Tag: chandigarh

  • ಕ್ರಿಕೆಟಿಗ ಮನ್‍ದೀಪ್ ಸಿಂಗ್ ತಂದೆ ವಿಧಿವಶ

    ಕ್ರಿಕೆಟಿಗ ಮನ್‍ದೀಪ್ ಸಿಂಗ್ ತಂದೆ ವಿಧಿವಶ

    ಚಂಡೀಗಢ: ಪಂಜಾಬ್ ರಾಜ್ಯದ ಕ್ರಿಕೆಟರ್ ಮತ್ತು ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕಾಗಿ ಆಡುತ್ತಿರುವ ಬ್ಯಾಟ್ಸ್ ಮ್ಯಾನ್ ಮನ್‍ದೀಪ್ ಸಿಂಗ್ ಅವರ ತಂದೆ ಸರ್ದಾರ್ ಹರ್ದೇವ್ ಸಿಂಗ್ ಅವರು ಇಂದು ವಿಧಿವಶರಾಗಿದ್ದಾರೆ.

    ಕಳೆದ ಕೆಲ ದಿನಗಳಿಂದ ಸರ್ದಾರ್ ಹರ್ದೇವ್ ಸಿಂಗ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಇತ್ತೀಚೆಗೆ ಅವರ ಆರೋಗ್ಯದ ಸ್ಥಿತಿ ತೀರ ಗಂಭೀರವಾದ ಕಾರಣ ಅವರನ್ನು ಚಂಡೀಗಢದ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

    ಹರ್ದೇವ್ ಸಿಂಗ್ ಅವರು ನಿವೃತ್ತ ಜಿಲ್ಲಾ ಕ್ರೀಡಾ ಅಧಿಕಾರಿಯಾಗಿದ್ದರು. ಮಗ ಮನ್‍ದೀಪ್ ಸಿಂಗ್ ಅವರು ಪ್ರಸ್ತುತ ಐಪಿಎಲ್ ಆಡಲು ಯುಎಇಗೆ ಹೋಗಿದ್ದಾರೆ. ಅವರು ಈ ಬಾರಿಯ ಐಪಿಎಲ್‍ನಲ್ಲಿ ಕೆಎಲ್ ರಾಹುಲ್ ನೇತೃತ್ವದ ತನ್ನ ರಾಜ್ಯ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್‍ಗಾಗಿ ಆಡುತ್ತಿದ್ದಾರೆ. ಸದ್ಯ ಅವರು ಈ ಆವೃತ್ತಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಪ್ಲೇಯಿಂಗ್ ಇಲೆವೆನ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

  • ಹೋಟೆಲಿನಲ್ಲಿ ಗ್ಯಾಂಗ್‍ರೇಪ್ – ಮಹಿಳೆ ಜೊತೆ ಮಗಳನ್ನ ಚಲಿಸ್ತಿದ್ದ ಕಾರಿನಿಂದ ಎಸೆದ್ರು

    ಹೋಟೆಲಿನಲ್ಲಿ ಗ್ಯಾಂಗ್‍ರೇಪ್ – ಮಹಿಳೆ ಜೊತೆ ಮಗಳನ್ನ ಚಲಿಸ್ತಿದ್ದ ಕಾರಿನಿಂದ ಎಸೆದ್ರು

    – ಫೋನಿನಲ್ಲಿ ಹೇಳಿದ್ದನ್ನ ನಂಬಿ ಹೋಗಿದ್ದೆ ತಪ್ಪಾಯ್ತು

    ಚಂಡೀಗಢ: ಮಹಿಳೆಯೊಬ್ಬರ ಮೇಲೆ ಹೋಟೆಲಿನಲ್ಲಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಪಂಜಾಬ್‍ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.

    ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಸಂತ್ರಸ್ತೆ ಮತ್ತು ಆಕೆಯ 10 ವರ್ಷದ ಮಗಳನ್ನು ಚಲಿಸುತ್ತಿದ್ದ ಕಾರಿನಿಂದ ಹೊರಗೆ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ. ಸೆಪ್ಟೆಂಬರ್ 6 ರಂದು ಅಪರಿಚಿತ ವ್ಯಕ್ತಿಯೊಬ್ಬ ಸಂತ್ರಸ್ತೆಗೆ ಫೋನ್ ಮಾಡಿದ್ದು, ನಿಮ್ಮ ಸಹೋದ್ಯೋಗಿಗೆ ಅಪಘಾತವಾಗಿದೆ ಎಂದು ತಿಳಿಸಿದ್ದಾನೆ. ಇದರಿಂದ ಗಾಬರಿಗೊಂಡು ಸಂತ್ರಸ್ತೆ ಬಸ್ ಮೂಲಕ ಅಮೃತಸರಕ್ಕೆ ಹೋಗಿದ್ದಾರೆ.

    ಅಮೃತಸರವನ್ನು ತಲುಪಿದ ನಂತರ ಫೋನ್ ಮಾಡಿದ್ದ ಅಪರಿಚಿತ ವ್ಯಕ್ತಿ ನನ್ನನ್ನು ಭೇಟಿಯಾದನು. ಈ ವೇಳೆ ನನಗೆ ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ್ದ ಪಾನೀಯವನ್ನು ಕೊಟ್ಟಿದ್ದಾನೆ. ಅದನ್ನು ಕುಡಿದ ನಂತರ ನಾನು ಪ್ರಜ್ಞಾಹೀನ ಕಳೆದುಕೊಂಡೆ. ಆಗ ನನ್ನ ಮಗಳೊಂದಿಗೆ ಕಾರಿನಲ್ಲಿ ಹೋಟೆಲ್‍ಗೆ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲಿ ಇಬ್ಬರು ಪುರುಷರಿದ್ದರು ಎಂದು ಸಂತ್ರಸ್ತೆ ಹೇಳಿದ್ದಾರೆ.

    ಹೋಟೆಲಿನಲ್ಲಿ ಸಂತ್ರಸ್ತೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ಮಗಳನ್ನು ಚಲಿಸುವ ಕಾರಿನಿಂದ ಹೊರಗೆ ಎಸೆದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ನನಗೆ ಮತ್ತು ತನ್ನ ಮಗಳಿಗೆ ಗಾಯಗಳಾಗಿವೆ. ಅಂದು ನಾನು ಭಯದಿಂದ ಈ ವಿಚಾರವನ್ನು ಯಾರಿಗೂ ಹೇಳಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

    ಇದೀಗ ಸಂತ್ರಸ್ತೆ ಧೈರ್ಯ ಮಾಡಿಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸಂತ್ರಸ್ತೆಯನ್ನು ಕರೆದುಕೊಂಡು ಹೋದ ಮತ್ತು ಅತ್ಯಾಚಾರ ಮಾಡಿದ ಹೋಟೆಲ್ ದಾಖಲೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮದ್ವೆ ನಂತ್ರ ಪ್ರಿಯಕರನ ಜೊತೆ ಎಸ್ಕೇಪ್ – ರಾಜಿಯಾದ ಮೇಲೂ ಮತ್ತೆ ಹೋಟೆಲ್‍ನಲ್ಲಿ ಸಿಕ್ಕಿಬಿದ್ಳು

    ಮದ್ವೆ ನಂತ್ರ ಪ್ರಿಯಕರನ ಜೊತೆ ಎಸ್ಕೇಪ್ – ರಾಜಿಯಾದ ಮೇಲೂ ಮತ್ತೆ ಹೋಟೆಲ್‍ನಲ್ಲಿ ಸಿಕ್ಕಿಬಿದ್ಳು

    ಚಂಡೀಗಢ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಇದ್ದಾಗಲೇ ಪತಿಯ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದು, ಇಬ್ಬರಿಗೂ ವ್ಯಕ್ತಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಹರಿಯಾಣದ ಫರಿದಾಬಾದ್‍ನ ಹೋಟೆಲ್‍ವೊಂದರಲ್ಲಿ ನಡೆದಿದೆ.

    ಪತಿ ಮತ್ತು ಆತನ ಕಿರಿಯ ಸಹೋದರ ಅವರು ಇರುವ ಸ್ಥಳವನ್ನು ತಿಳಿದುಕೊಂಡು ಹೋಗಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ನಂತರ ಇಬ್ಬರಿಗೂ ಸಾರ್ವಜನಿಕವಾಗಿಯೇ ಥಳಿಸಿದ್ದಾರೆ. ಇದರಿಂದ ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಆಗ ವ್ಯಕ್ತಿ ತನ್ನ ಹೆಂಡತಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ.

    ಏನಿದು ಪ್ರಕರಣ?
    ದಂಪತಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಪತಿ ಪಾಲ್ವಾಲ್‍ನ ಅಸಾವತಿ ಗ್ರಾಮದ ನಿವಾಸಿಯಾಗಿದ್ದರೆ, ಪತ್ನಿ ಫಿರೋಜ್‍ಪುರ್ ಕಲಾನ್ ಗ್ರಾಮದವಳು. ಮಹಿಳೆ ಮದುವೆಗೂ ಮುನ್ನ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಇದೇ ವಿಚಾರಕ್ಕೆ ಮದುವೆಯ ನಂತರ ದಂಪತಿಯ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ.

    ಮದುವೆಯಾದ ನಂತರ ನನ್ನ ಪತ್ನಿ ಪ್ರಿಯಕರನ ಜೊತೆ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ ಎಂದು ಪತಿ ಆರೋಪಿಸಿದ್ದಾನೆ. ಈ ಹಿಂದೆಯೂ ಕೂಡ ವಿವಾಹವಾದ ನಂತರ ತನ್ನ ಪ್ರಿಯಕರನ ಜೊತೆ ಮಹಿಳೆ ಓಡಿಹೋಗಿದ್ದಳು. ಆಗ ವಾಪಸ್ ಬಂದ ಪತ್ನಿಯನ್ನು ಪತಿ ಸ್ವೀಕರಿಸಲು ನಿರಾಕರಿಸಿದ್ದನು. ಆದರೆ ಎರಡು ಕುಟುಂಬದವರು ಮಾತನಾಡಿ ರಾಜೀ ಮಾಡಿಸಿದ್ದರು.

    ಮೂರು ದಿನಗಳ ಹಿಂದೆ ಮಹಿಳೆ ತನ್ನ ತಂದೆ ಕಾಲಿಗೆ ಪೆಟ್ಟಾಗಿದೆ ಎಂದು ತಾಯಿಯ ಮನೆಗೆ ಹೋಗಿದ್ದಳು. ಇತ್ತ ಪತಿ ತನ್ನ ಬಾಮೈದನನ್ನು ಕರೆದು ಮಾವನ ಆರೋಗ್ಯದ ಬಗ್ಗೆ ವಿಚಾರಿಸಿದ್ದಾನೆ. ಇದೇ ವೇಳೆ ತನ್ನ ಹೆಂಡತಿಯ ಬಗ್ಗೆಯೂ ಕೇಳಿದ್ದಾನೆ. ಆಗ ಬಾಮೈದ ತಾಯಿಯೊಂದಿಗೆ ಬಲ್ಲಭಗಢ್‍ಗೆ ಶಾಪಿಂಗ್ ಮಾಡಲು ಹೋಗಿದ್ದಾಳೆ ಎಂದು ತಿಳಿಸಿದ್ದನು. ಕಾಕತಾಳೀಯವಾಗಿ ಬಲ್ಲಭಗಢ್‍ನಲ್ಲಿರುವ ಪತಿಯ ಸಂಬಂಧಿ ಸ್ವಲ್ಪ ಸಮಯದ ನಂತರ ಫೋನ್ ಮಾಡಿ, ನಿನ್ನ ಹೆಂಡತಿ ಯಾರೊಂದಿಗೋ ಸುತ್ತಾಡುತ್ತಿರುವುದನ್ನು ನೋಡಿದೆನೆಂದು ತಿಳಿಸಿದ್ದಾನೆ.

    ಪತಿ ತಕ್ಷಣ ಅನುಮಾನಗೊಂಡು ಹೆಂಡತಿಯನ್ನು ಹುಡುಕಲು ಬಲ್ಲಭಗಢ್‍ಗೆ ಹೋಗಿದ್ದಾನೆ. ಪತ್ನಿ ಮತ್ತು ಆತನ ಸಹೋದರ ಆ ಪ್ರದೇಶದಲ್ಲಿ ಹುಡುಕಿದ್ದಾರೆ, ಸುತ್ತಮುತ್ತಲಿನ ಜನರನ್ನು ಕೇಳಿದ್ದಾರೆ. ಕೊನೆಗೆ ಅವರಿಬ್ಬರನ್ನು ಹೋಟೆಲ್‍ನಲ್ಲಿ ಪತ್ತೆ ಮಾಡಿದ್ದಾರೆ. ಈ ವೇಳೆ ಕೋಪಗೊಂಡ ಪತಿ ಸಾರ್ವಜನಿಕವಾಗಿಯೇ ಇಬ್ಬರನ್ನು ಥಳಿಸಿದ್ದಾನೆ.

    ಸದ್ಯಕ್ಕೆ ಸ್ಥಳೀಯ ಪೊಲೀಸರು ಮಹಿಳೆ ಮತ್ತು ಆತನ ಪ್ರಿಯಕರನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಜೊತೆಗೆ ಅವರ ಕುಟುಂಬ ಸದಸ್ಯರನ್ನು ಠಾಣೆಗೆ ಕರೆಸಿದ್ದಾರೆ. ಈ ಬಗ್ಗೆ ದೂರು ಬಂದರೆ ತನಿಖೆ ಆರಂಭಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

  • ಮುಂಬೈ, ಚಂಡೀಗಢದಲ್ಲಿ ಇಂದಿನಿಂದ ಕೋವಿಶೀಲ್ಡ್ ವ್ಯಾಕ್ಸಿನ್ ಪ್ರಯೋಗ

    ಮುಂಬೈ, ಚಂಡೀಗಢದಲ್ಲಿ ಇಂದಿನಿಂದ ಕೋವಿಶೀಲ್ಡ್ ವ್ಯಾಕ್ಸಿನ್ ಪ್ರಯೋಗ

    ನವದೆಹಲಿ: ಇಂದಿನಿಂದ ಮುಂಬೈ ಮತ್ತು ಚಂಡೀಗಢದಲ್ಲಿ ಕೊರೊನಾ ವೈರಸ್ ನಿಗ್ರಹ ಕೋವಿಶೀಲ್ಡ್ ವ್ಯಾಕ್ಸಿನ್ ಪರೀಕ್ಷೆಗೆ ಒಳಪಡಲಿದೆ. ಮುಂಬೈನ KEM ಆಸ್ಪತ್ರೆ ಮತ್ತು ಚಂಡೀಗಢದ PGIMERನಲ್ಲಿ ಮಾನವರ ಮೇಲೆ ಪ್ರಯೋಗ ನಡೆಯಲಿದೆ ಎಂದು ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಹೇಳಿದೆ.

    ಪುಣೆಯಲ್ಲಿ ಈಗಾಗಲೇ ಮೂರನೇ ಹಂತದ ಪರೀಕ್ಷೆ ಆರಂಭವಾಗಿದ್ದು, ಅದರ ಭಾಗವಾಗಿ ಚಂಡೀಗಢ ಮತ್ತು ಮುಂಬೈನಲ್ಲಿ ಪ್ರಯೋಗ ನಡೆಸಲಾಗುತ್ತಿದೆ. ಚಂಡೀಗಢದಲ್ಲಿ 57, 33, 26 ವಯಸ್ಸಿನ ಮೂವರು ಸ್ವಯಂ ಸೇವಕರ ಮೇಲೆ ಇಂದು ಪ್ರಯೋಗ ನಡೆಯಲಿದೆ.

    ಈವರೆಗೂ 18 ಮಂದಿ ಸ್ವಯಂಸೇವಕರು ನೊಂದಣಿಯಾಗಿದ್ದಾರೆ. 100 ಸ್ವಯಂ ಸೇವಕರ ಮೇಲೆ ಪ್ರಯೋಗಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು PGIMER ಮುಖ್ಯಸ್ಥ ಫ್ರೋ.ಜಗತ್ ರಾಮ್ ಹೇಳಿದ್ದಾರೆ.

    ಮುಂಬೈನ KEM ನಲ್ಲಿ ಇಂದು 13 ಮಂದಿ ಸ್ವಯಂ ಸೇವಕರ ಮೇಲೆ ಪ್ರಯೋಗ ನಡೆಯಲಿದೆ. ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರಯೋಗ ನಡೆಯಲಿದೆ ಎಂದು ಡಾ. ಹೇಮಂತ್ ದೇಶಮುಖ್ ತಿಳಿಸಿದ್ದಾರೆ.

    ಬ್ರಿಟನ್‍ನ ಆಕ್ಸ್‌ಫರ್ಡ್ ಯೂನಿವರ್ಸಿಟಿ, ಆಸ್ಟ್ರಾಜೆನಿಕಾ ಫಾರ್ಮಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ವ್ಯಾಕ್ಸಿನ್ ಅನ್ನು ಭಾರತದಲ್ಲಿ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಪ್ರಯೋಗಕ್ಕೆ ಒಳಪಡಿಸಿದ್ದು, ಅಂತಿಮ ಹಂತದ ಪರೀಕ್ಷೆಗಳನ್ನು ವಿಸ್ತರಿಸಲಾಗುತ್ತಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಫಲಿತಾಂಶ ನಿರೀಕ್ಷಿಸಿದೆ.

    https://twitter.com/HindustanNews10/status/1309700162722435073

  • ಪತ್ನಿ, ನಾದಿನಿಯನ್ನ ಕೊಂದು ಮೃತದೇಹಗಳ ಜೊತೆ ಸೆಕ್ಸ್

    ಪತ್ನಿ, ನಾದಿನಿಯನ್ನ ಕೊಂದು ಮೃತದೇಹಗಳ ಜೊತೆ ಸೆಕ್ಸ್

    – ಅತ್ತೆಯನ್ನೂ ಬಿಡದ 27ರ ಕಾಮುಕ
    – 3 ದಿನ ವಿಭಿನ್ನ ಸ್ಥಳದಲ್ಲಿ ಮೂವರ ಶವ ಪತ್ತೆ

    ಚಂಡೀಗಢ: 27 ವರ್ಷದ ಕಾಮುಕನೊಬ್ಬ ತನ್ನ ಹೆಂಡತಿ, ನಾದಿನಿ ಮತ್ತು ಅತ್ತೆ ಮೂವರನ್ನು ಕೊಲೆ ಮಾಡಿದ್ದಾನೆ. ನಂತರ ಅವರ ಮೃತದೇಹಗಳ ಜೊತೆ ಸೆಕ್ಸ್ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ.

    ಇದೀಗ ಪೊಲೀಸರು ಆರೋಪಿಯನ್ನು ಬಂಧಿಸುವ ಮೂಲಕ ತ್ರಿವಳಿ ಕೊಲೆ ರಹಸ್ಯವನ್ನು ಭೇದಿಸಿದ್ದಾರೆ. ಸೆಪ್ಟೆಂಬರ್ 6 ರಂದು ಜಿಲ್ಲೆಯ ಸಮಲ್ಖ ಪಟ್ಟಣದಲ್ಲಿ ಈ ಕೊಲೆ ನಡೆದಿದೆ. ಆರೋಪಿಯನ್ನು ನೂರ್ ಹಸನ್ (27) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ ಆರೋಪಿ ಶವಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ.

    ಮೂವರು ಮೃತದೇಹಗಳು ಸೆಪ್ಟೆಂಬರ್ 6, 7 ಮತ್ತು 8 ರಂದು ಮೂರು ವಿಭಿನ್ನ ಸ್ಥಳಗಳಲ್ಲಿ ಪತ್ತೆಯಾಗಿದ್ದವು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ಸೆಪ್ಟೆಂಬರ್ 11 ರಂದು ಪಾಣಿಪತ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅಡಿಯಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.

    ಆರೋಪಿ ಸೆಪ್ಟೆಂಬರ್ 5 ರಂದು ಮೊದಲು ತನ್ನ ಹೆಂಡತಿ ಮತ್ತು ನಾದಿನಿಯನ್ನು ಕೊಲೆ ಮಾಡಿದ್ದಾನೆ. ನಂತರ ಅವರ ದೇಹಗಳನ್ನು ಬೇರೆ ಬೇರೆ ಸ್ಥಳಗಳಿಗೆ ಎಸೆದಿದ್ದಾನೆ. ಸೆಪ್ಟೆಂಬರ್ 8 ರಂದು ಬರ್ಷಮ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಗುರುತನ್ನು ಪತ್ತೆ ಮಾಡಬಾರದೆಂದು ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ.

    ಆರೋಪಿ ನೂರ್ ಹಸನ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಮಲ್ಖ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆದರೆ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟಿದ್ದ. ಅಲ್ಲದೇ ತನ್ನ ಸಂಬಂಧಕ್ಕೆ ಅತ್ತೆಯ ಮನೆಯವರ ಬೆಂಬಲ ಪಡೆಯುತ್ತಿದ್ದಾಳೆ ಎಂದು ಶಂಕಿಸಿ ಈ ಕೊಲೆಗಳನ್ನು ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

    ವಿಚಾರಣೆ ವೇಳೆ ಮೂವರು ಮಹಿಳೆಯರನ್ನು ಕೊಂದು ಅವರ ಶವಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಹುಟ್ಟುಹಬ್ಬದ ದಿನ ಜಾಲಿರೈಡ್ ತಂದ ಆಪತ್ತು – ಬರ್ತ್ ಡೇ ಹುಡುಗಿ ಸಾವು

    ಹುಟ್ಟುಹಬ್ಬದ ದಿನ ಜಾಲಿರೈಡ್ ತಂದ ಆಪತ್ತು – ಬರ್ತ್ ಡೇ ಹುಡುಗಿ ಸಾವು

    – ಸ್ಪೀಡ್ ಬ್ರೇಕರ್ ನೋಡದೆ ಬೈಕ್ ಹಾರಿಸಿದ ಸ್ನೇಹಿತೆ

    ಚಂಡೀಗಢ: ಯುವತಿಯೊಬ್ಬಳು ತನ್ನ 22ನೇ ಹುಟ್ಟುಹಬ್ಬವನ್ನು ಆಚರಿಸಿದ ನಂತರ ಸ್ನೇಹಿತೆ ನೊಂದಿಗೆ ಜಾಲಿರೈಡ್‍ಗೆ ಹೋಗಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಪಂಚಕುಲದಲ್ಲಿ ನಡೆದಿದೆ.

    ಮೃತಳನ್ನು ಅನು ಎಂದು ಗುರುತಿಸಲಾಗಿದೆ. ಹರಿಯಾಣದ 26ನೇ ವಲಯದ ಐಟಿಬಿಪಿ ಗೇಟ್ ಬಳಿ ಈ ಘಟನೆ ನಡೆದಿದ್ದು, ಜಾಲಿ ರೈಡ್‍ಗೆ ಹೋಗಿದ್ದಾಗ ಬೈಕ್‍ನಿಂದ ಬಿದ್ದು ಅನು ಮೃತಪಟ್ಟಿದ್ದಾಳೆ.

    ವೇಗವಾಗಿ ಬೈಕ್ ಚಾಲನೆ ಮಾಡಿದ್ದೆ ನನ್ನ ಮಗಳ ಸಾವಿಗೆ ಕಾರಣ ಎಂದು ಹೇಳಿ ಮೃತಳ ತಾಯಿ ದೂರು ನೀಡಿದ್ದಾರೆ. ತಾಯಿ ನೀಡಿದ ದೂರಿನ ಮೇರೆಗೆ ಚಂಡೀಗಢದ ಮೌಲಿ ಜಾಗ್ರಾನ್‍ನಲ್ಲಿ ನೆಲೆಸಿರುವ ಅನು ಸ್ನೇಹಿತೆ ಉಸ್ಮಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಹರಿಯಾಣದ ಡೇರಾ ಬಸ್ಸಿಯ ಖೇರಿ ಗ್ರಾಮದ ಮೂಲದ ಅನು ಸೆಕ್ಟರ್ 15ರ ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದಳು.

    ಭಾನುವಾರ ಅನು ಹುಟ್ಟುಹಬ್ಬ ಇತ್ತು. ಹೀಗಾಗಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿ ನಂತರ ಜಾಲಿ ರೈಡ್‍ಗೆ ಅಂತ ಬೈಕಿನಲ್ಲಿ ಉಸ್ಮಾನ್ ಕರೆದುಕೊಂಡು ಹೋಗಿದ್ದಾಳೆ. ಅತಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದು, ರಸ್ತೆಯಲ್ಲಿದ್ದ ಸ್ಪೀಡ್ ಬ್ರೇಕರ್ ನೋಡದೆ ಅದರ ಮೇಲೆ ಬೈಕ್ ಹಾರಿಸಿದ್ದಾಳೆ. ಆಗ ಆಯ ತಪ್ಪಿ ಅನು ಕೆಳಗೆ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸೆಕ್ಟರ್ 6ರ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲಿಯೇ ಅನು ಮೃತಪಟ್ಟಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ಭಾನುವಾರ ರಾತ್ರಿ ಸ್ನೇಹಿತರೆಲ್ಲರೂ ಸೇರಿ ಅನು ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು. ಪಾರ್ಟಿಗೆ ಆಹ್ವಾನಿಸಲ್ಪಟ್ಟ ಉಸ್ಮಾನ್ ರಾತ್ರಿ 9.30ಕ್ಕೆ ಮಗಳನ್ನು ಬೈಕಿನಲ್ಲಿ ಜಾಲಿ ಡೈಡ್‍ಗೆ ಕರೆದುಕೊಂಡು ಹೋಗಿದ್ದಳು. ಆದರೆ ರಾತ್ರಿ 10.15ಕ್ಕೆ ನನ್ನ ಮಗಳ ಸ್ನೇಹಿತೆ ಆರತಿ ಫೋನ್ ಮಾಡಿ, ಅನುಗೆ ಅಪಘಾತವಾಗಿದೆ, ಆಕೆಯನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಳು ಎಂದು ತಾಯಿ ಉರ್ಮಿಲಾ ದೇವಿ ಪೊಲೀಸರಿಗೆ ತಿಳಿಸಿದ್ದಾರೆ.

    ಅನು ಸಹೋದರಿ ಪ್ರಿಯಾಂಕಾ ಆಸ್ಪತ್ರೆಗೆ ಹೋಗಿ ನೋಡುವಷ್ಟರಲ್ಲಿ ಅನು ಮೃತಪಟ್ಟಿದ್ದಳು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಸದ್ಯಕ್ಕೆ ಪಂಚಕುಲ ಪೊಲೀಸರು ಐಪಿಸಿಯ ಸೆಕ್ಷನ್ ಅಡಿಯಲ್ಲಿ ಅನು ಸ್ನೇಹಿತೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

  • ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

    ಮಾವನ ಜೊತೆ 10 ತಿಂಗ್ಳ ಮಗುವಿನ ಸಮೇತ ಸೊಸೆ ಎಸ್ಕೇಪ್

    – ಮನೆಯವರಿಗೆ ನಿದ್ದೆ ಮಾತ್ರೆ ನೀಡಿದ್ರು
    – ಸಿಸಿಟಿವಿ ನೋಡಿ ಪತಿ, ಕುಟುಂಬದವರಿಗೆ ಶಾಕ್

    ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಮಗನ ಪತ್ನಿಯ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಕೊನೆಗೆ ಸೊಸೆಯ ಜೊತೆಯೇ ಎಸ್ಕೇಪ್ ಆಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

    ಪಾಣಿಪತ್‍ನ ಸೋನಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮಾವನನ್ನು ಸಲೀಂ ಎಂದು ಗುರುತಿಸಲಾಗಿದೆ. ಸಲೀಂ ತನ್ನ ಸೊಸೆ ಜೊತೆ ಪರಾರಿಯಾಗಿದ್ದಾನೆ. ಇಬ್ಬರೂ ಪ್ಲಾನ್ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದಾರೆ.

    ನಾಲ್ಕು ವರ್ಷಗಳ ಹಿಂದೆ ಮಹಿಳೆ ಸಲೀಂ ಮಗ ಅಬ್ದುಲ್ ಜೊತೆ ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗಳು ಮತ್ತು 10 ತಿಂಗಳ ಮಗ ಇದ್ದನು. ಆದರೆ ಮಾವ ಸಲೀಂ ತನ್ನ ಸೊಸೆ ಜೊತೆಯೇ ಅನೇಕ ದಿನಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನು. ಇವರ ಸಂಬಂಧದ ಬಗ್ಗೆ ಮನೆಯ ಇತರರಿಗೆ ತಿಳಿದಿರಲಿಲ್ಲ. ಆದರೆ ಇತ್ತೀಚೆಗೆ ತಮ್ಮ ಅನೈತಿಕ ಸಂಬಂಧಕ್ಕೆ ಮನೆಯವರು ಅಡ್ಡಿಪಡಿಸುತ್ತಾರೆಂದು ಇಬ್ಬರೂ ಓಡಿ ಹೋಗಲು ನಿರ್ಧರಿಸಿದ್ದರು.

    ಅದರಂತೆಯೇ ಒಂದು ದಿನ ರಾತ್ರಿ ಊಟದಲ್ಲಿ ನಿದ್ದೆ ಮಾತ್ರೆ ಮಿಕ್ಸ್ ಮಾಡಿದ್ದರು. ಮನೆಯವರು ಊಟ ಮಾಡಿದ ನಂತರ ಎಲ್ಲರೂ ನಿದ್ದೆಗೆ ಜಾರಿದ್ದಾರೆ. ಮನೆಯ ಸದಸ್ಯರು ನಿದ್ದೆ ಮಾಡಿದ ನಂತರ ಮೊದಲಿಗೆ ಮಾವ ಸಲೀಂ ಮುಂಜಾನೆ 4 ಗಂಟೆಗೆ ಮನೆಯಿಂದ ಹೊರಗೆ ಹೋಗಿ ಸೊಸೆಗಾಗಿ ಕಾಯುತ್ತಿದ್ದನು. ಸ್ವಲ್ಪ ಸಮಯದ ನಂತರ 10 ತಿಂಗಳ ಮಗುವಿನ ಜೊತೆ ಸೊಸೆ ಮಾವನ ಜೊತೆ ಓಡಿ ಹೋಗಿದ್ದಾಳೆ.

    ಫೋನ್ ತೆಗೆದುಕೊಂಡು ಹೋದರೆ ಮನೆಯವರು ಟ್ರೇಸ್ ಮಾಡುತ್ತಾರೆ ಎಂದು ಇಬ್ಬರು ಫೋನ್‍ಗಳನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದರು. ಮುಂಜಾನೆ ಮನೆಯವರು ಎದ್ದು ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲೂ ಪತ್ತೆಯಾಗಿಲ್ಲ. ಸಂಬಂಧಿಕರ ಬಳಿ ಇವರ ಬಗ್ಗೆ ವಿಚಾರಿಸಿದ್ದಾರೆ. ಆದರೆ ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ಆಗ ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ ಇಬ್ಬರು ಓಡಿ ಹೋಗಿರುವುದು ಕಂಡುಬಂದಿದೆ. ಮಾವ, ಸೊಸೆ ಪರಾರಿಯಾಗುವವರೆಗೂ ಇಬ್ಬರ ಸಂಬಂಧದ ಬಗ್ಗೆ ಮನೆಯವರಿಗೆ ಗೊತ್ತಾಗಿಲ್ಲ. ಇದರಿಂದ ಮನೆಯವರು ಆಘಾತಕ್ಕೊಳಗಾಗಿದ್ದಾರೆ. ಸದ್ಯಕ್ಕೆ ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಸ್ನೇಹಿತನ ಪತ್ನಿಗೆ ಮತ್ತು ಬರೋ ಔಷಧಿ ನೀಡಿ ರೇಪ್ – ಗೆಳೆಯನ ಮಗಳನ್ನೂ ಬಿಡದ ಕಾಮುಕ

    ಸ್ನೇಹಿತನ ಪತ್ನಿಗೆ ಮತ್ತು ಬರೋ ಔಷಧಿ ನೀಡಿ ರೇಪ್ – ಗೆಳೆಯನ ಮಗಳನ್ನೂ ಬಿಡದ ಕಾಮುಕ

    – ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡ್ಕೊಂಡು ಬ್ಲ್ಯಾಕ್‍ಮೇಲ್

    ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಪತ್ನಿ ಮತ್ತು ಮಗಳಿಗೆ ಮತ್ತು ಬರುವ ಔಷಧಿ ನೀಡಿ ಅನೇಕ ತಿಂಗಳುಗಳ ಕಾಲ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.

    ಸದ್ಯಕ್ಕೆ ಮಹಿಳೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ನಿದ್ದೆ ಬರುವ ಔಷಧಿ ಕೊಟ್ಟು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬ್ಲ್ಯಾಕ್‍ಮೇಲ್ ಮೂಲಕ ಅನೇಕ ತಿಂಗಳು ಕಾಲ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ನನ್ನ ಮಗಳ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿಯನ್ನು ಆಶು ಎಂದು ಗುರುತಿಸಲಾಗಿದೆ. ಈತ ಸಂತ್ರಸ್ತೆಯ ಪತಿಯ ಸ್ನೇಹಿತನಾಗಿದ್ದರಿಂದ ಆಗಾಗ ಮನೆಗೆ ಭೇಟಿ ನೀಡುತ್ತಿದ್ದ. ಮಾರ್ಚ್ 19 ರಂದು ಸಂತ್ರಸ್ತೆ ಅನಾರೋಗ್ಯದಿಂದ ಮಲಗಿದ್ದು, ಆಗ ಆರೋಪಿ ಆಕೆಗೆ ಕುಡಿಯಲು ಜ್ಯೂಸ್ ನೀಡಿದ್ದನು. ಔಷಧಿ ನೀಡುವ ನೆಪದಲ್ಲಿ ಆಶು ಮತ್ತು ಬರುವ ಔಷಧಿ ಮಿಕ್ಸ್ ಮಾಡಿದ್ದನು. ಜ್ಯೂಸ್ ಕುಡಿದ ನಂತರ ಸಂತ್ರಸ್ತೆ ಪ್ರಜ್ಞೆ ತಪ್ಪಿದ್ದು, ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಅತ್ಯಾಚಾರದ ಕೃತ್ಯವನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಲು ಪ್ರಾರಂಭಿಸಿದ್ದನು. ಕೆಲವು ದಿನಗಳ ನಂತರ ನನ್ನ ಪತಿಗೆ ಹೃದಯಾಘಾತವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ಸಮಯದಲ್ಲಿ ಮಗಳು ನಮ್ಮ ತಾಯಿಯ ಜೊತೆ ವಾಸಿಸುತ್ತಿದ್ದನು. ಒಂದು ವಾರದ ನಂತರ ಆರೋಪಿ ನನ್ನ ಪತಿಯ ಆರೋಗ್ಯ ವಿಚಾರಿಸುವ ನೆಪದಲ್ಲಿ ಮನೆಗೆ ಭೇಟಿ ನೀಡಿದ್ದನು ಎಂದು ಸಂತ್ರಸ್ತೆ ಹೇಳಿದ್ದಾರೆ.

    ಈ ವೇಳೆ ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಜೂನ್ 28 ರಂದು ಸಂತ್ರಸ್ತೆಯ ಪತಿ ಮೃತಪಟ್ಟಿದ್ದಾರೆ. ಆಗ ಸಂತ್ರಸ್ತೆ ಭಯದಿಂದ ತನ್ನ ತವರ ಮನೆಗೆ ಹೋಗಿ ವಾಸಿಸುತ್ತಿದ್ದರು. ಆದರೆ ಆರೋಪಿ ಪದೇ ಪದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದನು. ಹೀಗಾಗಿ ಸಂತ್ರಸ್ತೆ ಕೊನೆಗೆ ಪೊಲೀಸರನ್ನ ಸಂಪರ್ಕಿಸಿ ದೂರು ದಾಖಲಿಸಿದ್ದಾರೆ.

    ಎಸ್‍ಎಚ್‍ಒ ಸೆಕ್ಟರ್ 10 ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಅವನಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಐಪಿಸಿ ಸೆಕ್ಷನ್ ಮತ್ತು ಪೋಕ್ಸೋ ಕಾಯ್ದೆಯಡಿಯಲ್ಲಿ ಆತನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಕುಮಾರ್ ತಿಳಿಸಿದ್ದಾರೆ.

  • ಪತ್ನಿ, ಮೂವರು ಮಕ್ಕಳನ್ನು ಕೊಂದು ಪತಿ ಎಸ್ಕೇಪ್

    ಪತ್ನಿ, ಮೂವರು ಮಕ್ಕಳನ್ನು ಕೊಂದು ಪತಿ ಎಸ್ಕೇಪ್

    – ಕೊಡಲಿಯಿಂದ ಕೊಚ್ಚಿ ಕುಟುಂಬದ ಕೊಲೆ
    – ನೆರೆಹೊರೆಯವರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ

    ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಲೆ ಮಾಡಿರುವ ಘಟನೆ ಹರಿಯಾಣದ ಮಹೇಂದರ್‌ಗಢ ಜಿಲ್ಲೆಯಲ್ಲಿ ನಡೆದಿದೆ.

    ಆರೋಪಿಯನ್ನು ಜಿಲ್ಲೆಯ ನರ್ನಾಲ್ ನಿವಾಸಿ ತುಳಸಿದಾಸ್ ಎಂದು ಗುರುತಿಸಲಾಗಿದೆ. ಪತ್ನಿ ಆರತಿ ಮತ್ತು ತನ್ನ ಮೂವರು ಮಕ್ಕಳಾದ 7 ವರ್ಷದ ಮಗ, 6 ವರ್ಷದ ಮಗ ಹಾಗೂ 4 ವರ್ಷದ ಮಗಳನ್ನು ಸಹ ಕೊಂದಿದ್ದಾನೆ. ತನ್ನ ಕುಟುಂಬವನ್ನು ಕೊಲೆ ಮಾಡಿದ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ತುಳಸಿದಾಸ್ ಆ ಪ್ರದೇಶದಲ್ಲಿ ಗಾರೆ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದನು. ಆದರೆ ತನ್ನ ಕುಟುಂಬವನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನೆರೆಹೊರೆಯವರು ಯಾರೂ ಮನೆಯಿಂದ ಹೊರಗೆ ಬಾರದಿರುವುದರಿಂದ ಅನುಮಾನಗೊಂಡು ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ನೆರೆಹೊರೆಯವರು ಮನೆಯ ಬಾಗಿಲು ಮುರಿದು ಒಳಗೆ ಹೋಗಿ ನೋಡಿದ್ದಾರೆ. ಆಗ ಕುಟುಂಬದ ನಾಲ್ವರು ಮೃತಪಟ್ಟಿರುವುದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಮನೋಜ್ ಕುಮಾರ್ ತಿಳಿಸಿದ್ದಾರೆ.

    ಈ ಘಟನೆಯ ಬಗ್ಗೆ ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ. ಸದ್ಯಕ್ಕೆ ಆರೋಪಿ ಬಳಸಿದ ಕೊಡಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.

  • ಕುಟುಂಬಸ್ಥರ ಊಟದಲ್ಲಿ ನಶೆ ಮಾತ್ರೆ ಮಿಕ್ಸ್-ರಾತ್ರಿ 22ರ ಯುವಕನಿಂದ 13ರ ಬಾಲಕಿಯ ಮೇಲೆ ರೇಪ್

    ಕುಟುಂಬಸ್ಥರ ಊಟದಲ್ಲಿ ನಶೆ ಮಾತ್ರೆ ಮಿಕ್ಸ್-ರಾತ್ರಿ 22ರ ಯುವಕನಿಂದ 13ರ ಬಾಲಕಿಯ ಮೇಲೆ ರೇಪ್

    -ಕುಟುಂಬಸ್ಥರ ಊಟದಲ್ಲಿ ಬಾಲಕಿಯಿಂದಲೇ ಮಾತ್ರೆ ಮಿಕ್ಸ್
    -ಮನೆಗೆ ಹೊರಗೆ ಕಾಮುಕ ಗೆಳೆಯನಿಂದ ಕಾವಲು

    ಚಂಡೀಗಢ: 13 ವರ್ಷದ ಬಾಲಕಿಯ ಮೇಲೆ 22 ವರ್ಷದ ಅತ್ಯಾಚಾರಗೈದಿರುವ ಘಟನೆ ಹರಿಯಾಣದ ಲಾಖನಮಾಜರಾ ಕ್ಷೇತ್ರದಲ್ಲಿ ನಡೆದಿದೆ. ಯುವಕ ಬಾಲಕಿಯಿಂದಲೇ ಆಕೆಯ ಕುಟುಂಬಸ್ಥರಿಗೆ ಮತ್ತು ಬರುವ ಔಷಧಿ ನೀಡುವಂತೆ ಮಾಡಿದ್ದಾನೆ.

    ಕುಟುಂಬಸ್ಥರು ಮತ್ತು ಮಿಶ್ರಿತ ಆಹಾರ ಸೇವಿಸಿ ಗಾಢವಾದ ನಿದ್ದೆಯಲ್ಲಿದ್ದಾಗ ಮನೆಗೆ ನುಗ್ಗಿದ ಯುವಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇತ್ತ ಮನೆಯ ಹೊರಗೆ ಯುವಕನ ಮತ್ತೋರ್ವ ಗೆಳೆಯ ಕಾವಲು ಕಾದಿದ್ದಾನೆ. ಘಟನೆಯ ಬಳಿಕ 22 ವರ್ಷದ ಯುವಕರಿಬ್ಬರು ಗ್ರಾಮದಿಂದ ಕಾಲ್ಕಿತ್ತಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದೇಗೆ?: ನಶೆ ಮಿಶ್ರಿತ ಆಹಾರ ಸೇವಿಸಿದ್ದ ಬಾಲಕಿಯ ಕುಟುಂಬಸ್ಥರಿಗೆ ಬೆಳಗ್ಗೆ ಎಚ್ಚರವಾಗಿದೆ. ಕುಟುಂದ ಎಲ್ಲರನ್ನು ಕೋಣೆಯೊಂದರಲ್ಲಿ ಕೂಡಿ ಹಾಕಿ ಹೊರಗಿನಿಂದ ಬಾಗಿಲು ಹಾಕಲಾಗಿತ್ತು. ಕೊನೆಗೆ ಕುಟುಂಬಸ್ಥರು ಬಾಗಿಲು ಒಡೆದು ಹೊರಗೆ ಬಂದಿದ್ದಾರೆ. ಎಲ್ಲರಿಗೂ ತಲೆ ಸುತ್ತು ಬಂದ ಹಿನ್ನೆಲೆ ಸ್ಥಳೀಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

    ವೈದ್ಯರು ನಶೆ ಪದಾರ್ಥ ಸೇವನನೆಯಿಂದಾಗಿ ಗಾಢವಾದ ನಿದ್ರೆ ಜೊತೆ ತಲೆ ಸುತ್ತು ಬಂದಿರುವ ವಿಷಯವನ್ನು ತಿಳಿಸಿದ್ದಾರೆ. ಇನ್ನು ಮನೆಯಲ್ಲಿ ಆರೋಗ್ಯವಾಗಿದ್ದ ಬಾಲಕಿಯ ಮೇಲೆ ಅನುಮಾನಗೊಂಡು ಪೋಷಕರು ಪ್ರಶ್ನಿಸಿದ್ದಾರೆ. ಭಯಗೊಂಡ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.

    ಯುವಕರ ಮಾತು ನಂಬಿದ ಬಾಲಕಿ: ಶನಿವಾರ ಬೆಳಗ್ಗೆ ಗ್ರಾಮದ ಸಂದೀಪ್ ಮತ್ತು ಪಕ್ಕದೂರಿನ ಮತ್ತೋರ್ವ ಬಾಲಕಿಯನ್ನ ಭೇಟಿಯಾಗಿದ್ದಾರೆ. ಪರಿಚಯಸ್ಥರಾಗಿದ್ದರಿಂದ ಬಾಲಕಿ ಸಹ ಅವರ ಜೊತೆ ಮಾತನಾಡಿದ್ದಾನೆ. ಬಾಲಕಿಯನ್ನ ಪುಸಲಾಯಿಸಿದ ಇಬ್ಬರು ಆಕೆಗೆ ಐದು ನಶೆಯ ಮಾತ್ರೆಗಳನ್ನು ನೀಡಿ ಆಹಾರದಲ್ಲಿ ಬೆರೆಸುವಂತೆ ಹೇಳಿದ್ದಾರೆ. ಮಾತ್ರೆ ಪಡೆದ ಬಾಲಕಿ ಅದನ್ನ ಆಹಾರದಲ್ಲಿ ಬೆರೆಸಿದ್ದಾಳೆ.

    ಸದ್ಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಐಪಿಸಿ ಸೆಕ್ಷನ್ 376, 328, 452, 34 ಮತ್ತು ಪೋಕ್ಸೋ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳಿಬ್ಬರು ನಾಪತ್ತೆಯಾಗಿದ್ದು, ಶೀಘ್ರದಲ್ಲಿಯೇ ಬಂಧಿಸಲಿದ್ದೇವೆ ಎಂದು ಲಾಖನಮಾಜರಾ ಠಾಣೆಯ ಹಿರಿಯ ಪೊಲೀಸ್ ರಾಜೇಂದ್ರ ಬುರಾ ಹೇಳಿದ್ದಾರೆ.