Tag: Chandanavana

  • 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್

    5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಾಧಿಕಾ-ಯಶ್

    ಬೆಂಗಳೂರು: ಚಂದನವನದ ರಾಕಿಂಗ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಇಂದು 5ನೇ ವರ್ಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

    ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ರಾಧಿಕಾ ಅವರು ಇನ್‍ಸ್ಟಾಗ್ರಾಮ್ ನಲ್ಲಿ ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಬರೆದು, ಯಶ್ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಸಾಲಿನಲ್ಲಿ, ಯಾರಾದರೂ ನಿಮ್ಮನ್ನು ನೀವು ಉತ್ತಮಗೊಳ್ಳುವಂತೆ ಮಾಡುವ ಪ್ರೀತಿಯಲ್ಲಿ ಮತ್ತು ಜೀವನದಲ್ಲಿ ನಿಮ್ಮನ್ನು ಪ್ರೇರೇಪಿಸುವ, ಪ್ರೋತ್ಸಾಹಿಸುವ, ನೀವು ನಿರ್ಲಕ್ಷಿಸುವ ಕನಸುಗಳು ಮತ್ತು ಗುರಿಗಳ ಕಡೆಗೆ ನಿಮ್ಮನ್ನು ಮತ್ತೆ ತಳ್ಳುವವರು, ಯಾವುದೇ ಅಪೇಕ್ಷೆಗಳಿಲ್ಲದೆ ನಿಸ್ವಾರ್ಥವಾಗಿ ಅವರ ಸಮಯವನ್ನು ನಿಮಗಾಗಿ ತ್ಯಾಗ ಮಾಡುವವರು ನಿಮ್ಮ ಜೀವನದಲ್ಲಿ ಇದ್ದರೆ, ನೀವು ಧೈರ್ಯಶಾಲಿ, ಸುಸಜ್ಜಿತ ಸಂತೋಷದ ವ್ಯಕ್ತಿಯಾಗಲು ಸಹಾಯ ಮಾಡುತ್ತೆ. ಅಂತಹ ಸಂಬಂಧ ಪವಿತ್ರವಾದದ್ದು, ಅಂತಹ ಪ್ರೀತಿಯನ್ನು ನೀವು ಹಿಡಿದುಕೊಳ್ಳಿ ಎಂದು ಬರೆದು ಯಶ್‍ಗೆ ಮದುವೆ ವಾರ್ಷಿಕೋತ್ಸವದ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಐರಾಗೆ ಹುಟ್ಟುಹಬ್ಬದ ಸಂಭ್ರಮ – ನಿನ್ನ ಕೈ ಹಿಡಿಯಲು ಯಾವಾಗಲೂ ಇರುತ್ತೇನೆ ಅಂದ ರಾಧಿಕಾ

     

    View this post on Instagram

     

    A post shared by Radhika Pandit (@iamradhikapandit)

    ಇನ್‍ಸ್ಟಾದಲ್ಲಿ ರಾಧಿಕಾ, ಯಶ್ ಜೊತೆಗೆ ಬೀಚ್ ನಲ್ಲಿ ಕೈಹಿಡಿದುಕೊಂಡು ಕುಳಿತುಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದು, ಬ್ಯೂ ಟ್ಯಾಪ್ಲಿನ್ ಬರೆದ ಸಾಲುಗಳನ್ನು ಯಶ್ ಗೆ ಅರ್ಪಿಸಿದ್ದಾರೆ. ಈ ಸಾಲುಗಳ ಮೂಲಕ ಯಶ್ ನನಗೆ ಎಷ್ಟು ಪರ್ಫೆಕ್ಟ್ ಜೋಡಿ ಎಂದು ಹೇಳಿದ್ದಾರೆ.

    ಈ ಜೋಡಿ ಚಂದನವನದ ರಾಕಿಂಗ್ ಜೋಡಿಯಾಗಿದ್ದು, ಇವರ ಕುಟುಂಬ ಎಲ್ಲರಿಗೂ ಆಕರ್ಷಣೆಯ ಕೇಂದ್ರವಾಗಿರುತ್ತೆ. ಇವರ ಪ್ರತಿಯೊಂದು ಅಪ್ಡೇಟ್ ಗಳನ್ನು ಅಭಿಮಾನಿಗಳು ಕೇಳಲು ಕಾತುರದಿಂದ ಕಾಯುತ್ತಿರುತ್ತಾರೆ. ಈ ಜೋಡಿ ಸಿನಿಮಾದಲ್ಲಿಯೂ ಸೂಪರ್ ಹಿಟ್ ಆಗಿದ್ದು, ನಿಜ ಜೀವನದಲ್ಲಿಯೂ ವೈಯಕ್ತಿಕ ಜೀವನದ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿರುತ್ತಾರೆ. ಇದನ್ನೂ ಓದಿ: ಓಟದ ಮೂಲಕ ಅಪ್ಪು ಸಮಾಧಿಗೆ ಹೊರಟ ಮಹಿಳೆಯ ಆರೋಗ್ಯ ವಿಚಾರಿಸಿದ್ರು ರಾಘಣ್ಣ

    ಈ ಜೋಡಿ 2016ರ ಡಿಸೆಂಬರ್ 9 ರಂದು ವಿವಾಹವಾಗಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರ್ ನಲ್ಲಿ ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ‘ಐರಾ’ ಎಂದು ಹೆಸರಿಟ್ಟರು. ನಂತರ 2019 ರಲ್ಲಿ ಗಂಡು ಮಗು ಜನಿಸಿದ್ದು, ಆ ಮಗುವಿಗೆ ‘ಯಥರ್ವ್’ ಎಂದು ಹೆಸರಿಟ್ಟಿದ್ದಾರೆ. ಈ ಸ್ಟಾರ್ ಜೋಡಿಗಳಂತೆ ಇವರ ಮಕ್ಕಳು ಸ್ಟಾರ್ ಆಗಿದ್ದು, ಇವರಿಬ್ಬರಿಗೂ ಅಭಿಮಾನಿ ಬಳಗವಿದೆ.

  • ಹೊಸ ಇತಿಹಾಸ ಸೃಷ್ಟಿಸಿದ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರ

    ಹೊಸ ಇತಿಹಾಸ ಸೃಷ್ಟಿಸಿದ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಚಿತ್ರ

    ಬೆಂಗಳೂರು: ಚಂದನವನದ ಹೆಸರಾಂತ ನಿರ್ದೇಶಕ ಜಯತೀರ್ಥ ನಿರ್ದೇಶನದ ‘ಬನಾರಸ್’ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸೆಟ್ಟೇರಿದ ದಿನದಿಂದ ಸಖತ್ ಟಾಕ್ ಕ್ರಿಯೇಟ್ ಮಾಡಿದೆ.

    ಹಲವಾರು ವಿಶೇಷತೆ ಒಳಗೊಂಡಿರುವ ಈ ಚಿತ್ರದಲ್ಲಿ ಶಾಸಕ ಜಮೀರ್ ಅಹಮ್ಮದ್ ಖಾನ್ ಪುತ್ರ ಝೈದ್ ಖಾನ್ ನಾಯಕ ನಟನಾಗಿ ಸ್ಯಾಂಡಲ್‍ವುಡ್ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಲವರ್ ಬಾಯ್ ಆಗಿ ಮಿಂಚಲಿರೋ ಝೈದ್ ಖಾನ್ ಜೊತೆ ಕರಾವಳಿ ಬೆಡಗಿ ಸೊನಲ್ ಮೊಂಥೆರೋ ತೆರೆ ಹಂಚಿಕೊಂಡಿದ್ದಾರೆ.

    ಬಿಡುಗಡೆಯ ಆಸುಪಾಸಿನಲ್ಲಿರುವ ಸಿನಿಮಾ ಸಖತ್ ಸುದ್ದಿಯಲ್ಲಿದ್ದು, ಸಂಭ್ರಮದಲ್ಲಿದೆ. ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಇದಕ್ಕೆ ಕಾರಣ ‘ಬನಾರಸ್’ ಚಿತ್ರದ ಆಡಿಯೋ ರೈಟ್ಸ್. ಹೌದು, ‘ಬನಾರಸ್’ ಚಿತ್ರದ ಆಡಿಯೋ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟವಾಗಿರೋದೆ ಈ ಸಂಭ್ರಮಕ್ಕೆ ಕಾರಣವಾಗಿದೆ. ದೇಶದ ಅತ್ಯುನ್ನತ ಆಡಿಯೋ ಕಂಪನಿ ಲಹರಿ ಸಂಸ್ಥೆ ಹಾಗೂ ಟಿ-ಸೀರೀಸ್ ಜಂಟಿಯಾಗಿ ಚಿತ್ರದ ಆಡಿಯೋ ರೈಟ್ಸ್ ಬರೋಬ್ಬರಿ 3.5 ಕೋಟಿ ರೂ. ದಾಖಲೆ ಮೊತ್ತ ಕೊಟ್ಟು ಖರೀದಿಸಿದೆ. ಇದನ್ನೂ ಓದಿ: ರಿಲ್ಯಾಕ್ಸ್ ಮೂಡ್​ನಲ್ಲಿರುವ ಹೇಮ ಮಾಲಿನಿ, ಧರ್ಮೇಂದ್ರ

    ಭಾರೀ ಮೊತ್ತಕ್ಕೆ ಆಡಿಯೋ ರೈಟ್ಸ್ ಸೇಲಾಗಿದೆ. ಈ ವಿಷಯ ಒಂದು ಕಡೆಯಾದ್ರೆ, ಯುವ ನಟನೊಬ್ಬ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಿನಿಮಾವೊಂದರ ಆಡಿಯೋ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿದ್ದು, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇದೇ ಮೊದಲು ಅನ್ನೋದು ವಿಶೇಷ ಸಂಗತಿಯಾಗಿದೆ.

    ಚಿತ್ರತಂಡ ಈ ಖುಷಿಯ ಸಂಭ್ರಮದಲ್ಲಿದ್ದು, ಚಿತ್ರ ಬಿಡುಗಡೆಗೂ ತಯಾರಿ ನಡೆಸುತ್ತಿದೆ. ‘ಬನಾರಸ್’ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ವಿಭಿನ್ನ ಹಾಗೂ ನವಿರಾದ ಪ್ರೇಮಕಥೆ ಚಿತ್ರದಲ್ಲಿದೆ. ಚಿತ್ರದಲ್ಲಿ ಝೈದ್ ಖಾನ್, ಸೊನೆಲ್ ಮೊಂಥೆರೋ ಜೋಡಿ ಲವ್ ಬಡ್ರ್ಸ್ ಆಗಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಚಿತ್ರೀಕರಣ ಬೆಂಗಳೂರು ಒಳಗೊಂಡಂತೆ ಬಹುತೇಕ ಕಾಶಿಯಲ್ಲೇ ನಡೆದಿರೋದು ಚಿತ್ರದ ಮತ್ತೊಂದು ವಿಶೇಷವಾಗಿದೆ.

    ಚಿತ್ರದಲ್ಲಿ ದೇವರಾಜ್, ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ ಒಳಗೊಂಡಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ‘ಬನಾರಸ್’ ಸಿನಿಮಾ ಮೂಡಿ ಬಂದಿದ್ದು, ಪ್ರೇಮಕಥೆ ಒಳಗೊಂಡ ಈ ಚಿತ್ರದಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ. ಇದನ್ನೂ ಓದಿ: ಗೋವು ಕಳ್ಳರನ್ನು ಬಂಧಿಸಿ – ಶಿವಮೊಗ್ಗದ್ದಲ್ಲಿ ವಿಎಚ್‍ಪಿ, ಭಜರಂಗ ದಳ ಪ್ರತಿಭಟನೆ

    ಅದ್ವೈತ್ ಗುರುಮೂರ್ತಿ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಎನ್.ಕೆ.ಪ್ರೊಡಕ್ಷನ್ಸ್ ಬ್ಯಾನರ್ ನಡಿ ವೈ.ಬಿ.ರೆಡ್ಡಿ ಚಿತ್ರಕ್ಕೆ ಬಂಡವಾಳ ಹೂಡಿ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದು, ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

  • ಹುಟ್ಟುಹಬ್ಬದ ಶುಭಾಶಯಗಳು ಬಿಲ್ – ಮೇಘನಾ ರಾಜ್

    ಹುಟ್ಟುಹಬ್ಬದ ಶುಭಾಶಯಗಳು ಬಿಲ್ – ಮೇಘನಾ ರಾಜ್

    ಬೆಂಗಳೂರು: ಚಂದನವನದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷದ ದಿನದಂದು ಮೈದುನನಿಗೆ ಮೇಘನಾ ವಿಶ್ ಮಾಡಿದ್ದಾರೆ.

    meghana raj

    ಚಂದನವನದ ನಟಿ ಮೇಘನಾ ರಾಜ್ ಧ್ರುವ ಹುಟ್ಟುಹಬ್ಬಕ್ಕೆ ಇನ್‍ಸ್ಟಾ ಸ್ಟೋರಿಯಲ್ಲಿ, ಹುಟ್ಟುಹಬ್ಬದ ಶುಭಾಶಯಗಳು ಬಿಲ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಚಿರು ಮೇಘನಾರನ್ನು ಅಗಲಿದ ನಂತರ, ಮೇಘನಾಗೆ ಒಂದು ಶಕ್ತಿಯಾಗಿ ನಿಂತಿದ್ದು ಧ್ರುವ. ಇವರಿಬ್ಬರು ಅತ್ತಿಗೆ ಮೈದುನ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತರು ಆಗಿದ್ದಾರೆ. ಇವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯವಿದೆ. ಈ ಹಿಂದೆ ಕೆಲವರು ಈ ಬಾಂಧವ್ಯವನ್ನು ಮುರಿದುಹಾಕಲು ಪ್ರಯತ್ನಿಸಿದ್ದರು. ಆದರೆ ಮೇಘನಾ ಮಗನ ನಾಮಕರಣದಲ್ಲಿ ಈ ಕುರಿತು ಸ್ಪಷ್ಟನೆಯನ್ನು ನೀಡಿದ್ದರು. ಇದನ್ನೂ ಓದಿ:  ನಿಮ್ಮ ಪ್ರೋತ್ಸಾಹ, ಬೆಂಬಲ ನನಗೆ ಶ್ರೀರಕ್ಷೆ : ಧ್ರುವ ಸರ್ಜಾ 

    ಮೇಘನಾ ಪ್ರಸ್ತುತ ಮಗ ರಾಯನ್ ರಾಜ್ ಸರ್ಜಾ ಜೊತೆ ಕಾಲ ಕಳೆಯುತ್ತಿದ್ದು, ಮಗನ ಲಾಲನೆ, ಪಾಲನೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:  10 ವರ್ಷದ ಹಿಂದಿನ ಫೋಟೋ ಹಂಚಿಕೊಂಡು ಪತಿಗೆ ಪ್ರೇರಣಾ ವಿಶ್

    ಧ್ರುವ ಈ ಹಿಂದೆ ಇನ್‍ಸ್ಟಾಗ್ರಾಮ್ ನಲ್ಲಿ, ಅಕ್ಟೋಬರ್ 6ರಂದು ನನ್ನ ಹುಟ್ಟುಹಬ್ಬ ಇದೆ. ನಾನು ದೊಡ್ಡ ಸೆಲೆಬ್ರಿಟಿ ಅಲ್ಲ, ಆದರೂ ಈ ಬಾರಿ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಮನಸ್ಸು ನನಗಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದರು. ಈ ಹಿನ್ನೆಲೆ ಇಂದು ಅವರ ಅಭಿಮಾನಿಗಳು ಅವರ ಮಾತಿಗೆ ಬೆಲೆ ಕೊಟ್ಟು ಯಾವುದೇ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಅದು ಅಲ್ಲದೇ ಧ್ರುವ ಇಂದು ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.

  • ಗೆದ್ದು ಬೀಗಿದ ಲೂಸ್ ಮಾದ ಯೋಗಿಯ ‘ಲಂಕೆ’ ಸಿನಿಮಾ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

    ಗೆದ್ದು ಬೀಗಿದ ಲೂಸ್ ಮಾದ ಯೋಗಿಯ ‘ಲಂಕೆ’ ಸಿನಿಮಾ – 25 ದಿನದ ಸಂಭ್ರಮದಲ್ಲಿ ಚಿತ್ರತಂಡ

    ಬೆಂಗಳೂರು: ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ’ ಸಿನಿಮಾ ಥಿಯೇಟರ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಗಣೇಶ ಚತುರ್ಥಿಗೆ ಬಿಡುಗಡೆಯಾದ ಲಂಕೆ ಸಿನಿಮಾ ಭರ್ಜರಿ ಓಪನಿಂಗ್ ಜೊತೆಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ.

    ಬಿಡುಗಡೆಯಾದ ಎಲ್ಲಾ ಭಾಗದಲ್ಲೂ ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡ ಸಿನಿಮಾ ಲೂಸ್ ಮಾದ ಯೋಗಿಗೆ ಭರ್ಜರಿ ಕಂಬ್ಯಾಕ್ ನೀಡಿದೆ. ಬಿಡುಗಡೆಯಾದ ದಿನದಿಂದಲೂ ಹೌಸ್ ಫುಲ್ ಪ್ರದರ್ಶನದೊಂದಿಗೆ ಚಿತ್ರಮಂದಿರಗಳಲ್ಲಿ ‘ಲಂಕೆ’ ಓಟ ಜೋರಾಗಿದ್ದು, ಇದೀಗ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ ಸಂಭ್ರಮದಲ್ಲಿದೆ ಚಿತ್ರತಂಡ.  ಇದನ್ನೂ ಓದಿ:  ಯಾರೂ ನನ್ನನ್ನು ಕೈಹಿಡಿದಿಲ್ಲ: ರಣವೀರ್ ಸಿಂಗ್

    ದಿ ಗ್ರೇಟ್ ಎಂಟಟೈನರ್ಸ್ ಬ್ಯಾನರ್ ನಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿ ತೆರೆಕಂಡ ಸಿನಿಮಾ ‘ಲಂಕೆ’. ಒಂದು ಬಿಗ್ ಕಂಬ್ಯಾಕ್ ಗಾಗಿ ಕಾಯುತ್ತಿದ್ದ ಯೋಗಿಗೆ ಪರ್ಫೆಕ್ಟ್ ಸಿನಿಮಾ ಎಂಬಂತೆ ‘ಲಂಕೆ’ ಮೂಡಿ ಬಂದಿತ್ತು. ರಾಮ್ ಪ್ರಸಾದ್ ಮಾಡಿಕೊಂಡಿದ್ದ ಪಕ್ಕಾ ಔಟ್ ಅಂಡ್ ಔಟ್ ಕಮರ್ಶಿಯಲ್ ಎಳೆಯ ಸಬ್ಜೆಕ್ಟ್ ಕೂಡ ಅಷ್ಟೇ ಥ್ರಿಲ್ಲಿಂಗ್ ಆಗಿತ್ತು. ಮಾಸ್ ಆಕ್ಷನ್ ಡ್ರಾಮಾ ಸಬ್ಜೆಕ್ಟ್ ಯೋಗಿಗೆ ಹೇಳಿ ಮಾಡಿಸಿದಂತಿತ್ತು. ಜೊತೆಗೆ ಸಿನಿಮಾ ಹಾಡುಗಳು, ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಎಲ್ಲದರ ಜುಗಲ್ಬಂದಿ ಚಿತ್ರರಸಿಕರಿಗೆ ಫುಲ್ ಪ್ಯಾಕೇಜ್ ಮನೋರಂಜನೆ ನೀಡಿದೆ. ಗಲ್ಲಾಪೆಟ್ಟಿಗೆಯಲ್ಲೂ ಸೌಂಡ್ ಮಾಡಿದೆ. ಇದೀಗ ನಿರೀಕ್ಷೆಯಂತೆ ಗೆಲುವಿನ ನಗೆ ಬೀರಿ 25 ದಿನಗಳನ್ನು ಯಶ್ವಸಿಯಾಗಿ ಪೂರೈಸಿದೆ ‘ಲಂಕೆ’ ಚಿತ್ರ.

    ಲೂಸ್ ಮಾದ ಯೋಗಿ, ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ, ಸಂಚಾರಿ ವಿಜಯ್ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಘಟಾನುಘಟಿ ಸ್ಟಾರ್ ಕಲಾವಿದರಾದ ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಶೋಭರಾಜ್, ಡ್ಯಾನಿ ಕುಟ್ಟಪ್ಪ ಸೇರಿದಂತೆ ಹಲವು ಕಲಾವಿದರು ಅಮೋಘ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:  ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಹೃತಿಕ್ ಮಾಜಿ ಪತ್ನಿ, ಮಿಕಾ ಸಿಂಗ್!

    ಕಾರ್ತಿಕ್ ಶರ್ಮಾ ಸಂಗೀತ, ರಮೇಶ್ ಬಾಬು ಕ್ಯಾಮೆರಾ ವರ್ಕ್ ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಒಟ್ನಲ್ಲಿ, ಪ್ರೇಕ್ಷಕರಿಗೆ ಮನರಂಜನೇ ನೀಡೋದ್ರ ಜೊತೆಗೆ ಗಲ್ಲಾಪೆಟ್ಟಿಗೆಯಲ್ಲೂ ಒಳ್ಳೆ ಕಲೆಕ್ಷನ್ ಮಾಡಿದೆ ಲಂಕೆ.

  • ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್

    ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್

    ಬೆಂಗಳೂರು: ನಿಮ್ಮ ವಯಸ್ಸಿಗೆ ನಾನು ಬಂದಾಗ ಹೀಗೇ ಇರಲು ಸಾಧ್ಯನಾ ಎಂದು ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ತನ್ನ ತಾಯಿಯನ್ನು ಪ್ರಶ್ನಿಸಿ ಹಾಡಿ ಹೊಗಳಿದ್ದಾರೆ.

     

    View this post on Instagram

     

    A post shared by Radhika Pandit (@iamradhikapandit)

    ರಾಧಿಕಾ ಸಿನಿಮಾ ಕ್ಷೇತ್ರಕ್ಕೆ ಬ್ರೇಕ್ ಕೊಟ್ಟು ಈಗ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದಾರೆ. ಇಂದು ಅವರು ತಮ್ಮ ತಾಯಿ ಜೊತೆಗಿನ ಫೋಟೋವನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಾಕಿ, ನನ್ನ ಅಮ್ಮ ಏನು ಮಾಡುತ್ತಾರೆ. ಮನೆಯನ್ನು ಹೇಗೆ ನಿರ್ವಹಿಸುತ್ತರೆ ಎಂದು ನಾನು ಆಗಾಗ ಆಶ್ಚರ್ಯ ಪಡುತ್ತೇನೆ. ಎಲ್ಲಾ ಮನೆಯ ಕೆಲಸ, ಅಡುಗೆ, ನನ್ನ ಮಕ್ಕಳನ್ನು ಮಾತ್ರವಲ್ಲದೆ ನಾನು ಮತ್ತು ನನ್ನ ತಂದೆಯನ್ನೂ ಸಹ ನೋಡಿಕೊಳ್ಳುತ್ತರೆ. ಇಷ್ಟು ಕೆಲಸ ಅಲ್ಲದೇ ಬೇರೆ ಕೆಲಸವನ್ನು ಮಾಡಲು ಶಕ್ತಿಯನ್ನು ಹೊಂದಿರುತ್ತಾರೆ. ಆ ವಯಸ್ಸಿನಲ್ಲಿ ನಾನು ಅವರಂತೆ ಇರಬಹುದೇ? ಅದು ಅನುಮಾನ. ನನ್ನ ಸೂಪರ್ ವುಮೆನ್, ನನ್ನ ಅಮ್ಮ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್

    ರಾಧಿಕಾ ಸಿನಿಮಾಗಳಿಂದ ದೂರ ಉಳಿದಿದ್ದರೂ ಅಭಿಮಾನಿಗಳಿಂದ ಮಾತ್ರ ದೂರವಾಗಿಲ್ಲ. ಅವರು ತಮ್ಮ ಎಲ್ಲ ಅಪ್ಟೇಡ್‍ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದು, ಅಭಿಮಾನಿಗಳಿಗೆ ಸ್ಪಂದಿಸುತ್ತಿರುತ್ತಾರೆ. ಐರಾ ಮತ್ತು ಯಥರ್ವ್ ಆಟ, ತಮ್ಮ ಮನೆಯಲ್ಲಿ ನಡೆಯುವ ವಿಶೇಷ ಘಟನೆಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದನ್ನೂ ಓದಿ: ಅಂಗಾಂಗಗಳನ್ನು ದಾನ ಮಾಡಿ – ಡೆತ್‍ನೋಟ್ ಬರೆದು ಉಡುಪಿಯ ಬಿಜೆಪಿ ನಾಯಕಿ ಆತ್ಮಹತ್ಯೆ

     

    View this post on Instagram

     

    A post shared by Radhika Pandit (@iamradhikapandit)

    ಇತ್ತೀಚೆಗೆ ತಮ್ಮ ಮಕ್ಕಳು ಗಣೇಶನ ಹಬ್ಬದಲ್ಲಿ ಮಾಡಿದ ತುಂಟಾಂಟಗಳನ್ನು ಹಾಕಿದ್ದು, ಇದಕ್ಕೆ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಅದು ಮಾತ್ರವಲ್ಲ ಐರಾ ಮತ್ತು ಯಥರ್ವ್‍ಗೆ ಅಭಿಮಾನಿಗಳು ಆಗಿದ್ದಾರೆ. ಇದನ್ನೂ ಓದಿ: ರೌಡಿಶೀಟರ್​ನಿಂದ ಪಾನ್ ಶಾಪ್ ಮಾಲೀಕನ ಬರ್ಬರ ಹತ್ಯೆ