Tag: chandrayaan

  • 2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಜಿತೇಂದ್ರ ಸಿಂಗ್‌

    2027ಕ್ಕೆ ಚಂದ್ರಯಾನ-4, 2026ಕ್ಕೆ ಗಗನಯಾನ: ಜಿತೇಂದ್ರ ಸಿಂಗ್‌

    ನವದೆಹಲಿ: ಚಂದ್ರನ ಮೇಲ್ಮೈನಲ್ಲಿನ ಕಲ್ಲುಗಳನ್ನು ಭೂಮಿಗೆ ಹೊತ್ತು ತರುವ ಚಂದ್ರಯಾನ-4 ಮಿಷನ್‌ (Chandrayaan-4 Space Missions) ಅನ್ನು 2027ರ ವೇಳೆ ಜಾರಿಮಾಡಲಾಗುವುದು ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್‌ (Jitendra Singh) ಹೇಳಿದ್ದಾರೆ.

    ಕಲ್ಲುಗಳ ಮಾದರಿಗಳನ್ನು ಹೊರುವ ಶಕ್ತಿ ಹೊಂದಿರುವ ಎರಡು ಪ್ರತ್ಯೇಕ ರಾಕೆಟ್‌ಗಳನ್ನು ಉಡ್ಡಯನ ಮಾಡಲಾಗುವುದು. ಈ ರಾಕೆಟ್‌ಗಳಲ್ಲಿ ಐದು ವಿವಿಧ ಕಾಂಪೋನೆಂಟ್‌ಗಳು ಇರಲಿವೆ. ಇವುಗಳನ್ನು ಕ್ಷಕೆಯಲ್ಲಿ ಜೋಡಿಸಲಾಗುವುದು ಎಂದಿದ್ದಾರೆ.

    ಅಲ್ಲದೇ ಮುಂದಿನ ವರ್ಷ ಮಾನವರವನ್ನು ಬಾಹ್ಯಾಕಾಶಕ್ಕೆ ಕಳುಹಿಸಿ, ಸುರಕ್ಷಿತವಾಗಿ ವಾಪಸ್‌ ಕರೆಸಿಕೊಳ್ಳುವ ʻಗಗನಯಾನʼ ಮಿಷನ್‌ ಅನ್ನು ಕೂಡ ಜಾರಿ ಮಾಡಲಾಗುವುದು. 2026ರಲ್ಲಿ ʻಸಮುದ್ರಯಾನʼ ಮಿಷನ್‌ ಅನ್ನೂ ಜಾರಿ ಮಾಡಲಿದ್ದೇವೆ. ಸಮುದ್ರದ 6,000 ಮೀಟರ್‌ನಷ್ಟು ಆಳಕ್ಕೆ ಮೂವರು ವಿಜ್ಞಾನಿಗಳು ತೆರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ʻರೊಬೊಟ್ ವ್ಯೂಮಿತ್ರಾʼವನ್ನು ಗಗನಯಾನಕ್ಕೆ ಕಳುಹಿಸುವ ಮಹತ್ವದ ಕಾರ್ಯ ಇದೇ ವರ್ಷ ನಡೆಯಲಿದೆ. 1969ರಲ್ಲಿ ಇಸ್ರೋ ಸ್ಥಾಪನೆಯಾದರೂ ಇದರ ಮೊದಲ ಉಡ್ಡಯನ ಕೇಂದ್ರವು 1993ರಲ್ಲಿ ಸ್ಥಾಪನೆಯಾಯಿತು. ಇಸ್ರೋ ಸ್ಥಾಪನೆಯಿಂದ 2014ರ ವರೆಗೆ ಭಾರತೀಯ ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಿದ್ದಕ್ಕಿಂತ ಹೆಚ್ಚಿನ ಅಭಿವೃದ್ಧಿಯು ಕಳೆದ 10 ವರ್ಷಗಳಲ್ಲಾಗಿದೆ ಎಂದರು.

  • ಸೂರ್ಯ ಶಿಕಾರಿಗೆ ಕೌಂಟ್‍ಡೌನ್- ಬೆಳಗ್ಗೆ 11:50ಕ್ಕೆ ಆದಿತ್ಯ ಎಲ್1 ಉಡಾವಣೆ

    ಸೂರ್ಯ ಶಿಕಾರಿಗೆ ಕೌಂಟ್‍ಡೌನ್- ಬೆಳಗ್ಗೆ 11:50ಕ್ಕೆ ಆದಿತ್ಯ ಎಲ್1 ಉಡಾವಣೆ

    ಅಮರಾವತಿ: ಚಂದ್ರಯಾನ (Chandrayaan-3) ಯಶಸ್ಸಿನ ಬಳಿಕ ಇಸ್ರೋ ಈಗ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಆದಿತ್ಯ ಎಲ್-1 (Aditya L-1) ಪ್ರಯೋಗಕ್ಕೆ ವೇದಿಕೆ ಸಜ್ಜಾಗಿದೆ.

    ಶ್ರೀಹರಿಕೋಟಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರದಲ್ಲಿ ಇಂದು ಬೆಳಗ್ಗೆ 11.50ಕ್ಕೆ ಸರಿಯಾಗಿ ಆದಿತ್ಯ ಎಲ್1 ಹೊತ್ತ ಪಿಎಸ್‍ಎಲ್‍ವಿ-ಸಿ57 ರಾಕೆಟ್ ನಭಕ್ಕೆ ಚಿಮ್ಮಲಿದೆ. ಈ ಪ್ರಯೋಗದ ಹಿನ್ನೆಲೆಯಲ್ಲಿ ಶುಕ್ರವಾರ ಆದಿತ್ಯ ಎಲ್1 ಆಕೃತಿ ಹೊತ್ತ ಇಸ್ರೋ ವಿಜ್ಞಾನಿಗಳ ತಂಡ ತಿರುಮಲ ತಿಮ್ಮಪ್ಪನನ್ನು ದರ್ಶಿಸಿದೆ. ಸೂಳ್ಳೂರುಪೇಟೆಯ ಚೆಂಗಲಮ್ಮ ಪರಮೇಶ್ವರಿ ಸನ್ನಿಧಿಯಲ್ಲೂ ವಿಶೇಷ ಪೂಜೆ ನಡೆಸಿದೆ. ಇದನ್ನೂ ಓದಿ: ಆದಿತ್ಯ ಎಲ್ 1 ಉಡಾವಣೆ – ಸೂರ್ಯನ ಅಧ್ಯಯನಕ್ಕೆ ಹೇಗೆ ಸಿದ್ಧವಾಗಿದೆ ಇಸ್ರೋ?

    ಚಂದ್ರಯಾನ್, ಮಂಗಳಯಾನ್ ನಂತ್ರ ಇಸ್ರೋ ಕೈಗೊಳ್ಳುತ್ತಿರುವ ಅತ್ಯಂತ ಪ್ರಮುಖ ಯೋಜನೆ ಇದಾಗಿದೆ. ಇದೇ ಮೊದಲ ಬಾರಿ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಇದಕ್ಕೆ ಯುರೋಪಿಯನ್ ಸ್ಪೇಸ್ ಏಜೆನ್ಸಿ, ಆಸ್ಟ್ರೇಲಿಯಾ ಸೇರಿ ವಿವಿಧ ದೇಶಗಳ ಅಂತರಿಕ್ಷ ಸಂಸ್ಥೆಗಳ ನೆರವನ್ನು ಇಸ್ರೋ ಪಡೆಯುತ್ತಿದೆ. ಈ ಪ್ರಯೋಗವನ್ನು ನೇರವಾಗಿ ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶ ನೀಡಲಾಗಿದೆ. ಆದರೆ ಮೊದಲೇ ನೋಂದಣಿ ಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ʼಶಿವಶಕ್ತಿʼ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಹೊರಗಿನ ಹುಡುಕಾಟಕ್ಕೆ ವಿಜ್ಞಾನವಾದರೆ ಅಂತರಂಗಕ್ಕೆ ಆಧ್ಯಾತ್ಮ: ಇಸ್ರೋ ಅಧ್ಯಕ್ಷ

    ʼಶಿವಶಕ್ತಿʼ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ, ಹೊರಗಿನ ಹುಡುಕಾಟಕ್ಕೆ ವಿಜ್ಞಾನವಾದರೆ ಅಂತರಂಗಕ್ಕೆ ಆಧ್ಯಾತ್ಮ: ಇಸ್ರೋ ಅಧ್ಯಕ್ಷ

    ತಿರುವನಂತಪುರಂ: ವಿಕ್ರಂ ಲ್ಯಾಂಡರ್‌ (Vikram Lander) ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್‌ (Shivashakti Point) ಎಂದು ಪ್ರಧಾನಿ ಮೋದಿ ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಇಸ್ರೋ (ISRO) ಅಧ್ಯಕ್ಷ ಸೋಮನಾಥ್‌ (Somanath) ಹೇಳಿದ್ದಾರೆ.

    ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬಳಿಕ ಕೇರಳದ ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು-ಭದ್ರಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ಸೋಮನಾಥ್‌ ಪ್ರಾರ್ಥನೆ ಸಲ್ಲಿಸಿದರು.

    ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು, ವಿಕ್ರಂ ಲ್ಯಾಂಡರ್‌ ಚಂದ್ರನನ್ನು ಸ್ಪರ್ಶಿಸಿದ ಜಾಗಕ್ಕೆ ‘ಶಿವಶಕ್ತಿ’ ಎಂದು ನಾಮಕರಣ ಮಾಡಿದ್ದರಲ್ಲಿ ಯಾವುದೇ ತಪ್ಪಿಲ್ಲ. ಆ ಸ್ಥಳಕ್ಕೆ ಹೆಸರಿಡುವ ಹಕ್ಕು ರಾಷ್ಟ್ರಕ್ಕೆ ಇದೆ ಎಂದರು. ಇದನ್ನೂ ಓದಿ: ಚಂದ್ರಲೋಕದಲ್ಲಿ ಜೈ ಹಿಂದ್‌ – ಮೊದಲ ಬಾರಿಗೆ ತಾಪಮಾನ ಪರೀಕ್ಷೆ

    ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ನಮಗೆಲ್ಲರಿಗೂ ಸರಿಹೊಂದುವ ರೀತಿಯಲ್ಲಿ ಶಿವಶಕ್ತಿ ಅರ್ಥವನ್ನು ವಿವರಿಸಿದ್ದಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ. ಚಂದ್ರಯಾನ–2 ಪತನವಾಗಿದ್ದ ಸ್ಥಳವನ್ನು ‘ತಿರಂಗಾ ಪಾಯಿಂಟ್‌ʼ ಎಂದು ಹೆಸರನ್ನು ಇರಿಸಿದ್ದಾರೆ. ಎರಡೂ ಭಾರತೀಯ ಧ್ವನಿಯ ಹೆಸರುಗಳಾಗಿವೆ. ನಾವು ಏನು ಮಾಡುತ್ತಿದ್ದೇವೆ ಎಂಬುದರ ಮಹತ್ವ ನಮಗೆ ತಿಳಿದಿರಬೇಕು  ಎಂದು ಹೇಳಿದರು.

    ನಾನೊಬ್ಬ ಅನ್ವೇಷಕ. ನಾನು ಚಂದ್ರನನ್ನು ಅನ್ವೇಷಿಸುತ್ತೇನೆ. ಆಂತರಂಗದ ಜಾಗವನ್ನು ಅನ್ವೇಷಿಸುತ್ತೇನೆ. ಹೊರಗಿನ ಹುಡುಕಾಟಕ್ಕೆ ವಿಜ್ಞಾನ. ಅಂತರಂಗದ ಹುಡುಕಾಟಕ್ಕೆ ಆಧ್ಯಾತ್ಮ. ನಾನು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡುತ್ತೇನೆ ಮತ್ತು ಅನೇಕ ಗ್ರಂಥಗಳನ್ನು ಓದುತ್ತೇನೆ. ಈ ಬ್ರಹ್ಮಾಂಡದಲ್ಲಿ ನಮ್ಮ ಅಸ್ತಿತ್ವ ಮತ್ತು ನಮ್ಮ ಪ್ರಯಾಣದ ಅರ್ಥವನ್ನು ಕಂಡುಹಿಡಿಯಲು ನಾನು ಪ್ರಯತ್ನಿಸುತ್ತೇನೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಹೊರಗಡೆ ವಿಜ್ಞಾನ ಮಾಡಿದರೆ ಅಂತರಂಗಕ್ಕೆ ದೇವಸ್ಥಾನಗಳಿಗೆ ಬರುತ್ತೇನೆ ಎಂದು ಹೇಳಿದರು.

    ಮಿಷನ್‌ನ ಪ್ರಸ್ತುತ ಸ್ಥಿತಿಯ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಚಂದ್ರಯಾನ 3, ಲ್ಯಾಂಡರ್, ರೋವರ್ ತುಂಬಾ ಆರೋಗ್ಯಕರವಾಗಿದ್ದು, ಬೋರ್ಡ್‌ನಲ್ಲಿರುವ ಎಲ್ಲಾ ಐದು ಉಪಕರಣಗಳನ್ನು ಸ್ವಿಚ್ ಆನ್ ಮಾಡಲಾಗಿದೆ. ಇವುಗಳು ಸುಂದರವಾದ ಡೇಟಾವನ್ನು ನೀಡುತ್ತಿದೆ. ಇನ್ನೂ ಹತ್ತು ದಿನಗಳು ಉಳಿದಿವೆ. ವಿವಿಧ ವಿಧಾನಗಳ ಸಂಪೂರ್ಣ ಸಾಮರ್ಥ್ಯದೊಂದಿಗೆ ನಾವು ಎಲ್ಲಾ ಪ್ರಯೋಗಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದರು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಫ್ಟ್ ಲ್ಯಾಂಡಿಂಗ್ ಸುಲಭ ಇರಲಿಲ್ಲ: ಇಸ್ರೋ ಅಧ್ಯಕ್ಷ

    ಸಾಫ್ಟ್ ಲ್ಯಾಂಡಿಂಗ್ ಸುಲಭ ಇರಲಿಲ್ಲ: ಇಸ್ರೋ ಅಧ್ಯಕ್ಷ

    – ಭಾರತ ಈಗ ಚಂದ್ರನ ಮೇಲಿದೆ

    ಬೆಂಗಳೂರು: ಅನೇಕ ವರ್ಷಗಳಿಂದ ಈ ದಿನಕ್ಕಾಗಿ ಕಾದಿದ್ದೇವು. ಎರಡನೇ ಬಾರಿ ಸಾಫ್ಟ್ ಲ್ಯಾಂಡಿಂಗ್ (Soft Landing) ಆಗಿರಲಿಲ್ಲ. ಆದರೆ ಈ ಬಾರಿ ಕಾರ್ಯ ಯಶಸ್ವಿಯಾಗಿದೆ. ಸದ್ಯ ಪ್ರಗ್ಯಾನ್ ರೋವರ್ (Pragyan Rover) ಕಾರ್ಯ ಮುಂದುವರಿಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ (S  Somanath) ಹೇಳಿದರು.

    ಚಂದ್ರಯಾನ-3 (Chandrayaan-3) ಯಶಸ್ವಿಯಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಭಾರತ ಈಗ ಚಂದ್ರನ ಮೇಲಿದೆ. ಚಂದ್ರಯಾನ ಭವಿಷ್ಯದ ವಿಜ್ಞಾನದ ಅವಿಷ್ಕಾರಗಳಿಗೆ ದಾರಿದೀಪ ಆಗಲಿದೆ. ಚಂದ್ರಯಾನ 3 ಯಶಸ್ಸಿಗೆ ಕಾರಣವಾದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.

    ಎಲ್ಲರಿಗೂ ಗೊತ್ತಿರುವಂತೆ ಇದು ಅಷ್ಟು ಸುಲಭವಾಗಿರಲಿಲ್ಲ. ಎರಡು ಮೀಟರ್ ಪರ್ ಸೆಕೆಂಡ್‍ಗೂ ಕಡಿಮೆ ವೆಲಾಸಿಟಿಯಲ್ಲಿ ಲ್ಯಾಂಡ್ ಆಗಿದೆ. ಆದಿತ್ಯ ಎಲ್ 1 ಮುಂದಿನ ತಿಂಗಳು ಆರಂಭಿಸುತ್ತೇವೆ. ಪ್ರತಿಯೊಬ್ಬ ಭಾರತೀಯನೂ ಈ ಯಶಸ್ಸಿಗಾಗಿ ಹರಸಿದ್ರು. ಹೋಮ, ಪೂಜೆ ಮಾಡಿ ಯಶಸ್ಸಿಗಾಗಿ ಹರಸಿದ್ರು. ಹೀಗಾಗಿ ಈ ಜಯವನ್ನ ಎಲ್ಲಾ ದೇಶವಾಸಿಗಳಿಗೆ ಡೆಡಿಕೇಟ್ ಮಾಡಲು ಬಯಸುತ್ತೇನೆ ಎಂದರು.  ಇದನ್ನೂ ಓದಿ: ಇದು ನವಭಾರತದ ಉದಯ: ಇಸ್ರೋದ ಚಂದ್ರಯಾನ-3 ಯಶಸ್ಸಿಗೆ ಪ್ರಧಾನಿ ಮೋದಿ ಶುಭಾಶಯ

    ಪ್ರಗ್ಯಾನ್ ರೋವರ್ ಲ್ಯಾಂಡರ್ ನಿಂದ ಹೊರಬರಲು ಸಮಯ ಬೇಕು. ಮುಂದಿನ ನಾಲ್ಕುರಿಂದ ಐದು ಗಂಟೆ ಬೇಕು. ಅಥವಾ ಒಂದು ದಿನ ಸಮಯ ಬೇಕಾಗುತ್ತದೆ. ವಾತವರಣದ ಮೇಲೆ ಇದು ನಿರ್ಧಾರವಾಗುತ್ತೆ. ಇದಾದ ಬಳಿಕ ನಾವು ಅಧ್ಯಯನ ಶುರು ಮಾಡ್ತೀವಿ ಪ್ರಯೋಗ ಆರಂಭವಾಗುತ್ತೆ. ಮುಂಬರೋ ದಿನಗಳಲ್ಲಿ ಆದಿತ್ಯ ಎಲ್ 1 (Aditya L-1) ಯೋಜನೆ ಇದೆ. ಮಾನವ ಸಹಿತ ಗಗನಯಾನ ಯೋಜನೆ ಕೂಡಾ ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಇದನ್ನೂ ಓದಿ: Aditya-L1: ಚಂದ್ರಯಾನ ಆಯ್ತು – ಈಗ ಸೂರ್ಯ ಸವಾರಿಯತ್ತ ಇಸ್ರೋ ಚಿತ್ತ

    ಇದೇ ವೇಳೆ ಪ್ರಧಾನಿಗಳು (Narendra Modi) ಕರೆ ಮಾಡಿ ಯಶಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ರು. ಪ್ರಕ್ರಿಯೆ ಮುಗಿದ ತಕ್ಷಣ ಕರೆ ಮೂಲಕ ಶುಭ ಕೋರಿದ್ರು ಎಂದು ಸೋಮನಾಥ ಹೇಳಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿ

    ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿ

    ಬೀಜಿಂಗ್: ಚೀನಾ ಕೈಗೊಂಡಿದ್ದ ಚಂದ್ರಯಾನ ಯಶಸ್ವಿಯಾಗಿದ್ದು, ಚೀನಾ ದೇಶ ತಮ್ಮ ಕೆಂಪು ಬಾವುಟವನ್ನು ಚಂದ್ರನ ಮೇಲೆ ಹಾರಿಸಿದೆ.

    50 ವರ್ಷದ ಹಿಂದೆ ಅಮೆರಿಕಾ ಯಶಸ್ವಿಯಾಗಿ ಚಂದ್ರನ ಮೇಲೆ ತನ್ನ ದೇಶದ ಬಾವುಟವನ್ನು ಹಾರಿಸಿತ್ತು. ಅಮೆರಿಕಾ ಬಳಿಕ ಚಂದ್ರನ ಮೇಲೆ ಬಾವುಟ ನೆಟ್ಟ 2ನೇ ರಾಷ್ಟ್ರ ಎಂಬ ಇತಿಹಾಸವನ್ನು ಚೀನಾ ದೇಶ ಸೃಷ್ಟಿ ಮಾಡಿದೆ. ಡ್ರಾಗನ್ ದೇಶ ನವೆಂಬರ್ 23ಕ್ಕೆ ಚಾಂಗ್ ಇ-5 ನೌಕೆ ಚಂದ್ರನಲ್ಲಿಗೆ ಕಳಿಸಿತ್ತು. ಅದು ಇಂದು ಯಶಸ್ವಿಯಾಗಿ ಚಂದ್ರನನ್ನು ತಲುಪಿದೆ.

    ತಮ್ಮ ನೌಕೆ ಚಂದ್ರನಲ್ಲಿಗೆ ಹೋಗಿ ಬಾವುಟ ಹಾರಿಸಿರುವ ಫೋಟೋವನ್ನು ಚೀನಾ ದೇಶ ಬಿಡುಗಡೆ ಮಾಡಿದೆ. ಈ ಚಿತ್ರವನ್ನು ಚಂದ್ರನ ಬಳಿ ಪ್ರಯಾಣ ಬೆಳಸಿದ್ದ ಚಾಂಗ್ ಇ-5 ನೌಕೆಯ ಕ್ಯಾಮೆರಾದಿಂದ ಸೆರೆಹಿಡಿಯಲಾಗಿದೆ. ಇದರ ಜೊತೆಗೆ ಚಂದ್ರನಲ್ಲಿರುವ ಬಂಡೆಯ ಒಂದು ಮಾದರಿಯನ್ನು ಕೂಡ ಸಂಗ್ರಹ ಮಾಡಲಾಗಿದೆ. ಈ ಚಂದ್ರಯಾನದ ಯಶಸ್ಸಿನೊಂದಿದೆ ಚೀನಾ 2022ಕ್ಕೆ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವ ತಯಾರಿ ಮಾಡಿಕೊಳ್ಳುತ್ತಿದೆ.

  • ಮಂಗಳೂರಿಗೆ ಬಂದ ಚಂದ್ರಯಾನಿ- ವಿಡಿಯೋ ವೈರಲ್

    ಮಂಗಳೂರಿಗೆ ಬಂದ ಚಂದ್ರಯಾನಿ- ವಿಡಿಯೋ ವೈರಲ್

    ಮಂಗಳೂರು: ಗುಂಡಿ ಬಿದ್ದ ರಸ್ತೆಗಳನ್ನು ನೋಡಿ ರೋಸಿ ಹೋದ ತಂಡವೊಂದು ಮಂಗಳೂರಿನಲ್ಲಿ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದೆ.

    ಚಂದ್ರನಲ್ಲಿ ಮಾನವ ಹೆಜ್ಜೆ ಇಟ್ಟ ರೀತಿಯಲ್ಲಿ ಬಾಲಕಿಯೊಬ್ಬಳು ರಾತ್ರಿ ಹೊತ್ತಿನಲ್ಲಿ ಮಾಡಿರುವ ಈ ಪ್ರತಿಭಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ. ಆರನೇ ತರಗತಿ ವಿದ್ಯಾರ್ಥಿನಿ ಆಡ್ಲಿನ್ ಡಿಸಿಲ್ವಳನ್ನು ಚಂದ್ರಯಾನಿಗಳ ರೀತಿಯಲ್ಲಿ ಬಟ್ಟೆ ತೊಟ್ಟು ಗುಂಡಿ ಬಿದ್ದ ರಸ್ತೆಗಳಲ್ಲಿ ಪುಟ್ಟ-ಪುಟ್ಟ ಹೆಜ್ಜೆ ಇಡುವಂತೆ ಮಾಡಲಾಗಿದೆ.

    ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಹಾಳಾಗಿವೆ. ಆದರೂ ಮಹಾನಗರ ಪಾಲಿಕೆ ರಸ್ತೆ ದುರಸ್ತಿಗೆ ಮುಂದಾಗಿಲ್ಲ. ಇದನ್ನು ಪ್ರತಿಭಟಿಸಿ ಮತ್ತು ಸಾರ್ವಜನಿಕ ಜಾಗೃತಿಗಾಗಿ ಮಂಗಳೂರಿನ ಸಿವಿಕ್ ಗ್ರೂಪಿನ ಅರ್ಜುನ್ ಮಸ್ಕರೇನಸ್ ಮತ್ತು ಅಜಯ್ ಡಿಸಿಲ್ವ ಸೇರಿ ಈ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.

    ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ಬಳಿಯ ಗುಂಡಿ ಬಿದ್ದ ರಸ್ತೆಗಳಲ್ಲಿ ರಾತ್ರಿ 10ರ ಸುಮಾರಿಗೆ ಚಂದ್ರಯಾನದ ಹೆಜ್ಜೆಗಳನ್ನು ಮೂಡಿಸಿ ಚಿತ್ರೀಕರಣ ಮಾಡಲಾಗಿದೆ. ಮಂಗಳೂರಿಗೆ ಬಂದ ಚಂದ್ರಯಾನಿ ಎಂಬ ತಲೆಬರಹದಡಿ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

  • ಚಂದ್ರಯಾನ 2 ರದ್ದು- ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಮುಂದೂಡಿಕೆ

    ಚಂದ್ರಯಾನ 2 ರದ್ದು- ತಾಂತ್ರಿಕ ದೋಷದಿಂದ ಕೊನೆ ಕ್ಷಣದಲ್ಲಿ ಮುಂದೂಡಿಕೆ

    – ಶೀಘ್ರದಲ್ಲೇ ಹೊಸ ಸಮಯ ನಿಗದಿ

    ನವದೆಹಲಿ: ಕೋಟ್ಯಂತರ ಕಂಗಳು ಕಾಯುತ್ತಿದ್ದು ಚಂದ್ರಯಾನ-2 ಕೊನೆ ಕ್ಷಣದಲ್ಲಿ ಮುಂದೂಡಿಕೆ ಮಾಡಲಾಗಿದೆ. ರಾಕೆಟ್‍ನ ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಂದ್ರಯಾನ-2 ರದ್ದುಗೊಳಿಸಲಾಗಿದೆ.

    ಚಂದ್ರಯಾನ- 2 ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ತಾಂತ್ರಿಕ ದೋಷ ಪತ್ತೆಯಾಗಿತ್ತು. ತಕ್ಷಣ ಅಧಿಕಾರಿಗಳ ಸಮಾಲೋಚನೆ ನಡೆಸಿದ ಇಸ್ರೋ ಸುದ್ದಿಗೋಷ್ಠಿ ಕರೆದು ಚಂದ್ರಯಾನ-2 ರದ್ದು ಮಾಡಲಾಗಿದ್ದು, ಶೀಘ್ರದಲ್ಲಿಯೇ ಮುಂದಿನ ಉಡಾವಣಾ ಸಮಯ ಘೋಷಿಸುವುದಾಗಿ ಹೇಳಿದೆ.

    ಏನೇನಾಯ್ತು…?
    * ರಾತ್ರಿ 1 ಗಂಟೆ 55 ನಿಮಿಷ 24 ಸೆಕೆಂಡ್- ಚಂದ್ರಯಾನ-2ರಲ್ಲಿ ತಾಂತ್ರಿಕ ದೋಷ ಪತ್ತೆ
    * ಚಂದ್ರಯಾನ- 2 ಉಡಾವಣೆಗೆ 56 ನಿಮಿಷ 24 ಸೆಕೆಂಡ್ ಬಾಕಿ ಇರುವಾಗ ತಾಂತ್ರಿಕ ದೋಷ ಪತ್ತೆ
    * ತಕ್ಷಣ ಅಧಿಕಾರಿಗಳಿಂದ ಸಮಾಲೋಚನೆ
    * 2 ಗಂಟೆ 9 ನಿಮಿಷಕ್ಕೆ ಚಂದ್ರಯಾನ- 2 ತಾತ್ಕಾಲಿಕ ತಡೆ
    * 2 ಗಂಟೆ 16 ನಿಮಿಷಕ್ಕೆ ಚಂದ್ರಯಾನ- 2 ರದ್ದು
    * ಬಳಿಕ ಟ್ವಿಟ್ಟರ್ ನಲ್ಲಿ ಚಂದ್ರಯಾನ- 2 ರದ್ದುಗೊಂಡ ಬಗ್ಗೆ ಸ್ಪಷ್ಟನೆ
    * 2.40ಕ್ಕೆ ಇಸ್ರೋ ಅಧಿಕಾರಿಯಿಂದ ಸುದ್ದಿಗೋಷ್ಠಿ- ಚಂದ್ರಯಾನ-2 ರದ್ದು ಬಗ್ಗೆ ಸ್ಪಷ್ಟನೆ

    ಚಂದ್ರಯಾನ 2ರದ್ದುಗೊಂಡ ಬಗ್ಗೆ ಇಸ್ರೋ ಅಧಿಕಾರಿ ಮಾಹಿತಿ ನೀಡಿದರು. ರಾಕೆಟ್ ಉಡಾವಣಾ ವಾಹನದಲ್ಲಿ ತಾಂತ್ರಿಕ ಸಮಸ್ಯೆಯನ್ನು ಗಮನಿಸಿದ್ದೇವೆ. ಉಡಾವಣೆಗೆ ನಿಗದಿಪಡಿಸಿದ ಸಮಯದಲ್ಲಿ ಅದನ್ನು ಸರಿಪಡಿಸಲು ಸಾಧ್ಯವಿಲ್ಲ. ಹಾಗಾಗಿ ಚಂದ್ರಯಾನ 2 ರದ್ದುಗೊಳಿಸಿದ್ದು ಮುಂದಿನ ದಿನಾಂಕ ಶೀಘ್ರದಲ್ಲೇ ಪ್ರಕಟ ಮಾಡುತ್ತೇವೆ ಎಂದು ಇಸ್ರೋ ಅಧಿಕಾರಿಗಳು ಸ್ಪಷ್ಟಪಡಿಸಿದ್ದರೆ.