Tag: Chandrasekhar

  • ಮೂವತ್ತು ಕೋಟಿ ವೆಚ್ಚದಲ್ಲಿ ತಯಾರಾಗಲಿದೆ ‘ಮದರ್ ತೆರೇಸಾ’ ವೆಬ್ ಸರಣಿ

    ಮೂವತ್ತು ಕೋಟಿ ವೆಚ್ಚದಲ್ಲಿ ತಯಾರಾಗಲಿದೆ ‘ಮದರ್ ತೆರೇಸಾ’ ವೆಬ್ ಸರಣಿ

    ಡವರು ಹಾಗೂ ದೀನದಲಿತರ ಸೇವೆಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಿಳೆ, ಪದ್ಮಶ್ರೀ ಪುರಸ್ಕೃತೆ, ಶಾಂತಿಗಾಗಿ ನೋಬೆಲ್ ಪ್ರಶಸ್ತಿ ಪಡೆದ  ಮದರ್ ತೆರೇಸಾ (Mother Teresa)  ಅವರ ಜೀವನ ಚರಿತ್ರೆ ಇದೀಗ  ವೆಬ್ ಸರಣಿಯಲ್ಲಿ (Web Series) ಮೂಡಿಬರಲಿದೆ.  ಸಾಹಿತಿ, ಚಿತ್ರಕಥೆಗಾರ ದಿ. ಜಾನ್‌ ಪಾಲ್ ಪುತ್ತುಸ್ಸೆರಿ, ಹಾಗೂ ನಿರ್ದೇಶಕ ಪಿ. ಚಂದ್ರಕುಮಾರ್‌ ಸೇರಿ ಮೂರು ವರ್ಷಗಳಿಂದ ಇವರ ಬಗ್ಗೆ ಮಾಹಿತಿ ಕಲೆಹಾಕಿ ಈ ಸೀರೀಸ್ ಮಾಡುತ್ತಿದ್ದಾರೆ. ಮದರ್ ತೆರೇಸಾ ವೆಬ್ ಸರಣಿಯ ಶೀರ್ಷಿಕೆ ಹಾಗೂ ಬ್ಯಾನರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.  ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ  ಹೆಸರುವ  ಮಾಡಿರುವ  ಚಂದ್ರಶೇಖರ್ ಅವರು ಹಿಂದಿ. ಕನ್ನಡ ಸೇರಿದಂತೆ   ಬಹುಭಾಷೆಗಳಲ್ಲಿ ತಯಾರಾಗಲಿರುವ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ನ್ನು ಸುಮಾರು 30 ಕೋಟಿ ರೂ.ಗಳ‌ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷವಾಗಿ ಈ ವೆಬ್ ಸರಣಿಯಲ್ಲಿ ಹಿರಿಯನಟ ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಮದರ್ ತೆರೇಸಾ ಅವರ ಬಾಲ್ಯ, ಹರೆಯದ ಜೀವನ ಹೇಗಿತ್ತು. ಹಾಗೂ ಅವರ ಹಿರಿಯ ವಯಸಿನಲ್ಲಿ ನಡೆದ ಘಟನೆಗಳು, ಸಮಾಜಸೇವೆ  ಇದನ್ನೆಲ್ಲ ಈ ಪ್ಯಾನ್ ಇಂಡಿಯಾ ವೆಬ್ ಸೀರೀಸ್ ಮೂಲಕ ನಿರ್ದೇಶಕ ಚಂದ್ರಶೇಖರ್ ಹೇಳಹೊರಟಿದ್ದಾರೆ. ಮದರ್ ತೆರೇಸಾ  ಅವರು ಎಲ್ಲೆಲ್ಲಿ ಹೋಗಿದ್ದರು, ಅವರು ಹೆಜ್ಜೆ ಇಟ್ಟ ನೆಲದಲ್ಲೇ ಶೂಟಿಂಗ್ ಮಾಡಲಾಗುತ್ತಿದೆ. ಅವರು ನೆಲೆಸಿದ್ದ ರೋಮ್. ಜೆರುಸಲೆನಿಯಂ, ಟೆಥ್‌ಲೆಹೆಮ್, ಮ್ಯಾಸಿಡೋನಿಯಾ. ಯುಕೆ. ಮತ್ತು ಇಟಲಿಯಂತಹ  ಸ್ಥಳಗಳ ಜೊತೆಗೆ ಮದರ್ ತೆರೇಸಾ ಅವರ ಜೀವನದ ಮೇಲೆ ಪ್ರಭಾವ ಬೀರಿದ ಪಶ್ಚಿಮ ಬಾಂಗಾಳ, ಬಾಂಗ್ಲಾದೇಶ, ಮುಂಬೈ, ಕೇರಳ. ಬಿಹಾರ. ಕರ್ನಾಟಕ ಮುಂತಾದ ಪ್ರಮುಖ ಸ್ಥಳಗಳಲ್ಲೆ ಚಿತ್ರೀಕರಣ ನಡೆಯಲಿದೆ. ತನ್ನ19ನೇ ವಯಸಿನಲ್ಲೇ  ಚಿತ್ರರಂಗಕ್ಕೆ ಬಂದ ನಿರ್ದೇಶಕ ಪಿ. ಚಂದ್ರಕುಮಾರ್ ಅವರು ಈಗಾಗಲೇ 150ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿ, ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿಗಳನ್ನು ಗಳಿಸಿದ್ದಾರೆ.

    ಅವರು  ಚಿತ್ರದ ಕುರಿತಂತೆ ಮಾತನಾಡುತ್ತ  ಮದರ್ ತೆರೇಸಾ ಅವರ  ಹುಟ್ಟು,ಬಾಲ್ಯದಿಂದ ಆರಂಭಿಸಿ,ಅವರು ಭಾರತಕ್ಕೆ ಬಂದ ಮೇಲೆ ಏನೆಲ್ಲ‌ ಆಯಿತು ಅವರ ಸೋಷಿಯಲ್ ಸರ್ವೀಸ್ ಇದನ್ನೆಲ್ಲ ಇಟ್ಟುಕೊಂಡು ಸ್ಕ್ರಿಪ್ಟ್ ಹೆಣೆಯಲಾಗಿದೆ‌. ಪ್ರತಿ ಎಪಿಸೋಡಿಗೆ ಒಂದು ಕೋಟಿ ಬಜೆಟ್ ಹಾಕಿಕೊಂಡಿದ್ದೇವೆ.  ಅವರ ಹರೆಯದ ಪಾತ್ರಕ್ಕಾಗಿ ಹೊಸ ಪ್ರತಿಭೆಗಳ ಹುಡುಕಾಟ ನಡೆಯುತ್ತಿದ್ದು, ರಾಜ್ಯದಲ್ಲೂ  ಅಡಿಶನ್‌ ಮಾಡಲಾಗುತ್ತದೆ. ಹೆಸರಾಂತ ಕಲಾವಿದೆಯನ್ನು ಹಾಕಿಕೊಳ್ಳುವ ಸಲಹೆ ಬಂದರೂ ಅಂಥವರಲ್ಲಿ ತೆರೆಸಾ ಅವರನ್ನು ಕಾಣಲು ಸಾಧ್ಯವಿಲ್ಲ ಎಂದು ಹೊಸ ಮುಖಗಳನ್ನೇ ಹುಡುಕುತ್ತಿದ್ದೇವೆ. ಅವರು ಡಾರ್ಜಿರ್ಲಿಂಗ್ ನಲ್ಲಿ ಶಿಕ್ಷಕರಾಗಿ ಹೆಚ್ಚು ಕಾಲ ಕಳೆದಿದ್ದಾರೆ. ಅಲ್ಲದೆ ಅವರ ಬಗ್ಗೆ ಸಾಕಷ್ಟು ಕಾಂಟ್ರವರ್ಸಿ ಇದ್ದು, ಅದನ್ನೆಲ್ಲ ಈ  ಕಥೆಯಲ್ಲಿ ತಂದಿದ್ದೇವೆ. ತುಂಬಾ ನೈಜವಾಗಿ ಈ ಸೀರೀಸ್ ಮೂಡಿ ಬರಲಿದೆ ಎಂದರು.

     

    ನಿರ್ಮಾಪಕ ಚಂದ್ರಶೇಖರ್ ಮಾತನಾಡುತ್ತ ಈಗಾಗಲೇ ಮಲಯಾಳಂ, ತಮಿಳು, ತೆಲುಗು, ಹಿಂದಿಯಲ್ಲಿ ಹಲವಾರು  ಸಿನಿಮಾ‌ಗಳನ್ನು ನಿರ್ಮಿಸಿದ್ದು ಕನ್ನಡದಲ್ಲಿ  ಮೊದಲಬಾರಿಗೆ ಮಾಡುತ್ತಿದ್ದೇವೆ. ಯಂಗ್ ತೆರೇಸಾ ಪಾತ್ರಕ್ಕಾಗಿ ಹುಡಕಾಟ ನಡೆದಿದೆ. ನಾಲ್ಕು ವರ್ಷದ ಹಿಂದೆಯೇ ಇದರ  ಪ್ಲ್ಯಾನ್ ಮಾಡಿದ್ದೆವು. ಮೂರು ಸೀಜನ್ ನಲ್ಲಿ ಒಟ್ಟು 30 ಎಪಿಸೋಡ್ ಗಳಲ್ಲಿ ಮದರ್ ತೆರೇಸಾ ಅವರ  ಕಥೆ ಮೂಡಿಬರಲಿದೆ. ಮುಂದಿನ ತಿಂಗಳು ಚಿತ್ರೀಕರಣ ಪ್ರಾರಂಭಿಸುತ್ತಿದ್ದೇವೆ. ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಈ ಸೀರೀಸ್  ರಿಲೀಸಾಗಲಿದ್ದು, ಈ ಬಗ್ಗೆ ಮಾತುಕತೆ ಕೂಡ  ನಡೆಯುತ್ತಿದೆ. ಪತ್ರಕರ್ತರೊಬ್ಬರ ದೃಷ್ಟಿಕೋನದಲ್ಲಿ  ಮದರ್ ತೆರೆಸಾ ಅವರ ಜೀವನಗಾಥೆ  ಮೂಡಿಬರಲಿದೆ ಎಂದು ಹೇಳಿದರು. ಪಿ.ಸುಕುಮಾರ್ ಅವರ  ಛಾಯಾಗ್ರಹಣ, ಜರೀ ಅಮರದೇವ ಅವರ ಸಂಗೀತ ಇದ್ದು, ಅನಿತಾ ಮೆನ್ನನ್, ತನಿಮಾ ಮೆನ್ನನ್,  ಸಾಪಿಕೌರ್, ಜೋಷಿ ಜೋಸೆಫ್ ಪ್ರಮುಖ ತಾರಾಗಣದಲ್ಲಿದ್ದಾರೆ.

  • ‘ಡಾನ್ ಕುಮಾರ’ ಹೆಸರಿನಲ್ಲಿ ಮತ್ತೊಂದ ಭೂಗತ ಕಥೆ

    ‘ಡಾನ್ ಕುಮಾರ’ ಹೆಸರಿನಲ್ಲಿ ಮತ್ತೊಂದ ಭೂಗತ ಕಥೆ

    ಭೂಗತ ಲೋಕದ ಚಿತ್ರಗಳು ಸಾಕಷ್ಟು ತೆರೆಕಂಡಿವೆ. ಆ ಸಾಲಿಗೆ ’ಡಾನ್ ಕುಮಾರ’ (Don Kumar) ಸಿನಿಮಾ ಹೊಸದಾಗಿ ಸೇರ್ಪಡೆಯಾಗಿದೆ. ಈ ಚಿತ್ರಕ್ಕೆ ರಿಯಲ್ ಸ್ಟೋರಿ, ರಿಯಲ್ ಡಾನ್ ಎನ್ನುವ ಅಡಬರಹವಿದ್ದು, ಎನ್.ನಾಗೇಶ್‌ಕುಮಾರ್ (Nagesh Kumar) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಗನ ಸಲುವಾಗಿ ತಂದೆ ಡಿ.ಎಂ.ನರಸೇಗೌಡರು ಬಂಡವಾಳ ಹೂಡಿದ್ದಾರೆ. ಪ್ರಚಾರದ ಮೊದಲ ಹಂತವಾಗಿ ಟ್ರೈಲರ್  (Trailer)ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

    ನಿರ್ದೇಶಕರು ಹೇಳುವಂತೆ, ‘ನಮ್ಮ ಸಿನಿಮಾವು ರೆಗ್ಯುಲರ್ ತರಹ ಇರಲ್ಲ. ನಿರೂಪಣೆ ಎಲ್ಲವೂ ವಿಶೇಷವಾಗಿರುತ್ತದೆ. 15 ಸಾಹಸ ದೃಶ್ಯಗಳಿವೆ. ಎಲ್ಲವು ರಿಯಲ್ ಫೈಟ್ಸ್ ಆಗಿದ್ದು, ಸಾಮಾನ್ಯ ಮನುಷ್ಯ ಜಗಳವಾಡಿದರೆ ಹೇಗಿರುತ್ತೋ ಅದೇ ರೀತಿಯಲ್ಲಿ, ನಾಟಕೀಯದಂತೆ ಇರದೆ  ಸಂಯೋಜನೆ ಮಾಡಲಾಗಿದೆ. ಭೂಗತ ಲೋಕದ ಸನ್ನಿವೇಶಗಳು ಇದ್ದರೂ, ಲವ್, ರೋಮ್ಯಾನ್ಸ್, ತಂದೆ ತಾಯಿ ಸೆಂಟಿಮೆಂಟ್ ಎಲ್ಲವು ಇರಲಿದೆ. ರೌಡಿಸಂ ಯಾಕೆ ಆಗುತ್ತೆ. 1990-2000 ನಡೆದಂತಹ ಒಂದಷ್ಟು ಘಟನೆಗಳನ್ನು ಬಳಸಲಾಗಿದೆ. ಆದರೆ ಯಾವುದೇ ವ್ಯಕ್ತಿಗೆ ಅನ್ವಯಿಸುವುದಿಲ್ಲ’ ಎನ್ನುತ್ತಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಶೀರ್ಷಿಕೆ ಹೆಸರಿನಲ್ಲಿ ಚಂದ್ರಶೇಖರ್ (Chandrasekhar) ನಾಯಕ. ಸಹನಾ (Sahana) ಮತ್ತು ಪ್ರಕೃತಿ (Prakruti) ನಾಯಕಿಯರು. ಐಟಂ ಹಾಡಿಗೆ ನಮೃತಾಮಲ್ಲ ಹೆಜ್ಜೆ ಹಾಕಿದ್ದಾರೆ. ಉಳಿದಂತೆ ಮಿಮಿಕ್ರಿಗೋಪಿ ಅಲ್ಲದೆ ಹೊಸ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಆರವ್‌ ಋಷಿಕ್ ಸಂಗೀತದ ಐದು ಗೀತೆಗಳಿಗೆ ಅನಿರುದ್‌ ಶಾಸ್ತ್ರಿ, ಅನುರಾಧ ಭಟ್, ನಿಮಿಕಾ ರತ್ನಾಕರ್, ಅವಿನಾಶ್‌ ಛಬ್ಬಿ ಕಂಠದಾನ ಮಾಡಿದ್ದಾರೆ.

     

    ಆನಂದ್‌ ದಿಂಡವಾರ್ ಛಾಯಾಗ್ರಹಣ, ಧನುಕುಮಾರ್ ನೃತ್ಯ, ಶ್ರೀನಿವಾಸ.ಪಿ.ಬಾಬು ಸಂಕಲನವಿದೆ. ಬೆಂಗಳೂರು, ಮೈಸೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಹಾಗೂ ಸಿಂಗಾಪುರ್ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೌರಿಗದ್ದೆಗೆ ಒಬ್ಬನೇ ಹೋಗಿದ್ದ ಚಂದ್ರಶೇಖರ್ – ತಮ್ಮನ ಮಗನನ್ನು ನೆನದು ರೇಣುಕಾಚಾರ್ಯ ಕಣ್ಣೀರು

    ಗೌರಿಗದ್ದೆಗೆ ಒಬ್ಬನೇ ಹೋಗಿದ್ದ ಚಂದ್ರಶೇಖರ್ – ತಮ್ಮನ ಮಗನನ್ನು ನೆನದು ರೇಣುಕಾಚಾರ್ಯ ಕಣ್ಣೀರು

    ದಾವಣಗೆರೆ: ಶಿವಮೊಗ್ಗದ (Shivamogga) ಗೌರಿಗದ್ದೆಗೆ ಚಂದ್ರಶೇಖರ್ (Chandrasekhar) ಹೋಗಿದ್ದನು. ಅಂದು ರಾತ್ರಿಯಿಂದಲೇ ಅವನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹೊನ್ನಾಳಿ (Honnali) ಕ್ಷೇತ್ರದ ಬಿಜೆಪಿ ಶಾಸಕ ಎಂ. ರೇಣುಕಾಚಾರ್ಯ (MP Renukacharya) ತಮ್ಮ ಸಹೋದರನ ಮಗ ನಾಪತ್ತೆಯಾಗಿರುವುದನ್ನು ನೆನೆದು ಕಣ್ಣೀರು ಹಾಕಿದ್ದಾರೆ.

    ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ರೇಣುಕಾಚಾರ್ಯ ಅವರು, ಚಂದ್ರಶೇಖರ್ ಎಲ್ಲಿ ಹೋಗಿದ್ದಾನೆ, ಎಲ್ಲಿ ಇದ್ದಾನೆ ಎನ್ನುವುದು ಕೂಡ ತಿಳಿಯುತ್ತಿಲ್ಲ. ಯಾವಾಗಲೂ ಸ್ನೇಹಿತರ ಜೊತೆ ಇರುತ್ತಿದ್ದ, ಆದರೆ ಕಳೆದ ಭಾನುವಾರ ಒಬ್ಬನೇ ಗೌರಿಗದ್ದೆಗೆ (Gourigadde) ಹೋಗಿದ್ದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

    ಬೆಳಗ್ಗೆಯಿಂದಲೂ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಎಲ್ಲರಿಗೂ ಕರೆ ಮಾಡಿ ವಿಚಾರಿಸುತ್ತಿದ್ದೇವೆ. ಯಾವುದೇ ಮಾಹಿತಿಯಾಗಲಿ, ಕಾರು ಕೂಡ ಸಿಗುತ್ತಿಲ್ಲ. ಮನಸ್ಸು ಎಷ್ಟೇ ಭಾರವಾಗಿದ್ದರೂ ಎರಡು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂದಿದ್ದೇನೆ. ಎಲ್ಲರೂ ಆತ್ಮ ವಿಶ್ವಾಸ ತುಂಬುತ್ತಿದ್ದಾರೆ. ಚುನಾವಣೆ ಸೋತಾಗಲೂ ನಾನು ಇಷ್ಟು ಯೋಚನೆ ಮಾಡಿರಲಿಲ್ಲ. ಚಂದ್ರಶೇಖರ್ ಬಹಳ ಸೌಮ್ಯ ಸ್ವಭಾವದವನು. ಒಂದು ಕೆಟ್ಟ ಪದ ಕೂಡ ಮಾತನಾಡುತ್ತಿರಲಿಲ್ಲ. ಎಲ್ಲರೊಂದಿಗೂ ಅಷ್ಟು ಚೆನ್ನಾಗಿ ಬೆರೆಯುತ್ತಿದ್ದ. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ನನ್ನೊಂದಿಗೆ ಇರುತ್ತಿದ್ದ. ಚಂದ್ರು ವಾಪಸ್ ಬರುತ್ತಾನೆ ಎಂದು ಭಗವಂತನನ್ನು ನಂಬಿದ್ದೇನೆ. ಅವನು ಬಂದ ತಕ್ಷಣ ಮುದ್ದಾಡಬೇಕು ಎಂಬ ಆಸೆಯಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

     

    ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರಶೇಖರ್ ಅವರು ಕಳೆದ ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಇತ್ತೀಚಿಗೆ ರೇಣುಕಾಚಾರ್ಯ ಜೊತೆ ಸಕ್ರಿಯವಾಗಿ ಓಡಾಡಿಕೊಂಡಿದ್ದ 27 ವರ್ಷದ ಚಂದ್ರಶೇಖರ್ ಭಾನುವಾರ ಗೌರಿಗದ್ದೆಯಿಂದ ಹೊನ್ನಾಳಿಗೆ ವಾಪಸ್ ಆಗಿದ್ದರು. ಅದೇ ದಿನ ರಾತ್ರಿ 11:30ರ ಸುಮಾರಿಗೆ ಹೊನ್ನಾಳಿಯ ಸಂತೆ ಮೈದಾನದ ಬಳಿ ಚಂದ್ರಶೇಖರ್ ಫೋನ್ ಸ್ವಿಚ್ ಆಫ್ ಆಗಿದೆ.

    ಎಲ್ಲಿ ಹುಡುಕಿದರೂ ಕಾಣುತ್ತಿಲ್ಲ. ಅವರ ಕಾರು ಕೂಡ ಎಲ್ಲಿಯೂ ಪತ್ತೆ ಆಗಿಲ್ಲ. ಇದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ರೇಣುಕಾಚಾರ್ಯ ಅವರು ಚಂದ್ರಶೇಖರ ಎಲ್ಲಿದ್ದರೂ ಬಾರಪ್ಪ ಎಂದು ಗೋಳಾಡುತ್ತಿದ್ದಾರೆ. ಹೊನ್ನಾಳಿ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಾಸನ ಜಿಲ್ಲೆಯ ಮಟ್ಟಿಗೆ ಬಜೆಟ್ ನಿರಾಶದಾಯಕ: ಆರ್ಥಿಕ ತಜ್ಞ ಚಂದ್ರಶೇಖರ್

    ಹಾಸನ ಜಿಲ್ಲೆಯ ಮಟ್ಟಿಗೆ ಬಜೆಟ್ ನಿರಾಶದಾಯಕ: ಆರ್ಥಿಕ ತಜ್ಞ ಚಂದ್ರಶೇಖರ್

    ಹಾಸನ: ರಾಜ್ಯ ಸರ್ಕಾರದ ಬಜೆಟ್ ಮಂಡನೆ ಹಾಸನ ಜಿಲ್ಲೆಯ ಮಟ್ಟಿಗೆ ನಿರಾಶದಾಯಕವಾಗಿದೆ ಎಂದು ಹಾಸನ ಚೇಂಬರ್ ಆಫ್ ಕಾಮರ್ಸ್ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರು ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಎತ್ತಿನಹೊಳೆಗೆ 1,500 ಕೋಟಿ ಹಣ ಮೀಸಲಿಟ್ಟಿರುವುದು ಯಾವುದೇ ಪ್ರಯೋಜನವಿಲ್ಲ. ಬಜೆಟ್ ನಲ್ಲಿ ಹಾಸನ ಜಿಲ್ಲೆಗೆ ಹೆಚ್ಚು ಒತ್ತು ಕೊಟ್ಟಿದ್ದರೆ ಅಕ್ಕಪಕ್ಕದ ಜಿಲ್ಲೆಗೆ ವರದಾನವಾಗುತ್ತಿತ್ತು ಎಂದರು.

    ಹಾಸನ ವಿಮಾನ ನಿಲ್ದಾಣ ಸೇರಿದಂತೆ, ಈ ಹಿಂದೆ ಹಾಸನ ಜಿಲ್ಲೆಗೆ ಘೋಷಣೆಯಾಗಿದ್ದ ಯೋಜನೆಗಳಿಗೆ ಅನುದಾನದ ನಿರೀಕ್ಷೆಯಲ್ಲಿದ್ದೇವು. ನಮ್ಮ ನಿರೀಕ್ಷೆ ಈಡೇರಿಲ್ಲ ಎಂದು ಹಾಸನ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ದೃಷ್ಟಿಕೋನದಿಂದಲೂ ಬಜೆಟ್ ಆಶಾದಾಯಕವಾಗಿಲ್ಲ ಎಂದು ಆರ್ಥಿಕ ತಜ್ಞ ಚಂದ್ರಶೇಖರ್ ಹೇಳಿದ್ದಾರೆ.

  • ಸುಮಲತಾ ವಿರುದ್ಧ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಗರಂ!

    ಸುಮಲತಾ ವಿರುದ್ಧ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ಗರಂ!

    ಮಂಡ್ಯ: ಹಿರಿಯ ನಟ ಅಂಬರೀಶ್ ಅವರು ಬದುಕಿದ್ದಾಗ ಅವರ ಅತ್ಯಾಪ್ತರಾಗಿದ್ದ ಅಮರಾವತಿ ಚಂದ್ರಶೇಖರ್ ಇದೀಗ ಸುಮಲತಾ ವಿರುದ್ಧ ತೊಡೆತಟ್ಟಿದ್ದಾರೆ.

    ಕಾಂಗ್ರೆಸ್ ಕಚೇರಿಯಲ್ಲಿ ಅಮರಾವತಿ ಚಂದ್ರಶೇಖರ್ ಕೆಂಡಾಮಂಡಲವಾಗಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ಕಾಂಗ್ರೆಸ್‍ನವರ ವಿರುದ್ಧ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಚಂದ್ರಶೇಖರ್ ಅವರ ಅಂಬರೀಶ್ ಬದುಕಿದ್ದಾಗ ಅವರಿಗೆ ತುಂಬಾ ಆತ್ಮೀಯರಾಗಿದ್ದರು. ಅಂಬರೀಶ್ ಮಂಡ್ಯಕ್ಕೆ ಆಗಮಿಸಿದಾಗಲೆಲ್ಲ ಅಮರಾವತಿ ಚಂದ್ರಶೇಖರ್ ಮನೆಯಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಕಾರ್ಯಕರ್ತರು ಸುಮಲತಾ ಪರವಾಗಿ ಬಹಿರಂಗ ಪ್ರಚಾರ ಮಾಡುತ್ತಿದ್ದಾರೆ ಎಂದು ಕೋಪಗೊಂಡಿದ್ದಾರೆ.

    ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸಿ.ಡಿ ಗಂಗಾಧರ್ ಗೆ ತರಾಟೆ ತೆಗೆದುಕೊಂಡಿದ್ದು, ಲೋಕಸಭಾ ಚುನಾವಣೆಗೂ ಮೊದಲೇ ಸುಮಲತಾ ಪರ ಕೆಲಸ ಮಾಡದಂತೆ ಕಾರ್ಯಕರ್ತರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

  • ಮನೆಯಲ್ಲಿಗ ಸೂತಕದ ಛಾಯೆ – ಸಾಯೋವರೆಗೂ ಮಗನ ಜೊತೆ ಮಾತನಾಡಲ್ಲ: ಸಿಎಂ ಲಿಂಗಪ್ಪ

    ಮನೆಯಲ್ಲಿಗ ಸೂತಕದ ಛಾಯೆ – ಸಾಯೋವರೆಗೂ ಮಗನ ಜೊತೆ ಮಾತನಾಡಲ್ಲ: ಸಿಎಂ ಲಿಂಗಪ್ಪ

    ರಾಮನಗರ: ವಿಧಾನಸಭಾ ಉಪಚುನಾವಣೆಯಲ್ಲಿ ನಡೆದ ಘಟನೆಯಿಂದ ನನಗೆ ರಾಜಕೀಯದ ಕೊನೆಯ ದಿನಗಳಿಗೆ ಹೋಗುವ ಪ್ರೇರಣೆ ಆಗುತ್ತಿದೆ. ಪಕ್ಷ ನೀಡಿರುವ ಜವಾಬ್ದಾರಿ ಪೂರ್ಣಗೊಳಿಸಿ ಮುಂದಿನ ಚುನಾವಣೆ ಬಳಿಕ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿಎಂ ಲಿಂಗಪ್ಪ ಹೇಳಿದ್ದಾರೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕ್ಷೇತ್ರದ ಜನರು ಮೂರು ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದ್ದರು. ಇದನ್ನು ಗುರುತಿಸಿ ಪಕ್ಷದ ನಾಯಕರು ನನ್ನನ್ನು ಎಂಎಲ್‍ಸಿ ಮಾಡಿದ್ದಾರೆ. ನನ್ನ ಇನ್ನೂ 4 ವರ್ಷ ಅಧಿಕಾರದ ಅವಧಿ ಇದೆ. ಎಲ್ಲರ ನಿರೀಕ್ಷೆಯಂತೆ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಅಲ್ಲಿಗೆ ನನಗೆ 83 ವರ್ಷ ವಯಸ್ಸು ತುಂಬುತ್ತದೆ. ಬಳಿಕ ರಾಜಕೀಯವಾಗಿ ನಿವೃತ್ತಿಯಾಗುವ ಚಿಂತನೆ ಮಾಡುತ್ತೇನೆ ಎಂದರು.

    ಸಾಯೋವರೆಗೂ ಮಾತನಾಡಲ್ಲ:
    ತಮ್ಮ ಮಗ ಎಲ್ ಚಂದ್ರಶೇಖರ್ ಮಾಡಿದ್ದು ಕ್ಷಮಿಸಲಾರದ ಅಪರಾಧ. ನಮ್ಮದು ಕಾಂಗ್ರೆಸ್ ಕುಟುಂಬವಾಗಿದ್ದುಕೊಂಡು ಆತ ಬಿಜೆಪಿಗೆ ಹೋಗಿದ್ದು ಮೊದಲ ತಪ್ಪು. ಆತ ಮಾಡಿದ ಎಡವಟ್ಟು ಕ್ಷಮಿಸಿ ಮುದ್ದಾಡವಂತಹದ್ದು ಅಲ್ಲ. ನಾನು ಸಾಯುವ ತನಕ ಆತನ ಜೊತೆ ಮಾತನಾಡುವುದಿಲ್ಲ ಎಂದರು.

    ಬಿಜೆಪಿ ನಾಯಕರ ಕ್ಷಮೆ:
    ಮಗ ಮಾಡಿದ ಕೆಲಸಕ್ಕೆ ಅಪ್ಪನಾಗಿ ನಾನೇನು ಮಾಡಬೇಕು. ನಮ್ಮ ಮನೆಯಲ್ಲಿ ಕಳೆದ ಕೆಲ ದಿನಗಳಿಂದ ಸೂತಕದ ಛಾಯೆ ಆವರಿಸಿದೆ. ಅವರ ಅಮ್ಮ ಕಳೆದ ಗುರುವಾರದಿಂದ ಊಟ ಬಿಟ್ಟಿದ್ದಾರೆ. ಈಗ ತಂದೆಯಾಗಿ ನಾನೇನು ಮಾಡಬೇಕು ಹೇಳಿ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಸಾವಿರಾರು ಜನಕ್ಕೆ ಬೇಸರ, ನಿರಾಸೆ, ಅವಮಾನ ತಂದೊಡ್ಡಿದ್ದ ಮಗನಿಂದ ತಂದೆಯಾಗಿ ನೈತಿಕ ಹೊಣೆಗಾರಿಕೆ ಹೊತ್ತು ಪಕ್ಷಾತೀತವಾಗಿ ಆತನ ಬೆಂಬಲಕ್ಕೆ ನಿಂತಿದ್ದ ತಾಲೂಕಿನ ಜನರು, ಪಕ್ಷದ ಮುಖಂಡರಿಗೆ ಹಾಗೂ ಬಿಜೆಪಿಗೆ ಹೋದ ಮಗನಿಗೆ ಟಿಕೆಟ್ ಕೊಟ್ಟವರಲ್ಲೂ ಕೂಡ ಕ್ಷಮೆಯಾಚಿಸುವುದಾಗಿ ಕೈ ಮುಗಿದರು.

    ಹೇಡಿ ಕೃತ್ಯ:
    ಚುನಾವಣೆ ವೇಳೆ ಬಳ್ಳಾರಿಯಲ್ಲಿ ಇದ್ದರೂ ಎಲ್ಲಾ ಮಾಹಿತಿ ಲಭಿಸುತಿತ್ತು. ಚುನಾವಣೆಯಲ್ಲಿ ಸೋಲಾಗಬಹುದು, ಆದರೆ ಅದು ಯುದ್ಧ, ಹೋರಾಟ. ಯುದ್ಧಕ್ಕೆ ನಿಂತು ಪಲಾಯನ ಮಾಡುವುದು ಹೇಡಿಗಳ ಕೃತ್ಯ. ಅದು ಒಬ್ಬ ಹೇಡಿ ಮಾಡುವಂತಹದ್ದು, ಇಂತಹ ಘಟನೆ ಬೇರೆ ಯಾವ ಪಕ್ಷದಲ್ಲೂ ಆಗದಿರಲಿ ಎಂದರು. ಇದೇ ವೇಳೆ ನಾನು ಡಿಕೆ ಸಹೋದರರ ಟಾರ್ಗೆಟ್ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅನಿತಾ ಕುಮಾರಸ್ವಾಮಿಯವರನ್ನ ಗೆಲ್ಲಿಸಬೇಕು. ಬಿಜೆಪಿಗೆ ಇರಿಸುಮುರಿಸಿ ಉಂಟು ಮಾಡಬೇಕು ಎಂಬುದು ಅವರ ಉದ್ದೇಶ ಅಷ್ಟೇ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ಕೈ ಎಂಎಲ್‍ಸಿ ಲಿಂಗಪ್ಪ ಪುತ್ರ ಬಿಜೆಪಿಗೆ ಸೇರ್ಪಡೆ

    ರಾಮನಗರ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ಕೈ ಎಂಎಲ್‍ಸಿ ಲಿಂಗಪ್ಪ ಪುತ್ರ ಬಿಜೆಪಿಗೆ ಸೇರ್ಪಡೆ

    ಬೆಂಗಳೂರು: ರಾಮನಗರದ ರಾಜಕೀಯ ವಾತಾವರಣ ಕ್ಷಣಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ವಿಧಾನ ಪರಿಷತ್ ಸದಸ್ಯ, ರಾಮನಗರ ಕಾಂಗ್ರೆಸ್ ಮುಖಂಡ ಸಿಎಂ ಲಿಂಗಪ್ಪ ಪುತ್ರ ಚಂದ್ರಶೇಖರ್ ಪಕ್ಷ ತೊರೆದು ಬಿಎಸ್‍ವೈ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಎಸ್ ಯಡಿಯೂರಪ್ಪ ಅವರು ಪಕ್ಷ ಧ್ವಜ ನೀಡುವ ಮೂಲಕ ಚಂದ್ರಶೇಖರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.

    ಈ ವೇಳೆ ಮಾತನಾಡಿದ ಬಿಎಸ್‍ವೈ ಅವರು, ರಾಮನಗರ ಪಕ್ಷದ ಅಭ್ಯರ್ಥಿ ಎಂದು ಅವರು ಪಕ್ಷಕ್ಕೆ ಸೇರ್ಪಡೆ ಆಗಿಲ್ಲ. 2 ದಿನಗಳಲ್ಲಿ ರಾಮನಗರದಲ್ಲಿ ಬೃಹತ್ ಸಮಾರಂಭದ ನಡೆಸಿ ಅಭ್ಯರ್ಥಿ ಘೋಷಣೆ ಮಾಡಲಾಗುವುದು. ಇನ್ನು ಹಲವರು ಪಕ್ಷ ಸೇರ್ಪಡೆಯಾಗುತ್ತಾರೆ ಎಂದು ಹೇಳಿದರು. ಚಂದ್ರಶೇಖರ್ ಬಿಜೆಪಿ ಸೇರ್ಪಡೆ ವೇಳೆ ಸಿಪಿ ಯೋಗಿಶ್ವರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

    ಬಿಜೆಪಿ ಸೇರ್ಪಡೆಯಾಗಿ ಮಾತನಾಡಿದ ಚಂದ್ರಶೇಖರ್, ನನ್ನ ಆತ್ಮತೃಪ್ತಿಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಕಾಂಗ್ರೆಸ್ ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ. ನನ್ನೊಂದಿಗೆ ಕ್ಷೇತ್ರ ಹಲವು ಮುಖಂಡರು ಕೂಡ ಸೇರ್ಪಡೆಯಾಗುತ್ತಾರೆ. ಬಿಜೆಪಿ ಪಕ್ಷವನ್ನು ಕ್ಷೇತ್ರದಲ್ಲಿ ಬಲಗೊಳಿಸುವತ್ತ ಗಮನ ಹರಿಸುತ್ತೇನೆ ಎಂದರು.

    ಇದಕ್ಕೂ ಮುನ್ನ ಪಬ್ಲಿಕ್ ಟಿವಿ ಜೊತೆ ಮಾತಾಡಿದ ಸಿ.ಎಂ ಲಿಂಗಪ್ಪ, ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಇಲ್ಲ. ಹಾಗಂತ ನಾವು ಬಿಜೆಪಿಗೂ ಬೆಂಬಲ ನೀಡಲ್ಲ. ಬಂಡಾಯ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸುತ್ತೇವೆ ಎಂದು ಹೇಳಿದ್ದರು. ಆದರೆ ಈ ಎಲ್ಲದರ ನಡುವೆ ಚಂದ್ರಶೇಖರ್ ಬಿಜೆಪಿಗೆ ಸೇರ್ಪಡೆಯಾಗಿ ಮತ್ತೆ ಟ್ವಿಸ್ಟ್ ನೀಡಿದ್ದಾರೆ.

    ರಾಮನಗರ ಉಪಚುನಾವಣೆಯಲ್ಲಿ ಬಿಜೆಪಿಗೆ ನಾವು ಬೆಂಬಲ ನೀಡುವುದಿಲ್ಲ. ಇತ್ತ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಬಂಡಾಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಆಲೋಚನೆಯನ್ನು ಕೈಬಿಟ್ಟಿಲ್ಲ ಎಂದು ಹೇಳಿ ರಾಮನಗರ ಮೈತ್ರಿಗೆ ಸಿ.ಎಂ.ಲಿಂಗಪ್ಪ ವಿರೋಧ ವ್ಯಕ್ತಪಡಿಸಿದ್ದರು.

    ಬಿಜೆಪಿಯವರ ನೀತಿ ನಿಯಮಗಳೇ ಬೇರೆ. ನಮಗೆ ಅದು ಹೊಂದಾಣಿಕೆ ಆಗುವುದಿಲ್ಲ. ಹೀಗಾಗಿ ಅವರಿಗೆ ಬೆಂಬಲ ನೀಡುವುದಿಲ್ಲ. ಅಷ್ಟೇ ಅಲ್ಲದೆ ಇಲ್ಲಿಯವರೆಗೂ ಬಿಜೆಪಿಯ ಯಾವುದೇ ನಾಯಕರೂ ನಮ್ಮನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಪ್ರಯತ್ನಿಸಿದರೂ ನಿರ್ಧಾರವನ್ನು ಬದಲಿಸುವುದಿಲ್ಲ. ನಾವು ಸ್ಥಳೀಯವಾಗಿ ಪರಿಸ್ಥಿತಿ ನೋಡಬೇಕಿದೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ತಮ್ಮ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಿದ್ದಾರೆ. ಒಂದು ವೇಳೆ ರಾಮನಗರ ಕ್ಷೇತ್ರವನ್ನು ಸಂಪೂರ್ಣವಾಗಿ ಜೆಡಿಎಸ್‍ಗೆ ಬಿಟ್ಟುಕೊಟ್ಟರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಆಲೋಚನೆ ಮಾಡಿರುವೆ ಎಂದು ಸಿ.ಎಂ.ಲಿಂಗಪ್ಪ ಪ್ರತಿಕ್ರಿಯಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv