Tag: chandigadh

  • ಹರಿಯಾಣದ ಎಲ್ಲ 90 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಎಪಿ

    ಹರಿಯಾಣದ ಎಲ್ಲ 90 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಎಪಿ

    ನವದೆಹಲಿ: ಅ.5ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ (Haryana Assembly Election) ಆಮ್ ಆದ್ಮಿ ಪಕ್ಷ (Aam Aadmi Party) ಗುರುವಾರ ಮೂರು ಅಭ್ಯರ್ಥಿಗಳ ಏಳನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

    ಬಿಡುಗಡೆಗೊಳಿಸಿದ ಪಟ್ಟಿಯ ಮೂಲಕ ರಾಜ್ಯದ ಎಲ್ಲಾ 90 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದೆ.ಇದನ್ನೂ ಓದಿ:ಆತ್ಮಹತ್ಯೆಗೂ ಮುನ್ನ ಮಗಳಿಗೆ ಕರೆ ಮಾಡಿ ಮಲೈಕಾ ತಂದೆ ಹೇಳಿದ್ದೇನು?

    ಆದರ್ಶಪಾಲ್ ಗುಜ್ಜರ್, ರಣಬೀರ್ ಸಿಂಗ್ ಲೋಹನ್, ರಬಿಯಾ ಕಿದ್ವಾಯಿ ಮೂವರನ್ನು ಒಳಗೊಂಡಿರುವ ಏಳನೇ ಪಟ್ಟಿಯನ್ನು ಇಂದು ಬಿಡುಗಡೆಗೊಳಿಸಿದೆ.

    ಅರವಿಂದ್ ಕೇಜ್ರಿವಾಲ್ (Arvind Kejrival) ನೇತೃತ್ವದ ಪಕ್ಷವು ಕಾಂಗ್ರೆಸ್ (Congress) ಮೈತ್ರಿ ವಿಫಲವಾದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ಜೊತೆ ಸೀಟು ಹಂಚಿಕೊಳ್ಳುವ ಮಾತನ್ನು ಈ ಮೂಲಕ ಕೈಬಿಟ್ಟಿದೆ ಎಂಬುವುದನ್ನು ಆಮ್ ಆದ್ಮಿ ಪಕ್ಷ ಸೂಚಿಸಿದೆ.ಇದನ್ನೂ ಓದಿ: ಅರ್ಜುನ ಅವಧೂತ ಗುರೂಜಿಯನ್ನು ಭೇಟಿಯಾದ ಧ್ರುವ ಸರ್ಜಾ

  • ಮುಂದೆ ಜನರ ಸೇವೆ ಮಾಡ್ತೇನೆ – ರಾಜಕೀಯ ಸೇರುವ ಬಗ್ಗೆ ಭಜ್ಜಿ ಸುಳಿವು

    ಮುಂದೆ ಜನರ ಸೇವೆ ಮಾಡ್ತೇನೆ – ರಾಜಕೀಯ ಸೇರುವ ಬಗ್ಗೆ ಭಜ್ಜಿ ಸುಳಿವು

    ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿತ್ತು. ಘಟಾನುಘಟಿ ನಾಯಕರು ಪಕ್ಷವನ್ನು ತೊರೆದು ಬೇರೆ ಪಕ್ಷವನ್ನು ಸೇರುವುದು ಸಾಮಾನ್ಯವಾಗಿದೆ. ಈ ಮಧ್ಯೆ ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಹರ್ಭಜನ್ ಸಿಂಗ್ ಸಹ ರಾಜಕೀಯ ಸೇರುವ ಒಲವು ವ್ಯಕ್ತಪಡಿಸಿದ್ದಾರೆ.

    ಯಾವ ಪಕ್ಷವನ್ನು ಸೇರುತ್ತೇನೆ ಎಂದು ಅಧಿಕೃತವಾಗಿ ಹೇಳದೇ ಇದ್ದರೂ ರಾಜಕೀಯದ ಮೂಲಕ ಜನರ ಸೇವೆ ಮಾಡಬಹುದು ಎಂದು ತಿಳಿಸಿದ್ದಾರೆ.

    ಹರ್ಭಜನ್ ಸಿಂಗ್ ಅವರು ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಅವರು ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ಉಹಾಪೋಹಗಳು ಎಲ್ಲೆಡೆ ಹರಡಿತ್ತು. ಈ ಕುರಿತು ಹರ್ಭಜನ್ ಸಿಂಗ್ ನನಗೆ ಎಲ್ಲಾ ಪಕ್ಷದ ರಾಜಕಾರಣಿಗಳು ಗೊತ್ತು. ನಾನು ಪಂಜಾಬ್‌ಗೆ, ರಾಜಕೀಯ ಅಥವಾ ಇನ್ನಾವುದೋ ರೀತಿಯಲ್ಲಿ ಸೇವೆ ಸಲ್ಲಿಸುತ್ತೇನೆ. ಆದರೇ ನಾನು ಇನ್ನೂ ಸರಿಯಾದ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜು – ಡಿ.26ಕ್ಕೆ ಆರಂಭವಾಗುವುದರ ಮಹತ್ವವೇನು?

    ಹರ್ಭಜನ್ ಇತ್ತೀಚೆಗೆ ಪಂಜಾಬ್‌ನ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು ಭೇಟಿಯಾದ ನಂತರ ಈ ರೀತಿಯ ಊಹಾಪೋಹಗಳು ಹುಟ್ಟಿಕೊಂಡಿದೆ.

    ಕೆಲ ದಿನಗಳ ಹಿಂದೆ ಬಿಜೆಪಿ ನಾಯಕರು ಭೇಟಿಯಾಗಿ ಪಕ್ಷ ಸೇರುವಂತೆ ಮನವಿ ಮಾಡಿದ್ದರು ಎಂಬ ಸುದ್ದಿಗೆ, ಇದೊಂದು ಸುಳ್ಳು ಸುದ್ದಿ ಎಂದು ಹೇಳಿ ತಳ್ಳಿಹಾಕಿದ್ದಾರೆ.

    ಈ ಕುರಿತು ಪ್ರಮಾಣಿಕವಾಗಿ ಹೇಳುವುದಾದರೆ ನನಗೆ ಏನಾಗಿದೆ ಎಂದು ತಿಳಿದಿಲ್ಲ. ನಾನು ಯಾವ ದಿಕ್ಕಿನಲ್ಲಿ ಹೋಗಲು ಬಯಸುತ್ತೇನೆ ಎಂಬುವುದನ್ನು ತಿಳಿಯಲು ನನಗೆ ಒಂದೆರಡು ದಿನಗಳು ಬೇಕಾಗುತ್ತದೆ. ನಾನು ಒಂದು ವೇಳೆ ರಾಜಕೀಯಕ್ಕೆ ಸೇರಿದರೆ ಯಾವ ರೀತಿಯಲ್ಲಿ ಜನರಿಗೆ ಸಹಾಯ ಮಾಡಬೇಕು ಎಂಬುವುದು ನನ್ನ ಯೋಚನೆಯ ಮುಖ್ಯ ಗುರಿಯಾಗಿದೆ ಹಾಗೂ ಇದರ ಬಗ್ಗೆ ನಾನು ಸರಿಯಾದ ಲೆಕ್ಕಾಚಾರ ಮಾಡಬೇಕಾಗಿದೆ ಎಂದು ಹರ್ಭಜನ್ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಶ್ರೀಮಂತ ಬೇಡ, ಕಷ್ಟದಲ್ಲಿರುವವನ ಜೊತೆ ಡೇಟಿಂಗ್ ಮಾಡಲು ಇಷ್ಟ: ಹರ್ನಾಜ್ ಸಂಧು

  • ಕೇವಲ 1 ನಿಮಿಷದಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರು ಹೇಳ್ತಾಳೆ 2ರ ಕಂದಮ್ಮ!- ವಿಡಿಯೋ

    ಕೇವಲ 1 ನಿಮಿಷದಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರು ಹೇಳ್ತಾಳೆ 2ರ ಕಂದಮ್ಮ!- ವಿಡಿಯೋ

    ಚಂಡೀಗಢ: 2 ವರ್ಷದ ಪುಟ್ಟ ಬಾಲಕಿಯೊಬ್ಬಳು ಭಾರತದ ದೇಶದ ಎಲ್ಲಾ ರಾಜ್ಯದ ರಾಜಧಾನಿಗಳನ್ನು ಪಟಾ ಪಟಾಂತ ಹೇಳೋ ಮೂಲಕ ಸುದ್ದಿಯಾಗಿದ್ದಾಳೆ.

    ಹೌದು, ಹರ್ಯಾಣ ಪಂಚಕುಲಾದ ಅಮಾರ್ಯಾ ಗುಲಾಟಿ ಎಂಬ ಬಾಲಕಿ ಕೇವಲ 1 ನಿಮಿಷದಲ್ಲಿ ಎಲ್ಲಾ ರಾಜ್ಯದ ರಾಜಧಾನಿಗಳ ಹೆಸರನ್ನು ಹೇಳುವಲ್ಲಿ ಯಶಸ್ವಿಯಾಗುತ್ತಾಳೆ. ಸದ್ಯ ಈಕೆ ರಾಜಧಾನಿಗಳ ಹೆಸರನ್ನು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈಕೆಯ ತೊದಲು ಮಾತುಗಳಿಂದ ಎಲ್ಲರೂ ಪ್ರಭಾವಿತರಾಗಿದ್ದಾರೆ.

    ತೊದಲು ಮಾತಾಡುತ್ತಿರುವ ಈ ಪುಟ್ಟ ಬಾಲಕಿ ರಾಜ್ಯದ ರಾಜಧಾನಿಗಳ ಹೆಸರನ್ನು ಅಸ್ಪಷ್ಟವಾಗಿಯೇ ಹೇಳುತ್ತಾಳೆ. ಈಕೆಯ ಈ ಮಾತುಗಳಿಂದಲೇ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರನ್ನು ಆಕರ್ಷಿಸಿದ್ದಾಳೆ. ಅಮಾರ್ಯಾ 7 ತಿಂಗಳ ಮಗುವಿದ್ದಾಗಲೇ ಆಕೆಯ ತಾಯಿ ರಾಜಧಾನಿಗಳು ಹಾಗೂ ಕೆಲವೊಂದು ಸ್ಥಳಗಳ ಹೆಸರನ್ನು ಹೇಳಿಕೊಡಲು ಆರಂಭಿಸಿದ್ದರು. ಹೀಗಾಗಿ ಈಕೆ ಇಂದು ಇಷ್ಟೊಂದು ಸುಲಲಿತವಾಗಿ ರಾಜಧಾನಿಗಳ ಹೆಸರನ್ನು ಹೇಳಬಲ್ಲವಳಾಗಿದ್ದಾಳೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇಷ್ಟು ಮಾತ್ರವಲ್ಲದೇ ಈಕೆ ಈಗಾಗಲೇ ದೇಶದ ವಿವಿಧ ನಗರಗಳ ಹೆಸರನ್ನು ಹೇಳುವ ಸ್ಥರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಒಟ್ಟಿನಲ್ಲಿ ಸದ್ಯ ಅಮಾರ್ಯ ತನ್ನ ತೊದಲು ಮಾತುಗಳಿಂದ ಸಾಮಾಜಿಕ ಜಾಲತಾಣಿಗರ ಮನಸ್ಸನ್ನು ಗೆದ್ದಿದ್ದಾಳೆ.

  • 17ರ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆದ ಯುವಕನಿಗೆ 2 ವರ್ಷ ಜೈಲು!

    17ರ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆದ ಯುವಕನಿಗೆ 2 ವರ್ಷ ಜೈಲು!

    ಚಂಡೀಗಢ: ಕಾಲೇಜಿನಿಂದ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ 17 ವರ್ಷದ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಪ್ರಕರಣ ಸಂಬಂಧಿಸಿದಂತೆ ಆರೋಪಿ 23 ವರ್ಷದ ಪಂಕಜ್ ಸಿಂಗ್ ಗೆ ಇದೀಗ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಪೂನಮ್ ಆರ್ ಜೋಶಿ ಅವರು 21 ಸಾವಿರ ದಂಡ ಹಾಗೂ 2 ವರ್ಷ ಜೈಲು ವಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

    ಏನಿದು ಘಟನೆ?: ಇಲ್ಲಿ ಡೇರಿಯಾ ಪ್ರದೇಶದ 23 ವರ್ಷದ ಪಂಕಜ್ ಸಿಂಗ್ ಎಂಬಾತ ಕಳೆದ 2017ರ ಸೆಪ್ಟೆಂಬರ್ ತಿಂಗಳಲ್ಲಿ ವಿದ್ಯಾರ್ಥಿನಿಯನ್ನು `ಹೇ ಸೆಕ್ಸಿ’ ಅಂತ ಕರೆಯುವ ಮೂಲಕ ಕಿರುಕುಳ ನೀಡಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿದ್ಯಾರ್ಥಿನಿ ಕೆನ್ನೆಗೆ ಪಂಕಜ್ ಕಪಾಳಮೋಕ್ಷ ಮಾಡಿದ್ದನು. ಕೂಡಲೇ ವಿದ್ಯಾರ್ಥಿನಿ ಆಕೆಯ ಸಹೋದರನನ್ನು ಸ್ಥಳಕ್ಕೆ ಕರೆದಿದ್ದಾರೆ. ಈ ವೇಳೆ ಆಕೆಯ ಸಹೋದರನಿಗೂ ಪಂಕಜ್ ಹೊಡೆದಿದ್ದಾನೆ ಎಂದು ವರದಿಯಾಗಿದೆ.

    ಈ ವೇಳೆ ಮೂವರ ಗಲಾಟೆ ತಾರಕಕ್ಕೇರಿದೆ. ಕೂಡಲೇ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿ, ಪಂಕಜ್ ವಿರುದ್ಧ ಐಪಿಸಿ ಸೆಕ್ಷನ್ 354(ಕ್ರಿಮಿನಲ್), 323(ಮಾನ ಹಾನಿ) 294(ಅಶ್ಲೀಲ ಪದ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೇ ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆಯಡಿ ಕೂಡ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.

  • ರೇಪ್ ಕೇಸ್‍ನಲ್ಲಿ ರಾಮ್ ರಹೀಮ್ ಭವಿಷ್ಯ ಇಂದು ನಿರ್ಧಾರ

    ರೇಪ್ ಕೇಸ್‍ನಲ್ಲಿ ರಾಮ್ ರಹೀಮ್ ಭವಿಷ್ಯ ಇಂದು ನಿರ್ಧಾರ

    ಚಂಡೀಗಢ: ಗುರುಮೀತ್ ರಾಮ್ ರಹೀಂ ಬಾಬಾ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಇಂದು ತೀರ್ಪು ಹೊರಬೀಳಲಿದೆ. ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಲಿದೆ. ಈಗಾಗಲೇ ಲಕ್ಷಾಂತರ ಬಾಬಾ ಅನುಯಾಯಿಗಳು ಪಂಚಕುಲಾ ಮತ್ತು ಸಿರ್ಸಾಗೆ ಬಂದು ಸೇರಿದ್ದಾರೆ.

    ಪಂಚಕುಲಾದ ನಗರದ ರಸ್ತೆಯ ಇಕ್ಕೆಲಗಳು ಬಾಬಾ ಅನುಯಾಯಿಗಳಿಂದಲೇ ತುಂಬಿಹೋಗಿದೆ. ಗುರುವಾರ ರಾತ್ರಿ 10 ಗಂಟೆ ಬಳಿಕ ಪಂಚಕುಲಾವನ್ನು ಸೇನೆಗೆ ವಹಿಸಲಾಗಿದ್ದು, ಅಲ್ಲಿನ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಸೇನೆ ಹೊತ್ತಿದೆ. ಜೊತೆಗೆ ಸಿರ್ಸಾ, ಪಂಚಕುಲಾದಲ್ಲಿ ನಿನ್ನೆ ರಾತ್ರಿಯಿಂದ್ಲೇ ಕಫ್ರ್ಯೂ ಜಾರಿಗೊಳಿಸಲಾಗಿದೆ.

    ಹರಿಯಾಣ ಮತ್ತು ಚಂಡೀಗಢದಲ್ಲಿ ಎಲ್ಲಾ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಅಂಗಡಿಗಳನ್ನು ಮುಚ್ಚಲಾಗಿದೆ. ಪಂಜಾಬ್, ಹರಿಯಾಣ, ಚಂಡೀಗಢದಲ್ಲಿ 72 ಗಂಟೆಗಳ ಕಾಲ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ ಹೈಕೋರ್ಟ್ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹರಿಯಾಣ ಸರ್ಕಾರ ವಿಫಲವಾಗಿದೆ ಅಂತ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ ಭಕ್ತರು ಮನೆಗೆ ತೆರಳುವಂತೆ ಮನವಿ ಮಾಡಲು ಸೂಚಿಸಿದ್ದು, ಅದರಂತೆ ಬಾಬಾ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಗೌರವಿಸಿ, ಮನೆಗೆ ತೆರಳಿ ಅಂತ ಮನವಿ ಮಾಡಿಕೊಂಡಿದ್ದಾರೆ. 2002ರಲ್ಲಿ ಬಾಬಾರ ಇಬ್ಬರು ಮಹಿಳಾ ಭಕ್ತರು ನಮ್ಮ ಮೇಲೆ ಬಾಬಾ ಅತ್ಯಾಚಾರವೆಸಗಿದ್ದಾರೆ ಅಂತ ಆರೋಪಿಸಿದ್ದರು. ಆದ್ರಂತೆ ಹೈಕೋರ್ಟ್ ಬಾಬಾ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬಿಐಗೆ ಸೂಚಿಸಿತ್ತು.

    ಏನಿದು ಪ್ರಕರಣ?: ಹರಿಯಾಣದ ಸಿರ್ಸಾದಲ್ಲಿರುವ ಆಶ್ರಮದಲ್ಲಿ ರಾಮ್ ರಹೀಂ ವಿರುದ್ಧ 1999ರಲ್ಲಿ ಇಬ್ಬರು ಮಹಿಳಾ ಭಕ್ತರ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಕೇಳಿಬಂದಿದ್ದು, 2002ರಿಂದ ಸಿಬಿಐ ತನಿಖೆ ನಡೆಸಲಾಗುತ್ತಿತ್ತು. ಒಂದು ದಿನ ರಾತ್ರಿ ಗುರ್ಮಿತ್ ರಾಮ್ ರಹೀಂ ಸಂತ್ರಸ್ತ ಮಹಿಳೆಯನ್ನು ತನ್ನ ಕೋಣೆಗೆ ಕರೆದಿದ್ದು, ಕೋಣೆಯಲ್ಲಿದ್ದ ಟಿವಿಯಲ್ಲಿ ಸೆಕ್ಸ್ ಮೂವಿ ತೋರಿಸಿದ್ದರು. ಅವರ ಪಕ್ಕದಲ್ಲಿ ಗನ್ ಕೂಡಾ ಇತ್ತು ಎನ್ನಲಾಗಿತ್ತು. ಅಲ್ಲದೇ 3 ವರ್ಷಗಳವರೆಗೆ ನಿರಂತರವಾಗಿ ಅತ್ಯಾಚಾರ, 30-40ರಷ್ಟು ಮಹಿಳಾ ಭಕ್ತರಿಗೂ ಇದೇ ರೀತಿ ಪೀಡಿಸಿದ್ದರೆಂಬ ಆರೋಪ ಕೇಳಿಬಂದಿತ್ತು. ಈ ಆರೋಪಗಳ ಬಗ್ಗೆ ವಿಚಾರಣೆ ನಡೆಸಿದ್ದ ಪಂಚಕುಲಾ ಸಿಬಿಐ ಕೋರ್ಟ್ ಇಂದು ತೀರ್ಪು ಪ್ರಕಟಿಸಲಿದೆ.

    ರೇಪ್ ಬಗ್ಗೆ ಅಂದಿನ ಪ್ರಧಾನಿ ವಾಜಪೇಯಿಗೆ ಪತ್ರ ಬರೆದಿದ್ದ ವ್ಯಕ್ತಿಯನ್ನೇ ಭಕ್ತರು ಗುಂಡಿಟ್ಟು ಕೊಂದಿದ್ದರು. ಇನ್ನು ಇದೇ ರಾಮ್ ರಹೀಂ ಬಾಬಾ ಈ ಹಿಂದೆ ವಿರಾಟ್ ಕೊಹ್ಲಿ, ಬಾಕ್ಸಿಂಗ್ ಪಟು ವಿಜೇಂದರ್‍ಗೂ ನಾನೇ ಟ್ರೇನಿಂಗ್ ಕೊಟ್ಟಿದ್ದೆ ಅಂತ ಹೇಳಿದ್ದರು. ವೀಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂದ ಹಾಗೇ ಒಮ್ಮೆ ವಿರಾಟ್ ಕೊಹ್ಲಿ ಮತ್ತು ಆಶೀಶ್ ನೆಹ್ರಾ ಈ ಬಾಬಾರನ್ನ ಭೇಟಿ ಕೂಡ ಮಾಡಿದ್ದರು.

    ಏನಿದು ದೇರಾ ಸಚ್ಛಾ ಸೌಧ?: ರಕ್ತದಾನ, ಮಾದಕ ದ್ರವ್ಯ ತಡೆ, ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ಸಾಮಾಜಿಕ ಸೇವೆ ಮಾಡುತ್ತಿದ್ದ ಇವರು, ದೇರಾ ಸಚ್ಛಾ ಸೌಧ ಎಂಬ ಅತೀ ದೊಡ್ಡ ರಕ್ತದಾನಿ ಸಂಸ್ಥೆಯನ್ನು ಆರಂಭಿಸಿದ್ದರು. ದೇರಾ ಸಚ್ಛಾ ಸೌಧ ಬರೋಬ್ಬರಿ 6 ಕೋಟಿ ಭಕ್ತರಿರುವ ಆಧ್ಯಾತ್ಮಿಕ ಮತ್ತು ಸೇವಾ ಸಂಸ್ಥೆಯಾಗಿದ್ದು, ಇದು ಹರಿಯಾಣದ ಸಿರ್ಸಾದಲ್ಲಿದೆ. ಆಗಸ್ಟ್ 29, 1948ರಂದು ಬೇಪರವ ಮಸ್ತಾನಜೀ ಮಹಾರಾಜ್‍ರಿಂದ ಈ ಸಂಸ್ಥೆ ಸ್ಥಾಪನೆಯಾಗಿದೆ. ಅಮೆರಿಕ, ಕೆನಡಾ, ಯುಎಇ, ಬ್ರಿಟನ್, ಆಸ್ಟ್ರೇಲಿಯಾದಲ್ಲೂ ಆಶ್ರಮಗಳ ಸ್ಥಾಪನೆಯಾಗಿದೆ. ಹರಿಯಾಣ, ಪಂಜಾಬ್, ರಾಜಸ್ಥಾನ, ಜಮ್ಮು, ದೆಹಲಿಯಲ್ಲಿ ಧಾರ್ಮಿಕ, ರಾಜಕೀಯ, ಸಾಮಾಜಿಕ ಪ್ರಭಾವ ಬೀರಿದೆ. ಇಷ್ಟೇ ಅಲ್ಲ ಕರ್ನಾಟಕದ ಮೈಸೂರಿನಲ್ಲೂ ಕೂಡ ದೇರಾ ಆಶ್ರಮ ಇದೆ. 2016ರ ಆಕ್ಟೋಬರ್‍ನಲ್ಲಿ ಕಟ್ಟಡ ನೆಲಸಮಕ್ಕೆ ಶಿಫಾರಸ್ಸು ಮಾಡಲಾಗಿತ್ತು.

    ಯಾರು ಈ ದೇವಮಾನವ?: 1990ರಲ್ಲಿ ದೇರಾ ಸಚ್ಛಾ ಸೌಧದ ಪೀಠವೇರಿದ ಸ್ವಯಂಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಂ ಸಿಂಗ್, `ಸಂತ ಡಾ. ಎಸ್‍ಎಂಜಿ’ (ದೇವರ ಸಂದೇಶಕಾರ) ಎಂದೇ ಕರೆಸಿಕೊಂಡಿದ್ದರು. ಹಾಡುವುದು, ಕುಣಿಯುವುದು, ಸಿನಿಮಾ ನಟನೆ, ನಿರ್ದೇಶನ, ಸಂಗೀತಗಾರ ಹೀಗೆ ಸಕಲ ಕಲಾವಲ್ಲಭ ಸ್ವಾಮೀಜಿ ಪಾಪ್ ಸಂಗೀತಗಾರರಂತೆ ಚಿತ್ರ-ವಿಚಿತ್ರ ಬಟ್ಟೆಗಳನ್ನು ಧರಿಸಿ, ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದರು. ತನ್ನನ್ನು ತಾನು ದೇವರ ಅವತಾರೆಂದು ಬಿಂಬಿಸಿಕೊಂಡಿರುವ ಗುರ್ಮಿತ್ ಸಿಂಗ್ `ಎಸ್‍ಎಂಜಿ’ ಚಿತ್ರದ ನಿರ್ದೇಶನ ಕೂಡ ಮಾಡಿದ್ದರು.

    2015ರಲ್ಲಿ ರಿಲೀಸ್ ಆದ ಸಿನಿಮಾಕ್ಕೆ ತಾನೇ ಡೈರೆಕ್ಟರ್, ಕಥೆ, ಸಂಭಾಷಣೆ, ಸಂಗೀತ, ಕುಣಿತ ಎಲ್ಲವೂ ಆಗಿದ್ದರು. ವಿವಾದಕ್ಕೊಳಗಾದ ಈ ಸಿನಿಮಾವನ್ನು ಕರ್ನಾಟಕದ ಕೆಲವು ಭಾಗಗಳಲ್ಲೂ ಶೂಟ್ ಮಾಡಲಾಗಿತ್ತು. ಯೂಟ್ಯೂಬ್‍ನಲ್ಲಿ ಟ್ರೇಲರ್ ರಿಲೀಸ್ ಆದ ಬಳಿಕ 24 ಗಂಟೆಗಳಲ್ಲಿ 10 ಲಕ್ಷ ಮಂದಿ ವೀಕ್ಷಿಸಿದ್ದರು. `ರು-ಬಾ-ರು ನೈಟ್ಸ್’ ಹೆಸರಲ್ಲಿ ಪಾಪ್ ಸಂಗೀತಗಾರರಂತೆ ಆಲ್ಬಂ ಲೈವ್ ಶೋಗಳ ಖಯಾಲಿ ಇವರಿಗಿತ್ತು. ಇವರ `ಹೈವೇ ಲವ್ ಚಾರ್ಜರ್’ ಆಲ್ಬಂನ 30 ಲಕ್ಷ ಪ್ರತಿಗಳು 3 ದಿನಗಳಲ್ಲಿ ಸೇಲಾಗಿತ್ತು.