Tag: chandigarh

  • ದರೋಡೆ ಕೇಸ್ – ಅಗ್ನಿವೀರ್ ಸೇರಿದಂತೆ ಮೂವರು ಅರೆಸ್ಟ್

    ದರೋಡೆ ಕೇಸ್ – ಅಗ್ನಿವೀರ್ ಸೇರಿದಂತೆ ಮೂವರು ಅರೆಸ್ಟ್

    ಚಂಡೀಗಢ: ವಾಹನವೊಂದನ್ನು ದೋಚಿದ್ದ ಪ್ರಕರಣದಲ್ಲಿ ಅಗ್ನಿವೀರ್ (Agniveer) ಸೇರಿದಂತೆ ಮೂವರು ಯುವಕರನ್ನು ಮೊಹಾಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳನ್ನು ಅಗ್ನಿವೀರ್ ಇಶ್ಮೀತ್ ಸಿಂಗ್, ಪ್ರಭ್ಪ್ರೀತ್ ಸಿಂಗ್ ಮತ್ತು ಬಾಲ್ಕರನ್ ಸಿಂಗ್ ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಮೂವರು ಆರೋಪಿಗಳು ಆಪ್ ಮೂಲಕ ವಾಹನ ಬುಕ್ ಮಾಡಿದ್ದರು. ಬಳಿಕ ಚಾಲಕನಿಗೆ ಗನ್ ತೋರಿಸಿ, ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಕಾರನ್ನು‌ (Car) ಕದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಿರಂತರ ಮಳೆ, ಶೀತಗಾಳಿ – ಧಾರವಾಡ ಜಿಲ್ಲಾದ್ಯಂತ 2 ದಿನ ಶಾಲಾ ಕಾಲೇಜುಗಳಿಗೆ ರಜೆ

    ಇಶ್ಮೀತ್ ಸಿಂಗ್ 2022 ರಲ್ಲಿ ಅಗ್ನಿವೀರ್ ಆಗಿ ನೇಮಕಗೊಂಡಿದ್ದ. ಬಳಿಕ ಪಶ್ಚಿಮ ಬಂಗಾಳದಲ್ಲಿ ನಿಯೋಜನೆಗೊಂಡಿದ್ದ. ಎರಡು ತಿಂಗಳ ಹಿಂದೆ ರಜೆಯ ಮೇಲೆ ಪಂಜಾಬ್‌ನ ಫಾಜಿಲ್ಕಾಗೆ ಬಂದಿದ್ದ. ಆದರೆ ರಜೆಯ ಅವಧಿ ಮುಗಿದ ನಂತರ ಮತ್ತೆ ಕೆಲಸಕ್ಕೆ ಮರಳಿ ಹೋಗಿರಲಿಲ್ಲ.

    ಆರೋಪಿಗಳು ವಾಹನ ದೋಚುವಿಕೆ ಮತ್ತು ಕಳ್ಳತನದ ಇತರ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಅವರ ವಿರುದ್ಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಆರೋಪಿಗಳಿಂದ ಕಳ್ಳತನವಾದ ಸ್ಕೂಟರ್, ಬೈಕ್ ಮತ್ತು ಕಂಟ್ರಿಮೇಡ್ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜುಲೈ ತಿಂಗಳು ಸಂತೃಪ್ತಿಯಾಗಿದೆ – ಆಗಸ್ಟ್‌ನಲ್ಲಿ 45 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಒತ್ತಾಯ

  • ರಬ್ಬರ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ- 40 ಕ್ಕೂ ಹೆಚ್ಚು ಕಾರ್ಮಿಕರು ಸುಟ್ಟು ಭಸ್ಮ

    ರಬ್ಬರ್‌ ಕಾರ್ಖಾನೆಯಲ್ಲಿ ಅಗ್ನಿ ಅವಘಡ- 40 ಕ್ಕೂ ಹೆಚ್ಚು ಕಾರ್ಮಿಕರು ಸುಟ್ಟು ಭಸ್ಮ

    ಚಂಡೀಗಢ: ಸೋನಿಪತ್ (Sonipat) ಜಿಲ್ಲೆಯ ರಾಯ್ ಕೈಗಾರಿಕಾ ಪ್ರದೇಶದ ರಬ್ಬರ್ ಕಾರ್ಖಾನೆಯಲ್ಲಿ (Rubber Factory) ಇಂದು ಭಾರೀ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಸಿಲಿಂಡರ್‌ಗಳು (Cylinder) ಸ್ಫೋಟಗೊಂಡಿದ್ದು, 40ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ.

    ಅಗ್ನಿ ಅವಘಡದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ ಸಿಲುಕಿದ್ದ ನೌಕರರನ್ನು ರಕ್ಷಿಸಲಾಗಿದೆ. ಘಟನೆ ನಡೆದ ಕೂಡಲೇ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಎಣ್ಣೆ ಬೇಡ ಎಂದಿದ್ದಕ್ಕೆ ಸ್ನೇಹಿತನೇ ಮನೆಯ ಟೆರೇಸ್‌ನಿಂದ ತಳ್ಳಿದ!

    ಕಾರ್ಖಾನೆಯಲ್ಲಿ ರಬ್ಬರ್ ಇದ್ದ ಕಾರಣ ಬೆಂಕಿ ವೇಗವಾಗಿ ವ್ಯಾಪಿಸಿದೆ. 16 ಮಂದಿ ಕಾರ್ಮಿಕರು ಸಿವಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದರಲ್ಲಿ 8 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗೆ ಉನ್ನತ ಮಟ್ಟದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೂ ಕೆಲವರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ತುರ್ತು ಕರ್ತವ್ಯಕ್ಕೆ ವೈದ್ಯರನ್ನು ಕರೆಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • 58ನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದ ಸಿಧು ಮೂಸೇವಾಲಾ ತಾಯಿಗೆ ಸಂಕಷ್ಟ!

    58ನೇ ವರ್ಷದಲ್ಲಿ ಮಗುವಿಗೆ ಜನ್ಮ ನೀಡಿದ ಸಿಧು ಮೂಸೇವಾಲಾ ತಾಯಿಗೆ ಸಂಕಷ್ಟ!

    ಚಂಡೀಗಢ: ಕೆಲ ದಿನಗಳ ಹಿಂದೆಯಷ್ಟೇ ಗಾಯಕ ದಿ. ಸಿಧು ಮೂಸೇವಲಾ ತಾಯಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ.

    ಹೌದು.‌ 21 ರಿಂದ 50 ವರ್ಷದೊಳಗಿನ ಮಹಿಳೆ ಮಾತ್ರ ಐವಿಎಫ್  ಸಹಾಯದಿಂದ ಮಗುವಿಗೆ ಜನ್ಮ ನೀಡಬಹುದಾಗಿದೆ. ಆದರೆ ಚರಣ್ ಕೌರ್ ಅವರಿಗೆ 58 ವರ್ಷ ವರ್ಷ ವಯಸ್ಸಾಗಿತ್ತು. ಹೀಗಾಗಿ ಮಾರ್ಚ್ 14ರಂದು ಪಂಜಾಬ್ ಸರ್ಕಾರಕ್ಕೆ (Punjab Govt) ಕೇಂದ್ರ ಸರ್ಕಾರ ಪತ್ರ ಕಳುಹಿಸಿದ್ದು, ಚರಣ್ ಕೌರ್ ಅವರ ಐವಿಎಫ್ ಚಿಕಿತ್ಸೆ (Charan Kaur’s IVF Treatment) ಕುರಿತು ವರದಿ ಕೇಳಿದೆ.

    ಚರಣ್ ಕೌರ್ ಅವರು ಮಗುವಿಗೆ ಜನ್ಮ ನೀಡಲು IVF ಚಿಕಿತ್ಸೆಯ ಮೊರೆ ಹೋಗಿರುವ ಬಗ್ಗೆ ಫೆಬ್ರವರಿ 27ರ ಪತ್ರಿಕಾ ವರದಿಯನ್ನು ಪರಿಶೀಲಿಸಲಾಗಿದೆ. ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ (ತಡೆ) ಕಾಯ್ದೆ, 2021ರ ಸೆಕ್ಷನ್ 21 (g) (i) ಅಡಿ, ಎಆರ್‌ಟಿ ಸೇವೆಗೆ ಒಳಪಡಲಿರುವ ಮಹಿಳೆಯ ವಯಸ್ಸಿನ ಸೂಚಿತ ಮಿತಿಯು 21- 50 ವರ್ಷಗಳಾಗಿರುತ್ತದೆ ಎಂದು ಆರೋಗ್ಯ ಸಚಿವಾಲಯ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದೆ.

    2022ರ ಮೇ 29 ರಂದು ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೇವಾಲಾ (Sidhu Moose Wala) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಇತ್ತ ಇದ್ದ ತಮ್ಮ ಏಕೈಕ ಮಗನನ್ನು ಕಳೆದುಕೊಂಡ ಸುಮಾರು ಎರಡು ವರ್ಷಗಳ ನಂತರ ದಂಪತಿ ಎರಡನೇ ಮಗುವನು ಪಡೆಯುವ ಸಲುವಾಗಿ IVF ಮೊರೆ ಹೋಗಿದ್ದರು. ಇದನ್ನೂ ಓದಿ: ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ

    ಈ ಸಂಬಂಧ ಎಎಪಿ ನೇತೃತ್ವದ ಸರ್ಕಾರವು ಬುಧವಾರ ಟ್ವೀಟ್ ಮಾಡಿದ್ದು, ಚರಣ್ ಕೌರ್‌ ಅವರೇ ಸಿಎಂ ಭಗವಂತ್ ಮಾನ್ ಅವರು ಯಾವಾಗಲೂ ಪಂಜಾಬಿಗಳ ಭಾವನೆಗಳು ಮತ್ತು ಘನತೆಯನ್ನು ಗೌರವಿಸುತ್ತಾರೆ. ಆದರೆ ದೇಶದ ಆಡಳಿತದಲ್ಲಿರುವ ಕೇಂದ್ರ ಸರ್ಕಾರವು ಪಂಜಾಬ್ ಸರ್ಕಾರದಿಂದ ವರದಿಯನ್ನು ಕೇಳಿದೆ. ಸತ್ಯಾಸತ್ಯತೆಗಳನ್ನು ನೋಡುವಂತೆ ಜನರನ್ನು ಒತ್ತಾಯಿಸಿ ಮತ್ತು ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಬರೆದುಕೊಂಡಿದೆ.

  • ಮೋದಿ ಕೆಲಸಗಳಿಂದ ಪ್ರೇರಣೆ- ಆಪ್‌ನ ಮೂವರು ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

    ಮೋದಿ ಕೆಲಸಗಳಿಂದ ಪ್ರೇರಣೆ- ಆಪ್‌ನ ಮೂವರು ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆ

    ಚಂಡೀಗಢ:  ಇಲ್ಲಿನ ಮುನ್ಸಿಪಲ್ ಕಾರ್ಪೊರೇಷನ್‌ನ (Chandigarh Municipal Corporation) ಮೂವರು ಆಮ್‌ ಆದ್ಮಿ ಪಕ್ಷದ (AAP) ಕೌನ್ಸಿಲರ್‌ಗಳು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

    ಕೌನ್ಸಿಲರ್‌ಗಳಾದ ಪೂನಂ ದೇವಿ, ನೇಹಾ ಮುಸಾವತ್ ಮತ್ತು ಗುರ್ಚರಣ್ ಕಲಾ ಅವರು ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿಗೆ (BJP) ಸೇರ್ಪಡೆಯಾದರು. ಚುನಾವಣೆಯಲ್ಲಿ ಅಕ್ರಮಗಳ ಆರೋಪದ ನಂತರ ಹೊಸದಾಗಿ ಚುನಾಯಿತರಾದ ಮೇಯರ್ ಮನೋಜ್ ಸೋಂಕರ್ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನವೇ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಚಂಡೀಗಢ ಮೇಯರ್ ಸ್ಥಾನಕ್ಕೆ ಬಿಜೆಪಿಯ ಮನೋಜ್ ಸೋಂಕರ್ ರಾಜೀನಾಮೆ

    ಈ ಕುರಿತು ಪ್ರತಿಕ್ರಿಯಿಸಿದ ನೇಹಾ ಮುಸಾವತ್, ಎಎಪಿ ನಮಗೆ ಸುಳ್ಳು ಭರವಸೆಗಳನ್ನು ನೀಡಿದೆ. ಇಂದು, ಪ್ರಧಾನಿ ಮೋದಿಯವರ (Narendra Modi) ಕೆಲಸ- ಕಾರ್ಯಗಳಿಂದ ಪ್ರೇರಿತವಾಗಿ ಬಿಜೆಪಿಗೆ ಸೇರಿದ್ದೇನೆ ಎಂದು ಹೇಳಿದರು. ಇನ್ನು  ಪ್ರಧಾನಿ ಮೋದಿಯವರು ಮಾಡಿದ ಕೆಲಸಗಳಿಂದ ಸ್ಫೂರ್ತಿ ಪಡೆದು ಬಿಜೆಪಿಗೆ ಸೇರಿದ್ದಾಗಿ ತಿಳಿಸಿದ ಪೂನಂ ದೇವಿ, ಎಎಪಿಯನ್ನು ನಕಲಿ ಪಕ್ಷ ಎಂದು ಕರೆದರು.

    ಜನವರಿ 30 ರಂದು ನಡೆದ ಮೇಯರ್ ಚುನಾವಣೆಗೆ ಇಂಡಿಯಾ ಮೈತ್ರಿಕೂಟ ಪ್ರತಿನಿಧಿಸಿದ್ದ ಎಎಪಿ ಮತ್ತು ಕಾಂಗ್ರೆಸ್‌ ಜಂಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ತೀವ್ರ ಪೈಪೋಟಿ ನಡೆದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಕುಲದೀಪ್ ಸಿಂಗ್ ಅವರ 8 ಮತಗಳು ಅಸಿಂಧುಗೊಂಡಿದ್ದರಿಂದ ಬಿಜೆಪಿ ಅಭ್ಯರ್ಥಿ ಮನೋಜ್ ಸೋಂಕರ್ ಅವರನ್ನು ವಿಜಯಿ ಎಂದು ಘೋಷಿಸಲಾಯಿತು.

    ಕಾಂಗ್ರೆಸ್ ಮತ್ತು ಎಎಪಿ ಚುನಾವಣಾ ಫಲಿತಾಂಶಕ್ಕೆ ಸ್ಪರ್ಧಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಚುನಾವಣಾಧಿಕಾರಿಯು ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಮತಯಂತ್ರಗಳನ್ನು ತಿರುಚುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ ಎಂದು ಇಂಡಿಯಾ ಒಕ್ಕೂಟವು ಆರೋಪಿಸಿದೆ. ಈ ವಿಷಯವು ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿರುವ ಕಾರಣ, ಸೋಂಕರ್ ಅವರು ಮೇಯರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

  • ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಮಲೋತ್ಪತ್ತಿ – I.N.D.I.A ಒಕ್ಕೂಟಕ್ಕೆ ಭಾರೀ ಮುಖಭಂಗ

    ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಮಲೋತ್ಪತ್ತಿ – I.N.D.I.A ಒಕ್ಕೂಟಕ್ಕೆ ಭಾರೀ ಮುಖಭಂಗ

    ಚಂಡೀಗಢ: ಸಾರ್ವತ್ರಿಕ ಚುನಾವಣೆ ಸನಿಹದಲ್ಲಿ ವಿಪಕ್ಷಗಳ ಒಕ್ಕೂಟ I.N.D.I.Aಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ಲೋಕಸಭೆ ಚುನಾವಣೆಗೆ ಮುನ್ನ ಮೊದಲ ಪರೀಕ್ಷೆ ಎಂದೇ ಭಾವಿಸಿದ್ದ ಚಂಡೀಗಢ ಮೇಯರ್ ಚುನಾವಣೆಯಲ್ಲಿ (Chandigarh Mayor Elections) I.N.D.I.A ಒಕ್ಕೂಟಕ್ಕೆ ಸೋಲಾಗಿದ್ದು, ತೀವ್ರ ಮುಖಭಂಗ ಅನುಭವಿಸಿದೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸಿ, ಅಧಿಕಾರದ ಗದ್ದುಗೆ ಏರಿದೆ.

    ಈ ಚುನಾವಣೆಗಾಗಿ ಆಮ್‌ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ (AAP – Congress) ಮೈತ್ರಿಯಾಗಿ ಸ್ಪರ್ಧಿಸಿದ್ದವು. ಮೇಯರ್ ಹುದ್ದೆಗೆ ಎಎಪಿ, ಉಪ ಮೇಯರ್ ಹುದ್ದೆಗೆ ಕಾಂಗ್ರೆಸ್ ಸ್ಪರ್ಧೆ ಮಾಡಿತ್ತು. ಆದ್ರೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ (BJP Candidate) ಗೆಲುವು ಸಾಧಿಸಿದ್ದು, ನಾಯಕರಿಗೆ ಶಾಕ್‌ ಕೊಟ್ಟಂತಾಗಿದೆ. ಬಿಜೆಪಿ ಅಭ್ಯರ್ಥಿ ಮನೋಜ್‌ ಸೋಂಕರ್‌ ಅವರು ಆಪ್‌ ಅಭ್ಯರ್ಥಿ ಕುಲದೀಪ್‌ ಕುಮಾರ್‌ರನ್ನ ಸೋಲಿಸಿ ಅಧಿಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಸೋಂಕರ್‌ 16 ಮತಗಳನ್ನು ಪಡೆದರೆ, ಕುಮಾರ್‌ 12 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.

    ಭಾರೀ ಹೈಡ್ರಾಮಾ: 
    ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಎಎಪಿ ಹಾಗೂ ಕಾಂಗ್ರೆಸ್‌ ನಾಯಕರಿಂದ ಭಾರೀ ಹೈಡ್ರಾಮಾ ನಡೆದಿದೆ. ಬಿಜೆಪಿ 13 ಕೌನ್ಸಿಲರ್‌ ಸದಸ್ಯತ್ವ ಬಲ ಹೊಂದಿತ್ತು, ಕಾಂಗ್ರೆಸ್‌ 7 ಹಾಗೂ ಎಎಪಿ 13 ಸದಸ್ಯರ ಬಲ ಹೊಂದಿತ್ತು. ಚುನಾವಣಾಧಿಕಾರಿಗಳು 8 ಮತಗಳನ್ನು ಅಮಾನ್ಯವೆಂದು ಘೋಷಿಸಿದ್ದರಿಂದ ಮೈತ್ರಿಕೂಟಕ್ಕೆ ಸೋಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಸಹ ಬಿಜೆಪಿ ವಿರುದ್ಧ ವಂಚನೆ ಆರೋಪ ಮಾಡಿದ್ದಾರೆ.

    ಮೇಯರ್‌ ಚುನಾವಣೆಯಲ್ಲಿ ಈ ಮಟ್ಟಕ್ಕಿಳಿಯಲು ಸಾಧ್ಯವಾದರೆ, ರಾಷ್ಟ್ರೀಯ ಚುನಾವಣೆಯಲ್ಲಿ ಯಾವುದೇ ಮಟ್ಟಕ್ಕೆ ಹೋಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಮಗೆ ನಿತೀಶ್‌ ಕುಮಾರ್‌ ಅಗತ್ಯವಿಲ್ಲ: ಮೈತ್ರಿ ಮುರಿದ ಬಳಿಕ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ

    ಕೋರ್ಟ್‌ ಮೆಟ್ಟಿಲೇರಿದ ಆಪ್‌:
    ಮೇಯರ್‌ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಎಎಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಪಂಜಾಬ್ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ಅವರು ತುರ್ತು ವಿಚಾರಣೆಗಾಗಿ ಕುಲದೀಪ್‌ ಕುಮಾರ್ ಅವರ ಮನವಿಯನ್ನು ಉಲ್ಲೇಖಿಸಿದ್ದಾರೆ. ಯಾವುದೇ ಕಾರಣ ನೀಡದೇ 8 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ. ಆದ್ದರಿಂದ ಈ ಚುನಾವಣೆ ದಾಖಲೆಗಳನ್ನು ಸೀಲ್‌ ಮಾಡುವಂತೆ ಒತ್ತಾಯಿಸಿದ್ದಾರೆ. ಹೈಕೋರ್ಟ್‌ ಬುಧಾವಾರಕ್ಕೆ (ಜ.31) ವಿಚಾರಣೆ ಮುಂದೂಡಿದೆ. ಇದನ್ನೂ ಓದಿ: ಬಿಜೆಪಿ ಮುಖಂಡನ ಹತ್ಯೆ: 15 ಪಿಎಫ್‌ಐ ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್

  • ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ

    ವೇದಿಕೆಯಲ್ಲೇ ಕುಸಿದು ಬಿದ್ದು ಹನುಮ ವೇಷಧಾರಿ ನಿಧನ

    ಚಂಡೀಗಢ: ಹನುಮ ವೇಷಧಾರಿಯೊಬ್ಬರು (Lord Hanuman) ವೇದಿಕೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಹರಿಯಾಣದ ಭಿವಾನಿಯಲ್ಲಿ ನಡೆದಿದೆ.

    ಮೃತರನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಇವರು ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದೀಗ ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ರಾಮಲೀಲಾ ಸ್ಕಿಟ್‌ ಹಮ್ಮಿಕೊಳ್ಳಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಹರೀಶ್‌ ಮೆಹ್ತಾ (Harish Mehta) ಅವರು ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದರು. ಸ್ಕಿಟ್‌ ಮಾಡ್ತಿದ್ದಂತೆಯೇ  ಹರೀಶ್‌ ಮೆಹ್ತಾ ಏಕಾಏಕಿ ಕುಸಿದು ಬಿದ್ದರು. ಆದರೆ ಪ್ರೇಕ್ಷಕರು ಮಾತ್ರ ಇದು ಸ್ಕಿಟ್‌ ಭಾಗವೆಂದು ಭಾವಿಸಿ ಕೂಡಲೇ ಯಾರೂ ರಕ್ಷಣೆಗೆ ಬರಲಿಲ್ಲ. ಆದರೆ ಕೆಲಹೊತ್ತಾದರೂ ಮೆಹ್ತಾ ಅವರು ಎದ್ದೇಳಲೇ ಇಲ್ಲ. ಇದರಿಂದ ಆತಂಕಗೊಂಡ ಜನ ತಕ್ಷಣವೇ ಕಾರ್ಯಪ್ರವೃತ್ತರಾದರು.

    ಕೂಡಲೇ ಸ್ಥಳೀಯರು ಮೆಹ್ತಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಅವರಿಗೆ ಹೃದಯಾಘಾತವಾಗಿರುವುದಾಗಿ ವೈದರು ಹೇಳಿದ್ದಾರೆ. ಹರೀಶ್‌ ಮೆಹ್ತಾ ಅವರು, ಕಳೆದ 25 ವರ್ಷಗಳಿಂದ ಹಲವಾರು ರಾಮಲೀಲಾ ಸ್ಕಿಟ್‌ಗಳಲ್ಲಿ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

    ಇತ್ತ ನಿನ್ನೆ ಅಯೋಧ್ಯೆಯಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು. ಅಯೋಧ್ಯೆಯಲ್ಲಿ ‘ಪ್ರಾಣ ಪ್ರತಿಷ್ಠಾ’ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದ 65 ವರ್ಷದ ವ್ಯಕ್ತಿಯನ್ನು ಇಂಡಿಯನ್ ಏರ್ ಫೋರ್ಸ್ (IAF) ತಂಡವು ರಕ್ಷಿಸಿದೆ.

  • Ayodhya: ಚಂಡೀಗಢದಲ್ಲಿ 7 ದಿನಗಳ ಕಾಲ ಅದ್ಧೂರಿ ಕಾರ್ಯಕ್ರಮ, 108 ಕ್ವಿಂಟಾಲ್ ಲಡ್ಡು ವಿತರಣೆ

    Ayodhya: ಚಂಡೀಗಢದಲ್ಲಿ 7 ದಿನಗಳ ಕಾಲ ಅದ್ಧೂರಿ ಕಾರ್ಯಕ್ರಮ, 108 ಕ್ವಿಂಟಾಲ್ ಲಡ್ಡು ವಿತರಣೆ

    ಚಂಡೀಗಢ: ಅಯೋಧ್ಯೆಯಲ್ಲಿ ರಾಮಮಂದಿರದ (Ayodhya Ram mandir) ಪ್ರತಿಷ್ಠಾಪನೆಯನ್ನು ಸ್ಮರಣೀಯವಾಗಿಸಲು ಚಂಡೀಗಢ (Chandigarh) ಸಕಲ ರೀತಿಯಲ್ಲಿ ಸಿದ್ಧವಾಗಿದೆ. ಜನವರಿ 15 ರಿಂದ ಜನವರಿ 22 ರವರೆಗೆ ಒಂದರ ಮೇಲೊಂದರಂತೆ ವಿವಿಧ ಕಾರ್ಯಕ್ರಮಗಳು ನಗರದ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ. ಇದಕ್ಕಾಗಿ ಇಡೀ ನಗರ ಬಣ್ಣ ಬಣ್ಣದ ಲೈಟಿಂಗ್ಸ್‌ಗಳಿಂದ ಕಂಗೊಳಿಸಲಿದೆ.

    ರಾಮಲಲ್ಲಾ ಸಪ್ತಾಹದ ಅಡಿಯಲ್ಲಿ ನಗರದ ಇತಿಹಾಸದಲ್ಲಿಯೇ 7 ದಿನಗಳ ಕಾಲ ಅದ್ದೂರಿ ಕಾರ್ಯಕ್ರಮವನ್ನು ಚಂಡೀಗಢದಲ್ಲಿ ಆಯೋಜಿಸಲಾಗುವುದು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಶ್ರೀ ರಾಮ ಸೇವಾ ಕೃಪಾ ಟ್ರಸ್ಟ್‌ನ ಬ್ಯಾನರ್ ಅಡಿಯಲ್ಲಿ ನಗರದ ಪ್ರ ತಿಯೊಂದು ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳ ಪ್ರಮುಖ ಪ್ರತಿನಿಧಿಗಳು ಜನವರಿ 15 ರಿಂದ 22 ರವರೆಗೆ ರಾಮಲಲ್ಲಾ ಸಪ್ತಾಹವನ್ನು ಆಯೋಜಿಸುತ್ತಾರೆ. ಈ ಪ್ರತಿನಿಧಿಗಳಲ್ಲಿ ನಗರ ಮೇಯರ್ ಅನುಪ್ ಗುಪ್ತಾ, ಭಜನಾ ಚಕ್ರವರ್ತಿ ಕನ್ಹಯ್ಯಾ ಮಿತ್ತಲ್, ಪ್ರದೀಪ್ ಬನ್ಸಾಲ್, ಜಗಮೋಹನ್ ಗರ್ಗ್ ಮತ್ತು ಅನೇಕರು ಸೇರಿದ್ದಾರೆ. ಚಂಡೀಗಢದಲ್ಲಿ ಒಂದು ವಾರದ ಈ ಬೃಹತ್ ಕಾರ್ಯಕ್ರಮವು ಪ್ರದೀಪ್ ಬನ್ಸಾಲ್ ನೇತೃತ್ವ ದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವು ವಿಶ್ವದ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಲಿದೆ.

    ಕಲಶಯಾತ್ರೆಯೊಂದಿಗೆ ಕಾರ್ಯಕ್ರಮ ಆರಂಭ: ಮೊದಲನೆಯದಾಗಿ ಜನವರಿ 15 ರಂದು ಬೆಳಗ್ಗೆ ಕಲಶಯಾತ್ರೆಯು ಕೇಸರಿ ಬಣ್ಣದ ಬಟ್ಟೆಯಲ್ಲಿ ಸೆಕ್ಟರ್ 23 ರ ದೇವಸ್ಥಾನದಿಂದ ಪ್ರಾರಂಭವಾಗಿ ಸೆಕ್ಟರ್ 22, 21 ರ ಮೂಲಕ ಸಾಗಿ ಸೆಕ್ಟರ್ 34 ರ ಸ್ಥಳವನ್ನು ತಲುಪಲಿದೆ. ಈ ಕಲಶಯಾತ್ರೆಯಲ್ಲಿ ಸಾವಿರಾರು ರಾಮಭಕ್ತರು ಭಾಗವಹಿಸಲಿದ್ದಾರೆ. ಮಹಿಳೆಯರು ತಮ್ಮ ತಲೆಯ ಮೇಲೆ ಪವಿತ್ರ ಕಲಶಗಳನ್ನು ಇಟ್ಟುಕೊಂಡು ಸಾಗುತ್ತಾರೆ. ಇತರ ಭಕ್ತರು ಅವರ ಹಿಂದೆ ಬ್ಯಾಂಡ್‌ ನೊಂದಿಗೆ ಮೆರವಣಿಗೆ ಮಾಡುತ್ತಾರೆ. ಇದಾದ ಬಳಿಕ ಜನವರಿ 15ರ ಸಂಜೆ ‘ಜೋ ರಾಮ್ಕೋ ಲಾಯೇ ಹೈ’ ಖ್ಯಾತಿಯ ಭಜನಾ ಸಾಮ್ರಾಟ ಕನ್ಹಯ್ಯಾ ಮಿತ್ತಲ್ ಅವರು ದೇಶದಲ್ಲೇ ಪ್ರಥಮ ಬಾರಿಗೆ ಶ್ರೀ ರಾಮ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಬಳಿಕ ಜನವರಿ 16 ಮತ್ತು 17 ರಂದು ‘ಅಪ್ನೆ – ಅಪ್ನೆ ರಾಮ್’ ಕಾರ್ಯಕ್ರಮದಡಿಯಲ್ಲಿ ಕುಮಾರ್ ವಿಶ್ವಾಸ್ ಅವರಿಂದ ಶ್ರೀ ರಾಮಕಥಾ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದನ್ನೂ ಓದಿ: Ram Mandir: ಏನಿದು ಪ್ರಾಣ ಪ್ರತಿಷ್ಠೆ? ಆಚರಣೆ ಹೇಗಿರುತ್ತೆ?

    1 ಲಕ್ಷದ 8 ಸಾವಿರ ದೀಪಗಳನ್ನು ಬೆಳಗಿಸುವುದು: ಜನವರಿ 18, 19 ಮತ್ತು 20ರಂದು ದೀಪ ಬೆಳಗಿಸುವ ಕಾರ್ಯಕ್ರಮ ನಡೆಯಲಿದೆ. ನಗರದಾದ್ಯಂತ ಕಾಲೋನಿಗಳಲ್ಲಿ 1 ಲಕ್ಷದ 8 ಸಾವಿರ ದೀಪಗಳನ್ನು ವಿತರಿಸಲಾಗುವುದು. ಈ ಮೂಲಕ ನಗರದ ಪ್ರತಿ ಮನೆಗಳಲ್ಲಿ ದೀಪಾವಳಿ ಆಚರಿಸಲಾಗುವುದು. ಇದಲ್ಲದೇ 108 ಕ್ವಿಂಟಾಲ್ ಲಡ್ಡು ವಿತರಿಸಲು ವ್ಯವಸ್ಥೆ ಮಾಡಲಾಗುವುದು. ಜನವರಿ 21 ರಂದು ಸೆಕ್ಟರ್ 17 ಪ್ಲಾಜಾದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸುವ ಮೂಲಕ ಶ್ರೀ ರಾಮನ ಆಕೃತಿಯನ್ನು ಮಾಡಲಾಗುವುದು. ಜನವರಿ 22 ರಂದು ಶ್ರೀ ರಾಮಲಲ್ಲಾ ಅವರ ಜೀವನ ಸಮರ್ಪಣೆಯ ಸುವರ್ಣ ಸಂದರ್ಭವನ್ನು ಚಂಡೀಗಢ ನಗರದಲ್ಲಿ ದೇಶದ ಮೊದಲ ಶ್ರೀ ರಾಮ ಭಜನಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸ್ಮರಣೀಯಗೊಳಿಸಲಾಗುವುದು ಎಂದು ಟ್ರಸ್ಟ್‌ ಮಾಹಿತಿ ನೀಡಿದೆ.

    ಟ್ರಸ್ಟ್‌ನಲ್ಲಿರುವ ಪ್ರಮುಖರು: ಖ್ಯಾತ ಭಜನ್ ಗಾಯಕ ಕನ್ಹಯ್ಯಾ ಮಿತ್ತಲ್, ಹಿರಿಯ ಬಿಜೆಪಿ ನಾಯಕ ರಣಬೀರ್ ಭಟ್ಟಿ , ಮೇಯರ್ ಅನೂಪ್ ಗುಪ್ತಾ, ಜಗಮೋಹನ್ ಗರ್ಗ್, ಸತ್ಪ್ರ ಕಾಶ್ ಅಗರ್ವಾಲ್, ಸತ್ಪಾ ಲ್ ಬನ್ಸಾಲ್, ಪ್ರದೀಪ್ಗೋಯಲ್, ನವರಾಜ್ ಮಿತ್ತಲ್, ಅನುಭವ್ ಗುಪ್ತಾ, ಚೇತನ್ ಮಿತ್ತಲ್, ನವನೀತ್ ಗುಪ್ತಾ, ಅಜಯ್ನಾಥ್ ಬನ್ಸಾಲ್, ತ್ರಿಲೋಕಿ ಎ. ಗರ್ಗ್, ಗಿರೀಶ್ ಗುಪ್ತಾ ಮತ್ತು ಹರಿಂದರ್ ಬುಧಿರಾಜ ಟಿಟು.

  • ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು

    ನಿರುದ್ಯೋಗದಿಂದ ಬೇಸತ್ತು ಸಾಯೋದೇ ಲೇಸು ಅನ್ನುತ್ತಿದ್ದಳು- ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟವಳ ತಾಯಿ ಮಾತು

    ಚಂಡೀಗಢ: ಆಕೆ ಚೆನ್ನಾಗಿ ಓದಿದ್ದು, ಉದ್ಯೋಗದಿಂದ ವಂಚಿತಳಾಗಿದ್ದಳು. ಎಲ್ಲಿಯೂ ಕೆಲಸ ಸಿಗುತ್ತಿಲ್ಲ ಎಂದು ಬೇಸರಗೊಂಡಿದ್ದಳು. ಅಲ್ಲದೆ ಇದಕ್ಕಿಂತ ಸಾಯುವುದೇ ಬೆಸ್ಟ್ ಅಂತ ಹೇಳುತ್ತಿದ್ದಳು ಎಂದು ಸಂಸತ್ತಿನ ಹೊರಗಡೆ ಬಂಧಿಸಲ್ಪಟ್ಟಿರುವ ನೀಲಂ ತಾಯಿ ಹೇಳಿದ್ದಾರೆ.

    ಘಟನೆಯ (Security breach in Lok Sabha)  ಬಳಿಕ ಹರಿಯಾಣದ ಜಿಂದ್‌ ಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗಳು ಯಾವಾಗಲೂ ಉದ್ಯೋಗ ಸಿಗುತ್ತಿಲ್ಲ ಎಂದು ಚಿಂತಿತಳಾಗಿದ್ದಳು. ಇಂದು ಆಕೆಯ ಜೊತೆ ಮಾತನಾಡಿದ್ದೇನೆ. ಆದರೆ ಆಕೆ ದೆಹಲಿ ಘಟನೆಯ ಬಗ್ಗೆ ಹೇಳಿಲ್ಲ. ನಾನು ಇಷ್ಟೆಲ್ಲಾ ಓದಿದರೂ ನನಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ ಕೆಲಸ ಇಲ್ಲದೇ ಬದುಕುವುದಕ್ಕಿಂತ ಸಾಯುವುದೇ ಒಳ್ಳೆಯದು ಎಂದು ಹೇಳಿರುವುದಾಗಿ ನೀಲಂ ತಾಯಿ ಹೇಳಿದ್ದಾರೆ.

    ನೀಲಂ (Neelam) ಸಹೋದರ ಮಾತನಾಡಿ, ಅವಳು ದೆಹಲಿಗೆ ಹೋಗಿದ್ದಾಳೆಂದು ನಮಗೆ ತಿಳಿದಿರಲಿಲ್ಲ. ಅವಳು ತನ್ನ ಅಧ್ಯಯನಕ್ಕಾಗಿ ಹಿಸಾರ್‍ನಲ್ಲಿದ್ದಾಳೆಂದು ನಮಗೆ ತಿಳಿದಿತ್ತು. ನಿನ್ನೆಯಷ್ಟೇ ನಮ್ಮನ್ನು ಭೇಟಿ ಮಾಡಿ ವಾಪಸ್ಸಾಗಿದ್ದಳು. ಬಿಎ, ಎಂಎ, ಬಿಎಡ್, ಎಂಎಡ್, ಸಿಟಿಇಟಿ, ಎಂಫಿಲ್ ಮತ್ತು ನೆಟ್ ವಿದ್ಯಾರ್ಹತೆ ಪಡೆದಿದ್ದಾಳೆ. ನಿರುದ್ಯೋಗ ಸಮಸ್ಯೆ ಕುರಿತು ಹಲವು ಬಾರಿ ಪ್ರಸ್ತಾಪಿಸಿದ್ದಳು. ರೈತರ ಪ್ರತಿಭಟನೆಯಲ್ಲೂ ಪಾಲ್ಗೊಂಡಿದ್ದಳು ಎಂದಿದ್ದಾರೆ.

    ಇಂದು ಸಂಸತ್ತಿನ (Smoke Bomb in Loksabha) ಒಳಗಡೆ ಹಾಗೂ ಹೊರಗಡೆ ಎರಡು ಪ್ರತ್ಯೇಕ ಘಟನೆ ನಡೆದಿದೆ. ಒಳಗಡೆ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂಬಿಬ್ಬರು ಯುವಕರು ಗ್ಯಾಲರಿಯಿಂದ ಜಿಗಿದು ಏಕಾಏಕಿ ಸ್ಮೋಕ್ ಬಾಂಬ್ ಹಾಕಿದ್ದಾರೆ. ಇದರಿಂದ ಕಲಾಪದಲ್ಲಿ ತಲ್ಲೀನರಾಗಿದ್ದ ಸಂಸದರೆಲ್ಲರೂ ಒಂದು ಬಾರಿ ಗಲಿಬಿಲಿಗೊಂಡಿದ್ದಾರೆ. ಅಲ್ಲದೇ ಆರೋಪಿಗಳಲ್ಲಿ ಒಬ್ಬನಾದ ಸಾಗರ್ ಶರ್ಮಾನನ್ನು ಹಿಡಿದು ಥಳಿಸಿದ್ದಾರೆ.

    ಇತ್ತ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸುತ್ತಿದ್ದ ಹಿಸಾರ್‍ನ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್‍ನ ಅಮೋಲ್ ಶಿಂಧೆ (25) ಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

  • ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ – ಇಬ್ಬರು ಶೂಟರ್ ಸೇರಿ ಮೂವರು ಅರೆಸ್ಟ್

    ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ ಪ್ರಕರಣ – ಇಬ್ಬರು ಶೂಟರ್ ಸೇರಿ ಮೂವರು ಅರೆಸ್ಟ್

    ಜೈಪುರ: ರಾಷ್ಟ್ರೀಯ ರಜಪೂತ ಕರ್ಣಿ ಸೇನಾ (Rashtriya Rajput Karni Sena) ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ (Sukhdev Singh Gogamedi) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಶೂಟರ್‌ಗಳು ಮತ್ತು ಒಬ್ಬ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಕ್ರೈಂ ಬ್ರಾಂಚ್ ಮತ್ತು ರಾಜಸ್ಥಾನ ಪೊಲೀಸರು (Rajasthan Police) ತಡರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ ಚಂಡೀಗಢದಲ್ಲಿ (Chandigarh) ಆರೋಪಿಗಳನ್ನು ಬಂಧಿಸಿದ್ದಾರೆ. ಶೂಟರ್‌ಗಳಾದ ರೋಹಿತ್ ರಾಥೋಡ್, ನಿತಿನ್ ಫೌಜಿ ಹಾಗೂ ಸಹಚರ ಉಧಮ್ ಬಂಧಿತ ಆರೋಪಿಗಳು. ಈ ಹತ್ಯೆ ಪ್ರಕರಣದಲ್ಲಿ ಉಧಮ್ ಪಾತ್ರ ಏನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

    ದೆಹಲಿ ಪೊಲೀಸರು ರೋಹಿತ್ ಮತ್ತು ಉಧಮ್‌ನನ್ನು ದೆಹಲಿಗೆ ಕರೆತಂದಿದ್ದು, ನಿತಿನ್ ಫೌಜಿ ರಾಜಸ್ಥಾನ ಪೊಲೀಸರ ವಶದಲ್ಲಿದ್ದಾನೆ. ಈ ಹಿಂದೆ ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂ. ನಗದು ಬಹುಮಾನವನ್ನು ಪೊಲೀಸರು ಘೋಷಿಸಿದ್ದರು.

    ಆರೋಪಿಗಳು ಕೊಲೆಯ ಬಳಿಕ ತಮ್ಮ ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ರಾಜಸ್ಥಾನದ ಹರಿಯಾಣದ ಹಿಸ್ಸಾರ್‌ಗೆ ತೆರಳಿದ್ದರು. ಬಳಿಕ ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿದ್ದರು. ನಂತರ ಚಂಡೀಗಢಕ್ಕೆ ಹೋಗಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಡಲಾಮೆಗಳಿಗಾಗಿ 3 ತಿಂಗಳು ಕ್ಷಿಪಣಿ ಪರೀಕ್ಷೆ ಬಂದ್

    ಡಿಸೆಂಬರ್ 5 ರಂದು ರಾಜಸ್ಥಾನದ ಜೈಪುರದಲ್ಲಿರುವ ಗೊಗಮೆಡಿ ಅವರ ಮನೆಗೆ ನುಗ್ಗಿದ ಅಪರಿಚಿತರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಹತ್ಯೆಯ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವ ಗ್ಯಾಂಗ್ಸ್ಟರ್ ರೋಹಿತ್ ಗೋಡಾರಾ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಗೊಗಮೆಡಿ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.

    ಶೂಟರ್‌ಗಳು ತಲೆಮರೆಸಿಕೊಂಡಿದ್ದಾಗ ಗೋಡಾರಾನ ಆಪ್ತ ಸಹಾಯಕರಾದ ವೀರೇಂದ್ರ ಚಾಹನ್ ಮತ್ತು ದನರಾಮ್‌ನೊಂದಿಗೆ ಸಂಪರ್ಕದಲ್ಲಿದ್ದರು. ಅವರ ಸೂಚನೆಯ ಮೇರೆಗೆ ಕೊಲೆ ನಡೆಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ಚಿಕ್ಕಬಳ್ಳಾಪುರದಲ್ಲಿ ಅಂಡರ್‌ಪಾಸ್‌ ಗುಂಡಿಗೆ ಬಿದ್ದ ಬೆಂಗಳೂರು ಕಾರು – ನಾಲ್ವರು ಕಾಲೇಜು ವಿದ್ಯಾರ್ಥಿಗಳು ಸಾವು

  • ಪ್ರಧಾನಿ ಮೋದಿಗೆ ಪ್ರತಿಭಟನಾಕಾರರ ದಿಗ್ಬಂಧನ- 7 ಜನ ಪೊಲೀಸರು ಅಮಾನತು

    ಪ್ರಧಾನಿ ಮೋದಿಗೆ ಪ್ರತಿಭಟನಾಕಾರರ ದಿಗ್ಬಂಧನ- 7 ಜನ ಪೊಲೀಸರು ಅಮಾನತು

    ಚಂಡೀಗಢ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಪಂಜಾಬ್‍ಗೆ (Punjab) ಭೇಟಿ ನೀಡಿದ್ದ ಸಂದರ್ಭದಲ್ಲಿ ಭದ್ರತಾ ಲೋಪ ಎಸಗಿ, ಮೇಲ್ಸೇತುವೆ ಮೇಲೆ ದಿಗ್ಬಂಧನಕ್ಕೆ ಕಾರಣರಾದ ಆರೋಪದ ಮೇಲೆ 7 ಜನ ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

    ಎಸ್‌ಪಿ ಗುರ್ಬಿಂದರ್ ಸಿಂಗ್, ಡಿಎಸ್‌ಪಿ ಶ್ರೇಣಿಯ ಅಧಿಕಾರಿಗಳಾದ ಪರ್ಸನ್ ಸಿಂಗ್, ಜಗದೀಶ್ ಕುಮಾರ್, ಇನ್‌ಸ್ಪೆಕ್ಟರ್‌ಗಳಾದ ಜತೀಂದರ್ ಸಿಂಗ್, ಬಲ್ವಿಂದರ್ ಸಿಂಗ್, ಸಬ್ ಇನ್‌ಸ್ಪೆಕ್ಟರ್ ಜಸ್ವಂತ್ ಸಿಂಗ್, ಸಹಾಯಕ ಸಬ್ ಇನ್‌ಸ್ಪೆಕ್ಟರ್ ರಮೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಪಂಜಾಬ್ ಗೃಹ ಇಲಾಖೆ ಆದೇಶ ಹೊರಡಿಸಿದೆ. ಇದನ್ನೂ ಓದಿ: ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೊಸ ದಾಖಲೆ

    ಆದೇಶದಲ್ಲಿ ಘಟನೆಯ ಕುರಿತು ಅಕ್ಟೋಬರ್ 18, 2023ರ ವರದಿಯನ್ನು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಸಲ್ಲಿಸಿದ್ದಾರೆ. ಇದರಲ್ಲಿ ರಾಜ್ಯ ಪೊಲೀಸ್ ಮುಖ್ಯಸ್ಥರು ಗುರ್ಬಿಂದರ್ ಸಿಂಗ್ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಉಲ್ಲೇಖಿಸಿದ್ದಾರೆ. ಭದ್ರತಾ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಿದ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ಈ ಹಿಂದೆ ಹಲವಾರು ಅಧಿಕಾರಿಗಳ ಲೋಪವನ್ನು ಪಟ್ಟಿ ಮಾಡಿತ್ತು.

    2022 ರ ಜ.5 ರಂದು ಫಿರೋಜ್‍ಪುರದಲ್ಲಿ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ಪ್ರಧಾನಿ ಮೋದಿಯವರ ಬೆಂಗಾವಲು ಪಡೆ ಫ್ಲೈ ಓವರ್‌ಲ್ಲಿ ಸಿಕ್ಕಿಹಾಕಿಕೊಂಡಿತ್ತು. ನಂತರ ಅವರು ರ‍್ಯಾಲಿ ಸೇರಿದಂತೆ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗದೆ ಪಂಜಾಬ್‍ನಿಂದ ಹಿಂದಿರುಗಿದ್ದರು. ಪಂಜಾಬ್ ವಿಧಾನಸಭಾ ಚುನಾವಣೆಗೂ ಮುನ್ನ ಭದ್ರತಾ ಲೋಪ ದೊಡ್ಡ ರಾಜಕೀಯ ವಿವಾದಕ್ಕೆ ಸಹ ಕಾರಣವಾಗಿತ್ತು. ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲು ಬಿಜೆಪಿ ಮನವಿ