Tag: chandigarh

  • ಅಹಂಕಾರಿಗಳಾಗಬೇಡಿ, ಮತದಾರರನ್ನು ಗೌರವಿಸಿ: ಭಗವಂತ್ ಮಾನ್

    ಅಹಂಕಾರಿಗಳಾಗಬೇಡಿ, ಮತದಾರರನ್ನು ಗೌರವಿಸಿ: ಭಗವಂತ್ ಮಾನ್

    ಚಂಡೀಗಢ: ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದ್ದು, ಭಗವಂತ್ ಮಾನ್ ಅವರು ತಮ್ಮ ಶಾಸಕರಿಗೆ ಅಹಂಕಾರಿಗಾಗಬೇಡಿ, ಮತದಾರರನ್ನು ಗೌರವಿಸಿ ಎಂದು ಸಂದೇಶವನ್ನು ಸಾರಿದರು.

    ಮೊಹಾಲಿಯಲ್ಲಿ ನಡೆದ ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಅಹಂಕಾರಿಯಾಗಬೇಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. ನಿಮಗೆ ಮತ ಹಾಕಿದವರಿಗಾಗಿ ಕೆಲಸ ಮಾಡಿ. ನೀವು ಪಂಜಾಬಿನ ಶಾಸಕರು. ಅವರು ಸರ್ಕಾರವನ್ನು ಆಯ್ಕೆ ಮಾಡಿದ್ದಾರೆ ಎಂದರು. ಇದನ್ನೂ ಓದಿ:  ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್

    ಮತ ಕೇಳಲು ಹೋದ ಎಲ್ಲ ಸ್ಥಳಗಳಿಗೆ ನಾವು ಕೆಲಸ ಮಾಡಬೇಕು. ಎಲ್ಲ ಶಾಸಕರು ಚಂಡೀಗಢದಲ್ಲಿ ಉಳಿಯದೆ ಅವರು ಆಯ್ಕೆಯಾದ ಪ್ರದೇಶಗಳಲ್ಲಿ ಕೆಲಸ ಮಾಡಬೇಕು. ಎಂಎಲ್‍ಎಗಳು ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸ ಮಾಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದರು.

    ಪಂಜಾಬ್ ಚುನಾವಣೆಯಲ್ಲಿ ಎಎಪಿಯ ಭರ್ಜರಿ ಗೆಲುವನ್ನು ಸಾಧಿಸಿದ ಬಳಿಕ, ಭಗವಂತ್ ಮಾನ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಶುಕ್ರವಾರ ರಾಷ್ಟ್ರ ರಾಜಧಾನಿಗೆ ತೆರಳಿದ್ದರು. ಮಾರ್ಚ್ 16 ರಂದು ಹೊಸ ಪಂಜಾಬ್ ಕ್ಯಾಬಿನೆಟ್‍ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಭಗವಂತ್ ಮಾನ್ ಆಹ್ವಾನಿಸಿದ್ದಾರೆ.

    ಪಂಜಾಬ್‍ನಲ್ಲಿ ತಮ್ಮ ಪಕ್ಷ ಗೆದ್ದಿರುವ ಬಗ್ಗೆ ಭಗವಂತ್ ಮಾನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ರಚಿಸಲು ಅಗತ್ಯವಿರುವ 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದಿದ್ದಾರೆ. ಇದನ್ನೂ ಓದಿ: ತಾವು ಆಯ್ಕೆಯಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿ, ರಾಜಧಾನಿಯಲ್ಲಿ ಅಲ್ಲ: ಭಗವಂತ್ ಮಾನ್

  • ಕಾಂಗ್ರೆಸ್ ಸೋಲಿನ ನಂತರ ಪಂಜಾಬ್‍ನ ಉನ್ನತ ಸರ್ಕಾರಿ ವಕೀಲರು ರಾಜೀನಾಮೆ!

    ಕಾಂಗ್ರೆಸ್ ಸೋಲಿನ ನಂತರ ಪಂಜಾಬ್‍ನ ಉನ್ನತ ಸರ್ಕಾರಿ ವಕೀಲರು ರಾಜೀನಾಮೆ!

    ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ನಂತರ ರಾಜ್ಯದ ಅಡ್ವೊಕೇಟ್ ಜನರಲ್(ಎಜಿ) ದೀಪಿಂದರ್ ಸಿಂಗ್ ಪಟ್ವಾಲಿಯಾ ಇಂದು ಪಂಜಾಬ್‍ನ ಉನ್ನತ ಸರ್ಕಾರಿ ವಕೀಲ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ದೀಪಿಂದರ್ ಸಿಂಗ್ ಅವರು, ದೀರ್ಘಕಾಲದ ಸಾಂವಿಧಾನಿಕ ಸಮಾವೇಶವನ್ನು ಇಟ್ಟುಕೊಂಡು ಈ ನಿರ್ಧಾರವನ್ನು ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ದೀಪಿಂದರ್ ಸಿಂಗ್ ಅವರನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಎಜಿ ಆಗಿ ಆಯ್ಕೆ ಮಾಡಿದ್ದರು. ಆದರೆ ಈಗ ಕಾಂಗ್ರೆಸ್ ಪಂಜಾಬ್‍ನಲ್ಲಿ ಸೋತ ನಂತರ ದೀಪಿಂದರ್ ಸಿಂಗ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ‘ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆ ಜಾರಿ: ಕಲಬುರಗಿ ಡಿಸಿ 

    ಎಜಿ ಸಾಂಪ್ರದಾಯಿಕವಾಗಿ ಸರ್ಕಾರ ಬದಲಾವಣೆಯಾಗುತ್ತಿದಂತೆ ರಾಜೀನಾಮೆ ನೀಡುತ್ತಾರೆ. ಏಕೆಂದರೆ ಅವರು ಆಡಳಿತ ಸರ್ಕಾರದ ಸಲಹೆಯ ಮೇರೆಗೆ ನೇಮಕ ಮಾಡಿಕೊಳ್ಳಲಾಗುತ್ತೆ.

  • ಕೆಲಸ ಬಿಟ್ಟು ಬಿರಿಯಾನಿ ಸ್ಟಾಲ್ ತೆರೆದ ಇಂಜಿನಿಯರಿಂಗ್ ಯುವಕರು

    ಕೆಲಸ ಬಿಟ್ಟು ಬಿರಿಯಾನಿ ಸ್ಟಾಲ್ ತೆರೆದ ಇಂಜಿನಿಯರಿಂಗ್ ಯುವಕರು

    ಚಂಡೀಗಢ: ಓದಿಗೆ ತಕ್ಕಂತೆ ಕೆಲಸ ಮಾಡಬೇಕು ಎಂಬುದು ಎಲ್ಲರ ಕನಸು. ಆದರೆ ಕೆಲಸ ಸಿಗದಿದ್ದಾಗ ಜನರು ಸಿಕ್ಕ ಕೆಲಸವನ್ನು ಮಾಡಿಕೊಂಡು ಅತೃಪ್ತಿಯಿಂದ ಒಳಲುತ್ತಾರೆ. ಆದರೆ ಹರಿಯಾಣದ ಇಂಜಿನಿಯರ್ ಯುವಕರು ಸಿಕ್ಕ ಕೆಲಸದಲ್ಲಿ ತೃಪ್ತಿಯಿಲ್ಲವೆಂದು ಬಿರಿಯಾನಿ ಸ್ಟಾಲ್ ಓಪನ್ ಮಾಡಿ ನಿರುದ್ಯೋಗಿಗಳಿಗೆ ಸ್ಫೂರ್ತಿಯಾಗಿದ್ದಾರೆ.

    ನಮ್ಮಲ್ಲಿ ಸಾಮಾನ್ಯವಾಗಿ ಹೆಚ್ಚು ಜನರು ತಮ್ಮ ಉದ್ಯೋಗಗಳ ಬಗ್ಗೆ ಅತೃಪ್ತಿ ಇದ್ದರೂ, ತಮಗೆ ಇಷ್ಟವಾದ ಕೆಲಸ ಮಾಡಲು ಬಂಡವಾಳ ಹಾಕುವ ಧೈರ್ಯವಿರುವುದಿಲ್ಲ. ಆದರೆ ಹರಿಯಾಣದ ಸೋನೆಪತ್‍ನಲ್ಲಿ ಇಬ್ಬರು ಇಂಜಿನಿಯರ್ ಓದಿದ ಯುವಕರು ತಮಗೆ ಬರುತ್ತಿದ್ದ ಸಂಬಳದ ಬಗ್ಗೆ ಅತೃಪ್ತಿ ಹೊಂದಿದ್ದರು. ಈ ಹಿನ್ನೆಲೆ ಅವರು ತಮ್ಮ ಕೆಲಸವನ್ನು ಬಿಟ್ಟು ಫುಡ್ ಸ್ಟಾಲ್ ತೆಗೆಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: EVMಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ: ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ

    ಇಂಜಿನಿಯರ್‌ಗಳಾದ ರೋಹಿತ್ ಮತ್ತು ಸಚಿನ್ ಒಟ್ಟಿಗೆ ಬಿರಿಯಾನಿ ಸ್ಟಾಲ್ ಓಪನ್ ಮಾಡಿದ್ದಾರೆ. ಈ ಸ್ಟಾಲ್‍ಗೆ ಇವರು ‘ಇಂಜಿನಿಯರ್ ವೆಜ್ ಬಿರಿಯಾನಿ’ ಎಂದು ಹೆಸರಿಟ್ಟಿದ್ದಾರೆ. ಇದರಲ್ಲಿ ಗಮನಾರ್ಹ ವಿಷಯವೆಂದರೆ ಇಬ್ಬರೂ ಐದು ವರ್ಷಗಳ ಕಾಲ ಇಂಜಿನಿಯರಿಂಗ್ ಓದಿದ್ದಾರೆ. ರೋಹಿತ್ ಪಾಲಿಟೆಕ್ನಿಕ್ ವಿದ್ಯಾರ್ಥಿಯಾಗಿದ್ದಾಗ, ಸಚಿನ್ ಬಿ.ಟೆಕ್ ಓದಿದ್ದರು. ಆದರೆ, ಕೆಲಸದಲ್ಲಿ ತೃಪ್ತರಾಗದ ಹಿನ್ನೆಲೆ ಬಿರಿಯಾನಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಪ್ರಸ್ತುತ ಅವರು ಈ ಕೆಲಸದಿಂದ ತುಂಬಾ ಸಂತೋಷದಿಂದ ಇದ್ದೇವೆ ಎಂದು ಮಾಧ್ಯಮಗಳೊಂದಿಗೆ ಮಾತನಾಡಿ ಸಂತೋಷ ಹಂಚಿಕೊಂಡಿದ್ದಾರೆ.

    ಆಹಾರದ ವಿಷಯಕ್ಕೆ ಬಂದರೆ, ತಮ್ಮ ಬಿರಿಯಾನಿಗೆ ಹೆಚ್ಚು ಎಣ್ಣೆಯನ್ನು ಹಾಕುವುದಿಲ್ಲ. ಅರ್ಧ ಮತ್ತು ಪೂರ್ಣ ಪ್ಲೇಟ್‍ಗೆ ಕ್ರಮವಾಗಿ 50 ಮತ್ತು 70 ರೂ. ನಮ್ಮಲ್ಲಿ ಎರಡು ವಿಧದ ಬಿರಿಯಾನಿ-ವಿಶೇಷ ಗ್ರೇವಿ ವೆಜ್ ಬಿರಿಯಾನಿ ಮತ್ತು ಆಚಾರಿ ವೆಜ್ ಬಿರಿಯಾನಿಗಳನ್ನು ಮಾರಾಟ ಮಾಡಲಾಗುತ್ತೆ ಎಂದು ತಮ್ಮ ವ್ಯಾಪಾರದ ಬಗ್ಗೆ ವಿವರಿಸಿದ್ದಾರೆ. ಇದನ್ನೂ ಓದಿ: 4 ರಾಜ್ಯಗಳಲ್ಲಿ ಬಿಜೆಪಿ ವಿಜಯ – ಗುಜರಾತ್‍ನಲ್ಲಿ ಮೋದಿ ಭರ್ಜರಿ ರೋಡ್ ಶೋ

    ಗ್ರಾಹಕರ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾವು ಆಹಾರವನ್ನು ತಯಾರಿಸುತ್ತೇವೆ. ನಮ್ಮ ಸ್ಟಾಲ್‍ನಲ್ಲಿ ಉತ್ತಮ ಗುಣಮಟ್ಟದ ಅಕ್ಕಿಯನ್ನು ಬಳಸಲಾಗುತ್ತೆ. ನಮ್ಮ ಶ್ರಮದ ಫಲವಾಗಿ ಇಂದು ಹಲವು ಜನರು ನಮ್ಮ ಸ್ಟಾಲ್ ಹುಡುಕಿಕೊಂಡು ಬರುತ್ತಾರೆ. ಅದಕ್ಕೆ ನಮ್ಮ ಸ್ಟಾಲ್‍ನನ್ನು ಇನ್ನೂ ವಿಸ್ತರಿಸಬೇಕು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

  • ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು

    ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು

    ಚಂಡೀಗಢ: ಪಂಜಾಬ್‍ನಲ್ಲಿ ಕಾಂಗ್ರೆಸ್ ಸೋಲುವುದು ಬಹುತೇಕ ಖಚಿತವಾಗಿದ್ದು ಈ ಮಧ್ಯೆ ಅಮೃತಸರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿದ್ದು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಆಪ್‍ನಿಂದ ಸರ್ಧಿಸಿದ್ದ ಜೀವನ್ ಜ್ಯೋತ್ ಕೌರ್ ಮುನ್ನಡೆಯಲ್ಲಿದ್ದರೆ, ಶಿರೋಮಣಿ ಅಕಾಲಿ ದಳದ ಬಿಕ್ರಾಂ ಸಿಂಗ್ ಎರಡನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

    ಫೆಬ್ರವರಿ 20 ರಂದು ಮತದಾನಕ್ಕೆ ಕೆಲವು ದಿನಗಳ ಮೊದಲು ಪಂಜಾಬ್‍ನ ಮೊದಲ ದಲಿತ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿತ್ತು. ಚನ್ನಿ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಕ್ಕೆ ಸಿಧು ಅಸಮಾಧಾನಗೊಂಡಿದ್ದರು.

    ಬೆಳಗ್ಗೆ 11 ಗಂಟೆಯ ಟ್ರೆಂಡ್ ಪ್ರಕಾರ ಆಪ್ 89, ಕಾಂಗ್ರೆಸ್ 13, ಶಿರೋಮಣಿ ಅಖಾಲಿ ದಳ 13, ಬಿಜೆಪಿ 5, ಇತರರು 1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಇದನ್ನೂ ಓದಿ : ದೂರದರ್ಶನದಲ್ಲಿ ಸಿಗ್ತಾರೆ ದಿಯಾ ಹೀರೋ

    ಒಟ್ಟು 117 ಸ್ಥಾನಗಳ ಪೈಕಿ ಬಹುಮತಕ್ಕೆ 59 ಅಗತ್ಯವಿದೆ. 2017ರ ಫಲಿತಾಂಶದಲ್ಲಿ ಕಾಂಗ್ರೆಸ್ 77, ಆಪ್ 20, ಎಸ್‍ಎಡಿ+ ಬಿಜೆಪಿ 18, ಇತರರು 02 ಸ್ಥಾನವನ್ನು ಗೆದ್ದಿದ್ದರು.

  • ಚರಣ್‍ಜಿತ್ ಚನ್ನಿ, ನವಜೋತ್ ಸಿಧು ನಿಷ್ಪ್ರಯೋಜಕರು: ಅಮರಿಂದರ್ ಸಿಂಗ್

    ಚರಣ್‍ಜಿತ್ ಚನ್ನಿ, ನವಜೋತ್ ಸಿಧು ನಿಷ್ಪ್ರಯೋಜಕರು: ಅಮರಿಂದರ್ ಸಿಂಗ್

    ಚಂಡೀಗಢ: ಪಂಜಾಬ್ ಲೋಕ ಕಾಂಗ್ರೆಸ್ ವರಿಷ್ಠ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭಾನುವಾರ ಫೆಬ್ರವರಿ 20 ತಮ್ಮ ಮಾಜಿ ಸಹೋದ್ಯೋಗಿಗಳಾದ ನವಜೋತ್ ಸಿಂಗ್ ಸಿಧು ಮತ್ತು ಚರಂಜಿತ್ ಸಿಂಗ್ ಚನ್ನಿ ಅವರನ್ನು ದೂರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಹೇಳಿದ್ದಾರೆ.

    ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಟಿಯಾಲದಿಂದ ಸ್ಪರ್ಧಿಸಿರುವ ಪಂಜಾಬ್ ಮಾಜಿ ಸಿಎಂ, ತಮ್ಮ ತವರು ನೆಲದಿಂದ ಗೆಲ್ಲುವ ವಿಶ್ವಾಸವಿದೆ. ನಾನು ಪಟಿಯಾಲದಲ್ಲಿ ಗೆಲ್ಲುವುದು ಖಚಿತವಾಗಿದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಅಂತ ನಾನು ಭಾವಿಸುತ್ತೇನೆ. ಕಾಂಗ್ರೆಸ್ ಬೇರೆ ಜಗತ್ತಿನಲ್ಲಿ ವಾಸಿಸುತ್ತಿದ್ದು, ರಾಜ್ಯದಲ್ಲಿ ಅದು ನಾಶವಾಗುತ್ತದೆ ಎಂದರು. ಇದನ್ನೂ ಓದಿ:  ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು

    117 ಸದಸ್ಯ ಬಲದ ಅಸೆಂಬ್ಲಿಯಲ್ಲಿ ತಮ್ಮ ಹಿಂದಿನ ಪಕ್ಷವು ಕೇವಲ 20-30 ಸ್ಥಾನಗಳನ್ನು ಗಳಿಸಲಿದೆ. ತಮ್ಮ ವಿರುದ್ಧ ನಡೆಯುತ್ತಿರುವ ಪಂಜಾಬ್‍ನಲ್ಲಿ ನಾನು ಏನು ಸಾಧಿಸಬಲ್ಲೆ ಎಂಬುದರ ಬಗ್ಗೆ ಕೈ ಪಕ್ಷ ಚಿಂತೆಗೀಡಾಗಿದೆ. ಕಾಂಗ್ರೆಸ್ 20-30ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಅಂತ ನಾನು ಊಹಿಸಬಲ್ಲೆ ಎಂದು ಭವಿಷ್ಯ ನುಡಿದಿದ್ದಾರೆ.

    ಚರಣ್‍ಜಿತ್ ಚನ್ನಿ ಎಂದರೇನು? 3 ತಿಂಗಳಲ್ಲಿ ಪಂಜಾಬ್‍ನಲ್ಲಿ ಪವಾಡ ಮಾಡಬಲ್ಲ ಜಾದೂಗಾರನಾ. ಚುನಾವಣೆಗೆ ಮುನ್ನ ಅವರನ್ನು ಹೀರೋ ಮಾಡಲು ಪ್ರಯತ್ನಿಸುವ ಎಲ್ಲಾ ಕ್ರೆಡಿಟ್‍ಗಳನ್ನು ನೀಡುವುದು. ಇಬ್ಬರೂ ರಾಜ್ಯದಲ್ಲಿ ನಿಷ್ಟ್ರಯೋಜಕರು ಅಂತ ನಾನು ಭಾವಿಸುತ್ತೇನೆ ಎಂದು ಸಿಧು ಮತ್ತು ಹಾಲಿ ಪಂಜಾಬ್ ಸಿಎಂ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ

    ರಾಜ್ಯದಲ್ಲಿ ಈಗಾಗಲೇ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಪಂಜಾಬ್‍ನಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 34 ರಷ್ಟು ಮತದಾನವಾಗಿದೆ. ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ, ನವಜೋತ್ ಸಿಧು, ಸುಖಬೀರ್ ಬಾದಲ್, ಭಗವಂತ್ ಮಾನ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.

  • ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ

    ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಸೋನು ಸೂದ್ ಕಾರು ಜಪ್ತಿ

    ಚಂಡೀಗಢ: ಮತಗಟ್ಟೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಾಲಿವುಡ್ ನಟ ಸೋನು ಸೂದ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

    ಪಂಜಾಬ್‍ನ ಮೋಗಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಅವರನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಅವರು ಮತಗಟ್ಟೆಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಅವರ ಕಾರನ್ನು ಜಪ್ತಿ ಮಾಡಲಾಗಿದೆ. ಚುನಾವಣಾ ವೀಕ್ಷಕರ ನಿರ್ದೇಶನದ ಮೇರೆಗೆ ಅವರ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಮೊಗಾ ಜಿಲ್ಲೆಯ ಪಿಆರ್‍ಒ ಪ್ರದ್ಭದೀಪ್ ಸಿಂಗ್ ಪ್ರಕಾರ, ಸೋನು ಸೂದ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರ ಕಾರನ್ನು ಜಪ್ತಿ ಮಾಡಿ ಅವರನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ. ಮನೆಯಿಂದ ಹೊರಗೆ ಕಾಲಿಟ್ಟರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳು, ವಿಶೇಷವಾಗಿ ಅಕಾಲಿದಳದ ಜನರು ವಿವಿಧ ಬೂತ್‍ಗಳಲ್ಲಿ ಬೆದರಿಕೆ ಕರೆಗಳ ಬಗ್ಗೆ ನನಗೆ ತಿಳಿದಿತ್ತು. ಕೆಲವು ಬೂತ್‍ಗಳಲ್ಲಿ ಹಣ ಹಂಚಲಾಗುತ್ತಿದೆ. ಆದ್ದರಿಂದ ಪರಿಶೀಲಿಸಿ ನ್ಯಾಯಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿಯೇ ನಾವು ಹೊರಗೆ ಹೋಗಿದ್ದೆವು. ಈಗ ನಾನು ಮನೆಯಲ್ಲಿದ್ದೇನೆ. ನ್ಯಾಯಯುತ ಚುನಾವಣೆ ನಡೆಯಬೇಕು ಎಂದರು.

    ಚುನಾವಣೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಳವಿಕಾ ಸೂದ್, ಈ ಹಿಂದೆ ಪಂಜಾಬ್‍ನ ಮೋಗಾ ಕ್ಷೇತ್ರದಿಂದ ಕಾಂಗ್ರೆಸ್ ವತಿಯಿಂದ ಸ್ಪರ್ಧಿಸುತ್ತಿರುವುದಾಗಿ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಭರವಸೆ ಹೊಂದಿದ್ದೇನೆ ಅಂತ ಹೇಳಿದ್ದರು. ನಾನು ಇಂದು ಸಕಾರಾತ್ಮಕ ಭಾವನೆ ಹೊಂದಿದ್ದೇನೆ. ವಿದೇಶದಿಂದ ಬಂದವರು ಸೇರಿದಂತೆ ಬಹಳಷ್ಟು ಜನರು ಕರೆ ಮಾಡುತ್ತಿದ್ದಾರೆ. ನನ್ನ ಬೆಂಬಲಕ್ಕಾಗಿ ಹುರಿದುಂಬಿಸುತ್ತಿದ್ದಾರೆ. ಅವರಲ್ಲಿ ಹಲವರು ಇಂದು ನನಗೆ ಮತ ಹಾಕುವಂತೆ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ನಾನು ಜನರ ಕಲ್ಯಾಣಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾವು ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇವೆ. ಬೇರೆ ಯಾವುದೇ ಅಭ್ಯರ್ಥಿಗಳು ಇಷ್ಟು ಸಾಮಾಜಿಕ ಕೆಲಸ ಮಾಡಿದ್ದಾರೆ ಅಂತ ನಾನು ಭಾವಿಸುವುದಿಲ್ಲ ಎಂದರು.

    ಈ ವರ್ಷದ ಜನವರಿ 10 ರಂದು ನಟ ಸೋನು ಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಪಂಜಾಬ್‍ನ ಮೊಗಾದಲ್ಲಿ ಕಾಂಗ್ರೆಸ್‍ಗೆ ಸೇರಿದರು. ರಾಜ್ಯದ 2.14 ಕೋಟಿ ಮತದಾರರು ಭಾನುವಾರ 117 ಕ್ಷೇತ್ರಗಳಿಂದ ಕಣದಲ್ಲಿರುವ 1304 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದೆ.

    ರಾಜ್ಯದ 117 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಪಂಜಾಬ್ ಈ ಬಾರಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಶಿರೋಮಣಿ ಅಕಾಲಿದಳ-ಬಹುಜನ ಸಮಾಜ ಪಕ್ಷದ ಮೈತ್ರಿ, ಮತ್ತು ಭಾರತೀಯ ಜನತಾ ಪಾರ್ಟಿ-ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷದ ಒಕ್ಕೂಟದೊಂದಿಗೆ ಸ್ಪರ್ಧೆಗೆ ಸಾಕ್ಷಿಯಾಗಿದೆ.

  • ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox Copy: ಮೋದಿ ವ್ಯಂಗ್ಯ

    ಆಮ್ ಆದ್ಮಿ, ಕಾಂಗ್ರೆಸ್ ಪಕ್ಷದ Xerox Copy: ಮೋದಿ ವ್ಯಂಗ್ಯ

    ಚಂಡೀಗಢ: ಪಂಜಾಬ್ ಚುನಾವಣೆ ಅಖಾಡಕ್ಕೆ ಇಳಿದಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಇಂದು ಫಾಜಿಲ್ಕಾ ಜಿಲ್ಲೆಯ ಅಬೋಹರ್ ನಗರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಮ್ ಆದ್ಮಿ ಪಕ್ಷವೂ ಕಾಂಗ್ರೆಸ್‍ನ ಜೆರಾಕ್ಸ್ ಕಾಪಿ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಭ್ರಷ್ಟಾಚಾರದ ಪಾಲುದಾರರು. ಒಬ್ಬರು ಪಂಜಾಬ್ ಲೂಟಿ ಮಾಡುತ್ತಿದ್ದರೇ ಮತ್ತೊಬ್ಬರು ದೆಹಲಿಯಲ್ಲಿ ಲೂಟಿ ಆರಂಭಿಸಿದ್ದಾರೆ ಎಂದು ಕುಟುಕಿದ್ದಾರೆ.

    ಈ ಎರಡು ಪಕ್ಷಗಳು ಪ್ರಸ್ತುತ ಪಂಜಾಬ್ ನಲ್ಲಿ WWF ಆಡುತ್ತಿವೆ ಎಂದು ವ್ಯಂಗ್ಯ ಮಾಡಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಪ್ರಶ್ನೆ ಮಾಡುತ್ತಿವೆ. ರಾಮನನ್ನು ವಿರೋಧಿಸುತ್ತವೆ. ಮತ್ತೊಂದು ಕಡೆ ನಮ್ಮ ಸೈನಿಕರ ಶೌರ್ಯವನ್ನು ಪ್ರಶ್ನೆ ಮಾಡುತ್ತವೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ವಿಭಜಕ ಮನಸ್ಥಿತಿಯ ಜನರನ್ನು ಪಂಜಾಬ್‍ನಲ್ಲಿ ಆಳಲು ಬಿಡಬೇಡಿ: ಮೋದಿ

    ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹ: ಆ.5ರಂದು 'ಆಪ್' ನಾಯಕರಿಂದ ಉಪವಾಸ ಸತ್ಯಾಗ್ರಹ- Kannada Prabha

    ಪಂಜಾಬ್‍ಗೆ ಈಗ ಅಭಿವೃದ್ಧಿಗೆ ಪೂರಕವಾದ ಮತ್ತು ದೇಶಭಕ್ತಿಯ ಸರ್ಕಾರದ ಅವಶ್ಯಕತೆ ಇದೆ. ಹೀಗಾಗಿ ಹೊಸ ಅಭಿವೃದ್ಧಿಯ ಸಂಕಲ್ಪದೊಂದಿಗೆ ಬಿಜೆಪಿ ಬಂದಿದ್ದು, ಮತ ನೀಡುವ ಮೂಲಕ ಬೆಂಬಲಿಸಬೇಕು ಎಂದು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

  • ರಾಹುಲ್ ಗಾಂಧಿ ಮುಖಕ್ಕೆ ಧ್ವಜವನ್ನು ಎಸೆದ ವ್ಯಕ್ತಿ

    ರಾಹುಲ್ ಗಾಂಧಿ ಮುಖಕ್ಕೆ ಧ್ವಜವನ್ನು ಎಸೆದ ವ್ಯಕ್ತಿ

    ಚಂಡೀಗಢ: ವ್ಯಕ್ತಿಯೊಬ್ಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಖಕ್ಕೆ ಕಾಂಗ್ರೆಸ್ ಪಕ್ಷದ ಧ್ವಜವನ್ನು ಎಸೆದ ಘಟನೆ ಇಂದು ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

    ಭದ್ರತಾ ಲೋಪದಲ್ಲಿ ಅವರ ಮುಖಕ್ಕೆ ಧ್ವಜ ಹಾಕಲಾಗಿದೆ. ರಾಹುಲ್ ಗಾಂಧಿ ಕುಳಿತಿದ್ದ ಕಾರನ್ನು ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಸುನಿಲ್ ಜಾಖರ್ ಓಡಿಸುತ್ತಿದ್ದರು. ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಮತ್ತು ಪಕ್ಷದ ರಾಜ್ಯ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಕಾರಿನ ಹಿಂದಿನ ಸೀಟುಗಳಲ್ಲಿ ಕುಳಿತಿದ್ದರು. ಇದನ್ನೂ ಓದಿ: ಚುನಾವಣೆಗೆ ತಯಾರಿ – ಮಂಗಳಮುಖಿಯರ ಮೊರೆ ಹೋದ ನಾರಾ ಭರತ್ ರೆಡ್ಡಿ

    ರಾಹುಲ್ ಗಾಂಧಿ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದು ತಮ್ಮ ಪಕ್ಷದ ಬೆಂಬಲಿಗರನ್ನು ಸ್ವಾಗತಿಸಲು ಅವರ ಕಿಟಕಿ ತೆರೆದಿತ್ತು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನು ರಾಹುಲ್ ಅವರ ಕಿಟಕಿಯ ಮೇಲೆ ಬಹಳ ದೂರದಿಂದ ಧ್ವಜವನ್ನು ಎಸೆದಿದ್ದಾನೆ. ಇದನ್ನೂ ಓದಿ: ಸಿಎಂ ತವರು ಜಿಲ್ಲೆಗೂ ಕಾಲಿಟ್ಟ ಹಿಜಬ್, ಕೇಸರಿ ಶಾಲು ಫೈಟ್ – ವಿದ್ಯಾರ್ಥಿಗಳನ್ನ ಹೊರಹಾಕಿದ ಕಾಲೇಜು ಸಿಬ್ಬಂದಿ

    ಪಂಜಾಬ್‍ನಲ್ಲಿ ಇದು ಎರಡನೇ ಭದ್ರತಾ ಲೋಪವಾಗಿದೆ. ಕೆಲವು ದಿನಗಳ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಅವರ ಕಾರು 20 ನಿಮಿಷಗಳ ಕಾಲ ಫ್ಲೈಓವರ್‍ನಲ್ಲಿ ಸಿಲುಕಿಕೊಂಡಿತ್ತು.

  • 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

    40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ- ಸಿಧು ಜೊತೆಗಿನ ಮೊದಲ ಭೇಟಿ ನೆನೆದ ರಾಗಾ

    ಚಂಡೀಗಢ: 40 ವರ್ಷಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ. ಅವರು ನನ್ನ ಶಾಲೆಯಲ್ಲಿ ಕ್ರಿಕೆಟ್ ಆಡಲು ಬಂದಿದ್ದರು ಎಂದು ನವಜೋತ್ ಸಿಂಗ್ ಸಿಧು ಜೊತೆಗಿನ ತಮ್ಮ ಹಳೆಯ ದಿನಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಚ್ಚಿಟ್ಟರು.

    ಸಾಕಷ್ಟು ಸಸ್ಪೆನ್ಸ್ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಂಜಾಬ್‍ನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಚರಂಜಿತ್ ಸಿಂಗ್ ಚನ್ನಿ ಅವರನ್ನು ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ದೆಹಲಿ ನಾಯಕರು ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಂಜಿತ್ ಚನ್ನಿ

    ಸಿಎಂ ಅಭ್ಯರ್ಥಿಯ ಹೆಸರನ್ನು ಘೋಷಿಸುವ ಮೊದಲು ರಾಹುಲ್ ಗಾಂಧಿ ಅವರು, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡರು. ಸಿಧು ಅವರು ಸಹ ಪಕ್ಷದ ಸಿಎಂ ಆಭ್ಯರ್ಥಿಗಳ ಸ್ಪರ್ಧೆಯಲ್ಲಿ ಮುಂದಿದ್ದರು ಎಂದು ವಿವರಿಸಿದರು.

    ಸಿಧು ಕುರಿತು ಮಾತನಾಡಿದ ಅವರು, ನಾನು ನವಜೋತ್ ಸಿಂಗ್ ಸಿಧು ಅವರನ್ನು 40 ವರ್ಷಗಳ ಹಿಂದೆ ಭೇಟಿಯಾಗಿದ್ದೆ. ಆದರೆ ಅವರಿಗೆ ನಾನೇ ರಾಹುಲ್ ಗಾಂಧಿ ಎಂದು ಗೊತ್ತಿರಲಿಲ್ಲ. ಅವರು ನಮ್ಮ ಶಾಲೆಗೆ ಕ್ರಿಕೆಟ್ ಪಂದ್ಯ ಆಡಲು ಬರುತ್ತಿದ್ದರು ಎಂದು ನೆನಪಿಸಿಕೊಂಡರು.

    17 ವರ್ಷಗಳ ರಾಜಕೀಯ ಜೀವನದಲ್ಲಿ, ಸಿಧು ಯಾವುದೇ ಹುದ್ದೆಗಾಗಿ ಬದುಕಲಿಲ್ಲ. ಆದರೆ ಯಾವಾಗಲೂ ಅವರು ಪಂಜಾಬ್‍ನ ಸುಧಾರಣೆ ಮತ್ತು ಜನರ ಜೀವನದಲ್ಲಿ ಸುಧಾರಣೆಯನ್ನು ಬಯಸಿದ್ದರು ಎಂದು ಪ್ರಶಂಸಿದರು.

    ಲೂಧಿಯಾನ ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಧು, ಈ ಹಿಂದೆ ತಾನು ಯಾವುದೇ ಹುದ್ದೆಗಾಗಿ ಬದುಕಿಲ್ಲ. ಚನ್ನಿಯನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡುವ ನಿರ್ಧಾರವನ್ನು ನಾನು ಶ್ಲಾಘಿಸುತ್ತೇನೆ ಎಂದರು.

    ರಾಹುಲ್ ನಾಯಕತ್ವ ಶ್ಲಾಘಿಸಿದ ಸಿಧು!
    ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು, ಕಳೆದ ವರ್ಷ ದಲಿತರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಅವರೇ ಎಂದು ತಿಳಿಸಿದರು. ಇದು ಬದಲಾವಣೆಯ ಕ್ಷಣವಾಗಿದೆ. ಇದು ಜನರ ಜೀವನವನ್ನು ಉತ್ತಮಗೊಳಿಸುತ್ತದೆ ಎಂದು ವಿವರಿಸಿದರು.

    ನಮಗೆ ಏನೂ ಅಗತ್ಯವಿಲ್ಲ, ನಮಗೆ ಪಂಜಾಬ್‍ನ ಕಲ್ಯಾಣ ಮಾತ್ರ ಬೇಕು. ಪಂಜಾಬ್‍ನ ಮೇಲಿನ ನನ್ನ ಪ್ರೀತಿ ಯಾವಾಗಲೂ ಅದರ ಸುಧಾರಣೆಯನ್ನು ಬಯಸುತ್ತದೆ. ಫೆ.14 ರಂದು ಪಂಜಾಬ್ ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದಕ್ಕೆ ನೀವು ಸಹಕರಿಸಬೇಕು ಎಂದು ಜನರಿಗೆ ಮನವಿ ಮಾಡಿಕೊಂಡರು. ಇದನ್ನೂ ಓದಿ:  ‘ಚುನವಿ ಹಿಂದೂ’ – ‘ಗಂಗಾ ಆರತಿ’ ಪೂಜೆಗೈದ ರಾಗಾ ವಿರುದ್ಧ ಬಿಜೆಪಿ ವ್ಯಂಗ್ಯ

    2017 ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 77 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತವನ್ನು ಗಳಿಸಿತ್ತು. 10 ವರ್ಷಗಳ ಅಧಿಕಾರದ ನಂತರ ಎಸ್‍ಎಡಿ-ಬಿಜೆಪಿ ಸರ್ಕಾರವನ್ನು ಹೊರಹಾಕಿತು ಎಂದು ತಿಳಿಸಿದರು.

  • ಅಕ್ರಮ ಮರಳುಗಾರಿಕೆಯಲ್ಲಿ ಸೋದರಳಿಯ ಬಂಧನಕ್ಕೆ ಪಂಜಾಬ್ ಸಿಎಂ ಪ್ರತಿಕ್ರಿಯೆ

    ಅಕ್ರಮ ಮರಳುಗಾರಿಕೆಯಲ್ಲಿ ಸೋದರಳಿಯ ಬಂಧನಕ್ಕೆ ಪಂಜಾಬ್ ಸಿಎಂ ಪ್ರತಿಕ್ರಿಯೆ

    ಚಂಡೀಗಢ: ಅಕ್ರಮ ಮರಳುಗಾರಿಕೆಯಲ್ಲಿ ತನ್ನ ಸೋದರಳಿಯನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿರುವ ಕುರಿತು ಪಂಜಾಬ್ ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಕಾನೂನು ತನ್ನ ಕೆಲಸವನ್ನು ಮಾಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

    ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲೇ, ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ತಮ್ಮ ಸೋದರಳಿಯ ಭೂಪೇಂದ್ರ ಸಿಂಗ್ ಹನಿ ಅವರನ್ನು ಬಂಧಿಸಿರುವ ಕುರಿತು ಪ್ರತಿಕ್ರಿಯಿಸಿದ್ದಾರೆ. ಕಾನೂನು ತನ್ನ ಕೆಲಸವನ್ನು ಮಾಡಿದೆ. ಅದಕ್ಕೆ ನಾವು ಯಾವುದೇ ಆಕ್ಷೇಪಣೆ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಹೈಕೋರ್ಟ್ ತೀರ್ಪಿನ ನಂತರ ಕ್ರಮ: ಬಿಸಿ ನಾಗೇಶ್

    ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಚನ್ನಿ ಅವರ ಸೋದರಳಿಯನ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇದೊಂದು ರಾಜಕೀಯ ಒತ್ತಡ ಸೃಷ್ಟಿಸಲು ಅವರನ್ನು ಬಂಧಿಸಲಾಗಿದೆ ಎಂದು ಕಿಡಿಕಾರಿದ್ದಾರೆ.

    ಬಂಧನದ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಲೋಕ ಕಾಂಗ್ರೆಸ್ ಸಂಸ್ಥಾಪಕ ಕ್ಯಾಪ್ಟನ್ ಅಮರೀಂದರ್ ಸಿಂಗ್, ತನಿಖಾ ಸಂಸ್ಥೆ ತನ್ನ ಕೆಲಸವನ್ನು ಮಾಡಿದೆ. ಇದಕ್ಕೆ ರಾಜಕೀಯ ಪಕ್ಷವನ್ನು ಏಕೆ ದೂಷಿಸಬೇಕು ಎಂದು ಪ್ರಶ್ನಿಸಿದ್ದಾರೆ.

    ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಭೂಪೇಂದ್ರ ಸಿಂಗ್ ಹನಿ ಅವರನ್ನು ಇ.ಡಿ. ವಿಚಾರಣೆಗೆ ಒಳಪಡಿಸಿತ್ತು. ನಂತರ ಜಾರಿ ನಿರ್ದೇಶನಾಲಯ ಗುರುವಾರ ತಡರಾತ್ರಿ ಬಂಧಿಸಿದೆ. ಮನಿ ಲ್ಯಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‍ಎ)ಯ ನಿಬಂಧನೆಗಳ ಅಡಿಯಲ್ಲಿ ಅವರನ್ನು ಜಲಂಧರ್‍ನಿಂದ ಬಂಧಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

    ಪಂಜಾಬ್‍ನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಕಳೆದ ತಿಂಗಳು ಭೋಪೇಂದ್ರ ಸಿಂಗ್ ಹನಿ ಅವರ ನಿವಾಸ ಹಾಗೂ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ 8 ಕೋಟಿ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಆಸ್ತಿ ವಹಿವಾಟಿಗೆ ಸಂಬಂಧಿಸಿದ ದಾಖಲೆಗಳು, ಮೊಬೈಲ್ ಫೋನ್‍ಗಳು, 21 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನ ಮತ್ತು 12 ಲಕ್ಷ ಮೌಲ್ಯದ ರೋಲೆಕ್ಸ್ ವಾಚ್ ವಶಪಡಿಸಿಕೊಳ್ಳಲಾಗಿದೆ.