Tag: Chandanavan

  • ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್: ದರ್ಶನ್-ರಕ್ಷಿತ್ ಸಿನಿಮಾ ಮಧ್ಯೆ ಪೈಪೋಟಿ

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್: ದರ್ಶನ್-ರಕ್ಷಿತ್ ಸಿನಿಮಾ ಮಧ್ಯೆ ಪೈಪೋಟಿ

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ (Chandanavan, Film, Critics, Award)  5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟಿ ಅಮೂಲ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ ಆಯ್ಕೆಗಳನ್ನು ಘೋಷಣೆ ಮಾಡಿದ್ದು ದರ್ಶನ್ ನಟನೆಯ ಕಾಟೇರ ಚಿತ್ರವು ಅತೀ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ರಕ್ಷಿತ್ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಅತ್ಯುತ್ತಮ ನಟ (ದರ್ಶನ್) ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಸೇರಿದಂತೆ ಕಾಟೇರ ಸಿನಿಮಾ ಬರೋಬ್ಬರಿ 15 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ) ಸೇರಿದಂತೆ ಸಪ್ತಸಾಗರದಾಚೆ ಎಲ್ಲೋ 13 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ.

    ಐದು ಚೊಚ್ಚಲ ಪ್ರಶಸ್ತಿಗಳು ಸೇರಿದಂತೆ ಒಟ್ಟು 25 ವಿಭಾಗಗಳಲ್ಲಿ ಈ ನಾಮ ನಿರ್ದೇಶನಗೊಂಡಿದ್ದು, ಚೊಚ್ಚಲ ವಿಭಾಗದಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಡೇರ್ ಡೆವಿಲ್ ಮುಸ್ತಫಾ, ಆಚಾರ್ ಅಂಡ್ ಕೋ ಚಿತ್ರಗಳು ಕೂಡ ನಾನಾ ವಿಭಾಗಗಳಲ್ಲಿ ಕಾಣಿಸಿಕೊಂಡು ಪೈಪೋಟಿ ನಡೆಸಿವೆ. ಟ್ರೋಫಿ ಅನಾವರಣಗೊಳಿಸಿ ಮಾತನಾಡಿದ ಇಂದ್ರಜಿತ್ ಲಂಕೇಶ್, ನಾನೂ ಒಬ್ಬ ಪತ್ರಕರ್ತನಾಗಿ ಅಕಾಡಮಿ ಮತ್ತು ವಿಮರ್ಶಕರ ಪ್ರಶಸ್ತಿಗಳು ನಿಷ್ಪಕ್ಷಪಾತವಾಗಿ ಮತ್ತು ವಿಶ್ವಾಸ ಮೂಡಿಸುವಂತಹ ಆಯ್ಕೆಗಳು ಆಗಿವೆ. ಈ ಕುರಿತು ನನಗೆ ಹೆಮ್ಮೆ ಅನಿಸುತ್ತದೆ. ಕನ್ನಡದ ಅತ್ಯುತ್ತಮ ಮನರಂಜನೆಯನ್ನು ಗುರುತಿಸುವಲ್ಲಿ ಮತ್ತು ಚಿತ್ರೋದ್ಯಮವನ್ನು ಉತ್ತೇಜಿಸಲು ಚಲನಚಿತ್ರ ಪತ್ರಕರ್ತರು ಪ್ರಶಸ್ತಿಯನ್ನು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲ್ಯಾಘಿಸಿದರು.

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ಅಂದರೆ, ಅದೊಂದು ದೊಡ್ಡ ಗೌರವ. ಟೀಕಿಸುವ ಪತ್ರಕರ್ತರೇ ಮೆಚ್ಚಿ ಪ್ರಶಸ್ತಿ ಕೊಡುವಾಗ ಆಗುವ ಖುಷಿಯೇ ಬೇರೆ. ನಾಮ ನಿರ್ದೇಶನಗೊಂಡ ಎಲ್ಲರಿಗೂ ಮತ್ತು ಪ್ರಶಸ್ತಿ ಪಡೆಯುವ ಪ್ರತಿಯೊಬ್ಬರಿಗೂ ಶುಭಾಶಯಗಳು ಎಂದರು ನಟಿ ಅಮೂಲ್ಯ.  ಅಕಾಡೆಮಿಯು ಪ್ರಶಸ್ತಿಗಳನ್ನು ನೀಡುವುದರ ಜೊತೆ ಪ್ರಶಸ್ತಿ ಪ್ರತಿ ವರ್ಷವೂ ಸಮಾಜಮುಖಿ ಕೆಲಸಗಳನ್ನು ಉತ್ತೇಜಿಸುವಂತಹ ಕೆಲಸಕ್ಕೆ ಮುಂದಾಗಿದ್ದು ಗೊತ್ತೇ ಇದೆ. ಈ ಬಾರಿ ಕರ್ನಾಟಕ ಸರಕಾರದ ಆರೋಗ್ಯ ಇಲಾಖೆಯ ಜೊತೆ ಅಂಗಾಂಗ ದಾನ ಅಭಿಯಾನಕ್ಕೆ ಕೈ ಜೋಡಿಸಿದೆ. ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ನಮ್ಮ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ, ಮಾತನಾಡಿದ್ದಾರೆ.

    ಅಂಗಾಂಗ ದಾನ ಅಭಿಯಾನಕ್ಕೆ ಅಕಾಡಮಿ ಜೊತೆ ಬೆಂಗಳೂರಿನ ಕಾವೇರಿ ಆಸ್ಪತ್ರೆ ಕೂಡ ಜೊತೆಯಾಗಿದ್ದು, ಈ ಕುರಿತಂತೆ ಮಾತನಾಡಿದ ಆಸ್ಪತ್ರೆಯ ಉಪಾಧ್ಯಕ್ಷ ವೆಲ್ ಫ್ರೆಡ್ ಸ್ಯಾಮ್ಸನ್, ‘ಅಂಗಾಂಗ ದಾನ ಪ್ರಚಾರಕ್ಕೆ ಚಿತ್ರೋದ್ಯಮದ ಕೊಡುಗೆ ಅಪಾರ. ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಕಣ್ಣುದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಪ್ರೇರಣೆ ನೀಡಿದ್ದಾರೆ. ಸಂಚಾರಿ ವಿಜಯ್ ಅವರು ಅಂಗಾಂಗ ದಾನ ಮಾಡಿದ್ದರೆ, ಲೋಕೇಶ್ ಹಾಗೂ ಲೋಹಿತಾಶ್ವ ಅವರು ದೇಹದಾನ ಮಾಡಿದ್ದಾರೆ. ಇಂತಹ ಉದ್ಯಮಕ್ಕೆ ಬೆಂಬಲವಾಗಿ ನಿಂತಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ ಕಾರ್ಯಕ್ರಮಕ್ಕೆ ನಾವು ಭಾಗವಾಗಿದ್ದು ಹೆಮ್ಮೆ ಅನಿಸುತ್ತದೆ ಎಂದರು.

    ನಟ ಶರಣ್ ನಾಮ ನಿರ್ದೇಶನದ ಪಟ್ಟಿಯನ್ನು ಬಿಡುಗಡೆ ಮಾಡಿ, ವಿಮರ್ಶಕರು ನೀಡುವ ಪ್ರಶಸ್ತಿ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಹೆಮ್ಮೆ ತಂದಿದೆ ಎಂದರು. ಪ್ರತಿ ವರ್ಷದಂತೆ ಈ ಬಾರಿಯೂ ಅಚ್ಚರಿ ಹೆಸರುಗಳು ನಾಮ ನಿರ್ದೇಶನ ಪಟ್ಟಿಯಲ್ಲಿದ್ದು, ಜನವರಿ 28 ರವಿವಾರದಂದು ಸಂಜೆ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

    ಅತ್ಯುತ್ತಮ ಚೊಚ್ಚಲ ನಿರ್ಮಾಣ ~ Dr ಪುನೀತ್ ರಾಜಕುಮಾರ್ ಪ್ರಶಸ್ತಿ

    ೧. ಸ್ವಾತಿ ಮುತ್ತಿನ ಮಳೆ ಹನಿಯೇ (ರಮ್ಯ – ಆಪಲ್ ಬಾಕ್ಸ್ ಸ್ಟುಡಿಯೋಸ್)

    ೨. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ (ವರುಣ್ ಸ್ಟುಡಿಯೋಸ್)

    ೩. ಡೇರ್‌ಡೆವಿಲ್ ಮುಸ್ತಫಾ (ಸಿನೆಮಾ  ಮರ)

    ೪. ಸೌತ್ ಇಂಡಿಯನ್ ಹೀರೋ (ಶಿಲ್ಪಾ ಎಲ್.ಎಸ್)

    ೫. ಮಂಡಲ (ಅಜಯ್ ಸರ್ಪೆಷ್ಕರ್)

    ಅತ್ಯುತ್ತಮ ಚೊಚ್ಚಲ ನಟಿ ~ ತ್ರಿಪುರಾಂಬ ಅವಾರ್ಡ್

    ೧. ಆರಾಧನಾ ರಾಮ್ (ಕಾಟೇರ)

    ೨. ನಿರೀಕ್ಷಾ ರಾವ್ (ರಾಜಯೋಗ)

    ೩. ಅಮೃತಾ ಪ್ರೇಮ್ (ಟಗರು ಪಲ್ಯ)

    ೪. ಚೈತ್ರ ಹೆಚ್.ಜಿ (ಮಾವು ಬೇವು)

    ೫. ಪ್ರೀತಿಕ ದೇಶಪಾಂಡೆ (ಪೆಂಟಗನ್)

    ಅತ್ಯುತ್ತಮ ಚೊಚ್ಚಲ ನಟ ~ ಸಂಚಾರಿ ವಿಜಯ್ ಪ್ರಶಸ್ತಿ

    ೧. ಶಿಶಿರ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ)

    ೨. ರಾಜೇಶ್ ಧ್ರುವ ( ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ)

    ೩. ಶಿವಣ್ಣ ಬೀರುಹುಂಡಿ (ದೊಡ್ಡಹಟ್ಟಿ ಬೋರೇಗೌಡ)

    ೪. ಕಿರಣ್ ನಾರಾಯಣ್ (ಸ್ನೇಹಶ್ರೀ)

    ೫. ಸಾರ್ಥಕ್ (ಸೌತ್ ಇಂಡಿಯನ್ ಹೀರೋ)

    ಅತ್ಯುತ್ತಮ ಚೊಚ್ಚಲ ಬರಹಗಾರ ~ ಚಿ ಉದಯಶಂಕರ್ ಪ್ರಶಸ್ತಿ

    ೧. ರಾಮೇನಹಳ್ಳೀ ಜಗನ್ನಾಥ್ (ಹೊಂದಿಸಿ ಬರೆಯಿರಿ)

    ೨.  ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)

    ೩. ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಅಂಡ್ ಕೋ)

    ೪. ಉಮೇಶ್ ಕೃಪಾ (ಟಗರು ಪಲ್ಯ)

    ೫. ಅಜಯ್ ಸರ್ಪೆಶ್ಕರ್ (ಮಂಡಲ)

    ಅತ್ಯುತ್ತಮ ಚೊಚ್ಚಲ ನಿರ್ದೇಶನ ಶಂಕರ್ ನಾಗ್ ಅವಾರ್ಡ್

    ೧. ಸಿಂಧು ಶ್ರೀನಿವಾಸಮೂರ್ತಿ (ಆಚಾರ್ ಅಂಡ್ ಕೋ)

    ೨. ನಿತಿನ್ ಕೃಷ್ಣಮೂರ್ತಿ (ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ)

    ೩. ಶಶಾಂಕ್ ಸೋಗಲ್ (ಡೇರ್ ಡೆವಿಲ್ ಮುಸ್ತಾಫಾ)

    ೪. ದೇವೇಂದ್ರ ಬಡಿಗೇರ್ (ರುದ್ರಿ)

    ೫. ಉಮೇಶ್ ಕೃಪಾ (ಟಗರು ಪಲ್ಯ)

    ಅತ್ಯುತ್ತಮ ವಿಎಫ್‍್ಎಕ್ಸ್

    1. ಸಪ್ತಸಾಗರದಾಚೆ ಎಲ್ಲೋ (ಎಮತ್ತುಬಿ) ಪಿಂಕ್ ಸ್ಟುಡಿಯೋಸ್ – ರಾಹುಲ್ ವಿ. ಗೋಪಾಲಕೃಷ್ಣ
    1. ಕಬ್ಜ – ಯೂನಿಫೈ ಮೀಡಿಯಾ
    1. ಗುರುದೇವ್ ಹೊಯ್ಸಳ – ಡಿಜಿಟಲ್ ಟರ್ಬೋ ಮೀಡಿಯಾ, ಖುಷ್
    1. ಕಾಟೇರ – ಗಗನ್ ಅಜೈ
    1. ಘೋಸ್ಟ್ – ಆಸೋ ಸ್ಟುಡಿಯೋಸ್ (ಟೆಹರನ್), ಮೊಹಮ್ಮದ್ ಅಬ್ಡಿ

    ಅತ್ಯುತ್ತಮ ಕಲಾ ನಿರ್ದೇಶನ

    1. ಕಬ್ಜ, ಶಿವಕುಮಾರ್ ಜೆ
    1. ಸಪ್ತ ಸಾಗರದಾಚೆ ಎಲ್ಲೋ (ಎ ಮತ್ತು ಬಿ) ಉಲ್ಲಾಸ್ ಹೈದರ್)
    1. ಕಾಟೇರ – ಗುಣ
    1. ಘೋಸ್ಟ್ – ಮೋಹನ್ ಬಿ ಕೆರೆ
    1. ಕೈವ – ಧರಣಿ ಗಂಗೆಪುತ್ರ

    ಅತ್ಯುತ್ತಮ ಸಾಹಸ ನಿರ್ದೇಶನ

    1. ಸಪ್ತ ಸಾಗರದಾಚೆ ಎಲ್ಲೋ (ಬಿಸೈಡ್) ಚೇತನ್ ಡಿಸೋಜಾ, ವಿಕ್ರಮ್ ಮೋರ್
    1. ಗುರುದೇವ್ ಹೊಯ್ಸಳ – ದಿಲೀಪ್ ಸುಬ್ರಮಣ್ಯ, ಅರ್ಜುನ್ ರಾಜ್
    1. ಕಬ್ಜ – ರವಿ ವರ್ಮಾ, ವಿಕ್ರಮ್ ಮೋರ್
    1. ಕೈವ – ಅರ್ಜುನ್ ರಾಜ್, ಡಿಫರೆಂಟ್ ಡ್ಯಾನಿ
    1. ಕಾಟೇರ –ರಾಮ್ ಲಕ್ಷ್ಮಣ

    ಅತ್ಯುತ್ತಮ ಛಾಯಾಗ್ರಹಣ

    1. ಸಪ್ತ ಸಾಗರದಾಚೆ ಎಲ್ಲೋ ( ಸೈಡ್ ಬಿ) ಅದ್ವೈತ ಗುರುಮೂರ್ತಿ
    1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಅರವಿಂದ್ ಕಶ್ಯಪ್
    1. ಸ್ವಾತಿ ಮುತ್ತಿನ ಮಳೆ ಹನಿಯೇ – ಪ್ರವೀಣ್ ಶ್ರೀಯಾನ್
    1. ಘೋಸ್ಟ್ _ ಮಹೇಂದ್ರ ಸಿಂಹ
    1. ಕಾಟೇರ – ಸುಧಾಕರ್ ಎಸ್. ರಾಜ್

     ಅತ್ಯುತ್ತಮ ಸಂಕಲನ

    1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಸುರೇಶ್ ಎಮ್.
    1. ಘೋಸ್ಟ್ – ದೀಪು ಎಸ್ ಕುಮಾರ್
    1. ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ್
    1. ಕಾಟೇರ – ಕೆ.ಎಂ. ಪ್ರಕಾಶ್
    1. ಕೈವ – ಕೆ.ಎಂ. ಪ್ರಕಾಶ್

    ಅತ್ಯುತ್ತಮ ನೃತ್ಯ ನಿರ್ದೇಶನ

    1. ಪುಷ್ಪವತಿ – ಕ್ರಾಂತಿ – ಗಣೇಶ್
    1. ಪಸಂದಾಗವ್ಳೆ – ಕಾಟೇರ – ಭೂಷಣ್
    1. ಬ್ಯಾಡ್ ಮ್ಯಾನರ್ಸ್ – ಬ್ಯಾಡ್ ಮ್ಯಾನರ್ಸ್ – ಬಿ. ಧನಂಜಯ್
    1. ನೈಂಟಿ ಹಾಕು ಕಿಟ್ಟಪ್ಪ – ಕೌಸಲ್ಯ ಸುಪ್ರಜಾ ರಾಮ – ಕಲೈ
    1. ಚುಮು ಚುಮು – ಕಬ್ಜ- ಜಾನಿ ಮಾಸ್ಟರ್

    ಅತ್ಯುತ್ತಮ ಚಿತ್ರ ಸಾಹಿತ್ಯ

    1. ಟಗರು ಪಲ್ಯ – ಸಂಬಂಜ ಅಂದ್ರೆ – ಡಾಲಿ ಧನಂಜಯ್
    1. ಸಪ್ತ ಸಾಗರದಾಚೆ ಎಲ್ಲೋ – ನದಿಯೇ – ಧನಂಜಯ್ ರಂಜನ್
    1. ಕೌಸಲ್ಯ ಸುಪ್ರಜಾ ರಾಮ – ಪ್ರೀತಿಸುವೆ – ಜಯಂತ್ ಕಾಯ್ಕಿಣಿ
    1. ರಾಘವೇಂದ್ರ ಸ್ಟೋರ್ಸ್ – ಗಾಳಿಗೆ ಗಂಧ – ಗೌಸ್ ಪೀರ್
    1. ಸ್ವಾತಿ ಮುತ್ತಿನ ಮಳೆ ಹನಿಯೇ – ಮೆಲ್ಲಗೆ – ಪೃಥ್ವಿ

    ಅತ್ಯುತ್ತಮ ಹಿನ್ನೆಲೆ ಸಂಗೀತ

    1. ಘೋಸ್ಟ್ – ಅರ್ಜುನ್ ಜನ್ಯ
    1. ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್
    1. ಕಾಟೇರ – ವಿ. ಹರಿಕೃಷ್ಣ
    1. ವಿರಾಟಪುರದ ವಿರಾಟ – ಕದ್ರಿ ಮಣಿಕಾಂತ್
    1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ಬಿ ಅಜನೀಶ್ ಲೋಕನಾಥ್

    ಅತ್ಯುತ್ತಮ ಹಿನ್ನೆಲೆ ಗಾಯಕಿ

    1. ಕಾಯೋಶಿವ ಕಾಪಾಡೋ ಶಿವ – ಪೆಂಟಾಗನ್ – ಸಂಗೀತಾ ಕಟ್ಟಿ
    1. ಕೌಸಲ್ಯ ಸುಪ್ರಜಾ ರಾಮ – 90 ಹಾಕು ಕಿಟ್ಟಪ್ಪ – ಐಶ್ವರ್ಯ ರಂಗರಾಜನ್
    1. ಪಸಂದಾಗವ್ನೆ – ಕಾಟೇರ – ಮಂಗ್ಲಿ
    2. ಚುಮು ಚುಮು ಚಳಿ – ಕಬ್ಜ- ಐರಾ ಉಡುಪಿ
    1. ಮೆಲ್ಲಗೆ – ಸ್ವಾತಿ ಮುತ್ತಿನ ಮಳೆ ಹನಿಯೇ – ಮಾಧುರಿ ಶೇಷಾದ್ರಿ

    ಅತ್ಯುತ್ತಮ ಹಿನ್ನೆಲೆ ಗಾಯಕ

    1. ನೋಡಲಾಗದೆ – ವೀರಾಟಪುರ ವಿರಾಗಿ – ರವೀಂದ್ರ ಸೊರಗಾಂವಿ
    1. ಬೊಂಬೆ ಬೊಂಬೆ – ಕ್ರಾಂತಿ – ಸೋನು ನಿಗಂ
    1. ಸಿಂಗಲ್ ಸುಂದರಿ – ರಾಘವೇಂದ್ರ ಸ್ಟೋರ್ಸ್ – ವಿಜಯ ಪ್ರಕಾಶ್ ಮತ್ತು ನವೀನ್ ಸಜ್ಜು
    1. ನೊಂದುಕೋಬೇಡ – ಟಗರು ಪಲ್ಯ- ವಾಸುಕಿ ವೈಭವ್
    1. ಸಪ್ತ ಸಾಗರದಾಚೆ ಎಲ್ಲೋ – ಟೈಟಲ್ ಟ್ರ್ಯಾಕ್ – ಸಪ್ತ ಸಾಗರದಾಚೆ ಎಲ್ಲೋ- ಕಪೀಲ್‍ ಕಪೀಲನ್

    ಅತ್ಯುತ್ತಮ ಸಂಗೀತ ನಿರ್ದೇಶನ

    1. ಸಪ್ತ ಸಾಗರದಾಚೆ ಎಲ್ಲೋ – ಚರಣ್ ರಾಜ್
    1. ಕೌಸಲ್ಯ ಸುಪ್ರಜಾ ರಾಮ – ಅರ್ಜುನ್ ಜನ್ಯ
    1. ಟಗರು ಪಲ್ಯ – ವಾಸುಕಿ ವೈಭವ್
    1. ಕ್ರಾಂತಿ – ವಿ. ಹರಿಕೃಷ್ಣ
    1. ಕೈವ – ಅಜನೀಶ್ ಲೋಕನಾಥ್

    ಅತ್ಯುತ್ತಮ ಬಾಲ ಕಲಾವಿದ/ಕಲಾವಿದೆ

    1. ಅಂಬುಜಾ – ಆಕಾಂಕ್ಷ
    1. ಶಿವಾಜಿ ಸುರತ್ಕಲ್ 2 – ಆರಾಧ್ಯ
    1. ಗೌಳಿ – ನಮನ
    1. ಟೋಬಿ – ಸ್ನಿಗ್ಧ ಆರ್. ಶೆಟ್ಟಿ
    1. ಓ ನನ್ನ ಚೇತನ – ಪ್ರತೀಕ ಮಂಜುನಾಥ್

    ಅತ್ಯುತ್ತಮ ಪೋಷಕ ನಟಿ

    1. ಹೇಮಾ ದತ್ತ – ತೋತಾಪುರಿ
    1. ಶ್ರುತಿ – ಕಾಟೇರ
    1. ತಾರಾ ಅನುರಾಧ – ಟಗರು ಪಲ್ಯ
    1. ಸುಧಾ ಬೆಳವಾಡಿ – ಕೌಸಲ್ಯ ಸುಪ್ರಜಾ ರಾಮ
    1. ಎಂ.ಡಿ. ಪಲ್ಲವಿ – 19.20.21

    ಅತ್ಯುತ್ತಮ ಪೋಷಕ ನಟ

    1. ಪೂರ್ಣಚಂದ್ರ ಮೈಸೂರು – ಡೇರ್ ಡೆವಿಲ್ ಮುಸ್ತಾಫಾ
    1. ರಂಗಾಯಣ ರಘು – ಟಗರು ಪಲ್ಯ
    1. ರಾಘು ಶಿವಮೊಗ್ಗ – ಕೈವ
    1. ಮಹದೇವ ಹಡಪದ – 19.20.21
    1. ರಮೇಶ್ ಇಂದಿರಾ – ಸಪ್ತ ಸಾಗರದಾಚೆ ಎಲ್ಲೋ

    ಅತ್ಯುತ್ತಮ ನಟಿ

    1. ರುಕ್ಮುಣಿ ವಸಂತ – ಸಪ್ತ ಸಾಗರದಾಚೆ ಎಲ್ಲೋ
    1. ಅಕ್ಷತಾ ಪಾಂಡವಪುರ – ಪಿಂಕಿ ಎಲ್ಲಿ?
    1. ಮಿಲನಾ ನಾಗರಾಜ್ – ಕೌಸಲ್ಯ ಸುಪ್ರಜಾ ರಾಮ
    1. ಸಿರಿ ರವಿಕುಮಾರ್ – ಸ್ವಾತಿ ಮುತ್ತಿನ ಮಳೆ ಹನಿಯೇ
    1. ಮೇಘಾ ಶೆಟ್ಟಿ – ಕೈವ

    ಅತ್ಯುತ್ತಮ ನಟ

    1. ರಕ್ಷಿತ್ ಶೆಟ್ಟಿ – ಸಪ್ತ ಸಾಗರದಾಚೆ ಎಲ್ಲೋ
    1. ರಾಜ್ ಬಿ ಶೆಟ್ಟಿ, ಸ್ವಾತಿ ಮುತ್ತಿನ ಮಳೆ ಹನಿಯೇ
    1. ರಮೇಶ್ ಅರವಿಂದ್ – ಶಿವಾಜಿ ಸುರತ್ಕಲ್ 2
    1. ಶೃಂಗ ಬಿ.ವಿ – 19.20.21
    1. ದರ್ಶನ್ – ಕಾಟೇರ

    ಅತ್ಯುತ್ತಮ ಸಂಭಾಷಣೆ

    1. ಕೈವ – ರಘು ನಿಡುವಳ್ಳಿ
    1. ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ – ನಿತಿನ್ ಕೃಷ್ಣಮೂ‍ರ್ತಿ
    1. ಕೌಸಲ್ಯ ಸುಪ್ರಜಾ ರಾಮ – ಯದುನಂದನ್
    1. ಕಾಟೇರ – ಮಾಸ್ತಿ
    1. ಟಗರು ಪಲ್ಯ – ಉಮೇಶ್ ಕೆ ಕೃಪಾ

    ಅತ್ಯುತ್ತಮ ಚಿತ್ರಕಥೆ

    1. ಶಿವಾಜಿ ಸುರತ್ಕಲ್ 2 – ಆಕಾಶ್ ಶ್ರೀವತ್ಸ- ಅಭಿಜಿತ್‍ ವೈ.ಆರ್
    1. ಕೈವ – ಜಯತೀರ್ಥ
    1. ಸ್ವಾತಿ ಮುತ್ತಿನ ಮಳೆಹನಿಯೇ – ರಾಜ್ ಬಿ ಶೆಟ್ಟಿ
    1. ದೂರದರ್ಶನ – ಸುಕೇಶ್ ಶೆಟ್ಟಿ
    1. ಕಾಟೇರ – ತರುಣ್ ಕಿಶೋರ್ ಸುಧೀರ್ – ಜಡೇಶ್ ಕೆ. ಹಂಪಿ

    ಅತ್ಯುತ್ತಮ ನಿರ್ದೇಶಕ

    1. ಜಯತೀರ್ಥ – ಕೈವ
    1. ತರುಣ್ ಕಿಶೋರ್ ಸುಧೀರ್ – ಕಾಟೇರ
    1. ನಿತೀನ್ ಕೃಷ್ಣಮೂರ್ತಿ _ ಹಾಸ್ಟೇಲ್ ಹುಡುಗರು ಬೇಕಾಗಿದ್ದಾರೆ
    1. ಮಂಸೋರೆ – 19.20.21
    1. ರಾಜ್ ಬಿ ಶೆಟ್ಟಿ – ಸ್ವಾತಿ ಮುತ್ತಿನ ಮಳೆಹನಿಯೇ

    ಅತ್ಯುತ್ತಮ ಚಿತ್ರ

    1. ಸಪ್ತ ಸಾಗರದಾಚೆ ಎಲ್ಲೋ
    1. ಡೇರ್ ಡೆವಿ‍ಲ್ ಮುಸ್ತಾಫಾ
    1. 19.20.21
    1. ಕಾಟೇರ
    1. ಕೌಸಲ್ಯ ಸುಪ್ರಜಾ ರಾಮ
  • ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್  ನಾಮಿನೀಸ್ : ಕಾಂತಾರ, ಕೆಜಿಎಫ್ 2ಗೆ ಸಿಂಹಪಾಲು

    ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ಸ್ ನಾಮಿನೀಸ್ : ಕಾಂತಾರ, ಕೆಜಿಎಫ್ 2ಗೆ ಸಿಂಹಪಾಲು

    ನಾಲ್ಕನೇ ವರ್ಷದ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್ ಮಾರ್ಚ್ 5 ರಂದು ಅದ್ಧೂರಿಯಾಗಿ ನಡೆಯಲಿದೆ. ಅದಕ್ಕೂ ಮುನ್ನ ಪೂರ್ವಭಾವಿಯಾಗಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಪಟ್ಟಿ ಹಾಗೂ 2023ನೇ ವರ್ಷದ ಟ್ರೋಫಿ ಅನಾವರಣ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.

    ಸತತ ಮೂರು ವರ್ಷಗಳಿಂದ ಯಶಸ್ವಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜನೆ ಮಾಡುತ್ತಾ ಬಂದಿರುವ ಚಂದವನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ, ಪ್ರತಿ ವರ್ಷವೂ ಒಂದಿಲ್ಲೊಂದು ವಿಶೇಷ ಪ್ರಶಸ್ತಿಯನ್ನು ಘೋಷಿಸುತ್ತಾ ಬಂದಿದೆ. ಈ ಬಾರಿ ಐದು ವಿಶೇಷ ಪ್ರಶಸ್ತಿಗಳನ್ನು ತನ್ನ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿದ್ದು, ಈ ಐದೂ ಪ್ರಶಸ್ತಿಗಳಿಗೂ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಕೊಡುಗೆ ನೀಡಿದ ಮಹನಿಯರ ಹೆಸರುಗಳನ್ನು ನಾಮಕರಣ ಮಾಡಿದೆ.

    ಅತ್ಯುತ್ತಮ ನಟ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಟಿ (ಡೆಬ್ಯು) ಪ್ರಶಸ್ತಿಯನ್ನು ಕನ್ನಡದ ಮೊದಲ ಚಿತ್ರದ ನಾಯಕಿ ತ್ರಿಪುರಾಂಭ ಹೆಸರಿನಲ್ಲಿ, ಅತ್ಯುತ್ತಮ ನಿರ್ದೇಶಕ (ಡೆಬ್ಯು) ಹೆಸರಾಂತ ನಟ, ನಿರ್ದೇಶಕ ಶಂಕರ್ ನಾಗ್ ಅವರ ಹೆಸರಿನಲ್ಲಿ, ಅತ್ಯುತ್ತಮ ನಿರ್ಮಾಪಕ (ಡೆಬ್ಯು) ಪ್ರಶಸ್ತಿಯನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಟ, ನಿರ್ಮಾಪಕ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ, ಅತ್ಯುತ್ತಮ ಬರಹಗಾರ (ಡೆಬ್ಯು) ಪ್ರಶಸ್ತಿಯನ್ನು ಚಿ.ಉದಯಶಂಕರ್ ಹೆಸರಿನಲ್ಲಿ ಪ್ರದಾನ ಮಾಡಲಾಗುತ್ತಿದೆ.

    ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ನಟಿಯರಾದ ಇತಿ ಆಚಾರ್ಯ, ಪಾವನಾ ಗೌಡ ಮತ್ತು ಸಂಗೀತಾ ಭಟ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಟ್ರೋಫಿ ಅನಾವರಣ ಮಾಡಿದರು. ಸಿನಿಮಾ ವಿಮರ್ಶಕರು ನೀಡುವ ದಕ್ಷಿಣ ಭಾರತದ ಮೊದಲ ಪ್ರಶಸ್ತಿ ಇದಾಗಿದ್ದರ ಬಗ್ಗೆ ಕೊಂಡಾಡಿದರು.

    ನಾಮಿನೀಸ್ ಲಿಸ್ಟ್ : 

     

    1. ಅತ್ಯುತ್ತಮ ಚಿತ್ರ

    1. ಕಾಂತಾರ
    2. ಕೆಜಿಎಫ್ 2
    3. ಧರಣಿ ಮಂಡಲ ಮಧ್ಯದೊಳಗೆ
    4. 777 ಚಾರ್ಲಿ
    5. ವ್ಹೀಲ್ ಚೇರ್ ರೋಮಿಯೋ
    1. ಅತ್ಯುತ್ತಮ ನಿರ್ದೇಶಕ
    1. ಪ್ರಶಾಂತ್ ನೀಲ್ (ಕೆಜಿಎಫ್2)
    2. ರಿಷಬ್ ಶೆಟ್ಟಿ (ಕಾಂತಾರ)
    3. ಕಿರಣ್ ರಾಜ್ ( 777 ಚಾರ್ಲಿ)
    4. ಅನೂಪ್ ಭಂಡಾರಿ (ವಿಕ್ರಾಂತ್ ರೋಣ)
    5. ಜಡೇಶ್ ಹಂಪಿ (ಗುರು ಶಿಷ್ಯರು)

    3. ಅತ್ಯುತ್ತಮ ಚಿತ್ರಕಥೆ

    1. ಕಾಂತಾರ ( ರಿಷಭ್ ಶೆಟ್ಟಿ)
    2. 777 ಚಾರ್ಲಿ (ಕಿರಣ್ ಕೆ)
    3. ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ )
    4. ಡಾರ್ಲಿಂಗ್ ಕೃಷ್ಣ ( ಲವ್ ಮಾಕ್ಟೇಲ್ 2)
    5. ಕೆಜಿಎಫ್ 2 (ಪ್ರಶಾಂತ್ ನೀಲ್)

    4.ಅತ್ಯುತ್ತಮ ಸಂಭಾಷಣೆ

    1. ಗುರು ಶಿಷ್ಯರು (ಮಾಸ್ತಿ)
    2. ವೇದ ( ರಘು ನಿಡುವಳ್ಳಿ)
    3. ವ್ಹೀಲ್ ಚೇರ್ ರೋಮಿಯೋ (ನಟರಾಜ್ ಜಿ)
    4. 777 ಚಾರ್ಲಿ (ಕಿರಣ್ ಕೆ, ರಾಜ್ ಬಿ.ಶೆಟ್ಟಿ, ಅಭುಜಿತ್ ಮಹೇಶ್
    5. ಕಾಂತಾರ (ರಿಷಭ್ ಶೆಟ್ಟಿ)

    5.ಅತ್ಯುತ್ತಮ ನಾಯಕ

    1. ರಿಷಭ್ ಶೆಟ್ಟಿ (ಕಾಂತಾರ)
    2. ಯಶ್ (ಕೆಜಿಎಫ್ 2)
    3. ಪೃಥ್ವಿ ಅಂಬರ್ ( ಶುಗರ್ ಲೆಸ್)
    4. ರಕ್ಷಿತ್ ಶೆಟ್ಟಿ (777 ಚಾರ್ಲಿ)
    5. ವ್ಹೀಲ್ ಚೇರ್ ರೋಮಿಯೋ (ರಾಮ್ ಚೇತನ್)

    6.ಅತ್ಯುತ್ತಮ ನಾಯಕಿ

    1. ಸಪ್ತಮಿ ಗೌಡ (ಕಾಂತಾರ)
    2. ಸೋನಾಲ್ ಮಾಂತೇರೊ (ಬನಾರಸ್)
    3. ಆಶಿಕಾ ರಂಗನಾಥ್ (ರೇಮೊ)
    4. ಶರ್ಮಿಳಾ ಮಾಂಡ್ರೆ (ಗಾಳಿಪಟ 2)
    5. ಐಶಾನಿ ಶೆಟ್ಟಿ (ಧರಣಿ ಮಂಡಲ ಮಧ್ಯದೊಳಗೆ)

    7.ಅತ್ಯುತ್ತಮ ಪೋಷಕ ನಟ

    1. ಕಿಶೋರ್ (ಕಾಂತಾರ)
    2. ದಿಗಂತ್ (ಗಾಳಿಪಟ 2)
    3. ದತ್ತಣ್ಣ (ಗುರು ಶಿಷ್ಯರು)
    4. ಸುಚೇಂದ್ರ ಪ್ರಸಾದ್ (ವ್ಹೀಲ್ ಚೇರ್ ರೋಮಿಯೋ)
    5. ಗೋಪಾಲ ಕೃಷ್ಣ ದೇಶಪಾಂಡೆ (10)

    8.ಅತ್ಯುತ್ತಮ ಪೋಷಕ ನಟಿ

    1. ಉಮಾಶ್ರೀ (ವೇದ)
    2. ಹೇಮದತ್ತ (ತೋತಾಪುರಿ)
    3. ಸುಹಾಸಿನಿ (ಮಾನ್ಸೂನ್ ರಾಗ)
    4. ರಚಿತಾ ರಾಮ್ (ಮಾನ್ಸೂನ್ ರಾಗ)
    5. ಸುಧಾರಾಣಿ (ತುರ್ತು ನಿರ್ಗಮನ)

    9.ಅತ್ಯುತ್ತಮ ಬಾಲ ನಟ/ನಟಿ

    1. ಹೃದಯ್ ಶರಣ್ (ಗುರು ಶಿಷ್ಯರು)
    2. ಮಹೇಂದ್ರ ಪ್ರಸಾದ್ (ಜೋರ್ಡನ್)
    3. ಪ್ರಾಣ್ಯ ಎಂ.ರಾವ್ (ಜಮಾಲಿ ಗುಡ್ಡ)
    4. ಶಾರ್ವರಿ (777 ಚಾರ್ಲಿ)
    5. ಏಕಾಂತ್ ಪ್ರೇಮ್ (ಗುರು ಶಿಷ್ಯರು)

    10.ಅತ್ಯುತ್ತಮ ಸಂಗೀತ

    1. ಅಜನೀಶ್ (ಕಾಂತಾರ)
    2. ಅರ್ಜುನ್ ಜನ್ಯ (ಗಾಳಿಪಟ 2)
    3. ನೊಬಿನ್ ಪಾಲ್ (777 ಚಾರ್ಲಿ)
    4. ಅನೂಪ್ ಸೀಳಿನ್ (ಮಾನ್ಸೂನ್ ರಾಗ)
    5. ಅಜನೀಶ್ (ಬನಾರಸ್)

    11.ಅತ್ಯುತ್ತಮ ಹಿನ್ನೆಲೆ ಸಂಗೀತ

    1. ರವಿ ಬಸ್ರೂರು (ಕೆಜಿಎಫ್ 2)
    2. ಅನೂಪ್ ಸೀಳಿನ್ (ಮಾನ್ಸೂನ್ ರಾಗ)
    3. ಅಜನೀಶ್ ಲೋಕನಾಥ್ (ವಿಕ್ರಾಂತ್ ರೋಣ)
    4. ಅಜನೀಶ್ (ಕಾಂತಾರ)
    5. ಅರ್ಜುನ್ ಜನ್ಯ (ಪದವಿ ಪೂರ್ವ)

     

    12.ಅತ್ಯುತ್ತಮ ಚಿತ್ರ ಸಾಹಿತ್ಯ

    1. ತ್ರಿಲೋಕ್ ತ್ರಿವಿಕ್ರಮ (ಕರ್ಮದ-ಕಾಂತಾರ)
    2. ಯೋಗರಾಜ ಭಟ್ (ಪ್ರಾಯಶಃ-ಗಾಳಿಪಟ 2)
    3. ಶಶಾಂಕ್ (ಜಗವೇ ನೀನು- ಲವ್ 360)
    4. ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ- ಬನಾರಸ್)
    5. ರಾಘವೇಂದ್ರ ಕಾಮತ್ (ಲವ್ ಮಾಕ್ಟೇಲ್ 2)

    13.ಅತ್ಯುತ್ತಮ ಗಾಯಕ

    1. ವಿಜಯ್ ಪ್ರಕಾಶ್ (ಸಿಂಗಾರ-ಕಾಂತಾರ)
    2. ಸಿದ್ಧ್ ಶ್ರೀರಾಮ್ (ಜಗವೇ-ಲವ್ 360)
    3. ಮೋಹನ್ (ಜುಂಜಪ್ಪ-ವೇದ)
    4. ಸಂಜಿತ್ ಹೆಗಡೆ (ಬೆಳಕಿನ ಕವಿತೆ-ಬನಾರಸ್)
    5. ಸಾಯಿ ವಿಘ್ನೇಷ್ ( ವರಾಹ ರೂಪಂ -ಕಾಂತಾರ)

    14.ಅತ್ಯುತ್ತಮ  ಗಾಯಕಿ

    1. ಅಂಕಿತ ಕುಂದು (ನಾ ನಿನಗೆ ಕಾವಲುಗಾರ-ಜೇಮ್ಸ್)
    2. ಐಶ್ವರ್ಯ ರಂಗರಾಜನ್ (ಮೀಟ್ ಮಾಡೋಣ- ಏಕ್ ಲವ್ ಯಾ)
    3. ಮಂಗ್ಲಿ (ಯಾವನೋ ಇವ್ನು- ವೇದ)
    4. ಅನನ್ಯಾ ಭಟ್ (ಕಾಂತಾರ)
    5. ಸುನಿಧಿ ಚೌಹಾಣ್ (ಯಕ್ಕಾ ಸಕ್ಕಾ-ವಿಕ್ರಾಂತ್ ರೋಣ)

    15.ತಾಂತ್ರಿಕತೆ ವಿಭಾಗ :  ಅತ್ಯುತ್ತಮ  ಛಾಯಾಗ್ರಹಣ

    1. ವಿಲಿಯಮ್ ಡೇವಿಡ್ (ವಿಕ್ರಾಂತ್ ರೋಣ)
    2. ಅರವಿಂದ್ ಕಶ್ಯಪ್ ( ಚಾರ್ಲಿ-ಕಾಂತಾರ)
    3.  ವಿಶ್ವಜಿತ್ ರಾವ್ (ಖಾಸಗಿ ಪುಟಗಳು)
    4. ಕರಮ್ ಚಾವ್ಲ (10)
    5. ಭುವನ್ ಗೌಡ( ಕೆಜಿಎಫ್ 2)

    16.ಅತ್ಯುತ್ತಮ  ಸಂಕಲನ

    1. ಉಜ್ವಲ್ ಕುಲಕರ್ಣಿ (ಕೆಜಿಎಫ್2)
    2. ಪ್ರತೀಕ್ ಶೆಟ್ಟಿ (ಕಾಂತಾರ)
    3. ಶ್ರೀ ಕ್ರೇಜಿಮೈಂಡ್ಸ್ (ಲವ್ ಮಾಕ್ಟೈಲ್2)
    4. ಕೆ ಎಂ ಪ್ರಕಾಶ್ (ಗುರು ಶಿಷ್ಯರು)
    5. ಪ್ರತೀಕ್ ಶೆಟ್ಟಿ ( 777 ಚಾರ್ಲಿ)

    17.ಅತ್ಯುತ್ತಮ  ಕಲಾ ನಿರ್ದೇಶನ

    1. ಶಿವ ಕುಮಾರ್ (ವಿಕ್ರಾಂತ್ ರೋಣ)
    2. ಶಿವಕುಮಾರ್ (ಕೆಜಿಎಫ್ 2)
    3. ರವಿ ಸಂತೆಹಕ್ಲು (ವೇದ )
    4. ಧರಣಿ (ಕಾಂತಾರ)
    5. ಗುಣ (ಮಾನ್ಸೂನ್ ರಾಗ)

    18.ಅತ್ಯುತ್ತಮ  ನೃತ್ಯ ನಿರ್ದೇಶನ

    1. ಜಾನಿ ಮಾಸ್ಟರ್ (ರಾ ರಾ ರಕ್ಕಮ್ಮ)
    2. ಮುರಳಿ – ರಾಮ ರಾಮ (ದಿಲ್ ಪಸಂದ್)
    3. ಇಮ್ರಾನ್ ಸರ್ದಾರಿಯಾ- ರೇಮೋ ಫೇಮೋ (ರೇಮೊ)
    4. ಹರ್ಷ  – ವೇದ (ಜುಂಜಪ್ಪ)
    5. ಮೋಹನ್ – ಮೀಟ್ ಮಾಡೋಣ (ಏಕ್ ಲವ್ ಯಾ)
    1. ಅತ್ಯುತ್ತಮ ಸಾಹಸ

    1. ವಿಕ್ರಮ್ ಮೋರ್ (ಕಾಂತಾರ)

    1. ಅಂಬ್ರ್ಯು (ಕೆಜಿಎಫ್2)
    2. ವಿಜಯ್ (ವಿಕ್ರಾಂತ್ ರೋಣ)
    3. ರವಿ ವರ್ಮ, ಚೇತನ್ ಡಿಸೋಜಾ, ಅರ್ಜುನ್ ರಾಜ್, ವಿಕ್ರಂ ಮೋರೆ (ವೇದ)
    4. ವಿನೋದ್, ಚೇತನ್ ಡಿಸೋಜಾ (ಹೆಡ್ ಬುಷ್)
    1. ಅತ್ಯುತ್ತಮ ವಿಎಫ್ ಎಕ್ಸ್
    1. ವಿಕ್ರಾಂತ್ ರೋಣ –  ನಿರ್ಮಲ್ ಕುಮಾರ್ – ರಡಿಯನ್ಸ್
    2. ಕೆಜಿಎಫ್ 2  – ಉದಯರವಿ ಹೆಗ್ಡೆ – ಯೂನಿಫೈ ಮೀಡಿಯಾ
    3. ತುರ್ತು ನಿರ್ಗಮನ – ನಿತಿನ್ ಆನಂದ್, ಇಂದ್ರಜಿತ್ – ಸೂತ್ರ – ಐ ವಿಎಫ್ ಎಕ್ಸ್
    4. 777 ಚಾರ್ಲಿ – ರಾಹುಲ್ ವಿ – ಪಿನಕಾ ಸ್ಟುಡಿಯೋ
    5. ವೇದ – ಎಲಾಂಗೋ, ಸುಬೀಶ್ – ಜುಪಿಟರ್
    1. ಅತ್ಯುತ್ತಮ ನಟ (ಡೆಬ್ಯು) ಸಂಚಾರಿ ವಿಜಯ್ ಅವಾರ್ಡ್

    1. ಜಯೀದ ಖಾನ್ (ಬನಾರಸ್)

    1. ರಾಣಾ (ಏಕ್ ಲವ್ ಯಾ)
    2. ಕಾರ್ತಿಕ್ ಮಹೇಶ್ (ಡೊಳ್ಳು)
    3. ಪೃಥ್ವಿ ಶಾಮನೂರು (ಪದವಿ ಪೂರ್ವ)

    5. ರೋಹಿತ್ ಶ್ರೀಧರ್ (ವಾಸಂತಿ ನಲಿದಾಗ)

    1. ಅತ್ಯುತ್ತಮ ನಟಿ (ಡೆಬ್ಯು) ತ್ರಿಪುರಾಂಭ ಪ್ರಶಸ್ತಿ

    1.ರೇಷ್ಮಾ ನಾಣಯ್ಯ (ಏಕ್ ಲವ್ ಯಾ)

    1. ರಚೇಲ್ ಡೇವಿಡ್ (ಲವ್ ಮಾಕ್ಟೇಲ್ 2)
    2. ಶ್ವೇತಾ ಲೆನೋಲಿಯಾ (ಖಾಸಗಿ ಪುಟಗಳು)
    3. ಯಶಾ ಶಿವಕುಮಾರ್(ಪದವಿ ಪೂರ್ವ/ಮಾನ್ಸೂನ್ ರಾಗ)
    4. ಅಂಜಲಿ ಅನೀಶ್ (ಪದವಿ ಪೂರ್ವ)
    1. ಅತ್ಯುತ್ತಮ ನಿರ್ದೇಶಕ (ಡೆಬ್ಯು) ಶಂಕರ್ ನಾಗ್ ಅವಾರ್ಡ್

    1.ಕರಮ್ ಚಾವ್ಲ (10)

    1. ಶ್ರೀಧರ್ ಶಿಕಾರಿಪುರ (ಧರಣಿ ಮಂಡಲ ಮಧ್ಯದೊಳಗೆ)

    3. ಸಾಗರ್  ಪುರಾಣಿಕ್ (ಡೊಳ್ಳು)

    1. ನಟರಾಜ್ (ವ್ಹೀಲ್ ಚೇರ್ ರೋಮಿಯೋ)
    2. ಶಶಿಧರ್ ಕೆ. (ಶುಗರ್ ಲೆಸ್)
    1. ಅತ್ಯುತ್ತಮ ನಿರ್ಮಾಪಕ (ಡೆಬ್ಯು) -ಪುನೀತ್ ರಾಜಕುಮಾರ್ ಅವಾರ್ಡ್
    1. ಪವನ್ ಒಡೆಯರ್ (ಡೊಳ್ಳು)
    2. ಓಂಕಾರ್ ಆರ್ಯ (ಧರಣಿ ಮಂಡಲ ಮಧ್ಯದೊಳಗೆ)
    3. ಮಂಜು ವಿ.ರಾಜ್ (ಖಾಸಗಿ ಪುಟಗಳು)
    4. ಅಭಿಲಾಶ್ ಶೆಟ್ಟಿ (ಕೋಳಿ ಥಾಲ್)
    5. ಗೀತಾ ಪಿಕ್ಚರ್ಸ್ (ವೇದ)
    1. ಅತ್ಯುತ್ತಮ ಸಂಭಾಷಣೆ (ಡೆಬ್ಯು) ಚಿ.ಉದಯ ಶಂಕರ್ ಅವಾರ್ಡ್
    1. ಡೊಳ್ಳು – ಸಾಗರ್ ಪುರಾಣಿಕ್, ಶ್ರೀನಿಧಿ ಡಿ ಎಸ್
    2. ಧರಣಿ ಮಂಡಲ ಮಧ್ಯದೊಳಗೆ – ಶ್ರೀಧರ್ ಶಿಕಾರಿಪುರ
    3. ಕಂಬ್ಲಿ ಹುಳ – ನವೀನ್ ಶ್ರೀನಿವಾಸ್
    4. ಖಾಸಗಿ ಪುಟಗಳು – ಸಂತೋಷ್ ಶ್ರಿಕಂತಪ್ಪ
    5. ವಿಂಡೊಸೀಟ್  – ಶೀತಲ್ ಶೆಟ್ಟಿ
    1. ಅತ್ಯುತ್ತಮ ಯುಟ್ಯೂಬರ್
    1. ಗಗನ್ ಶ್ರೀನಿವಾಸ್ (ಡಾ ಬ್ರೋ)
    2. ಆಶಾ ಮತ್ತು ಕಿರಣ್ (ಫ್ಲೈಯಿಂಗ್ ಪಾಸ್ಪೋರ್ಟ್)
    3. ಕೆ ಎಸ್ ಪರಮೇಶ್ವರ (ಕಲಾ ಮಾಧ್ಯಮ)
    4. ರಾಮ್ ಮಹಾಬಲ (Global ಕನ್ನಡಿಗ)
    5. ಸಂದೀಪ್ ಗೌಡ (ಟೆಕ್ in Kannada)
    1. ಅತ್ಯುತ್ತಮ ಮನರಂಜನೆ ಸಾಮಾಜಿಕ ಜಾಲತಾಣ
    1. ರಘು ಗೌಡ (ಬಳ್ಳಿ ಅಂಗಡಿ ರಘು)
    2. ಪವನ್ ವೇನಗೋಪಾಲ್
    3. ಸೋನು ವೇಣುಗೋಪಾಲ್
    4. ಪವನ್ ಕುಲಕರ್ಣಿ (ಉಡಾಲ್ ಪಾವ್ವ್ಯ)
    5. ವಿಕಾಸ್ (ವಿಕ್ಕಿ ಪೀಡಿಯಾ)
  • ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ

    ರೋಮಿಯೋನ ಭಾವನೆಗಳ ಕಥನ – ಡೈಲಾಗ್‍ನಲ್ಲಿ ಕಾಮಿಡಿ ಹೂರಣ

    ಬೆಳ್ಳಿತೆರೆ ಬಾನಂಗಳದಲ್ಲಿ ವೀಲ್‍ಚೇರ್ ರೋಮಿಯೋನ ಪಯಣ ಶುರುವಾಗಿದೆ. ನಿರೀಕ್ಷೆಗೆ ತಕ್ಕಂತೆ ಪ್ರೇಕ್ಷಕರನ್ನು ರೋಮಿಯೋ ರಂಜಿಸಿದ್ದಾನೆ. ಸಿನಿಮಾ ಆರಂಭದಿಂದ ಹಿಡಿದು ಅಂತ್ಯದವರೆಗೂ ಅದೇ ಕುತೂಹಲ ಕಾಯ್ದುಕೊಂಡು, ಭರ್ಜರಿ ಡೈಲಾಗ್, ವಿಭಿನ್ನ ಪಾತ್ರಗಳು, ವಿಶೇಷ ಕಥಾನಕದ ಮೂಲಕ ವೀಲ್‍ಚೇರ್ ರೋಮಿಯೋ ಚಿತ್ರ ಪ್ರೇಮಿಗಳ ಹೃದಯ ಕಲಕಿದ್ದಾನೆ.

    Wheel Chair Romeo

    ವೀಲ್‍ಚೇರ್ ರೋಮಿಯೋ ಮಾಮೂಲಿ ಸಿನಿಮಾಗಳ ಕಥೆಯಂತು ಅಲ್ಲವೇ ಅಲ್ಲ. ಇದೊಂದು ಅಪರೂಪದ ಕಥೆ. ಇದು ನಿಮ್ಮನ್ನ ಭಾವನೆಗಳ ಲೋಕಕ್ಕೆ ಕರೆದೊಯ್ಯುವ ಇಂಟ್ರೆಸ್ಟಿಂಗ್ ಸ್ಟೋರಿ. ಬಾಲ್ಯದಿಂದ ಮೂಳೆ ಖಾಯಿಲೆಗೆ ಒಳಗಾದ ಹೀರೋ, ಈತ ದೊಡ್ಡವನಾದ ಮೇಲೆ ಮದುವೆ ಮಾಡಲು ಅಪ್ಪ ಸಿದ್ಧನಾಗುತ್ತಾನೆ. ಇಂದಿನ ಕಾಲದಲ್ಲಿ ಎಲ್ಲವೂ ಸರಿ ಇದ್ದು ಹೆಣ್ಣು ಕೊಡುವುದು ಕಷ್ಟ. ಇನ್ನೂ ಕಾಲಿಲ್ಲದ ನಾಯಕನಿಗೆ ಜೊತೆಯಾಗುವವರು ಯಾರು? ಮಗನ ಆಸೆ ಈಡೇರಿಸಲು ಅಪ್ಪ ಎಷ್ಟೆಲ್ಲಾ ಪರದಾಟ ನಡೆಸುತ್ತಾನೆ? ಹೀಗೆ ಸಾಗುವ ಕಥೆಯಲ್ಲಿ ನಾನಾ ರೋಚಕ ತಿರುವುಗಳು. ಕೊನೆಗೆ ನಾಯಕನಿಗೆ ಜೋಡಿ ಸಿಗುತ್ತಾಳಾ? ಆಕೆ ಈತನ್ನು ಒಪ್ಪಿಕೊಂಡಿದ್ದಾದ್ರೂ ಏಕೆ? ಅನ್ನೋದನ್ನು ನೀವು ಥಿಯೇಟರ್‍ನಲ್ಲಿಯೇ ನೋಡ್ಬೇಕು. ಇದನ್ನೂ ಓದಿ: ಸ್ಕಿಡ್ ಆಗಿ ಕಮರಿಗೆ ಬಿದ್ದ ಸೈನಿಕರ ವಾಹನ: ಮೃತಪಟ್ಟ 7 ಯೋಧರು 

    ನಿರ್ದೇಶಕ ನಾಗರಾಜ್ ಮೊದಲ ಬಾರಿಗೆ ನಿರ್ದೇಶನದ ಅಖಾಡಕ್ಕೆ ಇಳಿದಿದ್ರೂ, ಪಳಗಿದ ನಿರ್ದೇಶಕನ ರೀತಿ ಸಿನಿಮಾವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಹದಿನೈದು ವರ್ಷದ ತಮ್ಮ ಜರ್ನಿಯ ಅನುಭವಗಳನ್ನು ಅದ್ಭುತವಾಗಿ ಬಳಸಿಕೊಂಡಿರುವ ನಟರಾಜ್, ಮೂಲತಃ ಡೈಲಾಗ್ ರೈಟರ್ ಆಗಿದ್ದವರು. ಆದ್ರೂ ವೀಲ್‍ಚೇರ್ ರೋಮಿಯೋ ಸಿನಿಮಾಗೆ ಗುರು ಕಶ್ಯಪ್ ಅವರಿಂದ ಪಂಚಿಂಗ್ ಸಂಭಾಷಣೆ ಬರೆಸಿ ಸೈ ಎನಿಸಿಕೊಂಡಿದ್ದಾರೆ.

    ಸೂಕ್ಷ್ಮ ಕಥೆಗೆ ಅಷ್ಟೇ ಪವರ್ ಫುಲ್ ಡೈಲಾಗ್ ಸಿನಿಮಾದುದ್ದಕ್ಕೂ ಪ್ರೇಕ್ಷಕರನ್ನು ನಗುವಿನ ಕಡಲಲ್ಲಿ ತೇಲಿಸುವಂತೆ ಮಾಡುತ್ತವೆ. ಭರತ್ ಬಿಜೆ ಸಂಗೀತದ ಸ್ಪರ್ಶ ಹಾಗೂ ಸಂತೋಷ್ ಪಾಂಡಿ ಛಾಯಾಗ್ರಾಹಣದ ಸೊಗಸು ಸಿನಿಮಾದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕಲಾಬಳಗದ ಅಭಿನಯಕ್ಕೆ ಬರುವುದಾದರೆ, ರಂಗಾಯಣ ರಘು ಜಾಕ್ ಮಾಮಾ ಪಾತ್ರದಲ್ಲಿ ಅಕ್ಷಶರಃ ಮಿಂಚಿದ್ದಾರೆ. ಸುಚೇಂದ್ರ ಪ್ರಸಾದ್ ಪ್ರತಿಮ ಅಭಿನಯ, ತಬಲನಾಣಿ, ಗಿರಿಶಿವಣ್ಣ ಚಿತ್ರದ ಪ್ಲಸ್ ಪಾಯಿಂಟ್. ಅಂಧ ವೇಶ್ಯೆ ಪಾತ್ರದಲ್ಲಿ ನಟಿ ಮಯೂರಿ ಅಭಿನಯ ಅಮೋಘ ಅಂದ್ರು ತಪ್ಪಾಗಲಿಕ್ಕಿಲ್ಲ.

    ರಾಮ್ ಚೇತನ್ ಮೊದಲ ಬಾರಿಗೆ ಹೀರೋ ಆಗಿ ಅದ್ಭುತವಾಗಿ ನಟಿಸಿದ್ದಾರೆ. ಇಡೀ ಸಿನಿಮಾವನ್ನು ವೀಲ್ ಚೇರ್ ಮೇಲೆ ಕುಳಿತು ಚಾಲೆಂಜಿಂಗ್ ರೋಲ್ ಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಒಟ್ನಲ್ಲಿ ವೀಲ್ ಚೇರ್ ರೋಮಿಯೋ ನಿಜಕ್ಕೂ ಹೊಸ ಪ್ರಯತ್ನ. ತೆರೆಹಿಂದಿ ದುಡಿದವರು, ತೆರೆಮುಂದೆ ಬಣ್ಣ ಹಚ್ಚಿದವರು ಎಲ್ಲರ ಪರಿಶ್ರಮ ಇಲ್ಲಿ ಎದ್ದು ಕಾಣುತ್ತದೆ. ಇದನ್ನೂ ಓದಿ:  ಕಳೆದ ಎಂಟು ವರ್ಷಗಳಿಂದ ಬಡವರಿಗಾಗಿ ಮೋದಿ ಸರ್ಕಾರ ಕೆಲಸ ಮಾಡ್ತಿದೆ: ಪ್ರಹ್ಲಾದ್ ಜೋಶಿ 

  • ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ

    ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು – ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸಿದ ರಾಖಿ

    ನ್ನಡ ಕಿರುತೆರೆ ನಟಿ ಚೇತನಾ ರಾಜ್ ಅವರು ಮೇ 16 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಚೇತನಾ ಅವರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಹೋಗಿದ್ದು, ಶ್ವಾಸಕೋಶದಲ್ಲಿ ನೀರು ಶೇಖರಣೆಯಾಗಿದೆ. ಈ ಹಿನ್ನೆಲೆ ಚೇತನಾ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪರಿಣಾಮ ಸೆಲೆಬ್ರಿಟಿಗಳು ಚೇತನಾ ಸಾವಿಗೆ ಸಂತಾಪ ಸೂಚಿಸಿದರು. ಬಾಲಿವುಡ್ ನಟಿ ರಾಖಿ ಸಾವಂತ್ ಕೂಡ ಚೇತನಾ ಅವರ ಹಠಾತ್ ಸಾವಿನಿಂದ ಆಘಾತಕ್ಕೊಳಗಾಗಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಶೇರ್ ಮಾಡಿದ್ದಾರೆ.

    ಇನ್‍ಸ್ಟಾದಲ್ಲಿ ರಾಖಿ, ಗೆಳೆಯರೇ, ಫ್ಯಾಟ್ ಸರ್ಜರಿಯಿಂದ ಸಾವನ್ನಪ್ಪಿದ ಕನ್ನಡ ನಟಿ ಚೇತನಾ ರಾಜ್ ಅವರ ಸುದ್ದಿ ಕೇಳಿ ನನಗೆ ತುಂಬಾ ಆಘಾತವಾಗಿದೆ. ಈ ರೀತಿ ಮಾಡುವ ಯಾವ ಆಸ್ಪತ್ರೆ ಮತ್ತು ವೈದ್ಯರಿದ್ದಾರೆ ಎಂಬುದನ್ನು ನಾನು ತಿಳಿದುಕೊಳ್ಳಬೇಕು. ಆಕೆಗೆ ಕೇವಲ 21 ವರ್ಷ. ಆಕೆಗೆ ಯಾರು ಫ್ಯಾಟ್ ಸರ್ಜರಿ ಮಾಡಿಸಿಕೊಳ್ಳವುದಕ್ಕೆ ಹೇಳಿದ್ದು. ಆ ಡಾಕ್ಟರ್‌ಗೆ ಡಿಗ್ರಿ ಕೊಟ್ಟವರು ಯಾರು ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿನಿಮಾ ಮೇಕರ್ಸ್ ನಟಿಯರ ಬಾಡಿ ಬಗ್ಗೆ ಕಾಮೆಂಟ್ ಮಾಡುವುದನ್ನ ಬಿಡಿ: ಪ್ರಿಯಾಂಕಾ ಉಪೇಂದ್ರ

    ನಿಮಗೆ ಯಾವುದೇ ಸರಿಯಾದ ಮಾಹಿತಿ ಇಲ್ಲದೇ ಹೋಗಿದ್ರೆ, ಒಳ್ಳೆಯ ಬಾಲಿವುಡ್ ಜನರನ್ನು ಕೇಳಬೇಕು. ನೀವು ನನ್ನನ್ನು ಕೇಳಬೇಕು, ನೀವು ಯಾವ ವೈದ್ಯರ ಬಳಿಗೆ ಹೋಗಬೇಕು ಎಂದು ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ. ಯಾರ ಬಳಿಯೂ ಹೋಗಿ ಈ ರೀತಿ ಸಾಯಬೇಡಿ. 21 ವರ್ಷದ ಹುಡುಗಿ ಯಾವ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆಂದು ನನಗೆ ತಿಳಿದಿಲ್ಲ ಎಂದು ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

    ಚೇತನಾ ಸಾವಿಗೆ ಪ್ರಿಯಾಂಕಾ ಉಪೇಂದ್ರ, ಮೋಹಕ ತಾರೆ ರಮ್ಯಾ, ಚಂದನವನದ ಆಶ್ವಿತಿ ಶೆಟ್ಟಿ ಮರುಕ ವ್ಯಕ್ತಪಡಿಸಿದ್ದಾರೆ.

  • ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ

    ಮದರ್‌ವುಡ್‌ ಜರ್ನಿಯಲ್ಲಿ ತನ್ನ ತಾಯಿಯನ್ನ ನೆನೆದ ಪ್ರಣಿತಾ

    ಹುಭಾಷಾ ನಟಿ ಪ್ರಣಿತಾ ಸುಭಾಷ್ ತಾಯ್ತನದ ಆನಂದದಲ್ಲಿದ್ದು, ಪ್ರತಿಕ್ಷಣವನ್ನು ವಿಶೇಷ ಎಂಬಂತೆ ಕಳೆಯುತ್ತಿದ್ದಾರೆ. ತಾಯಿಯಾಗುತ್ತಿರುವ ಕುರಿತು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ ಈ ನಟಿ ತಮ್ಮ ಅಪ್ಡೇಟ್‍ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಬೇಬಿ ಬಂಪ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಪ್ರಣಿತಾ, ತಮ್ಮ ಸಿಹಿ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಂದು ಅಮ್ಮಂದಿರ ವಿಶೇಷ ದಿನವಾಗಿರುವುದರಿಂದ ಫೋಟೋವೊಂದನ್ನು ಶೇರ್ ಮಾಡಿ ತನ್ನ ಅಮ್ಮನನ್ನು ನೆನೆದಿದ್ದಾರೆ.

    ಕ್ಯೂಟ್ ಬೆಡಗಿ ಪ್ರಣಿತಾ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದು, ಇಂದು ಮತ್ತೊಂದು ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ, ನಾವು ಮಾತೃತ್ವದ ಪ್ರಯಾಣವನ್ನು ಪ್ರಾರಂಭಿಸುವವರೆಗೂ ನಮ್ಮ ಅಮ್ಮಂದಿರು ನಮಗಾಗಿ ಎಷ್ಟು ತ್ಯಾಗ ಮಾಡಿದ್ದಾರೆಂದು ನಮಗೆ ತಿಳಿದಿರುವುದಿಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ಪ್ರಣಿತಾ ಮುದ್ದಾಗಿ ಕಾಣುತ್ತಿದ್ದಾರೆ. ಇದನ್ನೂ ಓದಿ:  ರಾಜಕೀಯ ಪಕ್ಷ ಅಧಿಕಾರ ಹಿಡಿಯಲು ಆಪರೇಷನ್ ಕಮಲ ಅನಿವಾರ್ಯ: ಕಟೀಲ್ 

    ಈ ಸಾಲುಗಳನ್ನು ಓದಿದ ಅಭಿಮಾನಿಗಳು, ಇದು ಸತ್ಯ. ನೀವು ತುಂಬಾ ಮುದ್ದಾಗಿ ಕಾಣುತ್ತಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಉಸಿರುಗಟ್ಟಿಸುವ ಚಿತ್ರ ಎಂದು ಕಾಮೆಂಟ್ ಮಾಡಿದ್ದಾರೆ.

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಪತಿ ನಿತಿನ್ ರಾಜು ಜೊತೆ ಫೋಟೋ ಶೇರ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದರು. ಅಲ್ಲದೇ ಇತ್ತೀಚೆಗೆ ನಟಿ ತನ್ನ ಬೇಬಿ ಬಂಪ್ ಫೋಟೋ ಶೇರ್ ಮಾಡುವ ಜೊತೆಗೆ ವರ್ಕೌಟ್ ಮಾಡುವ ವೀಡಿಯೋವನ್ನು ಶೇರ್ ಮಾಡಿದ್ದರು. ಈ ವೀಡಿಯೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

  • ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್

    ಸಂಚಾರಿ ವಿಜಯ್ ‘ತಲೆದಂಡ’ ನೆನೆದ ಮಾಲಿವುಡ್ ಸೂಪರ್ ಸ್ಟಾರ್

    ಚಂದನವನದ ಸೂಕ್ಷ್ಮ ಮನಸ್ಸಿನ ವ್ಯಕ್ತಿ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಿನಿರಸಿಕರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಅವರು ತಮ್ಮ ಮೊದಲ ಸಿನಿಮಾದಲ್ಲೇ ಸಾಮಾಜಿಕ ಕಳಕಳಿ ಮೂಡಿಸಿ, ರಾಷ್ಟ್ರಮಟ್ಟದಲ್ಲಿ ಗೆದ್ದುಬಂದಿದ್ದರು. ಈ ನಟ ಹೆಚ್ಚು ಚಾಲೆಂಜಿಂಗ್ ಪಾತ್ರಗಳನ್ನು ಮಾಡಿದ್ದರಿಂದ ಅವರ ಬಗ್ಗೆ ಕನ್ನಡಿಗರಿಗೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ  ಅಭಿಮಾನಿಗಳು ಇದ್ದಾರೆ. ವಿಜಯ್ ಅವರು ದೈಹಿಕವಾಗಿ ಇಲ್ಲದಿದ್ದರೂ, ಅವರು ಮಾಡಿರುವ ಪಾತ್ರಗಳ ಬಗ್ಗೆ ಸಿನಿರಸಿಕರು ನೆನಪಿಸಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟಿ ಸಂಚಾರಿ ವಿಜಯ್ ಅವರ ‘ತಲೆತಂಡ’ ಸಿನಿಮಾವನ್ನು ನೆನೆದು, ಅವರನ್ನು ಹಾಡಿ ಹೊಗಲಿದ್ದಾರೆ.

    ಹೀರೋ ಎಂದರೆ ಕಮರ್ಷಿಯಲ್ ಸಿನಿಮಾಗಳನ್ನೆ ಹೆಚ್ಚು ಮಾಡಬೇಕು ಎನ್ನುವ ಕಾಸ್ಸೆಪ್ಟ್ ಇಟ್ಟುಕೊಳ್ಳದೆ ಸಮಾಜಕ್ಕೆ  ಸಂದೇಶ ಸಾರುವ ಪಾತ್ರಗಳನ್ನೆ ವಿಜಯ್ ಹೆಚ್ಚು ಮಾಡಿದ್ದಾರೆ. ಭಿನ್ನ ವ್ಯಕ್ತಿತ್ವ ಹೊಂದಿದ್ದ ಸಂಚಾರಿ ವಿಜಯ್ ಮೂಲತಃ ರಂಗಭೂಮಿ ಕಲಾವಿದ. ಶಿಸ್ತಿನ ಮಾತು, ನಡೆ, ನುಡಿಯಿಂದ ಚಿತ್ರರಂಗದಲ್ಲಿ ಭಿನ್ನ ಛಾಪು ಮೂಡಿಸಿದ ನಟ ಇವರು. ಈ ಹಿನ್ನೆಲೆ ಅವರು ಮಾಡಿದ್ದು ಕಡಿಮೆ ಸಿನಿಮಾವಾಗಿದ್ದರೂ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಹಿನ್ನೆಲೆ ವಿಜಯ್ ಕುರಿತು ಮಮ್ಮುಟ್ಟಿ ಮೆಚ್ಚುಗೆಯ ಮಾತುಗಳನ್ನು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಪೋಸ್ಟ್‌ನಲ್ಲಿ ಅವರು ‘ತಲೆತಂಡ’ ಸಿನಿಮಾ ಪೋಸ್ಟರ್ ಪೋಸ್ಟ್ ಮಾಡಿದ್ದು, ನಾನು ಸಂಚಾರಿ ವಿಜಯ್ ಅವರ ನೆನಪುಗಳನ್ನು ಮೆಲುಕು ಹಾಕುತ್ತಾ ಇದ್ದೆ. ಅವರು ಪ್ರಸ್ತುತ ನಮ್ಮ ಜೊತೆ ಇಲ್ಲ ಎಂಬುದನ್ನು ನಾನು ನಂಬುವುದಿಲ್ಲ. ನಾವಿಬ್ಬರು ಹೈದರಾಬಾದ್‍ನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದೆವು. ಈ ವೇಳೆ ಅವರು ನಾನು ನಿಮ್ಮ ದೊಡ್ಡ ಅಭಿಮಾನಿ ಎಂದು ಹೇಳಿದ್ದರು. ಅದನ್ನು ಕೇಳಿಸಿಕೊಂಡು ನಾನು ಧನ್ಯವಾಗಿದ್ದೆ. ಈ ವೇಳೆ ಅವರು ನನಗೆ ‘ತಲೆದಂಡ’ ಸಿನಿಮಾ ನೋಡಿ ಅಭಿಪ್ರಾಯ ತಿಳಿಸಿ ಎಂದಿದ್ದರು. ಆದರೆ ಇದೇ ಅವರ ಕೊನೆ ಸಿನಿಮಾವಾಗುತ್ತೆ ಎಂದು ಯಾರಿಗೆ ಗೊತ್ತಿತ್ತು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಮ್ಮ ಮನೆಯ ಮುದ್ದು ಸದಸ್ಯನನ್ನು ಪರಿಚಯ ಮಾಡಿಸಿದ ಹರಿಪ್ರಿಯಾ

    ಚಿತ್ರಮಂದಿರದಲ್ಲಿ ವಿಜಯ್ ಅವರ ಸಿನಿಮಾ ನೋಡುವುದರ ಮೂಲಕ ಸವಿ ನೆನಪುಗಳನ್ನು ಸಂಭ್ರಮಿಸೋಣ. ಅವರ ಹಾರ್ಡ್ ವರ್ಕ್ ಹಾಗೂ ಪ್ರತಿಭೆಯನ್ನು ನಾವೆಷ್ಟು ಪ್ರೀತಿಸಿದ್ದೇವೆ ಎನ್ನುವುದನ್ನು ತಿಳಿಯಲು ಅವರು ಕಾಯುತ್ತಿರುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

  • ‘ಮೀಟೂʼ ಆರೋಪದ ಬಳಿಕ ಸಂಗೀತಾ ಭಟ್‌ ಸಿನಿಲೋಕಕ್ಕೆ ಮತ್ತೆ ಕಮ್‌ಬ್ಯಾಕ್‌

    ‘ಮೀಟೂʼ ಆರೋಪದ ಬಳಿಕ ಸಂಗೀತಾ ಭಟ್‌ ಸಿನಿಲೋಕಕ್ಕೆ ಮತ್ತೆ ಕಮ್‌ಬ್ಯಾಕ್‌

    ಚಂದನವನದ ನಟಿ ಸಂಗೀತಾ ಭಟ್ ‘ಮೀಟೂ’ ಪ್ರಕರಣದಲ್ಲಿ ತಮಗಾದ ಶೋಷಣೆ ವಿರುದ್ಧ ಧ್ವನಿ ಎತ್ತಿದ್ದರು. ಈ ಹಿನ್ನೆಲೆ  ಈ ನಟಿ ಚಿತ್ರರಂಗದಿಂದ ದೂರ ಉಳಿದಿದ್ದರು. ಆದರೆ ಮತ್ತೆ ಕಿಶೋರ್‌ ಜೋಡಿಯಾಗಿ ಸಿನಿಜರ್ನಿ ಮುಂದುರಿವಸಲು ಚಂದನವನಕ್ಕೆ ಬರುತ್ತಿದ್ದಾರೆ.

    ʼದಯವಿಟ್ಟು ಗಮನಿಸಿʼ, ʼಎರಡನೇ ಸಲʼ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದ ಈ ನಟಿ ಮೀಟೂ ಪ್ರಕರಣದ ನಂತರ ಮತ್ತೆ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಹಲವು ವರ್ಷಗಳ ನಂತರ ಸಿನಿಲೋಕಕ್ಕೆ ಬರುತ್ತಿದ್ದೇನೆ ಎಂದು ಸಂಗೀತಾ ಸೋಶಿಯಲ್ ಮೀಡಿಯಾದಲ್ಲಿ ಬರೆದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಸಂಗೀತಾ, ನಮಸ್ಕಾರ, ಈ ಪೋಸ್ಟ್ ನೊಂದಿಗೆ, ನನ್ನ ಬಹುನಿರೀಕ್ಷಿತ ಸಿನಿಮಾದಿಂದ ಪುನರಾಗಮನವನ್ನು ಘೋಷಿಸಲು ನಾನು ತುಂಬ ಸಮಯ ಕಾತರದಿಂದ ಕಾಯುತ್ತಿದ್ದೆ. ನಟನೆ ಯಾವಾಗಲೂ ನನ್ನ ಮೊದಲ ಪ್ರೀತಿ, ಅದರಿಂದ ದೂರ ಉಳಿಯುವುದು ನನ್ನ ಜೀವನದ ಕಠಿಣ ಭಾಗವಾಗಿತ್ತು. ನೀವೆಲ್ಲರೂ ಈ ಹಿಂದೆ ನನ್ನ ಕೆಲಸಕ್ಕೆ ತುಂಬಾ ಮೆಚ್ಚುಗೆ ಹಾಗೂ ಬೆಂಬಲ ನೀಡಿದ್ದೀರಿ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

    ನಿಮ್ಮ ಪ್ರೀತಿ, ವಿಶ್ವಾಸ ಹಾಗೂ ಬೆಂಬಲ ಸದಾಕಾಲ ಹೀಗೆ ನನ್ನ ಕೆಲಸದ ಮೇಲೆ ಇರುತ್ತದೆ ಎಂದು ನಾನು ಬಲವಾಗಿ ನಂಬುತ್ತೇನೆ. ನಾನು ಪ್ರಸ್ತುತ ಭಾಗವಾಗಿರುವ ಚಲನಚಿತ್ರದ ಕೆಲವು ಚಿತ್ರಪಟಗಳನ್ನೂ ಹಂಚಿಕೊಳ್ಳುತ್ತಿದ್ದೇನೆ. ಚಿತ್ರೀಕರಣದ ಅಂತಿಮ ಹಂತದಲ್ಲಿದ್ದೇವೆ. ನಾನು ಪ್ರಸ್ತುತ ಭಾಗವಾಗಿರುವ ಇತರ ಫೋಟೋಗಳನ್ನು ಶೀಘ್ರದಲ್ಲೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಇನ್‍ಸ್ಟಾಗ್ರಾಮ್‍ನಲ್ಲಿ ನನ್ನೊಂದಿಗೆ ಸಂಪರ್ಕದಲ್ಲಿರಿ. ಸುಂದರ ನೆನಪುಗಳಿಗಾಗಿ ‘ರೂಪಾಂತರ’ ತಂಡಕ್ಕೆ ಧನ್ಯವಾದಗಳು ಎಂದು ಬರೆದು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

    Sangeetha Bhat Age, Height, Weight, Body, Wife or Husband, Caste, Religion, Net Worth, Assets, Salary, Family, Affairs, Wiki, Biography, Movies, Shows, Photos, Videos and More

    ‘ರೂಪಾಂತರ’ ಸಿನಿಮಾತಂಡದ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಸಂಗೀತಾ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಚಂದನವನದ ‘ಹುಲಿ’ ಸಿನಿಮಾ ಖ್ಯಾತಿಯ ಕಿಶೋರ್ ಮತ್ತು ಚಿತ್ರತಂಡದ ಜೊತೆ ತೆಗೆಸಿಕೊಂಡಿದ್ದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಪ್ರಸ್ತುತ ಮೂಡಿಗೆರೆಯಲ್ಲಿ ಶೂಟ್ ನಡೆಯುತ್ತಿದ್ದು, ಪ್ರಕೃತಿಯ ಮಡಿಲಿನಲ್ಲಿ ಸಿನಿಮಾ ಶೂಟ್ ನಡೆಯುತ್ತಿದೆ. ಇದನ್ನೂ ಓದಿ:  ವರ್ಷಾಂತ್ಯಕ್ಕೆ ನಿರ್ದೇಶನದ ಹೊಸ ಪಯಣ ಮಾಡಲು ರೆಡಿಯಾಗುತ್ತಿದ್ದಾರೆ ಕೃಷ್ಣ ಅಜಯ್ ರಾವ್

  • ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಚಂದನವನದ ನಟಿ ಆಶಾ ಭಟ್ ತಮ್ಮ ಫಸ್ಟ್ ಕವರ್ ಸಾಂಗ್ ಬಿಡುಗಡೆ ಮಾಡಿದ್ದಾರೆ. ಈ ಕವರ್ ಸಾಂಗ್‍ಗೆ ಅವರು ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾಗಿದ್ದಾರೆ.

    ರಾಬರ್ಟ್ ಖ್ಯಾತಿಯ ಸಿಂಪಲ್ ಹುಡುಗಿ ಆಶಾ ಯಾವಾಗಲೂ ಸಾಂಪ್ರದಾಯಿಕ ಉಡುಗೆ, ಆಟ ಮತ್ತು ಅಡುಗೆ ಮಾಡುವ ಮೂಲಕ ಸುದ್ದಿಯಾಗುತ್ತಿದ್ದರು, ಆದರೆ ಈಗ ಕನ್ನಡ ದಶಕದ ಸೂಪರ್ ಹಿಟ್ ಸಾಂಗ್ ಮತ್ತು ಸೂಪರ್ ಹಿಟ್ ಸಿನಿಮಾವನ್ನು ಕನ್ನಡಿಗರಿಗೆ ನೆನಪಿಸಿದ್ದಾರೆ. ತಮ್ಮ ಕವರ್ ಸಾಂಗ್ ಝಲಕ್ ನನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿರುವ ಅವರು, ಕನ್ನಡದ ಎವರ್‌ಗ್ರೀನ್ ಮೂವೀ ‘ಅಮೃತವರ್ಷಿಣಿ’ ಸಿನಿಮಾದ ‘ತುಂತುರು ಅಲ್ಲಿ ನೀರ ಹಾಡು’ ಸಾಂಗ್‍ನನ್ನು ತಮ್ಮ ಸುಮಧುರ ಕಂಠದಲ್ಲಿ ಹಾಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

     

    View this post on Instagram

     

    A post shared by Asha Bhat (@asha.bhat)

    ಆಶಾ ಕನ್ನಡದಲ್ಲಿ ಮಾಡಿರುವುದು ಒಂದೇ ಸಿನಿಮಾವಾದರೂ ತಮ್ಮ ಸೃಜನಶಿಲತೆ ಮತ್ತು ಆಚಾರದಿಂದ ಕನ್ನಡಿಗರ ಮನವನ್ನು ಗೆದ್ದಿದ್ದಾರೆ. ತಮ್ಮ ಕವರ್ ಸಾಂಗ್ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕೊನೆಗೂ ನನ್ನ ಮೊದಲ ಕವರ್ ಸಾಂಗ್ ಬಿಡುಗಡೆಯಾಗಿದೆ. ನೀವು ನನ್ನ ಪೂರ್ತಿ ಸಾಂಗ್ ಕೇಳಿಸಿಕೊಳ್ಳಬೇಕು ಎಂದರೆ ನನ್ನ ಇನ್‍ಸ್ಟಾ ಬಯೋದಲ್ಲಿ ಲಿಂಕ್ ಹಾಕಿದ್ದೇನೆ. ವೀಡಿಯೋವನ್ನು ವೀಕ್ಷಿಸಿ, ಪ್ರತಿಕ್ರಿಯಿಸಿ. ಈ ವೀಡಿಯೋ ಮಾಡಲು ಸಹಾಯ ಮಾಡಿದ ನನ್ನ ತಂಡಕ್ಕೆ ಧನ್ಯವಾದಗಳು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಈ ವೀಡಿಯೋದಲ್ಲಿ ಆಶಾ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಹಾಡನ್ನು ಹಾಡುವುದರ ಜೊತೆಗೆ ಭಾವನೆಯನ್ನು ಸಖತ್ ಆಗಿ ಎಕ್ಸ್‍ಪ್ರೆಸ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಪ್ರಕೃತಿ ಜೊತೆ ನಟಿಯನ್ನು ಸುಂದರವಾಗಿ ಕ್ಯಾಪ್ಚರ್ ಮಾಡಲಾಗಿದೆ. ಸುಂದರ ಜಾಗದಲ್ಲಿ ಆಶಾ ಇನ್ನೂ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದದಲ್ಲಿ ಆ್ಯಕ್ಟವ್ ಇರುವ ಈ ನಟಿ ತಮ್ಮ ಎಲ್ಲ ಅಪ್ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಆಶಾ ಹಸಿರು ಕ್ರಾಂತಿಯ ಸೂಪರ್ ಹೀರೋಗಳು ಮತ್ತು ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ ಮತ್ತು ತುಳಸಿ ಗೌಡ ಅವರ ಜೊತೆಗೆ ಕೆಲವು ಕ್ಷಣ ಕಳೆದಿದ್ದರು. ಈ ಕುರಿತು ಸಹ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಟ್ರೋಲ್‌ಗೆ ಆಹಾರವಾದ ಬಾಲಿವುಡ್ ನಟಿ ಕರೀನಾ ಆ ಎರಡು ಪೀಸ್ ಬಟ್ಟೆ

    2014ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಅವಾರ್ಡ್ ಗೆದ್ದ ಈ ನಟಿ ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳಲ್ಲಿಯು ನಟಿಸಿದ್ದು, ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಬಗ್ಗೆ ಫೋಷಣೆಯನ್ನು ಮಾಡಿಲ್ಲ.

  • ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!

    ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಬಿಚ್ಚಿಟ್ಟ ಜನಾರ್ದನ ರೆಡ್ಡಿ ಪುತ್ರ!

    ಅಪ್ಪು ಅಂದ್ರೆ ಅಪ್ಪು. ಅವರಿಗೆ, ಪ್ರೀತಿ, ಸ್ನೇಹ, ಆತ್ಮೀಯತೆ, ಸ್ಟಾರ್ ಎನ್ನುವ ಹಮ್ಮು-ಬಿಮ್ಮು ಇಲ್ಲದೇ ಎಲ್ಲರೊಳಗೆ ಒಬ್ಬರಾಗಿ ಬೆರೆಯುತ್ತಿದ್ದ ಪವರ್ ಸ್ಟಾರ್ ದಿ.ಪುನೀತ್ ರಾಜ್‍ಕುಮಾರ್ ಎಲ್ಲರೊಟ್ಟಿಗೆ ಒಡನಾಟ ಹೊಂದಿದ್ದವರು. ಅದೇ ರೀತಿ ಮಾಜಿ ಸಚಿವ ಜನಾರ್ದನ ರೆಡ್ಡಿ ಕುಟುಂಬಕ್ಕೂ ಅಪ್ಪು ಕುಟುಂಬಕ್ಕೂ ಒಂದೊಳ್ಳೆ ಅವಿನಾಭಾವ ಸಂಬಂಧವಿತ್ತು. ಈಗ ಅಪ್ಪು ಆಶೀರ್ವಾದೊಂದಿಗೆ ಕಿರೀಟಿ ಬಣ್ಣದ ಲೋಕಕ್ಕೆ ಅಡಿ ಇಡಲು ಸಜ್ಜಾಗಿದ್ದಾರೆ.

    ಒಂದಷ್ಟು ತಯಾರಿ ಮಾಡಿಕೊಂಡು ದೊಡ್ಡ ತಾರಾಬಳಗ, ತಾಂತ್ರಿಕ ಬಳಗದೊಂದಿಗೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡ್ತಿರುವ ಕಿರೀಟಿ, ಅಪ್ಪು ಜೊತೆಗಿನ ಸುಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ.

    ಅಪ್ಪು ಸರಳತೆ ಕೊಂಡಾಡಿದ ಕಿರೀಟಿ!
    ಅಪ್ಪು ಅಂದ್ರೆ ಕಿರೀಟಿಗೆ ಅಚ್ಚುಮೆಚ್ಚು. ಪ್ರೀತಿಯ ಹುಚ್ಚು. ಬಾಲ್ಯದಲ್ಲೊಮ್ಮೆ ಕಿರೀಟಿ ಅಪ್ಪು ಭೇಟಿಯಾದ ಕ್ಷಣ ಹಾಗೂ ‘ಜಾಕಿ’ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಭೇಟಿಯಾದ ಎರಡು ಘಟನೆಗಳನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ವೊಂದನ್ನು ಮಾಡಿದ್ದಾರೆ. ಅಪ್ಪು ಸರಳತೆ, ವಿನಯತೆ, ನಮ್ರತೆ, ಆತ್ಮೀಯತೆ ಎಲ್ಲವನ್ನು ಅದ್ಭುತ ಬರವಣೆಗೆ ಮೂಲಕ ಕಿರೀಟಿ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಕಿರೀಟಿ ಪೆÇೀಸ್ಟ್‍ನಲ್ಲಿ, ಈ ಎರಡು ಫೋಟೋಗಳ ನಡುವಿನ ವ್ಯತ್ಯಾಸ 10 ವರ್ಷವಾಗಿದೆ. ಆದರೂ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. 2010ರಲ್ಲಿ ‘ಜಾಕಿ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಾನು ಅಪ್ಪು ಸರ್ ಅವರನ್ನು ಮೊದಲ ಸಲ ಭೇಟಿಯಾದೆ. ಅವರ ಡ್ಯಾನ್ಸ್, ಆ್ಯಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ. ಆದರೆ, ಅವರು ಆಫ್ ಸ್ಕ್ರೀನ್‍ನಲ್ಲಿದ್ದ ರೀತಿ ಮನಸ್ಸಿಗೆ ಹತ್ತಿರವಾಯಿತು ಎಂದು ನೆನೆಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.

    ನಾವು ಥಿಯೇಟರ್‍ನಿಂದ ನನ್ನ ಮನೆಗೆ ಹೋಗುತ್ತಿದ್ದಾಗ, ಮಳೆ ಬೀಳುತ್ತಿತ್ತು. ಪುನೀತ್ ಸರ್ ಅವರೆ ನಮಗೆ ಕೊಡೆ ಹಿಡಿದರು. ನೃತ್ಯದ ಬಗ್ಗೆ ಮತ್ತು ಅವರ ಆ್ಯಕ್ಷನ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಚಿಕ್ಕ ಹುಡುಗನಿಗೆ ಕೊಡೆ ಹಿಡಿದ ಸೂಪರ್‌ಸ್ಟಾರ್. ನಮ್ಮ ಕನಸಿನಲ್ಲಿಯೂ ಊಹಿಸಲಾಗದ ಸಂಗತಿ. ಅದು ಪುನೀತ್ ಸರ್ ಅವರಿಂದ ಮಾತ್ರ ಸಾಧ್ಯ. ಆ ದಿನ ನಾನು ಸರಳತೆಯ ಮೌಲ್ಯವನ್ನು ಅರಿತೆ. ಇದು ಅಪ್ಪು ಸರ್ ಅವರಿಂದ ನಾನು ಅತ್ಯಮೂಲ್ಯವಾದ ಪಾಠ ಎಂದರು.

    ಜಗತ್ತಿಗೆ ನನ್ನನ್ನು ಪರಿಚಯಿಸಿಕೊಳ್ಳಲು ಕೇವಲ ಒಂದು ದಿನ ಬಾಕಿ. ಇದೆಲ್ಲಾ ಶುರುವಾಗಿದ್ದು ಪುನೀತ್ ರಾಜ್‍ಕುಮಾರ್ ಸರ್ ಅವರಿಂದ. ಸ್ಫೂರ್ತಿ, ಮಾದರಿ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಜೀವನದ ಮಾರ್ಗದರ್ಶಿ ಅವರು. ನಿಮ್ಮ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ ಸರ್. ನನ್ನ ಮೇಲಿನ ನಿಮ್ಮ ನಂಬಿಕೆಯೆ ರಕ್ಷಾಕವಚ. ನಾನು ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನೀವು ಮತ್ತು ನಮ್ಮ ಜನತೆ ಯಾವಾಗಲೂ ಹೆಮ್ಮೆಪಡುವಂತೆ ಮಾಡಲು ಸದಾ ಶ್ರಮಿಸುತ್ತೇನೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

    ಕಿರೀಟಿ ಹೀಗೆ ಅಪ್ಪು ಒಟ್ಟಿಗಿನ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು, ತಮ್ಮ ಮುಂದಿನ ಸಿನಿಮಾ ಹಾದಿಗೆ ಜೊತೆಯಾಗಿ ಇರಬೇಕೆಂದು ಕೇಳಿಕೊಂಡಿದ್ದಾರೆ. ಅಪ್ಪು ಆರ್ಶೀವಾದದೊಂದಿಗೆ ಹೊಸ ಸಿನಿಮಾಗೆ ಕಿರೀಟಿ ಮುನ್ನುಡಿ ಬರೆಯುತ್ತಿದ್ದು, ನಾಳೆ ಅದ್ಧೂರಿಯಾಗಿ ಕಿರೀಟಿ ಅವರ ಬೊಚ್ಚಲ ಚಿತ್ರ ಸೆಟ್ಟೇರುತ್ತಿದೆ. ರಾಜಮೌಳಿಯ ಬಲದೊಂದಿಗೆ ರವಿಚಂದ್ರನ್ ನಂತಹ ದಿಗ್ಗಜ ತಾರೆಯರ ಸಾಥ್ ನೊಂದಿಗೆ ಕಿರೀಟಿ ಮೊದಲ ಸಿನಿಮಾ ಮುಹೂರ್ತ ನೆರವೇರಲಿದೆ.

  • ಕಾರು ಡ್ರೈವಿಂಗ್‌ ಮಾಡ್ಕೊಂಡೆ ಆಸ್ಪತ್ರೆಗೆ –  ಹೆಣ್ಣು ಮಗುವಿನ ತಾಯಿಯಾದ ದಿಶಾ ಮದನ್

    ಕಾರು ಡ್ರೈವಿಂಗ್‌ ಮಾಡ್ಕೊಂಡೆ ಆಸ್ಪತ್ರೆಗೆ – ಹೆಣ್ಣು ಮಗುವಿನ ತಾಯಿಯಾದ ದಿಶಾ ಮದನ್

    ಫ್ರೆಂಚ್ ಬಿರಿಯಾನಿ ಬ್ಯೂಟಿ ದಿಶಾ ಮದನ್ ಯಾವಾಗಲೂ ಡಿಫರೆಟ್ ಆಗಿ ತಮ್ಮ ಸ್ಪೆಷಲ್ ವಿಷಯಗಳನ್ನು ಹಂಚಿಕೊಳ್ಳುತ್ತಾರೆ. ಇಂದು ಸಹ ತಮಗೆ ಹೆಣ್ಣು ಮಗುವಾದ ವೀಡಿಯೋವನ್ನು ಕ್ರಿಯೇಟಿವ್ ಆಗಿ ಮಾಡಿ ಶೇರ್ ಮಾಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ದಿಶಾ ಇಂದು ತಮ್ಮ ವಿಶೇಷವಾದ ವೀಡಿಯೋವೊಂದನ್ನು ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈವೀಡಿಯೋದಲ್ಲಿ, ತುಂಬು ಗರ್ಭಿಣಿಯಾದ ದಿಶಾ ಕಾರನ್ನು ಓಡಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದರೆ, ನಂತರ ಅವರು ಆಸ್ಪತ್ರೆಯಲ್ಲಿ ಆಡ್ಮಿಟ್ ಆಗಿರುವುದನ್ನು ನೋಡಬಹುದು. ನಂತರ ದಿಶಾ, ಪತಿ ಶಶಾಂಕ್ ಆಸ್ಪತ್ರೆಯಲ್ಲಿ ಮಗುವಿನ ನಿರೀಕ್ಷೆಯಲ್ಲಿ ಇರುವುದನ್ನು ಸಹ ವೀಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ವಿಭಿನ್ನವಾಗಿ ಪ್ರೆಗ್ನೆನ್ಸಿ ಫೋಟೋಶೂಟ್ ಮಾಡಿಸಿಕೊಂಡ ನಟಿ ದಿಶಾ..!

     

    View this post on Instagram

     

    A post shared by Disha Madan (@disha.madan)

    ಕೊನೆಯಲ್ಲಿ ಶಶಾಂಕ್, ದಿಶಾ ಮತ್ತು ಅವರ ಮೊದಲ ಮಗ ವಿಹಾನ್ ಕೈಯನ್ನು ಒಬ್ಬೊಬ್ಬರಾಗಿಯೇ ತೆಗೆದು ಮಾರ್ಚ್ 01 2022, ಇದು ಹೆಣ್ಣು ಮಗು ಎಂದು ವುಡ್ ನಲ್ಲಿ ಬರೆದಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಕೊನೆಯಲ್ಲಿ ತಮ್ಮ ಮುದ್ದು ಹೆಣ್ಣು ಮಗುವಿನ ಮುಖವನ್ನು ತೋರಿಸಿದ್ದು, ಫುಲ್ ಸ್ಪೆಷಲ್ ಮತ್ತು ಕ್ರಿಯೇಟಿವ್ ಆಗಿ ವೀಡಿಯೋ ಮಾಡಲಾಗಿದೆ.

    ಮಗಳ ಮುಖ ತೋರಿಸುವುದು ಅಲ್ಲದೇ ಮಗಳ ಹೆಸರು ‘ಅವಿರಾ’ ಎಂದು ರಿವೀಲ್ ಮಾಡುತ್ತಾರೆ. ನಂತರ ತನ್ನ ತಂಗಿಯನ್ನು ವಿಹಾನ್ ಎತ್ತಿಕೊಂಡಿರುವ ಫೋಟೋವನ್ನು ಸಹ ಈ ವೀಡಿಯೋದಲ್ಲಿ ಶೇರ್ ಮಾಡಲಾಗಿದೆ.

    ದಂಪತಿಯ ಕ್ರಿಯೇಟಿವ್ ವೀಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಭಿಮಾನಿಗಳು, ಸೆಲೆಬ್ರಿಟಿಗಳು ತಾಯಿ ಮತ್ತು ಮಗುವಿಗೆ ಆರೋಗ್ಯದ ಬಗ್ಗೆ ಕೆಲವು ಟಿಪ್ಸ್ ಕೊಟ್ಟಿದ್ದು, ಶುಭ ಹಾರೈಸಿದ್ದಾರೆ.

    ಜನವರಿಯಲ್ಲಿ ದಿಶಾ ಸಖತ್ ಬೋಲ್ಡ್ ಲುಕ್‍ನಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದು, ಫೋಟೋಗಳು ವೈರಲ್ ಆಗಿದ್ದವು. ಈ ಫೋಟೋ ನೋಡಿದ ಅಭಿಮಾನಿಗಳು ಫೋಟೋ ನೋಡಿ ಫಿದಾ ಆಗಿದ್ದರು. ಫೋಟೋಗಳನ್ನು ಶೇರ್ ಮಾಡಿದ ಅವರು, ಮಾರ್ಚ್ 2022ಕ್ಕೆ ಕಾಯುತ್ತಿರುವೆ. ಮೂರರಿಂದ ನಾಲ್ವರಾಗುತ್ತಿದ್ದೇವೆ. 2022ರಲ್ಲಿ ನನ್ನ ಮೊದಲ ಮಗ ಅಣ್ಣನಾಗುತ್ತಾನೆ ಎಂದು ಇನ್‍ಸ್ಟಾದಲ್ಲಿ ಬರೆದುಕೊಂಡು ತಾವು 2ನೇ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇದನ್ನೂ ಓದಿ: ಆರ್ಯನ್ ಖಾನ್ ಪ್ರಕರಣದಿಂದಲೇ ಖುಲಾಸೆಯಾಗುವ ಸಾಧ್ಯತೆ!

    ದಿಶಾ ಮದನ್ ಹಾಗೂ ಪತಿ ಶಶಾಂಕ್ ವಾಸುಕಿ ಗೋಪಾಲ್ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2019ರಲ್ಲಿ ಪುತ್ರ ವಿಹಾನ್ ಜನಿಸಿದ್ದು, 2020ರಲ್ಲಿ ಹೊಸ ಮನೆ ಖರೀದಿಸಿ ಗೃಹಪ್ರವೇಶ ಮಾಡಿದ್ದಾರೆ. ಇಂದು ಈ ದಂಪತಿ ಹೆಣ್ಣು ಮಹು ಜನಿಸಿದೆ.