Tag: chandigarh

  • ಮದುವೆಯಾಗುವುದಾಗಿ ನಂಬಿಸಿ ಅಮಲು ಪದಾರ್ಥ ನೀಡಿ ರೇಪ್‍ಗೈದ

    ಚಂಡೀಗಢ: ಮಹಿಳೆಯೊಬ್ಬರಿಗೆ ಮರು ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಅತ್ಯಾಚಾರವೆಸಗಿದ ಘಟನೆ ದಾಬ್ರಾ ಚೌಕ್ ಬಳಿಯ ಹೋಟೆಲ್‍ನಲ್ಲಿ ನಡೆದಿದೆ.

    ಮಹಿಳೆಯ ಮಾಜಿ ಪತಿ ತಮ್ಮ ಮೇಲೆ ಕುಡಿದ ಅಮಲಿನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಅರ್ಬನ್ ಎಸ್ಟೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

    ಮಹಿಳೆಯು ದಾಬ್ರಾ ಚೌಕ್‍ನ ಸಲೂನ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತೆ ತಮ್ಮ ದೂರಿನಲ್ಲಿ ತಾನು 2019 ರಲ್ಲಿ ಅವನನ್ನು ವಿವಾಹವಾಗಿದ್ದೆ ಎಂದು ತಿಳಿಸಿದ್ದಾರೆ. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯ ಪತಿ ಮತ್ತು ಅತ್ತೆ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು. ನಂತರ ಅವರು ಕೌಟುಂಬಿಕ ದೌರ್ಜನ್ಯದ ಪ್ರಕರಣವನ್ನು ಕೂಡಾ ದಾಖಲಿಸಿದ್ದಾರೆ. ನಂತರ ಇಬ್ಬರ ನಡುವಿನ ರಾಜಿ ನಂತರ ಹಿಂಪಡೆಯಲಾಯಿತು. ಆದಾಗ್ಯೂ, ದಂಪತಿ ಆಗಸ್ಟ್ 2021ರಲ್ಲಿ ವಿಚ್ಛೇದನ ಪಡೆದಿದ್ದರು.

    ನಂತರ ತನ್ನ ಮಾಜಿ ಪತಿ ತನ್ನಲ್ಲಿ ಕ್ಷಮೆಯಾಚಿಸಿದ್ದಾನೆ ಮತ್ತು ಸೆಪ್ಟೆಂಬರ್ 2021ರಲ್ಲಿ ತನಗೆ ಉಂಗುರವನ್ನು ಮರು ನೀಡಿದ್ದು, ಅವನು ತನ್ನನ್ನು ಮರುಮದುವೆ ಮಾಡಿಕೊಳ್ಳಲು ಬಯಸಿದ್ದನು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಈಶ್ವರಪ್ಪ ವಜಾಗೊಳಿಸಿ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಿ: ಪ್ರಿಯಾಂಕ್ ಖರ್ಗೆ

    ಫೆಬ್ರವರಿ 9 ರಂದು ಆರೋಪಿಯು ನನ್ನನ್ನು ದಾಬ್ರಾ ಚೌಕ್ ಬಳಿಯ ಹೋಟೆಲ್‍ಗೆ ಕರೆಸಿಕೊಂಡು ತಂಪು ಪಾನೀಯವನ್ನು ಮತ್ತು ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ. ನಂತರ ಮರುಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಈ ವೇಳೆ ನಾನು ಈ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಅವರ ಆಕ್ಷೇಪಾರ್ಹ ವೀಡಿಯೋ ಮತ್ತು ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ

    ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಠಾಣೆ ಪ್ರಭಾರಿ ಸುಖಜಿತ್ ತಿಳಿಸಿದ್ದಾರೆ.

  • ರಾಜಧಾನಿ ಚಂಡೀಗಢಕ್ಕಾಗಿ ಪಂಜಾಬ್‌, ಹರ್ಯಾಣ ಮಧ್ಯೆ ಗುದ್ದಾಟ

    ರಾಜಧಾನಿ ಚಂಡೀಗಢಕ್ಕಾಗಿ ಪಂಜಾಬ್‌, ಹರ್ಯಾಣ ಮಧ್ಯೆ ಗುದ್ದಾಟ

    ಚಂಡೀಗಢ: ರಾಜಧಾನಿ ಚಂಡೀಗಢ ವಿಚಾರವಾಗಿ ಈಗ ಹರ್ಯಾಣ ಮತ್ತು ಪಂಜಾಬ್‌ ಮಧ್ಯೆ ಗುದ್ದಾಟ ಆರಂಭವಾಗಿದೆ.

    ಚಂಡೀಗಢವನ್ನು ಪಂಜಾಬ್‌ಗೆ ಹಸ್ತಾಂತರಿಸಬೇಕು ಎಂದು ನೂತನ ಆಪ್‌ ಸರ್ಕಾರ ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಿದ ಬೆನ್ನಲ್ಲೇ ಹರ್ಯಾಣ ಈಗ ಏ.5 ರಂದು ವಿಶೇಷ ಅಧಿವೇಶನವನ್ನು ಕರೆದಿದೆ.

    ಪಂಜಾಬ್‌ ಸರ್ಕಾರದ ನಡೆಯನ್ನು ಖಂಡಿಸಿದ ಹರ್ಯಾಣ ಸಿಎಂ ಮನೋಹರ್‌ ಲಾಲ್‌  ಖಟ್ಟರ್‌, ಆಪ್‌ ರಾಷ್ಟ್ರೀಯ ಸಂಚಾಲಕರಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಹರ್ಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು. ಪಂಜಾಬ್‌ನಲ್ಲಿ ಆಪ್ಎ‌ ನೇತೃತ್ವದ ಸರ್ಕಾರವು ಮೊದಲು ಸಟ್ಲೇಜ್‌ -ಯಮುನಾ ಲಿಂಕ್ (ಎಸ್‌ವೈಎಲ್) ಕಾಲುವೆಯನ್ನು ನಿರ್ಮಿಸಬೇಕು ಎಂದಿದ್ದಾರೆ. ಇದನ್ನೂ ಓದಿ : ನಾನು ಯಾರ ಕಾಲಿಗೂ ಬಿದ್ದು, ಕೃಪೆ ತೋರಿ ಅಂತ ಕೇಳಿಕೊಂಡಿಲ್ಲ: ಎಂ.ಕೆ.ಸ್ಟಾಲಿನ್

    ಅಷ್ಟೇ ಅಲ್ಲದೇ ಚಂಡೀಗಢವು ಹರ್ಯಾಣ ಮತ್ತು ಪಂಜಾಬ್‌ನ ರಾಜಧಾನಿಯಾಗಿ ಉಳಿಯುತ್ತದೆ ಮತ್ತು ಪಂಜಾಬ್‌ನ ಹಿಂದಿ ಮಾತನಾಡುವ ಪ್ರದೇಶಗಳನ್ನು ಹರ್ಯಾಣಕ್ಕೆ ವರ್ಗಾಯಿಸಬೇಕು ಎಂದು ಹೇಳಿದ್ದಾರೆ.

    ಈಗ ಮುನ್ನೆಲೆಗೆ ಯಾಕೆ?
    ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢದಲ್ಲಿ ಇನ್ನು ಮುಂದೆ ಪಂಜಾಬ್‌ ಕಾನೂನುಗಳ ಬದಲಿಗೆ ಕೇಂದ್ರೀಯ ಸೇವಾ ಕಾಯ್ದೆ (ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿರುವ ಕಾನೂನು)ಯ ನಿಯಮಗಳನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಕಳೆದ ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಪ್ರಕಟಿಸಿದ್ದರು. ಇದನ್ನೂ ಓದಿ: ಸೌದಿ ಮಿನಿಸ್ಟರ್ ಜೊತೆ ಔತಣ ಸವಿದ ಶಾರೂಖ್, ಸಲ್ಮಾನ್, ಅಕ್ಷಯ್ – ಅಸಲಿ ಕಾರಣವೇನು?

    ಅಮಿತ್‌ ಶಾ ಹೇಳಿಕೆಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಮತ್ತು ವಿತ್ತ ಸಚಿವ ಹರ್ಪಾಲ್‌ ಸಿಂಗ್‌ ಸೇರಿದಂತೆ ಎಎಪಿ, ಕಾಂಗ್ರೆಸ್‌ ಮತ್ತು ಶಿರೋಮಣಿ ಅಕಾಲಿದಳಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

    ಈ ನಿರ್ಧಾರ ಪಂಜಾಬ್‌ ಮರುಸಂಘಟನೆ ಕಾಯ್ದೆಗೆ ವಿರುದ್ಧವಾಗಿದೆ. ಚಂಡೀಗಢದ ಮೇಲೆ ಪಂಜಾಬಿಗೆ ಇರುವ ಹಕ್ಕುಗಳನ್ನು ಕಸಿದುಕೊಳ್ಳಲು ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಮುಖ್ಯಮಂತ್ರಿ ಮಾನ್‌ ಕಿಡಿಕಾರಿ ವಿಧಾನಸಭೆಯಲ್ಲಿ ಗೊತ್ತುವಳಿ ಮಂಡಿಸಿ ಮಂಡಿಸಿ ಕೇಂದ್ರವನ್ನು ಆಗ್ರಹಿಸಿದ್ದರು.

  • ಕೇಜ್ರಿವಾಲ್, ಭಗವಂತ್ ಮಾನ್ ಹರಿಯಾಣದ ಜನತೆಗೆ ಕ್ಷಮೆಯಾಚಿಸಬೇಕು : ಮನೋಹರ್ ಲಾಲ್ ಖಟ್ಟರ್

    ಕೇಜ್ರಿವಾಲ್, ಭಗವಂತ್ ಮಾನ್ ಹರಿಯಾಣದ ಜನತೆಗೆ ಕ್ಷಮೆಯಾಚಿಸಬೇಕು : ಮನೋಹರ್ ಲಾಲ್ ಖಟ್ಟರ್

    ಚಂಡೀಗಢ: ಪಂಜಾಬ್‍ಗೆ ಚಂಡೀಗಢವನ್ನು ವರ್ಗಾಯಿಸುವ ನಿರ್ಣಯದ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಅಸಮಾಧಾನ ಹೊರಹಾಕಿದ್ದಾರೆ.

    ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹರಿಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್‍ಗೆ ಚಂಡೀಗಢವನ್ನು ವರ್ಗಾಯಿಸುತ್ತಿರುವುದು ಖಂಡನೀಯ ಮತ್ತು ಅವರು ಹೀಗೆ ಮಾಡಬಾರದಿತ್ತು. ಚಂಡೀಗಢವು ಹರಿಯಾಣ ಮತ್ತು ಪಂಜಾಬ್‍ನ ರಾಜಧಾನಿಯಾಗಿದೆ. ಹೀಗಾಗಿ ಕೇಜ್ರಿವಾಲ್ ಇದನ್ನು ಖಂಡಿಸಬೇಕು ಮತ್ತು ಹರಿಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು. ಜೊತೆಗೆ ಭಗವಂತ್ ಮಾನ್ ಅವರು ಕೂಡ ಕ್ಷಮೆ ಕೇಳಬೇಕು ಎಂದು ತಿಳಿಸಿದ್ದಾರೆ.

    ಪಂಜಾಬ್‍ನಲ್ಲಿ ಎಎಪಿ ನೇತೃತ್ವದ ಸರ್ಕಾರವು ಮೊದಲು ಸಟ್ಲೆಜ್ ಯಮುನಾ ಲಿಂಕ್ ಕಾಲುವೆ ಸಮಸ್ಯೆಯನ್ನು ಪರಿಹರಿಸುವ ಕುರಿತು ಸುಪ್ರೀಂ ಕೋರ್ಟ್‍ಗೆ ಹೋಗಬೇಕು. ಹಿಂದಿ ಮಾತನಾಡುವ ಪ್ರದೇಶಗಳನ್ನು ಹರಿಯಾಣಕ್ಕೆ ನೀಡಲಿಲ್ಲ, ಇದು ಉಳಿದ ಸಮಸ್ಯೆಗಳನ್ನು ವಿಳಂಬಗೊಳಿಸಿತು. ಹರಿಯಾಣಕ್ಕೆ ಹಿಂದಿ ಭಾಷಿಕ ಪ್ರದೇಶಗಳನ್ನು ನೀಡಲು ಸಿದ್ಧ ಅಂತ ಹೇಳಬೇಕು ಎಂದು ಖಟ್ಟರ್ ಹೇಳಿದ್ದಾರೆ. ಇದನ್ನೂ ಓದಿ: 13ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

    ಪಂಜಾಬ್ ಸರ್ಕಾರ ಬಚ್ಚಾ ಪಕ್ಷ. ಅವರಿಗೆ ಸಮಸ್ಯೆಗಳ ಸಂಪೂರ್ಣ ಜ್ಞಾನವಿಲ್ಲ. ಚಂಡೀಗಢ ಮಾತ್ರ ಸಮಸ್ಯೆಯಲ್ಲ. ಅದಕ್ಕೆ ಸಂಬಂಧಿಸಿದ ಇತರ ಹಲವು ಸಮಸ್ಯೆಗಳಿವೆ. ಹಿಂದಿ ಮಾತನಾಡುವ ಪ್ರದೇಶಗಳ ಸಮಸ್ಯೆಗಳಿವೆ. ಅವರು ಅದರ ಬಗ್ಗೆ ಏನನ್ನೂ ಹೇಳಲಿಲ್ಲ. ಅದು ಸಂಭವಿಸಿದಾಗಲೆಲ್ಲಾ ಒಂದೇ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಹರಿಯಾಣ ಸಚಿವ ಮಿನ್ ಅನಿಲ್ ವಿಜ್ ಕಿಡಿ ಕಾರಿದ್ದಾರೆ.

    ಶುಕ್ರವಾರ ಚಂಡೀಗಢವನ್ನು ಕೇಂದ್ರ ಸೇವಾ ನಿಯಮಗಳಿಗೆ ಒಳಪಡಿಸುವ ಕೇಂದ್ರದ ನಿರ್ಧಾರದ ವಿರುದ್ಧ ಪಂಜಾಬ್ ಸಿಎಂ ಭಗವಂತ್ ಮಾನ್ ಪಂಜಾಬ್ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದರು. ಚಂಡೀಗಢವನ್ನು ಪಂಜಾಬ್‍ಗೆ ವರ್ಗಾಯಿಸಲು ಮಾನ್ ಕೇಂದ್ರ ಸರ್ಕಾರಕ್ಕೆ ಪ್ರಸ್ತಾಪ ಮುಂದಿಟ್ಟಿದ್ದರು. ಕೇಂದ್ರಾಡಳಿತ ಪ್ರದೇಶ ಮತ್ತು ಇತರ ಸಾಮಾನ್ಯ ಆಸ್ತಿಗಳ ಸಮತೋಲನವನ್ನು ಹಾಳುಮಾಡಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

     

  • ಚಂಡೀಗಢವು ಜಂಟಿ ರಾಜಧಾನಿಯಾಗಿಯೇ ಉಳಿಯುತ್ತೆ: ಹರಿಯಾಣ ಸಿಎಂ

    ಚಂಡೀಗಢವು ಜಂಟಿ ರಾಜಧಾನಿಯಾಗಿಯೇ ಉಳಿಯುತ್ತೆ: ಹರಿಯಾಣ ಸಿಎಂ

    ಚಂಡೀಗಢ: ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ಜಂಟಿ ರಾಜಧಾನಿಯಾಗಿಯೇ ಚಂಡೀಗಢ ಉಳಿಯುತ್ತದೆ ಎಂದಯ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿ ಉಳಿಯುತ್ತದೆ. ಎರಡೂ ರಾಜ್ಯಗಳು ಚಂಡೀಗಢದ ವಿಷಯವನ್ನು ಹೊರತುಪಡಿಸಿ ಚರ್ಚಿಸಲು ಹಲವಾರು ವಿಷಯಗಳನ್ನು ಹೊಂದಿವೆ ಎಂದರು.

    ಕೇಂದ್ರಾಡಳಿತ ಪ್ರದೇಶದ ನೌಕರರಿಗೆ ಕೇಂದ್ರ ಸೇವಾ ನಿಯಮಗಳನ್ನು ಅನ್ವಯಿಸುವಂತೆ ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ ಅವರು, ಪಂಜಾಬ್ ಸರ್ಕಾರವು ಈ ವಿಷಯದ ಬಗ್ಗೆ ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಚಂಡೀಗಢವನ್ನು ಪಂಜಾಬ್‌ಗೆ ವರ್ಗಾಯಿಸಿ: ಪಂಜಾಬ್ ಸಿಎಂ ನಿರ್ಣಯ ಮಂಡನೆ

    ಈ ಹಿಂದೆ, ಚಂಡೀಗಢದ ನೌಕರರು ಕೇಂದ್ರ ಸರ್ಕಾರದ ಪ್ರತಿಯೊಂದು ಆದೇಶಕ್ಕೂ ಪಂಜಾಬ್ ಸರ್ಕಾರವನ್ನು ಅವಲಂಬಿಸಬೇಕಾಗಿತ್ತು. ಅದಕ್ಕಾಗಿ ಕೇಂದ್ರವು ನೌಕರರ ಬೇಡಿಕೆಗಳು ಮತ್ತು ಹಿತಾಸಕ್ತಿಗಳನ್ನು ಪರಿಗಣಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪಂಜಾಬ್ ಸರ್ಕಾರವು ಈ ವಿಷಯದಲ್ಲಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ, ಈ ಕ್ರಮವು ನೌಕರರಿಗೆ ಅತ್ಯಂತ ಪ್ರಯೋಜನವನ್ನು ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಅಪೌಷ್ಠಿಕತೆ, ಮಧುಮೇಹ ಖಾಯಿಲೆಯಿಂದ ಬಳಲುವವರಿಗೆ ಕ್ಷಯರೋಗದ ಸಾಧ್ಯತೆ ಹೆಚ್ಚು: ಡಾ. ಮಹೇಶ್ ಎಂ.ಜಿ

    ಶುಕ್ರವಾರ ಪಂಜಾಬ್‍ನಲ್ಲಿ ಚಂಡೀಗಢವು ಪಂಜಾಬ್ ಮತ್ತು ಹರಿಯಾಣದ ಜಂಟಿ ರಾಜಧಾನಿಯಾಗಿದೆ. ಚಂಡೀಗಢದ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಸೇವಾ ನಿಯಮಗಳು ಅನ್ವಯಿಸುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಘೋಷಣೆಯಿಂದ ರಾಜಕೀಯ ಗದ್ದಲದ ನಡುವೆ ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗಿತ್ತು.

    ಈ ಅಧಿವೇಶನದಲ್ಲಿ ಚಂಡೀಗಢವನ್ನು ತಕ್ಷಣವೇ ಪಂಜಾಬ್‍ಗೆ ವರ್ಗಾಯಿಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ನಿರ್ಣಯ ಮಂಡಿಸಿದ್ದಾರೆ. ಜೊತೆಗೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಒಕ್ಕೂಟ ವ್ಯವಸ್ಥೆಯ ತತ್ವಗಳನ್ನು ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ

  • ಹೆತ್ತ ಮಗನನ್ನೇ ಕೊಂದ ತಾಯಿ – ಬಿಕ್ಕಿ ಬಿಕ್ಕಿ ಅತ್ತ ತಂದೆ

    ಹೆತ್ತ ಮಗನನ್ನೇ ಕೊಂದ ತಾಯಿ – ಬಿಕ್ಕಿ ಬಿಕ್ಕಿ ಅತ್ತ ತಂದೆ

    ಚಂಡೀಗಢ: ಕಠೋರ ತಾಯಿಯೊಬ್ಬಳು ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹರ್ಯಾಣದ ಯಮುನಾ ನಗರದ ಜಯಧಾರಿ ಗ್ರಾಮದಲ್ಲಿ ನಡೆದಿದೆ.

    ಕನ್ಹಯ್ಯಾ (6) ತಾಯಿಯಿಂದ ಕೊಲೆಗಿಡಾದ ಬಾಲಕ. ವರದಿಯ ಪ್ರಕಾರ ಬಾಲಕನ ತಂದೆ ಜಯಧಾರಿ ಗ್ರಾಮದ ನಿವಾಸಿ ಧರಂವೀರ್ ಅವರು ಕೆಲಸಕ್ಕೆ ಹೋಗಿದ್ದಾಗ ತಾಯಿ ಕೃತ್ಯ ಎಸಗಿದ್ದಾಳೆ. ಇದನ್ನೂ ಓದಿ: ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ – ಆರೋಪಿ ಅರೆಸ್ಟ್

    ಈ ವೇಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವನು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ವಿಷಯ ತಿಳಿದ ಅಸಹಾಯಕ ತಂದೆ ಆಸ್ಪತ್ರೆಯ ಹೊರಗೆ ಅಳಲು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕನಿಂದ ಲೈಂಗಿಕ ಕಿರುಕುಳ – ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

    ಅಮಾಯಕ ಬಾಲಕನನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬಾಲಕನ ದೇಹದ ಮೇಲೆ ಕತ್ತು ಹಿಸುಕಿದ ಗುರುತುಗಳು ಪತ್ತೆಯಾಗಿವೆ. ಇನ್ನೂ ತಾಯಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ತನಿಖಾಧಿಕಾರಿ ಸಂದೀಪ್ ಹೇಳಿದ್ದಾರೆ.

    ಧರಂವೀರ್ ಕಷ್ಟಪಟ್ಟು ದುಡಿದು ತನ್ನ ಕುಟುಂಬವನ್ನು ಪೋಷಿಸುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಮೃತಪಟ್ಟ ಬಾಲಕ ಆಕೆಯ ಕಿರಿಯ ಮಗನಾಗಿದ್ದನು.

  • ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ವಿಲ್ ಫೈಟ್: ಭಗವಂತ್ ಮಾನ್

    ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ವಿಲ್ ಫೈಟ್: ಭಗವಂತ್ ಮಾನ್

    ಚಂಡೀಗಢ: ಆಡಳಿತದ ನೌಕರರಿಗೆ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಚಂಡೀಗಢದಲ್ಲಿ ವಿಸ್ತರಿಸುವ ನಿರ್ಧಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಘೋಷಿಸಿದ್ದರು. ಈ ಹಿನ್ನೆಲೆ ಪಂಜಾಬ್ ಸಿಎಂ ಭಗವಂತ್ ಮಾನ್, ಚಂಡೀಗಢದ ಮೇಲಿನ ಹಕ್ಕಿಗಾಗಿ ಪಂಜಾಬ್ ಬಲವಾಗಿ ಹೋರಾಡಲಿದೆ ಎಂದು ಆಕ್ರೋಶ ಹೊರಹಾಕಿದರು.

    ಅಮಿತ್ ಶಾ ಅವರ ಹೇಳಿಕೆ ಕುರಿತು ಭಗವಂತ್ ಮಾನ್ ಅವರು ಸೋಮವಾರ(ಇಂದು) ಟ್ವಿಟ್ಟರ್‍ನಲ್ಲಿ, ಚಂಡೀಗಢದ ಆಡಳಿತಕ್ಕೆ ಇತರ ರಾಜ್ಯಗಳು ಮತ್ತು ಸೇವೆಗಳಿಂದ ಅಧಿಕಾರಿಗಳನ್ನು ಕರೆತರುವ ಮೂಲಕ ಪಂಜಾಬ್ ಮರುಸಂಘಟನೆ ಕಾಯಿದೆ 1966 ಅನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ: SSLC ಪರೀಕ್ಷೆಗೆ ಹಿಜಬ್ ಧರಿಸಿ ಬಂದ ವಿದ್ಯಾರ್ಥಿನಿಯರು – ಪರೀಕ್ಷಾ ಸಿಬ್ಬಂದಿಯಿಂದ ಮನವೊಲಿಕೆ

    ಕೇಂದ್ರ ಸರ್ಕಾರವು ಚಂಡೀಗಢದ ಆಡಳಿತದಲ್ಲಿ ಇತರ ರಾಜ್ಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹಂತಹಂತವಾಗಿ ಹೇರುತ್ತಿದೆ. ಇದು ಪಂಜಾಬ್ ಮರುಸಂಘಟನೆ ಕಾಯಿದೆ 1966ರ ಪತ್ರ ಮತ್ತು ಸ್ಪೂರ್ತಿಗೆ ವಿರುದ್ಧವಾಗಿದೆ. ಪಂಜಾಬ್ ಚಂಡೀಗಢದ ಮೇಲಿನ ತನ್ನ ಹಕ್ಕಿಗಾಗಿ ಬಲವಾಗಿ ಹೋರಾಡುತ್ತದೆ ಎಂದು ಬರೆದು ಟ್ವೀಟ್ ಮಾಡಿದರು.

    ಅಮಿತ್ ಶಾ ಅವರು ಭಾನುವಾರ, ಇಂದು, ಮೋದಿ ಸರ್ಕಾರವು ಒಂದು ದೊಡ್ಡ ನಿರ್ಧಾರವನ್ನು ಮಾಡಿದೆ. ನಾಳೆ ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗುವುದು. ಮುಂಬರುವ ಬಜೆಟ್‍ನಲ್ಲಿ(ಏಪ್ರಿಲ್ 1) ನೀವು ಪ್ರಯೋಜನವನ್ನು ಪಡೆಯುತ್ತೀರಿ. ಇದು ಚಂಡೀಗಢದ ದೀರ್ಘಕಾಲದ ಬೇಡಿಕೆಯಾಗಿದೆ. ಆಡಳಿತದ ನೌಕರರಿಗೆ ಕೇಂದ್ರ ಸರ್ಕಾರದ ಸವಲತ್ತುಗಳನ್ನು ಚಂಡೀಗಢದಲ್ಲಿ ವಿಸ್ತರಿಸುವ ನಿರ್ಧಾರವನ್ನು ಮಾಡಿದೆ ಎಂದು ಉಲ್ಲೇಖಿಸಿದ್ದರು.

    ಅಮಿತ್ ಶಾ ಅವರ ಈ ಹೇಳಿಕೆಯು ಪಂಜಾಬ್‍ನ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ವಿರೋಧ ಪಕ್ಷಗಳಾದ ಅಕಾಲಿದಳ ಮತ್ತು ಕಾಂಗ್ರೆಸ್‍ಗೆ ತೀವ್ರ ತರಾಟೆಗೆ ತೆಗೆದುಕೊಂಡಿದೆ. ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಹಿರಿಯ ಎಎಪಿ ನಾಯಕ ಮತ್ತು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಎಎಪಿಯ ಉದಯದ ಬಗ್ಗೆ ಬಿಜೆಪಿ ಹೆದರಿದೆ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: SSLC ಪರೀಕ್ಷೆಗೆ ಬರೆಯಲು ಬಂದ 6 ನಕಲಿ ವಿದ್ಯಾರ್ಥಿಗಳು ಪೋಲಿಸರ ವಶ

  • ಇನ್ಮುಂದೆ ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ: ಪಂಜಾಬ್ ಸಿಎಂ

    ಇನ್ಮುಂದೆ ಮಾಜಿ ಶಾಸಕರಿಗೆ ಒಂದು ಅವಧಿಗೆ ಮಾತ್ರ ಪಿಂಚಣಿ: ಪಂಜಾಬ್ ಸಿಎಂ

    ಚಂಡೀಗಢ: ಪಂಜಾಬ್ ಮಾಜಿ ಶಾಸಕರು 2 ಬಾರಿ, 5 ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಅವರು ಸಲ್ಲಿಸಿದ್ದ ಸೇವೆಗೆ ಪ್ರತಿ ಅವಧಿಗೂ ಪಿಂಚಣಿ ಪಡೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಿಳಿಸಿದ್ದಾರೆ.

    Bhagwant Mann

    ಶುಕ್ರವಾರ ವೀಡಿಯೋ ಸಂದೇಶವೊಂದರಲ್ಲಿ ಮಾತನಾಡಿರುವ ಅವರು, ಈ ಹಿಂದೆ ಶಾಸಕರಾಗಿದ್ದ ಹಲವಾರು ಸಂಸದರು ಸಹ ಪಿಂಚಣಿ ಪಡೆಯುತ್ತಿದ್ದಾರೆ. ಆದರೆ ಇನ್ನು ಮುಂದೆ ಅವರ ಪಿಂಚಣಿಯನ್ನು ಒಂದು ಅವಧಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ. ಇದರಿಂದ ಉಳಿತಾಯವಾಗುವ ಹಣವನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಭಗತ್ ಸಿಂಗ್ ಪುಣ್ಯಸ್ಮರಣೆಯಂದು ಪಂಜಾಬ್‌ನಲ್ಲಿ ಸಾರ್ವಜನಿಕ ರಜೆ

    `ನಮ್ಮ ರಾಜಕೀಯ ನಾಯಕ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೈಮುಗಿದು ಮತ ಪಡೆದು ಗೆಲ್ಲುತ್ತಾರೆ. ಆದರೆ 3-4 ಬಾರಿ ಗೆದ್ದ ನಂತರವೂ ಹಲವು ಹಲವು ಶಾಸಕರು ಮುಂದಿನ ಚುನಾವಣೆಯಲ್ಲಿ ಸೋತರು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡುತ್ತಿದೆ ಭಗವಂತ್ ಮಾನ್ ಹೇಳಿದ್ದಾರೆ.

    Bhagwant Mann

    ಚುನಾವಣೆಯಲ್ಲಿ ಸೋತರೂ ಕೆಲವರು 3.50 ರಿಂದ 5 ಲಕ್ಷ ರೂ. ವರೆಗೂ ಪಿಂಚಣಿ ಪಡೆಯುತ್ತಿದ್ದಾರೆ. ಲಾಲ್‌ಸಿಂಗ್, ಸರ್ವಾನ್‌ಸಿಂಗ್ ಫಿಲೌ ಹಾಗೂ ರಾಜಿಂದರ್ ಕೌರ್ ಭಟ್ಟಾಲ್ ತಿಂಗಳಿಗೆ 3.55 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ರವಿಂದರ್ ಸಿಂಗ್, ಬೈಲ್ವಿಂದರ್ ಸಿಂಗ್ 2.75 ಲಕ್ಷ ಹಾಗೂ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ 5 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆರ್ಥಿಕ ಹೊರೆಯಾಗುತ್ತಿದೆ ಎಂದು ಆತಂಕಪಟ್ಟಿದ್ದಾರೆ.  ಇದನ್ನೂ ಓದಿ: ಉಡ್ತಾ ಪಂಜಾಬ್‌ ಅಲ್ಲ, ಪ್ರಗತಿಪರ ಪಂಜಾಬ್‌: ಭಗವಂತ್‌ ಮಾನ್‌

    ಒಂದು ಅವಧಿಗೆ ಮಾತ್ರ ಶಾಸಕರಾಗಿ ಆಯ್ಕೆಯಾದರೂ ಕೂಡ ಅವರಿಗೆ ಜೀವನಪರ್ಯಂತ ಪಿಂಚಣಿ ಹಣ ನೀಡಲಾಗುತ್ತದೆ. ಆದರೆ ಪಂಜಾಬ್‌ನ ಭಗವಂತ್ ಮಾನ್ ಸರ್ಕಾರಲ್ಲಿ ಈ ಯೋಜನೆಗೆ ಕಡಿವಾಣ ಹಾಕಲು ಮುಂದಾಗಿದೆ. ಇನ್ಮುಂದೆ ಶಾಸಕರು ಎಷ್ಟು ಬಾರಿ ಗೆದ್ದರೂ ಒಂದೇ ಅವಧಿಗೆ ಪಿಂಚಣಿ ಪಡೆಯಲಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.

  • ಕಿರಿಯ ಸಚಿವರಾಗಿ ಭಗವಂತ್ ಸಂಪುಟ ಸೇರಿದ ವಕೀಲ

    ಕಿರಿಯ ಸಚಿವರಾಗಿ ಭಗವಂತ್ ಸಂಪುಟ ಸೇರಿದ ವಕೀಲ

    ಚಂಡೀಗಢ: ಪಂಜಾಬ್‍ನಲ್ಲಿ ನೂತನವಾಗಿ ರಚನೆಯಾಗಿರುವ ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಇಬ್ಬರು ವಕೀಲರು ಸ್ಥಾನಗಳಿಸಿದ್ದಾರೆ.

    ಸಿಎಂ ಭಗವಂತ್ ಮಾನ್ ಅವರ ಸಚಿವ ಸಂಪುಟಕ್ಕೆ ಹರ್‍ಪಲ್ ಸಿಂಗ್ ಚೀಮಾ ಹಾಗೂ ಹರ್‍ಜೋತ್ ಸಿಂಗ್ ಬೇನ್ಸ್ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ:  ಉಪ್ಪಿ ಕಂಠಸಿರಿಯಲ್ಲಿ ‘ಹುಷಾರ್’ ಹಾಡು

     

    ಈ ಇಬ್ಬರೂ ಪಂಜಾಬ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದವರಾಗಿದ್ದಾರೆ. 31 ವರ್ಷದ ಹರ್‍ಜೋತ್ ಅವರು ಮಾನ್ ಸಂಪುಟದ ಅತಿ ಕಿರಿಯ ವಯಸ್ಸಿನ ಸಚಿವರು ಮಾತ್ರವಲ್ಲ ಇಡೀ ದೇಶದಲ್ಲೇ ಅತಿ ಚಿಕ್ಕ ವಯಸ್ಸಿನ ಸಚಿವರಾಗಿದ್ದಾರೆ. ಹರ್‍ಪಲ್ ಅವರು ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.

    ಹರ್‍ಪಲ್ ಸಿಂಗ್ ಚೀಮಾ 2017ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಜೊತೆಗೆ 2017-19ರ ಅವಧಿಯಲ್ಲಿ ಪಂಜಾಬ್‍ನ ಪ.ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮಿತಿಯಲ್ಲಿ ಸೇವೆ ಸಲ್ಲಿಸಿದ್ದರು. ಹರ್‍ಜೋತ್ ಸಿಂಗ್ ಬೇನ್ಸ್ ಪಂಜಾಬ್ ಆಮ್‍ಆದ್ಮಿ ಘಟಕದ ಮುಖ್ಯ ವಕ್ತಾರರಾಗಿದ್ದರು. 2017ರಲ್ಲಿ ಸಹ್ನೆವಾಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇದನ್ನೂ ಓದಿ: ‘ದಿ ಕಾಶ್ಮೀರ್‌ ಫೈಲ್ಸ್’ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸಹಾಯ ಮಾಡುವುದಿಲ್ಲ: ಸಂಜಯ್ ರಾವತ್

    ಸದ್ಯ ಇಬ್ಬರೂ ನೂತನ ಮುಖ್ಯಮಂತ್ರಿಯಾಗಿರುವ ಭಗವಂತ್ ಮಾನ್ ಅವರ ಸಚಿವ ಸಂಪುಟ ಸೇರಿದ್ದಾರೆ. ಸಂಪುಟದಲ್ಲಿ ಸ್ಥಾನ ನೀಡಿದ್ದಕ್ಕೆ ಚೀಮಾ ಮತ್ತು ಬೇನ್ಸ್ ಸಿಎಂ ಗೆ ಅಭಿನಂದನೆ ಸಲ್ಲಿಸಿದ್ದಾರೆ.

  • ಪಂಜಾಬ್‌ನಲ್ಲಿ  ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಪಂಜಾಬ್‌ನಲ್ಲಿ ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಚಂಡಿಗಢ: ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರ ಕ್ಯಾಬಿನೆಟ್ ಕೂಡಾ ರಚನೆಯಾಗಿದ್ದು, ಇಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

    ದಿರ್ಬಾದಿಂದ ಎರಡನೇ ಬಾರಿಗೆ ಶಾಸಕರಾಗಿರುವ ವಿರೋಧ ಪಕ್ಷದ ಮಾಜಿ ನಾಯಕ ಹರ್ಪಾಲ್ ಸಿಂಗ್ ಚೀಮಾ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಸಮಾರಂಭ ಪ್ರಾರಂಭವಾಯಿತು. ಬರ್ನಾಲಾದಿಂದ ಎರಡನೇ ಬಾರಿಗೆ ಗೆದ್ದ ಗುರ್ಮೀತ್ ಸಿಂಗ್ ಮೀತ್ ಹಯರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು‌. ಇದನ್ನೂ ಓದಿ: ಸೋಮವಾರ ಬೆಳಗ್ಗೆ 9.30ಕ್ಕೆ ಮೃತದೇಹ ಮನೆಗೆ ಬರಲಿದೆ: ನವೀನ್ ತಂದೆ

    ಮಾಲೌಟ್‌ನಿಂದ ಆಯ್ಕೆಯಾಗಿದ್ದ ಡಾ ಬಲ್ಜಿತ್ ಕೌರ್, ಜಂಡಿಯಾಲಾದ ಶಾಸಕ ಹರ್ಭಜನ್ ಸಿಂಗ್ ಇಟಿಒ, ಮಾನ್ಸಾದಿಂದ ಚುನಾಯಿತರಾದ ಡಾ ವಿಜಯ್ ಸಿಂಗ್ಲಾ, ಭೋವಾದಿಂದ ಆಯ್ಕೆಯಾದ ಲಾಲ್ ಚಂದ್ ಕಟಾರು ಚಾಕ್, ಅಜ್ನಾಲಾ ಶಾಸಕ ಕುಲದೀಪ್ ಸಿಂಗ್ ಧಲಿವಾಲ್, ಪಟ್ಟಿ ಶಾಸಕ ಲಾಲ್ಜಿತ್ ಸಿಂಗ್ ಭುಲ್ಲಾರ್, ಬ್ರಾಮ್ ಶಂಕರ್ (ಜಿಂಪಾ), ಆನಂದಪುರ ಸಾಹಿಬ್‌ ಶಾಸಕ ಹೊಶಿಯಾರ್‌ಪುರ್ ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಮೊದಲ ಬಾರಿ ಆಯ್ಕೆಯಾಗಿ ಸಚಿವರಾದ ಶಾಸಕರಾಗಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ 1ವರ್ಷದ ಬಳಿಕ ಒಂದೇ ದಿನ ಇಬ್ಬರು ಸೋಂಕಿಗೆ ಬಲಿ

    ಮಹಿಳೆ ಸೇರಿದಂತೆ ನಾಲ್ವರು ಜಾಟ್, ನಾಲ್ವರು ಎಸ್ಸಿಗಳು ಮತ್ತು ಇಬ್ಬರು ಹಿಂದೂಗಳು ಕ್ಯಾಬಿನೆಟ್ ನಲ್ಲಿ‌ ಒಳಗೊಂಡಿದ್ದಾರೆ. ಎಲ್ಲ ಶಾಸಕರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂದೂ ದೇಗುಲದ ಮೇಲೆ ದಾಳಿ

  • ರಾಜ್ಯಸಭಾ ಚುನಾವಣೆಗೆ ಎಎಪಿ ಅಭ್ಯರ್ಥಿಯಾಗಲಿದ್ದಾರಾ ಹರ್ಭಜನ್ ಸಿಂಗ್?

    ರಾಜ್ಯಸಭಾ ಚುನಾವಣೆಗೆ ಎಎಪಿ ಅಭ್ಯರ್ಥಿಯಾಗಲಿದ್ದಾರಾ ಹರ್ಭಜನ್ ಸಿಂಗ್?

    ಚಂಡೀಗಢ: ಭಾರತದ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಅವರು ಈ ವರ್ಷ ರಾಜ್ಯಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ ಪಂಜಾಬ್ ಅಭ್ಯರ್ಥಿಯಾಗಿ ಕಾಣಕ್ಕೆ ಇಳಿಯುವ ಸಾಧ್ಯತೆಯಿದೆ.

    ಈ ತಿಂಗಳ ಅಂತ್ಯದ ವೇಳೆಗೆ ಆಮ್ ಆದ್ಮಿ ಪಕ್ಷವು ರಾಜ್ಯಸಭೆಯಲ್ಲಿ ಐದು ಸ್ಥಾನಗಳನ್ನು ಪಡೆಯಲಿದೆ. ಈ ವೇಳೆ ಆಪ್‌ ಹರ್ಭಜನ್‌ ಸಿಂಗ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಿದೆ ಎಂಬ ಸುದ್ದಿ ಪ್ರಕಟವಾಗಿದೆ. ಈ ವಿಚಾರವಾಗಿ ಹರ್ಭಜನ್‌ ಇನ್ನೂ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಪಂಜಾಬ್ ರಾಜ್ಯ ಸರ್ಕಾರವು ರಾಜ್ಯದ ಉದ್ದೇಶಿತ ಕ್ರೀಡಾ ವಿಶ್ವವಿದ್ಯಾಲಯದ ಮುಖ್ಯಸ್ಥರನ್ನಾಗಿ ಹರ್ಭಜನ್ ಸಿಂಗ್ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಅಬ್ಬಬ್ಬಾ..! 60 ಕೋಟಿ ಬಾಚಿದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ : ಬಾಕ್ಸ್ ಆಫೀಸ್ ಚಿಂದಿ ಚಿತ್ರಾನ್ನ

    ಫೆಬ್ರವರಿಯಲ್ಲಿ ನಡೆದ ಪಂಜಾಬ್ ಚುನಾವಣೆಗೂ ಮುನ್ನ ಹರ್ಭಜನ್ ಸಿಂಗ್ ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿದ್ದವು. ಬಿಜೆಪಿಯ ಹಿರಿಯ ನಾಯಕರೊಬ್ಬರು ನಾವು ಹರ್ಭಜನ್ ಮತ್ತು ಭಾರತದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದರು. ಆದರೆ ಈ ಎಲ್ಲಾ ವದಂತಿಗಳಿಗೆ ಹರ್ಭಜನ್ ಸಿಂಗ್ ಅವರು ತೆರೆ ಎಳೆದಿದ್ದರು.

    ನಂತರ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರೊಂದಿಗಿರುವ ಫೋಟೋವನ್ನು ಹರ್ಭಜನ್ ಸಿಂಗ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಹೀಗಾಗಿ ಮತ್ತೆ ಹರ್ಭಜನ್ ಸಿಂಗ್ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಲು ಆರಂಭವಾಯಿತು. ಇದನ್ನೂ ಓದಿ: 2023ರಲ್ಲಿ ಬರಲಿದೆ ಭಾರತದ ಮೊದಲ RRTS ರೈಲು