Tag: chandrayaan-4

  • 2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಜಿತೇಂದ್ರ ಸಿಂಗ್‌

    2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಜಿತೇಂದ್ರ ಸಿಂಗ್‌

    ನವದೆಹಲಿ: ಚಂದ್ರನ ಮೇಲ್ಮೈನಲ್ಲಿನ ಕಲ್ಲುಗಳನ್ನು ಭೂಮಿಗೆ ಹೊತ್ತು ತರುವ ಚಂದ್ರಯಾನ-4 ಮಿಷನ್‌ (Chandrayaan-4 Space Missions) ಅನ್ನು 2027ರ ವೇಳೆ ಜಾರಿಮಾಡಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ (Jitendra Singh) ಹೇಳಿದ್ದಾರೆ.

    ಕಲ್ಲುಗಳ ಮಾದರಿಗಳನ್ನು ಹೊರುವ ಶಕ್ತಿ ಹೊಂದಿರುವ ಎರಡು ಪ್ರತ್ಯೇಕ ರಾಕೆಟ್‌ಗಳನ್ನು ಉಡ್ಡಯನ ಮಾಡಲಾಗುವುದು. ಈ ರಾಕೆಟ್‌ಗಳಲ್ಲಿ ಐದು ವಿವಿಧ ಕಾಂಪೋನೆಂಟ್‌ಗಳು ಇರಲಿವೆ. ಇವುಗಳನ್ನು ಕ್ಷಕೆಯಲ್ಲಿ ಜೋಡಿಸಲಾಗುವುದು ಎಂದಿದ್ದಾರೆ.

    ಅಲ್ಲದೇ ಮುಂದಿನ ವರ್ಷ ಮಾನವರವನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಸುರಕ್ಷಿತವಾಗಿ ವಾಪಸ್‌ ಕರೆಸಿಕೊಳ್ಳುವ ʻಗಗನಯಾನʼ ಮಿಷನ್‌ ಅನ್ನು ಕೂಡ ಜಾರಿ ಮಾಡಲಾಗುವುದು. 2026ರಲ್ಲಿ ʻಸಮುದ್ರಯಾನʼ ಮಿಷನ್‌ ಅನ್ನೂ ಜಾರಿ ಮಾಡಲಿದ್ದೇವೆ. ಸಮುದ್ರದ 6,000 ಮೀಟರ್‌ನಷ್ಟು ಆಳಕ್ಕೆ ಮೂವರು ವಿಜ್ಞಾನಿಗಳು ತೆರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ʻರೊಬೊಟ್ ವ್ಯೂಮಿತ್ರಾʼವನ್ನು ಗಗನಯಾನಕ್ಕೆ ಕಳುಹಿಸುವ ಮಹತ್ವದ ಕಾರ್ಯ ಇದೇ ವರ್ಷ ನಡೆಯಲಿದೆ. 1969ರಲ್ಲಿ ಇಸ್ರೋ ಸ್ಥಾಪನೆಯಾದರೂ ಇದರ ಮೊದಲ ಉಡ್ಡಯನ ಕೇಂದ್ರವು 1993ರಲ್ಲಿ ಸ್ಥಾಪನೆಯಾಯಿತು. ಇಸ್ರೋ ಸ್ಥಾಪನೆಯಿಂದ 2014ರ ವರೆಗೆ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದಕ್ಕಿಂತ ಹೆಚ್ಚಿನ ಅಭಿವೃದ್ಧಿಯು ಕಳೆದ 10 ವರ್ಷಗಳಲ್ಲಾಗಿದೆ ಎಂದರು.

  • 2027ರ ವೇಳೆಗೆ ಚಂದ್ರಯಾನ-4ರ ಸುಳಿವು ಕೊಟ್ಟ ಇಸ್ರೋ; ಚಂದ್ರನಲ್ಲಿಗೆ ಗಗನಯಾತ್ರಿಗಳು ಹೆಜ್ಜೆ ಇಡಲು ಹೇಗೆ ಸಹಕಾರಿ?

    2027ರ ವೇಳೆಗೆ ಚಂದ್ರಯಾನ-4ರ ಸುಳಿವು ಕೊಟ್ಟ ಇಸ್ರೋ; ಚಂದ್ರನಲ್ಲಿಗೆ ಗಗನಯಾತ್ರಿಗಳು ಹೆಜ್ಜೆ ಇಡಲು ಹೇಗೆ ಸಹಕಾರಿ?

    ಚಂದ್ರಯಾನ-3 ಯಶಸ್ಸಿನ ಬಳಿಕ ಇಸ್ರೋ ಬಾಹ್ಯಾಕಾಶ ವಲಯದಲ್ಲಿ ಮತ್ತೊಂದು ಸಾಧನೆಗೆ ಮುಂದಡಿಯಿಟ್ಟಿದೆ. 2040 ಕ್ಕೆ ಚಂದ್ರನಲ್ಲಿ ಮಾನವನ ಹೆಜ್ಜೆ ಗುರುತು ಮೂಡಿಸುವ ಗುರಿ ಹೊಂದಿರುವ ಇಸ್ರೋ, ಅದಕ್ಕೆ ಪೂರಕವಾಗಿ 2027ಕ್ಕೆ ಚಂದ್ರಯಾನ-4 ಉಡಾವಣೆಗೆ ಸಜ್ಜಾಗಿದೆ. ಬಾಹ್ಯಾಕಾಶ ಪರಿಶೋಧನಾ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚು ಮಾಡುವ ಇರಾದೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಚಂದ್ರಯಾನ-4 ಯೋಜನೆಗೆ ಹಸಿರು ನಿಶಾನೆ ತೋರಿದೆ. ಹಾಗಿದ್ರೆ ಚಂದ್ರಯಾನ-3ಕ್ಕಿಂತ ಚಂದ್ರಯಾನ-4 ಹೇಗೆ ವಿಭಿನ್ನ? ತಯಾರಿ ಹೇಗಿದೆ? ಚಂದ್ರಯಾನ 4 ಗಗನಯಾತ್ರಿಗಳಿಗೆ ಹೇಗೆ ಸಹಕಾರಿಯಾಗಬಹುದು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.

    ಚಂದ್ರಯಾನ -4 ಯೋಜನೆಯಡಿ ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವುದಷ್ಟೇ ಅಲ್ಲದೇ, ಅಲ್ಲಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಭೂಮಿಗೆ ತರುವ ಉದ್ದೇಶವನ್ನು ಹೊಂದಿದೆ. ಹೀಗಾಗಿ ಈ ಯೋಜನೆಯಲ್ಲಿ ಚಂದ್ರಯಾನ- 3ರ ಯೋಜನೆಯಲ್ಲಿದ್ದ ಪ್ರೊಪಲ್ಷನ್‌ ಮಾಡ್ಯೂಲ್‌, ಡಿಸೆಂಡರ್‌ ಮಾಡ್ಯೂಲ್‌, ಅಸೆಂಡರ್‌ ಮಾಡ್ಯೂಲ್‌ ಜತೆಗೆ ಟ್ರಾನ್ಸಫರ್‌ ಮಾಡ್ಯೂಲ್‌, ರೀ -ಎಂಟ್ರಿ ಮಾಡ್ಯೂಲ್‌ ಎಂಬ ಎರಡು ಹೊಸ ಘಟಕಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ತಿಳಿಸಿದ್ದಾರೆ.

    ಈ ಮಿಷನ್ ಯಶಸ್ವಿ ಚಂದ್ರನ ಲ್ಯಾಂಡಿಂಗ್, ಚಂದ್ರನ ಮಾದರಿಗಳ ಸಂಗ್ರಹಣೆ ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳಲು ಅಗತ್ಯವಾದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳನ್ನು ಭೂಮಿಯ ಮೇಲೆ ಪ್ರದರ್ಶನ ಮಾಡುವ ಗುರಿಯನ್ನು ಹೊಂದಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಚಂದ್ರಯಾನ-4 ಯೋಜನೆ ಸೇರಿದಂತೆ ಹಲವಾರು ಮಹತ್ವದ ಬಾಹ್ಯಾಕಾಶ ಕಾರ್ಯಾಚರಣೆಗಳಿಗೆ ಅನುಮೋದನೆಯನ್ನು ಘೋಷಿಸಿದರು. ಚಂದ್ರಯಾನ-4 ಮಿಷನ್ ಅನ್ನು ವಿಸ್ತರಿಸಲಾಗಿದೆ. ಮುಂದಿನ ಹಂತವು ಚಂದ್ರನಿಗೆ ಮಾನವಸಹಿತ ಮಿಷನ್ ಅನ್ನು ಜಾರಿ ಮಾಡುವುದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಪೂರ್ವಸಿದ್ಧತಾ ಕ್ರಮಗಳನ್ನು ಅನುಮೋದಿಸಲಾಗಿದೆ. ವೀನಸ್ ಆರ್ಬಿಟರ್ ಮಿಷನ್, ಗಗನ್‌ಯಾನ್ ಫಾಲೋ-ಆನ್ ಮತ್ತು ಭಾರತೀಯ ಅಂತರಿಕ್ಷ್ ನಿಲ್ದಾಣ ಮತ್ತು ಮುಂದಿನ ಪೀಳಿಗೆ ಲಾಂಚ್ ವೆಹಿಕಲ್ ಅಭಿವೃದ್ಧಿಗೂ ಅನುಮೋದನೆ ನೀಡಲಾಗಿದೆ ಎಂದು ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.

    ಚಂದ್ರಯಾನ-4 ಭವಿಷ್ಯದ ಚಂದ್ರನ ಕಾರ್ಯಾಚರಣೆಗಳಿಗೆ ಪ್ರಮುಖವಾದ ಅಡಿಪಾಯ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಡಾಕಿಂಗ್ ಮತ್ತು ಅನ್‌ಡಾಕಿಂಗ್ ಕಾರ್ಯವಿಧಾನಗಳು, ಸುರಕ್ಷಿತ ಲ್ಯಾಂಡಿಂಗ್ ತಂತ್ರಗಳು ಮತ್ತು ಚಂದ್ರನ ಮಾದರಿಗಳನ್ನು ಭೂಮಿಗೆ ಹಿಂದಿರುಗಿಸುವ ಸಾಮರ್ಥ್ಯ 2040 ರಲ್ಲಿ ಯೋಜಿಸಲಾದ ಮಾನವಸಹಿತ ಚಂದ್ರನ ಲ್ಯಾಂಡಿಂಗ್‌ನ ಭಾರತದ ಗುರಿಯತ್ತ ಪ್ರಮುಖ ಹೆಜ್ಜೆಯಾಗಿದೆ.

    2035 ರ ವೇಳೆಗೆ ಭಾರತೀಯ ಅಂತರಿಕ್ಷ್ ನಿಲ್ದಾಣವನ್ನು (ಭಾರತೀಯ ಬಾಹ್ಯಾಕಾಶ ನಿಲ್ದಾಣ) ಸ್ಥಾಪಿಸುವುದು ಮತ್ತು 2040 ರ ವೇಳೆಗೆ ಮಾನವಸಹಿತ ಚಂದ್ರನ ಲ್ಯಾಂಡಿಂಗ್ ಅನ್ನು ಸಾಧಿಸುವುದು ಮತ್ತು ಅದರ ತಾಂತ್ರಿಕ ಸಾಧನೆಗಳನ್ನು ನಿರ್ಮಿಸುವುದು ಭಾರತ ಸರ್ಕಾರ ಹಾಗೂ ಇಸ್ರೋದ ಪ್ರಮುಖ ಉದ್ದೇಶವಾಗಿದೆ.

    ಚಂದ್ರಯಾನ 4ಕ್ಕೆ ವೆಚ್ಚವೆಷ್ಟು?
    ಚಂದ್ರಯಾನ 4 ಯೋಜನೆಗೆ 2,104.06 ಕೋಟಿ ರೂ. ಖರ್ಚಾಗಲಿದೆ. 2040ರ ಹೊತ್ತಿಗೆ ಚಂದ್ರನ ಅಂಗಳದಲ್ಲಿ ಗಗನಯಾತ್ರಿಗಳನ್ನು ಇಳಿಸಲು ಇಸ್ರೋ ಯೋಜನೆ ಹಾಕಿಕೊಂಡಿದೆ. 2040ರ ಸುಮಾರಿಗೆ ಭೂಮಿಯಿಂದ ಚಂದ್ರನಿಗೆ, ಚಂದ್ರನಿಂದ ಭೂಮಿಗೆ ಸುಲಭವಾಗಿ ಹೋಗಬಹುದಾಗ ಪರಿಸ್ಥಿತಿ ನಿರ್ಮಾಣವಾಗಬೇಕು ಎಂಬುದು ಇದರ ಗುರಿ.

    ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹ್ಯಾಕಾಶ ನೌಕೆಯ ಅಭಿವೃದ್ಧಿಯ ನೇತೃತ್ವವನ್ನು ವಹಿಸುತ್ತದೆ ಮತ್ತು ಮಿಷನ್ ಅನ್ನು ಮೇಲ್ವಿಚಾರಣೆ ಮಾಡುತ್ತದೆ. 36 ತಿಂಗಳುಗಳ ಟೈಮ್‌ಲೈನ್‌ ಇದಕ್ಕೆ ನೀಡಲಾಗಿದೆ. ಯೋಜನೆಯು ಉದ್ಯಮ ಮತ್ತು ಶಿಕ್ಷಣದೊಂದಿಗೆ ಸಹಯೋಗವನ್ನು ಒಳಗೊಂಡಿರುತ್ತದೆ, ತಾಂತ್ರಿಕ ಪ್ರಗತಿಗಳು ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸುತ್ತದೆ.

    ಚಂದ್ರಯಾನ4ರ ವಿಶೇಷತೆ ಏನು?
    ಚಂದ್ರಯಾನ 4ರ ಕಾರ್ಯಾಚರಣೆಯಲ್ಲಿ ಎರಡು ವಿಭಿನ್ನ ರಾಕೆಟ್‌ಗಳಾದ ಹೆವಿ-ಲಿಫ್ಟರ್ LVM-3 ಮತ್ತು PSLV ಬಳಸಲಾಗುತ್ತದೆ. ಇವೆರಡೂ ವಿಭಿನ್ನ ಪೇಲೋಡ್‌ಗಳನ್ನು ಹೊತ್ತೊಯ್ಯುತ್ತವೆ.

    ಚಂದ್ರಯಾನ 4ರ ಗಮನ ಚಂದ್ರನ ಮೇಲೆ ನಿಖರ ಲ್ಯಾಂಡಿಂಗ್, ಮಾದರಿ ಸಂಗ್ರಹಣೆ ಮತ್ತು ಭೂಮಿಗೆ ಸುರಕ್ಷಿತವಾಗಿ ಮರಳುವುದಾಗಿದೆ. ಇದರ ಮೂಲಕ ಭಾರತ ತನ್ನ ಬಾಹ್ಯಾಕಾಶ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲಿದೆ. ಒಟ್ಟು 5 ಮಾಡ್ಯೂಲ್‌ಗಳನ್ನು ತನ್ನೊಂದಿಗೆ ಚಂದ್ರಯಾನ 4 ಹೊತ್ತೊಯ್ಯಲಿದೆ. ಈ ಎಲ್ಲಾ ಮಾಡ್ಯೂಲ್‌ಗಳು ಒಟ್ಟಾಗಿ ಕೆಲಸ ಮಾಡುತ್ತವೆ ಮತ್ತು ಚಂದ್ರನಿಂದ ಅಗತ್ಯ ಮಾದರಿಗಳನ್ನು ಸಂಗ್ರಹಿಸುತ್ತವೆ. ಇದುವರೆಗೆ ಚೀನಾ ಮತ್ತು ಅಮೆರಿಕ ದೇಶಗಳು ಮಾತ್ರ ಇಂತಹ ಕಠಿಣ ಕಾರ್ಯಾಚರಣೆಯನ್ನು ನಿರ್ವಹಿಸಿವೆ.

    ಭಾರತಕ್ಕೆ ಜಪಾನ್ ನೆರವು:
    ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಈ ಕುರಿತು ಮಾತನಾಡಿ, ಚಂದ್ರಯಾನ 4 ಕೇವಲ ಚಂದ್ರನಿಂದ ಕಲ್ಲುಗಳನ್ನು ತರುವ ಮಿಷನ್ ಅಲ್ಲ. ಭವಿಷ್ಯದಲ್ಲಿ ಮನುಷ್ಯರು ಚಂದ್ರನಲ್ಲಿಗೆ ಹೋಗಲು ಮತ್ತು ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಲು ಸಾಧ್ಯವಾಗುವಂತಹ ಸಾಮರ್ಥ್ಯವನ್ನು ರಚಿಸುವುದಾಗಿದೆ ಎಂದರು.

    ಈ ಯೋಜನೆಯಲ್ಲಿ ಭಾರತ ಮತ್ತು ಜಪಾನ್ ಒಟ್ಟಾಗಿ ಕೆಲಸ ಮಾಡುತ್ತಿವೆ ಎಂಬ ಮಾಹಿತಿ ದೊರೆತಿದೆ. ಇಸ್ರೋ ತನ್ನ ಲ್ಯಾಂಡರ್ ಅನ್ನು ಸಿದ್ಧಪಡಿಸುತ್ತಿದ್ದು, ಚಂದ್ರನ ರೋವರ್‌ನ ಜವಾಬ್ದಾರಿಯನ್ನು JAXA ವಹಿಸಿಕೊಂಡಿದೆ. ಲ್ಯಾಂಡರ್ ರೋವರ್ ಅನ್ನು ಹೊತ್ತೊಯ್ಯುತ್ತದೆ. ಹೀಗಾಗಿ ಎರಡೂ ದೇಶಗಳು ಚಂದ್ರಯಾನ 4ರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ.

    ಭಾರತೀಯ ಬಾಹ್ಯಾಕಾಶ ನಿಲ್ದಾಣ:
    ಗಗನಯಾನ ಕಾರ್ಯಕ್ರಮದ ವ್ಯಾಪ್ತಿಯನ್ನು ವಿಸ್ತರಿಸುವುದರೊಂದಿಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣದ (ಬಿಎಎಸ್-1) ಮೊದಲ ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಪರಿಷ್ಕೃತ ಗಗನಯಾನ ಕಾರ್ಯಕ್ರಮ BAS-1 ಘಟಕ ಸೇರಿದಂತೆ ಎಂಟು ಕಾರ್ಯಾಚರಣೆಗಳನ್ನು ಒಳಗೊಂಡಿದೆ. ಇದು ಡಿಸೆಂಬರ್ 2028ರೊಳಗೆ ಪೂರ್ಣಗೊಳ್ಳಲಿದೆ.

    ಗಗನಯಾನ ಕಾರ್ಯಕ್ರಮದ ಒಟ್ಟು ನಿಧಿಯನ್ನು 11,170 ಕೋಟಿ ರೂಪಾಯಿಗಳಿಂದ 20,193 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಗಗನಯಾನದಲ್ಲಿ 3 ಗಗನಯಾತ್ರಿಗಳನ್ನು 400 ಕಿ.ಮೀ ಮೇಲಿನ ಭೂಮಿಯ ಕಕ್ಷೆಗೆ 3 ದಿನಗಳ ಕಾರ್ಯಾಚರಣೆಗಾಗಿ ಕಳುಹಿಸಲಾಗುತ್ತದೆ. ಇದಾದ ನಂತರ ಸಿಬ್ಬಂದಿ ಇರುವ ಮಾಡ್ಯೂಲ್ ಅನ್ನು ಸಮುದ್ರದಲ್ಲಿ ಸುರಕ್ಷಿತವಾಗಿ ಇಳಿಸಲಾಗುತ್ತದೆ.

    ವೀನಸ್ (ಶುಕ್ರ) ಆರ್ಬಿಟರ್ ಮಿಷನ್:
    ಈ ಯೋಜನೆಗೆ ಕೇಂದ್ರ ಸರ್ಕಾರ 1,236 ಕೋಟಿ ರೂ.ಗಳ ಬಜೆಟ್ ಮೀಸಲಿಟ್ಟಿದೆ. 2028ರ ಮಾರ್ಚ್‌ನಲ್ಲಿ ಯೋಜನೆ ಪ್ರಾರಂಭವಾಗಲಿದೆ. ಇದರ ಪ್ರಾಥಮಿಕ ಉದ್ದೇಶ ಶುಕ್ರನ ಮೇಲ್ಮೈ ಮತ್ತು ವಾತಾವರಣದ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸುವುದು, ವಾತಾವರಣದ ಮೇಲೆ ಸೂರ್ಯನ ಪ್ರಭಾವದ ಕುರಿತು ಅಧ್ಯಯನ ಮಾಡುವುದಾಗಿದೆ.

  • 2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು

    2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು

    – ಸ್ವದೇಶಿ ಅಂತರಿಕ್ಷ ನಿಲ್ದಾಣಕ್ಕೆ ರಾಕೆಟ್ – 8,240 ಕೋಟಿ ರೂ.ಗೆ ಸಂಪುಟ ಅನುಮೋದನೆ

    ನವದೆಹಲಿ: ಚಂದ್ರನ ಮೇಲೆ ಲ್ಯಾಂಡರ್‌ ಇಳಿಸುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದ್ದ ಭಾರತ (India) ಇದೀಗ ಚಂದ್ರನ ಮೇನೆ ಮಾನವನ್ನು ಕಳಿಸುವ ಸಾಹಸಕ್ಕೆ ಮುಂದಾಗಿದೆ.

    ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅಧ್ಯಯನ ನಡೆಸಿದ ಬಳಿಕ ಅವರನ್ನು ಸುರಕ್ಷಿತವಾಗಿ ಭೂಮಿಗೆ ಕರೆತರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಚಂದ್ರಯಾನ-4 (Chandrayaan-4) ಯೋಜನೆಗೆ ಕೇಂದ್ರ ಸಚಿವ ಸಂಪುಟ (Union Cabinet) ಅನುಮೋದನೆ ನೀಡಿದೆ. 2040ರಲ್ಲಿ ಈ ಸಾಹಸ ನಡೆಸಲು, 2104 ಕೋಟಿ ರೂ. ನೀಡಲು ನಿರ್ಧರಿಸಲಾಗಿದೆ. ತಂತ್ರಜ್ಞಾನ ಇನ್ನಷ್ಟೇ ಸಿದ್ದಗೊಳ್ಳಬೇಕಿದೆ. ಇದನ್ನೂ ಓದಿ: ನವೀಕರಿಸಬಹುದಾದ ಇಂಧನ ವಲಯದಲ್ಲಿ ಆಸಕ್ತಿ ಒಂದು ಆಯ್ಕೆಯಲ್ಲ, ಅನಿವಾರ್ಯ – ಜಗದೀಪ್ ಧನಕರ್

    ಎಲ್ಲವೂ ಅಂದುಕೊಂಡಂತೆ ನಡೆದರೆ 2040ಕ್ಕೆ ಈ ಸಾಹಸ ನಡೆಯಲಿದೆ. ಚಂದ್ರನ ಮೇಲೆ ಮಾನವರನ್ನು ಇಳಿಸಿ, ಅವರನ್ನು ವಾಪಸ್ ಕರೆತರುವ ತಂತ್ರಜ್ಞಾನವನ್ನು ಇಸ್ರೋ ಅನಾವರಣಗೊಳಿಸಬೇಕಿದೆ. ಈ ಯೋಜನೆಗೆ 2,104.06 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: 100 ಚದರ ಅಡಿಯ ನಿವೇಶನ, 3.5 ಲಕ್ಷ ವೆಚ್ಚದ 2 ರೂಮ್‌ಗಳಿರುವ ಮನೆ, 500 ರೂ.ಗೆ ಎಲ್‌ಪಿಜಿ ಸಿಲಿಂಡರ್: ಹರಿಯಾಣಕ್ಕೆ ಸಪ್ತ ಗ್ಯಾರಂಟಿ ಘೋಷಣೆ

    2008 ರಲ್ಲಿ ಇಸ್ರೋ ಚಂದ್ರನ ಅಧ್ಯಯನಕ್ಕೆ ನೌಕೆಯನ್ನು ಕಳುಹಿಸಿತ್ತು. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಾ ಅಧ್ಯಯನ ನಡೆಸುವ ಆ ನೌಕೆಗೆ ಚಂದ್ರಯಾನ -1 ಹೆಸರಿಡಲಾಗಿತ್ತು. ಚಂದ್ರನ ಮೇಲೆ ಲ್ಯಾಂಡರ್ ಹಾಗೂ ರೋವರ್ ಇಳಿಸಲು ಚಂದ್ರಯಾನ-2 ಯೋಜನೆಯನ್ನು ಇಸ್ರೋ 2019ರಲ್ಲಿ ಹಮ್ಮಿಕೊಂಡಿತ್ತು. ಸಾಫ್ಟ್‌ವೇರ್ ದೋಷದಿಂದಾಗಿ ಅದು ವಿಫಲವಾಗಿತ್ತು. ಆದ್ರೆ 2023ರಲ್ಲಿ ಚಂದ್ರಯಾನ-3 ಕೈಗೆತ್ತಿಕೊಂಡು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ‌ರ್ ಹಾಗೂ ರೋವ‌ರ್ ಅನ್ನು ಇಳಿಸಿತ್ತು. ಇದಾದ ಬಳಿಕ ‌ಸೂರ್ಯಯಾನದಲ್ಲೂ ಇಸ್ರೋ ಸಕ್ಸಸ್‌ ಕಂಡಿತ್ತು. ಹೀಗೆ ಸಾಲು ಸಾಲು ಸಕ್ಸರ್‌ ಕಂಡಿರುವ ಇಸ್ರೋ ಇದೀಗ ಚಂದ್ರಲೋಕಕ್ಕೆ ಮಾನವನ್ನು ಕಳಿಸಲು ತಯಾರಿ ನಡೆಸುತ್ತಿದೆ.

    ಶುಕ್ರಗ್ರಹಕ್ಕೆ ನೌಕೆ – 1,236 ಕೋಟಿ ಅನುದಾನಕ್ಕೆ ಗ್ರೀನ್‌ ಸಿಗ್ನಲ್‌:
    ಚಂದ್ರ, ಸೂರ್ಯ, ಮಂಗಳ ಗ್ರಹದ ಕುರಿತ ಅಧ್ಯಯನವನ್ನು ಯಶಸ್ವಿಯಾಗಿ ನಡೆಸಿರುವ ಇಸ್ರೋ, ಇದೀಗ ಶುಕ್ರ ಗ್ರಹದ ಅಧ್ಯಯನಕ್ಕೆ ಆರ್ಬಿಟರ್‌ ಕಳುಹಿಸಲು ನಿರ್ಧರಿಸಿದೆ. ಶುಕ್ರಗ್ರಹ ಅಧ್ಯಯನ ಕುರಿತ ಯೋಜನೆ ಜಾರಿಗೆ 1,236 ಕೋಟಿ ನೀಡಲು ಕೇಂದ್ರ ನಿರ್ಧರಿಸಿದೆ. ಬಾಹ್ಯಾಕಾಶ ಇಲಾಖೆಯ ಮಾರ್ಗದರ್ಶನದಲ್ಲಿ ಶುಕ್ರ ಆರ್ಬಿಟರ್ ಮಿಷನ್ ಅಧ್ಯಯನ ನಡೆಸಲಿದೆ. ಈ ಬಾಹ್ಯಾಕಾಶ ನೌಕೆಯು ಶುಕ್ರನ ಕಕ್ಷೆಯಲ್ಲಿ ಮೇಲೆ, ಉಪ ಮೇಲ್ಫ್, ವಾತಾವರಣದ ಪ್ರಕ್ರಿಯೆಮತ್ತು ಶುಕ್ರನ ಮೇಲೆ ಸೂರ್ಯನ ಪ್ರಭಾವದ ಕುರಿತು ಅಧ್ಯಯನ ನಡೆಸಲಿದೆ. ಶುಕ್ರನು ಭೂಮಿಗೆ ಹತ್ತಿರವಿರುವ ಗ್ರಹ ಆಗಿರುವುದರಿಂದ, ಗ್ರಹಗಳ ಪರಿಸರ ಹೇಗೆ ವಿಭಿನ್ನವಾಗಿ ರೂಪುಗೊಳ್ಳುತ್ತದೆ ಎಂದು ನೆರವಾಗಲಿದೆ. ಇದನ್ನೂ ಓದಿ: ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದಲ್ಲಿ ತಿರುಪತಿ ಲಡ್ಡು ತಯಾರಿಸಲು ಪ್ರಾಣಿಗಳ ಕೊಬ್ಬು ಬಳಕೆ: ಆಂಧ್ರ ಸಿಎಂ ಆರೋಪ

    ಸ್ವದೇಶಿ ಅಂತರಿಕ್ಷ ನಿಲ್ದಾಣಕ್ಕೆ ರಾಕೆಟ್:
    ಅಮೆರಿಕ ಮೊದಲಾದ ದೇಶಗಳು ಹೊಂದಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಪರ್ಯಾಯವಾಗಿ ಸ್ವದೇಶಿ ʻಭಾರತೀಯ ಅಂತರಿಕ್ಷ ನಿಲ್ದಾಣʼ ಸ್ಥಾಪನೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಅದರ ಸಾಕಾರಕ್ಕಾಗಿ ದೈತ್ಯ ಎನ್‌ಜಿಎಲ್ ರಾಕೆಟ್ ಅಭಿವೃದ್ಧಿಪಡಿಸುವ 8,240 ಕೋಟಿ ರೂ. ವೆಚ್ಚದ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಭಾಗಶಃ ಮರುಬಳಕೆ ಮಾಡಬಹುದಾದ ನವಪೀಳಿಗೆಯ ಉಡ್ಡಯನ ವಾಹಕ (ಎನ್‌ಜಿಎಲ್‌ವಿ) ಅಭಿವೃದ್ಧಿಪಡಿಸುವ ಸಂಪುಟ ಗ್ರೀನ್‌ ಸಿಗ್ನಲ್‌ ಕೊಟ್ಟಿದೆ.

    ಇಸ್ರೋ ಬಳಿ ಈಗಾಗಲೇ ಇರುವ ದೈತ್ಯ ರಾಕೆಟ್ ‘ಲಾಂಚ್ ವೆಹಿಕಲ್ ಮಾರ್ಕ್ 3’ (LMV-3)ಗಿಂತ ಮೂರು ಪಟ್ಟು ಅಧಿಕಭಾರ ಹೊರುವ ಸಾಮರ್ಥ್ಯವನ್ನು ಎನ್‌ಜಿಎಲ್‌ವಿ ಹೊಂದಿರಲಿದೆ. ಎಲ್‌ಎಂವಿ-3ಗೆ ಹೋಲಿಸಿದರೆ ವೆಚ್ಚ ಒಂದೂವರೆ ಪಟ್ಟು ಹೆಚ್ಚಾಗುತ್ತದೆ. ಎನ್‌ಜಿಎಲ್‌ವಿಗಾಗಿ 8,240 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. 2040ರಲ್ಲಿ ಭಾರತ ಕೈಗೊಳ್ಳಲು ಉದ್ದೇಶಿಸಿರುವ ಮಾನವಸಹಿತ ಚಂದ್ರಯಾನಕ್ಕೂ ಈ ರಾಕೆಟ್ ಬಳಕೆಗೆ ಬರಲಿದೆ. ಅಭಿವೃದ್ಧಿ ಹಂತವನ್ನು ಮುಗಿಸಲು 8 ವರ್ಷಗಳ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.

  • ನಿನ್ನನ್ನು ಚಂದ್ರಯಾನ-4ರಲ್ಲಿ ಕಳುಹಿಸುತ್ತೇನೆ: ಮಹಿಳೆ ಮನವಿಗೆ ಖಟ್ಟರ್ ಹಾಸ್ಯ

    ನಿನ್ನನ್ನು ಚಂದ್ರಯಾನ-4ರಲ್ಲಿ ಕಳುಹಿಸುತ್ತೇನೆ: ಮಹಿಳೆ ಮನವಿಗೆ ಖಟ್ಟರ್ ಹಾಸ್ಯ

    ಚಂಡೀಗಢ: ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ (Manohar Lal Khattar) ಅವರು ಮಹಿಳೆಯೊಬ್ಬರು (Woman) ಮಾಡಿದ ಮನವಿಗೆ ಹಾಸ್ಯ ಚಟಾಕಿ ಹಾರಿಸಿದ ಪ್ರಸಂಗವೊಂದು ನಡೆದಿದೆ.

    ಸದ್ಯ ಖಟ್ಟರ್ ಅವರು ಮಹಿಳೆಗೆ ಹೇಳಿದ ವೀಡಿಯೋ ಸಾಮಾಜಿಕ ಜಾಲತಾಣಗಲ್ಲಿ ಸಖತ್ ವೈರಲ್ ಆಗುತ್ತಿದೆ. ಸಿಎಂ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ.

    ಮಹಿಳೆ ಹೇಳಿದ್ದೇನು..?: ಸಿಎಂ ಇದ್ದ ಕಾರ್ಯಕ್ರಮದಲ್ಲಿ ಮಹಿಳೆ ತನ್ನ ನೆರೆಯ ಗ್ರಾಮವಾದ ಭಟೋಲ್ ಜತ್ತನ್‍ನಲ್ಲಿ ಕಾರ್ಖಾನೆಯನ್ನು (Factory) ಸ್ಥಾಪಿಸಲು ಮನವಿ ಮಾಡಿಕೊಂಡರು. ಇದರಿಂದ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದಾಗಿದೆ. ಈ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಬಹುದು ಎಂಬುದು ಆಕೆಯ ಉದ್ದೇಶವಾಗಿತ್ತು.

    ಮಹಿಳೆಯ ಮನವಿಗೆ ಪ್ರತಿಕ್ರಿಯಿಸಿದ ಖಟ್ಟರ್, ಮುಂದಿನ ಬಾರಿ ಚಂದ್ರಯಾನ-4 ರಲ್ಲಿ ನಿಮ್ಮನ್ನು ಚಂದ್ರನಲ್ಲಿಗೆ ಕಳುಹಿಸಲಾಗುವುದು. ಈಗ ಕುಳಿತುಕೊಳ್ಳಿ ಎಂದು ಹಾಸ್ಯ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ರಷ್ಯಾ ಚುನಾವಣೆ ನಡೆಸುತ್ತಿದೆ: ಅಮೆರಿಕ ರಾಜ್ಯ ಕಾರ್ಯದರ್ಶಿ ಆರೋಪ

    ಸದ್ಯ ವೈರಲ್ ಆದ ವೀಡಿಯೋದಲ್ಲಿ ಸಾರ್ವಜನಿಕ ಸಭೆ ನಡೆಯುವ ಸ್ಥಳ ಸ್ಪಷ್ಟವಾಗಿಲ್ಲ. ಖಟ್ಟರ್ ಅವರು ತಮ್ಮ ಜನಸಂವಾದ್ ಕಾರ್ಯಕ್ರಮದ ಭಾಗವಾಗಿ ಪ್ರಸ್ತುತ ಹಿಸಾರ್ ಜಿಲ್ಲೆಯಲ್ಲಿದ್ದಾರೆ. ಈ ವಿಡಿಯೋವನ್ನು ರಾಜ್ಯದ ಕೆಲವು ಕಾಂಗ್ರೆಸ್ ಮತ್ತು ಎಎಪಿ ನಾಯಕರು ಹಂಚಿಕೊಂಡಿದ್ದಾರೆ. ಖಟ್ಟರ್ ಅವರ ‘ಚಂದ್ರಯಾನ’ ಹೇಳಿಕೆಗೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎಎಪಿ ವಾಗ್ದಾಳಿ ನಡೆಸಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]