Tag: chandigarh

  • ಮಾಜಿ ಪೊಲೀಸ್ ಅಧಿಕಾರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ

    ಮಾಜಿ ಪೊಲೀಸ್ ಅಧಿಕಾರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಸಿಬಿಐ

    ಚಂಡೀಗಢ: ಕೇಂದ್ರೀಯ ತನಿಖಾ ದಳದ(ಸಿಬಿಐ) ವಿಶೇಷ ನ್ಯಾಯಾಲಯವು ಸೋಮವಾರ ಪಂಜಾಬ್‍ನ ಮಾಜಿ ಪೊಲೀಸ್ ಅಧಿಕಾರಿಯೊಬ್ಬರಿಗೆ 50 ಸಾವಿರ ರೂ. ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ವಿಶೇಷ ಸಿಬಿಐ ನ್ಯಾಯಾಧೀಶರಾದ ಹರಿಂದರ್ ಸಿಧು ಪಂಜಾಬ್ ಮಾಜಿ ಪೊಲೀಸ್ ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಅವರಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್

    1991ರಲ್ಲಿ ಮೇಜರ್ ಸಿಂಗ್ ಅವರು ಪೊಲೀಸ್ ಸ್ಟೇಷನ್ ಹೌಸ್ ಎಚ್‍ಒ ಆಗಿದ್ದ ತರ್ನ್ ತರಣ್ ಅವರ ಜೊತೆ ಸಂತೋಖ್ ಸಿಂಗ್ ಅವರನ್ನು ಅಪಹರಣ ಮಾಡಿ ಹತ್ಯೆ ಮಾಡಿದ್ದರು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಮೇಲೆ ಸೆಕ್ಷನ್ 364(ಕೊಲೆಯ ಮಾಡಲು ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

    ಏನಿದು ಘಟನೆ?
    ಅಮೃತಸರ ಜಿಲ್ಲೆಯ ಜಸ್ಪಾಲ್ ಮೆಹ್ತಾ ಗ್ರಾಮದ ಸಂತೋಖ್ ಸಿಂಗ್ ಪಂಜಾಬ್ ರಾಜ್ಯ ವಿದ್ಯುತ್ ಮಂಡಳಿಯ ಬುಟಾರಿ ಉಪವಿಭಾಗದ ಉದ್ಯೋಗಿಯಾಗಿದ್ದರು. ಇವರು 31 ಜುಲೈ 1991 ರ ಸಂಜೆ, ತಮ್ಮ ಕೆಲಸ ಮುಗಿಸಿ ರಾತ್ರಿ 8:30 ಸುಮಾರಿಗೆ ಮನೆಗೆ ಮರಳಿದ್ದರು. ಈ ಸಮಯದಲ್ಲಿ ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಮತ್ತು ತರಣ್ ಸದರ್, ಸಂತೋಖ್ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸಂತೋಖ್ ಸಿಂಗ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದು, ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು.

    ಮಗ ಮನೆಗೆ ಹಿಂತಿರುಗದೆ ಇದ್ದ ಕಾರಣ, ಸಂತೋಖ್ ಸಿಂಗ್ ತಾಯಿ ಸ್ವರಣ್ ಕೌರ್ ಅವರು 1996 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಮೂಲಕ ಪಂಜಾಬ್ ಪೊಲೀಸರು ತನ್ನ ಮಗನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅಥವಾ ಅವರ ಅಪಹರಣ ಮತ್ತು ನಾಪತ್ತೆಯ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

    ಜನವರಿ 21 1998 ರಂದು ಹೈಕೋರ್ಟ್ ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತು. ಸಂತೋಖ್ ಸಿಂಗ್ ಅವರನ್ನು ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಅಪಹರಿಸಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ

    ಸಿಬಿಐ ಆಗಸ್ಟ್ 21 1998 ರಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಏಪ್ರಿಲ್ 21 1999 ರಂದು ಚಾರ್ಜ್ ಶೀಟ್ ಸಲ್ಲಿಸಿತ್ತು

    ಮೇಜರ್ ಸಿಂಗ್‍ಗೆ ಶಿಕ್ಷೆಯಾದ ಬಳಿಕ ದೂರುದಾರರಾದ ಸ್ವರಣ್ ಕೌರ್ ಈ ಕುರಿತು ಮಾತನಾಡಿದ್ದು, ಇನ್‍ಸ್ಪೆಕ್ಟರ್ ಮೇಜರ್ ಸಿಂಗ್‍ಗೆ ನೀಡಲಾದ 10 ವರ್ಷಗಳ ಶಿಕ್ಷೆಯು ಅಂತಹ ಗಂಭೀರವಾಗಿಲ್ಲ. ನನ್ನ ಮಗನ ಅಪಹರಣ ಮತ್ತು ಹತ್ಯೆ ಮಾಡಿದ್ದಕ್ಕೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಅದಕ್ಕೆ ನಾನು ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.

  • 2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!

    2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!

    ಚಂಡೀಗಢ: ಫೈನಾನ್ಸ್ ಕಂಪನಿಯಲ್ಲೇ 2.18 ಕೋಟಿ ರೂ. ವಂಚಿಸಿ ವ್ಯಕ್ತಿಯೊಬ್ಬ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿರುವ ಘಟನೆ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಫೈನಾನ್ಸ್ ಕಂಪನಿಗೆ ಗುರುಗ್ರಾಮ್ ನಿವಾಸಿ ಪ್ರಮೋದ್ ಸಿಂಗ್ ಸುಮಾರು 2.18 ಕೋಟಿ ರೂ. ವಂಚಿಸಿದ್ದನು. ಈ ಪರಿಣಾಮ ಫೈನಾನ್ಸ್ ಕಂಪನಿ 2018 ರಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿತ್ತು. ಆದರೆ ದೂರು ದಾಖಲಾದ 3 ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ಗುರುಗ್ರಾಮದಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ

    POLICE JEEP

    ಜಂಟಿ ಪೊಲೀಸ್ ಕಮಿಷನರ್(ಆರ್ಥಿಕ ಅಪರಾಧ ವಿಭಾಗ) ಛಾಯಾ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದು, ಸಿಂಗ್ ಆರಂಭದಲ್ಲಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಲು ಸಂಸ್ಥೆಯಿಂದ 27.5 ಲಕ್ಷ ರೂಪಾಯಿ ಸಾಲ ಪಡೆದು ಆರಂಭಿಕ ಕಂತುಗಳನ್ನು ಪಾವತಿಸಿ ಫೈನಾನ್ಸರ್ ನಂಬಿಕೆ ಗಳಿಸಿದ್ದಾನೆ. ನಂತರ ಅವನು ನಾಲ್ಕು ಬಾರಿ ಸಾಲ ಪಡೆದುಕೊಂಡಿದ್ದು, ಕಂತನ್ನು ಸ್ವಲ್ಪ ದಿನಗಳ ನಂತರ ಪಾವತಿಸುತ್ತಿದ್ದು, ಥಟ್ಟನೆ ಹಣ ಕಟ್ಟುವುದನ್ನೆ ನಿಲ್ಲಿಸಿದ್ದಾನೆ. ಆಗ ಫೈನಾನ್ಸ್ ಕಂಪನಿ ಆರೋಪಿ ವಿರುದ್ಧ ದೂರು ನೀಡಿದೆ ಎಂದು ವಿವರಿಸಿದ್ದಾರೆ.

    ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ಸಿಂಗ್ ಜೊತೆ ಕೈಜೋಡಿಸಿದ್ದರು. ಸಿಂಗ್ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಜಾಮೀನು ರಹಿತ ವಾರೆಂಟ್‍ಗಳನ್ನು ಹೊರಡಿಸಲಾಗಿತ್ತು. ಪರಿಣಾಮ ಸಿಂಗ್‍ನನ್ನು ಹುಡುಕಲು ಸುದೀರ್ಘ ಕಾರ್ಯಚರಣೆಯನ್ನು ಮಾಡಲಾಗಿತ್ತು. ಮೂರು ವರ್ಷಗಳ ಕಾರ್ಯಚರಣೆ ನಂತರ ಗುರುಗ್ರಾಮದಲ್ಲಿ ಸಿಂಗ್‍ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

    ಸಿಂಗ್ ಮೂರು ವರ್ಷಗಳಲ್ಲಿ ಐದು ಮರ್ಸಿಡಿಸ್ ಕಾರುಗಳನ್ನು ಖರೀದಿಸಿದ್ದಾನೆ. ಅವೆಲ್ಲಕ್ಕೂ ಅದೇ ಸಂಸ್ಥೆ ಹಣಕಾಸು ಒದಗಿಸಿದೆ. ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ವಾಹನಗಳ ಮಾಹಿತಿಯನ್ನು ದಾಖಲೆಗಳಿಂದ ತೆಗೆದುಹಾಕಿದ್ದಾರೆ. ವಾಹನಗಳ ಮಾಹಿತಿಗಳನ್ನು ಡಿಲೀಟ್ ಮಾಡಿದರೆ ಆರೋಪಿ ಮೋಸದಿಂದ ಕಾರನ್ನು ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‍ಗಳಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾವೇನು ದೊಡ್ಡ ಸಮಾವೇಶ ಮಾಡಿ ವಿದ್ಯಾರ್ಥಿಗಳ ದುರ್ಬಳಕೆ ಮಾಡಿಲ್ಲ: ಜಗದೀಶ್ ಶೆಟ್ಟರ್

    ಸಿಂಗ್ ಗುರುಗ್ರಾಮದಲ್ಲಿರುವ ಕಾಲ್ ಸೆಂಟರ್‌ಗಳಿಗೆ ಸಾರಿಗೆ ಸೇವೆಗಳನ್ನು ಒದಗಿಸುವ ವ್ಯವಹಾರವನ್ನು ನಡೆಸುತ್ತಿದ್ದ. ಅಲ್ಲದೆ ಐಷಾರಾಮಿ ಕಾರುಗಳ ಸಮೂಹವನ್ನೇ ಹೊಂದಿದ್ದ. ಆದರೆ ಹಲವಾರು ಕಾಲ್ ಸೆಂಟರ್‍ಗಳನ್ನು ಮುಚ್ಚಿದ್ದರಿಂದ ಸಿಂಗ್ ನಷ್ಟ ಅನುಭವಿಸಿದ್ದು, ಹಣಕ್ಕಾಗಿ ವಾಹನದ ದಾಖಲೆಗಳನ್ನು ನಕಲಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

  • ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

    ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿ ಯುವಕನನ್ನ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

    ಚಂಡೀಗಢ: ನಿಶ್ಚಿತಾರ್ಥ ಸಮಾರಂಭಕ್ಕೆ ನುಗ್ಗಿನ ದುಷ್ಕರ್ಮಿಗಳು 27 ವರ್ಷದ ಯುವಕರನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಫರಿದಾಬಾದ್‍ನ ಟಿಗಾಂವ್‍ನಲ್ಲಿ ನಡೆದಿದೆ.

    ಮೃತ ದುರ್ದೈವಿ ಕಪಿಲ್ ಅದಾನ ಮತ್ತು ಆತನ ಸಹೋದರ ಸತ್ನಾಮ್ ಫರಿದಾಬಾದ್‍ನ ಟಿಗಾಂವ್‍ನಲ್ಲಿ ನಡೆಯುತ್ತಿದ್ದ ತಮ್ಮ ಸಂಬಂಧಿ ನಿಶ್ಚಿತಾರ್ಥಕ್ಕೆ ಹೋಗಿದ್ದರು. ಆಗ ಕಪಿಲ್ ಮತ್ತು ಸತ್ನಾಮ್ ಊಟ ಮಾಡುವಾಗ ದುಷ್ಕರ್ಮಿಗಳು ಬಂದು ಕಪಿಲ್ ಮೇಲೆ ಗುಂಡು ಹಾರಿಸಿದ್ದಾರೆ. ಟಿಗಾಂವ್ ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 302(ಕೊಲೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ:  ಪರ್ಯಾಯ ಅಂದ್ರೆ ಏನು? ಮಧ್ವಾಚಾರ್ಯರು ಕೊಟ್ಟಿರುವ ಅಕ್ಷಯ ಪಾತ್ರೆ, ಸಟ್ಟುಗವೇ ಅಧಿಕಾರ ಹಸ್ತಾಂತರಕ್ಕೆ ಅಂಕಿತ

    ಹಳೆಯ ದ್ವೇಷವೇ ಕಾರಣ!
    ಮೃತ ಕಪಿಲ್ ಅದಾನ ಟಿಗಾಂವ್ ಗ್ರಾಮದ ನಿವಾಸಿ. ಸಾಗರ್ ಮತ್ತು ಆಕಾಶ್ ಎಂದು ಗುರುತಿಸಲಾದ ಇಬ್ಬರು ಪುರುಷರು ಅವರ ಸೋದರಳಿಯ ಸೋನು ಅವರ ಗಾರ್ಮೆಂಟ್ಸ್ ಅಂಗಡಿಗೆ ಡಿಸೆಂಬರ್ 6 ರಂದು ಶಾಪಿಂಗ್ ಮಾಡುವ ನೆಪದಲ್ಲಿ ನುಗ್ಗಿದ್ದರು.

    ಈ ವೇಳೆ ಆಕಾಶ್ ಮತ್ತು ಸಾಗರ್ ಕಪಿಲ್ ಮಗನ ಮೇಲೆ ಹಲ್ಲೆ ಮಾಡಿ ಅಂಗಡಿಯಲ್ಲಿದ್ದ 3,500 ರೂ. ಎತ್ತಿಕೊಂಡು ಕೊಲೆ ಬೆದರಿಕೆ ಹಾಕಿದ್ದರು. ಘಟನೆಯ ನಂತರ ಕಪಿಲ್ ಟಿಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ. ಅಂದಿನಿಂದ ಆರೋಪಿಗಳು ಪ್ರಕರಣವನ್ನು ಹಿಂಪಡೆಯುವಂತೆ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದರು.

    ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಕಪಿಲ್, ಸಹೋದರ ಸತ್ನಾಮ್, ಸೋದರಳಿಯ ಸೋನು ಮತ್ತು ಇನ್ನೊಬ್ಬ ಸಂಬಂಧಿ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಈ ವೇಳೆ ಅವರು ಊಟ ಮಾಡುವಾಗ ಸಾಗರ್ ಮತ್ತು ಆಕಾಶ್ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಪೊಲೀಸ್ ದೂರು ಹಿಂಪಡೆಯುವಂತೆ ಬೆದರಿಕೆ ಹಾಕಿದ್ದಾರೆ. ಅದಕ್ಕೆ ಕಪಿಲ್ ನಿರಾಕರಿಸಿದಾಗ ವಾಗ್ವಾದ ನಡೆಯಿತು. ಆಗ ಸಾಗರ್ ಬಂದೂಕು ತಂದಿದ್ದು, ಕಪಿಲ್‍ಗೆ ಹತ್ತಿರದಿಂದಲೇ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಭಾರತದಲ್ಲಿ ಹೂಡಿಕೆ ಮಾಡಲು ಇದು ಉತ್ತಮ ಸಮಯ: ಮೋದಿ

    ಘಟನೆ ಕುರಿತು ಸತ್ನಾಮ್ ಪೊಲೀಸರಿಗೆ ದೂರು ನೀಡಿದ್ದು, ಸಂಪೂರ್ಣವಾಗಿ ವಿವರವನ್ನು ನೀಡಿದ್ದಾರೆ. ಪ್ರಸ್ತುತ ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳು ಕಾರ್ಯಚರಣೆಯನ್ನು ಮಾಡುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಜನರಿಗೆ 14 ಕೋಟಿ ರೂ. ವಂಚಿಸಿದ ಆಫೀಸರ್ ಅರೆಸ್ಟ್

    ಜನರಿಗೆ 14 ಕೋಟಿ ರೂ. ವಂಚಿಸಿದ ಆಫೀಸರ್ ಅರೆಸ್ಟ್

    ಚಂಡೀಗಢ: ಬಾರ್ಡರ್ ಫೋರ್ಸ್ ಆಫೀಸರ್(ಬಿಎಫ್‍ಒ) ಜನರಿಗೆ 14 ಕೋಟಿ ರೂ. ವಂಚಿಸಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ಗುರ್ಗಾಂವ್ ಜಿಲ್ಲೆಯ ಮನೇಸರ್‍ನಲ್ಲಿರುವ ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಪ್ರಧಾನ ಕಚೇರಿಯಲ್ಲಿ(ಎನ್‍ಎಸ್‍ಜಿ) ನಿಯೋಜನೆಗೊಂಡಿದ್ದ ಬಿಎಸ್‍ಎಫ್ ಡೆಪ್ಯುಟಿ ಕಮಾಂಡೆಂಟ್ ಪ್ರವೀಣ್ ಯಾದವ್, ಭಾರತೀಯ ಪೊಲೀಸ್ ಸೇವಾ ಅಧಿಕಾರಿಯಂತೆ ನಟಿಸಿ ಜನರಿಗೆ 125 ಕೋಟಿ ರೂ. ವಂಚಿಸಿದ್ದರು. ಇದನ್ನೂ ಓದಿ: ಮಗುವಿನ ಎದೆಗೂಡಿನ ಪಕ್ಕದಲ್ಲಿದ್ದ ಎಲುಬಿನ ಬಾಲ ತೆಗೆದುಹಾಕಿದ ವೈದ್ಯರು

    ಪೊಲೀಸರಿಗೆ ಈ ಕುರಿತು ಮಾಹಿತಿ ಸಿಕ್ಕಿದ್ದು, ಆತನನ್ನು ಬಂಧಿಸಿದ್ದಾರೆ. ದಾಳಿಯ ವೇಳೆ 14 ಕೋಟಿ ರೂ., 1 ಕೋಟಿ ಮೌಲ್ಯದ ಚಿನ್ನಾಭರಣಗಳು, ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಸೇರಿದಂತೆ ಏಳು ಐಷಾರಾಮಿ ಕಾರುಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗೆ ಸಹಾಯ ಮಾಡಿದ ಪತ್ನಿ ಮಮತಾ ಯಾದವ್, ಸಹೋದರಿ ರಿತು ಮತ್ತು ಸಹಚರನನ್ನು ಸಹ ಬಂಧಿಸಿದ್ದಾರೆ.

    ಹೇಗೆ?
    ಗುರ್ಗಾಂವ್ ಪೊಲೀಸ್ ಎಸಿಪಿ ಕ್ರೈಂ ಪ್ರೀತ್ ಪಾಲ್ ಸಿಂಗ್ ಈ ಕುರಿತು ಮಾತನಾಡಿದ್ದು, ಐಪಿಎಸ್ ಅಧಿಕಾರಿಯಂತೆ ಯಾದವ್ ನಟಿಸಿದ್ದು, ಅವರು ಎನ್‍ಎಸ್‍ಜಿ ಕ್ಯಾಂಪಸ್‍ನಲ್ಲಿ ನಿರ್ಮಾಣ ಗುತ್ತಿಗೆ ಪಡೆಯುವ ನೆಪದಲ್ಲಿ ಜನರಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾರೆ. ಅವರು ವಂಚಿಸಿದ ಎಲ್ಲ ಹಣವನ್ನು ಎನ್‍ಎಸ್‍ಜಿ ಹೆಸರಿನಲ್ಲಿ ನಕಲಿ ಖಾತೆಗೆ ವರ್ಗಾಯಿಸಿದ್ದಾರೆ. ಈ ಖಾತೆಯನ್ನು ಆಕ್ಸಿಸ್ ಬ್ಯಾಂಕ್‍ನಲ್ಲಿ ಮ್ಯಾನೇಜರ್ ಆಗಿರುವ ಅವರ ಸಹೋದರಿ ರಿತು ಯಾದವ್ ತೆರೆದಿದ್ದಾಳೆ ಎಂದು ತಿಳಿಸಿದ್ದಾರೆ.

    ಷೇರು ಮಾರುಕಟ್ಟೆಯಲ್ಲಿ ಪ್ರವೀಣ್ ಯಾದವ್ 60 ಲಕ್ಷ ನಷ್ಟ ಅನುಭವಿಸಿದ್ದು, ಪರಿಣಾಮ ಜನರನ್ನು ವಂಚಿಸಿ ಹಣ ವಸೂಲಿ ಮಾಡಲು ಯೋಜನೆ ರೂಪಿಸಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್

    ಯಾದವ್ ಇತ್ತೀಚೆಗೆ ಅಗರ್ತಲಾದಲ್ಲಿ ಪೋಸ್ಟಿಂಗ್ ಆಗಿತ್ತು. ಆದರೆ ಅವರು ಜನರನ್ನು ವಂಚಿಸುವ ಮೂಲಕವೇ ತುಂಬಾ ಸಂಪತ್ತನ್ನು ಗಳಿಸಿದ್ದರು. ಪರಿಣಾಮ ಕೆಲವು ದಿನಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು ಎಂದು ತಿಳಿಸಿದ್ದಾರೆ.

  • ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿ – ನಂಬರ್ ಕೊಟ್ಟ ಕೇಜ್ರಿವಾಲ್

    ಪಂಜಾಬ್ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡಲಿ – ನಂಬರ್ ಕೊಟ್ಟ ಕೇಜ್ರಿವಾಲ್

    ಚಂಡೀಗಢ: ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ(ಎಎಪಿ) ಸಿಎಂ ಅಭ್ಯರ್ಥಿಯನ್ನು ಪಂಜಾಬ್‍ನ ಜನರು ನಿರ್ಧರಿಸುತ್ತಾರೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದರು.

    ಪಂಜಾಬ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಎಎಪಿ ಮುಂದಿನ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡುತ್ತಾರೆ. ಈ ಬಗ್ಗೆ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು. ಜನರಿಗಾಗಿಯೇ ಮೊಬೈಲ್ ನಂಬರ್ ಅನ್ನು ಬಿಡುಗಡೆ ಮಾಡಲಾಗುತ್ತೆ. ಆ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಬಹುದು ಎಂದು ನಂಬರ್ ಬಿಡುಗಡೆ ಮಾಡಿದರು. ಇದನ್ನೂ ಓದಿ: ಖಾಸಗಿ ಲ್ಯಾಬ್‍ಗಳಲ್ಲೂ ಉಚಿತ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಎಎಪಿ ಆಗ್ರಹ

    ಈ ವೇಳೆ ಕೇಜ್ರಿವಾಲ್ ಅವರು 70748 70748 ನಂಬರ್ ಅನ್ನು ಬಿಡುಗಡೆ ಮಾಡಿದ್ದು, ಈ ನಂಬರ್ ಗೆ ಜನರು ಕರೆ ಮಾಡಿ ಜನವರಿ 17 ಸಂಜೆ 5 ಗಂಟೆಯವರೆಗೆ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು. ಜನರು ಮುಕ್ತವಾಗಿ ಕರೆ ಮಾಡಿ ತಮ್ಮ ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.

    ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಕ್ಷವೊಂದು ರಾಜ್ಯದ ಜನರನ್ನು ಸಿಎಂ ಆಯ್ಕೆಗಾಗಿ ಕೇಳುತ್ತಿದೆ ಎಂದು ಪ್ರಶಂಸಿಕೊಂಡರು. ನಾನು ಭಗವಂತ್ ಮಾನ್ ಅವರನ್ನು ಕೇಳಿದೆ, ನಿಮ್ಮ ಹೆಸರನ್ನು ಘೋಷಿಸಬೇಕೇ? ಎಂದು ಆದರೆ ಅವರು ನಿರಾಕರಿಸಿದರು. ಈ ಬಗ್ಗೆ ಸಾರ್ವಜನಿಕರನ್ನು ಕೇಳಲು ಸೂಚಿಸಿದರು ಎಂದು ತಿಳಿಸಿದರು.

    ಚುನಾವಣೆಯಲ್ಲಿ ಎಎಪಿಯ ಅವಕಾಶಗಳ ಬಗ್ಗೆ ಮಾತನಾಡುತ್ತಾ, 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ 57-60 ಸ್ಥಾನಗಳನ್ನು ನಾವು ಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಎಪಿಯ ಪಂಜಾಬ್ ಘಟಕದ ಮುಖ್ಯಸ್ಥ ಭಗವಂತ್ ಮಾನ್ ಮತ್ತು ಪಕ್ಷದ ರಾಘವ್ ಚಡ್ಡಾ ಈ ವೇಳೆ ಉಪಸ್ಥಿತರಿದ್ದರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

    ಪಂಜಾಬ್ ನಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತಗಳ ಎಣಿಕೆ ನಡೆಯಲಿದೆ.

  • ಆಪ್‌ಗೆ ಶಾಕ್‌ – ಚಂಡೀಗಢದಲ್ಲಿ 12 ಸ್ಥಾನ ಗೆದ್ದ ಬಿಜೆಪಿಗೆ ಮೇಯರ್‌ ಪಟ್ಟ

    ಆಪ್‌ಗೆ ಶಾಕ್‌ – ಚಂಡೀಗಢದಲ್ಲಿ 12 ಸ್ಥಾನ ಗೆದ್ದ ಬಿಜೆಪಿಗೆ ಮೇಯರ್‌ ಪಟ್ಟ

    – ಮೇಯರ್‌ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ
    – ತಲಾ 14 ಮತಗಳನ್ನು ಪಡೆದಿದ್ದ ಬಿಜೆಪಿ, ಆಪ್‌ ಅಭ್ಯರ್ಥಿಗಳು

    ಚಂಡೀಗಢ: ಪಾಲಿಕೆಯ ಒಟ್ಟು 35 ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಚಂಡೀಗಢ ಮೇಯರ್‌ ಚುನಾವಣೆಯ ವೇಳೆ ಮ್ಯಾಜಿಕ್‌ ಮಾಡಿದ್ದು ಮತ್ತೆ ಅಧಿಕಾರದ ಗದ್ದುಗೆ ಏರಿದೆ.

    ಇಂದು ನಡೆದ ಮೇಯರ್‌ ಚುನಾವಣೆಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಆಪ್‌ ಮತ್ತು ಬಿಜೆಪಿ ಅಭ್ಯರ್ಥಿಗಳು ತಲಾ 14 ಮತಗಳನ್ನು ಪಡೆದಿದ್ದರು. ಆದರೆ ಕೊನೆಯಲ್ಲಿ ಆಪ್‌ ಪರ ಚಲಾವಣೆಯಾದ ಮತ ಅಸಿಂಧು ಎಂದು ಘೋಷಣೆಯಾದ ಹಿನ್ನೆಲೆಯಲ್ಲಿ ಬಿಜೆಪಿಯ ಕೌನ್ಸಿಲರ್ ಸರಬ್ಜಿತ್ ಕೌರ್ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಮೇಯರ್‌ ಅಲ್ಲದೇ ಬಿಜೆಪಿಯ ದಲೀಪ್‌ ಶರ್ಮಾ ಸೀನಿಯರ್‌ ಡೆಪ್ಯೂಟಿ ಮೇಯರ್‌, ಅನೂಪ್‌ ಗುಪ್ತಾ ಡೆಪ್ಯೂಟಿ ಮೇಯರ್‌ ಆಗಿ ಆಯ್ಕೆ ಆಗಿದ್ದಾರೆ.

    ಪಾಲಿಕೆಯ 35 ವಾರ್ಡ್‌ಗಳಿಗೆ ಗಳಿಗೆ ನಡೆದ ಚುನಾವಣೆ ಫಲಿತಾಂಶ ಡಿಸೆಂಬರ್ 27 ರಂದು ಪ್ರಕಟವಾಗಿತ್ತು. ಅದರಲ್ಲಿ ಆಮ್ ಆದ್ಮಿ ಪಕ್ಷ 14 ಮತ್ತು ಬಿಜೆಪಿ 12 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ ಎಂಟು ಮತ್ತು ಶಿರೋಮಣಿ ಅಕಾಲಿ ದಳ ಒಂದು ಸ್ಥಾನ ಪಡೆದಿತ್ತು. ಫಲಿತಾಂಶದ ಬಳಿಕ ಕಾಂಗ್ರೆಸ್ ಕೌನ್ಸಿಲರ್ ಹರ್ಪೀತ್ ಕೌರ್ ಬಬ್ಲಾ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

    35 ಕಾನ್ಸಿಲರ್ ಗಳಲ್ಲದೆ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಪದನಿಮಿತ್ತ ಸದಸ್ಯರಾಗಿರುವ ಚಂಡೀಗಢದ ಬಿಜೆಪಿ ಸಂಸದೆ ಕಿರಣ್‌ ಖೇರ್‌ ಮತದಾನದ ಹಕ್ಕನ್ನು ಹೊಂದಿದ್ದರು.

    ಇಂದು ಏನಾಯ್ತು?
    ಇಂದು ನಡೆದ ಮೇಯರ್‌ ಚುನಾವಣೆಯ ಒಟ್ಟು 36 ಮತಗಳಲ್ಲಿ 28 ಮತ ಮಾತ್ರ ಚಲಾವಣೆಯಾಗಿತ್ತು. ಏಳು ಕಾಂಗ್ರೆಸ್ ಕೌನ್ಸಿಲರ್ ಗಳು ಮತ್ತು ಶಿರೋಮಣಿ ಅಕಾಲಿದಳದ ಏಕೈಕ ಕೌನ್ಸಿಲರ್ ಗೈರಾಗಿದ್ದರು. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಶಿವರಾಜ್‌ ಕುಮಾರ್‌

    ಬಿಜೆಪಿ ಮೇಯರ್‌ ಅಭ್ಯರ್ಥಿ ಪರವಾಗಿ ಸಂಸದೆ ಕಿರಣ್‌ ಖೇರ್‌ ಮತದಾನ ಮಾಡಿದ್ದರಿಂದ 14 ಮತಗಳು ಬಿದ್ದಿತ್ತು. ಒಂದು ವೋಟ್‌ ಅಂಸಿಂಧುಗೊಂಡಿದ್ದರಿಂದ ಆಪ್‌ ಅಭ್ಯರ್ಥಿ ಕತ್ಯಾಲ್ 13 ಮತಗಳನ್ನು ಮಾತ್ರ ಪಡೆದರು. ಫಲಿತಾಂಶ ಪ್ರಕಟವಾದ ನಂತರ ಎಎಪಿ ಸದಸ್ಯರು ಗದ್ದಲ ನಡೆಸಿದ್ದರು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಇದನ್ನೂ ಓದಿ: ಪ್ರೋಮೋ ಶೇರ್ ಮಾಡಿ ಸಚಿನ್ ತಂಡವನ್ನು ಕ್ಷಮೆಯಾಚಿಸಿದ ಬಿಗ್ ಬಿ

    ಪಂಜಾಬ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಅಕಾಲಿ ದಳ ಮೇಯರ್‌ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬಹುದು ಎಂಬ ಪ್ರಶ್ನೆ ಎದ್ದಿತ್ತು. ಆದರೆ ಎರಡೂ ಪಕ್ಷಗಳು ಯಾರ ಪರವಾಗಿಯೂ ಬೆಂಬಲ ನೀಡದೇ ಚುನಾವಣೆಯಿಂದ ಹಿಂದೆ ಸರಿದಿತ್ತು. ಒಂದು ವೇಳೆ ಬಿಜೆಪಿ ಅಥವಾ ಆಪ್‌ಗೆ ಬೆಂಬಲ ನೀಡಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಟೀಕೆ ಎದುರಾಗಬಹುದು ಎಂಬ ಕಾರಣಕ್ಕೆ ಚುನಾವಣೆಯಿಂದಲೇ ದೂರ ಉಳಿದಿದ್ದವು.

  • ಮೋದಿಗೆ ಕೇವಲ 15 ನಿಮಿಷ ಸಮಸ್ಯೆಯಾಗಿದೆ, ರೈತರು 1 ವರ್ಷ ಪ್ರತಿಭಟಿಸಿದ್ದಾರೆ: ಸಿಧು

    ಮೋದಿಗೆ ಕೇವಲ 15 ನಿಮಿಷ ಸಮಸ್ಯೆಯಾಗಿದೆ, ರೈತರು 1 ವರ್ಷ ಪ್ರತಿಭಟಿಸಿದ್ದಾರೆ: ಸಿಧು

    ಚಂಡೀಗಢ: ಮೋದಿ ಸಮಸ್ಯೆ ಅನುಭವಿಸಿದ್ದು ಕೇವಲ 15 ನಿಮಿಷಗಳಷ್ಟೇ, ರೈತರು ಒಂದು ವರ್ಷ ಪ್ರತಿಭಟಿಸಿದ್ದಾರೆ ಎಂದು ಪಂಜಾಬ್ ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವ್ಯಂಗ್ಯವಾಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರೈತ ಸಹೋದರರು ದೆಹಲಿ ಗಡಿಯಲ್ಲಿ ಒಂದು ವರ್ಷದಿಂದ ಪ್ರತಿಭಟನೆ ನಡೆಸಿದ್ದರು. ಒಂದೂವರೆ ವರ್ಷ ಅಲ್ಲಿಯೇ ಮೊಕ್ಕಾಂ ಹೂಡಿದ್ದರು. ಈ ಬಗ್ಗೆ ನಿಮ್ಮ ಮಾಧ್ಯಮಗಳು ಏನನ್ನೂ ಹೇಳಲಿಲ್ಲ, ಆದರೆ ನೀವು 15 ನಿಮಿಷ ಅನುಭವಿಸಿದ್ದ ಸಂಕಷ್ಟ ದೊಡ್ಡ ಸುದ್ದಿಯಾಗಿದೆ. ಈ ರೀತಿಯ ದ್ವಿಮುಖ ಧೋರಣೆ ಏಕೆ ಎಂದು ಮೋದಿ ಅವರನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರೀ ಭದ್ರತಾ ಲೋಪ – ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ

    ಫಿರೋಜ್‍ಪುರದಲ್ಲಿ ಮೋದಿ ಭಾಷಣ ಮಾಡಲಿದ್ದ ಬಿಜೆಪಿ ರ‍್ಯಾಲಿಗೆ ಕೇವಲ 500 ಮಂದಿ ಮಾತ್ರ ಬಂದಿದ್ದರು. ನಾಚಿಕೆಯಿಲ್ಲದೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಖಾಲಿ ಖುರ್ಚಿಗಳ ನಡುವೆಯೂ ಭಾಷಣ ಮಾಡಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಹಾಗಲ್ಲ. ರ‍್ಯಾಲಿಯಿಂದ ದೂರ ಉಳಿಯಲು, ಮಾಧ್ಯಮಗಳ ಗಮನ ಸೆಳೆಯಲು ಭದ್ರತಾ ಲೋಪ ಆರೋಪ ಮಾಡಿದ್ದಾರೆ. ಈ ಬೆಳವಣಿಗೆಯು ಪಂಜಾಬ್‍ನಲ್ಲಿ ಬಿಜೆಪಿಯ ವೈಫಲ್ಯತೆಯನ್ನು ತೋರಿಸುತ್ತಿದೆ. ಬಿಜೆಪಿ ಒಡೆದ ಬಲೂನ್ ನಂತಾಗಿದೆ ಎಂದು ಬಿಜೆಪಿ ವಿರುದ್ಧವಾಗಿ ಕಿಡಿಕಾರಿದ್ದಾರೆ. ಇದನ್ನೂ ಓದಿ: ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ಭದ್ರತಾ  ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ನ ಫ್ಲೈ ಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿಕೊಂಡ ಘಟನೆ ನಡೆದಿತ್ತು. ಪ್ರತಿಭಟನೆ ಕಾರಣದಿಂದಾಗಿ ಪಿಎಂ ಮೋದಿ ಅವರ ಸುಗಮ ಸಂಚಾರಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿ  ಬಟಿಂಡಾ ವಿಮಾನ ನಿಲ್ದಾಣಕ್ಕೆ ಮರಳಿದ್ದರು.

  • ಚಂಡೀಗಢ ಬಿಜೆಪಿ, ಕಾಂಗ್ರೆಸ್‍ಗೆ ಮುಖಭಂಗ – ನಗರಪಾಲಿಕೆ ಚುನಾವಣೆಯಲ್ಲಿ ಎಎಪಿ ಮೇಲುಗೈ

    ಚಂಡೀಗಢ ಬಿಜೆಪಿ, ಕಾಂಗ್ರೆಸ್‍ಗೆ ಮುಖಭಂಗ – ನಗರಪಾಲಿಕೆ ಚುನಾವಣೆಯಲ್ಲಿ ಎಎಪಿ ಮೇಲುಗೈ

    ಚಂಡೀಗಢ: ನಗರಪಾಲಿಕೆ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಗಿಂತಲೂ ಅಧಿಕ ಸ್ಥಾನವನ್ನು ಗೆಲ್ಲುವ ಮೂಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮುನ್ನಡೆ ಸಾಧಿಸಿದೆ.

    ಚಂಡೀಗಢ ನಗರಪಾಲಿಕೆಯ 35 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ 14 ಸ್ಥಾನಗಳನ್ನು ಎಎಪಿ, 12 ಬಿಜೆಪಿ, 8 ಕಾಂಗ್ರೆಸ್ ಮತ್ತು 1 ಸ್ಥಾನವನ್ನು  ಅಕಾಲಿಕದಳ ಗೆದ್ದುಕೊಂಡಿದೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಇದನ್ನೂ ಓದಿ: ಯೋಗಿ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ – ಯುಪಿ ಸಚಿವ

    ಈ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಪಂಜಾಬ್‍ನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಜನ ಭ್ರಷ್ಟ ರಾಜಕೀಯ ಪಕ್ಷವನ್ನು ತಿರಸ್ಕರಿಸಿ ಎಎಪಿಗೆ ಮಣೆ ಹಾಕಿದ್ದಾರೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ಸೂಚನೆ. ಪಂಜಾಬ್ ಬದಲಾವಣೆಗೆ ಸಿದ್ಧಗೊಂಡಿದೆ ಎಂದು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ – ರಾತ್ರಿ ಅನಗತ್ಯ ಓಡಾಡಿದ್ರೆ ಬೀಳುತ್ತೆ ಕೇಸ್

    2016ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 77%, ಕಾಂಗ್ರೆಸ್ 15%, ಅಕಾಲಿಕದಳ 4% ಗೆದ್ದಿತ್ತು. ಆದರೆ ಎಎಪಿ ಒಂದೇ ಒಂದು ಸ್ಥಾನವನ್ನು ಜಯಿಸಿರಲಿಲ್ಲ. ಈ ಬಾರಿ ಎಎಪಿ 40%, ಬಿಜೆಪಿ 34%, ಕಾಂಗ್ರೆಸ್ 23%, ಅಕಾಲಿಕದಳ 3% ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ಎಎಪಿ ದೊಡ್ಡ ಮಟ್ಟದ ಯಶಸ್ಸುಗಳಿಸಿದೆ.

    ಈ ಚುನಾವಣೆಯ ಫಲಿತಾಂಶವನ್ನು ಗಮನಿಸುತ್ತಿದ್ದಂತೆ 2022ರ ಆರಂಭದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ದೆಹಲಿಯಲ್ಲಿ ಉತ್ತಮವಾಗಿ ಅಧಿಕಾರವನ್ನು ನಿರ್ವಹಿಸುತ್ತಿರುವ ಎಎಪಿ ಪಂಜಾಬ್‍ನಲ್ಲಿ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿದೆ. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು

  • ಕೇಜ್ರಿವಾಲ್ ಮಹಾನ್ ಸುಳ್ಳುಗಾರ: ನವಜೋತ್ ಸಿಂಗ್ ಸಿಧು

    ಕೇಜ್ರಿವಾಲ್ ಮಹಾನ್ ಸುಳ್ಳುಗಾರ: ನವಜೋತ್ ಸಿಂಗ್ ಸಿಧು

    ಚಂಡೀಗಢ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿಧಾನಸಭಾ ಚುನಾವಣೆಗೂ ಮುನ್ನ ಸುಳ್ಳು ಭರವಸೆಗಳನ್ನು ನೀಡುವ ಸುಳ್ಳುಗಾರ ಹಾಗೂ ರಾಜಕೀಯ ಪ್ರವಾಸಿ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಟೀಕಿಸಿದರು.

    ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಜ್ರಿವಾಲ್ ಅವರು ಉದ್ಯೋಗದ ವಿಷಯದ ಕುರಿತು ಪಂಜಾಬ್‌ನಲ್ಲಿ ಅನೇಕ ಭರವಸೆಯನ್ನು ನೀಡಿದ್ದಾರೆ. ಹಾಗೆಯೇ ದೆಹಲಿಯಲ್ಲೂ 8 ಲಕ್ಷ ಉದ್ಯೋಗಗಳನ್ನು ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ದೆಹಲಿಯಲ್ಲಿ ಕೇವಲ 440 ಜನರಿಗೆ ಮಾತ್ರ ಉದ್ಯೋಗವನ್ನು ನೀಡಿ ಮೋಸ ಮಾಡಿದ್ದಾರೆ ಎಂದರು.

    ಪAಜಾಬ್‌ನಲ್ಲಿ ಕೇಜ್ರಿವಾಲ್ ಅವರು ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. ನೀಡುವ ಭರವಸೆ ನೀಡಿದ್ದಾರೆ. ಹಾಗೆಯೇ ದೆಹಲಿಯಲ್ಲಿ ಅವರ ನೇತೃತ್ವದಲ್ಲೆ ಸರ್ಕಾರವಿದೆ. ಅಲ್ಲಿ ಮಹಿಳೆಯರಿಗೆ ಈ ಮೊತ್ತವನ್ನು ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.

    ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್‌ನಲ್ಲಿ ಅಂದಾಜು 20,000 ಕೋಟಿ ರೂ. ಮೌಲ್ಯದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅದನ್ನು ತಡೆಯಲು ಎಎಪಿ ಸರ್ಕಾರ ಅಗತ್ಯ ಎಂದು ಹೇಳಿದ್ದರು. ಆದರೆ ಇದು ಸಾಧ್ಯವಿಲ್ಲ ಎಂದು ನವಜೋತ್ ಸಿಧು ಸಮರ್ಥಿಸಿಕೊಂಡರು. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ

    ಕೇಜ್ರಿವಾಲ್ ಅವರಿಗೆ ಪಂಜಾಬ್ ಬಗ್ಗೆ ಏನೂ ತಿಳಿದಿಲ್ಲ. ಸುಮ್ಮನೆ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ನಂಬಿಸುತ್ತಿದ್ದಾರೆ. ಅವರು ಕೇವಲ ರಾಜಕೀಯ ಪ್ರವಾಸಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಹಾತ್ಮರ ಪುತ್ಥಳಿ ಹಾಳು ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ: ಬಿಎಸ್‍ವೈ

    ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬೇಳೆಕಾಳು ಹಾಗೂ ಎಣ್ಣೆ ಕಾಳುಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದಾಗಿ ನವಜೋತ್ ಸಿಧು ಭರವಸೆ ನೀಡಿದರು.

     

  • ಆಂಧ್ರ, ಚಂಡೀಗಢದಲ್ಲಿ ಖಾತೆ ತೆರೆದ ಓಮಿಕ್ರಾನ್- ದೇಶದಲ್ಲಿ 35ಕ್ಕೇರಿದ ಸಂಖ್ಯೆ

    ಆಂಧ್ರ, ಚಂಡೀಗಢದಲ್ಲಿ ಖಾತೆ ತೆರೆದ ಓಮಿಕ್ರಾನ್- ದೇಶದಲ್ಲಿ 35ಕ್ಕೇರಿದ ಸಂಖ್ಯೆ

    ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರ ತಳಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇಂದು ಸಹ ಆಂಧ್ರಪ್ರದೇಶ ಮತ್ತು ಚಂಡೀಗಢ ರಾಜ್ಯಗಳಲ್ಲಿ ಮೊದಲ ಬಾರಿಗೆ ತಲಾ ಒಂದು ಪ್ರಕರಣ ವರದಿಯಾಗಿದೆ.

    ನವೆಂಬರ್ 22ರಲ್ಲಿ ಇಟಲಿಯಿಂದ ಚಂಡೀಗಢದಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ಇರುವುದು ಪತ್ತೆಯಾಗಿದೆ. ಈತನನ್ನು ಮೊದಲು ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಕ್ವಾರಂಟೈನ್‍ಲಿದ್ದ ಸೋಂಕಿತನ ಮಾದರಿಯನ್ನು ಡಿ.1ರಂದು ವೈರಾಣು ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸೀಕ್ವೆನ್ಸಿಂಗ್) ಕಳುಹಿಸಿದಾಗ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಇದನ್ನೂ ಓದಿ: ಕೇವಲ 2 ಗಂಟೆಯಲ್ಲಿ ಓಮಿಕ್ರಾನ್ ಪತ್ತೆ ಮಾಡುವ ಕಿಟ್ ಅಭಿವೃದ್ಧಿ

    ಸೋಂಕಿತನಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ. ಇಟಲಿಯಲ್ಲಿ ಫೈಜರ್ ಲಸಿಕೆಯ ಎರಡೂ ಡೋಸ್‍ಗಳನ್ನು ಪಡೆದುಕೊಂಡಿದ್ದಾನೆ. ಸದ್ಯ ಸೋಂಕಿತ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾನೆ. ಆರಂಭದಲ್ಲಿ ಕ್ವಾರಂಟೈನ್‍ನಲ್ಲಿದ್ದಾಗ ಕುಟುಂಬದ 7 ಮಂದಿ ಈತನ ಸಂಪರ್ಕದಲ್ಲಿದ್ದರು. ಎಲ್ಲರ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ. ಇಂದು ಮತ್ತೆ ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.

    ಐಲ್ರ್ಯಾಂಡ್‍ನಿಂದ ಆಂಧ್ರಪ್ರದೇಶಕ್ಕೆ ವಾಪಸ್ಸಾಗಿದ್ದ ವ್ಯಕ್ತಿಯಲ್ಲಿ ಓಮಿಕ್ರಾನ್ ಇರುವುದು ದೃಢಪಟ್ಟಿದೆ. ಇದನ್ನೂ ಓದಿ: ಮಾರ್ಚ್, ಮೇ ಹೊತ್ತಿಗೆ ದೇಶದಲ್ಲಿ ಕೊರೊನಾ ಇರಲ್ಲ: ವಿನಯ್ ಗುರೂಜಿ

    ಈಗಾಗಲೇ ದೆಹಲಿ, ರಾಜಸ್ಥಾನ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಅಂದರೆ 7 ಓಮಿಕ್ರಾನ್ ಸೋಂಕು ಪ್ರಕರಣಗಳು ದೃಢಪಟ್ಟಿವೆ. ವಿಶ್ವದಲ್ಲಿ ಸುಮಾರು 59 ದೇಶಗಳು ಓಮಿಕ್ರಾನ್ ಪೀಡಿತವಾಗಿವೆ.