Tag: Chandrashekaranatha Swamiji

  • ಚಂದ್ರಶೇಖರ ಸ್ವಾಮೀಜಿ ಭೈರವೈಕ್ಯ – ನಾಥ ಸಂಪ್ರದಾಯದಂತೆ ನೆರವೇರಿದ ಅಂತ್ಯ ಸಂಸ್ಕಾರ

    ಚಂದ್ರಶೇಖರ ಸ್ವಾಮೀಜಿ ಭೈರವೈಕ್ಯ – ನಾಥ ಸಂಪ್ರದಾಯದಂತೆ ನೆರವೇರಿದ ಅಂತ್ಯ ಸಂಸ್ಕಾರ

    ಬೆಂಗಳೂರು: ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ (Okkaliga Math) ಪೀಠಾಧ್ಯಕ್ಷರಾದ ಶ್ರಿ ಚಂದ್ರಶೇಖರ ಸ್ವಾಮೀಜಿ (Chandrashekaranatha Swamiji) ಇಹಲೋಕ ತ್ಯಜಿಸಿದ್ದು, ಮಠದ ಆವರಣದಲ್ಲೇ ನಾಥ ಸಂಪ್ರಾದಾಯದಂತೆ ಅಂತಿಮ ವಿಧಿವಿಧಾನಗಳ ಮೂಲಕ ಶ್ರೀಗಳ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

    ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ತಡರಾತ್ರಿ 12 ಗಂಟೆ ಸುಮಾರಿಗೆ ನಿಧನ ಹೊಂದಿದ್ದಾರೆ. ಕೆಂಗೇರಿಯ ಮಠದ ಆವರಣದಲ್ಲಿ ಬೆಳಗ್ಗೆಯಿಂದಲೇ ಶ್ರೀಗಳ ಪಾರ್ಥಿವ ಶರೀರವನ್ನ ಭಕ್ತರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಇದನ್ನೂ ಓದಿ: ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲ್ಸ ಆಗ್ತಿದೆ: ವಿಶ್ವನಾಥ್‌

    ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಚೆಲುವರಾಯಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ, ಸೇರಿದಂತೆ ಹಲವು ನಾಯಕರು ಮತ್ತು ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಮಠದ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಶ್ರೀಗಳ ಅಂತಿಮ ದರ್ಶನ ಪಡೆದರು. ಶ್ರೀಗಳ ಕೊಡುಗೆ, ಬದುಕಿದ ಮಾರ್ಗದ ಸಂಬಂಧ ನೆನೆದು ಹಲವರು ಭಾವುಕರಾದರು. ಇದನ್ನೂ ಓದಿ: ಭಾನುವಾರ ಭಾರತಕ್ಕೆ ಶುಭಾಂಶು ಶುಕ್ಲಾ: ಆಕ್ಸಿಯಂ ಸ್ಪೇಸ್ ಮಿಷನ್ ಬಳಿಕ ತವರಿಗೆ ಮೊದಲ ಭೇಟಿ

  • ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ

    ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ವಿಧಿವಶ

    ಬೆಂಗಳೂರು: ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji) ಅವರು ತಡರಾತ್ರಿ ವಿಧಿವಶರಾಗಿದ್ದಾರೆ.

    ಶ್ರೀಮಠದ ಸ್ಥಾಪನೆ ಮಾಡಿ ಶಿಕ್ಷಣ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಶ್ರೀಗಳು ತಡರಾತ್ರಿ 12:01 ಗಂಟೆ ಸುಮಾರಿಗೆ ಭೈರವೈಕ್ಯರಾಗಿದ್ದಾರೆ.

    ಸ್ವಾಮೀಜಿಗಳ ಅಂತಿಮ ದರ್ಶನವನ್ನು ಇಂದು (ಶನಿವಾರ) ಶ್ರೀಮಠದ ಆವರಣದಲ್ಲೇ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆ ವೇಳೆಗೆ ಧಾರ್ಮಿಕ ಮುಖಂಡರು, ಪೀಠಾಧ್ಯಕ್ಷರ ನೇತೃತ್ವದಲ್ಲಿ ಭೈರವೈಕ್ಯರಾದ ಶ್ರೀಗಳ ಅಂತಿಮ ವಿಧಿ ವಿಧಾನಗಳು ನೆರವೇರಲಿವೆ. ಇದನ್ನೂ ಓದಿ: ಈ ದೇಶಗಳಲ್ಲಿ ಬೀದಿ ನಾಯಿಗಳಿಗೆ ಗ್ಯಾಸ್‌ ಚೇಂಬರ್‌, ದಯಾಮರಣ ಶಿಕ್ಷೆ – ಯಾವ ದೇಶದಲ್ಲಿ ಏನು ಕಾನೂನು?

    ಶ್ರೀಗಳ ಉತ್ತರಾಧಿಕಾರಿಗಳಾದ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನ ನೇರವೇರಿಸಲಿದ್ದಾರೆ. ಇದನ್ನೂ ಓದಿ: ಇಂದು ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ – 500 ಕಾರುಗಳಲ್ಲಿ ಬೃಹತ್‌ ಯಾತ್ರೆ

  • ಸ್ವಾಮೀಜಿಗೆ ಬೆಳ್ಳಿ ಕಿರೀಟ ಕೊಟ್ಟಿದ್ದೆ ಅವರ‍್ಯಾಕೆ ಹಾಗೆ ಮಾತಾಡಿದ್ರೋ: ಬೈರತಿ ಸುರೇಶ್

    ಸ್ವಾಮೀಜಿಗೆ ಬೆಳ್ಳಿ ಕಿರೀಟ ಕೊಟ್ಟಿದ್ದೆ ಅವರ‍್ಯಾಕೆ ಹಾಗೆ ಮಾತಾಡಿದ್ರೋ: ಬೈರತಿ ಸುರೇಶ್

    – ಸಿಎಂ, ಡಿಸಿಎಂ ಮಧ್ಯೆ ಯಾರು ಹುಳಿ ಹಿಂಡ್ಬೇಡಿ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (D.K Shivakumar) ಮಧ್ಯೆ ಯಾರು ಹುಳಿ ಹಿಂಡಬಾರದು ಎಂದು ಸಚಿವ ಬೈರತಿ ಸುರೇಶ್ (Byrathi Suresh) ಹೇಳಿದ್ದಾರೆ.

    ಚಂದ್ರಶೇಖರನಾಥ ಸ್ವಾಮೀಜಿಯವರ (Chandrashekaranatha Swamiji) ಸಿಎಂ ಬದಲಾವಣೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ವೇಳೆ ಕಾಂಗ್ರೆಸ್ ಪಕ್ಷದಲ್ಲಿ ಯಾರು ಸಿಎಂ ಆಗಬೇಕು ಹಾಗೂ ಯಾರು ಡಿಸಿಎಂ, ಸಚಿವರು ಆಗಬೇಕು ಎಂದು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ಅದಕ್ಕಾಗಿಯೇ ಖರ್ಗೆ, ಸೋನಿಯಾ, ರಾಹುಲ್, ವೇಣುಗೋಪಾಲ್, ಸುರ್ಜೇವಾಲ ನಿರ್ಧಾರ ಮಾಡುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಗೆ ಸಿಎಂ ಸ್ಥಾನ ಹೇಳಿಕೆ ಹಿಂದಿದ್ಯಾ ಕುತಂತ್ರ? – ಆಪ್ತರ ಬಳಿ ಸಿಎಂ ತೀವ್ರ ಅಸಮಾಧಾನ

    ಸ್ವಾಮೀಜಿಯವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಮಾತಾಡಿದ ಸ್ವಾಮೀಜಿಯವರನ್ನ ಕಳೆದ ವರ್ಷ ನಮ್ಮ ಕ್ಷೇತ್ರಕ್ಕೆ ಕರೆದು ಬೆಳ್ಳಿ ಕಿರೀಟ ಕೊಟ್ಟಿದ್ದೆ ಅವರು ಯಾಕೆ ಹಾಗೆ ಮಾತಾಡಿದ್ದಾರೋ ಗೊತ್ತಿಲ್ಲ. ನನ್ನ ಪ್ರಕಾರ ಸಿದ್ದರಾಮಯ್ಯನವರು ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ಆತ್ಮೀಯವಾಗಿದ್ದಾರೆ. ಅವರಿಬ್ಬರು ತೀರ್ಮಾನ ಮಾಡ್ತಾರೆ. ಅವರಿಬ್ಬರ ನಡುವೆ ತಂದಿಡುವ ಕೆಲಸ ಯಾರು ಮಾಡಬಾರದು. ಮಾತುಗಳು ಅವರಿಬ್ಬರ ನಡುವೆ ಬೆಸುಗೆ ಹಾಕುವಂತಿರಬೇಕು. ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನ ಹಾಗೂ ಉಪ ಮುಖ್ಯಮಂತ್ರಿ ಸ್ಥಾನ ಎರಡು ಭರ್ತಿ ಆಗಿದ್ದು ಖಾಲಿ ಇಲ್ಲ ಎಂದಿದ್ದಾರೆ.

    ಆರ್ ಅಶೋಕ್, ಸಿದ್ದರಾಮಯ್ಯ ರಾಜಿನಾಮೆ ಕೇಳಿದ ವಿಚಾರವಾಗಿ, ಅವರು ಯಾರು ಹೇಳೋಕೆ? ಆರ್.ಅಶೋಕ್ ಕೇಳಿ ಸಿಎಂ ಮಾಡಬೇಕಾ? ಅವರಿಗೆ ಯಾವ ನೈತಿಕತೆ ಇಲ್ಲ. ಹುಳಿ ಹಿಂಡೋ ಕೆಲಸ ಮಾಡೋದು ಬೇಡ. ಹಿಂದೆ ಹೈಕಮಾಂಡ್ ಏನು ಹೇಳಿದೆ ಗೊತ್ತಿಲ್ಲ. ನಮ್ಮಲ್ಲಿ ಈ ವಿಚಾರವಾಗಿ ಯಾರು ಗೊಂದಲ ಉಂಟು ಮಾಡಿಲ್ಲ. ಜಾತಿವಾರು ಡಿಸಿಎಂ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಎಷ್ಟು ವರ್ಷ ಏನು ಮಾತಾನಾಡಿಕೊಂಡಿದ್ದಾರೆ ಅವರಿಗೆ ಹಾಗೂ ಹೈಕಮಾಂಡ್‍ಗೆ ಗೊತ್ತು ಎಂದಿದ್ದಾರೆ. ಇದನ್ನೂ ಓದಿ: ದೇವೇಗೌಡರಿಗೆ ಅಪಮಾನ ಆಗಿರೋ ಬಗ್ಗೆ ಸ್ವಾಮೀಜಿ ಯಾಕೆ ಮಾತಾಡಲಿಲ್ಲ?: ಹೆಚ್.ಡಿ ರೇವಣ್ಣ

  • ದೇವೇಗೌಡರಿಗೆ ಅಪಮಾನ ಆಗಿರೋ ಬಗ್ಗೆ ಸ್ವಾಮೀಜಿ ಯಾಕೆ ಮಾತಾಡಲಿಲ್ಲ?: ಹೆಚ್.ಡಿ ರೇವಣ್ಣ

    ದೇವೇಗೌಡರಿಗೆ ಅಪಮಾನ ಆಗಿರೋ ಬಗ್ಗೆ ಸ್ವಾಮೀಜಿ ಯಾಕೆ ಮಾತಾಡಲಿಲ್ಲ?: ಹೆಚ್.ಡಿ ರೇವಣ್ಣ

    ಬೆಂಗಳೂರು: ಡಿ.ಕೆ ಶಿವಕುಮಾರ್ (D.K Shivakumar) ಸಿಎಂ ಆಗಲಿ ಎಂದು ಹೇಳಿದ ಚಂದ್ರಶೇಖರನಾಥ ಸ್ವಾಮೀಜಿ (Chandrashekaranatha Swamiji), ದೇವೇಗೌಡರಿಗೆ (H.D Deve Gowda) ಅಪಮಾನ ಆಗಿರುವ ಬಗ್ಗೆ ಯಾಕೆ ಮಾತಾಡಲಿಲ್ಲ? ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (H.D Revanna) ಅಸಮಾಧಾನ ಹೊರ ಹಾಕಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕು ಎಂಬ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಸ್ವಾಮೀಜಿ ಹಿಂದೆ ಯಾವ ರೀತಿ ಇದ್ದರು ಎಂಬುದನ್ನ ಮೊದಲು ಅವರು ಹೇಳಲಿ. ದೇವೇಗೌಡರ ಬಗ್ಗೆ ಒಂದು ತಿಂಗಳಿಂದ ಏನೇನು ನಡೆದಿದೆ? ಕೃತಜ್ಞತೆಗಾದರೂ ಸ್ವಾಮೀಜಿ ಮಾತಾಡಬಹುದಿತ್ತು. ನಮ್ಮ ನಾಯಕರು, ನಮ್ಮ ಸಮಾಜದ ಮುಖಂಡರು ವಿರುದ್ಧ ಕೆಲವರು ಯಾವ ರೀತಿ ನಡೆಸುತ್ತಿದ್ದಾರೆ ಎಂದು ನೋಡಿದ್ದೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬೆವರು ಸುರಿಸದೇ ಜೀವನ ಮಾಡುವವರು ಸ್ವಾಮೀಜಿಗಳು: ರಾಜಣ್ಣ ಕಿಡಿ

    ಸಿಎಂ ಯಾರನ್ನು ಮಾಡಿಕೊಂಡರೆ ನಮಗೇನು? ಆ ವಿಚಾರ ಕಾಂಗ್ರೆಸ್ ಪಕ್ಷಕ್ಕೆ ಅದು ಸಂಬಂಧಪಟ್ಟಿದ್ದು. ನಮಗೇನು ಸಂಬಂಧವಿಲ್ಲ. ಚಂದ್ರಶೇಖರನಾಥ ಸ್ವಾಮೀಜಿ ಒಂದು ತಿಂಗಳಿಂದ ನಡೆಯುತ್ತಿರುವ ಘಟನೆಗಳ ಬಗ್ಗೆ ಸೌಜನ್ಯಕ್ಕಾದರೂ ಮಾತಾಡಬಹುದಿತ್ತು ಎಂದು ಅವರು ಕಿಡಿಕಾರಿದ್ದಾರೆ.

    ಮಠಕ್ಕೆ ದೇವೇಗೌಡರು ಎಷ್ಟು ಸಹಾಯ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ನನ್ನ ಬಗ್ಗೆ ಮಾತಾಡೋದು ಬೇಡ. ದೇವೇಗೌಡರ ಬಗ್ಗೆ ಒಂದು ತಿಂಗಳಿಂದ ಮಾಧ್ಯಮಗಳಲ್ಲಿ ಏನೇನು ಬಂತು. ಕೆಂಪೇಗೌಡರ ಕಾರ್ಯಕ್ರಮ ಅದು. ದೊಡ್ಡವರು ಮಠಕ್ಕೆ ಏನು ಮಾಡಿದ್ದರು ಎಂದು ಹೇಳಬಹುದಿತ್ತು. ಸ್ವಾಮೀಜಿ ನಮ್ಮ ಪರ ಮಾತಾಡಿ ಎಂದು ನಾನು ಹೇಳಿಲ್ಲ. ಒಂದು ಸಮಾಜದ ಮುಖಂಡರನ್ನ ಈ ರೀತಿ ಅವಹೇಳನಕಾರಿಯಾಗಿ ಒಂದು ತಿಂಗಳಿಂದ ನಡೆಸಿಕೊಂಡಿದ್ರು. ಅದನ್ನು ಖಂಡಿಸಬೇಕಾಗಿತ್ತು ಎಂದು ಸ್ವಾಮೀಜಿ ವಿರುದ್ಧ ಅವರು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ನನ್ನ ಮಗ ತಪ್ಪುಮಾಡಿದ್ರೆ ಕ್ರಮ ಆಗಲಿ: ಹೆಚ್.ಡಿ.ರೇವಣ್ಣ