Tag: Chandigarh Airport

  • ತಾಯಿಯ ಗೌರವಕ್ಕಾಗಿ ಸಾವಿರ ಉದ್ಯೋಗಗಳನ್ನು ಕಳೆದುಕೊಳ್ಳಲು ತಯಾರಿದ್ದೇನೆ: ಕುಲ್ವಿಂದರ್ ಕೌರ್

    ತಾಯಿಯ ಗೌರವಕ್ಕಾಗಿ ಸಾವಿರ ಉದ್ಯೋಗಗಳನ್ನು ಕಳೆದುಕೊಳ್ಳಲು ತಯಾರಿದ್ದೇನೆ: ಕುಲ್ವಿಂದರ್ ಕೌರ್

    ಚಂಡೀಗಢ: ನನ್ನ ತಾಯಿಯ ಗೌರವಕ್ಕಾಗಿ ಸಾವಿರ ಉದ್ಯೋಗಗಳನ್ನು ಕಳೆದುಕೊಳ್ಳಲು ತಯಾರಿದ್ದೇನೆ ಎಂದು ನೂತನ ಸಂಸದೆ ಕಂಗನಾ ರಣಾವತ್‍ಗೆ ( Kangana Ranaut) ಕಪಾಳಮೋಕ್ಷ ಮಾಡಿದ್ದ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕುಲ್ವಿಂದರ್ ಕೌರ್ (Kulwinder Kaur) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

    ಕುಲ್ವಿಂದರ್ ಕೌರ್ ಅವರನ್ನು ಕೆಲಸದಿಂದ ಅಮಾನತು ಮಾಡಿ, ಬಂಧಿಸಲಾಗಿದೆ. ಇದಕ್ಕೂ ಮುನ್ನ ಅವರು, ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಈ ಕೆಲಸವನ್ನು ಕಳೆದುಕೊಳ್ಳುವ ಭಯವಿಲ್ಲ. ನಾನು ಸಿದ್ಧಳಿದ್ದೇನೆ, ನನ್ನ ತಾಯಿಯ ಗೌರವಕ್ಕಾಗಿ ಇಂತಹ ಸಾವಿರಾರು ಉದ್ಯೋಗಗಳನ್ನು ಕಳೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಸಿಬ್ಬಂದಿ ಕರ್ತವ್ಯದಿಂದ ಅಮಾನತು – ಬಳಿಕ ಅರೆಸ್ಟ್‌!

    ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಕಂಗನಾ ರಣಾವತ್ ಅವರು ಗುರುವಾರ ಚಂಡೀಗಢ ವಿಮಾನ ನಿಲ್ದಾಣಕ್ಕೆ (Chandigarh Airport) ಬಂದಿದ್ದಾಗ, ವಿಮಾನ ನಿಲ್ದಾಣದಲ್ಲಿ ಕೌರ್ ಅವರು ಕಪಾಳಮೋಕ್ಷ ಮಾಡಿದ್ದರು.

    2020ರಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಬೃಹತ್ ಪ್ರತಿಭಟನೆಗೆ ಇಳಿದಿದ್ದರು. ಈ ವೇಳೆ ನಟಿ ಕಂಗನಾ, ರೈತರು 100 ರೂ.ಗೆ ಅಲ್ಲಿ ಕುಳಿತಿದ್ದಾರೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ವ್ಯಾಪಕ ಟೀಕೆ ವ್ಯಕ್ತವಾದ ನಂತರ ಪೋಸ್ಟ್‌ನ್ನು ಡಿಲೀಟ್ ಮಾಡಿದ್ದರು. ನಟಿ ಈ ಹೇಳಿಕೆ ನೀಡಿದಾಗ ತನ್ನ ತಾಯಿ ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ಹಾಗಾಗಿ ನಟಿ ಹೇಳಿಕೆಯಿಂದ ನೋವುಂಟಾಗಿದ್ದು, ಕಪಾಳಮೋಕ್ಷ ಮಾಡಿದೆ ಎಂದು ಕೌರ್ ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ಕಂಗನಾ ಪೊಲೀಸರಿಗೆ ದೂರು ನೀಡಿ ಬಳಿಕ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಇದನ್ನೂ ಓದಿ: ನನ್ನ ತಾಯಿ ಕೂಡ ಪ್ರತಿಭಟನೆಯಲ್ಲಿದ್ರು- ಕಂಗನಾಗೆ ಕಪಾಳಮೋಕ್ಷ ಮಾಡಿದ ಸಿಬ್ಬಂದಿ ಸಮರ್ಥನೆ

  • ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಸಿಬ್ಬಂದಿ ಕರ್ತವ್ಯದಿಂದ ಅಮಾನತು – ಬಳಿಕ ಅರೆಸ್ಟ್‌!

    ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಸಿಬ್ಬಂದಿ ಕರ್ತವ್ಯದಿಂದ ಅಮಾನತು – ಬಳಿಕ ಅರೆಸ್ಟ್‌!

    ಚಂಡೀಗಢ: ಹಿಮಾಚಲ ಪ್ರದೇಶ ಮಂಡಿ ಕ್ಷೇತ್ರದ ನೂತನ ಸಂಸದೆ ಆಗಿರುವ ನಟಿ ಕಂಗನಾ ರಣಾವತ್‌ (Kangana Ranaut) ಅವರಿಗೆ ಕಪಾಳಮೋಕ್ಷ ಮಾಡಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (CISF) ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್‌ ಅವರನ್ನ ಕರ್ತವ್ಯದಿಂದ ಅಮಾನತುಗೊಳಿಸಿ, ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಆರೋಪಿ ಕುಲ್ವಿಂದರ್‌ ಕೌರ್‌ (Kulwinder Kaur) ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್‌ ಅವರಿಗೆ ಕಪಾಳಮೋಕ್ಷ ಮಾಡಿದ್ದರಿಂದ ಅವರ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

    ಏನಿದು ಘಟನೆ?
    ಮಂಡಿಯ ನೂತನ ಬಿಜೆಪಿ ಸಂಸದೆ ಕಂಗನಾ ರಣಾವತ್‌ಗೆ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ (Chandigarh Airport) ಕಪಾಳಮೋಕ್ಷ ಮಾಡಿದ ಘಟನೆ ನಡೆದಿತ್ತು. ರೈತರ ಆಂದೋಲನಕ್ಕೆ ಸಂಬಂಧಿಸಿದಂತೆ ಕಂಗನಾ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕಪಾಳಮೋಕ್ಷ ಮಾಡಿರುವುದಾಗಿ ಆಕೆ ಹೇಳಿಕೊಂಡಿದ್ದರು. ಇದನ್ನೂ ಓದಿ: ಇವಿಎಂ ಸತ್ತಿದ್ಯಾ ಅಥವಾ ಬದುಕಿದ್ಯಾ? – ವಿಪಕ್ಷ ನಾಯಕರನ್ನ ಲೇವಡಿ ಮಾಡಿದ ಮೋದಿ

    2020ರಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಬೃಹತ್‌ ಪ್ರತಿಭಟನೆಗೆ ಇಳಿದಿದ್ದರು. ಈ ವೇಳೆ ನಟಿ ಕಂಗನಾ, ರೈತರು 100 ರೂ.ಗೆ ಅಲ್ಲಿ ಕುಳಿತಿದ್ದಾರೆ ಎಂದು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು. ವ್ಯಾಪಕ ಟೀಕೆ ವ್ಯಕ್ತವಾದ ನಂತರ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದರು. ನಟಿ ಈ ಹೇಳಿಕೆ ನೀಡಿದಾಗ ತನ್ನ ತಾಯಿ ಅಲ್ಲೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ಹಾಗಾಗಿ ನಟಿ ಹೇಳಿಕೆಯಿಂದ ನೋವುಂಟಾಗಿದ್ದು, ಕಪಾಳಮೋಕ್ಷ ಮಾಡಿದೆ ಎಂದು ಕೌರ್ ಆಕ್ರೋಶ ಹೊರಹಾಕಿದ್ದರು. ಇದಾದ ಬಳಿಕ ಕಂಗನಾ ಪೊಲೀಸರಿಗೆ ದೂರು ನೀಡಿ ಬಳಿಕ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ನಕಲಿ ಆಧಾರ್‌ ಕಾರ್ಡ್‌ ಬಳಸಿ ಸಂಸತ್‌ ಪ್ರವೇಶಿಸಲು ಯತ್ನಿಸಿದ ಮೂವರ ಬಂಧನ

    ಘಟನೆ ಬಳಿಕ ಕಂಗನಾ ಹೇಳಿದ್ದೇನು?
    ಘಟನೆ ಬಳಿಕ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದ ಕಂಗನಾ, ನನಗೆ ಮಾಧ್ಯಮಗಳು ಮತ್ತು ನನ್ನ ಹಿತೈಷಿಗಳಿಂದ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ. ಮೊದಲನೆಯದಾಗಿ ನಾನು ಸುರಕ್ಷಿತವಾಗಿದ್ದು, ಸಂಪೂರ್ಣವಾಗಿ ಚೆನ್ನಾಗಿದ್ದೇನೆ. ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್‌ ಮುಗಿಸಿ ಹೊರ ಬಂದ ತಕ್ಷಣ ಎರಡನೇ ಕ್ಯಾಬಿನ್‌ನಲ್ಲಿದ್ದ ಸಿಐಎಸ್‌ಎಫ್‌ನ ಭದ್ರತಾ ಸಿಬ್ಬಂದಿ ನನ್ನ ಕೆನ್ನೆಗೆ ಹೊಡೆದರು. ಈ ವೇಳೆ ಯಾಕೆ ಹೀಗೆ ಮಾಡಿದೆ ಎಂದು ಆಕೆಯನ್ನು ಪ್ರಶ್ನಿಸಿದಾಗ, ರೈತರ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದಳು. ಸದ್ಯ ನಾನು ಸುರಕ್ಷಿತವಾಗಿದ್ದೇನೆ ಆದರೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ನನಗೆ ಕಾಳಜಿಯೂ ಇದೆ ಎಂದಿದ್ದರು.

  • ನಾನು ಸುರಕ್ಷಿತವಾಗಿದ್ದೇನೆ: ಕಂಗನಾ

    ನಾನು ಸುರಕ್ಷಿತವಾಗಿದ್ದೇನೆ: ಕಂಗನಾ

    ನವದೆಹಲಿ: ನಾನು ಸುರಕ್ಷಿತವಾಗಿದ್ದೇನೆ ಎಂದು ಬಾಲಿವುಡ್‌ ನಟಿ, ಮಂಡಿ ಲೋಕಸಭಾ ಕ್ಷೇತ್ರದ ನೂತನ ಸಂಸದೆ ಕಂಗನಾ ರಣಾವತ್‌ (Kangana Ranaut) ಹೇಳಿದ್ದಾರೆ.

    ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಸಂಬಂಧ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಕಂಗನಾ, ನನಗೆ ಮಾಧ್ಯಮಗಳು ಮತ್ತು ನನ್ನ ಹಿತೈಷಿಗಳಿಂದ ಸಾಕಷ್ಟು ಫೋನ್ ಕರೆಗಳು ಬರುತ್ತಿವೆ. ಮೊದಲನೆಯದಾಗಿ ನಾನು ಸುರಕ್ಷಿತವಾಗಿದ್ದು, ಸಂಪೂರ್ಣವಾಗಿ ಚೆನ್ನಾಗಿದ್ದೇನೆ ಎಂದಿದ್ದಾರೆ.

    ಇಂದು ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಚೆಕ್‌ ಮುಗಿಸಿ ಹೊರ ಬಂದ ತಕ್ಷಣ ಎರಡನೇ ಕ್ಯಾಬಿನ್‌ನಲ್ಲಿದ್ದ ಸಿಐಎಸ್‌ಎಫ್‌ನ ಸೆಕ್ಯುರಿಟಿ ಸಿಬ್ಬಂದಿ ನನ್ನ ಕೆನ್ನೆಗೆ ಹೊಡೆದರು. ಈ ವೇಳೆ ಯಾಕೆ ಹೀಗೆ ಮಾಡಿದೆ ಎಂದು ಆಕೆಯನ್ನು ಪ್ರಶ್ನಿಸಿದಾಗ, ರೈತರ ಪ್ರತಿಭಟನೆಗೆ ನನ್ನ ಬೆಂಬಲವಿದೆ ಎಂದಳು. ಸದ್ಯ ನಾನು ಸುರಕ್ಷಿತವಾಗಿದ್ದೇನೆ ಆದರೆ ಪಂಜಾಬ್‌ನಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ನನಗೆ ಕಾಳಜಿ ಇದೆ ಎಂದು ಕಂಗನಾ ತಿಳಿಸಿದ್ದಾರೆ.

    ನಡೆದಿದ್ದೇನು..?: ಕಂಗನಾ ಚಂಡೀಗಢದಿಂದ ದೆಹಲಿಗೆ ಹೋಗಬೇಕಿದ್ದರಿಂದ ಮಧ್ಯಾಹ್ನ 3.30ರ ಸುಮಾರಿಗೆ ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಭದ್ರತಾ ತಪಾಸಣೆ ವೇಳೆ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಕಂಗನಾ ಕೆನ್ನೆಗೆ ಬಾರಿಸಿದ್ದರು. ಈ ವೇಳೆ ಕಂಗನಾ ಜೊತೆಗಿದ್ದ ಮಯಾಂಕ್ ಮಧುರ್ ಅವರು ಕುಲ್ವಿಂದರ್ ಕೌರ್ ಗೆ ಕಪಾಳಮೋಕ್ಷ ಮಾಡಲು ಯತ್ನಿಸಿದರು. ಇದಾದ ಬಳಿಕ ಕಂಗನಾ ಪೊಲೀಸರಿಗೆ ದೂರು ನೀಡಿ ಬಳಿಕ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದರು. ಸದ್ಯ ಕಂಗನಾ ಅವರು ದೆಹಲಿಗೆ ಬಂದಿಳಿದಿದ್ದಾರೆ.

  • ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು : ನರೇಂದ್ರ ಮೋದಿ

    ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು : ನರೇಂದ್ರ ಮೋದಿ

    ಚಂಡೀಗಢ: ಹರಿಯಾಣದ ಚಂಡೀಗಢ ವಿಮಾನ ನಿಲ್ದಾಣಕ್ಕೆ (Chandigarh airport) ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ (Bhagat Singh) ಅವರ ಹೆಸರನ್ನು ಮರುನಾಮಕರಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ತಿಳಿಸಿದ್ದಾರೆ.

    ಪ್ರತಿ ತಿಂಗಳ ಜನಪ್ರಿಯ ಕಾರ್ಯಕ್ರಮ ಮನ್ ಕಿ ಬಾತ್ (Mann Ki Baat) ಮೂಲಕ ದೇಶವನ್ನುದ್ದೇಶಿ ಇಂದು ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹೆಸರನ್ನು ಚಂಡೀಗಢ ವಿಮಾನ ನಿಲ್ದಾಣಕ್ಕೆ ಇಡುವ ಮೂಲಕ ಗೌರವ ಅರ್ಪಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ವಿವಾಹಿತ ಬಾಯ್‌ಫ್ರೆಂಡ್‌ಗೆ ಹಾಸ್ಟೆಲ್‌ಮೇಟ್ಸ್ ಬೆತ್ತಲೆ ವೀಡಿಯೋ ಕಳಿಸಿದ BED ಪದವೀಧರೆ- ಇಬ್ಬರೂ ಅರೆಸ್ಟ್

    ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಖಟ್ಕರ್ ಕಲಾನ್‍ನಲ್ಲಿ ಪಂಜಾಬ್ ಮುಖ್ಯಮಂತ್ರಿ (Punjab Chief Minister) ಭಗವತ್ ಮಾನ್ ಅವರು ಅದ್ದೂರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆ ಸಮಾರಂಭದ ನಿಮಿತ್ತ ಖಟ್ಕರ್ ಕಲಾನ್ ಹಳದಿಮಯವಾಗಿತ್ತು. ಇಲ್ಲಿ ಬಸಂತಿ ಅಥವಾ ಹಳದಿ ಬಣ್ಣ ಸ್ವಾತಂತ್ರ್ಯ ಹೋರಾಟದೊಂದಿಗೆ ಗುರುತಿಸಿಕೊಂಡ ಬಣ್ಣ, ಸ್ವಾತಂತ್ರ್ಯ ಹೋರಾಟಗಾರರು ಇದೇ ಬಣ್ಣವನ್ನು ಸಂಕೇತವಾಗಿ ಬಳಸುತ್ತಿದ್ದರು. ಭಗವತ್ ಮಾನ್ (Bhagwant Mann) ಅವರು ಕೂಡ ಸದಾ ಹಳದಿ ಬಣ್ಣದ ಪೇಟವನ್ನೇ ಧರಿಸುತ್ತಾರೆ.

    ಕೇಂದ್ರಾಡಳಿತ ಪ್ರದೇಶದ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಅವರ ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ಪ್ರಸ್ತಾಪ ನಡೆದಿರುವುದು ಇದೇ ಮೊದಲಲ್ಲ. ಬಿಜೆಪಿ ನೇತೃತ್ವದ ಹರಿಯಾಣ ವಿಧಾನಸಭೆಯಲ್ಲಿ 2016ರ ಏಪ್ರಿಲ್‍ನಲ್ಲಿ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಿತ್ತು. ಈ ಬಗ್ಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಶೀಘ್ರದಲ್ಲೇ ಪತ್ರ ಬರೆದು ಮನವಿ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು.

    Live Tv
    [brid partner=56869869 player=32851 video=960834 autoplay=true]