Tag: Chandrakant Patil

  • ಮಹಾರಾಷ್ಟ್ರ ಸಚಿವರ ಮುಖಕ್ಕೆ ಮಸಿ ಬಳಿದ ಪ್ರಕರಣ – 10 ಪೊಲೀಸರು ಅಮಾನತು

    ಮಹಾರಾಷ್ಟ್ರ ಸಚಿವರ ಮುಖಕ್ಕೆ ಮಸಿ ಬಳಿದ ಪ್ರಕರಣ – 10 ಪೊಲೀಸರು ಅಮಾನತು

    ಮುಂಬೈ: ಮಹಾರಾಷ್ಟ್ರದ ಸಚಿವ (Maharashtra Ministers) ಮತ್ತು ಭಾರತೀಯ ಜನತಾ ಪಕ್ಷದ (BJP) ನಾಯಕ ಚಂದ್ರಕಾಂತ್ ಪಾಟೀಲ್ (Chandrakant Patil) ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮಸಿ ಬಳಿದಿರುವ (Ink Attack) ಘಟನೆಗೆ ಸಂಬಂಧಿಸಿದಂತೆ ಭದ್ರತಾ ಲೋಪದ ಆರೋಪದ ಮೇಲೆ 10 ಪೊಲೀಸ್ ಸಿಬ್ಬಂದಿಯನ್ನು (Police Pfficials) ಅಮಾನತುಗೊಳಿಸಲಾಗಿದೆ.

    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಹಾತ್ಮ ಜ್ಯೋತಿಬಾ ಪುಲೆ ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದಕ್ಕಾಗಿ ಶನಿವಾರ ಸಂಜೆ ಪುಣೆಯಲ್ಲಿ ಚಂದ್ರಕಾಂತ್ ಪಾಟೀಲ್ ಅವರ ಮೇಲೆ ಮಸಿ ಎರಚಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಈ ಘಟನೆಯ ಬಳಿಕ ಚಂದ್ರಕಾಂತ್ ಪಾಟೀಲ್ ಅವರ ಭದ್ರತೆಗೆ ನಿಯೋಜಿಸಲಾಗಿದ್ದ 10 ಪೊಲೀಸರನ್ನು ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಆಯುಕ್ತ ಅಂಕುಶ್ ಶಿಂಧೆ ಅಮಾನತುಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾವು 7 ಪೊಲೀಸ್ ಸಿಬ್ಬಂದಿ ಮತ್ತು ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಿದ್ದೇವೆ. ಅವರೆಲ್ಲರೂ ಸಚಿವರ ಭೇಟಿಯ ಸಮಯದಲ್ಲಿ ಅವರ ಭದ್ರತೆಯ ಭಾಗವಾಗಿದ್ದರು ಎಂದು ಅಂಕುಶ್ ಶಿಂಧೆ ತಿಳಿಸಿದ್ದಾರೆ. ಇದನ್ನೂ ಓದಿ: ಗುಜರಾತ್‌ನಲ್ಲಿ ಆಪ್‌ಗೆ ಹಿನ್ನಡೆ – ಬಿಜೆಪಿ ಸಂಪರ್ಕದಲ್ಲಿದ್ದಾರೆ ಐವರು ಶಾಸಕರು

    ಪಾಟೀಲ್ ವಿವಾದಿತ ಹೇಳಿಕೆಯೇನು?
    ಶುಕ್ರವಾರ ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಚಿವರು ಮಾತನಾಡಿ, ಅಂಬೇಡ್ಕರ್ ಮತ್ತು ಪುಲೆ ಅವರು ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಸರ್ಕಾರದ ಅನುದಾನವನ್ನು ಕೇಳಲಿಲ್ಲ. ಅವರು ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸಲು ಹಣವನ್ನು ಸಂಗ್ರಹಿಸಲು ಜನರಲ್ಲಿ ಭಿಕ್ಷೆ ಕೇಳಿದ್ದರು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದವನ್ನು ಎಬ್ಬಿಸಿತು.

    ಪಾಟೀಲ್ ಅವರ ಹೇಳಿಕೆಯ ವಿರುದ್ಧ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ಚಂದ್ರಕಾಂತ್ ಕ್ಷಮೆಯನ್ನೂ ಯಾಚಿಸಿದ್ದರು. ಇದನ್ನೂ ಓದಿ: ವೇದಿಕೆ ಮೇಲೆ ಡಿಕೆಶಿ, ಸಿದ್ದು ಬಣದ ಕಿತ್ತಾಟ – ಕಣ್ಣೀರಿಟ್ಟು ವೇದಿಕೆಯಿಂದ ಇಳಿದ ನಾಯಕಿ

    Live Tv
    [brid partner=56869869 player=32851 video=960834 autoplay=true]

  • ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ

    ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ

    ಬೆಳಗಾವಿ: ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್‌ ಪಾಟೀಲ್‌ (Chandrakant Patil) ಮುಖಕ್ಕೆ ಕಪ್ಪು ಮಸಿ ಬಳಿದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಿನ್ನೆ ಸಂಜೆ ನಡೆದಿದೆ.

    ಡಾ.ಬಿ.ಆರ್.ಅಂಬೇಡ್ಕರ್ (Ambedkar), ಮಹಾತ್ಮ ಜ್ಯೋತಿಬಾ ಫುಲೆ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ (Maharashtra) ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ್ ಪಾಟೀಲ್‌ (Chandrakant Patil) ಮುಖಕ್ಕೆ ಕಪ್ಪು ಮಸಿ ಬಳಿಯಲಾಗಿದೆ. ಮಹಾರಾಷ್ಟ್ರದ ಪುಣೆಯ ಕಾರ್ಯಕರ್ತರೊಬ್ಬರ ಮನೆಗೆ ತೆರಳಿ ಹೊರಬರುತ್ತಿದ್ದಂತೆ ವ್ಯಕ್ತಿಯೊಬ್ಬ ಬೆಂಗಾವಲು ವಾಹನವನ್ನೂ ಲೆಕ್ಕಿಸದೇ ಮುಖಕ್ಕೆ ಮಸಿ ಎರಚಿದ್ದಾನೆ. ಬಳಿಕ ಪರಾರಿಯಾಗಲು ಯತ್ನಿಸಿದ ವ್ಯಕ್ತಿಯನ್ನು ಪುಣೆ ಮಹಾನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಚಂದ್ರಕಾಂತ್ ಪಾಟೀಲ್‌, `ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಫುಲೆ ಭಿಕ್ಷಾಟನೆ ಮಾಡಿ ಶಾಲೆಗಳನ್ನು ಕಟ್ಟಿಸಿದ್ದರು’ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಬಳಿಕ ತಮ್ಮ ಹೇಳಿಕೆಗೆ ಚಂದ್ರಕಾಂತ್ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: ವೋಟ್ ಹಾಕದಿದ್ರೆ ಯುಜಿಡಿ ಕಾಮಗಾರಿ ಮಾಡಲ್ಲ: ಶಾಸಕ ಪ್ರೀತಂಗೌಡ

    ಘಟನೆ ಬಳಿಕ `ಈ ರೀತಿ ಘಟನೆಗಳಿಗೆ ನಾನು ಹೆದರಲ್ಲ, ಪೊಲೀಸ್ ಭದ್ರತೆ ಇಲ್ಲದೇ ಬರ್ತೀನಿ. ಧಮ್ ಇದ್ರೆ ನನ್ನ ಎದುರಿಗೆ ಬನ್ನಿ. ಇದು ನಮ್ಮ ಸಂಸ್ಕೃತಿ ಅಲ್ಲ. ಇದನ್ನ ಮಹಾರಾಷ್ಟ್ರ ಸರ್ಕಾರ ಸಹಿಸಲ್ಲ. ನಾನು ಪೊಲೀಸರ ಮೇಲೆ ದೂಷಿಸಲ್ಲ. ನಾನು ಹೆದರಲ್ಲ, ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ಈ ರೀತಿಯ ಘಟನೆ ಡಾ.ಬಿ.ಆರ್.ಅಂಬೇಡ್ಕರ್‌ಗೆ ಮಾಡಿದ ಅಪಮಾನ’ ಎಂದು ಉದ್ಧಟತನ ಮೆರೆದಿದ್ದರು.

    ಸಚಿವ ಚಂದ್ರಕಾಂತ್ ಪಾಟೀಲ ಇತ್ತೀಚೆಗೆ ಡಿಸೆಂಬರ್ 6 ರಂದು ನಾವು ಬೆಳಗಾವಿಗೆ ಹೋಗಿಯೇ ತೀರುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ (Basavaraj Bommai) ಸವಾಲು ಹಾಕಿ ಉದ್ಧಟತನ ಪ್ರದರ್ಶಿಸಿದ್ದರು. ಇದನ್ನೂ ಓದಿ: ಪ್ರಸಾದ್ ಬಿದ್ದಪ್ಪ ಪುತ್ರಿ ಜೊತೆ ಅಭಿಷೇಕ್‌ ಅಂಬರೀಶ್‌ ನಿಶ್ಚಿತಾರ್ಥ

    ಕರ್ನಾಟಕ ಸರ್ಕಾರಕ್ಕೆ ನಾನು ಹೇಳಬಯಸುತ್ತೇನೆ, ನಾವು ಯಾವುದೇ ಸಂಘರ್ಷ ಮಾಡಲು ಬರುತ್ತಿಲ್ಲ. 865 ಮರಾಠಿ ಭಾಷಿಕ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಏನು ಸೌಲಭ್ಯ ನೀಡಬಹುದು ಎಂಬ ಬಗ್ಗೆ ಚರ್ಚಿಸಲು ತೆರಳುತ್ತಿದ್ದೇನೆ. 865 ಹಳ್ಳಿಗಳು ಸಮಾಧಾನದಿಂದ ಇವೆ ಎಂದರೆ ಅದರ ಲಾಭ ನಿಮಗೆ ಇದೆ. ಕರ್ನಾಟಕ ಸರ್ಕಾರದ ನಾಗರಿಕರಿಗೆ ನೀವು ಸೌಲಭ್ಯ ನೀಡಲೇಬೇಕಾಗುತ್ತದೆ. ಆದ್ರೆ 865 ಮರಾಠಿ ಭಾಷಿಕ ಜನರನ್ನು ಮಹಾರಾಷ್ಟ್ರದ ನಾಗರಿಕರೆಂದು ನಾವು ಸೌಲಭ್ಯ ನೀಡುತ್ತೇವೆ. ಯಾವುದೇ ನಿಷೇಧ ಹೇರಿದರೂ ನಾನು ನಿಲ್ಲುವ ಮನುಷ್ಯನಲ್ಲ. ನನಗೆ ನೀವು ಧಮ್ಕಿ ಹಾಕಬೇಡಿ. ನಾವು ಎಚ್ಚರಿಕೆ ನೀಡಲು ಹೋಗುತ್ತಿದ್ದೇವೆ ಎಂದು ಅವರಿಗೆ ಅನಿಸುತ್ತಿದೆ. ಆದ್ರೆ, ನಾವು ಸಮನ್ವಯದಿಂದ ಜನರ ಮನಸ್ಥಿತಿ ತಿಳಿದು ಅವರಿಗೆ ಮಹಾರಾಷ್ಟ್ರ ಸರ್ಕಾರದ ನಿಲುವು ತಿಳಿಸಲು ತೆರಳುತ್ತಿದ್ದೇವೆ ಎಂದು ಗುಡುಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ರಾಜಕೀಯ ಅರ್ಥವಾಗದಿದ್ದರೆ ಮನೆಗೆ ಹೋಗಿ ಅಡುಗೆ ಮಾಡು – ಸುಪ್ರಿಯಾ ಸುಳೆ ವಿರುದ್ಧ ಬಿಜೆಪಿ ನಾಯಕ ಲೇವಡಿ

    ರಾಜಕೀಯ ಅರ್ಥವಾಗದಿದ್ದರೆ ಮನೆಗೆ ಹೋಗಿ ಅಡುಗೆ ಮಾಡು – ಸುಪ್ರಿಯಾ ಸುಳೆ ವಿರುದ್ಧ ಬಿಜೆಪಿ ನಾಯಕ ಲೇವಡಿ

    ಮುಂಬೈ: ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್, ಸಂಸದೆ ಸುಪ್ರಿಯಾ ಸುಳೆ ವಿರುದ್ಧ `ರಾಜಕೀಯ ಅರ್ಥವಾಗದಿದ್ದರೆ, ಮನೆ ಹೋಗಿ ಅಡುಗೆ ಮಾಡು’ ಎಂಬ ಮಹಿಳಾ ವಿರೋಧಿ ಹೇಳಿಕೆ ನೀಡಿದ್ದು ಭಾರೀ ಟೀಕೆಗೆ ಗುರಿಯಾಗಿದ್ದಾರೆ.

    ಈ ಕುರಿತು ಮಾತನಾಡಿರುವ ಚಂದ್ರಕಾಂತ್ ಪಾಟೀಲ್, ನೀವೇಕೆ ರಾಜಕೀಯದಲ್ಲಿದ್ದೀರಿ? ಮನೆಗೆ ಹೋಗಿ ಅಡುಗೆ ಮಾಡಿ. ದೆಹಲಿಗಾದರೂ ಹೋಗಿ ಅಥವಾ ಸ್ಮಶಾನಕ್ಕಾದರೂ ಹೋಗಿ, ಆದರೆ ನಮಗೆ ಒಬಿಸಿ ಕೋಟಾ ಕೊಡಿಸಿ. ಲೋಕಸಭಾ ಸದಸ್ಯರಾಗಿದ್ದರೂ ಒಬ್ಬ ಸಿಎಂ ಅಪಾಯಿಂಟ್ಮೆಂಟ್ ಪಡೆಯುವುದು ಹೇಗೆಂದು ನಿಮಗೆ ತಿಳಿದಿಲ್ವೆ ಎಂದು ಪ್ರಶ್ನಿಸಿ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಇಂದು ಮುಸ್ಲಿಂ ಮಂಡಳಿ ಅರ್ಜಿ ವಿಚಾರಣೆ

    Chandrakanth patil vs supriya

    ಇದರಿಂದ ಪಾಟೀಲ್ ವಿರುದ್ಧ ಮುಗಿಬಿದ್ದಿರುವ ಎನ್‌ಸಿಪಿ ನಾಯಕರು, ಮೊದಲು ನೀವು ಚಪಾತಿ ಒತ್ತುವುದನ್ನು ಕಲಿಯಿರಿ ಮತ್ತು ನಿಮ್ಮ ಪತ್ನಿಗೆ ಅಡುಗೆ ಮಾಡಲು ಸಹಾಯ ಮಾಡಿ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಯಾಸಿನ್ ಮಲಿಕ್ ಕರಾಳ ಇತಿಹಾಸ ಏನು? ಏನೇನು ಅಪರಾಧ ಎಸಗಿದ್ದ?

    ಈ ಕುರಿತು ಪ್ರತಿಕ್ರಿಯಿಸಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, `ನನ್ನ ಸಹೋದರಿಯ ವಿರುದ್ಧ ಆ ರೀತಿ ಕೆಟ್ಟದಾಗಿ ಮಾತನಾಡುವ ಹಕ್ಕು ಅವರಿಗಿಲ್ಲ. ಅವರು ಹಾಗೆ ಮಾತನಾಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Supriya sule

    ಚಂದ್ರಕಾಂತ್ ಪಾಟೀಲ್ ಹೇಳಿಕೆ ವಿರುದ್ಧ ಕಿಡಿ ಕಾರಿರುವ ಸುಪ್ರಿಯಾ ಪತಿ ಸದಾನಂದ್ ಸುಳೆ, ಗೃಹಿಣಿ, ತಾಯಿ ಮತ್ತು ಯಶಸ್ವಿ ರಾಜಕಾರಣಿಯಾಗಿರುವ, ಭಾರತದ ಇತರ ಅನೇಕ ಕಠಿಣ ಪರಿಶ್ರಮಿ ಹಾಗೂ ಪ್ರತಿಭಾವಂತ ಮಹಿಳೆಯರಲ್ಲಿ ಒಬ್ಬರಾಗಿರುವ ನನ್ನ ಹೆಂಡತಿಯ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ಬಿಜೆಪಿಯು ಸ್ತ್ರೀದ್ವೇಷಿ ಪಕ್ಷವಾಗಿದ್ದು, ಯಾವಾಗಲೂ ಮಹಿಳೆಯನ್ನು ಹೀಯಾಳಿಸುತ್ತದೆ. ಇದು ಎಲ್ಲಾ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮೊದಲು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸದೆ ಸುಪ್ರಿಯಾ ಸುಳೆ ಅವರು ಸಭೆಯೊಂದರಲ್ಲಿ ಮಾತನಾಡುತ್ತಾ, ಬಿಜೆಪಿ ಆಡಳಿತದಲ್ಲಿರುವ ಮಧ್ಯಪ್ರದೇಶ ಸರ್ಕಾರವು ಸ್ಥಳೀಯ ಚುನಾವಣೆಯಲ್ಲಿ ಒಬಿಸಿ ಮೀಸಲಾತಿಗೆ ಸುಪ್ರೀಂ ಕೋರ್ಟ್ ಅನುಮತಿ ಪಡೆದುಕೊಂಡಿದ್ದ ಬಗ್ಗೆ ತಿಳಿಯಲು ಅಲ್ಲಿನ ಸಿಎಂ ಅನ್ನು ಭೇಟಿಯಾಗಲು ತೆರಳಿದ್ದೆವು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ ಎಂದು ಹೇಳಿದ್ದರು. ಇದನ್ನೂ ಓದಿ: ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ ಸ್ಥಾನ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಅಶ್ವಿನಿ ಉಪಾಧ್ಯಾಯ ವಿರುದ್ಧ ‘ಹೈ’ ಗರಂ

    ಮಧ್ಯಪ್ರದೇಶದ ಮುಖ್ಯಮಂತ್ರಿ ದೆಹಲಿಗೆ ಬಂದು ಕೆಲವರನ್ನು ಭೇಟಿ ಮಾಡಿದರು. ಅದಾದ ಎರಡೇ ದಿನಗಳಲ್ಲಿ ಸ್ಥಳೀಯ ಚುನಾವಣೆಗೆ ಅವರು ಒಬಿಸಿ ಮೀಸಲಾತಿ ಪಡೆದುಕೊಂಡರು. ಇದು ಹೇಗೆ ಸಾಧ್ಯವಾಯಿತೆಂದು ನನಗೆ ತಿಳಿದಿಲ್ಲ ಎಂದು ಸುಪ್ರಿಯಾ ಸುಳೆ ಕಳವಳ ವ್ಯಕ್ತಪಡಿಸಿದ್ದರು.

  • ಮೋದಿ 2 ಗಂಟೆ ನಿದ್ದೆ ಮಾಡ್ತಾರೆ, 22 ಗಂಟೆ ದೇಶಕ್ಕಾಗಿ ಎಚ್ಚರವಾಗಿರ‍್ತಾರೆ: ಚಂದ್ರಕಾಂತ್ ಪಾಟೀಲ್

    ಮೋದಿ 2 ಗಂಟೆ ನಿದ್ದೆ ಮಾಡ್ತಾರೆ, 22 ಗಂಟೆ ದೇಶಕ್ಕಾಗಿ ಎಚ್ಚರವಾಗಿರ‍್ತಾರೆ: ಚಂದ್ರಕಾಂತ್ ಪಾಟೀಲ್

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿದಿನ ಎರಡು ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡುತ್ತಾರೆ. ಅವರು ನಿದ್ದೆ ಮಾಡದೇ, ದೇಶಕ್ಕಾಗಿ 24 ಗಂಟೆಗಳ ಕಾಲ ಕೆಲಸ ಮಾಡಬಹುದು ಎಂದು ತೋರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.

    ಕೊಲ್ಹಾಪುರ ಉತ್ತರ ವಿಧಾನಸಭಾ ಉಪಚುನಾವಣೆಯನ್ನುದ್ದೇಶಿ ಕೊಲ್ಲಾಪುರದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕೇವಲ ಎರಡು ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ. ಪ್ರತಿದಿನ 22 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ನಿದ್ರೆ ಮಾಡದೇ ಇರಬಹುದಾ ಎಂಬ ಪ್ರಯೋಗವನ್ನು ಈಗ ಮಾಡುತ್ತಿದ್ದಾರೆ. ಇದನ್ನೂ ಓದಿ: ರಂಗಭೂಮಿ ಕಲಾವಿದೆ ಮೇಲೆ ಆ್ಯಸಿಡ್ ದಾಳಿ – ಮೂವರು ಆರೋಪಿಗಳ ಬಂಧನ

    24 ಗಂಟೆಗಳ ಕಾಲ ಎಚ್ಚರವಾಗಿದ್ದು, ದೇಶಕ್ಕಾಗಿ ಕೆಲಸ ಮಾಡಲು ಮೋದಿ ಅವರು ನಿದ್ರೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಅವರು ಒಂದು ನಿಮಿಷವನ್ನೂ ವ್ಯರ್ಥ ಮಾಡುವುದಿಲ್ಲ. ಜೊತೆಗೆ ಪ್ರಧಾನಿಯವರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಾರೆ ಮತ್ತು ದೇಶದ ಯಾವುದೇ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿದಿರುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೋಮವಾರ ನಸುಕಿನಜಾವ ತಲುಪಲಿದೆ ನವೀನ್ ಶೇಖರಪ್ಪ ಮೃತದೇಹ

  • ಮಹಿಳೆಯರು ಬಿಜೆಪಿಗೆ, ಪುರುಷರು ಎಸ್‍ಪಿಗೆ ಮತಹಾಕಿರಬೇಕು: ಚಂದ್ರಕಾಂತ್ ಪಾಟೀಲ್

    ಮಹಿಳೆಯರು ಬಿಜೆಪಿಗೆ, ಪುರುಷರು ಎಸ್‍ಪಿಗೆ ಮತಹಾಕಿರಬೇಕು: ಚಂದ್ರಕಾಂತ್ ಪಾಟೀಲ್

    ಮುಂಬೈ: ಮಹಿಳೆಯರೆಲ್ಲಾ ಬಿಜೆಪಿಗೆ ಮತ ಹಾಕಿರಬೇಕು ಮತ್ತು ಪುರುಷರೆಲ್ಲಾ ಸಮಾಜವಾದಿ ಪಕ್ಷಕ್ಕೆ ಮತ ಹಾಕಿರಬಹುದು ಎಂದು ಮಹಾರಾಷ್ಟ್ರದ ಬಿಜೆಪಿ ಪಕ್ಷದ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಬುದ್ಧ ರಾಜಕೀಯ ನಾಯಕನಾಗಿ ನಾನು ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಎಲ್ಲಾ ಮಹಿಳೆಯರು ಬಿಜೆಪಿಗೆ ಮತ ಹಾಕಿರಬೇಕು ಮತ್ತು ಪುರುಷರು ಎಸ್‍ಪಿಗೆ ಮತ ಹಾಕಿರಬಹುದು ಎಂದಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆಯಲ್ಲಿ ವಿರೋಧ ಪಕ್ಷ ಧೂಳಿಪಟ: ಬೊಮ್ಮಾಯಿ

    ಇದೇ ವೇಳೆ ಬಿಜೆಪಿಯನ್ನು ಸೋಲಿಸುವುದು ನಿಮ್ಮ ತಲೆಯನ್ನು ಗೋಡೆಗೆ ಬಡಿದುಕೊಳ್ಳುವುದಕ್ಕೆ ಸಮಾನವಾಗಿದೆ. ಸದ್ಯ ಐದು ರಾಜ್ಯಗಳಾದ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ ಮತ್ತು ಪಂಜಾಬ್‍ನಲ್ಲಿ ಮತ ಎಣಿಕೆ ನಡೆಯುತ್ತಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ದೊಡ್ಡ ಗೆಲುವನ್ನು ಸಾಧಿಸುತ್ತಿದೆ ಮತ್ತು ಪಂಜಾಬ್‍ನಲ್ಲಿ ಎಎಪಿ ಮುನ್ನಡೆ ಸಾಧಿಸಿದೆ.

    ಈ ವರ್ಷ ಫೆಬ್ರವರಿ ಮತ್ತು ಮಾರ್ಚ್‍ನಲ್ಲಿ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿತ್ತು. ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆದಿತ್ತು. ಇದನ್ನೂ ಓದಿ: ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ಗೆ ಸೋಲು

  • 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್

    2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ 418 ಸ್ಥಾನಗಳಿಸುತ್ತೆ: ಚಂದ್ರಕಾಂತ್ ಪಾಟೀಲ್

    ಮುಂಬೈ: 2024ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಜಯಭೇರಿ ಬಾರಿಸಲಿದ್ದು, 418 ಸ್ಥಾನಗಳನ್ನು ಗೆಲ್ಲುತ್ತೆ ಎಂದು ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಹೇಳಿದರು.

    ಮಾಧ್ಯಮದವರೊಂದಿಗೆ ಮಾತನಾಡಿದ ಪಾಟೀಲ್ ಅವರು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್‍ಸಿಪಿ) ವಿರೋಧಿಗಳನ್ನು ಒಟ್ಟುಗೂಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಬಿಜೆಪಿಯನ್ನು ತಡೆಯಲು ಶಿವಸೇನೆಯು ಕಾಂಗ್ರೆಸ್ ಜೊತೆ ಕೈಜೋಡಿಸಿದೆ. ಇದು ಅವರ ಸ್ವತಂತ್ರ್ಯವಾಗಿದ್ದು, ಅವರನ್ನು ಯಾರು ತಡೆಯುವುದಿಲ್ಲ. ಏಕೆಂದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸದಸ್ಯರು ತಮ್ಮ ಕೆಲಸದ ಮೇಲೆ ಹೆಚ್ಚು ಗಮನಹರಿಸುತ್ತಿದ್ದಾರೆ ಎಂದರು.

    ನಾವು ಅಭಿವೃದ್ಧಿಯ ಹಾದಿಯಲ್ಲಿದ್ದೇವೆ. ಶೀಘ್ರದಲ್ಲೇ ಹೊಸ ಮೆಟ್ರೋವನ್ನು ಉದ್ಘಾಟಿಸಲು ಪ್ರಧಾನಿ ಪುಣೆಗೆ ಬರುತ್ತಾರೆ. ಪ್ರತಿಪಕ್ಷಗಳಂತೆ ನಾವು ರಾಜಕೀಯದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದಂತೆ, ವಿವಿಧ ಸಮೀಕ್ಷೆಗಳು ಮತ್ತು ಸಂಶೋಧನೆಗಳನ್ನು ನಾವು ಮಾಡುತ್ತಿದ್ದೇವೆ. ನಮ್ಮ ಇತ್ತೀಚಿನ ಸಮೀಕ್ಷೆಯ ಪ್ರಕಾರ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 418 ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸದ ಮಾತುಗಳನ್ನು ಆಡಿದರು. ಇದನ್ನೂ ಓದಿ: ಏಕಾಏಕಿ 900 ಮಂದಿ ನೌಕರರ ವಜಾಗೊಳಿಸಿದ್ದ ರೀತಿಗೆ ಕ್ಷಮೆಯಾಚಿಸಿದ CEO

    ಬಿಜೆಪಿ ವಿರುದ್ಧ ಪ್ರಬಲ ಪ್ರತಿಪಕ್ಷವನ್ನು ರಚಿಸಲು ಕಾಂಗ್ರೆಸ್ ಮತ್ತು ಶಿವಸೇನೆಯನ್ನು ಒಟ್ಟುಗೂಡಿಸುವ ಶರದ್ ಪವಾರ್ ನೇತೃತ್ವದ ಎನ್‍ಸಿಪಿಯ ಪ್ರಯತ್ನವನ್ನು ಚಂದ್ರಕಾಂತ್ ಅವರು ಈ ವೇಳೆ ಟೀಕಿಸಿದರು.

    ಚಂದ್ರಕಾಂತ್ ಅವರು ಪೊಲೀಸ್ ಕಮಿಷನರ್ ಅಮಿತಾಬ್ ಗುಪ್ತಾ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ವಿವಿಧ ಸಂಸ್ಥೆಗಳಿಗೆ ಕೆಲವು ಕೋವಿಡ್ ಪ್ರೋಟೋಕಾಲ್‍ಗಳಲ್ಲಿ ಸಡಿಲಿಕೆ ಮಾಡಲು ಅನುಮತಿ ನೀಡುವಂತೆ ವಿನಂತಿಸಿಕೊಂಡರು. ಇದನ್ನೂ ಓದಿ: ಮಂಡ್ಯದಲ್ಲಿ ಪಡಿತರ ಅಕ್ಕಿ ಪಾಲಿಶ್ ಮಾಡಿ ವಿದೇಶಕ್ಕೆ ರಫ್ತು 

    2018ರಲ್ಲಿ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕಾರಣವಾದ ವಿವಾದಾತ್ಮಕ ಎಲ್ಗರ್ ಪರಿಷತ್ ಪ್ರಕರಣದ ನಂತರ ಶನಿವಾರ್ ವಾಡಾ ಆವರಣದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಿಲ್ಲಿಸಲಾಗಿತ್ತು. ಈ ಹಿನ್ನೆಲೆ ಚಂದ್ರಕಾಂತ್ ಅವರು ಇಲ್ಲಿ ಮತ್ತೆ ಕಾರ್ಯಕ್ರಮ ನಡೆಸಲು ಅನುಮತಿಗಾಗಿ ಕೋರಿಕೊಂಡರು.