Tag: Chandru murder

  • ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿದವರು, ತಲೆ ಹೊಡೆದಾಗ ಏಕೆ ತೋರಲಿಲ್ಲ: ಸಿ.ಟಿ.ರವಿ ಪ್ರಶ್ನೆ

    ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿದವರು, ತಲೆ ಹೊಡೆದಾಗ ಏಕೆ ತೋರಲಿಲ್ಲ: ಸಿ.ಟಿ.ರವಿ ಪ್ರಶ್ನೆ

    ಚಿಕ್ಕಮಗಳೂರು: ಕಲ್ಲಂಗಡಿ ಹಣ್ಣಿನ ಬಗ್ಗೆ ಕನಿಕರ ತೋರಿಸುತ್ತಿರುವವರು ತಲೆ ಹೊಡೆದಾಗ ಏಕೆ ಕನಿಕರ ತೋರಿಸಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿಗೆ ಪ್ರಶ್ನಿಸಿದ್ದಾರೆ.

    ನಗರದ ಎಐಟಿ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಆರೋಗ್ಯ ಶಿಬಿರದಲ್ಲಿ ಮಾತನಾಡಿದ ಅವರು, ಧಾರವಾಡದಲ್ಲಿ ಮುಸ್ಲಿಂ ವ್ಯಾಪಾರಿಗಳ ಕಲ್ಲಂಗಡಿ ಹಣ್ಣಿನ ಅಂಗಡಿ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಸಿದ್ದರಾಮಯ್ಯ ಹಾಗೂ ಹೆಚ್.ಡಿ.ಕುಮಾರಸ್ವಾಮಿ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದಾಗ ಯಾರಾದರೂ ಸ್ಥಳಕ್ಕೆ ಹೋಗಿ ಖಂಡಿಸಿದ್ದಾರಾ? ಅಂದು ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಯಾರು ಸತ್ತರೂ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡ್ತಾರೆ: ತಂಗಡಗಿ

    ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ನಿಲುವು ಸರಿಯಲ್ಲ. ಕಲ್ಲಂಗಡಿ ಹಣ್ಣನ್ನು ಒಡೆದಾಗ ತೋರಿಸುವ ಸಂಕಟವನ್ನು ತಲೆ ಹೊಡೆದಾಗಲೂ ತೋರಿಸಲಿ. ಹಾಗೇನಾದರೂ ಖಂಡಿಸಿದರೆ ಓಟ್ ಲಾಸ್ ಆಗುತ್ತೆ ಎನ್ನುವ ಭಯವೇ? ಇದು ಧರ್ಮ ಸಂಘರ್ಷವಲ್ಲ, ಮತ ಸಂಘರ್ಷ. ಧರ್ಮ ಎಂದಿಗೂ ಸಂಘರ್ಷವನ್ನು ಬಯಸುವುದಿಲ್ಲ ಎಂದಿದ್ದಾರೆ.

    ಧರ್ಮ ಎಂದರೆ ಪರೋಪಕಾರ, ಮಾನವೀಯತೆ. ಅದು ಸಂಘರ್ಷವನ್ನು ಬಯಸುವುದಿಲ್ಲ. ಇದು ಮತದ ಸಂಘರ್ಷ. ನಮ್ಮ ಮತವೇ ಶ್ರೇಷ್ಠ ಎನ್ನುವ ಅಹಂಭಾವ, ನಮ್ಮದು ಉಳಿಯಬೇಕೆಂಬ ಕಾರಣದಿಂದ ನಡೆಯುತ್ತಿರುವ ಮತಾಂಧತೆ. ಧರ್ಮ ಮತ್ತು ಮತವನ್ನು ಒಂದೇ ರೀತಿ ನೋಡಬಾರದು ಎಂದಿದ್ದಾರೆ. ಮತಾಂಧತೆಗೆ ಪೋಷಕವಾಗಿರುವ ಎಲ್ಲವನ್ನೂ ನಿಲ್ಲಿಸಬೇಕು, ಆಗ ಸಂಘರ್ಷ ನಿಲ್ಲುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆ: ಸಿದ್ದರಾಮಯ್ಯ

    ಬೆಂಗಳೂರಿನ ಚಂದ್ರು ಹತ್ಯೆಯ ಮೂಲವನ್ನು ಬಿಟ್ಟು ಉಳಿದೆಲ್ಲಾ ವಿಷಯ ಚರ್ಚೆ ಆಗುತ್ತಿದೆ. ಹತ್ಯೆ ಮಾಡಿದ್ದೇ ಒಂದು ಘೋರ ಅಪರಾಧ. ಯಾಕೆ ಆ ರೀತಿಯ ಮನಸ್ಥಿತಿ ಬಂತು? ಸಣ್ಣ-ಸಣ್ಣ ವಿಚಾರಕ್ಕೆ ಯಾಕೆ ಅವರು ಕೆರಳುತ್ತಾರೆ? ಅದರ ಬಗ್ಗೆ ಯೋಚಿಸಬೇಕು. ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ಅಖಂಡ ಶ್ರೀನಿವಾಸ್ ಮೂರ್ತಿ ಸೇರಿ ಹಲವು ಜನರ ಮನೆಗೆ ಏಕೆ ಬೆಂಕಿ ಹಾಕಿದರು? ಅವರ ರಕ್ತ ಮಾತ್ರ ಕೆಂಪಗಿದೆಯಾ? ಉಳಿದವರ ರಕ್ತ ಕೆಂಪಾಗಿಲ್ಲವೇ? ಅವರಿಗೆ ಮಾತ್ರ ಕ್ರೋಧ, ತನ್ನತನ ಇದೆಯಾ? ಉಳಿದವರಿಗೆ ಇಲ್ಲವೆ? ಹರ್ಷನ ಹತ್ಯೆ ಮಾಡುವಂತಹ ಮನಸ್ಥಿತಿ ಅವರಿಗೆ ಏಕೆ ಬಂತು? ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  • ಯಾರು ಸತ್ತರೂ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡ್ತಾರೆ: ತಂಗಡಗಿ

    ಯಾರು ಸತ್ತರೂ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡ್ತಾರೆ: ತಂಗಡಗಿ

    ಕೊಪ್ಪಳ: ಯಾರಾದರೂ ಸತ್ತರೆ ಅದು ದುಃಖ. ಆದರೆ ಆ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡುತ್ತಾರೆ. ಯಾರು ಎಲ್ಲೇ ಸತ್ತರೂ ಅದನ್ನೇ ಇಟ್ಟುಕೊಂಡು ಬಿಜೆಪಿಯವರು ದುಷ್ಟ ರಾಜಕಾರಣ ಮಾಡುತ್ತಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಆಕ್ರೋಶ ಹೊರಹಾಕಿದರು.

    ಚಂದ್ರು ಕೊಲೆ ಪ್ರಕರಣ ಕುರಿತಾಗಿ ಕೊಪ್ಪಳದ ಕಾರಟಗಿಯಲ್ಲಿ ಮಾತನಾಡಿದ ತಂಗಡಗಿ, ಕಮಲ್ ಪಂಥ್ ಒಳ್ಳೆಯ ಆಡಳಿತಗಾರ. ಆದರೆ ಹೋಂ ಮಿನಿಸ್ಟರ್‌ಗೆ ನಾಚಿಕೆ, ಮಾನ ಇಲ್ಲ. ಕೊಲೆ ವಿಚಾರ ಅವರಿಗೆ ಗೊತ್ತಿರುತ್ತಾ ಅಥವಾ ಅಧಿಕಾರಿಗಳಿಗೆ ಗೊತ್ತಿರುತ್ತಾ? ಹೋಂ ಮಿನಿಸ್ಟರ್‌ಗೆ ಜ್ಞಾನ ಇದೆಯೋ ಇಲ್ಲವೋ ಎಂಬುದನ್ನು ಹುಡುಕಬೇಕಿದೆ. ಹೆಣದ ಮೇಲೆ ರಾಜಕಾರಣ ಮಾಡುವುದನ್ನು ಬಿಜೆಪಿ ನಾಯಕರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಚುನಾವಣೆ ಬಂದ ತಕ್ಷಣ ಪಾಕಿಸ್ತಾನ, ಸೈನಿಕರು ಹಾಗೂ ಧರ್ಮ ನೆನಪಾಗುತ್ತದೆ ಎಂದು ತಂಗಡಗಿ ಗುಡುಗಿದರು. ಇದನ್ನೂ ಓದಿ: ಕಾಂಗ್ರೆಸ್‍ನವರು ಕೇಸರಿ ಶಲ್ಯ ಧರಿಸಿರೋದು ಒಳ್ಳೆಯ ಸಂಕೇತ: ಬೊಮ್ಮಾಯಿ

    ಕೇಸರಿ ಬಿಜೆಪಿಯವರ ಅಪ್ಪನ ಆಸ್ತಿ ಅಲ್ಲ. ಕೇಸರಿ ನನ್ನದು, ನಾನು ಹಿಂದೂ, ಬಿಜೆಪಿಯವರು ಕೆಟ್ಟ ಹಿಂದೂ ಹುಳಗಳು. ಕೇಸರಿ ತ್ಯಾಗದ ಸಂಕೇತ. ಆದರೆ ಇವರು ಕೇಸರಿ ಹಾಕಿಕೊಂಡು ಬೆಂಕಿ ಹಚ್ಚುತ್ತಾರೆ. ಕಾಳಿ ಸ್ವಾಮಿಗಳೇ ನಿಮಗೆ ಕೈ ಮುಗಿಯುತ್ತೇನೆ. ಕೇಸರಿ ಹಾಕೊಂಡು ಕೋಳಿ ಕಟ್ ಮಾಡಬೇಡಿ. ಕೇಸರಿಗೆ ಒಂದು ಶಕ್ತಿ ಇದೆ. ಕೇಸರಿ ಹಾಕಿಕೊಂಡು ಕೋಳಿ ಕೊಯ್ಯುತ್ತೇನೆ ಅಂದ್ರೆ ಏನ್ ರೀ ಎಂದು ಕಿಡಿಯಾದರು. ಇದನ್ನೂ ಓದಿ: ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆ: ಸಿದ್ದರಾಮಯ್ಯ

    ರಾಜ್ಯದಲ್ಲಿ ನಡೆಯೋ ಘಟನೆಗಳ ಹಿಂದೆ ಬೊಮ್ಮಾಯಿ ಇದ್ದಾರೆ. ಇಡೀ ಸರ್ಕಾರದ ಬೆಳವಣಿಗೆ ಮಂತ್ರಿ ಮಂಡಲದಿಂದಲೇ ನಡೆಯುತ್ತಿದೆ. ಆದರೂ ರಾಜ್ಯದ ಮುಖ್ಯಮಂತ್ರಿ ಒಂದು ಮಾತು ಆಡುತ್ತಿಲ್ಲ. ಕಲ್ಲಂಗಡಿ ಕಿತ್ತು ಬಿಸಾಡುತ್ತಿದ್ದರೂ ಇವರದ್ದು ಎಂತಹ ಮನಸ್ಥಿತಿ? ಸರ್ಕಾರದ ಕುಮ್ಮಕ್ಕಿನಿಂದಲೇ ಇದೆಲ್ಲಾ ನಡೆಯುತ್ತಿದೆ. ಹೋಮ್ ಮಿನಿಸ್ಟರ್ ಇರುವುದೇ ವೇಸ್ಟ್ ಎಂದು ತಂಗಡಗಿ ಹರಿಹಾಯ್ದರು.

  • ಬಿಜೆಪಿಯವರು ಸೈಮನ್‌ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸುತ್ತಿದ್ದಾರೆ: ಜಮೀರ್ ಅಹ್ಮದ್

    ಬಿಜೆಪಿಯವರು ಸೈಮನ್‌ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸುತ್ತಿದ್ದಾರೆ: ಜಮೀರ್ ಅಹ್ಮದ್

    ಬೆಂಗಳೂರು: ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಪ್ರಜ್ಞಾವಂತರು, ಅನುಭವಿಗಳು ಎಂದು ಭಾವಿಸಿದ್ದೆ. ಆದರೆ ಅವರು ಛಲವಾದಿಪಾಳ್ಯದ ಯುವಕ ಚಂದ್ರುವಿನ ಕೊಲೆ ಪ್ರಕರಣಕ್ಕೆ ಇಲ್ಲದ ಕಥೆಗಳನ್ನು ತಳುಕು ಹಾಕಿ ಇಷ್ಟು ಕೀಳುಮಟ್ಟದ ಹೇಳಿಕೆ ನೀಡುತ್ತಾರೆ ಎಂದು ಭಾವಿಸಿರಲಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಅಸಮಾಧಾನ ವ್ಯಕ್ತಪಡಿಸಿದರು.

    ಶನಿವಾರ ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಜಮೀರ್, ಯಾವುದೇ ಪ್ರಕರಣದ ತನಿಖೆ ಮಾಡುವವರು ಪೊಲೀಸರು. ಬಿಜೆಪಿ ಅಥವಾ ಆರ್‌ಎಸ್‌ಎಸ್ ಅಲ್ಲ. ಇಂದು ಮನಬಂದಂತೆ ಕೀಳುಮಟ್ಟದ ಹೇಳಿಕೆ ನೀಡಿರುವ ಎಂಎಲ್‌ಸಿ ರವಿಕುಮಾರ್ ಅವರೂ ಅಲ್ಲ. ಏಪ್ರಿಲ್ 5 ರ ರಾತ್ರಿ ನಡೆದ ಘಟನೆ ಕುರಿತು ಸ್ವತಃ ಸೈಮನ್ ನೀಡಿರುವ ಹೇಳಿಕೆಯ ಎಫ್‌ಐಆರ್ ಪ್ರತಿಯನ್ನು ಹಿಡಿದು ಪೊಲೀಸ್ ಆಯುಕ್ತ ಕಮಲ್ ಪಂಥ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎಂದರು. ಇದನ್ನೂ ಓದಿ: ಚಂದ್ರು ಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್- ಘಟನೆಯ ಇಂಚಿಂಚು ಮಾಹಿತಿ ನೀಡಿದ ಸ್ನೇಹಿತ ಸೈಮನ್ ರಾಜ್

    ಎಫ್‌ಐಆರ್ ಪ್ರತಿಯಲ್ಲೇನಿದೆ?
    ಅಂದು ರಾತ್ರಿ ಛಲವಾದಿಪಾಳ್ಯದ ಮನೆಯಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡಿದ್ದೆವು. ಊಟಕ್ಕಾಗಿ ಚಾಮರಾಜಪೇಟೆ, ಸಿಟಿ ಮಾರ್ಕೆಟ್ ಎಲ್ಲಾ ಕಡೆ ಸುತ್ತಾಡಿದೆವು. ಎಲ್ಲೂ ಊಟ ಸಿಗಲಿಲ್ಲ. ಹಾಗಾಗಿ ಚಿಕನ್ ರೋಲ್ ತಿನ್ನಲು ಗುರದಹಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ನಮ್ಮ ವಾಹನ ಶಾಹೀದ್ ವಾಹನಕ್ಕೆ ಡಿಕ್ಕಿ ಹೊಡೆಯಿತು.

    ಡಿಕ್ಕಿಯ ಪರಿಣಾಮ ಶಾಹೀದ್ ಮತ್ತು ಚಂದ್ರುವಿನ ನಡುವೆ ಮಾತಿಗೆ ಮಾತು ಬೆಳೆದು ಶಾಹೀದ್ ಚಂದ್ರುವಿನ ತೊಡೆಗೆ ಚುಚ್ಚಿದ. ನನಗೆ ಭಯವಾಗಿ ತಕ್ಷಣ ಅಲ್ಲಿಂದ ಓಡಿ ಹೋದೆ. ಪುನಃ ಬೆಳಗಿನ ಜಾವ 4 ಗಂಟೆಗೆ ವಾಪಸ್ ಬಂದು ನೋಡಿದಾಗ ಚಂದ್ರು ರಕ್ತಸ್ರಾವದಿಂದ ಒದ್ದಾಡುತ್ತಿದ್ದ. ತಕ್ಷಣ ಅವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿದೆ. ಆದರೂ ಆತ ಬದುಕುಳಿಯಲಿಲ್ಲ ಎಂದು ಚಂದ್ರುವಿನ ಗೆಳೆಯ ಸೈಮನ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಬಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂಥ್ ಟ್ವೀಟ್ ಕೂಡಾ ಮಾಡಿದ್ದಾರೆ. ಇದನ್ನೂ ಓದಿ: ನಾನು ಯಾವುದೇ ಸುಳ್ಳು ಹೇಳಿಲ್ಲ: ಕಮಲ್ ಪಂಥ್ ಸ್ಪಷ್ಟನೆ

    ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಕಾರ್ಯವೈಖರಿ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅಷ್ಟಕ್ಕೂ ಅವರನ್ನು ನೇಮಿಸಿರುವುದು ನಿಮ್ಮ ಬಿಜೆಪಿ ಸರ್ಕಾರವೇ. ಇದೀಗ ನೀವೇ ಅವರ ಮೇಲೆ ಬೆರಳು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದರು.

    ನೀವು ಸೈಮನ್‌ಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸಿರುವುದು ನಮಗೇನೂ ಗೊತ್ತಿಲ್ಲ ಎಂದು ಕೊಂಡಿದ್ದೀರಾ ಮಾನ್ಯ ರವಿಕುಮಾರ್ ಅವರೇ? ನೀವು ಬಾಯಿಗೆ ಬಂದಂತೆ ಬಣ್ಣ ಹಚ್ಚಿ ಕಥೆ ಹೇಳಿದರೆ ಸತ್ಯ ಎಂದಿಗೂ ಸುಳ್ಳಾಗದು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತಪಡಿಸಿದರು.

  • ನಾನು ಯಾವುದೇ ಸುಳ್ಳು ಹೇಳಿಲ್ಲ: ಕಮಲ್ ಪಂಥ್ ಸ್ಪಷ್ಟನೆ

    ನಾನು ಯಾವುದೇ ಸುಳ್ಳು ಹೇಳಿಲ್ಲ: ಕಮಲ್ ಪಂಥ್ ಸ್ಪಷ್ಟನೆ

    ಬೆಂಗಳೂರು: ನಾನು ಯಾವುದೇ ಸುಳ್ಳು ಹೇಳಿಲ್ಲ, ನಮ್ಮ ತನಿಖೆ ಪ್ರಕಾರ ಬೈಕ್ ಟಚ್ ಆಗಿದ್ದಕ್ಕೆ ಚಂದ್ರು ಕೊಲೆ ನಡೆದಿದೆ ಎಂದು ಕಮಿಷನರ್ ಕಮಲ್ ಪಂಥ್ ಸ್ಪಷ್ಟನೆ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಜೆ ನಗರ ಯುವಕ ಚಂದ್ರು ಕೊಲೆ ಪ್ರಕರಣದ ತನಿಖೆಯಲ್ಲಿ ಕಂಡುಕೊಂಡ ವಿಚಾರವನ್ನಷ್ಟೇ ಹೇಳಿದ್ದೇನೆ. ನಮ್ಮ ತನಿಖೆಯಲ್ಲಿ ಮೃತ ಚಂದ್ರು ಜೊತೆಗೆ ಘಟನೆ ವೇಳೆ ಇದ್ದ ಸೈಮನ್ ಹೇಳಿಕೆ ನೀಡಿದ್ದಾನೆ ಎಂದು ಮಾಹಿತಿ ನೀಡಿದರು.

    ನಮ್ಮ ತನಿಖೆ ವೇಳೆ ಬೈಕ್ ಟಚ್ ಆಗಿದ್ದರಿಂದಲೇ ಚಾಕುವಿನಿಂದ ಇರಿದಿದ್ದಾಗಿ ಸೈಮನ್ ಹೇಳಿಕೆ ನೀಡಿದ್ದಾನೆ. ಈ ಹಿನ್ನೆಲೆ ತನಿಖೆ ಮಾಡಿದ್ದ ಬಳಿಕ ಕಂಡುಕೊಂಡ ವಿಚಾರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ, ಚಂದ್ರು ಕೊಲೆಗೆ ಉರ್ದು ಕಾರಣ: ರವಿಕುಮಾರ್

    ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುಳ್ಳು ಹೇಳಿದ್ದಾರೆ. ಚಂದ್ರು ಸ್ನೇಹಿತ ಸೈಮನ್ ರಾಜನ್ ಹೇಳಿರುವುದೇ ಸತ್ಯ. ಚಂದ್ರು ಮನೆಯವರು ಹೇಳಿರುವಂತೆ  ಉರ್ದು ಕಾರಣಕ್ಕಾಗಿಯೇ ಚಂದ್ರು ಕೊಲೆ ಆಗಿರುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಆರೋಪಿಸಿದ್ದರು. ಇದನ್ನೂ ಓದಿ: ಗ್ರಾಮ ಪಂಚಾಯಿತಿ ಅಧ್ಯಕ್ಷನ ಶೋಕಿ ಲೈಫ್ – ಸ್ವಂತ ಗಾಡಿಗೆ ಸರ್ಕಾರದ ಲೋಗೋ ಹಾಕಿ ಪ್ರವಾಸ

  • ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ, ಚಂದ್ರು ಕೊಲೆಗೆ ಉರ್ದು ಕಾರಣ: ರವಿಕುಮಾರ್

    ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ, ಚಂದ್ರು ಕೊಲೆಗೆ ಉರ್ದು ಕಾರಣ: ರವಿಕುಮಾರ್

    ಬೆಂಗಳೂರು: ಪೊಲೀಸ್ ಕಮಿಷನರ್ ಕಮಲ್ ಪಂಥ್ ಸುಳ್ಳು ಹೇಳಿದ್ದಾರೆ. ಚಂದ್ರು ಸ್ನೇಹಿತ ಸೈಮನ್ ರಾಜನ್ ಹೇಳಿರುವುದೇ ಸತ್ಯ. ಚಂದ್ರು ಮನೆಯವರು ಹೇಳಿರುವಂತೆ ಉರ್ದು ಕಾರಣಕ್ಕಾಗಿಯೇ ಚಂದ್ರು ಕೊಲೆ ಆಗಿರುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರವಿಕುಮಾರ್, ಬಿಜೆಪಿ ಈಗಲೂ ಸತ್ಯವನ್ನೇ ಹೇಳುತ್ತಿದೆ. ಗೃಹ ಸಚಿವರಿಗೆ ಮಾಹಿತಿ ಕೊರತೆ ಇತ್ತು. ಪ್ರಕರಣ ಗಂಭೀರವಾಗುತ್ತದೆ ಎಂಬ ಕಾರಣಕ್ಕೆ ಗೃಹ ಸಚಿವರಿಗೆ ತಪ್ಪು ಮಾಹಿತಿ ನೀಡಲಾಗಿದೆ. ಈ ಬಗ್ಗೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ತನಿಖೆ ನಡೆಸಿ ಸತ್ಯಾಸತ್ಯತೆ ಹೊರಗೆ ಬರಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬ್ರಿಟಿಷರಿಗೂ, ಬಿಜೆಪಿಗೂ ಯಾವುದೇ ವ್ಯತ್ಯಾಸವಿಲ್ಲ: ಹೆಚ್‍ಡಿಕೆ

    ಪೊಲೀಸ್ ಆಯುಕ್ತರು ಹೇಳಿದ್ದೇನು..?
    ಬೈಕ್ ತಾಗಿದ ವಿಚಾರದಲ್ಲಿ ಚಂದ್ರು ಹಾಗೂ ಶಾಹಿದ್ ಎಂಬಾತನೊಂದಿಗೆ ಜಗಳ ಏರ್ಪಟ್ಟಿತ್ತು. ಜಗಳ ವಿಕೋಪಕ್ಕೆ ತೆರಳಿ, ಚಂದ್ರುವಿನ ಬಲ ತೊಡೆಗೆ ಶಾಹಿದ್ ಚೂರಿಯಿಂದ ಇರಿದು ಪರಾರಿಯಾಗಿದ್ದ ಎಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: ಟಿಪ್ಪು ಜಯಂತಿ ಮಾಡಿ ಹತ್ತಾರು ಕೊಲೆಗಳಿಗೆ ದಾರಿ ಮಾಡ್ಕೊಟ್ಟಿದ್ದು ಸಿದ್ದರಾಮಯ್ಯ: ಪ್ರತಾಪ್ ಸಿಂಹ

    ಗೃಹಸಚಿವರ ಹೇಳಿಕೆ:
    ಚಂದ್ರು ಕೊಲೆ ವಿಚಾರವಾಗಿ ಗೃಹಸಚಿವ ಆರಗ ಜ್ಞಾನೇಂದ್ರ ಉರ್ದು ಭಾಷೆ ಬಾರದ ಕಾರಣ ಆತನ ಕೊಲೆ ನಡೆದಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ಬಳಿಕ ತಮ್ಮ ಮಾತನ್ನು ತಪ್ಪಾಗಿ ಹೇಳಿದ್ದಾಗಿ ತಿಳಿಸಿ, ಚಂದ್ರು ಕೊಲೆಗೆ ಬೈಕ್ ಗಲಾಟೆಯೇ ಕಾರಣ ಎಂದಿದ್ದರು.