ನವದೆಹಲಿ: ಇಸ್ರೋದ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan-3) ಯಶಸ್ಸಿನ ಬಳಿಕ ಮೈಸೂರಿನ ರಮೇಶ್ ಕುಂಞಿಕಣ್ಣನ್ (Ramesh Kunhikannan) ಅವರು ಬಿಲಿಯನೇರ್ ಆಗಿದ್ದಾರೆ.
ಎಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಮೈಸೂರಿನ ಕೇನ್ಸ್ ಟೆಕ್ನಾಲಜಿ ಇಂಡಿಯಾದ ಸಂಸ್ಥಾಪಕರಾದ ರಮೇಶ್, ಚಂದ್ರಯಾನ-3 ರೋವರ್ ಮತ್ತು ಲ್ಯಾಂಡರ್ ಎರಡಕ್ಕೂ ಶಕ್ತಿ ನೀಡಲು ಬಳಸುವ ಎಲೆಕ್ಟ್ರಾನಿಕ್ ಸಿಸ್ಟಮ್‌ಗಳನ್ನು ಪೂರೈಸಿದ್ದರು.
2022 ರ ನವೆಂಬರ್‌ನಲ್ಲಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪ್ರಾರಂಭವಾದಾಗಿನಿಂದ ಕೇನ್ಸ್‌ನ ಷೇರುಗಳು, ಚಂದ್ರನ ಯಶಸ್ವಿ ಕಾರ್ಯಾಚರಣೆಯಲ್ಲಿ ಅದರ ಪಾತ್ರವನ್ನು ಸಾರ್ವಜನಿಕಗೊಳಿಸಿದ ನಂತರ ಇನ್ನೂ 40% ಮೌಲ್ಯವನ್ನು ಪಡೆದುಕೊಂಡಿದೆ. ಇದು ಕುಂಞಿಕಣ್ಣನ್ ಅವರ ನಿವ್ವಳ ಮೌಲ್ಯವನ್ನು ಸುಮಾರು 1.1 ಶತಕೋಟಿ ಡಾಲರ್‌ಗಳನ್ನಾಗಿ ಮಾಡಿತು. ಇದನ್ನೂ ಓದಿ: ಕಿಡ್ನಾಪ್ ಉದ್ಯಮಕ್ಕೆ ಹೆಸರಾದವ್ರು ರಾಜ್ಯದಲ್ಲಿ ರಸ್ತೆ ನಿರ್ಮಿಸಲು ಬಿಡ್ಲಿಲ್ಲ- RJD ವಿರುದ್ಧ ಮೋದಿ ವಾಗ್ದಾಳಿ
ಕೇನ್ಸ್ ಟೆಕ್ನಾಲಜಿ ಇಂಡಿಯಾ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಅಸೆಂಬ್ಲಿಗಳನ್ನು ತಯಾರಿಸುವ ಮೂಲಕ ತನ್ನ 137 ಮಿಲಿಯನ್ ಡಾಲರ್ ವಾರ್ಷಿಕ ಆದಾಯದ ಅರ್ಧಕ್ಕಿಂತ ಹೆಚ್ಚಿನದನ್ನು ಪಡೆಯುತ್ತದೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಇದು ವಿದ್ಯುನ್ಮಾನ ವ್ಯವಸ್ಥೆಗಳು ಮತ್ತು ವಿನ್ಯಾಸ ಸೇವೆಗಳನ್ನು ಆಟೋಮೋಟಿವ್, ಏರೋಸ್ಪೇಸ್, ವೈದ್ಯಕೀಯ ಮತ್ತು ರಕ್ಷಣಾ ಉದ್ಯಮಗಳಿಗೆ ಪೂರೈಸುತ್ತದೆ. ಕೇನ್ಸ್ ಉತ್ಪನ್ನಗಳನ್ನು ಎಲೆಕ್ಟ್ರಿಕ್ ವಾಹನಗಳಲ್ಲಿ ಎಲೆಕ್ಟ್ರಾನಿಕ್ ನಿಯಂತ್ರಣಗಳಲ್ಲಿ ವೆಂಟಿಲೇಟರ್‌ಗಳು ಮತ್ತು ರೈಲ್ವೆ ಸಿಗ್ನಲ್‌ಗಳಿಗೆ ಬಳಸಲಾಗುತ್ತದೆ.
ಮೈಸೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‌ನಲ್ಲಿ ಪದವೀಧರರಾದ ಕುಂಞಿಕಣ್ಣನ್ ಅವರು 1988 ರಲ್ಲಿ ಎಲೆಕ್ಟ್ರಾನಿಕ್ಸ್‌ನ ಗುತ್ತಿಗೆ ತಯಾರಕರಾಗಿ ಕೇನ್ಸ್ ಅನ್ನು ಸ್ಥಾಪಿಸಿದರು. ಈಗ ಕಂಪನಿಯ ಅಧ್ಯಕ್ಷರಾಗಿದ್ದಾರೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದಿಂದ ಕೇನ್ಸ್ ಇತ್ತೀಚಿನ ವರ್ಷಗಳಲ್ಲಿ ಪ್ರಯೋಜನ ಪಡೆದಿದೆ. ಇದನ್ನೂ ಓದಿ: ಪ್ರತಿಯೊಬ್ಬ ಶಾಸಕರು ಪ್ರತಿದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ- ಜೈಲಿನಿಂದ್ಲೇ ಕೇಜ್ರಿವಾಲ್ ಪತ್ರ
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಚಂದ್ರಯಾನ-3 (Chandrayaan-3)ಮಿಷನ್‌ನ ವಿಕ್ರಂ ಲ್ಯಾಂಡರ್ (Vikram Lander) ಚಂದ್ರನ ಮೇಲೆ ಸ್ಪರ್ಶಿಸಿದ ಸ್ಥಳಕ್ಕೆ ‘ಶಿವ ಶಕ್ತಿ’ ಎಂದು ಹೆಸರಿಡಲು ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (IAU) ಅನುಮೋದನೆ ನೀಡಿದೆ. ಇದೀಗ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ಅಧಿಕೃತವಾಗಿ ‘ಶಿವ ಶಕ್ತಿ’ ಎಂದು ಹೆಸರಿಸಲಾಗಿದೆ.
ಆಗಸ್ಟ್ 26, 2023ರಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ‍್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಆಗಸ್ಟ್ 23, ಚಂದ್ರಯಾನ-3 ಚಂದ್ರನ ಮೇಲೆ ಇಳಿದ ದಿನವನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಕರೆಯಲಾಗುತ್ತದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದರು. ಅಲ್ಲದೇ ಚಂದ್ರಯಾನ-2 ತನ್ನ ಹೆಜ್ಜೆಗುರುತುಗಳನ್ನು ಬಿಟ್ಟ ಸ್ಥಳವನ್ನು ‘ತಿರಂಗ’ ಎಂದು ಕರೆಯಲಾಗುವುದು ಎಂದಿದ್ದರು. ಇದನ್ನೂ ಓದಿ: ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್
ಆಗಸ್ಟ್ 23, 2023ರಂದು ಚಂದ್ರಯಾನ-3 ಮಿಷನ್ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು. ಭಾರತ ಈಗ ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದು, ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆದ ರಾಷ್ಟ್ರಗಳ ಪೈಕಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಚಂದ್ರಯಾನ-3 ಮಿಷನ್‌ನಲ್ಲಿನ ಸಾಧನೆಗಳಿಗಾಗಿ ಇಸ್ರೋಗೆ ಪ್ರತಿಷ್ಠಿತ ‘ಏವಿಯೇಷನ್ ವೀಕ್ ಲಾರೆಟ್ಸ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದನ್ನೂ ಓದಿ: ನಿವೃತ್ತ ವಾಯುಸೇನೆ ಮುಖ್ಯಸ್ಥ ಭದೌರಿಯಾ ಬಿಜೆಪಿ ಸೇರ್ಪಡೆ
ನವದೆಹಲಿ: ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ಮಾಡ್ಯೂಲ್ (Propulsion Module) ಅನ್ನು ಚಂದ್ರನ ಕಕ್ಷೆಯಿಂದ ಭೂಮಿಯ ಕಕ್ಷೆಗೆ ಇಸ್ರೋ (ISRO) ಯಶಸ್ವಿಯಾಗಿ ಮರಳಿ ತರಲಿದೆ.
ಚಂದ್ರನ ಕಾರ್ಯಾಚರಣೆಯ ಉದ್ದೇಶ ಪೂರೈಸಿದ ನಂತರ ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಚಂದ್ರನಿಂದ ಭೂಮಿಗೆ ಕಕ್ಷೆ ಬದಲಿಸಲಾಗಿದೆ. ಚಂದ್ರನ ಮೇಲೆ ಉಪಗ್ರಹ ಉಡಾವಣೆ ಮಾಡುವುದು ಮಾತ್ರವಲ್ಲ, ಅದರ ಉಪಕರಣಗಳನ್ನು ಹಿಂತಿರುಗಿ ತರುವ ಕಾರ್ಯದಲ್ಲೂ ಇಸ್ರೋ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಇದನ್ನೂ ಓದಿ: ಭೂಮಿಗೆ ಬಿತ್ತು ಚಂದ್ರಯಾನ-3 ರಾಕೆಟ್ ಅವಶೇಷ
Chandrayaan-3 Mission:
Ch-3’s Propulsion Module (PM) takes a successful detour!
In another unique experiment, the PM is brought from Lunar orbit to Earth’s orbit.
An orbit-raising maneuver and a Trans-Earth injection maneuver placed PM in an Earth-bound orbit.… pic.twitter.com/qGNBhXrwff
ವಿಕ್ರಮ್ ಲ್ಯಾಂಡರ್‌ನಲ್ಲಿನ ಹಾಪ್ ಪ್ರಯೋಗದಂತೆ ಮತ್ತೊಂದು ವಿಶಿಷ್ಟ ಪ್ರಯೋಗದಲ್ಲಿ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (PM) ಅನ್ನು ಚಂದ್ರನ ಸುತ್ತಲಿನ ಕಕ್ಷೆಯಿಂದ ಭೂಮಿಯ ಸುತ್ತಲಿನ ಕಕ್ಷೆಗೆ ಸ್ಥಳಾಂತರಿಸಲಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಜು.14 ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆ.23 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದು ಐತಿಹಾಸಿಕ ಸಾಧನೆ ಮಾಡಿತು. ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯನ್ನು ಸಮೀಕ್ಷೆ ನಡೆಯಿತು. ಇದನ್ನೂ ಓದಿ: ಚಂದ್ರಯಾನ-3ರ ಬಳಿಕ ಇಸ್ರೋ ತಂತ್ರಜ್ಞಾನ ಬಯಸಿದ ನಾಸಾ: ಸೋಮನಾಥ್
ಲ್ಯಾಂಡರ್ ಮತ್ತು ರೋವರ್ 1 ಚಂದ್ರನ ದಿನ (ಭೂಮಿಯ 14 ದಿನಗಳಿಗೆ ಸಮ) ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಿವೆ. ಆ ಮೂಲಕ ಚಂದ್ರಯಾನ-3 ಮಿಷನ್ ಉದ್ದೇಶಗಳನ್ನು ಸಂಪೂರ್ಣವಾಗಿ ಪೂರೈಸಿವೆ.
ಚಂದ್ರಯಾನ-3 ಸಕ್ಸಸ್ (Chandrayaan-3) ಹಾಗೂ ಸೂರ್ಯಯಾನ (Aditya L-1) ಯಶಸ್ವಿ ಉಡಾವಣೆ ಮಾಡಿದ ಭಾರತದ ಕಡೆ ಈಗ ಇಡೀ ಜಗತ್ತು ನೋಡುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ವಿಜ್ಞಾನ ಲೋಕ ಮೆಚ್ಚುಗೆ ವ್ಯಕ್ತಪಡಿಸಿದೆ. ಅಲ್ಲದೇ ಸ್ಪೇಸ್ (ಬಾಹ್ಯಾಕಾಶ) ವಲಯದಲ್ಲಿ ಹೊಸ ಅನ್ವೇಷಣೆಗಳಿಗಾಗಿ ಭಾರತದ ಜೊತೆ ಕೆಲಸ ಮಾಡಲು ಬೇರೆ ದೇಶಗಳ ವಿಜ್ಞಾನ ಸಂಸ್ಥೆಗಳು ಮುಂದೆ ಬರುತ್ತಿವೆ. ಅದರ ಮೊದಲ ಹೆಜ್ಜೆಯಾಗಿ ಇಸ್ರೋ ಜೊತೆ ಅಮೆರಿಕದ ನಾಸಾ ಕೈ ಜೋಡಿಸಿದೆ. ಈ ಎರಡೂ ಸಂಸ್ಥೆಗಳ ಕನಸಿನ ಕೂಸೇ ‘ನಿಸಾರ್’.
ಹೌದು, ನಾಸಾ-ಇಸ್ರೋ (NASA-ISRO) ಜಂಟಿಯಾಗಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ‘ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೆಡಾರ್ (NISAR) ಉಪಗ್ರಹ ಮುಂದಿನ ವರ್ಷ ಅಂದರೆ, 2024 ಕ್ಕೆ ಉಡಾವಣೆಯಾಗಲಿದೆ. ಅದಕ್ಕೆ ಬೇಕಾದ ಎಲ್ಲಾ ತಯಾರಿ ಹಾಗೂ ಪರೀಕ್ಷೆಗಳನ್ನು ನಾಸಾ ಮತ್ತು ಇಸ್ರೋ ನಡೆಸುತ್ತಿವೆ. ಹಾಗಾದರೆ ಏನಿದು ಉಪಗ್ರಹ? ಇದರ ಉಡಾವಣೆ ಉದ್ದೇಶವೇನು? ಇದರಿಂದಾಗಬಹುದಾದ ಪ್ರಯೋಜನ ಏನು ಎಂಬ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ. ಇದನ್ನೂ ಓದಿ: PublicTV Explainer: ‘ಸೋಷಿಯಲ್’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?
ಏನಿದು ನಿಸಾರ್ ಉಪಗ್ರಹ?
ಅಮೆರಿಕ ಮತ್ತು ಭಾರತದ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಡಲಾಗಿದೆ. 2014 ರಲ್ಲಿ ನಾಸಾ ಮತ್ತು ಇಸ್ರೋ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರನ್ವಯ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರೆಡಾರ್ (ನಿಸಾರ್) ಅನ್ನು ನಿರ್ಮಿಸಲಾಯಿತು. ಮಾರ್ಚ್ ತಿಂಗಳಲ್ಲೇ ಈ ಉಪಗ್ರಹವು ಬೆಂಗಳೂರಿಗೆ ಬಂದಿಳಿದಿದೆ. ಅಮೆರಿಕನ್ ವಾಯುಪಡೆಯ ಸಿ-17 ಸಾರಿಗೆ ವಿಮಾನವು, ಕ್ಯಾಲಿಫೋರ್ನಿಯಾದಿಂದ ಹೊರಟು ಬೆಂಗಳೂರಿಗೆ ಈ ಉಪಗ್ರಹವನ್ನು ಹೊತ್ತು ತಂದಿತ್ತು. ಭಾರತ ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆಗಳು ಮೊಟ್ಟಮೊದಲ ಬಾರಿಗೆ ಜಂಟಿಯಾಗಿ ಈ ಕಾರ್ಯಕ್ರಮವನ್ನು ರೂಪಿಸಿವೆ. ಈ ಯೋಜನೆಯು ವಿಶ್ವದ ಅತ್ಯಂತ ದುಬಾರಿ ‘ಭೂಮಿಯ ಇಮೇಜಿಂಗ್ ಉಪಗ್ರಹ’ಗಳಲ್ಲಿ ಒಂದಾಗಿದೆ.
ನಿಸಾರ್ ಉಡಾವಣೆ ಯಾಕೆ?
ಮನುಕುಲದ ಆಶ್ರಯ ತಾಣ ಭೂಮಿ. ಈ ಭೂಮಿಯಲ್ಲಿ ಯಾವಾಗ, ಏನೇನಾಗುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿಯುವುದು ಮುಖ್ಯ. ಹವಾಮಾನ ಬದಲಾವಣೆ ಜೀವಸಂಕುಲದ ಮೇಲೆ ಅಪಾರ ಪರಿಣಾಮ ಬೀರಿದೆ. ಇದನ್ನು ಅರ್ಥಮಾಡಿಕೊಳ್ಳಲು ಭೂಮಿಯ ಮೇಲ್ಮೈ ಹೇಗೆ ಬದಲಾಗುತ್ತಿದೆ ಎಂಬುದನ್ನು ತಿಳಿಯುವುದು ಮುಖ್ಯ. ಈ ವಿಚಾರವನ್ನು ಮನಗಂಡು ‘ನಿಸಾರ್’ ಉಪಗ್ರಹ ಉಡಾವಣೆಗೆ ಇಸ್ರೋ-ನಾಸಾ ಸಂಸ್ಥೆಗಳು ಮುಂದಾಗಿವೆ. ಭೂ ಮೇಲ್ಮೈ ಬದಲಾವಣೆ, ಕರಗುವ ಮಂಜುಗಡ್ಡೆ, ಅರಣ್ಯ, ಭೂಕಂಪ, ಜ್ವಾಲಾಮುಖಿ ಎಲ್ಲವೂ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದರ ಬಗ್ಗೆ ಪ್ರತಿಯೊಬ್ಬರಿಗೂ ನಿಖರ ಮಾಹಿತಿ ಒದಗಿಸುವುದು ಈ ಉಪಗ್ರಹ ಉಡಾವಣೆಯ ಮುಖ್ಯ ಉದ್ದೇಶವಾಗಿದೆ. ಇದನ್ನೂ ಓದಿ: PublicTV Explainer: ಉಗುರಿಗೆ ಹೆದರಿದ ‘ಹೀರೋಸ್’; ವನ್ಯಜೀವಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತೆ? – ಅಪರಾಧಕ್ಕೆ ಶಿಕ್ಷೆ ಏನು?
ಕಾಲಕಾಲಕ್ಕೆ ಭೂ ಮೇಲ್ಮೈನ ಹವಾಮಾನ ಬದಲಾವಣೆ ಯಾವ ಪ್ರಮಾಣದಲ್ಲಾಗುತ್ತದೆ. ಇದರಿಂದ ಜೀವ ಸಂಕುಲದ ಮೇಲೆ ಆಗುತ್ತಿರುವ ಹಾಗೂ ಮುಂದಾಗಬಹುದಾದ ಪರಿಣಾಮಗಳ ಕುರಿತು ಪೂರಕ ಮಾಹಿತಿ ಒದಗಿಸಲು ನಿಸಾರ್ ಉಡಾವಣಾ ಯೋಜನೆ ಸಹಕಾರಿಯಾಗಲಿದೆ. ಜೊತೆಗೆ ಹಿಮ ಪರ್ವತ, ನದಿ ಪಾತ್ರಗಳಲ್ಲಿ ಬದಲಾವಣೆ ಬಗ್ಗೆಯೂ ಡೇಟಾ ಸಂಗ್ರಹಿಸಿ ಉಪಗ್ರಹ ಒದಗಿಸುತ್ತದೆ. ಭೂಕಂಪ ಸೇರಿದಂತೆ ಅನೇಕ ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳು ಇದರಿಂದ ಸಿಗಲಿದೆ. ಮುಂದಿನ ದಿನಗಳಲ್ಲಿ ಸಂಭವನೀಯ ಪ್ರಕೃತಿ ವಿಕೋಪಗಳಿಗೆ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳಿಗೆ ಇದರಿಂದ ಸಿಗುವ ಮಾಹಿತಿ ನೆರವಾಗಲಿದೆ.
ಉಪಗ್ರಹ ಕಾರ್ಯವೇನು?
ನಿಸಾರ್ ಉಪಗ್ರಹ ಭೂಮಿಯ ಕೆಳಹಂತದ ಕಕ್ಷೆಯಲ್ಲಿ ನೆಲೆ ನಿಂತು ಭೂಮಿಯನ್ನು ಗಮನಿಸುತ್ತದೆ. ಇಡೀ ಭೂಮಿಯ ನಕ್ಷೆಯನ್ನು 12 ದಿನಗಳಲ್ಲಿ ರೂಪಿಸಿ, ಭೂ ವ್ಯವಸ್ಥೆ, ಹಿಮ ಪ್ರದೇಶ, ಸಸ್ಯ ಸಂಪತ್ತು, ಸಮುದ್ರದ ನೀರಿನ ಮಟ್ಟ ಏರಿಕೆ, ಅಂತರ್ಜಲ ಎಲ್ಲಾ ಬಗೆಯ ನೈಸರ್ಗಿಕ ದುರಂತಗಳ ನಿಯಮಿತ ದತ್ತಾಂಶವನ್ನು ಪ್ರಾದೇಶಿಕವಾಗಿ ಮತ್ತು ತಾತ್ಕಾಲಿಕವಾಗಿ ಒದಗಿಸುವ ಕಾರ್ಯ ನಿರ್ವಹಿಸುತ್ತದೆ. ಇದನ್ನೂ ಓದಿ: PublicTV Explainer: ಚಂದ್ರ, ಸೂರ್ಯಯಾನ ಆಯ್ತು.. ಈಗ ಶುಕ್ರನ ಮೇಲೆ ಇಸ್ರೋ ಕಣ್ಣು – ಶುಕ್ರಯಾನ ಯಾವಾಗ?
ಈ ಉಪಗ್ರಹವು ಮೂರು ವರ್ಷ ಕಾರ್ಯನಿರ್ವಹಿಸಲಿದೆ. ಭೂಭಾಗ, ಹಿಮ ಆವೃತ ಪ್ರದೇಶಗಳ ಮೇಲ್ಮೈಯ ಬದಲಾವಣೆಗಳನ್ನು 12 ದಿನಗಳಿಗೊಮ್ಮೆ ಸಮೀಕ್ಷೆ ಮಾಡಲಿದೆ. ಉಪಗ್ರಹ ಕಾರ್ಯಾರಂಭ ಮಾಡಿದ 90 ದಿನಗಳ ಬಳಿಕ ಸಮೀಕ್ಷೆಯನ್ನು ಆರಂಭಿಸುತ್ತದೆ. ನಿಸಾರ್ ವರ್ಷವಿಡೀ ಹಗಲು-ರಾತ್ರಿ ಡೇಟಾವನ್ನು ಸಂಗ್ರಹಿಸುತ್ತದೆ. ಸಂಶ್ಲೇಷಿತ ದ್ಯುತಿರಂಧ್ರ ರೆಡಾರ್ ಅತ್ಯಾಧುನಿಕ ಸಾಧನವಾಗಿದ್ದು, ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ.
ಏನಿದು ಎಲ್-ಬ್ಯಾಂಡ್, ಎಸ್-ಬ್ಯಾಂಡ್?
ಎಸ್‌ಯುವಿ ಗಾತ್ರದ ಉಪಗ್ರಹವು ಸುಮಾರು 2,800 ಕೆಜಿ ಭಾರವಿದೆ. ಎಲ್ ಮತ್ತು ಎಸ್-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೆಡಾರ್ ಉಪಕರಣಗಳನ್ನು ಇದು ಒಳಗೊಂಡಿದೆ. ನಾಸಾ ಪ್ರಕಾರ, ಎಲ್-ಬ್ಯಾಂಡ್ 24 ಸೆಂ.ಮೀ ತರಂಗಾಂತರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಎಲ್-ಬ್ಯಾಂಡ್ ತರಂಗಾಂತರಗಳನ್ನು ಜಿಪಿಎಸ್ ಘಟಕಗಳಿಗೆ ಬಳಸಲಾಗುತ್ತದೆ. ಮೋಡ, ಮಂಜು, ಮಳೆ, ಬಿರುಗಾಳಿ, ಮಳೆಯನ್ನೂ ಭೇದಿಸಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ರೆಡಾರ್ ಸಿಗ್ನಲ್‌ಗಳು ದಟ್ಟ ಅರಣ್ಯದಲ್ಲೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಅದೇ ರೀತಿ ಎಸ್-ಬ್ಯಾಂಡ್ 12 ಸೆ.ಮೀ ಕಡಿಮೆ ತರಂಗಾಂತರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಬಾಹ್ಯಾಕಾಶ ನೌಕೆ ಮತ್ತು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಸಂವಹನ ನಡೆಸಲು ನಾಸಾ ಬಳಸುತ್ತದೆ. ಇದು ಮೋಡಗಳನ್ನು ಭೇದಿಸಿ ಅಧ್ಯಯನ ನಡೆಸುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: PublicTV Explainer: ನೀಲಿ ಆರ್ಥಿಕತೆ ಎಂದರೇನು? – ಭಾರತದಲ್ಲಿ ಹೇಗೆ ಕೆಲಸ ಮಾಡುತ್ತಿದೆ; ಕರ್ನಾಟಕದಲ್ಲಿ ನಿರೀಕ್ಷೆ ಏನು?
ರೆಡಾರ್ ಪ್ರತಿಫಲಕ ಆಂಟೆನಾ, ನಿಯೋಜಿಸಬಹುದಾದ ಬೂಮ್, ವಿಜ್ಞಾನ ದತ್ತಾಂಶಕ್ಕಾಗಿ ಹೈ-ರೇಟ್ ಕಮ್ಯುನಿಕೇಷನ್ ಸಬ್‌ಸಿಸ್ಟಮ್, ಜಿಪಿಎಸ್ ರಿಸೀವರ್ಸ್, ಘನ-ಸ್ಥಿತಿಯ ರೆಕಾರ್ಡರ್ ಮತ್ತು ಪೇಲೋಡ್ ಡೇಟಾ ಸಬ್‌ಸಿಸ್ಟಮ್ ಉಪಕರಣಗಳನ್ನು ನಾಸಾ ಒದಗಿಸಿದೆ. ಎಸ್-ಬ್ಯಾಂಡ್ ರಾಡಾರ್, ಉಡಾವಣಾ ವಾಹನ ಮತ್ತು ಸಂಬಂಧಿತ ಉಡಾವಣಾ ಸೇವೆಗಳನ್ನು ಇಸ್ರೋ ಒದಗಿಸಿದೆ.
2024ಕ್ಕೆ ಲಾಂಚ್?
ಜಿಎಸ್‌ಎಲ್‌ವಿ ರಾಕೆಟ್ ಮೂಲಕ ಶ್ರೀಹರಿಕೋಟದಿಂದ ಉಡಾವಣೆಗೊಳ್ಳಲಿದೆ. ಈ ಉಪಗ್ರಹವು 2024ರ ಮೊದಲ ಮೂರು ತಿಂಗಳ ಒಳಗಾಗಿ ಉಪಗ್ರಹ ಉಡಾವಣೆಯಾಗುವ ಸಾಧ್ಯತೆ ಇದೆ. ಈ ಯೋಜನೆಗೆ ಅಂದಾಜು 13,500 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಪಗ್ರಹ ಉಡಾವಣೆಗೂ ಮುನ್ನ ಕೆಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕಂಪನವೂ ಸೇರಿ ಕೆಲವು ಪರೀಕ್ಷೆಗಳು ನಡೆಯುತ್ತದೆ. ಈಗಾಗಲೇ ಕಂಪನ ಪರೀಕ್ಷೆ ನಡೆದಿದ್ದು, ಕಾರ್ಯಕ್ಷಮತೆ ಪರೀಕ್ಷೆ ನಡೆಯಬೇಕಿದೆ. ಸಿಸ್ಟಮ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಬ್ಯಾಟರಿ ಮತ್ತು ಸಿಮ್ಯುಲೇಶನ್ ಪರೀಕ್ಷೆಗಳು ನಡೆಯಲಿವೆ. ನಿಸಾರ್ ಯೋಜನೆಯು ಈ ಹಿಂದೆ ನಡೆಸಿರುವ ಎಲ್ಲಾ ಕಾರ್ಯಾಚರಣೆಗಳಿಗಿಂತ ಉತ್ತಮದ್ದಾಗಿದೆ ಎನ್ನುತ್ತಾರೆ ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ನಿರ್ದೇಶಕಿ ಡಾ. ಲೌರಿ ಲೆಶಿನ್. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?
ಬೆಂಗಳೂರು: ಜುಲೈ 14 ರಂದು ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಅವಶೇಷ ಬುಧವಾರ ಯಾವುದೇ ನಿಯಂತ್ರಣವಿಲ್ಲದೆ ಭೂಮಿಗೆ ಬಿದ್ದಿದೆ ಎಂದು ಇಸ್ರೋ (ISRO) ತಿಳಿಸಿದೆ.
ಈ ರಾಕೆಟ್ (Rocket) ಜುಲೈ 14 ರಂದು ಚಂದ್ರಯಾನ-3 ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ಇದಾಗ 124 ದಿನಗಳ ಬಳಿಕ ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತವು ಬುಧವಾರ ಭೂಮಿಯನ್ನು ತಲುಪಿದೆ. ಅದು ಭಾರತದ ಭೂಭಾಗದ ಮೇಲೆ ಬೀಳದೆ ಉತ್ತರ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ ಎಂದು ತಿಳಿಸಿದೆ.
ಬುಧವಾರ ಮಧ್ಯಾಹ್ನ 2:42ರ ವೇಳೆಗೆ ಅದು ಭೂಮಿಯ ವಾತಾವರಣವನ್ನು ಪುನಃ ಪ್ರವೇಶಿಸಿದೆ. ವಿಶ್ವಸಂಸ್ಥೆ ಮತ್ತು ಐಎಡಿಸಿ ಸೂಚಿಸಿದ ಬಾಹ್ಯಾಕಾಶ ಶಿಲಾಖಂಡಗಳನ್ನು ತಗ್ಗಿಸುವ ಮಾರ್ಗಸೂಚಿಗಳ ಪ್ರಕಾರ ಆಕಸ್ಮಿಕ ಸ್ಫೋಟಗಳ ಅಪಾಯವನ್ನು ಕಡಿಮೆ ಮಾಡಲು ರಾಕೆಟ್‌ನಲ್ಲಿರುವ ಎಲ್ಲಾ ಇಂಧನ ಮತ್ತು ಶಕ್ತಿಯ ಮೂಲಗಳನ್ನು ತೆಗೆದುಹಾಕಲಾಗಿತ್ತು. ಇದು ಬಾಹ್ಯಾಕಾಶದಲ್ಲಿ ಅಂತಾರಾಷಷ್ಟ್ರೀಯ ಕಾನೂನನ್ನು ಗೌರವಿಸಿ ನಡೆದುಕೊಳ್ಳುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಇಸ್ರೋ ಹೇಳಿದೆ. ಇದನ್ನೂ ಓದಿ: ಫೈನಲಿಗೆ ಟೀಂ ಇಂಡಿಯಾ – ನಾಯಕನಾಗಿ ದಾಖಲೆ ಬರೆದ ರೋಹಿತ್ ಶರ್ಮಾ
ಜುಲೈ 14 ರಂದು ಶ್ರೀಹರಿಕೋಟಾದಿಂದ ಚಂದ್ರಯಾನ ನೌಕೆಯನ್ನು ಹೊತ್ತ ಎಲ್‌ಎಂವಿ ರಾಕೆಟ್ ಯಶಸ್ವಿಯಾಗಿ ನೌಕೆಯನ್ನು ಕಕ್ಷೆಗೆ ಸೇರಿಸಿತ್ತು. ನಂತರ ನೌಕೆಯನ್ನು ಅಂತಿಮ ಹಂತಕ್ಕೆ ಕೊಂಡುಹೋಗಿದ್ದ ರಾಕೆಟ್‌ನ ಮುಂಭಾಗ ಬಾಹ್ಯಾಕಾಶದಲ್ಲೇ ಉಳಿದುಕೊಂಡಿತ್ತು. ಇದೀಗ ಯಾವುದೇ ನಿಯಂತ್ರಣವಿಲ್ಲದೇ ಇದು ಭೂಮಿಗೆ ಬಿದ್ದಿದೆ. ಇದನ್ನೂ ಓದಿ: World Cup Semifinal: 7 ವಿಕೆಟ್ ಕಿತ್ತು ಗ್ಲೆನ್ ಮ್ಯಾಕ್‌ಗ್ರಾತ್ ದಾಖಲೆ ಸರಿಗಟ್ಟಿದ ಶಮಿ
ಬೆಂಗಳೂರು: ವಿಶ್ವದ ಅತ್ಯಂತ ದುಬಾರಿ ಭೂಮಿಯ ಇಮೇಜಿಂಗ್ ಉಪಗ್ರಹದೊಂದಿಗೆ ಹವಾಮಾನ ಬದಲಾವಣೆಯನ್ನು ಅಧ್ಯಯನ ಮಾಡಲು ಭಾರತ-ಯುಎಸ್ ಜಂಟಿಯಾಗಿ ಕೈಗೊಂಡಿರುವ ಮಿಷನ್ ಅಂತಿಮ ಹಂತದಲ್ಲಿದೆ. ಇಸ್ರೋ (ISRO) ಹಾಗೂ ನಾಸಾ (NASA) ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಉಪಗ್ರಹವು 2024 ರ ಮೊದಲ ತ್ರೈಮಾಸಿಕದಲ್ಲಿ ಉಡಾವಣೆಯಾಗುವ ನಿರೀಕ್ಷೆಯಿದೆ ಎಂದು ಹಿರಿಯ ನಾಸಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೋ-ನಾಸಾ ಅಭಿವೃದ್ಧಿಪಡಿಸುತ್ತಿರುವ ಉಪಗ್ರಹ ನಿಸಾರ್ (NISAR). ಇದು ಇಡೀ ಭೂಮಿಯನ್ನು 12 ದಿನಗಳಲ್ಲಿ ನಕ್ಷೆ ಮಾಡುತ್ತದೆ. ಗ್ರಹದ ಪರಿಸರ ವ್ಯವಸ್ಥೆ, ಮಂಜುಗಡ್ಡೆಯ ದ್ರವ್ಯರಾಶಿ, ಸಸ್ಯವರ್ಗ, ಸಮುದ್ರ ಮಟ್ಟ ಏರಿಕೆ, ಅಂತರ್ಜಲ ಮಟ್ಟ ಮತ್ತು ನೈಸರ್ಗಿಕ ಅಪಾಯಗಳಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಸ್ಥಿರವಾದ ಡೇಟಾವನ್ನು ಒದಗಿಸುತ್ತದೆ. ಭೂಕಂಪಗಳು, ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಕುಸಿತ ಬಗ್ಗೆಯೂ ಮಹತ್ವದ ಡೇಟಾ ಒದಗಿಸಲಿದೆ.
ಹವಾಮಾನ ಬದಲಾವಣೆಯ ಪರಿಣಾಮ ಹಾಗೂ ಭೂಮಿಯ ಮೇಲ್ಮೈ ಹೇಗೆ ಬದಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ NISAR ಉಪಗ್ರಹ ನಮಗೆ ಸಹಕಾರಿಯಾಗಲಿದೆ. ಕರಗುತ್ತಿರುವ ಮಂಜುಗಡ್ಡೆಗಳು ಮತ್ತು ಕಾಡುಗಳ ವಾತಾವರಣ ಬದಲಾಗುತ್ತಿರುವ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Gaganyaan Mission- ಇಸ್ರೋ ಗಗನಯಾನ ಪರೀಕ್ಷಾರ್ಥ ಉಡಾವಣೆ ಯಶಸ್ವಿ
ನಾಸಾ ಮತ್ತು ಇಸ್ರೋ ನಡುವಿನ ಸಹಯೋಗದಿಂದ ನಾವು ತುಂಬಾ ರೋಮಾಂಚಿತರಾಗಿದ್ದೇವೆ. ಇದು ಎರಡು ರಾಷ್ಟ್ರಗಳ ನಡುವಿನ ದೊಡ್ಡ ತಾಂತ್ರಿಕ ಸಹಯೋಗವಾಗಲಿದೆ. ನಾವು ಬೆಂಗಳೂರಿನಲ್ಲಿ ಏಕಕಾಲಕ್ಕೆ 30 ಅಥವಾ 40 ಇಂಜಿನಿಯರ್‌ಗಳನ್ನು ಹೊಂದಿದ್ದೇವೆ. ಇಸ್ರೋ ಸಹೋದ್ಯೋಗಿಗಳಿಂದ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದೇವೆ. 2024 ರ ಮೊದಲ ತ್ರೈಮಾಸಿಕದಲ್ಲಿ NISAR ಉಪಗ್ರಹ ಉಡಾವಣೆ ಮಾಡುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.
– ಒಡಲಲ್ಲಿ ಜ್ವಾಲಾಮುಖಿ, ಹೊಳೆಯುವ ಗ್ರಹದ ಅಧ್ಯಯನ ಹೇಗೆ? – ಶುಕ್ರನ ಒಂದು ಹಗಲು, ಒಂದು ರಾತ್ರಿಗೆ ಬೇಕು 243 ದಿನ – ಭೂಮಿಯ ಸಹೋದರ ಗ್ರಹ ಶುಕ್ರನ ವೈಶಿಷ್ಟ್ಯತೆ ಏನು?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲುಗೈಲ್ಲು ಸೃಷ್ಟಿಸುತ್ತಿದೆ. ಚಂದ್ರಯಾನ-3 (Chandrayaan-3), ಸೂರ್ಯಯಾನದಂಥ (Aditya L1) ಐತಿಹಾಸಿಕ ಕಾರ್ಯಾಚರಣೆ ಕೈಗೊಂಡು ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಇಸ್ರೋದ ಬಾಹ್ಯಾಕಾಶ ಸಾಧನೆಯನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ. ಈ ಹೊತ್ತಿನಲ್ಲಿ ಇಸ್ರೋ ಮತ್ತೊಂದು ಕಾರ್ಯಾಚರಣೆಗೆ ಸಿದ್ಧವಾಗಿದೆ. ಅದೇ ಶುಕ್ರಯಾನ. ಚಂದ್ರಯಾನ-3, ಆದಿತ್ಯ ಎಲ್1 (ಸೂರ್ಯಯಾನ) ಯಶಸ್ಸಿನ ಬಳಿಕ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ (S.Somanath), ಶುಕ್ರ ಅಧ್ಯಯನ ಮಿಷನ್ ಕೈಗೊಳ್ಳಲು ತಯಾರಾಗಿದ್ದೇವೆ ಎಂದು ಹೇಳಿದ್ದಾರೆ. ಅಂತರಗ್ರಹ ಯೋಜನೆಗಳನ್ನು ನಡೆಸಲು ನಾವು ಸಮರ್ಥರಿದ್ದೇವೆ ಎಂದೂ ಸಹ ತಿಳಿಸಿದ್ದಾರೆ.
ಶುಕ್ರ ಗ್ರಹ ವೈಶಿಷ್ಟ್ಯ ಏನು?
ಸೂರ್ಯನಿಗೆ ಅತಿ ಸಮೀಪದ ಎರಡನೇ ಗ್ರಹ ಶುಕ್ರ (Shukrayaan). ಸೂರ್ಯನನ್ನು ಒಂದು ಬಾರಿ ಪ್ರದಕ್ಷಿಣೆ ಹಾಕಲು 224.7 ದಿನಗಳನ್ನು ತೆಗೆದುಕೊಳ್ಳುತ್ತದೆ. ಅತ್ಯಂತ ಪ್ರಕಾಶಮಾನವಾದ ಗ್ರಹ ಇದು. ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಚೆನ್ನಾಗಿ ಕಾಣುವ ಶುಕ್ರ ಗ್ರಹವನ್ನು ‘ಹಗಲು ನಕ್ಷತ್ರ’ ಮತ್ತು ‘ಸಂಜೆ ನಕ್ಷತ್ರ’ ಎಂದೂ ಕರೆಯಲಾಗುತ್ತದೆ. ಗಾತ್ರದಲ್ಲಿ ಭೂಮಿಯಷ್ಟೇ ಇದೆ. ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿಧಾನವಾಗಿ ಸುತ್ತುವ ಈ ಗ್ರಹದ ಒಂದು ದಿನ, ಭೂಮಿಯ 243 ದಿನಕ್ಕೆ ಸಮ. ಶುಕ್ರ ಗ್ರಹ ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ. ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿದೆ. ಹೀಗಾಗಿ ಈ ಗ್ರಹದಲ್ಲಿ ಜೀವಿಗಳು ಇಲ್ಲ. ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ. ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಇದರ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು ಎಂದು ಅಧ್ಯಯನಯಗಳು ಹೇಳುತ್ತವೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3
ಭುವಿಯ ಸಹೋದರ ಗ್ರಹ
ಭೂಮಿಯ ಅವಳಿ ಗ್ರಹ ಎಂದೇ ಗುರುತಿಸಿಕೊಂಡಿರುವುದು ಶುಕ್ರ ಗ್ರಹ. ಬರಿಗಣ್ಣಿಗೆ ಕಾಣುವ ಶುಕ್ರ ಹೆಚ್ಚು ಚಂದವಾದ ಗ್ರಹ. ಗಾತ್ರ ಮತ್ತು ಸಾಂಧ್ರತೆಯಲ್ಲಿ ಭೂಮಿಯನ್ನು ಹೋಲುತ್ತದೆ. ಆದ್ದರಿಂದಲೇ ಇದನ್ನು ಭೂಮಿಯ ಅವಳಿ ಗ್ರಹ ಎಂದು ಕರೆಯಲಾಗುತ್ತದೆ. ಶುಕ್ರ ಗ್ರಹ 95% ಇಂಗಾಲದ ಆಕ್ಸೈಡ್ ಹಾಗೂ ಸ್ವಲ್ಪ ರಂಜಕದ ಡೈಆಕ್ಸೈಡ್ ಹೊಂದಿದೆ. ಅತಿ ಹೆಚ್ಚಿನ ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ ಶುಕ್ರ ಹೆಚ್ಚು ಪ್ರಕಾಶಮಾನ ಗ್ರಹ ಎಂದು ಬಿಂಬಿತವಾಗಿದೆ. ಸೂರ್ಯನಿಂದ ಶುಕ್ರ 11 ಕೋಟಿ ಕಿ.ಮೀ ದೂರದಲ್ಲಿದೆ.
ಶುಕ್ರ ಅಧ್ಯಯನಕ್ಕೆ ಇಲ್ಲಿವರೆಗೆ ಕೈಗೊಂಡ ಮಿಷನ್‌ಗಳೆಷ್ಟು?
ಮಾನವ ಶುಕ್ರ ಗ್ರಹವನ್ನು ಕುತೂಹಲ ಕಣ್ಣಿನಿಂದ ನೋಡುತ್ತಿದ್ದಾನೆ. ಹೀಗಾಗಿ ಶುಕ್ರ ಗ್ರಹಕ್ಕೆ 40 ಕ್ಕೂ ಹೆಚ್ಚು ಬಾಹ್ಯಾಕಾಶ ಕಾರ್ಯಾಚರಣೆಗಳು ನಡೆದಿವೆ. ಪಕ್ಕಾ ಮಾಹಿತಿ ಅಂದ್ರೆ, ಇಲ್ಲಿವರೆಗೆ 46 ಬಾಹ್ಯಾಕಾಶ ನೌಕೆಗಳು ಶುಕ್ರನ ಅಧ್ಯಯನಕ್ಕಾಗಿ ಉಡಾವಣೆಗೊಂಡಿವೆ. ಜಪಾನ್‌ನ ಅಕಾಟ್ಸುಕಿ ಬಾಹ್ಯಾಕಾಶ ನೌಕೆ ಪ್ರಸ್ತುತ ಶುಕ್ರನ ಕಕ್ಷೆಯಲ್ಲಿ ಸುತ್ತುತ್ತಿದೆ. ಮುಂದಿನ ದಶಕದಲ್ಲಿ ಮೂರು ಹೊಸ ಮಿಷನ್‌ಗಳು ಪ್ರಾರಂಭವಾಗಲಿವೆ ಎಂದು ನಾಸಾ ತಿಳಿಸಿದೆ. ಇದನ್ನೂ ಓದಿ: ದ್ರವರೂಪದ ಚಿನ್ನ, ಬಾಹ್ಯಾಕಾಶದಲ್ಲಿ ವಾಸ್ತವ್ಯ, ಮಾನವ ಸಾಹಸಗಳಿಗೆ ಹಾದಿ ಮಾಡಿಕೊಡಲಿದೆ ಚಂದ್ರಯಾನ-3ರ ಯಶಸ್ಸು
ಶುಕ್ರಯಾನದ ಇತಿಹಾಸ ಏನು?
ಶುಕ್ರ ಗ್ರಹದ ಅಧ್ಯಯನಕ್ಕೆ ಜಗತ್ತಿನಲ್ಲೇ ಮೊಟ್ಟ ಮೊದಲ ಬಾರಿಗೆ ಸೋವಿಯತ್ ಒಕ್ಕೂಟ 1961 ರಲ್ಲಿ ಟ್ಯಾಝೆಲಿ ಸ್ಪುಟ್ನಿಕ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿತು. ಆದರೆ ಮಿಷನ್ ವಿಫಲವಾಯಿತು. ಬಳಿಕವು ಶುಕ್ರ ಗ್ರಹಕ್ಕೆ ಹಲವಾರು ಕಾರ್ಯಾಚರಣೆಗಳನ್ನು ನಡೆಸಲು ಮುಂದಾಗಿ ಸೋವಿಯತ್ ಒಕ್ಕೂಟ ಕೈಸುಟ್ಟುಕೊಂಡಿತು. ಈ ನಡುವೆ 1962 ರ ಜುಲೈ 22 ರಂದು ಮ್ಯಾರಿನರ್ 1 ನೌಕೆ ಉಡಾವಣೆ ಮಾಡಿ ವಿಫಲವಾಗಿದ್ದ ಅಮೆರಿಕದ ನಾಸಾ (NASA), ತನ್ನ ಎರಡನೇ ಪ್ರಯತ್ನದಲ್ಲೇ ಯಶಸ್ಸು ಕಂಡಿತು. ನಾಸಾ ಅದೇ ವರ್ಷದ ಆಗಸ್ಟ್ 27 ರಂದು ಹಾರಿಸಿದ್ದ ಮ್ಯಾರಿನರ್ 2 ನೌಕೆಯು 109 ದಿನಗಳ ನಂತರ ಶುಕ್ರನನ್ನು ಸಮೀಪಿಸಿತು. ಶುಕ್ರನ ಮೇಲ್ಮೈನಿಂದ 34,833 ಕಿ.ಮೀ ದೂರದಲ್ಲಿ ಹಾದುಹೋದ ವಿಶ್ವದ ಮೊಟ್ಟಮೊದಲ ಅಂತರಗ್ರಹ ಯಾತ್ರೆ ಇದಾಯಿತು.
ನಾಸಾದ ಮ್ಯಾರಿನರ್ 2 ನೌಕೆಯು 1962ರ ಡಿಸೆಂಬರ್ 14 ರಂದು ಶುಕ್ರನ ಹತ್ತಿರ ಹಾರಾಡಿದ ಮೊದಲ ಬಾಹ್ಯಾಕಾಶ ನೌಕೆಯಾಯಿತು. 42 ನಿಮಿಷಗಳ ಸ್ಕ್ಯಾನರ್‌ನಲ್ಲಿ ಸಂಗ್ರಹಿಸಿದ ಡೇಟಾವು, ಭೂಮಿಯ ನೆರೆಯ ಗ್ರಹವನ್ನು ನಾವು ಸಾಮಾನ್ಯವಾಗಿ ನೋಡುವ ದೃಷ್ಟಿಕೋನವನ್ನೇ ಬದಲಾಯಿತು. ಶುಕ್ರದ ಮೋಡ ಪದರಗಳು ತಣ್ಣಗಿದ್ದರೂ, ಅದರ ಮೇಲ್ಮೈ 425 ಡಿಗ್ರಿ ಸೆಲ್ಸಿಯಸ್ ತಾಪಮಾನದೊಂದಿಗೆ ಅತಿ ಬಿಸಿಯಾಗಿದೆ ಎಂದು ಮ್ಯಾರಿನರ್ 2 ನೌಕೆಯ ಮೈಕ್ರೋತರಂಗ ಮತ್ತು ರೇಡಿಯೋಮಾಪಕಗಳು ಕಂಡುಹಿಡಿದವು. ಈ ವಿಚಾರ ಬೆಳೆಕಿಗೆ ಬಂದ ನಂತರ ಶುಕ್ರ ಗ್ರಹದ ಮೇಲ್ಮೈನಲ್ಲಿ ಜೀವಿಗಳಿರಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಯಿತು.
ಶುಕ್ರನ ವಾಯುಮಂಡಲ ಹೇಗಿದೆ?
ವಿಫಲ ಯತ್ನಗಳಿಂದ ಕಂಗೆಟ್ಟಿದ್ದ ಸೋವಿಯತ್ ಒಕ್ಕೂಟ 1966ರಲ್ಲಿ ಉಡಾಯಿಸಿದ್ದ ವೆನೆರಾ 3 ನೌಕೆಯು ದೇಶದ ವಿಜ್ಞಾನಿಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸಿತು. ಈ ನೌಕೆಯು ಶುಕ್ರ ಗ್ರಹದ ಮೇಲ್ಮೈನಲ್ಲಿ ಅಪ್ಪಳಿಸಿತು. ಆದರೆ ಭೂಮಿಯಲ್ಲದೇ ಇನ್ನೊಂದು ಗ್ರಹದ ಮೇಲ್ಮೈಯನ್ನು ತಲುಪಿದ ಮೊಟ್ಟಮೊದಲ ನೌಕೆ ಎಂದು ಹೆಸರು ಮಾಡಿತು. ಇದಾದ ನಂತರ ಮತ್ತೆ 1967 ರಲ್ಲಿ ರಷ್ಯಾ ಉಡಾಯಿಸಿದ ವೆನೆರಾ 4 ನೌಕೆ ಯಶಸ್ವಿಯಾಗಿ ಶುಕ್ರದ ವಾಯುಮಂಡಲವನ್ನು ಪ್ರವೇಶಿಸಿ ಹಲವಾರು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿತು. ಶುಕ್ರದ ವಾಯುಮಂಡಲವು 90 ರಿಂದ 95% ಇಂಗಾಲದ ಡೈಆಕ್ಸೈಡ್‌ನಿಂದ ಕೂಡಿದ್ದು, ಸುಮಾರು 500 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೇಲ್ಮೈ ತಾಪಮಾನ ಇದೆ ಎಂದು ಮಾಪನ ಮಾಡಿತು. ಇದು ನಾಸಾದ ಮ್ಯಾರಿನರ್ 2 ಮಾಪಿಸಿದ್ದಕ್ಕಿಂತ ಹೆಚ್ಚು ಎಂದು ತಿಳಿಸಿತು. ಇದಾದ ನಂತರ ರಷ್ಯಾ ಹಾಗೂ ಅಮೆರಿಕ ದೇಶಗಳು ಹಲವಾರು ಮಿಷನ್ ಕೈಗೊಂಡು ಶುಕ್ರ ಗ್ರಹದ ಅಧ್ಯಯನ ನಡೆಸಿವೆ. ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್, ರೋವರ್‌ನಿಂದ ಸಿಗ್ನಲ್ ಸಿಗ್ತಿಲ್ಲ: ಇಸ್ರೋ
ಶುಕ್ರನ ಮೇಲೆ ರಷ್ಯಾ ಮೊದಲ ಲ್ಯಾಂಡಿಂಗ್
ಡಿಸೆಂಬರ್ 15, 1970 ರಂದು ಮಾನವರಹಿತ ಸೋವಿಯತ್ ಬಾಹ್ಯಾಕಾಶ ನೌಕೆ ವೆನೆರಾ 7 ಮತ್ತೊಂದು ಗ್ರಹದಲ್ಲಿ ಇಳಿದ ಮೊದಲ ಬಾಹ್ಯಾಕಾಶ ನೌಕೆಯಾಯಿತು. ಇದು ಶುಕ್ರದ ಮೇಲಿನ ವಾತಾವರಣದ ತಾಪಮಾನವನ್ನು ಅಳೆಯಿತು. ನೌಕೆಯು 23 ನಿಮಿಷಗಳವರೆಗೆ ಶುಕ್ರದ ತಾಪಮಾನದ ಮಾಹಿತಿಯನ್ನು ಕಳುಹಿಸಿತು. ಬೇರೊಂದು ಗ್ರಹದ ಮೇಲ್ಮೈನಿಂದ ಬಂದ ಮೊದಲ ದೂರಮಾಪಿತ ಮಾಹಿತಿ ಇದಾಗಿದೆ.
ಸೋವಿಯತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಯುರೋಪಿಯನ್ ಬಾಹ್ಯಾಕಾಶ ಒಕ್ಕೂಟ, ಜಪಾನ್ ದೇಶಗಳು ಶುಕ್ರ ಗ್ರಹಕ್ಕೆ ಕಾರ್ಯಾಚರಣೆ ಕೈಗೊಂಡು ಗ್ರಹದ ವಾಯುಮಂಡಲ, ಮೇಲ್ಮೈ ಭೂವಿಜ್ಞಾನದ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿವೆ. ಶುಕ್ರ ಗ್ರಹಕ್ಕೆ ಸಂಬಂಧಿಸಿದ ಕುತೂಹಲಕಾರಿ ಅಂಶಗಳನ್ನು ಈ ದೇಶಗಳು ವಿಶ್ಲೇಷಿಸಿವೆ. ಈ ದೇಶಗಳ ಸಾಲಿಗೆ ಸೇರಲು ಭಾರತ ಕೂಡ ಸಜ್ಜಾಗಿದೆ. ಶುಕ್ರಯಾನ ಕೈಗೊಳ್ಳಲು ಭಾರತದ ಇಸ್ರೋ ಸಿದ್ಧತೆ ನಡೆಸುತ್ತಿದೆ.
ಆದಾಗ್ಯೂ, ಶುಕ್ರನನ್ನು ಅಧ್ಯಯನ ಮಾಡುವುದು ಸುಲಭದ ಸಾಧನೆಯಲ್ಲ. ತೀವ್ರವಾದ ಶಾಖ ಮತ್ತು ಗಾಳಿಯ ಒತ್ತಡದಿಂದಾಗಿ ಶುಕ್ರದ ಮೇಲ್ಮೈಯನ್ನು ಅನ್ವೇಷಿಸುವುದು ಕಷ್ಟಕರವಾಗಿದೆ. 1981 ರಲ್ಲಿ ಸೋವಿಯತ್ ಒಕ್ಕೂಟದ ವೆನೆರಾ 13 ಮಾಡಿದ ದಾಖಲೆಯನ್ನು ಯಾವುದೇ ಬಾಹ್ಯಾಕಾಶ ನೌಕೆಯು ಮಾಡಿಲ್ಲ. ಶುಕ್ರನ ಮೇಲ್ಮೈನಲ್ಲಿ ಉಳಿದಿದ್ದ ದೀರ್ಘಾವಧಿಯ ನೌಕೆ ಇದಾಗಿದೆ ನಾಸಾ ವೆಬ್‌ಸೈಟ್ ವಿವರಿಸುತ್ತದೆ. ನಾಸಾ 2031 ರಲ್ಲಿ ಶುಕ್ರನ ಅಧ್ಯಯನಕ್ಕೆ DAVINCI ಮಿಷನ್ ಕೈಗೊಳ್ಳುವ ಯೋಜನೆ ಹೊಂದಿದೆ. ಇದನ್ನೂ ಓದಿ: ಭೂಮಿ ಕಕ್ಷೆ ತೊರೆದ ಆದಿತ್ಯ ಎಲ್1 ನೌಕೆ – 110 ದಿನಗಳ ಸೂರ್ಯ ಯಾತ್ರೆ ಆರಂಭ
ಏನಿದು ಭಾರತದ ಶುಕ್ರಯಾನ-1?
ಶುಕ್ರಯಾನ-1 ಯೋಜನೆಯು ಶುಕ್ರನ ಅಧ್ಯಯನಕ್ಕೆ ಇಸ್ರೋ ಕೈಗೊಳ್ಳುತ್ತಿರುವ ಮೊದಲ ಮಿಷನ್ ಆಗಿದೆ. ಇದು ಸೌರವ್ಯೂಹದ ಅತ್ಯಂತ ಬಿಸಿಯಾದ ಗ್ರಹದ ಮೇಲ್ಮೈನಲ್ಲಿ ಏನಿದೆ ಎಂಬುದನ್ನು ಅಧ್ಯಯನ ಮಾಡಲಿದೆ. ಬಾಹ್ಯಾಕಾಶ ನೌಕೆಯು ಗ್ರಹವನ್ನು ಸುತ್ತುವ ಮೂಲಕ ಮೇಲ್ಮೈನಲ್ಲಿ ಆವರಿಸಿರುವ ಸಲ್ಫ್ಯೂರಿಕ್ ಆಸಿಡ್ ಮೋಡಗಳ ಅಡಿಯಲ್ಲಿನ ರಹಸ್ಯಗಳನ್ನು ಬಿಚ್ಚಿಡುವ ಕೆಲಸ ಮಾಡಲಿದೆ. ಮುಂದಿನ ವರ್ಷದ ಕೊನೆಯಲ್ಲಿ ಇಸ್ರೋ ಶುಕ್ರಯಾನ ನೌಕೆ ಉಡಾವಣೆ ಮಾಡುವ ನಿರೀಕ್ಷೆಯಿದೆ.
ನಾವು ಪರಿಕಲ್ಪನಾ ಹಂತದಲ್ಲಿ ಸಾಕಷ್ಟು ಕಾರ್ಯಾಚರಣೆಗಳನ್ನು ಹೊಂದಿದ್ದೇವೆ. ಶುಕ್ರಕ್ಕೆ ಮಿಷನ್ ಅನ್ನು ಈಗಾಗಲೇ ಕಾನ್ಫಿಗರ್ ಮಾಡಲಾಗಿದೆ. ಅದಕ್ಕಾಗಿ ಪೇಲೋಡ್‌ಗಳನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಶುಕ್ರ ಗ್ರಹದ ಮೇಲ್ಮೈ, ಭೂಮಿಯ 100 ಪಟ್ಟು ವಾತಾವರಣದ ಒತ್ತಡದೊಂದಿಗೆ ವಾತಾವರಣವನ್ನು ಹೊಂದಿದೆ. ಶುಕ್ರ ಮೇಲ್ಮೈ ಬಳಿ ಹೆಚ್ಚಿನ ವಾತಾವರಣದ ಒತ್ತಡಕ್ಕೆ ಕಾರಣಗಳು ಏನು ಎಂಬುದು ವಿಜ್ಞಾನಿಗಳಿಗೆ ತಿಳಿದಿಲ್ಲ. ಶುಕ್ರವನ್ನು ಆವರಿಸಿರುವ ದಟ್ಟವಾದ ಮೋಡಗಳು ಆಮ್ಲಗಳಿಂದ ತುಂಬಿವೆ. ಮೇಲ್ಮೈಯನ್ನು ಭೇದಿಸಲು ಸಹ ಸಾಧ್ಯವಿಲ್ಲ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಶುಕ್ರ ಮಿಷನ್.. ಪಾಸ್ ಆಗಿದ್ದೆಷ್ಟು, ಫೇಲ್ ಆಗಿದ್ದೆಷ್ಟು?
1961 ರಿಂದ ಇದುವರೆಗೆ ಶುಕ್ರನ ಅಧ್ಯಯನಕ್ಕೆ ಕೈಗೊಂಡ ಮಿಷನ್‌ಗಳ ಪೈಕಿ ರಷ್ಯಾದ್ದೇ ಬಹುಪಾಲಿದೆ. ರಷ್ಯಾ ದೇಶ ಎನರ್ಜಿಯ ಸಂಸ್ಥೆ ನೇತೃತ್ವದಲ್ಲಿ ಶುಕ್ರನ ವೈಜ್ಞಾನಿಕ ಅಧ್ಯಯನಕ್ಕೆ 11 ಕಾರ್ಯಾಚರಣೆಗಳನ್ನು ಕೈಗೊಂಡಿತ್ತು. ದುರಾದೃಷ್ಟವಶಾತ್ ಎಲ್ಲ ಕಾರ್ಯಾಚರಣೆಗಳೂ ವಿಫಲವಾದವು. ಇದರ ಜೊತೆಗೆ ಲಾವೊಚ್ಕಿನ್ ಬಾಹ್ಯಾಕಾಶ ಸಂಸ್ಥೆಯಿಂದ 18 ಶುಕ್ರಯಾನ ಮಿಷನ್ ಕೈಗೊಳ್ಳಲಾಗಿತ್ತು. ಅದರಲ್ಲಿ 14 ಮಿಷನ್‌ಗಳ ಯಶಸ್ಸು ಕಂಡವು. 1 ಭಾಗಶಃ ಸಕ್ಸಸ್ ಆಯಿತು. ಉಳಿದಂತೆ 3 ಕಾರ್ಯಾಚರಣೆಗಳು ಫೇಲ್ ಆದವು.
ಇತ್ತ ಅಮೆರಿಕದ ನಾಸಾ ಶುಕ್ರನ ಅಧ್ಯಯನಕ್ಕೆ ಒಟ್ಟು 11 ಕಾರ್ಯಾಚರಣೆಗಳನ್ನ ಕೈಗೊಂಡಿತು. ಅದರಲ್ಲಿ 6 ಮಿಷನ್‌ಗಳು ಸಕ್ಸಸ್ ಆದವು. 1 ಕಾರ್ಯಾಚರಣೆ ವಿಫಲವಾಯಿತು. ಇನ್ನು 4 ಮಿಷನ್‌ಗಳು ಶುಕ್ರನ ಕಕ್ಷೆ ತಲುಪಿದ್ದು, ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಯುರೋಪಿಯನ್ ಬಾಹ್ಯಾಕಾಶ ಒಕ್ಕೂಟ ಕೂಡ ಇದುವರೆಗೆ 3 ಕಾರ್ಯಾಚರಣೆಗಳನ್ನು ನಡೆಸಿದೆ. ಅದರಲ್ಲಿ 1 ಯಶಸ್ಸು ಕಂಡಿದೆ. ಇನ್ನೆರಡು ಮಿಷನ್‌ಗಳು ಶುಕ್ರನ ಕಕ್ಷೆ ತಲುಪಿದ್ದು, ಈಗಲೂ ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಓದಿ: PublicTV Explainer: ಭಾರತೀಯ ವಿಜ್ಞಾನಿಗಳಿಂದ ‘ಏಲಿಯನ್ ಗ್ರಹ’ ಪತ್ತೆ – ಇಲ್ಲಿ ಅನ್ಯಗ್ರಹ ಜೀವಿಗಳು ಇವೆಯೇ?
ಜಪಾನ್ ದೇಶ ಜಾಕ್ಸಾ ಬಾಹ್ಯಾಕಾಶ ಸಂಸ್ಥೆಯಿಂದ 2 ಕಾರ್ಯಾಚರಣೆ ನಡೆಸಿತು. ಅದರಲ್ಲಿ ಒಂದು ಯಶಸ್ಸು ಕಂಡರೆ ಮತ್ತೊಂದು ಶುಕ್ರನ ಕಾರ್ಯ ನಿರ್ವಹಿಸುತ್ತಿದೆ. ಮತ್ತೆ ಯುನಿಸೆಕ್ ಸಂಸ್ಥೆಯಿಂದ ಕೈಗೊಂಡಿದ್ದ ಒಂದು ಕಾರ್ಯಾಚರಣೆ ವಿಫಲವಾಯಿತು.
ಬೀಜಿಂಗ್: ಭಾರತದ ಚಂದ್ರಯಾನ-3 (Chandrayaan-3) ಬಾಹ್ಯಾಕಾಶ ನೌಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿಲ್ಲ ಎಂದು ಚೀನಾದ ಉನ್ನತ ವಿಜ್ಞಾನಿಯೊಬ್ಬರು ಪ್ರತಿಪಾದಿಸಿದ್ದಾರೆ.
ಎರಡು ವಾರಗಳ ಹಿಮಭರಿತ ಚಂದ್ರನ ರಾತ್ರಿಯ ನಂತರ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್‌ನಿಂದ ಸಿಗ್ನಲ್ ಸಿಗುತ್ತಿಲ್ಲ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದರು. ಲ್ಯಾಂಡರ್ ಮತ್ತು ರೋವರ್ ಸಂವಹನ ಸಂಪರ್ಕ ಸಾಧಿಸಲು ಪ್ರಯತ್ನ ನಡೆಯುತ್ತಿದೆ ಎಂದಿದ್ದರು. ಇದೇ ಹೊತ್ತಿನಲ್ಲಿ ಚೀನಾ ವಿಜ್ಞಾನಿ, ಭಾರತದ ಚಂದ್ರಯಾನ-3 ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಲ್ಯಾಂಡರ್, ರೋವರ್‌ನಿಂದ ಸಿಗ್ನಲ್ ಸಿಗ್ತಿಲ್ಲ: ಇಸ್ರೋ
ಚೀನಾದ ಮೊದಲ ಚಂದ್ರನ ಕಾರ್ಯಾಚರಣೆಯ ಮುಖ್ಯ ವಿಜ್ಞಾನಿಯಾಗಿದ್ದ ಓಯಾಂಗ್ ಜಿಯುವಾನ್ (Ouyang Ziyuan), ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿಲ್ಲ ಎಂದು ಹೇಳಿದ್ದಾರೆ.
ಚಂದ್ರಯಾನ-3 ರ ಲ್ಯಾಂಡಿಂಗ್ ಸೈಟ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇರಲಿಲ್ಲ. ಚಂದ್ರನ ದಕ್ಷಿಣ ಧ್ರುವ ಪ್ರದೇಶವೂ ಅಲ್ಲ ಎಂದು ಸೈನ್ಸ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಚೀನೀ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯರೂ ಆಗಿರುವ ಓಯಾಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ ಹಚ್ಚಿದ ಚಂದ್ರಯಾನ-3
ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನ ದಕ್ಷಿಣ ಧ್ರುವದಿಂದ 619 ಕಿ.ಮೀ ದೂರದಲ್ಲಿ ಇಳಿದಿದೆ. ಹೀಗಾಗಿ ಅದನ್ನು ದಕ್ಷಿಣ ಧ್ರುವ ಎಂದು ಕರೆಯಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.
ಚಂದ್ರನ ದಕ್ಷಿಣ ಭಾಗದ 69 ಡಿಗ್ರಿ ಅಕ್ಷಾಂಶದಲ್ಲಿ ಲ್ಯಾಂಡರ್ ಇಳಿದಿದೆ. ಇದು ದಕ್ಷಿಣ ಧ್ರುವದ ಭಾಗವಷ್ಟೆ. ಆದರೆ ದಕ್ಷಿಣ ಧ್ರುವ ಅಲ್ಲ. 88.5ರಿಂದ 90 ಡಿಗ್ರಿ ಅಕ್ಷಾಂಶದಲ್ಲಿ ದಕ್ಷಿಣ ಧ್ರುವ ಇದೆ. ಭೂಮಿ ತಿರುಗುವ ಅಕ್ಷವು ಸೂರ್ಯನೆಡೆಗೆ 23.5 ಡಿಗ್ರಿ ವಾಲಿದೆ. ಆದ್ದರಿಂದ ದಕ್ಷಿಣ ಧ್ರುವವು 66.5 ರಿಂದ 90 ಡಿಗ್ರಿವರೆಗೆ ಇದೆ. ಅಂದರೆ ಚಂದ್ರ ಕೇವಲ 1.5 ಡಿಗ್ರಿಯಷ್ಟೇ ವಾಲಿರುವುದರಿಂದ ದಕ್ಷಿಣ ಧ್ರುವದ ಪ್ರದೇಶ ಕಿರಿದಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ದ್ರವರೂಪದ ಚಿನ್ನ, ಬಾಹ್ಯಾಕಾಶದಲ್ಲಿ ವಾಸ್ತವ್ಯ, ಮಾನವ ಸಾಹಸಗಳಿಗೆ ಹಾದಿ ಮಾಡಿಕೊಡಲಿದೆ ಚಂದ್ರಯಾನ-3ರ ಯಶಸ್ಸು
ನವದೆಹಲಿ: ಚಂದ್ರನಲ್ಲಿ ರಾತ್ರಿ ಅಂತ್ಯವಾಗಿದ್ದು (ಚಂದ್ರನ ಒಂದು ದಿನ ಭೂಮಿಯ 14 ದಿನಕ್ಕೆ ಸಮ), ಸೂರ್ಯೋದಯವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಿದ್ರೆಯಲ್ಲಿರುವ ಚಂದ್ರಯಾನ-3 (Chandrayaan-3) ಲ್ಯಾಂಡರ್ ಮತ್ತು ರೋವರ್ ಎಚ್ಚರಗೊಳಿಸಲು ಇಸ್ರೋ ಪ್ರಯತ್ನ ನಡೆಸುತ್ತಿದೆ. ಆದರೆ ಲ್ಯಾಂಡರ್ ಮತ್ತು ರೋವರ್‌ನಿಂದ ಇದುವರೆಗೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ.
ಎರಡು ವಾರಗಳ ಚಂದ್ರನ ರಾತ್ರಿಯಿಂದಾಗಿ ಲ್ಯಾಂಡರ್ ಮತ್ತು ರೋವರ್ ಅನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿತ್ತು. ಈಗ ಚಂದ್ರನ ದಕ್ಷಿಣ ಧ್ರುವದಲ್ಲಿ ಬೆಳಕಾಗಿದ್ದು, ಸಂಪರ್ಕ ಸ್ಥಾಪಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಇಸ್ರೋ ಹೇಳಿದೆ.
ಚಂದ್ರನ ರಾತ್ರಿಯ ಸಮಯದಲ್ಲಿ ಮೈನಸ್ 150C (ಮೈನಸ್ 238F) ವರೆಗೆ ಶೀತ ಹವಾಮಾನ ಇತ್ತು. ಹೀಗಾಗಿ ಲ್ಯಾಂಡರ್ ಮತ್ತು ರೋವರ್‌ನೊಂದಿಗೆ ಸಂಪರ್ಕ ಸಾಧಿಸಲು ತೊಂದರೆಯಾಗುತ್ತಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದರು. ಇದನ್ನೂ ಓದಿ: ಗಗನಯಾತ್ರಿಗಳ ಮೈಕ್ರೋಮೀಟೋರಾಯ್ಡ್ ದಿರಿಸುಗಳ ಕೌತುಕ ಲೋಕದ ಬಗ್ಗೆ ನಿಮಗೆ ಗೊತ್ತಾ?
ನವದೆಹಲಿ: ಚಂದ್ರಯಾನ-3 ಯೋಜನೆಯ ಮಹತ್ವದ ಘಟ್ಟವೊಂದಕ್ಕೆ ಕ್ಷಣಗಣನೆ ಶುರುವಾಗಿದೆ. ಸೆಪ್ಟೆಂಬರ್ 22 ರಂದು ಚಂದ್ರದ ದಕ್ಷಿಣ ಧ್ರುವದಲ್ಲಿ ಸೂರ್ಯೋದಯ ಆಗಲಿದೆ. ಆಗ ಚಂದ್ರನ ಅಂಗಳದಲ್ಲಿ ಇರುವ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಮತ್ತೆ ಮರುಜೀವ ಪಡೆಯುತ್ತಾ ಅನ್ನೋ ಕೌತುಕವನ್ನ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.
ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಶಿವಶಕ್ತಿ ಪಾಯಿಂಟ್ ಮೇಲೆ ಸೂರ್ಯನ ಬೆಳಕು ಚೆಲ್ಲಲಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3 ಮಿಷನ್‌ನ ಲ್ಯಾಂಡರ್ ಮತ್ತು ರೋವರ್ ಮಾಡ್ಯೂಲ್‌ಗಳಾದ ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್‌ಗಳನ್ನ ಪುನರುಜ್ಜೀವನಗೊಳಿಸಲು ಸಖಲ ತಯಾರಿ ನಡೆಸುತ್ತಿದೆ. ಇದನ್ನೂ ಓದಿ: ನಿದ್ರೆಗೆ ಜಾರಿದ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್
ಕಳೆದ ತಿಂಗಳು ಆಗಸ್ಟ್ 23 ರಂದು ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಆ ನಂತರ ವಿಕ್ರಂ ಲ್ಯಾಂಡರ್ ಒಳಗಿನಿಂದ ಪ್ರಗ್ಯಾನ್ ರೋವರ್ ಚಂದ್ರನ ಅಂಗಳದಲ್ಲಿ ಸಂಚಾರ ಮಾಡಿತ್ತು. ಇದಾದ 14 ಭೂಮಿಯ ದಿನಗಳ ಬಳಿಕ ಚಂದ್ರನ ದಕ್ಷಿಣ ಧ್ರುವದಲ್ಲಿ ರಾತ್ರಿ ಆರಂಭವಾಗುವುದಕ್ಕೂ ಮುನ್ನವೇ ಮತ್ತೊಂದು ಬಾರಿ ವಿಕ್ರಂ ಲ್ಯಾಂಡರ್ ಅನ್ನು ಕಿಕ್ ಸ್ಟಾರ್ಟ್ ಮಾಡಿ 40 ಸೆಂಟಿಮೀಟರ್‌ಗಳಷ್ಟು ಮೇಲಕ್ಕೆ ಎತ್ತರಿಸಿ, ಮತ್ತೆ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿತ್ತು. ನಂತರ ಎರಡೂ ಉಪಕರಣಗಳು ನಿದ್ರೆಗೆ ಜಾರಿದ್ದವು. ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಪ್ರಗ್ಯಾನ್ ರೋವರ್ – ವಿಕ್ರಮ್ ಲ್ಯಾಂಡರ್‌ನಿಂದ ಹೊರಬರಲು ತಡವಾಗಿದ್ಯಾಕೆ?
ಇದೀಗ ಸುಸ್ಥಿತಿಯಲ್ಲಿ ಇರುವ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್, ಶುಕ್ರವಾರ ಸೂರ್ಯೋದಯ ಆದ ಬಳಿಕ ಮತ್ತೆ ನಿದ್ರೆಯಿಂದ ಎಚ್ಚರ ಆಗುವ ನಿರೀಕ್ಷೆ ಇದೆ. ಒಂದು ವೇಳೆ ಈ ಉಪಕರಣಗಳು ಕೆಲಸ ಮಾಡದೇ ಇದ್ದರೆ ಇವುಗಳು ಚಂದ್ರನ ಅಂಗಳದಲ್ಲಿ ಶಾಶ್ವತವಾಗಿ ಭಾರತದ ಬಾಹ್ಯಾಕಾಶ ಪ್ರಯೋಗದ ರಾಯಭಾರಿಗಳ ರೀತಿಯಲ್ಲಿ ಉಳಿದು ಹೋಗಲಿವೆ. ಒಂದು ವೇಳೆ ಈ ಕಾರ್ಯ ಯಶಸ್ವಿಯಾದರೆ ಇಸ್ರೋ ಬಾಹ್ಯಾಕಾಶ ಪರಿಶೋಧನೆಯಲ್ಲಿ ಮಹತ್ವದ ಮೈಲುಗಲ್ಲನ್ನು ಸಾಧಿಸಲಿದೆ. ಜೊತೆಗೆ ಮುಂದಿನ 14 ದಿನಗಳ ಕಾಲ ಚಂದ್ರನ ಅಂಗಳದಲ್ಲಿ ಇನ್ನಷ್ಟು ಮಾಹಿತಿಗಳನ್ನ ಸಂಗ್ರಹಿಸಲು ನೆರವಾಗಲಿದೆ.
ಈ ಬಾರಿ ಚಂದ್ರನ ಮೈಲ್ಮೈ ವೈಶಿಷ್ಟ್ಯಗಳು, ಉಷ್ಣ ವಾತಾವರಣದ ಗುಣಲಕ್ಷಣಗಳು ಹಾಗೂ ಮಣ್ಣಿನ ಅಂಶಗಳನ್ನ ಅಧ್ಯಯನ ನಡೆಸುವ ಉದ್ದೇಶ ಹೊಂದಲಾಗಿದೆ.