Tag: Channapatna Constituency

  • ಕಾಂಗ್ರೆಸ್‌ನವರು ಮಧ್ಯರಾತ್ರಿ ಕೂಪನ್ ಹಂಚಿ ನನ್ನನ್ನ ಸೋಲಿಸಿದ್ದಾರೆ – ನಿಖಿಲ್ ಕುಮಾರಸ್ವಾಮಿ

    ಕಾಂಗ್ರೆಸ್‌ನವರು ಮಧ್ಯರಾತ್ರಿ ಕೂಪನ್ ಹಂಚಿ ನನ್ನನ್ನ ಸೋಲಿಸಿದ್ದಾರೆ – ನಿಖಿಲ್ ಕುಮಾರಸ್ವಾಮಿ

    ರಾಮನಗರ: ಕಾಂಗ್ರೆಸ್‌ನವರು (Congress) ಮಧ್ಯರಾತ್ರಿ 3 ಸಾವಿರ ರೂ. ಕೂಪನ್‌ ಕಾರ್ಡ್‌ ಕೊಟ್ಟು ಆರ್ಥಿಕವಾಗಿ ಹಿಂದುಳಿದವರ ಮತ ಪಡೆದು ಅವರನ್ನ ದಾರಿ ತಪ್ಪಿಸಿದ್ದಾರೆ. ಆ ಮೂಲಕ ನನ್ನನ್ನ ಸೋಲಿಸಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಬೇಸರ ವ್ಯಕ್ತಪಡಿಸಿದ್ದಾರೆ.

    ಚನ್ನಪಟ್ಟಣದಲ್ಲಿ (Channapatna Constituency) ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ನಿಖಿಲ್, ನಮ್ಮಪ್ಪ ನಿಮ್ಮನ್ನ ನಂಬಿ ಸ್ಪರ್ಧೆ ಮಾಡಿದರು ನೀವು ಕೈಹಿಡಿದ್ರಿ, ಪಕ್ಷ ಅಧಿಕಾರಕ್ಕೆ ತರಲು ಪಂಚರತ್ನ ಯಾತ್ರೆ ಮಾಡಿದರು. ಅವರ ಅನುಪಸ್ಥಿತಿಯಲ್ಲಿ ಇಲ್ಲಿನ ಜನ ಅವರನ್ನು ಗೆಲ್ಲಿಸಿದರು‌. ಯುವಕರು, ರೈತರು ಎಲ್ಲರೂ ಕುಮಾರಣ್ಣನ ಕೈಹಿಡಿದಿದ್ದಾರೆ. ಕುಮಾರಣ್ಣನ (HD Kumaraswamy) ಮೇಲೆ ಜನರ ಪ್ರೀತಿ ಕಂಡು ನಾನೇ ಬೆರಗಾದೆ. ಇಡೀ ರಾಮನಗರ ಜಿಲ್ಲೆಯಲ್ಲಿ ಅತಿಹೆಚ್ಚು ನಿಷ್ಠಾವಂತ ಕಾರ್ಯಕರ್ತರು ಇರುವುದು ಚನ್ನಪಟ್ಟಣದಲ್ಲೆ. ನಾನು ಸೋತಿರಬಹುದು, ಆದರೆ ರಾಮನಗರದ ಜನ ಸಾಕಷ್ಟು ಪ್ರೀತಿ ಕೊಟ್ಟಿದ್ದಾರೆ. ಅದು ವರ್ಣಿಸಲು ಸಾಧ್ಯವಿಲ್ಲ. ಎಂದಿಗೂ ನಾನು ಚಿರಋಣಿ. ನಿಮ್ಮ ಜೊತೆಯಲ್ಲಿ ನಾನು ನನ್ನ ಕುಟುಂಬ ಇರುತ್ತದೆ. ಸೋತ ಮಾತ್ರಕ್ಕೆ ಮನೆಯಲ್ಲಿ ಕೂರುವುದಿಲ್ಲ‌. ನಿಮ್ಮ ಜತೆ ಇರುತ್ತೇನೆ. ಸೋಲು-ಗೆಲುವು ನಮ್ಮ ಕುಟುಂಬಕ್ಕೆ ಹೊಸತಲ್ಲ ಎಂದಿದ್ದಾರೆ. ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ಹಾಕ್ತೇವೆ: ಸತೀಶ್ ಜಾರಕಿಹೊಳಿ

    2004 ರಿಂದ ಕುಮಾರಸ್ವಾಮಿ ಅವರು ರಾಮನಗರದಿಂದ ಸ್ಪರ್ಧೆ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಆದ್ರೆ ಈ ಬಾರಿ ಜನರು ಬೇರೆ ರೀತಿ ತೀರ್ಮಾನ ತೆಗೆದುಕೊಂಡಿದ್ದಾರೆ. ಮಂಡ್ಯದ ರೀತಿಯೇ ಇಲ್ಲಿಯೂ ಆಗಿರುವ ಬಗ್ಗೆ ನಿಮ್ಮ‌ ಬಳಿ ಹಂಚಿಕೊಂಡಿದ್ದೆ. ಇಲ್ಲಿ ಕಾಂಗ್ರೆಸ್ ನವರು ಮಧ್ಯರಾತ್ರಿ 3 ಸಾವಿರ ರೂ. ಕೂಪನ್ ಕಾರ್ಡ್‌ ಕೊಟ್ಟು ಆರ್ಥಿಕವಾಗಿ ಹಿಂದುಳಿದವರ ಮತ ಪಡೆದು ಅವರನ್ನ ದಾರಿ ತಪ್ಪಿಸಿದ್ದಾರೆ, ನನ್ನನ್ನ ಸೋಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರಿಗೆ ಅರಿವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇದೇ ತಿಂಗಳು ಉದ್ಘಾಟನೆಗೊಳ್ಳಬೇಕಿದ್ದ ಸಮುದಾಯ ಭವನದಲ್ಲಿ ಡಬಲ್ ಮರ್ಡರ್

    ಇನ್ನೂ ನಿಖಿಲ್ ರಾಮನಗರ ತೊರೆಯುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಯಾವುದೇ ಕಾರಣಕ್ಕೂ ರಾಮನಗರ ಬಿಟ್ಟು ಹೋಗುವುದಿಲ್ಲ. ಜನರನ್ನ ಕೈ ಬಿಡುವ ಪ್ರಶ್ನೆ ಇಲ್ಲ‌. ಅಧಿಕಾರ ಇಲ್ಲದಿದ್ದರೂ ಜನಸೇವೆ ಮಾಡುತ್ತೇವೆ. ಮುಂದಿನ ರಾಜಕೀಯದ ಬಗ್ಗೆ ಸದ್ಯ ಯಾವುದೇ ಚಿಂತನೆ ನಡೆಸಲ್ಲ. ಚುನಾವಣಾ ರಾಜಕೀಯದ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ದೇವೇಗೌಡರು ಕಟ್ಟಿರುವ ಪಕ್ಷವನ್ನ ಬಲಿಷ್ಠಗೊಳಿಸುವ ಚಿಂತನೆ ನಡೆಸುತ್ತಿದ್ದೇನೆ. ಮುಂದಿನ ಲೋಕಸಭೆ ಆಗಲಿ, 2028ರ ವಿಧಾನಸಭಾ ಚುನಾವಣೆ ಬಗ್ಗೆ ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ನಾನು ಬೇರೆ ಜಿಲ್ಲೆಗೆ ಹೋಗುವ ಪ್ರಶ್ನೆ ಇಲ್ಲ. 2028ಕ್ಕೆ ರಾಮನಗರದಲ್ಲಿ ನನಗಿಂತ ಪ್ರಬಲ ಅಭ್ಯರ್ಥಿ ಬಂದ್ರೆ ಕಾರ್ಯಕರ್ತರಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಚರ್ಚಿಸುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

  • ಪ್ರಧಾನಿ Vs ಮಾಜಿ ಪ್ರಧಾನಿ; ಮೋದಿ ಬರುವ ದಿನವೇ ಮಗನ ಪರ ಅಖಾಡಕ್ಕಿಳಿದ ದೊಡ್ಡಗೌಡ್ರು

    ಪ್ರಧಾನಿ Vs ಮಾಜಿ ಪ್ರಧಾನಿ; ಮೋದಿ ಬರುವ ದಿನವೇ ಮಗನ ಪರ ಅಖಾಡಕ್ಕಿಳಿದ ದೊಡ್ಡಗೌಡ್ರು

    ರಾಮನಗರ: ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ಪ್ರತಿದಿನ ಒಂದಿಲ್ಲೊಂದು ಬೆಳವಣಿಗೆಗಳು ನಡೆಯುತ್ತಿವೆ. ಮೂರು ಪಕ್ಷದ ನಾಯಕರು ಅಧಿಕಾರದ ಗದ್ದುಗೆ ಹಿಡಿಯಲೇಬೇಕೆಂದು ಪಣ ತೊಟ್ಟಿದ್ದು, ಜಿದ್ದಾ-ಜಿದ್ದಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.

    ಪ್ರಧಾನಿ ಮೋದಿ ಸಹ ನಿನ್ನೆಯಿಂದ ರಾಜ್ಯಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಭಾನುವಾರ (ಏ.30) ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿದಿರುವ ಸಿ.ಪಿ ಯೋಗೇಶ್ವರ್ ಪರ ಪ್ರಚಾರ ನಡೆಸಲಿದ್ದಾರೆ. ಈ ಹೊತ್ತಿನಲ್ಲೇ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಮಗ ಹೆಚ್‌ಡಿಕೆ ಪರ ಪ್ರಚಾರಕ್ಕಿಳಿದಿದ್ದಾರೆ. ಇದನ್ನೂ ಓದಿ: ಅದಾನಿ ಸಮೂಹ ವಿರುದ್ಧದ ಹಿಂಡೆನ್‍ಬರ್ಗ್ ವರದಿ ತನಿಖೆ – 6 ತಿಂಗಳ ಕಾಲಾವಕಾಶ ವಿಸ್ತರಣೆಗೆ ಸೆಬಿ ಮನವಿ

    ಭಾನುವಾರ ಚೆನ್ನಪಟ್ಟಣದ ಇಗ್ಗಲೂರಿನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದಾರೆ. ಅದಕ್ಕೂ ಮೊದಲು ಇಗ್ಗಲೂರು ಡ್ಯಾಮ್ ವೀಕ್ಷಣೆ ಮಾಡಿದ್ದಾರೆ. 1996 ರಲ್ಲಿ ನಿರ್ಮಿಸಲಾದ ಇಗ್ಗಲೂರು ಡ್ಯಾಮ್‌ಗೆ ಹೆಚ್.ಡಿ ದೇವೇಗೌಡ ಬ್ಯಾರೇಜ್ ಅಂತಾ ಹೆಸರಿಡಲಾಗಿದೆ. ಇದನ್ನೂ ಓದಿ: ಎರಡು ರಾಷ್ಟ್ರೀಯ ಪಕ್ಷಗಳ ನಾಯಕರು ರಾಜ್ಯದಲ್ಲಿ ದಾಳಿ ನಡೆಸುತ್ತಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ

    ಇದೇ ವೇಳೆ ಮಾತನಾಡಿದ ದೇವೇಗೌಡರು, ಚನ್ನಪಟ್ಟಣ, ಬೇಲೂರಿಗೆ ಪ್ರಧಾನಿ ಮೋದಿ ಭೇಟಿ ಕೊಡುತ್ತಿರುವ ಬಗ್ಗೆ ನನಗೆ ಗೊತ್ತಿದೆ. ಚನ್ನಪಟ್ಟಣ ಕುಮಾರಸ್ವಾಮಿಯರ ಕರ್ಮ ಭೂಮಿ. ಅವರು ಮಂಡ್ಯ ಜಿಲ್ಲೆಯಲ್ಲಿ ಚುನಾವಣೆಗೆ ನಿಲ್ಲಬೇಕು ಎಂದು ಒತ್ತಡವಿದ್ದರೂ, ನನ್ನ ಕರ್ಮಭೂಮಿಯಲ್ಲೇ ಚುನಾವಣೆಗೆ ನಿಲ್ಲುತ್ತೇನೆ ಎಂದು ಇಲ್ಲಿಯೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚನ್ನಪಟ್ಟಣದಲ್ಲೇ ಅಂತಿಮವಾಗಿ ನನ್ನ ಪ್ರಾಣ ಬಿಡ್ತೀನಿ ಅನ್ನೋ ಮಾತನ್ನೂ ಹೆಚ್‌ಡಿಕೆ ಹೇಳಿದ್ದಾರೆ.

    ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿ ಕೊಟ್ಟಂತಹ ಯೋಜನೆಗಳಿಲ್ಲ. ಆದ್ರೆ ಇಡೀ ಇಂಡಿಯಾದಲ್ಲಿ 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಘೋಷಿಸಿದ್ರೆ ಅದು ಕುಮಾರಸ್ವಾಮಿ ಮಾತ್ರ. 2 ಬಾರಿ ಸಂಕಷ್ಟದಲ್ಲೇ ಸಿಎಂ ಆದ್ರು. ಬಿಜೆಪಿ, ಕಾಂಗ್ರೆಸ್‌ನವರು ಕೊಟ್ಟ ನೋವನ್ನೆಲ್ಲಾ ಸಹಿಸಿಕೊಂಡರು. ಸಿದ್ದರಾಮಯ್ಯ ಕೈಯಲ್ಲಾಗಲಿಲ್ಲ, ಆದ್ರೆ ಕುಮಾರಸ್ವಾಮಿ ಸಾಲ ಮನ್ನಾ ಮಾಡಿದ್ರು. ಯಾರೋ ಏನೇ ಪ್ರಚಾರ ಮಾಡಿದ್ರೂ ಕುಮಾರಸ್ವಾಮಿಯನ್ನ ಚನ್ನಪಟ್ಟಣದ ಜನ ಬಿಟ್ಟುಕೊಡಲ್ಲ ಎಂದು ತಿಳಿಸಿದ್ದಾರೆ.

    ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿವೆ. ಮೊದಲು ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರನನ್ನ ನಿಲ್ಲಿಸುತ್ತೇವೆ ಅಂತಾ ಹೇಳಿದ್ರು. ನಂತರ ಹಿಂದೇಟು ಹಾಕಿದ್ರು. ಇದರ ಅರ್ಥ ಏನು. ಪಂಚರತ್ನ ಯಾತ್ರೆಯ ಯಶಸ್ಸಿನಿಂದ ಎರಡೂ ರಾಷ್ಟ್ರೀಯ ಪಕ್ಷಗಳು ಏನೇನು ಮಾಡ್ತಿವೆ ಅಂತಾ ಗೊತ್ತಿದೆ ಎಂದಿದ್ದಾರೆ.