Tag: chandra shekhar

  • ದೇವಸ್ಥಾನದ ಹಾದಿ ಮಾನಸಿಕ ಗುಲಾಮಗಿರಿಯ ಹಾದಿ – ರಾಮಮಂದಿರ ಕುರಿತು ಶಿಕ್ಷಣ ಸಚಿವ ವಿವಾದಾತ್ಮಕ ಹೇಳಿಕೆ

    ದೇವಸ್ಥಾನದ ಹಾದಿ ಮಾನಸಿಕ ಗುಲಾಮಗಿರಿಯ ಹಾದಿ – ರಾಮಮಂದಿರ ಕುರಿತು ಶಿಕ್ಷಣ ಸಚಿವ ವಿವಾದಾತ್ಮಕ ಹೇಳಿಕೆ

    ಪಾಟ್ನಾ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರದ (Ram Mandir) ಕುರಿತು ಬಿಹಾರದ ಶಿಕ್ಷಣ ಸಚಿವ ಡಾ.ಚಂದ್ರಶೇಖರ್ (Chandra Shekhar) ಹೇಳಿಕೆಯೊಂದನ್ನು ನೀಡಿ ವಿವಾದಕ್ಕೆ ಸಿಲುಕಿದ್ದಾರೆ.

    ಕಾರ್ಯಕ್ರಮವೊಂದರಲ್ಲಿ ಅಯೋಧ್ಯೆ ರಾಮಮಂದಿರ ಕುರಿತು ಮಾತನಾಡುತ್ತಾ, ದೇವಸ್ಥಾನಕ್ಕೆ ಹೋಗುವ ಹಾದಿ ಮಾನಸಿಕ ಗುಲಾಮಗಿರಿಯ ಹಾದಿಯಾಗಿದೆ. ಶಾಲೆಗಳಿಗೆ ಹೋಗುವ ಹಾದಿ ಮಾತ್ರವೇ ಬೆಳಕಿನ ಹಾದಿಯನ್ನು ಸುಗಮಗೊಳಿಸುತ್ತವೆ ಎಂದು ಹೇಳಿ, ಇದನ್ನು ನಾನು ಹೇಳಿಲ್ಲ, ಸಾವಿತ್ರಿ ಬಾಯಿ ಫುಲೆ ಅವರು ಹೇಳಿದ್ದು ಎಂದಿದ್ದಾರೆ. ಇದನ್ನೂ ಓದಿ: ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಕೇಸ್‌ – ಅಪರಾಧಿಗಳ ಬಿಡುಗಡೆ ಮಾಡಿದ ಗುಜರಾತ್‌ ಸರ್ಕಾರದ ಆದೇಶ ರದ್ದು

    ದೇವಸ್ಥಾನಕ್ಕೆ ಹೋಗುವ ಹಾದಿ ಯಾವತ್ತಿದ್ದರೂ ಮಾನಸಿಕ ಗುಲಾಮಗಿರಿಯ ಹಾದಿ, ಸಾವಿತ್ರಿ ಬಾಯಿ ಫುಲೆಯವರು ದೇಶದಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿಗಳಲ್ಲಿ ಶಿಕ್ಷಣದ ಜ್ಯೋತಿಯನ್ನು ಜಾಗೃತಗೊಳಿಸಿದರು. 19ನೇ ಶತಮಾನದಲ್ಲಿ ಅಸ್ಪೃಶ್ಯತೆ, ಸತಿ ಪದ್ಧತಿ, ಬಾಲ್ಯವಿವಾಹದಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಸಾವಿತ್ರಿ ಬಾಯಿ ತಮ್ಮ ಪತಿಯೊಂದಿಗೆ ಒಟ್ಟಾಗಿ ಹೋರಾಡಿದ್ದಾರೆ. ಅವರಿಂದಲೇ ನಮ್ಮ ಸಮಾಜದಲ್ಲಿ ಪರಿಶಿಷ್ಟ ಜಾತಿಗೆ ಸ್ಥಾನ ಸಿಕ್ಕಿದೆ. ಹಾಗಾಗಿ ಪ್ರತಿಯೊಬ್ಬರು ವಿದ್ಯಾವಂತರಾಗಿ, ಸಂಘಟಿತರಾಗಿ ಹೋರಾಡಬೇಕು ಎಂದು ಕರೆ ನೀಡಿದ್ದಾರೆ.

    ಯಾವುದೇ ದೇವಸ್ಥಾನಗಳು ನಿಮ್ಮ ಮಕ್ಕಳನ್ನು ಜವಾನನಿಂದ ಕಲೆಕ್ಟರ್‌ ಆಗಿ ಪರಿವರ್ತಿಸುವುದಿಲ್ಲ, ಪುಸ್ತಕ, ಲೇಖನಿ, ಶಾಲೆ, ಶಿಕ್ಷಣದಿಂದ ಮಾತ್ರವೇ ನಿಮ್ಮ ಮಕ್ಕಳನ್ನ ಪರಿವರ್ತಿಸಲು ಸಾಧ್ಯ. ಆದ್ದರಿಂದ ಅಕ್ಷತೆಯನ್ನು ನೀಡುವವರನ್ನು ಬಿಟ್ಟು ಅಂಬೇಡ್ಕರ್‌ ಅವರ ತತ್ವಗಳನ್ನು ಅನುಸರಿಸಿ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರು ವೋಟಿಗಾಗಿ ಕಾಶ್ಮೀರ ಸಹ ಪಾಕಿಸ್ತಾನಕ್ಕೆ ಸೇರಿದ್ದು ಅಂತಾರೆ – ವಿಶ್ವನಾಥ್ ಕಿಡಿ 

  • ಬಿಹಾರ ಶಿಕ್ಷಣ ಸಚಿವರ ನಾಲಿಗೆ ತಂದವರಿಗೆ 10 ಕೋಟಿ ಬಹುಮಾನ – ಅಯೋಧ್ಯೆ ಸ್ವಾಮೀಜಿ

    ಬಿಹಾರ ಶಿಕ್ಷಣ ಸಚಿವರ ನಾಲಿಗೆ ತಂದವರಿಗೆ 10 ಕೋಟಿ ಬಹುಮಾನ – ಅಯೋಧ್ಯೆ ಸ್ವಾಮೀಜಿ

    ಲಕ್ನೋ: ಹಿಂದೂ ಧಾರ್ಮಿಕ ಪಠ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ (Chandra Shekhar) ವಿರುದ್ಧ ಅಯೋಧ್ಯೆ ಸ್ವಾಮೀಜಿಗಳು, ಅರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್‌ ನಾಲಿಗೆ ತಂದವರಿಗೆ 10 ಕೋಟಿ ರೂ. ಬಹುಮಾನ ನೀಡಲಾಗುವುದು ಎಂದು ತಪಸ್ವಿ ಚಾವ್ನಿಯ ಮಹಂತ ಪರಮಹಂಸ ದಾಸ್‌ (Mahant Paramhans Das) ತಿಳಿಸಿದ್ದಾರೆ.

    ಬುಧವಾರ ಕಾರ್ಯಕ್ರಮವೊಂದರಲ್ಲಿ ಸಚಿವ ಚಂದ್ರಶೇಖರ್‌, ಹಿಂದೂ ಗ್ರಂಥಗಳ ವಿರುದ್ಧ ಹೇಳಿಕೆ ನೀಡಿದ್ದರು. ರಾಮಚರಿತಮಾಸ (Ramcharitmanas) ಮತ್ತು ಮನುಸ್ಮೃತಿ (Manusmriti) ಸಮಾಜವನ್ನು ವಿಭಜಿಸುವ ಮತ್ತು ದ್ವೇಷವನ್ನು ಹರಡುವ ಗ್ರಂಥಗಳಾಗಿವೆ ಎಂದು ಚಂದ್ರಶೇಖರ್‌ ಮಾತನಾಡಿದ್ದರು. ಇದನ್ನೂ ಓದಿ: ರಾಮಚರಿತಮಾನಸ ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ – ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ

    ಸಚಿವರ ಹೇಳಿಕೆಗೆ ಅಯೋಧ್ಯೆ ಸ್ವಾಮೀಜಿ ದಾಸ್‌ ಅವರು ಕಿಡಿ ಕಾರಿದ್ದಾರೆ. ಚಂದ್ರಶೇಖರ್ ಅವರ ನಾಲಿಗೆ ತಂದವರಿಗೆ 10 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರಲ್ಲದೇ, ಅಂತಹ ಸಚಿವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

    ಸಚಿವರ ಹೇಳಿಕೆಗೆ ರಾಮಜನ್ಮಭೂಮಿ ದೇವಸ್ಥಾನದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಯಾರೂ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: 50 ದಿನ ಟ್ರಿಪ್‌, 27 ನದಿ ಮಾರ್ಗವಾಗಿ ಯಾನ, 5 ಸ್ಟಾರ್‌ ಹೋಟೆಲ್‌ ಸಿಸ್ಟಮ್‌ – ʼಎಂವಿ ಗಂಗಾ ವಿಲಾಸ್‌ʼ ವೈಶಿಷ್ಟ್ಯ ಗೊತ್ತಾ?

    ಜಗದ್ಗುರು ಪರಮಹಂಸ ಆಚಾರ್ಯ ಅವರು ಮಾತನಾಡಿ, ಚಂದ್ರಶೇಖರ್‌ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಸಚಿವರ ಹೇಳಿಕೆಯಿಂದ ಇಡೀ ದೇಶಕ್ಕೆ ನೋವಾಗಿದೆ ಎಂದು ಬೇಸರಿಸಿದ್ದಾರೆ. ಅಲ್ಲದೇ, ರಾಮಚರಿತಮಾನಸ ಗ್ರಂಥವು ಜನಪರ ಮತ್ತು ಮಾನವೀಯತೆ ಪ್ರತಿಪಾದಿಸುವ ಆಶಯಗಳನ್ನು ಒಳಗೊಂಡಿದೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಮಚರಿತಮಾನಸ ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ – ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ

    ರಾಮಚರಿತಮಾನಸ ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ – ಶಿಕ್ಷಣ ಸಚಿವ ಚಂದ್ರಶೇಖರ್ ವಿವಾದಾತ್ಮಕ ಹೇಳಿಕೆ

    ಪಾಟ್ನಾ: ರಾಮಾಯಣವನ್ನು ಆಧರಿಸಿ ರಚಿತವಾದ ಹಿಂದೂ ಧಾರ್ಮಿಕ ಗ್ರಂಥ ರಾಮಚರಿತಮಾನಸವು (Ramcharitmanas) ಸಮಾಜದಲ್ಲಿ ದ್ವೇಷವನ್ನು ಹರಡುತ್ತದೆ ಎಂದು ಬಿಹಾರದ (Bihar) ಶಿಕ್ಷಣ ಸಚಿವ (Education Minister) ಚಂದ್ರಶೇಖರ್ (Chandra Shekhar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಳಂದ ಮುಕ್ತ ವಿಶ್ವವಿದ್ಯಾನಿಲಯದ 15ನೇ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡುವ ವೇಳೆ ಚಂದ್ರಶೇಖರ್ ಈ ಹೇಳಿಕೆ ನೀಡಿದ್ದು, ಹೊಸ ವಿವಾದ ಹುಟ್ಟು ಹಾಕಿದೆ. ಸಮಾಜದ ಕೆಳವರ್ಗದವರು ಶಿಕ್ಷಣ ಪಡೆದರೆ ವಿಷಕಾರಿಯಾಗುತ್ತಾರೆ ಎಂದು ರಾಮಚರಿತಮಾನಸ ಹೇಳುತ್ತದೆ. ರಾಮಚರಿತಮಾನಸ, ಮನುಸ್ಮೃತಿ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಚಿಂತನೆಗಳ ಪುಸ್ತಕಗಳು ಸಾಮಾಜಿಕ ವಿಭಜನೆಯನ್ನು ಸೃಷ್ಟಿಸಿವೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದನ್ನೂ ಓದಿ: ಸ್ಮೂಕಿಂಗ್ ಝೋನ್ ನಿರ್ಮಿಸದ ಬೆಂಗ್ಳೂರಿನ 378 ಹೋಟೆಲ್‌ಗಳಿಗೆ BBMP ನೋಟಿಸ್‌

    ಪ್ರೀತಿ ಮತ್ತು ವಾತ್ಸಲ್ಯದಿಂದ ರಾಷ್ಟ್ರವು ಶ್ರೇಷ್ಠವಾಗುತ್ತದೆ. ರಾಮಚರಿತಮಾನಸ, ಮನುಸ್ಮೃತಿ ಮತ್ತು ಬಂಚ್ ಆಫ್ ಥಾಟ್ಸ್‌ನಂತಹ ಪುಸ್ತಕಗಳು ದ್ವೇಷ ಮತ್ತು ಸಾಮಾಜಿಕ ವಿಭಜನೆಯ ಬೀಜಗಳನ್ನು ಬಿತ್ತಿದವು. ದಲಿತರು, ಹಿಂದುಳಿದವರು ಮತ್ತು ಮಹಿಳೆಯರ ಶಿಕ್ಷಣದ ವಿರುದ್ಧ ಮಾತನಾಡುವ ರಾಮಚರಿತಮಾನದ ಭಾಗಕ್ಕೆ ಜನರು ಮನುಸ್ಮೃತಿಯನ್ನು ಸುಟ್ಟುಹಾಕಲು ಮತ್ತು ಅಪವಾದವನ್ನು ತೆಗೆದುಕೊಳ್ಳಲು ಇದೇ ಕಾರಣ, ಅವರು ಹೇಳಿದರು. ಇದನ್ನೂ ಓದಿ: ರಜಾ ದಿನಗಳಲ್ಲಿ ಸಹೋದ್ಯೋಗಿಗೆ ತೊಂದರೆ ನೀಡಿದ್ರೆ 1 ಲಕ್ಷ ದಂಡ..!

    ಸಚಿವರ ವಿವಾದಾತ್ಮಕ ಹೇಳಿಕೆಗೆ ಭಾರತೀಯ ಜನತಾ ಪಕ್ಷ ಪ್ರತಿಕ್ರಿಯಿಸಿದ್ದು, ಪಕ್ಷದ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ, ಇದು ಸಂಯೋಗ ಅಲ್ಲ ವೋಟ್‍ಬ್ಯಾಂಕ್ ಕಾ ಉದ್ಯೋಗ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೋರ್ಟ್ ನಲ್ಲಿ ಉತ್ತರ ಕೊಡಬೇಕಾಗುತ್ತೆ- ಸಿಸಿಬಿಗೆ ಜನಾರ್ದನ ರೆಡ್ಡಿ ಎಚ್ಚರಿಕೆ

    ಕೋರ್ಟ್ ನಲ್ಲಿ ಉತ್ತರ ಕೊಡಬೇಕಾಗುತ್ತೆ- ಸಿಸಿಬಿಗೆ ಜನಾರ್ದನ ರೆಡ್ಡಿ ಎಚ್ಚರಿಕೆ

    ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ 20 ಕೋಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಮುಂದೆ ಹಾಜರಾಗಿರೋ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಅವರು ಅಧಿಕಾರಗಳ ವಿರುದ್ಧ ಗರಂ ಆಗಿದ್ದಾರೆ.

    ಸಿಸಿಬಿ ಹಾಜರಾದ ಕೂಡಲೇ ವಿಚಾರಣೆ ನಡೆಸಿದ ಅಧಿಕಾರಿಗಳು ತಡರಾತ್ರಿ 2 ಗಂಟೆವರೆಗೂ ರೆಡ್ಡಿಗೆ ಡ್ರಿಲ್ ಮಾಡಿದ್ದಾರೆ. ಸತತ 10 ಗಂಟೆಗಳ ಕಾಲ ವಿಚಾರಣೆಯಿಂದ ಬೇಸತ್ತ ರೆಡ್ಡಿ, ಬೇಕಂತಲೇ ಈ ರೀತಿ ಡ್ರಿಲ್ ಮಾಡುತ್ತಿದ್ದೀರಾ? ಕೋರ್ಟ್ ನಲ್ಲಿ ಉತ್ತರ ಕೊಡಬೇಕಾಗುತ್ತೆ ಅಂತ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ ಅನ್ನೋ ಮಾಹಿತಿಯೊಂದು ಸಿಸಿಬಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಅಲ್ಲದೇ ನನ್ನ ಮಾತು ಕೇಳಲಿಲ್ಲ ನೀವು ಅಂತ ತನ್ನ ಪರ ವಕೀಲರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ರೆಡ್ಡಿ ಮಾತು ಕೇಳಿ ವಕೀಲ ಚಂದ್ರಶೇಖರ್ ಅವರು ಸೈಲೆಂಟ್ ಆಗಿ ಸಿಸಿಬಿಯಿಂದ ಹೊರಬಂದಿದ್ದಾರಂತೆ. ತನ್ನ ಪಿಎ ಅಲಿಖಾನ್ ಜೊತೆಯೂ ಮಾತಾಡದೆ ಜನಾರ್ದನ ರೆಡ್ಡಿ ಮೌನವಾಗಿ ಕುಳಿತಿದ್ದರಂತೆ. ಇಡೀ ರಾತ್ರಿ ನಿದ್ದೆ ಇಲ್ಲದೇ ಧ್ಯಾನ ಮಾಡುತ್ತಿದ್ದ ರೆಡ್ಡಿ, ಆಗಾಗ ತಿರುಪತಿ ವೆಂಕಟೇಶ್ವರನನ್ನು ನೆನೆದು ಕೈಮುಗಿಯುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ- ಜನಾರ್ದನ ರೆಡ್ಡಿ ಪರ ವಕೀಲ

    ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ- ಜನಾರ್ದನ ರೆಡ್ಡಿ ಪರ ವಕೀಲ

    ಬೆಂಗಳೂರು: ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಮೇಲೆ ಇರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿದ್ದಾಗಿದ್ದು, ಅಂಬಿಡೆಂಟ್ ಕಂಪನಿ ಜೊತೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ನಮ್ಮ ಸಂಪೂರ್ಣ ಸಹಕಾರವಿದೆ ಅಂತ ವಕೀಲ ಚಂದ್ರಶೇಖರ್ ತಿಳಿಸಿದ್ದಾರೆ.

    4 ದಿನಗಳ ಬಳಿಕ ಜನಾರ್ದನ ರೆಡ್ಡಿ ಅವರು ಇಂದು ತಮ್ಮ ವಕೀಲರೊಂದಿಗೆ ಸಿಸಿಬಿ ಕಚೇರಿಗೆ ತೆರಳಲಿದ್ದಾರೆ. ವಕೀಲ ಚಂದ್ರಶೇಖರ್ ಮಾತನಾಡಿ, ಅಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಜನಾರ್ದನ ರೆಡ್ಡಿಯವರ ಹೆಸರನ್ನು ಪ್ರಸ್ತಾಪಿಸಿದ್ದರು. ಅಲ್ಲದೇ ಅದೇ ಪೊಲೀಸ್ ಪ್ರಕಟಣೆಯಲ್ಲಿ ರೆಡ್ಡಿ ವಿರುದ್ಧ ಕೆಲವೊಂದು ಆರೋಪಗಳನ್ನು ಕೂಡ ಮಾಡಿದ್ದರು. ಆದ್ರೆ ಅವೆಲ್ಲವೂ ಸತ್ಯಕ್ಕೆ ದೂರವಾದದ್ದಾಗಿದೆ ಅಂತ ಸ್ಪಷ್ಟಪಡಿಸಿದ್ರು.

    ವಿನಾಕಾರಣ ಸಿಸಿಬಿಯವರು ಜನಾರ್ದನ ರೆಡ್ಡಿ ಮೇಲೆ ಆರೋಪ ಮಾಡಿದ್ದಾರೆ. ಆದ್ರೆ ಸಿಸಿಬಿ ನೋಟಿಸ್ ಜಾರಿ ಮಾಡಲಿಲ್ಲ. ಹೀಗಾಗಿ ನೀವು ನೋಟೀಸ್ ಜಾರಿ ಮಾಡಿ ಅಂತ ಕೇಳಿಕೊಂಡಿದ್ದೆವು. ನೋಟಿಸ್ ಜಾರಿ ಮಾಡದೇ ನಾವು ವಿಚಾರಣೆಗೆ ಹಾಜರಾಗುವುದು ಹೇಗೆ ಅಂತ ಪ್ರಶ್ನಿಸಿದ್ದೆವು. ಹೀಗಾಗಿ ಇದೀಗ ಸಿಸಿಬಿ ಅವರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

    ಸದ್ಯ ನಾವು ಸಿಸಿಬಿಗೆ ಹಾಜರಾಗುತ್ತೇವೆ. ಈ ಕೇಸ್ ನಲ್ಲಿ ಪ್ರತಿ ಹಂತದಲ್ಲಿಯೂ ವಿಚಾರಣೆಗೆ ಸಂಪೂರ್ಣವಾಗಿ ಸಿದ್ಧರಿದ್ದೇವೆ. ಒಟ್ಟಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಅಂತ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews