Tag: chandigarh

  • ಮನೆಯಲ್ಲಿ ಗುಂಡು ಹಾರಿಸಿಕೊಂಡು ಎಡಿಜಿಪಿ ಆತ್ಮಹತ್ಯೆ – ಜಪಾನ್‌ ಪ್ರವಾಸದಲ್ಲಿರೋ ಪತ್ನಿ ಐಎಎಸ್‌ ಅಧಿಕಾರಿ

    ಮನೆಯಲ್ಲಿ ಗುಂಡು ಹಾರಿಸಿಕೊಂಡು ಎಡಿಜಿಪಿ ಆತ್ಮಹತ್ಯೆ – ಜಪಾನ್‌ ಪ್ರವಾಸದಲ್ಲಿರೋ ಪತ್ನಿ ಐಎಎಸ್‌ ಅಧಿಕಾರಿ

    ಚಂಡೀಗಢ: ಹಿರಿಯ ಐಪಿಎಸ್ ಅಧಿಕಾರಿ ವೈ. ಪೂರ್ಣ್ ಕುಮಾರ್ (Y. Poorn Kumar) ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಚಂಡೀಗಢದ ಸೆಕ್ಟರ್ -11 ರಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಂಡೀಗಢ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಕುಮಾರ್‌ ಅವರು ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಬಿಹಾರ ವಿಧಾನಸಭೆ ಚುನಾವಣೆ; ಎನ್‌ಡಿಎ-ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಲೆಕ್ಕಾಚಾರ

    ವೈ. ಪೂರ್ಣ್ ಕುಮಾರ್ ಎಡಿಜಿಪಿ ಶ್ರೇಣಿಯ ಅಧಿಕಾರಿಯಾಗಿದ್ದರು. ಅವರನ್ನು ಸೆ.29 ರಂದು ರೋಹ್ಟಕ್‌ನ ಸುನಾರಿಯಾ ಜೈಲಿಗೆ ವರ್ಗಾಯಿಸಲಾಗಿತ್ತು. ಸಾಧ್ವಿಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ರಾಮ್ ರಹೀಮ್ ಶಿಕ್ಷೆ ಅನುಭವಿಸುತ್ತಿರುವುದು ಇದೇ ಜೈಲಿನಲ್ಲಿ.

    ವೈ. ಪೂರ್ಣ್ ಕುಮಾರ್ ಅವರ ಪತ್ನಿ ಅಮನ್ ಪಿ. ಕುಮಾರ್ ಕೂಡ ಐಪಿಎಸ್ ಅಧಿಕಾರಿ. ಅ.5 ರಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಇತರ ಅಧಿಕಾರಿಗಳೊಂದಿಗೆ ಜಪಾನ್ ಪ್ರವಾಸಕ್ಕೆ ಹೋಗಿದ್ದರು. ಅವರು ನಾಳೆ ಸಂಜೆ ಭಾರತಕ್ಕೆ ಮರಳಲಿದ್ದಾರೆ. ಇದನ್ನೂ ಓದಿ: ಕೆಮ್ಮಿನ ಸಿರಪ್‌ ಸೇವಿಸಿ ಮಕ್ಕಳ ಸಾವು ಪ್ರಕರಣ – ಸುಪ್ರೀಂಕೋರ್ಟ್‌ಗೆ ಪಿಐಎಲ್

    ಕಳೆದ ವರ್ಷ ವೈ. ಪೂರ್ಣ್ ಕುಮಾರ್ ಅವರು ಕೆಲವು ಐಪಿಎಸ್ ಅಧಿಕಾರಿಗಳ ಬಡ್ತಿ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಈ ಅಧಿಕಾರಿಗಳು 1991, 1996, 1997 ಮತ್ತು 2005 ರ ಬ್ಯಾಚ್‌ಗಳಿಗೆ ಸೇರಿದವರಾಗಿದ್ದರು. ಈ ಬಡ್ತಿಗಳನ್ನು ಅನುಚಿತವಾಗಿ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿಗೆ ಪತ್ರ ಬರೆದಿದ್ದರು. ಹಣಕಾಸು ಇಲಾಖೆಯು ಗೃಹ ಸಚಿವಾಲಯದ ನಿಯಮಗಳನ್ನು ನಿರ್ಲಕ್ಷಿಸಿ ಬಡ್ತಿಗಳನ್ನು ಸ್ವಂತವಾಗಿ ಅನುಮೋದಿಸಿದೆ ಎಂದು ಆಪಾದಿಸಿದ್ದರು.

  • ಹರಿಯಾಣ | ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ದಂಪತಿ ಸೇರಿ ಸ್ಥಳದಲ್ಲೇ ಪ್ರಾಣಬಿಟ್ಟ ಐವರು

    ಹರಿಯಾಣ | ಎರಡು ಕಾರುಗಳು ಮುಖಾಮುಖಿ ಡಿಕ್ಕಿ – ದಂಪತಿ ಸೇರಿ ಸ್ಥಳದಲ್ಲೇ ಪ್ರಾಣಬಿಟ್ಟ ಐವರು

    – ಐವರ ಸ್ಥಿತಿ ಗಂಭೀರ

    ಚಂಡೀಗಢ: ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಐವರು ಸಾವನ್ನಪ್ಪಿದ ಘಟನೆ ಹರಿಯಾಣದ (Hariyana) ಕುರುಕ್ಷೇತ್ರ-ಕೈತಾಲ್ ರಸ್ತೆಯಲ್ಲಿ ನಡೆದಿದೆ.

    ಮೃತರನ್ನು ಪ್ರವೀಣ್, ಪವನ್, ಅವರ ಪತ್ನಿ ಉರ್ಮಿಳಾ, ರಾಜೇಂದ್ರ ಹಾಗೂ ಸುಮನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಿಟ್ ಅಂಡ್‌ ರನ್‌ಗೆ ಬಿ.ಕಾಂ ಪದವೀಧರೆ ಬಲಿ

    ಸೋಮವಾರ (ಸೆ.29) ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಐವರು ಟಾಟಾ ಹ್ಯಾರಿಯರ್ ಕಾರಿನಲ್ಲಿ ಅಂಬಾಲಾ ಕಡೆಗೆ ಹೋಗುತ್ತಿದ್ದರು. ಇದೇ ಸಮಯಕ್ಕೆ ಯಮುನಾನಗರ HR 13F 3611 ನೋಂದಣಿ ಸಂಖ್ಯೆ ಹೊಂದಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಎದುರಿಗೆ ಬಂದಿದ್ದು, ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಎರಡು ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ.

    ಕೂಡಲೇ ಸ್ಥಳೀಯರು ಕಾರಿನಲ್ಲಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಅತೀ ವೇಗದಿಂದ ಕಾರು ಚಲಾಯಿಸಿದ್ದಕ್ಕೆ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಇದನ್ನೂ ಓದಿ: ಬೆಂಗಳೂರು | ಮೂರೇ ದಿನದಲ್ಲಿ 37 ದರೋಡೆ – 6 ಜನ ಅಪ್ರಾಪ್ತರ ಗ್ಯಾಂಗ್ ಅರೆಸ್ಟ್

  • ಮಿಗ್ -21 ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ: ರಾಜನಾಥ್ ಸಿಂಗ್

    ಮಿಗ್ -21 ತ್ರಿವರ್ಣ ಧ್ವಜದ ಗೌರವ ಹೆಚ್ಚಿಸಿದೆ: ರಾಜನಾಥ್ ಸಿಂಗ್

    – ಇದು ಫೈಟರ್‌ಜೆಟ್ ಅಲ್ಲ, ನಮ್ಮ ಕುಟುಂಬದ ಸದಸ್ಯ
    – ಯುದ್ಧ ವಿಮಾನಕ್ಕೆ ಭಾವನಾತ್ಮಾಕ ವಿದಾಯ ಹೇಳಿದ ರಕ್ಷಣಾ ಸಚಿವ

    ಚಂಡೀಗಢ: ಭಾರತೀಯ ವಾಯುಸೇನೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿರುವ ಮಿಗ್-21 (MiG-21) ಯುದ್ಧ ವಿಮಾನ (Fighter Jet) ಹಲವಾರು ವೀರ ಕಾರ್ಯಗಳಿಗೆ ಸಾಕ್ಷಿಯಾಗಿದೆ. 1971ರ ಯುದ್ಧ, ಕಾರ್ಗಿಲ್ ಯುದ್ಧ, ಬಾಲಕೋಟ್ ವೈಮಾನಿಕ ದಾಳಿ ಮತ್ತು ಆಪರೇಷನ್ ಸಿಂಧೂರದಲ್ಲಿಯೂ ಸಹ ಫೈಟರ್ ಜೆಟ್ ನಿರ್ಣಾಯಕ ಪಾತ್ರ ವಹಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹೇಳಿದರು.

    ಮಿಗ್-21 ಯುದ್ಧ ವಿಮಾನದ ವಿದಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿಗ್ 21 ನಮ್ಮ ಸಶಸ್ತ್ರ ಪಡೆಗಳಿಗೆ ಅಗಾಧ ಶಕ್ತಿಯನ್ನು ಒದಗಿಸದ ಒಂದು ಕ್ಷಣವೂ ಇರಲಿಲ್ಲ. ಐತಿಹಾಸಿಕ ಕಾರ್ಯಾಚರಣೆಗಳು ನಡೆದಾಗಲೆಲ್ಲಾ, ಮಿಗ್ -21 ತ್ರಿವರ್ಣ ಧ್ವಜದ ಗೌರವವನ್ನು ಹೆಚ್ಚಿಸಿದೆ. ಆದ್ದರಿಂದ, ಈ ವಿದಾಯವು ನಮ್ಮ ಸಾಮೂಹಿಕ ನೆನಪುಗಳು, ನಮ್ಮ ರಾಷ್ಟ್ರೀಯ ಹೆಮ್ಮೆ ಮತ್ತು ಧೈರ್ಯ, ತ್ಯಾಗ ಮತ್ತು ಶ್ರೇಷ್ಠತೆಯ ಕಥೆಯನ್ನು ಬರೆದ ಆ ಪ್ರಯಾಣದ ಬಗ್ಗೆಯೂ ಆಗಿದೆ ಎಂದರು. ಇದನ್ನೂ ಓದಿ: ಬಿಹಾರ ಚುನಾವಣೆಗೂ ಮುನ್ನವೇ ಭರ್ಜರಿ ಗಿಫ್ಟ್‌ – 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ವರ್ಗಾವಣೆ

    ಮಿಗ್-21 ದೇಶದ ನೆನಪುಗಳು ಮತ್ತು ಭಾವನೆಗಳಲ್ಲಿ ಆಳವಾಗಿ ಹುದುಗಿದೆ. 1963ರಲ್ಲಿ ಸೇನೆಗೆ ಸೇರ್ಪಡೆಯಾದಾಗಿನಿಂದ ಈ ವಿಮಾನವು ಆರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದೆ. ನಮಗೆಲ್ಲರಿಗೂ ಇದು ಕೇವಲ ಫೈಟರ್ ಜೆಟ್ ಅಲ್ಲ, ಬದಲಾಗಿ ನಾವು ಆಳವಾದ ಬಾಂಧವ್ಯ ಹೊಂದಿರುವ ಕುಟುಂಬ ಸದಸ್ಯ. ಮಿಗ್-21 ನಮ್ಮ ವಿಶ್ವಾಸವನ್ನು ರೂಪಿಸಿದೆ, ನಮ್ಮ ಕಾರ್ಯತಂತ್ರವನ್ನು ಬಲಪಡಿಸಿದೆ ಮತ್ತು ಜಾಗತಿಕ ವೇದಿಕೆಯಲ್ಲಿ ನಮ್ಮನ್ನು ನಾವು ಸ್ಥಾಪಿಸಿಕೊಳ್ಳಲು ಸಹಾಯ ಮಾಡಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: MiG-21 Retires | 6 ದಶಗಳ ಸೇವೆಗೆ ವಿದಾಯ – ʻಹಾರುವ ಶವಪೆಟ್ಟಿಗೆʼ ಮಿಗ್‌-21ಗೆ ಗುಡ್‌ಬೈ ಹೇಳಿದ ಭಾರತ

  • ಪಾಕ್‌ನಿಂದ ಸಂಭಾವ್ಯ ದಾಳಿ ಮುನ್ಸೂಚನೆ – ಚಂಢೀಗಡದಲ್ಲಿ ಸೈರನ್ ಮೊಳಗಿಸಿ ಎಚ್ಚರಿಕೆ

    ಪಾಕ್‌ನಿಂದ ಸಂಭಾವ್ಯ ದಾಳಿ ಮುನ್ಸೂಚನೆ – ಚಂಢೀಗಡದಲ್ಲಿ ಸೈರನ್ ಮೊಳಗಿಸಿ ಎಚ್ಚರಿಕೆ

    ಚಂಡೀಗಢ: ಪಾಕಿಸ್ತಾನ(Pakistan) ಸೇನೆ ದಾಳಿ ಮಾಡುವ ಮುನ್ಸೂಚನೆ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ವಾಯು ಸೇನೆಯ ಸೂಚನೆಯಂತೆ ಚಂಢೀಗಡದಲ್ಲಿ(Chandigarh) ಸೈರನ್ ಮೊಳಗಿಸಲಾಗಿದೆ. ಜನರು ರಸ್ತೆಗಳಲ್ಲಿ ಓಡಾಡದಂತೆ, ಬಾಲ್ಕನಿಗಳಲ್ಲೂ ಕಾಣಿಸಿಕೊಳ್ಳದಂತೆ ಸೂಚನೆ ನೀಡಲಾಗಿದೆ.

    ಗುರುವಾರ ರಾತ್ರಿ ಪಂಜಾಬ್, ಚಂಡೀಗಢದ ಹಲವು ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಭಾರತೀಯ ಸೇನೆ ಪಾಕಿಸ್ತಾನದ ಕ್ಷಿಪಣಿ, ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು. ಇದನ್ನೂ ಓದಿ: ಭಾರತ ಮಿಸೈಲ್‌ ದಾಳಿಗೆ ಪಾಕ್‌ ತತ್ತರ – ಭಿಕ್ಷೆ ಬೇಡುತ್ತಿದೆ ʻಭಿಕಾರಿಸ್ತಾನʼ

    ಪಂಜಾಬ್ ಮತ್ತು ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗಡಿ ಪ್ರದೇಶದಲ್ಲಿರುವ ಮೊಹಾಲಿಯಲ್ಲೂ ಜನತೆಗೆ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನ ಸ್ಥಿತಿ – ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ ಹೈಅಲರ್ಟ್

    ಉಧಂಪುರ, ಸಾಂಬಾ, ಜಮ್ಮು, ಅಖ್ನೂರ್, ನಾಗ್ರೋಟಾ ಮತ್ತು ಪಠಾಣ್‌ಕೋಟ್ ಪ್ರದೇಶಗಳಲ್ಲಿ ಭಾರತೀಯ ಸೇನೆಯ ವಾಯು ರಕ್ಷಣಾ ಘಟಕಗಳು ನಡೆಸಿದ ದೊಡ್ಡ ಪ್ರಮಾಣದ ಪ್ರತಿ ಡ್ರೋನ್ ಕಾರ್ಯಾಚರಣೆಯಲ್ಲಿ 50 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

  • ಆಸ್ಪತ್ರೆಯಲ್ಲೇ ವೈದ್ಯೆಗೆ ಇರಿದು ಹತ್ಯೆ – ಪತಿ ವಿರುದ್ಧ ಕೊಲೆ ಆರೋಪ

    ಆಸ್ಪತ್ರೆಯಲ್ಲೇ ವೈದ್ಯೆಗೆ ಇರಿದು ಹತ್ಯೆ – ಪತಿ ವಿರುದ್ಧ ಕೊಲೆ ಆರೋಪ

    ಚಂಡೀಗಢ: ವೈದ್ಯೆಯೊಬ್ಬಳನ್ನು (Doctor) ಮಾರಕಾಸ್ತ್ರಗಳಿಂದ ಇರಿದು ಹತ್ಯೆಗೈದ ಘಟನೆ ಚಂಡೀಗಢದ (Chandigarh) ಫರಿದಾಬಾದ್‌ನ ಬಲ್ಲಭ್‌ಗಢದಲ್ಲಿ ನಡೆದಿದೆ. ವೈದ್ಯೆಯ ಪೋಷಕರು, ಪತಿ, ಆತನ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ.

    ಪ್ರಿಯಾಂಕಾ (34) ಹತ್ಯೆಗೀಡಾದ ವೈದ್ಯೆಯಾಗಿದ್ದು, ಅವರು ಪತಿ ಲಕ್ಷ್ಮಿಚಂದ್‌ನನ್ನು ತೊರೆದು ತನ್ನ 14 ಮತ್ತು 10 ವರ್ಷದ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದರು. ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪ್ರಿಯಾಂಕಾಳ ಪತಿ, ಕುಡಿದು ಬಂದು ಅವಳಿಗೆ ಹಿಂಸೆ ನೀಡುತ್ತಿದ್ದ. ಇಂದು ಆಕೆಯ ಹತ್ಯೆಯಾಗಿದೆ. ನಮಗೆ ಮಕ್ಕಳ ಬಗ್ಗೆ ಭಯ ಕಾಡುತ್ತಿದೆ ಎಂದು ಸಹೋದರಿ ಪೂಜಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಪ್ರಿಯಾಂಕಾ ಕರೆ ಮಾಡಿ ತನ್ನನ್ನು ಕೊಲೆ ಮಾಡುವ ಸಂಚು ನಡೆದಿದೆ ಎಂದು ನನಗೆ ತಿಳಿಸಿದ್ದಳು. ಬಳಿಕ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದೆ. ಆದರೆ ಆಕೆ ಕ್ಲಿನಿಕ್‌ಗೆ ಹೋಗಿ ಬರುವುದಾಗಿ ತೆರಳಿದ್ದಳು. ಅಲ್ಲಿ ಪ್ರಿಯಾಂಕಾಳ ಹತ್ಯೆಯಾಗಿದೆ ಅವರು ತಿಳಿಸಿದ್ದಾರೆ.

    ಪ್ರಕರಣ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯ ಉಸ್ತುವಾರಿ ಹರಿಕಿಶನ್ ಪ್ರತಿಕ್ರಿಯಿಸಿ, ಕುಟುಂಬವು ಪತಿ, ಅತ್ತೆ ಮಾವಂದಿರ ಮೇಲೆ ಕೊಲೆ ಆರೋಪ ಮಾಡಿದೆ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಕೃತ್ಯದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದಿದ್ದಾರೆ.

  • ಚಿಕನ್ ನೀಡದ್ದಕ್ಕೆ ಹೋಟೆಲ್ ಸಪ್ಲೈಯರ್‌ನನ್ನು ಹತ್ಯೆಗೈದ ಯುವಕರು!

    ಚಿಕನ್ ನೀಡದ್ದಕ್ಕೆ ಹೋಟೆಲ್ ಸಪ್ಲೈಯರ್‌ನನ್ನು ಹತ್ಯೆಗೈದ ಯುವಕರು!

    ಚಂಡೀಗಢ: ಚಿಕನ್‌ ನೀಡಿಲ್ಲ ಎಂದು ಹೋಟೆಲ್‌ನ ಸಪ್ಲೈಯರ್‌ನನ್ನು ಯುವಕರ ಗುಂಪೊಂದು ಹತ್ಯೆಗೈದ ಘಟನೆ ಚಂಡೀಗಢದಲ್ಲಿ (
    Chandigarh) ನಡೆದಿದೆ.

    ಹತ್ಯೆಗೀಡಾದ ವ್ಯಕ್ತಿಯನ್ನು ಜಸ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಹೋಟೆಲ್‌ನ ಮತ್ತೋರ್ವ ಸಿಬ್ಬಂದಿಗೆ ಗಾಯಗೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಕಾಶ್ ಎಂದು ಗುರುತಿಸಲಾಗಿದೆ. ನಾಲ್ವರು ಯುವಕರು ರಾತ್ರಿ 11 ಗಂಟೆ ಸುಮಾರಿಗೆ ಹೋಟೆಲ್‌ಗೆ ಬಂದಿದ್ದರು. ಈ ವೇಳೆ ಚಿಕನ್ ಬೇಕು ಎಂದು ಕೇಳಿದ್ದು, ಹೋಟೆಲ್‌ ಮುಚ್ಚುವ ಸಮಯವಾಯ್ತು ಎಂದು ಅವರಿಗೆ ಹೋಟೆಲ್‌ ಸಿಬ್ಬಂದಿ ಹೇಳಿದ್ದಾರೆ. ಈ ವೇಳೆ ಗಲಾಟೆ ನಡೆಸಿ ಗುಂಪು ಅಲ್ಲಿಂದ ತೆರಳಿದೆ.

    ಸುಮಾರು 45 ನಿಮಿಷಗಳ ನಂತರ ಯುವಕರ ಗುಂಪು, ಕ್ರಿಕೆಟ್ ವಿಕೆಟ್ ಮತ್ತು ಹರಿತವಾದ ಆಯುಧಗಳನ್ನು ತಂದು ಹೋಟೆಲ್‌ನಲ್ಲಿದ್ದ ಜಸ್ಪ್ರೀತ್ ಮತ್ತು ಆಕಾಶ್ ಮೇಲೆ ದಾಳಿ ನಡೆಸಿದ್ದಾರೆ. ಇದರಿಂದ ಇಬ್ಬರೂ ತೀವ್ರ ಗಾಯಗೊಂಡಿದ್ದಾರೆ. ಬಳಿಕ ಆಕಾಶ್ ಹೋಟೆಲ್‌ ಮಾಲೀಕರ ಮಗನಿಗೆ ಕರೆ ಮಾಡಿದ್ದು, ಆತ ಬಂದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆಸ್ಪತ್ರೆಯಲ್ಲಿ ಜಸ್ಪ್ರೀತ್‌ ಸಾವಿಗೀಡಾಗಿದ್ದಾನೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಈ ಸಂಬಂಧ ಅಪ್ರಾಪ್ತ ಬಾಲಕ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಬಂಧಿತರನ್ನು ಸಾಗರ್, ಜೋಗಿಂದರ್, ಗುರ್ಮೀತ್, ವೀರು ಮತ್ತು ರಾಜಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ಪಂಜಾಬ್| ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಪಂಜಾಬ್| ಹೆರಾಯಿನ್, ಪಿಸ್ತೂಲ್ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

    ಚಂಡೀಘಡ: ಪಂಜಾಬ್‌ನ (Punjab) ಫಿರೋಜ್‌ಪುರದಲ್ಲಿ ಹೆರಾಯಿನ್ ಮತ್ತು ಪಿಸ್ತೂಲ್ ಸಾಗಿಸುತ್ತಿದ್ದ ಪಾಕಿಸ್ತಾನದ (Pakistan) ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

    ಚೀನಾದಲ್ಲಿ ತಯಾರಾದ ಡಿಜೆಐ ಮಾವಿಕ್ 3 ಕ್ಲಾಸಿಕ್ ಡ್ರೋನ್ 500 ಗ್ರಾಂ ಹೆರಾಯಿನ್, ಪಿಸ್ತೂಲ್ ಹೊತ್ತೊಯ್ಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ‘ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಪಂಜಾಬ್ ಪೊಲೀಸ್ ಪಡೆ ತಡೆದಿವೆ. ಬಿಎಸ್‌ಎಫ್ ಸಿಬ್ಬಂದಿ ತಕ್ಷಣವೇ ಡ್ರೋನ್ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ತಾಂತ್ರಿಕ ಕ್ರಮಗಳನ್ನು ಬಳಸಿಕೊಂಡು ಅದನ್ನು ಕೆಳಗಿಳಿಸಿದರು’ ಎಂದು ಬಿಎಸ್‌ಎಫ್ ಪಂಜಾಬ್ ಫ್ರಾಂಟಿಯರ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ಮಲ್ಪೆಯಲ್ಲಿ ಅಕ್ರಮವಾಗಿ ನೆಲೆಸಿದ್ದ 7 ಬಾಂಗ್ಲಾ ಪ್ರಜೆಗಳು ಅರೆಸ್ಟ್‌

    ಬಿಎಸ್‌ಎಫ್ ಈ ಹಿಂದೆ ಪಂಜಾಬ್‌ನಲ್ಲಿ ಹಲವು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಮಾರ್ಚ್‌ನಲ್ಲಿ  ಅಮೃತಸರ ಬಳಿ ಪಂಜಾಬ್ ಪೊಲೀಸರು ಎರಡು ಪಾಕಿಸ್ತಾನಿ ನಿರ್ಮಿತ ಡ್ರೋನ್‌ಗಳನ್ನು ವಶಪಡಿಸಿಕೊಂಡಿದ್ದರು. ಫೆಬ್ರವರಿಯಲ್ಲಿ ಗುರುದಾಸ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿ ಚೀನಾ ನಿರ್ಮಿತ ಮತ್ತೊಂದು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ. ಇದನ್ನೂ ಓದಿ: ಬಾಲಸೋರ್ ಅಪಘಾತದ ಬಳಿಕವೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ: ಕೇಂದ್ರದ ವಿರುದ್ಧ ರಾಹುಲ್‌ ಗಾಂಧಿ ಕಿಡಿ

  • ವಿಮಾನ ಪತನಗೊಂಡ 56 ವರ್ಷಗಳ ಬಳಿಕ 4 ಮೃತದೇಹಗಳು ಪತ್ತೆ

    ವಿಮಾನ ಪತನಗೊಂಡ 56 ವರ್ಷಗಳ ಬಳಿಕ 4 ಮೃತದೇಹಗಳು ಪತ್ತೆ

    ನವದೆಹಲಿ: 56 ವರ್ಷಗಳ ಹಿಂದೆ ಸಂಭವಿಸಿದ್ದ ವಿಮಾನ ಅಪಘಾತವೊಂದರಲ್ಲಿ (Plane Crash) ನಾಪತ್ತೆಯಾಗಿದ್ದ ಮೃತದೇಹಗಳಲ್ಲಿ ನಾಲ್ಕು ಮೃತ ದೇಹಗಳು ಪತ್ತೆಯಾಗಿದೆ.

    ಇದೀಗ ಹಿಮಭರಿತ ಭೂಪ್ರದೇಶದಲ್ಲಿ ಹುದುಗಿಹೋಗಿದ್ದ ವಿಮಾನದ ಅವಶೇಷಗಳು ದೊರೆತಿದ್ದು, ಪತ್ತೆಯಾದ ಮೃತ ದೇಹಗಳಲ್ಲಿ ಮೂವರ ಗುರುತನ್ನು ಪತ್ತೆ ಹಚ್ಚಲಾಗಿದ್ದು, ಸೇನೆಯ ವಿವಿಧ ವಲಯದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸೈನಿಕರು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪ್ರಜ್ವಲ್‌ ಪ್ರಕರಣಕ್ಕೆ ಭವಾನಿಯನ್ನು ಎಳೆ ತಂದಾಗ ಸರಿ ಅನ್ನಿಸಿತ್ತಾ: ಕಾಂಗ್ರೆಸ್‌ಗೆ ಟೀಕೆಗೆ ಅಶೋಕ್‌ ಪ್ರಶ್ನೆ

    ನಾಲ್ಕು ಶವಗಳ ಪೈಕಿ ಮೂರು ಮೃತದೇಹಗಳು ಮಲ್ಖಾನ್ ಸಿಂಗ್, ಸಿಪಾಯಿ ನಾರಾಯಣ್ ಸಿಂಗ್ ಮತ್ತು ಕುಶಲಕರ್ಮಿ ಥಾಮಸ್ ಚರಣ್ ಅವರದ್ದಾಗಿದೆ ಹಾಗೂ ಉಳಿದೊಂದು ಮೃತ ದೇಹದಿಂದ ವಶಪಡಿಸಿಕೊಂಡ ದಾಖಲೆಗಳು ವ್ಯಕ್ತಿಯನ್ನು ನಿರ್ಣಾಯಕವಾಗಿ ಗುರುತಿಸಿಲ್ಲ. ಆದರೆ, ಅವರ ಸಂಬಂಧಿಕರ ವಿವರಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಕುರಿತು ಸೇನಾ ಅಧಿಕಾರಿಗಳು ಮಾತನಾಡಿ, ಭಾರತೀಯ ಸೇನೆಯ ಡೋಗ್ರಾ ಸ್ಕೌಟ್ಸ್ ಮತ್ತು ತಿರಂಗಾ ಮೌಂಟೇನ್ ರೆಸ್ಕ್ಯೂ ಸಿಬ್ಬಂದಿಯನ್ನು ಒಳಗೊಂಡ ಜಂಟಿ ತಂಡವು ಕಾರ್ಯಾಚರಣೆಯನ್ನು ನಡೆಸಿದೆ. ಇದರಲ್ಲಿ 4 ಶವಗಳನ್ನು ಪತ್ತೆ ಮಾಡಿದೆ. ಸಿಬ್ಬಂದಿಗಳಿಂದ ನಡೆಸಲಾದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ತಿಳಿಸಿದ್ದಾರೆ.

    ಏನಿದರ ಹಿನ್ನೆಲೆ:
    1968ರಲ್ಲಿ 56 ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ A-12 ಎಂಬ ವಿಮಾನವು ಹಿಮಾಚಲ ಪ್ರದೇಶದ ರೋಹ್ಟಾಂಗ್ ಪಾಸ್‌ನಲ್ಲಿ (Rohtang Pass) ಅಪಘಾತಕ್ಕೀಡಾಗಿತ್ತು. ಫೆಬ್ರವರಿ 7, 1968 ರಂದು 102 ಜನರನ್ನು ಹೊತ್ತಿದ್ದ ಅವಳಿ-ಎಂಜಿನ್ ಟರ್ಬೊಪ್ರಾಪ್ ಸಾರಿಗೆ ವಿಮಾನವು ಚಂಡೀಗಢದಿಂದ ಲೇಹ್‌ಗೆ ಹಾರುತ್ತಿದ್ದಾಗ ನಾಪತ್ತೆಯಾಗಿತ್ತು.

    ಅಪಘಾತಕ್ಕೀಡಾದ ವಿಮಾನದಲ್ಲಿ ಈ ಹಿಂದೆ 2003ರಲ್ಲಿ ಮೊದಲ ಬಾರಿಗೆ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್‌ನ (Atal Bihari Vajpayee Institute of Mountaineering) ಪರ್ವತಾರೋಹಿಗಳು ಅವಶೇಷಗಳನ್ನು ಪತ್ತೆಹಚ್ಚಲಾಗಿತ್ತು. ಅದಾದ ಬಳಿಕ 2005, 2006, 2013, ಮತ್ತು 2019ರಲ್ಲಿ ಡೋಗ್ರಾ ಸ್ಕೌಟ್ಸ್ (Dogra Scouts) ವಿವಿಧ ಕಾರ್ಯಾಚರಣೆಗಳನ್ನು ನಡೆಸಿತ್ತು.

    2019ರಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಮೃತ ದೇಹಗಳನ್ನು ಹೊರ ತೆಗೆಯಲಾಗಿತ್ತು. ಇದೀಗ ಚಂದ್ರಭಾಗ ಮೌಂಟೇನ್ ಎಕ್ಸ್ಪೆಡಿಶನ್ (Chandra Bhaga Mountain Expedition) ಇನ್ನೂ ನಾಲ್ಕು ದೇಹಗಳನ್ನು ವಶಪಡಿಸಿಕೊಂಡಿದೆ. ಇದು ಭಾರತದ ದೀರ್ಘಾವಧಿಯ ಶೋಧ ಕಾರ್ಯಾಚರಣೆಯಲ್ಲಿ ಗಮನಾರ್ಹ ಯಶಸ್ಸನ್ನು ತಂದಿದೆ.ಇದನ್ನೂ ಓದಿ: ಮುಡಾ ಸೈಟ್ ವಾಪಸ್ ನೀಡಿರುವುದು ಒಳ್ಳೆಯ ನಿರ್ಧಾರ – ಪರಮೇಶ್ವರ್

  • ಕ್ರಿಮಿನಲ್‍ಗಳ ಮಾಹಿತಿ ನೀಡಲು ನಿರಾಕರಣೆ – ವಾಟ್ಸಾಪ್ ನಿರ್ದೇಶಕರ ವಿರುದ್ಧ ಎಫ್‍ಐಆರ್

    ಕ್ರಿಮಿನಲ್‍ಗಳ ಮಾಹಿತಿ ನೀಡಲು ನಿರಾಕರಣೆ – ವಾಟ್ಸಾಪ್ ನಿರ್ದೇಶಕರ ವಿರುದ್ಧ ಎಫ್‍ಐಆರ್

    ಚಂಡೀಗಢ: ಪ್ರಕರಣ ಒಂದರ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡಲು ನಿರಾಕರಿಸಿದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‍ನ (WhatsApp) ನಿರ್ದೇಶಕ ಮತ್ತು ನೋಡಲ್ ಅಧಿಕಾರಿಗಳ ವಿರುದ್ಧ ಗುರುಗ್ರಾಮ್ (Gurugram) ಪೊಲೀಸರು (Police) ಎಫ್‍ಐಆರ್ ದಾಖಲಿಸಿದ್ದಾರೆ.

    ಮಾಹಿತಿ ನೀಡಲು ನಿರಾಕರಿಸಿದ ವಾಟ್ಸಾಪ್‍ನ ನಿರ್ದೇಶಕರು ಮತ್ತು ಅಧಿಕಾರಿಗಳ ವಿರುದ್ಧ ಸರ್ಕಾರಿ ಆದೇಶಕ್ಕೆ ಅವಿಧೇಯತೆ ತೋರುವುದು, ಅಪರಾಧಿಯನ್ನು ಕಾನೂನಿನ ಶಿಕ್ಷೆಯಿಂದ ರಕ್ಷಿಸಲು ಯತ್ನ ಮತ್ತು ಸಾಕ್ಷ್ಯವಾಗಿ ಸಲ್ಲಿಸಬೇಕಾದ ಯಾವುದೇ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯನ್ನು ನಾಶಪಡಿಸುವ ಹುನ್ನಾರದ ಆರೋಪ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಚುನಾವಣಾ ಬಾಂಡ್ ಸಿಕ್ಕಿಲ್ವಾ? ಮೊದಲು ಸೂಟ್‌ಕೇಸ್, ಮೂಟೆಯಲ್ಲಿ ಕದ್ದು ತೆಗೆದುಕೊಳ್ತಿದ್ರು: ಸಿ.ಟಿ.ರವಿ

    ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಅಡಿಯಲ್ಲಿ ದೂರೊಂದು ದಾಖಲಾಗಿತ್ತು. ಅದರ ತನಿಖೆಯ ಭಾಗವಾಗಿ, ಗುರುಗ್ರಾಮ್ ಪೊಲೀಸರು, ಆರೋಪಿಗಳು ಬಳಸುತ್ತಿದ್ದ ನಾಲ್ಕು ಸಂಖ್ಯೆಗಳ ಬಗ್ಗೆ ಮಾಹಿತಿಗಾಗಿ ವಾಟ್ಸಾಪ್ ನಿರ್ದೇಶಕರ ಬಳಿ ಮಾಹಿತಿ ಕೇಳಿದ್ದರು. ಈ ಸಂಬಂಧ ಇಮೇಲ್ ಮೂಲಕ ನೋಟಿಸ್ ಸಹ ಕಳುಹಿಸಲಾಗಿತ್ತು.

    ಪೊಲೀಸರು ಕೇಳಿದ್ದ ಮಾಹಿತಿಯನ್ನು ನೀಡಲು ವಾಟ್ಸಾಪ್ ತಿರಸ್ಕರಿಸಿದೆ. ಈ ನಿರಾಕರಣೆಯು ಕಾನೂನನ್ನು ನಿರ್ಲಕ್ಷಿಸುವ ಉದ್ದೇಶವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅದರಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಇಂದು ಪ್ರಮಾಣವಚನ

  • ರೇಪ್ ಹೇಗಾಗುತ್ತೆ ಎಂದು ಕಂಗನಾಗೆ ಕೇಳಿ, ಆಕೆಗೆ ರೇಪ್ ಅನುಭವ ಇದೆ: ಪಂಜಾಬ್ ಮಾಜಿ ಸಂಸದನ ವಿವಾದಿತ ಹೇಳಿಕೆ

    ರೇಪ್ ಹೇಗಾಗುತ್ತೆ ಎಂದು ಕಂಗನಾಗೆ ಕೇಳಿ, ಆಕೆಗೆ ರೇಪ್ ಅನುಭವ ಇದೆ: ಪಂಜಾಬ್ ಮಾಜಿ ಸಂಸದನ ವಿವಾದಿತ ಹೇಳಿಕೆ

    ಚಂಡೀಗಢ: ರೈತರ ಪ್ರತಿಭಟನೆಗಳ ಕುರಿತು ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಅವರನ್ನು ಟೀಕಿಸುವ ಭರದಲ್ಲಿ ಪಂಜಾಬ್‌ನ ಮಾಜಿ ಸಂಸದ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ.

    ನಟಿ-ರಾಜಕಾರಣಿ ಕಂಗನಾ ರೈತರ ಪ್ರತಿಭಟನೆಯ (Farmer Protest) ಸಂದರ್ಭದಲ್ಲಿ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿದ್ದರು. ಅವರ ಹೇಳಿಕೆ ವಿರೋಧಿಸಲು ಮುಂದಾಗಿ ಪಂಜಾಬ್ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ (Simranjit Singh Mann) ವಿವಾದಕ್ಕೆ ಸಿಲುಕಿದ್ದಾರೆ.ಇದನ್ನೂ ಓದಿ: 100 ಕೋಟಿ ಮೌಲ್ಯದ ಮನೆಗೆ ಶಿಫ್ಟ್ ಆಗಲಿದ್ದಾರೆ ದೀಪಿಕಾ ಪಡುಕೋಣೆ ದಂಪತಿ

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅತ್ಯಾಚಾರ ಹೇಗೆ ನಡೆಯುತ್ತವೆ ಎಂದು ಕಂಗನಾರನ್ನು ಕೇಳಿ. ಆಕೆಗೆ ಅದರ ಅನುಭವವಿದೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

    ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್, ರೈತರ ಚಳುವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ರೈತ ಹೋರಾಟ ನಿಗ್ರಹಿಸುವ ಸಂಬಂಧ ಕಠಿಣ ನಿಲುವುಗಳನ್ನು ಕೈಗೊಂಡಿತು. ನಾಯಕರು ಬಲವಾಗಿರದಿದ್ದರೆ ಅಥವಾ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಮ್ಮ ದೇಶದಲ್ಲೂ ಬಾಂಗ್ಲಾದೇಶದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

    ಮುಂದಿನ ದಿನಗಳಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡದಂತೆ ಕಂಗನಾ ಅವರಿಗೆ ಬಿಜೆಪಿ ಎಚ್ಚರಿಕೆ ನೀಡಿತ್ತು.ಇದನ್ನೂ ಓದಿ: ಬೆಂಗ್ಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ – ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

    ಗುಜರಾತ್ ಗಲಭೆ ವೇಳೆ ಸಾಮೂಹಿಕ ಅತ್ಯಾಚಾರಕ್ಕೆ ತುತ್ತಾಗಿದ್ದ ಮಹಿಳೆ ಎಂದು ಕಂಗನಾ ಬಿಂಬಿಸಿದ್ದು ವಿವಾದವಾಗಿತ್ತು. ಅಷ್ಟೇ ಅಲ್ಲ, ಮಹಿಳೆಯರು ಕೇವಲ 100 ರೂ. ಕೂಲಿಗೆ ಧರಣಿ ಮಾಡಲು ಬರುತ್ತಾರೆ ಎಂದೂ ನಾಲಿಗೆ ಹರಿಬಿಟ್ಟಿದ್ದರು.

    ಈ ಹೇಳಿಕೆ ಆಧಾರದ ಮೇಲೆ ಪಂಜಾಬ್ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ನಟಿ-ಸಂಸದೆ ಕಂಗನಾ ವಿರುದ್ಧ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.