Tag: Chandra Layout Police

  • ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ – ಅಪ್ರಾಪ್ತ ಸೇರಿ ಐವರ ಬಂಧನ

    ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ – ಅಪ್ರಾಪ್ತ ಸೇರಿ ಐವರ ಬಂಧನ

    ಬೆಂಗಳೂರು: ಇತ್ತೀಚೆಗೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ (Muslim Girl) ಮೇಲೆ ನೈತಿಕ ಪೊಲೀಸ್‌ಗಿರಿ ಎಸಗಿದ್ದ ವೀಡಿಯೋ ಒಂದು ವೈರಲ್ ಆಗಿತ್ತು. ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಮಾತನಾಡುತ್ತ ಕುಳಿತಿದ್ದ ಯುವತಿಯನ್ನ ನಿಂದಿಸಿ ಹಲ್ಲೆಗೆ ಯತ್ನಿಸಿದ್ದ ಅಪ್ರಾಪ್ತ ಯುವಕ ಸೇರಿ ಐವರನ್ನ ಚಂದ್ರಾಲೇಔಟ್ ಪೊಲೀಸರು (Chandra Layout Police) ಬಂಧಿಸಿದ್ದಾರೆ.

    ಮಹೀಮ್, ಅಫ್ರೀದಿ, ವಾಸೀಮ್, ಅಂಜುಮ್ ಬಂಧಿತರು. ಕಳೆದ 3 ದಿನಗಳ ಹಿಂದೆ ತನ್ನ ಸ್ನೇಹಿತನ ಜೊತೆ ಬುರ್ಖಾ ಧರಿಸಿ ಬೈಕ್‌ನಲ್ಲಿ ಯುವತಿ ಕೂತು ಮಾತನಾಡುತ್ತಿದ್ದಳು. ಈ ವೇಳೆ ಸ್ಥಳಕ್ಕೆ ಬಂದ ಐವರು ಮುಸ್ಲಿಂ ಯುವಕರ ಗುಂಪು, ಬುರ್ಖಾ ಧರಿಸಿ ಹಿಂದೂ ಯುವಕನ ಜೊತೆ ಬೈಕ್‌ನಲ್ಲಿ ಯಾಕೆ ಕೂತಿದ್ಯಾ? ನಿನಗೆ ಮಾನ ಮರ್ಯಾದೆ ಇಲ್ವಾ? ನಿಮ್ಮ ಮನೆಯವರ ಫೋನ್ ನಂಬರ್ ಕೊಡು ಎಂದು ಕ್ಯಾತೆ ತೆಗೆದಿದ್ದರು. ಇದನ್ನೂ ಓದಿ: ಅನ್ಯಕೋಮಿನ ಯುವತಿ ತನ್ನ ಗೆಳೆಯನ ಜೊತೆ ಕುಳಿತಿದ್ದಕ್ಕೆ ಕಿರಿಕ್!

    ಆ ಸಂದರ್ಭದಲ್ಲಿ ಯುವತಿ, ನನ್ನ ಕ್ಲಾಸ್‌ಮೇಟ್ ಜೊತೆ ನಾನು ಮಾತನಾಡುತ್ತಿದ್ದೇನೆ. ನಮ್ಮ ಮನೆಯವರ ನಂಬರ್ ನಿಮಗ್ಯಾಕೆ ಕೊಡಬೇಕು ಎಂದು ಪ್ರತ್ಯುತ್ತರ ನೀಡಿದ್ದಳು. ಯುವತಿ ಜೊತೆಗಿದ್ದ ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ್ದಲ್ಲದೆ, ಆರೋಪಿಗಳು ಯುವಕ ಹಾಗೂ ಯುವತಿಯು ಬೈಕ್‌ನಲ್ಲಿ ಕೂತು ಮಾತನಾಡುತ್ತಿದ್ದ ವೀಡಿಯೋ ವೈರಲ್ ಮಾಡಿದ್ದರು. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    ಸದ್ಯ ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸರು ಐವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಕಾಶದಲ್ಲೇ ತುಂಡಾದ ಹೆಲಿಕಾಪ್ಟರ್‌ನ ಫ್ಯಾನ್‌ – ಐವರು ದುರ್ಮರಣ

  • ಹೆತ್ತ ಮಗನ ಮುಂದೆಯೇ ತಾಯಿಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ ದುರುಳರು!

    ಹೆತ್ತ ಮಗನ ಮುಂದೆಯೇ ತಾಯಿಯ ಗುಪ್ತಾಂಗಕ್ಕೆ ಖಾರದಪುಡಿ ಹಾಕಿದ ದುರುಳರು!

    ಬೆಂಗಳೂರು: ಇವರನ್ನ ಮನುಷ್ಯರು ಅನ್ನೊಬೇಕೊ ರಾಕ್ಷಸರು ಅನ್ನಬೇಕೊ ನಿಜಕ್ಕೂ ಗೊತ್ತಾಗ್ತಿಲ್ಲ. ಯಾಕಂದ್ರೆ ಅಷ್ಟೊಂದು ಕ್ರೂರ ವ್ಯಕ್ತಿಗಳಿವರು. ಈ ಸುದ್ದಿ ಕೇಳಿದ್ರೇನೆ ರಕ್ತ ಕುದಿಯುತ್ತೆ ನೋಡಿ.

    ಚಂದ್ರಾಲೇಔಟ್ ಠಾಣೆಯಲ್ಲಿ (Chandra Layout Police Station) ದಾಖಲಾಗಿರೋ ಲೈಂಗಿಕ ದೌರ್ಜನ್ಯ ಪ್ರಕಣದ ಕ್ರೂರತೆ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ. ಮೊದಲಿಗೆ ರೌಡಿ ಶೀಟರ್ (Rowdy Sheeter) ಜೊಸೆಫ್ ಹಾಗೂ ಪಾಗಲ್ ಸೀನ ಮೊದಲೇ ಪರಿಚಯವಿದ್ದ ಚೈನ್ ಸ್ನಾಚ್ (Chain Snatching) ಮಾಡ್ತಿದ್ದ 20 ವರ್ಷದ ಯುವಕನನ್ನ ಪೊಲೀಸರ ರೀತಿ ಲಾಕ್ ಮಾಡಿದ್ರು. ಇದಕ್ಕೆ ಆರೋಪಿ ಸೌಮ್ಯಳನ್ನ ಪಿಎಸ್‌ಐ ಅಂತ ತೋರಿಸಿ 20 ವರ್ಷದ ಯುವಕನ್ನ ಚಿನ್ನ ಕಳ್ಳ ಅಂತ ಕಿಡ್ನ್ಯಾಪ್ ಮಾಡಿದ್ರು. ಇದನ್ನೂ ಓದಿ: Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

    ನಾಯಂಡಹಳ್ಳಿಯ ಜಟಕ ಸ್ಟ್ಯಾಂಡ್‌ ಬಳಿಯಿರುವ ಮನೆಯಲ್ಲಿ ಕೂಡಿ ಹಾಕಿ ರಿಕವರಿ ಕೊಡು ಅಂತ ಇನ್ನಿಲ್ಲದ ಟಾರ್ಚರ್ ನೀಡಿದ್ದಾರೆ. ಪೊಲೀಸ್ರು ನೀಡೋ ಥರ್ಡ್ ಡಿಗ್ರಿ ಟ್ರಿಟ್ಮೆಂಟ್ ಗಿಂತ ಕ್ರೂರವಾಗಿ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಟಾರ್ಚರ್ ತಾಳಲಾರದೇ ಆ ಯುವಕ ಮನೆಯಲ್ಲಿ ಚಿನ್ನ ಇಟ್ಟಿರೋದಾಗಿ ಸುಳ್ಳು ಹೇಳಿದ್ದ. ನಂತರ ಮನೆಯಲ್ಲಿ ಹೊಗಿ ನೋಡಿದ್ರೆ ಚಿನ್ನ ಇರಲಿಲ್ಲ. ಇದು ಗೊತ್ತಾದಾಗ ಮತ್ತೆ ಟಾರ್ಚರ್ ಮಾಡಿದ್ದಾರೆ. ಈ ವೇಳೆ ಆ ಯುವಕ ನಮ್ಮ ಅಮ್ಮ ಎತ್ತಿ ಇಟ್ಟಿರ್ಬೇಕು ಅಂತ ಮತ್ತೊಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನಿಸಿದ್ದಾನೆ. ಇದನ್ನೂ ಓದಿ: ನಕಲಿ ಎನ್‍ಸಿಸಿ ಶಿಬಿರ ಆಯೋಜಿಸಿ 13 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – 11 ಮಂದಿ ಅರೆಸ್ಟ್

    ಆ ಬಳಿಕ ಕಿಡ್ನ್ಯಾಪ್ ಗ್ಯಾಂಗ್‌ನ ಅಸಲಿ ಕ್ರೂರತನ ಹೊರ ಬಿದ್ದಿದೆ. ಸೀದಾ ಆ ಯುವಕನ ಮೆನೆಗೆ ಹೋಗಿ ಆತನ ತಾಯಿಯನ್ನ ಕರ್ಕೊಂಡು ಬಂದಿದ್ದಾರೆ. ಇದೇ ನಕಲಿ ಪಿಎಸ್‌ಐ ಸೌಮ್ಯ ಅಂಡ್ ಟೀಮ್ ಆ ಯುವಕನ ತಾಯಿಗೆ ಚಿನ್ನ ಕೊಡುವಂತೆ ಟಾರ್ಚರ್ ಶುರು ಮಾಡಿದ್ದಾಳೆ. ಆ ತಾಯಿ ಯಾವ ಚಿನ್ನ ಗೊತ್ತಿಲ್ಲ ನಮ್ಮನ್ನ ಬಿಟ್ಟು ಬಿಡಿ ಅಂದ್ರು ಕೇಳದೇ ಜೊಸೆಫ್, ಪಾಗಲ್ ಸೀನ ಅಂಡ್ ಟೀಮ್ ಸೇರಿಕೊಂಡು ಆ ತಾಯಿ ಬಾಯಿ ಕಟ್ಟಿ ಮಗನ ಮುಂದೆಯೇ ತಾಯಿ ಗುದದ್ವಾರ ಹಾಗೂ ಖಾಸಗಿ ಅಂಗಕ್ಕೆ ಖಾರದಪುಡಿ ತುರುಕಿದ್ದಾರೆ. ಇನ್ನೂ ಇದಕ್ಕೂ ಮೊದಲೆ ಆ ತಾಯಿ ಚಂದ್ರ ಲೇಔಟ್ ನಲ್ಲಿ ಮಗ ಮಿಸ್ಸಿಂಗ್ ಅಂತ ದೂರು ನೀಡಿದ್ದರು. ಈ ವಿಚಾರ ಗೊತ್ತಾಗಿ ಸೌಮ್ಯಳೇ ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ ಪೊಲೀಸರಿಗೆ ಸರ್ ಒಬ್ಬ ಚೈನ್ ಸ್ನಾಚರ್ ಇದ್ದಾನೆ ಅಂತ ಮಾಹಿತಿ ನೀಡಿದ್ದಾಳೆ. ಈ ವೇಳೆ ಚಂದ್ರಲೇಔಟ್ ಪೊಲೀಸರಿಗೆ ಮಾಹಿತಿ ಗೊತ್ತಾಗಿ ಆರೋಪಿಗಳನ್ನ ಅರೆಸ್ಟ್ ಮಾಡಿದ್ದು, ತನಿಖೆ ನಡೆಯುತ್ತಿದೆ‌. ಇದನ್ನೂ ಓದಿ: ಇಂದಿರಾ ಗಾಂಧಿಯಂತೆ ಮಮತಾ ಬ್ಯಾನರ್ಜಿಯನ್ನೂ ಶೂಟ್ ಮಾಡಿ ಎಂದಿದ್ದ ವಿದ್ಯಾರ್ಥಿನಿ ಅರೆಸ್ಟ್

  • Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

    Bengaluru | ಹಣಕ್ಕಾಗಿ ತಾಯಿ-ಮಗನ ಕಿಡ್ನ್ಯಾಪ್‌ ಮಾಡಿ ಲೈಂಗಿಕ ಕಿರುಕುಳ – ರೌಡಿ ಶೀಟರ್ಸ್‌ ಗ್ಯಾಂಗ್ ಅರೆಸ್ಟ್

    ಬೆಂಗಳೂರು: ಹಣಕ್ಕಾಗಿ ತಾಯಿ ಮಗನನ್ನ ಕಿಡ್ನ್ಯಾಪ್‌ ಮಾಡಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದ ಮೇಲೆ ಇಬ್ಬರು ರೌಡಿಶೀಟರ್ (Rowdy Sheeter Gang) ಸೇರಿ ಒಟ್ಟು 9 ಮಂದಿಯನ್ನ ಚಂದ್ರಲೇಔಟ್ ಪೊಲೀಸರು (Chandra Layout Police) ಬಂಧಿಸಿದ್ದಾರೆ.

    ಜೋಸೆಫ್ (ರೌಡಿ ಶೀಟರ್), ಶ್ರೀನಿವಾಸ್ @ ಪಾಗಲ್ ಸೀನ (ರೌಡಿಶೀಟರ್), ಸೌಮ್ಯಾ, ಪ್ರತಾಪ್, ಜತಿನ್, ವಿಘ್ನೇಶ್, ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಬಂಧಿತ ಆರೋಪಿಗಳು. ದನ್ನೂ ಓದಿ: TB Dam | ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಯಶಸ್ವಿ – ತಾಂತ್ರಿಕ ತಂಡಕ್ಕೆ 2 ಲಕ್ಷ ಬಹುಮಾನ

    ಇದೇ ತಿಂಗಳ ಆ.13 ರಂದು ಜೋಸೆಫ್‌ ಮತ್ತು ಶ್ರೀನಿವಾಸ್ ಹಣ ವಸೂಲಿ ಮಾಡಲು ತಾಯಿ-ಮಗನನ್ನ ಕಿಡ್ನ್ಯಾಪ್‌ (Kidnap) ಮಾಡಿದ್ದರು. ಬಳಿಕ ಇಬ್ಬರನ್ನೂ ಪರಿಚಯಸ್ಥ ಪ್ರತಾಪ್ ಮನೆಯಲ್ಲಿ ಅಕ್ರಮವಾಗಿ ಇರಿಸಿ ಟಾರ್ಚರ್ ಮಾಡಿದ್ದರು. ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಎಸಗಿ 2 ಲಕ್ಷ ರೂ. ಕೊಡುವಂತೆ ಕಿರುಕುಳ ನೀಡಿದ್ದರು. ಇಬ್ಬರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ಬಿಟ್ಟು ಕಳಿಸಿದ್ದಾರೆ. ದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಪೊಲಿಟಿಕಲ್ ಸೇಫ್ – ಆದ್ರೆ ಮುಂದೇನು?

    ಗ್ಯಾಂಗ್‌ನಿಂದ ಪಾರಾದ ಮಹಿಳೆ ಚಂದ್ರಲೇಔಟ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಗೆ ಕಾರಣ ಕರ್ತರಾಗಿದ್ದ ಇಬ್ಬರು ರೌಡಿಶೀಟರ್‌ಗಳು, ಇಬ್ಬರು ಮಹಿಳೆಯರು ಸೇರಿ 9 ಮಂದಿಯನ್ನ ಬಂಧನ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಾದ ಜೋಸೆಫ್ ಮತ್ತು ಪಾಗಲ್ ಸೀನ ಚಂದ್ರಾ ಲೇಔಟ್ ರೌಡಿ ಶೀಟರ್ ಗಳಾಗಿದ್ದು, ಶಹಬುದ್ದೀನ್ ಮತ್ತು ವಿಘ್ನೇಶ್ ವಿರುದ್ಧ ಈ ಹಿಂದೆ ಹಲ್ಲೆ ಪ್ರಕರಣಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ 2.50 ಲಕ್ಷ ರೂ. ಕಳ್ಳತನ!

    ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ 2.50 ಲಕ್ಷ ರೂ. ಕಳ್ಳತನ!

    ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ (Gurukiran) ಅವರ ಬೆಂಗಳೂರು ನಿವಾಸದಲ್ಲಿ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಕಳೆದ ಡಿಸೆಂಬರ್ 31ರಂದು ಮಧ್ಯಾಹ್ನ ತಮ್ಮ ರೂಂನ ಬೀರುವಿನಲ್ಲಿಟ್ಟಿದ್ದ 2.50 ಲಕ್ಷ ರೂ.ಗಳನ್ನು ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಇಟ್ಟಿದ್ದರು. ಆದ್ರೆ ಜನವರಿ 5ರಂದು ಹಣ ಕಳ್ಳತನವಾಗಿದೆ. ಎರಡು ದಿನಗಳ ಕಾಲ ಕುಟುಂಬಸ್ಥರು ಮನೆಯೆಲ್ಲ ಹುಡುಕಾಡಿದ್ದಾರೆ.

    ಎಷ್ಟು ಹುಡುಕಾಡಿದರೂ ಹಣ ಸಿಗದೇ ಇದ್ದಾಗ ಜನವರಿ 7 ರಂದು ಚಂದ್ರಲೇಔಟ್ ಪೊಲೀಸ್ ಠಾಣೆಗೆ (Chandra Layout Police Station) ಗುರುಕಿರಣ್ ಅತ್ತೆ ದೂರು ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?

    ಈ ಸಂಬಂಧ ಎಫ್‌ಐಆರ್ ಸಹ ದಾಖಲಾಗಿದೆ. ಮನೆ ಕೆಲಸದವರ ಮೇಲೆ ಕಸ್ತೂರಿ ಶೆಟ್ಟಿ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ, ಸದ್ಯ ಮನೆ ಕೆಲಸದಾಕೆ ರತ್ನಮ್ಮ ಅವರನ್ನು ವಿಚಾರಣೆ ನಡೆಸಿರುವ ಚಂದ್ರಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಸುಧಾರಣಾ ಕ್ರಮವಾಗಿ ‘ಅರ್ಜಿ ಸಲ್ಲಿಕೆಯೊಂದಿಗೆ ಪರಿಶೀಲನೆ’ ವ್ಯವಸ್ಥೆ ಜಾರಿ – ವಾಟ್ಸಪ್ ಸಂದೇಶಕ್ಕೆ ಮೊಬೈಲ್ ಆ್ಯಪ್ 

  • ನಿನ್ ಹೆಂಡ್ತಿ ನಂಬರ್ ಕೊಡು ಎಂದವನ ಮೇಲೆ ರೌಡಿಯಿಂದ ಹಲ್ಲೆ – ಒದೆ ತಿಂದವನ ಕಡೆಯವರಿಂದ ಮನೆ ಮುರಿದು ದಾಂಧಲೆ

    ನಿನ್ ಹೆಂಡ್ತಿ ನಂಬರ್ ಕೊಡು ಎಂದವನ ಮೇಲೆ ರೌಡಿಯಿಂದ ಹಲ್ಲೆ – ಒದೆ ತಿಂದವನ ಕಡೆಯವರಿಂದ ಮನೆ ಮುರಿದು ದಾಂಧಲೆ

    ಬೆಂಗಳೂರು: ಕುಡಿದ ಮತ್ತಿನಲ್ಲಿ‌ ಶುರುವಾಗಿದ್ದ ಜಗಳ ಮನೆಯನ್ನೆ ಧ್ವಂಸ ಮಾಡುವ ಹಂತಕ್ಕೆ ಬಂದಿದೆ.‌ ಹೆಂಡತಿ ನಂಬರ್ ಕೊಡು ಎಂದಿದ್ದಕ್ಕೆ ರೊಚ್ಚಿಗೆದ್ದ ರೌಡಿಶೀಟರ್ (Rowdy Sheeter) ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಚಂದ್ರಲೇಔಟ್ ಠಾಣಾ (Chandra Layout Police Station) ವ್ಯಾಪ್ತಿಯಲ್ಲಿ ನಡೆದಿದೆ.

    ರೌಡಿಶೀಟರ್ ಕೆಂಪೇಗೌಡ ಅಲಿಯಾಸ್‌ ಕೆಂಪ, ಸ್ನೇಹಿತ ರಮೇಶ್‌ನನ್ನೇ ಥಳಿಸಿದ್ದಾನೆ. ಸ್ನೇಹಿತರಾಗಿದ್ದ ಇಬ್ಬರೂ ಬಾರ್ ನಲ್ಲಿ‌ ಕುಡಿದು ಅಂಗಡಿ ಮುಂದೆ ಬಂದು ನಿಂತಿದ್ದಾರೆ.‌‌ ಈ‌‌ ವೇಳೆ ಕೆಂಪೇಗೌಡನಿಗೆ ನಿನ್ನ ಪತ್ನಿ ನಂಬರ್ ಕೊಡು ಎಂದು ರಮೇಶ್‌ ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದ ಕೆಂಪೇಗೌಡ, ರಮೇಶ್‌ಗೆ ಕಪಾಳಕ್ಕೆ‌ ಹೊಡೆದು ಹೋಗಿದ್ದ. ನಂತರ ಹೊಯ್ಸಳ ನಗರದಲ್ಲಿರುವ ತನ್ನ ಮನೆಗೆ ವಾಪಸ್ ಆಗಿದ್ದ. ಇದನ್ನೂ ಓದಿ: ನಿಫಾ ವೈರಸ್ ಭೀತಿ – ರಾಜ್ಯದ ಗಡಿಯಲ್ಲಿ ಹೈ ಅಲರ್ಟ್, ಕಟ್ಟುನಿಟ್ಟಿನ ತಪಾಸಣೆಗೆ ಸರ್ಕಾರ ಸೂಚನೆ

    ರಾತ್ರಿ 11 ಗಂಟೆಗೆ ಹಲ್ಲೆ ವಿಚಾರವಾಗಿ ಪ್ರಶ್ನೆ ಮಾಡಲು ರಮೇಶ್ ಸಂಬಂಧಿಕರು ಮತ್ತು ಸ್ನೇಹಿತರು ಕೆಂಪನ ಮನೆ ಬಳಿ ಹೋಗಿದ್ದರು. ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನ ಗುಂಪು ಕಟ್ಟಿಕೊಂಡು ರಮೇಶ್‌ ಹೋಗಿದ್ದಾನೆ. ಮನೆ ಬಳಿ ಬಂದು ಕಿರಿಕ್ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಮತ್ತೆ ಗಲಾಟೆಯಾಗಿದೆ. ಗಲಾಟೆಯಲ್ಲಿ ಮಂಜುನಾಥ್, ಜವರೇಗೌಡ, ಕೃಷ್ಣಮೂರ್ತಿಗೆ ರೌಡಿ ಕೆಂಪ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ಗುಂಪಿನವರು ಕೆಂಪೇಗೌಡ ಮನೆ ಮೇಲೆ ಕಲ್ಲು ಎಸೆದು ಕಿಟಕಿ ಗಾಜುಗಳನ್ನ ಪುಡಿ‌-ಪುಡಿ ಮಾಡಿ, ಬಾಗಿಲು, ಗೇಟ್ ಮುರಿದು ಹಾಕಿದ್ದಾರೆ.

    ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸರು ರೌಡಿ ಕೆಂಪನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ಜೀ ಅಲಿಯಾಸ್ ಚನ್ನನಾಯ್ಕ್ ಪತ್ನಿಗೆ ಬೆದರಿಕೆ ಹಾಕಿದ್ದ ಚೈತ್ರಾ ಕುಂದಾಪುರ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]