Tag: chandigarh

  • ಸಾಯೋದು ಬಿಟ್ಟು ನಮ್ಗೆ ಬೇರೆ ದಾರಿ ಇಲ್ಲ – ಪತ್ನಿ ಹೇಳಿದಂತೆ ಕೊಲೆ ಮಾಡಿ ಪತಿ ಆತ್ಮಹತ್ಯೆ

    ಸಾಯೋದು ಬಿಟ್ಟು ನಮ್ಗೆ ಬೇರೆ ದಾರಿ ಇಲ್ಲ – ಪತ್ನಿ ಹೇಳಿದಂತೆ ಕೊಲೆ ಮಾಡಿ ಪತಿ ಆತ್ಮಹತ್ಯೆ

    – ನನ್ನನ್ನು ಕೊಲೆ ಮಾಡು ಎಂದ ಪತ್ನಿ
    – ಗರ್ಭಿಣಿಯ ಮೇಲೆ ಅಪ್ರಾಪ್ತರು ಗ್ಯಾಂಗ್‍ರೇಪ್

    ಚಂಡೀಗಢ: ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಹಿಸರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ವ್ಯಕ್ತಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಪತ್ನಿ ಗರ್ಭಿಣಿ ಎಂದು ತಿಳಿದುಬಂದಿದೆ. ಈತ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್‍ನೋಟ್ ಬರೆದಿಟ್ಟಿದ್ದಾನೆ. ಇಬ್ಬರು ಅಪ್ರಾಪ್ತ ಹುಡುಗರು ನನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಡೆತ್‍ನೋಟಿನಲ್ಲಿ ಬರೆದಿದ್ದಾನೆ. ಇಬ್ಬರು ಅತ್ಯಾಚಾರ ಆರೋಪಿಗಳು ಮೃತ ಕಾರ್ಮಿಕ ವಾಸಿಸುತ್ತಿದ್ದ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.

    ಆಗಸ್ಟ್ 15 ರಂದು ಕಾರ್ಮಿಕನು ಗ್ರಾಮದಿಂದ ಹೊರಗೆ ಹೋಗಿದ್ದನು. ಆತ ಮನೆಗೆ ಹಿಂದಿರುಗಿದಾಗ ಪತ್ನಿ ಅಳುತ್ತಿದ್ದಳು. ನಂತರ ಪತ್ನಿ, ಹಳ್ಳಿಯ ಇಬ್ಬರು ಅಪ್ರಾಪ್ತ ಯುವಕರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾಳೆ.

    ಡೆತ್‍ನೋಟಿನಲ್ಲಿ ಏನಿದೆ?
    ನೀವು ನನ್ನನ್ನು ಕೊಲೆ ಮಾಡಿ ಎಂದು ಪತ್ನಿ ಹೇಳಿದಳು. ಅದಕ್ಕೆ ನಾನು ಕೊಲೆ ಆರೋಪಿಯಾಗುತ್ತೇನೆ ಎಂದೆ. ನಂತರ ಪತ್ನಿ ಈಗ ಏನು ಮಾಡುವುದು ಎಂದು ಕೇಳಿದಳು. ಆಗ ನಾನು ನಿನ್ನನ್ನು ಕೊಂದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದೆ. ಅಲ್ಲದೇ ನಮಗೆ ಸಾವನ್ನು ಹೊರತುಪಡಿಸಿ ಬೇರೆ ದಾರಿ ಇರಲಿಲ್ಲ ಎಂದು ಬರೆದಿದ್ದಾನೆ.

    ಅಷ್ಟೇ ಅಲ್ಲದೇ ಕಾರ್ಮಿಕನು ಆರೋಪಿಗಳ ಹೆಸರನ್ನು ಉಲ್ಲೇಖಿಸಿದ್ದು, “ನಾವು ನಮ್ಮ ಮಗುವನ್ನು ಸಹ ಕೊಲ್ಲಬೇಕು” ಎಂದು ಉಲ್ಲೇಖಿಸಿದ್ದಾನೆ. ಘಟನೆಯ ನಂತರ ಮಹಿಳೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.

    ಸಹೋದರಿಯ ಸಾವಿನ ಸುದ್ದಿ ತಿಳಿದು ಸಹೋದರ ಮನೆಗೆ ಬಂದು ನೋಡಿದ್ದಾರೆ. ಆಗ ಕಾರ್ಮಿಕ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಈ ಕುರಿತು ಐಪಿಸಿ ಸೆಕ್ಷನ್ ಅಡಿಯಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಸೆಕ್ಸ್ ದಂಧೆಗೆ ನಿರಾಕರಣೆ – ಪತ್ನಿಯ ಮುಂದೆ ಅತ್ತಿಗೆಗೆ ಚಾಕು ಇರಿದು ಎಸ್ಕೇಪ್

    ಸೆಕ್ಸ್ ದಂಧೆಗೆ ನಿರಾಕರಣೆ – ಪತ್ನಿಯ ಮುಂದೆ ಅತ್ತಿಗೆಗೆ ಚಾಕು ಇರಿದು ಎಸ್ಕೇಪ್

    ಚಂಡೀಗಢ: ದೇಹ ವ್ಯಾಪಾರದ ದಂಧೆ ಮಾಡಲು ಒಪ್ಪದ್ದಕ್ಕೆ ಪತ್ನಿಯ ಮುಂದೆಯೇ ಅತ್ತಿಗೆಯನ್ನು ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ಪಾಣಿಪತ್ ತಹ್ಸಿಲ್ ಕ್ಯಾಂಪ್ ಪ್ರದೇಶದ ಫತೇಪುರಿ ಚೌಕ್‍ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಕವಿತಾ ಮೃತ ಮಹಿಳೆ. ಆರೋಪಿ ಭಗತ್ ಅತ್ತಿಗೆಗೆ ಚಾಕು ಇರಿದು ಪರಾರಿಯಾಗಿದ್ದನು. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಆರೋಪಿಯ ಪತ್ನಿ ಪ್ರಿಯಾ ಮತ್ತು ಅತ್ತಿಗೆ ಕವಿತಾ ಇಬ್ಬರು ಔಷಧಿ ತರಲು ಮಾರುಕಟ್ಟೆಗೆ ಹೋಗಿದ್ದರು. ವಾಪಸ್ ಬರುವಾಗ ಊಟ ಮಾಡಲು ಬೈಕ್ ನಿಲ್ಲಿಸಿದ್ದಾರೆ. ಈ ವೇಳೆ ಆರೋಪಿ ಭಗತ್ ಬಂದು ಪತ್ನಿಯ ಮೇಲೆ ಹಲ್ಲೆ ಮಾಡಿ, ಅತ್ತಿಗೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತಕ್ಷಣ ಗಂಭೀರವಾಗಿ ಗಾಯಗೊಂಡಿದ್ದ ಕವಿತಾಳನ್ನು ಸ್ಥಳದಲ್ಲಿದ್ದರು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಸಾವನ್ನಪ್ಪಿರೋದನ್ನು ಖಚಿತ ಪಡಿಸಿದ್ದಾರೆ.

    ಆರೋಪಿಯ ಕುಟುಂಬಸ್ಥರು ದೇಹ ವ್ಯಾಪಾರದ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಯ ಪತ್ನಿ ಪ್ರಿಯಾ ಆರೋಪಿಸಿದ್ದಾರೆ. ಹೀಗಾಗಿ ಆರೋಪಿಯ ಕುಟುಂಬದವರು ಭಗತ್ ಪತ್ನಿ ಮತ್ತು ಅತ್ತಿಗೆ ಕವಿತಾಗೆ ದೇಹ ವ್ಯಾಪಾರ ಮಾಡುವಂತೆ ಒತ್ತಡ ಹಾಕುತ್ತಿದ್ದರು. ಆದರೆ ಪ್ರಿಯಾ ಮತ್ತು ಕವಿತಾ ಇಬ್ಬರಿಗೂ ಈ ಕೆಲಸವನ್ನು ಮಾಡಲು ಇಷ್ಟವಿರಲಿಲ್ಲ. ಆದ್ದರಿಂದ ಇಬ್ಬರೂ ಮನೆ ಬಿಟ್ಟು ಬಂದು ಪ್ರತ್ಯೇಕ ಮನೆ ಮಾಡಿ ವಾಸಿಸಲು ಪ್ರಾರಂಭಿಸಿದ್ದರು.

    ಮಕ್ಕಳಿಗೆ ಔಷಧಿ ತರಲು ಮಾರುಕಟ್ಟೆಗೆ ಹೋಗಿದ್ದಾಗ ದಾರಿಯಲ್ಲಿ ಭಗತ್ ಬಂದು ಕವಿತಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ನಂತರ ಪರಾರಿಯಾಗಲು ಯತ್ನಿಸಿದ್ದು, ಆಗ ಜನರು ಆರೋಪಿ ಭಗತ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

  • ಹನುಮನಿಗಾಗಿ ಏಳು ಅಡಿ ಎತ್ತರದ ಶ್ರೀರಾಮನ ರಾಖಿ ಸಿದ್ಧ

    ಹನುಮನಿಗಾಗಿ ಏಳು ಅಡಿ ಎತ್ತರದ ಶ್ರೀರಾಮನ ರಾಖಿ ಸಿದ್ಧ

    ಚಂಡೀಗಢ: ರಕ್ಷಾ ಬಂಧನ ಹಿನ್ನೆಲೆಯಲ್ಲಿ ಚಂಡೀಗಢದಲ್ಲಿ ಮಹಿಳೆಯರ ಗುಂಪೊಂದು ಏಳು ಅಡಿ ಎತ್ತರದ ಪರಿಸರ ಸ್ನೇಹಿ ಶ್ರೀರಾಮನ ರಾಖಿ ತಯಾರಿಸಿದ್ದು, ಇದನ್ನು ಇಲ್ಲಿಯ ಹನುಮಾನ ಮಂದಿರಕ್ಕೆ ನೀಡಲು ನಿರ್ಧರಿಸಿದ್ದಾರೆ.

    ಸ್ಥಳೀಯ ನಿವಾಸಿ ಮೀನಾ ತಿವಾರಿ ನೇತೃತ್ವದಲ್ಲಿ ಮಹಿಳೆಯರ ಗುಂಪು ಕಳೆದ ಹದಿನೈದು ದಿನಗಳಿಂದ ಈ ಏಳು ಅಡಿ ಉದ್ದದ ರಾಖಿ ತಯಾರಿಸಿದ್ದಾರೆ. ಪ್ರತಿ ನಿತ್ಯ ಎರಡ್ಮೂರು ಗಂಟೆ ಕಾಲ ರಾಖಿ ತಯಾರಿಸುತ್ತಿದ್ದರು.

    ಈ ವಿಶೇಷ ರಾಖಿಯಲ್ಲಿ ರಾಮನ ದೊಡ್ಡ ಭಾವಚಿತ್ರವಿದ್ದು, ಇದಕ್ಕೆ ರುದ್ರಾಕ್ಷಿಗಳು, ಕೃತಕ ಹೂಗಳು ಮತ್ತು ರಿಬ್ಬನ್ ಗಳಿಂದ ಅಲಂಕಾರ ಮಾಡಲಾಗಿದೆ. ಈ ವರ್ಷ ಆಗಸ್ಟ್ 3 ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತದೆ.

    ಚಂಡೀಗಢದಲ್ಲಿರುವ 32 ಅಡಿ ಉದ್ದದ ಹನುಮಾನ್ ಮೂರ್ತಿಯ ಬಲಗೈ ಈ ರಾಖಿಯನ್ನು ಕಟ್ಟಲಾಗುವುದು. ನಾವು ಪ್ರತಿವರ್ಷ ರಾಖಿಯನ್ನು ತಯಾರಿಸುತ್ತೇವೆ. ಆದರೆ ಈ ಬಾರಿ ವಿಶೇಷವಾಗಿ ಈ ರಾಖಿಯನ್ನು ತಯಾರಿಸಿದ್ದೇವೆ ಎಂದು ಮೀನಾ ತಿವಾರಿ ತಿಳಿಸಿದ್ದಾರೆ.

  • ಗಲ್ಲಕ್ಕೆ ಗುಂಡು ಹೊಡೆದ ಸ್ಥಿತಿ – ಕಾರಿನಲ್ಲಿ ಸಿಕ್ತು ಪೊಲೀಸ್ ಪೇದೆಯ ಮೃತದೇಹ

    ಗಲ್ಲಕ್ಕೆ ಗುಂಡು ಹೊಡೆದ ಸ್ಥಿತಿ – ಕಾರಿನಲ್ಲಿ ಸಿಕ್ತು ಪೊಲೀಸ್ ಪೇದೆಯ ಮೃತದೇಹ

    – ಎಂಎಲ್‍ಎ ಹಾಸ್ಟೆಲ್ ಮುಂದೆ ಪಾರ್ಕ್ ಆಗಿದ್ದ ಕಾರ್

    ಚಂಡೀಗಢ: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರ ಮೃತದೇಹ ಪಂಜಾಬ್ ಎಂಎಲ್‍ಎ ಒಬ್ಬರ ಹಾಸ್ಟೆಲ್ ಮುಂದೆ ಪಾರ್ಕ್ ಮಾಡಲಾದ ಕಾರಿನೊಳಗೆ ಸಿಕ್ಕಿರುವ ಘಟನೆ ಚಂಡೀಗಢದಲ್ಲಿ ನಡೆದಿದೆ.

    ಮೃತ ಪೊಲೀಸ್ ಪೇದೆಯನ್ನು ಪಂಜಾಬ್ ಪೊಲೀಸರ 82 ಬೆಟಾಲಿಯನ್‍ನೊಂದಿಗೆ ನಿಯೋಜಿಸಲಾಗಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ನಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇವರು ತಮ್ಮ ಕಾರಿನಲ್ಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರಿನೊಳಗೆ ಅವರ ಸರ್ವಿಸ್ ಪಿಸ್ತೂಲ್ ಪತ್ತೆಯಾಗಿದೆ.

    ಪ್ರತಿ ದಿನ ಡೂಟ್ಯಿ ಮಗಿಸಿಕೊಂಡು ಪೇದೆ ಅವರ ಕಾರಿನಲ್ಲಿ ಮನೆಗೆ ಬರುತ್ತಿದ್ದರು. ಆದರೆ ಶನಿವಾರ ಮಧ್ಯರಾತ್ರಿಯಾದರೂ ಮನೆಗೆ ಬಂದಿಲ್ಲ. ಆಗ ಅವರ ಜೊತೆ ಆತನ ಮನೆಯಲ್ಲಿ ವಾಸವಾಗಿದ್ದ ಸಹೋದ್ಯೋಗಿಯೊಬ್ಬರು ಹುಡುಕಿಕೊಂಡು ಹೋಗಿದ್ದಾರೆ. ಆಗ ಅವರ ಕಾರು ಹಾಸ್ಟೆಲ್ ಮುಂದೆ ಪಾರ್ಕ್ ಆಗಿರುವುದು ಕಂಡು ಬಂದಿದೆ. ಅಲ್ಲಿ ಹೋಗಿ ನೋಡಿದಾಗ ಅವರು ಕಾರಿನೊಳಗೆ ಡ್ರೈವರ್ ಸೀಟಿನಲ್ಲಿ ರಕ್ತದ ಮಡುವಿನಲ್ಲಿ ಪೇದೆ ಬಿದ್ದಿರುವುದು ಕಂಡು ಬಂದಿದೆ. ಇದನ್ನು ಕಂಡು ಆತ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಮೃತನನ್ನು ಚಂಡೀಗಢದ ಪಿಜಿಐಎಂಆರ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ವೈದ್ಯರು ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ಈಗ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಮಾಡುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿ, ಶೇರ್ ಸಿಂಗ್, ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂದು ತಿಳಿದು ಬಂದಿದೆ. ಗಲ್ಲದ ಮೂಲಕ ಹೊಡೆದುಕೊಂಡಿರುವುದರಿಂದ ನಾವು ಎಲ್ಲ ವಿಭಾಗದಿಂದ ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ನಾಯಕಿ: ವಿಡಿಯೋ ವೈರಲ್

    ಸರ್ಕಾರಿ ಅಧಿಕಾರಿಗೆ ಚಪ್ಪಲಿಯಿಂದ ಹೊಡೆದ ಬಿಜೆಪಿ ನಾಯಕಿ: ವಿಡಿಯೋ ವೈರಲ್

    – ಪರಸ್ಪರ ದೂರು ದಾಖಲು

    ಚಂಡೀಗಢ: ಬಿಜೆಪಿ ಮುಖಂಡೆ, ಟಿಕ್‍ಟಾಕ್ ಸ್ಟಾರ್ ಸೋನಾಲಿ ಫೋಗಟ್ ಅವರು ಸರ್ಕಾರಿ ಅಧಿಕಾರಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಫೋಗಟ್ ಶುಕ್ರವಾರ ಹಿಸಾರ್ ನ ಬಾಲ್ಸಮಂದ್ ಮಂಡಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹಿಸಾರ್ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸುಲ್ತಾನ್ ಸಿಂಗ್‍ರನ್ನು ಫೋಗಟ್ ಥಳಿಸಿದ್ದಾರೆ. ಕೆಲವು ರೈತರು ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸುವ ವಿಚಾರದಲ್ಲಿ ಸಮಸ್ಯೆಗಳಿವೆ ಎಂದು ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಫೋಗಟ್ ಮಂಡಿಯ ಪರಿಶೀಲನೆಗೆ ಹೋಗಿದ್ದರು. ಆಗ ಸುಲ್ತಾನ್ ಸಿಂಗ್ ನಿಮ್ಮಂಥ ಸುಂದರ ಚೆಲುವೆ, ಸ್ಟಾರ್ ಬಿಸಿಲಿನಲ್ಲಿ ಹೀಗೆ ಮಂಡಿಗೆ ಬರಬಾರದು ಎಂದು ಹೇಳಿದ್ದರು ಎನ್ನಲಾಗಿದೆ.

    ಇದರಿಂದ ಕೋಪಗೊಂಡ ಫೋಗಟ್, ಸಿಂಗ್ ಜೊತೆ ತೀವ್ರವಾಗಿ ಮಾತುಕತೆ ನಡೆಸಿದ್ದಾರೆ. ನಂತರ ಚಪ್ಪಲಿ ತೆಗೆದುಕೊಂಡು ಥಳಿಸಿದ್ದಾರೆ. ಈ ವಿಡಿಯೋವನ್ನು ಸ್ಥಳದಲ್ಲಿದ್ದವರು ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. “ನಿಮ್ಮಂತಹ ಜನರಿಂದ ನಿಂದನೆಗಳನ್ನು ಕೇಳಲು ನಾನು ಕೆಲಸ ಮಾಡುತ್ತಿದ್ದೇನೆ? ಗೌರವಾನ್ವಿತವಾಗಿ ಬದುಕಲು ನನಗೆ ಹಕ್ಕಿಲ್ಲವೇ?” ಎಂದು ಫೋಗಟ್ ವೀಡಿಯೊದಲ್ಲಿ ಹೇಳಿದ್ದಾರೆ.

    ಪರಸ್ಪರ ಪೊಲೀಸರಿಗೆ ದೂರು:
    ಈ ಘಟನೆ ನಡೆದ ನಂತರ ಫೋಗಟ್ ನೇರವಾಗಿ ಪೊಲೀಸ್ ಠಾಣೆಗೆ ಹೋಗಿ, ಸುಲ್ತಾನ್ ಸಿಂಗ್ ಅಸಭ್ಯವಾಗಿ ಮಾತನಾಡಿ ನನ್ನನ್ನು ಅವಮಾನಿಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇತ್ತ ಸುಲ್ತಾನ್ ಸಿಂಗ್ ಕೂಡ ಒಬ್ಬ ಸರ್ಕಾರಿ ಅಧಿಕಾರಿಯ ಮೇಲೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಫೋಗಟ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಸುಲ್ತಾನ್ ಸಿಂಗ್ ಮತ್ತು ಫೋಗಟ್ ಇಬ್ಬರು ಪರಸ್ಪರ ದೂರು ದಾಖಲಿಸಿದ್ದಾರೆ. ನಾವು ಇಬ್ಬರ ಹೇಳಿಕೆಗಳು ಮತ್ತು ವಿಡಿಯೋಗಳನ್ನು ಪರಿಶೀಲಿಸುತ್ತಿದ್ದೇವೆ. ನಂತರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಫೋಗಟ್ ವಿರುದ್ಧ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಈ ಕೃತ್ಯಗಳನ್ನು ಬಿಜೆಪಿ ಮುಖಂಡೆ ಮಾಡಿದ್ದಾರೆ. ಸರ್ಕಾರಿ ಕೆಲಸ ಮಾಡುವುದು ಅಪರಾಧವೇ? ಸಿಎಂ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಫೋಗಟ್ ವಿರುದ್ಧ ಕ್ರಮ ತೆಗೆದುಕೊಳ್ಳುವರೇ” ಎಂದು ಪ್ರಶ್ನೆ ಮಾಡಿದ್ದಾರೆ.

    ಕಳೆದ ವರ್ಷ ಅದಂಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಸೋನಾಲಿ ಫೋಗಟ್ ಸ್ಪರ್ಧಿಸಿದ್ದರು. ಆಗ ಕಾಂಗ್ರೆಸ್‍ನ ಕುಲದೀಪ್ ಬಿಶ್ನೋಯಿ ವಿರುದ್ಧ ಸೋತಿದ್ದರು.

  • ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ- ಮಕ್ಕಳೊಂದಿಗೆ ಸೇರಿ ಪತಿಯನ್ನೇ ಕೊಂದ್ಳು

    ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ- ಮಕ್ಕಳೊಂದಿಗೆ ಸೇರಿ ಪತಿಯನ್ನೇ ಕೊಂದ್ಳು

    – ಮಲ ಮಗಳ ಮೇಲೆ ರೇಪ್ ಮಾಡಿ ಜೈಲಿಗೆ ಹೋಗಿದ್ದ
    – ಪತ್ನಿಯ ಸೋದರಿಯ ಮೇಲೂ ಅತ್ಯಾಚಾರ

    ಚಂಡೀಗಢ: ಪಾಪಿ ತಂದೆಯೊಬ್ಬ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗ ಆತನನ್ನು ಪತ್ನಿ ತನ್ನ ಮಕ್ಕಳೊಂದಿಗೆ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಪಂಜಾಬ್‍ನ ಲುಧಿಯಾನದಲ್ಲಿ ನಡೆದಿದೆ.

    ಲುಧಿಯಾನದ ಸುಂದರ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 46 ವರ್ಷದ ವ್ಯಕ್ತಿಯನ್ನು ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಇದಕ್ಕೆ 20 ವರ್ಷದ ಮಗ ಮತ್ತು 15 ವರ್ಷದ ಮಗಳು ಕೂಡ ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಮಹಿಳೆಗೆ ಎರಡನೇ ಮದುವೆಯಾಗಿದ್ದು, ಮೊದಲ ಪತಿ ಮತ್ತು ಈಕೆಗೆ ಇಬ್ಬರು ಮಕ್ಕಳಿದ್ದರು. ಶನಿವಾರ ರಾತ್ರಿ ಮೃತ ವ್ಯಕ್ತಿ ಕುಡಿದು ಬಂದು ಮಗಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಅಲ್ಲದೇ ಪತ್ನಿ ಮತ್ತು ಉಳಿದ ಮಕ್ಕಳಿಗೆ ಬೆದರಿಕೆ ಹಾಕಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದರಿಂದ ಕೋಪಗೊಂಡ ಪತ್ನಿ ಅಲ್ಲೇ ಇದ್ದ ವಯರ್‌ನಿಂದ ಗಂಡನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾಳೆ.

    ಮಲ ಮಗ ಕೈಗಳನ್ನು ಹಿಡಿದಿದ್ದನು. ಆಗ ತಾಯಿ ಮತ್ತು ಅಪ್ರಾಪ್ತ ಮಗಳು ವಯರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಎರಡು ದಿನಗಳ ಹಿಂದೆಯೂ ಆತ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೇ ಆತ ಮದ್ಯ ವ್ಯಸನಿಯಾಗಿದ್ದನು ಎಂದು ಎಸಿಪಿ ಗುರ್ಬಿಂದರ್ ಸಿಂಗ್ ತಿಳಿಸಿದರು.

    ಮಲ ಮಗಳ ಮೇಲೆ ರೇಪ್:
    ಮೃತ ವ್ಯಕ್ತಿ 2014 ರಲ್ಲಿ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದನು. ಈ ಕುರಿತು ಆತನ ವಿರುದ್ಧ ಟಿಬ್ಬಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿತ್ತು. ಆರು ತಿಂಗಳು ಜೈಲಿನಲ್ಲಿದ್ದ. ನಂತರ ಕುಟುಂಬವು ರಾಜಿ ಮಾಡಿಕೊಂಡಿದ್ದರಿಂದ ಜೈಲಿನಿಂದ ಹೊರಬಂದಿದ್ದನು. ಆದರೆ ಜೈಲಿನಿಂದ ಬಿಡುಗಡೆಯಾದ ನಂತರ ಸಂತ್ರಸ್ತೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಳು. ಅಷ್ಟೇ ಅಲ್ಲದೇ ಈ ವ್ಯಕ್ತಿ ತನ್ನ ಪತ್ನಿಯ ಸಹೋದರಿ ಮೇಲೆ ಅತ್ಯಾಚಾರಕ್ಕೆ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದರೆ ಈ ಕುರಿತು ಯಾವುದೇ ಎಫ್‍ಐಆರ್ ದಾಖಲಾಗಿಲ್ಲ.

    ಸದ್ಯಕ್ಕೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಹಿಳೆ, ಆಕೆಯ ಮಗ ಮತ್ತು ಅಪ್ರಾಪ್ತ ಮಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಮೂವರು ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸಿಪಿ ಹೇಳಿದ್ದಾರೆ.

  • ಸರ್ಕಾರಿ ಕೆಲಸದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕ- ಐಎಎಸ್ ಅಧಿಕಾರಿ ರಾಜೀನಾಮೆ

    ಸರ್ಕಾರಿ ಕೆಲಸದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕ- ಐಎಎಸ್ ಅಧಿಕಾರಿ ರಾಜೀನಾಮೆ

    ಚಂಡೀಗಢ: ದಿನೇ ದಿನೇ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇತ್ತ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    2014ರ ಬ್ಯಾಚ್‍ನ ಹರಿಯಾಣ ಕೇಡರ್‌ನ ಐಎಎಸ್ ಅಧಿಕಾರಿ ರಾಣಿ ನಗರ್ (35) ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಪ್ರಸ್ತುತ ಇವರು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಹೆಚ್ಚುವರಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ರಾಜೀನಾಮೆಯನ್ನು ಹರಿಯಾಣ ಮುಖ್ಯ ಕಾರ್ಯದರ್ಶಿ ಕೇಶಾನಿ ಆನಂದ್ ಅರೋರಾ ಅವರಿಗೆ ನೀಡಿದ್ದು, ಕೇಂದ್ರ ಸರ್ಕಾರದ ಪ್ರಾಧಿಕಾರಕ್ಕೆ ರವಾನಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸರ್ಕಾರಿ ಕರ್ತವ್ಯದಲ್ಲಿ ವೈಯಕ್ತಿಕ ಸುರಕ್ಷತೆಯ ಆತಂಕದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನನ್ನ ಐಎಎಸ್ ಹುದ್ದೆಗೆ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರದ ಪ್ರತಿಗಳನ್ನು ಅಧ್ಯಕ್ಷರು, ಪ್ರಧಾನಿ, ಹರಿಯಾಣ ಗವರ್ನರ್ ಮತ್ತು ಮುಖ್ಯಮಂತ್ರಿಗೆ ಇ-ಮೇಲ್ ಮೂಲಕ ಕಳುಹಿಸಿದ್ದೇನೆ ಎಂದು ರಾಣಿ ಅವರು ತಿಳಿಸಿದ್ದಾರೆ.

    ಐಎಎಸ್ ಅಧಿಕಾರಿ ಪತ್ರವನ್ನು ತಮ್ಮ ಫೇಸ್‍ಬುಕ್ ಫೇಜಿನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮೊದಲು ಅಂದರೆ ಕಳೆದ ತಿಂಗಳು ತಮ್ಮ ಫೇಸ್‍ಬುಕ್‍ನಲ್ಲಿ ಲಾಕ್‍ಡೌನ್ ನಂತರ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಅಲ್ಲದೇ ಉತ್ತರ ಪ್ರದೇಶದ ಘಜಿಯಾಬಾದ್‍ಗೆ ಹಿಂದಿರುಗುವ ಬಗ್ಗೆ ಹೇಳಿದ್ದರು.

    ಸದ್ಯಕ್ಕೆ ರಾಣಿ ನಗರ್ ಪ್ರಸ್ತುತ ತಮ್ಮ ಸಹೋದರಿಯೊಂದಿಗೆ ಚಂಡೀಗಢದಲ್ಲಿ ವಾಸಿಸುತ್ತಿದ್ದಾರೆ. 2018ರಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಕಿರುಕುಳ ನೀಡಿದ್ದಾರೆ ಎಂದು ರಾಣಿ ನಗರ್ ಆರೋಪಿಸಿದ್ದರು.

  • ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೊಲೀಸ್ ಮೇಲೆಯೇ ಕಾರು ಹತ್ತಿಸಿದ ಯುವಕ

    ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೊಲೀಸ್ ಮೇಲೆಯೇ ಕಾರು ಹತ್ತಿಸಿದ ಯುವಕ

    – ಕಾರಿನ ಬ್ಯಾನೆಟ್ ಮೇಲೆ ಹಾರಿದ ಪೊಲೀಸ್
    – ಆರೋಪಿ ತಂದೆ-ಮಗನ ವಿರುದ್ಧ ಪ್ರಕರಣ ದಾಖಲು

    ಚಂಡೀಗಢ: ಪಾಸ್ ತೋರಿಸಿ ಎಂದು ನಿಲ್ಲಿಸಿದ ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ಯುವಕ ಕಾರು ಹತ್ತಿಸಿದ್ದು, ಕಾರಿನ ಬ್ಯಾನೆಟ್ ಮೇಲೆ ಹಾರಿ ಸಿಬ್ಬಂದಿ ಪ್ರಾಣ ಉಳಿಸಿಕೊಂಡ ಘಟನೆ ಪಂಜಾಬ್‍ನಲ್ಲಿ ನಡೆದಿದೆ.

    20 ವರ್ಷದ ಯುವಕ ಅನ್ಮೊಲ್ ಕಾರು ಓಡಿಸಿಕೊಂಡು ತನ್ನ ತಂದೆ ಪರ್ಮಿಂಧರ್ ಕುಮಾರ್ ಜೊತೆಯಲ್ಲಿ ಬರುತ್ತಿದ್ದ. ಈ ವೇಳೆ ಜಲಂಧರ್ ಚೆಕ್‍ಪೋಸ್ಟ್ ಬಳಿಯ ಮಿಲ್ಕ್ ಬಾರ್ ಚೌಕ್‍ನಲ್ಲಿ ಕಾರನ್ನು ತಡೆದ ಪೊಲೀಸರು ಪಾಸ್ ತೋರಿಸುವಂತೆ ಕೇಳಿದಾಗ ಯುವಕ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾನೆ. ಅಲ್ಲದೇ ಅಲ್ಲೇ ನಿಂತಿದ್ದ ಎಎಸ್‍ಐ ಮುಲ್ಕ್ ರಾಜ್ ಮೇಲೆ ಕಾರು ಹತ್ತಿಸಿದ್ದಾನೆ. ಈ ವೇಳೆ ತಕ್ಷಣ ಎಚ್ಚೆತ್ತ ಎಎಸ್‍ಐ ಕಾರಿನ ಮೇಲೆ ಹಾರಿ ಬ್ಯಾನೆಟ್ ಹಿಡಿದುಕೊಂಡಿದ್ದಾರೆ. ಆಗ ಯುವಕ ಇನ್ನಷ್ಟು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಸ್ವಲ್ಪ ದೂರದವರೆಗೂ ಹಾಗೇ ಹೋಗಿ, ಬಳಿಕ ಕಾರು ನಿಲ್ಲಿಸಿದ್ದಾನೆ.

    ಲಾಕ್‍ಡೌನ್ ನಿಯಮ ಉಲ್ಲಂಘಿಸಿದ್ದಲ್ಲದೇ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ತಂದೆ-ಮಗ ಇಬ್ಬರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

    ಈ ಬಗ್ಗೆ ತಿಳಿದ ಪಂಜಾಬ್ ಡಿಜಿಪಿ ಅವರು ಟ್ವೀಟ್ ಮಾಡಿ, ಈ ರೀತಿ ಕೃತ್ಯಗಳನ್ನು ಪಂಜಾಬ್ ಪೊಲೀಸ್ ಇಲಾಖೆ ಸಹಿಸುವುದಿಲ್ಲ. ಈಗಾಗಲೇ ಆರೋಪಿ ಮಗ ಹಾಗೂ ತಂದೆಯನ್ನು ಬಂಧಿಸಿ, ಇಬ್ಬರ ಮೇಲೂ ಕೊಲೆ ಯತ್ನ ಪ್ರಕರಣದ ಜೊತೆ ಇತರೆ ಪ್ರಕರಣಗಳು ದಾಖಲಾಗಿದೆ ಎಂದು ತಿಳಿಸಿದ್ದಾರೆ.

    ಆರೋಪಿ ಅನ್ಮೊಲ್ ಕಾಲೇಜು ವಿದ್ಯಾರ್ಥಿಯಾಗಿದ್ದು, ಪೊಲೀಸರಿಂದ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಈ ತಪ್ಪು ಮಾಡಿದ್ದಾನೆ. ಆದರೆ ಎಎಸ್‍ಐ ಕಾರಿನ ಬ್ಯಾನೆಟ್ ಮೇಲೆ ಹಾರಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ ಎಂದು ಇತರೆ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ.

  • ಕೊರೊನಾ ವಿರುದ್ಧ 26 ಗಂಟೆ ಹೋರಾಡಿ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ

    ಕೊರೊನಾ ವಿರುದ್ಧ 26 ಗಂಟೆ ಹೋರಾಡಿ ಪ್ರಾಣಬಿಟ್ಟ 6 ತಿಂಗಳ ಕಂದಮ್ಮ

    – ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹೆಣ್ಣು ಮಗು
    – ಪೋಷಕರು, ಆಸ್ಪತ್ರೆಯ ವೈದ್ಯರಿಗಿಲ್ಲ ಸೋಂಕು

    ಚಂಡೀಗಢ: ಮಹಾಮಾರಿ ಕೊರೊನಾ ವಿರುದ್ಧ 26 ಗಂಟೆಗಳ ಹೋರಾಡಿ 6 ತಿಂಗಳ ಕಂದಮ್ಮವೊಂದು ಮೃತಪಟ್ಟ ಮನಕಲಕುವ ಘಟನೆ ಇಂದು ಚಂಡೀಗಢದಲ್ಲಿ ನಡೆದಿದೆ.

    ಹೃದಯ ರಂಧ್ರದ ಚಿಕಿತ್ಸೆಗಾಗಿ 6 ತಿಂಗಳ ಹೆಣ್ಣು ಮಗುವನ್ನು ಚಂಡೀಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮಗುವಿಗೆ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಅಂದ್ರೆ ಬುಧವಾರ ಬೆಳಗ್ಗೆ 11 ಗಂಟೆಗೆ ಕೋವಿಡ್-19 ವಾರ್ಡಿಗೆ ದಾಖಲಿಸಲಾಗಿತ್ತು. ರಾತ್ರಿಯಿಂದಲೇ ಮಗುವನ್ನು ವೆಂಟಿಲೇಟರ್ ಮತ್ತು ಗ್ಲೂಕೋಸ್‍ನಲ್ಲಿ ಇಡಲಾಗಿತ್ತು. ಆದರೆ ಸೋಂಕು ತೀವ್ರವಾಗಿ ಏರಿಕೆ ಕಂಡು ಕಂದಮ್ಮ ಪ್ರಾಣಬಿಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಮಗು ಜನಿಸಿದಾಗ ಎರಡೂವರೆ ಕೆಜಿ ಇತ್ತು. ನಂತರ 6 ತಿಂಗಳ ಕಳೆದರೂ ತೂಕವು 3 ಕೆಜಿಗಿಂತ ಹೆಚ್ಚಾಗಲಿಲ್ಲ. ಹೀಗಾಗಿ ಪೋಷಕರು ಮಗುವನ್ನು ಜಲಂಧರಿನ ಅಪೊಲೊ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ 36 ದಿನಗಳವರೆಗೆ ಚಿಕಿತ್ಸೆ ಕೊಡಿಸಿದ್ದರು. ಆದರೆ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದನ್ನು ಅರಿತ ಅಪೊಲೊ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಪಿಜಿಐಗೆ ದಾಖಲಿಸುವಂತೆ ಸಲಹೆ ನೀಡಿದ್ದರು. ಹೀಗಾಗಿ ಪೋಷಕರು ಏಪ್ರಿಲ್ 9ರಂದು ಅಂಬುಲೆನ್ಸ್ ಮೂಲಕ ಪಿಜಿಐಗೆ ಕರೆತಂದಿದ್ದರು.

    ಚಿಕಿತ್ಸೆ ಆರಂಭಿಸಿದ ವೈದ್ಯರು ಮಗುವಿನ ಹೃದಯದಲ್ಲಿ ರಂಧ್ರವಿದೆ, ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ತಿಳಿಸಿದ್ದರು. ಆದರೆ ಶಸ್ತ್ರಚಿಕಿತ್ಸೆಗೂ ಮುನ್ನವೇ ಮಗುವಿಗೆ ಸೋಂಕು ತಗುಲಿತ್ತು. ಮಗುವಿಗೆ ಜ್ವರದ ಲಕ್ಷಣಗಳು ಇರಲಿಲ್ಲ. ಆದರೆ ಕೈ-ಕಾಲು ಸೇರಿದಂತೆ ದೇಹದ ಭಾಗಗಳು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದವು.

    ತಾಯಿ-ತಂದೆ ಕೊರೊನಾ ಬಂದಿಲ್ಲ:
    ವೆಂಟಿಲೇಟರ್ ಮೇಲೆ ಇರಿಸಿದ್ದ ಮಗಳನ್ನು ನೋಡಲು ತಾಯಿ ಹೋಗಿದ್ದರು. ಮಗುವಿನ ತಂದೆ ರಾಮು ಮತ್ತು ತಾಯಿ ಇಬ್ಬರೂ ಕೊರೊನಾ ಟೆಸ್ಟ್‌ಗೆ ಒಳಗಾಗಿದ್ದರು. ಆದರೆ ಅವರ ರಿಪೋರ್ಟ್ ನಲ್ಲಿ ಸೋಂಕು ದೃಢಪಟ್ಟಿಲ್ಲ. ಅಜ್ಜಿ ಮತ್ತು ಅಜ್ಜನಿಗೂ ಕೊರೊನಾ ಟೆಸ್ಟ್ ಮಾಡಲಾಗಿದೆ. ಅವರಲ್ಲಿಯೂ ಸೋಂಕು ಕಂಡುಬಂದಿಲ್ಲ. ಹೀಗಾಗಿ ಮಗುವಿಗೆ ಕೊರೊನಾ ಹೇಗೆ ಹರಡಿದೆ ಎಂಬ ಪ್ರಶ್ನೆ ಉದ್ಭವಿಸಿದೆ.

    ಹೆಣ್ಣು ಮಗುವಿನೊಂದಿಗೆ ಸಂಪರ್ಕ ಹೊಂದಿದ್ದ 18 ವೈದ್ಯರು, ಎಚ್‍ಎ ಮತ್ತು ಎಕ್ಸ್ ರೇ ತಂತ್ರಜ್ಞರು ಸೇರಿದಂತೆ 54 ಮಂದಿ ಆಸ್ಪತ್ರೆಯ ಉದ್ಯೋಗಿಗಳ ರಿಪೋರ್ಟ್ ನೆಗೆಟಿವ್ ಬಂದಿದೆ. ಪಿಜಿಐ ಬುಧವಾರ 18 ವೈದ್ಯರನ್ನು ಪ್ರತ್ಯೇಕಿಸಿ ಪ್ರತ್ಯೇಕ ವಾರ್ಡಿಗೆ ದಾಖಲಿಸಿದೆ. ಉಳಿದ ಸಿಬ್ಬಂದಿಯ ವರದಿ ನೆಗೆಟಿವ್ ಬಂದಿದ್ದರಿಂದ ಅವರನ್ನು ಮನೆಗೆ ಕಳುಹಿಸಿದೆ.

  • ಲಾಕ್‍ಡೌನ್‍ನಿಂದಾಗಿ ರೇಪ್, ಕೊಲೆ ಅಪರಾಧಗಳಲ್ಲಿ ಶೇ.80ರಷ್ಟು ಇಳಿಕೆ

    ಲಾಕ್‍ಡೌನ್‍ನಿಂದಾಗಿ ರೇಪ್, ಕೊಲೆ ಅಪರಾಧಗಳಲ್ಲಿ ಶೇ.80ರಷ್ಟು ಇಳಿಕೆ

    – ಕಳೆದ ವರ್ಷದ ಒಂದು ತಿಂಗಳಲ್ಲಿ 1,503 ಈಗ 260 ಪ್ರಕರಣ
    – ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ

    ಚಂಡೀಗಢ: ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಇಡೀ ದೇಶದ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು, ಮನೆಯೊಳಗಿದ್ದಾರೆ. ಇದರಿಂದಾಗಿ ಅಪರಾಧ ಪ್ರಕರಣಗಳು ಕೂಡ ಕಡಿಮೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹರಿಯಾಣದ ಗುರುಗ್ರಾಮ್‍ನಲ್ಲಿ ಲಾಕ್‍ಡೌನ್‍ನಿಂದಾಗಿ ಅತ್ಯಾಚಾರ, ಕೊಲೆ, ಕಳ್ಳತನ ಮತ್ತು ದರೋಡೆ ಮುಂತಾದ ಅಪರಾಧಗಳಲ್ಲಿ ಶೇ.80ಕ್ಕಿಂತಲೂ ಕಡಿಮೆಯಾಗಿದೆ. 2019 ರಲ್ಲಿ ಇದೇ ಅವಧಿಯಲ್ಲಿ ನಡೆದ ಅಪರಾಧಗಳಿಗೆ ಹೋಲಿಸಿದರೆ ಮಾರ್ಚ್ 25 ರಿಂದ ಏಪ್ರಿಲ್ 15 ರವರೆಗೆ ದಾಖಲಾದ ಅಪರಾಧಗಳು ಶೇ.80ಕ್ಕಿಂತಲೂ ಕಡಿಮೆಯಾಗಿದೆ ಎಂದು ಪೊಲೀಸರು ಹೇಳಿದರು.

    ಮಾರ್ಚ್ 25 ರಿಂದ ಏಪ್ರಿಲ್ 15 ರವರೆಗೆ 625 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಕಳೆದ ವರ್ಷ ಈ ಇದೇ ಸಮಯದಲ್ಲಿ 1,503 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಈ ವರ್ಷ ದಾಖಲಾದ 625 ಪ್ರಕರಣಗಳಲ್ಲಿ 365 ಪ್ರಕರಣಗಳು ಕೊರೊನಾ ವೈರಸ್ ಲಾಕ್‍ಡೌನ್ ಉಲ್ಲಂಘನೆಗೆ ಸಂಬಂಧಿಸಿವೆ. ಹೀಗಾಗಿ ಒಟ್ಟು 260 ಮಾತ್ರ ಎಫ್‍ಐಆರ್ ದಾಖಲಾಗಿದೆ. ಇದು 2019 ರಲ್ಲಿ ದಾಖಲಾದ ಎಫ್‌ಐಆರ್‌ಗಳ ಸಂಖ್ಯೆಗೆ ಹೋಲಿಸಿದರೆ ಶೇ.83ರಷ್ಟು ಕಡಿಮೆಯಾಗಿದೆ.

    ಕಿಕ್ಕಿರಿದ ಬೀದಿಗಳು ಮತ್ತು ಜನರ ಓಡಾಟದಿಂದ ಅಪರಾಧಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಈಗ ಜನರು ಮನೆಯಲ್ಲಿದ್ದಾರೆ ಮತ್ತು ಪೊಲೀಸರು ಬೀದಿಯಲ್ಲಿ ಕರ್ತವ್ಯ ಮಾಡುತ್ತಿರುವುದರಿಂದ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ. ವಾಹನಗಳ ಸಂಚಾರ ನಿರ್ಬಂಧದಿಂದಲೂ ಅಪರಾಧ ಕಡಿಮೆಯಾಗಿವೆ ಎಂದು ಗುರುಗ್ರಾಮ್ ಪೊಲೀಸ್ ಆಯುಕ್ತ ಮೊಹಮ್ಮದ್ ಅಕಿಲ್ ತಿಳಿಸಿದರು.

    ಈ ವರ್ಷ ಕೇವಲ 16 ವಾಹನ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 275 ಪ್ರಕರಣಗಳು ಬೆಳಕಿಗೆ ಬಂದಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳ್ಳರನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ವಾಹನಗಳನ್ನು ಮಾರುಕಟ್ಟೆ ಪ್ರದೇಶಗಳಲ್ಲಿ ನಿಲ್ಲಿಸಲಾಗಿದೆ. ಯಾಕೆಂದರೆ ಲಾಕ್‍ಡೌನ್‍ನಿಂದಾಗಿ ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ. ಜೊತೆಗೆ ನಗರದಾದ್ಯಂತ ಪೊಲೀಸ್ ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಹೀಗಾಗಿ ಕಳ್ಳರು ವಾಹನ ಕಳ್ಳತನ ಮಾಡುವ ಸಾಧ್ಯತೆ ಇಲ್ಲ ಎಂದು ಅಧಿಕಾರಿ ಹೇಳಿದರು.

    ಆದರೂ ಈ ವರ್ಷ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮಾರ್ಚ್ 25 ರಿಂದ ಏಪ್ರಿಲ್ 15 ರವರೆಗೆ 59 ವಂಚನೆ ಪ್ರಕರಣಗಳು ದಾಖಲಾಗಿದ್ದಾವೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ 11 ಪ್ರಕರಣ ದಾಖಲಾಗಿತ್ತು.