Tag: chandigarh

  • 142 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಾಂಶುಪಾಲ ಅರೆಸ್ಟ್

    142 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಾಂಶುಪಾಲ ಅರೆಸ್ಟ್

    ಚಂಡೀಗಢ: ಬರೋಬ್ಬರಿ 142 ಮಂದಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಾಂಶುಪಾಲರನ್ನು ಬಂಧಿಸಲಾಗಿದೆ.

    ಈ ಘಟನೆ ಹರಿಯಾಣದ (Hariyana) ಜಿಂದ್ ಜಿಲ್ಲೆಯ ಸರ್ಕಾರಿ ಶಾಲೆಯ ಪ್ರಿನ್ಸಿಪಲ್ ಮೇಲೆ ಈ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಇದೀಗ ಪ್ರಾಂಶುಪಾಲರನ್ನು ಬಂಧಿಸಲಾಗಿದೆ. ಆರಂಭದಲ್ಲಿ 60 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ (Sexual Harassment) ಆರೋಪ ಹೊರಿಸಿದ್ದರು. ಆದರೆ ಇದೀಗ ಅದರ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.

    ಆರೋಪವೇನು..?: 55 ವರ್ಷದ ಪ್ರಾಂಶುಪಾಲರು ಮೊದಲು ನಮ್ಮನ್ನು ಆಫೀಸಿಗೆ ಕರೆಯುತ್ತಾರೆ. ಬಳಿಕ ತಮ್ಮ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಾರೆ ಎಂದು ಸಂತ್ರಸ್ತೆಯರು ದೂರಿರುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ದೇಶದಲ್ಲಿ ‘ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌’ ಆಯೋಜನೆ: ಅನುರಾಗ್‌ ಠಾಕೂರ್‌

    ಹರಿಯಾಣ ಪೊಲೀಸರು ನವೆಂಬರ್ 6 ರಂದು ಪ್ರಾಂಶುಪಾಲರನ್ನು ಬಂಧಿಸಿದ್ದಾರೆ. ಹರಿಯಾಣ ರಾಜ್ಯ ಮಹಿಳಾ ಆಯೋಗವು ಪೊಲೀಸರಿಗೆ ಅಲ್ಟಿಮೇಟಮ್ ನಂತರ ಬಂಧನ ನಡೆದಿದೆ. ಜಿಂದ್ ಜಿಲ್ಲಾಧಿಕಾರಿ ಪ್ರಕರಣವನ್ನು ಖಚಿತಪಡಿಸಿದ್ದಾರೆ. ಈ ಕುರಿತು ವಿವಿಧ ಇಲಾಖೆಗಳಿಂದ ತನಿಖೆ ನಡೆಯುತ್ತಿದೆ.

    ಶಾಲೆಯ ಕೆಲವು ವಿದ್ಯಾರ್ಥಿನಿಯರಿಂದ ಪ್ರಾಥಮಿಕ ದೂರನ್ನು ಹರಿಯಾಣ ರಾಜ್ಯ ಮಹಿಳಾ ಆಯೋಗವು ಸೆಪ್ಟೆಂಬರ್ 14 ರಂದು ಪೊಲೀಸರಿಗೆ ರವಾನಿಸಿತು ಆದರೆ ಅಕ್ಟೋಬರ್ 30 ರಂದು ಮಾತ್ರ ಕ್ರಮ ತೆಗೆದುಕೊಳ್ಳಲಾಯಿತು. ನಂತರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಲಾಗಿತ್ತು. ಶಿಕ್ಷಣ ಇಲಾಖೆ ಆರೋಪಿಯನ್ನು ಅಕ್ಟೋಬರ್ 27 ರಂದು ಅಮಾನತುಗೊಳಿಸಿದೆ.

  • ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಕೊಟ್ಟ ಶಾಸಕನಿಗೆ ಮಹಿಳೆಯಿಂದ ಕಪಾಳಮೋಕ್ಷ

    ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿಕೊಟ್ಟ ಶಾಸಕನಿಗೆ ಮಹಿಳೆಯಿಂದ ಕಪಾಳಮೋಕ್ಷ

    ಚಂಡೀಗಢ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದ ಜನನಾಯಕ್ ಜನತಾ ಪಕ್ಷದ ಶಾಸಕ ಈಶ್ವರ್ ಸಿಂಗ್ ಅವರಿಗೆ ಮಹಿಳೆಯೊಬ್ಬಳು ಕಪಾಳಮೋಕ್ಷ ಮಾಡಿರುವ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ.

    ಮಳೆಯಿಂದ (Rain) ಪ್ರವಾಹ ಉಂಟಾಗಿದ್ದ ಕೈತಾಲ್‍ನ ಗುಹ್ಲಾ ಪ್ರದೇಶಕ್ಕೆ ಶಾಸಕರು ತೆರಳಿದ್ದರು. ಈ ವೇಳೆ ಕಳಪೆ ಒಳಚರಂಡಿ ವ್ಯವಸ್ಥೆಯಿಂದಾಗಿ ಈ ಪ್ರವಾಹ ಸೃಷ್ಟಿಯಾಗಿದೆ. ಅಲ್ಲದೇ ಶಾಸಕರ ಭೇಟಿ ತಡವಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ. ಅಲ್ಲದೇ ಭದ್ರತಾ ಸಿಬ್ಬಂದಿಯನ್ನು ಹಾಗೂ ಶಾಸಕರನ್ನು (MLA) ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೊದಲ್ಲಿ ಮಹಿಳೆ ಮತ್ತು ಸ್ಥಳೀಯರು ನೀವು ಈಗ ಏಕೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈ ಬಾರಿಯೂ ದುಬಾರಿ ವಿದ್ಯುತ್‌ ಬಿಲ್‌ – ಹೆಸ್ಕಾಂ ಕಳ್ಳಾಟ ಬಿಚ್ಚಿಟ್ಟ ಪಬ್ಲಿಕ್‌ ಟಿವಿ

    ಇದಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ, ಮಹಿಳೆಯನ್ನು ಕ್ಷಮಿಸಿದ್ದೇನೆ. ಮಹಿಳೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಹರಿಯಾಣದಲ್ಲಿ ನಿರಂತರ ಮಳೆಯಿಂದ ಉಂಟಾಗಿರುವ ಪ್ರವಾಹದಿಂದಾಗಿ 10 ಜನರು ಸಾವನ್ನಪ್ಪಿದ್ದಾರೆ. ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ. ಆದರೆ ಸಾವು ನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್ ತಿಳಿಸಿದ್ದಾರೆ.

    ರಾಜ್ಯದಲ್ಲಿ ಮಳೆ ಪೀಡಿತ ಪ್ರದೇಶಗಳಲ್ಲಿ ಖಟ್ಟರ್ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಕಳೆದ ನಾಲ್ಕು ದಿನಗಳಿಂದ ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‍ನಲ್ಲಿ ನಿರಂತರ ಮಳೆಯ ಪರಿಣಾಮ ಹರಿಯಾಣದಲ್ಲಿನ ಪ್ರವಾಹಕ್ಕೆ ಕಾರಣವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಕೊಡುವ ಅಕ್ಕಿಯಲ್ಲೂ ಕಡಿತ; ಅನ್ನಭಾಗ್ಯವಲ್ಲ ಇದು ಕನ್ನ ಭಾಗ್ಯ – ಬೊಮ್ಮಾಯಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 7ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್ – ನಾಲ್ವರು ಅಪ್ರಾಪ್ತರು ಅರೆಸ್ಟ್

    ಚಂಡೀಗಢ: 11 ವರ್ಷದ ಬಾಲಕಿಯ ಮೇಲೆ ನಾಲ್ವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿದ (Gang Rape) ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ.

    ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಅತ್ಯಾಚಾರಗೈದ ನಾಲ್ವರು ಅಪ್ರಾಪ್ತ ಆರೋಪಿಗಳಲ್ಲಿ ಓರ್ವ ಆಕೆಯ ಸಹಪಾಠಿಯಾಗಿದ್ದು, ಉಳಿದ ಮೂವರು ಸರ್ಕಾರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ. ಅತ್ಯಾಚಾರಗೈದ ಅಪ್ರಾಪ್ತ ಆರೋಪಿಗಳು ಕಳೆದ 6 ತಿಂಗಳಿನಿಂದ ಸಂತ್ರಸ್ತೆಗೆ ಬೆದರಿಕೆ (Black Mail) ಹಾಕುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಮರಿಗೆ ಉರುಳಿದ ಕ್ರೂಸರ್- 7 ಮಂದಿ ದುರ್ಮರಣ, ಓರ್ವನಿಗೆ ಗಾಯ

    ಈ ಘಟನೆ 15 ದಿನಗಳ ಹಿಂದೆ ನಡೆದಿದ್ದು, ಆಕೆಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಲಾಗಿದೆಯೇ ಎಂದು ತಿಳಿದು ಬಂದಿಲ್ಲ. ನಾಲ್ವರು ಅಪ್ರಾಪ್ತರು ತನ್ನ ಮಗಳ ಮೇಲೆ ಶಾಲೆಯ ಆವರಣದ ಪೊದೆಯ ಹಿಂದೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದ್ದಾರೆ. ಅಲ್ಲದೇ ಅಪ್ರಾಪ್ತರು ಬಾಲಕಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಪರಾರಿಯಾಗಲು ಯತ್ನಿಸಿದ ವರನನ್ನು 20 ಕಿ.ಮೀ ಚೇಸ್ ಮಾಡಿ ಮಂಟಪಕ್ಕೆ ಕರೆತಂದ ಗಟ್ಟಿಗಿತ್ತಿ ವಧು!

    ಅತ್ಯಾಚಾರ ನಡೆದ ಬಳಿಕ ಸಂತ್ರಸ್ತೆ ತೀವ್ರ ಆಘಾತಕ್ಕೊಳಗಾಗಿದ್ದಳು. 15 ದಿನಗಳ ಬಳಿಕ ಆಕೆ ತನ್ನ ತಾಯಿಯ ಬಳಿ ಈ ಘಟನೆಯ ಬಗ್ಗೆ ಹೇಳಿಕೊಂಡಳು. ವಿಷಯ ತಿಳಿದ ತಕ್ಷಣ ಆಕೆಯ ತಾಯಿ ತರಗತಿ ಶಿಕ್ಷಕರು ಹಾಗೂ ಪ್ರಾಂಶುಪಾಲರನ್ನು ಭೇಟಿಯಾಗಿ ಘಟನೆಯ ಬಗ್ಗೆ ವಿವರಿಸಿದರು. ಈ ವೇಳೆ ಸಂತ್ರಸ್ತೆಯ ತರಗತಿ ಶಿಕ್ಷಕಿ ಮಗುವಿನ ಸಹಾಯವಾಣಿಗೆ (Child Helpline) ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ನಟೋರಿಯಸ್ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ಹತ್ಯೆ

    ಈ ಕುರಿತು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (POCSO) ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅತ್ಯಚಾರವೆಸಗಿದ ನಾಲ್ವರು ಅಪ್ರಾಪ್ತ ಆರೋಪಿಗಳನ್ನು ಬಂಧಿಸಿದ್ದು, ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

  • ರಾತ್ರೋರಾತ್ರಿ ಟ್ರಕ್‌ನಲ್ಲಿ ಪ್ರಯಾಣ – ಚಾಲಕನ ಸಮಸ್ಯೆ ಆಲಿಸಿದ ರಾಗಾ

    ರಾತ್ರೋರಾತ್ರಿ ಟ್ರಕ್‌ನಲ್ಲಿ ಪ್ರಯಾಣ – ಚಾಲಕನ ಸಮಸ್ಯೆ ಆಲಿಸಿದ ರಾಗಾ

    ಚಂಡೀಗಢ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಜನಸಾಮಾನ್ಯರೊಬ್ಬರ ಟ್ರಕ್ (Truck) ಏರಿ ಪ್ರಯಾಣಿಸಿದ್ದಾರೆ.

    ಸೋಮವಾರ ರಾತ್ರಿ ರಾಹುಲ್ ಗಾಂಧಿ ದೆಹಲಿಯಿಂದ (Delhi) ಚಂಡೀಗಢಕ್ಕೆ (Chandigarh) ತೆರಳುತ್ತಿದ್ದ ವೇಳೆ ಹರಿಯಾಣದ (Haryana) ಅಂಬಾಲಾದಿಂದ ಟ್ರಕ್ ಒಂದನ್ನೇರಿ ಪ್ರಯಾಣಿಸಿದ್ದಾರೆ. ಈ ವೇಳೆ ಅವರು ರಾತ್ರಿಯಿಡೀ ನಿದ್ರೆ ಬಿಟ್ಟು ಕೆಲಸ ಮಾಡುವ ಟ್ರಕ್ ಚಾಲಕನ (Driver) ಸಮಸ್ಯೆಗಳನ್ನು ಆಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ರಾಹುಲ್ ಗಾಂಧಿ ರಾತ್ರಿ ವೇಳೆ ಟ್ರಕ್ ಏರಿ ಪ್ರಯಾಣಿಸಿರುವುದಕ್ಕೆ ಸಂಬಂಧಪಟ್ಟಂತೆ ಕೆಲ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ಕಾಂಗ್ರೆಸ್ ಕಾರ್ಯಕರ್ತರು ಈ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದು, ರಾಹುಲ್ ಗಾಂಧಿ ಅವರು ಟ್ರಕ್ ಚಾಲಕನ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ಅವರ ಟ್ರಕ್ ಅನ್ನೇ ಏರಿ ಪ್ರಯಾಣಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿನಿಂದ 2,000 ಮುಖಬೆಲೆ ನೋಟು ವಿನಿಮಯ ಪ್ರಕ್ರಿಯೆ ಆರಂಭ

    ರಾಹುಲ್ ಗಾಂಧಿ ಪಕ್ಷಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಕಾರ್ಯಕ್ರಮಗಳಿಲ್ಲದ ಕಾರಣ ಶಿಮ್ಲಾಗೆ ತೆರಳುತ್ತಿದ್ದಾರೆ. ಶಿಮ್ಲಾದಲ್ಲಿ ತಮ್ಮ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಕುಟುಂಬದೊಂದಿಗೆ ಇದ್ದು ರಾಗಾ ಕೂಡಾ ಅಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಜನನ, ಮರಣ ಮಾಹಿತಿ ಮತದಾರರ ಪಟ್ಟಿಗೆ ಜೋಡಣೆ – ಶೀಘ್ರವೇ ಮಸೂದೆ ಮಂಡನೆ

  • ಆಸಿಡ್ ದಾಳಿಯಲ್ಲಿ ಕಣ್ಣು ಕಳೆದುಕೊಂಡಿದ್ದ ವಿದ್ಯಾರ್ಥಿನಿಗೆ ಸಿಬಿಎಸ್‍ಸಿ ಪರೀಕ್ಷೆಯಲ್ಲಿ 95% ಫಲಿತಾಂಶ

    ಆಸಿಡ್ ದಾಳಿಯಲ್ಲಿ ಕಣ್ಣು ಕಳೆದುಕೊಂಡಿದ್ದ ವಿದ್ಯಾರ್ಥಿನಿಗೆ ಸಿಬಿಎಸ್‍ಸಿ ಪರೀಕ್ಷೆಯಲ್ಲಿ 95% ಫಲಿತಾಂಶ

    ಚಂಡೀಗಢ: ಮೂರು ವರ್ಷದವಳಿದ್ದಾಗ ಆಸಿಡ್ ದಾಳಿಯಿಂದ ಕಣ್ಣುಗಳನ್ನು ಕಳೆದುಕೊಂಡಿದ್ದ ಬಾಲಕಿಯೊಬ್ಬಳು, 10ನೇ ತರಗತಿ ಸಿಬಿಎಸ್‍ಇ (CBSE) ಪರೀಕ್ಷೆಯಲ್ಲಿ 95.02% ಅಂಕಗಳನ್ನು ಗಳಿಸುವ ಮೂಲಕ ತನ್ನ ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾಳೆ.

    15 ವರ್ಷದ ಕಾಫಿ (Kafi) ಎಂಬ ವಿದ್ಯಾರ್ಥಿನಿ ಈ ಸಾಧನೆಗೈದವಳು. ಬಾಲಕಿಯ ತಂದೆ ಸಂಸ್ಥೆ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕಾಫಿ 3 ವರ್ಷದವಳಿದ್ದಾಗ ಪಕ್ಕದ ಮನೆಯವರು ಅಸೂಯೆಯಿಂದ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದರು. ನಂತರ ಆಕೆಯ ಸಂಪೂರ್ಣ ಮುಖವು ಸುಟ್ಟುಹೋಗಿತ್ತು. 6 ವರ್ಷಗಳ ನಂತರ ಅವಳು ಕಣ್ಣುಗಳನ್ನು ಕಳೆದುಕೊಂಡಿದ್ದಳು. ಬಳಿಕ ವಿದ್ಯಾರ್ಥಿನಿ ಬ್ರೈಲ್ ಲಿಪಿಯ ಮೂಲಕ ಅಧ್ಯಯನ ಆರಂಭಿಸಿದ್ದಳು. ಅಲ್ಲದೆ ತುಂಬ ವೇಗವಾಗಿ ಬ್ರೈಲ್ ಲಿಪಿ ಓದುವ ಕೌಶಲ್ಯ ಕರಗತ ಮಾಡಿಕೊಂಡಿದ್ದಳು. ಇದನ್ನೂ ಓದಿ: ಈ ಬಾರಿ ಸಿಎಂ ಸ್ಥಾನವನ್ನು ಒಕ್ಕಲಿಗರಿಗೆ ನೀಡಬೇಕು: ಉಮಾಪತಿ ಶ್ರೀನಿವಾಸ ಗೌಡ

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಬಾಲಕಿ, ಭೂಗೋಳಶಾಸ್ತ್ರ (Geography) ನನ್ನ ನೆಚ್ಚಿನ ವಿಷಯವಾಗಿದೆ. ಮುಂದೆ ಐಎಎಸ್ (IAS) ಅಧಿಕಾರಿಯಾಗಲು ಬಯಸುತ್ತೇನೆ. ಅಲ್ಲದೆ ನನ್ನ ತಂದೆ ತಾಯಿಯ ಹೆಮ್ಮೆಯ ಮಗಳಾಗುತ್ತೇನೆ. ನಾನು ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಪೋಷಕರ ಹಾಗೂ ಶಿಕ್ಷಕರ ಬೆಂಬಲ ಬಹಳಷ್ಟಿದೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಪರೀಕ್ಷೆಗಳಿಗೆ ತಯಾರಿ ನಡೆಸಲು ಯೂಟ್ಯೂಬ್ (YouTube) ಮತ್ತು ಇಂಟರ್‌ನೆಟ್ (Internet) ಮೂಲಗಳು ಸಾಕಷ್ಟು ಸಹಾಯ ಮಾಡಿದೆ ಎಂದು ಹೇಳಿಕೊಂಡಿದ್ದಾಳೆ.

    ಮಗಳ ಸಾಧನೆಯ ಬಗ್ಗೆ ಕಾಫಿಯ ತಂದೆ ಮಾತನಾಡಿ, ನಾವು ಕಾಫಿ ಬಗ್ಗೆ ಹೆಮ್ಮೆಪಡುತ್ತೇವೆ. ಅವಳು ಮುಂದೆ ಏನಾಗಲೂ ಬಯಸುತ್ತಾಳೋ ಅದನ್ನು ಬೆಂಬಲಿಸುತ್ತೇವೆ. ಅವಳ ಕನಸುಗಳನ್ನು ಈಡೇರಿಸಲು ಹಗಲಿರುಳು ಶ್ರಮಿಸುತ್ತೇವೆ. ಆಸಿಡ್ ದಾಳಿ ನಡೆದಾಗ ನನ್ನ ನೈತಿಕ ಸ್ಥೈರ್ಯ ಕುಂದಿತ್ತು. ಆದರೆ ಒಬ್ಬರ ಸಲಹೆ ಮೇರೆಗೆ ಮಗಳಿಗೆ ಶಿಕ್ಷಣ ನೀಡಲು ನಿರ್ಧರಿಸಿದೆ. ಈಗ ಕಾಫಿ ಆ ನಿರ್ಧಾರ ಸರಿ ಎಂದು ಸಾಬೀತುಪಡಿಸಿದ್ದಾಳೆ ಎಂದು ಸಂಭ್ರಮಿಸಿದ್ದಾರೆ.‌ ಇದನ್ನೂ ಓದಿ: ಸಿ.ಟಿ ರವಿ ಸೋಲಿಸಿದ್ದಕ್ಕೆ ಭೋಜೇಗೌಡರಿಗೆ ಹಾಲಿನ ಅಭಿಷೇಕ

  • ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ

    ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಖಲಿಸ್ತಾನಿ ಕಮಾಂಡೋ ಹತ್ಯೆ

    ಇಸ್ಲಾಮಾಬಾದ್: ಖಲಿಸ್ತಾನ್ ಸಂಘಟನೆಯ ಕಮಾಂಡೋ ಫೋರ್ಸ್ (Khalistan Commando Force) ಮುಖ್ಯಸ್ಥ ಪರಮ್‍ಜಿತ್ ಸಿಂಗ್ ಪಂಜ್ವಾರ್ ಅಕಾ ಮಲಿಕ್ ಸರ್ದಾರ್ ಸಿಂಗ್‍ನನ್ನು ಶನಿವಾರ ಪಾಕಿಸ್ತಾನದ (Pakistan) ಲಾಹೋರ್‌ನ (Lahore) ಜೋಹರ್ ಟೌನ್‍ನಲ್ಲಿ ಇಬ್ಬರು ಅಪರಿಚಿತರು ಗುಂಡು ಹಾರಿಸಿ ಕೊಂದಿದ್ದಾರೆ.

    ಜೋಹರ್ ಟೌನ್‍ನಲ್ಲಿರುವ ಸೂರ್ಯಕಾಂತಿ ಸೊಸೈಟಿಯಲ್ಲಿರುವ ಅವರ ನಿವಾಸದ ಬಳಿ ಮುಂಜಾನೆ ಬೈಕಿನಲ್ಲಿ ಆಗಮಿಸಿದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಿಂಗ್ ಹಾಗೂ ಅವರ ಅಂಗರಕ್ಷಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಪರಮ್‍ಜಿತ್ ಗುಂಡೇಟಿನಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಾಯಗೊಂಡಿರುವ ಅಂಗರಕ್ಷಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಾಡಹಗಲೇ ಗುಂಡೇಟು – ಮಹಾನಗರ ಪಾಲಿಕೆಯ ಸದಸ್ಯೆಯ ಪತಿಯ ಬರ್ಬರ ಹತ್ಯೆ

    ಭಾರತದ ಪಂಜಾಬ್‍ಗೆ (Punjab) ಡ್ರೋನ್‍ಗಳನ್ನು ಬಳಸಿಕೊಂಡು ಮಾದಕವಸ್ತು ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಪರಮ್‍ಜಿತ್, ತರನ್ ಬಳಿಯ ಪಂಜ್ವಾರ್ ಕುಗ್ರಾಮದಲ್ಲಿ ಜನಿಸಿದ್ದ. 1986 ರಲ್ಲಿ ಅವನ ಸೋದರ ಸಂಬಂಧಿ ಲಾಭ್ ಸಿಂಗ್‍ನಿಂದ ತೀವ್ರಗಾಮಿಯಾದ, ನಂತರ ಕೆಸಿಎಫ್‍ಗೆ (KCF) ಸೇರಿದ್ದ. ಅದಕ್ಕೂ ಮೊದಲು ಸೋಹಾಲ್‍ನ ಕೇಂದ್ರ ಸಹಕಾರಿ ಬ್ಯಾಂಕ್‍ನಲ್ಲಿ ಕೆಲಸ ಮಾಡಿದ್ದ.

    1990ರ ದಶಕದಲ್ಲಿ ಭಾರತೀಯ ಭದ್ರತಾ ಪಡೆಗಳಿಂದ (Indian security forces) ಲಾಭ್ ಸಿಂಗ್ ಹತ್ಯೆಯ ನಂತರ, ಪಂಜ್ವಾರ್ ಕೆಸಿಎಫ್‍ನ ಕಮಾಂಡೋ ಸ್ಥಾನ ವಹಿಸಿಕೊಂಡಿದ್ದ. ನಂತರ ಪಾಕಿಸ್ತಾನಕ್ಕೆ ಪಲಾಯನ ಮಾಡಿ, ಪಾಕಿಸ್ತಾನದ ಮೋಸ್ಟ್ ವಾಂಟೆಡ್ ಭಯೋತ್ಪಾದಕರ (Wanted Terrorists) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ. ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಹೆರಾಯಿನ್ ಕಳ್ಳಸಾಗಣೆ ಮೂಲಕ ಹಣಕಾಸು ಪಡೆಯುವ ಮೂಲಕ ಕೆಸಿಎಫ್‍ನನ್ನು ಅಸ್ತಿತ್ವದಲ್ಲಿ ಇಟ್ಟುಕೊಂಡಿದ್ದ.

    1999ರ ಜೂ. 30 ರಂದು ಚಂಡೀಗಢದ (Chandigarh) ಪಾಸ್‌ಪೋರ್ಟ್ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ನಡೆಸಿದ್ದ. ಈ ಸ್ಫೋಟದಲ್ಲಿ 4 ಮಂದಿ ಗಾಯಗೊಂಡಿದ್ದು, ಹಲವು ವಾಹನಗಳಿಗೂ ಹಾನಿಯಾಗಿತ್ತು. ಇದನ್ನೂ ಓದಿ: ಕ್ರಿಕೆಟಿಗ ನಿತೀಶ್ ರಾಣಾ ಪತ್ನಿಗೆ ಕಿರುಕುಳ – ಓರ್ವ ಅರೆಸ್ಟ್

  • ಹರಿಯಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿಯ ಮೇಲೆ ಫೈರಿಂಗ್

    ಹರಿಯಾಣದಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹೋದ್ಯೋಗಿಯ ಮೇಲೆ ಫೈರಿಂಗ್

    ಚಂಡೀಗಢ: ಕ್ಷುಲ್ಲಕ ಕಾರಣಕ್ಕಾಗಿ ಸಹೋದ್ಯೋಗಿಯ (Co-worker) ಮೇಲೆ ಗುಂಡು ಹಾರಿಸಿದ ಪ್ರಕರಣ ಹರಿಯಾಣದ ಗುರುಗ್ರಾಮದಲ್ಲಿ (Gurgaon) ನಡೆದಿದೆ.

    ಕಚೇರಿಯಲ್ಲಿ ಕುರ್ಚಿ (Chair) ವಿಚಾರಕ್ಕೆ ಅಮನ್ ಹಾಗೂ ವಿಶಾಲ್ ಎಂಬುವವರ ಮಧ್ಯೆ ಗಲಾಟೆ ನಡೆದಿದೆ. ಇದೇ ದ್ವೇಷದಲ್ಲಿ ಅಮನ್, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿಶಾಲ್ (23) ಮೇಲೆ ಹಿಂದಿನಿಂದ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ರಾಮ ಮಂದಿರದ ಹೊರಗೆ ಗಲಾಟೆ- ಉದ್ರಿಕ್ತರಿಂದ ಪೊಲೀಸ್ ವಾಹನಕ್ಕೆ ಬೆಂಕಿ

    CRIME 2

    ತಕ್ಷಣವೇ ಪೊಲೀಸರು (Police) ಗಾಯಗೊಂಡಿದ್ದ ವಿಶಾಲ್‍ನನ್ನು ಆಸ್ಪತ್ರೆಗೆ (Hospital)ದಾಖಲಿಸಿ, ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ.

    ಸಂತ್ರಸ್ತನ ಸಹೋದರ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯ ವಿರುದ್ಧ ಸೆಕ್ಷನ್ 307 (ಕೊಲೆ ಯತ್ನ), ಶಸ್ತ್ರಾಸ್ತ್ರ ಕಾಯ್ದೆಯ ಅನ್ವಯ 25-54-59ರ ಅಡಿ ಪ್ರಕರಣ ದಾಖಲಿಸಿದ್ದಾರೆ.

    ಮಂಗಳವಾರ ಕುರ್ಚಿ ವಿಚಾರಕ್ಕಾಗಿ ಇಬ್ಬರ ನಡುವೆ ಗಲಾಟೆಯಾಗಿದೆ. ಬುಧವಾರ ಸಹ ಅದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ವಿಶಾಲ್ ಕಚೇರಿಯಿಂದ ಹೊರ ನಡೆದಿದ್ದರು. ಈ ವೇಳೆ ಆರೋಪಿ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯನ್ನು ಗುರುತಿಸಲಾಗಿದ್ದು, ಆತನ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಶೀಘ್ರವೇ ಬಂಧಿಸಲಾಗುವುದು ಎಂದು ಡಿಸಿಪಿ ವೀರೇಂದ್ರ ವಿಜ್ ತಿಳಿಸಿದ್ದಾರೆ. ಇದನ್ನೂ ಓದಿ: ನಿಮ್ಮ 60 ರೂ. ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ – ಶಾಮನೂರು ನೀಡಿದ ಸೀರೆಗಳಿಗೆ ಬೆಂಕಿಯಿಟ್ಟ ಮಹಿಳೆಯರು

  • ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

    ಕಳ್ಳನೆಂದು ಶಂಕಿಸಿ ಹತ್ಯೆ- ಇಬ್ಬರ ಬಂಧನ

    ಚಂಡೀಗಢ: ಕಳ್ಳನೆಂದು ಶಂಕಿಸಿ ಥಳಿಸಿ ವ್ಯಕ್ತಿಯೊಬ್ಬನ ಹತ್ಯೆಗೆ ಕಾರಣರಾದ ತೋಟದ ಮಾಲೀಕ (Owner)  ಹಾಗೂ ಆತನ ಸಹಾಯಕನನ್ನು (Servant) ಗುರುಗ್ರಾಮ್ (Gurugram) ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಘಾಟಾ ಗ್ರಾಮದ ಅಂಕಿತ್ ಹಾಗೂ ಆತನ ಸಹಾಯಕ ಮಧ್ಯಪ್ರದೇಶದ (Madhya Pradesh) ಸಾಗರ್ ಮೂಲದವನು ಎಂದು ತಿಳಿದು ಬಂದಿದೆ. ಆರೋಪಿಗಳ ವಿಚಾರಣೆ ವೇಳೆ, ತೋಟದಲ್ಲಿ ಆಗಾಗ ಕಳ್ಳತನವಾಗುತ್ತಿತ್ತು. ಹಾಗಾಗಿ ನಾನು ಮತ್ತು ನನ್ನ ಸಹಾಯಕ ಕಾವಲು ಆರಂಭಿಸಿದ್ದೆವು ಎಂದು ಅಂಕಿತ್ ಹೇಳಿದ್ದಾನೆ.ಇದನ್ನೂ ಓದಿ: ಮತದಾರರಿಗೆ ನಕಲಿ ಬಾಂಡ್ ಆಮಿಷ ಪ್ರಕರಣ – ಜೆಡಿಎಸ್ ಶಾಸಕ ಗೌರಿಶಂಕರಗೆ ಅನರ್ಹತೆಯ ಭೀತಿ

    ಮಂಗಳವಾರ ತಡರಾತ್ರಿ ತೋಟದ ಬಳಿಗೆ ಬಂದಿದ್ದ ಇಬ್ಬರನ್ನು ಕಳ್ಳರೆಂದು ಶಂಕಿಸಿ ಮನೆಯಲ್ಲಿ ಕೂಡಿ ಹಾಕಿ ಆರೋಪಿಗಳು ಥಳಿಸಿದ್ದರು. ಥಳಿತಕ್ಕೊಳಗಾದ ಒಬ್ಬ ಬುಧವಾರ ಬೆಳಗ್ಗೆ ಮೃತಪಟ್ಟಿದ್ದ. ಮೃತಪಟ್ಟ ವ್ಯಕ್ತಿಯನ್ನು ಬಂಗಾಳ ಮೂಲದ ರಫಿಗುಲ್ ಹಾಗೂ ಗಾಯಗೊಂಡಿರುವ ಮತ್ತೊಬ್ಬನನ್ನು ಇಸ್ರುದ್ದೀನ್ ಎಂದು ಗುರುತಿಸಲಾಗಿದೆ.

    ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ವಲಸಿಗರ ಘರ್ ವಾಪಸಿ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‍ಗೆ ಆತಂಕ- ಟಿಕೆಟ್ ಫೈನಲ್ ಮಾಡಲು ಪರದಾಟ

  • ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್

    ಅಮೃತ್‍ಪಾಲ್‍ಗೆ ಆಶ್ರಯ ಕೊಟ್ಟಿದ್ದ ಮಹಿಳೆ ಅರೆಸ್ಟ್

    ಚಂಡೀಗಢ: ಆರು ದಿನಗಳ ಹಿಂದೆ ಪಂಜಾಬ್‍ (Punjab) ನಿಂದ ಎಸ್ಕೇಪ್ ಆಗಿದ್ದ ಖಲಿಸ್ತಾನ್ ಬೆಂಬಲಿಗ ಅಮೃತ್‍ಪಾಲ್ ಸಿಂಗ್ (Amritpal Singh) ಹರಿಯಾಣದಲ್ಲಿ ತಲೆಮರೆಸಿಕೊಂಡಿರುವ ಕುರುಹುಗಳು ಸಿಕ್ಕಿವೆ. ಸ್ಕೂಟರ್‍ನಲ್ಲಿ ತನ್ನ ಅನುಯಾಯಿ ಜೊತೆ ಕುರುಕ್ಷೇತ್ರಕ್ಕೆ ಬಂದಿದ್ದ ಅಮೃತ್‍ಪಾಲ್ ಸಿಂಗ್ ಮಹಿಳೆಯೊಬ್ಬರ ಮನೆಯಲ್ಲಿ ಒಂದು ರಾತ್ರಿ ತಲೆ ಮರೆಸಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

    ಅಮೃತ್‍ಪಾಲ್‍ಗೆ ಒಂದು ರಾತ್ರಿ ಆಶ್ರಯಕೊಟ್ಟಿದ್ದ ಮಹಿಳೆ ಬಲ್ಜಿತ್ ಕೌರ್‍ರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇದೀಗ ಹರಿಯಾಣದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಅತ್ತ ಲಂಡನ್‍ನಲ್ಲಿ ಖಲಿಸ್ತಾನಿ ಬೆಂಬಲಿಗರು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದಾರೆ. ಭಾರೀ ಬಂದೋಬಸ್ತ್ ನಡುವೆಯೂ ಭಾರತೀಯ ಹೈಕಮೀಷನ್ ಕಚೇರಿ ಮೇಲೆ ನೀರಿನ ಬಾಟಲಿ ಎಸದಿದ್ದಾರೆ. ಯೋಜಿತ ರೀತಿಯಲ್ಲಿ ಹೈಕಮೀಷನ್ ಕಚೇರಿ ಬಳಿ ಬಂದ ಮಕ್ಕಳು, ಮಹಿಳೆಯರನ್ನು ಒಳಗೊಂಡ 2ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಖಲಿಸ್ತಾನ್ ಪರ ಘೋಷಣೆ ಕೂಗಿದ್ರು. ಇದನ್ನೂ ಓದಿ: ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ – ಅಮೃತ್‌ಪಾಲ್ ಕರಾಳ ಮುಖ ಬಯಲು

    ಭಾರತ ವಿರೋಧಿ ಘೋಷಣೆ ಕೂಗಿದ್ರು. ಇದಕ್ಕೆ ಪ್ರತಿಯಾಗಿ ಭಾರತೀಯ ಹೈಕಮಿಷನ್ ಸಿಬ್ಬಂದಿ ಭಾರತದ ಧ್ವಜ ಪ್ರದರ್ಶಿಸಿ ತಿರುಗೇಟು ಕೊಟ್ಟರು. ಈ ಹಂತದಲ್ಲೇ ಖಲಿಸ್ತಾನಿ ಬೆಂಬಲಿಗರು ಹೈಕಮಿಷನ್ ಕಚೇರಿ ಮೇಲೆ ಬಾಟಲ್‍ಗಳನ್ನು ಎಸೆದರು. ಕೂಡಲೇ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಇಂಡಿಯಾ ಹೌಸ್ ಪ್ರಾಂತ್ಯದಲ್ಲಿ ಇನ್ನಷ್ಟು ಭದ್ರತೆ ಹೆಚ್ಚಿಸಿದ್ರು. ಅಮೆರಿಕಾದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಗೂ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.

  • ಬೀದಿನಾಯಿಗೆ ತಿಂಡಿ ನೀಡಲು ಹೋಗಿದ್ದ ಯುವತಿಯ ಮೇಲೆ ಹರಿದ ಕಾರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಬೀದಿನಾಯಿಗೆ ತಿಂಡಿ ನೀಡಲು ಹೋಗಿದ್ದ ಯುವತಿಯ ಮೇಲೆ ಹರಿದ ಕಾರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ಚಂಡೀಗಢ: ರಸ್ತೆ ಬದಿಯಲ್ಲಿ ನಾಯಿಗೆ ತಿಂಡಿ ನೀಡುತ್ತಿದ್ದ ಯುವತಿಯ (Woman) ಮೇಲೆ ಕಾರೊಂದು (Car) ಹರಿದ ಘಟನೆ ಚಂಡೀಗಢದಲ್ಲಿ (Chandigarh) ನಡೆದಿದೆ.

    ತೇಜಸ್ವಿತಾ (25) ಗಂಭೀರ ಗಾಯಗೊಂಡ ಯುವತಿ. ತೇಜಸ್ವಿನಿ ರಸ್ತೆ ಬದಿಯಲ್ಲಿ ಬೀದಿ ನಾಯಿಗೆ (Dog) ಆಹಾರ ನೀಡುತ್ತಿದ್ದಳು. ಈ ವೇಳೆ ಅತಿವೇಗವಾಗಿ ಬಂದ ಕಾರೊಂದು ತೇಜಸ್ವಿತಾ ಮೇಲೆ ಹರಿದಿದೆ. ಈ ವೇಳೆ ರಕ್ತದ ಮಡುವಿನಲ್ಲಿ ಮಲಗಿದ್ದ ತೇಜಸ್ವಿತಾಳನ್ನು ನೋಡಿದ ತಾಯಿ ಪೊಲೀಸರಿಗೆ ಹಾಗೂ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    crime

    ಈ ಹಿನ್ನೆಲೆಯಲ್ಲಿ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಹೆಚ್ಚಿನ ಚಿಕಿತ್ಸೆಯ ಪಡೆಯುತ್ತಿದ್ದಾಳೆ. ಘಟನೆ ವೇಳೆ ತೇಜಸ್ವಿತಾ ಆಕೆಯ ತಲೆಗೆ ಗಂಭೀರ ಗಾಯವಾಗಿದ್ದು, ವೈದ್ಯರು ಆಕೆಯ ತಲೆ 2 ಬದಿಯಲ್ಲೂ ಹೊಲಿಗೆ ಹಾಕಿದ್ದಾರೆ.

    ಕುಟುಂಬಸ್ಥರ ಪ್ರಕಾರ ತೇಜಸ್ವಿತಾ ಆರ್ಕಿಟೆಕ್ಟ್ ಪದವೀಧರರಾಗಿದ್ದು, ಯುಪಿಎಸ್‍ಸಿಗೆ ತಯಾರಿ ನಡೆಸುತ್ತಿದ್ದಾಳೆ. ತೇಜಸ್ವಿತಾ ತಾಯಿಯೊಂದಿಗೆ ಬೀದಿನಾಯಿಗೆ ತಿಂಡಿ ನೀಡಲು ಮಾರುಕಟ್ಟೆಗೆ ಹೋಗಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲಿಜಿಯಂನಲ್ಲಿ ಸರ್ಕಾರಿ ಪ್ರತಿನಿಧಿಗೂ ಅವಕಾಶ ನೀಡಿ: ಸಿಜೆಐಗೆ ಕಿರಣ್‌ ರಿಜಿಜು ಪತ್ರ

    ಇನ್ನೂ ಈ ಭಯಾನಕ ವೀಡಿಯೋ ಸಿಸಿ ಟಿವಿಯಲ್ಲಿ (CC TV) ಸೆರೆಯಾಗಿದ್ದು, ಘಟನೆಗೆ ಸಂಬಂಧಿಸಿ ತೇಜಸ್ವಿನಿಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಾಹನ ಹಾಗೂ ಚಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದನ್ನೂ ಓದಿ: ವೆಬ್ ಸೈಟ್‍ನಲ್ಲಿ ಯುವತಿಯರ ಫೋಟೋ ಅಪ್ಲೋಡ್ ಮಾಡಿ ವಂಚನೆ- ಐವರ ಬಂಧನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k