Tag: chandigarh

  • ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಬಂದ ಪ್ರಯಾಣಿಕನಿಗೆ ಕೊರೊನಾ

    ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಬಂದ ಪ್ರಯಾಣಿಕನಿಗೆ ಕೊರೊನಾ

    ಚಂಡೀಗಢ: ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಹಿಂದಿರುಗಿದ 39 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ ಎಂದು ಕೇಂದ್ರಾಡಳಿತ ಪ್ರದೇಶದ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ನವೆಂಬರ್ 21ರಂದು ದಕ್ಷಿಣ ಆಫ್ರಿಕಾದಿಂದ ಚಂಡೀಗಢಕ್ಕೆ ಆಗಮಿಸಿದ ಪ್ರಯಾಣಿಕನಿಗೆ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು. ಆದರೂ ಅವರನ್ನು ಹೋ ಕ್ವಾರಂಟೈನ್‍ಗೊಳಿಸಲಾಗಿತ್ತು. ಆದರೆ 7 ದಿನಗಳ ಬಳಿಕ ಇದೀಗ ವ್ಯಕ್ತಿಗೆ ವ್ಯಕ್ತಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದನ್ನೂ ಓದಿ: ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು

    ವ್ಯಕ್ತಿ ಜೊತೆಗೆ ಸಂಪರ್ಕ ಹೊಂದಿದ್ದ ಇಬ್ಬರನ್ನು ಮತ್ತು ಕುಟುಂಬಸ್ಥರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ಎಲ್ಲರಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ. ಕೊರೊನಾ ವೈರಸ್‍ನ ರೂಪಾಂತರ ತಳಿ ಓಮಿಕ್ರಾನ್ ಪತ್ತೆಹಚ್ಚಲು ಅಧಿಕಾರಿಗಳು ವ್ಯಕ್ತಿಯ ಮಾದರಿಗಳನ್ನು ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ (ಎನ್‍ಸಿಡಿಸಿ) ಕಳುಹಿಸಿದ್ದಾರೆ.  ಇದನ್ನೂ ಓದಿ: ಟ್ವಿಟ್ಟರ್‌ CEO ಜಾಕ್‌ ಡಾರ್ಸಿ ರಾಜೀನಾಮೆ – ಭಾರತೀಯ ಪರಾಗ್‌ ಅಗರ್‌ವಾಲ್‌ಗೆ ಒಲಿಯಿತು ಪಟ್ಟ

    ಕೊರೊನಾ ರೂಪಾಂತರ ತಳಿಯನ್ನು ನಿಯಂತ್ರಿಸಲು ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದ್ದು, ಅದರಂತೆ ಕೊರೊನಾ ಪಾಸಿಟಿವ್ ಬಂದವರಿಗೆ ಪ್ರತ್ಯೇಕವಾಗಿ ಕ್ವಾರಂಟೈನ್ ಗೊಳಿಸಲಾಗುತ್ತದೆ. ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು ಹೋಲ್ ಜೀನೋಮ್ ಸೀಕ್ವೆನ್ಸಿಂಗ್‍ಗಾಗಿ ದೆಹಲಿಯ ಎನ್‍ಸಿಡಿಸಿಗೆ ಕಳುಹಿಸಲಾಗುತ್ತದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

  • ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್!

    ಪಂಜಾಬ್ ಚುನಾವಣೆಗೆ ಸೋನು ಸೂದ್ ಸೋದರಿ ಸ್ಪರ್ಧೆ – ಪಕ್ಷ ಇನ್ನೂ ಸಸ್ಪೆನ್ಸ್!

    ಚಂಡೀಗಢ: ಸಹೋದರಿ ಮಾಳವಿಕಾ ಸೂದ್ ಪಂಜಾಬ್ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಬಾಲಿವುಡ್ ನಟ ಸೋನು ಸೂದ್ ತಿಳಿಸಿದ್ದಾರೆ.

    ಚಂಡೀಗಢದಿಂದ ಸುಮಾರು 170 ಕಿಮೀ ದೂರದಲ್ಲಿರುವ ಮೊಗಾ ಎಂಬಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ಸಹೋದರಿ ಮಾಳವಿಕಾ ಸೂದ್ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಯಾವ ಪಕ್ಷದಿಂದ ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಎನ್ನುವುದು ಮಾತ್ರ ಇನ್ನೂ ಗೌಪ್ಯವಾಗಿದೆ. ಇದನ್ನೂ ಓದಿ:     ಹಸು ಸಗಣಿ, ಗೋಮೂತ್ರ ಆರ್ಥಿಕತೆ ಬಲಪಡಿಸುತ್ತದೆ: ಶಿವರಾಜ್ ಸಿಂಗ್ ಚೌಹಾಣ್

    ಸೂದ್ ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‍ಜೀತ್ ಸಿಂಗ್ ಚನ್ನಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದರು. ಕೇಜ್ರಿವಾಲ್ ಅವರೊಂದಿಗಿನ ಭೇಟಿ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿಯಾಗಿ ರಾಜಕೀಯ ಪಾದಾರ್ಪಣೆ ಮಾಡಲಿದ್ದಾರೆ ಎನ್ನುವ ವದಂತಿಗಳನ್ನು ಹುಟ್ಟುಹಾಕಿತು. ಆದರೆ ಈ ವೇಳೆ ಸೂನು ಸೂದ್ ಅವರು ನಾವು ಸದ್ಯಕ್ಕೆ ನಾವು ಯಾವುದೇ ರಾಜಕೀಯವನ್ನು ಚರ್ಚಿಸಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ ಇದೀಗ ಅವರ ಸಹೋದರಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ. ಯಾವ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ:   ಹಿಂದೂ ಧರ್ಮ, ಹಿಂದುತ್ವ ಬೇರೆ ಬೇರೆ: ರಾಹುಲ್ ಗಾಂಧಿ

    ಸೋನು ಸೂದ್ ಅವರು ಕೊರೊನಾ ಲಾಕ್‍ಡೌನ್‍ನಲ್ಲಿ ಸಿಲುಕಿ ಅಸಹಾಯಕರಾಗಿರುವ ನೂರಾರು ವಲಸಿಗರನ್ನು ಅವರ ಸ್ವಂತ ರಾಜ್ಯಕ್ಕೆ ಕರೆದೊಯ್ಯಲು ಬಸ್‍ಗಳು, ರೈಲು ಮತ್ತು ವಿಮಾನಗಳನ್ನು ಸಹ ವ್ಯವಸ್ಥೆ ಮಾಡಿದರು. ಈ ವರ್ಷದ ಆರಂಭದಲ್ಲಿ ಎರಡನೇ ಅಲೆ ವೇಳೆ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಸಿಲಿಂಡರ್ ಮತ್ತು ಕೊರೊನಾ ಲಸಿಕೆಯನ್ನು ನೀಡುವಲ್ಲಿ ಸಹಾಯ ಮಾಡಿದ್ದರು.

  • ನೀವು ನನ್ನ ಫೇವರೆಟ್ – ಬಾಲಕಿಯ ಸಿಹಿ ಮಾತಿಗೆ ನೀರಜ್ ಚೋಪ್ರಾ ಪ್ರತಿಕ್ರಿಯೆ ಏನು ಗೊತ್ತಾ?

    ನೀವು ನನ್ನ ಫೇವರೆಟ್ – ಬಾಲಕಿಯ ಸಿಹಿ ಮಾತಿಗೆ ನೀರಜ್ ಚೋಪ್ರಾ ಪ್ರತಿಕ್ರಿಯೆ ಏನು ಗೊತ್ತಾ?

    ಚಂಡೀಗಢ: ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಸಾವಿರಾರು ಅಭಿಮಾನಿಗಳ ಹೃದಯ ಗೆದ್ದ ನೀರಜ್ ಚೋಪ್ರಾ ಅವರು ಪುಟ್ಟ ಬಾಲಕಿಯೊಂದಿಗೆ ತಾವು ಕೂಡ ಪುಟ್ಟ ಮಕ್ಕಳಂತೆ ಮಾತನಾಡಿರುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ಐಎಎಸ್ ಅಧಿಕಾರಿ ಪಂಕಜ್ ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ವೀಡಿಯೋದಲ್ಲಿ ನೀರಜ್ ಚೋಪ್ರಾ ಬಾಲಕಿ ಮುಂದೆ ಕೆಳಗೆ ಬಾಗಿ ಪ್ರೀತಿಯಿಂದ ಮಾತನಾಡುತ್ತಿರುವುದನ್ನು ಕಾಣಬಹುದಾಗಿದೆ. ಅಲ್ಲದೇ ಈ ವೇಳೆ ಬಾಲಕಿ ನೀವು ನನ್ನ ಫೇವರೆಟ್ ಎಂದು ಹೇಳುತ್ತಾಳೆ. ಆಗ ನೀರಜ್ ಮುಗುಳುನಗೆ ಬೀರಿ ಬಾಲಕಿಯ ಕೆನ್ನೆಯನ್ನು ಪ್ರೀತಿಯಿಂದ ತಟ್ಟುತ್ತಾ ಮುಂದೆ ಸಾಗುತ್ತಾರೆ. ಇದನ್ನೂ ಓದಿ: ಶಿವಣ್ಣ ಅಭಿಮಾನಿಗಳಿಗೆ ರಸದೌತಣ – ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಮೇಲೆ ಭಜರಂಗಿ -2

    ವೀಡಿಯೋ ಜೊತೆಗೆ, ಪಾಣಿಪತ್ ಸ್ಪೋಟ್ಸ್ ಸ್ಟೇಡಿಯಂನಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸುತ್ತಿರುವ ನೀರಜ್ ಚೋಪ್ರಾ ಅವರ ಸರಳತೆಯನ್ನು ನೋಡಿ. ಚಾಂಪಿಯನ್ ಆಗುವ ಮಾರ್ಗ ಎಂದು ಕ್ಯಾಪ್ಷನ್‍ನಲ್ಲಿ ಪಂಕಜ್ ಅವರು ಬರೆದುಕೊಂಡಿದ್ದಾರೆ. ಇನ್ನೂ ಈ ವೀಡಿಯೋವನ್ನು ಇಲ್ಲಿಯವರೆಗೂ 20,200ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕ ಕಾಮೆಂಟ್‍ಗಳು ಹರಿದುಬಂದಿದೆ. ಇದನ್ನೂ ಓದಿ: ಸೈಕಲ್‍ನಲ್ಲಿ ತೆರಳಿದ ಪಾಕ್ ಸಚಿವ – ಫೋಟೋ ವೈರಲ್

    23 ವರ್ಷದ ರೈತರ ಮಗ ನೀರಜ್ ಚೋಪ್ರಾ ಅವರು ಆಗಸ್ಟ್ 7 ರಂದು ಜಪಾನ್‍ನ ರಾಜಧಾನಿ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ 87.58 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟು ದಾಖಲೆ ಸೃಷ್ಟಿಸಿದರು.

  • ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ದೊಡ್ಡ ರಸ್ತೆ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರು!

    ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ದೊಡ್ಡ ರಸ್ತೆ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರು!

    ಚಂಡೀಗಢ: ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು, ಕಾಮಗಾರಿಗಾಗಿ ತೋಡಲಾಗಿದ್ದ ರಸ್ತೆಯ ಬೃಹತ್ ಗುಂಡಿಗೆ ಬಿದ್ದು ಗಾಯಗೊಂಡಿರುವ ಘಟನೆ ಪಂಜಾಬ್‍ನ ಲೂದಿಯಾನ ಜಿಲ್ಲೆಯಲ್ಲಿ ನಡೆದಿದೆ.

    CRATER

    ಆಕಸ್ಮಿಕವಾಗಿ ರಸ್ತೆಯ ಗುಂಡಿಗೆ ಬಿದ್ದ ವಿದ್ಯಾರ್ಥಿನಿಯರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಎಕ್ಸ್-ರೇ ಹಾಗೂ ಚಿಕಿತ್ಸೆ ನಂತರ ಅವರು ಶಾಲೆಗೆ ತೆರಳಿದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬದಿಂದ ಹಲ್ಲೆ ಪ್ರಕರಣ – ಇಬ್ಬರ ಹೆಸರು ಕೈಬಿಡುವಂತೆ ದೂರುದಾರೆ ಮನವಿ

    ಗುಂಡಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯರು ಮೇಲಕ್ಕೆ ಬರಲು ವ್ಯಕ್ತಿಯೊಬ್ಬ ಕಬ್ಬಿಣದ ಏಣಿಯನ್ನು ಹಾಕುತ್ತಿರುವ ದೃಶ್ಯ ವೈರಲ್ ಆಗಿದೆ. ಅವರ ಸ್ಕೂಟರ್ ಕೆಸರಿನಲ್ಲಿ ಸಿಲುಕಿ ಬಿದ್ದಿತ್ತು. ಘಟನೆಯಾದ ಕೆಲ ಹೊತ್ತಿನಲ್ಲೇ ಗುಂಡಿಯಲ್ಲಿ ನೀರು ತುಂಬಿಕೊಂಡಿತು.

    ROAD

    ಇಂತಹ ಘಟನೆಗಳನ್ನು ತಪ್ಪಿಸಲು ರಸ್ತೆ ಕಾಮಗಾರಿಗಳು ಸೂಕ್ತ ರೀತಿಯಲ್ಲಿ ನಿರ್ವಹಣೆಯಾಗಬೇಕು ಎಂದು ಗಾಯಗೊಂಡ ವಿದ್ಯಾರ್ಥಿನಿಯೊಬ್ಬರ ತಂದೆ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಡಿಕೆ ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ

    ಘಟನೆ ನಂತರ ಎಚ್ಚೆತ್ತುಕೊಂಡ ಸ್ಥಳೀಯ ಆಡಳಿತವು ಗುಂಡಿ ಮುಚ್ಚುವ ಕಾರ್ಯವನ್ನು ಆರಂಭಿಸಿದೆ.

  • ಸೊಸೆ ಕಿರುಕುಳ ತಾಳಲಾರದೆ ಮಾವ ಆತ್ಮಹತ್ಯೆ

    ಸೊಸೆ ಕಿರುಕುಳ ತಾಳಲಾರದೆ ಮಾವ ಆತ್ಮಹತ್ಯೆ

    ಚಂಡೀಗಡ: ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಸೊಸೆಯ ಆರೋಪದ ಅವಮಾನ ತಾಳಲಾರದೆ ಬೆಂಕಿ ಹಚ್ಚಿಕೊಂಡು ಮಾವ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

    60 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸೊಸೆ ಮಾಡಿದ ಸುಳ್ಳು ವರದಕ್ಷಿಣೆ ಆರೋಪದಿಂದ ಅವಮಾನಗೊಂಡಿದ್ದರು. ತಮಗೆ ತಾವೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳಂತೆ ನೋಡಿಕೊಳ್ಳುತ್ತಿದ್ದ ಸೊಸೆ ವರದಕ್ಷಿಣೆ ಆರೋಪ ಮಾಡಿ ಪೊಲೀಸರಿಗೆ ದೂರು ನೀಡುತ್ತೇವೆಂದು ಹೇಳಿದ್ದನ್ನು ಸಹಿಸಲಾಗದೆ ಆ ವ್ಯಕ್ತಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ – ಕೊನೆಗೂ ಮೌನ ಮುರಿದ ನಟಿ ರಾಗಿಣಿ

    ಒಂದೂವರೆ ವರ್ಷದ ಹಿಂದೆ ಅವರ ಮಗನಿಗೆ ಮದುವೆಯಾಗಿತ್ತು. 6 ತಿಂಗಳ ಮಗಳು ಕೂಡ ಇದ್ದಾಳೆ. ಮದುವೆಯಾದ ಕೂಡಲೇ ಅತ್ತೆ-ಮಾವನ ಮೇಲೆ ದೌರ್ಜನ್ಯ ನಡೆಸಲು ಶುರು ಮಾಡಿದ್ದ ಸೊಸೆ ತನ್ನ ಗಂಡನೊಂದಿಗೆ ಬೇರೆ ಮನೆಯಲ್ಲಿ ವಾಸವಾಗಿದ್ದಳು. ಇದೇ ವಿಷಯಕ್ಕೆ ಅತ್ತೆ-ಮಾವ ಹಾಗೂ ಸೊಸೆಯ ನಡುವೆ ಜಗಳವಾಗುತ್ತಿತ್ತು. ಇತ್ತೀಚೆಗೆ ಆಕೆಯ ಪೋಷಕರು ಆಕೆಯ ಅತ್ತೆ-ಮಾವನ ಮೇಲೆ ಹಲ್ಲೆಯನ್ನೂ ಮಾಡಿದ್ದರು. ಇದನ್ನೂ ಓದಿ: ದೇಶ ಬಿಟ್ಟು ತೆರಳಬೇಡಿ- ತಾಲಿಬಾನ್ ಬೆದರಿಕೆ

    60 ವರ್ಷದ ಆ ವ್ಯಕ್ತಿಗೆ ಸೊಸೆ ಹಾಗೂ ಆಕೆಯ ಮನೆಯವರು ಬೆದರಿಕೆಯೊಡ್ಡಿದ್ದರು. ಹಾಗೇ ಹೊಡೆದು ದೈಹಿಕ ಹಿಂಸೆಯನ್ನೂ ಮಾಡಿದ್ದರು. ಅಲ್ಲದೆ ಇಡೀ ಕುಟುಂಬದ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸುವುದಾಗಿ ಹೆದರಿಸಿದ್ದರು. ಇದರಿಂದ ಆತಂಕಗೊಂಡಿದ್ದ ಅವರು ಈ ಸುಳ್ಳು ಕೇಸ್‍ನಿಂದ ತಮ್ಮ ಮರ್ಯಾದೆ ಹೋಗುತ್ತದೆ ಎಂಬ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ಹೆಂಡತಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯನ್ನ ಮೆಚ್ಚಿಸಲು ಕಾಂಗ್ರೆಸ್ ನಾಯಕರನ್ನು ಸಿ.ಟಿ ರವಿ, ಯತ್ನಾಳ್ ಬೈಯುತ್ತಿದ್ದಾರೆ: ಶ್ರೀನಿವಾಸ್ ಬಿ.ವಿ.

    ಸೊಸೆಯ ಮನೆಯವರು ಬ್ಲಾಕ್‍ಮೇಲ್ ಮಾಡಿದ್ದರಿಂದ ನೊಂದಿದ್ದ ವ್ಯಕ್ತಿ ಮನೆಗೆ ಬಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಹೆಂಡತಿ ತಕ್ಷಣ ಪಕ್ಕದ ಮನೆಯವರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಸುಟ್ಟ ಗಾಯಗಳಿಂದ ಅವರು ಸಾವನ್ನಪ್ಪಿದ್ದರು.

  • 67ರ ಅಜ್ಜನ ಮೇಲೆ 19ರ ಹುಡುಗಿಗೆ ಲವ್- ಕುಟುಂಬಸ್ಥರಿಂದ ರಕ್ಷಣೆ ಕೋರಿ ಕೋರ್ಟ್ ಮೊರೆ

    67ರ ಅಜ್ಜನ ಮೇಲೆ 19ರ ಹುಡುಗಿಗೆ ಲವ್- ಕುಟುಂಬಸ್ಥರಿಂದ ರಕ್ಷಣೆ ಕೋರಿ ಕೋರ್ಟ್ ಮೊರೆ

    – ಮೊಮ್ಮಕ್ಕಳನ್ನು ಆಡಿಸುವ ವಯಸ್ಸಿನಲ್ಲಿ 2ನೇ ಮದುವೆ
    – ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ ಪೊಲೀಸರು

    ಚಂಡೀಗಢ: ಪ್ರೀತಿ ಮಾಯೆ, ಪ್ರೀತಿಗೆ ಕಣ್ಣು ಇಲ್ಲ ಎಂದು ಹಲವರು ಹೇಳುತ್ತಾರೆ ಇದೆಲ್ಲ ಬಾಯಿ ಮಾತಿಗೆ ಅಲ್ಲ. ಪ್ರೀತಿಗೆ ನಿಜಕ್ಕೂ ಕಣ್ಣು ಇಲ್ಲ, ವಯಸ್ಸಿನ ಅಂತರವಿಲ್ಲ ಎಂಬುದು ಪಂಜಾಬ್-ಹರ್ಯಾಣ ಗಡಿ ಭಾಗ ಹಂಚ್‍ಪುರಿಯ ಹಠ್ನಿಯಲ್ಲಿ ಜೋಡಿಯೊಂದು ಸಾಭೀತು ಮಾಡಿದೆ.

    19 ವರ್ಷದ ಯುವತಿಗೆ 67 ವರ್ಷದ ಮುದುಕನ ಮೇಲೆ ಪ್ರೀತಿಯಾಗಿರುವುದ ಎಲ್ಲಡೆ ಸುದ್ದಿಯಾಗುತ್ತಿದೆ. ಮನೆಗೆ ಬರುತ್ತಿದ್ದ ಮುದುಕನನ್ನು ಪರಿಚಯ ಮಾಡಿಕೊಂಡ ಯುವತಿ ಅಜ್ಜನ ಪ್ರೀತಿಯ ಬಲೆಯಲ್ಲಿ ಬಿದ್ದು ಆತನನ್ನು ಮದುವೆಯಾಗಿದ್ದಾಳೆ. ಇದನ್ನೂ ಓದಿ:  ಸಿಲಿಂಡರ್ ಹೊತ್ತ ಟ್ರಕ್ ಪಲ್ಟಿಯಾಗಿ ಸ್ಫೋಟಗೊಂಡು ಹೊತ್ತಿ ಉರಿಯಿತು

    ಆಕೆಗೆ ಅದಾಗಲೇ ಮದುವೆಯಾಗಿತ್ತು. ಇದೀಗ 19 ವರ್ಷ ತುಂಬಿ 20ನೇ ವರ್ಷಕ್ಕೆ ಕಾಲಿಡುತ್ತಿದ್ದಳು. ಅತ್ತ 67 ವರ್ಷದ ಅಜ್ಜ ಏಳು ಮಕ್ಕಳ ತಂದೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದೆ. ಅದು ಕೂಡ ಭೂ ವಿವಾದಕ್ಕೆ ಸಂಬಂಧಿಸಿದ ವಿಷಯದಲ್ಲಿ ಎಂಬುದು ಇನ್ನೂ ರೋಚಕ. ಗ್ರಾಮದಲ್ಲಿ ಜಮೀನಿನ ವಿಚಾರದಲ್ಲಿ ಹುಡುಗಿಯ ಕುಟುಂಬವು ವಿವಾದ ಹೊಂದಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಮುದುಕ ಯುವತಿಯ ಕುಟುಂಬಕ್ಕೆ ಸಹಾಯ ಮಾಡಲು ಬರುತ್ತಿದ್ದರು. ಈ ಸಮಯದಲ್ಲಿ ಇಬ್ಬರೂ ಪರಸ್ಪರ ಪರಿಚಯ ಮಾಡಿಕೊಂಡಿದ್ದಾರೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಅತ್ತ ನಾಲ್ಕು ವರ್ಷಗಳ ಹಿಂದೆ ಮುದುಕನ ಪತ್ನಿ ಕೂಡ ಮೃತಪಟ್ಟಿದ್ದರು. ಹೀಗಾಗಿ ಮತ್ತೊಂದು ಮದುವೆಯಾಗುವ ಬಗ್ಗೆ ಯೋಚಿಸಿದ್ದನು.

    ಇದೇ ಸಮಯದಲ್ಲಿ ಅಜ್ಜನ ಪ್ರೇಮಪಾಶದಲ್ಲಿ ಮುಳುಗಿದ್ದ ಯುವತಿ ಕೂಡ ಗಂಡನಿಗೆ ಕೈ ಕೊಡಲು ರೆಡಿಯಾಗಿದ್ದಳು. ಅದರಂತೆ ಪತಿಯನ್ನು ಬಿಟ್ಟು ಓಡಿ ಹೋಗಿ ಯುವತಿ ಮುದುಕನನ್ನು ಮದುವೆಯಾಗಿದ್ದಾಳೆ. ಇದರ ಬೆನ್ನಲ್ಲೇ ಎರಡು ಕುಟುಂಬದಿಂದ ಬೆದರಿಕೆಗಳು ಬರಲಾರಂಭಿಸಿದೆ. ಅಷ್ಟೇ ಅಲ್ಲದೆ ಯುವತಿ ಕುಟುಂಬಸ್ಥರು ಅಜ್ಜನ ಮೇಲೆ ಕೇಸ್ ದಾಖಲಿಸಿದ್ದಾರೆ.

    ಇದರಿಂದ ಬೇರೆ ದಾರಿ ಕಾಣದೇ ಯುವತಿ ಹಾಗೂ ಮುದುಕ ಕೋರ್ಟ್ ಮೊರೆ ಹೋಗಿದ್ದಾರೆ. ನನ್ನ ಪತ್ನಿಗೆ ಕುಟುಂಬಸ್ಥರಿಂದ ಜೀವ ಬೆದರಿಕೆ ಇದೆ ಎಂದು ಪಂಜಾಬ್-ಹರ್ಯಾಣ ಕೋರ್ಟ್‍ಗೆ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಗಮನಿಸಿದ ಜಡ್ಜ್ ದಂಗಾಗಿದ್ದಾರೆ. ಅಷ್ಟೇ ಅಲ್ಲದೆ ಮದುವೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮತ್ತಷ್ಟು ತನಿಖೆ ನಡೆಸುವಂತೆ ನ್ಯಾಯಮೂರ್ತಿ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

    ಈ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಇಬ್ಬರೂ ಪ್ರೀತಿಸಿ ಮದುವೆಯಾಗಿರುವುದು ತಿಳಿದು ಬಂದಿದೆ. ಆದರೆ ಇದೀಗ ಮನವೊಲಿಸಲು ಯತ್ನಿಸಲಾದರೂ ಮುದಕನನ್ನು ಬಿಟ್ಟಿರಲು ಯುವತಿ ಒಪ್ಪುತ್ತಿಲ್ಲ. ಅತ್ತ ಯುವತಿಯನ್ನು ಬಿಟ್ಟಿರಲು ಮುದುಕ ಕೂಡ ರೆಡಿಯಿಲ್ಲ. ಹೀಗಾಗಿ ಪೊಲೀಸರು ಕೂಡ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದು, ಈ ಪ್ರಕರಣವನ್ನು ಇತ್ಯರ್ಥ ಪಡಿಸುವುದು ಹೇಗೆ ಎಂದು ಮತ್ತೊಮ್ಮೆ ಕೋರ್ಟ್ ಮೊರೆ ಹೋಗಿದ್ದಾರೆ. ಒಟ್ಟಿನಲ್ಲಿ ಮೊಮ್ಮಕ್ಕಳನ್ನು ಆಡಿಸುತ್ತಾ ಕಾಲ ಕಳೆಯಬೇಕಿದ್ದ ಮುದುಕ 19ರ ಹರೆಯದ ಹುಡುಗಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾರೆ.

  • ನವಜೋತ್ ಸಿಂಗ್ ಸಿಧು ಪದಗ್ರಹಣ ಕಾರ್ಯಕ್ರಮ- ಬಸ್ ಅಪಘಾತ, ಮೂವರು ದುರ್ಮರಣ

    ನವಜೋತ್ ಸಿಂಗ್ ಸಿಧು ಪದಗ್ರಹಣ ಕಾರ್ಯಕ್ರಮ- ಬಸ್ ಅಪಘಾತ, ಮೂವರು ದುರ್ಮರಣ

    ಚಂಡೀಗಢ: ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ ಕಾರ್ಯಕರ್ತರು ಬರುತ್ತಿದ್ದ, ಬಸ್‍ಗೆ ಅಪಘಾತವಾಗಿರುವ ಘಟನೆ ನಡೆದಿದೆ.

    ಇಂದು ಬೆಳಿಗ್ಗೆ ಜಲಂಧರ್-ಬರ್ನಾಲಾ ರಸ್ತೆಯ ಮೊಗಾದ ಲೋಹರಾ ಚೌಕ್ ನಲ್ಲಿ ಎರಡು ಬಸ್ಸುಗಳು ಡಿಕ್ಕಿ ಹೊಡೆದ ಪರಿಣಾಮ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೂವರು ಕಾಂಗ್ರೆಸ್ ಕಾರ್ಯಕರ್ತರು ಸಾವಿಗೀಡಾಗಿದ್ದಾರೆ.

    ಬೆಳಿಗ್ಗೆ 7.30 ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಮೊಗಾದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈವರೆಗೆ ಮೂರು ಜನರು ಸಾವನ್ನಪ್ಪಿದ್ದಾರೆ. ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕೆಲವು ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹಿರಿಯ ವೈದ್ಯಕೀಯ ಅಧಿಕಾರಿ  (ಎಸ್‍ಎಂಒ) ಡಾ. ಸುಖ್‍ಪ್ರೀತ್ ಬ್ರಾರ್ ಹೇಳಿದ್ದಾರೆ. ಇದನ್ನೂ ಓದಿ:  ನೆಲಮಂಗಲದಲ್ಲಿ ರೌಡಿಶೀಟರ್‌ಗಳಿಗೆ ಖಡಕ್ ವಾರ್ನಿಂಗ್

    ಅಪಘಾತದಲ್ಲಿ ಮೃತಪಟ್ಟವರು ಕಾಂಗ್ರೆಸ್ ಶಾಸಕ ಕುಲ್ಬೀರ್ ಸಿಂಗ್ ಜಿರಾ ಅವರ ಬೆಂಬಲಿಗರಾಗಿದ್ದಾರೆ. ಇವರು ಮೊಗಾದಿಂದ 15 ಕಿ.ಮೀ ದೂರದಲ್ಲಿರುವ ಜೀರಾದಿಂದ ಚಂಡೀಗಢದಲ್ಲಿರುವ ಪಂಜಾಬ್ ಕಾಂಗ್ರೆಸ್ ಭವನಕ್ಕೆ ರಾಜ್ಯ ಕಾಂಗ್ರೆಸ್ ಸಮಿತಿಯ ಸ್ಥಾಪನಾ ಸಮಾರಂಭಕ್ಕೆ ಬರುತ್ತಿದ್ದರು. ಅವರ ವಾಹನ ಡಿಕ್ಕಿ ಹೊಡೆದ ಪಂಜಾಬ್ ರೋಡ್ ವೇಸ್ ಬಸ್ ಜಲಂಧರ್ ಕಡೆಗೆ ಹೋಗುತ್ತಿತ್ತು.

    ಮೊಗಾ ಜಿಲ್ಲೆಯಲ್ಲಿ ಬಸ್ ಅಪಘಾತದ ಬಗ್ಗೆ ತಿಳಿದು ದುಃಖವಾಯಿತು. ಇದರಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ತಕ್ಷಣವೇ ಸಂಪೂರ್ಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮತ್ತು ಸರ್ಕಾರಕ್ಕೆ ವರದಿ ಕಳುಹಿಸುವಂತೆ ಮೊಗಾ ಡಿಸಿಗೆ ನಿರ್ದೇಶನ ನೀಡಿದ್ದೇನೆ. ಮೃತರನ್ನು ನೆನೆದು ಸಂತಾಪ ವ್ಯಕ್ತಪಡಿಸಿದ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಟ್ವೀಟ್ ಮಾಡಿದ್ದಾರೆ.

  • ಕೈಯಲ್ಲಿ ಮಗು ಹಿಡಿದು ಕರ್ತವ್ಯಕ್ಕೆ ಹಾಜರಾದ ಪೊಲೀಸ್

    ಕೈಯಲ್ಲಿ ಮಗು ಹಿಡಿದು ಕರ್ತವ್ಯಕ್ಕೆ ಹಾಜರಾದ ಪೊಲೀಸ್

    – ಉರಿ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸಿದ ಮಹಿಳೆ

    ಚಂಡೀಗಢ: ಪುಟ್ಟ ಕಂದಮ್ಮನನ್ನು ಭುಜದ ಮೇಲೆ ಮಲಗಿಸಿಕೊಂಡು ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಣ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದರ ಜೊತೆಗೆ ಚರ್ಚೆ ಆಗುತ್ತಿದೆ.

    ವೀಡಿಯೋದಲ್ಲಿ ಏನಿದೆ
    ಟ್ರಾಫಿಕ್ ಪೊಲೀಸ್ ಪ್ರಿಯಾಂಕ ಅವರು ಚಂಡೀಗಢ ಸೆಕ್ಟರ್ 15/23ರ ಸ್ತೆಯಲ್ಲಿ ತಮ್ಮ ಕಂದಮ್ಮನನ್ನು ಹೆಗಲೆ ಮೇಲೆ ಮಲಗಿಸಿಕೊಂಡು ಸಂಚಾರ ನಿಂಯತ್ರಣವನ್ನು ಮಾಡುತ್ತಿದ್ದರು. ಉರಿ ಬಿಸಿಲಿನಲ್ಲಿ ಒಂದು ಕೈಯಲ್ಲಿ ಮಗು ಹಿಡಿದುಕೊಂಡು ಕೆಲಸ ಮಾಡಲು ಪರದಾಡಿದ್ದಾರೆ. ಅಲ್ಲೇ ಸುತ್ತ ಮುತ್ತ ಇದ್ದ ಸ್ಥಳೀಯರು ಈ ವೀಡಿಯೋವನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈ ವೀಡಿಯೋಗೆ ಭಾರೀ ಲೈಕ್, ರಿಟ್ವೀಟ್ ಮತ್ತು ಕಾಮೆಂಟ್ ಪಡೆದುಕೊಂಡಿದೆ.

    ಈ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಟ್ರಾಫಿಕ್ ಪೊಲೀಸ್ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಹಲವು ಮಹಿಳೆಯರಿಗೆ ಇದು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ. ಇನ್ನು ಹಲವರು ಮಗುವನ್ನು ಬಿಸಿಲಿನಲ್ಲಿ ಹಿಡಿದು ಮಹಿಳೆ ಕೆಲಸ ಮಾಡುತ್ತಿದ್ದಾರೆ ಎಂದು ಮೇಲಾಧಿಕಾರಿಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.

  • 45 ವರ್ಷದ ತಾಯಿಯನ್ನೇ ಕೊಂದ ಮಗ

    45 ವರ್ಷದ ತಾಯಿಯನ್ನೇ ಕೊಂದ ಮಗ

    ಚಂಡೀಗಢ: 45 ವರ್ಷದ ಮಹಿಳೆಯನ್ನು ಮಗನೇ ತನ್ನ ಕೈಯಾರೇ ಕೊಲೆ ಮಾಡಿರುವ ಘಟನೆ ಭಾನುವಾರ ಪಂಜಾಬ್‍ನಲ್ಲಿ ನಡೆದಿದೆ.

    ಮೃತಪಟ್ಟ ಮಹಿಳೆಯನ್ನು ಊರ್ಮಿಳಾ ದೇವಿ ಎಂದು ಗುರುತಿಸಲಾಗಿದ್ದು, ಮೃತ ದೇಹ ಪಂಜಾಬ್‍ನ ಖೋತ್ರಾನ್ ಕಾಲೋನಿ ಬಳಿಯಿರುವ ಖಾಲಿ ಜಾಮೀನಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಕುರಿತಂತೆ ಮಾತನಾಡಿದ ಬೆಹ್ರಾಮ್ ಸ್ಟೇಷನ್ ಹೌಸ್ ಅಧಿಕಾರಿ ರಾಜೀವ್ ಕುಮಾರ್, ಮೃತ ಊರ್ಮಿಳರನ್ನು ಪುತ್ರ ದೀಪಕ್ ಕೊಲೆ ಮಾಡಿರುವುದಾಗಿ ಆರೋಪಿಸಿ ಆಕೆಯ ಮಗಳು ರೇಖಾ ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

    ಮಹಿಳೆ ಮೇಲೆ ತೀಕ್ಷ್ಣವಾದ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಆರೋಪಿ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಅಲ್ಲದೆ ಮಹಿಳೆ ಮುಖಕ್ಕೆ ತೀವ್ರವಾಗಿ ಗಾಯಗಳಾಗಿದ್ದು, ಆಕೆಯ ಸಂಬಂಧಿಕರು ಮೊದಲಿಗೆ ಮಹಿಳೆಯನ್ನು ಗುರುತು ಪತ್ತೆ ಮಾಡಲು ಕಷ್ಟಪಟ್ಟರು ಎಂದರು.

    ಇದೀಗ ಪೊಲೀಸರು ಪ್ರಕರಣ ಕುರಿತಂತೆ ತನಿಖೆಯನ್ನು ಮತ್ತುಷ್ಟು ಚುರುಕುಗೊಳಿಸಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಇಂಧನ ಬೆಲೆ ಏರಿಕೆ ಖಂಡಿಸಿ ಹಾಲಿನ ಬೆಲೆ ಭಾರೀ ಏರಿಕೆ

    ಇಂಧನ ಬೆಲೆ ಏರಿಕೆ ಖಂಡಿಸಿ ಹಾಲಿನ ಬೆಲೆ ಭಾರೀ ಏರಿಕೆ

    – 100 ರೂಪಾಯಿಗೆ ಹಾಲು ಮಾರಾಟ

    ಚಂಡೀಗಢ: ಇಂಧನ ಬೆಲೆ ಏರಿಕೆಯನ್ನು ಖಂಡಿಸಿ ಲೀಟರ್ ಹಾಲಿಗೆ 100 ರೂಪಾಯಿನಂತೆ ಮಾರಲು ಹರಿಯಾಣದ  ಹಿಸಾರ್‌ನಲ್ಲಿ ರೈತ ಮಹಾಪಂಚಾಯತ್‍ನಲ್ಲಿ ಸೂಚನೆ ನೀಡಲಾಗಿದೆ.

    ಕೇಂದ್ರದ ಕೃಷಿ ಕಾಯ್ದೆ ಮತ್ತು ಇಂಧನ ಬೆಲೆ ಎರಿಕೆ ಖಂಡಿಸಿ ಪ್ರತಿಭಟನೆ ನಡೆಯುತ್ತಲೇ ಇದೆ. ಹೀಗಿರುವಾಗ ರೈತ ಮುಖಂಡ ರಾಮ್ನಿವಾಸ್ ನೇತೃತ್ವದಲ್ಲಿ ಮಹಾ ಪಂಚಾಯತ್ ಸಭೆ ನಡೆದಿದ್ದು, ಇಂದನ ಬೆಲೆ ಏರಿಕೆ ಹಿನ್ನೆಲೆ ಹಾಲಿನ ದರವನ್ನು 100 ರೂಪಾಯಿಗೆ ಹೆಚ್ಚಿಸಿ ಮಾರಾಟ ಮಾಡುವಂತೆ ಸಭೆಯಲ್ಲಿ ನೆರೆದಿದ್ದ ರೈತರು ಹೇಳಿದ್ದಾರೆ.

    ಮಾರ್ಚ್ 1ರಿಂದ 1ಲೀಟರ್ ಹಾಲಿಗೆ 100 ರೂಪಾಯಿಯಂತೆ ಹಾಲು ಮಾರಟ ಮಾಡಲು ರೈತರಿಗೆ ಹೇಳಲಾಗಿದೆ. ಸಾಮಾನ್ಯ ಜನರಿಗೆ 55 ರಿಂದ 60 ರೂಪಾಯಿಗೆ ಮಾರಾಟವಾಗಲಿದೆ. ಆದರೆ ಡೈರಿಗಳಿಗೆ 100 ರೂಪಾಯಿಗೆ ಹಾಲು ಹಾಕುತ್ತೇವೆ ಎಂದು ಖಾಪ್ ಪಂಚಾಯತ್ ಮುಖಂಡ ಫೂಲ್ ಕುಮಾರ್ ಪೆಟ್ಟಾರ್ ಹೇಳಿದ್ದಾರೆ.

    ಬೆಲೆ ಏರಿಕೆ ಯಾಕೆ?
    ಕೋವಿಡ್ 19 ಹಿನ್ನೆಲೆಯಲ್ಲಿ ಕಚ್ಚಾ ತೈಲ ರಫ್ತು ದೇಶಗಳ ಸಂಘಟನೆ(ಒಪೆಕ್) ರಾಷ್ಟ್ರಗಳು 2020ರಲ್ಲಿ ತೈಲ ಉತ್ಪಾದನೆಯನ್ನು ಕಡಿತಗೊಳಿಸಿತ್ತು. ಈಗ ವಿಶ್ವದ ಆರ್ಥಿಕತೆ ಮರಳುತ್ತಿದ್ದು ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಒಪೆಕ್ ರಾಷ್ಟ್ರಗಳು ಈ ಹಿಂದೆ ಮಾಡಿಕೊಂಡ ಮತುಕತೆಯಂತೆಯೇ ಉತ್ಪಾದನೆ ಮಾಡುತ್ತಿದೆ. ಆದರಲ್ಲೂ ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುತ್ತಿರುವ ಸೌದಿ ಅರೆಬಿಯಾ ಪ್ರತಿ ದಿನ 1 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಉತ್ಪಾದನೆ ಕಡಿಮೆ ಇರುವ ಕಾರಣ ಪೂರೈಕೆಯೂ ಕಡಿಮೆ ಆಗುತ್ತಿದೆ. ಆದರೆ ವಿವಿಧ ದೇಶಗಳಿಂದ ತೈಲ ಬೇಡಿಕೆ ಹೆಚ್ಚಾಗುತ್ತಿದೆ. ಪರಿಣಾಮ ಬ್ರೆಂಟ್ ಕಚ್ಚಾ ತೈಲದ ದರ ಏರಿಕೆ ಆಗುತ್ತಿದೆ.