ನವದೆಹಲಿ: ಚಂದ್ರನ (Moon) ಮೇಲ್ಮೈನಲ್ಲಿರುವ ಲ್ಯಾಂಡರ್ ಮಾಡ್ಯೂಲ್ (Lander Module) ಮತ್ತು ರೋವರ್ (Rover) ತಮ್ಮ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇದೇ ಹೊತ್ತಿನಲ್ಲಿ ಚಂದ್ರನ ಮೇಲಿರುವ ಚಂದ್ರಯಾನ-3ರ (Chandrayaan-3) ವಿಕ್ರಮ್ ಲ್ಯಾಂಡರ್‌ನ ಫೋಟೋವನ್ನು ಚಂದ್ರಯಾನ-2ರ ಆರ್ಬಿಟರ್ (Chandrayaan-2 Orbiter) ಸೆರೆ ಹಿಡಿದಿದೆ.
Chandrayaan-3 Mission update :
I spy you! ????
Chandrayaan-2 Orbiter
????photoshoots
Chandrayaan-3 Lander!
Chandrayaan-2’s
Orbiter High-Resolution Camera (OHRC),
— the camera with the best resolution anyone currently has around the moon ????–
spots Chandrayaan-3 Lander
after the… pic.twitter.com/tIF0Hd6G0i
— LVM3-M4/CHANDRAYAAN-3 MISSION (@chandrayaan_3) August 25, 2023
ಚಂದ್ರಯಾನ-3 ಲ್ಯಾಂಡರ್‌ನ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ (ಎಕ್ಸ್) ಹಂಚಿಕೊಂಡಿರುವ ಇಸ್ರೋ, “ನಾನು ನಿನ್ನ ಮೇಲೆ ಕಣ್ಣಿಟ್ಟಿದ್ದೇನೆ. ಚಂದ್ರಯಾನ-3ರ ಲ್ಯಾಂಡರ್‌ನ ಫೋಟೋವನ್ನು ಚಂದ್ರಯಾನ-2 ಆರ್ಬಿಟರ್ ಸೆರೆ ಹಿಡಿದಿದೆ. ಚಂದ್ರಯಾನ-2 ನ ಆರ್ಬಿಟರ್ ಹೈ-ರೆಸಲ್ಯೂಶನ್ ಕ್ಯಾಮೆರಾ (OHRC) ಮೂಲಕ ಈ ಫೋಟೋ ತೆಗೆದಿದೆ” ಎಂದು ತಿಳಿಸಿದೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ
ಲ್ಯಾಂಡರ್ ಮತ್ತು ರೋವರ್‌ನ ಮುಂದಿನ ಕಾರ್ಯಾಚರಣೆಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಸಿಸ್ಟಮ್‌ಗಳು ನಾರ್ಮಲ್ ಆಗಿದೆ. ಲ್ಯಾಂಡರ್ ಮಾಡ್ಯೂಲ್ ಪೇಲೋಡ್‌ಗಳಾದ ILSA, RAMBHA ಮತ್ತು ChaSTE ಅನ್ನು ಆನ್ ಮಾಡಲಾಗಿದೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿವೆ. ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿನ SHAPE ಪೇಲೋಡ್ ಅನ್ನು ಭಾನುವಾರ ಆನ್ ಮಾಡಲಾಗಿದೆ ಎಂದು ಗುರುವಾರ ಇಸ್ರೋ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿತು.
ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಆ.23 ರಂದು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು. ಅದಾದ ಕೆಲವೇ ಗಂಟೆಗಳಲ್ಲಿ ಪ್ರಗ್ಯಾನ್ ರೋವರ್, ಲ್ಯಾಂಡರ್‌ನಿಂದ ಹೊರಬಂದು ಚಂದ್ರನ ಮೇಲೆ ತನ್ನ ವೈಜ್ಞಾನಿಕ ಅಧ್ಯಯನ ಆರಂಭಿಸಿದೆ. ಇವು ಒಂದು ಚಂದ್ರನ ದಿನ (ಭೂಮಿಯ 14 ದಿನ) ತಮ್ಮ ಕಾರ್ಯಾಚರಣೆಯನ್ನು ನಡೆಸಲಿವೆ. ಇದನ್ನೂ ಓದಿ: ಭಾರತದ ಚಂದ್ರಯಾನ-3 ಯಶಸ್ಸಿಗೆ ವಿಶ್ವಸಂಸ್ಥೆಯಲ್ಲಿ ಸಂಭ್ರಮಾಚರಣೆ
ತಿರುವನಂತಪುರಂ: ಚಂದ್ರಯಾನ-2ರ (Chandrayaan-3) ವೈಫಲ್ಯದಿಂದ ಕಲಿತ ಪಾಠಗಳು ಭಾರತದ ಚಂದ್ರಯಾನ-3 (Chandrayaan-3) ಯಶಸ್ಸಿಗೆ ಕಾರಣವಾಗಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಾಜಿ ಬಾಹ್ಯಾಕಾಶ ವಿಜ್ಞಾನಿ ನಂಬಿ ನಾರಾಯಣನ್ (Nambi Narayanan) ಅಭಿಪ್ರಾಯಪಟ್ಟಿದ್ದಾರೆ.
ಚಂದ್ರಯಾನ-3 ಮಿಷನ್ ವಿಜ್ಞಾನಿಗಳಿಗೆ ನಂಬಿ ನಾರಾಯಣನ್ ಅಭಿನಂದನೆ ಸಲ್ಲಿಸಿದರು. ಚಂದ್ರಯಾನ-2ರ ಪ್ರತಿ ವೈಫಲ್ಯವನ್ನು ಇಲ್ಲಿ ಪರಿಹರಿಸಲಾಗಿದೆ. ಉಪಗ್ರಹ ಸಮಸ್ಯೆಯಾಗಿರಲಿ, ಸ್ಥಿರತೆಯ ಸಮಸ್ಯೆಯಾಗಿರಲಿ ಅಥವಾ ಹೆಚ್ಚುವರಿ ಅವಶ್ಯಕತೆಯ ಸಮಸ್ಯೆಯಾಗಿರಲಿ.. ಎಲ್ಲವನ್ನೂ ಚಂದ್ರಯಾನ-3ರಲ್ಲಿ ಪರಿಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್ – ಇಸ್ರೋ ಅಧ್ಯಕ್ಷರಿಗೆ ಸೋನಿಯಾ ಗಾಂಧಿ ಪತ್ರ
ಇಸ್ರೋ ವಿಜ್ಞಾನಿಗಳು ಅದ್ಭುತ ಕೆಲಸ ಮಾಡಿದ್ದಾರೆ. ಚಂದ್ರಯಾನ-3 ಯಶಸ್ವಿಯಾಗಲಿದೆ ಎಂಬ ವಿಶ್ವಾಸ ನಮಗೆ ಉಡಾವಣೆಗೂ ಮುನ್ನ ಇತ್ತು. ಇಸ್ರೋ ವಿಜ್ಞಾನಿಗಳಿಗೆ ನನ್ನ ಅಭಿನಂದನೆಗಳು ಎಂದು ಹೇಳಿದ್ದಾರೆ.
ಇದು ಇಸ್ರೋ, ಭಾರತ ಮತ್ತು ಮನುಕುಲಕ್ಕೂ ಉತ್ತಮ ದಿನವಾಗಿದೆ. ನಾವು ಸಾಧಿಸಿದ್ದು ಒಂದರ್ಥದಲ್ಲಿ ನಂಬಲಸಾಧ್ಯ. ಚಂದ್ರಯಾನ-2 ವೈಫಲ್ಯದ ಬಳಿಕ ಕಡಿಮೆ ಬಜೆಟ್‌ನಲ್ಲಿ ಚಂದ್ರಯಾನ-3 ಕೈಗೊಂಡು ಯಶಸ್ಸು ಸಾಧಿಸಿದ್ದು ನಿಜಕ್ಕೂ ಸವಾಲಿನ ಕಾರ್ಯವಾಗಿತ್ತು. ಇಷ್ಟೆಲ್ಲ ಸವಾಲುಗಳ ನಡುವೆ ಮಿಷನ್ ಉದ್ದೇಶವನ್ನು ಸಾಧಿಸಿದ್ದಾರೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: Chandrayaan-3 ಸಕ್ಸಸ್; ಇಸ್ರೋ ಅಧ್ಯಕ್ಷರು, ವಿಜ್ಞಾನಿಗಳಿಗೆ ಸಿಎಂ ಅಭಿನಂದನೆ
ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಲಾಯಿತು. ಆ.23 ರಂದು ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈನಲ್ಲಿ ಇಳಿಯಿತು. ಭಾರತವು ಯುಎಸ್, ರಷ್ಯಾ ಮತ್ತು ಚೀನಾದ ನಂತರ ಚಂದ್ರನ ಲ್ಯಾಂಡಿಂಗ್ ಮಿಷನ್ ಅನ್ನು ಯಶಸ್ವಿಯಾಗಿ ನಡೆಸಿದ ನಾಲ್ಕನೇ ರಾಷ್ಟ್ರವಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಮಹತ್ವಾಕಾಂಕ್ಷೆಯ ಚಂದ್ರಯಾನ-3 (Chandrayaan-3) ಗಗನನೌಕೆ ಉಡಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಶುಕ್ರವಾರ ಮಧ್ಯಾಹ್ನ 2:35ಕ್ಕೆ ಗಗನನೌಕೆ ನಭಕ್ಕೆ ಚಿಮ್ಮಲಿದೆ.
ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ಭಾರತ:
ಚಂದ್ರಯಾನ-2 ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3 ಯಶಸ್ಸಿಗೆ ಇಸ್ರೋ ಅಡಿಯಿಟ್ಟಿದೆ. ಜು.14 ರ ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಅನ್ನು ಎಲ್‌ವಿಎಂ3 ಮೂಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಚಂದ್ರಯಾನ-3 ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗವಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಗಗನನೌಕೆ ಇಳಿಸಲಾಗುವುದು. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿಮೀವರೆಗೆ ಸಾಗಿಸುತ್ತದೆ. ಇದನ್ನೂ ಓದಿ:26/11 ರಂತೆ ಮತ್ತೊಂದು ಭಯೋತ್ಪಾದನಾ ದಾಳಿಗೆ ಸಿದ್ಧರಾಗಿ- ಮುಂಬೈ ಪೊಲೀಸ್ರಿಗೆ ಬೆದರಿಕೆ ಕರೆ
4 ಕಿಮೀ ಉದ್ದ, 2 ಕಿಮೀ ಅಗಲದ ಪ್ರದೇಶದಲ್ಲಿ ಇಳಿಯುತ್ತೆ ನೌಕೆ:
ಚಂದ್ರಯಾನ-3 ಗಗನನೌಕೆಯನ್ನು ಇಳಿಸಲು ಚಂದ್ರನ ಮೇಲ್ಮೈನಲ್ಲಿ ಜಾಗವನ್ನು ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ 4 ಕಿಮೀ ಉದ್ದ ಹಾಗೂ 2 ಕಿಮೀ ಅಗಲದ ಪ್ರದೇಶದಲ್ಲಿ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ. ಇದನ್ನೂ ಓದಿ: 26/11 ರಂತೆ ಮತ್ತೊಂದು ಭಯೋತ್ಪಾದನಾ ದಾಳಿಗೆ ಸಿದ್ಧರಾಗಿ- ಮುಂಬೈ ಪೊಲೀಸ್ರಿಗೆ ಬೆದರಿಕೆ ಕರೆ
ಚಂದ್ರಯಾನ-1 ಮತ್ತು 2ರಲ್ಲಿ ಇದ್ದಂತೆ ಚಂದ್ರಯಾನ-3ರಲ್ಲಿ ಆರ್ಬಿಟರ್ ಇರುವುದಿಲ್ಲ. ಲ್ಯಾಂಡರ್ ಮತ್ತು ರೋವರ್ ಹೊತ್ತ ಗಗನನೌಕೆಯು ಆಗಸ್ಟ್ 23 ರ ಸುಮಾರಿಗೆ ಚಂದ್ರನ ಕಕ್ಷೆಗೆ ತಲುಪಲಿದೆ. ನಂತರ 15 ದಿನಗಳಲ್ಲಿ ನೌಕೆ ಚಂದ್ರನಲ್ಲಿ ಇಳಿಯಲಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಕಾರ್ಯನಿರ್ವಹಿಸಲು ಮತ್ತು ಡೇಟಾವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ನೌಕೆ ಚಂದ್ರನಲ್ಲಿ ಇಳಿದಾಗ ಲ್ಯಾಂಡರ್‌ನಿಂದ ರೋವರ್ ಬೇರ್ಪಟ್ಟು ಪ್ರಯೋಗ ನಡೆಸಿ, ಡೇಟಾವನ್ನು ಸಂಗ್ರಹಿಸಲು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುವುದು.
ಚಂದ್ರನ ಅಂಗಳದಲ್ಲಿ ಮೂರನೇ ಹೆಜ್ಜೆ ಇಡಲು ಭಾರತ ಸಜ್ಜಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಯ ನಿರೀಕ್ಷೆಯಲ್ಲಿರುವ ಇಸ್ರೋಗೆ ಶುಕ್ರವಾರ ಮುಹೂರ್ತ ಕೂಡಿಬಂದಿದೆ. ಭಾರತದ ಚಂದ್ರಯಾನ-3 (Chandrayaan-3) ಗಗನನೌಕೆಯು ಜುಲೈ 14 ರಂದು ಮಧ್ಯಾಹ್ನ 2:35ಕ್ಕೆ ಉಡಾವಣೆಗೊಳ್ಳಲಿದೆ. ಈ ಐತಿಹಾಸಿಕ ಕ್ಷಣವನ್ನು ಆನಂದಿಸಲು ಭಾರತೀಯರು ಕಾತರರಾಗಿದ್ದಾರೆ.
ಭಾರತದ ಹಿಂದಿನ ಚಂದ್ರಯಾನಗಳ ಉಡಾವಣೆಯೊಂದಿಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ತನ್ನ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಚಂದ್ರಯಾನ-2 ಕ್ಕಿಂತ ಇದು ಹೇಗೆ ಭಿನ್ನವಾಗಿದೆ? ಚಂದ್ರಯಾನ -3 ಹೇಗೆ ಕಾರ್ಯನಿರ್ವಹಿಸುತ್ತದೆ? ಚಂದ್ರಯಾನ-1 ಮತ್ತು ಚಂದ್ರಯಾನ-2 ಕ್ಕೆ ಹೋಲಿಸಿದರೆ ಚಂದ್ರಯಾನ-3 ವಿಶೇಷತೆ ಏನು ಎಂಬುದನ್ನು ತಿಳಿಯಲು ಜನರು ಆಸಕ್ತಿ ಹೊಂದಿದ್ದಾರೆ. ಅದನ್ನು ಕೆಳಗೆ ಅರ್ಥಮಾಡಿಕೊಳ್ಳೋಣ. ಅದಕ್ಕೂ ಮೊದಲು ಭೂಮಿಯ ಏಕೈಕ ಉಪಗ್ರಹ ಚಂದ್ರ, ಅದರ ಅನ್ವೇಷಣೆಯ ಇತಿಹಾಸ ಮತ್ತು ಮೈಲುಗಲ್ಲುಗಳ ಬಗ್ಗೆ ತಿಳಿಯೋಣ.
ಚಂದ್ರನ ಗಾತ್ರ ಭೂಮಿಗಿಂತ 4 ಪಟ್ಟು ಚಿಕ್ಕದು
ಭೂಮಿಯನ್ನುಳಿದು ಮಾನವರು ನಡೆದಾಡಿದ ಏಕೈಕ ಆಕಾಶಕಾಯವೆಂದರೆ ಅದು ಚಂದ್ರ. ಭೂಮಿ ಮತ್ತು ಚಂದ್ರನ ನಡುವಿನ ದೂರವು 3,84,399 ಕಿಮೀ ಇದೆ. ಚಂದ್ರನ ವ್ಯಾಸವು 2,159 ಮೈಲಿಗಳಷ್ಟಿದೆ ಅಂದರೆ ಭೂಮಿಗಿಂತ ನಾಲ್ಕು ಪಟ್ಟು ಚಿಕ್ಕದಾಗಿದೆ. ಚಂದ್ರನ ತೂಕ ಭೂಮಿಗಿಂತ 80 ಪಟ್ಟು ಕಡಿಮೆ. ಇದು ಸೌರಮಂಡಲದಲ್ಲಿ 5ನೇ ಅತಿ ದೊಡ್ಡ ಮತ್ತು ಭಾರವಾದ ಉಪಗ್ರಹವಾಗಿದೆ. ಇದು ಭೂಮಿಯನ್ನು ಒಂದು ಸುತ್ತು ಹಾಕಲು 27.3 ದಿನಗಳನ್ನು ತೆಗೆದುಕೊಳ್ಳುತ್ತದೆ. ದೂರದರ್ಶಕದ ಆವಿಷ್ಕಾರದ ನಂತರ ಚಂದ್ರನ ವೀಕ್ಷಣೆಯಲ್ಲಿ ಸಾಕಷ್ಟು ಪ್ರಗತಿಯಾಯಿತು. ಈ ಹೊಸ ಉಪಕರಣವನ್ನು ಗೆಲಿಲಿಯೊ ಗೆಲಿಲಿ ಚೆನ್ನಾಗಿ ಉಪಯೋಗಿಸಿಕೊಂಡು, ಚಂದ್ರನ ಮೇಲ್ಮೈನ ಪರ್ವತಗಳು ಮತ್ತು ಕುಳಿಗಳನ್ನು ಅವಲೋಕಿಸಿದನು. ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರಗಳಾದ ರಷ್ಯಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ನಡುವೆ ಬಾಹ್ಯಾಕಾಶದ ಬಗ್ಗೆ ಆಸಕ್ತಿ ಹೆಚ್ಚಾಯಿತು. ಅದರ ಪ್ರತಿಫಲದಿಂದಲೇ ಅನೇಕ ದೇಶಗಳು ಚಂದ್ರನೂರಿಗೆ ಪ್ರಯಾಣ ಬೆಳೆಸಲು ಸಾಧ್ಯವಾಯಿತು.
ಚಂದ್ರನ ಮೇಲೆ ರಷ್ಯಾ ಮೊದಲ ಹೆಜ್ಜೆ
ಅದು ಶೀತಲ ಸಮರದ ಸಂದರ್ಭ. ಬಾಹ್ಯಾಕಾಶ ಕ್ಷೇತ್ರದಲ್ಲಿ ಮೈಲುಗಲ್ಲು ಸಾಧಿಸಬೇಕು ಎಂದು ರಷ್ಯಾ ಮತ್ತು ಅಮೆರಿಕ ರಾಷ್ಟ್ರಗಳು ಪೈಪೋಟಿ ನಡೆಸಿದ್ದವು. ಈ ಪೈಪೋಟಿಯಲ್ಲಿ ಮೊದಲು ಯಶಸ್ವಿಯಾಗಿದ್ದು ರಷ್ಯಾ. ಆಗ ರಷ್ಯಾವನ್ನು ಸೋವಿಯತ್ ಒಕ್ಕೂಟ ಎಂದೇ ಕರೆಯಲಾಗುತ್ತಿತ್ತು (ನಂತರ ಕೆಲವು ದೇಶಗಳು ರಷ್ಯಾದಿಂದ ಸ್ವತಂತ್ರಗೊಂಡವು). ಸೋವಿಯತ್ ಒಕ್ಕೂಟದ ಕಾಲದಲ್ಲೇ (1930) ಆ ದೇಶದ ಬಾಹ್ಯಾಕಾಶ ಸಂಶೋಧನೆ ಆರಂಭವಾಗಿತ್ತು. ಮೊತ್ತ ಮೊದಲ ಮಾನವನನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದು ರಷ್ಯನ್ನರು (ಯೂರಿ ಗಗಾರಿನ್- 1961). ಮೊತ್ತ ಮೊದಲ ಪ್ರಾಣಿಯನ್ನು ವ್ಯೋಮಕ್ಕೆ ಕಳಿಸಿದ್ದೂ ಅವರೇ (ಲೈಕಾ ನಾಯಿ- 1957). ಜಗತ್ತಿನ ಮೊತ್ತ ಮೊದಲ ಸ್ಯಾಟ್‌ಲೈಟ್ ಸಿದ್ಧಪಡಿಸಿ ಭೂಮಿ ಸುತ್ತುವಂತೆ ಮಾಡಿದವರೂ ಅವರೇ (ಸ್ಪುಟ್ನಿಕ್ 1- 1957). ಇದರ ಹೊರತಾಗಿ ಮೊದಲ ಬಾರಿಗೆ ಚಂದ್ರನ ಮೇಲೆ ಗಗನನೌಕೆಯನ್ನು ಕಳುಹಿಸುವಲ್ಲಿ ಸೋವಿಯತ್ ಒಕ್ಕೂಟ ಯಶಸ್ವಿಯಾಯಿತು.
ಚಂದ್ರನ ಮೇಲ್ಮೈ ತಲುಪಿದ ಮೊಟ್ಟ ಮೊದಲ ಮಾನವ ನಿರ್ಮಿತ ಗಗನನೌಕೆ ಸೋವಿಯತ್ ಒಕ್ಕೂಟದ ಲೂನಾ-2 (1959 ರ ಸೆಪ್ಟೆಂಬರ್ 13). ಮತ್ತೊಂದು ಕಾರ್ಯಾಚರಣೆಯಲ್ಲಿ ಲೂನಾ-9 ಚಂದ್ರನ ಮೇಲೆ ನಿಧಾನವಾಗಿ ಇಳಿಯಿತು. ಲೂನಾ-10 ಚಂದ್ರನನ್ನು ಪರಿಭ್ರಮಿಸಿದ ಪ್ರಪ್ರಥಮ ಮಾನವರಹಿತ ಗಗನನೌಕೆ. ಈ ಸಾಧನೆಗಳ ಮೂಲಕ ರಷ್ಯಾ ಅಂತರಿಕ್ಷ ಯಾನದಲ್ಲಿ ದಾಖಲೆ ಬರೆಯಿತು.
ಚಂದ್ರನ ಮೇಲೆ 2 ಗಂಟೆ ನಡೆದಾಡಿದ ಮಾನವರು
1969 ರಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಮೆರಿಕ ಮಾನವ ಇತಿಹಾಸದಲ್ಲಿ ರೋಮಾಂಚಕ ಅಧ್ಯಾಯವೊಂದನ್ನು ಬರೆಯಿತು. ಮಾನವಸಹಿತವಾಗಿ ಆಕಾಶಕ್ಕೆ ಹಾರಿದ್ದ ಅಮೆರಿಕದ ಅಪೊಲೊ-11 ಗಗನನೌಕೆ 1969ರ ಜುಲೈ 20 ರಂದು ಚಂದ್ರನ ಮೇಲೆ ಇಳಿಯಿತು. ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ ಎಂಬ ಹೆಗ್ಗಳಿಕೆಗೆ ನೀಲ್ ಆರ್ಮ್ ಸ್ಟ್ರಾಂಗ್ ಪಾತ್ರರಾದರು. ಇವರ ಜೊತೆ ಮೈಕೆಲ್ ಕಾಲಿನ್ಸ್, ಎಡ್ವಿನ್ ಬಜ್ ಆಲ್ಡ್ರಿನ್ ಸಹ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ಮೂವರು ಗಗನಯಾತ್ರಿಗಳು ಚಂದ್ರನ ಮೇಲೆ 2 ಗಂಟೆಗಳ ಕಾಲ ಓಡಾಡಿದರು. ಚಂದ್ರನಲ್ಲಿ ಸಿಕ್ಕ ಕಲ್ಲು, ಖನಿಜಗಳನ್ನು ತಂದು ನಾಸಾದ ಪ್ರಯೋಗಾಲಯದಲ್ಲಿ ಇಟ್ಟರು. ಸೋವಿಯತ್ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್, ಚೀನಾ, ಜಪಾನ್, ಭಾರತ, ಯುರೋಪಿಯನ್ ಒಕ್ಕೂಟ, ಇಸ್ರೇಲ್, ಅರಬ್ ಸಂಯುಕ್ತ ಸಂಸ್ಥಾನ, ಲಕ್ಸೆಂಬರ್ಗ್, ದಕ್ಷಿಣ ಕೊರಿಯಾ, ಇಟಲಿ ಈವರೆಗೆ ಚಂದ್ರನ ಮೇಲೆ ಕಾರ್ಯಾಚರಣೆ ನಡೆಸಿದ ದೇಶಗಳಾಗಿವೆ. ಇದನ್ನೂ ಓದಿ: Chandrayaan-3: ಬಹುನಿರೀಕ್ಷಿತ ಚಂದ್ರಯಾನ-3 ಗಗನನೌಕೆ ಜು.14, ಮಧ್ಯಾಹ್ನ 2:35ಕ್ಕೆ ಉಡಾವಣೆ
ಭಾರತದ ಚಂದ್ರಯಾನ-1
ಇಸ್ರೋ (ISRO) ತನ್ನ ಮೊದಲ ಚಂದ್ರ ಕಾರ್ಯಾಚರಣೆಯ ಭಾಗವಾಗಿ 2008 ರ ಅಕ್ಟೋಬರ್ 22 ರಂದು ಚಂದ್ರಯಾನ -1 ಅನ್ನು ಪ್ರಾರಂಭಿಸಿತು. ಇದನ್ನು ಪಿಎಸ್‌ಎಲ್‌ವಿ ಎಕ್ಸ್‌ಎಲ್ ರಾಕೆಟ್ ಮೂಲಕ ಉಡಾಯಿಸಲಾಯಿತು. 2008 ರ ನವೆಂಬರ್ 8 ರಂದು ಚಂದ್ರಯಾನ-1 ಗಗನನೌಕೆ ಚಂದ್ರನ ಕಕ್ಷೆಯನ್ನು ತಲುಪಿತು. ಚಂದ್ರಯಾನ ಯೋಜನೆಯ ವೆಚ್ಚ 386 ಕೋಟಿ ರೂ. ಇಸ್ರೋ ಪ್ರಾರಂಭಿಸಿದ ಚಂದ್ರಯಾನ-1 ರ ಮಿಷನ್ ಜೀವಿತಾವಧಿ ಎರಡು ವರ್ಷಗಳು. ಆದರೆ ಸುಮಾರು ಒಂದು ವರ್ಷದ ನಂತರ ಆರ್ಬಿಟರ್‌ನಲ್ಲಿ ತಾಂತ್ರಿಕ ನ್ಯೂನತೆಗಳು ಬರಲಾರಂಭಿಸಿದವು. ಇದು ಕನಿಷ್ಠ 312 ದಿನಗಳವರೆಗೆ ಕಾರ್ಯನಿರ್ವಹಿಸಿತು. 3,400 ಕ್ಕೂ ಹೆಚ್ಚು ಬಾರಿ ಚಂದ್ರನ ಸುತ್ತ ಪ್ರದಕ್ಷಿಣೆ ಹಾಕಿತು. 2009ರ ಆಗಸ್ಟ್ 28 ರಂದು ಚಂದ್ರಯಾನ-1 ವಿಜ್ಞಾನಿಗಳಿಗೆ ಡೇಟಾ ಕಳುಹಿಸುವುದನ್ನು ನಿಲ್ಲಿಸಿತು. 2009 ರ ಆಗಸ್ಟ್ 29 ರಂದು ಚಂದ್ರಯಾನ-1 ಮಿಷನ್ ಮುಚ್ಚುವುದಾಗಿ ಇಸ್ರೋ ಘೋಷಿಸಿತು.
ಚಂದ್ರನಲ್ಲಿ ನೀರಿನ ಅಂಶ ಪತ್ತೆ ಮಾಡಿದ ಇಸ್ರೋ
ಚಂದ್ರನಲ್ಲಿ ನೀರಿನ ಅಂಶಗಳಿವೆ ಎಂಬುದನ್ನು ಮೊದಲು ಪತ್ತೆ ಮಾಡಿದ ಕೀರ್ತಿ ಭಾರತದ ಬಾಹ್ಯಾಕಾಶ ಸಂಸ್ಥೆಗೆ ಸಲ್ಲುತ್ತದೆ. 2008 ರಲ್ಲಿ ಇಸ್ರೋ ಚಂದ್ರಯಾನ-1 ಉಡಾಯಿಸಿತ್ತು. ಚಂದ್ರಯಾನ-1 ತನ್ನೊಂದಿಗೆ ನಾಸಾ ಒದಗಿಸಿದ ಮೂನ್ ಮಿನರಲಾಜಿಕಲ್ ಮ್ಯಾಪರ್-ಎಂ3 ಎಂಬ ವೈಜ್ಞಾನಿಕ ಉಪಕರಣವನ್ನು ಹೊತ್ತೊಯ್ದಿತು. ಈ ಉಪಕರಣದಿಂದ ಹೊಮ್ಮಿದ ಚಿತ್ರಣಗಳು ನಾಸಾಕ್ಕೆ ಲಭಿಸಿದ್ದವು. ಬ್ರೌನ್ ವಿವಿಯ ಕಾರ್ಲಿ ಪೀಟರ್ಸ್ ಮತ್ತು ಮೇರಿಲ್ಯಾಂಡ್ ವಿವಿಯ ಜೆಸ್ಸಿಕಾ ಸನ್‌ಶೈನ್ ಎಂಬಿಬ್ಬರು ಮಹಿಳಾ ವಿಜ್ಞಾನಿಗಳು ಚಂದ್ರನಲ್ಲಿನ ನೀರಿನ ಅಂಶಗಳನ್ನು ವಿಶ್ಲೇಷಿಸಿ ಟಿಪ್ಪಣಿ ಬರೆದರು. ಭಾರತದ ಚಂದ್ರಯಾನ-1 ರಿಂದ ಚಂದ್ರನಲ್ಲಿ ನೀರಿನ ಅಂಶ ಪತ್ತೆ ಹಚ್ಚಲು ಸಾಧ್ಯವಾಯಿತು.
ಚಂದ್ರಯಾನ-2 ಏನಾಯ್ತು?
ಯಾರೂ ಮಾಡಿರದ ಐತಿಹಾಸಿಕ ಸಾಧನೆ ಮಾಡಲು ಮುಂದಾದ ಭಾರತ ಬಾಹ್ಯಾಕಾಶ ಮಿಷನ್ ಚಂದ್ರಯಾನ-2 ಆರಂಭಿಸಿತು. ಮೊಟ್ಟ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವ ವಲಯದಲ್ಲಿ ಲ್ಯಾಂಡ್ ಆಗಿ ಅನ್ವೇಷಣೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ 2019ರ ಜುಲೈ 22 ರಂದು ಚಂದ್ರಯಾನ-2ರ ಲ್ಯಾಂಡರ್ ವಿಕ್ರಮ್ ನಭಕ್ಕೆ ಹಾರಿತು. ಆದರೆ ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲವಾಯಿತು. ಸೆಪ್ಟೆಂಬರ್ 6 ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಅಪ್ಪಳಿಸಿತು. ಚಂದ್ರಯಾನ-2 ರ ಯಶಸ್ಸಿನ ನಿರೀಕ್ಷೆಯಲ್ಲಿದ್ದ ಇಸ್ರೋ ವಿಜ್ಞಾನಿಗಳು, ದೇಶದ ಜನತೆಗೆ ಅಂದು ನಿರಾಸೆಯಾಯಿತು. ಸುಮಾರು ಮೂರು ತಿಂಗಳ ನಂತರ ಅಮೆರಿಕದ NASA ಅದರ ಅವಶೇಷಗಳನ್ನು ಕಂಡುಹಿಡಿದಿದೆ. ಇದನ್ನೂ ಓದಿ: ಜಗತ್ತನ್ನು ಅಚ್ಚರಿಗೊಳಿಸಿದ ISRO – ಚಂದ್ರನ ಮೇಲ್ಮೈಯಲ್ಲಿ ದೊಡ್ಡ ಪ್ರಮಾಣದ ಸೋಡಿಯಂ ಪತ್ತೆಹಚ್ಚಿದ ಚಂದ್ರಯಾನ-2
ಪ್ರಧಾನಿಯನ್ನು ತಬ್ಬಿ ಕಣ್ಣೀರಿಟ್ಟಿದ್ದ ಇಸ್ರೋ ಅಧ್ಯಕ್ಷ
ಚಂದ್ರಯಾನ-2 ರ ಲ್ಯಾಂಡರ್‌ನ್ನು ಚಂದ್ರನಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಪ್ರಯತ್ನ ವಿಫಲವಾದ್ದರಿಂದ, ಭೂಕೇಂದ್ರದೊಂದಿಗಿನ ಲ್ಯಾಂಡರ್ ಸಂವಹನ ಕಡಿತಗೊಂಡಿತು. 2019ರ ಸೆಪ್ಟೆಂಬರ್ 7 ರ ರಾತ್ರಿ 2.30ಕ್ಕೆ ಈ ವಿಚಾರವನ್ನು ಘೋಷಣೆ ಮಾಡುವಾಗ ಆಗಿನ ಇಸ್ರೋ ಅಧ್ಯಕ್ಷ ಕೆ.ಶಿವನ್ ಗದ್ಗದಿತರಾದರು. ಚಂದ್ರಯಾನ-2 ಯಶಸ್ಸಿನ ನಿರೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿದ್ದರು. ಈ ವೇಳೆ ಮೋದಿ ಅವರನ್ನು ತಬ್ಬಿಕೊಂಡು ಶಿವನ್ ಅವರು ಗಳಗಳನೆ ಅತ್ತರು. ಆಗ ಪ್ರಧಾನಿ ಮೋದಿ ಅವರು ಇಸ್ರೋ ಅಧ್ಯಕ್ಷರನ್ನು ಸಂತೈಸಿದ ಪ್ರಸಂಗ ನಡೆಯಿತು.
ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ಭಾರತ
ಚಂದ್ರಯಾನ-2 ವೈಫಲ್ಯವನ್ನು ಗಮನದಲ್ಲಿಟ್ಟುಕೊಂಡು ಚಂದ್ರಯಾನ-3 ಯಶಸ್ಸಿಗೆ ಇಸ್ರೋ ಅಡಿಯಿಟ್ಟಿದೆ. ಜು.14 ರ ಮಧ್ಯಾಹ್ನ 2:35ಕ್ಕೆ ಚಂದ್ರಯಾನ-3 ಅನ್ನು ಎಲ್‌ವಿಎಂ3 ಮೂಲಕ ಉಡಾವಣೆಗೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದಾರೆ. ಚಂದ್ರಯಾನ-3 ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗವಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಗಗನನೌಕೆ ಇಳಿಸಲಾಗುವುದು. ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಕಕ್ಷೆಯಲ್ಲಿ 100 ಕಿಮೀವರೆಗೆ ಸಾಗಿಸುತ್ತದೆ.
4 ಕಿಮೀ ಉದ್ದ, 2 ಕಿಮೀ ಅಗಲದ ಪ್ರದೇಶದಲ್ಲಿ ಇಳಿಯುತ್ತೆ ನೌಕೆ
ಚಂದ್ರಯಾನ-3 ಗಗನನೌಕೆಯನ್ನು ಇಳಿಸಲು ಚಂದ್ರನ ಮೇಲ್ಮೈನಲ್ಲಿ ಜಾಗವನ್ನು ಗುರುತಿಸಲಾಗಿದೆ. ಚಂದ್ರನ ದಕ್ಷಿಣ ಧ್ರುವದ ಬಳಿಯ 4 ಕಿಮೀ ಉದ್ದ ಹಾಗೂ 2 ಕಿಮೀ ಅಗಲದ ಪ್ರದೇಶದಲ್ಲಿ ಗಗನನೌಕೆಯನ್ನು ಇಳಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದ್ದಾರೆ.
ಚಂದ್ರಯಾನ-2ರಂತಹ ಯಶಸ್ಸು ಆಧಾರಿತ ಯೋಜನೆಗೆ ಬದಲಾಗಿ, ಚಂದ್ರಯಾನ-3 ರಲ್ಲಿ ವೈಫಲ್ಯ ಆಧಾರಿತ ವಿನ್ಯಾಸವನ್ನು ಆರಿಸಿಕೊಳ್ಳಲಾಗಿದೆ. ಕಾರ್ಯಾಚರಣೆಯಲ್ಲಿ ವೈಫಲ್ಯಕ್ಕೆ ಕಾರಣವಾಗುವ ಅಂಶಗಳು ಯಾವುವು? ಅವುಗಳಿಂದ ಹೇಗೆ ರಕ್ಷಣೆ ಪಡೆಯಬೇಕು ಎಂಬುದರ ಕುರಿತು ಸೂಕ್ಷ್ಮವಾಗಿ ಪರಿಶೀಲನೆ ಮಾಡಲಾಗಿದೆ. ಚಂದ್ರಯಾನ-1 ಮತ್ತು 2ರಲ್ಲಿ ಇದ್ದಂತೆ ಚಂದ್ರಯಾನ-3ರಲ್ಲಿ ಆರ್ಬಿಟರ್ ಇರುವುದಿಲ್ಲ. ಲ್ಯಾಂಡರ್ ಮತ್ತು ರೋವರ್ ಹೊತ್ತ ಗಗನನೌಕೆಯು ಆಗಸ್ಟ್ 23 ರ ಸುಮಾರಿಗೆ ಚಂದ್ರನ ಕಕ್ಷೆಗೆ ತಲುಪಲಿದೆ. ನಂತರ 15 ದಿನಗಳಲ್ಲಿ ನೌಕೆ ಚಂದ್ರನಲ್ಲಿ ಇಳಿಯಲಿದೆ. ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲ್ಮೈಯಲ್ಲಿ ಕಾರ್ಯನಿರ್ವಹಿಸಲು ಮತ್ತು ಡೇಟಾವನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ನೌಕೆ ಚಂದ್ರನಲ್ಲಿ ಇಳಿದಾಗ ಲ್ಯಾಂಡರ್‌ನಿಂದ ರೋವರ್ ಬೇರ್ಪಟ್ಟು ಪ್ರಯೋಗ ನಡೆಸಿ, ಡೇಟಾವನ್ನು ಸಂಗ್ರಹಿಸಲು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತದೆ. ಚಂದ್ರನನ್ನು ಆವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಅಲ್ಲಿ ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದಲ್ಲಿನ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿನ ಧಾತುರೂಪದ ಸಂಯೋಜನೆ ಮುಂತಾದವುಗಳ ಅಧ್ಯಯನ ನಡೆಸಲಾಗುವುದು. ಇದನ್ನೂ ಓದಿ: ಮುಂದಿನ ವರ್ಷ ಇಸ್ರೋದಿಂದ ಚಂದ್ರಯಾನ-3
ಚಂದ್ರಯಾನ-2 ವಿಶೇಷತೆ ಏನು?
2019ರ ಚಂದ್ರಯಾನ-2 ಯೋಜನೆಯ ಗಗನನೌಕೆಯು ಒಟ್ಟು 3,872 ಕೆಜಿ ತೂಕ ಇತ್ತು. ಆರ್ಬಿಟರ್, ಲ್ಯಾಂಡರ್, ರೋವರ್‌ನ್ನು ಹೊತ್ತು ಸಾಗಿತ್ತು. ಆರ್ಬಿಟರ್ ತೂಕ 2,369 ಕೆಜಿ, ಲ್ಯಾಂಡರ್ ತೂಕ 1,477 ಕೆಜಿ, ರೋವರ್ 26 ಕೆಜಿ ತೂಕವಿತ್ತು. ಆರ್ಬಿಟರ್ ಜೀವಿತಾವಧಿ 1 ವರ್ಷದ ಯೋಜನೆಯಾಗಿತ್ತು (ಗರಿಷ್ಠ 7 ವರ್ಷ). ಲ್ಯಾಂಡರ್, ರೋವರ್‌ನದ್ದು 1 ಚಂದ್ರನ ದಿನ. ಲ್ಯಾಂಡಿಂಗ್‌ಗಾಗಿ 70.9 ಡಿಗ್ರಿ ದಕ್ಷಿಣ, 22.7 ಡಿಗ್ರಿ ಪೂರ್ವ ಸ್ಥಳ ಗುರುತಿಸಲಾಗಿತ್ತು. ಚಂದ್ರನಲ್ಲಿ ತಲುಪಲು ಗಗನನೌಕೆ ಒಟ್ಟು 48 ದಿನಗಳನ್ನು ತೆಗೆದುಕೊಂಡಿತ್ತು. ಉಡಾವಣೆಗೊಂಡ ನಂತರ ಭೂಮಿಯ ಸುತ್ತ 23 ದಿನಗಳು, ಭೂಮಿಯ ಗುರುತ್ವಾಕರ್ಷಣಾ ಬಲ ಕಳೆದುಕೊಂಡು ಚಂದ್ರನತ್ತ ಹೋಗಲು 7 ದಿನಗಳು, ಚಂದ್ರನ ಸುತ್ತಲು 13 ದಿನಗಳನ್ನು ತೆಗೆದುಕೊಂಡಿತು. ನಂತರ ಚಂದ್ರನ ಮೇಲೆ ಲ್ಯಾಂಡ್ ಆಗಿ ಲ್ಯಾಂಡರ್‌ನಿಂದ ಪ್ರತ್ಯೇಕಗೊಂಡು ಮುಂದೆ ಸಾಗಲು 5 ದಿನ ತೆಗೆದುಕೊಂಡಿತು.
ಚಂದ್ರಯಾನ-3 ವಿಶೇಷತೆ ಏನು?
2023ರ ಚಂದ್ರಯಾನ-3 ಗಗನನೌಕೆಯು ಪ್ರೊಪಲ್ಷನ್ ಮಾಡ್ಯೂಲ್, ಲ್ಯಾಂಡರ್, ರೋವರ್ ಹೊತ್ತೊಯ್ಯಲಿದೆ. ಇದರ ಒಟ್ಟು ತೂಕ 3,926 ಕೆಜಿ ಇದೆ. ಪ್ರೊಪಲ್ಷನ್ ಮಾಡ್ಯೂಲ್ ತೂಕವು 2,148 ಕೆಜಿ, ಲ್ಯಾಂಡರ್ (ರೋವರ್ ಸಹಿತ) 1,752 ಕೆಜಿ, ರೋವರ್ 26 ಕೆಜಿ ತೂಕವಿದೆ. ಪ್ರೊಪಲ್ಷನ್ ಮಾಡ್ಯೂಲ್ 3 ರಿಂದ 6 ತಿಂಗಳ ಜೀವಿತಾವಧಿ ಹೊಂದಿದೆ. ಲ್ಯಾಂಡರ್, ರೋವರ್ ಜೀವಿತಾವಧಿ 1 ಚಂದ್ರನ ದಿನ ಇರಲಿದೆ (ಚಂದ್ರನ ಹಗಲಿನಲ್ಲಿ ಚಾರ್ಜ್ ಆಗಲಿದೆ). ಈ ನೌಕೆ ಚಂದ್ರನಲ್ಲಿ ತಲುಪಲು 42 ದಿನಗಳನ್ನು ತೆಗೆದುಕೊಳ್ಳಲಿದೆ. ಲ್ಯಾಂಡಿಂಗ್‌ಗಾಗಿ 69.36 ಡಿಗ್ರಿ ದಕ್ಷಿಣ, 32.34 ಡಿಗ್ರಿ ಪೂರ್ವ ಸ್ಥಳವನ್ನು ಗುರುತಿಸಲಾಗಿದೆ. ಇದು ಚಂದ್ರಯಾನ-2 ಗೆ ಗುರುತಿಸಿದ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿದೆ. ಇದನ್ನೂ ಓದಿ: ಮಂಗಳೂರಿಗೆ ಬಂದ ಚಂದ್ರಯಾನಿ- ವಿಡಿಯೋ ವೈರಲ್
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಚಂದ್ರಯಾನ-2 (Chandrayaan-2) ಬಾಹ್ಯಾಕಾಶ (Space) ಸಂಶೋಧನೆಯಲ್ಲಿ ದೊಡ್ಡ ಯಶಸ್ಸು ಗಳಿಸಿದೆ. ಚಂದ್ರಯಾನ-2 ಚಂದ್ರನ ಮೇಲ್ಮೈಯಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಸೋಡಿಯಂ (Sodium) ಅನ್ನು ಪತ್ತೆ ಮಾಡಿದ್ದು, ಈ ಯಶಸ್ಸು ಚಂದ್ರನ (Moon) ಮೇಲೆ ಸೋಡಿಯಂ ಪ್ರಮಾಣವನ್ನು ಕಂಡುಹಿಡಿಯುವ ಭರವಸೆಯನ್ನೂ ಮೂಡಿಸಿದೆ.
ಚಂದ್ರಯಾನ-2 ಆರ್ಬಿಟರ್‌ನಲ್ಲಿ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ‘ಕ್ಲಾಸ್’ ಮೊದಲ ಬಾರಿಗೆ ಚಂದ್ರನ ಮೇಲೆ ಹೇರಳವಾಗಿರುವ ಸೋಡಿಯಂ ಅನ್ನು ಮ್ಯಾಪ್ ಮಾಡಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಹೊಸ ಸಂಶೋಧನೆಗಳು ನಮ್ಮ ಸೌರವ್ಯೂಹದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುವ ಚಂದ್ರನ ಮೇಲ್ಮೈ-ಎಕ್ಸೋಸ್ಪಿಯರ್ ಸಂವಹನಗಳನ್ನು ಅಧ್ಯಯನ ಮಾಡಲು ಅವಕಾಶವನ್ನು ಒದಗಿಸುತ್ತದೆ. ಇದನ್ನೂ ಓದಿ: ವಾಯುಪಡೆಗೆ ಶಸ್ತ್ರಾಸ್ತ್ರ ವ್ಯವಸ್ಥೆ ಶಾಖೆ – ಮುಂದಿನ ವರ್ಷದಿಂದ ಮಹಿಳಾ ಅಗ್ನಿವೀರರು ಸೇರ್ಪಡೆ
ಯು.ಆರ್ ರಾವ್ ಉಪಗ್ರಹ (U.R Rao Satellite) ಕೇಂದ್ರದಲ್ಲಿ ನಿರ್ಮಿಸಲಾದ ಲಾರ್ಜ್ ಏರಿಯಾ ಸಾಫ್ಟ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಅಥವಾ ಚಂದ್ರಯಾನ-2 ವರ್ಗವು ಚಂದ್ರನ ಮೇಲ್ಮೈಯಲ್ಲಿ ಸೋಡಿಯಂನ ಸ್ಪಷ್ಟ ಸೂಚನೆಗಳನ್ನು ನೀಡಿದೆ ಎಂದು ಬಾಹ್ಯಾಕಾಶ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಒಂದು ಅಧ್ಯಯನದ ಪ್ರಕಾರ, ಚಂದ್ರನ ಮೇಲೆ ಸೋಡಿಯಂ ಇರುವ ಸೂಚನೆಗಳು ಬಹುಶಃ ಸೋಡಿಯಂ ಪರಮಾಣುಗಳ ತೆಳುವಾದ ಪದರದಿಂದ ಹುಟ್ಟಿಕೊಳ್ಳಬಹುದು, ಇದು ಚಂದ್ರನ ಕಣಗಳಿಗೆ ದುರ್ಬಲವಾಗಿ ಜೋಡಿಸಲ್ಪಟ್ಟಿರುತ್ತದೆ. ಈ ಸೋಡಿಯಂ ಪರಮಾಣುಗಳನ್ನು ಸೌರ ಮಾರುತ ಅಥವಾ ನೇರಳಾತೀತ ವಿಕಿರಣದ ಮೂಲಕ ಚಂದ್ರನ ಮೇಲ್ಮೈಯಿಂದ ಸುಲಭವಾಗಿ ಹೊರಹಾಕಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಆನ್‌ಲೈನ್ ಗೇಮ್ಸ್ ಬ್ಯಾನ್? – ಶೀಘ್ರದಲ್ಲಿ ಸರ್ಕಾರದಿಂದ ಆದೇಶ ಸಾಧ್ಯತೆ
ಸೋಡಿಯಂ ಕಂಡುಬರುವ ಮೇಲ್ಮೈಯನ್ನು ಎಕ್ಸೋಸ್ಪಿಯರ್ ಎಂದು ಕರೆಯಲಾಗುತ್ತದೆ. ಈ ಪ್ರದೇಶವು ಚಂದ್ರನ ಮೇಲ್ಮೈಯಿಂದ ಪ್ರಾರಂಭವಾಗುತ್ತದೆ ಮತ್ತು ಸಾವಿರಾರು ಕಿಲೋಮೀಟರ್‌ಗಳವರೆಗೆ ವಿಸ್ತರಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೊಸ ಸಂಶೋಧನೆಗಳ ಆಧಾರದ ಮೇಲೆ ಇದನ್ನು ಅಧ್ಯಯನ ಮಾಡಬಹುದು, ಇದು ಚಂದ್ರನ ಮೇಲ್ಮೈ ಮತ್ತು ನಮ್ಮ ಸೌರವ್ಯೂಹದ ಮೇಲೆ ಇನ್ನೇನು ಇದೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ನವದೆಹಲಿ: ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರಯಾನಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, 2024ರ ವೇಳೆಗೆ ಶುಕ್ರಗ್ರಹಕ್ಕೆ ಇಸ್ರೋದಿಂದ ನೌಕೆಯೊಂದು ಹಾರಲಿದೆ. ತಪ್ಪಿದರೆ, 2031ಕ್ಕೆ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.
ಸಾಂದರ್ಭಿಕ ಚಿತ್ರ
ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿರುವ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭಾರತ ಪೈಪೋಟಿ ನೀಡಲು ಮುಂದಾಗಿದೆ. ಭೂಮಿಯ ಒಂದು ಪಕ್ಕದಲ್ಲಿ ಮಂಗಳ ಗ್ರಹವಿದ್ದರೆ, ಇನ್ನೊಂದು ಪಕ್ಕದಲ್ಲಿ ಶುಕ್ರಗ್ರಹವಿದೆ. ಮಂಗಳನ ಅಂಗಳಕ್ಕೆ ಈಗಾಗಲೇ ಇಸ್ರೊ? ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿ ಅಧ್ಯಯನ ಕೈಗೊಂಡಿದೆ. ಅಲ್ಲೂ ಮನುಷ್ಯರು ವಾಸಿಸಲು ಯೋಗ್ಯವೇ ಇಲ್ಲವೇ ಎಂಬ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು?
ಸಾಂದರ್ಭಿಕ ಚಿತ್ರ
ಹೇಗಿದೆ ಶುಕ್ರಗ್ರಹದ ವಾತಾವರಣ?: ಈಗ ಶುಕ್ರಗ್ರಹಕ್ಕೆ ತನ್ನ ನೌಕೆ ಕಳುಹಿಸಿ ಅಲ್ಲಿನ ವಾತಾವರಣವನ್ನು ಅಧ್ಯಯನ ನಡೆಸಲು ಮುಂದಾಗಿದೆ. ಶುಕ್ರಗ್ರಹದಲ್ಲಿ ಸಲ್ಫರಿಕ್ ಆ್ಯಸಿಡ್‌ನ ಮೋಡಗಳು ಕವಿದಿರುತ್ತವೆ. ಅಲ್ಲಿನ ವಾತಾವರಣ ವಿಷಯುಕ್ತವಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ವಾತಾವರಣವನ್ನು ಇನ್ನಷ್ಟು ನಿಖರವಾಗಿ ತಿಳಿಯಲು ಹಾಗೂ ಇಲ್ಲಿ ಜ್ವಾಲಾಮುಖಿಗಳು, ಲಾವಾರಸ, ಮಣ್ಣು ಇತ್ಯಾದಿಗಳನ್ನು ಅಧ್ಯಯನ ಮಾಡಲು ಇಸ್ರೋ ಶುಕ್ರಯಾನ ಸಹಕಾರಿಯಾಗಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ
ಸಾಂದರ್ಭಿಕ ಚಿತ್ರ
ಹಲವು ವರ್ಷಗಳ ಸಿದ್ಧತೆ: ಹಲವು ವರ್ಷಗಳಿಂದ ಸಿದ್ಧತೆ ಪ್ರಾರಂಭಿಸಿದ್ದ ಇಸ್ರೋ ಶುಕ್ರಯಾನದ ಮಹತ್ವದ ಯೋಜನೆ ಈಗ ಯೋಜನೆ ಸಿದ್ಧಗೊಂಡಿದೆ. ಈ ಕುರಿತು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅಧ್ಯಕ್ಷತೆಯಲ್ಲಿ ಶುಕ್ರಗ್ರಹ ಅಧ್ಯಯನ ತಂಡದ ವಿಜ್ಞಾನಿಗಳ ಜೊತೆ ಇತ್ತೀಚೆಗೆ ಸಭೆ ನಡೆದಿತ್ತು. ಸಭೆಯ ನಂತರ ಸೋಮನಾಥ್, ಈ ನಿರ್ಧಾರ ಪ್ರಕಟಿಸಿದ್ದರು. ಶುಕ್ರಯಾನಕ್ಕೆ ಹಣ ನಿಗದಿಪಡಿಸಿದ್ದು, ಸಾಕಷ್ಟು ಕಡಿಮೆ ಸಮಯದಲ್ಲಿ ಶುಕ್ರಯಾನ ನೌಕೆಯನ್ನು ಸಿದ್ಧಪಡಿಸುವ ಶಕ್ತಿ ನಮಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?
ನೌಕೆ ಉಡಾವಣೆ ಯಾವಾಗ? 2024ರ ಡಿಸೆಂಬರ್‌ನಲ್ಲಿ ಶುಕ್ರಗ್ರಹವು ಭೂಮಿಯ ಸಮೀಪದ ಕಕ್ಷೆಗೆ ಬರುತ್ತದೆ. ಆಗ ನೌಕೆಯನ್ನು ಶುಕ್ರಗ್ರಹದ ಕಕ್ಷೆಗೆ ತಳ್ಳುವುದಕ್ಕೆ ಕಡಿಮೆ ಶಕ್ತಿ ಸಾಕಾಗುತ್ತದೆ. ಹೀಗಾಗಿ ಆ ಸಮಯವನ್ನೆ? ಶುಕ್ರಯಾನ ನೌಕೆಯ ಉಡಾವಣೆಗೆ ಆಯ್ಕೆ ಮಾಡಿಕೊಳ್ಳಬೇಕು. 2024ನ್ನು ಬಿಟ್ಟರೆ ಮುಂದೆ 2031ರಲ್ಲಿ ಅಂತಹ ಅವಕಾಶ ಸಿಗುತ್ತದೆ ಎಂದು ಹೇಳಿರುವ ಇಸ್ರೋ 2024ರಲ್ಲೇ ಶುಕ್ರಯಾನ ಕೈಗೊಳ್ಳುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.
ಸಾಂದರ್ಭಿಕ ಚಿತ್ರ
ಅಮೆರಿಕ, ಯುರೋಪ್‌ನಿಂದ ಯೋಜನೆ: ಅಮೆರಿಕದ ನಾಸಾ ಮತ್ತು ಯುರೋಪಿಯನ್ ಯೂನಿಯನ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿವೆ. ಅವುಗಳ ಬೆನ್ನಲ್ಲೇ ಶುಕ್ರನ ಸುತ್ತ ಸುತ್ತುವ 3ನೇ ನೌಕೆ ಭಾರತದ್ದಾಗಿರಲಿದೆ. ಅಮೆರಿಕವು ಶುಕ್ರಯಾನಕ್ಕೆ 1 ಬಿಲಿಯನ್ ಡಾಲರ್ (ಸುಮಾರು 7500 ಕೋಟಿ ರೂ.) ಹಣ ಮೀಸಲಿಟ್ಟಿದೆ.
ಚೆನ್ನೈ: ಬಹು ನಿರೀಕ್ಷಿತ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಪತನಗೊಂಡ ನಂತರ ಹೇಗಾಯಿತು, ಏನಾಯಿತು ಎಂಬುದರ ಕುರಿತು ಇಸ್ರೋ, ನಾಸಾ ವಿಜ್ಞಾನಿಗಳು ಸಂಶೋಧನೆ ಕೈಗೊಂಡಿದ್ದರು. ಆದರೆ ಕಂಡು ಹಿಡಿಯುವುದು ಕಷ್ಟದ ಕೆಲಸವಾಗಿತ್ತು. ಇದೀಗ ನಾಸಾ ವಿಕ್ರಮ್ ಲ್ಯಾಂಡರ್ ನ ತ್ಯಾಜ್ಯ ಪತ್ತೆ ಹಚ್ಚಿದ್ದು, ವಿಶೇಷವೆಂದರೆ ನಾಸಾಗೆ ತಮಿಳುನಾಡಿನ ಎಂಜಿನಿಯರ್ ಸಹಾಯ ಮಾಡಿದ್ದಾರೆ.
ಈ ಕುರಿತು ಸ್ವತಃ ನಾಸಾ ಸ್ಪಷ್ಟಪಡಿಸಿದ್ದು, ತಮಿಳುನಾಡಿನ 33 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಷಣ್ಮುಗ ಸುಬ್ರಹ್ಮಣಿಯನ್ ಅವರ ಸಹಾಯದಿಂದ ನಾವು ವಿಕ್ರಮ್ ಲ್ಯಾಂಡರ್ ಪತನವಾಗಿರುವುದನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಹೇಳಿದೆ. ಪತ್ತೆ ಹಚ್ಚಲು ಸಹಕರಿಸಿದ್ದಕ್ಕೆ ಷಣ್ಮುಗ ಅವರಿಗೆ ಇ-ಮೇಲ್ ಮೂಲಕ ನಾಸಾ ಧನ್ಯವಾದ ತಿಳಿಸಿದೆ.
ಪ್ರತಿಷ್ಠಿತ ನಾಸಾ ಸಂಸ್ಥೆಯೇ ವಿಕ್ರಮ್ ಲ್ಯಾಂಡ್‍ನ ಸುಳಿವು ಕಂಡುಹಿಡಿಯಲು ವಿಫಲವಾಯಿತಲ್ಲ ಎಂಬ ವಿಷಯ ಷಣ್ಮುಗ ಅವರಲ್ಲಿ ಕುತೂಹಲ ಕೆರಳಿಸಿತು. ಹೀಗಾಗಿ ಈ ಕುರಿತು ಸಂಶೋಧನೆ ನಡೆಸಲು ಪ್ರಾರಂಭಿಸಿದರು. ಸಿಕ್ಕ ಮಾಹಿತಿಯನ್ನು ಇ-ಮೇಲ್ ಹಾಗೂ ಟ್ವಿಟ್ಟರ್ ಮೂಲಕ ನಾಸಾದೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದರು. ಇದು ನಾಸಾ ವಿಕ್ರಮ್ ಲ್ಯಾಂಡರ್ ಪತನವನ್ನು ಪತ್ತೆಹಚ್ಚಲು ಸಹಕಾರಿಯಾಯಿತು. ವಿಕ್ರಮ್ ಲ್ಯಾಂಡರ್ ಪತನದ ಕುರಿತು ಮೊದಲ ಬಾರಿಗೆ ಸಕಾರಾತ್ಮಕ ಗುರುತನ್ನು ಷಣ್ಮುಗ ಪತ್ತೆ ಹಚ್ಚಿ ನಾಸಾಗೆ ತಿಳಿಸಿದ್ದರು.
ನಾನು ಪದೇ ಪದೆ ವಿಕ್ರಮ್ ಲ್ಯಾಂಡರ್ ಪತನವಾಗಿದ್ದ ಸ್ಥಳದ ಹಳೆಯ ಚಿತ್ರಗಳು ಹಾಗೂ ನಾಸಾ ಹೊಸತಾಗಿ ಬಿಡುಗಡೆ ಮಾಡಿದ ಚಿತ್ರಗಳನ್ನು ಹೋಲಿಕೆ ಮಾಡಿ ನೋಡುತ್ತಿದ್ದೆ. ಇದನ್ನು ನಾನು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್ ಹಾಗೂ ರೆಡ್ಡಿಟ್ ಮೂಲಕ ಹಂಚಿಕೊಳ್ಳುತ್ತಿದ್ದೆ ಎಂದು ಷಣ್ಮುಗ ಮಾಹಿತಿ ನೀಡಿದ್ದಾರೆ.
ವಿಕ್ರಮ್ ಲ್ಯಾಂಡರ್ ಕುರಿತ ಸುಳಿವನ್ನು ಕಂಡುಹಿಡಿಯುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಆದರೂ ನಾನು ಪ್ರಯತ್ನವನ್ನು ಬಿಡಲಿಲ್ಲ. ಅಂತಿಮವಾಗಿ ನಾನು ಸಂಶೋಧಿಸಿದ ಚಿತ್ರಗಳನ್ನು ಅಕ್ಟೋಬರ್ 3ರಂದು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನಾನು ನೀಡಿದ ಸುಳಿವಿನ ಆಧಾರದ ಮೇಲೆ ಅದೇ ಸ್ಥಳದಲ್ಲಿ ನಾಸಾ ಹೆಚ್ಚು ಹುಡುಕಾಟವನ್ನು ನಡೆಸಿತು. ಕಂಡುಹಿಡಿದ ಎರಡು ತಿಂಗಳ ನಂತರ ಅಧಿಕೃತವಾಗಿ ನಾಸಾ ಘೋಷಣೆ ಮಾಡಿತು. ಸಾರ್ವಜನಿಕರ ಮುಂದೆ ಮಾಹಿತಿ ಹಂಚಿಕೊಳ್ಳುವುದಕ್ಕೂ ಮುನ್ನ ಅವರು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳುತ್ತಾರೆ. ಹೀಗಾಗಿ ತಡವಾಗಿ ಘೋಷಣೆ ಮಾಡಿದೆ. ಹೀಗಾಗಿ ನಾನೂ ಅದೇ ರೀತಿ ಮಾಡಿದೆ ಎಂದು ಷಣ್ಮುಗ ತಿಳಿಸಿದರು.
@NASA@LRO_NASA@isro This might be Vikram lander's crash site (Lat:-70.8552 Lon:21.71233 ) & the ejecta that was thrown out of it might have landed over here https://t.co/8uKZv7oXQa (The one on the left side was taken on July 16th & one on the right side was from Sept 17) pic.twitter.com/WNKOUy2mg1
ಚಂದ್ರಯಾನ-2 ಮಿಷನ್ ಯಶಸ್ವಿಯಾಗಿದೆ ಎಂದು ನಾನು ಭಾವಿಸುತ್ತೇನೆ. ವಿಕ್ರಮ್ ಲ್ಯಾಂಡರ್ ಕ್ರ್ಯಾಶ್ ಆಗಿದ್ದು ದುರಂತ. ಆದರೆ ಜನ ಇಸ್ರೋ ಹಾಗೂ ವಿಕ್ರಮ್ ಲ್ಯಾಂಡರ್ ಬಗ್ಗೆ ಹೆಚ್ಚು ಚರ್ಚೆ ಮಾಡುವಂತಾಯಿತು, ಸಂಶೋಧನೆಗೆ ತೊಡಗುವಂತೆ ಮಾಡಿತು. ಅದೇ ಇದರ ಸಕಾರಾತ್ಮಕತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಸಾ ನನ್ನ ಕೊಡುಗೆಯನ್ನು ಸ್ವೀಕರಿಸಿದ್ದಕ್ಕೆ ಸಂತೋಷವಾಗಿದೆ. ನನ್ನ ಸಂಶೋಧನೆಗಾಗಿ ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‍ಆರ್‍ಒ) ಚಿತ್ರಗಳನ್ನು ಬಳಸಿದ್ದೆ. ನಂತರ ಎಲ್‍ಆರ್‍ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದ್ದೆ. ಚಂದ್ರನಲ್ಲಿ ಈ ತ್ಯಾಜ್ಯವನ್ನು ಹುಡುಕುವುದು ತುಂಬಾ ಕಷ್ಟದ ಕೆಲಸ, ನಾನು ಕೇವಲ ಒಂದು ತುಂಡು ತ್ಯಾಜ್ಯವನ್ನು ಮಾತ್ರ ಪತ್ತೆಹಚ್ಚಿದ್ದೆ ಎಂದು ವಿವರಿಸಿದ್ದಾರೆ.
ನಾಸಾದಿಂದ ಚಿತ್ರ ಬಿಡುಗಡೆ
ಇಸ್ರೋ ಕನಸಿನ ಕೂಸಾಗಿದ್ದ ಚಂದ್ರಯಾನ 2ರ ವಿಕ್ರಮ್ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾದ ಪತ್ತೆ ಹಚ್ಚಿದ್ದು, ಪತನವಾದ ಸ್ಥಳದ ಫೋಟೋವನ್ನು ನಾಸಾ ಹಂಚಿಕೊಂಡಿದೆ.
ನಾಸಾದ ಲೂನಾರ್ ರೆಕನೈಸನ್ಸ್ ಆರ್ಬಿಟರ್(ಎಲ್‍ಆರ್‍ಒ) ಮೂಲಕ ತೆಗೆದ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದು, ಅದು ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳವನ್ನು ಮತ್ತು ಅದಕ್ಕೆ ಸಂಬಂಧಿತ ಶಿಲಾಖಂಡರಾಶಿಗಳ ಕ್ಷೇತ್ರವನ್ನು ಪತ್ತೆಮಾಡಿದೆ. ಅಲ್ಲದೆ ವಿಕ್ರಮ್ ಲ್ಯಾಂಡರ್ ನ ಭಾಗಗಳು ಹಲವಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು ಎರಡು ಡಜನ್ ಸ್ಥಳಗಳಲ್ಲಿ ಹರಡಿಕೊಂಡಿವೆ ಎಂದು ತಿಳಿಸಿದೆ.
ಸೆ. 26ರಂದು ನಾಸಾ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದ ಮೊಸಾಕ್ ಚಿತ್ರವನ್ನು ಬಿಡುಗಡೆ ಮಾಡಿತ್ತು. ಷಣ್ಮುಗ ಸುಬ್ರಹ್ಮಣ್ಯಂ ಅವರು ಎಲ್‍ಆರ್‍ಒ ಯೋಜನೆಯನ್ನು ಶಿಲಾಖಂಡಗಳ ಸಕಾರಾತ್ಮಕ ಗುರುತುಗಳೊಂದಿಗೆ ಸಂಪರ್ಕಿಸಿದರು. ಆಗ ವಿಕ್ರಮ್ ಲ್ಯಾಂಡರ್ ಪತನಗೊಂಡ ಸ್ಥಳದಿಂದ ವಾಯುವ್ಯ ದಿಕ್ಕಿನಲ್ಲಿ ಸುಮಾರು 750 ಮೀ. ದೂರದಲ್ಲಿ ಅದರ ಕೆಲ ಭಾಗಗಳು ಪತ್ತೆಯಾಗಿತ್ತು ಎಂದು ನಾಸಾ ಹೇಳಿದೆ.
3.84 ಲಕ್ಷ ಕಿ.ಮೀ ಕ್ರಮಿಸಿ ಚಂದ್ರನ ಅಂಗಳ ತಲುಪಬೇಕಿದ್ದ ಲ್ಯಾಂಡರ್ ನಿಗದಿತ ಪಥದಲ್ಲೇ ಸಾಗುತಿತ್ತು. ಕೌಂಟ್ ಡೌನ್ ಆರಂಭಗೊಂಡ ಬಳಿಕ ಲ್ಯಾಂಡರ್ ನಿಗದಿತ ಪಥದಲ್ಲಿ ಹೋಗುವುದನ್ನು ಗಮನಿಸಿದ ವಿಜ್ಞಾನಿಗಳು ಸಂತೋಷದಲ್ಲಿದ್ದರು. ಸೆಪ್ಟೆಂಬರ್ 7ರ ನಸುಕಿನ ಜಾವ 1.50ರ ವೇಳಗೆ ಚಂದ್ರನ ದಕ್ಷಿಣ ಧ್ರುವದಿಂದ 2.1 ಕಿ.ಮೀ ಎತ್ತರದಲ್ಲಿದ್ದಾಗ ಸಂಪರ್ಕ ಕಳೆದುಕೊಂಡಿತ್ತು.
ನ್ಯೂಯಾರ್ಕ್: ಚಂದ್ರನ ಮೇಲೆ ಚಂದ್ರಯಾನ-2ರ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್ ಫೋಟೋಗಳನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಬಿಡುಗಡೆಗೊಳಿಸಿದೆ. ಇಸ್ರೋದಿಂದ ಅನುಮತಿ ಪಡೆದು ನಾಸಾ ವಿಕ್ರಂ ಲ್ಯಾಂಡರ್ ಪತ್ತೆಗೆ ಮುಂದಾಗಿತ್ತು. ಇದೀಗ ನಾಸಾ ತನ್ನ ವರದಿಯನ್ನು ನೀಡಿದೆ.
ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಯ ಮೇಲೆ ಹಾರ್ಡ್ ಲ್ಯಾಂಡಿಂಗ್ ಮಾಡಿದೆ ಎಂದು ತಿಳಿಸಿ ಅಲ್ಲಿಯ ಕೆಲ ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ರಾತ್ರಿ ಆಗಿದ್ದರಿಂದ ನಿಖರವಾಗಿ ವಿಕ್ರಂ ಲ್ಯಾಂಡರ್ ಎಲ್ಲಿ ಸ್ಪರ್ಶವಾಗಿದೆ ಎಂಬುವುದು ತಿಳಿದು ಬಂದಿಲ್ಲ. ಚಂದ್ರನ ಮೇಲೆ ನೆರಳು ಆವರಿಸಿದ್ದರಿಂದ ವಿಕ್ರಂ ಲ್ಯಾಂಡರ್ ಮರೆಯಾಗಿದೆ ಎಂದು ನಾಸಾ ಹೇಳಿದೆ.
ಅಕ್ಟೋಬರ್ ನಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಬೆಳಕು ಬರಲಿದೆ. ನಾಸಾ ಮತ್ತೊಮ್ಮೆ ತನ್ನ ಲೂನಾರ್ ರಿಕಾನೆಸ್ ಆರ್ಬಿಟರ್ (ಎಲ್‍ಆರ್‍ಓ) ಕ್ಯಾಮೆರಾ ಮೂಲಕ ವಿಕ್ರಂ ಲ್ಯಾಂಡರ್ ಸ್ಥಳ ಮತ್ತು ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸಲಿದೆ. ಮೊದಲಿಗೂ ನಾಸಾ ಈ ಪ್ರಯತ್ನ ಮಾಡಿದ್ದು, ಸಫಲವಾಗಿಲ್ಲ. ಹಾರ್ಡ್ ಲ್ಯಾಂಡಿಂಗ್ ಪರಿಮಾಣ ವಿಕ್ರಂ ಲ್ಯಾಂಡರ್ ವಕ್ರವಾಗಿದ್ದು, ಮುರಿದಿಲ್ಲ. ಇಸ್ರೋ ಸಹ ಸೆಪ್ಟೆಂಬರ್ 21ರವರೆಗೆ ವಿಕ್ರಂ ಸಂಪರ್ಕಿಸಲು ಪ್ರಯತ್ನಿಸಿತ್ತು.
Our @LRO_NASA mission imaged the targeted landing site of India’s Chandrayaan-2 lander, Vikram. The images were taken at dusk, and the team was not able to locate the lander. More images will be taken in October during a flyby in favorable lighting. More: https://t.co/1bMVGRKslppic.twitter.com/kqTp3GkwuM
#Chandrayaan2 Orbiter continues to perform scheduled science experiments to complete satisfaction. More details on https://t.co/Tr9Gx4RUHQ Meanwhile, the National committee of academicians and ISRO experts is analysing the cause of communication loss with #VikramLander
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಬಂದಿದ್ದೇ ಇಸ್ರೋಗೆ ಅಪಶಕುನ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಪ್ರಚಾರಕ್ಕಾಗಿ ಚಂದ್ರಯಾನ್-2ನ ವಿಕ್ರಂ ಲ್ಯಾಂಡರ್ ಚಂದ್ರಸ್ಪರ್ಶದ ವೇಳೆ ಇಸ್ರೋ ಕಚೇರಿಗೆ ಬಂದಿದ್ದರು. ಈ ಸಾಧನೆಯನ್ನು ತಾವೇ ಮಾಡಿದ್ದಾಗಿ ಬಿಂಬಿಸುವುದಕ್ಕೆ ಬಂದಿದ್ದರು. ಆದರೆ ಅಲ್ಲಿ ಅವರು ಕಾಲಿಟ್ಟಿದ್ದು ಇಸ್ರೋ ವಿಜ್ಞಾನಿಗಳಿಗೆ ಎಲ್ಲೋ ಒಂದು ಕಡೆ ಅಪಶಕುನ ಉಂಟಾಯಿತೋ ಏನೋ ಗೊತ್ತಿಲ್ಲ. ವಿಕ್ರಂ ಲ್ಯಾಂಡರ್ ಸರಿಯಾಗಿ ಲ್ಯಾಂಡ್ ಆಗಲಿಲ್ಲ ಎಂದು ಹೇಳಿದ್ದಾರೆ.
ರಾಜ್ಯಕ್ಕೆ ಪ್ರವಾಹ ಪರಿಹಾರ ಕಲ್ಪಿಸದ ಪ್ರಧಾನಿ ಮೋದಿ ರಷ್ಯಾಗೆ ಸಾಲ ಕೊಡುತ್ತಾರೆ. ಮೋದಿ ಅವರ ಮುಂದೆ ಮಾತನಾಡುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಹೆದರುತ್ತಾರೆ ಎಂದು ಹೇಳುವಾಗ ಈ ರೀತಿ ವಿವಾದ ಮೇಲೆ ಎಳೆದುಕೊಂಡಿದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ, ಅವರಉ ವಸತಿ ಇಲಾಖೆ ಸಚಿವರಾ? ದಸರಾ ಮಾಡುವ ಸಚಿವರಾ? ನೆರೆ ಸಂತ್ರಸ್ತರ ನೆರವಿಗೆ ವಸತಿ ಸಚಿವರು ಹೋಗುತ್ತಿಲ್ಲ. ದಸರಾ ಮಾಡಲು ಒಬ್ಬ ಮಂತ್ರಿ ಇಷ್ಟು ಸಭೆ, ಇಷ್ಟು ಮುತುರ್ಜಿ ವಹಿಸಿರುವುದು ಇದೇ ಮೊದಲು. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಯೋಚಿವುದನ್ನು ಬಿಟ್ಟು ದಸರಾ ದಸರಾ ಅಂತ ಕೂತಿದ್ದಾರೆ. ವಸತಿ ಸಚಿವರು ಖುದ್ದಾಗಿ ದಸರಾ ಸಿದ್ಧತೆ ಮಾಡುವ ಹಾಗೂ ಕೆಲವರಿಗೆ ಹೋಳಿಗೆ ಊಟ ಹಾಕಿಸಿಕೊಂಡು ಸಭೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.
ಇಂದಿನ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ಇದ್ದಿದ್ದರೆ ಎಲ್ಲಿದಿಯಪ್ಪ ಕುಮಾರ ಅಂತ ಹೇಳುತ್ತಿದ್ದರು. ಆದರೆ ಇವರು ಮಾತ್ರ ಏನೂ ಮಾಡದೆ ಸುಮ್ಮನಿದ್ದಾರೆ. ಬಾದಾಮಿಯಲ್ಲಿ ರಸ್ತೆಯಲ್ಲಿ ಶೆಡ್ ಹಾಕಿದ್ದಾರೆ. ಅದನ್ನ ನಮ್ಮ ಅಭ್ಯರ್ಥಿಯಾಗಿದ್ದವರ ಬಳಿ ವರದಿ ಕೇಳಿದ್ದೇನೆ. ಮಾಜಿ ಸಿದ್ದರಾಮಯ್ಯ ಹಾಗೂ ಸರ್ಕಾರ ಹೋದರೂ ಏನು ಆಗಿಲ್ಲ ಅಂತ ಮಾಧ್ಯಮದಲ್ಲಿ ನೋಡಿದ್ದೇನೆ. ಹಾಗಾಗಿ ಮಾಹಿತಿ ತರಿಸಿಕೊಂಡು ನಾನೇ ಸ್ಥಳಕ್ಕೆ ಹೋಗಬೇಕು ಅಂತ ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
– 2.1 ಕಿ.ಮೀ ಅಲ್ಲ 400 ಮೀ. ಅಂತರದಲ್ಲಿ ಮಿಸ್ ಆದ ವಿಕ್ರಮ್
ಬೆಂಗಳೂರು: ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಸಂಪರ್ಕಕ್ಕೆ ಇಸ್ರೋ ಪ್ರಯತ್ನಿಸುತ್ತಿದ್ದು, ಅಮೆರಿಕಾದ ನಾಸಾ ಸಹ ವಿಕ್ರಮ್ ಗೆ ಸಂದೇಶ ರವಾನಿಸಿದೆ. ಈ ಮೂಲಕ ವಿಕ್ರಮ್ ಸಂಪರ್ಕಕ್ಕೆ ನಾಸಾ ಸಹ ಮುಂದಾಗಿದೆ. ಈ ಮೊದಲು ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ 2.1 ಕಿ.ಮೀ. ಅಂತರದಲ್ಲಿ ಸಂಪರ್ಕ ಕಳೆದುಕೊಂಡಿತ್ತು ಎಂದು ಹೇಳಲಾಗಿತ್ತು. ಆದ್ರೆ ಕೇವಲ 400 ಮೀ. ಅಂತರದಲ್ಲಿ ವಿಕ್ರಮ್ ಸಂಪರ್ಕ ಕಳೆದುಕೊಂಡಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಸೆಪ್ಟೆಂಬರ್ 7ರಂದು ಚಂದ್ರನ ಮೇಲ್ಮೈ ಸ್ಪರ್ಶಿಸಬೇಕಿದ್ದ ವಿಕ್ರಮ್ ಲ್ಯಾಂಡರ್ ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಇಸ್ರೋ ವಿಜ್ಞಾನಿಗಳು ಆರ್ಬಿಟರ್ ಮೂಲಕ ವಿಕ್ರಮ್ ಸಂಪರ್ಕಿಸುವ ಪ್ರಯತ್ನವನ್ನು ಮುಂದುವರಿಸಿದ್ದಾರೆ. ಇತ್ತ ನಾಸಾ ತನ್ನ ಡಿಪ್ ಸ್ಪೇಸ್ ನೆಟ್‍ವರ್ಕ್ (ಡಿಎಸ್‍ಎನ್)ನ ಜೆಟ್ ಪ್ರಪೊಲ್ಷನ್ ಲ್ಯಾಬ್ರೋಟರಿ (ಜೆಪಿಎಲ್) ಮೂಲಕ ವಿಕ್ರಮ್ ಲ್ಯಾಂಡರ್ ಗೆ ರೇಡಿಯೋ ಸಂದೇಶವನ್ನು ಕಳುಹಿಸಿದೆ. ಇಸ್ರೋ ಒಪ್ಪಿಗೆ ನೀಡಿದ ಬಳಿಕ ನಾಸಾ ವಿಕ್ರಮ್ ಗೆ ರೇಡಿಯೋ ಸಂದೇಶವನ್ನು ಕಳುಹಿಸುವ ಮೂಲಕ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ವಿಕ್ರಮ್ ಲ್ಯಾಂಡರ್ ಸ್ಥಳದ ಮಾಹಿತಿ ಲಭ್ಯ: ಇಸ್ರೋ
14 ದಿನದಲ್ಲಿ ಸಿಗುತ್ತಾ ಸಂಪರ್ಕ?
ವಿಕ್ರಮ್ ಸಂಪರ್ಕ ಸಿಗುವ ನಿರೀಕ್ಷೆಗಳು ಕಡಿಮೆ ಆಗುತ್ತಿವೆ ಎನ್ನಲಾಗುತ್ತಿದೆ. ಚಂದ್ರನ ಮೇಲ್ಮೈನಲ್ಲಿದೆ ಎನ್ನಲಾಗಿರುವ ವಿಕ್ರಮ್ ನಿಗೆ ಕೇವಲ 14 ದಿನ ಮಾತ್ರ ಸೂರ್ಯ ಬೆಳಕು ಸಿಗಲಿದೆ. ಅಂದ್ರೆ 14 ದಿನಗಳವರೆಗೆ ಇಸ್ರೋ ಸಂಪರ್ಕ ಸಾಧಿಸಲು ಪ್ರಯತ್ನಿಸಬಹುದು. ಒಂದು ವೇಳೆ ವಿಕ್ರಮ್ ಲ್ಯಾಂಡರ್ ನಲ್ಲಿರುವ ಉಪಕರಣಗಳು ಹಾನಿಗೊಳಗಾದ್ರೆ ಸಂಪರ್ಕ ಸಾಧಿಸುವುದು ಕಷ್ಟವಾಗಲಿದೆ. ವಿಕ್ರಮ್ ಲ್ಯಾಂಡರ್ ಸಂಪರ್ಕ ಕಳೆದುಕೊಂಡು 6 ದಿನಗಳು ಕಳೆದಿವೆ. 14 ದಿನಗಳ ಬಳಿಕ ಅತಿ ದೊಡ್ಡ ರಾತ್ರಿಯ ದಿನ ಬರಲಿದೆ. ಒಂದು ವೇಳೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದರೂ ಈ ದಿನ ವಿಜ್ಞಾನಿಗಳು ಅತ್ಯಂತ ಕಷ್ಟವಾಗಿರುತಿತ್ತು. ಹಾಗಾಗಿ ಸೆಪ್ಟೆಂಬರ್ 21ರೊಳಗೆ ವಿಕ್ರಮ್ ಲ್ಯಾಂಡರ್ ಸಂಪರ್ಕಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನೂ ಓದಿ: ಅಂತಿಮ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡ ವಿಕ್ರಮ್ ಲ್ಯಾಂಡರ್ ನ ಕ್ಷಣಕ್ಷಣದ ಕೌತುಕ
ನಾಸಾ ಕ್ಯಾಲಿಫೋರ್ನಿಯಾದ ಅಂತರೀಕ್ಷ ಕೇಂದ್ರದಿಂದ ತನ್ನ ಡಿಎಸ್‍ಎನ್ ಮೂಲಕ ವಿಕ್ರಮ್ ನಿಗೆ ರೇಡಿಯೋ ಸಂದೇಶ ಕಳುಹಿಸಿದೆ. 12 ಕಿಲೋವ್ಯಾಟ್ ರೇಡಿಯೋ ಫ್ರಿಕ್ವಿನ್ಸಿ ಮೂಲಕ ವಿಕ್ರಮ್ ನನ್ನ ಸಂಪರ್ಕಿಸಲು ಡಿಎಸ್‍ಎನ್ ಸತತವಾಗಿ ಪ್ರಯತ್ನಿಸುತ್ತಿದೆ. ಲ್ಯಾಂಡರ್ ಗೆ ಸಿಗ್ನಲ್ ಕಳುಹಿಸಿದಾಗ ಚಂದ್ರ ಒಂದು ರೇಡಿಯೋ ರಿಫ್ಲೆಕ್ಟರ್ ರೀತಿ ಕೆಲಸ ಮಾಡುತ್ತದೆ. ಕಳುಹಿಸಿದ ಸಿಗ್ನಲ್ ಮಾದರಿಯನ್ನು ಭೂಮಿಗೂ ಕಳುಹಿಸುತ್ತದೆ. ಇದನ್ನೂ ಓದಿ: ವಿಕ್ರಮ್ ಸಂಪರ್ಕ ಕಡಿತಕ್ಕೆ ಎಕ್ಸ್ಟ್ರಾ ಬ್ರೇಕ್ ಕಾರಣ ಶಂಕೆ- ಇತ್ತ ನಾಸಾ ಶ್ಲಾಘನೆ
ಚಂದ್ರಯಾನ-2 ಮೇಲ್ಯಾಕೆ ನಾಸಾಗೆ ಆಸಕ್ತಿ?
ಚಂದ್ರಯಾನ-2 ಯೋಜನೆ ಬಗ್ಗೆ ನಾಸಾ ಹೆಚ್ಚು ಆಸಕ್ತಿಯನ್ನು ಹೊಂದಿದ್ದು, ಇಸ್ರೋದಿಂದ ಒಪ್ಪಿಗೆ ಪಡೆದ ಮರುಕ್ಷಣದಿಂದ ವಿಕ್ರಮ್ ಸಂಪರ್ಕಕ್ಕೆ ಪ್ರಯತ್ನಿಸುತ್ತಿದೆ. ವಿಕ್ರಮ್ ಮೇಲೆ ಪ್ಯಾಸಿವ್ ಪೆಲೋಡ್ ಲೇಸರ್ ರಿಫ್ಲೇಕ್ಟರ್ ಅಳವಡಿಸಲಾಗಿದೆ. ಇದರ ಮೂಲಕ ಲ್ಯಾಂಡರ್ ನಿಗದಿತ ಸ್ಥಳ ಮತ್ತು ಅಲ್ಲಿಯ ಮಾಹಿತಿ ಲಭ್ಯವಾಗಲಿದೆ. ಚಂದ್ರನ ದಕ್ಷಿಣ ಧ್ರುವ ಮತ್ತು ಭೂಮಿಯ ನಡುವಿನ ನಿಗದಿತ ಅಂತರ ತಿಳಿಯಲಿದೆ. ಇದರಿಂದ ನಾಸಾಗೆ ಭವಿಷ್ಯದ ಯೋಜನೆಗಳಿಗೆ ಹೆಚ್ಚು ಅನಕೂಲವಾಗಲಿದೆ.
ಚಂದ್ರಯಾನ-2ರ ಆರ್ಬಿಟರ್ 8 ಸುಧಾರಿತ ಪೇಲೋಡ್ ಒಳಗೊಂಡಿದ್ದರಿಂದ ಮಹತ್ವದ ಮಾಹಿತಿ ಮತ್ತು ಡೇಟಾ ಲಭ್ಯವಾಗಲಿದೆ. ಆರ್ಬಿಟರ್ ನಿಂದ ಸಿಕ್ಕಿರುವ ಚಂದ್ರನ 3ಡಿ ಮ್ಯಾಪಿಂಗ್ ಡೇಟಾಗಾಗಿ ನಾಸಾ ತುದಿಗಾಲಿನಲ್ಲಿ ನಿಂತಿದೆ. ಇದರ ಜೊತೆಗೆ ಈಗಾಗಲೇ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವದ ಹಲವು ಚಿತ್ರಗಳು, ವಾತಾವರಣದ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ. ಈ ಎಲ್ಲ ಮಾಹಿತಿಗಳು ನಾಸಾಗೆ ದೊರಕಿದ್ದಲ್ಲಿ, ಅದು ಕೈಗೊಂಡಿರುವ 2024ರ ಚಂದ್ರನ ದಕ್ಷಿಣ ಧ್ರುವ ತಲುಪುವ ಯೋಜನೆಯ ತಯಾರಿಗೆ ಸಹಾಯವಾಗಲಿದೆ. ದಕ್ಷಿಣ ಧ್ರುವದ ಫೋಟೋಗಳು ಲಭ್ಯವಾದ್ರೆ ನಾಸಾಗೆ ಹೆಚ್ಚು ಅನುಕೂಲವಾಗಲಿದೆ. ಇದನ್ನೂ ಓದಿ: ಭಾರತದ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಆಗುತ್ತಿದೆ: ಭೂತಾನ್ ಪ್ರಧಾನಿ
ಚೀನಾದಲ್ಲೂ ಅಧ್ಯಯನ:
ಭಾರತ ದಕ್ಷಿಣ ಧ್ರುವ ತಲುಪಲು ಪ್ರಯತ್ನ ನಡೆಸುತ್ತಿದೆ. ವಿಕ್ರಮ್ ಲ್ಯಾಂಡರ್ ಹಾರ್ಡ್ ಲ್ಯಾಂಡಿಂಗ್ ಪರಿಣಾಮ ಅಂತಿಮ ಕ್ಷಣದ ಕೆಲ ಮಾಹಿತಿ ಅಲಭ್ಯವಾಗಿದೆ. ಆದರೂ ಚಂದ್ರನಲ್ಲಿಯ ಅನೇಕ ಮಾಹಿತಿಗಳು ಇಸ್ರೋಗೆ ದೊರಕಿವೆ. ಇತ್ತ ನಾಸಾ ಸಹ ಚಂದ್ರಯಾನಕ್ಕೆ ಸಿದ್ಧಗೊಳ್ಳುತ್ತಿದೆ. ಭಾರತದ ನೆರೆಯ ರಾಷ್ಟ್ರ ಸಹ ಚಂದ್ರನ ಅಂಗಳ ತಲುಪಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚಂದ್ರಯಾನವನ್ನು ಟೀಕಿಸಿದ ಪಾಕ್ ಸಚಿವನ ಚಳಿ ಬಿಡಿಸಿದ ನೆಟ್ಟಿಗರು