Tag: chandigarh

  • ಗಂಡು ಮಗು ಜನಿಸದ್ದಕ್ಕೆ ಮುದ್ದಾದ 4 ಹೆಣ್ಣು ಮಕ್ಕಳನ್ನು ಕೊಂದ ತಾಯಿ

    ಗಂಡು ಮಗು ಜನಿಸದ್ದಕ್ಕೆ ಮುದ್ದಾದ 4 ಹೆಣ್ಣು ಮಕ್ಕಳನ್ನು ಕೊಂದ ತಾಯಿ

    ಚಂಡೀಗಡ: ಗಂಡು ಮಗು ಜನಿಸದ್ದಕ್ಕೆ ತಾಯಿಯೊಬ್ಬಳು ತನ್ನ ಮುದ್ದಾದ ನಾಲ್ಕು ಹೆಣ್ಣು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಹರಿಯಾಣದ ನುಹ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ನಾಲ್ವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಬಂಧಿಸಲಾಗಿದೆ. 2020ರಲ್ಲಿ ನಡೆದ ಘಟನೆಯ ಆರೋಪಿಯನ್ನು ಈಗ ಸೆರೆ ಹಿಡಿಯಲಾಗಿದೆ. ಪತಿ ಖುರ್ಷಿದ್ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ಹೋದಾಗ ಫರ್ಮೀನಾ ಈ ನಿರ್ಧಾರ ಕೈಗೊಂಡಿದ್ದು, ತನ್ನ 6, 4, 3 ಹಾಗೂ 1 ವರ್ಷದ ಹೆಣ್ಣು ಮಕ್ಕಳ ಗಂಟಲನ್ನು ಚಾಕುವಿನಿಂದ ಕುಯ್ದು ಕೊಲೆ ಮಾಡಿದ್ದಾಳೆ. ಮಕ್ಕಳು ಅಮ್ಮಾ ಎನ್ನುತ್ತಲೇ ಪ್ರಾಣ ಬಿಟ್ಟಿವೆ.

    ಕತ್ತು ಕುಯ್ದು ಮಕ್ಕಳನ್ನು ಅಲ್ಲೇ ಬಿಟ್ಟ ತಾಯಿ, ನಂತರ ತಾನೂ ಚಾಕುವಿನಿಂದ ಕತ್ತು ಕುಯ್ದುಕೊಂಡಿದ್ದಾಳೆ. ಅಷ್ಟರಲ್ಲೇ ಆಕೆಯ ಪತಿ ಆಗಮಿಸಿದ್ದು, ಮನೆಯನ್ನು ಒಳಗಿನಿಂದ ಚಿಲಕ ಹಾಕಿದ್ದರಿಂದ ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಒಳಗೆ ಹೋಗಿದ್ದಾನೆ. ಅಷ್ಟರಲ್ಲಾಗಲೇ ಮಕ್ಕಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಪತ್ನಿ ಮಾತ್ರ ಒದ್ದಾಡುತ್ತಿದ್ದಳು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.

    ಇಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫರ್ಮೀನಾ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಮಕ್ಕಳ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಪೊಲೀಸರು ಆರೋಪಿ ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಸಂಜೆ 5 ಗಂಟೆವರೆಗೆ 5 ಜಿಲ್ಲೆಗಳ ಮೊಬೈಲ್ ಇಂಟರ್ ನೆಟ್  ಕಡಿತ

    ಸಂಜೆ 5 ಗಂಟೆವರೆಗೆ 5 ಜಿಲ್ಲೆಗಳ ಮೊಬೈಲ್ ಇಂಟರ್ ನೆಟ್  ಕಡಿತ

    ಚಂಡೀಗಢ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ಕೆರಳಿರುವ ಹಿನ್ನೆಲೆ ಹರಿಯಾಣ ಸರ್ಕಾರ 5 ಜಿಲ್ಲೆಗಳ ಇಂಟರ್ ನೆಟ್ ಸೇವೆಗಳನ್ನು ಕಡಿತಗೊಳಿಸಿರುವ ಆದೇಶವನ್ನು ಇಂದು 5 ಗಂಟೆವರೆಗೆ ಮುಂದುಡಿದೆ.

    ಈ ಹಿಂದೆ ಫಬ್ರವರಿ 2 ರವರೆಗೆ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್‍ ನೆಟ್‍ನ್ನು ಹರಿಯಾಣ ಸರ್ಕಾರ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಮುಂದೂಡಿರುವ ಸರ್ಕಾರ ಹರಿಯಾಣದ ಕೈಥಲ್, ಜಿಂದ್, ರೋಹ್ಟಕ್, ಸೋನಿಪತ್ ಮತ್ತು ಝಜ್ಜರ್ ಜಿಲ್ಲೆಗಳಲ್ಲಿ ದೂರವಾಣಿ ಕರೆಯನ್ನು ಹೊರತುಪಡಿಸಿದಂತೆ ಇಂಟರ್‍ ನೆಟ್‍, ಒಂದೇ ಬಾರಿ ಅನೇಕ ಜನರಿಗೆ ಎಸ್‍ಎಂಎಸ್ ಮತ್ತು ಡೋಂಗಲ್ ಸೇವೆಗಳಿಗೆ ಇಂದು 5 ಗಂಟೆಯವರೆಗೆ ಸರ್ಕಾರ ನಿರ್ಬಂಧ ವಿಧಿಸಿದೆ.

    ಜನವರಿ 26ರಂದು ದೆಹಲಿಯಲ್ಲಿ ನಡೆದ ಟ್ರ್ಯಾಕ್ಟರ್ ಜಾಥಾ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ದೆಹಲಿ ಗಡಿ ಭಾಗದಲ್ಲಿ ಪ್ರತಿಭಟನಾಕಾರರು ಮತ್ತು ಸ್ಥಳೀಯರ ನಡುವೆ ಕಲ್ಲು ತೂರಾಟ ನಡೆದು ಘರ್ಷಣೆ ನಡೆದಿದ್ದು.

  • 10ನೇ ತರಗತಿ ಪರೀಕ್ಷೆ ಬರೆಯಲಿರುವ 12 ವರ್ಷದ ಬಾಲಕ

    10ನೇ ತರಗತಿ ಪರೀಕ್ಷೆ ಬರೆಯಲಿರುವ 12 ವರ್ಷದ ಬಾಲಕ

    ಚಂಡೀಗಢ: 11 ವರ್ಷದ ಚಂಡೀಗಢದ ದುರ್ಗ ಜಿಲ್ಲೆಯ ಬಾಲಕನಿಗೆ 10ನೇ ತರಗತಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. 5ನೇ ತರಗತಿಯಲ್ಲಿ ಓದುತ್ತಿರುವ ಲಿವ್‍ಜೋತ್ ಸಿಂಗ್ ಅರೋರಾ ಎಂಬ ಬಾಲಕನ ಬುದ್ಧಿವಂತಿಕೆಯ ಆಧಾರದ ಮೇಲೆ ಪ್ರೌಢ ಶಿಕ್ಷಣ ಮಂಡಳಿಯು 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಸಮ್ಮತಿ ಸೂಚಿಸಿದೆ ಎಂದು ಮಂಗಳವಾರ ರಾಜ್ಯ ಜನಸಂಪರ್ಕ ಇಲಾಖೆಯ ಅಧಿಕಾರಿ ಹೇಳಿದ್ದಾರೆ.

    ಬಹುಶಃ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ 10ನೇ ತರಗತಿ ಪರೀಕ್ಷಾ ಮಂಡಳಿ 12 ವರ್ಷದ ಬಾಲಕನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಟ್ಟಿದೆ. ಅಲ್ಲದೆ ಈ ಮುನ್ನ ಲಿವ್‍ಜೋತ್ 2020-2021ರ ಸಾಲಿನ 10ನೇ ತರಗತಿ ಪರೀಕ್ಷೆಗೆ ಹಾಜರಾಗಲು ಅನುಮತಿ ಕೋರಿ ಸಿಜಿಬಿಎಸ್‍ಇಗೆ ಅರ್ಜಿ ಸಲ್ಲಿಸಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದುರ್ಗ್ ಜಿಲ್ಲಾಸ್ಪತ್ರೆಯಲ್ಲಿ ಬಾಲಕನ ಐಕ್ಯೂ ಪರೀಕ್ಷೆಯನ್ನು ನಡೆಸಲಾಗಿತ್ತು. ವರದಿಯಲ್ಲಿ ಬಾಲಕ ಐಕ್ಯೂ 16ರ ವಯಸ್ಕರರ ಐಕ್ಯೂಗೆ ಸಮನಾಗಿದೆ ಎಂದು ತಿಳಿದುಬಂದಿದೆ. ಐಕ್ಯೂ ಎಂದರೇ ಮನುಷ್ಯರ ಬುದ್ದಿವಂತಿಕೆ ಪ್ರಮಾಣವನ್ನು ನಿರ್ಣಯಿಸಲು ವಿನ್ಯಾಸಗೊಳಿಸಿರುವ ಪ್ರಮಾಣೀಕೃತ ಪರೀಕ್ಷೆಯ ಗುಂಪಿನಿಂದ ಪಡೆದ ಅಂಕಗಳಾಗಿದೆ.

    ಲಿವ್‍ಜಿತ್ ಪರೀಕ್ಷೆಯಲ್ಲಿ ಪಡೆಯುತ್ತಿದ್ದ ಅಂಕಗಳ ಮತ್ತು ಆತನ ಐಕ್ಯೂ ಆಧಾರದ ಮೇಲೆ ಪ್ರೌಢ ಶಿಕ್ಷಣ ಮಂಡಳಿಯು ಬಾಲಕನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಿದೆ ಎಂದು ತಿಳಿಸಲಾಗಿದೆ.

    ಈ ಕುರಿತಂತೆ ಬಾಲಕನ ತಂದೆ ಗುರುವಿಂದರ್ ಸಿಂಗ್ ಅರೋರಾ ತಮ್ಮ ಮಗ ಬಿಹಾಲಿಯ ಮಿಲ್‍ಸ್ಟೋನ್ ಶಾಲೆಯ ವಿದ್ಯಾರ್ಥಿಯಾಗಿದ್ದು, ಪರೀಕ್ಷೆಗೆ ಬೇಕಾದ ತಯಾರಿಯನ್ನು ಈಗಾಗಲೇ ಮಾಡಿಕೊಳ್ಳುತ್ತಿದ್ದಾನೆ. ಜೊತೆಗೆ ಪರೀಕ್ಷೆ ಬರೆಯಲು ಬಹಳ ಉತ್ಸುಹಕನಾಗಿದ್ದಾನೆ ಎಂದು ಹೇಳಿದ್ದಾರೆ.

    ಲಿವ್‍ಜೀತ್ ಮೊದಲಿನಿಂದಲೂ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದು, 3ನೇ ತರಗತಿಯಲ್ಲಿದ್ದಾಗಲೇ ಆತ ಗಣಿತದ ಲೆಕ್ಕ ಸಮಸ್ಯೆಯನ್ನು ಕೇವಲ ಸೆಕೆಂಡುಗಳಲ್ಲಿ ಮಾಡಿ ಮುಗಿಸುತ್ತಿದ್ದನು. ಇದೀಗ ಚಿಕ್ಕವಯಸ್ಸಿನಲ್ಲಿಯೇ 10ನೇ ತರಗತಿ ಪರೀಕ್ಷೆ ಬರೆಯಲು ಮುಂದಾಗಿದ್ದು ನಮಗೆ ಬಹಳ ಖುಷಿತರಿಸಿದೆ. ನಾವು ಕೂಡ ಆತನ ಮೇಲೆ ಯಾವುದೇ ಒತ್ತಡ ನೀಡದೇ ಅವನ್ನು ತಯಾರಿ ನಡೆಸಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

  • ದೆಹಲಿಯ ಸಿಂಘು ಗಡಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ

    ದೆಹಲಿಯ ಸಿಂಘು ಗಡಿಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ

    ನವದೆಹಲಿ: 40 ವರ್ಷದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಹೊರವಲಯ ಸಿಂಘು ಗಡಿಯಲ್ಲಿ ನಡೆದಿದೆ. ವಿಷ ಸೇವಿಸದ ರೈತನನ್ನು ಹತ್ತಿರದ ಸೋನೆಪತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ರೈತ ಶನಿವಾರ ಸಂಜೆ 7.30ರ ವೇಳೆಗೆ ಪ್ರಾಣಬಿಟ್ಟಿದ್ದಾರೆ. ಮೃತಪಟ್ಟ ರೈತ ಪಂಜಾಬ್‍ನ ಘತೇಘಡ್ ಸಾಹಿಬ್ ನಿವಾಸಿ ಅಮರಿಂಧರ್ ಸಿಂಗ್(40) ಎಂದು ಗುರುತಿಸಲಾಗಿದೆ.

    ಅಮರಿಂದರ್ ನಿಧನಕ್ಕೂ ಒಂದು ಗಂಟೆ ಮುನ್ನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೂ ಈ ಕುರಿತಂತೆ ಪೊಲೀಸರು ಮುಂಜಾಗ್ರತ ಕ್ರಮವಹಿಸಲಿಲ್ಲ. ಇದೀಗ ಈ ವಿಚಾರವಾಗಿ ತನಿಖೆ ಆರಂಭಿಸಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆ ವಿರೋಧಿಸಿ ಹರಿಯಾಣ ಮತ್ತು ಪಂಜಾಬ್ ಮೂಲದ ಸಾವಿರಾರು ರೈತರು ಕಳೆದ 30ಕ್ಕೂ ಅಧಿಕ ದಿನಗಳಿಂದ ರಾಜಧಾನಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರವು ಇಲ್ಲಿಯವರೆಗೂ ರೈತ ಸಂಘಟನೆಗಳೊಂದಿಗೆ ಏಳು ಸುತ್ತಿನ ಸಭೆ ನಡೆಸಿದ್ದು ಎಲ್ಲವೂ ವಿಫಲಗೊಂಡಿದೆ.

    ಈ ಹಿಂದೆ ಘಾಜಿಯಾಬಾದ್ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ವೇಳೆ ಉತ್ತರ ಪ್ರದೇಶದ ರಾಮ್‍ಪುರ್ ಜಿಲ್ಲೆಯ ನಿವಾಸಿ ಕಾಶ್ಮೀರ್ ಸಿಂಗ್ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೆ ಡಿಸೆಂಬರ್ ನಲ್ಲಿ ಪಂಜಾಬ್‍ನ ಫಾಸಿಲ್ಕ್ ಜಿಲ್ಲೆಯ ಜಲಲಬಾದ್‍ನಲ್ಲಿ ವಕೀಲರಾಗಿದ್ದ ಅಮರ್‍ಜಿತ್ ಸಿಂಗ್ ಟಕ್ರಿ ಗಡಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಹಾಗೂ ಡೆತ್ ನೋಟ್‍ನಲ್ಲಿ ರೈತರ ಆಂದೋಲನಕ್ಕೆ ಬೆಂಬಲಿಸುವ ಸಲುವಾಗಿ ನನ್ನ ಪ್ರಾಣವನ್ನು ತ್ಯಾಗ ಮಾಡುತ್ತಿದ್ದೇನೆ ಎಂದು ಬರೆದಿದ್ದರು.

    ಕಳೆದ ವರ್ಷ ಡಿಸೆಂಬರ್ 21ರಂದು ಸಿಂಘು ಗಡಿಯ ಪ್ರತಿಭಟನೆ ವೇಳೆ 65 ವರ್ಷದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದನು. ಜೊತೆಗೆ ಡಿಸೆಂಬರ್ 20ರಂದು ಪಂಜಾಬ್‍ನ ಬಟಿಂಡಾದ ದಯಾಲ್‍ಪುರ ಮಿರ್ಜಾ ಗ್ರಾಮದ ನಿವಾಸಿಯಾದ ಗುರ್ಲಾಬ್ ಸಿಂಗ್ ಎಂಬ ರೈತ ದೆಹಲಿ ಗಡಿಯಲ್ಲಿ ಪ್ರತಿಭಟನೆ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.

  • ತಾಯಿ, ಮಗನ ಜೋಡಿ ಕೊಲೆಗೆ ಬೆಚ್ಚಿಬಿದ್ದ ಗ್ರಾಮಸ್ಥರು

    ತಾಯಿ, ಮಗನ ಜೋಡಿ ಕೊಲೆಗೆ ಬೆಚ್ಚಿಬಿದ್ದ ಗ್ರಾಮಸ್ಥರು

    – ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ

    ಚಂಡೀಗಢ: ತಾಯಿ ಮತ್ತು ಮಗನನ್ನು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಪಂಜಾಬ್‍ನ ಜಲಂಧರ್ ನಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಮಂಗತ್ ರಾಮ್ ಎಂದು ಗುರುತಿಸಲಾಗಿದೆ. ಈತ ಮೇಕೆಗಳನ್ನು ಮೇಯಿಸಿ ಜೀವನವನ್ನು ನಡೆಸುತ್ತಿದ್ದನು. ಇವನ ಜೊತೆಗೆ ತಾಯಿ ಕೊಲೆಯಾಗಿದ್ದರೆ. ತಾಯಿ ಮಗನ ಜೋಡಿ ಕೊಲೆ ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ.

    ಮನೆಯಿಂದ ಸ್ವಲ್ಪ ದೂರದಲ್ಲಿ ಹೊಲದಲ್ಲಿ ಯುವಕನ ಮೃತ ದೇಹ ಪತ್ತೆಯಾಗಿದ್ದು, ಈತನ ತಾಯಿ ಶವ ಮನೆಯಲ್ಲಿಯೇ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಈ ಡಬಲ್ ಹತ್ಯೆಯಿಂದಾಗಿ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದಾರೆ. ಹತ್ಯೆಯಾದ ವೃದ್ಧೆ ಮಹಿಳೆಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ, ಮತ್ತು ಆಕೆಯ ಮಗನಿಗೆ ನಡೆಯಲು ಆಗುತ್ತಿರಲಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

    ತಾಯಿ ಮತ್ತು ಮಗನ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಕೊಲೆಯ ಹಿಂದೆ ದರೋಡೆ ನಡೆಸಿರುವ ಸಾಧ್ಯತೆಯಿದೆ ಎಂದು ನೆರೆಹೊರೆಯವರು ಅನುಮಾನಿಸಿದ್ದಾರೆ.

    ದರೋಡೆಕೋರರು ಹಣದ ಆಸೆಯಿಂದ ತಾಯಿ, ಮಗನನ್ನು ಕೊಂದಿದ್ದಾರೆ. ಈ ಜೋಡಿಕೊಲೆ ತನಿಖೆಯನ್ನು ಮಾಡುತ್ತೇವೆ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಕೊಲೆಯಾದ ಸ್ಥಳದಲ್ಲಿ ಯಾವುದೇ ಶಸ್ತ್ರಾಸ್ತ್ರಗಳು ನಮಗೆ ದೊರಕಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ಮೂವರು

    ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಒಂದೇ ಕುಟುಂಬದ ಮೂವರು

    ಚಂಡೀಗಡ: ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿ ಘಟನೆ ಪಂಜಾಬ್‍ನ ಗುರುದಾಸ್‍ಪುರ ಜಿಲ್ಲೆಯ ಧಾರಿವಾಲ್ ಪ್ರದೇಶದಲ್ಲಿ ನಡೆದಿದೆ.

    ಸಾವನ್ನಪ್ಪಿರುವವರನ್ನು ನರೇಶ್ ಕುಮಾರ್ (42) ಇವರ ಪತ್ನಿ ಭಾರತಿ ಶರ್ಮಾ (38) ಮತ್ತು ಇವರ 16 ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಕೋಣೆಗೆ ಬೀಗ ಹಾಕಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ಈ ಮೂವರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಾಕಿದ್ದಾರೆ. ನಮ್ಮ ಸಾವಿಗೆ 9 ಜನರು ಕಾರಣವಾಗಿದ್ದಾರೆ. ನಮ್ಮ ಹತ್ತಿರದ ಸಹೋದರ ಮತ್ತು ಇನ್ನು ಹಲವರಿದ್ದಾರೆ ಎಂದು ಹೇಳಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ನರೇಶ್ ಕಬ್ಬಿನ ಹಾಲನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಭಾರೀ ಸಾಲಗಳಿಂದ ಕುಟುಂಬವು ತೊಂದರೆಗೀಡಾಗಿತ್ತು. ಸಾಲ ನೀಡಿದ ವ್ಯಕ್ತಿ ಇವರಿಗೆ ಕಿರುಕುಳ ನೀಡುತ್ತಿದ್ದನು. ಹಾಗಾಗಿ ಇಡೀ ಕುಟುಂಬವೇ ಆತ್ಮಹತ್ಯೆಗೆ ಶರಣಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನಾ ಸ್ಥಳಕ್ಕೆ ಎಸ್‍ಎಸ್‍ಪಿ ರಾಜಿಂದರ್ ಸಿಂಗ್ ಸೋಹಲ್ ಪರಿಶೀಲನೆ ನಡೆಸುತ್ತಿದ್ದಾರೆ. ಶವಗಳನ್ನು ಗುರುದಾಸ್‍ಪುರದ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮದ್ವೆ ಶಾಪಿಂಗ್‍ನಿಂದ ಬರ್ತಿದ್ದ ಕಾರಿಗೆ ಪೊಲೀಸ್ ವ್ಯಾನ್ ಡಿಕ್ಕಿ

    ಮದ್ವೆ ಶಾಪಿಂಗ್‍ನಿಂದ ಬರ್ತಿದ್ದ ಕಾರಿಗೆ ಪೊಲೀಸ್ ವ್ಯಾನ್ ಡಿಕ್ಕಿ

    – ಮೂವರು ಸಾವು, ಇಬ್ಬರಿಗೆ ಗಾಯ

    ಚಂಡೀಗಢ: ಮದುವೆ ಶಾಪಿಂಗ್ ಮುಗಿಸಿ ಮನೆಗೆ ಬರುತ್ತಿದ್ದ ಮೂವರು ಸ್ನೇಹಿತರಿದ್ದ ಕಾರಿಗೆ ಪೊಲೀಸ್ ವಾಹನ ಬಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹರಿಯಾಣದ ಕರ್ನಲ್ ಜಿಲ್ಲೆಯ ಮರ್ದನ್ಹೇರಿ ಗ್ರಾಮದ ಅಸ್ಸಾಂಧ್-ಕೈಥಲ್ ರಸ್ತೆಯಲ್ಲಿ ನಡೆದಿದೆ.

    ಪೊಲೀಸ್ ವಾಹನ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಸ್ನೇಹಿತರು ಸಾವಿಗೀಡಾಗಿದ್ದಾರೆ. ಪೊಲೀಸ್ ವಾಹನದಲ್ಲಿದ್ದ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮೃತ ಸ್ನೇಹಿತರನ್ನು ಪ್ರಯಾಗ್(20), ಕಾರ್ತಿಕ್(26) ಮತ್ತು ಸವಿಂದರ್ ಸಿಂಗ್(32) ಎಂದು ಗುರುತಿಸಲಾಗಿದೆ. ಪೊಲೀಸ್ ವಾಹನದಲ್ಲಿದ್ದ ಗಾಯಾಳುಗಳು ಪ್ರಕಾಶ್ ಮತ್ತು ಸುಮಿತ್ ಕುಮಾರ್ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸ್ನೇಹಿತ ಸವಿಂದರ್ ಸಿಂಗ್ ಮದುವೆ ಶಾಪಿಂಗ್ ಮುಗಿಸಿ ಮನೆಗೆ ಕಾರಿನಲ್ಲಿ ಬರುತ್ತಿದ್ದರು. ಎದುರಿಗೆ ಬರುತ್ತಿದ್ದ ಪೊಲೀಸ್ ವಾಹನ ಟ್ರ್ಯಾಕ್ಟರ್ ಟ್ರೈಲರ್ ಇದ್ದಕ್ಕಿದ್ದಂತೆ ಎದುರಾಗಿದ್ದರಿಂದ ಅದನ್ನು ತಪ್ಪಿಸಲು ಪೊಲೀಸ್ ವಾಹನ ಚಾಲಕ ಬ್ರೇಕ್ ಹಾಕಿದ್ದಾನೆ. ನಂತರ ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮವಾಗಿ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • 80ರ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ- ವಿಡಿಯೋ ವೈರಲ್

    80ರ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿದ ಸೊಸೆ- ವಿಡಿಯೋ ವೈರಲ್

    – ಚಳಿಯಲ್ಲಿ ನಡುಗುತ್ತಾ ಮನೆ ಮುಂದೆ ಮಲಗಿದ ವೃದ್ಧೆ

    ಚಂಡೀಗಢ: ಸೊಸೆಯೊಬ್ಬಳು 80 ವರ್ಷದ ಅತ್ತೆಯನ್ನು ಮನೆಯಿಂದ ಹೊರಗೆ ಹಾಕಿ ವೃದ್ಧೆಯ ವಸ್ತುಗಳನ್ನು ಹೊರಗೆ ಎಸೆದಿರುವ ಘಟನೆ ಹರಿಯಾಣದ ಹಿಸಾರ್‍ನ ಆಜಾದ್ ನಗರದಲ್ಲಿ ನಡೆದಿದೆ.

    ಹಲ್ಲೆಗೊಳಗಾದ ವೃದ್ಧೆಯನ್ನು ಚನ್ನೋ (80) ಎಂದು ಗುರುತಿಸಲಾಗಿದೆ. ಸೊಸೆ ಶಕುಂತಲಾ ವಯಸ್ಸಾದ ಅತ್ತೆಯ ಮೇಲೆ ಹಲ್ಲೆ ಮಾಡಿದ್ದಾಳೆ ಮತ್ತು ವಸ್ತುಗಳನ್ನು ಮನೆಯಿಂದ ಹೊರಗೆ ಎಸೆದಿದ್ದಾಳೆ. ಈ ಚಳಿ ವಾತಾವರಣದಲ್ಲಿ ವಯಸ್ಸಾದ ಮಹಿಳೆ ಮನೆಯ ಹೊರಗೆ ಮಲಗಿರುವ ಸ್ಥಿತಿ ಕರುಣಾಜನಕವಾಗಿತ್ತು.

    ವಸ್ತುಗಳನ್ನು ಸಹ ಹೊರಗೆ ಎಸೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಂತರ ಪೊಲೀಸರು ಆರೋಪಿ ಮಹಿಳೆ ಶಕುಂತಲಾಳನ್ನು ಸೆಕ್ಷನ್ 323(ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು, ಸೆಕ್ಷನ್ 506(ಬೆದರಿಕೆ), 509 ಸೆಕ್ಷನ್( ಮಹಿಳೆಗೆ ಸನ್ನೆ, ಶಬ್ದ, ವಸ್ತು ಬಳಸಿ ಅವಮಾನಿಸುವುದು) ಅಡಿಯಲ್ಲಿ ಬಂಧಿಸಿದ್ದಾರೆ. ಡಿಎಸ್ಪಿ ಜೋಗೇಂದ್ರ ಶರ್ಮಾ ಆರೋಪಿ ಮಹಿಳೆಯ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸ್ ಠಾಣೆಯ ಉಸ್ತುವಾರರಿಗೆ ಆದೇಶಿಸಿದ್ದಾರೆ.

    ವೃದ್ಧ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಹೊಡೆಯುವ ವಿಡಿಯೋ ವೈರಲ್ ಆಗಿತ್ತು. ನಾವು ವಿಚಾರಣೆ ನಡೆಸಿದಾಗ ಈ ಸಂದರ್ಭದಲ್ಲಿ, ವೃದ್ದೆ ಸೊಸೆ ತನ್ನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಗೆ ಓಡಿಸಿದಳು ಮತ್ತು ತನ್ನ ಸಾಮಾನುಗಳನ್ನು ಸಹ ರಸ್ತೆಗೆ ಎಸೆದಳು ಎಂದು ತಿಳಿಸಿದ್ದಾಳೆ. ನಾವು ಸ್ಥಳಕ್ಕೆ ಹೋದಾಗ ವೃದ್ಧೆ ಮನೆಯ ಹೊರಗೆ ಇದ್ದಳು. ಈಗ ತನ್ನ ಎರಡನೇ ಮಗನ ಮನೆಗೆ ಕರೆದೊಯ್ಯಲಾಗಿದೆ ಎಂದು ಆಜಾದ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ರೋಹ್ತಾಶ್ ತಿಳಿಸಿದ್ದಾರೆ.

    https://youtu.be/DWbFXH3cSbs

  • ನಾಲ್ವರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ತಾಯಿ!

    ನಾಲ್ವರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ತಾಯಿ!

    – ದಂಪತಿ ಮಧ್ಯೆ ಇರ್ಲಿಲ್ಲ ಭಿನ್ನಾಭಿಪ್ರಾಯ
    – ಮಕ್ಕಳು ಸಾವು, ತಾಯಿ ಪಾರು

    ಚಂಡೀಗಢ: ತಾಯಿಯೊಬ್ಬಳು ತನ್ನ ನಾಲ್ವರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದು, ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ಹರಿಯಾಣದ ಗುರುಗ್ರಾಮದ ನುಹ್ ಪ್ರಿಪೊಲೀ ಗ್ರಾಮದಲ್ಲಿ ನಡೆದಿದೆ.

    ಮಕ್ಕಳ ಕುತ್ತಿಗೆ ಕೊಯ್ದ ತಾಯಿಯನ್ನು ಫರ್ಮಿನಾ ಎಂದು ಗುರುತಿಸಲಾಗಿದೆ. ಈಕೆ ಖುರ್ಷಿದ್ ಅಹಮದ್ ಎಂಬಾತನನ್ನು ವಿವಾಹವಾಗಿದ್ದು, ದಂಪತಿಗೆ ನಾಲ್ವರು ಹೆಣ್ಣು ಮಕ್ಕಳಿದ್ದರು. ಫರ್ಮಿನಾಗೆ ಇದು ಎರಡನೇ ಮದುವೆ.

    ಸಂಬಂಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಫರ್ಮಿನಾ ಪತಿ ನೋಡಲು ಹೋಗಿದ್ದನು. ಅತ್ತ ಗಂಡ ಮನೆಯಿಂದ ಹೊರ ಹೋಗುವುದನ್ನೇ ಕಾದಿದ್ದ ಫರ್ಮಿನಾ ತನ್ನ ನಾಲ್ವರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದಿದ್ದಾಳೆ. ಹಾಗೇ ತಾನೂ ಕೂಡ ಕುತ್ತಿಗೆ ಕೊಯ್ದುಕೊಳ್ಳಲು ಮುಂದಾಗಿದ್ದಾಳೆ. ಈ ವೇಳೆ ಫರ್ಮಿನಾ ಪತಿ ಮನೆಗೆ ಬಂದಿದ್ದಾನೆ. ಬಾಗಿಲು ಮುಚ್ಚಿರುವುದನ್ನು ಕಂಡು ಬಾಗಿಲನ್ನು ತಟ್ಟಿದ್ದಾನೆ. ಬಾಗಿಲು ತೆರೆಯದೆ ಇರುವುದರಿಂದ ಅನುಮಾನದಿಂದ ಕಿಟಕಿಯಿಂದ ನೋಡಿದ್ದಾನೆ. ಆಗ ಹೆಂಡತಿ ಕುತ್ತಿಗೆ ಕೊಯ್ದುಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ಕಂಡು ಜೋರಾಗಿ ಕಿರುಚಿದ್ದಾನೆ.

     

    ನೆರೆಹೊರೆಯವರ ಸಹಾಯದಿಂದ ಬಾಗಿಲು ಒಡೆದು ಫಾರ್ಮಿನಾ ಕೈಯಿಂದ ಚಾಕುವನ್ನು ಕಿತ್ತುಕೊಂಡು ಪ್ರಾಣ ಉಳಿಸಿದ್ದಾನೆ. ಈಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯಲ್ಲಿ ನಾಲ್ವರು ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ.

    ಈ ದಂಪತಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ನೆರೆಹೊರೆಯವರು ಹೇಳಿದ್ದಾರೆ. ಆದರೆ ಫರ್ಮಿನಾ ತನ್ನ ನಾಲ್ವರು ಹೆಣ್ಣು ಮಕ್ಕಳ ಕುತ್ತಿಗೆ ಕೊಯ್ದು, ತಾನು ಯಾಕೆ ಆತ್ಮಹತ್ಯೆಗೆ ಪ್ರಯತ್ನಿಸಿದಳು ಎನ್ನುವುದು ಮಾತ್ರ ನಿಗೂಢವಾಗಿದೆ.

  • ಮದ್ವೆ ಮನೆಗೆ ಬಂದವ ವಜ್ರದ ಉಂಗುರದೊಂದಿಗೆ 3.5 ಲಕ್ಷ ಎಗರಿಸಿದ!

    ಮದ್ವೆ ಮನೆಗೆ ಬಂದವ ವಜ್ರದ ಉಂಗುರದೊಂದಿಗೆ 3.5 ಲಕ್ಷ ಎಗರಿಸಿದ!

    ಚಂಡೀಗಢ: ವಿವಾಹ ಸಂಭ್ರಮದಲ್ಲಿದ್ದ ಜನರ ಮಧ್ಯೆ ಕಳ್ಳನೊಬ್ಬ ಬೆಲೆಬಾಳು ವಜ್ರದ ಉಂಗುರದೊಂದಿಗೆ 3.4 ಲಕ್ಷ ಹಣ ಕದ್ದು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ಚಂಡೀಗಢದ ಸೆಕ್ಟರ್ 22ರಲ್ಲಿ ಹೋಟೆಲ್‍ನಲ್ಲಿ ನಡೆದಿದೆ.

    ವ್ಯಕ್ತಿ ವಜ್ರದ ಉಂಗುರ ಮತ್ತು ಹಣ, ಎರಡು ಫೋನ್‍ಗಳಿದ್ದ ಪರ್ಸನ್ನು ಕದ್ದು ಪರಾರಿಯಾಗಿರುವ ದೃಶ್ಯಗಳು ಹೋಟೆಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಂಗುರ ಕಳೆದುಕೊಂಡಾಕೆಯನ್ನು ಉಷಾ ಠಾಕೂರ್ ಎಂದು ಗುರುತಿಸಲಾಗಿದೆ.

    ವಧು-ವರರಿಗೆ ಶುಭಕೋರಿ ಉಡುಗೊರೆ ನೀಡಲೆಂದು ಉಷಾ ಪರ್ಸ್‍ನಲ್ಲಿ ಉಂಗುರ ತಂದಿದ್ದಳು. ಈ ವೇಳೆ ಪರ್ಸ್ ಕಳುವಾಗಿದೆ. ಇತ್ತ ತನ್ನ ಪರ್ಸ್ ಕಾಣಿಸದಿದ್ದಾಗ ಎಚ್ಚೆತ್ತುಕೊಂಡ ಮಹಿಳೆ ಸಂಬಂಧಿಕರೊಂದಿಗೆ ಪರ್ಸ್ ಬಗ್ಗೆ ವಿಚಾರಿಸಿದ್ದಾಳೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನಂತರ ಆಕೆ ಪೊಲೀಸರ ಮೊರೆ ಹೋಗಿದ್ದಾಳೆ.

    ಕುಟುಂಬದ ಸಂಬಂಧಿಯಂತೆ ನಟಿಸುತ್ತಾ ಮುಖವಾಡ ಧರಿಸಿ ಮದುವೆ ಮನೆ ನುಗ್ಗಿದ ವ್ಯಕ್ತಿ ಪರ್ಸ್‍ನೊಂದಿಗೆ ಹೋಟೆಲ್ ನಿಂದ ಹೊರ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಐಪಿಸಿ ಸೆಕ್ಷನ್ 380ರ ಅಡಿಯಲ್ಲಿ ಪ್ರಕರಣ ದಾಖಸಿಕೊಂಡಿರುವ ಪೊಲೀಸರು ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಕಳ್ಳನ ಫೋಟೋವನ್ನು ಅಂಟಿಸಿ ಆರೋಪಿಯ ಪತ್ತೆಗೆ ಬಲೆ ಬೀಸಲಾಗಿದೆ.