗೇಶ್ವರ್ ಅವರನ್ನು ನಂಬಿ ನಾವು ಮೋಸ ಹೋಗಿದ್ದೇವೆ. ಇನ್ನು ಮುಂದೆ ಹಾಗೆ ಆಗಲ್ಲ ಚನ್ನಪಟ್ಟಣದಲ್ಲಿ 2018 ಕ್ಕೆ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಸಚಿವ ಡಿ.ಕೆ ಶಿವಕುಮಾರ್ ಚನ್ನಪಟ್ಟಣದಲ್ಲಿ ತಿಳಿಸಿದರು.

    ಚನ್ನಪಟ್ಟಣ ಶಾಸಕ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ತೊರೆದ ಬಳಿಕ ಇಂಧನ ಸಚಿವ ಡಿ.ಕೆ ಶಿವಕುಮಾರ್ ತಮ್ಮ ಶಕ್ತಿ ಪ್ರದರ್ಶನ ನಡೆಸಿದರು. ದೊಡ್ಡಮಳೂರು ಸಮೀಪದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ನಡೆಸಲಾಯಿತು. ಈ ವೇಳೆ ಡಿ.ಕೆ ಸಹೋದರರು ಶಾಸಕ ಸಿ.ಪಿ ಯೋಗೇಶ್ವರ್ ವಿರುದ್ಧ ಗುಡುಗಿದರು.

    ಈ ವೇಳೆ ಮಾತನಾಡಿದ ಸಚಿವ ಡಿ.ಕೆ ಶಿವಕುಮಾರ್, ಚನ್ನಪಟ್ಟಣ ಕ್ಷೇತ್ರಕ್ಕೆ ಶಾಸಕರಿಲ್ಲ, ನಾವೇ ಶಾಸಕರಾಗಿದ್ದೇವೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರನ್ನ ಜನ ಆಯ್ಕೆ ಮಾಡ್ತಾರೆ. ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರಲ್ಲ ಯೋಗೇಶ್ವರ್‍ರವರೇ ಎಂದು ಹೇಳಿದರು.

    ಚನ್ನಪಟ್ಟಣದಲ್ಲಿ ಮುಂದಿನ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಅವರು ಯಾವ ಪಕ್ಷಕ್ಕೆ ಬೇಕಾದ್ರೂ ಹೋಗಲಿ, ದಳದವರಿಗೆ ಯೋಗೇಶ್ವರ್ ಬಗ್ಗೆ ಗೊತ್ತು ಅದಕ್ಕೆ ಹತ್ತಿರ ಸೇರಿಸಿಕೊಳ್ಳುತ್ತಿಲ್ಲ. ಇನ್ನೂ ಬಿಜೆಪಿಯವರಿಗೆ ಅನುಭವವಾಗಬೇಕಿದೆ ಎಂದರು.

    ಮಾನ ಮರ್ಯಾದೆ ಇದ್ರೆ ಯೋಗೇಶ್ವರ್ ತಮ್ಮ ಸಹೋದರಿನಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಡಿಕೆಶಿ ಹೇಳಿದರು.

  • ರಾಮನಗರದ ದೊಡ್ಡನಹಳ್ಳಿಯಲ್ಲಿ ಲಘು ಭೂಕಂಪ: ಐದು ಮನೆಗಳ ಗೋಡೆಗಳಲ್ಲಿ ಬಿರುಕು

    ರಾಮನಗರದ ದೊಡ್ಡನಹಳ್ಳಿಯಲ್ಲಿ ಲಘು ಭೂಕಂಪ: ಐದು ಮನೆಗಳ ಗೋಡೆಗಳಲ್ಲಿ ಬಿರುಕು

    ಬೆಂಗಳೂರು: ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ಭೂಕಂಪಿಸಿದ್ದು ಗ್ರಾಮಸ್ಥರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ.

    ತಡರಾತ್ರಿ ಸುಮಾರು 12:20ರ ಸುಮಾರಿನಲ್ಲಿ ಸುಖನಿದ್ರೆಯಲ್ಲಿ ಮಲಗಿದ್ದ ಗ್ರಾಮಸ್ಥರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಮನೆಯಲ್ಲಿದ್ದ ಪಾತ್ರೆ ಸಾಮಾನು, ಟಿವಿ ಮೇಲಿದ್ದ ಸಾಮಾಗ್ರಿಗಳೆಲ್ಲ ಕೆಳಗೆ ಬಿದ್ದಿವೆ. ಕೂಡಲೇ ಮನೆಯವರೆಲ್ಲಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

    ಘಟನೆಯಲ್ಲಿ 5 ಮನೆಗಳಲ್ಲಿನ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಗ್ರಾಮದ ಚಿಕ್ಕೇಗೌಡ, ಚನ್ನಾಜಮ್ಮ, ತಮ್ಮಯಣ್ಣ, ಚಿಕ್ಕಮ್ಮ, ಹಾಗೂ ಸಿದ್ದೇಗೌಡ ಎಂಬುವವರ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಂಪನದಿಂದ ಇದೀಗ ಗ್ರಾಮಸ್ಥರು ಭಯದಲ್ಲಿದ್ದಾರೆ.

    ಗ್ರಾಮದಲ್ಲಿ ಈ ಹಿಂದೆ 9 ವರ್ಷಗಳ ಹಿಂದೆ ಸಹ ಲಘು ಭೂಕಂಪವಾಗಿ ಒಂದು ಮನೆ ಉರುಳಿ ಬಿದ್ದಿತ್ತು. ಅಲ್ಲದೇ ಹಲವು ಮನೆಗಳ ಗೋಡೆ ಸಹ ಬಿರುಕು ಮೂಡಿದ್ವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಒಟ್ಟಾರೆ ದೊಡ್ಡೇನಳ್ಳಿ ಗ್ರಾಮದ ಜನ ಇದೀಗ ತಡರಾತ್ರಿ ಉಂಟಾದ ಭೂ ಕಂಪನದಿಂದ ಭಯ ಭೀತರಾಗಿದ್ದು ರಿಕ್ಟರ್ ಮಾಪಕದಲ್ಲಿ ಎಷ್ಟು ತೀವ್ರತೆ ಯಲ್ಲಿ ಭೂಕಂಪನವಾಗಿದೆ ಎಂಬುದನ್ನು ತಿಳಿಯಲು ಕುತೂಹಲವನ್ನು ಸಹ ವ್ಯಕ್ತಪಡಿಸ್ತಾ ಇದ್ದಾರೆ.

  • ಗಂಡನ ಅನಾರೋಗ್ಯದಿಂದ ಬೇಸತ್ತು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ತಾಯಿ ಆತ್ಮಹತ್ಯೆ

    ರಾಮನಗರ: ಗಂಡನ ಅನಾರೋಗ್ಯದಿಂದ ಬೇಸತ್ತ ಪತ್ನಿ ತನ್ನ ಮಕ್ಕಳ ಜೊತೆ ಮನೆಯ ಎದುರಿನ ನೀರಿನ ಸಂಪ್ ನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಅಪ್ಪಗೆರೆ ಗ್ರಾಮದಲ್ಲಿ ನಡೆದಿದೆ.

    ರೇಖಾ (28), ಮಕ್ಕಳಾದ ನೂತನ್ (7) ಮತ್ತು ಮಾನ್ಯ (4) ಮೃತ ದುರ್ದೈವಿಗಳು. ಮೊದಲು ತಾಯಿ ರೇಖಾ ತನ್ನ ಮಕ್ಕಳನ್ನು ನೀರಿನ ಸಂಪ್ ನಲ್ಲಿ ಮುಳುಗಿಸಿ ಕೊನೆಗೆ ತಾವು ನೀರಿನ ಸಂಪ್ ನಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ನವೀನ್ ಅವರಿಗೆ ಲಿವರ್ ಜಾಂಡೀಸ್ ಇದ್ದು ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಲಾಗಿತ್ತು.

    ಗಂಡನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು ಗುಣಮುಖವಾಗಿರಲಿಲ್ಲ. ಹೀಗಾಗಿ ಮುಂದೆ ಪತಿ ಸಾಯಬಹುದು ಅವರ ಅಗಲಿಕೆಯಿಂದ ಜೀವನ ಸಾಗಿಸುವುದು ಕಷ್ಟ ಅಂತ ಮಕ್ಕಳ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.