Tag: chandrashekhar

  • 10 ದಿನಗಳ ಒಳಗೆ ನಿಗಮ ಮಂಡಳಿಗೆ ನಿರ್ದೇಶಕರ ನೇಮಕ: ಚಂದ್ರಶೇಖರ್

    10 ದಿನಗಳ ಒಳಗೆ ನಿಗಮ ಮಂಡಳಿಗೆ ನಿರ್ದೇಶಕರ ನೇಮಕ: ಚಂದ್ರಶೇಖರ್

    ಬೆಂಗಳೂರು: 10 ದಿನಗಳ ಒಳಗೆ ನಿಗಮ ಮಂಡಳಿಗಳ ನಿರ್ದೇಶಕರ ನೇಮಕಾತಿ ಆಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ (G.C Chandrashekhar) ತಿಳಿಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಿಗಮ ಮಂಡಳಿಗಳ ನಿರ್ದೇಶಕರ ನೇಮಕವನ್ನು ಸರ್ಕಾರ ಮಾಡಲಿದೆ. ನಾವು ಈಗಾಗಲೇ ಲೀಸ್ಟ್ ಕೊಟ್ಟಿದ್ದೇವೆ. ಅಧ್ಯಕ್ಷರು ಅದನ್ನು ಸರ್ಕಾರಕ್ಕೆ ಶಿಫಾರಸು ಮಾಡ್ತಾರೆ. 10 ದಿನಗಳ ಒಳಗೆ ನಿರ್ದೇಶಕರ ನೇಮಕ ಆಗಲಿದೆ ಎಂದು ತಿಳಿಸಿದ್ದಾರೆ.

    ಪರಮೇಶ್ವರ್ (G.Parameshwar) ನೇತೃತ್ವದ ಕಮಿಟಿ ಈಗಾಗಲೇ ಪಟ್ಟಿ ಕೊಟ್ಟಿದೆ. ನಾನು ಅದರಲ್ಲಿ ನಿರ್ದೇಶಕನಾಗಿದ್ದೆ. ಕೆಲವು ಬದಲಾವಣೆಗಳು ಆಗಿದೆ. ಹಾಗಾಗಿ ಸ್ವಲ್ಪ ವಿಳಂಬವಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

  • ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ

    ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ

    ನವದೆಹಲಿ: ದೇಶಕ್ಕೆ ಕ್ಯಾಪ್ಟನ್ ಅಬ್ದುಲ್ ಹಮೀದ್ ( Captain Abdul Hamid) ಅವರಂತಹವರು ಬೇಕು, ಅಫ್ಜಲ್ ಗುರು (Afzal Guru) ಮತ್ತು ಮೊಹಮ್ಮದ್ ಅಲಿ ಜಿನ್ನಾ (Mohammad Ali Jinnah) ಅಲ್ಲ ಎಂದು ಕೇಂದ್ರ ಸಚಿವ ನಿತ್ಯಾನಂದ್ ರೈ ಹೇಳಿದ್ದಾರೆ.

    ಜನವರಿ 22ರ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಶಿಕ್ಷಣ ಸಚಿವ ಚಂದ್ರಶೇಖರ್ ಅವರ ವಿವಾದಾತ್ಮಕ ಹೇಳಿಕೆಯ ಕುರಿತು ಬಿಜೆಪಿ ಇಂದು ಕಿಡಿಕಾರಿದೆ. ಚಂದ್ರಶೇಖರ್ (Minister Chandrashekhar) ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು, ಪದೇ ಪದೇ ವಿರೋಧಿಸಲು ಭಗವಾನ್ ರಾಮ ಮತ್ತು ರಾಮ ಮಂದಿರದ ಮೇಲೆ ಅವರಿಗೆ ಯಾವ ದ್ವೇಷವಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ಬಾಬರ್ ಮತ್ತು ಅಫ್ಜಲ್ ಗುರುಗಳ ಚಿತ್ರಗಳನ್ನು ನೇತುಹಾಕಿ ಪೂಜಿಸುತ್ತಾರೆ. ದೇಶಕ್ಕೆ ಅಶ್ಫಾಕುಲ್ಲಾ ಖಾನ್ ಮತ್ತು ಕ್ಯಾಪ್ಟನ್ ಹಮೀದ್ ಅಗತ್ಯವಿದೆಯೇ ಹೊರತು ಬಾಬರ್, ಅಫ್ಜಲ್ ಗುರು ಅಥವಾ ಜಿನ್ನಾ ಅಲ್ಲ. ಇಲ್ಲಿ ಭಗವಾನ್ ರಾಮನ ಸಮಗ್ರತೆ ಅಗತ್ಯವಿದೆ ಎಂದು ಅವರು ಹೇಳಿದರು.

    ಇಂದು ಬೆಳಗ್ಗೆ ಬಿಹಾರ ಶಿಕ್ಷಣ ಸಚಿವ ಮತ್ತು ಆರ್‌ಜೆಡಿ ನಾಯಕ ಚಂದ್ರಶೇಖರ್, ದೇಶದಲ್ಲಿ ದೇವಾಲಯಗಳಿಗಿಂತ ಹೆಚ್ಚಿನ ಶಾಲೆಗಳ ಅಗತ್ಯವಿದೆ ಎಂದು ಹೇಳಿದರು. ಇದೇ ವೇಳೆ ಈ ತಿಂಗಳ ಕೊನೆಯಲ್ಲಿ ಅಯೋಧ್ಯೆಯಲ್ಲಿ ನಡೆಯಲಿರುವ ಸಮಾರಂಭವನ್ನು ಉಲ್ಲೇಖಿಸಿದ ಅವರು, ಗಾಯಗೊಂಡರೆ ನೀವು ಮೊದಲು ಎಲ್ಲಿಗೆ ಹೋಗುತ್ತೀರಿ? ದೇವಸ್ಥಾನ ಅಥವಾ ಆಸ್ಪತ್ರೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ದೇವಸ್ಥಾನದ ಹಾದಿ ಮಾನಸಿಕ ಗುಲಾಮಗಿರಿಯ ಹಾದಿ – ರಾಮಮಂದಿರ ಕುರಿತು ಶಿಕ್ಷಣ ಸಚಿವ ವಿವಾದಾತ್ಮಕ ಹೇಳಿಕೆ

    ನಿಮಗೆ ಶಿಕ್ಷಣ ಬೇಕು. ಅಧಿಕಾರಿ, ಶಾಸಕರು ಅಥವಾ ಸಂಸದರಾಗಲು ಬಯಸಿದರೆ, ನೀವು ದೇವಸ್ಥಾನ ಹೋಗುತ್ತೀರಾ ಅಥವಾ ಶಾಲೆಗೆ ಹೋಗುತ್ತೀರಾ?
    ದೇವಸ್ಥಾನಕ್ಕೆ ಹೋಗುವ ಹಾದಿ ಮಾನಸಿಕ ಗುಲಾಮಗಿರಿಯ ಹಾದಿಯಾಗಿದೆ. ಶಾಲೆಗಳಿಗೆ ಹೋಗುವ ಹಾದಿ ಮಾತ್ರವೇ ಬೆಳಕಿನ ಹಾದಿಯನ್ನು ಸುಗಮಗೊಳಿಸುತ್ತವೆ ಎಂದು ಹೇಳಿ, ಇದನ್ನು ನಾನು ಹೇಳಿಲ್ಲ, ಸಾವಿತ್ರಿ ಬಾಯಿ ಫುಲೆ ಅವರು ಹೇಳಿದ್ದು ಎಂದಿದ್ದಾರೆ.

    ಭಗವಾನ್ ರಾಮನು ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಮತ್ತು ಎಲ್ಲೆಡೆ ನೆಲೆಸಿರುವಾಗ, ಅವನನ್ನು ಹುಡುಕಲು ನೀವು ಎಲ್ಲಿಗೆ ಹೋಗುತ್ತೀರಿ ಎಂದು ಚಂದ್ರಶೇಖರ್‌ ಪ್ರಶ್ನಿಸಿದರು.

  • 1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    1 ವರ್ಷದ ಬಳಿಕ ರೇಣುಕಾಚಾರ್ಯ ಅಣ್ಣನ ಮಗ ಸಾವು ಪ್ರಕರಣ ಮುಕ್ತಾಯ; ಅಪಘಾತದಿಂದಲೇ ಸಾವು ಎಂದು ವರದಿ

    ದಾವಣಗೆರೆ: ಹೊನ್ನಾಳಿ (Honnalli) ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ(MP Renukacharya) ಸಹೋದರನ ಪುತ್ರನ ಸಾವು ಪ್ರಕರಣ ಕೊನೆಗೂ ಫೈನಲ್‌ ಟಚ್‌ ಪಡೆದುಕೊಂಡಿದೆ.

    ಸುದೀರ್ಘ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಫೈನಲ್ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಇದರಿಂದ ಒಂದು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ನಡೆದಿದ್ದ ಘಟನೆ ಕೊನೆಗೂ ಅಂತ್ಯಕಂಡಿದೆ.

    ದಾವಣಗೆರೆಯ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಸಿಐಡಿ ಅಧಿಕಾರಿಗಳ ತಂಡ ವರದಿ ಸಲ್ಲಿಕೆ ಮಾಡಿದ್ದು, ಇದು ಕೊಲೆಯಿಂದ ಸಂಭವಿಸಿರೋ ಸಾವಲ್ಲ. ಅಪಘಾತದಿಂದ ಸಂಭವಿಸಿರೋ ಸಾವು ಎಂದು ಸಿಐಡಿ ವರದಿಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಹಸುಗೂಸುಗಳ ಮಾರಾಟ ದಂಧೆ – ಬೃಹತ್ ಜಾಲ ಭೇದಿಸಿದ ಸಿಸಿಬಿ, 8 ಮಂದಿ ಅರೆಸ್ಟ್

    ಕಳೆದ ನವೆಂಬರ್‌ ತಿಂಗಳಲ್ಲಿ ರೇಣುಕಾಚಾರ್ಯರ ಸಹೋದರನ ಮಗ ಚಂದ್ರು ಅಲಿಯಾಸ್ ಚಂದ್ರಶೇಖರ್ (Chandrashekhar) ನಾಪತ್ತೆಯಾದ್ದರು. ಅದಾದ ಕೆಲ ದಿನಗಳಲ್ಲೇ ಚಂದ್ರು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತು. ಆಗ ರೇಣುಕಾಚಾರ್ಯ ಇದೊಂದು ಕೊಲೆ, ಉದ್ದೇಶ ಪೂರಕ ಘಟನೆಯಂತ ಹೆಚ್ಚಿನ ತನಿಖೆಗೆ ಕೇಳಿ ಪ್ರಕರಣ ಸಿಐಡಿಗೆ ನೀಡಲಾಗಿತ್ತು. ಬಳಿಕ ಸುದೀರ್ಘ ತನಿಖೆ ನಡೆಸಿದ ಸಿಐಡಿ ಪ್ರಕರಣದ ಅಂತಿಮ ಹಂತದ ವರದಿಯನ್ನು ಸಲ್ಲಿಕೆ ಮಾಡಿದೆ.

    ಎಫ್‌ಎಸ್‌ಎಲ್ ಮತ್ತು ತಾಂತ್ರಿಕ ಸಾಕ್ಷ್ಯಗಳು ಇದೊಂದು ಅಪಘಾತ ಎಂದು ವರದಿ ನೀಡಿದ್ದು, ಪ್ರಕರಣ ಸ್ಪಷ್ಟ ಕಾರಣದೊಂದಿಗೆ ಮುಕ್ತಾಯಗೊಳಿಸಿದೆ. ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆಯೇ ರೇಪ್ ಮಾಡಲು ಪ್ರೇಮಿಗೆ ಅವಕಾಶ ಕೊಟ್ಟ ಮಹಿಳೆಗೆ 40 ವರ್ಷ ಜೈಲು ಶಿಕ್ಷೆ

  • ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ಯುವಕ ತಾಯ್ನಾಡಿಗೆ ವಾಪಸ್

    ಸೌದಿಯಲ್ಲಿ 11 ತಿಂಗಳ ಜೈಲುವಾಸದ ಬಳಿಕ ಯುವಕ ತಾಯ್ನಾಡಿಗೆ ವಾಪಸ್

    ಮಂಗಳೂರು: ತಾನು ಮಾಡದ ತಪ್ಪಿಗೆ ಸೌದಿ ಅರೇಬಿಯಾ (Saudi Arabia) ಜೈಲಿನಲ್ಲಿ 11 ತಿಂಗಳ ಕಾಲ ಸೆರೆವಾಸ ಅನುಭವಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಚಂದ್ರಶೇಖರ್ (Chandrashekhar Kadaba) ಇಂದು ತಾಯ್ನಾಡಿಗೆ ಮರಳಿದ್ದಾರೆ.

    ಕೆಲಸಕ್ಕಾಗಿ ತೆರಳಿ ಸೌದಿಯಲ್ಲಿ ನೆಲೆಸಿರುವ ಚಂದ್ರಶೇಖರ್ ಸಿಮ್ ಖರೀದಿಸಿದ್ದ ವೇಳೆ ಅವರ ಬ್ಯಾಂಕ್ ಖಾತೆ ಹ್ಯಾಕ್ ಆಗಿತ್ತು. ಹ್ಯಾಕ್ ಆಗಿದ್ದ ಖಾತೆಗೆ ಮಹಿಳೆಯೊಬ್ಬರ ಖಾತೆಯಿಂದ 22 ಸಾವಿರ ರಿಯಲ್ ಹಣ ವರ್ಗಾವಣೆ ಆಗಿತ್ತು. ಈ ವರ್ಗಾವಣೆ ಚಂದ್ರಶೇಖರ್ ಅವರೇ ಮಾಡಿದ್ದರು ಎಂದು ಅವರನ್ನು ಸೌದಿ ಅರೇಬಿಯಾ ಪೊಲೀಸರು ಬಂಧಿಸಿ ಜೈಲಿಗೆ ಹಾಕಿದ್ದರು.

    ಬಳಿಕ ಭಾರತೀಯ ವಿದೇಶಾಂಗ ಇಲಾಖೆ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (MP Nalin Kumar Kateel) ಸೇರಿದಂತೆ ಹಲವರ ಪ್ರಯತ್ನದಿಂದ ಇದೀಗ 11 ತಿಂಗಳ ಬಳಿಕ ಚಂದ್ರಶೇಖರ್ ಬಿಡುಗಡೆಗೊಂಡಿದ್ದಾರೆ. ಇಂದು ರಿಯಾದ್ ನಿಂದ ಮುಂಬೈಗೆ ಬಂದು ಅಲ್ಲಿಂಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಹೊರಬರುತ್ತಿದ್ದಂತೆ ಚಂದ್ರಶೇಖರ್ ಭಾವುಕರಾಗಿದ್ದರು. ಈ ವೇಳೆ ಅವರ ತಾಯಿ ಹೇಮಾವತಿ ಮಗನನ್ನು ಅಪ್ಪಿ ಹಿಡಿದು ಆನಂದ ಭಾಷ್ಪ ಹರಿಸಿದರು. ಇದನ್ನೂ ಓದಿ: ಮುಸ್ಲಿಂ ಸ್ಪೀಕರ್ ಬಗೆಗಿನ ಜಮೀರ್ ಹೇಳಿಕೆಗೆ ಖಾದರ್ ಆಕ್ಷೇಪ

  • ಚಂದ್ರುವಿನ ದೇಹದ ಮೇಲೆ ಹಲ್ಲೆಯ ಗಾಯವಿಲ್ಲ- ರೇಣುಕಾ ತಮ್ಮನ ಮಗ ಅಪಘಾತದಲ್ಲೇ ಸಾವು?

    ಚಂದ್ರುವಿನ ದೇಹದ ಮೇಲೆ ಹಲ್ಲೆಯ ಗಾಯವಿಲ್ಲ- ರೇಣುಕಾ ತಮ್ಮನ ಮಗ ಅಪಘಾತದಲ್ಲೇ ಸಾವು?

    ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಸಾವನ್ನಪ್ಪಿ 15 ದಿನ ಕಳೆಯುತ್ತಿದ್ದರೂ, ಆತನ ಸಾವಿನ ಸುತ್ತ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಸರ್ಕಾರದ ಕ್ಯಾಬಿನೆಟ್ (Cabinet) ದರ್ಜೆಯಲ್ಲಿ ಇದ್ದುಕೊಂಡು ಪೊಲೀಸರ ತನಿಖೆ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರ ವಿರುದ್ಧವೇ ಸಿಡಿದಿದ್ದಾರೆ. ಚಂದ್ರುವಿನ ಮರಣೋತ್ತರ ಪರೀಕ್ಷೆ ಹಾಗೂ ಎಫ್‍ಎಸ್‍ಎಲ್ (FSL) ವರದಿಯನ್ನು ಎರಡೆರಡು ಬಾರಿ ತನಿಖೆ ನಡೆಸಿ ಅಂತಿಮ ವರದಿಗೆ ಇಡೀ ಪೊಲೀಸ್ ಇಲಾಖೆ ಕಾದು ಕುಳಿತಿದೆ.

    ಚಂದ್ರು ಸಾವು ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ. ಪ್ರಾಥಮಿಕ ತನಿಖೆಯಲ್ಲಿ ಅಪಘಾತ ಎಂದು ತಿಳಿದು ಬಂದಿದ್ದು, ಆದರೆ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಇದು ಪೂರ್ವ ನಿಯೋಜಿತ ಕೊಲೆ ಎಂದು ಆರೋಪವನ್ನು ಮಾಡುತ್ತಿದ್ದಾರೆ. ಅಕ್ಟೋಬರ್ 30ರ ಸಂಜೆ ಹೊನ್ನಾಳಿಯ ನಿವಾಸದಿಂದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ (Vinay Guruji) ಆಶೀರ್ವಾದ ಪಡೆದು ವಾಪಸ್ ಹೊನ್ನಾಳಿ ಕಡೆ ಹೊರಟಿದ್ದ. ಆದರೆ ಅವತ್ತೇ ನಾಪತ್ತೆಯಾಗಿದ್ದ.

    ನಾಲ್ಕು ದಿನಗಳ ನಂತರ ಹೊನ್ನಾಳಿ ಬಳಿ ಇರುವ ತುಂಗಾ ನಾಲೆಯಲ್ಲಿ ಚಂದ್ರುವಿನ ಕಾರು ಹಾಗೂ ಮೃತದೇಹ ಸಿಕ್ಕಿತು. ಆತನ ಮೃತದೇಹ ಹಿಂಬದಿ ಸೀಟ್ ನಲ್ಲಿ ಇದ್ದಿದ್ದು ಹಾಗೂ ಕೆಲ ಗಾಯದ ಗುರುತು ಇದ್ದ ಹಿನ್ನಲೆ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಹೇಳ್ತಿದ್ದಾರೆ. ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ (Alok Kumar) ಕೂಡ ಆಗಮಿಸಿ ಪರಿಶೀಲನೆ ನಡೆಸಿ ಇದು ಪ್ರಾಥಮಿಕ ತನಿಖೆಯಲ್ಲಿ ಅಪಘಾತವಾಗಿದೆ ಎಂದು ಮಾಹಿತಿ ನೀಡಿದ್ರು. ಡಯಾಟಮ್ ಟೆಸ್ಟ್, ಎಫ್‍ಎಸ್‍ಎಲ್ ವರದಿ, ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಮಾಹಿತಿ ಅಪಘಾತ ಎಂದು ಬಂದಿದೆ.

    ಕೈಗಳನ್ನು ಕಟ್ಟಿರೋ ಸುಳಿವಿಲ್ಲ: ಚಂದ್ರುವಿನ ತಲೆಗೆ ಬಲವಾದ ಆಯುಧದಿಂದ ಹೊಡೆದಿದ್ದಾರೆ. ಕೈ ಕಾಲುಗಳನ್ನಯ ಹಗ್ಗದಿಂದ ಕಟ್ಟಿದ್ದಾರೆ. ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎಂದು ರೇಣುಕಾಚಾರ್ಯ ಸೇರಿದಂತೆ ಅವರ ಕುಟುಂಬಸ್ಥರು ಆರೋಪ ಮಾಡಿದ್ದರು. ಹೊನ್ನಾಳಿ ಠಾಣೆ (Honnalli Police Station) ಯಲ್ಲಿ ಐಪಿಸಿ 302 ಹಾಗೂ 201 ಅಡಿಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಪ್ರಾಥಮಿಕ ವರದಿಯಲ್ಲಿ ಇದು ಅಪಘಾತವೇ ಹೊರತು ಕೊಲೆ ಅಲ್ಲ. ಚಂದ್ರುವಿನ ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಅಲ್ಲದೆ ಕೈಗಳಿಗೆ ಹಗ್ಗ ಕಟ್ಟಿಲ್ಲ, ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಇನ್ನೊಂದು ವಾರದೊಳಗೆ ಪಿಎಂ ವರದಿ ಸೇರಿದಂತೆ ಚಂದ್ರು ಸಾವಿನ ತನಿಖಾ ವರದಿ ಸಿಗಲಿದೆ.

    ಒಟ್ಟಿನಲ್ಲಿ ಪೊಲೀಸರ ವಾದವೇ ಒಂದಾದ್ರೆ, ರೇಣುಕಾಚಾರ್ಯ ಕುಟುಂಬಸ್ಥರ ಆರೋಪವೇ ಇನ್ನೊಂದು. ವಾರದೊಳಗೆ ಪೊಲೀಸರ ಕೈಗೆ ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಲಿದ್ದು, ಎಲ್ಲ ಗೊಂದಲಗಳಿವೆ ತೆರೆ ಬೀಳಲಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರು ಸಾವು ಪ್ರಕರಣದ ತನಿಖೆ ಚುರುಕು- ತನಿಖಾ ತಂಡದಿಂದ ವಿನಯ್ ಗುರೂಜಿ ಭೇಟಿ

    ಚಂದ್ರು ಸಾವು ಪ್ರಕರಣದ ತನಿಖೆ ಚುರುಕು- ತನಿಖಾ ತಂಡದಿಂದ ವಿನಯ್ ಗುರೂಜಿ ಭೇಟಿ

    ಚಿಕ್ಕಮಗಳೂರು: ಹೊನ್ನಾಳಿ ಶಾಕ ಎಂ.ಪಿ ರೇಣುಕಾಚಾರ್ಯ (MP Renukacharya) ಸಹೋದರನ ಪುತ್ರ ಚಂದ್ರಶೇಖರ್ (Chandashekhar) ಸಾವಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದ್ದು, ಸಾಕಷ್ಟು ಅನುಮಾನಗಳು ಎದ್ದಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ವರದಿ ಕೇಳಿದ್ದಾರೆ.

    ಸಿಎಂ ವರದಿ ಬೆನ್ನಲ್ಲೇ ತನಿಖೆ ಚುರುಕುಗೊಂಡಿದ್ದು, ತನಿಖಾ ತಂಡ ಈಗಾಗಲೇ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿರುವ ಗೌರಿಗದ್ದೆಯ ವಿನಯ್ ಗುರೂಜಿ (Vinay Guruji) ಆಶ್ರಮಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಚನ್ನಗಿರಿ ಪಿಎಸ್‍ಐ ನೇತೃತ್ವದ ನಾಲ್ವರ ತಂಡ ಆಶ್ರಮಕ್ಕೆ ಭೇಟಿ ಕೊಟ್ಟಿದೆ. ಪ್ರಕರಣ ಸಂಬಂಧ ಈವರೆಗೂ 4 ಬಾರಿ ಪೊಲೀಸರು ಭೇಟಿ ನೀಡಿದ್ದಾರೆ. ಆಶ್ರಮದ ಸಿಬ್ಬಂದಿ, ಉಸ್ತುವಾರಿ ವಹಿಸಿರುವ ಭಕ್ತರ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಚಂದ್ರಶೇಖರ್ ಸಾವಿನ ಪ್ರಕರಣ- ಇಂದು ಹೊರಬೀಳುತ್ತಾ ಪೋಸ್ಟ್‌ ಮಾರ್ಟಂ ರಿಪೋರ್ಟ್?

    ಇತ್ತ ಚಂದ್ರು ಸಾವಿಗೆ ನಿಖರವಾದ ಕಾರಣ ಇಂದು ಹೊರಬೀಳುವ ಸಾಧ್ಯತೆ ಇದೆ. ಈಗಾಗಲೇ ಇದು ಕೊಲೆಯಲ್ಲ, ಅಪಘಾತದಿಂದ ಉಂಟಾದ ಸಾವು ಎಂಬುದು ಪೊಲೀಸ್ ಹಾಗೂ ಎಫ್‍ಎಸ್‍ಎಲ್ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗುತ್ತಿದೆ. ಆದರೆ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಇದೊಂದು ಪೂರ್ವನಿಯೋಜಿತ ಕೊಲೆ ಅಂತ ಆರೋಪ ಮಾಡಿರೋದೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರೋದು. ಇಂದು ಚಂದ್ರು ಪೋಸ್ಟ್‍ಮಾರ್ಟಂ ವರದಿ ಹಾಗೂ ಎಫ್‍ಎಸ್‍ಎಲ್ ರಿಪೋರ್ಟ್ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ.

    ಈಗಾಗಲೇ ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ (Honnalli Police Station) ಯಲ್ಲಿ 302 ಹಾಗೂ 201 ಕೇಸ್ ಕೂಡ ದಾಖಲಾಗಿದೆ. ಚಂದ್ರುವಿನ ಕೊಲೆಯಾಗಿದೆ, ಅಲ್ಲದೆ ಆತನನ್ನು ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ಎಫ್‍ಎಸ್‍ಎಲ್ ಅಧಿಕಾರಿಗಳ ಎರಡು ತಂಡ ಅಪಘಾತ ನಡೆದ ಹೊನ್ನಾಳಿ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪರಿಶೀಲನೆ ಮಾಡಿ ಎವಿಡೆನ್ಸ್ ಕಲೆಕ್ಟ್ ಮಾಡಿದ್ದಾರೆ. ಪೊಲೀಸರು ಕೂಡ ಟೆಕ್ನಿಕಲ್ ಎವಿಡೆನ್ಸ್ ಕೂಡ ಕಲೆಕ್ಟ್ ಮಾಡಿಲಾಗಿದ್ದು, ಇದೊಂದು ಅಪಘಾತ, ಓವರ್ ಸ್ಪೀಡ್‍ನಲ್ಲಿ ಬಂದ ಹಿನ್ನೆಲೆ ಚಾನಲ್ ನಲ್ಲಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ್ ಸಾವಿನ ಪ್ರಕರಣ- ಇಂದು ಹೊರಬೀಳುತ್ತಾ ಪೋಸ್ಟ್‌ ಮಾರ್ಟಂ ರಿಪೋರ್ಟ್?

    ಚಂದ್ರಶೇಖರ್ ಸಾವಿನ ಪ್ರಕರಣ- ಇಂದು ಹೊರಬೀಳುತ್ತಾ ಪೋಸ್ಟ್‌ ಮಾರ್ಟಂ ರಿಪೋರ್ಟ್?

    ದಾವಣಗೆರೆ: ಶಾಸಕ ರೇಣುಕಾಚಾರ್ಯ (Renukacharya) ಸಹೋದರನ ಪುತ್ರನ ಸಾವು ನಾನಾ ಅನುಮಾನಗಳನ್ನು ಹುಟ್ಟಿಹಾಕಿವೆ. ಅದರಲ್ಲಿ ಆತನ ಸಾವು ಆತ್ಮಹತ್ಯೆಯೋ, ಕೊಲೆಯೋ, ಇಲ್ಲ ಆಕ್ಸಿಡೆಂಟ್ ಎನ್ನುವ ಪ್ರಶ್ನೆಗಳೇ ಹೆಚ್ಚು, ಆದರೆ ರೇಣುಕಾಚಾರ್ಯ ಸೇರಿದಂತೆ ಅವರ ಕುಟುಂಬಸ್ಥರು ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಆರೋಪ ಮಾಡಿದ್ದಾರೆ. ಏನೇ ಆಗಲಿ ವರದಿ ಬಂದ ನಂತರ ಸತ್ಯಾಸತ್ಯತೆ ತಿಳಿಯಲಿದ್ದು. ಇಂದು ವರದಿ ಬರುವ ಸಾಧ್ಯತೆ ಇದ್ದು, ಏನಾದ್ರು ಅಪಘಾತ ಬಂತು ಎಂದರೆ ಹೆಚ್ಚಿನ ತನಿಖೆಗೆ ಒತ್ತಾಯಿಸುವ ಸಾಧ್ಯತೆ ಹೆಚ್ಚಿದೆ.

    ಹೊನ್ನಾಳಿ ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು (Chandrashekhar) ಸಾವಿನ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಚಂದ್ರು ಸಾವಿಗೆ ನಿಖರವಾದ ಕಾರಣ ಇಂದು ಹೊರಬೀಳುವ ಸಾಧ್ಯತೆ ಇದೆ. ಈಗಾಗ್ಲೇ ಇದು ಕೊಲೆಯಲ್ಲ, ಅಪಘಾತದಿಂದ ಉಂಟಾದ ಸಾವು ಎಂಬುದು ಪೊಲೀಸ್ ಹಾಗೂ ಎಫ್‍ಎಸ್‍ಎಲ್ (FSL) ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗುತ್ತಿದೆ. ಆದರೆ ರೇಣುಕಾಚಾರ್ಯ ಕುಟುಂಬಸ್ಥರು ಮಾತ್ರ ಇದೊಂದು ಪೂರ್ವನಿಯೋಜಿತ ಕೊಲೆ ಅಂತ ಆರೋಪ ಮಾಡಿರೋದೇ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರೋದು. ಇಂದು ಚಂದ್ರು ಪೋಸ್ಟ್‍ಮಾರ್ಟ್‍ಂ ವರದಿ ಹಾಗೂ ಎಫ್‍ಎಸ್‍ಎಲ್ ರಿಪೋರ್ಟ್ ಪೊಲೀಸರ ಕೈ ಸೇರುವ ಸಾಧ್ಯತೆ ಇದೆ. ಇದನ್ನೂ ಓದಿ: ಚಂದ್ರು ದೇಹದಲ್ಲಿ ಒಳ ಉಡುಪು ಇರಲಿಲ್ಲ – ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದ್ರಾ ಯುವ ನಾಯಕ?

    ಈಗಾಗಲೇ ಘಟನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆ (Honnalli Police Station) ಯಲ್ಲಿ 302 ಹಾಗೂ 201 ಕೇಸ್ ಕೂಡ ದಾಖಲಾಗಿದೆ. ಚಂದ್ರುವಿನ ಕೊಲೆಯಾಗಿದೆ, ಅಲ್ಲದೆ ಆತನನ್ನು ಕೊಲೆ ಮಾಡಿ ಸಾಕ್ಷಿ ನಾಶ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ಎಫ್‍ಎಸ್‍ಎಲ್ ಅಧಿಕಾರಿಗಳ ಎರಡು ತಂಡ ಅಪಘಾತ ನಡೆದ ಹೊನ್ನಾಳಿ ಬಳಿ ಇರುವ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪರಿಶೀಲನೆ ಮಾಡಿ ಎವಿಡೆನ್ಸ್ ಕಲೆಕ್ಟ್ ಮಾಡಿದ್ದಾರೆ. ಪೊಲೀಸರು ಕೂಡ ಟೆಕ್ನಿಕಲ್ ಎವಿಡೆನ್ಸ್ ಕೂಡ ಕಲೆಕ್ಟ್ ಮಾಡಿಲಾಗಿದ್ದು, ಇದೊಂದು ಅಪಘಾತ, ಓವರ್ ಸ್ಪೀಡ್‍ನಲ್ಲಿ ಬಂದ ಹಿನ್ನೆಲೆ ಚಾನಲ್ ನಲ್ಲಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

    ಶಾಸಕ ರೇಣುಕಾಚಾರ್ಯ ಮಾತ್ರ ಇದೊಂದು ಪ್ರೀ ಪ್ಲಾನ್ ಮರ್ಡರ್ ಎಂದು ಆರೋಪ ಮಾಡುತ್ತಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಇದನ್ನು ಅಪಘಾತ ಎಂದು ಪರಿಗಣಿಸಿದ್ದು, ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ತನಿಖೆ ನಡೆಸುವವರು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು. ಅದನ್ನು ಬಿಟ್ಟು ತನಿಖೆ ಪ್ರಗತಿಯಲ್ಲಿ ಇರುವಾಗ ಮಾಧ್ಯಮಗಳ ಮುಂದೆ ಇದೊಂದು ಅಪಘಾತ ಆಗಿರಬಹುದು ಎಂದು ಹೇಳಿದ್ದಾರೆ. ಇದರಿಂದ ಆರೋಪಿಗಳನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಅಪಘಾತ ಎಂದು ಬಂದರೆ, ಉನ್ನತ ತನಿಖೆಗೆ ಒತ್ತಾಯಿಸುವ ಎಲ್ಲಾ ಸಿದ್ಧತೆಯನ್ನು ರೇಣುಕಾಚಾರ್ಯ ಕುಟುಂಭಸ್ಥರು ಹಾಗೂ ಅವರ ಆಪ್ತರು ಮಾಡಿಕೊಂಡಿದ್ದಾರೆ.

    ಒಟ್ಟಾರೆಯಾಗಿ ಚಂದ್ರು ಸಾವಿಗೆ ಕಾರಣ ಏನು ಎಂಬುದು ಪೋಸ್ಟ್ ಮಾರ್ಟಂ ವರದಿ ಬಂದ ನಂತರ ಗೊತ್ತಾಗಲಿದೆ. ಇಂದು ಸಂಜೆಯೊಳಗೆ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರೋ ಸಾಧ್ಯತೆ ಇದೆ. ಅ ವರದಿಯ ಮೇಲೆ ರೇಣುಕಾಚಾರ್ಯರ ನಡೆ ತೀರ್ಮಾನಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ತಾಕತ್ ಇದ್ರೆ ನನ್ನನ್ನು ಮುಟ್ಟಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದಿದ್ದು ಸರಿಯಲ್ಲ – ರೇಣುಕಾಚಾರ್ಯ

    ತಾಕತ್ ಇದ್ರೆ ನನ್ನನ್ನು ಮುಟ್ಟಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದಿದ್ದು ಸರಿಯಲ್ಲ – ರೇಣುಕಾಚಾರ್ಯ

    ದಾವಣಗೆರೆ: ತಾಕತ್ ಇದ್ರೆ ನನ್ನನ್ನು ಮುಟ್ಟಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದಿದ್ದು ಸರಿಯಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ (MP Renukacharya) ವಾಗ್ದಾಳಿ ನಡೆಸಿದರು.

    ಚಂದ್ರು (Chandrashekar) ಸಾವಿನ ಪ್ರಕರಣ ದಿನೇ ದಿನೇ ರೋಚಕ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ತಾಕತ್ ಇದ್ದರೆ ನನ್ನನ್ನು ಮುಟ್ಟಿಕೊಳ್ಳಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದುಕೊಳ್ಳುವುದು ಸರಿಯಲ್ಲ. ನನ್ನ ಹಿಂದೆ ಸರ್ಕಾರ, ನನ್ನ ಕ್ಷೇತ್ರದ ಜನರು ಇದ್ದಾರೆ. ನನ್ನ ಕ್ಷೇತ್ರದ ಜನರು ವಜ್ರದ ಕವಚದಂತೆ ಇದ್ದಾರೆ. ನನಗೆ ಕೊಲೆ ಬೆದರಿಕೆ ಬಂದಿರುವ ಆಡಿಯೋ ಇದೆ. ನಂಬರ್ ಸಹಿತ ದೂರು ಕೂಡ ನೀಡಿದ್ದೆ. ಆದರೆ ನಾನು ನಿನ್ನೆ ಮಾಧ್ಯಮಗಳಲ್ಲಿ ಹೇಳಿದ ಕೂಡಲೇ ವಿಚಾರಣೆಗೆ ತೆರೆದಿದ್ದಾರೆ ಎಂದು ಕಿಡಿಕಾರಿದರು.

    ಮಾಧ್ಯಮಗಳಲ್ಲಿ ಮಾತನಾಡಿದಾಗ ತನಿಖೆ ಕೈಗೆತ್ತುಕೊಂಡಿದ್ದಾರೆ. ಇದರಲ್ಲೇ ಗೊತ್ತಾಗುತ್ತೆ ಎಷ್ಟು ವೈಫಲ್ಯ ಇದೆ ಎಂದು. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದ ಕಡೆ ಜನರಿಗೆ ಯಾವ ರಕ್ಷಣೆ ಇದೆ ಎಂದು ಜನರು ಕೇಳ್ತಾರೆ. ಪಂಚನಾಮೆ ಮಾಡುವಾಗ ಕುಟುಂಬಸ್ಥರನ್ನು ಕರೆಯಬೇಕಿತ್ತು. ಇದು ಪೊಲೀಸರ ನಿರ್ಲಕ್ಷ್ಯಕ್ಕೆ ಒಂದು ಉದಾಹರಣೆಯಾಗಿದೆ ಎಂದು ಆರೋಪಿಸಿದರು.

    ತನಿಖೆ ಪ್ರಗತಿಯಲ್ಲಿರುವಾಗ ಉನ್ನತ ಮಟ್ಟದ ಅಧಿಕಾರಿಗಳು ಗೌಪ್ಯತೆ ಕಾಪಾಡಬೇಕಿತ್ತು. ಆದರೆ ಗೌಪ್ಯತೆ ಕಾಪಾಡದೇ ಮಾತನಾಡಿದ್ದು ಜನರ ಅನುಮಾನಕ್ಕೆ ಕಾರಣವಾಗಿದೆ. ನನ್ನ ಸಹೋದರ ಹೇಳಿದ ಬಗ್ಗೆ ನಾನು ಮಾತನಾಡುವುದಿಲ್ಲ. ತನಿಖೆ ನಡೆಯುತ್ತಿದೆ, ಅದರ ಸತ್ಯಾಸತ್ಯತೆ ತಿಳಿಯಲಿದೆ. ನಮ್ಮ ಮಗ ಆತ್ಮಹತ್ಯೆ ಮಾಡಿಕೊಳ್ಳುವ ಯುವಕನಲ್ಲ ಎಂದರು. ಇದನ್ನೂ ಓದಿ: ಸಾವಿಗೂ ಮುನ್ನ ಕ್ಲಾಸ್‍ಮೇಟ್‍ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!

    ಇನ್ನರ್ ವೇರ್ ಇರ್ಲಿಲ್ಲ, ಆತನ ಕಿವಿ ಕಚ್ಚಿದ್ದಾರೆಂದು ಚಂದ್ರು ತಂದೆ ರಮೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ರೀತಿ ಮಾತನಾಡಬಾರದು. ತನಿಖೆ ಪೂರ್ಣಗೊಂಡ ನಂತರ ಅದರ ಬಗ್ಗೆ ಮಾತನಾಡುತ್ತೇವೆ. ಕಿರಣ್‍ನನ್ನು ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ. ಬೇಕಾಬಿಟ್ಟಿ ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ

    Live Tv
    [brid partner=56869869 player=32851 video=960834 autoplay=true]

  • ಸಾವಿಗೂ ಮುನ್ನ ಕ್ಲಾಸ್‍ಮೇಟ್‍ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!

    ಸಾವಿಗೂ ಮುನ್ನ ಕ್ಲಾಸ್‍ಮೇಟ್‍ಗಳ ಭೇಟಿಗೆ ಹಾತೊರೆದಿದ್ದ ಚಂದ್ರಶೇಖರ್!

    – ಪೊಲೀಸರಿಗೆ ಶಾಸಕ ಕ್ಲಾಸ್

    ದಾವಣಗೆರೆ: ಚಂದ್ರಶೇಖರ್ (Chandrashekhar) ಸಾವಿಗೂ ಮುನ್ನ ತನ್ನ ಕ್ಲಾಸ್‍ಮೇಟ್‍ಗಳಾಗಿದ್ದ ಚರಣ್, ಸಂಜಯ್ ಭೇಟಿಗೆ ಹಾತೊರೆಯುತ್ತಿದ್ದ ಅನ್ನೋ ವಿಷಯವೂ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ ಚರಣ್ (Charan), ಚಂದ್ರು ನಮಗೆ ಕಾಲ್ ಮಾಡಿದ್ದಾಗ ಶಾಂತವಾಗೇ ಇದ್ದ, ಯಾವುದೇ ಒತ್ತಡದಲ್ಲಿ ಇರಲಿಲ್ಲ ಅಂದಿದ್ದಾರೆ. ಇದನ್ನೂ ಓದಿ: ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ- ಮೃತ ಚಂದ್ರು ತಂದೆ ಗಂಭೀರ ಆರೋಪ

    ಶಿವಮೊಗ್ಗದ ಮತ್ತೋರ್ವ ಸ್ನೇಹಿತ ಉತ್ತಮ್ (Uttam) ಕೂಡ ಮಾತನಾಡಿದ್ದು, ಅ.30ರಂದು ಗೌರಿಗದ್ದೆಗೆ ನಾನೂ ಹೋಗಬೇಕಿತ್ತು. ಆದರೆ ಅನಾರೋಗ್ಯದಿಂದ ಹೋಗೋಕೆ ಆಗಲಿಲ್ಲ ಅಂತ ಚಂದ್ರು ಜೊತೆಗಿನ ಒಡನಾಟವನ್ನೂ ಹಂಚಿಕೊಂಡಿದ್ದಾರೆ. ಚಂದ್ರು ನಾಪತ್ತೆಯಾದ ಭಾನುವಾರ ರಾತ್ರಿ 11:30ರವರೆಗೆ ನಿರಂತರವಾಗಿ ಚಂದ್ರು ಫೋನ್‍ಗೆ ಒಂದೇ ನಂಬರ್ ನಿಂದ ಪದೇ ಪದೇ ಕರೆ, ಮೆಸೇಜ್ ಬಂದಿದೆ ಅಂತ ತಿಳಿದು ಬಂದಿದೆ. ಹಾಗಾಗಿ ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸ್ತಿದ್ದಾರೆ.

    ಸಹೋದರನ ಪುತ್ರ ಚಂದ್ರಶೇಖರ್ ನಿಗೂಢ ಸಾವಿನಿಂದ ಭಾವುಕರಾಗಿದ್ದ ಮಾಜಿ ಸಚಿವ ರೇಣುಕಾಚಾರ್ಯ (MP Renukacharya) ಇದೀಗ ಪೊಲೀಸರ ಮೇಲೆ ಅನುಮಾನ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ

    ಓವರ್ ಸ್ಪೀಡ್‍ನಿಂದ ಚಂದ್ರು ನಾಲೆಗೆ ಬಿದ್ದಿದ್ದಾನೆ ಅಂತ ಪೊಲೀಸರು ಹೇಳ್ತಿದ್ದಾರೆ. ಹಾಗಾದರೆ ಚಂದ್ರು ಕೈಗೆ ಹಗ್ಗ ಕಟ್ಟಿದ್ಯಾರು..? ಪೊಲೀಸರ ನಿರ್ಲಕ್ಷ್ಯ ಕಾಣ್ತಿದೆ. ಒಬ್ಬ ಶಾಸಕ ಮಗನಿಗೆ ಈ ರೀತಿಯಾದ್ರೆ ಸಾಮಾನ್ಯ ಜನರ ಗತಿ ಏನು..? ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ ವೈಫಲ್ಯ ಕಾಣಿಸುತ್ತಿದೆ ಅಂತ ಎಡಿಜಿಪಿ ಅಲೋಕ್ ಕುಮಾರ್ (ADGP Alok Kumar) ವಿರುದ್ಧ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಲ್ಲದೆ ಚಂದ್ರು ಕಾರು ಬಿದ್ದಿದ್ದ ನ್ಯಾಮತಿ-ಹೊನ್ನಾಳಿ ಮಾರ್ಗದ ನಾಲೆ ಬಳಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ರು. ಫೋನ್ ಲೊಕೇಷನ್ ಹೇಳಿದ್ದೇ ಬೇರೆ, ಕಾರು ಸಿಕ್ಕಿದ್ದೇ ಬೇರೆ ಕಡೆ ಅಂತ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಬಳಿಕ ಹೊನ್ನಾಳಿ ಪೊಲೀಸ್ ಠಾಣೆ ಹಿಂಭಾಗ ಇರಿಸಲಾಗಿರುವ ಕಾರ್ ನೋಡಲು ಯತ್ನಿಸಿದರು. ತನಿಖೆ ಹಂತದಲ್ಲಿರೋ ಕಾರಣ ಟಾರ್ಪಲ್ ತೆರೆದು ತೋರಿಸಲು ನಿರಾಕರಿಸಿದ ಸಿಪಿಐ ಸಿದ್ದೇಗೌಡ ಮೇಲೆ ರೇಗಾಡಿದರು.

    ನಿಮ್ಮ ಅಲೋಕ್ ಕುಮಾರ್ ನಿನ್ನೇ ಬಂದು ನನ್ನನ್ನು ಮಾತನಾಡಿಸದೇ ಹಾಗೇ ಹೋಗಿದ್ದಾನೆ. ನನ್ನ ಸ್ಟೇಟ್‍ಮೆಂಟ್ ಏನಾದ್ರು ತಗೊಂಡ್ರಾ..? ಓವರ್ ಸ್ಪೀಡ್ ಅಂತ ಹೇಳಿದಾನೆ. ಅದು ಹೆಂಗೆ ಹೇಳಿದ ಅಂಥ ಕೂಗಾಡಿದ್ದಾರೆ. ಈ ಮಧ್ಯೆ, ರೇಣುಕಾಚಾರ್ಯ ಮನೆಗೆ ಕ್ಷೇತ್ರದ ಕೆಲ ಮಹಿಳೆಯರು ಭೇಟಿ ನೀಡಿ ಕೈತುತ್ತು ತಿನ್ನಿಸಿ ಸಮಾಧಾನ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ

    ಚಂದ್ರು ಕಾರು ಅಪಘಾತ ಆಗಿರೋದು ನಿಜ: FSL ತಜ್ಞ

    ಬೆಂಗಳೂರು/ದಾವಣಗೆರೆ: ಹೊನ್ನಾಳಿ ಚಂದ್ರಶೇಖರ್ (Honnalli Chandrashekhar) ನಿಗೂಢ ಸಾವಿನ ಪ್ರಕರಣ ಮತ್ತಷ್ಟು ಕಂಗಟ್ಟಾಗಿ ಮುಂದುವರಿದಿದೆ. ಇದು ಅಪಘಾತವೋ.. ಕೊಲೆಯೋ..? ಅನ್ನೋ ಹಲವು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸ್ತಿದ್ದಾರೆ.

    ಚಂದ್ರಶೇಖರ್ ಕಾರು (Car) ಪತ್ತೆಯಾಗಿದ್ದ ದಾವಣಗೆರೆಯ ನ್ಯಾಮತಿ-ಹೊನ್ನಾಳಿ ಮಾರ್ಗದ ಸೊರಟೂರಿನ ತುಂಗಾ ಮೇಲ್ದಂಡೆ ಕಾಲುವೆ ಬಳಿ ಪೊಲೀಸರು ಮರುಸೃಷ್ಠಿ ನಡೆಸಿದರು. ಖಾಸಗಿ ವಿಧಿ ವಿಜ್ಞಾನ ತಜ್ಞರಾದ ಡಾ. ಫಣೀಂದ್ರ ಅವರು ಸ್ಥಳಕ್ಕೆ ಭೇಟಿ ಕೊಟ್ಟು ಮರುಸೃಷ್ಠಿ ಪ್ರಕ್ರಿಯೆಯಲ್ಲಿ ಭಾಗಿಯಾಗಿ ಕೆಲವೊಂದು ಮಾಹಿತಿಯನ್ನು ಕೊಟ್ಟಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಖಾಸಗಿ ವಿಧಿ ವಿಜ್ಞಾನತಜ್ಞರಾದ ಡಾ. ಫಣೀಂದ್ರ, ಚಂದ್ರಶೇಖರ್ ಕಾರ್ ಅಪಘಾತ ಆಗಿರೋದು ನಿಜ. ಆದರೆ ಸಾವು ಅಪಘಾತಕ್ಕೋ.. ಮತ್ಯಾವುದಕ್ಕೆ ಆಗಿದೆ ಅನ್ನೋದು ತನಿಖೆಯಲ್ಲಿ ಗೊತ್ತಾಗಬೇಕು ಅಂತಿದ್ದಾರೆ. ಇದನ್ನೂ ಓದಿ: ನನ್ನ ಮಗನ ಮರ್ಮಾಂಗ ಊದಿಕೊಂಡಿತ್ತು, ಅದಕ್ಕೆ ಇಂಜೆಕ್ಷನ್ ಮಾಡಿದ್ದಾರೆ- ಮೃತ ಚಂದ್ರು ತಂದೆ ಗಂಭೀರ ಆರೋಪ

    100-120 ಕಿ.ಮೀ. ಸ್ಪೀಡ್‍ನಲ್ಲಿ ಕಾರ್ ಡ್ರೈವಿಂಗ್ ಮಾಡಲಾಗಿದೆ. ಚಂದ್ರು ಕಾರ್ ಟೈಯರ್ ಸ್ಫೋಟವಾಗಿದೆ. ಈ ವೇಳೆ ಮೊದಲು ಮೈಲುಗಲ್ಲಿಗೆ ಡಿಕ್ಕಿ ಹೊಡೆದು ನಂತರ ಕಾರಿನ ನಿಯಂತ್ರಣ ತಪ್ಪಿದೆ. ಸ್ಪೀಡ್ ಲಿಮಿಟ್ ಕಟ್ ಆದ ಬಳಿಕ ಕಾಂಕ್ರೀಟ್‍ನ ಹಂಪ್‍ಗೆ ಡಿಕ್ಕಿಯಾಗಿದೆ. ಬಳಿಕ ಕಾಲುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನಾಲೆಗೆ ಕಾರು ಬಿದ್ದಿದೆ. ಕಾರಿನಲ್ಲಿ ಸಾಕಷ್ಟು ದೊಡ್ಡ ಡ್ಯಾಮೇಜ್ ಆಗಿದ್ದು, ಕಾರ್ ನಿಯಂತ್ರಣ ತಪ್ಪಿದ್ದರಿಂದ ಹಿಂಬದಿಗೂ ಡ್ಯಾಮೇಜ್ ಆಗಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]