Tag: Channa Nayak

  • ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    ಚೈತ್ರಾ ಕುಂದಾಪುರ ಡೀಲ್‌ ಪ್ರಕರಣಕ್ಕೆ ಟ್ವಿಸ್ಟ್‌ – ಸಲೂನ್‌ ಮಾಲೀಕನಿಗೆ ಬೆದರಿಕೆ ಕರೆ

    ಚಿಕ್ಕಮಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿಯಿಂದ ಟಕೆಟ್‌ ಕೊಡಿಸುವುದಾಗಿ ನಂಬಿಸಿ ಚೈತ್ರಾ ಕುಂದಾಪುರ (Chaithra Kundapura) ಅಂಡ್‌ ಟೀಂ 5 ಕೋಟಿ ರೂ. ವಂಚನೆ ಎಸಗಿರುವ ಪ್ರಕರಣಕ್ಕೆ (Fraud Case) ಇದೀಗ ಟ್ವಿಸ್ಟ್‌ ಸಿಕ್ಕಿದೆ. ತನಿಖೆ ನಡೆದಷ್ಟು ಹೊಸ ಹೊಸ ವಿಷಯಗಳು ಬೆಳಕಿಗೆ ಬರುತ್ತಿವೆ.

    ಚೈತ್ರಾ ಕುಂದಾಪುರ ವಂಚನೆ ಪ್ರಕರಣ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಕಡೂರಿನ ಸಲೂನ್ ಮಾಲೀಕ ರಾಮುಗೆ ಗಗನ್‌ ಮತ್ತು ಅವರ ಗುಂಪಿನಿಂದ ಬೆದರಿಕೆ ಕರೆ ಬಂದಿದೆ. ಸಲೂನ್‌ ಮಾಲೀಕ ಧನರಾಜ್ ಕಾಂಗ್ರೆಸ್ ಮುಖಂಡ ಎಂಬ ಸಂಗತಿಯೂ ಹೊರಬಂದಿದೆ. ಗೋವಿಂದಬಾಬು ಬಳಿ ತೆರಳುವ ಮುನ್ನ 5ನೇ ಆರೋಪಿ ಚನ್ನ ನಾಯ್ಕ್‌ಗೆ ಥೇಟ್ ಆರ್‌ಎಸ್‌ಎಸ್‌ ಮುಖಂಡನಂತೆ ಕೂದಲು ಶೈನಿಂಗ್ ಮಾಡಿ ಹೇರ್ ಕಟ್ ಮಾಡಿಸಿಕೊಂಡು ಹೋದ ಬಳಿಕ ಪ್ರಕರಣ ಹೊರ ಬರುತ್ತಿದ್ದಂತೆ ಸಲೂನ್ ಮಾಲೀಕ ರಾಮುಗೆ ಬೆದರಿಕೆ ಕರೆ ಬಂದಿದೆ. ಇದನ್ನೂ ಓದಿ: ಡೀಲ್‍ನಲ್ಲಿ ‘ವಿಶ್ವನಾಥ್‌ ಜೀʼ ಪಾತ್ರಧಾರಿ ಚನ್ನನಾಯ್ಕ್ ತನ್ನ ಪಾತ್ರದ ಬಗ್ಗೆ ವಿವರಿಸಿದ್ದು ಹೀಗೆ..

    ಮಾಧ್ಯಮಗಳ ಮುಂದೆ ತನಗೆ ತಿಳಿದ ಮಾಹಿತಿ ನೀಡಿದ್ದಕ್ಕೆ ಧನರಾಜ್ ಆಪ್ತ ನೂತನ್ ಸಲೂನ್ ಮಾಲೀಕನಿಗೆ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಡಿಯೋ ಸಹ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ʻನಿನ್ಯಾಕೆ ಮಾಧ್ಯಮ ಮುಂದೆ ಮಾತಾನಾಡಿದೆ, ನನಗೆ ಗೊತ್ತಿಲ್ಲ ಅಂತಾ ಹೇಳಬೇಕಿತ್ತು. ಅಂಗಡಿ ಹೇಗೆ ನಡೆಸುತ್ತೀಯಾ ನೋಡ್ತೀನಿ ಎಂದು ಧಮ್ಕಿ ಹಾಕಿದ್ದಾರೆ. ಇದನ್ನೂ ಓದಿ: ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ

    ಇನ್ನು ಚೈತ್ರಾ ಕುಂದಾಪುರಗೆ 2018ರಿಂದಲೇ ಕಡೂರಿನ ಲಿಂಕ್ ಇತ್ತು ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. 2018ರಲ್ಲಿ ಚೈತ್ರಾ ಕಡೂರು ಪಟ್ಟಣದ ಸರ್ಕಾರಿ ಕಾಲೇಜು ಒಂದರಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು. ಆ ವೇಳೆ ಅಂದಿನ ಬಿಜೆಪಿಯಲ್ಲಿದ್ದ ಆರೋಪಿ ಗಗನ್ ಹಾಗೂ ಧನರಾಜ್ ಆಕೆ ಬೆನ್ನಿಗೆ ನಿಂತಿದ್ದರು. ಅಂದಿನಿಂದ ಕಡೂರಿನ ಗಗನ್ ಹಾಗೂ ಧನರಾಜ್ ಜೊತೆ ಚೈತ್ರಾಳ ಸ್ನೇಹ ಉತ್ತಮವಾಗಿತ್ತು ಎಂದು ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • MLA ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಪ್ರಕರಣದ 5ನೇ ಆರೋಪಿ ಅರೆಸ್ಟ್‌

    MLA ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಪ್ರಕರಣದ 5ನೇ ಆರೋಪಿ ಅರೆಸ್ಟ್‌

    ಬೆಂಗಳೂರು: ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ವಂಚಿಸಿದ ಪ್ರಕರಣದ ಎ-5 ಆರೋಪಿ ಚನ್ನ ನಾಯ್ಕ್‌ನ (Channa Nayak) ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ (Bengaluru) ಬಂಧಿಸಿದ್ದಾರೆ.

    ವಂಚನೆ ಪ್ರಕರಣದಲ್ಲಿ ವಿಶ್ವನಾಥ್ ಜೀ ಪಾತ್ರ ನಿರ್ವಹಿಸಿದ್ದ ಚನ್ನ ನಾಯ್ಕ್‌ನನ್ನ ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಚೈತ್ರಾ ಕುಂದಾಪುರ ಮತ್ತು ತಂಡವನ್ನ ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಈ ಬೆನ್ನಲ್ಲೇ 5ನೇ ಆರೋಪಿಯನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಎಂಎಲ್‌ಎ ಟಿಕೆಟ್‌ಗಾಗಿ ಬರೋಬ್ಬರಿ 5 ಕೋಟಿ ಡೀಲ್ – ಉದ್ಯಮಿಗೆ ಚೈತ್ರಾ ಮೋಸ ಮಾಡಿದ್ದು ಹೇಗೆ? ಪೂರ್ಣ ಕಥೆ ಓದಿ

    ಬಂಧನಕ್ಕೂ ಮುನ್ನ ʻಪಬ್ಲಿಕ್‌ ಟಿವಿʼಯೊಂದಿಗೆ ಮಾತನಾಡಿದ ಚನ್ನ ನಾಯ್ಕ್‌, ʻಟಿಕೆಟ್ ಬಗ್ಗೆ ಮಾತನಾಡ್ತಿನಿʼ ಇದೊಂದು ಡೈಲಾಗ್‌ಗೆ ನನಗೆ ಹಣ ನೀಡಿದ್ರು. ಎಲ್ಲದಕ್ಕೂ ಜೀ.. ಜೀ… ಅನ್ನೋ ಪದ ಬಳಕೆ ಮಾಡೋದಕ್ಕೆ ಹೇಳಿದ್ರು. ಯಾವ ಲುಕ್‌ನಲ್ಲಿ ಬರಬೇಕು ಅನ್ನೋ ಬಗ್ಗೆಯೂ ನನಗೆ ತರಬೇತಿ ನೀಡಿದ್ರು. ನನಗೂ ಚೈತ್ರಾಗೂ ಪರಿಚಯ ಇಲ್ಲ, ಸಂಬಂಧವೂ ಇಲ್ಲ. ನಾನೇ ಸಿಸಿಬಿ ಪೊಲೀಸರಿಗೆ ಫೋನ್ ಮಾಡ್ತಿನಿ ಎಂದು ಹೇಳಿದ್ದ. ಇದನ್ನೂ ಓದಿ: ನಟಿ ವಿಜಯಲಕ್ಷ್ಮಿ ಗರ್ಭಪಾತ ಆರೋಪ : ವಿಚಾರಣೆಗೆ ಇಂದು ರಾಜಕಾರಣಿ ಸೀಮನ್ ಹಾಜರಿ?

    ಚೈತ್ರಾ ಕುಂದಾಪುರ ಗೋವಿಂದ ಬಾಬು ಪೂಜಾರಿ ಎಂಬ ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ ಹೇಳಿ ಮೊದಲಿಗೆ 50 ಲಕ್ಷ ರೂ. ಅಡ್ವಾನ್ಸ್ ಕೊಡಬೇಕು ಎಂದು ಹೇಳಿದ್ದಳು. ನಂತರ ನಾಯ್ಕ್ ಎನ್ನುವವನ ಮೂಲಕ 3 ಕೋಟಿ ರೂ. ತೆಗೆದುಕೊಳ್ಳುವುದು ಎಂಬುದು ಆಕೆಯ ಅಸಲಿ ಪ್ಲಾನ್ ಆಗಿತ್ತು. ಆದರೆ ಯಾವಾಗ ಪೂಜಾರಿ 50 ಲಕ್ಷ ರೂ. ಕೇಳಿದ ಕೂಡಲೇ ಕೊಟ್ಟನೋ ಆಗಲೇ ಮತ್ತೆ ಇನ್ನೊಂದು ಕತೆ ಶುರು ಮಾಡಿದ್ದಳು. ಇಷ್ಟು ಸುಲಭವಾಗಿ ಹಣ ಸಿಕ್ಕಿದರೇ ಜಾಸ್ತಿ ಹಣ ಹೊಡೆಯೋಣ ಎಂದು ಚೈತ್ರಾ ಪ್ಲಾನ್ ಮಾಡಿದ್ದಳು ಅನ್ನೋ ಬಗ್ಗೆ ತನಿಖೆಯಲ್ಲಿ ಗೊತ್ತಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]