Tag: chandika yaga

  • ಚಂಡಿಕಾ ಯಾಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿ

    ಚಂಡಿಕಾ ಯಾಗದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಕಾರ್ಯಕ್ರಮದ ನಿಮಿತ್ಯ ಆಯೋಜನೆ ಮಾಡಿದ್ದ ಚಂಡಿಕಾ ಯಾಗದಲ್ಲಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಿ ಸರಸ್ವತಿ ಮಹಾಮಂಡಲಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

    lakshmi hebbalkar

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದಸರಾ ಉತ್ಸವ ನಮ್ಮ ಸಂಸ್ಕøತಿಯ ಪ್ರತೀಕವಾಗಿದೆ. 9 ದಿನಗಳ ಕಾಲ ನಡೆಯುವ ಭಾವಕ್ಯತೆಯ ಸಂಕೇತವಾಗಿರುವ ಹುಕ್ಕೇರಿ ದಸರಾ ಉತ್ಸವದ ಚಂಡಿಕಾ ಯಾಗದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ನಮ್ಮ ಪ್ರತಿಯೊಂದು ಕಾರ್ಯಕ್ಕೂ ಸಲಹೆ ನೀಡಿ ತಿದ್ದಿ ಬುದ್ಧಿ ಹೇಳಿ ಹೆಚ್ಚು ಸಾಮಾಜಿಕ ಕಾರ್ಯ ಮಾಡಲು ಸ್ಫೂರ್ತಿ ತುಂಬುತ್ತಿದ್ದಾರೆ ಎಂದರು. ಇದನ್ನೂ ಓದಿ: ಮಕ್ಕಳಿಗೆ ಲಸಿಕೆ ಭಾಗ್ಯ- 2 ರಿಂದ 18 ವರ್ಷದವರಿಗೆ ಕೋವ್ಯಾಕ್ಸಿನ್ ನೀಡಲು ಅನುಮತಿ

    lakshmi hebbalkar

    ಇದೇ ವೇಳೆ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಸೌಮ್ಯ ಸ್ವಭಾವದ ನಾಯಕಿ. ಅವರ ತಾಳ್ಮೆ ಸಾಮಾಜಿಕ ಕಾರ್ಯ ಅನುಪಮವಾದ ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮತ್ತು ಬೆಳಗಾವಿ ಗ್ರಾಮೀಣ ಭಾಗದ ಜನರ ಕಷ್ಟದಲ್ಲಿ ಭಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಅಧಿಕಾರ ಸಿಗಲಿ ಎಂದು ಹಾರೈಸಿದರು. ಇದನ್ನೂ ಓದಿ: ನಾಪತ್ತೆಗೂ ಮುನ್ನ ಖತರ್ನಾಕ್ ಪ್ಲಾನ್ ಮಾಡಿದ್ದ ಯುವತಿ, ಮಕ್ಕಳು

    lakshmi hebbalkar

    ಶ್ರೀ ಸಂಪತ್ತಕುಮಾರ ಶಾಸ್ತ್ರಿಗಳ ವೈದಿಕತ್ವದಲ್ಲಿ ನೂರಾ ಎಂಟು ವಟುಗಳ ವೇದ ಪಠಣದೊಂದಿಗೆ ಚಂಡಿಕಾ ಯಾಗ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ರೇಖಾ ಚಿಕ್ಕೋಡಿ ಅಕ್ಷರ ದಾಸೋಹ ಅಧಿಕಾರಿ ಶ್ರಿಶೈಲ ಹಿರೇಮಠ, ಮುರುಗೇಶ್ ಅಥಣಿ ಸುರೇಶ್ ಜಿನರಾಳಿ ಹಾಗೂ ಚನ್ನಪ್ಪ ಗಜಬರ ಉಪಸ್ಥಿತರಿದ್ದರು.

  • ಪೌರತ್ವ ಕಾಯ್ದೆ ಜಾರಿಗಾಗಿ ಸಂಸದರಿಂದ ಚಂಡಿಕಾಯಾಗ

    ಪೌರತ್ವ ಕಾಯ್ದೆ ಜಾರಿಗಾಗಿ ಸಂಸದರಿಂದ ಚಂಡಿಕಾಯಾಗ

    ಕೊಪ್ಪಳ: ದೇಶಾದ್ಯಂತ ಪೌರತ್ವ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯ ಕಾವು ಹಿಂಸಾಚಾರಕ್ಕೆ ತಿರುಗುತ್ತಿದೆ. ಈ ಮಧ್ಯೆ ಸಂಸದ ಕರಡಿ ಸಂಗಣ್ಣ ಅವರು ಪೌರತ್ವ ಕಾಯ್ದೆ ಜಾರಿ ಹಾಗೂ ಶಾಂತಿಗಾಗಿ ಕೊಪ್ಪಳದಲ್ಲಿ ಚಂಡಿಕಾಯಾಗ ಹೋಮ ಮಾಡಿಸಿದ್ದಾರೆ.

    ಕೊಪ್ಪಳದ ಪ್ರಸಿದ್ಧಿ ದೇವಸ್ಥಾನ ಹುಲಗಿ ದೇವಸ್ಥಾನದಲ್ಲಿ ಇಂದು ಮುಂಜಾನೆಯಿಂದಲೇ ಸಂಸದ ಸಂಗಣ್ಣ ಕರಡಿ ಅವರು ಕುಟುಂಬ ಚಂಡಿಕಾಯಾಗ ಮಾಡಿಸುತ್ತಿದೆ. ಪೌರತ್ವ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು ನೊವು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಸದರು ಕುಟುಂಬ ಸಮೇತ ಬಂದು ಲೋಕ ಕಲ್ಯಾಣಕ್ಕಾಗಿ ಚಂಡಿಕಾಯಾಗವನ್ನು ಮಾಡಿಸುತ್ತಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ನಡುವೆ ಪೊಲೀಸ್‍ಗೆ ಹೂ ಕೊಟ್ಟ ಯುವತಿ – ಫೋಟೋ ವೈರಲ್

    ಈ ವಿಶೇಷ ಯಾಗವನ್ನು ಶೃಂಗೆರಿ ಮತ್ತು ಉಡುಪಿ ಸ್ವಾಮೀಜಿಗಳಾದ ಪ್ರವೀಣ್ ತಂತ್ರಿ ಹಾಗೂ ಕೃಷ್ಣ ಮೂರ್ತಿ ಗಣಪಾಟಿ ಅವರ ನೇತೃತ್ವದಲ್ಲಿ ಹೊಮ ನೆಡೆಯತ್ತಿದೆ. ಬೆಳಗ್ಗೆ 8 ಗಂಟೆಯಿಂದ ಆರಂಭವಾಗಿದ್ದು ಮಧ್ಯಾಹ್ನ ಒಂದು ಗಂಟೆಯವರೆಗೆ ಪೂಜೆ ಮುಗಿದಿದೆ. ಇದನ್ನೂ ಓದಿ: ಪ್ರತಿಭಟನಾಕಾರರನ್ನು ಸಮಾಧಾನ ಮಾಡಲು ರಾಷ್ಟ್ರಗೀತೆ ಹಾಡಿದ ಡಿಸಿಪಿ: ವಿಡಿಯೋ

  • ಸಿಎಂ ಕುರ್ಚಿ ಮೇಲೆ ಕಣ್ಣು?- ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಡಿಕೆಶಿಯಿಂದ ಶತಚಂಡಿಕಾ ಹೋಮ

    ಸಿಎಂ ಕುರ್ಚಿ ಮೇಲೆ ಕಣ್ಣು?- ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಡಿಕೆಶಿಯಿಂದ ಶತಚಂಡಿಕಾ ಹೋಮ

    ಉಡುಪಿ: 2018ರ ಚುನಾವಣೆಯ ನಂತರ ಡಿ.ಕೆ ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಚರ್ಚೆಗಳು ಶುರುವಾಗಿದೆ. ಈ ನಡುವೆ ಉಡುಪಿಯ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ಡಿಕೆಶಿ ಶತಚಂಡಿಕಾ ಹೋಮ ಮಾಡಿಸುತ್ತಿದ್ದಾರೆ.

    ಐಟಿ ದಾಳಿಯಿಂದ ನಲುಗಿಹೋಗಿರುವ ಇಂಧನ ಸಚಿವ ಡಿ.ಕೆ ಶಿವಕುಮಾರ್ ಕೊಲ್ಲೂರು ಮೂಕಾಂಬಿಕೆಯ ಮೊರೆ ಹೋಗಿದ್ದಾರೆ. ಇಂದು ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಡಿಕೆಶಿ ಶತಚಂಡಿಕಾ ಹೋಮಕ್ಕೆ ಪ್ರಾರ್ಥನೆ ಮತ್ತು ಸಂಕಲ್ಪ ಮಾಡಿದ್ದಾರೆ. ರಾಜಕೀಯ ಅಭಿವೃದ್ಧಿ, ಇಷ್ಟಾರ್ಥ ಸಿದ್ಧಿ, ಶತ್ರು ನಾಶ, ಹರಕೆ, ಉದ್ಯಮ, ಆರೋಗ್ಯ, ಮಾನಸಿಕ ನೆಮ್ಮದಿ, ಕೌಟುಂಬಿಕ ಕಲಹ ಹೀಗೆ ಸಕಲ ದೋಷ ನಿವಾರಣೆ ಮತ್ತು ಶ್ರೇಯೋಭಿವೃದ್ಧಿಗೆ ಚಂಡಿಕಾ ಹೋಮ ಮಾಡಿಸಲಾಗುತ್ತದೆ. ಇದನ್ನೂ ಓದಿ: ಪಂಥಾಹ್ವಾನ ನೀಡಿದ್ರೂ `ಪವರ್’ಫುಲ್ ಸಚಿವರು ಸೈಲೆಂಟ್ ಆಗಿರೋದಕ್ಕೆ ಅಜ್ಜಯ್ಯ ಕಾರಣನಾ?

    ಸಾವಿರ ಚಂಡಿಕಾ ಹೋಮಕ್ಕೆ ಸರಿಸಾಟಿಯಾದ ಹೋಮ ಮಾಡಿಸುತ್ತಿರುವ ಡಿ.ಕೆ ಶಿವಕುಮಾರ್, ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತ. ಡಿಕೆಶಿ ತನ್ನ ರಾಜಕೀಯ ಮತ್ತು ಉದ್ಯಮದಲ್ಲಿ ಯಶಸ್ಸು ಮತ್ತು ಸಂಕಷ್ಟ ಬಂದಾಗ ಕೊಲ್ಲೂರಿಗೆ ಬಂದು ಪೂಜೆ, ಹೋಮ ಮಾಡಿಸುತ್ತಾರೆ. ಇದನ್ನೂ ಓದಿ: ಅಭ್ಯರ್ಥಿ ಇಲ್ಲಿ ನೆಪ ಮಾತ್ರ, ನಾನು-ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ: ಚನ್ನಪಟ್ಟಣದಲ್ಲಿ ಡಿಕೆಶಿ ಅಬ್ಬರ

    ಶತಚಂಡಿಕಾ ಹೋಮ ಸೇವೆಗೆ ಬೆಳಗ್ಗೆ ಚಾಲನೆ ಸಿಕ್ಕಿದ್ದು, ಮೂರು ದಿನಗಳ ಕಾಲ ನಿರಂತರ ಯಾಗ ನಡೆಯಲಿದೆ. ಜನವರಿ 8ರ ಮಧ್ಯಾಹ್ನ ಚಂಡಿಕಾ ಹೋಮದ ಪೂರ್ಣಾಹುತಿ ನಡೆಯಲಿದೆ. ದೇವಳದ ಹಿರಿಯ ಅರ್ಚಕ ನರಸಿಂಹ ಅಡಿಗ ನೇತ್ರತ್ವದಲ್ಲಿ ಶತಚಂಡಿಕಾಯಾಗ ಆರಂಭವಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಗ್ರಾಮಕ್ಕೆ ಡಿಕೆಶಿ ಮೂರು ದಿನ ಬರ್ತಾರೆ ಎಂದು ಹೇಳಲಾಗಿದೆ.

    ಸೋಮವಾರ ಉಡುಪಿಯಲ್ಲಿ ನಡೆಯೋ ಮೂರು ಸಮಾವೇಶದಲ್ಲಿ ಸಿಎಂ ಇರಲಿದ್ದು, ಈ ಸಂದರ್ಭ ಡಿಕೆಶಿಯೂ ಜೊತೆಗಿರ್ತಾರೆ. ಇತ್ತ ಹೋಮ, ಅತ್ತ ರಾಜಕೀಯ ಪ್ರಚಾರದಲ್ಲಿ ಪಾಲ್ಗೊಂಡು ಸ್ವಾಮಿ ಮತ್ತು ಸ್ವ-ಕಾರ್ಯದಲ್ಲಿ ಡಿಕೆಶಿ ತೊಡಗಲಿದ್ದಾರೆ ಎನ್ನಲಾಗಿದೆ.