Tag: Chandan

  • ನಿರೂಪಕ ಚಂದನ್ ಸಾವಿನ ಬಳಿಕ ಮಗನ ಕತ್ತು ಕೊಯ್ದು, ಆ್ಯಸಿಡ್ ಕುಡಿದ ಪತ್ನಿ

    ನಿರೂಪಕ ಚಂದನ್ ಸಾವಿನ ಬಳಿಕ ಮಗನ ಕತ್ತು ಕೊಯ್ದು, ಆ್ಯಸಿಡ್ ಕುಡಿದ ಪತ್ನಿ

    ಚಿಕ್ಕಬಳಾಪುರ: ಇತ್ತೀಚೆಗಷ್ಟೆ ಅಪಘಾತದಲ್ಲಿ ಸಾವನ್ನಪ್ಪಿದ ನಿರೂಪಕ ಚಂದನ್ ಅವರ ಪತ್ನಿ ಮೀನಾ ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಮಗ ತುಷಾರ್‍ನ ಕತ್ತು ಕೊಯ್ದು ಕೊಲೆ ಮಾಡಿ, ಆ್ಯಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಂದನ್ ಮಗ ತುಷಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

    ಚಂದನ್ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದ ಪತ್ನಿ ಮೀನಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಮನನೊಂದಿದ್ದ ಮೀನಾ ಏನಾದ್ರೂ ಮಾಡಿಕೊಳ್ಳಬಹುದೆಂದು ಆಕೆಯ ಅಣ್ಣ ಮತ್ತು ತಂದೆ ಒಂದು ವಾರದಿಂದ ಕಾವಲು ಕಾಯುತ್ತಿದ್ದರು. ಇಂದು ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಮೀನಾ ಮಗನನ್ನು ಕೊಲೆಗೈದಿದ್ದಾರೆ.

    ಸದ್ಯ ಮೀನಾ ಸ್ಥಿತಿ ಚಿಂತಾಜನಕವಾಗಿದ್ದು, ಕೊಲೊಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ: ಚಂದನ್‍ಗೆ ಅನುಶ್ರೀ ಸಂತಾಪ

    ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ: ಚಂದನ್‍ಗೆ ಅನುಶ್ರೀ ಸಂತಾಪ

    ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಿರೂಪಕ ಚಂದನ್ ಅವರಿಗೆ ನಟಿ, ನಿರೂಪಕಿ ಅನುಶ್ರೀ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಚಂದನ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    “ಕನ್ನಡದ ಕಂಪು ಇವರ ಕಂಠದಿಂದ ಬರುವ ಪದಗಳಲ್ಲಿ ಇತ್ತು. ಕನ್ನಡ ಕಿರುತೆರೆ ಕಂಡಂತೆ ಅಚ್ಚ ಕನ್ನಡ ನಿರೂಪಕರಲ್ಲಿ ಇವರು ಉನ್ನತ ಸ್ಥಾನದಲ್ಲಿದ್ದರು. ನಾನು ಕೂಡ ಇವರ ಅಭಿಮಾನಿ. ಅದನೊಮ್ಮೆ ಅವರಿಗೆ ಹೇಳಿದ್ದೆ ಕೂಡ. ಮತ್ತೆ ನಾ ಹೇಳಲು ಅವರು ಕೇಳಲು ಇಲ್ಲ. ಅವರ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ. ಚಂದನ್ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಅನುಶ್ರೀ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

    ಚಂದನ್ ನಿರೂಪಕ ಮಾತ್ರವಲ್ಲದೆ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಡಾ, ರಾಜ್‍ಕುಮಾರ್ ಅವರ ಅಭಿಮಾನಿಯಾಗಿದ್ದ ಚಂದನ್ ರಾಜ್‍ಕುಮಾರ್ ಅವರ ಕಾರ್ಯಕ್ರಮಗಳಲ್ಲೂ ನಡೆಸಿಕೊಡುತ್ತಿದ್ದರು. ಆ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದಿತ್ತು.

    ನಿಂತ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ವಾಹಿನಿಯಲ್ಲಿ ನಿರೂಪಕರಾಗಿದ್ದ ಚಂದನ್ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದರು. ಚಂದನ್ ಅವರ ಕನ್ನಡ ಉಚ್ಛಾರವನ್ನು ಕಂಡು ಸಾಕಷ್ಟು ಜನ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆಯ ಅಸಲಿ ಕಿಡ್ನಾಪ್ ಕಥೆ ಇಲ್ಲಿದೆ

    ಲಕ್ಷ್ಮೀ ಬಾರಮ್ಮ ಖ್ಯಾತಿಯ ಗೊಂಬೆಯ ಅಸಲಿ ಕಿಡ್ನಾಪ್ ಕಥೆ ಇಲ್ಲಿದೆ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರತಿ ನಿತ್ಯ ಪ್ರಸಾರ ಆಗುತ್ತಿರುವ ಲಕ್ಷ್ಮೀ ಬಾರಮ್ಮ ಧಾರಾವಾಹಿ ಸಾಕಷ್ಟು ಮಹಿಳಾಮಣಿಯರ ಮನಸ್ಸು ಗೆದ್ದಿರುವ ಧಾರವಾಹಿಗಳ ಟಾಪ್ ಲಿಸ್ಟ್ ನಲ್ಲಿದೆ. ಇದರಲ್ಲಿ ಲಕ್ಷ್ಮಿ ಬಾರಮ್ಮ ಗೊಂಬೆ ಅಲಿಯಾಸ್ ನೇಹಾ ಗೌಡ ಈಗ ಕಿಡ್ನಾಪ್ ಆಗಿದ್ದಾರೆ. ಆದರೆ ಕಿಡ್ನಾಪ್ ಹಿಂದಿನ ಅಸಲಿ ಕಥೆ ಬೇರೆನೇ ಇದೆ.

    ಹೌದು. ಕೆಲ ದಿನಗಳ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಗೊಂಬೆ ಪಾತ್ರ ನಿರ್ವಹಿಸುತ್ತಿದ್ದ ನಟಿ ನೇಹಾ ಗೌಡ ಕಿಡ್ನಾಪ್ ಆಗಿದ್ದರು. ಧಾರಾವಾಹಿ ಪ್ರಿಯರಿಗೆ ಗೊಂಬೆಯನ್ನು ಕಿಡ್ನಾಪ್ ಮಾಡಿದವರು ಯಾರು ಎನ್ನುವುದೇ ಆತಂಕ? ಯಾರು ಮಾಡಿರುತ್ತಾರೆ? ಅಥವಾ ಹೊಸ ವಿಲನ್ ಎಂಟ್ರಿ ಆಗುತ್ತಾ ಅಂತೆಲ್ಲಾ ಪ್ರಶ್ನೆ ಹಾಕಿಕೊಂಡು ಕುತುಹಲದಿಂದ ಕಾಯುತ್ತಿದ್ದಾರೆ. ಆದರೆ ಧಾರಾವಾಹಿಯಲ್ಲಿ ಮಾತ್ರ ಗೊಂಬೆ ಇನ್ನು ಸಿಕ್ಕಿಲ್ಲ. ವಾರಗಟ್ಟಲೆಯಿಂದ ಗೊಂಬೆಗಾಗಿ ಹುಡುಕಾಟ ನಡೆಯುತ್ತಲೇ ಇದೆ.

    ಗೊಂಬೆ ಕಿಡ್ನಪ್ ನ ಅಸಲಿ ಕಥೆಯೇ ಬೇರೆ ಇದೆ. ಅಂದರೆ ಕಳೆದ ತಿಂಗಳಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೊಂಬೆ ಕೆಲಸದಿಂದ ಸಣ್ಣದೊಂದು ಬ್ರೇಕ್ ತೆಗೆದುಕೊಂಡಿದ್ದಾರೆ. ಹಾಗಂತ ಧಾರಾವಾಹಿಯಲ್ಲಿ ಅಭಿನಯಿಸುವುದನ್ನು ಬಿಟ್ಟಿಲ್ಲ. ತನ್ನ ಪತಿ ಚಂದನ್ ಜೊತೆ ಹನಿಮೂನ್ ಹೋಗಿದ್ದಾರೆ. ಇದನ್ನು ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷೀ ಬಾರಮ್ಮ ಖ್ಯಾತಿಯ ಗೊಂಬೆ

    ಹಾಂಕಾಂಗ್ ನ ಪ್ರವಾಸಿ ಸ್ಥಳಗಳಿಗೆ ನೇಹಾ ಗೌಡ ಹಾಗೂ ಚಂದನ್ ಭೇಟಿ ನೀಡಿದ್ದು, ನವದಂಪತಿ ಜೊತೆಯಲ್ಲಿ ತೆಗೆಸಿಕೊಂಡು ಫೋಟೋಗಳನ್ನ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

    ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೇಹಾ ಅವರ ಮದುವೆ ಕಾರ್ಯಕ್ರಮ ಫೆಬ್ರವರಿ 18 ರಂದು ನಡೆದಿತ್ತು. ನಟಿ ಸೋನುಗೌಡ ಅವರ ಸಹೋದರಿ ಆಗಿರುವ ನೇಹಾಗೌಡ ತಮ್ಮ ಬಾಲ್ಯದ ಗೆಳೆಯ ಚಂದನ್ ಅವರ ವಿವಾಹ ಮೈಸೂರು ರಸ್ತೆಯಲ್ಲಿರುವ ಸಾಯಿ ಪ್ಯಾಲೆಸ್ ನಲ್ಲಿ ನಡೆದಿತ್ತು.

  • ‘ಪ್ರೇಮ ಬರಹ’ದಲ್ಲಿ ವಿವಾದ ಬರೆದುಕೊಂಡ ನಟ ಚಂದನ್

    ‘ಪ್ರೇಮ ಬರಹ’ದಲ್ಲಿ ವಿವಾದ ಬರೆದುಕೊಂಡ ನಟ ಚಂದನ್

    ಬೆಂಗಳೂರು: ಇನ್ನೂ ಪೂರ್ತಿ ಹೀರೋ ಅನ್ನಿಸಿಕೊಳ್ಳದೇ ಇರೋ ಹುಡುಗರು ಏನೇನೋ ಮಾತಾಡಿ ವಿವಾದ ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಎರಡು ಮೂರು ಸಿನಿಮಾಗಳಲ್ಲಿ ನಾಯಕನಾಗಿ ಗುರುತಿಸಿಕೊಂಡಿರುವ ಚಂದನ್ ಎನ್ನುವ ನಟ ಏಕಾಏಕಿ ಕನ್ನಡ ಸಿನಿಮಾ ವಿಮರ್ಶಕರ ಕುರಿತಾಗಿ ಮಾತಾಡಿ ಇಲ್ಲದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ ಕಾಣುತ್ತಿದೆ.

    ಪ್ರೇಮ ಬರಹ ಸಿನಿಮಾಗೆ ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಬಂದಿರಲಿಲ್ಲ. ಬಹುತೇಕ ಎಲ್ಲ ಪತ್ರಿಕೆಗಳು, ಆನ್ ಲೈನ್ ಮೀಡಿಯಾಗಳು ಈ ಸಿನಿಮಾಗೆ ಕಡಿಮೆ ಅಂಕ ನೀಡಿದ್ದವು. ಇದರಿಂದ ಸಿಕ್ಕಾಪಟ್ಟೆ ಬೇಸರಕ್ಕೊಳಗಾದ ಚಂದನ್, `ಕಾಸು ಕೇಳಿ ರಿವ್ಯೂ ಬರೆಯುವವರನ್ನು ನಂಬಬೇಡಿ. ಅವರು ನನ್ನ – ಗೆ ಸಮ’ ಎಂದು ಹೇಳಿ ಕೂದಲು ಕಿತ್ತುಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೋಡುವ ಜನರಿಗೆ ಚಂದನ್ ಅವರ ಮಾತು ತಪ್ಪು ಸಂದೇಶ ರವಾನಿಸುವಂತಿದೆ.

    ಚಂದನ್ ಸದಾ ಒಂದಲ್ಲ ಒಂದು ವಿವಾದಗಳಿಗೆ ಆಹಾರವಾಗುತ್ತಲೇ ಇರುತ್ತಾರೆ. ಈ ಬಾರಿ ಏಕಾಏಕಿ ಮಾಧ್ಯಮದವರನ್ನೇ ಮೈಮೇಲೆಳೆದುಕೊಂಡಿದ್ದಾರೆ. ಇನ್ನೂ ಈಗಷ್ಟೇ ತಲೆಯೆತ್ತುತ್ತಿರುವ ನಟ ಚಂದನ್ ಹೀಗೆ ಪತ್ರಕರ್ತರ ವಿರುದ್ಧ ಮಾತಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮಾಧ್ಯಮ ವಲಯದಲ್ಲೂ ಹರಿದಾಡುತ್ತಿದೆ. ಅದೂ ಕೈ ಸನ್ನೆಯ ಮೂಲಕ ಕೆಟ್ಟದಾಗಿ ಮಾತಾಡಿರುವ ಚಂದನ್ ವಿರುದ್ಧ ಪತ್ರಕರ್ತರೆಲ್ಲಾ ಸಮರ ಸಾರಲಿದ್ದಾರಾ ಎನ್ನುವ ಅನುಮಾನ ಕೂಡಾ ಮೂಡುತ್ತಿದೆ.

    ಇಷ್ಟೆಲ್ಲಾ ಆದರೂ ಚಿತ್ರದ ನಿರ್ದೇಶಕ ಕಂ ನಟ ಅರ್ಜುನ್ ಸರ್ಜಾ ಈ ಬಗ್ಗೆ ಏನೂ ಪ್ರತಿಕ್ರಿಯಿಸಿಲ್ಲ. ಹಾಗೆ ನೋಡಿದರೆ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಮಾತಾಡುತ್ತಾ ‘ನನಗೆ ಕೆಲವೊಂದು ವಿಚಾರ ಬೇಸರ ತರಿಸಿದೆ’ ಎಂದಷ್ಟೇ ಅರ್ಜುನ್ ಸರ್ಜಾ ಹೇಳಿದ್ದರು. ಆದರೆ ಅವರದ್ದೇ ಚಿತ್ರದ ನಾಯಕ ನಟ ತೀರಾ ಕೆಳದರ್ಜೆಯ ಮಾತಾಡಿರೋದು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತಿದೆ.

  • ಕೊನೆಗೂ ಎಲ್ಲಾ ಗಾಸಿಪ್ ಗಳಿಗೆ ಉತ್ತರ ಕೊಟ್ಟ ಕಪಿಲ್ ಶರ್ಮಾ

    ಕೊನೆಗೂ ಎಲ್ಲಾ ಗಾಸಿಪ್ ಗಳಿಗೆ ಉತ್ತರ ಕೊಟ್ಟ ಕಪಿಲ್ ಶರ್ಮಾ

    ಮುಂಬೈ: ಹಾಸ್ಯ ನಟ ಕಪಿಲ್ ಶರ್ಮಾ ಕೊನೆಗೂ ಮೌನ ಮುರಿದಿದ್ದು ನಾನು ಹೆಚ್ಚಾಗಿ ಮದ್ಯಪಾನ ಮಾಡುತ್ತಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

    ನನಗೆ ಸಾಕಷ್ಟು ನೋವಾಗಿದೆ. ನಾನು ಹೆಚ್ಚಾಗಿ ಕುಡಿಯುತ್ತಿದ್ದೇನೆ. ಇದು ಅವಶ್ಯಕವಲ್ಲ ಆದರೂ ನನಗೆ ಬಹಳ ನೋವುಂಟಾಗಿದೆ. ಸುನೀಲ್ ಗ್ರೋವರ್, ಚಂದನ್, ಅಲಿ ಅಸ್ಗರ್ ನನ್ನ ಒಳ್ಳೆಯ ಸ್ನೇಹಿತರು. ಇದು ಹೇಗೆ ಆಯ್ತು ಅಂತ ನನಗೆ ಗೊತ್ತಿಲ್ಲ ಎಂದು ಕಪಿಲ್ ಪ್ರತಿಕ್ರಿಸಿದ್ದಾರೆ.

    ನಾನು ಈಗ ಬೆಂಗಳೂರಿನಲ್ಲಿ ಇದ್ದೇನೆ ಹಾಗೂ ಆರ್ಯುವೇದ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ನನ್ನ ಆರೋಗ್ಯದ ಕಡೆ ಗಮನ ಕೊಡಬೇಕು. ಸೆಪ್ಟೆಂಬರ್ ಕೊನೆಯಲ್ಲಿ ನಾನು ಮುಂಬೈಗೆ ಹಿಂತಿರುಗುತ್ತಿದ್ದೇನೆ. ಇತ್ತೀಚಿಗೆ ನನ್ನ ಬಗ್ಗೆ ಬಂದ ಎಲ್ಲಾ ಸುದ್ದಿಗಳು ಸುಳ್ಳು. 10 ವರ್ಷದಿಂದ ಬ್ರೇಕ್ ಇಲ್ಲದೆ ದುಡಿಯುತ್ತಿದ್ದೇನೆ. ಬಿಪಿ ಮತ್ತು ಸಕ್ಕರೆ ಕಾಯಿಲೆ ಕಡೆ ನಾನು ಗಮನ ಕೊಡುತ್ತಿದ್ದೇನೆ ಎಂದು ಕಪಿಲ್ ತಿಳಿಸಿದ್ದಾರೆ.

    ಕಪಿಲ್ ಶರ್ಮಾ ಶೋ ತಂಡವು ಈ ಕಾರ್ಯಕ್ರಮವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಸುನೀಲ್ ಗ್ರೋವರ್ ಶೋನ ಮಧ್ಯದಲ್ಲೇ ಬಿಟ್ಟು ಹೋದ ಕಾರಣ ಕಪಿಲ್ ಸಾಕಷ್ಟು ಬೇಸರಗೊಂಡು ಕುಡಿಯಲು ಶುರು ಮಾಡಿದ್ದಾರೆ ಎನ್ನುವ ಸುದ್ದಿಗಳು ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು.

    ಕಪಿಲ್ ಈಗ ರಾಜೀವ್ ದಿಂಗ್ರ ನಿರ್ದೇಶಿಸುತ್ತಿರುವ ಫಿರಂಗಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.