Tag: Chandika Homa

  • ಕೊಲ್ಲೂರಲ್ಲಿ ಚಂಡಿಕಾ ಹೋಮದಿಂದ ಸಂಗ್ರಹವಾಯ್ತು 1.77 ಕೋಟಿ ರೂ.

    ಕೊಲ್ಲೂರಲ್ಲಿ ಚಂಡಿಕಾ ಹೋಮದಿಂದ ಸಂಗ್ರಹವಾಯ್ತು 1.77 ಕೋಟಿ ರೂ.

    ಉಡುಪಿ: ದಕ್ಷಿಣ ಭಾರತಾದ್ಯಂತ ಭಕ್ತರನ್ನು ಹೊಂದಿರುವ ಕೊಲ್ಲೂರಿನ ಶ್ರೀ ಮೂಕಾಂಬಿಕಾ ಕ್ಷೇತ್ರದಲ್ಲಿ ಚಂಡಿಕಾ ಹೋಮದಂದಲೇ ವಾರ್ಷಿಕ 1.77 ಕೋಟಿ ರೂಪಾಯಿ ಆದಾಯ ಬಂದಿದೆ.

    ದೇಗುಲದ ಆದಾಯವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2024-25ನೇ ಸಾಲಿನಲ್ಲಿ 71 ಕೋಟಿ ರೂ. ದಾಟಿದೆ. ಇದು ಕಳೆದ ವರ್ಷಕ್ಕಿಂತ 3 ಕೋಟಿ ರೂ. ಹೆಚ್ಚು. ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಸಂಗ್ರಹವಾದ ನಗದು ಹಾಗೂ ಚಿನ್ನಾಭರಣ, ಚಂಡಿಕಾ ಹೋಮ ಸೇರಿ ವಿವಿಧ ಪೂಜೆಗಳಿಂದ ಬರುವ ಆದಾಯ, ನಿತ್ಯ ಪೂಜೆ, ಆನ್‌ಲೈನ್ ಪೂಜೆಗಳ ಆದಾಯವನ್ನು ಇದು ಒಳಗೊಂಡಿದೆ.

    ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಹೊರತುಪಡಿಸಿದರೆ ಕೊಲ್ಲೂರು ರಾಜ್ಯದಲ್ಲೇ ಅತಿ ಹೆಚ್ಚು ಆದಾಯವಿರುವ ಕ್ಷೇತ್ರ.

  • ಡಿಕೆಶಿ ಬಿಡುಗಡೆಗೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ – ಹೆಬ್ಬಾಳ್ಕರ್ ಹರಕೆ

    ಡಿಕೆಶಿ ಬಿಡುಗಡೆಗೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ – ಹೆಬ್ಬಾಳ್ಕರ್ ಹರಕೆ

    ಉಡುಪಿ: ಇಡಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶೀಘ್ರ ಬಿಡುಗಡೆ ಆಗುವಂತೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನಡೆಸಲಾಯ್ತು.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇವತ್ತು ಬೆಳಗ್ಗಿನಿಂದಲೇ ಚಂಡಿಕಾಹೋಮ ನೆರವೇರಿತು. ಮುಂಜಾನೆಯೇ ಡಿ.ಕೆ.ಶಿಯವರ ದೊಡ್ಡಪ್ಪ ಮತ್ತು ಚಿಕ್ಕಪ್ಪನ ಮಕ್ಕಳು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಚಂಡಿಕಾ ಹೋಮದ ಹರಕೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೊಂಡಿದ್ದರು ಎನ್ನಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿ ಚಂಡಿಕಾಹೋಮ ಬುಕ್ಕಿಂಗ್ ಮಾಡಿದ್ದರು. ಡಿಕೆಶಿ ಫೋಟೋ ಮುಂದಿಟ್ಟು ಚಂಡಿಕಾಹೋಮ ನಡೆಸಲಾಯ್ತು. ಶಿವಕುಮಾರ್ ಅವರ ಸಂಕಷ್ಟಗಳೆಲ್ಲ ಪರಿಹಾರವಾಗಿ ಶೀಘ್ರ ಬಂಧಮುಕ್ತರಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆಯೂ ನಡೆಯಿತು. ರಾಜ್ಯ ಕಾಂಗ್ರೆಸ್‍ನ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.