Tag: chandrakala mohan

  • ಬಿಗ್ ಮನೆಯಲ್ಲಿ ನಡೀತು ಜಡೆ ಜಗಳ..!

    ಬಿಗ್ ಮನೆಯಲ್ಲಿ ನಡೀತು ಜಡೆ ಜಗಳ..!

    ಬೆಂಗಳೂರು: ಬಿಗ್ ಮನೆಯಲ್ಲಿರುವ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಮುಖವಾಡಗಳಿವೆ. ಕೆಲವು ವಿಚಾರಗಳಲ್ಲಿ ಅವರ ಮುಖವಾಡ ಕಳಚಿ ಬೀಳುತ್ತದೆ. ಬಣ್ಣ ಬಣ್ಣದ ಮುಖವಾಡವನ್ನು ಕಳಚುವ ಕೆಲಸವನ್ನು ಬಿಗ್‍ಬಾಸ್ ಮಾಡುತ್ತಾರೆ. ಚಂದ್ರಕಲಾ ಮೋಹನ್, ನಿರ್ಮಲ ಚೆನ್ನಪ್ಪ ಅಡುಗೆ ಮನೆ ವಿಚಾರವಾಗಿ ಕಿತ್ತಾಡಿಕೊಂಡು ಸುದ್ದಿಯಾಗಿದ್ದಾರೆ.

    ರೂಲ್ಸ್ ಬ್ರೇಕ್ ಮಾಡಿದ ಚಂದ್ರಕಲಾ ಮೋಹನ್..!

    ಬಿಗ್‍ಬಾಸ್ ಮನೆಯಲ್ಲಿ ಕೆಲವು ರೂಲ್ಸ್ ಇರುತ್ತದೆ. ಅವುಗಳನ್ನು ಬ್ರೇಕ್ ಮಾಡಿದರೆ ತಪ್ಪಿಗೆ ತಕ್ಕ ಶಿಕ್ಷೆಯನ್ನು ಬಿಗ್‍ಬಾಸ್ ನೀಡುತ್ತಾರೆ. ಧನುಶ್ರೀ ಬಿಗ್‍ಬಾಸ್ ಮನೆಯ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅವರಿಂದಲೆ ಅಡುಗಗೆ ಬೇಕಾದ ತರಕಾರಿಗಳನ್ನು ಕಟ್ ಮಾಡಿಕೊಳ್ಳಬೇಕು ಎಂದು ಹೇಳಿದ್ದರು. ಆದರೆ ಚಂದ್ರಕಲಾ ತಾವೇ ತರಕಾರಿ ಕಟ್ ಮಾಡಿ ರೂಲ್ಸ್ ಬ್ರೇಕ್ ಮಾಡಿದ್ದರು. ಈ ತಪ್ಪಿಗೆ ಮನೆಯಲ್ಲಿರುವ ಕೆಲವು ತರಕಾರಿಗಳನ್ನು ಬಿಗ್ ಬಾಸ್ ವಾಪಸ್ ಪಡೆದಿದ್ದರು.

    ಈ ವಿಚಾರವಾಗಿ ಮನೆಯವರ ಮನಸ್ಸಲ್ಲಿ ಕೊಂಚ ಬೇಸರವಿತ್ತು. ಆದರೆ ಯಾರು ಕೂಡ ಆ ಬೇಸರವನ್ನು ತೋರಿಸಿಕೊಳ್ಳದೆ ಸಮಾಧಾನ ಮಾಡಿಕೊಂಡಿದ್ದರು. ಆದರೆ ಚಂದ್ರಕಲಾ ಮೋಹನ್ ತಮ್ಮ ತಪ್ಪನ್ನು ನಿರ್ಮಲ ಚೆನ್ನಪ್ಪ ಮೇಲೆ ಎತ್ತಿ ಹಾಕುವ ಪ್ರಯತ್ನವನ್ನು ಮಾಡಿದ್ದಾರೆ. ನಿರ್ಮಲಾ ನೀನು ಅಡುಗೆಗೆ ಬರುವುದಿಲ್ಲ. ಹೀಗಾಗಿ ನಾನೊಬ್ಬಳೇ ಅಡುಗೆ ಮಾಡುವ ಗಡಿಬಿಡಿಯಲ್ಲಿ ಹೀಗೆ ಆಯಿತು ಎಂದು ಅವರನ್ನು ಬಚಾವ್ ಮಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ.

    ತನ್ನದಲ್ಲದ ತಪ್ಪಿಗೆ ಕ್ಷಮೆ ಕೇಳಿದ ನಿರ್ಮಲಾ..!

    ನಿರ್ಮಲ ಅವರು ಕ್ಷಮೆ ಕೇಳಿದ್ದಾರೆ. ಆದರೂ ಕೂಡಾ ಚಂದ್ರಕಲಾ ಮೋಹನ್ ಏರು ಧ್ವನಿಯಲ್ಲಿ ಮಾತನಾಡಿದ್ದರು. ಈ ವಿಚಾರವನ್ನು ವಾರದ ಕಟ್ಟೆ ಪಂಚಾಯ್ತಿಯಲ್ಲಿ ಸುದೀಪ್ ಮಾತನಾಡಿದ್ದಾರೆ. ನಮ್ಮ ಮಾತುಗಳು ನಮ್ಮ ಸಣ್ಣತನವನ್ನು ಪ್ರದರ್ಶಿಸುತ್ತದೆ ಎಂದು ಕೆಲವು ಬುದ್ಧಿ ಮಾತುಗಳನ್ನು ಹೇಳಿ ಸಮಾಧಾನ ಮಾಡಿದ್ದಾರೆ.

    ಬಿಗ್‍ಬಾಸ್ ಮನೆ ಎಂದರೆ ಜಗಳ ಕಾಮನ್. ಒಬ್ಬರು ತಪ್ಪನ್ನು ಇನ್ನೊಬ್ಬರ ಮೇಲೆ ಬೆರಳು ಮಾಡಿ ತೋರಿಸುತ್ತಿರುವುದು ಹೊಸದೇನಲ್ಲ. ಆದರೆ ಯಾರು ತಪ್ಪು ಮಾಡಿದರೂ ಗುರುತಿಸಿ ಶಿಕ್ಷೆ ನೀಡುವವರು ಬಿಗ್‍ಬಾಸ್.

  • ವಾರಕ್ಕೆ 10ರೂ.ನಂತೆ ಇನ್‍ಸ್ಟಾಲ್ಮೆಂಟ್‍ನಲ್ಲಿ ಸೀರೆ ಖರೀದಿಸ್ತಿದ್ದ ಅಜ್ಜಮ್ಮ!

    ವಾರಕ್ಕೆ 10ರೂ.ನಂತೆ ಇನ್‍ಸ್ಟಾಲ್ಮೆಂಟ್‍ನಲ್ಲಿ ಸೀರೆ ಖರೀದಿಸ್ತಿದ್ದ ಅಜ್ಜಮ್ಮ!

    – ಮಗನ ಆರೋಗ್ಯದ ಬಗ್ಗೆ ಕಣ್ಣೀರಿಟ್ಟ ಸ್ಪರ್ಧಿ

    ಬೆಂಗಳೂರು: ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್‍ಬಾಸ್ ಸೀಸನ್ 8ಕ್ಕೆ ಎಲ್ಲರೂ ಕುತೂಹಲದಿಂದ ಕಾದು ಕುಳಿತಿದ್ದರು. ಇದೀಗ ಈ ರಿಯಾಲಿಟಿ ಶೋ ಆರಂಭವಾಗಿದ್ದು, ಒಟ್ಟು 17 ಮಂದಿ ಸ್ಪರ್ಧಿಗಳು ಬಿಗ್ ಮನೆಯ ಒಳ ಹೊಕ್ಕಿದ್ದಾರೆ. ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟದ ಬೇರೆ ಬೇರೆ ಭಾಗಗಳಿಂದ ವಿವಿಧ ಟ್ಯಾಲೆಂಟ್‍ಗಳನ್ನು ಹೊತ್ತು ಸ್ಪರ್ಧಿಗಳು ಬಿಗ್ ಮನೆಯ ಒಳಗೆ ಹೋಗಿದ್ದಾರೆ. ಅವರಲ್ಲಿ ಚಂದ್ರ ಕಲಾ ಮೋಹನ್ ಕಥೆ ಸ್ವಲ್ಪ ವಿಭಿನ್ನವಾಗಿಯೇ ಕಾಣಿಸುತ್ತಿದೆ.

    ಹೌದು. ಪುಟ್ಟಗೌರಿಯ ಧಾರಾವಾಹಿಯ ಮೂಲಕ ಅಜ್ಜಮ್ಮ ಅಂತಾನೇ ಚಿರಪರಿಚಿತರಾಗಿರುವ ಚಂದ್ರಕಲಾ ನಡೆದು ಬಂದ ದಾರಿ ಅಷ್ಟು ಸುಲಭವಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅಜ್ಜಮ್ಮ, ಆ ನಂತರ ಜೀವನ ನಡೆಸಿದ್ದೇ ಬಲು ರೋಚಕ. ಈ ಎಲ್ಲಾ ವಿಚಾರಗಳನ್ನು ಅಜ್ಜಮ್ಮ ಬಿಗ್ ಮನೆಯ ಒಳಗಡೆ ಹೋಗುವುದಕ್ಕೂ ಮುನ್ನ ಬಿಡುಗಡೆ ಮಾಡಿದ್ದ ಪ್ರೋಮೋದಲ್ಲಿ ಬಯಲು ಮಾಡಿದ್ದಾರೆ.

    ಚಿಕ್ಕ ವಯಸ್ಸಿನಿಂದಲೂ ಜೀವನ ಕಟ್ಟಿಕೊಳ್ಳಲು ಅಜ್ಜಮ್ಮ ಸಾಕಷ್ಟು ಹೆಣಗಾಡಿದ್ದಾರೆ. 10 ವರ್ಷವಾಗಿದ್ದಾಗಲೇ ಚಂದ್ರಕಲಾ ಡ್ರಾಮಾ ಫೀಲ್ಡ್ ಗೆ ಇಳಿದಿದ್ದಾರೆ. ಅದೊಂಥರ ಕಷ್ಟದ ಜೀವನವಾಗಿದ್ದು, ಹಳ್ಳಿಗಳ ಕಡೆ ಹೋಗಿ ನೆರೆದ ಜನರ ಮುಂದೆಯೇ ನಾಟಕ ಮಾಡಬೇಕಾಗಿತ್ತು. ಹೀಗಾಗಿ ಅಲ್ಲೆಲ್ಲಾ ನಾವು ಜಯಿಸಿ ಬರುವುದು ತುಂಬಾ ಕಷ್ಟವಾಗಿತ್ತು. ಚಿಕ್ಕವಯಸ್ಸಿನಲ್ಲಿಯೇ ಮದುವೆ ಆಯಿತು. ನಂತರ ಮಗುನೂ ಆಯ್ತು. ಆ ಬಳಿಕದ ಜೀವನ ತುಂಬಾ ಸವಾಲಾಗಿತ್ತು. ಎತ್ತರಕ್ಕೆ ದೊಡ್ಡವನಾಗಿ ಬೆಳೆದವನು ಎಲ್ಲರ ಮುಂದೆ ಚಿಕ್ಕವನಾಗಿ ಬಾಳಬೇಕು ಅನ್ನೋ ಗಾದೆ ಇದೆ. ಆ ಲೈಫ್ ತುಂಬಾ ದೊಡ್ಡದಾಗಿರುತ್ತದೆ, ಚಿಕ್ಕದಾಗಿದ್ದು, ನಾನು ತುಂಬಾ ದೊಡ್ಡದಾಗಿ ಬೆಳೆದಿದ್ದೀನಿ ಅಂತ ತೋರಿಸಿಕೊಳ್ಳುವುದು ತುಂಬಾ ತಪ್ಪು. ಅದು ನನಗೆ ಇಷ್ಟವಿಲ್ಲ ಎಂದು ಅಜ್ಜಮ್ಮ ಹೇಳುತ್ತಾರೆ.

    ಜೀವನದಲ್ಲಿ ಯಶಸ್ಸು ಸಿಗಬಹುದು ಅಥವಾ ಸಿಗದೇ ಇರಬಹುದು, ಕಷ್ಟ ಇರಬಹುದು ಅಥವಾ ಸುಖ ಇರಬಹುದು ಆದರೆ ನಾನು ಒಂದೇ ರೀತಿಯಲ್ಲಿ ಇರುತ್ತೇನೆ. ನಾನು ಯಾವುದೇ ಕಾರಣಕ್ಕೂ ಬದಲಾಗಲ್ಲ. ನಾವು ಕನ್ನಡಿ ಮುಂದೆ ನಿಂತಾಗ ಅದು ನಾವೇನು ಅನ್ನೋದನ್ನು ತೋರಿಸುತ್ತದೆ. ಇಲ್ಲಿ ನಾವು ಏನೋ ವೇಷ ಹಾಕ್ಕೊಂಡ್ರೆ ಕನ್ನಡಿ ನಿನಗೆ ಏ ಥೂ.. ಬೇಕಾ ನಿನಗೆ ಈ ಜೀವನ ಅನ್ನುತ್ತೆ. ನನಗೆ ಅದು ಮಾಡ್ಕೊಳ್ಳೋಕೆ ಇಷ್ಟವಿಲ್ಲ. ಒಬ್ಬ ಒಳ್ಳೆಯ ವ್ಯಕ್ತಿ ಕೆಟ್ಟವನಾಗುವುದಕ್ಕೂ, ಕೆಟ್ಟ ವ್ಯಕ್ತಿ ಒಳ್ಳೆಯವನಾಗುವುದಕ್ಕೂ ಮೂಲೆಯಲ್ಲಿ ಕುಳಿತಿರುವ ವ್ಯಕ್ತಿ ದುಡಿದು ತಿನ್ನಬೇಕು ಎಂಬ ಹಠ ಬರುವುದಕ್ಕೂ ಹೀಗೆ ಎಲ್ಲದಕ್ಕೂ ಕಾರಣ ಒಂದೇ ಉತ್ತರ ಜೀವನ ಎಂದು ಅಜ್ಜಮ್ಮ ವಿವರಿಸಿದ್ದಾರೆ.

    ನನಗೆ ಕಷ್ಟಪಟ್ಟು ಜೀವನ ಕಟ್ಟಿಕೊಳ್ಳಬೇಕು, ನನ್ನ ಮಕ್ಕಳನ್ನು ನನಗೆ ಸಾಕಬೇಕು ಅನ್ನೋದು ತುಂಬಾ ಹಠವಿತ್ತು. ಅಲ್ಲಿಂದ ನನ್ನ ಜೀವನ ನಾನು ಕಟ್ಟಿಕೊಂಡೆ. ಆಗ ಯಜಮಾನ್ರು ನನ್ನ ಬೆನ್ನುಲಾಬಿ ನಿಂತುಕೊಂಡ್ರು. ಇಲ್ಲ ಅಂದಿದ್ರೆ ಇಂದು ನಾನು ಒಬ್ಬ ಕಲಾವಿದೆ ಆಗಲು ಸಾಧ್ಯವೇ ಇರಲಿಲ್ಲ. 1996, 97, 98 ನನಗೆ ತುಂಬಾನೆ ಸವಾಲಾಗಿದ್ದ ವರ್ಷಗಳು. 1998ರಲ್ಲಿ ನಾನು ಸೀರಿಯಲ್ ಮಾಡಲು ಇಳಿದಾಗಲೂ ನನ್ನ ಬಳಿ ಸೀರೆಗಳಿರಲಿಲ್ಲ. ವಾರಕ್ಕೆ 10 ರೂ. ನಂತೆ ಇನ್‍ಸ್ಟಾಲ್ ಮೆಂಟ್ ನಲ್ಲಿ ಸೀರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ಇಂದಿಗೂ ಆ ಸೀರೆಗಳು ನನ್ನ ಬಳಿ ಇವೆ. ಇವೆಲ್ಲವೂ ನನಗೆ ಒಳ್ಳೆಯ ಮೆಮೊರಿ ಕೊಟ್ಟಿದೆ ಎಂದು ಗದ್ಗದಿತರಾದರು.

    ಇದೇ ವೇಳೆ ಮಗನ ಆರೋಗ್ಯದ ಬಗ್ಗೆ ಗ್ದಗದಿತರಾದ ಅಜ್ಜಮ್ಮ, ಇಂದು ನನ್ನ ಒಬ್ಬ ಮಗ ಕೈತುಂಬಾ ಸಂಬಳ ತರುತ್ತಿದ್ದಾನೆ, ಖುಷಿಯಾಗಿದ್ದೀವಿ. ಮಗ ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ. ಈ ವಿಷಯದಲ್ಲಿ ನನಗೆ ನಾನೇ ಹೆಮ್ಮೆ ವ್ಯಕ್ತಪಡಿಸುತ್ತಿದ್ದೀನಿ. ಬಿಗ್ ಬಾಸ್ ತುಂಬಾ ದೊಡ್ಡ ವೇದಿಕೆಯಾಗಿದ್ದು ನನಗೆ ತುಂಬಾ ಇಷ್ಟ ಆಗಿದೆ. ಹೀಗಾಗಿ ನಾನು ಅದರಲ್ಲಿ ಭಾಗವಹಿಸಲೇಬೇಕು ಎಂಬ ಹಠ ಇತ್ತು. ಇಂದು ನನ್ನ ಕನಸು ನನಸಾಗಿದೆ. ಆದರೆ ಅಲ್ಲಿ ಹೋದ ತಕ್ಷಣ ನಾನು ವೇಷ ಹಾಕಿಕೊಳ್ಳಲ್ಲ. ಅದು ಗೊತ್ತು ಕೂಡ ಇಲ್ಲ. ನನ್ನ ತಪ್ಪಿದ್ದರೆ ಒಪ್ಪಿಕೊರ್ಳಳುತ್ತೇನೆ, ಆದರೆ ನನ್ನ ವಿರುದ್ಧ ಮಾತನಾಡಿದ್ರೆ ನಾನು ಸಹಿಸಿಕೊಳ್ಳಲ್ಲ ಎಂದು ಖಡಕ್ ಆಗಿ ತಿಳಿಸಿದ್ದಾರೆ.