Tag: Chandram

  • ಭೀಕರ ಅಪಘಾತಕ್ಕೆ ಐಟಿ ಉದ್ಯಮಿ ಬಲಿ – ಬೆಂಗ್ಳೂರು ಕಂಪನಿಯಲ್ಲಿ 50 ಕ್ಕೂ ಹೆಚ್ಚು ಮಂದಿಗೆ ಉದ್ಯೋಗದಾತ ಚಂದ್ರಮ್

    ಭೀಕರ ಅಪಘಾತಕ್ಕೆ ಐಟಿ ಉದ್ಯಮಿ ಬಲಿ – ಬೆಂಗ್ಳೂರು ಕಂಪನಿಯಲ್ಲಿ 50 ಕ್ಕೂ ಹೆಚ್ಚು ಮಂದಿಗೆ ಉದ್ಯೋಗದಾತ ಚಂದ್ರಮ್

    – ಮಾಲೀಕನ ಕುಟುಂಬದ ಸಾವಿನ ಸುದ್ದಿ ಕೇಳಿ ಕಂಪನಿ ಸಿಬ್ಬಂದಿಗೆ ಅಘಾತ
    – ಕೆಲಸ ಅರ್ಧಕ್ಕೆ ನಿಲ್ಲಿಸಿ ದುಃಖದಿಂದ ಹೊರಟ ಸಿಬ್ಬಂದಿ

    ಬೆಂಗಳೂರು ಗ್ರಾಮಾಂತರ: ನೆಲಮಂಗಲದಲ್ಲಿ (Nelamangala Accident) ಸಂಭವಿಸಿದ ಭೀಕರ ಅಪಘಾತದಲ್ಲಿ ದಾರುಣ ಅಂತ್ಯ ಕಂಡ ಚಂದ್ರಮ್ ಯಾಗಪ್ಪಗೋಳ್ ಒಬ್ಬ ಐಟಿ ಉದ್ಯಮಿ. ಬೆಂಗಳೂರಿನಲ್ಲಿ ಕಂಪನಿಯೊಂದರ ಮಾಲೀಕರಾಗಿದ್ದ ಇವರು, 50 ಕ್ಕೂ ಹೆಚ್ಚು ಮಂದಿಗೆ ಉದ್ಯೋಗದಾತರಾಗಿದ್ದರು.

    ನೆಲಮಂಗಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತವಾಯಿತು. ಕಂಟೇನರ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಒಂದೇ ಕುಟುಂಬದ ಆರು ಮಂದಿ ದುರಂತ ಸಾವಿಗೀಡಾದರು. ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ

    ಮೃತರು ಬಿಜಾಪುರ ಮೂಲದವರು. ಐಟಿ ಉದ್ಯಮಿಗಳು ಒಂದೇ ಕುಟುಂಬ ಮೃತಪಟ್ಟಿದ್ದಾರೆ. ಚಂದ್ರಮ್ ಯಾಗಪ್ಪಗೋಳ್ ಬೆಂಗಳೂರಿನಲ್ಲಿ ಕಂಪನಿ ಮಾಲೀಕ. ಸುಮಾರು 50 ಕ್ಕೂ ಹೆಚ್ಚು ಮಂದಿಗೆ ಕೆಲಸ ನೀಡಿದ್ದ ಉದ್ಯಮಿ.

    ಹೆಚ್‌ಎಸ್‌ಆರ್ ಲೇಔಟ್ ಬಳಿಯಿರುವ ಐಎಎಸ್‌ಟಿ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ನಲ್ಲಿ ಸುಮಾರು 50 ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. 2018 ರಲ್ಲಿ ಕಂಪನಿ ಶುರುವಾಗಿತ್ತು. ಅದಕ್ಕೆ ಚಂದ್ರಮ್ ಅವರೆ ಎಂಡಿ, ಸಿಇಒ ಆಗಿದ್ದರು. ಇದನ್ನೂ ಓದಿ: ಟಿವಿ ರಿಮೋಟ್ ಕೊಡದಿದ್ದಕ್ಕೆ ಬಾಲಕಿ ಆತ್ಮಹತ್ಯೆ

    ಅಪಘಾತದಲ್ಲಿ ಚಂದ್ರಮ್ ಅವರು ಮೃತಪಟ್ಟ ಸುದ್ದಿ ಕೇಳಿ ಕಂಪನಿ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ. ದುಃಖದಿಂದ ಅರ್ಧಕ್ಕೆ ಕೆಲಸ ನಿಲ್ಲಿಸಿ ಹೊರಟು ಹೋಗಿದ್ದಾರೆ. ಮಾಲೀಕನ ಸಾವಿನಿಂದ ಸಿಬ್ಬಂದಿ ದಿಗ್ಭ್ರಾಂತರಾಗಿದ್ದಾರೆ.

    ಗ್ರೂಪ್‌ನಲ್ಲಿ ಸಾವಿನ ಸುದ್ದಿಯ ಮೆಸೇಜ್ ನೋಡಿ ಎಲ್ಲರೂ ಶಾಕ್‌ಗೆ ಒಳಗಾಗಿದ್ದಾರೆ. ಸಿಸ್ಟಮ್‌ಗಳನ್ನು ಲಾಗೌಟ್ ಮಾಡಿ ಬೇಸರದಿಂದ ಮನೆಗೆ ಹಿಂದಿರುಗಿದ್ದಾರೆ.