Tag: Chandrasekhar Guruji

  • ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ

    ವಿದ್ಯಾಕಾಶಿ ಜನರಿಗೆ ದೇವಸ್ಥಾನ ಕಟ್ಟಿಸೋದಾಗಿ ಹೇಳಿ ಹಣ ಪಡೆದಿದ್ದ ಚಂದ್ರಶೇಖರ್ ಗುರೂಜಿ ಹಂತಕ

    ಧಾರವಾಡ: ಸರಳವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ನಡೆದು ಇಂದಿಗೆ ನಾಲ್ಕು ದಿನ ಕಳೆದಿವೆ. ಈಗಾಗಲೇ ಆರೋಪಿಗಳಾದ ಮಹಾಂತೇಶ್ ಹಾಗೂ ಮಂಜುನಾಥ್ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ಎದುರಿಸುತ್ತಿದ್ದಾರೆ. ಇಷ್ಟರಲ್ಲೇ ಕೊಲೆಗಾರ ಮಂಜುನಾಥ್ ಮರೇವಾಡ ಬಗ್ಗೆ ಇನ್ನು ಹಲವು ಅಂಶ ಬೆಳಕಿಗೆ ಬಂದಿದ್ದು, ಆತ ವಿದ್ಯಾಕಾಶಿ ಧಾರವಾಡದಲ್ಲಿ ಬಿಲ್ಡಿಂಗ್ ಕಟ್ಟುವ ಗುತ್ತಿಗೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ.

    ನಗರದ ಸಿದ್ಧಾರೂಢ ಕಾಲೋನಿಯಲ್ಲಿ ಒಡೆಯರ್ ಹಾಗೂ ಹಂಚನಾಳ ಮನೆಗಳನ್ನ ಕಟ್ಟುವ ಗುತ್ತಿಗೆ ಪಡೆದಿದ್ದ ಕೊಲೆಗಾರ ಮಂಜುನಾಥ್ ಮರೇವಾಡ, ಹಂಚಿನಾಳ ಅವರಿಂದ 13 ಲಕ್ಷ ಹಣ ಪಡೆದಿದ್ದಾನೆ. ಆದರೆ ಅವರ ಮನೆಯ 6 ಲಕ್ಷ ರೂ.ಗಷ್ಟೇ ಕೆಲಸ ಮಾಡಿದ್ದಾನೆ. ಅಲ್ಲದೇ ಒಡೆಯರ್ ಎನ್ನುವವರ ಮನೆಯ ಕೆಲಸ ಕೂಡಾ ಅರ್ಧಕ್ಕೆ ನಿಂತಿದೆ. ಇದೇ ಕಾಲೋನಿಯಲ್ಲಿ ಹಲವು ಬಿಲ್ಡಿಂಗ್ ಕೆಲಸ ಮಾಡಿದ್ದಕ್ಕೆ, ಇವನಿಗೆ ಕಾಲೋನಿಯಲ್ಲಿ ಸಿದ್ಧಾರೂಢರ ದೇವಸ್ಥಾನ ಕಟ್ಟುವ ಗುತ್ತಿಗೆ ಕೂಡಾ ನೀಡಲಾಗಿದೆ. ಇದನ್ನೂ ಓದಿ:  ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೋಫೆಸರ್ ಕ್ಷಮೆಯಾಚನೆ 

    ಕಳೆದ ನಾಲ್ಕು ತಿಂಗಳ ಹಿಂದೆ 5 ಲಕ್ಷಕ್ಕೆ ದೇವಸ್ಥಾನ ಕಟ್ಟಿಸಿ ಕೊಡಬೇಕು ಎಂದು ಗಡುವನ್ನು ನೀಡಿ 50 ಸಾವಿರ ಮುಂಗಡ ಹಣ ಕೂಡಾ ಕೊಡಲಾಗಿದೆ. ಆದರೆ ಈತ ಗುರೂಜಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಈ ಹಣ ಕೊಟ್ಟವರಿಗೆ ದೊಡ್ಡ ಸಂಕಷ್ಟ ಬಂದು ಒದಗಿದೆ. ಅಲ್ಲದೇ ಕೆಲ ಕಾರ್ಮಿಕರ ಸಂಬಳ ಕೂಡಾ ಈತ ನೀಡಬೇಕಾಗಿದ್ದು, ಅದೂ ಕೂಡಾ ಮಂಜುನಾಥ್ ಉಳಿಸಿಕೊಂಡಿದ್ದಾನೆ.

    ಮಂಜುನಾಥ್ ಮರೇವಾಡ ಜೈಲು ಸೇರಿದ ಮೇಲೆ ಯಾವಾಗ ಅವನು ಅಲ್ಲಿಂದ ಬಿಡುಗಡೆಯಾಗಿ ಬಂದು ನಮ್ಮ ಕೆಲಸ ಮುಗಿಸಿಕೊಡಬೇಕು, ಯಾವಾಗ ನಾವು ಆ ಮನೆಯಲ್ಲಿ ಇರಬೇಕು ಎಂದು ಮನೆ ಗುತ್ತಿಗೆ ಕೊಟ್ಟ ಮಾಲೀಕರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ದೇವಸ್ಥಾನದ ಕೆಲಸ ಕೂಡಾ ಇದೇ ರೀತಿಯಾಗಿದೆ ಎಂಬ ಮಾತುಗಳು ಹೇಳಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಂದ್ರಶೇಖರ್ ಗುರೂಜಿ ಹತ್ಯೆ : ಸ್ಯಾಂಡಲ್ ವುಡ್ ದಿಗ್ಭ್ರಮೆ

    ಚಂದ್ರಶೇಖರ್ ಗುರೂಜಿ ಹತ್ಯೆ : ಸ್ಯಾಂಡಲ್ ವುಡ್ ದಿಗ್ಭ್ರಮೆ

    ನಿನ್ನೆ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ನಲ್ಲಿ ತಮ್ಮದೇ ಕಂಪನಿಯ ಮಾಜಿ ನೌಕರರಿಂದ ಹತ್ಯೆಯಾದ ಚಂದ್ರಶೇಖರ್ ಗುರೂಜಿ ಸಾವಿಗೆ ಸ್ಯಾಂಡಲ್ ವುಡ್ ನ ಅನೇಕರು ದಿಗ್ಭ್ರಮೆ ವ್ಯಕ್ತ ಪಡಿಸಿದ್ದಾರೆ. ಹಾಡು ಹಗಲೆ ಇಂಥದ್ದೊಂದು ಕೃತ್ಯ ನಡೆದಿರುವುದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ. ಮನುಷ್ಯನ ಮನಸ್ಥಿತಿಯ ಬಗ್ಗೆಯೂ ಅವರು ಚರ್ಚೆ ಮಾಡಿದ್ದಾರೆ. ಕೊಲ್ಲುವುದು ಎಲ್ಲದಕ್ಕೂ ಪರಿಹಾರವಲ್ಲ ಎಂಬ ಮಾತುಗಳನ್ನೂ ಆಡಿದ್ದಾರೆ.

    ನಿನ್ನೆಯಷ್ಟೇ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಹತ್ಯೆಯ ಕುರಿತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ‘ನನ್ನ ಆತ್ಮೀಯ ಸ್ನೇಹಿತರು, ನನ್ನ ಅವರ ಒಡನಾಟ ಅಧ್ಯಾತ್ಮಿಕ ಹಾಗೂ ವಾಸ್ತು ಸಂಬಂಧಿಸಿದ್ದು. ಸದಾ ನನ್ನ ಒಳಿತು ಬಯಸುತ್ತಿದ್ದ ಆತ್ಮ. ನಾವಿಬ್ಬರೂ ಮಾತಿಗೆ ಕೂತರೆ ಗಂಟೆಗಟ್ಟಲೇ. ನನ್ನ ರಾಜ್ಯಸಭಾ ಸ್ಥಾನಕ್ಕೆ ತಮಗೆ ಸಿಕ್ಕಂತೆ ಸಂಭ್ರಮಿಸಿದ್ದರು. ಅವರ ಅಮಾನುಷವಾಗಿ ಕೊಲೆಗೈದ ಪಾಪಿಗಳಿಗೆ ತಕ್ಕ ಶಿಕ್ಷೆಯಾಗಲಿ. ಇಂದಿನ ಕಾಲದಲ್ಲಿ ಯಾರನ್ನು ನಂಬೋದು’ ಎಂದು ಬರೆದುಕೊಂಡಿದ್ದರು. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಕೂಡ ಫೇಸ್ ಬುಕ್ ನಲ್ಲಿ ಹತ್ಯೆಯ ವಿಡಿಯೋವನ್ನು ಹಂಚಿಕೊಂಡು, ‘ನಮ್ಮ ದೇಶದಲ್ಲಿ ಇಷ್ಟು ಸುಲಭವಾಗಿ ಒಬ್ಬರ ಜೀವ ತಗೆಯಬಹುದಾ? ಎಷ್ಟು ಘೋರ. ಗುರೂಜಿಯಾದರೂ, ಟೈಲರ್ ಆದರೂ ಮೃತರ ಆತ್ಮಕ್ಕೆ ಶಾಂತಿ ಕೋರುವುದೊಂದೇ ನಮ್ಮ ಕೈಲಿರೋದು’ ಎಂದು ಬರೆದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]