Tag: chandigarh

  • ಪ್ರತಿದಿನ ಪತಿ ಮೊಟ್ಟೆ ತಂದುಕೊಡಲಿಲ್ಲ ಎಂದು ಪ್ರಿಯಕರನ ಜೊತೆ ಓಡಿಹೋದ್ಳು

    ಪ್ರತಿದಿನ ಪತಿ ಮೊಟ್ಟೆ ತಂದುಕೊಡಲಿಲ್ಲ ಎಂದು ಪ್ರಿಯಕರನ ಜೊತೆ ಓಡಿಹೋದ್ಳು

    ಚಂಡೀಗಡ: ಪ್ರತಿದಿನ ಪತಿ ಮೊಟ್ಟೆ ತಂದುಕೊಡಲಿಲ್ಲ ಎಂದು ಹೇಳಿ ಪತ್ನಿ ಪ್ರಿಯಕರನ ಜೊತೆ ಓಡಿ ಹೋದ ಘಟನೆ ಹರಿಯಾಣದ ಗೋರಖ್‍ಪುರ್ ನಲ್ಲಿ ನಡೆದಿದೆ.

    ಗೋರಖ್‍ಪುರದ ಕ್ಯಾಂಪಿಯರ್ ಗಂಜ್ ನಿವಾಸಿಯಾಗಿರುವ ಮಹಿಳೆ ಪತಿ ದಿನ ತಿನ್ನಲು ಮೊಟ್ಟೆ ತಂದು ಕೊಡುತ್ತಿರಲಿಲ್ಲ ಎಂದು ಪ್ರಿಯಕರನ ಜೊತೆ ಓಡಿ ಹೋದಳು. ನಾಲ್ಕು ತಿಂಗಳ ಹಿಂದೆ ಕೂಡ ಮಹಿಳೆ ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಳು. ಮನೆಗೆ ಹಿಂದಿರುಗಿ ಬಂದಾಗ ಪೊಲೀಸರ ಬಳಿ ಇದೇ ಕಾರಣವನ್ನು ನೀಡಿದ್ದಳು.

    ಒಂದು ವರ್ಷಗಳಿಂದ ಮಹಿಳೆ ಮನೆಯ ಹತ್ತಿರದಲ್ಲೇ ವಾಸಿಸುವ ಯುವಕನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ. ಪತ್ನಿ ಯುವಕನ ಜೊತೆ ಓಡಿ ಹೋದ ಬಳಿಕ ಆಕೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಮಹಿಳೆ ಮೊಟ್ಟೆಯನ್ನು ತುಂಬಾನೇ ಇಷ್ಟ ಪಡುತ್ತಿದ್ದಳು. ಒಂದು ಮೊಟ್ಟೆ ತಿಂದ ಬಳಿಕ ಮತ್ತೊಂದು ಮೊಟ್ಟೆ ಕೊಡಲಿಲ್ಲ ಎಂದು ಆಕೆ ಓಡಿ ಹೋಗಿದ್ದಳು. ಇತ್ತ ಆ ಯುವಕ ಕೂಡ ಮನೆಯಲ್ಲಿ ಇರದ ಕಾರಣ ಆತನ ಜೊತೆ ಓಡಿ ಹೋಗಿರಬಹುದು ಎಂದು ಪತಿ ಅನುಮಾನ ವ್ಯಕ್ತಪಡಿಸಿದ್ದನು.

    ಮಹಿಳೆ ತನ್ನ ಜೊತೆ ಎಂಟನೇ ತರಗತಿಯಲ್ಲಿ ಓದುತ್ತಿದ್ದ ನಾದಿನಿಯನ್ನು ಕೂಡ ತನ್ನ ಜೊತೆ ಕರೆದುಕೊಂಡು ಹೋಗಿದ್ದಳು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ದಂಪತಿ ಮದುವೆಯಾಗಿದ್ದರು.

    ಮೊಟ್ಟೆ ವಿಷಯಕ್ಕಾಗಿ ಪತಿ-ಪತ್ನಿ ನಡುವೆ ಯಾವಾಗಲೂ ಜಗಳ ನಡೆಯುತ್ತಿತು. ಈ ನಡುವೆ ಮಹಿಳೆಗೆ ಮೊಟ್ಟೆ ಇಷ್ಟ ಎಂಬ ವಿಷಯವನ್ನು ಪ್ರಿಯಕರ ತಿಳಿದಿದ್ದನು. ಹಾಗಾಗಿ ಆತ ಪ್ರತಿದಿನ ಆಕೆಗೆ ಮೊಟ್ಟೆ ತಂದು ಕೊಡುತ್ತಿದ್ದನು.

  • ಸೋಲಿನಿಂದ ಭಾವನಾತ್ಮಕ ವಿಡಿಯೋ ಹರಿಬಿಟ್ಟ ಸೋನಾಲಿ ಪೋಗಟ್

    ಸೋಲಿನಿಂದ ಭಾವನಾತ್ಮಕ ವಿಡಿಯೋ ಹರಿಬಿಟ್ಟ ಸೋನಾಲಿ ಪೋಗಟ್

    ಚಂಡೀಗಢ: ಹರ್ಯಾಣ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋನಾಲಿ ಪೋಗಟ್ ಸೋಲು ಅನುಭವಿಸಿದ್ದಾರೆ. ಈ ಬೇಸರದಲ್ಲೇ ಸೋನಾಲಿ ಭಾವನಾತ್ಮಕ ವಿಡಿಯೋ ಮಾಡಿ ಟಿಕ್‍ಟಾಕ್‍ನಲ್ಲಿ ಹಂಚಿಕೊಂಡಿದ್ದು, ಸದ್ಯ ಸಖತ್ ವೈರಲ್ ಆಗಿದೆ.

    ಹರ್ಯಾಣದ ಟಿಕ್‍ಟಾಕ್ ಸ್ಟಾರ್ ಸೋನಾಲಿ ಪೋಗಟ್ ಜನಪ್ರಿಯತೆಯನ್ನು ಲಾಭ ಪಡೆದುಕೊಳ್ಳಲು ಹೊರಟಿದ್ದ ಬಿಜೆಪಿ, ಅವರಿಗೆ ಅದಮ್‍ಪುರ ಕ್ಷೇತ್ರದಿಂದ ಟಿಕೆಟ್ ಕೊಟ್ಟಿತ್ತು. ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಶ್ನೋಯಿ ಎದುರು ಸೋನಾಲಿ ಪೋಗಟ್ ಸೋಲನ್ನು ಅನುಭವಿಸಿದರು. ಇದೇ ಬೇಸರದಲ್ಲಿದ್ದ ಸೋನಾಲಿ ಭಾವನಾತ್ಮಕ ವಿಡಿಯೋ ಒಂದನ್ನು ಮಾಡಿ ಟಿಕ್‍ಟಾಕ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅಲ್ಲದೆ ವಿಡಿಯೋ ನೋಡಿದ ನೆಟ್ಟಿಗರು ಸೋನಾಲಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲು ಆರಂಭಿಸಿದ್ದಾರೆ.

    https://twitter.com/scribe_prashant/status/1187343307199770624

    ಆದಂಪುರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದು, 11 ಬಾರಿ ಬಿಶ್ನೋಯಿ ಕುಟುಂಬದ ಸದಸ್ಯರೇ ಸತತವಾಗಿ ಗೆಲುವಿನ ವಿಜಯಮಾಲೆ ಧರಿಸುತ್ತಾ ಬಂದಿದ್ದಾರೆ. ಹೀಗಾಗಿ 29,471 ಮತಗಳ ಅಂತರದಿಂದ ಸೋನಾಲಿ ಪೋಗಟ್ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಬಿಷ್ಣೋಯಿ ಎದುರು ಸೋತಿದ್ದಾರೆ. ಕುಲದೀಪ್ ಬಿಶ್ನೋಯಿ 63,693 (ಶೇ.51.7) ಮತಗಳನ್ನು ಪಡೆದುಕೊಂಡಿದ್ದಾರೆ. ಸೋನಾಲಿ ಪೋಗಟ್ 34,222 (ಶೇ.27.78) ಮತಗಳನ್ನು ಪಡೆದುಕೊಂಡಿದ್ದಾರೆ.

    ಹರ್ಯಾಣದ ಹಿಸಾರ್ ಜಿಲ್ಲೆಯ ಸಂತ ನಗರದ ನಿವಾಸಿ ಸೋನಾಲಿ ತಮ್ಮ ಟಿಕ್ ಟಾಕ್ ವಿಡಿಯೋಗಳ ಮೂಲಕ ಚರ್ಚೆಯಲ್ಲಿದ್ದರು. ಹರ್ಯಾಣದ ಬಿಜೆಪಿ ಮಹಿಳಾ ಮೋರ್ಚಾದಲ್ಲಿ ಗುರುತಿಸಿಕೊಂಡಿದ್ದ ಸೋನಾಲಿ ಆದಂಪುರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದರು. ಹರ್ಯಾಣ ಬಿಜೆಪಿ ರಾಷ್ಟ್ರೀಯ ಕಾರ್ಯನಿರ್ವಾಹಕ ಸದಸ್ಯೆಯಾಗಿದ್ದರಿಂದ ಸೋನಾಲಿ ಪೋಗಟ್ ಟಿಕೆಟ್ ಪಡೆದು ಚುನಾವಣಾ ಕಣಕ್ಕೆ ಇಳಿದಿದ್ದರು.

    ಹರ್ಯಾಣದ ಮಾಜಿ ಮುಖ್ಯಮಂತ್ರಿ ಚೌಧರಿ ಭಜನ್ ಲಾಲ್ ಪುತ್ರ ಕುಲದೀಪ್ ಬಿಶ್ನೋಯಿ ಕ್ಷೇತ್ರ ಉಳಿಸಿಕೊಳ್ಳಲು ಭಾರೀ ಪ್ರಚಾರ ನಡೆಸಿದ್ದರು. ಹರ್ಯಾಣ 12 ವಿಧಾನಸಭಾ ಚುನಾವಣೆಯಲ್ಲಿ 11 ಬಾರಿ ಆದಂಪುರ ಕ್ಷೇತ್ರದಲ್ಲಿ ಬಿಶ್ನೋಯಿ ಕುಟುಂಬಸ್ಥರೇ ಗೆಲ್ಲುತ್ತಾ ಬಂದಿದ್ದಾರೆ. ಜಾಟ್ ಸಮುದಾಯದ ಕುಲದೀಪ್ ಮೂರು ಬಾರಿ ಶಾಸಕರಾಗಿ ಮತ್ತು ಒಂದು ಸಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹರ್ಯಾಣ ಕಾಂಗ್ರೆಸ್ಸಿನ ಜಾಟ್ ಸಮುದಾಯದ ನಾಯಕರಾಗಿಯೂ ಕುಲದೀಪ್ ರಾಜ್ಯದಲ್ಲಿ ಗುರುತಿಸಿಕೊಂಡಿದ್ದಾರೆ. ಹರ್ಯಾಣದ ಹೆಚ್ಚು ಜಾಟ್ ಸಮುದಾಯದ ಜನರು ವಾಸಿಸುವ ಕ್ಷೇತ್ರಗಳಲ್ಲಿ ಕುಲ್‍ದೀಪ್ ಕೈ ಅಭ್ಯರ್ಥಿಗಳ ಪ್ರಚಾರ ನಡೆಸಿದ್ದರು. ಜನ್‍ನಾಯಕ್ ಜನತಾ ಪಾರ್ಟಿಯ ರಮೇಶ್ ಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಆದಂಪುರ ವಿಧಾನಸಭಾ ಚುನಾವಣಾ ಕಣದಲ್ಲಿ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು.

  • ಹರ್ಯಾಣದಲ್ಲಿ ಹಿನ್ನಡೆ – ಬಿಜೆಪಿಯ ಮೊದಲ ವಿಕೆಟ್ ಪತನ

    ಹರ್ಯಾಣದಲ್ಲಿ ಹಿನ್ನಡೆ – ಬಿಜೆಪಿಯ ಮೊದಲ ವಿಕೆಟ್ ಪತನ

    ಚಂಡೀಗಢ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ಬೆನ್ನಲ್ಲೇ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಬರಾಲಾ ರಾಜೀನಾಮೆ ನೀಡಿದ್ದು, ಪಕ್ಷ ಹಿನ್ನಡೆಯ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ್ದಾರೆ.

    ಚುನಾವಣೆಯಲ್ಲಿ ಪಕ್ಷದ ಹಿನ್ನಡೆಯೊಂದಿಗೆ ಸ್ವತಃ ಸುಭಾಷ್ ಸ್ಪರ್ಧೆ ಮಾಡಿರುವ ತೋಹಾನಾ ಕ್ಷೇತ್ರದಲ್ಲಿ ಅವರು ಭಾರೀ ಹಿನ್ನಡೆ ಅನುಭವಿದ್ದಾರೆ. ಈ ಕಾರಣಕ್ಕೆ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

    ಕಳೆದ 5 ವರ್ಷದಿಂದ ಅಧಿಕಾರದಲ್ಲಿದ್ದ ಐವರು ಬಿಜೆಪಿ ಸಚಿವರು ಕೂಡ ಹಿನ್ನಡೆ ಅನುಭವಿಸಿದ್ದು, ಸೋಲಿನ ಸುಳಿಯಲ್ಲಿ ಸಿಲುಕಿದ್ದಾರೆ. ಅಧಿಕಾರದಲ್ಲಿ ಇದ್ದರೂ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದು ಬಿಜೆಪಿಗೆ ಭಾರೀ ಹೊಡೆತ ನೀಡಿದೆ.

    ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿಯನ್ನು ಮುಂದಿಟ್ಟುಕೊಳ್ಳದೆ ಕೇವಲ ಭಾವನಾತ್ಮಕ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ಮಾತ್ರ ಕೇಂದ್ರಿಕರಿಸಿ ಚುನಾವಣೆಯನ್ನು ಎದುರಿಸಿದ ಹಿನ್ನೆಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಒಟ್ಟು 90 ಕ್ಷೇತ್ರಗಳ ಹರ್ಯಾಣ ವಿಧಾನಸಭೆಗೆ 2014ರಲ್ಲಿ ನಡೆದ ಚುನಾವಣೆಯಲ್ಲಿ 47 ಸ್ಥಾನಗಳನ್ನು ಬಿಜೆಪಿ ಜಯಗಳಿಸುವ ಮೂಲಕ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದರು. ಓಂ ಪ್ರಕಾಶ್ ಚೌಟಾಲ ನೇತೃತ್ವದ ಇಂಡಿಯನ್ ನ್ಯಾಷನಲ್ ಲೋಕ್ ದಳ 19, ಕಾಂಗ್ರೆಸ್ 15 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಹರ್ಯಾಣದಲ್ಲಿ ಎಲ್ಲ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.

  • ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆಯನ್ನೇ ಮದ್ವೆಯಾದ ಮ್ಯಾಜಿಸ್ಟ್ರೇಟ್

    ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆಯನ್ನೇ ಮದ್ವೆಯಾದ ಮ್ಯಾಜಿಸ್ಟ್ರೇಟ್

    ಚಂಡೀಗಢ: ತನ್ನ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳೆಯನ್ನೇ ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಮದುವೆಯಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ಹಾಪುರ್ ಉಪವಿಭಾಗದ ಮ್ಯಾಜಿಸ್ಟ್ರೇಟ್(ಎಸ್‍ಡಿಎಂ) ದಿನೇಶ್ ಕುಮಾರ್ ವಿರುದ್ಧ 35 ವರ್ಷದ ಮಹಿಳೆ ಲೈಂಗಿಕ ಕಿರುಕುಳದ ದೂರು ದಾಖಲಿಸಿದ್ದರು. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ ನಾಲ್ಕು ವರ್ಷಗಳಿಂದ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

    ನನಗೆ ಎರಡು ಬಾರಿ ಗರ್ಭಪಾತವಾಗಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕುಮಾರ್ ಇತ್ತೀಚೆಗೆ ಖಡ್ಡಾದಿಂದ ಹಾಪುರಕ್ಕೆ ವರ್ಗಾವಣೆಯಾಗಿದ್ದು, ಶುಕ್ರವಾರ ಕುಶಿನಗರಕ್ಕೆ ತಮ್ಮ ಮನೆಯಿಂದ ಕೆಲವು ವಸ್ತುಗಳನ್ನು ಶಿಫ್ಟ್ ಮಾಡುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ವಿದ್ಯಾವಾಸಿನಿ ರೈ ತಿಳಿಸಿದ್ದಾರೆ.

    ದೂರಿನ ಆಧಾರದ ಮೇಲೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ಸಿಂಗ್ ಕೂಡಲೇ ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದರು. ಆದರೆ ಕುಮಾರ್ ಸಹೋದ್ಯೋಗಿಗಳು ಮಹಿಳೆಯ ಮನವೊಲಿಕೆ ಮಾಡಿ ಮಧ್ಯರಾತ್ರಿ ಕುಶಿನಗರ ಜಿಲ್ಲೆಯ ಪಾದ್ರೌನಾದ ಗಾಯತ್ರಿ ದೇವಸ್ಥಾನದಲ್ಲಿ ತಮ್ಮ ಸಮ್ಮುಖದಲ್ಲಿ ವಿವಾಹ ಮಾಡಿಸಿದ್ದಾರೆ. ಇದೀಗ ವಿವಾಹ ನೋಂದಣಿ ಕೂಡಾ ಆಗಿದೆ.

  • ಪೋರ್ನ್ ಸೈಟಿನಲ್ಲಿ ಪತ್ನಿಯ ಸೆಕ್ಸ್ ವಿಡಿಯೋ ಕಂಡು ಪತಿ ಶಾಕ್

    ಪೋರ್ನ್ ಸೈಟಿನಲ್ಲಿ ಪತ್ನಿಯ ಸೆಕ್ಸ್ ವಿಡಿಯೋ ಕಂಡು ಪತಿ ಶಾಕ್

    ಚಂಡೀಗಢ: ಪೋರ್ನ್ ವೆಬ್‍ಸೈಟಿನಲ್ಲಿ ಪತ್ನಿ ತನ್ನ ಸ್ನೇಹಿತನೊಂದಿಗೆ ಸೆಕ್ಸ್ ಮಾಡುತ್ತಿರುವ ವಿಡಿಯೋ ನೋಡಿ ಪತಿ ಶಾಕ್ ಆಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ಆರೋಪಿ ಸುನಿಲ್ ನನ್ನ ಸ್ನೇಹಿತ. ಆತನನ್ನು ನಂಬಿ ಮನೆಗೆ ಕರೆದುಕೊಂಡು ಹೋಗಿದ್ದಕ್ಕೆ ನನಗೆ ಮೋಸ ಮಾಡಿದ್ದಾನೆ. ಈಗ ನನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಆ ವಿಡಿಯೋವನ್ನು ಪೋರ್ನ್ ಸೈಟಿಗೆ ಅಪ್ಲೋಡ್ ಮಾಡಿದ್ದಾನೆ ಎಂದು ಪೊಲೀಸರಿಗೆ ಪತಿ ಸುನಿಲ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಏನಿದು ಪ್ರಕರಣ?
    ಹರಿಯಾಣದ ಗುರುಗ್ರಾಮದಲ್ಲಿ ಅನಿಲ್ ತನ್ನ ಪತ್ನಿ ಸೀಮಾ ಜೊತೆ ವಾಸಿಸುತ್ತಿದ್ದರು. ಅನಿಲ್ ಸ್ನೇಹಿತ ಸುನಿಲ್ ಆಗಾಗ ಮನೆಗೆ ಬರುತ್ತಿದ್ದನು. ಈ ವೇಳೆ ಆತನ ಸ್ನೇಹಿತ ಅನಿಲ್ ಪತ್ನಿಯನ್ನು ಪರಿಚಯ ಮಾಡಿಕೊಂಡಿದ್ದನು. ಬಳಿಕ ಇಬ್ಬರೂ ಸ್ನೇಹಿತರಾಗಿ ಸೀಮಾಗೆ ಆರೋಪಿ ಸುನಿಲ್ ದುಬಾರಿ ಬೆಲೆಯ ಉಡುಗೊರೆಗಳನ್ನು ತಂದು ಕೊಡುತ್ತಿದ್ದನು. ದಿನಕಳೆದಂತೆ ಅನಿಲ್ ಮನೆಯಲ್ಲಿ ಇಲ್ಲದಿದ್ದಾಗ ಪತ್ನಿ ಸೀಮಾಗೆ ಹಣ ಕೊಡುವುದಾಗಿ ಹೇಳಿ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಸೀಮಾ ಪತಿಗೆ ಮೋಸ ಮಾಡಿ ಆತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇತ್ತ ಸುನಿಲ್ ಸೀಮಾಗೆ ಕೊಡಲು ಹಣವಿಲ್ಲದಿದ್ದಾಗ ಒಂದು ಪ್ಲಾನ್ ಮಾಡಿದ್ದನು. ಸೆಕ್ಸ್ ವಿಡಿಯೋವನ್ನು ಪೋರ್ನ್ ವೆಬ್‍ಸೈಟಿಗೆ ಅಪ್ಲೋಡ್ ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಎಂದು ಸೀಮಾಗೂ ಹೇಳಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾನೆ.

    ಕೆಲ ದಿನಗಳ ನಂತರ ಪತಿ ಅನಿಲ್‍ಗೆ ಪತ್ನಿಯ ಅನೈತಿಕ ಸಂಬಂಧ ಗೊತ್ತಾಗಿದೆ. ಆಗ ಅನಿಲ್ ಪತ್ನಿಯ ಫೋನ್ ತೆಗೆದುಕೊಂಡು ನೋಡಿದಾಗ ಸುನಿಲ್ ಜೊತೆ ಸೆಕ್ಸ್ ಮಾಡಿರುವ ಅನೇಕ ವಿಡಿಯೋಗಳು ಕಂಡುಬಂದಿದೆ. ಆಗ ಸೀಮಾ, ಸುನಿಲ್ ನನ್ನನ್ನು ಬೆದರಿಸಿ ವಿಡಿಯೋಗಳನ್ನು ಮಾಡಿಕೊಂಡಿದ್ದನು ಎಂದು ಪತಿಗೆ ಸುಳ್ಳು ಹೇಳಿದ್ದಾಳೆ. ಕೊನೆಗೆ ಅನಿಲ್ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಸುನಿಲ್‍ನನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ಸಾಕ್ಷ್ಯಗಳಿಗಾಗಿ ಸುನಿಲ್ ಮತ್ತು ಸೀಮಾಳ ಫೋನ್‍ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.

  • ಲಂಡನ್‍ನಲ್ಲಿ ವಿದ್ಯಾಭ್ಯಾಸ, ಈಗ ಹರ್ಯಾಣ ಅಭಿವೃದ್ಧಿಗಾಗಿ ಬಿಜೆಪಿಯಿಂದ ಚುನಾವಣೆಗೆ ನಿಂತ ಮುಸ್ಲಿಂ ಮಹಿಳೆ

    ಲಂಡನ್‍ನಲ್ಲಿ ವಿದ್ಯಾಭ್ಯಾಸ, ಈಗ ಹರ್ಯಾಣ ಅಭಿವೃದ್ಧಿಗಾಗಿ ಬಿಜೆಪಿಯಿಂದ ಚುನಾವಣೆಗೆ ನಿಂತ ಮುಸ್ಲಿಂ ಮಹಿಳೆ

    ಚಂಡೀಗಢ: ಲಂಡನ್‍ನಲ್ಲಿ ಉನ್ನತ ಶಿಕ್ಷಣ ಮುಗಿಸಿ ಭಾರತಕ್ಕೆ ವಾಪಸ್ಸಾಗಿರುವ ಮುಸ್ಲಿಂ ಮಹಿಳೆ ಹರ್ಯಾಣ ಅಭಿವೃದ್ಧಿಗೆ ಪಣತೊಟ್ಟಿದ್ದು, ಮುಸ್ಲಿಂ ಪ್ರಾಬಲ್ಯವುಳ್ಳ ಮೇವತ್ ಜಿಲ್ಲೆಯ ಪುನ್ಹಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

    ನೌಕ್ಷಮ್ ಚೌಧರಿ(27) ಯಾವುದೇ ರಾಜಕೀಯ ಹಿನ್ನೆಲೆ ಹೊಂದಿರದೇ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ಚುನಾವಣಾ ಕಣಕ್ಕಿಳಿದಿದ್ದಾರೆ. ನೌಕ್ಷಮ್ ಅವರ ತಂದೆ ನಿವೃತ್ತ ನ್ಯಾಯಾಧೀಶರಾಗಿದ್ದು, ತಾಯಿ ಹರ್ಯಾಣ ತೆರಿಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನೌಕ್ಷಮ್ ಅವರು ದೆಹಲಿ ವಿಶ್ವವಿದ್ಯಾಲಯದ ಪ್ರತಿಷ್ಠ ಮಿರಾಂಡಾ ಹೌಸ್ ಕಾಲೇಜಿನಲ್ಲಿ ಇತಿಹಾಸ ವಿಷಯ ಸಂಬಂಧ ಪದವಿ ಮುಗಿಸಿದ್ದಾರೆ. ಬಳಿಕ ಇಟಲಿಯಲ್ಲಿ ಲಕ್ಷುರಿ ಬ್ರ್ಯಾಂಡ್ ನಿರ್ವಹಣೆ ಹಾಗೂ ಲಂಡನ್‍ನಲ್ಲಿ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ.

    ಕಳೆದ ಒಂದು ತಿಂಗಳ ಹಿಂದೆಯಷ್ಟೇ ನೌಕ್ಷಮ್ ಭಾರತಕ್ಕೆ ಹಿಂತಿರುಗಿದ್ದು, ಆಗಲೇ ಅ.21ಕ್ಕೆ ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅದರಲ್ಲೂ ಮುಸ್ಲಿಂ ಸಮುದಾಯದ ಪ್ರಾಬಲ್ಯ ಹೊಂದಿರುವ ಪುನ್ಹಾನ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ವಿಶೇಷವಾಗಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಬಿಜೆಪಿಯ ಪ್ರಾಬಲ್ಯ ಕಡಿಮೆಯಿದೆ. ಆದರೂ ಒಂದು ಮಹಿಳೆ ಧೈರ್ಯದಿಂದ ಬಿಜೆಪಿಯಿಂದಲೇ ಟಿಕೆಟ್ ಪಡೆದು, ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಇಚ್ಛಿಸಿರುವುದು ಎಲ್ಲರ ಗಮನ ಸೆಳೆದಿದೆ.

    2018ರ ನೀತಿ ಆಯೋಗದ ವರದಿ ಪ್ರಕಾರ, ಮೇವತ್ ಜಿಲ್ಲೆ ಭಾರತದಲ್ಲಿ ತೀವ್ರ ಹಿಂದುಳಿದ ಜಿಲ್ಲೆಯಾಗಿದೆ. ಯಾಕೆಂದರೆ ಇಲ್ಲಿ ರಸ್ತೆ, ಕಸ ವಿಲೇವಾರಿ ಹಾಗೂ ಇತರೆ ಮೂಲಭೂತ ಸೌಕರ್ಯವಿಲ್ಲ. ಅಲ್ಲದೆ ಇಲ್ಲಿನ ಮಹಿಳೆಯರು ಹಾಗೂ ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿರುವ ಪ್ರಕರಣ ಹೆಚ್ಚಾಗಿದೆ. ಆದ್ದರಿಂದ ಈ ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ಹಿಂದುಳಿದ ಜಿಲ್ಲೆ ಎಂದು ಘೋಷಿಸಲಾಗಿದೆ.

    ಈ ಕ್ಷೇತ್ರವನ್ನು ಅಭಿವೃದ್ಧಿಗೊಳಿಸಿ, ಈ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ನೌಕ್ಷಮ್ ಇಲ್ಲಿ ಚುನಾವಣೆಗೆ ನಿಂತಿರುವುದಾಗಿ ಹೇಳಿದ್ದಾರೆ. ಕ್ಷೇತ್ರವನ್ನು ಅಭಿವೃದ್ಧಿಗೊಳಿಸಲು ನಾನು ಇಲ್ಲಿ ಚುನಾವಣೆಗೆ ನಿಂತಿದ್ದೇನೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೆ ಅಭಿವೃದ್ಧಿ ಕಾರ್ಯ ಬೇಗನೆ ಆಗುತ್ತದೆ. ಆದ್ದರಿಂದ ಈ ಬಾರಿ ಕ್ಷೇತ್ರದ ಜನ ಬಿಜೆಪಿಗೆ ಮತ ಹಾಕಿ ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ನಾನು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡಿ ಸಾಕಷ್ಟು ಹೆಸರು ಪಡೆದಿದ್ದೇನೆ. ವಿಶ್ವದ ಪ್ರತಿಷ್ಠಿತ ಬ್ರಾಂಡ್‍ಗಳಿಗೆ ನಾನು ಕೆಲಸ ಮಾಡಿದ್ದೇನೆ. ಆದರೆ ನನಗೆ ನನ್ನ ದೇಶ ಅಭಿವೃದ್ಧಿಗೊಳ್ಳಬೇಕು, ಹರ್ಯಾಣ ಅಭಿವೃದ್ಧಿಯಾಗಬೇಕು ಎಂಬ ಆಸೆ. ಆದ್ದರಿಂದ ಆದಾಯ ತರುವ ಕೆಲಸ ಬಿಟ್ಟು ಜನಸೇವೆ ಮಾಡಲು ಬಂದಿದ್ದೇನೆ ಎಂದು ನೌಕ್ಷಮ್ ತಿಳಿಸಿದ್ದಾರೆ.

    ನೌಕ್ಷಮ್ ಅವರಿಗೆ ಪ್ರತಿಸ್ಪರ್ಧಿಯಾಗಿ 2009ರಲ್ಲಿ ಪುನ್ಹಾನ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಮೊಹಮದ್ ಲಿಯಾಸ್ ಚುನಾವಣೆಗೆ ನಿಂತಿದ್ದಾರೆ. ಈ ಹಿಂದೆ ಕ್ಷೇತ್ರದಲ್ಲಿ ಗೆದ್ದು ಬೆಂಬಲಿಗರನ್ನು ಹೊಂದಿರುವ ವಿಶ್ವಾಸದಿಂದ ಲಿಯಾಸ್ ಅವರು ನೌಕ್ಷಮ್ ಅವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲವಿಲ್ಲ. ಇಲ್ಲಿ ಕಾಂಗ್ರೆಸ್ ಬೆಂಬಲ ಹೆಚ್ಚಿದೆ. ಈ ಬಾರಿ ನಾವೇ ಗೆಲ್ಲುತ್ತೇವೆ ಎಂದು ಲಿಯಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ಸ್ನೇಹಕ್ಕಾಗಿ ಯುವತಿಗೆ ಪೋರ್ನ್ ವಿಡಿಯೋ ಸೆಂಡ್ ಮಾಡಿದ ಭೂಪ

    ಸ್ನೇಹಕ್ಕಾಗಿ ಯುವತಿಗೆ ಪೋರ್ನ್ ವಿಡಿಯೋ ಸೆಂಡ್ ಮಾಡಿದ ಭೂಪ

    ಚಂಡೀಗಢ್: ಸ್ನೇಹಿತರಾಗಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಯುವತಿಗೆ ಪೋರ್ನ್ ವಿಡಿಯೋವನ್ನು ವಾಟ್ಸಪ್‍ಗೆ ಕಳುಹಿಸುವ ಮೂಲಕ ಕಿರುಕುಳ ನೀಡಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    25 ವರ್ಷದ ಯುವತಿ ತನಗೆ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿ ಅಪರಿಚಿತ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿಯಿಂದ ಫೋನ್ ಬಂದಿದ್ದು. ಯುವತಿ ರಿಸೀವ್ ಮಾಡಿ ಮಾತನಾಡಿದ್ದಾರೆ. ಆಗ ಆರೋಪಿ ನಿಮ್ಮೊಂದಿಗೆ ಸ್ನೇಹ ಬೆಳೆಸಬೇಕೆಂದು ತಿಳಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆರೋಪಿ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ.

    ಅಷ್ಟಕ್ಕೆ ಸುಮ್ಮನಾದ ಆರೋಪಿ ಯುವತಿ ಸ್ನೇಹ ಬೆಳೆಸಬೇಕು ಎಂದು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಿದ್ದಾನೆ. ಆದರೂ ಯುವತಿ ಯಾವುದಕ್ಕೂ ಪ್ರತಿಕ್ರಿಯಿಸಲಿಲ್ಲ. ನಂತರ ಬೇರೆ ಬೇರೆ ನಂಬರ್ ಗಳಿಂದ ಫೋನ್ ಮಾಡಿದ್ದಾನೆ. ಜೊತೆಗೆ ಯುವತಿಯ ವಾಟ್ಸಪ್‍ಗೆ ಪೋರ್ನ್ ಮತ್ತು ಅಶ್ಲೀಲ ವಿಡಿತಯೋವನ್ನು ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೊದಲಿಗೆ ನಾನು ಆತನ ಕರೆಗಳನ್ನು ನಿರ್ಲಕ್ಷಿಸಿದೆ. ಆದರೆ ವ್ಯಕ್ತಿಯು ಬೇರೆ ಬೇರೆ ನಂಬರ್‌ಗಳನ್ನು ಬಳಸಿ ನನಗೆ ಕಿರುಕುಳ ನೀಡಲು ಪ್ರಾರಂಭಿಸಿದನು. ಕೊನೆಗೆ ಬೇರೆ ನಂಬರ್‌ನಿಂದ ಫೋನ್ ಬಂದರೆ ರಿಸೀವ್ ಮಾಡಲು ಹೆದರುತ್ತಿದ್ದೇನೆ. ಇದರಿಂದ ನನ್ನ ಕೆಲಸ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಯುವತಿಯ ದೂರಿನ ಆಧಾರದ ಮೇಲೆ ಅಪರಿಚಿತ ಆರೋಪಿ ವಿರುದ್ಧ ಸದರ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯಕ್ಕೆ ಆತನ ಮೊಬೈಲ್ ನಂಬರ್ ಮೂಲಕ ಆರೋಪಿಯನ್ನು ಪತ್ತೆ ಹಚ್ಚಲು ಪ್ರಯತ್ನ ಮಾಡಲಾಗುತ್ತಿದೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿ ಅಪರಿಚಿತರು ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಅಪ್ರಾಪ್ತೆಯನ್ನು ಅಪಹರಿಸಿ, ಬಂಧಿಸಿಟ್ಟು 3 ದಿನಗಳ ಕಾಲ ಗ್ಯಾಂಗ್ ರೇಪ್

    ಅಪ್ರಾಪ್ತೆಯನ್ನು ಅಪಹರಿಸಿ, ಬಂಧಿಸಿಟ್ಟು 3 ದಿನಗಳ ಕಾಲ ಗ್ಯಾಂಗ್ ರೇಪ್

    ಚಂಡೀಗಢ: ಅಪ್ರಪ್ತ ಬಾಲಕಿಯೊಬ್ಬಳನ್ನು ಆಕೆಯ ಮನೆ ಮುಂದೆಯೇ ಅಪಹರಿಸಿದ 4 ಮಂದಿ ಯುವಕರು, ಆಕೆಯನ್ನು ಬಂಧಿಸಿಟ್ಟು, ಸತತ 3 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಮಾಡಿದ ನಾಚಿಕೆಗೇಡಿ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    ಪಂಜಾಬ್‍ನ ಬರ್ನಾಲಾ ಜಿಲ್ಲೆಯ ಮೌರ್ ನಭಾ ಗ್ರಾಮದ 12 ವರ್ಷದ ಬಾಲಕಿಯನ್ನು ಅದೇ ಗ್ರಾಮದ 4 ಮಂದಿ ಯುವಕರು ಅಪಹರಿಸಿದ್ದರು. ಸೆ. 29ರಂದು ಬಾಲಕಿಯ ಮನೆಯ ಮುಂಭಾಗದಲ್ಲೇ ಆಕೆಯನ್ನು ಅಪಹರಿಸಿ, ಕೋಣೆಯೊಂದರಲ್ಲಿ ಬಂಧಿಸಿಟ್ಟಿದ್ದರು. ಅಲ್ಲದೆ ಸತತ ಮೂರು ದಿನಗಳ ಕಾಲ ಆಕೆಯ ಮೇಲೆ ಆರೋಪಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಬಾಲಕಿ ನಾಪತ್ತೆಯಾದ ಬಗ್ಗೆ ಬಾಲಕಿ ಪೋಷಕರು ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಆದರೆ ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ತೋರಿ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.

    ಮೂರು ದಿನಗಳ ನಂತರ ದುಷ್ಟರಿಂದ ತಪ್ಪಿಸಿಕೊಂಡು ಬಂದ ಬಾಲಕಿ, ಕುಟುಂಬದವರ ಮುಂದೆ ನೋವು ತೋಡಿಕೊಂಡಿದ್ದಾಳೆ. ಹೀನಾಯ ಸ್ಥಿತಿಗೆ ತಲುಪಿದ್ದ ಬಾಲಕಿಯನ್ನು ಪೋಷಕರು ಮೊದಲು ಆಸ್ಪತ್ರೆಗೆ ಸೇರಿಸಿ, ಬಳಿಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

    ನಾಲ್ವರು ಆರೋಪಿಗಳಲ್ಲಿ ಓರ್ವ ಆರೋಪಿಯನ್ನು ಮೌರ್ ನಭಾ ಗ್ರಾಮದ ನಿವಾಸಿ ಗುರ್‌ಪ್ರೀತ್‌ ಸಿಂಗ್ ಎಂದು ಬಾಲಕಿ ಗುರುತಿಸಿದ್ದು, ಇನ್ನುಳಿದವರ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭರವಸೆ ಕೊಟ್ಟಿದ್ದಾರೆ.

  • ಸ್ನೇಹಿತನ ಜೊತೆ ಪತ್ನಿಯ ಪೋರ್ನ್ ವಿಡಿಯೋ – ಗುಂಡಿಕ್ಕಿ ಕೊಲೆಗೆ ಯತ್ನಿಸಿದ ಪತಿ

    ಸ್ನೇಹಿತನ ಜೊತೆ ಪತ್ನಿಯ ಪೋರ್ನ್ ವಿಡಿಯೋ – ಗುಂಡಿಕ್ಕಿ ಕೊಲೆಗೆ ಯತ್ನಿಸಿದ ಪತಿ

    ಚಂಡೀಗಢ: ತನ್ನ ಸ್ನೇಹಿತನ ಜೊತೆ ಪತ್ನಿಯ ಪೋರ್ನ್ ವಿಡಿಯೋ ನೋಡಿದ ಪತಿಯೊಬ್ಬ ಕೋಪದಿಂದ ಆಕೆಯನ್ನು ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ ಘಟನೆ ಸೆಪ್ಟೆಂಬರ್ 15ರಂದು ಹರಿಯಾಣದ ಯಮುನನಗರದಲ್ಲಿ ನಡೆದಿದೆ.

    ನರೇಶ್ ಕೊಲೆ ಮಾಡಲು ಯತ್ನಿಸಿದ ಪತಿ. ಪತ್ನಿ ಸೋನಿಯಾ ತನ್ನ ಪತಿ ನರೇಶ್ ಜೊತೆ ವಾಸಿಸುತ್ತಿರಲಿಲ್ಲ. ಅಲ್ಲದೆ ನ್ಯಾಯಾಲಯದಲ್ಲಿ ಇವರಿಬ್ಬರ ಡಿವೋರ್ಸ್ ಪ್ರಕರಣ ಕೂಡ ನಡೆಯುತ್ತಿತ್ತು. ಕೆಲವು ದಿನಗಳ ಹಿಂದೆ ನರೇಶ್ ಸ್ನೇಹಿತರು ಸೋನಿಯಾ ಪೋರ್ನ್ ವಿಡಿಯೋವನ್ನು ಆತನಿಗೆ ತೋರಿಸಿದ್ದಾರೆ. ಅಲ್ಲದೆ ಇಂತಹ ಪತ್ನಿ ಇರುವ ಬದಲು ಪತ್ನಿ ಇಲ್ಲದಿರುವುದೇ ಉತ್ತಮ ಎಂದು ಆತನನ್ನು ಪ್ರಚೋದಿಸಿದ್ದಾರೆ. ಇದನ್ನೂ ಓದಿ:  ಪತ್ನಿಗೆ ಸ್ನೇಹಿತರೊಟ್ಟಿಗೂ ಮಲಗು ಎಂದ ವಿಕೃತ ಪತಿ – ಸೆಕ್ಸ್ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್

    ಈ ವಿಡಿಯೋ ನೋಡಿದ ನರೇಶ್ ಈ ಬಗ್ಗೆ ಸೋನಿಯಾಳನ್ನು ಪ್ರಶ್ನಿಸಲು ಯಮುನನಗರಕ್ಕೆ ತೆರಳಿದ್ದನು. ನರೇಶ್ ಮೊದಲು ವಿಡಿಯೋ ಬಗ್ಗೆ ಸೋನಿಯಾಳನ್ನು ಪ್ರಶ್ನಿಸಿದ್ದಾನೆ. ಆದರೆ ಸೋನಿಯಾ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ನರೇಶ್ ಸೋನಿಯಾಗೆ ಗುಂಡಿಕ್ಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ನರೇಶ್ ಕೊಲೆಗೆ ಯತ್ನಿಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಸೋನಿಯಾಳನ್ನು ಆಕೆಯ ಸ್ನೇಹಿತರು ಚಂಡಿಗಢ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಇತ್ತ ಪೊಲೀಸರು ಆರೋಪಿ ನರೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನರೇಶ್, “ನನ್ನ ಪತ್ನಿ ನನ್ನನ್ನು ಬಿಟ್ಟು ಯಮುನನಗರದಲ್ಲಿ ತನ್ನ ಸ್ನೇಹಿತರ ಜೊತೆ ವಾಸಿಸುತ್ತಿದ್ದಾಳೆ. ನಾನು ಸೋನಿಯಾಳನ್ನು ತುಂಬಾ ಪ್ರೀತಿಸುತ್ತೇನೆ. ಆದರೆ ಆಕೆಯ ನಡುವಳಿಕೆ ನನಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ನಾನು ಕೊಲೆ ಮಾಡಲು ಯತ್ನಿಸಿದೆ” ಎಂದು ಹೇಳಿದ್ದಾನೆ.

  • ಆಫೀಸ್ ರೂಮಿನಲ್ಲೇ ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ಸೆಕ್ಸ್

    ಆಫೀಸ್ ರೂಮಿನಲ್ಲೇ ಇಬ್ಬರು ಶಿಕ್ಷಕಿಯರ ಜೊತೆ ಪ್ರಿನ್ಸಿಪಾಲ್ ಸೆಕ್ಸ್

    ಚಂಢೀಗಡ: ಸರ್ಕಾರಿ ಶಾಲೆಯ ಪ್ರಿನ್ಸಿಪಾಲ್ ಇಬ್ಬರು ಶಿಕ್ಷಕಿಯರ ಜೊತೆ ದೈಹಿಕ ಸಂಬಂಧ ಬೆಳೆಸಿದ ಘಟನೆ ಪಂಜಾಬ್‍ನ ಹೋಶಿಯಾಪುರದಲ್ಲಿ ನಡೆದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಶಾಲೆಯ ಪ್ರಿನ್ಸಿಪಾಲ್‍ನ ಈ ವರ್ತನೆ ಕಂಡು ಸಿಬ್ಬಂದಿ ಬೇಸತ್ತು ಹೋಗಿದ್ದರು. ಅಲ್ಲದೆ ಆತನ ಕೃತ್ಯ ಎಲ್ಲರ ಮುಂದೆ ಬಯಲು ಮಾಡಲು ಆಫೀಸ್ ರೂಮಿನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ ಇಡೀ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ.

    ಎರಡು ವಿಡಿಯೋದಲ್ಲಿ ಪ್ರಿನ್ಸಿಪಾಲ್ ಇಬ್ಬರು ಶಿಕ್ಷಕಿಯರ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾರೆ. ಈ ಆರೋಪಗಳನ್ನು ಒಪ್ಪಿಕೊಳ್ಳಲು ಶಾಲೆಯ ಪ್ರಿನ್ಸಿಪಾಲ್ ನಿರಾಕರಿಸುತ್ತಿದ್ದಾನೆ. ನನ್ನ ಹೆಸರಿಗೆ ಕಳಂಕ ತರಲು ಯಾರೋ ಈ ರೀತಿಯ ಹುಡುಗಾಟ ಆಡಿದ್ದಾರೆ ಎಂದು ಹೇಳುತ್ತಿದ್ದಾನೆ.

    ಈ ಘಟನೆ ಬಗ್ಗೆ ಸರಪಂಚ್ ಶಾಲೆಯ ಕಮಿಟಿ ಜೊತೆ ಚರ್ಚೆ ನಡೆಸಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ಪ್ರಕರಣ ಈಗ ಕ್ಲೋಸ್ ಆಗಿದ್ದು, ಪ್ರಿನ್ಸಿಪಾಲ್ ಅಸಭ್ಯವಾಗಿ ವರ್ತಿಸಿದ್ದಕ್ಕೆ ಶಾಲೆಯ ಸಿಬ್ಬಂದಿ ಹಾಗೂ ಪಂಚಾಯ್ತಿಯಲ್ಲಿ ಎಲ್ಲರ ಮುಂದೆ ಕ್ಷಮೆ ಕೇಳಿದ್ದಾರೆ.